ಮಲ್ಲೇಶ್ವರದ ಶ್ರೀ ರಾಮ ಮಂದಿರದಲ್ಲಿ 60 ಮಕ್ಕಳಿಂದ “ನೃತ್ಯ ಪ್ರದರ್ಶನ”
ಮಲ್ಲೇಶ್ವರದಲ್ಲಿ 26ನೇ ಶ್ರೀರಾಮನವಮಿ ಸಂಗೀತೋತ್ಸವ – 2026 ಮಾರ್ಚ್ 19ರಿಂದ ಭಕ್ತಿ–ಸಂಗೀತದ ಮಹೋತ್ಸವ
ಈ ಸಂಗೀತೋತ್ಸವವನ್ನು ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿ ಫೌಂಡೇಶನ್ (ರಿ.), ಶಿವ–ಶ್ರೀಕಾಂತ ಸಂಗೀತ ಪ್ರತಿಷ್ಠಾನ (ರಿ.), ಸಪ್ತಗಿರಿ ಭಜನಾ ಮಂಡಳಿ (ರಿ.), ದಾಸ ಸಾಹಿತ್ಯ ಪ್ರಾಜೆಕ್ಟ್ (ಟಿ.ಟಿ.ಡಿ.) ಹಾಗೂ ಶ್ರೀ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ಸಂಸ್ಥೆಗಳು ಸಂಯುಕ್ತವಾಗಿ ಆಯೋಜಿಸಿವೆ.
ಪ್ರತಿ ದಿನವೂ ಸಂಜೆ 6.30ಕ್ಕೆ ದೇವಸ್ಥಾನದ ಆವರಣದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಜನೆ, ಗಾಯನ ಮತ್ತು ವಿವಿಧ ಸಂಗೀತ ಕಚೇರಿಗಳು ನಡೆಯಲಿವೆ. ಭಕ್ತರಿಗೆ ಸಂಗೀತ–ಭಕ್ತಿ ಸಂಭ್ರಮವನ್ನು ಅನುಭವಿಸಲು ಈ ಉತ್ಸವ ಉತ್ತಮ ಅವಕಾಶವಾಗಲಿದೆ.
ಉದ್ಘಾಟನಾ ಕಾರ್ಯಕ್ರಮ
ಮಾರ್ಚ್ 19, ಗುರುವಾರ ಸಂಜೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಸಿದ್ಧ ಸಂಗೀತಜ್ಞ ಡಾ. ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿ ಮತ್ತು ವೃಂದ ಅವರಿಂದ ಭಕ್ತಿಗಾನ ಕಚೇರಿ ನಡೆಯಲಿದೆ. ಇದರೊಂದಿಗೆ ಈ ವರ್ಷದ ಸಂಗೀತೋತ್ಸವಕ್ಕೆ ಭಕ್ತಿ–ಸಂಗೀತದ ಸುಂದರ ಚಾಲನೆ ದೊರೆಯಲಿದೆ.
ಸಂಗೀತೋತ್ಸವದ ಕಾರ್ಯಕ್ರಮಗಳ ಸರಣಿ
ಸಂಗೀತೋತ್ಸವದ ವಿವಿಧ ದಿನಗಳಲ್ಲಿ ಖ್ಯಾತ ಕಲಾವಿದರು ಮತ್ತು ಯುವ ಪ್ರತಿಭೆಗಳ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.
ಮಾ. 20 – ಶ್ರೀಕಾಂತಂ ಸಹೋದರಿಯರಿಂದ ಗಾಯನ: ಶ್ರೀಕಾಂತಂ ನಾಗದೀಪ್ತಿ ಮತ್ತು ಶ್ರೀಕಾಂತಂ ನಾಗಪ್ರಣತಿ
ಮಾ. 21 – ಕಲಾಂಬಿಕಾ ಸಹೋದರಿಯರಿಂದ ಸಂಗೀತ ಕಚೇರಿ
ಮಾ. 23 – ಡಾ. ಅಂಬಿಕಾ ಶಾಸ್ತ್ರಿ ಮತ್ತು ವೃಂದದಿಂದ ಸಂಗೀತ ಕಾರ್ಯಕ್ರಮ
ಮಾ. 24 – ಹೆಚ್.ಎಸ್. ಕಾರ್ತಿಕೇಯ ಶರ್ಮ ಮತ್ತು ವೃಂದದಿಂದ ಗಾಯನ
ಮಾ. 25 – ‘ಲಯ ರಂಜನಿ’ ಕಾರ್ಯಕ್ರಮ – ಜಿ.ಎಸ್. ನಾಗರಾಜ್ ಮತ್ತು ವೃಂದ
ಮಾ. 26 – ಜಯರಂಗ ಸಂಗೀತ ಶಾಲೆ ವಿದ್ಯಾರ್ಥಿಗಳಿಂದ ಗಾಯನ
ಮಾ. 27 – ಡಾ. ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿಗಳ ಶಿಷ್ಯವೃಂದದಿಂದ ಸಂಗೀತ ಕಾರ್ಯಕ್ರಮ
ಈ ಎಲ್ಲಾ ಕಾರ್ಯಕ್ರಮಗಳು ಭಕ್ತಿ ಸಂಗೀತದ ವೈವಿಧ್ಯವನ್ನು ಪ್ರೇಕ್ಷಕರಿಗೆ ಪರಿಚಯಿಸಲಿವೆ.
‘ಪ್ರಣವಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭ
ಮಾರ್ಚ್ 22, ಭಾನುವಾರ ಸಂಜೆ ವಿಶೇಷ ಕಾರ್ಯಕ್ರಮವಾಗಿ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ ಗಣ್ಯರಿಗೆ ‘ಪ್ರಣವಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕಡ್ಡಿ ಎಸ್. ಜಯತೀರ್ಥಾಚಾರ್ಯರು ಶ್ರೀ ಆಂಜನೇಯ ಮತ್ತು ಶ್ರೀ ರಾಘವೇಂದ್ರ ಸ್ವಾಮಿಗಳ ದೇವಸ್ಥಾನ ಪ್ರಧಾನ ಅರ್ಚಕರು ಭಾಗವಹಿಸಲಿದ್ದಾರೆ.
ಪ್ರಶಸ್ತಿ ಪುರಸ್ಕೃತರು
ಡಾ. ಗುರುರಾಜ ಪೋಶೆಟ್ಟಿಹಳ್ಳಿ – ದಾಸ ಸಾಹಿತ್ಯ ಮತ್ತು ಸಂಸ್ಕೃತಿ ಚಿಂತಕರು
(ಶ್ರೀಮತಿ ಮತ್ತು ಶ್ರೀ ಪದ್ಮಾವತಿ ಬಾಯಿ ಕಡ್ಡಿ ಶ್ರೀನಿವಾಸಾಚಾರ್ ಹಾಗೂ ಶ್ರೀಮತಿ ಪದ್ಮಾವತಿಬಾಯಿ ಮತ್ತು ಕೊಳಲು ವಿದ್ವಾನ್ ಶ್ರೀನಿವಾಸರಾವ್ ಸ್ಮಾರಕ ಪ್ರಶಸ್ತಿ)
ವಿ. ಮಾಲತಿ ಶಿಂಗ್ಲಾಚಾರ್ – ಸಂಗೀತ ಕ್ಷೇತ್ರ
(ವಿ. ಅಂಬಿ ಭಾಗವತರ್ ಹಾಗೂ ವಿ. ಪಾಪಾ ಚೂಡಾಮಣಿ ಸ್ಮಾರಕ ಪ್ರಶಸ್ತಿ)
ವಿ. ರಾಮಲಿಂಗಂ – ಯೋಗ ಮತ್ತು ನೃತ್ಯ ಕ್ಷೇತ್ರ
(ಶ್ರೀಮತಿ ಸುಶೀಲಾ ಮತ್ತು ಶ್ರೀಕಾಂತಂ ದತ್ತಾತ್ರೇಯ ಶಾಸ್ತ್ರಿ ಸ್ಮಾರಕ ಪ್ರಶಸ್ತಿ)
ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ
ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ರವೀಂದ್ರ ನರಹರಿ ತಂಡದವರಿಂದ ಸೂತ್ರದ ಬೊಂಬೆ ಆಟ (ಪಪೆಟ್ ಶೋ) ಪ್ರದರ್ಶನ ನಡೆಯಲಿದೆ. ಇದು ಮಕ್ಕಳಿಂದ ಹಿರಿಯರ ತನಕ ಎಲ್ಲರಿಗೂ ಮನರಂಜನೆ ನೀಡುವ ವಿಶೇಷ ಆಕರ್ಷಣೆಯಾಗಲಿದೆ.
ಭಕ್ತಿ–ಸಂಗೀತ ಸಂಭ್ರಮಕ್ಕೆ ಆಹ್ವಾನ
ಶ್ರೀರಾಮನವಮಿ ಉತ್ಸವಗಳು ದಕ್ಷಿಣ ಭಾರತದ ಸಂಗೀತ ಪರಂಪರೆಯ ಪ್ರಮುಖ ಅಂಗವಾಗಿವೆ. ಈ ಸಂಗೀತೋತ್ಸವವು ಭಕ್ತಿ, ಸಂಗೀತ ಮತ್ತು ಸಂಸ್ಕೃತಿಯ ಸಮನ್ವಯವನ್ನು ಪ್ರತಿಬಿಂಬಿಸುವ ಕಾರ್ಯಕ್ರಮವಾಗಿದ್ದು, ಸಂಗೀತಾಭಿಮಾನಿಗಳು ಮತ್ತು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಆಯೋಜಕರು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು: 94494 44210
ಎಂದು ಆಯೋಜಕರಾದ ಡಾ. ಸಿ.ಎಸ್. ವಾರುಣಿ ಜಯತೀರ್ಥಾಚಾರ್ಯರು ತಿಳಿಸಿದ್ದಾರೆ.
ಶ್ರೀರಾಮನವಮಿ ಸಂಗೀತೋತ್ಸವ – 2026
ಸ್ಥಳ: ಶ್ರೀ ಆಂಜನೇಯ ಮತ್ತು ಶ್ರೀ ರಾಘವೇಂದ್ರ ಸ್ವಾಮಿಗಳ ದೇವಸ್ಥಾನ, ಮಲ್ಲೇಶ್ವರ 8ನೇ ಕ್ರಾಸ್, ಬೆಂಗಳೂರು
ದಿನಾಂಕ: 19 ಮಾರ್ಚ್ – 27 ಮಾರ್ಚ್ 2026
ಸಮಯ: ಸಂಜೆ 6.30
ಪ್ರಮುಖ ಕಾರ್ಯಕ್ರಮ: ‘ಪ್ರಣವಶ್ರೀ’ ಪ್ರಶಸ್ತಿ ಪ್ರದಾನ – 22 ಮಾರ್ಚ್
ವಿಶೇಷ ಆಕರ್ಷಣೆ: ಸೂತ್ರದ ಬೊಂಬೆ ಆಟ

ಮದುವೆ ಎನ್ನುವುದು ಪವಿತ್ರ ಬಂಧನ – ವಿಚ್ಛೇದನಕ್ಕೆ ಎಳಸಬೇಡಿ: ನ್ಯಾಯಮೂರ್ತಿ ಶ್ರೀಶಾನಂದ ಕರೆ
ಬೆಂಗಳೂರು, ಮಾರ್ಚ್, 15, 2026: ಮದುವೆ ಎನ್ನುವುದು ಪವಿತ್ರವಾದ ಬಂಧ. ಪೋಷಕರು ತಮ್ಮ ಮಕ್ಕಳಿಗೆ ಸೂಕ್ತ ಸಮಯದಲ್ಲಿ ವಿವಾಹ ಕಾರ್ಯಕ್ರಮ ನೆರವೇರಿಸಬೇಕು. ಹೊಸದಾಗಿ ಮದುವೆ ಆದವರು ವಿಚ್ಛೇದನಕ್ಕೆ ಎಳಸದೇ ಸಂಯಮದಿಂದ ಜೀವನ ಸಾಗಿಸಬೇಕು. ಯಾವುದೇ ಕಲಹ ಮಾಡಿಕೊಳ್ಳದೇ, ನ್ಯಾಯಾಲಯದ ಕಟಕಟೆವರೆಗೆ ಬರದೇ ಸಮಾಧಾನ ಮತ್ತು ಸುಖಃ ಚಿತ್ತರಾಗಿ ಬದುಕನ್ನು ಕಟ್ಟಿಕೊಳ್ಳಬೇಕೆಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಶ್ರೀಶಾನಂದ ಅವರು ಸಲಹೆ ನೀಡಿದರು.
ಇಲ್ಲಿನ ಕೆ.ಆರ್.ರಸ್ತೆಯ ನೆಟ್ಟಕಲ್ಲಪ್ಪ ವೃತ್ತದ ಬಸವನಗುಡಿಯ ದ್ವಾರಕಾನಾಥ ಭವನದಲ್ಲಿ ಅಕ್ಷಯ ವಿಪ್ರ ಮಹಾಸಭಾದ ವತಿಯಿಂದ ತ್ರಿಮಸ್ಥ ಬ್ರಾಹ್ಮಣರಿಗಾಗಿ ಭಾನುವಾರ ನಡೆದ ವಧು-ವರಾನ್ವೇಷಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಒಂದು ಕಾಲದಲ್ಲಿ ಉತ್ತಮವಾದ ವರ ಸಿಗುತ್ತಾ? ಎನ್ನುವ ಪ್ರಶ್ನೆ ಇತ್ತು. ಈಗ ಪರಿಸ್ಥಿತಿ ಬದಲಾವಣೆಗೊಂಡು ಒಳ್ಳೆಯ ಹುಡುಗಿ ಸಿಗುತ್ತಾಳಾ? ಎನ್ನುವ ವಿಚಾರ ಮಾಡುವಂತಾಗಿದೆ. ಗಂಡು-ಗಂಡನಾಗಲು, ಹೆಣ್ಣು-ಹೆಂಡತಿಯಾಗಲು ಧರ್ಮದ ತಳಹದಿಯಲ್ಲಿ ನೆರವೇರಿಸುವ ಶಾಸ್ತ್ರಬದ್ಧ ಕಾರ್ಯಕ್ರಮವೇ ವಿವಾಹ ಎಂದೆನಿಸಿಕೊಳ್ಳುತ್ತದೆ ಎಂದರು.
ಮದುವೆ ಎನ್ನುವುದು ಸಂಸ್ಕೃತಿ, ಪರಂಪರೆಯ ತಳಹದಿಯಲ್ಲಿ ನೆರವೇರಿಸಬೇಕು. ಆಗ ಮಾತ್ರ ನ್ಯಾಯಾಲಯ ಪುರಸ್ಕರಿಸುತ್ತದೆ. ಪರಸ್ಪರ ಒಪ್ಪಂದದಂತೆ ಮದುವೆ ಆಗಿ, ಮಕ್ಕಳು ಆದ ಬಳಿಕ ನ್ಯಾಯಾಲಯಕ್ಕೆ ಬಂದರೆ ತೊಂದರೆ ಆಗುತ್ತದೆ. ಅನ್ಯ ಧರ್ಮದಲ್ಲಿ ಮದುವೆ ಎನ್ನುವುದು ಗುತ್ತಿಗೆ ಇದ್ದ ಹಾಗೆ. ಹಿಂದೂ ಧರ್ಮದಲ್ಲಿ ಹಾಗಲ್ಲ. ಕನ್ಯೆ ನೋಡುವುದು, ಪಾಣಿಗ್ರಹಣ ಮತ್ತು ಸಪ್ತಪದಿಯ ಮೂಲಕ ಮದುವೆ ಸಂಪ್ರದಾಯಬದ್ಧವಾಗಿ ಸಂಪನ್ನಗೊಳಿಸಬೇಕು. ಮದುವೆಯಲ್ಲಿ ಬ್ರಹ್ಮ, ದೈವ, ಆರ್ಷ, ಪ್ರಜಾಪತ್ಯ, ಅಸುರ, ಗಂಧರ್ವ ಮತ್ತು ರಾಕ್ಷಸ ಎಂಟು ಬಗೆಯ ವಿಧಗಳಿವೆ. ಇದರರ್ಥ ಒಂದು ಅರೇಂಜ್ ಇನ್ನೊಂದು ಲವ್ ಮ್ಯಾರೇಜ್ ಅಂತ. ಮದುವೆಗೆ ಮುಂಚೆ ಹುಡುಗ-ಹುಡುಗಿ ದೈಹಿಕ ಸಂಬಂಧ ಬೆಳೆಸಿಕೊಂಡರೆ ಅದು ರಾಕ್ಷಸ ವಿವಾಹವಾಗುತ್ತದೆ. ಮದುವೆ ಆಗದೇ ಇರುವವರಿಗೆ ಹಿಂಸೆ, ಸಾಮಾಜಿಕ ತುಮುಲಗಳು ಏರ್ಪಡುತ್ತವೆ. ಹೀಗಾಗಿ ಪೋಷಕರು ನೋಡುವ ಕನ್ಯೆ ಅಥವಾ ವರನನ್ನು ಒಪ್ಪಿಕೊಂಡು ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಕೆಲ ಪಟ್ಟಭದ್ರರು ಹೆಣ್ಣು-ಗಂಡು ಜೋಡಿ ಮಾಡುವರಿಗೆ ಮದುವೆ ಬ್ರೋಕರ್ ಗಳೆಂದು ಕರೆಯುತ್ತಾರೆ. ಹಾಗೆ ಕರೆಯುವುದು ತಪ್ಪು. ನವ ಜೋಡಿಗಳೊಂದಿಗೆ ಎರಡು ಕುಟುಂಬಗಳನ್ನು ಬೆಸೆಯುವ ಕೆಲಸವನ್ನು ಅವರು ಮಾಡಿರುತ್ತಾರೆ. ಹೀಗಾಗಿ ಬ್ರೋಕರ್ ಎನ್ನುವ ಪದ ಸಲ್ಲದು ಎಂದು ಕಿವಿಮಾತು ಹೇಳಿದರು. ಇಂದು ತ್ರಿಮತಸ್ಥ ಬ್ರಾಹ್ಮಣರಿಗಾಗಿ ನಡೆಯುತ್ತಿರುವ ವಧು-ವರಾನ್ವೇಷಣ ಸಮಾರಂಭದಲ್ಲಿ ಎಲ್ಲರೂ ತಾಂತ್ರಿಕ ವ್ಯವಸ್ಥೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ. ಅರ್ಹ ವಧು-ವರರು ವೆಬ್‌ಸೈಟ್ ನಲ್ಲಿ ತಮ್ಮ ವೈಯಕ್ತಿಕ ವಿಚಾರಗಳನ್ನು ದಾಖಲಿಸಿ ಒಪ್ಪಿತವಾಗಿ, ವಿವಾಹ ಮಾಡಿಕೊಳ್ಳಿ. ಮದುವೆ ಆಗದವರು `ಗಿರಿಜಾ ಕಲ್ಯಾಣ ಅಥವಾ ಪದ್ಮಾವತಿ ಕಲ್ಯಾಣ’ ದಂತಹ ಪರಮ ಪವಿತ್ರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ತಮ್ಮ ಕೈಲಾದ ನೆರವು ನೀಡಬೇಕು. ಮುಂದಿನ ಕಲ್ಯಾಣ ಪರ್ವದೊಳಗೆ ನಿಮ್ಮ ವಿವಾಹವಾಗುವುದು ನಿಶ್ಚಿತವೆಂದು ಪೌರಾಣಿಕ ಹಿನ್ನೆಲೆಯನ್ನು ವಿವರಿಸಿದರು.
ವಿಪ್ರ ಮಹಾಸಭಾದ ಅಧ್ಯಕ್ಷ ಎನ್.ಕೆ.ರಾಮಚಂದ್ರರಾವ್ ಮಾತನಾಡಿ, ವಧು-ವರ ಅನ್ವೇಷಣಾ ಸಮಾರಂಭ ಯಶಸ್ಸಿಗಾಗಿ `ಪಾರ್ವತಿ ಸ್ವಯಂವರ’ ಏರ್ಪಡಿಸಲಾಗಿದೆ. ಹಿಂದೂ ಸಂಪ್ರದಾಯದಂತೆ ಅಯೋಜಿಸಿರುವ ಈ ಸಮಾರಂಭದಲ್ಲಿ ನೂತನವಾಗಿ ಜೋಡಿಯಾಗುವವರಿಗೆ ಶುಭವಾಗಲಿ. ಅಕ್ಷಯ ವಿಪ್ರ ಮಹಾಸಭಾದಲ್ಲಿ 2500ಕ್ಕೂ ಹೆಚ್ಚು ಸದಸ್ಯರಿದ್ದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ವಿದ್ಯಾರ್ಥಿ ವಸತಿ ನಿಲಯ, ಆರೋಗ್ಯ ಸೌಲಭ್ಯಕ್ಕಾಗಿ ವೈದ್ಯಕೀಯ ಸೇವೆ, ವಧು-ವರರ ಸಮಾವೇಶ, ಸಾಮೂಹಿಕ ಉಪನಯನ ಹೀಗೆ ಹತ್ತು ಹಲವಾರು ಸಮಾಜಮುಖಿಯಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ಹೇಳಿದರು.
ಆರಂಭದಲ್ಲಿ ವಿಪ್ರವರೇಣ್ಯರಿಂದ `ಗಿರಿಜಾ ಕಲ್ಯಾಣ’ ಮತ್ತು `ಪದ್ಮಾವತಿ ಕಲ್ಯಾಣ’ ಮಹೋತ್ಸವಗಳನ್ನು ನೆರವೇರಿಸಲಾಯಿತು. ಸಂಪ್ರದಾಯದಂತೆ ಗೋತ್ರ ಪ್ರವರ ಹೇಳಿ, ವಾಙ್ಮಯ ನಿಶ್ಚಯ, ತಾಂಬೂಲ, ಮಂಗಳ ದ್ರವ್ಯಗಳನ್ನು ನೀಡಿ ಹಾರ-ತುರಾಯಿಗಳನ್ನು ವಧು-ವರರ ಕಡೆಯವರಿಗೆ ವಿನಿಮಯಗೊಳಿಸಲಾಯಿತು. ಯಾಗಶಾಲೆಯ ಸಾಕ್ಷಿಯಾಗಿ ನಾದಸ್ವರ ಹಾಗೂ ಸಕಲ ಮಂಗಳಕರ ವಾದ್ಯಗಳೊಂದಿಗೆ ಅದ್ದೂರಿಯಾಗಿ `ದೈವೀಕವಾದ ಕಲ್ಯಾಣ ಮಹೋತ್ಸವ’ ನೆರವೇರಿಸಲಾಯಿತು.
ಇಡೀ ದಿನ ನಡೆದ ಈ ಸಮಾರಂಭದಲ್ಲಿ ವೇದಿಕೆಯ ಮೇಲಿದ್ದ ಉದ್ಘೋಷಕರು ನೂತನ ವಧು-ವರರ ಪೋಷಕರಿಗೆ ಸೂಕ್ತ ಮಾರ್ಗದರ್ಶನ, ಸಲಹೆಗಳನ್ನು ನೀಡಿದರು. ಸ್ಥಳದಲ್ಲಿ ಪುರೋಹಿತ ವರ್ಗದವರು ಇದ್ದು ಜಾತಕಗಳನ್ನು ಪರಿಶೀಲಿಸಿದರು. ಆನ್ ಲೈನ್ ನಲ್ಲಿ ವೆಬ್ ಸೈಟ್ ಮೂಲಕ ನೋಂದಣಿ ಪ್ರಕ್ರಿಯೆಗೆ ಹಲವಾರು ಕೌಂಟರ್ ಗಳನ್ನು ತೆರೆಯಲಾಗಿತ್ತು. ಕರ್ನಾಟಕದ ಹಲವು ಜಿಲ್ಲೆಗಳಿಂದ ಕನ್ಯೆ-ವರರೊಂದಿಗೆ ಆಗಮಿಸಿದ ಪೋಷಕರಿಗೆ ಕ್ಷಣ ಕ್ಷಣದ ಮಾಹಿತಿ ಒದಗಿಸಲು ವೇದಿಕೆಯ ಮುಂಭಾಗದಲ್ಲಿ ಬೃಹತ್ ಸ್ಕ್ರೀನ್ ಗಳನ್ನು ಅಳವಡಿಸಲಾಗಿತ್ತು. ಶ್ರವಣ ನಕ್ಷತ್ರದಂದು ನಡೆದ ಈ ಸಮಾರಂಭಕ್ಕೆ ಆಗಮಿಸಿದ್ದ ಪೋಷಕರು ಮತ್ತು ವಧು-ವರರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.
ಅಕ್ಷಯ ವಿಪ್ರ ಮಹಾಸಭಾದ ಗೌರವ ಅಧ್ಯಕ್ಷ ಆಡಿ. ಕೀರ್ತಿ ರಾಜ್ ಎನ್., ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ರಾವ್, ಕಾರ್ಯದರ್ಶಿ ಎನ್. ಎಸ್. ಸುಧೀಂದ್ರ ರಾವ್ ಅವರು ಉಪಸ್ಥಿತರಿದ್ದರು. ಸಂಘದ ನೂತನ ವೆಬ್ ಸೈಟ್ ಅನ್ನು ಶಾಸಕ ರವಿಸುಬ್ರಮಣ್ಯ ಅವರ ಧರ್ಮ ಪತ್ನಿ ಮಂಜುಳಾ ಅವರು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷ ಜನಾರ್ಧನ ರಾವ್, ಉಪಾಧ್ಯಕ್ಷರಾಧಾ ಡಾ, ರಘುನಾಥ್, ಆನಂದರಾವ್, ಡಾ, ಕಿರಣ್. ಎಸ್ ಮೂರ್ತಿ, ಲಕ್ಷ್ಮೀಶ, ಶ್ರೀಪ್ರಕಾಶ್, ಜಂಟಿ ಕಾರ್ಯದರ್ಶಿ ಟಿ ಎನ್ ಶಾಂತಕುಮಾರ್, ಮಹೇಶ ಕುಮಾರ್ ಸೇರಿದಂತೆ ಪದಾಧಿಕಾರಿಗಳು, ಸರ್ವ ಸದಸ್ಯರು ಮತ್ತು ಸಮಾಜ ಸೇವಕರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಸಂದ್ಯಾ ಭಟ್ ನಿರೂಪಿಸಿದರು ಇವರಿಗೆ ಶುಭ ಪ್ರಹ್ಲಾದ, ಕಲ್ಪನಾ ಅವರು ಜತೆಯದರು.
—-
ವಸಂತ ನವರಾತ್ರಿ ಶ್ರೀರಾಮೋತ್ಸವ
ಹೆಣ್ಣು ಮಕ್ಕಳು ಮತ್ತು ಆಸ್ತಿ
ನಾನು ಕೇಳಪಟ್ಟಂತೆ ಹೆಣ್ಣು ಮಕ್ಕಳಿಗೆ ಮಂಗಳ ದ್ರವ್ಯದ ಜೊತೆಯಲ್ಲಿ ಹಣ ಕೊಡುವುದು ಏಕೆಂದರೆ, ನಾವು ಏನೇ ಕೊಟ್ಟರೂ ಎಷ್ಟೇ ಕೊಟ್ಟರೂ ಏನೋ ಒಂದನ್ನು ಕಡಿಮೆ ಮಾಡಿರುತ್ತೇವೆ, ಹಾಗಾಗಿ ಅದನ್ನು ಸರಿಪಡಿಸಲು ಯಥಾಶಕ್ತಿ ದಕ್ಷಿಣ ಕೊಡುತ್ತೇವೆ. ಹಾಗೆಯೇ ಹೆಣ್ಣುಮಕ್ಕಳಿಗೆ ಕೊಡುವ ಅರಿಶಿಣ ಕುಂಕುಮದ ಬಾಬತು ಹಣ ಅವರಿಗೆ ಕಷ್ಟ ಕಾಲದಲ್ಲಿ ಉಪಯೋಗವಾಗಲಿ ಎಂದು ದೂರಾಲೋಚನೆಯಿಂದ ಕೂಡಿರುತ್ತದೆ.ಹಾಗೆಯೇ ಕೆಲವು ಸಂದರ್ಭಗಳಲ್ಲಿ ಸಹೋದರ ಸಹೋದರಿಯರಿಗೆ ಇರುವ ಸಂಪ್ರದಾಯಗಳು, ಆಚರಣೆಗಳು ಗಂಡು ಮಕ್ಕಳು ತಮ್ಮ ಮನೆಯ ಹೆಣ್ಣು ಮಕ್ಕಳಿಗೆ ನೆರವಾಗುವ ಉದ್ದೇಶವನ್ನು ಇಟ್ಟುಕೊಂಡಿರುತ್ತವೆ. ಹಾಗೆಯೇ ಗಂಡು ಮಕ್ಕಳು ತಮ್ಮ ಪೋಷಕರು ತೀರಿಕೊಂಡ ನಂತರವೂ,ಹೆಣ್ಣು ಮಕ್ಕಳಿಗೆ ಯತಾಶಕ್ತಿ ಸಹಾಯ ಮಾಡುವುದು, ಹಿಂದಿನ ದಿನಗಳಲ್ಲಿ ನಮ್ಮಲ್ಲಿ ಇತ್ತು. ಹಾಗಾಗಿ ಆಸ್ತಿ ಪಾಲು,ಹಂಚಿಕೆ ಮೊದಲಾದವು ಆಗ ನಡೆಯುತ್ತಿರಲಿಲ್ಲ. ಈಗ ಕಾಲ ಬದಲಾಗಿದೆ. ಆದರೆ ನಮ್ಮ ಸಂಪ್ರದಾಯಗಳ ಹಿಂದಿನ ಉದ್ದೇಶಗಳು ಬದಲಾಗಿಲ್ಲ. ಹಾಗಾಗಿ ಮಕ್ಕಳೆಲ್ಲರೂ ಸಮಾನವಾಗಿ ಪೋಷಕರನ್ನು ವಯಸ್ಸಾದ ಕಾಲದಲ್ಲಿ ನೋಡಿಕೊಳ್ಳುವುದು ಇಂದಿನ ದಿನಗಳಲ್ಲಿ ಅತ್ಯವಶ್ಯಕವಾಗಿದೆ.
ಈ ಮೇಲಿನ ವಿಷಯದ ಬಗ್ಗೆ ಕೆಲವು ಅಭಿಪ್ರಾಯಗಳು ಹಿಂದೆ ಪಿತ್ರಾರ್ಜಿತ ಆಸ್ತಿಯಲ್ಲಿ ಅಥವಾ ಮಾತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಪಾಲು ಇರುತ್ತಿರಲಿಲ್ಲ. ಆದರೆ ಈಗ ಕೊಡುತ್ತಿದ್ದಾರೆ. ಈ ಕಾನೂನು ಅಥವಾ ಸಂಪ್ರದಾಯ ಕರಾವಳಿ ಮೂಲದ ಬಂಟರ ಸಮುದಾಯದಿಂದ ಪ್ರೇರಿತವಾದದ್ದು ಎನ್ನುವರು. ಅವರಲ್ಲಿ ಹೆಣ್ಣುಮಕ್ಕಳಿಗೆ ಮನೆಯ ಆಸ್ತಿ ಅಧಿಕಾರ ಸಿಗುತ್ತದೆಯಂತೆ . ನಾನು ಕಂಡಂತೆ ಪ್ರತಿ ಹಿಂದುಗಳು ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಆಸ್ತಿ ಕೊಡದಿದ್ದರೂ ಅರಿಶಿನ ಕುಂಕುಮಕ್ಕೆ ಎಂದು ಏನಾದರೂ ಹಣ,ಒಡವೆ ಅಥವಾ ಇನ್ನೇನಾದರೂ ಉಡುಗೊರೆ ಕೊಡುವ ಸಂಪ್ರದಾಯವಿದೆ.ಬಹಳ ಹಿಂದೆ ಚಿಕ್ಕವಯಸ್ಸಿನ ಹೆಣ್ಣು ಮಕ್ಕಳಿಗೆ ಮದುವೆ ಮಾಡಿರುತ್ತಿದ್ದರು. ಅವರು ದೂರದ ಊರಿನಲ್ಲಿ ನೆಲೆಸಿದ್ದರೆ ಅವರನ್ನು ಭೇಟಿ ಮಾಡುವ ಸಂದರ್ಭಗಳು ಕಡಿಮೆ ಇದ್ದವು . ಹೀಗಾಗಿ ಅವರಿಂದ ಯಾವುದೇ ರೀತಿಯ ಸಹಾಯ, ಸೇವೆ ಪೋಷಕರಿಗೆ ದೊರೆಯುತ್ತಿರಲಿಲ್ಲ. ಹಾಗಾಗಿ ಗಂಡು ಮಕ್ಕಳಿಗೆ ಆಸ್ತಿಯನ್ನು ಹಂಚಿ,ಅವರ ನೆರಳಿನಲ್ಲಿ ಇರುವುದು ರೂಡಿಯಾಗಿತ್ತು. ಆದರೆ ಪ್ರತಿ ಹಬ್ಬ,ಹರಿದಿನಗಳಲ್ಲಿ ಹೆಣ್ಣು ಮಕ್ಕಳಿಗೆ ಎಂದೇ ಕೆಲವು ಉಡುಗೊರೆಗಳು ಕೊಡಲ್ಪಡುತ್ತಿದ್ದವು . ಇದನ್ನು ನಾನು ಹಬ್ಬಗಳ ಬಗೆಗೆ ಬರೆಯುವಾಗ ದಾಖಲಿಸಿದ್ದೇನೆ. ನಾನು ಯಾವ ಕಾನೂನು ತಜ್ಞಳೂ ಅಲ್ಲ. ಹಾಗಾಗಿ ಇವೆಲ್ಲ ನನ್ನ ವಯಕ್ತಿಕ ಅಭಿಪ್ರಾಯಗಳು. ಮೇಲೆ ಹೇಳಿದಂತೆ ಹೆಣ್ಣು ಮಕ್ಕಳಿಗೆ ತವರು ಮನೆಯಲ್ಲಿ ಸಾಕಷ್ಟು ಮರ್ಯಾದೆ, ಗೌರವ ಹಾಗೂ ಉಡುಗೊರೆಗಳು ಲಭಿಸುತ್ತಿದ್ದವು. ಹಾಗಾಗಿ ಹಿಂದಿನವರು ಎಂದೂ ಆಸ್ತಿಪಾಲಿಗಾಗಿ ತವರು ಮನೆಯ ಮೇಲೆ ಕೇಸುಗಳನ್ನು ಹಾಕುತ್ತಿರಲಿಲ್ಲ. ಕಾಲಾಂತರದಲ್ಲಿ ಎಲ್ಲವೂ ಬದಲಾಗಿದೆ.ಹೆಣ್ಣು ಮಕ್ಕಳು ಗಂಡು ಮಕ್ಕಳಿಗೆ ಸಮಾನವಾಗಿ ಆಸ್ತಿಯನ್ನು ತೆಗೆದುಕೊಂಡರೆ, ಅದಕ್ಕೆ ತಕ್ಕಂತೆ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು.ಕೆಲಸ ಸಹಿತ ಮಾಡಬೇಕು. ಇದು ನನ್ನ ಅಭಿಪ್ರಾಯ.ಪೋಷಕರ ಬಳಿ ಹಣ ತೆಗೆದುಕೊಂಡು ಅವರನ್ನು ತಿರುಗಿಯೂ ನೋಡದೆ ಇರುವಂತಹ ಸಂದರ್ಭ ಬರಬಾರದು. ನಮ್ಮ ಕೈಲಾದಷ್ಟು ಪೋಷಕರಿಗೆ ಸಹಾಯ ಮಾಡುವ ನಿರ್ಧಾರ ಹೆಣ್ಣು ಮಕ್ಕಳು ಕೂಡ ತೆಗೆದುಕೊಳ್ಳಬೇಕು. ಹಾಗಾದರೆ ಮಾತ್ರ ಅವರು ತೆಗೆದುಕೊಳ್ಳುವ ಪಾಲಿಗೆ ಸರಿಯಾದ ಅರ್ಥ ಸಿಗುತ್ತದೆ. ಹೀಗಾಗಿ ಹೆಣ್ಣುಮಕ್ಕಳು ಗಂಡು ಮಕ್ಕಳಿಗೆ ಕಡಿಮೆ ಇಲ್ಲ ಎಂದು ಒಪ್ಪಬಹುದು. ಇವೆಲ್ಲ ನನ್ನ ವಯಕ್ತಿಕ ಅಭಿಪ್ರಾಯಗಳು.
ರಾಧಿಕಾ ಜಿ.ಎನ್.
‘ಸಂಸ್ಕಾರ ಸುಧಾ’ ಬೇಸಿಗೆ ಶಿಬಿರ
“ಧರ್ಮೋ ರಕ್ಷತಿ ರಕ್ಷಿತಃ” ಎಂಬ ಆಪ್ತವಾಕ್ಯದಂತೆ, ಧರ್ಮ ಮತ್ತು ಸಂಸ್ಕಾರಗಳ ರಕ್ಷಣೆಯೇ ಸದೃಢ ಸಮಾಜಕ್ಕೆ ಮೂಲಾಧಾರವಾಗಿದೆ. ಇಂದಿನ ಆಧುನಿಕ ಯುಗದಲ್ಲಿ ಮೌಲ್ಯಗಳು ಕ್ಷೀಣಿಸುತ್ತಿವೆ ಎಂಬ ಆತಂಕದ ನಡುವೆ, ಕೇವಲ ಶೈಕ್ಷಣಿಕ ಅಂಕಗಳಿಗೆ ಸೀಮಿತವಾಗದ ಮೌಲ್ಯಯುತ ಶಿಕ್ಷಣದ ಅಗತ್ಯವಿದೆ. ಈ ಪವಿತ್ರ ಆಶಯದೊಂದಿಗೆ, ಬಾಲಭಾರತೀ (ದಕ್ಷಿಣಾಮ್ನಾಯ ಶ್ರೀ ಶಾರದಾಪೀಠದ ಅಂಗಸಂಸ್ಥೆ)
ಜಗದ್ಗುರುಗಳ ದಿವ್ಯ ಮಾರ್ಗದರ್ಶನದಲ್ಲಿ, ಕರ್ನಾಟಕ ದಾದ್ಯಂತ ‘ಸಂಸ್ಕಾರ ಸುಧಾ’ ಬೇಸಿಗೆ ಶಿಬಿರಗಳನ್ನು ಆಯೋಜಿಸಲು ಸಂಕಲ್ಪಿಸಲಾಗಿದೆ. ಮಕ್ಕಳಲ್ಲಿ ರಾಷ್ಟ್ರಪ್ರೇಮ, ಭವ್ಯ ಇತಿಹಾಸ ಹಾಗೂ ಭಾರತೀಯ ಸಂಸ್ಕೃತಿಯ ಬಗ್ಗೆ ಅಭಿಮಾನ ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಈ ಜ್ಞಾನದೀಪ್ತಿಯನ್ನು ಮಕ್ಕಳ ಮನಸ್ಸಿನಲ್ಲಿ ಬೆಳಗಲು ಸಮರ್ಥ ಶಿಕ್ಷಕರೇ ಅತ್ಯಗತ್ಯ. ಈ ಶಿಬಿರವನ್ನು ಯಶಸ್ವಿಯಾಗಿ ನಡೆಸುವ ಶಿಕ್ಷಕರಿಗೆ ಯೋಗ್ಯವಾದ ಗೌರವಧನ ನೀಡಲಾಗುತ್ತದೆ.
ಬೋಧನೆಯು ಕೇವಲ ಉದ್ಯೋಗವಾಗದೆ, ಒಂದು ತಪಸ್ಸಿನಂತೆ ಸಮಾಜದ ನವನಿರ್ಮಾಣಕ್ಕೆ ದಾರಿದೀಪವಾಗಲಿ. ಬನ್ನಿ, ಈ ಮಹತ್ತರ ಕಾರ್ಯದಲ್ಲಿ ನಮ್ಮೊಂದಿಗೆ ಕೈಜೋಡಿಸಿ, ಮುಂದಿನ ಪೀಳಿಗೆಗೆ ಸಂಸ್ಕಾರದ ಅಮೃತವನ್ನು ಹಂಚೋಣ.
📍 ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಣಿಗಾಗಿ ಪೋಸ್ಟರ್‌ನಲ್ಲಿರುವ QR ಕೋಡ್ ಅನ್ನು ಸ್ಕ್ಯಾನ್ ಮಾಡಿ.
✨ ವಿದ್ಯಾರ್ಥಿಗಳ ಗಮನಕ್ಕೆ: ನೀವೇನಾದರೂ ಈ ಶಿಬಿರದಲ್ಲಿ ಭಾಗವಹಿಸಲು ಆಸಕ್ತಿ ಹೊಂದಿದ್ದರೆ, ಇಲ್ಲಿ ನಿಮ್ಮ ಆಸಕ್ತಿಯನ್ನು ವ್ಯಕ್ತಪಡಿಸಿ ನೋಂದಾಯಿಸಿಕೊಳ್ಳಬಹುದು – visit: http://tinyurl.com/SSCampKA
ಶಾರದೇ ಪಾಹಿಮಾಂ ಶಂಕರ ರಕ್ಷಮಾಂ!
ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಿಗೆ ತಯಾರಿ: ಮಾನಸಿಕ ಮತ್ತು ದೈಹಿಕ ಆರೋಗ್ಯದ ಮಹತ್ವ-ಎನ್.ಎಸ್.ಸೋಮಶೇಖರ್,
Bengaluru : ಮಾರ್ಚ್ ತಿಂಗಳು ದಿನಾಂಕ: 18-03-2026 ರಿಂದ ಎಸ್.ಎಸ್.ಎಲ್.ಸಿ. (SSLC Examinations) ವಾರ್ಷಿಕ ಪರೀಕ್ಷೆಗಳು ಆರಂಭವಾಗಲಿವೆ.ಈಗಾಗಲೆ ಹಲವಾರು ಪೂರ್ವ ಸಿದ್ಧತಾ ಹಂತದ ಪರೀಕ್ಷೆಗಳು ನಡೆದಿದ್ದು ವಾರ್ಷಿಕ ಪರೀಕ್ಷೆಯ ಬಗ್ಗೆ ನಿಮ್ಮಲ್ಲಿ ಆತ್ಮವಿಶ್ವಾಸ ವನ್ನು ಹೆಚ್ಚಿಸಿವೆ. ಅದಕ್ಕಾಗಿ ವಿಷಯವಾರು ಕೊನೆಯ ಹಂತದ ಪೂರ್ವಸಿದ್ಧತೆ (preparations) ಯನ್ನು ನೀವು ಮಾಡಿಕೊಳ್ಳಲೇಬೇಕಿದೆ.
“ಪರೀಕ್ಷೆಯೊಂದು ಹಬ್ಬ ಅದನ್ನು ಸಂಭ್ರಮಿಸಿ. ನೆನಪಿರಲಿ ಪರೀಕ್ಷೆ ಸಮಯ ಹತ್ತಿರಕ್ಕೆ ಬಂದಂತೆ ಯಾವುದೇ ಪರೀಕ್ಷಾ ಭಯ, ಒತ್ತಡಕ್ಕೆ ಒಳಗಾಗದೆ, ಅತ್ಯಂತ ಆತ್ಮ ವಿಶ್ವಾಸದಿಂದ ಪರೀಕ್ಷೆ ಎದುರಿಸಿ, ಖಂಡಿತ ಯಶಸ್ಸು ನಿಮ್ಮದೆ. ನಿಮ್ಮ ಗುರಿಯನ್ನು ತಲುಪಲು ನಿಮಗಿರುವುದು ಇನ್ನೊಂದೇ
ಎಸ್.ಎಸ್.ಎಲ್.ಸಿ (Secondary School Leaving Certificate) ಜೀವನದಲ್ಲಿ ಅತ್ಯಂತ ಪ್ರಮುಖ ಹಂತವಾಗಿದೆ.
ಪರೀಕ್ಷೆಗೆ ತಯಾರಾಗುವಾಗ ಹಲವರು ಹೆಚ್ಚು ಸಮಯ ಓದುವುದರ ಮೇಲೆ ಮಾತ್ರ ಗಮನ ಕೊಡುತ್ತಾರೆ. ಆದರೆ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಓದು ಮಾತ್ರ ಸಾಕಾಗುವುದಿಲ್ಲ. ಉತ್ತಮ ಮಾನಸಿಕ ಹಾಗೂ ದೈಹಿಕ ಆರೋಗ್ಯವೂ ಸಮಾನವಾಗಿ ಮುಖ್ಯವಾಗಿದೆ.
ಸರಿಯಾದ ಓದು ವೇಳಾಪಟ್ಟಿ ರೂಪಿಸಿಕೊಳ್ಳಿ, ಸಕಾರಾತ್ಮಕ ಮನೋಭಾವ ಹೊಂದಿರಿ. ಪರೀಕ್ಷಾ ಒತ್ತಡವು ಸಾಮಾನ್ಯವಾದದ್ದು, ಆದರೆ ವಿದ್ಯಾರ್ಥಿಗಳು ಶಾಂತವಾಗಿಯೂ ಸಕಾರಾತ್ಮಕ ಮನೋಭಾವದೊಂದಿಗೆ ಇರಬೇಕು. ಆಳವಾದ ಉಸಿರಾಟ, ಚಿಕ್ಕ ಧ್ಯಾನ, ಅಥವಾ ಪೋಷಕರೊಂದಿಗೆ ಹಾಗೂ ಶಿಕ್ಷಕರೊಂದಿಗೆ ಮಾತನಾಡುವುದು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಸಮರ್ಪಕ ನಿದ್ರೆ, ಪಡೆಯಿರಿ
ಆರೋಗ್ಯಕರ ಆಹಾರ ಸೇವನೆ ಮಾಡಿ, ಪರೀಕ್ಷಾ ಸಮಯದಲ್ಲಿ ಸಮತೋಲನಯುತ ಆಹಾರ ಬಹಳ ಮುಖ್ಯ ಹಣ್ಣುಗಳು, ತರಕಾರಿಗಳು, ಕಾಯಿ-ಬೀಜಗಳು ಜೊತೆಗೆ ಬಾದಾಮಿ, ಪಿಸ್ತಾ, ವಾಲ್ಬಟ್ ಮಿತವಾಗಿ ಸೇವಿಸಿ ತಪ್ಪದೇ ಒಂದು ಲೋಟ ಬಾದಾಮಿ ಹಾಲು/ ಹಾಲು ಮತ್ತು ಮನೆಯಲ್ಲೇ ತಯಾರಿಸಿದ ಆಹಾರ ಸೇವಿಸಿ ಸಾಕಷ್ಟು ನೀರು ಮತ್ತು ಕಲ್ಲಂಗಡಿ ಹಣ್ಣನ್ನು ಸೇವಿಸಿ.
ಕೊನೆಯ ಕ್ಷಣದ ಒತ್ತಡ ತಪ್ಪಿಸಿ
ಕೊನೆಯ ಕ್ಷಣದಲ್ಲಿ ತುಂಬಾ ಓದುವುದರಿಂದ ಗೊಂದಲ ಮತ್ತು ಒತ್ತಡ ಹೆಚ್ಚಾಗಬಹುದು. ಆದ್ದರಿಂದ ನಿಯಮಿತವಾಗಿ ಪುನರ್‌ಮನನ ಮಾಡಿ ಮತ್ತು ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡುವುದು ಉತ್ತಮ.
ಅಗತ್ಯವಿದ್ದರೆ ಸಹಾಯ ಕೇಳಿ
ಶಿಕ್ಷಕರು, ಪೋಷಕರು ಅಥವಾ ಸ್ನೇಹಿತರ ಸಹಾಯ ಪಡೆಯಲು ಹಿಂಜರಿಯಬಾರದು. ಅವರ ಪ್ರೋತ್ಸಾಹವು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಮುನ್ನ ಇವು ನಿಮಗೆ ತಿಳಿದಿರಲಿ:
ಉತ್ತರ ಪತ್ರಿಕೆಯಲ್ಲಿ ಬರವಣಿಗೆ ಅಂದವಾಗಿರಲಿ,ಅನಾವಶ್ಯಕವಾಗಿ ಗೀಚುವುದು ಬೇಡ. ಸಮಯದ ಅರಿವಿರಲಿ.
ಇರುವ ಸಮಯದಲ್ಲಿ ಸಾಕಷ್ಟು ಮಾದರಿ/ಹಿಂದಿನ ವರ್ಷದ/ಮಾದರಿಯ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಿ.
ಓದುವ ಭರದಲಿ ಆರೋಗ್ಯವನ್ನು ಕಳೆದುಕೊಳ್ಳದಿರಿ. ಆರೋಗ್ಯಕರ ಆಹಾರವನ್ನು ಸೇವಿಸಿ. ಉತ್ತಮ ನಿದ್ದೆ ಅಗತ್ಯ
ಬಹು ಮುಖ್ಯವಾಗಿ ವಿದ್ಯಾರ್ಥಿಗಳು ಟಿ.ವಿ. ಮೊಬೈಲ್‌ನಿಂದ ದೂರವಿದ್ದು, ಅಧ್ಯಯನದ ಕಡೆ ಹೆಚ್ಚಿನ ಗಮನ ನೀಡಿ.
ಪರೀಕ್ಷೆಯ ಪ್ರವೇಶ ಪತ್ರ ಕಳೆದು ಹೋದಲ್ಲಿ ಆತಂಕಕ್ಕೆ ಒಳಗಾಗುವುದು ಬೆಡ ಮೊದಲೆ ಒಂದು ಅಥವಾ ಎರಡು ಜರಾಕ್ಸ್ ಪ್ರತಿಯನ್ನು ನಿಮ್ಮ ಹತ್ತಿರ ಇಟ್ಟುಕೊಳ್ಳುವುದು ಅಥವಾ ನಿಮ್ಮ ಶಾಲೆಯ ಮುಖ್ಯಸ್ಥರನ್ನು ಸಂಪರ್ಕಿಸುವುದು.
ಪರೀಕ್ಷೆಯೊಂದು ಭಯವಲ್ಲ, ಅದೊಂದು ಹಬ್ಬ ಸಂಭ್ರಮಿಸಿ. ಖಂಡಿತ ಯಶಸ್ಸು ನಿಮ್ಮದೇ. ನಿಮಗೆಲ್ಲರಿಗೂ ಶುಭವಾಗಲಿ.
ಸೋಮಶೇಖರ್ ಎನ್ ಎಸ್
(M.A, B.Ed, L.L.B)
ಖಚಾಂಚಿ, ಗ್ರೇಟರ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ
“ಪ್ರತಿ ಮತವೂ ಪ್ರಜಾಪ್ರಭುತ್ವದ ಅಡಿಪಾಯವನ್ನು ಬಲಪಡಿಸುತ್ತದೆ”-ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
Bengaluru : “ಮತದಾರರು ತಮ್ಮ ಮತದಾನದ ಹಕ್ಕನ್ನು ಮುಕ್ತವಾಗಿ ಮತ್ತು ನ್ಯಾಯಯುತವಾಗಿ, ಭಯ, ಒತ್ತಡ ಅಥವಾ ಪ್ರಚೋದನೆಯಿಲ್ಲದೆ ಚಲಾಯಿಸಬೇಕು” (Every Vote Strengthens the Foundation of Democracy) ಎಂದು ಕರ್ನಾಟಕದ ಗೌರವಾನ್ವಿತ (Governor) ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Gehlot) ಅವರು ಕರೆ ನೀಡಿದರು.
ಬೆಂಗಳೂರಿನಲ್ಲಿ ರಾಜ್ಯ ಚುನಾವಣಾ ಆಯೋಗ ಆಯೋಜಿಸಿದ್ದ 16 ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅತ್ಯುತ್ತಮ ಚುನಾವಣಾ ಕಾರ್ಯನಿರ್ವಹಣೆ ಸಂಬಂಧಿಸಿದಂತೆ ಭಾರತ ಚುನಾವಣಾ ಆಯೋಗ ನೀಡುವ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ವಿತರಿಸಿ ಅವರು ಮಾತನಾಡಿದರು.

“ರಾಷ್ಟ್ರೀಯ ಮತದಾರರ ದಿನವು ನಮ್ಮ ಸಂವಿಧಾನವು ಖಾತರಿಪಡಿಸಿದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕರ ಪ್ರಾಮುಖ್ಯತೆ, ಘನತೆ ಮತ್ತು ಪಾತ್ರವನ್ನು ನೆನಪಿಸುವ ಸಂದರ್ಭವಾಗಿದೆ. ಭಾರತದ ಪ್ರಜಾಪ್ರಭುತ್ವವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿದೆ. ಇದರ ಶಕ್ತಿ ನಮ್ಮ ಸಂವಿಧಾನದ ಆದರ್ಶಗಳು ಮತ್ತು ಪ್ರತಿಯೊಬ್ಬ ಪ್ರಜ್ಞಾಪೂರ್ವಕ ನಾಗರಿಕನ ಸಕ್ರಿಯ ಭಾಗವಹಿಸುವಿಕೆಯನ್ನು ಆಧರಿಸಿದೆ. ಒಂದು ಮತ – ಒಂದು ಧ್ವನಿ – ಒಂದು ಜವಾಬ್ದಾರಿ – ಇದು ಪ್ರಜಾಪ್ರಭುತ್ವದ ಆತ್ಮ” ಎಂದರು.
“ಪ್ರತಿಯೊಬ್ಬ ಅರ್ಹ ನಾಗರಿಕನಿಗೆ ಮತದಾನದ ಹಕ್ಕನ್ನು ನೀಡುವ ಮೂಲಕ, ಭಾರತೀಯ ಸಂವಿಧಾನವು ಆಡಳಿತದ ಸರ್ವೋಚ್ಚ ಅಧಿಕಾರವು ಜನರೊಂದಿಗೆ ಇರುತ್ತದೆ ಎಂದು ಖಚಿತಪಡಿಸಿದೆ. ಮತದಾನವು ಕಾನೂನುಬದ್ಧ ಹಕ್ಕು ಮಾತ್ರವಲ್ಲದೆ ಪ್ರಜಾಪ್ರಭುತ್ವದ ಕಡೆಗೆ ನಾಗರಿಕರ ಸಾಂವಿಧಾನಿಕ ಜವಾಬ್ದಾರಿಯೂ ಆಗಿದೆ. ಭಾರತದ ಪ್ರಜಾಪ್ರಭುತ್ವವು ಅದರ ಸಮಗ್ರತೆ ಮತ್ತು ಎಲ್ಲರನ್ನೂ ಒಳಗೊಳ್ಳುವಿಕೆಯಿಂದಾಗಿ ಜಗತ್ತಿನಲ್ಲಿ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಈ ಪ್ರಜಾಪ್ರಭುತ್ವದ ಬಲದ ಅಡಿಪಾಯವು ನ್ಯಾಯಯುತ, ಮುಕ್ತ ಮತ್ತು ಪಾರದರ್ಶಕ ಚುನಾವಣಾ ಪ್ರಕ್ರಿಯೆಯಲ್ಲಿದೆ, ಇದಕ್ಕಾಗಿ ಪ್ರತಿಯೊಬ್ಬ ಮತದಾರರ ಸಕ್ರಿಯ ಭಾಗವಹಿಸುವಿಕೆ ಅತ್ಯಗತ್ಯ” ಎಂದು ಅಭಿಪ್ರಾಯಪಟ್ಟರು.
“ಮತದಾನವು ನಮ್ಮ ಹಕ್ಕು ಮತ್ತು ನಮ್ಮ ಕರ್ತವ್ಯ ಎರಡೂ ಆಗಿದೆ.” ಚುನಾವಣೆಗಳಲ್ಲಿ ಮತದಾನವು ಗಣರಾಜ್ಯಕ್ಕೆ ತ್ಯಾಗದಂತೆ, ಅಲ್ಲಿ ಪ್ರತಿ ಮತವು ಒಂದು ಅರ್ಪಣೆಯಾಗಿದೆ. ನಾವು ಮತ ಚಲಾಯಿಸುವಾಗ, ನಾವು ಪ್ರಗತಿಪರ ಸರ್ಕಾರವನ್ನು ಆಯ್ಕೆ ಮಾಡುವುದಲ್ಲದೆ, ದೇಶದ ನೀತಿಗಳು, ಅಭಿವೃದ್ಧಿ ನಿರ್ದೇಶನ, ಭವಿಷ್ಯದ ಪೀಳಿಗೆಯ ಭವಿಷ್ಯ ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಬಲಪಡಿಸುತ್ತೇವೆ. ಆದ್ದರಿಂದ, ಪ್ರತಿ ಮತವು ಪ್ರಜಾಪ್ರಭುತ್ವದ ಅಡಿಪಾಯವನ್ನು ಬಲಪಡಿಸುತ್ತದೆಠ” ಎಂದು ಹೇಳಿದರು.
“ಪ್ರಪಂಚದಾದ್ಯಂತದ ವಿವಿಧ ದೇಶಗಳು ವಿಭಿನ್ನ ಮತದಾನ ವ್ಯವಸ್ಥೆಯನ್ನು ಹೊಂದಿವೆ. ಭಾರತವು ನೇರ ಚುನಾವಣಾ ವ್ಯವಸ್ಥೆಯನ್ನು ಬಳಸುತ್ತದೆ. ಯುವ ಶಕ್ತಿಯು ರಾಷ್ಟ್ರದ ಶಕ್ತಿ, ಚಿಂತನೆ ಮತ್ತು ನಾವೀನ್ಯತೆಯನ್ನು ಸಂಕೇತಿಸುತ್ತದೆ. ನಿಮ್ಮ ಒಂದೇ ಮತವು ದೇಶದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಪ್ರಾರಂಭಿಸಬಹುದು. ಪ್ರಜಾಪ್ರಭುತ್ವದಲ್ಲಿ ನಿಮ್ಮ ಭಾಗವಹಿಸುವಿಕೆಯು ಬಲವಾದ ಮತ್ತು ಎಲ್ಲರನ್ನೂ ಒಳಗೊಂಡ ಭಾರತಕ್ಕೆ ಅಡಿಪಾಯ ಹಾಕುತ್ತದೆ ಎಂದು ಯುವ ಜನತೆಗೆ ಕರೆ ನೀಡಿದರು.
ನ್ಯಾಯಯುತ ಚುನಾವಣೆಗಳು ಬಲವಾದ ಪ್ರಜಾಪ್ರಭುತ್ವದ ವಿಶಿಷ್ಟ ಲಕ್ಷಣಗಳಾಗಿವೆ. ಹೊಸದಾಗಿ ನೋಂದಾಯಿಸಲಾದ ಯುವ ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು, ಪ್ರಜಾಪ್ರಭುತ್ವ ಮೌಲ್ಯಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಜಾಗೃತ ಮತ್ತು ಜವಾಬ್ದಾರಿಯುತ ನಾಗರಿಕನಾಗಬೇಕು ಎಂದು ತಿಳಿಸಿದರು.

ರಾಷ್ಟ್ರೀಯ ಮತದಾರರ ದಿನವು ನಾವೆಲ್ಲರೂ ಪ್ರತಿಜ್ಞೆ ಮಾಡಲು ಪ್ರೇರೇಪಿಸುತ್ತದೆ. ಸಂವಿಧಾನದಲ್ಲಿ ಪ್ರತಿಪಾದಿಸಲಾದ ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿಹಿಡಿಯಿರಿ, ನಾವು ಮತ ಚಲಾಯಿಸಿ ಮತ್ತು ಇತರರು ಅದೇ ರೀತಿ ಮಾಡಲು ಪ್ರೋತ್ಸಾಹಿಸಿ ಮತ್ತು ರಾಷ್ಟ್ರದ ಕಡೆಗೆ ನಮ್ಮ ನಾಗರಿಕ ಜವಾಬ್ದಾರಿಗಳನ್ನು ನಿಷ್ಠೆಯಿಂದ ನಿರ್ವಹಿಸುವ ಪ್ರತಿಜ್ಞೆ ಮಾಡೋಣ ಎಂದು ಹೇಳಿದರು.
ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಗೌರವಾನ್ವಿತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಂದ ಅತ್ಯುತ್ಯಮ ಚುನಾವಣಾ ಕಾರ್ಯನಿರ್ವಹಣೆ ಪ್ರಶಸ್ತಿ ಸ್ವೀಕರಿಸಿದರು. ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿ ವಿ.ಅನ್ಬುಕುಮಾರ್, ಐಎಎಸ್, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್.ಎಂ, ಐಎಎಸ್ ಮತ್ತು ಇತರರು ಹಾಜರಿದ್ದರು.
advertisement

ವಿಶೇಷ ಮಕ್ಕಳ ಶಾಲೆಗಳ ಬೇಡಿಕೆ ಈಡೇರಿಸುವಂತೆ ರಾಜ್ಯ ಶಿಕ್ಷಕರು ಮತ್ತು ಶಿಕ್ಷಕೇತರ ಸಂಘದಿಂದ ಪ್ರತಿಭಟನೆ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಎಸ್.ಎಸ್.ಎಸ್.ಎ ಕಾರ್ಯದರ್ಶಿ ವಸಂತಕುಮಾರ್ ಶೆಟ್ಟಿ, ವಿಶೇಷ ಶಿಕ್ಷಕರು ಮತ್ತು ಶಿಕ್ಷಕೇತರ ಸಂಘದ ಬೇಡಿಕೆಗಳನ್ನು ಈಡೇರಿಸಿಲ್ಲ. ಇದನ್ನು ಪ್ರತಿಭಟಿಸಿ, ಸಂಘದ ಸದಸ್ಯರಲ್ಲದೇ ವಿಶೇಷ ಚೇತನ ಮಕ್ಕಳು, ಪಾಲಕರೂ ಸಹ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳ ಚುನಾಯಿತ ಪ್ರತಿನಿಧಿಗಳು ಕಳೆದ ವರ್ಷದ ಮಾರ್ಚ್ನಲ್ಲಿ ತಮ್ಮ ವೇತನ ಹಾಗೂ ಭತ್ಯೆಗಳನ್ನು ಶೇ 100ರಷ್ಟು ಹೆಚ್ಚಿಸಿಕೊಂಡಿದ್ದಾರೆ. ಆದರೆ ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯು 2014–15ರಲ್ಲಿ ನಿಗದಿಪಡಿಸಿದ ಅನುದಾನ ಮೊತ್ತವನ್ನು ಹೆಚ್ಚಿಸುವ ಯಾವುದೇ ಕ್ರಮ ಕೈಗೊಂಡಿಲ್ಲ.ಸರ್ಕಾರೇತರ ಸಂಸ್ಥೆಗಳು ನಿರ್ವಹಿಸುವ ವಿಶೇಷ ಶಾಲೆಗಳು ಪ್ರತಿ ವಿದ್ಯಾರ್ಥಿಗೆ ತಿಂಗಳಿಗೆ ರೂ.9,000 ಅನುದಾನಕ್ಕೆ ಅರ್ಹವಾಗಿವೆ. ಈ ಅನುದಾನವನ್ನು ವರ್ಷದಲ್ಲಿ ಕೇವಲ 10 ತಿಂಗಳುಗಳಷ್ಟೇ ನೀಡಲಾಗುತ್ತದೆ ಎಂದರು.
ಜೀವನ ವೆಚ್ಚ ದಿನೇದಿನೇ ಏರುತ್ತಿರುವ ಹಿನ್ನೆಲೆಯಲ್ಲಿ ಎನ್ಜಿಒಗಳಿಗೆ ವಿಶೇಷ ಶಾಲೆಗಳನ್ನು ನಿರ್ವಹಿಸುವುದು ಕಷ್ಟಕರವಾಗಿದೆ. ಸರ್ಕಾರದ ಅನುದಾನಿತ ವಿಶೇಷ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರು ಹಾಗೂ ಎನ್ಜಿಒಗಳ ಮೂಲಕ ನಡೆಸಲಾಗುವ ವಿಶೇಷ ಶಾಲೆಗಳ ಶಿಕ್ಷಕರ ವೇತನದಲ್ಲಿ ಭಾರೀ ವ್ಯತ್ಯಾಸವಿರುವುದರಿಂದ ಹೆಚ್ಚಿನ ಶಿಕ್ಷಕರು ಈ ಶಾಲೆಗಳಿಗೆ ಸೇರ್ಪಡೆಯಾಗಲು ಆಸಕ್ತಿ ತೋರಿಸುತ್ತಿಲ್ಲ. ಸರ್ಕಾರದ ಅನುದಾನಿತ ವಿಶೇಷ ಶಾಲೆಯ ಶಿಕ್ಷಕರು ತಿಂಗಳಿಗೆ ರೂ.60,000 ರಿಂದ ರೂ.80,000ರವರೆಗೆ ವೇತನ ಪಡೆಯುತ್ತಿದ್ದರೆ, ಎನ್ಜಿಒ ನಡೆಸುತ್ತಿರುವ ವಿಶೇಷ ಶಾಲೆಗಳ ಶಿಕ್ಷಕರಿಗೆ ತಿಂಗಳಿಗೆ ಕೇವಲ ರೂ.20,250 ಗೌರವಧನ ಮಾತ್ರ ಲಭಿಸುತ್ತಿದೆ. ಸುಮಾರು ರೂ.40,000ರಷ್ಟು ವೇತನ ವ್ಯತ್ಯಾಸ ಇರುವ ಕಾರಣದಿಂದ ಎನ್ಜಿಒ ನಿರ್ವಹಿತ ವಿಶೇಷ ಶಾಲೆಗಳಿಗೆ ಹೆಚ್ಚಿನ ಶಿಕ್ಷಕರು ಸೇರುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಅನುದಾನ ಹೆಚ್ಚಿಸುವ ಅಗತ್ಯತೆ ಕುರಿತು ಅಧಿಕಾರಿಗಳಿಗೆ ಮನವರಿಕೆ ಮಾಡಲು ನಡೆಸಿದ ಪ್ರಯತ್ನಗಳು ಸಫಲವಾಗಿಲ್. “ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರು ಅನುದಾನವನ್ನು ಶೇ.40ರಷ್ಟು ಹೆಚ್ಚಿಸುವುದಾಗಿ ನಮಗೆ ಈ ಹಿಂದೆ ಭರವಸೆ ನೀಡಿದ್ದರು. ಕಳೆದ ವರ್ಷ ನಾವು ಅವರನ್ನು ಭೇಟಿ ಮಾಡಿದ್ದೆವು. ಆ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಅಂಗವಿಕಲರು ಮತ್ತು ಹಿರಿಯ ನಾಗರಿಕರ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರೂ ಉಪಸ್ಥಿತರಿದ್ದರು. ಒಂದು ವರ್ಷಕ್ಕೂ ಹೆಚ್ಚು ಕಾಲ ಒಳ್ಳೆಯ ಸುದ್ದಿ ನಿರೀಕ್ಷಿಸಿದ್ದೆವು, ಆದರೆ ಫಲ ದೊರೆತಿಲ್ಲ. ಬೇರೆ ಆಯ್ಕೆ ಇಲ್ಲದೇ ನಮ್ಮ ದೀರ್ಘಕಾಲದ ಬೇಡಿಕೆಗಳ ಪರವಾಗಿ ಪ್ರತಿಭಟನೆ ನಡೆಸಬೇಕಾಗಿದೆ,” ಎಂದು ವಸಂತಕುಮಾರ್ ಶೆಟ್ಟಿ ಹೇಳಿದರು.
ಇದೇ ವೇಳೆ, ಬೆಂಗಳೂರಿನಲ್ಲಿ ಮಾನಸಿಕವಾಗಿ ಹಿಂದುಳಿದವರಿಗಾಗಿ ಸದ್ಭಾವನಾ ಪ್ರತಿಷ್ಠಾನದ ವಿಶೇಷ ಶಾಲೆ ನಡೆಸುತ್ತಿರುವ ಸಂಜಯ್ ಸಬರಾದ್ ಮಾತನಾಡಿ, 2016–17ರಲ್ಲಿ ‘ಸಿಂಬಯೋಸಿಸ್ ಆಫ್ ಟೆಕ್ನಾಲಜಿ, ಎನ್ವಿರಾನ್ಮೆಂಟ್ ಅಂಡ್ ಮ್ಯಾನೇಜ್ಮೆಂಟ್’ ಸಂಸ್ಥೆಯು ಸಮೀಕ್ಷೆ ನಡೆಸಿದ್ದು, ಎನ್ಜಿಒಗಳು ನಿರ್ವಹಿಸುವ ವಿಶೇಷ ಶಾಲೆಗಳು ಅನುದಾನಿತ ಶಾಲೆಗಳಿಗಿಂತ ಉತ್ತಮವಾಗಿವೆ ಎಂಬ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. “ಎನ್ಜಿಒಗಳು ನಡೆಸುತ್ತಿರುವ ವಿಶೇಷ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರಿಗೂ ಅನುದಾನಿತ ಶಾಲೆಗಳ ಶಿಕ್ಷಕರಿಗೆ ನೀಡುವಂತೆ ಸಮಾನ ವೇತನವನ್ನು ಸರ್ಕಾರ ನೀಡಬೇಕು ಎಂಬುದೇ ನಮ್ಮ ಪ್ರಮುಖ ಬೇಡಿಕೆ,” ಎಂದು ಹೇಳಿದರು.
ರಾಜ್ಯದಲ್ಲಿ ಸುಮಾರು 250 ವಿಶೇಷ ಶಾಲೆಗಳಿದ್ದು, ಅವುಗಳಲ್ಲಿ ಕೇವಲ 180 ಎನ್ಜಿಒಗಳ ಮೂಲಕ ನಿರ್ವಹಿಸಲ್ಪಡುವ ಶಾಲೆಗಳು ಮಾತ್ರ ಸರ್ಕಾರದಿಂದ ಅನುದಾನ ಪಡೆಯುತ್ತಿವೆ. ಉಳಿದ ಸುಮಾರು 70 ವಿಶೇಷ ಶಾಲೆಗಳು ರಾಜ್ಯ ಸರ್ಕಾರದಿಂದ ಯಾವುದೇ ಅನುದಾನವನ್ನು ಪಡೆಯುತ್ತಿಲ್ಲ ಎಂದರು.
ಮಲ್ಲೇಶ್ವರ: ಮಟ್ಟಿ ಮಣ್ಣಿನ ರಾಜ್ಯಮಟ್ಟದ ಹೊನಲು-ಬೆಳಕಿನ ಕಬಡ್ಡಿ ಪಂದ್ಯಾವಳಿ
*ಸಾಂಪ್ರಾದಾಯಿಕ ಕಬಡ್ಡಿ ಆಟದ ಅಂಕಣವನ್ನು ಕುಂಕುಮ,ಹರಿಶಿನ, ಶ್ರೀಗಂಧ, ಪಚ್ಚಕರ್ಪೂರ,ಹರಳಣ್ಣೆ ಹಾಕಿದ ಮಟ್ಟಿ ಮಣ್ಣಿನ ಅಂಕಣದಲ್ಲಿ ಪಂದ್ಯಗಳು ಜರುಗಲಿದೆ*
*ಡಿಸೆಂಬರ್ 12ರಿಂದ 14ರವರಗೆ ಅಂತರಾಷ್ಟ್ರೀಯ ಕಬಡ್ಡಿ ಪಟುಗಳಾದ ಎಸ್.ಬಿ.ಶಿವಲಿಂಗಯ್ಯ, ಚಿನ್ನಸ್ವಾಮಿರೆಡ್ಡಿ ಸ್ಮರಣಾರ್ಥ ರಾಜ್ಯಮಟ್ಟದ ಹೊನಲು-ಬೆಳಕಿನ ಕಬಡ್ಡಿ ಪಂದ್ಯಾವಳಿ* (Kabaddi).ಮಲ್ಲೇಶ್ವರಂ: (Malleswaram) ಕೋದಂಡರಾಮಪುರ ಕಬಡ್ಡಿ ಆಟದ ಮೈದಾನದಲ್ಲಿ ಡಿಸೆಂಬರ್ 12ರಿಂದ 14ರವರಗೆ ಅಂತರಾಷ್ಟ್ರೀಯ ಕಬಡ್ಡಿ ಪಟುಗಳಾದ ಎಸ್.ಬಿ.ಶಿವಲಿಂಗಯ್ಯ, ಚಿನ್ನಸ್ವಾಮಿರೆಡ್ಡಿ ಸ್ಮರಣಾರ್ಥ ರಾಜ್ಯಮಟ್ಟದ ಹೊನಲು-ಬೆಳಕಿನ ಕಬಡ್ಡಿ ಪಂದ್ಯಾವಳಿ ಕುರಿತು ಅಧ್ಯಕ್ಷರಾದ ಬಿ.ಕೆ.ಶಿವರಾಂರವರು ಕಪ್ ಬಿಡುಗಡೆ ಮಾಡಿ ಮೂರು ದಿನಗಳ ಕಾಲ ಜರುಗುವ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ ಕುರಿತು ಮಾಧ್ಯಮ ಉದ್ದೇಶಿಸಿ ಮಾತನಾಡಿದರು.ಮಲ್ಲೇಶ್ವರಂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅನೂಪ್ ಅಯ್ಯಂಗಾರ್, ಸಮಾಜ ಸೇವಕರಾದ ಶ್ರೀವಲ್ಲಭರವರು, ಕ್ರೀಡಾಪಟುಗಳು ಉಪಸ್ಥಿತರಿದ್ದರು.
*ಅಧ್ಯಕ್ಷರಾದ ಬಿ.ಕೆ.ಶಿವರಾಂರವರು* ಮಾತನಾಡಿ ದೇಶಿಯ ಕ್ರೀಡೆ ಕಬ್ಬಡಿಯನ್ನು ಪ್ರೋತ್ಸಾಹಿಸಲು ಯಂಗ್ ಸ್ಟರ್ಸ್ ಕಬಡ್ಡಿ ಕ್ಲಬ್ ಅತ್ಯಂತ ಹಳೆಯದಾದ ಕ್ಲಬ್ 1965ರಲ್ಲಿ ಸ್ಥಾಪನೆಯಾಯಿತು.
ಈ ಕ್ಲಬ್ ನಲ್ಲಿ 400ರಿಂದ 500ಕ್ಕಿಂತ ಹೆಚ್ಚು ಕಬಡ್ಡಿ ಪಟುಗಳು ತರಭೇತಿ ಪಡೆದು 80ಕ್ಕೂ ಹೆಚ್ಚು ಕ್ರೀಡಾಪಟುಗಳು ರಾಷ್ಟ್ರ, ರಾಜ್ಯ ಮತ್ತು ವಿಶ್ವವಿದ್ಯಾಲಯ ಪ್ರತಿನಿಧಿಸಿದ್ದಾರೆ.1982ರಲ್ಲಿ ಏಷಿಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ನಮ್ಮ ಕ್ಲಬ್ ಆಟಗಾರರಾದ ವೈ.ಕುಪ್ಪರಾಜ್ ಮತ್ತು ಚಿನ್ನಸ್ವಾಮಿರೆಡ್ಡಿರವರು ಭಾರತ ತಂಡದಲ್ಲಿ ಪ್ರತಿನಿಧಿಸಿದ್ದರು,ಅಂದು ಚಿನ್ನದ ಪದಕ ಗಳಿಸಿತ್ತು ಭಾರತ ತಂಡ. 60ವರ್ಷ ಇತಿಹಾಸವಿರುವ ನಮ್ಮ ಕ್ಲಬ್ 25ರಾಜ್ಯಮಟ್ಟದ, 4ಅಖಿಲ ಭಾರತ ಹಾಗೂ ಕೆವಿಎಲ್ ಮಾದರಿಯಲ್ಲಿ ವಾಲಿಬಾಲ್ ಪಂದ್ಯಾವಳಿ, ಪುಟ್ ಬಾಲ್, ಖೋ-ಖೋ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ.
ಕ್ರೀಡೆಗಳಿಗೆ ಪ್ರೋತ್ಸಾಹ ನೀಡಬೇಕು ಎಂಬ ಉದ್ದೇಶ, ಯುವ ಕ್ರೀಡಾಪಟುಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ತಯಾರಿ ಮಾಡಬೇಕು ಎಂಬ ನಿಟ್ಟಿನಲ್ಲಿ ಎಸ್.ಬಿ.ಶಿವಲಿಂಗಯ್ಯ, ಚಿನ್ನಸ್ವಾಮಿರೆಡ್ಡಿರವರ ಸ್ಮರಣಾರ್ಥ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯನ್ನು ಮೂರು ದಿನಗಳ ಕಾಲ ಆಯೋಜಿಸಲಾಗಿದೆ. 12ನೇ ತಾರೀಖು ಸಂಜೆ 6ಗಂಟೆಗೆ ಉದ್ಘಾಟನೆಯನ್ನು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಹೆಚ್.ಎಂ.ರೇವಣ್ಣರವರು, ಧಾರ್ಮಿಕ ದತ್ತಿ ಇಲಾಖೆ ಸಮಿತಿ ಸದಸ್ಯರಾದ ಕೆ.ಎಂ.ನಾಗರಾಜ್, ಶಾಸಕರುಗಳಾದ ಡಾ||ಸಿ.ಎನ್.ಅಶ್ವಥ್ ನಾರಾಯಣ್, ಮುನಿರತ್ನಂ ನಾಯ್ಡು, ಮಾಜಿ ಮಹಾಪೌರರಾದ ಜೆ.ಹುಚ್ಚಪ್ಪ, ಅಂತರಾಷ್ಟ್ರೀಯ ಕಬಡ್ಡಿ ಆಟಗಾರರಾದ ಹೊನ್ನಪ್ಪಗೌಡ, ಶ್ರೀಮತಿ ವಸಂತಚಿನ್ನಸ್ವಾಮಿರೆಡ್ಡಿ, ಶ್ರೀಮತಿ ಆಶಾ ಸೋಮಶೇಖರ್ ರವರು ಉದ್ಘಾಟನೆ ಮಾಡಲಿದ್ದಾರೆ.
36 ಕಬಡ್ಡಿ ತಂಡಗಳು ಭಾಗವಹಿಸಲಿದ್ದಾರೆ ಪ್ರಥಮ ಬಹುಮಾನ 75ಸಾವಿರ ರೂಪಾಯಿ ನಗದು ಪುರಸ್ಕಾರ, ದ್ವೀತಿಯ 50ಸಾವಿರ, 3ಮತ್ತು 4 ಸ್ಥಾನಕ್ಕೆ 25ಸಾವಿರ ರೂಪಾಯಿ ಬಹುಮಾನ ಪಾರಿತೋಷಕ. ಉತ್ತಮ ಆಟಗಾರ, ಉತ್ತಮ ದಾಳಿಗಾರ, ಉತ್ತಮ ಅಲ್ ರೌಂಡರ್, ಉತ್ತಮ ರೈಡರ್ 5ಸಾವಿರ ಬಹುಮಾನ ನೀಡಲಾಗುತ್ತದೆ.
ದೇಶಿಯ ಸಾಂಪ್ರಾದಾಯಿಕ ಶೈಲಿಯಲ್ಲಿ ಕುಂಕುಮ, ಹರಿಶಿನ, ಪಚ್ಚಕರ್ಪೂರ,ಹರಳಣ್ಣೆ ಶ್ರೀಗಂಧ ವನ್ನು ಹಾಕಿ ಅಂಕಣವ್ನನು ಸಜ್ಜುಗೊಳಿಸಲಾಗಿದೆ.
ವಿಧಾನಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್, ಶಾಸಕರಾದ ಮುನಿರತ್ನರವರು, ಗುತ್ತಿಗೆದಾರರಾದ ಚಿನ್ನಸ್ವಾಮಿರಾಜುರವರು, ಯಂಗ್ ಸ್ಟರ್ಸ್ ಕಬಡ್ಡಿ ಕ್ಲಬ್‌ನ ಸಂಸ್ಥಾಪಕರಾದ ಮಣಿ ಹಾಲಿ ಕಾರ್ಯದರ್ಶಿಗಳು ಅವರ ಸಹೋದ್ಯೋಗಿಗಳಾದ ರಾಚಯ್ಯ,
ಕೈಲಾಸ್‌ನಾಥ್ ಮಿಶ್ರ, ರತ್ನಾಕರ,
ಮುನಿರತ್ನ (ನೈನಿ), ಮುನಿರತ್ನ (ಐಟಿಐ),ನರಸಯ್ಯ,(ಕುಳ್ಳ), ರಾಜಗೋಪಾಲ ರೆಡ್ಡಿ,ನಾ.
ವೆಂಕಟೇಶ್, ನರಸಿಂಹ, ನಾಗಭೂಷಣ್ ದಾಮೋಧರ ಕುಲಕರ್ಣಿ, ಸಿದ್ದಾರೆಡ್ಡಿ,ಶ್ರೀನಿವಾಸ ಪ್ರಭುಕೃಷ್ಣರೆಡ್ಡಿ ಮಣಿ (ಭೂಸಿ), ರಾಜೇಂದ್ರ ರಾಜು, ಉದಯ್ ಶಂಕರ್, ಚಂದ್ರ ರೆಡ್ಡಿ. ಚಂದ್ರಶೇಖರ್ ನಾಯ್ಡು. ಜಗನಾಥರೆಡ್ಡಿ ಇನ್ನು ಮುಂತಾದ ಹಿರಿಯ ಮತ್ತು ಕಿರಿಯ ಕಬಡ್ಡಿ ಆಟಗಾರರು ಯಂಗ್ ಸ್ಟರ್ಸ್ ಕಬಡ್ಡಿ ಕ್ಲಬ್‌ಗೆ ಶ್ರಮಿಸಿರುತ್ತಾರೆ. ಇದಲ್ಲದೆ ಯಂಗ್‌ಸ್ಟರ್ಸ್ ಕಬಡ್ಡಿ ಕ್ಲಬ್‌ನ ಏಳಿಗೆಯಲ್ಲಿ ಬೆಂಗಳೂರು ಅರುಣ ಸ್ಪೋರ್ಟ್ಸ್ ಕ್ಲಬ್ ಹಾಗೂ ಕಾಡು ಮಲ್ಲೇಶ್ವರ ಗೆಳೆಯರ ಬಳಗ ಪ್ರಮುಖ ಪಾತ್ರ ವಹಿಸಿರುತ್ತದೆ
