Home Blog Page 2

ಹಾಸನದಲ್ಲಿ ಬೇಕರಿ ಸಂಘಗಳ ಐತಿಹಾಸಿಕ ಜಂಟಿ ಸಭೆ

ಹಾಸನ, : ಹಾಸನ ಜಿಲ್ಲೆ ಬೇಕರಿ ಮಾಲೀಕರ ಸಂಘದ ಆತಿಥ್ಯದಲ್ಲಿ, ಉಡುಪಿ ಬೇಕರಿ ಮತ್ತು ಖಾದ್ಯ ತಯಾರಿಕ ಸಂಘ ಹಾಗೂ ಕರ್ನಾಟಕ ಬೇಕರಿ ಅಂಡ್ ಸ್ವೀಟ್ಸ್ ಅಸೋಸಿಯೇಷನ್ ಮೊದಲ ಬಾರಿಗೆ ಒಂದಾಗಿ ಜಂಟಿ ಸಭೆಯನ್ನು ನಿನ್ನೆ 26-04-2026 ರಂದು ನಗರದ ತನ್ವಿ ತ್ರಿಷಾ ಪಾರ್ಟಿ ಹಾಲ್‌ನಲ್ಲಿ ನಡೆಸಿದವು.

ಸಭೆಗೆ ದೀಪ ಬೆಳಗುವುದರ ಮೂಲಕ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಬೇಕರಿ ಉದ್ಯಮದ ಏಳಿಗೆ, ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರ, ಕಚ್ಚಾ ವಸ್ತುಗಳ ದರ ಏರಿಕೆ ಮತ್ತು ಸದಸ್ಯರ ನಡುವೆ ಪರಸ್ಪರ ಸಹಕಾರದ ಬಗ್ಗೆ ಫಲಪ್ರದ ಚರ್ಚೆ ನಡೆಯಿತು.

ಮೂರು ಸಂಘಗಳು ಒಂದಾಗಿ ಕೆಲಸ ಮಾಡುವ ನಿರ್ಧಾರ ಕೈಗೊಳ್ಳಲಾಯಿತು. ಈ ಒಗ್ಗಟ್ಟು ಮುಂದಿನ ದಿನಗಳಲ್ಲಿ ಉದ್ಯಮಕ್ಕೆ ಹೊಸ ದಿಕ್ಕು ನೀಡಲಿದೆ ಎಂದು ಸದಸ್ಯರು ಅಭಿಪ್ರಾಯಪಟ್ಟರು.

ಕಾರ್ಯಕ್ರಮವನ್ನು ಹಾಸನ ಜಿಲ್ಲೆ ಬೇಕರಿ ಮಾಲೀಕರ ಸಂಘದ ಪದಾಧಿಕಾರಿಗಳು ಅಚ್ಚುಕಟ್ಟಾಗಿ ಆಯೋಜಿಸಿದ್ದರು. ಮೂರು ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ನೂರಾರು ಸದಸ್ಯರು ಭಾಗವಹಿಸಿದ್ದರು.

ಲೋಕಭವನದಲ್ಲಿ ರಾಜಸ್ಥಾನೋತ್ಸವ: ಜನಪದ ಗೀತೆಗಳ ಮೆಲುಕು

ಬೆಂಗಳೂರು 26.04.2026: ಕರ್ನಾಟಕದ ಲೋಕಭವನದ (Lokabhavan) ಗಾಜಿನಮನೆಯಲ್ಲಿ ರಾಜಸ್ಥಾನದ ಸಂಸ್ಥಾಪನಾ (Rajasthan Samsthapana Diwas) ದಿನಾಚರಣೆಯನ್ನು ಆಚರಿಸಲಾಯಿತು. ಕರ್ನಾಟಕದ ಗೌರವಾನ್ವಿತ ರಾಜ್ಯಪಾಲ  ಥಾವರ್ ಚಂದ್ ಗೆಹ್ಲೋಟ್ (Thawarchand Gehlot) ಅವರು ಅಧ್ಯಕ್ಷತೆ ವಹಿಸಿದರು.  ಮತ್ತು ರಾಜಸ್ಥಾನದ ಮುಖ್ಯಮಂತ್ರಿ ಭಜಂಲಾಲ್ ಶರ್ಮಾ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ಲೋಕಭವನದ ಗಾಜಿನಮನೆಯಲ್ಲಿ ನಡೆದ  ರಾಜಸ್ಥಾನ ರಾಜ್ಯದ ಸಂಸ್ಕೃತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾಗಮ ವೈವಿಧ್ಯತೆಯಲ್ಲಿ ಏಕತೆಯ ಸಂದೇಶ ಸಾರಿತು. ರಾಜಸ್ಥಾನದ ಕಲೆ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಬಿಂಬಿಸುವ ವಿವಿಧ ವರ್ಣರಂಜಿತ ಮತ್ತು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಾಯಿತು. ವೈದ್ಯೆ ಡಾ.ರಾಘಶ್ರೀ ಎಸ್ ಅವರ ಶ್ರೀ ವಿನಾಯಕ ನಮೋ ಭರತನಾಟ್ಯದೊಂದಿಗೆ ಶುಭಾರಂಭಗೊಂಡ ಸಾಂಸ್ಕೃತಿಕ ಕಾರ್ಯಕ್ರಮ, ಅದ್ಭುತವಾದ ಪ್ರಸ್ತುತಿಯನ್ನು ನೀಡಿದ ಭಾರತೀಯ ಜಾನಪದ ಗಾಯಕಿ ಶ್ರೀಮತಿ ಮಾಲಿನಿ ಅವಸ್ಥಿ ಅವರ ಕಜ್ರಿ, ಚೈತಿ ಮತ್ತು ಠುಮ್ರಿಯಂತಹ ಶೈಲಿಗಳ ಗೀತೆಗಳು ರಾಜಸ್ಥಾನದ ಜಾನಪದ ಲೋಕವನ್ನೇ ಸೃಷ್ಟಿಸಿತು. ಭಜನ್ ಸಾಮ್ರಾಟ್ ಶ್ರೀ ಪ್ರಕಾಶ್ ಮಾಲಿ ಅವರ ಭಜನಾ ಗೀತೆಗಳು ಭಕ್ತಿಯಲ್ಲಿ ಮಿಂದೆಳಿಸಿತು.

ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಗೌರವಾನ್ವಿತ ರಾಜ್ಯಪಾಲರು, “ಮಾರ್ಚ್ 30 ರಂದು ರಾಜಸ್ಥಾನ ರಾಜ್ಯದ ಸಂಸ್ಥಾಪನಾ ದಿನವಾಗಿದೆ. ಅದರ ಭಾಗವಾಗಿ ಈ ದಿನ ನಾವು ರಾಜಸ್ಥಾನ ಸಂಸ್ಥಾಪನಾ ದಿನವನ್ನು ಹೆಮ್ಮೆ ಮತ್ತು ಉತ್ಸಾಹದಿಂದ ಆಚರಿಸುತ್ತಿದ್ದೇವೆ. “ಏಕ್ ಭಾರತ್ ಶ್ರೇಷ್ಠ ಭಾರತ್” ಯೋಜನೆ ಅಡಿಯಲ್ಲಿ, ನಾವು ಬೆಂಗಳೂರಿನ ಲೋಕಭವನದಲ್ಲಿ ರಾಜಸ್ಥಾನ ಸಂಸ್ಥಾಪನಾ ದಿನವನ್ನು ಹೆಮ್ಮೆಯಿಂದ ಮತ್ತು ಉತ್ಸಾಹದಿಂದ ಆಚರಿಸುತ್ತಿದ್ದೇವೆ. ಈ ದಿನವು ರಾಜಸ್ಥಾನ ರಾಜ್ಯದ ಅದ್ಭುತ ಇತಿಹಾಸ, ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಅಳಿಸಲಾಗದ ಶೌರ್ಯ ಕಥೆಗಳನ್ನು ನೆನಪಿಸಿಕೊಳ್ಳುವ ದಿನವಾಗಿದೆ” ಎಂದರು.

“ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ ಮತ್ತು ಗೌರವಾನ್ವಿತ ಗೃಹ ಸಚಿವ ಶ್ರೀ ಅಮಿತ್ ಶಾ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅವರಿಂದ ಪ್ರೇರಿತರಾಗಿ, ಪ್ರತಿಯೊಂದು ರಾಜ್ಯದ ಸಂಸ್ಥಾಪನಾ ದಿನವನ್ನು ಇತರ ರಾಜ್ಯಗಳಲ್ಲಿಯೂ ಆಚರಿಸಲಾಗುತ್ತದೆ, ಇದು ಸಾಮಾಜಿಕ ಏಕೀಕರಣ ಮತ್ತು ಸಾಂಸ್ಕೃತಿಕ ವಿನಿಮಯವನ್ನು ಉತ್ತೇಜಿಸುತ್ತದೆ” ಎಂದು ಹೇಳಿದರು.

“ರಾಜಸ್ಥಾನವು ಭಾರತದ ಅತಿದೊಡ್ಡ ರಾಜ್ಯವಾಗಿದ್ದು, ಭೌಗೋಳಿಕ ವೈವಿಧ್ಯತೆಗೆ ಹೆಸರುವಾಸಿಯಾಗಿದೆ. ಒಂದು ಬದಿಯಲ್ಲಿ ವಿಶಾಲವಾದ ಥಾರ್ ಮರುಭೂಮಿ ಇದೆ ಮತ್ತು ಇನ್ನೊಂದು ಬದಿಯಲ್ಲಿ ವಿಶ್ವದ ಅತ್ಯಂತ ಹಳೆಯ ಪರ್ವತ ಶ್ರೇಣಿಗಳಲ್ಲಿ ಒಂದಾದ ಅರಾವಳಿ ಶ್ರೇಣಿ ಇದೆ. ಜೈಸಲ್ಮೇರ್‌ನ ಮರಳು ದಿಬ್ಬಗಳು, ಉದಯಪುರದ ಸರೋವರಗಳು, ಜೈಪುರದ ಭವ್ಯತೆ ಮತ್ತು ಜೋಧ್‌ಪುರದ ನೀಲಿ ನಗರ ಎಲ್ಲವೂ ಸೇರಿ ರಾಜಸ್ಥಾನವನ್ನು ಅನನ್ಯವಾಗಿಸುತ್ತದೆ. ರಾಜಸ್ಥಾನದ ಸಂಸ್ಕೃತಿ ಅತ್ಯಂತ ಶ್ರೀಮಂತ ಮತ್ತು ವೈವಿಧ್ಯಮಯವಾಗಿದೆ. ಘೂಮರ್, ಕಲ್ಬೇಲಿಯಾ ಮತ್ತು ಚಕ್ರಿ ನೃತ್ಯಗಳಂತಹ ಜಾನಪದ ನೃತ್ಯಗಳು ಮತ್ತು ಜಾನಪದ ಸಂಗೀತ, ಸುಮಧುರ ರಾಗಗಳು ರಾಜ್ಯದ ಆತ್ಮವನ್ನು ಬಹಿರಂಗಪಡಿಸುತ್ತವೆ. ಪುಷ್ಕರ್ ಜಾತ್ರೆ, ಮಾರು ಮಹೋತ್ಸವ ಮತ್ತು ತೀಜ್ ಸೇರಿದಂತೆ ಅದರ ಜಾತ್ರೆಗಳು ಮತ್ತು ಉತ್ಸವಗಳು ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುತ್ತವೆ” ಎಂದು ಹೇಳಿದರು.

“ರಾಜಸ್ಥಾನ ರಾಜ್ಯವು ಅಭಿವೃದ್ಧಿ, ಪ್ರವಾಸೋದ್ಯಮ, ಕೈಗಾರಿಕೆ, ಶಿಕ್ಷಣ ಮತ್ತು ನಾವೀನ್ಯತೆ ಕ್ಷೇತ್ರಗಳಲ್ಲಿ ಸ್ಥಿರವಾದ ಪ್ರಗತಿಯನ್ನು ಸಾಧಿಸುತ್ತಿದೆ. ಮರುಭೂಮಿಯ ಕಠಿಣ ಪರಿಸ್ಥಿತಿಗಳಲ್ಲಿಯೂ ಸಹ, ಅದರ ಜನರು ತಮ್ಮ ಕಠಿಣ ಪರಿಶ್ರಮ, ತಾಳ್ಮೆ ಮತ್ತು ದೃಢಸಂಕಲ್ಪದ ಮೂಲಕ ಪ್ರಗತಿಯ ಹೊಸ ಕಥೆಗಳನ್ನು ಬರೆಯುತ್ತಿದ್ದಾರೆ. “ಏಕ್ ಭಾರತ್, ಶ್ರೇಷ್ಠ ಭಾರತ್” ಎಂಬ ಸಿದ್ಧಾಂತದಿಂದ ಪ್ರೇರಿತರಾಗಿ, ಅಂತಹ ಕಾರ್ಯಕ್ರಮಗಳು ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಹಾಗೂ ರಾಷ್ಟ್ರೀಯ ಏಕತೆ ಮತ್ತು ಪರಸ್ಪರ ತಿಳುವಳಿಕೆಯ ಮನೋಭಾವವನ್ನು ಹೆಚ್ಚಿಸುತ್ತಿವೆ” ಎಂದು ತಿಳಿಸಿದರು.

“ಎಲ್ಲಾ ರಾಜ್ಯಗಳು ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆಯನ್ನು ಹೊಂದಿವೆ. ದೇಶದ ಅಭಿವೃದ್ಧಿಗಾಗಿ ಒಟ್ಟಾಗಿ ಕೆಲಸ ಮಾಡಬೇಕಾಗಿದೆ. 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪಕ್ಕೆ ಬದ್ಧರಾಗುವ ಮೂಲಕ ಕೊಡುಗೆ ನೀಡುವುದು ನಮ್ಮ ಜವಾಬ್ದಾರಿಯಾಗಿದೆ” ಎಂದು ಕರೆ ನೀಡಿದರು.

“ಇಂದು ನಮ್ಮ ನಡುವೆ ಇದ್ದಾರೆ, ಅವಧಿ, ಬುಂಡೇಲಿ ಮತ್ತು ಭೋಜ್‌ಪುರಿ ಜಾನಪದ ಸಂಗೀತಕ್ಕೆ ಹೆಸರುವಾಸಿಯಾದ ಪ್ರಸಿದ್ಧ ಭಾರತೀಯ ಜಾನಪದ ಗಾಯಕಿ ಶ್ರೀಮತಿ ಮಾಲಿನಿ ಅವಸ್ಥಿ. ಕಜ್ರಿ, ಚೈತಿ ಮತ್ತು ಠುಮ್ರಿಯಂತಹ ಶೈಲಿಗಳಲ್ಲಿ ಅವರಿಗೆ ವಿಶೇಷ ಪ್ರತಿಭೆ ಇದೆ. ಅವರ ಗಾಯನವು ಭಾರತೀಯ ಸಂಸ್ಕೃತಿ ಮತ್ತು ಜಾನಪದ ಜೀವನವನ್ನು ಪ್ರತಿಬಿಂಬಿಸುತ್ತದೆ. 2016 ರಲ್ಲಿ, ಅವರಿಗೆ ಪದ್ಮಶ್ರೀ ಮತ್ತು ಯಶ್ ಭಾರತಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಅವರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಜಾನಪದ ಸಂಗೀತವನ್ನು ಜನಪ್ರಿಯಗೊಳಿಸುವಲ್ಲಿ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. ಭಜನ್ ಸಾಮ್ರಾಟ್ ಶ್ರೀ ಪ್ರಕಾಶ್ ಮಾಲಿ, ಅವರು ತಮ್ಮ ಭಜನೆಗಳಿಂದ ನಮ್ಮನ್ನು ಮಂತ್ರಮುಗ್ಧಗೊಳಿಸುತ್ತಾರೆ. ಈ ಇಬ್ಬರು ಸಾಧಕರು ಲೋಕಭವನಕ್ಕೆ ಭೇಟಿ ನೀಡಿ, ಆಕರ್ಷಕ ಪ್ರದರ್ಶನಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ” ಎಂದು ಹೇಳಿದರು.

ದೇಶದ ಎಲ್ಲಾ ಲೋಕಭವನಗಳಲ್ಲಿ ಎಲ್ಲಾ ರಾಜ್ಯಗಳ ಸಂಸ್ಥಾಪನಾ ದಿನವನ್ನು ಆಚರಿಸಲು ನಿರ್ಧರಿಸಿದ್ದಕ್ಕಾಗಿ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಗೌರವಾನ್ವಿತ ಗೃಹ ಸಚಿವ ಶ್ರೀ ಅಮಿತ್ ಶಾ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ರಾಜಸ್ಥಾನದ ಮುಖ್ಯಮಂತ್ರಿ ಭಜಂಲಾಲ್ ಶರ್ಮಾ ಅವರು “ ಕರ್ನಾಟಕದ ನೆಲದಲ್ಲಿ ಲೋಕಭವನದಲ್ಲಿ ರಾಜಸ್ಥಾನ ಸಂಸ್ಥಾಪನಾ ದಿನಾಚರಣೆ ಆಚರಿಸುತ್ತಿರುವುದು ಬಹಳ ಸಂತಸ ತಂದಿದೆ. ಈ ಕಾರ್ಯಕ್ಕಾಗಿ ಕರ್ನಾಟಕದ ಜನತೆಗೆ ಹಾಗೂ ಗೌರವಾನ್ವಿತ ರಾಜ್ಯಪಾಲರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಾವೆಲ್ಲರೂ ರಾಷ್ಟ್ರ ಪ್ರೇಮವನ್ನು ಹೊಂದಿದ್ದು, ದೇಶಕ್ಕಾಗಿ ತ್ಯಾಗ ಮತ್ತು ಸಮರ್ಪಣೆ ಭಾವನೆ ಹೊಂದಿದ್ದೇವೆ. ಮಾನ್ಯ ಪ್ರಧಾನ ಮಂತ್ರಿಗಳ ಏಕ ಭಾರತ ಶ್ರೇಷ್ಟ ಭಾರತ ಯೋಜನೆಯಡಿಯಲ್ಲಿ ಈ ದಿನವನ್ನು ಆಚರಿಸುತ್ತಿರುವುದು ನಮ್ಮ ದೇಶದ ಅನನ್ಯ ಅಸ್ಮಿತೆಯನ್ನು, ವಿವಿಧತೆಯಲ್ಲಿ ಏಕತೆಯ ಪರಿಕಲ್ಪನೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಮತ್ತೊಂದು ರಾಜ್ಯದ ಸಂಸ್ಥಾಪನಾ ದಿನವನ್ನು ಆಚರಿಸುವುದು ಸಾಮಾಜಿಕ ಏಕೀಕರಣ ಮತ್ತು ಸಾಂಸ್ಕೃತಿಕ ವಿನಿಮಯವನ್ನು ಉತ್ತೇಜಿಸುತ್ತದೆ. ರಾಜಸ್ಥಾನ ದೇಶಕ್ಕಾಗಿ ತ್ಯಾಗ ಮತ್ತು ಸಮರ್ಪಣೆ ಮಾಡಿದ ವೀರರ ಭೂಮಿ. ಶಕ್ತಿ, ಭಕ್ತಿಯ ಜೊತೆಗೆ ಶೂರ, ವೀರರ ಇರುವ ಭೂಮಿಯಾಗಿದೆ. ಹಾಗಾಗಿ, ನಾವೆಲ್ಲರೂ ಒಗ್ಗಟ್ಟಾಗಿ ದೇಶಕ್ಕಾಗಿ ಶ್ರಮಿಸೋಣ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯರಾದ ಲೆಹರ್ ಸಿಂಗ್ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಶ್ರೀವಿದ್ಯಾ ಚೌಡೇಶ್ವರಿ ದೇವಸ್ಥಾನದ ಬಾಲಮಂಜುನಾಥ ಸ್ವಾಮೀಜಿ ವಿರುದ್ಧದ ಪೋಕ್ಸೊ – ಅತ್ಯಾಚಾರ ಪ್ರಕರಣ ರದ್ದು

ಬೆಂಗಳೂರು :  ತುಮಕೂರಿನ ಕುಣಿಗಲ್ (Kunigal) ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿ ಹಂಗರಹಳ್ಳಿಯ ಶ್ರೀವಿದ್ಯಾ ಚೌಡೇಶ್ವರಿ ದೇವಸ್ಥಾನದ  (Sri Vidya Chowdeshwari Temple) ಎನ್ ಮಂಜುನಾಥ್ ಅಲಿಯಾಸ್ ಬಾಲಮಂಜುನಾಥ ಸ್ವಾಮೀಜಿ ವಿರುದ್ಧದ ಪೋಕ್ಸೊ  (Poxo) ಮತ್ತು ಅತ್ಯಾಚಾರ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ (Karnataka High Court) ಶನಿವಾರ ವಜಾಗೊಳಿಸಿದೆ.
ಪೋಕ್ಸೊ ಪ್ರಕರಣ ವಜಾ ಕೋರಿ ಎನ್ ಮಂಜುನಾಥ್ ಅಲಿಯಾಸ್ ಬಾಲಮಂಜುನಾಥ ಸ್ವಾಮೀಜಿ ಮತ್ತು ಅವರ ಆಪ್ತ ಸಹಾಯಕ ಕೆ ಅಭಿಷೇಕ್ ಸಲ್ಲಿಸಿದ್ದ ಅರ್ಜಿ ಮತ್ತು ಬಾಲಮಂಜುನಾಥ ಸ್ವಾಮೀಜಿಗೆ ಜಾಮೀನು ಮಂಜೂರು ಮಾಡಿದ್ದನ್ನು ಪ್ರಶ್ನಿಸಿ ಸಂತ್ರಸ್ತೆ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ, ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪ್ರಕಟಿಸಿದೆ.
“ಅರ್ಜಿದಾರರಾದ ಎನ್ ಮಂಜುನಾಥ್ ಅಲಿಯಾಸ್ ಬಾಲಮಂಜುನಾಥ ಸ್ವಾಮೀಜಿ ಮತ್ತು ಕೆ ಅಭಿಲಾಷ್ ಸಲ್ಲಿಸಿದ್ದ ಅರ್ಜಿಗಳನ್ನು ಪುರಸ್ಕರಿಸಲಾಗಿದ್ದು, ಅವರ ವಿರುದ್ಧದ ಪ್ರಕರಣ ರದ್ದುಪಡಿಸಲಾಗಿದೆ. ಇದರ ಪರಿಣಾಮವಾಗಿ ಈ ಇಬ್ಬರಿಗೆ ಜಾಮೀನು ಮಂಜೂರು ಮಾಡಿದ್ದನ್ನು ಪ್ರಶ್ನಿಸಿ ಸಂತ್ರಸ್ತೆ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಲಾಗಿದೆ” ಎಂದು ನ್ಯಾಯಾಲಯ ಆದೇಶಿಸಿತು. ವಿಸ್ತೃತ ಆದೇಶ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.
ಪ್ರಕರಣದ ಹಿನ್ನೆಲೆ: ಹುಲಿಯೂರು ದುರ್ಗ–ಮಾಗಡಿ ರಸ್ತೆಯಲ್ಲಿರುವ ಕಾಡು ಶನೇಶ್ವರ ದೇವಸ್ಥಾನದಲ್ಲಿ ಅರ್ಚಕ ವೃತ್ತಿ ಮಾಡಿಕೊಂಡಿದ್ದ ಮಂಜುನಾಥ ಸ್ವಾಮೀಜಿ ಅವರ ಬಳಿಕ ಆರೋಗ್ಯ ಸಮಸ್ಯೆಗೆ ಪರಿಹಾರ ಕೇಳಲು ಸಂತ್ರಸ್ತೆಯು 15 ವರ್ಷದವಳಿದ್ದಾಗ ತಂದೆಯ ಜೊತೆ ಮಠಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಅಷ್ಟಮಂಗಳ ಪ್ರಾಣಾಸನ ಮಾಡಿಸುವ ವೇಳೆ ಪರಿಸ್ಥಿತಿಯ ಲಾಭ ಪಡೆದು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಆನಂತರ ವಿಡಿಯೊ ಕರೆ ಮಾಡಿ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದರು ಎಂದು ಸಂತ್ರಸ್ತೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಹುಲಿಯೂರು ದುರ್ಗ ಪೊಲೀಸರು ಪೋಕ್ಸೊ ಕಾಯಿದೆ ಸೆಕ್ಷನ್ 4 (ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ), ಸೆಕ್ಷನ್ 6 (ಲೈಂಗಿಕ ತೃಷೆ ತೀರಿಸಿಕೊಳ್ಳಲು ಕ್ರೂರ ಪ್ರಯತ್ನ), ಸೆಕ್ಷನ್ 11(iv) (ಲೈಂಗಿಕ ದೌರ್ಜನ್ಯ ಎಸಗಲು ನೀಲಿ ಚಿತ್ರ ತೋರಿಕೆ), ಸೆಕ್ಷನ್ 12 (ಮಗುವಿಗೆ ಲೈಂಗಿಕ ಕಿರುಕುಳ). ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 66(E) (ಖಾಸಗಿತನದ ಉಲ್ಲಂಘನೆ) ಮತ್ತು ಸೆಕ್ಷನ್ 67(A) (ಕೃತ್ಯದ ಚಿತ್ರೀಕರಿಸಿದ ದೃಶ್ಯದ ಹಂಚಿಕೆ); ಐಪಿಸಿ ಸೆಕ್ಷನ್ 376 (ಅತ್ಯಾಚಾರ), 354(A)(1)(i) (ಅಸಹಜ ಲೈಂಗಿಕ ನಡವಳಿಕೆ), 354(A)(1)(ii) (ಲೈಂಗಿಕ ಕೃತ್ಯಕ್ಕೆ ಬೇಡಿಕೆ), ಸೆಕ್ಷನ್ 417ವಂಚನೆ, ಸೆಕ್ಷನ್ 342 (ಅಕ್ರಮ ಬಂಧನ), ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ) ಜೊತೆಗೆ ಸೆಕ್ಷನ್ 34 (ಸಮಾನ ಉದ್ದೇಶ); ಧಾರ್ಮಿಕ ಸಂಸ್ಥೆಗಳ (ದುರ್ಬಳಕೆ ತಡೆ) ಕಾಯಿದೆ ಸೆಕ್ಷನ್ 3 (ಕಾನೂನುಬಾಹಿರ ಚಟುವಟಿಕೆಗಳಿಗೆ ಧಾರ್ಮಿಕ ಸಂಸ್ಥೆಗಳ ದುರ್ಬಳಕೆ), ಶಸ್ತ್ರಾಸ್ತ್ರ ಕಾಯಿದೆ ಸೆಕ್ಷನ್ 30ರ (ಕಾನೂನುಬಾಹಿರವಾಗಿ ಶಸ್ತ್ರಾಸ್ತ್ರ ಬಳಕೆ) ಅಡಿ ಪ್ರಕರಣ ದಾಖಲಿಸಿದ್ದರು.

:: – ಹಾಸ್ಯ :: — :: ಎಲ್ಲಿಗೆ ಹೊರಟ್ಯೋ ವಿಕಟಕವಿ ಬಾ ಟೀ ಕುಡಿಸು..

ಬೆಳಿಗ್ಗೆ ಎಂಟು ಗಂಟೆ. ಸೋಮುವಾರ ವಾರದ ಪೂಜೆಗೆ ಹೂ ಹಣ್ಣು, ತಿಂಡಿಗೆ ತರಕಾರಿ ತರಲು ನಗರದ ಕಟ್ಟಿನಕೆರೆ ಮಾರ್ಕೇಟಿಗೆ ಬಂದಿದ್ದೆ. ಪಿಕ್ಚರ್ ಪ್ಯಾಲೇಸ್ ಥಿಯೇಟರ್‌ನಲ್ಲಿ ಹಳೇ ಚಿತ್ರದ ಪೋಸ್ಟರ್ ಕಣ್ಣಿಗೆ ಬಿತ್ತು. ಅದು ಅಂದಿನ ಕಾಲದ ಬಾಂಡ್ ಸಿನಿಮಾ ಜೇಡರ ಬಲೆ. ವಿದ್ಯಾರ್ಥಿ ದಿನಗಳಲ್ಲಿ ನಮ್ಮೂರ ಶ್ರೀ ಯೋಗನರಸಿಂಹಸ್ವಾಮಿ ಜಾತ್ರೆಗೆ ನೋಡಿದ್ದೆ. ಅದೇನು ಭಯಂಕರ ಹೊಡೆದಾಟ, ನಮ್ಮೂರ ಜಯಣ್ಣ, ಎತ್ತಿನಗಾಡಿಗೆ ಪೋಸ್ಟರ್ ಅಳವಡಿಸಿ ‘ ನೋಡಲು ಮರೆಯದಿರಿ. ಮರೆತು ಮರುಗದಿರಿ. ಭಯಂಕರ ಹೊಡೆದಾಟಗಳಿಂದ ಕೂಡಿದ ಚಿತ್ರ. ಜೇಡರಬಲೆ..ಎಂ.ಪಿ.ಶ0ಕರ್ ಕೊಲೆ.. ಜಯಣ್ಣನ ರೋಚಕ ಪ್ರಚಾರಕ್ಕೆ ಆಕರ್ಷಿತನಾಗಿ ಟೆಂಟ್ ಸಿನಿಮಾದಲ್ಲಿ ಫ್ರಂಟ್ (ನೆಲ) ನಲ್ಲಿ ಕುಳಿತು ಸಿನಿಮಾ ನೋಡಿದ್ದೆ. ದಡ್.! ನನ್ನ ಕುತ್ತಿಗೆ ಮೇಲೆ ಬಲವಾದ ಪೆಟ್ಟು ಬಿದ್ದು ತಿರುಗಿ ನೋಡಿದೆ. ಕಟ್ಟುಮಸ್ತಾದ ಆಳು! ಕನ್ನಡದ ಕಟ್ಟಾಳು! ಮೀಸೆ ಗೋಪಾಲ. ಬಿದ್ದ ಏಟಿನ ನೋವಿಗೆ ದವಡೆಗೆ ಹೊಡೆಯುವ ಸಿಟ್ಟು ಬಂದರೂ ಹೊಡೆಯಲಾದೀತೆ ಈ ಬಡಕಲು ಶರೀರದ ಕವಿಗೆ.! ಶಕುನಿಯ ಮಾಯ ನೋಟದಂತೆ ಪೋಸ್ ಕೊಟ್ಟು ವಕ್ರನೋಟದಿ ನಕ್ಕೆ.
“ಎಲ್ಲಿಗೆ ಹೊರಟ್ಯೋ ವಿಕಟಕವಿ. ಬಾ ಟೀ ಕುಡಿಸು..
” ತರಕಾರಿ ತರಲು ಹೋಗಬೇಕು ಗುರು.. “ ಹೋಗುವೆ ಬಾ. ಅಪರೂಪಕ್ಕೆ ಸಿಕ್ಕಿದ್ದೀಯ. ಗುರು ಭವನದಲ್ಲಿ ಟೀ ಕುಡಿಸು ಬಾ.. ಎಂದು ಹೊರಟ ಕಟ್ಟಾಳುವನ್ನು ಹಿಂಬಾಲಿಸಿದೆ. ಗುರು ಭವನದಲ್ಲಿ ನಮ್ಮ ಗುರುಗೋಪಾಲರು ಒಂದು ಮಸಾಲೆ ದೋಸೆಗೆ ಆರ್ಡರ್ ಮಾಡಿದರು.
“ ನಿನಗೆ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಸಿಕ್ಕಿಲ್ಲವೇನೋ ಕವಿ.. ದೋಸೆಯನ್ನು ಬಾಯಿಗೆ ತುರುಕುತ್ತಾ ಕೇಳಿದರು ಗುರುಗಳು.
“ ಇಲ್ಲಾ ಗುರುವೇ. ಪ್ರಶಸ್ತಿಗೆ ಅರ್ಜಿ ಹಾಕಿ ಪ್ರಶಸ್ತಿ ಪಡೆಯಬೇಕೆ? ಗುರುತಿಸಿಕೊಡುವುದು ಧರ್ಮ ಅಲ್ಲವೇ..?
“ಅಯ್ಯೋ ನಿನ್ನ ಕರ್ಮವೇ.! ಎಷ್ಟು ಪುಸ್ತಕ ಬರೆದಿದ್ದಿಯ..?
“ ಅರವತ್ತು ದಾಟಿದೆ.. ವಯಸ್ಸು ಅರವತ್ನಾಲ್ಕು ದಾಟಿದೆ.
“ ಜಿಲ್ಲೆದು ಆಗಿದೆ ಅಲ್ವೆ.? ಹೌದು ಬಹಳ ಹಿಂದೆಯೇ ಆಗಿದೆ..
ಸರಿ, ಏನಾದ್ರೂ ಮಾಡುವ.. ಈಗ ಒಂದು ಟೀಗೆ ಆರ್ಡರ್ ಮಾಡು..ಬೈಟು ಹೇಳಬೇಡ.
“ಸರಿ ಅಣ್ಣ.. ಎಂದು ಬಾಯಿಬಿಟ್ಟು ಹೇಳಿ ವಯಸ್ಸಿನಲ್ಲಿ ನನಗಿಂತ ಸಣ್ಣ..ಎಂದು ಗೊಣಗಿಕೊಂಡೆ. ‘ಡರ್..! ಎಂದು ತೇಗಿ ‘ಹುಳಿ ತೇಗೆಂದು ಗೊಣಗಿದರು ಗುರು ದ್ರೋಣಚಾರ್ಯರು ಬಿಲ್ಲು ಬಿಡಲಿಲ್ಲ. ನಾನು ಕೊಟ್ಟೆ. ಹೋಟೆಲ್ ನಿಂದ ಹೊರಗೆ ಬಂದೆವು. ಅಣ್ಣ ನೀವೀಗ ಫಿಲಂ ಸೆನ್ಸಾರ್ ಮಂಡಳಿಯ ಸದಸ್ಯರಲ್ಲವೇ..
“ ಕಟ್.! ಹೇ ವಿಕಟಕವಿ ಆ ಸೆನ್ಸಾರ್ ವಿಷಯವೆಲ್ಲಾ ಹಾದಿ ಬೀದಿಯಲ್ಲಿ ಮಾತನಾಡಬಾರದು.. ಎಂದು ನನ್ನ ಮಾತಿಗೆ ಕತ್ತರಿ ಹಾಕಿ “ಈಗ ಹೇಳು ನಿನ್ನ ಬರವಣಿಗೆ ಹೇಗೆ ಸಾಗಿದೆ. ಬರೇ ಚುಟುಕ ಬರೆದುಕೊಂಡು ಸಮಾಜವನ್ನು ಕುಟುಕುತ್ತಿರುವೆಯಾ ಹೇಗೆ ಕಟುಕ..?
“ಅಣ್ಣಾವರ ಮಾತು ಯಾವಾಗಲೂ ಕಟುವೇ.! ಏನೂ ಮಾಡುವುದು ಮಾತು ಎಷ್ಟೇ ಕಹಿಯಾದರೂ ಅರಗಿಸಿಕೊಳ್ಳಲೇಬೇಕು.
‘ಹಾಂ ಗೋಪಾಲ್ ಜೀ.. ದಿನಾ ಬೆಳಿಗ್ಗೆ ನಮ್ಮ ಹಾಸನ್ ಚುಟುಕು ಕವಿ ಕುಮಾರ್ ಅವರು ಹೊಸ ಹೊಸ ಹಸನಾದ ಕವಿತೆ ಹೊಸೆದು ವ್ಯಾಟ್ಸಪ್‌ನಲ್ಲಿ ನಿಮ್ಮ ನಂಬರನ್ನು ನಮ್ಮ ರೈರ‍್ಸ್ ಗ್ರೂ:ಪ್‌ಗೆ ಸೇರಿಸಲೇ..
“ ಯಾವುದೇ ಕಾರಣಕ್ಕೂ ಬೇಡ. ನಾನು ಈಗಾಗಾಲೇ ಸಾಕಷ್ಟು ರೈರ‍್ಸ್ ಗ್ರೂಪ್ ನಿಂದ ಲೆಫ್ಟ್ ಆಗಿದ್ದೇನೆ. ಇರಲಿ, ನೀನು ಆಗೆಲ್ಲಾ ಲೋಕಲ್ ಪೇಪರ್ ನಲ್ಲಿ ಚುಟುಕು ಬರೀತ್ತಿದ್ದೆಯೆಲ್ಲಾ.. ಇನ್ನೂ ಜಿಲ್ಲೆಯಲ್ಲೇ ಉಳಿದಿದ್ದಿಯೋ.. ಸ್ಟೇಟ್‌ಗೆ ಪ್ರಮೋಟ್ ಆಗಿದ್ದೀಯೊ..? ಮೊನ್ನೆ ಯಾವುದೋ ನ್ಯೂಸ್ ಪೇಪರ್‌ನಲ್ಲಿ ನಿನ್ನ ನಾನ್ಸೆನ್ಸ್ ಪೊಯೆಂ ನೋಡಿದೆ. ಸರಿ, ಹೇಗಾದ್ರೂ ರ‍್ಕೊಂಡು ಸಾಯಿ. ಈಗ ನನ್ನ ತಲೆ ಬಿಸಿ ಆಗಿದೆ. ಒಂದು ಬರಕ್ಲೇ ಸಿಗರೇಟು ಕೊಡಿಸು ಬಾ ಎಂದು ಬೀಡಾ ಅಂಗಡಿಗೆ ಕರೆದೊಯ್ದರು. ಅಣ್ಣನನ್ನು ಬೇಗ ಬೀಳ್ಕೊಡಬೇಕು. ಇಲ್ಲವಾದರೇ ಬೀಳುತ್ತೆ ಬರೆ.!
“ಇತ್ತೀಚಿಗೆ ನವ್ಯ ಕವಿಗಳು ಜಡೆ ಕವಿತೆ ಬರೆಯುತ್ತಿದ್ದಾರಲ್ಲಾ. ನೀನ್ಯಾವ ಜಡೆಗೆ ಕೈ ಹಾಕಿಲ್ಲವೇನೋ ವಿಕಟಕವಿ. ಸಿಗರೇಟ್ ಹೊಗೆ ಉಗುಳಿ ಅಣ್ಣ ನಿರಾಳ ಮನಸ್ಥಿತಿಗೆ ಬಂದರು.
‘ಗೋಪಾಲು, ನಾನಿನ್ನು ಜಡೆ ಕವಿತೆ ಬರೆಯಲು ಪ್ರಯತ್ನಿಸಿಲ್ಲ. ಆದರೆ ಹಿಂದೊಮ್ಮೆ ಟೂ ಲೈನ್ ಚುಟುಕ ಬರೆದಿದ್ದೆ. ಅದನ್ನು ಇಲ್ಲೇ ಈಗಲೇ ವಾಚಿಸುವೇ ಕೇಳಿ ಪ್ಲೀಸ್..
ದ್ರೌಪದಿ ತೊಟ್ಟಿದ್ದರೆ ಚೂಡಿದಾರ
ದುಶ್ಯಾಸನ ಎಳೆಯುತ್ತಿದ್ದನೆ ದಾರ..
“ಲೇ ಪ್ರಾಸ ಕವಿ, ನೀನು ಹೀಗೆ ಹಾದಿ ಬೀದಿಯಲ್ಲೆಲ್ಲಾ ಚುಟುಕು ವಾಚಿಸಿದರೆ ಅಟ್ಟಿಬಿಡುವೆ ರುದ್ರಪಟ್ಟಣಕ್ಕೆ.! ಲೇ ಕವಿ, ಯಾಕೋ ಹೊಟ್ಟೆನೋವು ಶುರು ಆಗ್ತಾ ಇದೆ. ಈಗ ಗ್ಯಾಸ್‌ಗೆ ಟ್ರಬಲ್ ಟ್ಯಮ್. ಅವನ್ಯಾರೋ, ಹಳೇ ದೋಸೆ ಮಗಚಿ ಹಾಕಿ ನನ್ನ ಹೊಟ್ಟೆಗೆ ಗ್ಯಾಸ್ ತಂದಿಟ್ಟದ್ದಾನೆ. ಸರಿ ನೀನು ಮನೆಗೆ ಹೊರಡು. ನಾನು ಹೊರಡುತ್ತೇನೆ. ಇದೇ ಇವತ್ತಿನ ಮೊದಲನೇ ಪಾಠ. ಅಂದ್ಹಾಗೆ ನಿನ್ನ ಚುಟುಕು ಕೇಳಿ ನನಗೆ ನೆನಪಾಯಿತು. ಇವತ್ತು ಹಾಸನಾಂಬ ಕಲಾಕ್ಷೇತ್ರದಲ್ಲಿ ಕುರುಕ್ಷೇತ್ರ ನಾಟಕದಲ್ಲಿ ದ್ರೌಪದಿ ವಸ್ತಾçಪಹರಣ ದೃಶ್ಯ ವೀಕ್ಷಿಸಿ ಸೆನ್ಸಾರ್ ಮಂಡಳಿಗೆ ವರದಿ ಕಳಿಸಬೇಕು.. ಎಂದು ಸಿಗರೇಟ್ ತುಂಡನ್ನು ಕಾಲಿನಿಂದ ಹೊಸಕಿ ದುಶ್ಯಾಸನನಂತೆ ನಕ್ಕನು.
ಅಯ್ಯೋ, ಗೋಪಾಲ ಕುರುಕ್ಷೇತ್ರ ನಾಟಕದಲ್ಲಿ ಆ ದೃಶ್ಯ ಇಲ್ಲ..!

ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯.

ಶಿವಾಜಿ ಮಹಾರಾಜರ 399ನೇ ಜಯಂತಿ: ಮಲ್ಲೇಶ್ವರ ಕಾಡುಮಲ್ಲಿಕಾರ್ಜುನ ದೇವಸ್ಥಾನದಿಂದ ಬೃಹತ್ ಮೆರವಣಿಗೆ

BENGALRU : ಛತ್ರಪತಿ ಶಿವಾಜಿ ಮಹಾರಾಜರ 399ನೇ ಜಯಂತಿಯ (Shivaji Jayanthi) ಸಂದರ್ಭದಲ್ಲಿ, ಶಿವ ಗರ್ಜನೆ ಯುವ ಸೇನೆಯು (Shiva Garjane Yuva Sene) ಮಲ್ಲೇಶ್ವರಂನ ಕಾಡು ಮಲ್ಲಿಕಾರ್ಜುನ ದೇವಸ್ಥಾನದಿಂದ ಬೃಹತ್ ಮೆರವಣಿಗೆಯನ್ನು ಪ್ರಾರಂಭಿಸಿತು. ವಿಜಯನಗರ ಮಾರುತಿ ಮೆಡಿಕಲ್ಸ್‌ನ (Maruthi Medicals) ಗೋಸೇವಕ ಮಹೇಂದ್ರ ಮುನೋತ್, ಬಿಜೆಪಿ ನಾಯಕ ಸಪ್ತಗಿರಿ ಗೌಡ, ಗಣೇಶ್ ರಾವ್ ಅವರು ಹಿಂದೂ ಧ್ವಜಾರೋಹಣ ಮಾಡುವ ಮೂಲಕ ಮೆರವಣಿಗೆಯನ್ನು ಉದ್ಘಾಟಿಸಿದರು.

ಮೆರವಣಿಗೆಯಲ್ಲಿ, ಕೇಸರಿ ಪೇಟ ಧರಿಸಿದ ಹೆಚ್ಚಿನ ಸಂಖ್ಯೆಯ ಪುರುಷರು ಮತ್ತು ಮಹಿಳೆಯರು ಜೈ ಭವಾನಿ ಜೈ ಶಿವಾಜಿ ಎಂದು ಜಪಿಸಲು ಪ್ರಾರಂಭಿಸಿದರು, ಮತ್ತು ಅಲ್ಲಿನ ವಾತಾವರಣವು ಹಿಂದೂ ಧರ್ಮಕ್ಕೆ ಪರಿವರ್ತಿತವಾಯಿತು. ಮೆರವಣಿಗೆಯಲ್ಲಿ ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು. ಸೇನಾ ಅಧ್ಯಕ್ಷ ಪ್ರವೀಣ್, ಉಪಾಧ್ಯಕ್ಷ ಶಿವಶಂಕರ್ ಪವಾರ್, ಸಚಿವ ಕೇಶವ್ ರಾವ್ ಚೌಹಾಣ್ ಮತ್ತು ಇತರ ಸದಸ್ಯರು ಅತಿಥಿಗಳನ್ನು ಗೌರವಿಸಿದರು.

 

Divine Wisdom Global Laureate Honour Dr. Ravindra A. Kushtagi Receives International Recognition

Hosur, April 25: Renowned thinker and literary scholar Dr. Ravindra A. Kushtagi has been conferred the prestigious “Divine Wisdom Global Laureate” award by the Asia International Culture Academy.

The award was presented at a समारोह held in Hosur, Tamil Nadu, in the presence of Dr. Krishnamurthy Mahaswamiji, President of Sri Kshetra Dharmadhwaja Pratishtana, and Dr. B. M. Ballari of Swami Vivekananda Educational Institution. The organisers stated that the honour recognises Dr. Kushtagi’s multifaceted achievements, particularly his contributions to Bhagavata-based spiritual literature.


A Life of Balance: Profession, Detachment, and Thought

Dr. Kushtagi’s life is not a conflict between profession and renunciation, but a harmonious blend of both. Having served for decades in the mechanical engineering field, he has seamlessly integrated spirituality and literature into his journey of self-realisation.

Born on November 15, 1957, in Kalaburagi, he was raised under the value-based guidance of his parents, Late Anantacharya Kushtagi and Late Seethabai. Discipline, hard work, and ethical living formed the foundation of his personality from an early age.


Academic Excellence and Professional Career

He completed his primary and secondary education in Raichur and Shahabad, and graduated with distinction in Mechanical Engineering in 1980 from institutions in Kalaburagi.

He served for nearly 35 years in reputed organisations such as Larsen & Toubro and Integrated Electric Company. Retiring in 2016 as Chief Purchase Manager, he earned recognition for his integrity and managerial excellence.


A New Chapter: From Retirement to Literary Pursuit

Post-retirement marked the beginning of a new phase in his life. Inspired by deep contemplation of the Bhagavata, he turned towards literary creation.

Since 2020, his notable works include:

  • Krishna Kathamruta – Based on the Tenth Skandha of Srimad Bhagavata
  • Srimad Bhagavata in Saptaha Tradition
  • Harivamsha – The Khila (appendix) of the Mahabharata (published under TTD, 2024)

Through these works, he has successfully made Bhagavata philosophy accessible to the common reader.


Taking Sanatana Thought to Global Readers

By translating his works into English—BhagavathaSrimad Bhagavata Saptaha, and Samunnatha—Dr. Kushtagi has introduced Indian Sanatana philosophy to a global audience. His writing is marked by clarity and simplicity in presenting profound philosophical concepts.


Awards and Recognitions

  • 2023: Honour by Atmashree Kannada Cultural Foundation
  • 2024: Honorary Doctorate – Yoga University of the Americas, Florida (USA)
  • 2025: Sri Tyagaraja Ratna Award – Mulakanadu Mahasangha
  • 2025: Felicitation by Maitreyi Kannada Mahila Haridasa Trust
  • 2026: Haridasa Anugraha Award – Srinivasa Utsava Balaga
  • 2026: Datti Award – Kannada Sahitya Parishat, Raichur

A Memorable Moment

In 2025, he had the rare opportunity to present his English works to legendary Indian actor Amitabh Bachchan—a moment he cherishes as one of the most memorable milestones in his life.


Core Values and Philosophy

Guided by the motto, “Bhagavata is my breath, Bhagavata is my soul,” Dr. Kushtagi embodies simplicity, depth, and scholarly dedication. His thoughts are deeply rooted in family values, reverence for teachers, and respect for cultural heritage.

“ಮಹಾಭಾರತ ದರ್ಶನ” ಕೃತಿ ಬಿಡುಗಡೆ – ಗಾನ ಕಮಲ–2026 ಗೌರವ ಪ್ರದಾನ

“ನರಸಿಂಹ ಶತನಾದಾರ್ಚನಮ್” ಸಂಗೀತ–ಸಾಹಿತ್ಯ ಸಂಭ್ರಮ ಯಶಸ್ವಿ

ಬೆಂಗಳೂರು, ಏಪ್ರಿಲ್ 25: ಗಾನಕಮಲ  ಅಕಾಡೆಮಿ (ನೊಂ) (Ganakamala Academy) ಹಾಗೂ ಬಿ.ಹೆಚ್.ಎಸ್. (BHS Higher Education) ಉನ್ನತ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾದ “ನರಸಿಂಹ ಶತನಾದಾರ್ಚನಮ್” (Narasimha Shatanadarchanam) ವಿಶೇಷ ಸಂಗೀತ–ಸಾಹಿತ್ಯ ಕಾರ್ಯಕ್ರಮವು ಜಯನಗರದ ವಿಜಯ ಪದವಿ ಪೂರ್ವ ಕಾಲೇಜಿನ ಶ್ರೀ ರಾಮಸ್ವಾಮಿ ಸಭಾಂಗಣದಲ್ಲಿ ವೈಭವದಿಂದ ನೆರವೇರಿತು.

ಗಂಜಿಗುಂಟೆ ಶ್ರೀ ನರಸಿಂಹಮೂರ್ತಿ ಅವರ ಶತಮಾನೋತ್ಸವದ ಅಂಗವಾಗಿ ನಡೆದ ಈ ಕಾರ್ಯಕ್ರಮವನ್ನು ನಾಡೋಜ ಡಾ. ಹಂಪ ನಾಗರಾಜಯ್ಯ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ  ಮೈಸೂರಿನ ಮಹಿಮಾ ಪ್ರಕಾಶನ ಪ್ರಕಟಿಸಿರುವ   ಪುರಾಣ ಭಾಸ್ಕರ ಡಾ. ಕಂಬಾಲೂರು ವೆಂಕಟೇಶ ಆಚಾರ್ಯ (ಪ್ರಸ್ತುತ ಶ್ರೀ ವಿದ್ಯಾಸಾಗರ ಮಾಧವ ತೀರ್ಥರು) ರಚಿಸಿದ “ಮಹಾಭಾರತ ಅಂಡ್ ವೆರಿಯೇಷನ್ಸ್” ಕೃತಿಯ ಕನ್ನಡ ಅನುವಾದವಾದ “ಮಹಾಭಾರತ ದರ್ಶನ” ಗ್ರಂಥವನ್ನು ಬಿಡುಗಡೆಗೊಳಿಸಲಾಯಿತು.

ಕೃತಿಯ ಕುರಿತು ಮಾತನಾಡಿದ ಹಂಪ ನಾಗರಾಜಯ್ಯ ಅವರು, “ಈ ಗ್ರಂಥವು ತೌಲನಿಕ ಸಾಹಿತ್ಯ ಅಧ್ಯಯನದ ಆಳ, ಪುರಾಣಪರಿಜ್ಞಾನ ಮತ್ತು ಭಾಷಾತ್ಮಕ ಸಂವೇದನೆಗಳ ಸಮನ್ವಯವಾಗಿದೆ. ವ್ಯಾಸ, ಪಂಪ ಮತ್ತು ಪೆರುಂದೇವನಾರರ ಕೃತಿಗಳಲ್ಲಿನ ಸಾದೃಶ್ಯ–ವೈಶಿಷ್ಟ್ಯಗಳನ್ನು ಆಳವಾಗಿ ವಿಶ್ಲೇಷಿಸಿರುವ ಈ ಕೃತಿ ದಕ್ಷಿಣ ಭಾರತೀಯ ಸಾಹಿತ್ಯ ಪರಂಪರೆಯ ಅರಿವಿಗೆ ಅನಿವಾರ್ಯವಾದ ಪಠ್ಯ” ಎಂದು ಅಭಿಪ್ರಾಯಪಟ್ಟರು. ಈ ಶ್ರೇಷ್ಠ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿ ಜನತೆಗೆ ತಲುಪಿಸಿದ ಪ್ರೊ. ಎಸ್. ಬಿಳಿಗಿರಿವಾಸನ್ ಅವರ ಸೇವೆಯನ್ನು ಅವರು ಪ್ರಶಂಸಿಸಿದರು.

ಈ ಸಂದರ್ಭದಲ್ಲಿ ಪ್ರೊ. ಎಸ್. ಬಿಳಿಗಿರಿವಾಸನ್ ಅವರಿಗೆ ಅವರ ಸಾಹಿತ್ಯಸೇವೆಯನ್ನು ಗುರುತಿಸಿ “ಗಾನ ಕಮಲ–2026” ಸ್ಮಾರಕ ಪುರಸ್ಕಾರವನ್ನು ಪ್ರದಾನಿಸಲಾಯಿತು. ಪ್ರಶಸ್ತಿ ಸ್ವೀಕರಿಸಿದ ಅವರು, “ಅನುವಾದ ಕಾರ್ಯವು ಭಾಷೆಗಳ ನಡುವೆ ಸೇತುವೆಯಾಗಿದ್ದು, ಜ್ಞಾನ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗಳಿಗೆ ತಲುಪಿಸುವ ಮಹತ್ವದ ಸಾಧನ” ಎಂದು ಹೇಳಿದರು.

ಕಾರ್ಯಕ್ರಮದ ಮತ್ತೊಂದು ಪ್ರಮುಖ ಆಕರ್ಷಣೆಯಾಗಿ ನಡೆದ “ಗಾನ ಸುಧೆ” ಸಂಗೀತ ಕಾರ್ಯಕ್ರಮದಲ್ಲಿ ವಿ. ಗುರುರಾಜ್ ಅವರ ಮನಮೋಹಕ ಗಾಯನ ಶ್ರೋತೃಗಳನ್ನು ರಂಜಿಸಿತು. ವಿ. ವಿಭುದೇಂದ್ರ ಸಿಂಹ (ಪಿಟೀಲು) ಹಾಗೂ ವಿ. ವರದೇಂದ್ರ ಸಿಂಹ (ಮೃದಂಗ) ಅವರ ಸಹವಾದ್ಯಗಳು ಕಾರ್ಯಕ್ರಮಕ್ಕೆ ವಿಶಿಷ್ಟ ಮೆರಗು ನೀಡಿದವು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಟಿ. ಎ. ಬಾಲಕೃಷ್ಣ ಅವರು ಗಾನಕಮಲ ಅಕಾಡೆಮಿಯ ಸಾಂಸ್ಕೃತಿಕ ಸೇವೆಯನ್ನು ಮೆಚ್ಚಿ, ಪರಂಪರೆ ಮತ್ತು ನವೀನತೆಯ ಸಮನ್ವಯದಿಂದಲೇ ಸಂಸ್ಕೃತಿಯ ಉಳಿವು ಸಾಧ್ಯವೆಂದು ಅಭಿಪ್ರಾಯಪಟ್ಟರು.

ವಿಶೇಷ ಆಹ್ವಾನಿತರಾಗಿ ಡಾ. ಅನಂತಪದ್ಮನಾಭ ರಾವ್, ಡಾ. ಬಿ. ಎಸ್. ರಾಘವೇಂದ್ರ, ಡಾ. ಕೆ. ಶೇಷಮೂರ್ತಿ, ಡಾ. ಟಿ. ವಿ. ರಾಜು ಹಾಗೂ ಪ್ರೊ. ಜಿ. ಅಶ್ವತ್ಥನಾರಾಯಣ ಉಪಸ್ಥಿತರಿದ್ದರು.

ಪ್ರೊ. ಕೆ.ವಿ. ರಾಮರಾವ್ ಅಭಿನಂದನಾ ಪತ್ರವನ್ನು ವಾಚಿಸಿದರು. ಕಾರ್ಯಕ್ರಮವನ್ನು ಡಾ. ಎಸ್. ಎಲ್. ಮಂಜುನಾಥ್ ನಿರೂಪಿಸಿದರು. ಆಯೋಜಕರಾದ ನಂದಕುಮಾರ, ಗುರುರಾಜ್ ಹಾಗೂ ಶಾಮಸುಂದರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಎಂ.ಎಸ್ ರಂಗನಾಥ ರಾವ್ ರವರಿಗೆ ಗೌರವ ಡಾಕ್ಟರೇಟ್ ಪ್ರದಾನ

BENGALURU : ತಮಿಳುನಾಡು ಹೊಸೂರ್ ನ ಹೋಟೆಲ್ ಗ್ರಾಂಡ್ ಫಾಚೂರ್ನ್ (HOTEL GRAND FORTUNE) ನಲ್ಲಿ ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ (ASIA INTERNATIONAL CULTURE RESEARCH) ವಿಶ್ವವಿದ್ಯಾಲಯ ದವರು ಬೆಂಗಳೂರು ವಿಡಿಯಾ ಪೂರ್ಣಪ್ರಜ್ಞ ಪ್ರೌಢಶಾಲೆಯ ಗಣಿತ ಮತ್ತು ಭೌತಶಾಸ್ತ್ರ ಅಧ್ಯಾಪಕ ರವರಿಗೆ ಎಂ ಎಸ್ ರಂಗನಾಥ ರಾವ್ (M.S.RANGANATHA RAO) ಶೈಕ್ಷಣಿಕ ಕ್ಷೇತ್ರದ ಅನನ್ಯ ಸೇವೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಪದವಿ ನೀಡಿ ಪುರಸ್ಕರಿಸಲಾಯಿತು.

ಶ್ರೀಯುತರು ಕಳೆದ 3 ದಶಕದಿಂದ ಶಿಕ್ಷಣ ರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸ ನೀಡುತ್ತ ಸಮಾಜಮುಖಿ ಸೇವಾ ತತ್ಪರಾಗಿದ್ದಾರೆ.ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಯಾಗಿ ಡಾ ಕೃಷ್ಣಮೂರ್ತಿ ಸ್ವಾಮೀಜಿ, ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಡಾ ಬಿ.ಎಂ ಬಳ್ಳಾರಿ ಮೊದಲಾದವರು ಉಪಸ್ಥಿತರಿದ್ದರು.

IIHMR ಬೆಂಗಳೂರಿನಲ್ಲಿ ಭಾರತದ ಔಷಧ ಉದ್ಯಮದ ಭವಿಷ್ಯ ಕೇಂದ್ರ ಬಿಂದು

ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ಮ್ಯಾನೇಜ್‌ಮೆಂಟ್ ರಿಸರ್ಚ್ ಬೆಂಗಳೂರು (IIHMR), ತನ್ನ ಎರಡನೇ ಆವೃತ್ತಿಯ ಫಾರ್ಮಾ-ಟೆಕ್ ಕನ್ವರ್ಜ್ 2026 ಅನ್ನು ಕ್ಯಾಪಿಟಲ್ ಹೋಟೆಲ್‌ನಲ್ಲಿ ಆಯೋಜಿಸಿತು. ಉದ್ಯಮ ನಾಯಕರು, ನೀತಿ ನಿರೂಪಕರು, ವೈದ್ಯರು ಮತ್ತು ಶಿಕ್ಷಣತಜ್ಞರು ಒಂದೆಡೆ ಸೇರಿ, ಭಾರತದ ಔಷಧ ಉದ್ಯಮ ಒಂದು ನಿರ್ಣಾಯಕ ಕವಲು ದಾರಿಯಲ್ಲಿ ನಿಂತಿದೆ ಎಂಬ ಸಾಮೂಹಿಕ ಅರಿವನ್ನು ಹಂಚಿಕೊಂಡರು.

ಡಾ. ಉಷಾ ಮಂಜುನಾಥ್, ಪ್ರಾಧ್ಯಾಪಕರು ಮತ್ತು ನಿರ್ದೇಶಕರು, IIHMR ಬೆಂಗಳೂರು, ಅವರು ಸ್ವಾಗತ ಭಾಷಣ ಮಾಡಿ ಆರೋಗ್ಯ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಪಾಲುದಾರಿಕೆ ಮತ್ತು ನಾವೀನ್ಯತೆಯ ಮಹತ್ವವನ್ನು ಒತ್ತಿ ಹೇಳಿದರು.

ಮುಖ್ಯ ಅತಿಥಿ: ಡಾ. ಸುದರ್ಶನ್ ಜೈನ್

ದಿನದ ಅತ್ಯಂತ ಪ್ರಭಾವಶಾಲಿ ಭಾಷಣ ನೀಡಿದ ಮುಖ್ಯ ಅತಿಥಿ, ಡಾ. ಸುದರ್ಶನ್ ಜೈನ್, ಭಾರತೀಯ ಔಷಧ ಒಕ್ಕೂಟದ (IPA) ಪ್ರಧಾನ ಕಾರ್ಯದರ್ಶಿ ಮತ್ತು IIHMR ವಿಶ್ವವಿದ್ಯಾಲಯದ ಅಧ್ಯಕ್ಷರು, ಭಾರತದ ಔಷಧ ಮಹತ್ವಾಕಾಂಕ್ಷೆಯ ಮೂಲಕ್ಕೆ ಇಳಿದ ಭಾಷಣ ಮಾಡಿದರು. ಔಷಧ ಕ್ಷೇತ್ರವನ್ನು ವಿಕಸಿತ ಭಾರತ 2047 ದೃಷ್ಟಿಯೊಳಗೆ ಇಟ್ಟು, ಅವರು ಪ್ರಮಾಣ-ಆಧಾರಿತ ಜೆನೆರಿಕ್ ಕೈಗಾರಿಕೆಯಿಂದ ಉಚ್ಚ-ಮೌಲ್ಯದ, ನಾವೀನ್ಯತೆ-ನೇತೃತ್ವದ ಉದ್ಯಮಕ್ಕೆ ಬದಲಾಗಬೇಕು ಎಂದು ಕರೆ ನೀಡಿದರು. ಜೈವಿಕ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಗೆ ಕೇಂದ್ರ ಬಜೆಟ್‌ನ ಗಮನ ಮತ್ತು ಬಯೋ-ಶಕ್ತಿ ಉಪಕ್ರಮವನ್ನು ಅವರು ಮೆಚ್ಚಿ ಮಾತನಾಡಿದರು. ಭಾರತದ ಆಯುರ್ಮಾನ ಹೆಚ್ಚಿದ್ದರೂ, ವೃದ್ಧಾಪ್ಯದ ಆರೋಗ್ಯ ಗುಣಮಟ್ಟ ಅನುಪಾತದಲ್ಲಿ ಸುಧಾರಿಸಿಲ್ಲ ಎಂದು ಅವರು ಎಚ್ಚರಿಸಿದರು — ದೀರ್ಘಕಾಲೀನ ಮತ್ತು ಅವನತಿ ರೋಗಗಳ ಹೊರೆ ಹೆಚ್ಚುತ್ತಿದೆ. AI ಯ ಪಾತ್ರ, ಸಣ್ಣ ಅಣುಗಳಿಂದ ಜೈವಿಕ ಔಷಧಿಗಳ ಪರಿವರ್ತನೆ, ಮತ್ತು ರೋಗನಿರ್ಣಯದ ಹೆಚ್ಚುತ್ತಿರುವ ಪ್ರಾಮುಖ್ಯತೆ — ಇವೆಲ್ಲವನ್ನೂ ಅವರು ಪ್ರಸ್ತಾಪಿಸಿದರು. ತಮ್ಮ ಭಾಷಣದ ಕೇಂದ್ರ ಬಿಂದುವಾಗಿ ಅವರು “ಡಿಸೆನ್ಸಿ ಕೋಷಂಟ್” (Decency Quotient)ಪರಿಕಲ್ಪನೆಯನ್ನು ಮುಂದಿಟ್ಟರು — ತಾಂತ್ರಿಕ ಶ್ರೇಷ್ಠತೆ ನೈತಿಕತೆ ಮತ್ತು ಸಮಗ್ರತೆಯೊಂದಿಗೆ ಬೇರ್ಪಡಿಸಲಾಗದ ಸಂಬಂಧ ಹೊಂದಿರಬೇಕು ಎಂಬ ಜ್ಞಾಪನ. “Make in India” ಯಿಂದ “Discover in India”ಎಂಬ ಅವರ ಕರೆಗೆ ಭರ್ಜರಿ ಚಪ್ಪಾಳೆ ಮೊಳಗಿತು.

ಗೌರವ ಅತಿಥಿ: ಶ್ರೀ ವಿಕ್ರಾಂತ್ ಶ್ರೋತ್ರಿಯ

ನೊವೊ ನಾರ್ಡಿಸ್ಕ್ ಇಂಡಿಯಾದ ಕಾರ್ಪೊರೇಟ್ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ವಿಕ್ರಾಂತ್ ಶ್ರೋತ್ರಿಯ ಅವರು ಜಾಗತಿಕ ಆರೋಗ್ಯ ವ್ಯವಸ್ಥೆಯ ಅಸಮರ್ಥತೆಗಳಿಗಾಗಿ ವಾರ್ಷಿಕ $200 ಶತಕೋಟಿ ನಷ್ಟವಾಗುತ್ತಿದೆ ಎಂಬ ಆಘಾತಕಾರಿ ಅಂಕಿಯನ್ನು ಮುಂದಿಟ್ಟರು. ಕೆಲವೇ ಫಾರ್ಮಾ ಸಂಸ್ಥೆಗಳಿದ್ದ ಬೆಂಗಳೂರು, AstraZeneca ಮತ್ತು Regeneron ನಂತಹ ದಿಗ್ಗಜ ಕಂಪನಿಗಳನ್ನು ಆತಿಥ್ಯ ವಹಿಸುವ ವಿಶ್ವ ದರ್ಜೆಯ ಆರೋಗ್ಯ ಜ್ಞಾನ ಕೇಂದ್ರವಾಗಿ ಬೆಳೆದ ಬಗ್ಗೆ ಮಾತನಾಡಿದರು. ಅವರ ಅತ್ಯಂತ ತುರ್ತು ಸಂದೇಶ ಶಿಕ್ಷಣ ಸಂಸ್ಥೆಗಳಿಗೆ ನೇರವಾಗಿತ್ತು: ಉದ್ಯಮಕ್ಕೆ ಈಗ “ಹೈಬ್ರಿಡ್ ಪ್ರತಿಭೆ”ಬೇಕಿದೆ — ಜೀವ ವಿಜ್ಞಾನ ಮತ್ತು ಡೇಟಾ ವಿಶ್ಲೇಷಣೆ ಎರಡರಲ್ಲೂ ನುರಿತ ವೃತ್ತಿಪರರು. ಸಾಂಪ್ರದಾಯಿಕ, ಬೇರ್ಪಡಿಸಿದ ಪಠ್ಯಕ್ರಮಗಳು ಇನ್ನು ಮುಂದೆ ಸಾಕಾಗುವುದಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದರು.

ಇತರ ಗಣ್ಯ ವಕ್ತಾರರು

ಡಾ. ಎಸ್. ಡಿ. ಗುಪ್ತಾ, IIHMR ಸೊಸೈಟಿ ಅಧ್ಯಕ್ಷರು, ಶೈಕ್ಷಣಿಕ ಪಠ್ಯಕ್ರಮಗಳು ಉದ್ಯಮದ ವಾಸ್ತವತೆಗಳೊಂದಿಗೆ ತಕ್ಷಣ ಹೊಂದಾಣಿಕೆ ಆಗಬೇಕೆಂದು ಒತ್ತಾಯಿಸಿದರು. ಭಾರತ ಜಾಗತಿಕ ಜೆನೆರಿಕ್ ಔಷಧಿಗಳ 20% ಮತ್ತು ಲಸಿಕೆಗಳ 50% ನೀಡುತ್ತದೆ ಎಂಬ ಅಂಶವನ್ನು ಸಾಧನೆ ಮತ್ತು ಜವಾಬ್ದಾರಿ ಎರಡರ ದೃಷ್ಟಿಯಿಂದ ಉಲ್ಲೇಖಿಸಿದರು.

ಪ್ರೊ. ಎಸ್. ಸದಾಗೋಪನ್, IIHMR ಬೆಂಗಳೂರಿನ ಗೌರವ ಪ್ರಾಧ್ಯಾಪಕರು ಮತ್ತು IIIT ಬೆಂಗಳೂರಿನ ಮಾಜಿ ನಿರ್ದೇಶಕರು, ಭಾರತದ ಸಾಫ್ಟ್‌ವೇರ್ ಗುರುತಿನ ರೀತಿಯಲ್ಲೇ ಔಷಧ ಕ್ಷೇತ್ರದಲ್ಲೂ ಜಾಗತಿಕ ಗುರುತು ನಿರ್ಮಿಸಬೇಕೆಂದು ಕರೆ ನೀಡಿದರು — “ಮಾತ್ರೆ ತೆಗೆದುಕೊಂಡರೆ, ಭಾರತ ನೆನಪಾಗಲಿ.” ಬೆಂಗಳೂರು ಏಕಕಾಲದಲ್ಲಿ IT ಮತ್ತು ಬಯೋಟೆಕ್ ರಾಜಧಾನಿ ಎಂದು ಅವರು ಬಣ್ಣಿಸಿದರು.

ಮಿಸ್. ರುಬಲ್ ಸಭರ್ವಾಲ್, ರುಬಲ್ ಸಭರ್ವಾಲ್ ಅಡ್ವೈಸರಿ ಸಂಸ್ಥಾಪಕರು, AI ಅಳವಡಿಕೆಯ ಕೊರತೆ ಸಮಸ್ಯೆಯಲ್ಲ, ಬದಲಿಗೆ ತಂತ್ರಾತ್ಮಕ AI ಅನ್ವಯದ ಕೊರತೆ ಮುಖ್ಯ ಸಮಸ್ಯೆ ಎಂದು ಸ್ಪಷ್ಟಪಡಿಸಿದರು.

ಡಾ. ಸಿ. ಎಸ್. ಕೇದಾರ್, ನಿವೃತ್ತ IAS ಅಧಿಕಾರಿ ಮತ್ತು IIHMR ಬೆಂಗಳೂರಿನ ಹಿರಿಯ ಸಲಹೆಗಾರರು, ಆಡಳಿತಗಾರರಿಗೆ ಹೊಸ ತರಬೇತಿ ಮಾಡ್ಯೂಲ್‌ಗಳ ಅಗತ್ಯವನ್ನು ಒತ್ತಿ ಹೇಳಿದರು ಮತ್ತು ಆರೋಗ್ಯ ಸೇವೆ ಚಿಕಿತ್ಸೆಗಿಂತ ತಡೆಗಟ್ಟುವಿಕೆಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಐತಿಹಾಸಿಕ ಘೋಷಣೆ: PGDM ಫಾರ್ಮಾಸ್ಯೂಟಿಕಲ್ ಮ್ಯಾನೇಜ್ಮೆಂಟ್ ಕಾರ್ಯಕ್ರಮ ಉಡಾವಣೆ

ಕಾರ್ಯಕ್ರಮದ ಐತಿಹಾಸಿಕ ಕ್ಷಣ ಎಂದರೆ IIHMR ಬೆಂಗಳೂರಿನ ಸಹಾಯಕ ಪ್ರಾಧ್ಯಾಪಕ ಮತ್ತು ಕಾರ್ಯಕ್ರಮ ಸಮನ್ವಯಕರಾದ ಶ್ರೀ ಶಮ್ಸುಜ್ಜಮಾನ್ ಅನ್ಸಾರಿ ಅವರು ಪ್ರಸ್ತುತಪಡಿಸಿದ AICTE ಅನುಮೋದಿತ ಎರಡು ವರ್ಷಗಳ ಪೂರ್ಣ-ಸಮಯದ PGDM ಇನ್ ಫಾರ್ಮಾಸ್ಯೂಟಿಕಲ್ ಮ್ಯಾನೇಜ್ಮೆಂಟ್ ಕಾರ್ಯಕ್ರಮದ ಔಪಚಾರಿಕ ಉಡಾವಣೆ. ಅನ್ಸಾರಿ ಅವರು ಈ ಕಾರ್ಯಕ್ರಮ ಕೇವಲ ಹೊಸ ಶೈಕ್ಷಣಿಕ ಕೊಡುಗೆಯಲ್ಲ, ಬದಲಿಗೆ ಉದ್ಯಮದ ತುರ್ತು ಅಗತ್ಯಕ್ಕೆ ಸಂಸ್ಥೆ ನೀಡುತ್ತಿರುವ ಅನಿವಾರ್ಯ ಪ್ರತಿಕ್ರಿಯೆ ಎಂದು ಸ್ಪಷ್ಟಪಡಿಸಿದರು. ~10% CAGR ಬೆಳವಣಿಗೆ ದರದೊಂದಿಗೆ ಮುನ್ನುಗ್ಗುತ್ತಿರುವ ಔಷಧ ಉದ್ಯಮಕ್ಕೆ ನಾಯಕತ್ವ ಪ್ರತಿಭೆಯ ತೀವ್ರ ಕೊರತೆ ಇದೆ ಎಂದು ಅವರು ಒತ್ತಿ ಹೇಳಿದರು. ಪಠ್ಯಕ್ರಮ R&D, ಕ್ಲಿನಿಕಲ್ ಟ್ರಯಲ್ಸ್, ನಿಯಂತ್ರಕ ವ್ಯವಹಾರ, ಫಾರ್ಮಾಕೋವಿಜಿಲೆನ್ಸ್, ಡಿಜಿಟಲ್ ಮಾರ್ಕೆಟಿಂಗ್, ಆರೋಗ್ಯ ಅರ್ಥಶಾಸ್ತ್ರ ಮತ್ತು ಪೂರೈಕೆ ಸರಪಳಿ ನಿರ್ವಹಣೆ ಸೇರಿದಂತೆ ಸಂಪೂರ್ಣ ಔಷಧ ಮೌಲ್ಯ ಸರಪಳಿಯನ್ನು ಒಳಗೊಳ್ಳುತ್ತದೆ. ಫಾರ್ಮಸಿ, ಜೀವ ವಿಜ್ಞಾನ, ಎಂಜಿನಿಯರಿಂಗ್ ಮತ್ತು ವ್ಯವಹಾರ ಪದವೀಧರರಿಗೆ ಮುಕ್ತ ಪ್ರವೇಶ ಕಲ್ಪಿಸಿ, ಬೆಂಗಳೂರಿನ ಫಾರ್ಮಾ GCC ಕಂಪನಿಗಳ ನಿರಂತರ ಸಮಾಲೋಚನೆಯ ಮೂಲಕ ಅಭಿವೃದ್ಧಿ ಪಡಿಸಿದ ಈ ಕಾರ್ಯಕ್ರಮ, ಶಿಕ್ಷಣ ಸಂಸ್ಥೆಗಳು ಕ್ಷೇತ್ರಕ್ಕಾಗಿ ಪದವೀಧರರನ್ನು ತಯಾರು ಮಾಡುವುದನ್ನು ನಿಲ್ಲಿಸಿ, ಕ್ಷೇತ್ರದ ನಾಯಕರನ್ನು ರೂಪಿಸಲು ಆರಂಭಿಸಬೇಕು ಎಂಬ ಉದ್ಯಮದ ದೀರ್ಘಕಾಲದ ಆಗ್ರಹಕ್ಕೆ ಉತ್ತರ ನೀಡುವ ಭರವಸೆ ನೀಡುತ್ತದೆ.

ಫಾರ್ಮಾ-ಟೆಕ್ ಕನ್ವರ್ಜ್ 2026 ಒಂದು ಸ್ಪಷ್ಟ ಸಂದೇಶವನ್ನು ರವಾನಿಸಿತು: ಭವಿಷ್ಯ ಅನುಶಾಸನಗಳ ಗಡಿ ದಾಟಿ ಯೋಚಿಸಬಲ್ಲ, ಸಮಗ್ರತೆಯೊಂದಿಗೆ ಕಾರ್ಯ ನಿರ್ವಹಿಸಬಲ್ಲ ಮತ್ತು ವಿಶಾಲ ಪ್ರಮಾಣದಲ್ಲಿ ನಿರ್ಮಿಸಬಲ್ಲ ವ್ಯಕ್ತಿಗಳಿಗೆ ಸೇರಿದೆ. ಈ ಐತಿಹಾಸಿಕ ಕಾರ್ಯಕ್ರಮ ಉಡಾವಣೆಯ ಮೂಲಕ IIHMR ಬೆಂಗಳೂರು ಆ ಭವಿಷ್ಯದ ಕೇಂದ್ರ ಬಿಂದುವಾಗಿ ತನ್ನನ್ನು ತಾನು ಭದ್ರಪಡಿಸಿಕೊಂಡಿದೆ.

Maths is very complicated to children – Book Review

Hi my name is Rashmi. T. I studied MBA finance . I am a tutor in Hello kids.
Now a days maths is very complicated to children, and they are suffering from time shortage, so I joined vedic maths to get rid from this. And I taught my students..
I learnt from Radhika GN mam.. She explained very well, and her book is very understandable, simple and well explained..
The sums were explained step by step, and anybody can understand that shortcut method and apply for their class..and it helps to enhance student IQ level.
And most importantly this book helps for competative exams. Shortcut method helps to reduce the time consuming in exams..
So we need to learn and apply vedic maths in our competative lives.

Thank you
Rashmi T