Home Blog Page 3

NU Hospitals Launches Advanced Quaternary Nephrology & Urology Centre

Bengaluru, April 23rd, 2026: NU Hospitals has announced the launch of its new quaternary care facility on Mission Road, Bengaluru, strengthening access to advanced nephrology and urology services in the city’s central region.
Built on a 26-year legacy in renal sciences, the new hospital marks a significant expansion for NU Hospitals, bringing together advanced kidney care, urology, and transplant services under one roof. The facility is designed to deliver high-acuity, specialized care through a fully integrated, multidisciplinary model.
Leadership Perspectives : Dr. Venkatesh Krishnamoorthy, Chairman: “This launch is a step forward in making advanced kidney and urological care more accessible. Our focus remains on patient-first, evidencebased care while continuing to invest in infrastructure and clinical excellence”.
Dr. Prasanna Venkatesh, Managing Director: “A key highlight of this facility is its status as a fully paperless hospital both in the Inpatient and Outpatient areas. By adopting a zero-paper ecosystem, we ensure the entire patient journey—from consultation to discharge—is managed through real-time electronic medical records, enhancing both efficiency and accuracy. The hospital is also completely filmless for the Imaging services with real time PACS.”
Dr. Dilip Rangarajan, Group Medical Director: “Our strength lies in clinical outcomes driven by strong protocols and multidisciplinary collaboration. This facility enhances our ability to deliver consistent, high-quality care at scale”.
Mr. Ramesh Kannan , Senior Partner , Somerset Indus healthcare fund : “It is a privilege and honour to partner with NU in the pursuit of NU 2.0 growth plan to reach out to a larger audience. Unfortunately India is the chronic disease capital of the world and it is imperative that highly ethical and honest providers like NU manage your health and prolong quality of life offering Dialysis, Transplant, robotics, male infertility, pediatric, oncology, sub specialties excellence will meet this objective. NU-Mission Road is the beginning of this journey to bring care that matters to safeguard the health of the count” Specialized Care & Advanced Technology The Mission Road centre integrates multiple super-specialties to ensure coordinated care for complex conditions:
Urological Specialties: Uro-oncology, paediatric nephro-urology, uro-gynaecology, neurourology, and andrology.
Transplant Services: A comprehensive kidney transplant program. Digital Diagnostics: A filmless radiology department powered by cloud-based imaging enables faster diagnostics and clinical decision-making.
Clinical Innovation: The hospital offers high-volume hemodiafiltration (HDF) and single-use dialyzers to enhance safety and treatment efficiency. Infection Control & Recovery: Infection control is reinforced through bio-secure infrastructure – Kleedklad across all critical care areas.
“We are focused on delivering faster recovery and better outcomes through technology-led care,” noted Dr. Maneesh Sinha, Lead of Urology at NU-Mission Road.
Dr. Ravi Prakash Deshpande, Lead of Nephrology, added, “With the rising burden of kidney disease, timely access to specialized care is critical”.
Patient Experience & Accessibility
The hospital has introduced an integrated patient app, allowing individuals to access medical records, reports, and appointments, or request home-based services. Designed with patient comfort in mind, the facility incorporates healing-focused interiors and sustainable practices aligned with green hospital initiatives.
About NU Hospitals
NU Hospitals is a leading multi-location super-specialty institution focused on nephrology and urology. With over 26 years of experience, it is recognized for its expertise in kidney care, transplant services, and advanced urological treatment. The group operates across Bengaluru and Shivamogga in Karnataka, Ambur in Tamil Nadu, and internationally in Malé and Hulhumalé in the Maldives, extending its reach across India and beyond. Guided by a patientfirst philosophy and evidence-based clinical protocols, NU Hospitals combines experienced specialists, advanced infrastructure, and integrated digital systems to deliver consistent, highquality clinical outcomes.

ಸಂಗೀತ ನೃತ್ಯ ಕಲಾವಿದರ ಸಂಘದ ಮಹಾಸಭೆ

ಬೆಂಗಳೂರು : ಸಂಗೀತ ನೃತ್ಯ ಕಲಾವಿದರ ಸಂಘದ  ಅಧ್ಯಕ್ಷ ಶ್ರೀ ಸಾಯಿನಾರಾಯಣ ಕಲ್ಮಡ್ಕ (Kalladka) ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ (Kengeri) ಕೆಂಗೇರಿ ಶ್ರೀ ಗುರುರಾಜ ಭವನ (Sri Gururaja Bhavana) ದಲ್ಲಿ ಇತ್ತೀಚೆಗೆ ನಡೆಯಿತು. ಉಪಾಧ್ಯಕ್ಷೆ ಶ್ರೀಮತಿ ಶಾಲಿನಿ ಶ್ರೀಕಾಂತ್  (Smt. Shalini Srikanth) ಅವರು ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ವಿದ್ವಾನ್ ಸಂಜೀವ್ ಕುಮಾರ್ (Vid. Sanjeev Kumar) ಅವರಿಂದ ಹಾಗೂ ದೇಶದ ನಾನಾ ಸಂಚಾಲಕರುಗಳಿಂದ ವರದಿವಾಚನ ನಡೆಯಿತು.
ಹಿರಿಯ ವೀಣಾ ಕಲಾವಿದೆ ವಿದುಷಿ ಶ್ರೀಮತಿ ಉಷಾ ರಾಮಮೂರ್ತಿ ಅವರನ್ನು ಅಖಿಲ ಭಾರತೀಯ ಸಂಗೀತ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಂಗೀತ ನೃತ್ಯ ಕಲಾವಿದರ ಏಳಿಗೆಗಾಗಿ ಒಗ್ಗಟ್ಟಿನಿಂದ ಶ್ರಮಿಸುವುದೆಂದು ಮಹಾಸಭೆಯಲ್ಲಿ ತೀರ್ಮಾನಿಸಲಾಯಿತು.
ಒಕ್ಕೂಟದಿಂದ ನಡೆಯುವ ಆನ್ಲೈನ್ ಸಂಗೀತ ನೃತ್ಯ ಸ್ಪರ್ಧಾ ವಿಜೇತರುಗಳಿಗೆ ಬಹುಮಾನ ವಿತರಿಸಲಾಯಿತು.
ಸಂಘದ ಮೂಲಕ ಅಯೋಧ್ಯೆ ಕಾಶೀ ದೇವಾಲಯಗಳಲ್ಲಿ ನಡೆಯುತ್ತಿರುವ ಸಾಪ್ತಾಹಿಕ ಸರಣಿ ಕಾರ್ಯಕ್ರಮಗಳನ್ನು ನೀಡಿದ ಕಲಾವಿದರನ್ನು ಅಭಿನಂದಿಸಲಾಯಿತು.
ಅಧ್ಯಕ್ಷರ ಅನುಮತಿ ಮೇರೆಗೆ ಇತರ ವಿಚಾರಗಳಲ್ಲಿ ಕಲಾವಿದರುಗಳಿಗೆ ಆಗುತ್ತಿರುವ ವಿವಿಧ ಸಮಸ್ಯೆಗಳನ್ನು ಒಕ್ಕೂಟದ ಮೂಲಕ ಎದುರಿಸುವ ಕುರಿತು ಕೂಲಂಕುಷವಾಗಿ ಚರ್ಚಿಸಲಾಯಿತು.
ಸಂಘದ ಮೂಲಕ ವಿಶ್ವಸಂಗೀತ ನೃತ್ಯ ಸಮ್ಮೇಳನವನ್ನು ನಡೆಸುವುದರ ಮೂಲಕ ಜಗತ್ತಿಗೆ ಭಾರತೀಯ ಕಲೆಗಳ ವಿರಾಟ್ ಪ್ರದರ್ಶನವನ್ನು ಹಾಗೂ ಒಗ್ಗಟ್ಟನ್ನು ಪ್ರದರ್ಶಿಸುವುದು ಎಂದು ಸರ್ವಾನುಮತದಿಂದ ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ
ಮೈಸೂರು ವಿಭಾಗದ ನೂತನ ಅಧ್ಯಕ್ಷರಾದ ಡಾ. ಚಿತ್ರ ಬಿಳಿಗಿರಿ ಅವರನ್ನು ಅಭಿನಂದಿಸಲಾಯಿತು. ಹಾಗೂ ನೂತನ ಪದಾಧಿಕಾರಿಗಳ ಪರಿಚಯ ನೀಡಲಾಯಿತು. ಸಂಘದ ಅಧ್ಯಕ್ಷ ಸಾಯಿನಾರಾಯಣ ಕಲ್ಮಡ್ಕ ಮಾತನಾಡಿ ಕಲೆ ಕಲಾವಿದರ ಹಕ್ಕು ಇವುಗಳ ಉಳಿವಿಗಾಗಿ ಬೆಳವಣಿಗೆಗಾಗಿ ಸರ್ವರ ಸಹಕಾರವನ್ನೂ ಯಾಚಿಸಿದರು.
ಹಾಗೂ ಬೆಟ್ಟ ವೆಂಕಟೇಶ್ ಅವರ ವಂದಾನರ್ಪಣೆಯೊಂದಿಗೆ ಮಹಾಸಭೆ ಮುಕ್ತಾಯಗೊಂಡಿತು.

ಚಾಮರಾಜನಗರ: ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ವಿಚಾರ ಸಂಕಿರಣ

ಚಾಮರಾಜನಗರ: ತ್ರಿವಿಧ ದಾಸೋಹಿ, ಕರ್ನಾಟಕ ರತ್ನ ಡಾ. ಶಿವಕುಮಾರ ಸ್ವಾಮಿ ರವರ ಕೊಡುಗೆಗಳ ಕುರಿತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ವಿಚಾರ ಸಂಕಿರಣ ಜರುಗಿತು.
ವಿಚಾರ ಸಂಕಿರಣವನ್ನು ಕೊಳ್ಳೇಗಾಲ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೊಂಗರಹಳ್ಳಿ ನಾಗರಾಜು ಉದ್ಘಾಟಿಸಿ ಮಾತನಾಡಿ ವಿಶೇಷ ಮಹತ್ವ ಪಡೆದ ಗುರುಗಳಾಗಿದ್ದಾರೆ. ಶಿಕ್ಷಣ ,ಆರೋಗ್ಯ ಮತ್ತು ದಾಸೋಹಕ್ಕೆ ಶಿವಕುಮಾರಸ್ವಾಮಿ ಅನ್ವರ್ಥರಾಗಿದ್ದಾರೆ. ಜಾತಿ ಮತ ಪಂಥ ಧರ್ಮ ಭೇದವಿಲ್ಲದೆ ಸರ್ವರಿಗೂ ಶಿಕ್ಷಣ ಹಾಗು ದಾಸೋಹವನ್ನು ನೀಡಿ ರಾಷ್ಟ್ರದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಜಗದೀಶ್ ರವರು ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶಿವಕುಮಾರಸ್ವಾಮಿ ಅವರ ಕೊಡುಗೆಗಳ ಕುರಿತು ವಿಚಾರ ಸಂಕೀರ್ಣ ಹಮ್ಮಿಕೊಂಡಿರುವುದು ಕನ್ನಡ ಸಾಹಿತ್ಯ ಪರಿಷತ್ತಿಗೆ ಗೌರವ ತಂದಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಪದ್ಮಾಪುರುಷೋತ್ತಮ್ ,ಬೂದಿ ತಿಟ್ಟು ಲಿಂಗರಾಜು, ಬಿಕೆ ಆರಾಧ್ಯ ಲಕ್ಷ್ಮಿ ನರಸಿಂಹ, ಶಿವಕುಮಾರ ಸ್ವಾಮೀ ಅವರ ಕುರಿತು ಮಾತನಾಡಿ 111 ವರ್ಷಗಳ ಕಾಲ ಬದುಕಿ ಬಾಳಿ ವಿದ್ಯಾರ್ಥಿಗಳ ಬಾಳಿನಲ್ಲಿ ಬೆಳಕಾಗಿ ಕನ್ನಡ ನಾಡಿನ ಹಿರಿಮೆಯನ್ನು ಹೆಚ್ಚಿಸಿದ ಮಹಾದಾಸೋಹಿ. ಪ್ರೀತಿ ವಾತ್ಸಲೆಗಳ ಮಮಕಾರದ ವ್ಯಕ್ತಿಯಾಗಿದ್ದವರು ಸರಳತೆಯಿಂದ ಶ್ರೀ ಮಠವನ್ನು ಬೆಳೆಸಿದವರು. ಭಕ್ತರ ಕಾಣಿಕೆ ಮಠದ ಆಧಾರವೆಂದು ನಯವಾಗಿ ಸರ್ಕಾರದ ಅನುದಾನವನ್ನು ನಿರಾಕರಿಸಿದ ಮಹಾನ್ ವ್ಯಕ್ತಿ ಎಂದರು.

ಸಭೆಯ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಉಪನ್ಯಾಸಕರಾದ ಸುರೇಶ್ ಎನ್ ಋಗ್ವೇದಿ ವಹಿಸಿ ಮಾತನಾಡಿ ಶಿವಕುಮಾರ ಸ್ವಾಮಿಯವರು ಘನಮನ ಸಂಪನ್ನರು. ನಡೆದಾಡುವ ದೇವರೆಂದೇ ಜನಮಾನಸದಲ್ಲಿ ಯುಗ ಸಿರಿಯಾಗಿ ಬೆಳಗಿದವರು. ಸರ್ವರಲ್ಲೂ ಶಿವನನ್ನು ಕಂಡವರು. ಮಾತೃ ಹೃದಯಿಗಳಾದ ಶಿವಕುಮಾರ ಸ್ವಾಮಿಯವರು ಕೋಟ್ಯಾಂತರ ನೊಂದ ಹಾಗೂ ಹಸಿದ ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹ ಮತ್ತು ಅನ್ನದಾಸೋಹವನ್ನು ನೀಡಿ ಜಗತ್ತಿಗೆ ಬೆಳಕಾದವರು. ಅವರ ಸ್ಮರಣೆ ನಮ್ಮ ಪುಣ್ಯ. ಅವರು ನಮ್ಮ ಕಾಲದಲ್ಲಿ ನಮಗೆ ದರ್ಶನ ನೀಡಿಆಶೀರ್ವಾದ ನೀಡಿದ ಪುಣ್ಯವಂತ ದೈವಿಕರು ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ರವಿಚಂದ್ರ ಪ್ರಸಾದ್,ಶಿವಲಿಂಗಮೂರ್ತಿ, ಸರಸ್ವತಿ, ಸುರೇಶಗೌಡ,ಪರಶಿವ ಶೆಟ್ಟಿ, ಮಹದೇವಸ್ವಾಮಿ, ರಂಗಸ್ವಾಮಿ, ಶೇಖರ್, ಮಹೇಶ, ಶಿವಶೆಟ್ಟಿ ಇದ್ದರು.
ಕನ್ನಡ ಭಕ್ತಿಗೀತೆಗಳ ಗೀತ ಗಾಯನವನ್ನು ವಚನ, ಗಮಕವನ್ನು ಹಾಡುವ ಮೂಲಕ ಶಿವಕುಮಾರ ಸ್ವಾಮಿಯವರನ್ನು ಸ್ಮರಿಸಿಕೊಳ್ಳಲಾಯಿತು

ಡಾ.ಶ್ರೀ.ಶಿವಕುಮಾರ ಸ್ವಾಮೀಜಿ 19ನೇ ಜಯಂತೋತ್ಸವ: ರಾಷ್ಟ್ರಪತಿಗಳೊಂದಿಗೆ ರಾಜ್ಯಪಾಲರು ಭಾಗಿ

ತುಮಕೂರು / ಬೆಂಗಳೂರು, ಏಪ್ರಿಲ್ 1 (ಕರ್ನಾಟಕ ವಾರ್ತೆ):   ಹಸಿದವರಿಗೆ ಆಹಾರ, ಜಿಜ್ಞಾಸುಗಳಿಗೆ ಜ್ಞಾನ ಮತ್ತು ಸಮಾಜಕ್ಕೆ ಮೌಲ್ಯಗಳನ್ನು ಒದಗಿಸುವುದರಲ್ಲಿ ನಿಜವಾದ ಆಧ್ಯಾತ್ಮಿಕತೆ ಅಡಗಿದೆ ಎಂಬುದನ್ನ ಪ್ರದರ್ಶಿಸಿದವರು ಡಾ.ಶ್ರೀ.ಶಿವಕುಮಾರ ಸ್ವಾಮೀಜಿ (Sri Shivakumar Swamiji) ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ (Gresident Thavarchand Gehlot) ಹೇಳಿದರು.

ಸಿದ್ದಗಂಗಾ ಮಠದಲ್ಲಿ ಆಯೋಜಿಸಿದ್ದ 119ನೇ ಜಯಂತೋತ್ಸವದಲ್ಲಿ ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರೊಂದಿಗೆ ಭಾಗವಹಿಸಿ ಮಾತನಾಡಿದರು. “ಗೌರವಾನ್ವಿತ ರಾಷ್ಟ್ರಪತಿಯವರು ಈ ಕಾರ್ಯಕ್ರಮದಲ್ಲಿ ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಇಲ್ಲಿ ನಿಮ್ಮ ಉಪಸ್ಥಿತಿ ಇರುವುದು ತ್ರಿವಿಧ ದಾಸೋಹಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಗೌರವವಾಗಿದೆ, ಜೊತೆಗೆ ಭಾರತದ ಆತ್ಮವನ್ನು ರೂಪಿಸಿದ ಮಹಾನ್ ಸಂತ ಸಂಪ್ರದಾಯಕ್ಕೆ ರಾಷ್ಟ್ರದ ಗೌರವವಾಗಿದೆ ಎಂದರು.

ಪರಮಪೂಜ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರು ತಮ್ಮ ಇಡೀ ಜೀವನವನ್ನು ಅನ್ನದಾಸೋಹಿ, ವಿದ್ಯಾದಾಸೋಹಿ ಮತ್ತು ಅಕ್ಷರದಾಸೋಹ ಎಂಬ ತ್ರಿವಳಿ ತತ್ವಗಳಿಗೆ ಮುಡಿಪಾಗಿಟ್ಟರು. ಅವರಿಗೆ ಸೇವೆಯು ಔಪಚಾರಿಕ ಕರ್ತವ್ಯವಾಗಿರಲಿಲ್ಲ, ಬದಲಾಗಿ ಆಧ್ಯಾತ್ಮಿಕ ಅಭ್ಯಾಸವಾಗಿತ್ತು. ಅವರು ಜಾತಿ ಮತ್ತು ಧರ್ಮವನ್ನು ಮೀರಿ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದ ನಿಜವಾದ ಮಾನವೀಯತೆಯ ಸಂಕೇತವಾಗಿದ್ದರು. “ಸಬ್ ಕಾ ಸಾಥ್, ಸಬ್ ಕಾ ವಿಕಾಸ್” ತತ್ವಶಾಸ್ತ್ರದಿಂದ ಮಾರ್ಗದರ್ಶಿಸಲ್ಪಟ್ಟ ಅವರ ಕೆಲಸಕ್ಕಾಗಿ ಅವರಿಗೆ ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳು ಮತ್ತು ಗೌರವಗಳು ದೊರೆತಿವೆ ಮತ್ತು 2015 ರಲ್ಲಿ ಭಾರತ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಯಿತು ಎಂದು ಹೇಳಿದರು.

ಶ್ರೀ ಸಿದ್ಧಗಂಗಾ ಮಠವು ಸಾಮಾಜಿಕ-ಆರ್ಥಿಕ ಪರಿವರ್ತನೆಯ ಮೂಲಕ ಸಮಾಜವನ್ನು ಪರಿವರ್ತಿಸುವ ಮಹತ್ವದ ಕೆಲಸವನ್ನು ನಿರ್ವಹಿಸುತ್ತಿದೆ. ಸಾಮಾಜಿಕ ಸಮಾನತೆ, ಸಮೃದ್ಧಿ, ಶ್ರೇಷ್ಠತೆ, ಸಬಲೀಕರಣ, ಉದ್ಯಮಶೀಲತೆ ಮತ್ತು ಜ್ಞಾನೋದಯಕ್ಕಾಗಿ ಅಮೂಲ್ಯವಾದ ಶಿಕ್ಷಣವನ್ನು ಒದಗಿಸುತ್ತಿದೆ. ಸಾಮಾಜಿಕ ಮತ್ತು ಧಾರ್ಮಿಕ ಪ್ರಗತಿಗೆ ಮಠದ ಕೊಡುಗೆ ಶ್ಲಾಘನೀಯ ಮತ್ತು ಶ್ಲಾಘನೀಯ. ಜಗದ್ಗುರು ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿಯವರು ತಮ್ಮ ದೂರದೃಷ್ಟಿ ಮತ್ತು ಸದ್ಭಾವನೆಯಿಂದ, ಮಠದ ಶ್ರೇಷ್ಠ ಸಂಪ್ರದಾಯಗಳು ಮತ್ತು ಪ್ರಯತ್ನಗಳನ್ನು ಮುಂದಕ್ಕೆ ಕೊಂಡೊಯ್ಯುತ್ತಿದ್ದಾರೆ ಮತ್ತು ಶ್ರೀ ಮಠದ ಸೇವಾ ಮನೋಭಾವ ಮತ್ತು ಖ್ಯಾತಿಯನ್ನು ಜಾಗತಿಕ ಆಯಾಮಗಳಿಗೆ ಕೊಂಡೊಯ್ಯುತ್ತಿದ್ದಾರೆ ಎಂದು ಶ್ಲಾಘಿಸಿದರು.
ಸಮಾರಂಭದಲ್ಲಿ ಗಣ್ಯರು ಉಪಸ್ಥಿತರಿದ್ದರು.

ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆತ್ಮೀಯ ಬೀಳ್ಕೊಡುಗೆ

ಬೆಂಗಳೂರು, ಏಪ್ರಿಲ್ 01, (ಕರ್ನಾಟಕ ವಾರ್ತೆ) : ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಾದ (Indian President) ಶ್ರೀಮತಿ ದ್ರೌಪದಿ ಮುರ್ಮು (Dr. Draupadi Murmu) ಅವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Gehlot) ಅವರಿಂದ ಆತ್ಮೀಯ ಬೀಳ್ಕೊಡುಗೆ
ತುಮಕೂರಿನ ಶ್ರೀ ಸಿದ್ದಗಂಗಾ ಮಠದಲ್ಲಿ ಆಯೋಜಿಸಲಾಗಿದ್ದ  ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ 119 ನೇ ಜಯಂತೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ನವದೆಹಲಿಗೆ ಪ್ರಯಾಣಿಸಿದ ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ರಾಜ್ಯದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು ಹೆಚ್.ಎ.ಎಲ್ ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಬೀಳ್ಕೊಟ್ಟರು.

ಈ ಸಂದರ್ಭದಲ್ಲಿ ಕೇಂದ್ರ ನವೀಕರಿಸಬಹುದಾದ ಇಂಧನ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರಾದ ಪ್ರಹ್ಲಾದ್ ಜೋಶಿ, ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಇಲಾಖೆಯ ರಾಜ್ಯ ಖಾತೆ  ಸಚಿವರಾದ ವಿ. ಸೋಮಣ್ಣ, ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವರಾದ ರಾಮಲಿಂಗಾ ರೆಡ್ಡಿ,  ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಉಮಾ ಮಹದೇವನ್, ಕರ್ನಾಟಕ ಪೊಲೀಸ್ ಮಹಾನಿರ್ದೇಶಕರಾದ ಡಾ.ಎಂ.ಎ. ಸಲೀಂ, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್, ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಗದೀಶ್ ಜಿ,  ಸೇರಿದಂತೆ ಹಿರಿಯ ಅಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು.

ಕರಾಮುವಿ (KSOU) 2025-26ನೇ ಸಾಲಿನ ಜನವರಿ ಆವೃತ್ತಿಯ ಪ್ರವೇಶಾತಿ ವಿಸ್ತರಣೆ

Bangalore : (KSOU)ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು 2025-26ರ ಜನವರಿ ಆವೃತ್ತಿಗೆ ಯುಜಿಸಿ ಅನುಮೋದಿತ ಶಿಕ್ಷಣ ಕ್ರಮಗಳ ಪ್ರವೇಶಾತಿಗಾಗಿ ಅರ್ಜಿ ಆಹ್ವಾನಿಸಿದ್ದು ಸ್ನಾತಕ ಕೋರ್ಸುಗಳಾದ ಬಿ.ಎ., ಬಿ.ಕಾಂ., ಬಿ.ಬಿ.ಎ., ಬಿ.ಸಿ.ಎ., ಬಿ.ಎಸ್.ಡಬ್ಲ್ಯೂ., ಬಿ.ಎಸ್ಸಿ., ಬಿ.ಲಿಬ್.ಐ. ಎಸ್ಸಿ. ಮತ್ತು   ಸ್ನಾತಕೋತ್ತರ ಕೋರ್ಸುಗಳಾದ ಎಂ.ಎ., ಎಂ.ಕಾಂ., ಎಂ.ಬಿ.ಎ., ಎಂ.ಸಿ.ಎ., ಎಂ.ಎಸ್.ಡಬ್ಲ್ಯೂ., ಎಂ.ಎಸ್ಸಿ., ಎಂ.ಲಿಬ್.ಐ.ಎಸ್ಸಿ.  ಹಾಗೂ ಪಿಜಿ ಡಿಪ್ಲೊಮಾ, ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಶಿಕ್ಷಣ ಕ್ರಮಗಳಿಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಯುಜಿಸಿ ಆದೇಶದ ಮೇರೆಗೆ ದಿನಾಂಕ: 10.04.2026 ರವರೆಗೆ ಪ್ರವೇಶಾತಿ ದಿನಾಂಕವನ್ನು ವಿಸ್ತರಿಸಲಾಗಿದ್ದು, ವಿಶ್ವವಿದ್ಯಾನಿಲಯದ ಅಧಿಕೃತ ವೆಬ್ ಸೈಟ್ www.ksoumysuru.ac.in ದಲ್ಲಿ ಲಭ್ಯವಿರುವ ವಿವರಣಾ ಪುಸ್ತಕದಲ್ಲಿ ಎಲ್ಲಾ ವಿವರಗಳನ್ನು ನೀಡಿದ್ದು, ಆಸಕ್ತ ಅರ್ಹ ವಿದ್ಯಾರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ ಪ್ರಾದೇಶಿಕ ಕೇಂದ್ರಕ್ಕೆ ಭೇಟಿ ನೀಡಿ ಪ್ರವೇಶಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಕೊಳ್ಳಬೇಕೆಂದು ನಿರ್ದೇಶಕರಾದ ಡಾ. ರೋಹಿತ್ ಹೆಚ್.ಎಸ್. ರವರು (Dr. Rohith H.S.) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹೆಚ್ಚಿನ ವಿವರಗಳಿಗೆ ಪ್ರಾದೇಶಿಕ ನಿರ್ದೇಶಕರು, ಬೆಂಗಳೂರು ಪ್ರಾದೇಶಿಕ ಕೇಂದ್ರ-01, ಮೊದಲನೇ ಮಹಡಿ, ಕೆ.ಎಸ್.ಆರ್.ಟಿ.ಸಿ. ಸ್ಯಾಟಲೈಟ್‌ ಬಸ್‌ ನಿಲ್ದಾಣ, ಮೈಸೂರು ರಸ್ತೆ, ಬಾಪೂಜಿನಗರ, ಬೆಂಗಳೂರು-26, ಕಛೇರಿ ದೂರವಾಣಿ ಸಂಖ್ಯೆ: 080-26603664 ಹಾಗೂ 98805-26439/90195-26439 ಅನ್ನು ಸಂಪರ್ಕಿಸಬಹುದಾಗಿದೆ.

समस्त जैन समाज बेंगलुरु द्वारा तीर्थंकर महावीर जन्म कल्याणक महोत्सव

समस्त जैन समाज बेंगलुरु द्वारा तीर्थंकर महावीर जन्म कल्याणक महोत्सव के उपलक्ष में स्वतंत्रता उद्यान में आयोजित भव्य एवं विशाल कार्यक्रम में जीतो जैन इंटरनेशनल ट्रेड ऑर्गेनाइजेशन द्वारा लगाए स्टॉल स्थल से जन्म समूह को आगामी 9 अप्रैल को विश्व में शांति के उद्देश्य से होने वाले नवकार महामंत्र सामूहिक जाप में जुड़ने का आह्वान करते हुए महेंद्र मुणोत। साथ में जीतो की टीम। धन्यवाद

ದೇವಾಲಯದ ಪಾವಿತ್ರ್ಯ ಕಾಪಾಡಲು ಪ್ರೀ-ವೆಡ್ಡಿಂಗ್ ಶೂಟಿಂಗ್‌ಗಳನ್ನು ನಿಷೇದಿಸಿ !

ಧಾರ್ಮಿಕದತ್ತಿ ಇಲಾಖೆಯ ಸಚಿವ (Ramalinga Reddy) ರಾಮಲಿಂಗ ರೆಡ್ಡಿಯವರಿಗೆ ಮನವಿ
ಬೆಂಗಳೂರು : ಕರ್ನಾಟಕ ರಾಜ್ಯದ ದೇವಸ್ಥಾನಗಳು (Karnataka temples) ಧಾರ್ಮಿಕ ನಂಬಿಕೆ, ಸಂಸ್ಕೃತಿ ಹಾಗೂ ಆಧ್ಯಾತ್ಮಿಕ ಪರಂಪರೆಯ ಪ್ರತೀಕಗಳಾಗಿವೆ. ಇವು ಭಕ್ತರ ಶ್ರದ್ಧೆಯ ಕೇಂದ್ರಗಳಾಗಿದ್ದು, ಶಾಂತಿ, ಭಕ್ತಿ, ದೈವಿ ಚೈತನ್ಯ ಮತ್ತು ಸಂಪ್ರದಾಯದ ಸಂಕೇತಗಳಾಗಿವೆ. ಇಂತಹ ಪವಿತ್ರ ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರಿ ವೆಡ್ಡಿಂಗ್ ಶೂಟಿಂಗ್ ಗಳನ್ನು ನಿಷೇದಿಸಿ ಕಾನೂನು ರೂಪಿಸಬೇಕೆಂದು ಕರ್ನಾಟಕ ಮಂದಿರ ಮಹಾಸಂಘದ ವತಿಯಿಂದ ಧಾರ್ಮಿಕ ದತ್ತಿ ಇಲಾಖೆಯ ಸಚಿವರಾದ ಮಾನ್ಯ ಶ್ರೀ. ರಾಮಲಿಂಗ ರೆಡ್ಡಿಯವರಿಗೆ ಮನವಿ ಸಲ್ಲಿಸಲಾಯಿತು. ಈ ಸಂಧರ್ಭದಲ್ಲಿ ಕರ್ನಾಟಕ ಮಂದಿರ ಮಹಾಸಂಘದ ರಾಜ್ಯ ಸಂಘಟಕರಾದ ಶ್ರೀ. ಮೋಹನ್ ಗೌಡ, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿಕಟಪೂರ್ವ ನಿರ್ದೇಶಕರಾದ ಶ್ರೀ. ರಾಘವೇಂದ್ರ ಭಟ್, ಅಖಿಲ ಕರ್ನಾಟಕ ಬ್ರಾಹ್ಮಣ ಸಂಘದ ನಿರ್ದೇಶಕರಾದ ಶ್ರೀ. ಬಿ. ಎನ್.ಮಹೇಶ್, ಹಾಗೂ ಶ್ರೀ. ಶ್ರೀನಿವಾಸ್, ಶ್ರೀ. ವಿಕ್ರಮ್ ಶೆಟ್ಟಿ, ಶ್ರೀ. ಪುರುಷೋತ್ತಮ್ ಸೇರಿದಂತೆ ಮುಂತಾದ ಸಂಘಟನೆಯರು ಉಪಸ್ಥಿತರಿದ್ದರು.
ಇತ್ತೀಚೆಗೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಟ್ಟದ ಬೈರವೇಶ್ವರ ದೇವಸ್ಥಾನದಲ್ಲಿ ಕೆಲವರು ದೇವಸ್ಥಾನದ ಒಳಭಾಗದಲ್ಲಿ ಚಪ್ಪಲಿ ಧರಿಸಿ ಅಸಭ್ಯ ರೀತಿಯಲ್ಲಿ ಪ್ರೀ-ವೆಡ್ಡಿಂಗ್ ಫೋಟೋಶೂಟಿಂಗ್ ನಡೆಸಿದ ಘಟನೆ ವರದಿಯಾಗಿದೆ. ಈ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಅರ್ಚಕರು ಹಾಗೂ ಸ್ಥಳೀಯ ಭಕ್ತರ ವಿರುದ್ಧ ಅವಾಚ್ಯ ಶಬ್ದ ಬಳಕೆ ಮತ್ತು ಅಸಭ್ಯ ವರ್ತನೆ ನಡೆದಿರುವುದು ಅತ್ಯಂತ ಖಂಡನೀಯವಾಗಿದೆ.
ಇಂತಹ ಘಟನೆಗಳು ಇತ್ತೀಚಿನ ದಿನಗಳಲ್ಲಿ ರಾಜ್ಯದ ಅನೇಕ ದೇವಸ್ಥಾನಗಳಲ್ಲಿ ನಡೆಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ದೇವಸ್ಥಾನಗಳ ಪ್ರಾಂಗಣದಲ್ಲಿ ಯಾವುದೇ ಅನುಮತಿ ಇಲ್ಲದೆ ಆಶ್ಲೀಲ, ಅಸಭ್ಯ ಅಥವಾ ಸಂಪ್ರದಾಯ ವಿರುದ್ಧ ಉಡುಪುಗಳಲ್ಲಿ ಪ್ರೀ-ವೆಡ್ಡಿಂಗ್ ಶೂಟಿಂಗ್, ರೀಲ್ಸ್ ನಿರ್ಮಾಣ ಇತ್ಯಾದಿ ಚಟುವಟಿಕೆಗಳು ಹೆಚ್ಚಾಗುತ್ತಿವೆ. ದೇವಸ್ಥಾನಗಳನ್ನು ವೈಯಕ್ತಿಕ ಪ್ರಚಾರ, ಸಾಮಾಜಿಕ ಜಾಲತಾಣದ ಲೈಕ್ಸ್ ಮತ್ತು ವೀಕ್ಷಣೆಗಳಿಗಾಗಿ ಬಳಸುವುದು ಧಾರ್ಮಿಕ ಸ್ಥಳಗಳ ಗೌರವಕ್ಕೆ ಧಕ್ಕೆ ತರುವುದಲ್ಲದೆ, ಅವುಗಳ ವ್ಯಾಪಾರೀಕರಣಕ್ಕೂ ಕಾರಣವಾಗುತ್ತಿದೆ. ಅದಲ್ಲದೇ ಭಕ್ತಾಧಿಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡಲಾಗುತ್ತಿದೆ.
ಇಂತಹ ಕೃತ್ಯಗಳು ಕೆಳಗಿನ ಕಾನೂನು ಪ್ರಕಾರ ಗಂಭೀರ ಅಪರಾಧವಾಗಿರುತ್ತದೆ
1.ಭಾರತೀಯ ಸಂವಿಧಾನದ ಕಲಂ 25 ಮತ್ತು 26 : ಧಾರ್ಮಿಕ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸಂಸ್ಥೆಗಳ ನಿರ್ವಹಣೆಯ ಹಕ್ಕುಗಳನ್ನು ಭಕ್ತರಿಗೆ ಹಾಗೂ ಸಂಸ್ಥೆಗಳಿಗೆ ನೀಡುತ್ತದೆ. ದೇವಸ್ಥಾನಗಳ ಪಾವಿತ್ರ್ಯಕ್ಕೆ ಧಕ್ಕೆ ತರುವ ಚಟುವಟಿಕೆಗಳು ಈ ಹಕ್ಕುಗಳಿಗೆ ವಿರುದ್ಧವಾಗಿರುತ್ತವೆ.
2.ಭಾರತೀಯ ನ್ಯಾಯ ಸಂಹಿತೆ 2023ರ ಪ್ರಕಾರ: 
ಸೆಕ್ಷನ್ 298 – ಧಾರ್ಮಿಕ ಸ್ಥಳಗಳನ್ನು ಅಪವಿತ್ರಗೊಳಿಸುವುದು ಅಥವಾ ಅವುಗಳಿಗೆ ಹಾನಿ ಮಾಡುವುದು ದಂಡನೀಯ ಅಪರಾಧ.
ಸೆಕ್ಷನ್ 299 – ಧಾರ್ಮಿಕ ಭಾವನೆಗಳನ್ನು ಉದ್ದೇಶಪೂರ್ವಕವಾಗಿ ಅವಮಾನಿಸುವ ಕೃತ್ಯಗಳು ಗಂಭೀರ ಅಪರಾಧವಾಗಿದೆ.
ಸೆಕ್ಷನ್ 270 – ಸಾರ್ವಜನಿಕ ತೊಂದರೆ (Public Nuisance) ನೀಡುವುದು. ಸೆಕ್ಷನ್ 352 – ಉದ್ದೇಶಪೂರ್ವಕ ಅವಮಾನದಿಂದ ಶಾಂತಿ ಭಂಗ ಮಾಡುವುದು.
3.ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಅಧಿನಿಯಮ, 1997 : ದೇವಸ್ಥಾನಗಳ ಆಡಳಿತ, ಶಿಸ್ತು ಮತ್ತು ಪಾವಿತ್ರ್ಯ ಕಾಪಾಡುವ ಜವಾಬ್ದಾರಿ ಸಂಬಂಧಿತ ಅಧಿಕಾರಿಗಳ ಮೇಲಿದೆ.
ಕರ್ನಾಟಕ ಮಂದಿರ ಮಹಾಸಂಘದ ಬೇಡಿಕೆಗಳು :
1.ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿರುವ ಎಲ್ಲಾ ದೇವಸ್ಥಾನಗಳಲ್ಲಿ ಪ್ರೀ-ವೆಡ್ಡಿಂಗ್ ಫೋಟೋ ಹಾಗೂ ವೀಡಿಯೋ ಶೂಟಿಂಗ್‌ಗಳಿಗೆ ಸಂಪೂರ್ಣ ನಿಷೇಧ ವಿಧಿಸುವುದು.
2.ದೇವಸ್ಥಾನಗಳಲ್ಲಿ ಫೋಟೋಗ್ರಫಿ/ವೀಡಿಯೋಗ್ರಫಿಗೆ ಸಂಬಂಧಿಸಿದಂತೆ ಸ್ಪಷ್ಟ ಮಾರ್ಗಸೂಚಿಗಳನ್ನು ಪ್ರಕಟಿಸಿ ಕಟ್ಟುನಿಟ್ಟಾಗಿ ಜಾರಿಗೆ ತರುವುದು.
3.ನಿಯಮ ಉಲ್ಲಂಘಿಸುವವರ ವಿರುದ್ದ ತಕ್ಷಣದ ಕಾನೂನು ಕ್ರಮ ಕೈಗೊಳ್ಳುವ ವ್ಯವಸ್ಥೆ ರೂಪಿಸುವುದು.
4.ದೇವಸ್ಥಾನ ಆಡಳಿತ ಮಂಡಳಿ, ಅರ್ಚಕರು ಹಾಗೂ ಭದ್ರತಾ ಸಿಬ್ಬಂದಿಗೆ ನಿಯಮ ಜಾರಿಗೆ ಅಗತ್ಯ ಅಧಿಕಾರ ನೀಡುವುದು.
5.ದೇವಸ್ಥಾನಗಳ ಪ್ರವೇಶ ದ್ವಾರಗಳಲ್ಲಿ “ಪ್ರೀ-ವೆಡ್ಡಿಂಗ್ ಶೂಟ್ ನಿಷೇಧ'” ಕುರಿತು ಸ್ಪಷ್ಟ ಸೂಚನಾ ಫಲಕಗಳನ್ನು ಆಳವಡಿಸುವುದು.
6.ಸಾಮಾಜಿಕ ಜಾಲತಾಣಗಳಲ್ಲಿ ದೇವಸ್ಥಾನಗಳ ದುರುಪಯೋಗವನ್ನು ತಡೆಯಲು ನಿಗಾ ಮತ್ತು ನಿಯಂತ್ರಣ ಕ್ರಮಗಳು ಕೈಗೊಳ್ಳುವುದು.
ದೇವಸ್ಥಾನಗಳು ಪೂಜೆ, ಭಕ್ತಿ ಮತ್ತು ಆಧ್ಯಾತ್ಮಿಕ ಶಾಂತಿಯ ಕೇಂದ್ರಗಳಾಗಿದ್ದು, ಇವುಗಳನ್ನು ವಾಣಿಜ್ಯ ಅಥವಾ ಮನರಂಜನಾ ಚಟುವಟಿಕೆಗಳಿಗೆ ಬಳಸುವುದು ಯೋಗ್ಯವಲ್ಲ. ದೇವಸ್ಥಾನಗಳ ಪಾವಿತ್ರ್ಯ ಮತ್ತು ಗೌರವವನ್ನು ಕಾಪಾಡುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ಕಾನೂನು ಮತ್ತು ಆಡಳಿತಾತ್ಮಕ ಕ್ರಮಗಳನ್ನು ಕೈಗೊಂಡು ದೇವಸ್ಥಾನಗಳ ಗೌರವವನ್ನು ಕಾಪಾಡುವಂತೆ ಮನವಿ ಸಲ್ಲಿಸಲಾಯಿತು.
ಮನವಿಗೆ ಸಕರಾತ್ಮಕವಾಗಿ ಪ್ರತಿಕ್ರಿಯಿಸಿದ ಶ್ರೀ. ರಾಮಲಿಂಗ ರೆಡ್ಡಿಯವರು ಇದರ ಬಗ್ಗೆ ಶೀಘ್ರದಲ್ಲಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಆಶ್ವಾಸನೆ ನೀಡಿದರು.

ಎಪಿಎಸ್.ನಿಂದ  ಕಿಡ್‌.ಝೀ ಪ್ರೀ-ಸ್ಕೂಲ್  ಪ್ರಾರಂಭ

ಬೆಂಗಳೂರು: ಶಿಕ್ಷಣ (Education) ಕ್ಷೇತ್ರದಲ್ಲಿ 91 ವರ್ಷಗಳಿಂದ ಸಾರ್ಥಕ ಸೇವೆ ಸಲ್ಲಿಸುತ್ತಿರುವ ಆಚಾರ್ಯ ಪಾಠಶಾಲಾ ಎಜುಕೇಶನಲ್ ಟ್ರಸ್ಟ್ (Acharya Pathashala Educational Trust) ಇದೀಗ ಕಿಡ್‌.ಝೀ ಪ್ರೀ-ಸ್ಕೂಲ್   (Kidzee-Pre-School) ಪ್ರಾರಂಭಿಸುತ್ತಿದೆ.

1.5 ರಿಂದ 3 ವರ್ಷದ ಮಕ್ಕಳಿಗಾಗಿ  ರೂಪಿಸಲಾಗಿರುವ ಈ ಪ್ರೀ-ಸ್ಕೂಲ್, ಮಕ್ಕಳಿಗೆ ಸಂತೋಷ ಮತ್ತು ಆಸಕ್ತಿದಾಯಕ ಶಿಕ್ಷಣ ನೀಡುವ ಉದ್ದೇಶ ಹೊಂದಿದೆ. ಆಟದ ಮೂಲಕ ಕಲಿಯುವ, ಒಟ್ಟಿಗೆ ಬೆಳೆಯುವ, ಸ್ನೇಹದ ವಾತಾವರಣದ ಜೊತೆಗೆ ಜೀವನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ, ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸುವ ಪಠ್ಯ ಕ್ರಮವನ್ನು ರೂಪಿಸಲಾಗಿದೆ.
ಕಟ್ಟಡದಲ್ಲಿ ಸುರಕ್ಷಿತ ಮತ್ತು ಮನೆಯಂತಿರುವ ವಾತಾವರಣದಲ್ಲಿ ಪ್ರೀ-ಸ್ಕೂಲ್ ಆರಂಭಿಸಲಾಗುತ್ತಿದೆ. ಮಕ್ಕಳಲ್ಲಿ ಕುತೂಹಲ ಮತ್ತು ಆತ್ಮವಿಶ್ವಾಸವನ್ನು ಉತ್ತೇಜಿಸುವ ಸ್ನೇಹಪೂರ್ಣ ವಾತಾವರಣವನ್ನು ಇಲ್ಲಿ ಸೃಷ್ಟಿಸಲಾಗಿದೆ ಎಂದು ಎಪಿಎಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸಿಎ ಡಾ. ವಿಷ್ಣು ಭರತ್ ಅಲಂಪಲ್ಲಿ ತಿಳಿಸಿದ್ದಾರೆ.

ಎಪಿಎಸ್ ಪ್ರತಿಯೊಬ್ಬ ಮಗುವನ್ನೂ “ಚಿಕ್ಕ ಮಿನುಗುವ ನಕ್ಷತ್ರ”ವಾಗಿ ಭವಿಷ್ಯದ “ಎಪಿಎಸ್ ಸೂಪರ್ ಸ್ಟಾರ್”ಗಳಾಗಿ ರೂಪಿಸುತ್ತದೆ. ಎಪಿಎಸ್ ನಲ್ಲಿ ಶಿಕ್ಷಣವು ಕೇವಲ ಪಾಠಪುಸ್ತಕಗಳಿಗೆ ಸೀಮಿತವಾಗಿಲ್ಲ. “ಜೀವನ” ಎಂಬ ಮಹತ್ವದ ಪರೀಕ್ಷೆಗೆ ಸಿದ್ಧಗೊಳಿಸಲಾಗುತ್ತದೆ. ಎಪಿಎಸ್ ನಲ್ಲಿ ಪ್ರವೇಶ ಪಡೆದ ಮಕ್ಕಳು ತಮ್ಮ ಪೂರ್ಣ ಶಿಕ್ಷಣವನ್ನು ಇದೇ ಸಂಸ್ಥೆಯಲ್ಲೇ ಮುಂದುವರಿಸಬಹುದಾಗಿದೆ. ಕೆಜಿಯಿಂದ ಪಿಜಿವರೆಗೆ ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಮತ್ತು ಪಿಎಚ್ಡಿ ಶಿಕ್ಷಣ ಲಭ್ಯವಿದೆ.
ಆಟದ ಮೂಲಕ ಸಮಗ್ರ ಅಭಿವೃದ್ಧಿ, ಶೈಕ್ಷಣಿಕ ಮತ್ತು ಮೌಲ್ಯಾಧಾರಿತ ಶಿಕ್ಷಣ, ಒಂದೇ ಸಂಸ್ಥೆಯಲ್ಲಿ ನಿರಂತರ ಶಿಕ್ಷಣ. ಸೃಜನಶೀಲತೆ, ಸಂವಹನ ಮತ್ತು ಆತ್ಮವಿಶ್ವಾಸ ಅಭಿವೃದ್ಧಿ, 91 ವರ್ಷಗಳ ಶೈಕ್ಷಣಿಕ ಪರಂಪರೆ, ಎಪಿಎಸ್ ನಲ್ಲಿ ನಾವು ಕೇವಲ ಶಿಕ್ಷಣ ನೀಡುವುದಲ್ಲ – ನಾವು ಮಕ್ಕಳನ್ನು ಪ್ರೇರೇಪಿಸುತ್ತೇವೆ, ಅವರ ವ್ಯಕ್ತಿತ್ವವನ್ನು ರೂಪಿಸುತ್ತೇವೆ ಮತ್ತು ಭವಿಷ್ಯದ ನಾಯಕರನ್ನು ನಿರ್ಮಿಸುತ್ತೇವೆ  ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9880701701 ಎಂದು ತಿಳಿಸಿದ್ದಾರೆ

ಚಿತ್ರಕಲೆ, ಶಿಲ್ಪಿಕಲೆ, ರಂಗಭೂಮಿ ವಿವಿಧ ಕಲೆಗಳಲ್ಲಿ ನಿರತರಾಗಿರುವ ಕಲಾವಿದರಿಗೆ ಪ್ರೋತ್ಸಾಹ

BENGALURU : ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ (Karnataka Chitrakala Parishat) ಸಭಾಂಗಣದಲ್ಲಿ ಕರ್ನಾಟಕ ಇಂಟರ್ ನ್ಯಾಷವಲ್ ಆರ್ಟಿಸ್ಟ್ ವಿಲೇಜ್ ಚಾರಿಟೇಬಲ್ ಟ್ರಸ್ಟ್ (Karnataka International Artist Village Charitable Trust) ಉದ್ಘಾಟನೆ ಮತ್ತು ವೆಬ್ ಸೈಟ್ ಬಿಡುಗಡೆ ಹಾಗೂ ಜೀವಮಾನ ಶೇಷ್ಠ ಕಲಾ ಸಾಧಕರ ಪ್ರಶಸ್ತಿ ಹಾಗೂ ಹಿರಿಯ, ಕಿರಿಯ ಕಲಾವಿದರ ಚಿತ್ರ ಪ್ರದರ್ಶನ ಕಾರ್ಯಕ್ರಮ.

ಸಚಿವರಾದ ಹೆಚ್.ಕೆ.ಪಾಟೀಲ್ ರವರು, ವಿಧಾನಪರಿಷತ್ ಸದಸ್ಯರಾದ ಪುಟ್ಟಣ್ಣ, ಕರ್ನಾಟಕ ಲಲಿತಾ ಕಲಾ ಅಕಾಡೆಮಿ ಅಧ್ಯಕ್ಷರಾದ ಪ್ರ.ಸ.ಕುಮಾರ್ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಸಿ.ಸೋಮಶೇಖರ್ ರವರು, ಚಲನಚಿತ್ರ ನಿರ್ದೇಶಕ ರಾಮ್ ನಾರಾಯಣ, ಸಂಗೀತ ನಿರ್ದೇಶಕ ರಮೇಶ್ ಕೃಷ್ಣ, ಖ್ಯಾತ ನಟಿ ಕುಮಾರಿ ಸಂಜನಾ ತ್ರಿವೇದಿ, ಅಧ್ಯಕ್ಷರಾದ ಬಿ.ಜಿ.ಅವಟಿರವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು. ನಂತರ ಟ್ರಸ್ಟ್  ಹಾಗೂ ವೆಬ್ ಸೈಟ್ ಉದ್ಘಾಟನೆ ಮಾಡಿ ಸಾಧಕರಿಗೆ ಸನ್ಮಾನಿಸಿದರು.

ಸಚಿವರಾದ ಹೆಚ್.ಕೆ.ಪಾಟೀಲ್ ರವರು ಮಾತನಾಡಿ. ಕರ್ನಾಟಕ ಇಂಟರ್ ನ್ಯಾಷನಲ್ ಆರ್ಟಿಸ್ಟ್ ವಿಲೇಜ್ ಟ್ರಸ್ಟ್ ರಾಜ್ಯದ ವಿವಿಧ ಕ್ಷೇತ್ರದ ಕಲಾವಿದರಿಗೆ ಪ್ರೋತ್ಸಾಹ, ಸಹಕಾರ ನೀಡುವ ಸಂಸ್ಥೆಯಾಗಿದೆ.
ಟ್ರಸ್ಟ್ ಸಹಕಾರ ನೀಡಲು ಸರ್ಕಾರ ಬದ್ದವಾಗಿದೆ.
ಪ್ರಾಮಾಣಿಕ ಪ್ರಯತ್ನದಿಂದ ಸಾಧನೆ ಮಾಡಲು ಸಾಧ್ಯ.

ಕಲೆ ಮತ್ತು ಕಲಾವಿದರು ಉಳಿದರೆ ನಾಡಿನ ಇತಿಹಾಸ ತಿಳಿಯಬಹುದು, ಕಲಾವಿದ ಇಲ್ಲವೆಂದರೆ ಇತಿಹಾಸ ತಿಳಿಯಲು ಆಸಾಧ್ಯ. ವಿವಿಧ ರಂಗದ ಕಲಾವಿದರಿಗೆ ಸರ್ಕಾರದ ಜೊತೆಯಲ್ಲಿ ಸಂಘ, ಸಂಸ್ಥೆಗಳು ಆಸರೆಯಾದರೆ ಕಲಾವಿದರ ಬದುಕು ಹಸನಾಗುತ್ತದೆ ಎಂದು ಹೇಳಿದರು.

ಡಾ||ಬಿ.ಜಿ.ಅವಟಿರವರು ಮಾತನಾಡಿ ಚಿತ್ರಕಲಾವಿದರು, ಸಂಗೀತ, ನೃತ್ಯ ಶಿಲ್ಪಕಲೆ ನಾಟಕ, ರಂಗಭೂಮಿ ಉಳಿಯಬೇಕು ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡಲು ಟ್ರಸ್ಟ್ ಸ್ಥಾಪಿಸಲಾಗಿದೆ.

ರಾಜ್ಯದ ಎಲ್ಲ ಮೂಲೆಯಲ್ಲಿ ಕಲಾವಿದರಿಗೆ ಅವರಿಗೆ ಬೆಂಗಳೂರಿನ ಸುತ್ತಮುತ್ತಲ ಜಾಗದಲ್ಲಿ ಅವರಿಗೆ ನಿವೇಶನ ನೀಡಿ ಅವರು ಅಲ್ಲಿ ಪ್ರದರ್ಶನ ಮತ್ತು ತಯಾರಿಕೆ ಮತ್ತು ವಾಸ ಮಾಡಲು ಅನುಕೂಲವಾಗಲಿ ಎಂದು ನಮ್ಮ ಟ್ರಸ್ಟ್ ಯೋಜನೆ ರೂಪಿಸಿದೆ.

ಕಲಾವಿದರಿಗೆ ಒಂದು ಗ್ರಾಮ ನಿರ್ಮಾಣ ಮಾಡಿ ಅಲ್ಲಿ ಅವಕಾಶ ನೀಡಿದರೆ ರಾಜ್ಯ, ದೇಶ ವಿದೇಶಗಳಿಂದ ಬರುವ ನಾಗರಿಕರಿಗೆ ಅಲ್ಲಿ ಕಲಾವಿದರು ತಯಾರಿಕೆ ವಸ್ತುಗಳನ್ನು ಖರೀದಿಸಬಹುದು, ಕಲೆಯ ಅರಿಯಬಹುದು ಇದರಿಂದ ಆರ್ಥಿಕವಾಗಿ ಕಲಾವಿದರು ಸಬಲರಾಗುತ್ತಾರೆ ಎಂದು ಹೇಳಿದರು.