Home Blog Page 7

ಬೆಳಗಾವಿ : ಚಿಕ್ಕೋಡಿಯಲ್ಲಿ ಎಜಿಎಂ ಇಂಜಿನಿಯರಿಂಗ್ ಕಾಲೇಜ್ ಉದ್ಘಾಟಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

BELAGAVI / Chikkodi: ಶ್ರೀ 108ನೇ ಗುಣಧರನಂದಿ ಮುನಿಮಹಾರಾಜರ ಸಾನಿಧ್ಯದಲ್ಲಿ ಕರ್ನಾಟಕದ ಗೌರವಾನ್ವಿತ (Governor) ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರು ಬೆಳಗಾವಿಯ ಚಿಕ್ಕೋಡಿಯಲ್ಲಿ ಎಜಿಎಂ ಇಂಜಿನಿಯರಿಂಗ್ ಕಾಲೇಜ್ (AGM Engineering College) ಅನ್ನು ಉದ್ಘಾಟಸಿ, ಬೆಳಗಾವಿಯಲ್ಲಿ ವಿಶ್ವದಲ್ಲಿ ಅತಿ ಎತ್ತರದ ಪಾರ್ಶ್ವನಾಥ ಪ್ರತಿಮೆಯ ಪ್ರತಿಷ್ಠಾಪನೆಯ ಭೂಮಿ ಶುದ್ಧೀಕರಣ ಮತ್ತು ಶ್ರೀ ಸರಸ್ವತಿ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

“ಈ ಕಾರ್ಯಕ್ರಮವು ಶಿಕ್ಷಣ, ಸಂಸ್ಕೃತಿ, ಸೇವೆ, ತಾಂತ್ರಿಕ ಅಭಿವೃದ್ಧಿ ಮತ್ತು ರಾಷ್ಟ್ರ ನಿರ್ಮಾಣದ ಹೊಸ ಪ್ರಜ್ಞೆಯ ಆರಂಭವನ್ನು ಸೂಚಿಸುತ್ತದೆ.  ಅತ್ಯಂತ ಗೌರವಾನ್ವಿತ ರಾಷ್ಟ್ರೀಯ ಸಂತ ಆಚಾರ್ಯ ಶ್ರೀ ಗುಂಧಾರನಂದಿ ಜಿ ಅವರು ಮಾನವೀಯತೆ, ಶಾಂತಿ, ಕರುಣೆ ಮತ್ತು ಸಾಮಾಜಿಕ ಜಾಗೃತಿಗೆ ದೈವಿಕ ಸ್ಫೂರ್ತಿ. ಅವರ ಇಡೀ ಜೀವನವು ತ್ಯಾಗ, ತಪಸ್ಸು, ಧ್ಯಾನ ಮತ್ತು ಸಾರ್ವಜನಿಕ ಕಲ್ಯಾಣಕ್ಕೆ ಮೀಸಲಾಗಿದೆ. ಸಮಾಜಕ್ಕೆ ಆಧ್ಯಾತ್ಮಿಕ ನಿರ್ದೇಶನವನ್ನು ನೀಡುವುದರ ಜೊತೆಗೆ, ಅವರು ಶಿಕ್ಷಣ, ಸೇವೆ ಮತ್ತು ಸಂಸ್ಕೃತಿಯ ಮೂಲಕ ಬಲವಾದ ಮತ್ತು ಜಾಗೃತ ಭಾರತವನ್ನು ನಿರ್ಮಿಸುವ ಸಂದೇಶವನ್ನು ನೀಡಿದ್ದಾರೆ” ಎಂದರು.

“ಈ ಪವಿತ್ರ ಭೂಮಿಯಲ್ಲಿ ಜನಿಸಿದ ಮತ್ತು ಪ್ರಪಂಚದಾದ್ಯಂತ ಶಾಂತಿ ಮತ್ತು ಮಾನವ ಕಲ್ಯಾಣದ ಸಂದೇಶವನ್ನು ಹರಡಿದ ಆಚಾರ್ಯ ಶ್ರೀಗಳಿಂದ ಪ್ರೇರಿತರಾಗಿ, ಎಜಿಎಂ ಎಂಜಿನಿಯರಿಂಗ್ ಕಾಲೇಜನ್ನು ಈ ನೆಲದಲ್ಲಿಯೇ ಸ್ಥಾಪಿಸಲಾಗಿದೆ. ಈ ಸಂಸ್ಥೆಯ ಮೂಲಕ, ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಮೌಲ್ಯಗಳು, ತಂತ್ರಜ್ಞಾನದ ಜೊತೆಗೆ ನೀತಿಶಾಸ್ತ್ರ ಮತ್ತು ವೃತ್ತಿ ಅಭಿವೃದ್ಧಿಯ ಜೊತೆಗೆ ವ್ಯಕ್ತಿತ್ವ ನಿರ್ಮಾಣವನ್ನು ಒದಗಿಸಲಾಗುತ್ತದೆ. ಈ ಸಂಸ್ಥೆಯು ಭವಿಷ್ಯದ ಪೀಳಿಗೆಯ ಕನಸುಗಳನ್ನು ನಿರ್ಮಿಸುವ ಕೇಂದ್ರವಾಗಿ ಪರಿಣಮಿಸುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.

“ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕನಿಷ್ಠ ಶುಲ್ಕದಲ್ಲಿ ಉನ್ನತ ತಾಂತ್ರಿಕ ಶಿಕ್ಷಣವನ್ನು ನೀಡುವ ಬದ್ಧತೆಯೊಂದಿಗೆ ಈ ಸಂಸ್ಥೆ ಮುಂದುವರಿಯುತ್ತದೆ ಮತ್ತು ಅನಾಥರು ಮತ್ತು ನಿರ್ಗತಿಕ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡುವ ಮೂಲಕ ಸ್ವಾವಲಂಬಿಗಳನ್ನಾಗಿ ಮಾಡಲು ಶ್ರಮಿಸುತ್ತದೆ. ಭಾರತೀಯ ಸಂಸ್ಕೃತಿ ಯಾವಾಗಲೂ “ವಸುಧೈವ ಕುಟುಂಬಕಂ” ಬಗ್ಗೆ. ಇಲ್ಲಿ ಶಿಕ್ಷಣದ ಉದ್ದೇಶವು ಉದ್ಯೋಗ ಆಧಾರಿತವಾಗಿದೆ ಮತ್ತು ಸಮಾಜ ಮತ್ತು ರಾಷ್ಟ್ರದ ಕಡೆಗೆ ನಮ್ಮ ಕರ್ತವ್ಯಗಳನ್ನು ಅರ್ಥಮಾಡಿಕೊಳ್ಳುವುದು. ಇಡೀ ಸಮಾಜ ಮತ್ತು ದೇಶದಲ್ಲಿ ನೈತಿಕತೆಯನ್ನು ಬೆಳೆಸುವಂತಹ ಶಿಕ್ಷಣದ ಅವಶ್ಯಕತೆಯಿದೆ ಮತ್ತು ಆಧುನಿಕ ಜ್ಞಾನವನ್ನು ಮೌಲ್ಯಗಳೊಂದಿಗೆ ಸಂಯೋಜಿಸುವ ಮೂಲಕ, ಅದು ಧರ್ಮ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸಬಹುದು, ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳಬಹುದು ಮತ್ತು ಸಮಾಜದಲ್ಲಿ ಸಮಾನತೆ ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳಬಹುದು ಮತ್ತು ಎಲ್ಲಾ ಮಾನವೀಯತೆಗೆ ಪ್ರಯೋಜನವನ್ನು ನೀಡುತ್ತದೆ. ಹೊಸ ಶಿಕ್ಷಣ ನೀತಿಯು ಈ ದಿಕ್ಕಿನಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದು, ಭಾರತದ ಯುವಕರು ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ತೊಡಗಿಸಿಕೊಂಡು ತಮ್ಮ ಸಂಸ್ಕೃತಿ ಮತ್ತು ಮೌಲ್ಯಗಳೊಂದಿಗೆ ಸಂಪರ್ಕದಲ್ಲಿರುವುದನ್ನು ಖಚಿತಪಡಿಸುತ್ತದೆ” ಎಂದು ಹೇಳಿದರು.

“ಜೈನ ಸಮುದಾಯವು ದೇಶದ ಪ್ರಗತಿಗೆ ಗಮನಾರ್ಹ ಕೊಡುಗೆಗಳನ್ನು ನೀಡಿದೆ. ಅಹಿಂಸೆ, ನೈತಿಕತೆ, ಶಿಸ್ತು ಮತ್ತು ರಾಷ್ಟ್ರಕ್ಕೆ ಸಮರ್ಪಣೆ ಜೈನ ಸಮುದಾಯದ ವಿಶೇಷ ಗುಣಗಳಾಗಿವೆ. ಜೈನ ಸಮುದಾಯವು ಯಾವಾಗಲೂ ರಾಷ್ಟ್ರದ ಕಡೆಗೆ ತನ್ನ ಜವಾಬ್ದಾರಿಗಳನ್ನು ಅರ್ಥಮಾಡಿಕೊಳ್ಳುವ ಸಮುದಾಯವಾಗಿದೆ. ಅದು ತೆರಿಗೆ ಆಡಳಿತ, ಸಾಮಾಜಿಕ ಸಹಕಾರ, ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಅಥವಾ ಮಾನವೀಯ ಕೆಲಸವಾಗಿರಲಿ, ಜೈನ ಸಮುದಾಯವು ಪ್ರತಿಯೊಂದು ಕ್ಷೇತ್ರದಲ್ಲೂ ಮಾದರಿಗಳನ್ನು ಸ್ಥಾಪಿಸಿದೆ. ಮತ್ತು ಇಂದು, ಎಜಿಎಂ ಎಂಜಿನಿಯರಿಂಗ್ ಕಾಲೇಜು ಈ ಅದ್ಭುತ ಸಂಪ್ರದಾಯದ ಸ್ಪೂರ್ತಿದಾಯಕ ಉದಾಹರಣೆಯಾಗಿ ಹೊರಹೊಮ್ಮಿದೆ” ಎಂದು ಪ್ರಶಂಸೆ ವ್ಯಕ್ತಪಡಿಸಿದರು.

“ನೆಜ್ ಕ್ರಾಸ್‌ನ ಶ್ರೀ ಗುಂಧರ್ ತೀರ್ಥ ಶಮ್ನೆವಾಡಿಯಲ್ಲಿ ಭಗವಾನ್ ಪಾರ್ಶ್ವನಾಥರ 151 ಅಡಿ ಎತ್ತರದ ಏಕಶಿಲೆಯ ಕಲ್ಲಿನ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಎಂದು ತಿಳಿದು ಹರ್ಷದಾಯಕವಾಗಿದೆ. ಇದಕ್ಕಾಗಿ, ಭೂ ಶುದ್ಧೀಕರಣ ಮತ್ತು ವಿವಿಧ ಆಚರಣೆಗಳನ್ನು ನಡೆಸಲಾಗುತ್ತಿದೆ. ಇದರೊಂದಿಗೆ, ಸರಸ್ವತಿ ದೇವಿಯ ವಿಗ್ರಹದ ಪ್ರತಿಷ್ಠಾಪನೆ ನಡೆಯುತ್ತಿದೆ. ಈ ಕೃತಿಯು ಭಾರತೀಯ ಸಂಸ್ಕೃತಿ, ಆಧ್ಯಾತ್ಮಿಕತೆ, ಅಹಿಂಸೆ, ಶಾಂತಿ ಮತ್ತು ಮಾನವ ಕಲ್ಯಾಣದ ಜಾಗತಿಕ ಸಂದೇಶವನ್ನು ರವಾನಿಸುತ್ತದೆ ಮತ್ತು ಭವಿಷ್ಯದ ಪೀಳಿಗೆಗೆ ಭಾರತವು ತಾಂತ್ರಿಕ ಶಕ್ತಿ ಮತ್ತು ಆಧ್ಯಾತ್ಮಿಕ ಪ್ರಜ್ಞೆ ಎರಡರಲ್ಲೂ ವಿಶ್ವ ನಾಯಕನಾಗಿದೆ ಎಂಬುದನ್ನು ನೆನಪಿಸುತ್ತದೆ. ಭಗವಾನ್ ಪಾರ್ಶ್ವನಾಥರ ಸಂದೇಶವು ಜೈನ ಸಮುದಾಯಕ್ಕೆ ಮತ್ತು ಎಲ್ಲಾ ಮಾನವೀಯತೆಗೆ. ಅಹಿಂಸೆ, ಕರುಣೆ, ಸಂಯಮ ಮತ್ತು ಸಹಬಾಳ್ವೆ ಇಂದು ಇಡೀ ಜಗತ್ತಿಗೆ ಅಗತ್ಯವಿರುವ ಮೌಲ್ಯಗಳಾಗಿವೆ. ಈ ಸ್ಥಳವು ನಿಸ್ಸಂದೇಹವಾಗಿ ಭವಿಷ್ಯದಲ್ಲಿ ಶಿಕ್ಷಣ, ಆಧ್ಯಾತ್ಮಿಕತೆ ಮತ್ತು ಸಾಮಾಜಿಕ ಪ್ರಜ್ಞೆಗೆ ಪ್ರಮುಖ ಕೇಂದ್ರವಾಗಲಿದೆ” ಎಂದು ತಿಳಿಸಿದರು.

ಸ್ಯಾಂಕಿ ಕೆರೆ ಉಳಿಸಿ: ವಾಯ್ಸ್ ಆಫ್ ಸದಾಶಿವನಗರ ಸಂಘಟನೆಯಿಂದ ಪ್ರತಿಭಟನೆ

MALLESWARAM / BENGALURU :  ಬೆಂಗಳೂರು ನಗರದ ಹೆಮ್ಮೆಯ ಸ್ಯಾಂಕಿ ಕೆರೆ (Sankey Lake) ಇಂದು ಗಂಭೀರ ಪರಿಸರ ಸಂಕಷ್ಟ ಎದುರಿಸುತ್ತಿದ್ದು, ಕೆರೆಯ ಅಸ್ತಿತ್ವವೇ ಅಪಾಯದಲ್ಲಿದೆ ಎಂದು ಸದಾಶಿವನಗರದ (Voice of Sadashivanagar) ನಾಗರಿಕರು, ಪರಿಸರ ಹೋರಾಟಗಾರರು ಹಾಗೂ ವಿವಿಧ ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ. ಈ ಹಿನ್ನೆಲೆಯಲ್ಲಿ “ಸೇವ್ ಸ್ಯಾಂಕಿ ಟ್ಯಾಂಕ್” (Save Sankey Tank) ಅಭಿಯಾನದಡಿ ಕೆರೆ ಸಂರಕ್ಷಣೆ (Lake conservation) ಕುರಿತು ಜಾಗೃತಿ ಕಾರ್ಯಕ್ರಮದ ಜೊತೆಗೆ ಕೆರೆ ಉಳಿಸಿ (Save the Lake) ಎಂದು ಕೆರೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಸ್ಯಾಂಕಿ ಕೆರೆ ನೀರಿನ ಮಟ್ಟ ನಿರಂತರವಾಗಿ ಕುಸಿಯುತ್ತಿದೆ. ಒಳಚರಂಡಿ ನೀರು ಹರಿಯುತ್ತಿದ್ದು, ಹಸಿರು ವಲಯದ ನಾಶ, ಕೆರೆಯ ವಿಸ್ತೀರ್ಣ ಕುಗ್ಗುತ್ತಿದೆ. ಕೆರೆಯ ಪರಿಸರ ಸಮತೋಲನ ಹದಗೆಡುತ್ತಿದೆ. ಕೆರೆಯ ಸುತ್ತಮುತ್ತ ದಶಕಗಳಷ್ಟು ಹಳೆಯ ಮರಗಳನ್ನು ಕಡಿದಿರುವುದರಿಂದ ಯಾವುದೇ ಸಮರ್ಪಕ ಅಧ್ಯಯನವಿಲ್ಲದೆ ನಡೆಯುತ್ತಿರುವ ಕಾಮಗಾರಿಯಿಂದ ಕೆರೆಯ ಮೂಲ ಸ್ವರೂಪವನ್ನೇ ಹಾಳು ಮಾಡುತ್ತಿವೆ ಎಂದು ಪರಿಸರ ಹೋರಾಟಗಾರರು ಕಳವಳ ವ್ಯಕ್ತಪಡಿಸಿದ್ದಾರೆ.
 ವಾಯ್ಸ್ ಆಫ್ ಸದಾಶಿವನಗರದ ಸಂಚಾಲಕರಾದ ಶಿಲ್ಪ ಜತ್ತಿ ಮಾತನಾಡಿ, ಸ್ಯಾಂಕಿ ಕೆರೆಯೊಳಗೆ ಹಾಗೂ ಸುತ್ತಮುತ್ತ ನಿರ್ಮಾಣ ತ್ಯಾಜ್ಯ ಸುರಿಯುತ್ತಿದ್ದು, ಪರಿಸರಕ್ಕೆ ಹಾನಿಕಾರಕವಾದ ಹೂಳು ಹೆಚ್ಚಾಗುತ್ತಿದೆ. ಬೆಂಗಳೂರು ನಗರದ ಭೂಗರ್ಭ ಜಲಮಟ್ಟ, ಪರಿಸರ ಸಮತೋಲನ ಹಾಗೂ ಸಾರ್ವಜನಿಕ ಆಸ್ತಿಯ ಭವಿಷ್ಯಕ್ಕೆ ದೊಡ್ಡ ಅಪಾಯವನ್ನುಂಟುಮಾಡುತ್ತಿವೆ. ಕೆರೆ ಸಣ್ಣದಾಗುತ್ತಿದ್ದು, ಒತ್ತುವರಿ ಜೊತೆಗೆ ಪರಿಸರ ಹಾಳಾಗುತ್ತಿದೆ.
ಕೆರೆ ಸಂಪೂರ್ಣ ಕಾಂಕ್ರೀಟ್ ಕೆರೆಯಾಗಿದೆ. ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಬೇಕು. ಎಲ್ಲಿಂದ ಚರಂಡಿ ನೀರು ಹರಿಯುತ್ತಿದೆ ಎಂಬುದನ್ನು ಪತ್ತೆ ಮಾಡಿ ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು. ಈ ಉದ್ದೇಶದಿಂದ “ಸೇವ್ ಸ್ಯಾಂಕಿ ಟ್ಯಾಂಕ್” ಅಭಿಯಾನ ಆಯೋಜಿಲಾಗಿದೆ ಎಂದರು. ರಾಷ್ಟ್ರೀಯ ಮಾನವ ಹಕ್ಕುಗಳು ಹಾಗೂ ಸಾಮಾಜಿಕ ನ್ಯಾಯ ಸಂಸ್ಥೆಯ ಪ್ರತಿನಿಧಿಗಳು ಮಾತನಾಡಿ, ಪರಿಸರ ಮತ್ತು ನೀರಿನ ಗುಣಮಟ್ಟ ಪರಿಶೀಲನೆ ನಡೆಸಬೇಕು. ಪರಿಸರ ಸ್ನೇಹಿ ಪುನರುಜ್ಜೀವನ ಯೋಜನೆ ರೂಪಿಸಬೇಕು. ನಗರದ ನಾಗರಿಕರು, ಯುವ ಜನಾಂಗ, ಪರಿಸರ ಪ್ರೇಮಿಗಳು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಈ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿ ಕೆರೆ ಉಳಿಸಲು ಮುಂದಾಗಬೇಕು ಎಂದರು. ವಾಯ್ಸ್ ಆಫ್ ಸದಾಶಿವನಗರ ಸಂಸ್ಥೆಯ ಶಿಲ್ಪ ಜತ್ತಿ, ಕಾಡು ಮಲ್ಲೇಶ್ವರ ಗೆಳಯರ ಬಳಗದ ಅಧ್ಯಕ್ಷರಾದ ಬಿ.ಕೆ.ಶಿವರಾಂ, ಡಾ.ಮನುರವರು ಮತ್ತು ಸದಾಶಿವನಗರದ ಸ್ಥಳೀಯ ನಾಗರಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

“ನೂತನ ಗಣಿತದ ಸಂಪನ್ಮೂಲ ಪುಸ್ತಕ” ಲೋಕಾರ್ಪಣೆ

ವಿದ್ಯಾರ್ಥಿಗಳಲ್ಲಿ ಗಣಿತ ವಿಷಯದ ಅರಿವು, (Knowledge of Mathematical Content) ಆಸಕ್ತಿ ಹಾಗೂ ಸೃಜನಾತ್ಮಕ ಕಲಿಕೆಯ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ನಿವೃತ್ತ ಶಿಕ್ಷಕರಾದ ಎಂ. ಶಂಕರ (M.Shankar) ರವರು ರಚಿಸಿದ “Innovative Mathematics Resource Book” (ನೂತನ ಗಣಿತದ ಸಂಪನ್ಮೂಲ ಪುಸ್ತಕ) ಕೃತಿಯ ಲೋಕಾರ್ಪಣೆ ಕಾರ್ಯಕ್ರಮವು ಬೆಂಗಳೂರಿನ ಶ್ರೀ ಜಯರಾಮ ಸೇವಾ ಮಂಡಳಿ (Sri Jayarama Seva Mandali) ಯಲ್ಲಿ ನೆರವೇರಿತು.

ಕಾರ್ಯಕ್ರಮದಲ್ಲಿ ತುಮಕೂರಿನ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮ ದ ಶ್ರೀ ವೀರೇಶಾನಂದ ಸರಸ್ವತಿ ಅವರು ದಿವ್ಯ ಸಾನ್ನಿಧ್ಯ ವಹಿಸಿ, “ಶಿಕ್ಷಣವೆಂಬುದು ಕೇವಲ ಅಂಕಗಳಿಗಾಗಿ ಮಾತ್ರವಲ್ಲ; ಅದು ಬದುಕಿನ ಮೌಲ್ಯಗಳನ್ನು ರೂಪಿಸುವ ಶಕ್ತಿ” ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ಡಾ. ತೇಜಸ್ವಿನಿ ಅನಂತಕುಮಾರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಗಣಿತದ ಭಯವನ್ನು ದೂರ ಮಾಡಿ ವಿಷಯದತ್ತ ಆಸಕ್ತಿ ಬೆಳೆಸಲು ಇಂತಹ ಸಂಪನ್ಮೂಲ ಪುಸ್ತಕಗಳ ಅಗತ್ಯತೆ ಇದೆ ಎಂದು ತಿಳಿಸಿದರು.

ಪ್ರಯೋಗ ಸಂಸ್ಥೆಯ ಸ್ಥಾಪಕರು ಹಾಗೂ ಮುಖ್ಯ ಮಾರ್ಗದರ್ಶಕರಾದ ಡಾ. ಹೆಚ್. ಎಸ್. ನಾಗರಾಜ ಅವರು ಪುಸ್ತಕದ ವೈಶಿಷ್ಟ್ಯಗಳನ್ನು ಪರಿಚಯಿಸಿ, ನೂತನ ಕಲಿಕಾ ವಿಧಾನಗಳು, ಸರಳ ನಿರೂಪಣೆ ಹಾಗೂ ವಿದ್ಯಾರ್ಥಿ ಸ್ನೇಹಿ ಮಾದರಿಗಳ ಮೂಲಕ ಈ ಕೃತಿ ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಕೊಡುಗೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಲೇಖಕರಾದ ಎಂ. ಶಂಕರ ಅವರು ತಮ್ಮ ಬೋಧನಾ ಅನುಭವಗಳನ್ನು ಹಂಚಿಕೊಂಡು, ವಿದ್ಯಾರ್ಥಿಗಳಿಗೆ ಸುಲಭ ಹಾಗೂ ಆಸಕ್ತಿದಾಯಕ ರೀತಿಯಲ್ಲಿ ಗಣಿತ ಕಲಿಯಲು ಈ ಕೃತಿ ಸಹಾಯಕವಾಗಲಿ ಎಂಬ ಆಶಯ ವ್ಯಕ್ತಪಡಿಸಿದರು.

ಆರ್ಯಭಟ ಪ್ರಶಸ್ತಿಗೆ ಭಾಜನರಾದ ಚೆಕ್ ಗಣರಾಜ್ಯದ ಗೌರವ ರಾಯಭಾರಿ ಪುಷ್ಪಕ್ ಪ್ರಕಾಶ್

ಬೆಂಗಳೂರು: ಪುಷ್ಪಕ್ ಏರೋಸ್ಪೇಸ್ ಇಂಡಿಯಾ ಪ್ರವೈಟ್ ಲಿಮಿಟೆಡ್ (Pushpak Aerospace India P. Ltd.) ಸಂಸ್ಥೆಯ ಸಂಸ್ಥಾಪಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಪುಷ್ಪಕ್ ಪ್ರಕಾಶ್ (Pushpak Prakash) ಅವರಿಗೆ ಪ್ರತಿಷ್ಠಿತ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ  (Aryabhata International Award) 2026ಗೆ ಭಾಜನರಾಗಿದ್ದಾರೆ.
“ಉದ್ಯಮಶೀಲತೆ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳು” (Entrepreneurship and International Relations) ವಿಭಾಗದಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಪುಷ್ಪಕ್ ಪ್ರಕಾಶ್ ಅವರು ಚೆಕ್ ಗಣರಾಜ್ಯದ ಗೌರವ ರಾಯಭಾರಿಯಾಗಿ ಭಾರತ ಮತ್ತು ಚೆಕ್ ಗಣರಾಜ್ಯ ಸೇರಿದಂತೆ ಹಲವು ದೇಶಗಳ ನಡುವೆ ಬಲವಾದ ಅಂತಾರಾಷ್ಟ್ರೀಯ ಸಂಬಂಧಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅವರ ಪ್ರಯತ್ನಗಳು ಕೈಗಾರಿಕಾ, ಸಾಂಸ್ಕೃತಿಕ ಮತ್ತು ವ್ಯಾಪಾರ ವಲಯದ ಸಹಕಾರವನ್ನು ವೃದ್ಧಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ.
ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ನಿವೃತ್ತ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್, ದೂರದರ್ಶನದ ನಿವೃತ್ತ ಹೆಚ್ಚುವರಿ ಮಹಾ ನಿರ್ದೇಶಕರಾದ ನಾಡೋಜ ಡಾ. ಮಹೇಶ್ ಜೋಶಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ದೇಶದ ಏರೋಸ್ಪೇಸ್ ಮತ್ತು ರಕ್ಷಣಾ ತಯಾರಿಕಾ ಕ್ಷೇತ್ರಕ್ಕೆ, ನಿರ್ದಿಷ್ಟವಾಗಿ ಅಂತರಿಕ್ಷ ಮತ್ತು ಕಾರ್ಯತಂತ್ರ ಯೋಜನೆಗಳಿಗೆ ಪುಷ್ಪಕ್ ಪ್ರಕಾಶ್ ಅವರು ನಿರಂತರ ಕೊಡುಗೆ ನೀಡಿದ್ದಾರೆ. ಪುಷ್ಪಕರ್ ಏರೋಸ್ಪೆಸ್ ಅಂಡ್ ಡಿಫೆನ್ಸ್ ಸಂಸ್ಥೆ ತನ್ನ ಯಶಸ್ವೀ 35ನೇ ವರ್ಷದ ಸಂಭ್ರಮವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಈ ಮನ್ನಣೆ ದೊರೆತಿದೆ.
ಕಳೆದ ಹಲವು ದಶಕಗಳಿಂದ ಸಂಸ್ಥೆಯು ಚಂದ್ರಯಾನ, ಮಂಗಳಯಾನ, ಆದಿತ್ಯ-ಎಲ್1, ಕಾರ್ಟೋಸ್ಯಾಟ್, ಜಿ.ಎಸ್.ಎ.ಟಿ ಹಾಗೂ ಐ.ಆರ್.ಎನ್.ಎಸ್.ಎಸ್ ಸೇರಿದಂತೆ ಇಸ್ರೋ ಮತ್ತು ರಕ್ಷಣಾ ಯೋಜನೆಗಳಿಗೆ ತನ್ನ ಕೊಡುಗೆಯನ್ನು ನೀಡುತ್ತಿದೆ. ಪುಷ್ಪಕ್ ಸಂಸ್ಥೆಯು ಪಿ.ಎಸ್.ಎಲ್.ವಿ, ಜಿ.ಎಸ್.ಎಲ್.ವಿ ಹಾಗೂ ಎಲ್.ವಿ.ಎಂ3 [ಮಾರ್ಕ್-3] ಉಡಾವಣಾ ವಾಹನಗಳ ಕಾರ್ಯಕ್ರಮಗಳಲ್ಲಿ ಸಹ ಮಹತ್ವದ ಕೊಡುಗೆ ನೀಡಿದೆ. ಮುಂದಿನ ಭಾರತದ ಮಹತ್ವಾಕಾಂಕ್ಷಿ ಗಗನಯಾನ ಮಿಷನ್ನಲ್ಲಿಯೂ ಸಂಸ್ಥೆ ತನ್ನ ಪಾತ್ರವನ್ನು ನಿರ್ವಹಿಸುತ್ತಿದೆ. ದೇಶ ನಿರ್ಮಾಣಕ್ಕೆ ಸಂಬಂಧಿಸಿದ ಅಂತರಿಕ್ಷ ಯೋಜನೆಗಳ ಕೊಡುಗೆಗಾಗಿ ಪುಷ್ಪಕ್ ಸಂಸ್ಥೆಗೆ ಇಸ್ರೋದಿಂದ ಹಲವು ಬಾರಿ ಗೌರವ ಸ್ವೀಕರಿಸಿದೆ.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಪುಷ್ಪಕ್ ಪ್ರಕಾಶ್, ಈ ಪ್ರಶಸ್ತಿ ಇನ್ನಷ್ಟು ನಿಷ್ಠೆ, ಹೊಸತನ ಮತ್ತು ಗುಣಮಟ್ಟದೊಂದಿಗೆ ಏರೋಸ್ಪೇಸ್, ರಕ್ಷಣಾ ಮತ್ತು ಅಂತರಿಕ್ಷ ಕಾರ್ಯಕ್ರಮಗಳಿಗೆ ಸೇವೆ ಸಲ್ಲಿಸಲು ಪ್ರೇರಣೆ ದೊರೆತಿದೆ. ಬೆಂಗಳೂರು ವಿಶ್ವದ ಅಗ್ರಗಣ್ಯ ನಗರವಾಗಿದ್ದು, ಬೆಂಗಳೂರು, ಕರ್ನಾಟಕದ ಕೀರ್ತಿಯನ್ನು ಹೆಚ್ಚಿಸಲು ಶ್ರಮಿಸುವುದಾಗಿ ಹೇಳಿದರು.

ಮದರಸ ಹೆಸರಿನಲ್ಲಿ ಶಾಲಾ ಅನಧಿಕೃತ ದಾಖಲಾತಿ: ಪ್ರತಿಭಟನೆ- ಆಯುಕ್ತರಿಗೆ ದೂರು

 ಶಾಲಾ ಶಿಕ್ಷಣ ಇಲಾಖೆ ಮತ್ತು ಹೈಕೋರ್ಟ್ ಆದೇಶವನ್ನು ಧಿಕ್ಕರಿಸಿ ಥಣಿ ಸಂದ್ರದ ಸಾಮರ ಇಂಟರ್ ನ್ಯಾಷನಲ್ ಸ್ಕೂಲ್ ನಿಂದ ಮದರಸ ಹೆಸರಿನಲ್ಲಿ ಅನಧಿಕೃತವಾಗಿ ಶಾಲಾ ದಾಖಲಾತಿ ಮಾಡಿಕೊಳ್ಳುತ್ತಿದ್ದು, ನೆಲದ ಕಾನೂನಿಗೆ ಗೌರವ ನೀಡದೇ, ದೇಶದ ಆಂತರಿಕ ಭದ್ರತೆಗೆ ಬೆದರಿಕೆಯಾಗಿ ಮಾರ್ಪಟ್ಟಿರುವ ಶಾಲಾ ಆಡಳಿತ ಮಂಡಳಿ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ ಮುಂದೆ ಪೋಷಕರು ಪ್ರತಿಭಟನೆ ನಡೆಸಿದರು.

ಸರ್ಕಾರ ಮತ್ತು ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿರುವ ಶಿಕ್ಷಣ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪೋಷಕರಾದ ಅಬ್ದುಲ್ ರಹೀಮ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.  ಈ ಸಂಬಂಧ ಸೂಕ್ತ ಕ್ರಮಕ್ಕಾಗಿ ಸರ್ಕಾರ ಮತ್ತು ಪೊಲೀಸರಿಗೆ ದೂರು ಸಲ್ಲಿಸಲಾಗಿದೆ. ಶಾಲಾ ಶಿಕ್ಷಣ ಇಲಾಖೆ ಆಯುಕ್ತರು, ನಿರ್ದೇಶಕರು ಮತ್ತಿತರೆ ಅಧಿಕಾರಿಗಳಿಗೆ  ದೂರು ಸಲ್ಲಿಸಲಾಗಿದೆ. ನಕಲಿ ಶಿಕ್ಷಣ ಸಂಸ್ಥೆಗಳ ಹೆಸರಿನಲ್ಲಿ ಮುಗ್ಧ  ಮಕ್ಕಳಿಗೆ ಹಾಗೂ ವಿಧ್ಯಾರ್ಥಿಗಳಿಗೆ ಮೋಸ, ವಂಚನೆ ಮಾಡುತ್ತಿದ್ದು, ದೇಶದ ಭದ್ರತೆ ಹಾಗೂ ಏಕತೆಗೆ ಧಕ್ಕೆ ತರುತ್ತಿರುವ ಅನಧಿಕೃತ ವಿದ್ಯಾಸಂಸ್ಥೆಗಳ ವಿರುದ್ದ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರತಿಭಟನಾಕಾರರು  ಆಗ್ರಹಿಸಿದರು.

ಥಣಿಸಂದ್ರದ ಜಾಮಿಯ ಮೊಹಮ್ಮದಿಯ ಮನ್ಸೂರ (ರಿ), ಜಾಮಿಯ ಮೊಹಮ್ಮದೀಯ ಎಜುಕೇಷನ್ ಸೊಸೈಟಿ ಮುಂಬೈ, ದಿ ಅಲ್ಜಾಮಿಯ ಮೊಹಮ್ಮದೀಯ ಎಜುಕೇಷನ್ ಸೊಸೈಟಿ ಮುಂಬೈಯ ಆಡಳಿತ ಮಂಡಳಿಯವರು ಶಿಕ್ಷಣ ಇಲಾಖೆಗೆ ಬೇರೆ ಬೇರೆ ಹೆಸರಿನಲ್ಲಿ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಮೋಸ ಮಾಡಿದ್ದಾರೆ. ಈ ಸಂಬಂಧ ಹೈಕೋರ್ಟ್ ಸೂಚನೆ ಮೇರೆಗೆ ಶಾಲಾ ಶಿಕ್ಷಣ ಮಂಡಳಿ  ತ್ರಿಸದಸ್ಯ ಸಮಿತಿ ಶಿಫಾರಸ್ಸಿನಂತೆ ಶಾಲೆಯ ಮಾನ್ಯತೆಯನ್ನು ರದ್ದುಪಡಿಸಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಅಬ್ದುಲ್ ರಹೀಂ ಮಾತನಾಡಿ, ಜಾಮಿಯ ಮೊಹಮ್ಮದಿಯ ಎಜುಕೇಷನ್ ಸೊಸೈಟಿ (ಮುಂಬೈ)ಯವರು ಉಚ್ಛ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ್ದಕ್ಕೆ 5 ಲಕ್ಷ ರೂ ದಂಡ ವಿಧಿಸಿದೆ. ಶಾಲೆಯ ಮಾನ್ಯತೆ ನವೀಕರಣಾ ಪ್ರಮಾಣ ಪತ್ರ ಪಡೆಯುವ ಸಂದರ್ಭದಲ್ಲಿ ಆಡಳಿತ ಮಂಡಳಿಯ ಹೆಸರುಗಳನ್ನು ಬೇರೆ ಬೇರೆ ಹೆಸರುಗಳನ್ನು ನೀಡಿದೆ. ಜಾಮಿಯ ಮೊಹಮ್ಮದಿಯ ಮನ್ಸೂರ (ರಿ), ಜಾಮಿಯ ಮೊಹಮ್ಮದೀಯ ಎಜುಕೇಷನ್ ಸೊಸೈಟಿ, ದಿ ಅಲ್ಜಾಮಿಯ ಮೊಹಮ್ಮದೀಯ ಎಜುಕೇಷನ್ ಸೊಸ್ಯೆಟಿ ಮುಂಬೈ ಇವರ ಆಶ್ರಯದಲ್ಲಿ ಪುನಃ ಮದರಸಾ ಎಂಬ ನೆಪ ಹೇಳಿ ಮಗ್ದ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಈ ಮದರಸಾದಲ್ಲಿ ಅಮಾಯಕ ಮಕ್ಕಳನ್ನು ಹಿಂದೂ ಧರ್ಮದ  ದೇವರನ್ನು ಅವಮಾನಿಸಿರುವ ಕೆಲವು ಅಂಶಗಳು ಯೂಟ್ಯೂಬ್ ನಲ್ಲಿ ಲಭ್ಯವಾಗಿವೆ. ಇಂತಹ ಅಶಾಂತಿ, ಭಯ ಹುಟ್ಟಿಸುವ, ಭಯಾನಕ, ಕೋಮುದ್ವೇಷ ನಿರ್ಮಿಸುವ ಕೆಲಸದಲ್ಲಿ ನಿರತವಾಗಿದೆ ಎಂದರು.

ಮದರಸಗೆ ಪ್ರವೇಶ ನೀಡುವ ಸಂಬಂಧ ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ಉರ್ದು ದೈನಿಕದಲ್ಲಿ ಜಾಹೀರಾತು ನೀಡಿದೆ. ಇದಕ್ಕೆ ಕಡಿವಾಣ ಹಾಕಲು ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಬೇಕು. ಇಂತಹ ಭಾರತ ದೇಶದ ಕಾನೂನನ್ನು ಗೌರವಿಸದ ಅನೈತಿಕ ಹಾಗೂ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿರುವ ವಿಷಜಂತುಗಳಿಂದಾಗಿ ಸಮಾಜಕ್ಕೆ ಹಾಗೂ ಮುಗ್ಧ ಮಕ್ಕಳಿಗೆ ತೊಂದರೆ ಆಗುವ ಸಾಧ್ಯತೆಗಳು ಹೆಚ್ಚಾಗಿವೆ. ಮುಂದಿನ ಶೈಕ್ಷಣಿಕ ವರ್ಷಕ್ಕೆ ಯಾವುದೇ ಶಾಲಾ ದಾಖಲಾತಿ ಪ್ರಾರಂಭಿಸಬಾರದೆಂದು ಆದೇಶ ನೀಡಿದೆ. ಶಿಕ್ಷಣ ಸಂಸ್ಥೆಗಳ ಹೆಸರಿನಲ್ಲಿ ಮದರಸಾ ಎಂಬ ಗೊಂದಲವನ್ನು ಸೃಷ್ಟಿಸಿ ಸುಳ್ಳು, ನಕಲಿ ದಾಖಲಾತಿಗಳನ್ನು ಸೃಷ್ಟಿಸಿಕೊಂಡು, ಮಕ್ಕಳನ್ನು ಹೊಸದಾಗಿ ದಾಖಲು ಮಾಡಿಕೊಂಡು ನಕಲಿ ರಸೀದಿ ನೀಡಿ ಮುಗ್ಧ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ನಿತ್ಯ ಪಂಚಾಂಗ 26-05-2026 TUESDAY ಮಂಗಳವಾರ

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 26.05.2026 TUESDAY.ಮಂಗಳವಾರ*ಸಂವತ್ಸರ:ಪರಾಭವ
SAMVATSARA : PARABHAVA.
ಆಯಣ: ಉತ್ತರಾಯಣ
AYANA: UTTARAYANA.
ಋತು: ಗ್ರೀಷ್ಮ
RUTHU: GREESHMA.
ಮಾಸ: ಅಧಿಕಜೇಷ್ಠ
MAASA: ADHIKA JYESHTHA.
ಪಕ್ಷ: ಶುಕ್ಲ
PAKSHA: SHUKLA.
ತಿಥಿ: ದಶಮಿ
TITHI: DASHAMI.
ಶ್ರದ್ದಾತಿಥಿ: ಉತ್ತರಾಧಿ ಮಠಕ್ಕೆ ಶೂನ್ಯ,ರಾಯರ ಮಠ, ವ್ಯಾಸರಾಜಮಠ ಮತ್ತು ಶ್ರೀಪಾದರಾಜ ಮಠಕ್ಕೆ ಏಕಾದಶಿ,
SHRADDHA TITHI:
FOR SMUM – ” SHOONYA “.
FOR SRSM , SPRM And SVM – ” EKADASHI “.
ವಾಸರ: ಭೌಮವಾಸರ
VAASARA: BOWMAVASARA
ನಕ್ಷತ್ರ: ಉತ್ತರ ಫಲ್ಗುಣಿ
NAKSHATRA: UTTARA PHALGUNI.
ಯೋಗ: ಸಿದ್ಧಿ
YOGA: SIDDHI.
ಕರಣ: ಗರಜ
KARANA: GARAJA.
ಸೂರ್ಯೋದಯ (Sunrise): 05:54 ಸೂರ್ಯಸ್ತ (Sunset): 06:55
ರಾಹುಕಾಲ (RAHU KAALA) : 03:00PM To 04:30PM.
ದಿನವಿಶೇಷ SPECIAL EVENT
26.05.2026
ದಶಹಾರಾವ್ರತ ಕೊನೆ , ಗಂಗಪೂಜಾ – ಗಂಗಾ ವತರಣ ದಿನ , ಭಾಗೀರಥಿ ಜಯಂತಿ.

ನಿತ್ಯ ಪಂಚಾಂಗ 25.05.2026 MONDAY.ಸೋಮವಾರ

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 25.05.2026 MONDAY.ಸೋಮವಾರ*ಸಂವತ್ಸರ: ಪರಾಭವ
SAMVATSARA : PARABHAVA.
ಆಯಣ: ಉತ್ತರಾಯಣ
AYANA: UTTARAYANA.
ಋತು: ಗ್ರೀಷ್ಮ
RUTHU: GREESHMA.
ಮಾಸ: ಅಧಿಕಜೇಷ್ಠ
MAASA: ADHIKA JYESHTHA.
ಪಕ್ಷ: ಶುಕ್ಲ
PAKSHA: SHUKLA.
ತಿಥಿ: ನವಮಿ
TITHI: NAVAMI.
ಶ್ರದ್ದಾತಿಥಿ: ದಶಮಿ
SHRADDHA TITHI: DASHAMI.
ವಾಸರ: ಇಂದುವಾಸರ
VAASARA: INDUVAASARA.
ನಕ್ಷತ್ರ:ಪೂರ್ವ ಫಲ್ಗುಣಿ .
NAKSHATRA: POORVA PHALGUNI
ಯೋಗ: ಹರ್ಷಿಣಿ /ವಜ್ರ
YOGA: HARSHANA – VAJRA.
ಕರಣ: ಕೌಲವ
KARANA: KOULAVA.
ಸೂರ್ಯೋದಯ (Sunrise): 05:54
ಸೂರ್ಯಸ್ತ (Sunset): 06:55
ರಾಹುಕಾಲ (RAHU KAALA) : 07:30AM To 09:00AM.
ದಿನವಿಶೇಷ SPECIAL EVENT

Media Advisor KV Prabhakar: ಅದೊಂದು ಕರೆ ಕೆ ವಿ ಪ್ರಭಾಕರ್ ಅವರನ್ನು ಸೀದಾ ಸಿದ್ದರಾಮಯ್ಯನವರ ಬಳಿ ತಂದು-ಬಿಟ್ಟಿತು!

ಕನ್ನಡ ಪ್ರಭ ವರದಿಗಾರ ಕೆ.ವಿ. ಪ್ರಭಾಕರ್ (Media Advisor KV Prabhakar) ಅವರಿಗೆ 2013 ರ ಒಂದು ಸಂಜೆ ಮಾಜಿ ಮೇಯರ್ ರಾಮಚಂದ್ರಪ್ಪನವರಿಂದ (M Ramachandrappa) ಫೋನ್ ಬರುತ್ತೆ. ಮುಖ್ಯಮಂತ್ರಿಗಳು ನಿಮ್ಮನ್ನು ಭೇಟಿಯಾಗಲು ಹೇಳಿದ್ದಾರೆ, ಬನ್ನಿ ಎಂಬುದು ಸೂಚನೆ ಅಥವಾ ಆಹ್ವಾನ.  ಸಂಜೆ ಎಂದರೆ ಪತ್ರಿಕಾ ಕಚೇರಿಗಳಲ್ಲಿ ಪೀಕ್ ಟೈಮ್, ಹಾಗಾಗಿ ಪ್ರಭಾಕರ್ ಅವರಿಗೆ ಸುದ್ದಿ ಬರೆಯುವುದು ಆಧ್ಯತೆಯಾಗಿತ್ತು. ಇವತ್ತಾಗಲ್ಲ ನಾಳೆ ಬರ್ತೀನಿ ಎಂದಿದ್ದಾರೆ. ಇಲ್ಲಾ ಇವತ್ತೇ ಬನ್ನಿ ಎಂದಾಗ ಕೊಂಚ ಗಲಿಬಿಲಿಗೊಂಡು ಆಗಿನ ಸಂಪಾದಕರಾದ ವಿಶ್ವೇಶ್ವರ್ ಭಟ್ (Vishweshwar Bhat) ಅವರ ಬಳಿ ಹೇಳಿದ್ದಾರೆ.
ಭಟ್ವರು ಕೂಡಲೇ ಹೋಗಿ ಎಂದು ಸೂಚಿಸಿದಾಗ ಪ್ರಭಾಕರ್ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾಗಿದ್ದಾರೆ.
ಸಿದ್ದರಾಮಯ್ಯ: ಪ್ರಭಾಕರ್ ನೀನೇನೋ…
ಕೆ ವಿ ಪಿ: ಹೌದು ಸರ್…
ನೀನು ನಾಳೆಯಿಂದ ಸ್ವಲ್ಪ ಮೀಡಿಯಾ ಎಲ್ಲಾ ನೋಡ್ಕೋ ಅಂತಾ ಸಿದ್ದರಾಮಯ್ಯ ಫರ್ಮಾನು ಹೊರಡಿಸಿದ್ದಾರೆ. ಪ್ರಭಾಕರ್ ಗೆ ಕಕರು ಮಕರು. ಮೀಡಿಯಾ ನೋಡ್ಕೋಳ್ಳೋದು ಅಂದ್ರೆ ಏನ್ ನೋಡಿಕೊಳ್ಳೋದು…!
ಸಾರ್ ನಾನು  ಕನ್ನಡ ಪ್ರಭ ಪತ್ರಿಕೆಯಲ್ಲಿ ಕೆಲ್ಸಾ ಮಾಡ್ತಿದ್ದೀನಿ ಅಂದಾಗ, ಹೂನಪ್ಪ ಗೊತ್ತು, ಬಿಟ್ಟು ಬಾ ಅಂದಿದ್ದಾರೆ.

ಅರೆ ನಾಳೆ ಇವರ ಸರ್ಕಾರ ಹೋದ್ರೆ ನಾನೇನು ಮಾಡೋದು ಅಂದುಕೊಂಡು, ಯಾವುದಕ್ಕೂ ಇರ್ಲಿ ಅಂತಾ ’ಸಾರ್ ಸಂಬಳ ಎಷ್ಟು ಕೊಡ್ತೀರಿ ಅಂದಿದ್ದಾರೆ.

ಏಯ್ ನೋಡಪ್ಪಾ… ಇವನ್ ಯಾರ್ರೀ… ಸಂಬಳ ಅದೆಷ್ಟು ಕೇಳ್ತಾನೋ ಅಷ್ಟು ಕೊಡ್ರಿ ಎಂದು ನಾಳೆಯಿಂದ ಬಾ ಎಂದಾಗ, “ ಇಲ್ಲಾ ಸಾರ್ ನನಗೆ ಟೈಂ ಬೇಕು. ಒಂದು ವಾರ ಯೋಚನೆ ಮಾಡಿ ಹೇಳ್ತೀನಿ” ಎಂದು ಕಚೇರಿಗೆ ಬಂದು ಯಥಾವತ್ ವರದಿಯನ್ನ ಭಟ್ ಅವರಿಗೆ ತಲುಪಿಸಿದ್ದಾರೆ.
ಇಲ್ಲೇ ನಿನಗೊಂದು ಚೇರ್ ಇಟ್ಟಿರ್ತೀನಿ ಹೋಗು:
ಭಟ್ ಅವರು… ಇದು ಒಳ್ಳೇ ಅವಕಾಶ ಹೋಗು ಎಂದು ಕಳುಹಿಸಿದ್ದಾರೆ. ಮತ್ತೆ ಈ ಸರ್ಕಾರ ಹೋದ್ಮೇಲೆ ನನಗೆ ಕೆಲಸ ಎಂದಾಗ ಇಲ್ಲೇ ನಿನಗೊಂದು ಚೇರ್ ಇಟ್ಟಿರ್ತೀನಿ ಹೋಗು ಎಂದು ಆಶ್ವಾಸನೆ ನೀಡಿದ್ದಾರೆ. ಹೀಗೆ ಕೆ.ವಿ. ಪ್ರಭಾಕರ್ 13 ವರ್ಷಗಳ ಹಿಂದೆ ಸಿದ್ದರಾಮಯ್ಯನವರ ಅಂಗಳಕ್ಕೆ ಹೋದವರು.

ಮುಖ್ಯಮಂತ್ರಿಗಳ ಕಚೇರಿಗೆ ಹೋದಾಗ ದಿನೇಶ್ ಅಮೀನ್ ಮಟ್ಟು ಅವರ ಮಾರ್ಗದರ್ಶನದಲ್ಲಿ ಕೆಲಸ ಆರಂಭಿಸಿದರು. ಸರ್ಕಾರದ ಅವಧಿ ಮುಗೀತು. ಅಷ್ಟರಲ್ಲಿ ಪ್ರಭಾಕರ್ ಅಂದ್ರೆ ಸಿದ್ದರಾಮಯ್ಯ ನವರ ಶಿಷ್ಯ ಅಂತಾಗಿತ್ತು. ಇನ್ನೇನು ಯಾರಾತ್ರಾದ್ರೂ ಯಾಕೆ ಕೆಲ್ಸಕ್ಕೆ ಹೋಗೋದು? ಅಂತಾ ಸರ್ ನಿಮ್ಮ ಜೊತೆಲೇ ಇರ್ತೀನಿ ಎಂದಿದ್ದಾರೆ. ಆ ದಿನಗಳಲ್ಲೂ ಸಿದ್ದರಾಮಯ್ಯ ಪ್ರಭಾಕರ್ ಅವರನ್ನು ಚೆನ್ನಾಗಿ ನೋಡಿಕೊಂಡರೆಂದು ಪ್ರಭಾಕರ್ ಇಂದಿಗೂ ಅಭಿಮಾನದಿಂದಲೇ ಹೇಳಿಕೊಳ್ಳುತ್ತಾರೆ.

Who introduced Media Advisor KV Prabhakar to CM Siddaramaiahh
ಈ ಚಿತ್ರವನ್ನೊಮ್ಮೆ ಗಾಢವಾಗಿ ಅವಲೋಕಿಸಿ – ಚಿತ್ರವೇ ಎಲ್ಲವನ್ನೂ ಹೇಳುತ್ತಿದೆ!

ಮುಂದೆ ಮತ್ತೊಂದು ಎಲೆಕ್ಷನ್. ಸಿದ್ದರಾಮಯ್ಯ ಮುಖ್ಯಮಂತ್ರಿ. ಆಗ ಕೆ.ವಿ. ಪ್ರಭಾಕರ್ ಅವರನ್ನು ಸಿದ್ದರಾಮಯ್ಯನವರು ಮಾಧ್ಯಮ ಸಲಹೆಗಾರರನ್ನಾಗಿ ನೇಮಿಸಿಕೊಳ್ಳುತ್ತಾರೆ. ಅದಾಗಿ ಮೊನ್ನೆ 22.05.2026ಕ್ಕೆ ಮೂರು ವರ್ಷ ಸಂದಿತು.

ಲಾಸ್ಟ್‌ (ಭಟ್) ಬಟ್ ನಾಟ್ ದಿ ಲೀಸ್ಟ್!
ಅಂದು ವಿಶ್ವೇಶ್ವರ್ ಭಟ್ ಪ್ರಭಾಕರ್ ಅವರನ್ನು ಡಿಸ್ಕರೇಜ್ ಮಾಡಿದ್ದರೆ! ಅಲ್ಲೋಗಿ ಏನ್ರೀ ಮಾಡ್ತೀರಿ… ಎಂದಿದ್ದರೆ! ಕೋಲಾರದ ಅಪ್ಪಟ ಪ್ರತಿಭೆ, ನ್ಯೂಸ್ ಪೇಪರ್ ಹಾಕುತ್ತಿದ್ದ ಹುಡುಗನೊಬ್ಬ ಇಂದು ಸಚಿವ ದರ್ಜೆ ಸ್ಥಾನಮಾನದ ಹುದ್ದೆಯೊಂದನ್ನು ಪಡೆಯುವಲ್ಲಿ ಅವಕಾಶ ವಂಚಿತನಾಗುತ್ತಿದ್ದ. ಹಾಗಾಗಿ ಭಟ್ಟರಿಗೂ ಅಭಿನಂದನೆಗಳು ಸಲ್ಲುತ್ತದೆ.

ಹಿರಿಯ ಪತ್ರಕರ್ತ ಶ್ರೀ ನಾಗೇಶ್‌ ಕಾಳೇನಹಳ್ಳಿ (Journalist Nagesh Kalenahalli) ಅವರ ಆ ಒಂದು ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಅಷ್ಟೂ ವಿವರ ಇದೆ, ನೋಡಿ:


.

ಟೊಯೊಟಾ ಕಿರ್ಲೋಸ್ಕರ್  “ಟಿಕೆಎಂ ಬಿಜಿಂಟೆಲ್ ಹಬ್” ಸ್ಥಾಪಿಸಲು ಕಾರ್ಯತಂತ್ರದ ಒಪ್ಪಂದಕ್ಕೆ ಸಹಿ 

ಬೆಂಗಳೂರು: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) (TOYOTA KIRLOSKAR MOTOR) ಇಂದು ಬೆಂಗಳೂರಿನ ಕೆವಿಐಎನ್ ಸಿಟಿಯಲ್ಲಿ (KVIN CITY) “ಟಿಕೆಎಂ ಬಿಜಿಂಟೆಲ್ ಹಬ್” (TKM DIGITAL HUB) ಅನ್ನು ಸ್ಥಾಪಿಸುವ ಮೂಲಕ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಲು ಕರ್ನಾಟಕ ಸರ್ಕಾರದೊಂದಿಗೆ ತಿಳಿವಳಿಕೆಯ ಒಪ್ಪಂದಕ್ಕೆ ಸಹಿ ಹಾಕುವುದಾಗಿ ಘೋಷಿಸಿದೆ. ಈ ಉಪಕ್ರಮವು ಎಂಜಿನಿಯರಿಂಗ್ ಸಾಮರ್ಥ್ಯಗಳು ಮತ್ತು ಡಿಜಿಟಲ್ ನಾವೀನ್ಯತೆಯನ್ನು ಬಲಪಡಿಸಲು ಬಲವಾದ ಸಹಯೋಗ ಮತ್ತು ಸಮಾನ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು, ಕರ್ನಾಟಕ ಸರ್ಕಾರದ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಡಾ. ಎಂ.ಬಿ. ಪಾಟೀಲರು ಹಾಗೂ ಇತರ ಹಿರಿಯ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ, ಜೊತೆಗೆ ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ನ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ, ಒಪ್ಪಂದ ಪತ್ರಕ್ಕೆ (MoU) ಸಹಿ ಮಾಡಲಾಯಿತು.

300 ಎಕರೆಗಳಲ್ಲಿ ವ್ಯಾಪಿಸಿರುವ ಪ್ರಸ್ತಾವಿತ ಟಿಕೆಎಂ ಬಿಜಿಂಟೆಲ್ ಹಬ್ ಚಲನಶೀಲತೆ ಪರಿಹಾರಗಳ ಪರೀಕ್ಷೆ ಮತ್ತು ಮೌಲ್ಯಮಾಪನ, ಎಲ್ಲಾ ವ್ಯವಹಾರ ಕಾರ್ಯಾಚರಣೆಗಳಲ್ಲಿ ಡಿಜಿಟಲ್ ರೂಪಾಂತರ ಮತ್ತು ಜಾಣ ಉತ್ಪಾದನಾ ಉಪಕ್ರಮಗಳ ಅನುಷ್ಠಾನವೂ ಸೇರಿದಂತೆ ಇಡೀ ಮೌಲ್ಯ ಸರಪಳಿಯ ಒಟ್ಟಾರೆ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಅನೇಕ ಕಾರ್ಯತಂತ್ರದ ಉದ್ದೇಶಗಳನ್ನು ಅನುಸರಿಸುತ್ತದೆ. ದೇಶದ ದೃಢವಾದ ನುರಿತ ಎಂಜಿನಿಯರಿಂಗ್ ಮಾನವಶಕ್ತಿ ಮತ್ತು ಮಾಹಿತಿ ತಂತ್ರಜ್ಞಾನ ಪರಿಸರ ವ್ಯವಸ್ಥೆಯನ್ನು ಬಳಸಿಕೊಳ್ಳುವ ಮೂಲಕ ಮುಂದಿನ ದಿನಗಳಲ್ಲಿ ಟೊಯೊಟಾದ ಜಾಗತಿಕ ದೃಷ್ಟಿಕೋನದಲ್ಲಿ ಭಾರತವನ್ನು ಪ್ರಮುಖ ಸ್ಥಾನಕ್ಕೆ ತರುವ ನಿರೀಕ್ಷೆಯಿದೆ.

ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ. ಸಿದ್ದರಾಮಯ್ಯನವರು ಮಾತನಾಡಿ ಹೇಳಿದರು, ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕರ್ನಾಟಕದ ಬೆಳವಣಿಗೆಯ ಪಯಣದಲ್ಲಿ ವಿಶ್ವಾಸಾರ್ಹ ದೀರ್ಘಕಾಲೀನ ಪಾಲುದಾರನಾಗಿದೆ. ತಂತ್ರಜ್ಞಾನ ಆಧಾರಿತ ಹೂಡಿಕೆಯನ್ನು ಹೆಚ್ಚಿಸಲು, ಗುಣಮಟ್ಟದ ಉದ್ಯೋಗ ಸೃಷ್ಟಿಸಲು ಮತ್ತು ಸುಸ್ಥಿರ ಕೈಗಾರಿಕಾ ಅಭಿವೃದ್ಧಿಯನ್ನು ಉತ್ತೇಜಿಸಲು ನಾವು ಒಗ್ಗೂಡಿ ಶ್ರಮಿಸುತ್ತಿರುವುದರಿಂದ ಈ ತಿಳಿವಳಿಕೆ ಒಪ್ಪಂದವು ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ. ಈ ಪಾಲುದಾರಿಕೆಯು ಜಾಗತಿಕ ಹೂಡಿಕೆ ತಾಣವಾಗಿ ಕರ್ನಾಟಕದ ನಾಯಕತ್ವವನ್ನು ಮತ್ತಷ್ಟು ಬಲಪಡಿಸುತ್ತದೆ ಮತ್ತು ನಾವೀನ್ಯತೆ-ಚಾಲಿತ ಬೆಳವಣಿಗೆಗೆ ನಮ್ಮ ಬದ್ಧತೆಯನ್ನು ಬಲಪಡಿಸುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್‌ನ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಇಒ ಶ್ರೀ ಮಸಕಾಜು ಯೊಶಿಮುರಾ,  ಹೇಳಿದರು“ನಮ್ಮ ಪ್ರಯಾಣದಲ್ಲಿ ಪ್ರಮುಖ ಪಾತ್ರ ವಹಿಸಿದ ಕರ್ನಾಟಕ ಸರ್ಕಾರದ ನಿರಂತರ ಬೆಂಬಲ ಮತ್ತು ಸಹಯೋಗಕ್ಕಾಗಿ ನಾವು ಕೃತಜ್ಞರಾಗಿರುತ್ತೇವೆ. ನಾವೀನ್ಯತೆ ಮತ್ತು ಸುಸ್ಥಿರ ಚಲನಶೀಲತೆ ಉಪಕ್ರಮಗಳಿಗೆ ಚಾಲನೆ ನೀಡಲು ಟೊಯೊಟಾಗೆ ಭಾರತವು ಯಾವಾಗಲೂ ವ್ಯೂಹಾತ್ಮಕವಾಗಿ ಪ್ರಮುಖ ಮಾರುಕಟ್ಟೆಯಾಗಿದೆ. ಟಿಕೆಎಂ ಬಿಜಿಂಟೆಲ್ ಹಬ್ ಪರೀಕ್ಷೆ ಮತ್ತು ಮೌಲ್ಯಮಾಪನ ಚಟುವಟಿಕೆಗಳು, ಡಿಜಿಟಲ್ ರೂಪಾಂತರದಲ್ಲಿನ ಪ್ರಗತಿ ಮತ್ತು ಇಡೀ ಪೂರೈಕೆ ಸರಪಳಿ ವ್ಯವಹಾರದಾದ್ಯಂತ ಬುದ್ಧಿವಂತ ಉತ್ಪಾದನೆಯನ್ನು ಬೆಂಬಲಿಸುತ್ತ, ನುರಿತ ಪ್ರತಿಭೆಗಳೊಂದಿಗೆ ಭಾರತದ ದೃಢವಾದ ಮಾಹಿತಿ ತಂತ್ರಜ್ಞಾನ ಪರಿಸರ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತದೆ. ಸ್ಥಳೀಕರಣ ಮತ್ತು ಜವಾಬ್ದಾರಿಯುತ ಬೆಳವಣಿಗೆಯ ಮೇಲೆ ಟಿಕೆಎಂನ ಗಮನವನ್ನು ಕೇಂದ್ರೀಕರಿಸಿದ ಈ ಉಪಕ್ರಮವು ಇಂಗಾಲದ ತಟಸ್ಥತೆಯ ಗುರಿಗಳನ್ನು ಸಾಧಿಸುವ ಮತ್ತು ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತದಂತಹ ರಾಷ್ಟ್ರೀಯ ಆದ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಕಂಪನಿಯ ಬಹುಮಾರ್ಗದ ವಿಧಾನದೊಂದಿಗೆ ಹೊಂದಿಕೆಯಾಗುತ್ತದೆ.

ಈ ಪಾಲುದಾರಿಕೆಯ ಮೂಲಕ, ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಮತ್ತು ಕರ್ನಾಟಕ ಸರ್ಕಾರವು ಸುಸ್ಥಿರ ಆರ್ಥಿಕ ಬೆಳವಣಿಗೆ ಮತ್ತು ನಾವೀನ್ಯತೆ-ನೇತೃತ್ವದ ಉದ್ಯೋಗ ಸೃಷ್ಟಿಯನ್ನು ಬೆಂಬಲಿಸುತ್ತ ಕಾರ್ಯತಂತ್ರದ ತಂತ್ರಜ್ಞಾನ ಹೂಡಿಕೆ ಮತ್ತು ಭವಿಷ್ಯಕ್ಕೆ ಸಿದ್ಧವಾದ ಪ್ರತಿಭೆಗಳಿಗೆ ಪ್ರಮುಖ ತಾಣವಾಗಿ ರಾಜ್ಯದ ಸ್ಥಾನವನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು ಹೊಂದಿದೆ.

ದೊಡ್ಡಬಳ್ಳಾಪುರ-ದಾಬಸ್ಪೇಟೆ ಹೆದ್ದಾರಿಯ ಉದ್ದಕ್ಕೂ ಕೆವಿಐಎನ್ (ಜ್ಞಾನ, ಯೋಗಕ್ಷೇಮ ಮತ್ತು ನಾವೀನ್ಯತೆ) ನಗರವು ಟಿಕೆಎಂ ಬಿಜಿಂಟೆಲ್ ಹಬ್ ನ ಉದ್ದೇಶಿತ ಸ್ಥಳವಾಗಿದೆ, ಇದು ನಾವೀನ್ಯತೆ, ಆರೋಗ್ಯ ರಕ್ಷಣೆ ಮತ್ತು ಮಾಹಿತಿ ತಂತ್ರಜ್ಞಾನದ ಮೇಲೆ ಬಲವಾದ ಗಮನವನ್ನು ಕೇಂದ್ರೀಕರಿಸಿ ಕರ್ನಾಟಕ ಸರ್ಕಾರವು ಅಭಿವೃದ್ಧಿಪಡಿಸುತ್ತಿರುವ ಸಮಗ್ರ ಸ್ಮಾರ್ಟ್ ಸಿಟಿ ಉಪಕ್ರಮವಾಗಿದೆ.

 ಟಿಕೆಎಂ ನ ಅವಲೋಕನ

ಈಕ್ವಿಟಿ ಭಾಗವಹಿಸುವಿಕೆಟೊಯೊಟಾ ಮೋಟಾರ್ ಕಾರ್ಪೊರೇಷನ್ (ಜಪಾನ್): ಶೇ.89, ಕಿರ್ಲೋಸ್ಕರ್ ಸಿಸ್ಟಮ್ಸ್ ಲಿಮಿಟೆಡ್ (ಭಾರತ): ಶೇ.11
ನೌಕರರ ಸಂಖ್ಯೆ6,665
ಭೂ ಪ್ರದೇಶಅಂದಾಜು 432 ಎಕರೆ (ಅಂದಾಜು 1,700,000 ಚದರ ಮೀ 2)
ಕಟ್ಟಡ ಪ್ರದೇಶ74,000 m2
ಒಟ್ಟು ಸ್ಥಾಪಿತ ಉತ್ಪಾದನಾ ಸಾಮರ್ಥ್ಯ3,42,000 ಯುನಿಟ್ ಗಳವರೆಗೆ

ಟಿಕೆಎಂ 1 ನೇ ಸ್ಥಾವರದ ಅವಲೋಕನ:

ಸ್ಥಾಪಿಸಲಾಗಿದೆಅಕ್ಟೋಬರ್ ೧೯೯೭ (ಉತ್ಪಾದನೆಯ ಪ್ರಾರಂಭ: ಡಿಸೆಂಬರ್ ೧೯)
ಸ್ಥಾನಬಿಡದಿ
ಉತ್ಪನ್ನಗಳುಇನ್ನೋವಾ ಹೈಕ್ರಾಸ್, ಇನೋವಾ ಕ್ರಿಸ್ಟಾ, ಫಾರ್ಚೂನರ್, ಲೆಜೆಂಡರ್, ಭಾರತದಲ್ಲಿ ತಯಾರಿಸಲಾಗುತ್ತದೆ
ಸ್ಥಾಪಿತ ಉತ್ಪಾದನಾ ಸಾಮರ್ಥ್ಯ1,32,000 ಯುನಿಟ್ ಗಳವರೆಗೆ

ಟಿಕೆಎಂ 2 ನೇ ಸ್ಥಾವರದ ಅವಲೋಕನ:

ಉತ್ಪಾದನೆಯ ಪ್ರಾರಂಭಡಿಸೆಂಬರ್ 2010
ಸ್ಥಾನಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಪ್ರೈವೇಟ್ ಲಿಮಿಟೆಡ್, ಬಿಡದಿಯ ತಾಣದಲ್ಲಿ
ಉತ್ಪನ್ನಗಳುಕ್ಯಾಮ್ರಿ ಹೈಬ್ರಿಡ್, ಅರ್ಬನ್ ಕ್ರೂಸರ್ ಹೈರೈಡರ್, ಹಿಲಕ್ಸ್
ಸ್ಥಾಪಿತ ಉತ್ಪಾದನಾ ಸಾಮರ್ಥ್ಯ2,10,000 ಯುನಿಟ್ ಗಳವರೆಗೆ

*ಇತರೆ ಟೊಯೋಟಾ ಮಾದರಿಗಳು: ಗ್ಲಾಂಝಾ, ರೂಮಿಯನ್, ಅರ್ಬನ್ ಕ್ರೂಸರ್ ಟೈಸರ್

**CBU ರೂಪದಲ್ಲಿ ಆಮದು ಮಾಡಿರುವ ಮಾದರಿಗಳು: ವೆಲ್‌ಫೈರ್, LC 300