ದೇವನಹಳ್ಳಿ: ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆ ತರಲು ಜಾರಿಗೆ ಬಂದ ಮಾಹಿತಿ ಕ್ಕು ಕಾಯ್ದೆಗೆ (RTI) ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಬೆಲೆಯೇ ಇಲ್ಲದಂತಾಗಿದೆ. ಇಲ್ಲಿ ಅರ್ಜಿ ಸಲ್ಲಿಸಿದ ಸಾರ್ವಜನಿಕರು ಮಾಹಿತಿ ಪಡೆಯಲು ತಿಂಗಳುಗಟ್ಟಲೆ ಕಾಯುವಂತಾಗಿದ್ದು, ಅಧಿಕಾರಿಗಳ ಹಾರಿಕೆ ಉತ್ತರಕ್ಕೆ ಜನರು ಬೆಸತ್ತು ಹೋಗಿದ್ದಾರೆ.ವಜಾ ಮಾಡಲು ಆಗ್ರಹ:ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅಖಿಲ ಭಾರತ ಅರ್ಚಕರ ಮತ್ತು ಪರೋಹಿತರ ಫೆಡ್ರೇಶನ್‌ನ ರಾಷ್ಟ್ರೀಯ ನಿರ್ದೇಶಕರಾದ ಬಿ. ಆರ್. ಗೋವರ್ಧನ್ ಪಾಣಿ ಅವರು, ಕರ್ತವ್ಯ ಲೋಪ ಎಸಗುತ್ತಿರುವ ಅಧಿಕಾರಿಗಳನ್ನು ಕೂಡಲೇ ಕೆಲಸದಿಂದ ವಜಾಗೊಳಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.ವರದಿಯ ಮುಖ್ಯಾಂಶಗಳು:ತಿಂಗಳು ಕಳೆದರೂ ಸಿಗದ ಮಾಹಿತಿ: ಅರ್ಜಿ ಸಲ್ಲಿಸಿ 3-4 ತಿಂಗಳಾದರೂ ಯಾವುದೇ ಮಾಹಿತಿ ನೀಡದೆ ವಿಳಂಬ ಮಾಡಲಾಗುತ್ತಿದೆ.ಹಾರಿಕೆ ಉತ್ತರ: ಫೋನ್ ಮೂಲಕ ವಿಚಾರಿಸಿದರೆ “ಕಳಿಸುತ್ತೇವೆ” ಎಂಬ ಹಾರಿಕೆ ಉತ್ತರ ನೀಡಿ ಜಾರಿಕೊಳ್ಳುತ್ತಿದ್ದಾರೆ.ಹಳ್ಳಿಗಾಡಿನ ಜನರಿಗೆ ಸಂಕಷ್ಟ: ಪ್ರತಿಯೊಂದು ಸಣ್ಣ ವಿಚಾರಕ್ಕೂ ಮೇಲ್ಮನವಿ ಸಲ್ಲಿಸಲು ಸಾಧ್ಯವಾಗದೆ ಗ್ರಾಮೀಣ ಭಾಗದ ಜನರು ಕಚೇರಿಗೆ ಅಲೆಯುವಂತಾಗಿದೆ.ನಿರ್ಲಕ್ಷ್ಯ: ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಸಾರ್ವಜನಿಕರ ದೂರು.ಮಾಹಿತಿ ಹಕ್ಕು ಆಯೋಗ ಮತ್ತು ಸಂಬಂಧಪಟ್ಟ ಸಚಿವರು ಈ ಕೂಡಲೇ ಮಧ್ಯಪ್ರವೇಶಿಸಿ, ಕಾನೂನು ಉಲ್ಲಂಘಿಸುತ್ತಿರುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಈ ಮೂಲಕ ಒತ್ತಾಯಿಸಲಾಗಿದೆ.ದೇವನಹಳ್ಳಿ: ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆ ತರಲು ಜಾರಿಗೆ ಬಂದ ಮಾಹಿತಿ ಹಕ್ಕು ಕಾಯ್ದೆಗೆ (RTI) ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಬೆಲೆಯೇ ಇಲ್ಲದಂತಾಗಿದೆ. ಇಲ್ಲಿ ಅರ್ಜಿ ಸಲ್ಲಿಸಿದ ಸಾರ್ವಜನಿಕರು ಮಾಹಿತಿ ಪಡೆಯಲು ತಿಂಗಳುಗಟ್ಟಲೆ ಕಾಯುವಂತಾಗಿದ್ದು, ಅಧಿಕಾರಿಗಳ ಹಾರಿಕೆ ಉತ್ತರಕ್ಕೆ ಜನರು ಬೆಸತ್ತು ಹೋಗಿದ್ದಾರೆ.ವಜಾ ಮಾಡಲು ಆಗ್ರಹ:ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅಖಿಲ ಭಾರತ ಅರ್ಚಕರ ಮತ್ತು ಪರೋಹಿತರ ಫೆಡ್ರೇಶನ್‌ನ ರಾಷ್ಟ್ರೀಯ ನಿರ್ದೇಶಕರಾದ ಬಿ. ಆರ್. ಗೋವರ್ಧನ್ ಪಾಣಿ ಅವರು, ಕರ್ತವ್ಯ ಲೋಪ ಎಸಗುತ್ತಿರುವ ಅಧಿಕಾರಿಗಳನ್ನು ಕೂಡಲೇ ಕೆಲಸದಿಂದ ವಜಾಗೊಳಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.ವರದಿಯ ಮುಖ್ಯಾಂಶಗಳು:ತಿಂಗಳು ಕಳೆದರೂ ಸಿಗದ ಮಾಹಿತಿ: ಅರ್ಜಿ ಸಲ್ಲಿಸಿ 3-4 ತಿಂಗಳಾದರೂ ಯಾವುದೇ ಮಾಹಿತಿ ನೀಡದೆ ವಿಳಂಬ ಮಾಡಲಾಗುತ್ತಿದೆ.ಹಾರಿಕೆ ಉತ್ತರ: ಫೋನ್ ಮೂಲಕ ವಿಚಾರಿಸಿದರೆ “ಕಳಿಸುತ್ತೇವೆ” ಎಂಬ ಹಾರಿಕೆ ಉತ್ತರ ನೀಡಿ ಜಾರಿಕೊಳ್ಳುತ್ತಿದ್ದಾರೆ.ಹಳ್ಳಿಗಾಡಿನ ಜನರಿಗೆ ಸಂಕಷ್ಟ: ಪ್ರತಿಯೊಂದು ಸಣ್ಣ ವಿಚಾರಕ್ಕೂ ಮೇಲ್ಮನವಿ ಸಲ್ಲಿಸಲು ಸಾಧ್ಯವಾಗದೆ ಗ್ರಾಮೀಣ ಭಾಗದ ಜನರು ಕಚೇರಿಗೆ ಅಲೆಯುವಂತಾಗಿದೆ.ನಿರ್ಲಕ್ಷ್ಯ: ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಸಾರ್ವಜನಿಕರ ದೂರು.ಮಾಹಿತಿ ಹಕ್ಕು ಆಯೋಗ ಮತ್ತು ಸಂಬಂಧಪಟ್ಟ ಸಚಿವರು ಈ ಕೂಡಲೇ ಮಧ್ಯಪ್ರವೇಶಿಸಿ, ಕಾನೂನು ಉಲ್ಲಂಘಿಸುತ್ತಿರುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಈ ಮೂಲಕ ಒತ್ತಾಯಿಸಲಾಗಿದೆ.
ಜನಿವಾರ ತೆಗೆಸಿದ ಕೃತ್ಯ ‘ಪೆಹಲ್ಗಾಂ’ ಮಾದರಿಯ ದಬ್ಬಾಳಿಕೆ:
ಬ್ರಾಹ್ಮಣ ಮಹಾಸಭಾ ತೀವ್ರ ಖಂಡನೆ
ಇತ್ತೀಚೆಗೆ ನಡೆದ ಸಿಇಟಿ (CET) ಪರೀಕ್ಷಾ ಸಮಯದಲ್ಲಿ ಬೆಂಗಳೂರಿನ ಕೃಪಾನಿಧಿ ವಿದ್ಯಾಸಂಸ್ಥೆ ಹಾಗೂ ಚಿಕ್ಕಬಳ್ಳಾಪುರದ ನಾಗಾರ್ಜುನ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಜನಿವಾರ ಹಾಗೂ ಧಾರ್ಮಿಕ ಆಚರಣೆಯ ಕುರುಹುಗಳನ್ನು ಬಲವಂತವಾಗಿ ತೆಗೆಸಿರುವುದು ಸಮಾಜಕ್ಕೆ ಮಾರಕವಾದ ಕೃತ್ಯ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ರಾಘವೇಂದ್ರ ಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಘಟನೆಯನ್ನು ಕಾಶ್ಮೀರದ ಪೆಹಲ್ಗಾಂನಲ್ಲಿ ಜಾತಿ ಕೇಳಿ ಗುಂಡಿಕ್ಕಿದ ಘಟನೆಗೆ ಹೋಲಿಸಿದರು. “ವಿದ್ಯಾಸಂಸ್ಥೆಗಳಲ್ಲಿ ಜನಿವಾರ, ಶಿವದಾರ, ಕಾಶಿದಾರ, ಮಾಂಗಲ್ಯ, ಕಿವಿ ಓಲೆ, ಕಾಲುಂಗರದಂತಹ ಹಿಂದೂ ಧರ್ಮದ ಅವಿಭಾಜ್ಯ ಅಂಗಗಳ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ. ಇದು ಲವ್ ಜಿಹಾದ್( Love Jihad and Coroporate Jihad ) ಹಾಗೂ ಕಾರ್ಪೊರೇಟ್ ಜಿಹಾದ್ ಮಾದರಿಯಲ್ಲೇ ನಡೆಯುತ್ತಿರುವ ‘ವಿದ್ಯಾ ಜಿಹಾದ್’ ಎಂಬ ಶಂಕೆ ಮೂಡುತ್ತಿದೆ,” ಎಂದು ಆತಂಕ ವ್ಯಕ್ತಪಡಿಸಿದರು.
ನ್ಯಾಯಾಲಯದ ಆದೇಶದ ಉಲ್ಲಂಘನೆ
ಕಳೆದ ವರ್ಷವೂ ಇಂತಹದ್ದೇ ಘಟನೆಗಳು ನಡೆದಿದ್ದವು. ಈ ಬಗ್ಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ನ್ಯಾಯಾಲಯದ ಮೆಟ್ಟಿಲೇರಿತ್ತು. ಆಗ ಸಿಇಟಿ ಕೌನ್ಸಿಲ್ ಇನ್ಮುಂದೆ ಇಂತಹ ಕೃತ್ಯಗಳಿಗೆ ಆಸ್ಪದ ನೀಡುವುದಿಲ್ಲ ಎಂದು ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿತ್ತು. ಹೀಗಿದ್ದರೂ ಈ ವರ್ಷವೂ ಅದೇ ಕೃತ್ಯ ಪುನರಾವರ್ತನೆಯಾಗಿರುವುದು ಸಂವಿಧಾನ ವಿರೋಧಿ ಮತ್ತು ನ್ಯಾಯಾಂಗ ನಿಂದನೆಯಾಗಿದೆ ಎಂದು ಅವರು ದೂರಿದರು.
ಮಹಾಸಭಾದ ಪ್ರಮುಖ ಬೇಡಿಕೆಗಳು:
ಪಾರದರ್ಶಕ ತನಿಖೆ: ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಈ ಘಟನೆಯ ಹಿಂದೆ ಇರುವ ಶಕ್ತಿಗಳ ಬಗ್ಗೆ ತನಿಖೆ ನಡೆಸಬೇಕು.
ವಿದ್ಯಾಸಂಸ್ಥೆಗಳ ಮಾನ್ಯತೆ ರದ್ದು: ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಕೃಪಾನಿಧಿ ಮತ್ತು ನಾಗಾರ್ಜುನ ವಿದ್ಯಾಸಂಸ್ಥೆಗಳ ಮಾನ್ಯತೆಯನ್ನು ತಕ್ಷಣವೇ ರದ್ದುಗೊಳಿಸಬೇಕು.
ವ್ಯಕ್ತಿಗಳ ಬಂಧನ: ಜನಿವಾರ ತೆಗೆಸಿದ ಕೃತ್ಯದ ಹಿಂದಿರುವ ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು.
”ಇಂತಹ ಕೃತ್ಯಗಳು ವಿದ್ಯಾರ್ಥಿಗಳ ಆತ್ಮಸ್ಥೈರ್ಯವನ್ನು ಕುಗ್ಗಿಸುತ್ತವೆ. ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಹಿಂದೇಟು ಹಾಕುವ ಪರಿಸ್ಥಿತಿಯನ್ನು ಸರ್ಕಾರವೇ ನಿರ್ಮಾಣ ಮಾಡುತ್ತಿದೆ. ಸರ್ಕಾರ ಕಠಿಣ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಇರುವ ಬ್ರಾಹ್ಮಣ ಸಂಘಟನೆಗಳು ಹಾಗೂ ಹಿಂದೂ ಬಾಂಧವರು ಸೇರಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು,” ಎಂದು ರಾಘವೇಂದ್ರ ಮಯ್ಯ ಎಚ್ಚರಿಸಿದರು.
ಆಲ್ ಇಂಡಿಯಾ ಬೃಹತ್ ಬೈಕ್ ಮೆಕ್ಯಾನಿಕ್ ಗಳ ಸಮಾವೇಶ: ಅನಾವರಣಗೊಂಡ ಅತ್ಯಾಧುನಿಕ ತಂತ್ರಜ್ಞಾನ ಬೈಕ್ ಉದ್ಯಮದ ಅಭಿವೃದ್ಧಿ, ತಾಂತ್ರಿಕ ಪ್ರಗತಿ ಹಾಗೂ ಕಾರ್ಮಿಕ ಕಲ್ಯಾಣ ಕುರಿತು ಚರ್ಚೆ*
ಕಾರ್ಮಿಕ ದಿನಾಚರಣೆ: ವಾಯ್ಸ್ ಆಫ್ ಸದಾಶಿವನಗರದಿಂದ 170ಪೌರ ಕಾರ್ಮಿಕರಿಗೆ ಸನ್ಮಾನ*
ರಂಗಪ್ರವೇಶ — ಕುಮಾರಿ ಲಕ್ಷ್ಮಿ ಅನನ್ಯ ತಾಟವರ್ತಿ
ಭಾರತೀಯ ಶಾಸ್ತ್ರೀಯ ನೃತ್ಯದ ಲೋಕದಲ್ಲಿ ರಂಗಪ್ರವೇಶ ಎಂದರೆ ಕೇವಲ ಒಂದು ಪ್ರದರ್ಶನವಲ್ಲ—ಅದು ಒಂದು ಘೋಷಣೆ. ಅನೇಕ ವರ್ಷಗಳ ಕಠಿಣ ಸಾಧನೆಯ ನಂತರ, ಶಿಷ್ಯೆ ತನ್ನನ್ನು ವಿದ್ಯಾರ್ಥಿನಿಯಾಗಿ ಅಲ್ಲ, ಸಂಪೂರ್ಣ ಕಲಾವಿದೆಯಾಗಿ ವೇದಿಕೆಯಲ್ಲಿ ಪರಿಚಯಿಸಿಕೊಳ್ಳುವ ಮಹತ್ವದ ಕ್ಷಣವೇ ರಂಗಪ್ರವೇಶ.
ಕುಮಾರಿ ಲಕ್ಷ್ಮಿ ಅನನ್ಯ ತಾಟವರ್ತಿಗೆ ಆ ಮಹತ್ತರ ಕ್ಷಣ ಇದೀಗ ಬಂದಿದೆ.
2010ರಲ್ಲಿ ಜನಿಸಿದ ಅನನ್ಯ, ಪ್ರಸ್ತುತ ಹನ್ನೊಂದನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದು, ಏಳನೇ ವಯಸ್ಸಿನಲ್ಲಿ ಪುಣೆಯಲ್ಲಿ ಪ್ರಸಿದ್ಧ ಗುರು ಡಾ. ಲಕ್ಷ್ಮಿ ಪಂಡಿತಾರ್ (Dr. Lakshmi Pandi Rao) ಅವರ ಮಾರ್ಗದರ್ಶನದಲ್ಲಿ ಭರತನಾಟ್ಯ ಅಭ್ಯಾಸವನ್ನು ಪ್ರಾರಂಭಿಸಿದರು. ಬಾಲ್ಯದಲ್ಲಿ ಆರಂಭವಾದ ಈ ಪರಿಚಯವು ಕ್ರಮೇಣ ಶಿಸ್ತಿನ ಸಾಧನೆ, ಅಚಲ ಸಮರ್ಪಣೆ ಮತ್ತು ಕಲೆಯ ಆಧ್ಯಾತ್ಮಿಕ ಅರ್ಥದ ಅರಿವಿನಿಂದ ಗಾಢ ಆಸಕ್ತಿಯಾಗಿ ಬೆಳೆದಿತು.
“ಅವಳು ಕೇವಲ ಹೆಜ್ಜೆಗಳನ್ನು ಕಲಿತಿಲ್ಲ; ಅವುಗಳ ಅರ್ಥವನ್ನು ಅರಿತುಕೊಂಡಿದ್ದಾಳೆ,” ಎಂದು ಅವರ ಮೊದಲ ಗುರು ಅಭಿಪ್ರಾಯಪಟ್ಟಿದ್ದಾರೆ.
ಡಾ. ಪಂಡಿತಾರ್ ಅವರ ಮಾರ್ಗದರ್ಶನದಲ್ಲಿ ಅನನ್ಯ ಕೇವಲ ತಾಂತ್ರಿಕ ಕೌಶಲ್ಯವನ್ನಷ್ಟೇ ಅಲ್ಲ, ಭರತನಾಟ್ಯದ ಆತ್ಮವನ್ನು—ಮುದ್ರೆಗಳು, ಅಭಿನಯ, ಹಾಗೂ ಪ್ರತಿಯೊಂದು ಚಲನವಲನದಲ್ಲಿರುವ ಭಕ್ತಿ ಭಾವವನ್ನು—ಆಳವಾಗಿ ಅಳವಡಿಸಿಕೊಂಡಳು.
2023ರಲ್ಲಿ ಕುಟುಂಬದೊಂದಿಗೆ ಬೆಂಗಳೂರಿಗೆ ಸ್ಥಳಾಂತರವಾದಾಗ, ಅನನ್ಯ ತನ್ನ ನೃತ್ಯಯಾತ್ರೆಯಲ್ಲಿ ಮಹತ್ವದ ತಿರುವನ್ನು ಎದುರಿಸಿತು. ತನ್ನ ಮೊದಲ ಗುರುಗಳ ಆಶೀರ್ವಾದ ಮತ್ತು ಶಿಫಾರಸ್ಸಿನೊಂದಿಗೆ, ಅವಳು ಪ್ರಸಿದ್ಧ ವಿದುಷಿ ಡಾ. ಪ್ರಿಯಾ ಗಣೇಶ್ ಅವರ ಶಿಷ್ಯೆಯಾಗಿ ತನ್ನ ಸಾಧನೆಯನ್ನು ಮುಂದುವರಿಸಿದರು. ಈ ಪರಿವರ್ತನೆ ಅವಳ ಕಲಾತ್ಮಕ ಬೆಳವಣಿಗೆಯಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿತು.
ಒಂಬತ್ತು ವರ್ಷಗಳ ನಿರಂತರ ಅಭ್ಯಾಸದಲ್ಲಿ ಅನನ್ಯ ದೇಶೀಯ ಹಾಗೂ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ತನ್ನ ಕಲೆ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ್ದಾಳೆ. ಆದರೆ ಪ್ರಶಂಸೆಗಳಿಗಿಂತಲೂ ಹೆಚ್ಚಾಗಿ, ಒಂದು ಮುಜುಗರದ ಬಾಲೆಯಿಂದ ಆತ್ಮವಿಶ್ವಾಸಿ ಕಲಾವಿದೆಯಾಗುವ ಅವಳ ಆಂತರಿಕ ಪರಿವರ್ತನೆವೇ ಅವಳ ಸಾಧನೆಯ ನಿಜವಾದ ಗುರುತು.
ಭವಿಷ್ಯದಲ್ಲಿ ಅನನ್ಯ ಭರತನಾಟ್ಯದಲ್ಲಿ ಉನ್ನತ ಅಧ್ಯಯನ ಮತ್ತು ಸಂಶೋಧನೆ ನಡೆಸುವ ಆಶಯ ಹೊಂದಿದ್ದು, ತನ್ನ ಗುರುಗಳ ಬೌದ್ಧಿಕ ಹಾಗೂ ಕಲಾತ್ಮಕ ಪರಂಪರೆಯನ್ನು ಮುಂದುವರಿಸಲು ಬಯಸುತ್ತಾಳೆ.
ಕಾರ್ಯಕ್ರಮದ ಪರಿಕಲ್ಪನೆ: “ರಾಮಭಕ್ತಿ — ಅನನ್ಯ ಶಕ್ತಿ” (Ram Bhakthi- Anany Shakti) (ನವವಿಧ ಭಕ್ತಿ)
ಇಂದಿನ ರಂಗಪ್ರವೇಶ ಕಾರ್ಯಕ್ರಮದ ಮುಖ್ಯ ವಿಷಯ “ರಾಮಭಕ್ತಿ — ಅನನ್ಯ ಶಕ್ತಿ”—ಇದು ಶ್ರೀ ಹನುಮಂತನ ರಾಮನ ಮೇಲಿನ ಅಚಲ ಭಕ್ತಿಯ ಅಪಾರ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ.
ಶ್ರೀ ಲಿಕಿತ್ ಮತ್ತು ವಿದುಷಿ ಡಾ. ಪ್ರಿಯಾ ಗಣೇಶ್ ಅವರ ಸಂಯುಕ್ತ ಪರಿಕಲ್ಪನೆಯಾಗಿ ರೂಪುಗೊಂಡ ಈ ಕಾರ್ಯಕ್ರಮವು ನವವಿಧ ಭಕ್ತಿ—ಭಕ್ತಿಯ ಒಂಬತ್ತು ರೂಪಗಳ ಆಧಾರದ ಮೇಲೆ ನಿರ್ಮಿತವಾಗಿದೆ.
ಈ ನಿರೂಪಣೆಯಲ್ಲಿ ಭಕ್ತಿಶ್ರೇಷ್ಠನಾದ ಹನುಮಂತನು ಶ್ರೀರಾಮಚಂದ್ರನ ಮೇಲಿನ ತನ್ನ ಪ್ರೀತಿಯನ್ನು ನವವಿಧ ಭಕ್ತಿಯ ಪ್ರತಿಯೊಂದು ರೂಪದಲ್ಲಿಯೂ ಹೇಗೆ ವ್ಯಕ್ತಪಡಿಸುತ್ತಾನೆ ಎಂಬುದನ್ನು ಮನೋಹರವಾಗಿ ಅನಾವರಣಗೊಳಿಸಲಾಗಿದೆ.
ಈ ಕಥನವು ಕೇವಲ ತಾತ್ವಿಕ ವಿವರಣೆಯಷ್ಟೇ ಅಲ್ಲ, ಭಾವಪೂರ್ಣ ಅನುಭವವೂ ಆಗಿದ್ದು, ಭರತನಾಟ್ಯದ ಅಭಿವ್ಯಕ್ತಿಶಕ್ತಿಗೆ ಅತ್ಯಂತ ಸೂಕ್ತವಾದ ಆಧ್ಯಾತ್ಮಿಕ ಹಾಗೂ ಕಲಾತ್ಮಕ ಸಂಯೋಜನೆಯಾಗಿದೆ.
ಪ್ರತಿ ಭಾಗವೂ ಒಂದು ಭಕ್ತಿಯ ರೂಪವನ್ನು ಪ್ರತಿನಿಧಿಸಿ, ವೇದಿಕೆಯನ್ನು ಒಂದು ಪವಿತ್ರ ಕ್ಷೇತ್ರವನ್ನಾಗಿ ರೂಪಿಸುತ್ತದೆ—ಅಲ್ಲಿ ನೃತ್ಯವೇ ಪ್ರಾರ್ಥನೆ, ಅಭಿನಯವೇ ಅರ್ಪಣೆ, ಮತ್ತು ಕಲೆ ದೇವರತ್ತ ಸಾಗುವ ಸೇತುವೆಯಾಗಿ ಪರಿಣಮಿಸುತ್ತದೆ.
“ವಿಶ್ವ ನೃತ್ಯ ದಿನಾಚರಣೆ”
ಆರ್ಟ್ ಕಲ್ಚರಲ್ ಎಜುಕೇಶನಲ್ ಎನ್ಲೈಟ್ ಫೌಂಡೇಶನ್ ಸಂಸ್ಥಾಪಕಿ ಅಂಬಿಕಾ ಸಿ(Ambika .c) ಮತ್ತು ಸಂಸ್ಥೆಯವರು ವಿಶ್ವ ನೃತ್ಯ ದಿನಾಚರಣೆ ಅಂಗವಾಗಿ ದಿನಾಂಕ 29 ಏಪ್ರಿಲ್ 20 26ರಂದು ನಯನ ಸಭಾಂಗಣದಲ್ಲಿ ವಿಶ್ವ ನೃತ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ
ಚೇತನ ನಾಟ್ಯ ನಿಕೇತನ ಕಲಾ ಕುಟೀರ(Chetana Natya Niketan kutira) ನೃತ್ಯ ಶಾಲೆಯ ಸಂಸ್ಥಾಪಕಿ ಗುರು ವಿದುಷಿ ಚೇತನ ಸುಂದರೇಶ್ ಉಪಸ್ಥಿತರಿದ್ದು ಕಲಾವಿದರು ಹಾಗೂ ಪೋಷಕರನ್ನು ಕುರಿತು ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮ ಜವಾಬ್ದಾರಿ ಎಂದು ಯುವ ಪೀಳಿಗೆಗೆ ತಿಳಿಯಪಡಿಸಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಆಯೋಜಕರಾದ ಅಂಬಿಕಾ ಸಿ ಅವರು ಮಾತನಾಡಿ ಯುವ ಪೀಳಿಗೆಯ ಪ್ರತಿಭೆಗಳಿಗೆ ಪ್ರೋತ್ಸಾಹ ಮತ್ತು ಅವಕಾಶ ಕಲ್ಪಿಸುವುದು ಹಿರಿಯರ ಕರ್ತವ್ಯವೆಂದರು.
ವಿಶ್ವ ನೃತ್ಯ ದಿನಾಚರಣೆಯಲ್ಲಿ ವಿದ್ಯಾರ್ಥಿಗಳ ನೃತ್ಯ ವೈಭವವು ನೋಡುಗರ ಕಣ್ಮನ ಸೆಳೆಯಿತು.
ಮಕ್ಕಳು, ಪೋಷಕರು ಮತ್ತು ಹಿರಿಯರ ಉಪಸ್ಥಿತಿಯಲ್ಲಿ ಬಹಳ ಯಶಸ್ವಿಯಾಗಿ ಜರುಗಿತು.
ಶ್ರೀ ಶ್ರೀನಿವಾಸ ದೇವರಿಗೆ ಮಹಾಭಿಷೇಕ ಪವಮಾನಪುರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ
ಬೆಂಗಳೂರು : ಪವಮಾನಪುರ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀಮಠದ ವಿಚಾರಣಾಕರ್ತರಾದ ಶ್ರೀ ಗಿರಿರಾಜಾಚಾರ್(Sri Girijaa char) ಮತ್ತು ನೂತನ ವ್ಯವಸ್ಥಾಪಕರಾದ ಶ್ರೀ ನಂದಕಿಶೋರಾಚಾರ್ಯರ(Sri Nandakishora charya) ನೇತೃತ್ವದಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣ ಮಹೋತ್ಸವದ ಅಂಗವಾಗಿ ಶ್ರೀ ಶ್ರೀನಿವಾಸ ದೇವರಿಗೆ ಮಹಾಭಿಷೇಕ ಮತ್ತು ಉತ್ಸವ ಮೂರ್ತಿಗಳಿಗೆ ಮಹಾಮಂಗಳಾರತಿಯು ನೆರವೇರಿಸಲಾಯಿತು. ಬೆಳಗ್ಗೆ 7:30ಕ್ಕೆ ಶ್ರೀನಿವಾಸ ದೇವರಿಗೆ ಮಹಾ ಅಭಿಷೇಕ ಪಂಚಾಮೃತದೊಂದಿಗೆ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಅಷ್ಟೋತ್ತರ ಸಹಿತ ಫಲ ಪಂಚಾಮೃತ ಅಭಿಷೇಕವು ಅರ್ಚಕರಾದ ಇಂದಿರೇಶ ಆಚಾರ್ ಮತ್ತು ಶ್ರೀಪಾದ ಆಚಾರ್ಯರಿಂದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ನೆರವೇರಿಸಿ ವಿಶೇಷ ಅಲಂಕಾರದೊಂದಿಗೆ ಮಹಾಮಂಗಳಾರತಿಯು ನೆರವೇರಿತು. ಈ ಸಂದರ್ಭದಲ್ಲಿ ಸೇವಾಕರ್ತೃಗಳು, ಶ್ರೀಮಠದ ಶಿಷ್ಯರು, ಭಕ್ತರು, ಶ್ರೀಮಠದ ಸಿಬ್ಬಂದಿಗಳು ಸ್ವಯಂ ಸೇವಕರು ಭಾಗವಹಿಸಿ ತೀರ್ಥ ಫಲಮಂತ್ರಾಕ್ಷತೆ ಪ್ರಸಾದವನ್ನು ಸ್ವೀಕರಿಸಿ ಶ್ರೀ ಶ್ರೀನಿವಾಸ ದೇವರ ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು.
ತ್ಯಾಗರಾಜನಗರ ರಾಯರ ಮಠದಲ್ಲಿ ಶ್ರೀ ನರಸಿಂಹ ಜಯಂತಿ
ಬೆಂಗಳೂರು : ತ್ಯಾಗರಾಜನಗರದ 11ನೇ ಅಡ್ಡರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ (Sri Rahghavendra Swamy Mutt) ಶ್ರೀ ನರಸಿಂಹ ಜಯಂತಿ ಪ್ರಯುಕ್ತ ಏಪ್ರಿಲ್ 30, ಗುರುವಾರ ಬೆಳಗ್ಗೆ 9ಕ್ಕೆ ಶ್ರೀಮನ್ಮಾಧವತೀರ್ಥ (ತಂಬಿಹಳ್ಳಿ) ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ 1008 ಶ್ರೀ ವಿದ್ಯಾವಲ್ಲಭಮಾಧವತೀರ್ಥ ಶ್ರೀಪಾದಂಗಳವರಿಂದ (Sree VidyavallabhamadhavaThirtha Sripadam) ಶ್ರೀಮದ್ಭಾಗವತ ಸಪ್ತಮ ಸ್ಕಂದ ಪ್ರವಚನದ ಮಂಗಳ, ಸಂಸ್ಥಾನ ಪೂಜೆ, ಮಹಾಮಂಗಳಾರತಿ, ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಜೆ 6ಕ್ಕೆ ಕು|| ಮೃದುಲಾ ಮತ್ತು ಸಂಗಡಿಗರಿಂದ ದಾಸವಾಣಿ (Dasavani) ಕಾರ್ಯಕ್ರಮ ಏರ್ಪಡಿಸಿದೆ.
ಶ್ರೀ ಗುರುಭ್ಯೋ ನಮ : ಪರಮ ಗುರುಭ್ಯೋನಮಃ ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯ ಗುರುಭ್ಯೋ ನಮಃ
ಇಂದು ಪರಮಾತ್ಮ ತನ್ನ ಭಕ್ತನನ್ನು ಕಾಪಾಡಲು ಒಂದು ಲೋಕ ವಿಲಕ್ಷಣವಾದ ರೂಪವನ್ನು ಪಡೆದು ಅವತರಿಸಿದ ದಿನ. ಅದೇ ನರಸಿಂಹ ದೇವರ ಪ್ರಾದುರ್ಭಾವ.
ನರಸಿಂಹ ರೂಪಿ ಪರಮಾತ್ಮನ ಸ್ಮರಣೆ ಮಾತ್ರದಲಿ ಅನಿಷ್ಟ ನಿವೃತ್ತಿ ಹಾಗೂ ಇಷ್ಟಪ್ರಾಪ್ತಿ. ಅದಕ್ಕೆಂದೇ ಶ್ರೀ ಜಗನ್ನಾಥ ದಾಸರು ತಮ್ಮ ಮಂಗಳಾಚರಣ ಸಂಧಿ ಯಲ್ಲಿ ಅನಿಷ್ಟಗಳು ಹಾಗೂ ವಿಘ್ನಗಳ ಪರಿಹಾರಕ್ಕೆ ತಮ್ಮ ಕುಲದೈವವಾದ ನರಸಿಂಹನನ್ನು ನಾರಸಿಂಹನೆ ನಮಿಪೆ ಕರುಣಿಪುದೆಮಗೆ ಮಂಗಳವಾ ಎಂದು ಸ್ತುತಿಸಿದ್ದಾರೆ. ಶ್ರೀ ವೇದವ್ಯಾಸರು 7ನೇ ಸ್ಕಂದವನ್ನು ಪೂರ್ಣವಾಗಿ ಭಕ್ತವತ್ಸಲನಾದ ನರಸಿಂಹ ಮತ್ತು ಪ್ರಹ್ಲಾದನಿಗೆ ಮೀಸಲಾಗಿರಿಸಿದ್ದಾರೆ.
ಭಾಗವತ ಸಪ್ತಮ ಸ್ಕಂದ ಪರಮಾತ್ಮನ ಪಕ್ಷಪಾತ ರಾಹಿತ್ಯವನ್ನು ನಿರೂಪಿಸಿದ ಸ್ಕಂದ. ಇದು ಬ್ರಹ್ಮಸೂತ್ರಗಳ ವಿವರಣೆ ಎಂದು ಹೇಳಿದ್ದಾರೆ.
ತಂದೆ ಹಿರಣ್ಯಕಶಿಪು ದೈತ್ಯ ಅವರ ಮಗ ಪ್ರಹ್ಲಾದನೂ ದೈತ್ಯನೇ. ಆದರೆ ತಂದೆ ಅಂತರಂಗ ಬಹಿರಂಗಗಳಲ್ಲಿ ದೈತ್ಯನಾದರೆ ಮಗ ಭಾಹ್ಯದಲ್ಲಿ ದೈತ್ಯನಾದರೆ ಅಂತರಂಗದಲ್ಲಿ ಕರ್ಮಜ ದೇವತೆ. ಹಿರಣ್ಯಕಶಿಪುವನ್ನು ಸಂಹರಿಸಿದ ಭಗವಂತ ಪ್ರಹ್ಲಾದನನ್ನು ಸಂರಕ್ಷಿಸಿದ.
ಅವನ ಅಹಂ ಅವನ ವಿನಾಶಕ್ಕೆ ಕಾರಣವಾದರೆ ಪ್ರಹ್ಲಾದನ ಗುಣ ಅವನ ಉದ್ಧಾರಕ್ಕೆ ಕಾರಣವಾಯಿತು ಅದಕ್ಕೆ ಭಗವಂತ ಸಮ ಎನಿಸಿಕೊಂಡಿದ್ದಾನೆ. ಹಿರಣ್ಯಕಶಿಪು ಪ್ರಹ್ಲಾದರು ಸಂಬಂಧದಲ್ಲಿ ತಂದೆ ಮಕ್ಕಳಾದರೂ ಸ್ವಭಾವದಲ್ಲಿ ವ್ಯತಿರಿಕ್ತರು. ಹಿರಣ್ಯ (ಧನಕನಕಾದಿ ಗಳು) ಹಾಗೂ ಕಶಿಪು ಎಂದರೆ ಭೋಗ ವಿಲಾಸಗಳು. ಇವು ಅವನ ಜೀವನದ ಮುಖ್ಯ ಗುರಿ. ನಾವೆಲ್ಲರೂ ಕೂಡ ಒಂದಲ್ಲ ಒಂದು ರೀತಿ ಹಿರಣ್ಯಕಶಿಪು ಗಳೇ. ಧನಕನಕಾದಿ ಗಳು ಭೋಗ ವಿಲಾಸಗಳಲ್ಲಿ ಮುಳುಗಿದವರು. ನರಸಿಂಹ ರೂಪಿ ಪರಮಾತ್ಮ ನಮ್ಮಲ್ಲಿರುವ ಹಿರಣ್ಯಕಶಿಪುವನ್ನು ಸಂಹರಿಸಿದ ಬೇಕು ಎಂದು ಬೇಡಿಕೊಳ್ಳಬೇಕು. ಆದರೆ ಇದಕ್ಕೆ ವಿರುದ್ಧವಾದ ಜೀವನ ಶೈಲಿ ಪ್ರಹ್ಲಾದನದು. ಸದಾ ಭೌತಿಕ ವಸ್ತುಗಳಿಂದ ದೂರವಿದ್ದು ಆಧ್ಯಾತ್ಮವನ್ನು ನಂಬಿದ ವಿರಕ್ತ ಜೀವನ ಅವನದು. ತಂದೆ ಲಕ್ಷ್ಮಿ ದಾಸ. ಮಗ ಲಕ್ಷ್ಮೀಪತಿಯ ದಾಸ. ಅವನಿಗೆ ವಿಷಯದ ನಂಟು ಇವನಿಗೆ ವಿಷ್ಣುವಿನ ನಂಟು. ಅವನಿಗೆ ದುರ್ಗತಿ ಇವನಿಗೆ ಸದ್ಗತಿ.
ಚಂಡ ಮರ್ಕರ ಬಳಿ ಪ್ರಹ್ಲಾದನ ವಿದ್ಯಾಭ್ಯಾಸ. ಅವನ ಪಠ್ಯದಲ್ಲಿ ಭಗವಂತನನ್ನು ಬಿಟ್ಟು ಜಗತ್ತಲ್ಲ ತುಂಬಿತ್ತು ವಿದ್ಯಾಭ್ಯಾಸವು ಇಂತಹುದೇ. ಜಗದ ಎಲ್ಲ ವಿಷಯವೂ ಇರುತ್ತದೆ ಜಗನ್ನಾಥನ ವಿಷಯವು ಮರೆತುಬಿಟ್ಟಿರುತ್ತಾರೆ.
ಒಮ್ಮೆ ಹಿರಣ್ಯಕಶಿಪು ಹೇಳಿದ ಮಗು ಪ್ರಹ್ಲಾದ ಏನೇನು ಕಲಿತಿರುವೆ. ಪ್ರಹ್ಲಾದನ ಉತ್ತರ ಶ್ರವಣಂ ಕೀರ್ತನಂ ವಿಷ್ಣೋ: ಸ್ಮರಣ ಪಾದಸೇವನಂ
ಅರ್ಚನಮ್ ವಂದನಂ ದಾಸ್ಯಂ ಸಖ್ಯಂ ಆತ್ಮನಿವೇದನಂ
ಭಗವಂತನ ಬಗ್ಗೆ ಹೇಳುವುದು ಕೇಳುವುದು ಸ್ಮರಿಸುವುದು ಭಜಿಸುವುದು ಪೂಜಿಸುವುದು ವಂದಿಸುವುದು ದಾಸ್ಯಭಾವ ಹೊಂದುವುದು ಸ್ನೇಹ ತೋರುವುದು ತನ್ನಲ್ಲಿ ಬಿಂಬ ರೂಪಿಯಾದ ಭಗವಂತನ ಸಾಕ್ಷಾತ್ಕರಿಸಿಕೊಳ್ಳುವುದು ಎಂಬ. ನವವಿಧ ಭಕ್ತಿಯನ್ನು ಹೇಳುತ್ತಾನೆ. ಹಿರಣ್ಯಕಶಿಪು ದಿಗ್ಭ್ರಮೆಗೊಂಡು ತನ್ನ ಮಗ ಹರಿಭಕ್ತರು ಹೇಗಾದ ಎಂದು ಯೋಚಿಸಿ ಕೊನೆಗೂ ಇದು ಅವನ ಸಹಜ ಸ್ವಭಾವವೆಂದು ತಿಳಿದು ಅವನನ್ನು ದ್ವೇಷಿಸಿ ಕೊಲ್ಲಲು ನಿರ್ಧರಿಸಿದ. ಅದಕ್ಕಾಗಿ ಸರ್ವಪ್ರಯತ್ನಗಳನ್ನೂ ಮಾಡಿದ ಆದರೆ ಅದರಿಂದ ಪ್ರಹ್ಲಾದನ ಒಂದು ಕೂದಲು ಕೂಡ ಕೊಂಕಲಿಲ್ಲ ಇದೇ ಪರಮಾತ್ಮನ ಭಕ್ತರ ಸಾಧನೆಯ ಗುಟ್ಟು. ಆಗೊಮ್ಮೆ ಹಿರಣ್ಯಕಶಿಪು ಯೋಚಿಸಿದಂತೆ ಯಾವ ರೀತಿಯಲ್ಲೂ ಸಾವು ಬೇಡ ಎಂದು ಹೇಳಿದವನು ನಾನು ಅದನ್ನು ಸಾಧಿಸಿದವನು ಇವನು. ಬ್ರಹ್ಮ ನನಗೆ ವರ ಕೊಡುವ ಬದಲು ನನ್ನ ವಂಶಕ್ಕೆ ಕೊಟ್ಟುಬಿಟ್ಟನೋ ಏನು ಅಂತ ಯೋಚಿಸಿದನು.
ಭಗವಂತನೊಬ್ಬನೇ ಶಾಶ್ವತ ಅವನು ಆನಂದದಿ ಸಕಲ ಸದ್ಗುಣಗಳ ಖಣಿ. ದುಃಖಾದಿ ದೋಷಗಳು ಸ್ವಲ್ಪವೂ ಇಲ್ಲದ ಪೂರ್ಣ ಪುರುಷ. ಈ ರೀತಿ ಉಪಾಸನೆ ಮಾಡಿದ ಪ್ರಹ್ಲಾದನ ಸಂರಕ್ಷಿಸುವುದಕ್ಕೆ ಇದೆ ವೈಶಾಖ ಶುಕ್ಲ ಚತುರ್ದಶಿಯಂದುನರಸಿಂಹನಾಗಿ ಅವತರಿಸಿದ. ಹಿರಣ್ಯಕಶಿಪು ಕೇಳಿದ ವರದಂತೆ ಬ್ರಹ್ಮ ಕೊಟ್ಟ ವರವೂ ಸತ್ಯ ವಾಗುವಂತೆ ಲೋಕ ವಿಲಕ್ಷಣವಾದ ನರ ಮತ್ತು ಮೃಗ ನರಸಿಂಹ ರೂಪವನ್ನು ತಾಳಿ ಹಿರಣ್ಯಕಶಿಪುವನ್ನು ಸಂಹರಿಸಿ ಪ್ರಹ್ಲಾದನನ್ನು ಸಂರಕ್ಷಿಸಿದ ನು. ಸ್ವತಃ ಶ್ರೀ ನರಸಿಂಹ ದೇವರು ಪ್ರತ್ಯಕ್ಷ ದರ್ಶನವಿತ್ತು ವರ ಕೇಳಲು ಹೇಳಿದಗ್ಯೂ ಪ್ರಹ್ಲಾದ ಯಾವ ವರವನ್ನೂ ಬೇಡಲಿಲ್ಲ. ಹಾಗೆ ಬೇಡಿ ತಾನು ಭಕ್ತನಾಗುವ ಬದಲು ವ್ಯಾಪಾರಿ ಯಾಗಲು ಅವನು ಇಚ್ಚಿಸಲಿಲ್ಲ. ಹಿರಣ್ಯಕಶಿಪು ಕೊನೆಗೂ ಸರ್ವನಾಶವನ್ನು ಕಂಡ ನಾವುಗಳು ಕೂಡ ಧನಕನಕಾದಿಗಳು ಮತ್ತು ಭೋಗ ವಿಳಾಸಗಳ ಮಧ್ಯೆ ಇದ್ದು ಅವುಗಳ ಸೆಳೆತಕ್ಕೆ ಒಳಗಾಗದೆ ಅವುಗಳನ್ನು ಭಗವಂತನಿಗೆ ಅರ್ಪಿಸಿ ಕೃತಾರ್ಥರಾಗಬೇಕು. ಹಿರಣ್ಯಕಶಿಪುವಿಗೆ ದುರ್ಗತಿ ಆಯ್ತು ಆದರೆ ಅವನ ಒಳಗಿದ್ದ ಜಯನಿಗೆ ಮಾತ್ರ ಸದ್ಗತಿ ಆಯ್ತು. ದ್ವೇಷಿ ಗೆ ತಮಸ್ಸು ಭಕ್ತನಿಗೆ ಮುಕ್ತಿ ಇದು ಭಗವಂತನ ನಿಯಮ. ಪ್ರಹ್ಲಾದನಿಗೆ ಕೆಲಕಾಲ ನರಸಿಂಹ ದರ್ಶನವಾಗಲು ಅವನ ಒಳಗಿದ್ದ ಶ್ರೀ ವಾಯುದೇವರ ಆವೇಶ ಕಾರಣವಾಯಿತು. ನಾವುಗಳು ಕೂಡ ಆ ನರಸಿಂಹ ದೇವರ ಅನುಗ್ರಹ ವಾಗಬೇಕಾದರೆ ನಮ್ಮ ಜೀವನವನ್ನು ಪರಿಶುದ್ಧವಾಗಿ ಇಟ್ಟುಕೊಂಡು ಸನ್ಮಾರ್ಗದತ್ತ ಸಾಗಿ ಮಾಡುವ ಕರ್ಮಗಳನ್ನು ವಾಯುದೇವರ ಮುಖಾಂತರ ಪರಮಾತ್ಮನಿಗೆ ಅರ್ಪಿಸಬೇಕು. ಇದುವೇ ಜೀವನದ ಸಾರ್ಥಕತೆ.
ಶ್ರೀಕೃಷ್ಣಾರ್ಪಣಮಸ್ತು

ನಾಹಂ ಕರ್ತಾ ಹರಿಃ ಕರ್ತಾ
ಹೇಮಮಾಲಿನಿ ಶ್ರೀಧರಾಚಾರ್
ಉಗ್ರರ ಕುರಿತ ಪುಸ್ತಕ ಬಿಡುಗಡೆ ಸರ್ಕಾರ ಅವಕಾಶ ನೀಡಬಾರದು: ಪಿ.ಸಿ. ಮೋಹನ್
ಬೆಂಗಳೂರು: 2020 ರ ದೆಹಲಿ ದಂಗೆ ಪ್ರಕರಣದಲ್ಲಿ ಯುಎಪಿಎ (UAPA) ಕಾಯ್ದೆಯಡಿ ತಿಹಾರ್ ಜೈಲಿನಲ್ಲಿರುವ ಉಗ್ರ ಉಮರ್ ಖಾಲಿದ್ (Umar Khalid) ಕುರಿತ ಪುಸ್ತಕ ಬಿಡುಗಡೆಗೆ ರಾಜ್ಯ ಸರ್ಕಾರ ಅವಕಾಶ ನೀಡಬಾರದು ಎಂದು ಸಂಸದ ಪಿ.ಸಿ ಮೋಹನ್ (P.C. Mohan) ಅವರು ಹೇಳಿದ್ದಾರೆ.
ಕಾರ್ಯಕ್ರಮಕ್ಕೆ ಅನುಮತಿ ನೀಡದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ದೇಶದ್ರೋಹಿ ಉಮರ್ ಖಾಲಿದ್ 2020 ರ ದೆಹಲಿ ದಂಗೆಯ ಪ್ರಮುಖ ಆಪಾದಿತ. ಅಂದು ನಡೆದ ಸ್ಫೋಟದಲ್ಲಿ ಸಾಕಷ್ಟು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆಸ್ತಿ-ಪಾಸ್ತಿಗೆ ಹಾನಿಯಾಗಿದೆ. ಇಂದಿಗೂ ಜೈಲುಶಿಕ್ಷೆ ಅನುಭವಿಸುತ್ತಿರುವ ಆರೋಪಿಯನ್ನು ವೈಭವೀಕರಿಸುವ ಅಗತ್ಯವೇನು? ಎಂದು ಪ್ರಶ್ನಿಸಿದರು.
ದೊಮ್ಮಲೂರಿನ ಬೆಂಗಳೂರು ಇಂಟರ್ ನ್ಯಾಷನಲ್ ಸೆಂಟರ್‍ನಲ್ಲಿ ಹಮ್ಮಿಕೊಂಡಿರುವ ಪುಸ್ತಕ ಬಿಡುಗಡೆಗೆ ಅವಕಾಶ ಸಿಗಬಾರದು. ಕಾರ್ಯಕ್ರಮ ನಡೆಯಬಾರದು.ಈ ಸಂಬಂಧ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದೇವೆ ಎಂದರು.
ಇಂತಹ ಕಾರ್ಯಕ್ರಮ ಆಯೋಜಕರು ದೇಶದ್ರೋಹಿಗಳಾದ ಕಸಾಬ್, ಸಂಸತ್ತಿನ ದಾಳಿಕೋರರನ್ನು ವೈಭವೀಕರಿಸುವ ಕೆಲಸ ಮಾಡುತ್ತಿದ್ದಾರೆ. ಬೇರೆ ರಾಜ್ಯಗಳಲ್ಲಿ ಇಂತಹ ಕಾರ್ಯಕ್ರಮಕ್ಕೆ ಅನುಮತಿ ಸಿಗುವುದಿಲ್ಲ. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಇಂತಹ ಭಯೋತ್ಪಾದಕರ ಬಗ್ಗೆ ಸರ್ಕಾರ ಮೃದುಧೋರಣೆ ಹೊಂದಿದೆ. ಆದ್ದರಿಂದಲೇ ಇಲ್ಲಿ ಕಾರ್ಯಕ್ರಮ ಆಯೋಜನೆಯಾಗಿದೆ ಎಂದರು.
ದೇಶದ್ರೋಹಿಗಳನ್ನು ವೈಭವೀಕರಿಸಲು ಕಾಂಗ್ರೆಸ್ ಸರ್ಕಾರ ಬೆಂಬಲ ನೀಡುತ್ತದೆ. ಗಾಂಧಿನಗರದ ಗೋಡೆಗಳ ಮೇಲೆ ಬರಹಗಳನ್ನು ಬರೆದಿದ್ದಾರೆ. ಈ ಸರ್ಕಾರ ಇಂತಹುದಕ್ಕೆಲ್ಲ ಅವಕಾಶ ನೀಡಬಾರದು. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಡಾ.ರಾಜ್ ಕುಮಾರ್ ಜನ್ಮದಿನಾಚರಣೆ
Bengaluru : ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ನಟಸಾರ್ವಭೌಮ ಡಾ.ರಾಜ್ ಕುಮಾರ್ (Dr. Rajkumar Birthday) ರವರ 97 ನೇ ಜನ್ಮದಿನಾಚರಣೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು ಮಾನ್ಯ ಇಂಧನ ಸಚಿವರಾದ ಶ್ರೀ ಕೆ.ಜೆ.ಜಾರ್ಜ್ (K.J. Geroge) ರವರು ಕಲ್ಯಾಣನಗರದಲ್ಲಿ ಸುಸಜ್ಜಿತವಾಗಿ ಸುಂದರವಾಗಿ, ಬಯಲು ರಂಗಮಂದಿರ ಸಹಿತ ನವೀಕರಣಕೊಂಡಿರುವ ಡಾ.ರಾಜ್ ಕುಮಾರ್ ಉದ್ಯಾನವನವನ್ನು ಸಾರ್ವಜನಿಕರ ಸೇವೆಗಾಗಿ ಜನಾರ್ಪಣೆಗೊಳಿಸಿದರು .ಇದೇ ಸಂಧರ್ಭದಲ್ಲಿ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಜನಪ್ರತಿನಿಧಿಯೊಬ್ಬರು ಡಾ.ರಾಜ್ ಕುಮಾರ್ ರವರ ಜೀವನ ಸಾಧನೆಯನ್ನು ಕುರಿತಾದ ಪುಸ್ತಕಗಳನ್ನು ಖರೀದಿಸಿ ಮನೆ- ಮನೆಗೂ ಡಾ.ರಾಜ್ ಕುಮಾರ್ ಎಂಬ ಶೀರ್ಷಿಕೆಯಡಿಯಲ್ಲಿ ನೂರಾರು ಪುಸ್ತಕಗಳನ್ನು ಜನರಿಗೆ ಉಚಿತವಾಗಿ ವಿತರಿಸುವ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಧರ್ಮದರ್ಶಿ ಶ್ರೀ ಪಿ.ಬಾಬು , ಬಿ.ಡಿ.ಎ ಸದಸ್ಯರಾದ ಬಿ.ಎನ್.ಆರ್.ಅಮರ್ ನಾಥ್, ಸರ್ವಜ್ಞ ನಗರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಪಾ.ಮುರುಳೀಧರ್ ವಾರ್ಡ್ ಅಧ್ಯಕ್ಷರುಗಳಾದ ಪ್ರೇಮಾವತಿ.ಬಿ ರಾಜಾ, ಕಸಾಪ ಮಹಿಳಾ ಸದಸ್ಯರಾದ ಕವಿತಾ ರವೀಂದ್ರ, ರತ್ನಗೋಪಾಲ್ ಕವಿ ಸರ್ವಜ್ಞ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಕಮಲೇಶ್ ಓಂ ಶಕ್ತಿ ರಾಜು ಪತ್ರಕರ್ತರಾದ ರಮೇಶ್ ಮುಂತಾದ ಸ್ಥಳೀಯ ಮುಖಂಡರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ವರ್ಧಮಾನ ಕಳಸೂರು ರವರು ಉಪಸ್ಥಿತರಿದ್ದರು.
ಉದ್ಘಾಟನೆ ಮಾಡುತ್ತಾ ಸಚಿವರಾದ ಜಾರ್ಜ್ ರವರು ನಿಮ್ಮದೇ ಉದ್ಯಾನವನ ಇದನ್ನು ನೀವೆಲ್ಲ ಆರೋಗ್ಯಕರವಾಗಿ ಇಟ್ಟುಕೊಳ್ಳಬೇಕು ಎಂದು ತಿಳಿಸಿದರು. ಸಚಿವರು ವಿಶೇಷ ಚೇತನರಿಗೆ ವೀಲ್ ಚೇರ್ ವಿತರಣೆ ಮಾಡಿದರು.
ಧರ್ಮದರ್ಶಿಗಳಾದ ಬಾಬು ಮತ್ತು ಪ್ರೇಮಾವತಿ ರವರು ತಮ್ಮ ಸಂಸ್ಥೆಯ ಪರವಾಗಿ ವಿದ್ಯಾರ್ಥಿಗಳಿಗೆ ಆಟೋಪಕರಣಗಳನ್ನು ವಿತರಿಸಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಪಾ. ಮುರಳಿಧರ್ ಅವರು ಸರ್ವರನ್ನು ಸ್ವಾಗತಿಸಿದರು ಓಂ ಶಕ್ತಿ ರಾಜರವರು ಕೊನೆಯಲ್ಲಿ ವಂದನಾರ್ಪಣೆಗಳನ್ನು ಸಲ್ಲಿಸಿದರು.
