
ವಿಮಾ ಕಂಪೆನಿಗಳು ದಾರಿ ತಪ್ಪಿಸುತ್ತಿವೆ; ವ್ಯಾಪಕ ಎಚ್ಚರಿಕೆ ಅಗತ್ಯ -ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ

ಅಂತರಾಷ್ಟ್ರೀಯ ಪೋಟೋ – ವಿಡಿಯೋ ಪ್ರದರ್ಶನ ಮತ್ತು ಮಾರಾಟ

ಬಾಗ್ಮನೆ ಸೊಲೇರಿಯಂ ಸಿಟಿಯಲ್ಲಿ ಪಂಜಾಬ್ ಗ್ರಿಲ್ ನ 60ನೇ ಶಾಖೆ
ಇದು ಬೆಂಗಳೂರು ನಗರದಲ್ಲಿರುವ ಪಂಜಾಬ್ ಗ್ರಿಲ್ ನ 10ನೇ ಶಾಖೆಯಾಗಿದೆ. ದೇಶದಾದ್ಯಂತ ಆಹಾರ ಪ್ರಿಯರಿಗೆ ಅತ್ಯುತ್ತಮ ಗುಣಮಟ್ಟದ ಆಹಾರವನ್ನು ಉಣಬಡಿಸುವ ಸಂಸ್ಥೆಯ ಯಶಸ್ವಿ ಪಯಣದಲ್ಲಿ ಈ ನೂತನ ಶಾಖೆಯ ಉದ್ಘಾಟನೆಯು ಒಂದು ಮಹತ್ವದ ಮೈಲಿಗಲ್ಲಾಗಿದೆ. ಬೆಂಗಳೂರಿನ ಅತ್ಯಂತ ಜನನಿಬಿಡ ವಾಣಿಜ್ಯ ವಲಯದಲ್ಲಿ ಆಯಕಟ್ಟಿನ ಜಾಗದಲ್ಲಿ ಈ ಹೊಸ ರೆಸ್ಟೋರೆಂಟ್ ತಲೆಎತ್ತಿದೆ. ಇದು ಐಟಿ ಹಬ್ ನ ಉದ್ಯೋಗಿಗಳು, ಕಾರ್ಪೊರೇಟ್ ಗ್ರಾಹಕರು ಹಾಗೂ ವೈವಿಧ್ಯಮಯ ಆಹಾರ ಪ್ರೇಮಿಗಳನ್ನು ಸೆಳೆಯುವ ದೃಷ್ಟಿಯಿಂದ ವಿನ್ಯಾಸಗೊಂಡಿದೆ.

ದೇಶದ ಪ್ರಮುಖ ಮೆಟ್ರೋ ನಗರಗಳು ಹಾಗೂ ಪ್ರಥಮ ದರ್ಜೆ ನಗರಗಳಲ್ಲಿ ಗುಣಮಟ್ಟ, ರುಚಿ ಮತ್ತು ಅತ್ಯುತ್ತಮ ಸೇವೆಗೆ ಹೆಸರಾಗಿರುವ ಪಂಜಾಬ್ ಗ್ರಿಲ್, ಭಾರತದಲ್ಲಿ ಫೈನ್-ಡೈನಿಂಗ್ ಕ್ಷೇತ್ರಕ್ಕೆ ಹೊಸ ಭಾಷ್ಯ ಬರೆದಿದೆ.
ಈ ಯಶಸ್ಸಿನ ಕುರಿತು ಲೈಟ್ ಬೈಟ್ ಫುಡ್ಸ್ ಪ್ರೈವೇಟ್ ಲಿಮಿಟೆಡ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಂಜಿತ್ ಪಾಲಿಯಾತ್ ಅವರು ಮಾತನಾಡಿ,”60ನೇ ಶಾಖೆಯ ಮೈಲಿಗಲ್ಲನ್ನು ತಲುಪಿರುವುದು ನಮ್ಮ ಇಡೀ ತಂಡಕ್ಕೆ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಬೆಂಗಳೂರು ಯಾವಾಗಲೂ ಉತ್ತಮ ಆಹಾರ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಮತ್ತು ಪ್ರೀತಿಸುವ ನಗರ. ಬಾಗ್ಮನೆ ಸೊಲೇರಿಯಂ ಸಿಟಿಯು ನಮಗೆ ನಗರದ ಕ್ರಿಯಾತ್ಮಕ ಮತ್ತು ವೈವಿಧ್ಯಮಯ ಗ್ರಾಹಕರನ್ನು ತಲುಪಲು ಉತ್ತಮ ವೇದಿಕೆ ಕಲ್ಪಿಸಿದೆ. ಇಷ್ಟು ವರ್ಷಗಳಿಂದ ಪಂಜಾಬ್ ಗ್ರಿಲ್ ಬ್ರ್ಯಾಂಡ್ ಕಾಯ್ದುಕೊಂಡು ಬಂದಿರುವ ಅದೇ ಪ್ರೀತಿ ಮತ್ತು ಅತ್ಯುನ್ನತ ರುಚಿಯೊಂದಿಗೆ ಗ್ರಾಹಕರನ್ನು ಸತ್ಕರಿಸಲು ನಾವು ಉತ್ಸುಕರಾಗಿದ್ದೇವೆ,” ಎಂದು ಸಂತಸ ಹಂಚಿಕೊಂಡರು.

ನಿತ್ಯ ಪಂಚಾಂಗ 30-05-2026 SATURDAY ಶನಿವಾರ
ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 30.05.2026 SATURDAY.ಶನಿವಾರ
ಸಂವತ್ಸರ: ಪರಾಭವ
SAMVATSARA : PARABHAVA.
ಆಯಣ: ಉತ್ತರಾಯಣ
AYANA: UTTARAYANA.
ಋತು: ಗ್ರೀಷ್ಮ
RUTHU: GREESHMA.
ಮಾಸ: ಅಧಿಕಜೇಷ್ಠ
MAASA: ADHIKA JYESHTHA.
ಪಕ್ಷ: ಶುಕ್ಲ
PAKSHA: SHUKLA.
ತಿಥಿ: ಚತುರ್ದಶಿ
TITHI: CHATURDASHI.
ಶ್ರದ್ದಾತಿಥಿ: ಪೂರ್ಣಿಮಾ
SHRADDHA TITHI: POURNIMA.
ವಾಸರ: ಸ್ಥಿರವಾಸರ
VAASARA: STHIRAVAASARA.
ನಕ್ಷತ್ರ: ವೈಶಾಖ
NAKSHATRA: VISHAKHA.
ಯೋಗ: ಶಿವ
YOGA: SHIVA.
ಕರಣ: ವಣಿಕ್
KARANA: VANIK.
ಸೂರ್ಯೋದಯ (Sunrise): 05:53
ಸೂರ್ಯಸ್ತ (Sunset): 06:56
ರಾಹುಕಾಲ (RAHU KAALA) : 09:00AM To 10:30AM.
ದಿನವಿಶೇಷ SPECIAL EVENT
30.05.2026
ಮನ್ವದಿ .
ಕತಾರ್ ರಾಷ್ಟ್ರೀಯ ರಕ್ತದಾನ ಕೇಂದ್ರದಲ್ಲಿ “Everyone Could Be a Hero” ರಕ್ತದಾನ ಶಿಬಿರ
BENGALURU : ಭಾರತೀಯ ಸಾಂಸ್ಕೃತಿಕ ಕೇಂದ್ರ (ICC) ಹಾಗೂ ಭಾರತೀಯ ರಾಯಭಾರ ಕಚೇರಿ, ದೋಹಾ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಸಂಘ ಕತಾರ್ (KSQ), ಹಮದ್ ಮೆಡಿಕಲ್ ಕಾರ್ಪೊರೇಷನ್ ಸಹಯೋಗದಲ್ಲಿ ಕತಾರ್ ರಾಷ್ಟ್ರೀಯ ರಕ್ತದಾನ ಕೇಂದ್ರದಲ್ಲಿ “Everyone Could Be a Hero” ಎಂಬ ಧ್ಯೇಯ ವಾಕ್ಯದೊಂದಿಗೆ ಭವ್ಯ ರಕ್ತದಾನ ಶಿಬಿರವನ್ನು (Blood Camp) 2026ರ ಶುಕ್ರವಾರದಂದು ಯಶಸ್ವಿಯಾಗಿ ಆಯೋಜಿಸಿತು.
ಈ ಕಾರ್ಯಕ್ರಮಕ್ಕೆ ಭಾರತೀಯ ರಾಯಭಾರ ಕಚೇರಿ, ದೋಹಾದ ಪ್ರಥಮ ಕಾರ್ಯದರ್ಶಿ ಶ್ರೀ ಈಶ್ ಸಿಂಘಾಲ್ ಹಾಗೂ ಹಮದ್ ಮೆಡಿಕಲ್ ಕಾರ್ಪೊರೇಷನ್‌ನ ವೈದ್ಯಕೀಯ ವ್ಯವಸ್ಥಾಪಕಿ ಮತ್ತು ಡೋನರ್ ರಿಕ್ರೂಟ್‌ಮೆಂಟ್ ಮುಖ್ಯಸ್ಥೆ ಶ್ರೀಮತಿ ಸಾದಿಕಾ ಅಲ್ ಮಹ್ಮೂದಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕಾರ್ಯಕ್ರಮವು ಕರ್ನಾಟಕ ಸಂಘ ಕತಾರ್‌ನ ಪ್ರಧಾನ ಕಾರ್ಯದರ್ಶಿ ಶ್ರೀ ಸುಜಿತ್ ಕುಮಾರ್ ಅವರ ಸ್ವಾಗತ ಭಾಷಣದೊಂದಿಗೆ ಆರಂಭವಾಯಿತು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮುಖ್ಯ ಅತಿಥಿ ಶ್ರೀ ಈಶ್ ಸಿಂಘಾಲ್ ಅವರು, ರಕ್ತದಾನವು ಜೀವ ಉಳಿಸುವ ಮಹತ್ತರ ಮಾನವೀಯ ಕಾರ್ಯವಾಗಿದ್ದು, ಸಮುದಾಯದ ಪ್ರತಿಯೊಬ್ಬರೂ ನಿಯಮಿತವಾಗಿ ರಕ್ತದಾನದಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು. ಕರ್ನಾಟಕ ಸಂಘ ಕತಾರ್ ಅಧ್ಯಕ್ಷ ಶ್ರೀ ಸುಬ್ರಮಣ್ಯ ಹೆಬ್ಬಾಗಿಲು ಅವರು ಸಂಘದ ಸಾಮಾಜಿಕ ಸೇವೆ ಹಾಗೂ ಸಮುದಾಯ ಕಲ್ಯಾಣದ ಬದ್ಧತೆಯನ್ನು ಒತ್ತಿಹೇಳಿದರು.
ಶ್ರೀಮತಿ ಸಾದಿಕಾ ಅಲ್ ಮಹ್ಮೂದಿ ಅವರು ಕತಾರ್ ಆಸ್ಪತ್ರೆಗಳಲ್ಲಿ ರಕ್ತ ಸಂಗ್ರಹದ ಅಗತ್ಯತೆ ಕುರಿತು ಮಾತನಾಡಿ, ಭಾರತೀಯ ಸಮುದಾಯದ ನಿರಂತರ ಬೆಂಬಲವನ್ನು ಪ್ರಶಂಸಿಸಿದರು. ಕಾರ್ಯಕ್ರಮದಲ್ಲಿ ವೈದ್ಯಕೀಯ ತಜ್ಞ ಡಾ. ಅಮಿತ್ ವರ್ಮಾ ಅವರು ರಕ್ತದಾನದ ಆರೋಗ್ಯಕರ ಪ್ರಯೋಜನಗಳು ಹಾಗೂ ಅದರ ಮಹತ್ವದ ಬಗ್ಗೆ ವಿವರವಾಗಿ ಮಾತನಾಡಿ, ಸಮಾಜದಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ 25 ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ ಹಿರಿಯ ದಾನಿಗಳಾದ ಡಾ. ಸಂಜಯ್ ಕುದರಿ, ಶ್ರೀ ಶ್ರೀಧರ್ ನಾಯಕ್ ಹಾಗೂ ಶ್ರೀ ಮೊಹಮ್ಮದ್ ಸೊಹೈಲ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಶಿಬಿರಕ್ಕೆ ಭಾರತೀಯ ಅನಿವಾಸಿ ಸಮುದಾಯದಿಂದ ಭಾರೀ ಸ್ಪಂದನೆ ದೊರೆತಿದ್ದು, ಸಂಗ್ರಹಿಸಲಾದ ರಕ್ತ ಘಟಕಗಳು ಹಮದ್ ಮೆಡಿಕಲ್ ಕಾರ್ಪೊರೇಷನ್‌ನ ಜೀವ ರಕ್ಷಕ ಸೇವೆಗಳಿಗೆ ನೆರವಾಗಲಿವೆ.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ, ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಮತ್ತು ತಂಡದವರ ಸಂಗೀತ ಕಾರ್ಯಕ್ರಮ ಸಂಭ್ರಮ 2026 ರ ಪೋಸ್ಟರ್ ಅನ್ನು ಅಧಿಕೃತವಾಗಿ ಅನಾವರಣಗೊಳಿಸಲಾಯಿತು. ಈ ಕಾರ್ಯಕ್ರಮವು ಜೂನ್ 12, 2026 ರಂದು ದೋಹಾದ DPS MIS ಆಡಿಟೋರಿಯಂನಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಶ್ರೀಮತಿ ಶುಭಾ ಅವರು ನಿರೂಪಿಸಿದರೆ, ಉಪಾಧ್ಯಕ್ಷ ಶ್ರೀ ಅನಿಲ್ ಭಾಸಗಿ ಅವರು ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದ ಎಲ್ಲಾ ಸ್ವಯಂಸೇವಕರು, ಬೆಂಬಲಿಗರು, ಮಾಧ್ಯಮ ಸಹಯೋಗಿಗಳು ಹಾಗೂ ರಕ್ತದಾನಿಗಳಿಗೆ ಕರ್ನಾಟಕ ಸಂಘ ಕತಾರ್ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದೆ.
ಡಿಕೆಶಿಗೆ ಬಿಗ್ ರಿಲೀಫ್: 2 ವರ್ಷ ವಿದೇಶ ಪ್ರವಾಸಕ್ಕೆ ನ್ಯಾಯಾಲಯದಿಂದ ಗ್ರೀನ್ ಸಿಗ್ನಲ್..!
ಕಬ್ಬನ್ ಪಾರ್ಕ್ ಆವರಣದಲ್ಲಿ ಆದೇಶ ಉಲ್ಲಂಘಿಸಿ ಕಟ್ಟಡ ನಿರ್ಮಾಣ: ವಾಕರ್ಸ್ ಅಸೋಸಿಯೇಷನ್ ಖಂಡನೆ
ಅಕ್ರಮ ನಿರ್ಮಾಣ ಮತ್ತು ನಿಯಂತ್ರಣರಹಿತ ವಾಣಿಜ್ಯೀಕರಣದಿಂದ ಕಬ್ಬನ್ ಪಾರ್ಕ್ನ ಪರಿಸರಕ್ಕೆ ಭಾರಿ ಅಪಾಯ ಎದುರಾಗಿದೆ. ಕಾನೂನು ಮತ್ತು ಪರಿಸರ ಸಂರಕ್ಷಣೆಯನ್ನು ಪರಿಗಣಿಸದೇ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಕಾನೂನು ಪರಿಪಾಲನೆ ಮಾಡಬೇಕಾದ ರಾಜ್ಯ ಪುರಾತತ್ವ ಇಲಾಖೆ ಪಾರ್ಕ್ ನ ತನ್ನ ಆವರಣದ ವ್ಯಾಪ್ತಿಯೊಳಗೆ ಶಾಶ್ವತ ಕಟ್ಟಡ ನಿರ್ಮಿಸುತ್ತಿದ್ದು, ಇದು ಉದ್ಯಾನ ಕಾಯ್ದೆಯ ನೇರ ಉಲ್ಲಂಘನೆಯಾಗಿದೆ. ಈ ಪ್ರಮುಖ ಹಸಿರು ಪ್ರದೇಶದಲ್ಲಿ ಹೊಸ ಕಾಂಕ್ರಿಟ್ ನಿರ್ಮಾಣವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಎಸ್. ಉಮೇಶ್ ಅವರು, ತೋಟಗಾರಿಕೆ ಇಲಾಖೆ ಇಂತಹ ಅಕ್ರಮ ನಿರ್ಮಾಣಕ್ಕೆ ಸಹಕಾರ ನೀಡುತ್ತಿದೆ. ಕಬ್ಬನ್ ಪಾರ್ಕ್ನ ಸಂರಕ್ಷಣೆ ಮತ್ತು ರಕ್ಷಣೆಯ ಹೊಣೆ ಹೊತ್ತಿರುವ ತೋಟಗಾರಿಕೆ ಇಲಾಖೆ ಈ ಅಕ್ರಮ ನಿರ್ಮಾಣದ ಬಗ್ಗೆ ಕಣ್ಣುಮುಚ್ಚಿ ಕುಳಿತಿದೆ. ನಿಯಂತ್ರಣ ಕ್ರಮ ಕೈಗೊಳ್ಳದೇ ಸಂಪೂರ್ಣವಾಗಿ ನಿರ್ಲಕ್ಷ್ಯವಹಿಸಿದೆ ಎಂದು ಹೇಳಿದ್ದಾರೆ.
ತೋಟಗಾರಿಕೆ ಇಲಾಖೆಯ ಕೆಲವು ಭ್ರಷ್ಟ ಅಧಿಕಾರಿಗಳು ಪಾರ್ಕ್ನ ಹಿತಾಸಕ್ತಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದು, ಪರಿಸರ ಸಂರಕ್ಷಣೆಗೆ ಬದಲಾಗಿ ಸ್ವಾರ್ಥಪರ ಹಿತಾಸಕ್ತಿಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಪರಿಸರ ಹಾಟ್ಸ್ಪಾಟ್ ಅನ್ನು ವಾಣಿಜ್ಯ ಕೇಂದ್ರವನ್ನಾಗಿ ಪರಿವರ್ತನೆ ಮಾಡಲಾಗಿದೆ. ಕಬ್ಬನ್ ಪಾರ್ಕ್ ಅನ್ನು ಕ್ರಮಬದ್ಧವಾಗಿ ಒಂದು ಸ್ವಚ್ಛ ಪರಿಸರ ವಲಯದಿಂದ ಅಸ್ತವ್ಯಸ್ತ ವಾಣಿಜ್ಯ ಕೇಂದ್ರವನ್ನಾಗಿ ಪರಿವರ್ತಿಸಲಾಗುತ್ತಿದೆ. ಕಾಂಕ್ರೀಟ್ ಮತ್ತು ವಾಣಿಜ್ಯ ಚಟುವಟಿಕೆಗಳಿಂದ ಪಾರ್ಕ್ನಲ್ಲಿ ಉಸಿರು ಕಟ್ಟುವ ವಾತಾವರನ ನಿರ್ಮಾಣವಾಗಿದೆ.
ಪಾರ್ಕ್ ಆವರಣದಲ್ಲಿ ಅನಧಿಕೃತ ಅಂಗಡಿಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಆಯೋಜಿಸಲಾದ ಭಾರೀ ‘ಮಾವಿನ ಮೇಳ’ದಿಂದ ಅಪಾರ ಪ್ರಮಾಣದ ಕಸ, ಶಬ್ದ ಹಾಗೂ ಜನಸಂದಣಿ ಉಂಟಾಗಿ ಸ್ಥಳೀಯ ಸೂಕ್ಷ್ಮ ಪರಿಸರ ವ್ಯವಸ್ಥೆಗೆ ತೀವ್ರ ಹಾನಿಯಾಗಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು “ಕಬ್ಬನ್ ಪಾರ್ಕ್ ಅನ್ನು ಯಾವುದೇ ವಾಣಿಜ್ಯ ಉದ್ದೇಶಕ್ಕೆ ಬಳಸುವುದಿಲ್ಲ” ಎಂದು ಭರವಸೆ ನೀಡಿದ್ದರು. ಆದರೆ ಅವರ ಕಣ್ಣಳತೆಯ ದೂರದಲ್ಲಿ ಇಂತಹ ಲೋಪಗಳು ಜರುಗುತ್ತಿವೆ ಎಂದು ಎಸ್. ಉಮೇಶ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪ್ರಮುಖ ಶ್ವಾಸಕೋಶವಾಗಿರುವ ಕಬ್ಬನ್ ಪಾರ್ಕ್ ನಾಶವಾಗಲು ಬಿಡುವುದಿಲ್ಲ. ಪುರಾತತ್ವ ಇಲಾಖೆ ತಕ್ಷಣವೇ ನಿರ್ಮಾಣ ಕಾರ್ಯವನ್ನು ನಿಲ್ಲಿಸಿ, ಈಗಾಗಲೇ ನಿರ್ಮಿಸಿರುವ ಭಾಗವನ್ನು ತೆರವುಗೊಳಿಸಬೇಕು. ಈ ಉಲ್ಲಂಘನೆಗಳಿಗೆ ಸಹಕಾರ ನೀಡಿರುವ ತೋಟಗಾರಿಕೆ ಇಲಾಖೆಯ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತರು ಕಟ್ಟುನಿಟ್ಟಿನ ತನಿಖೆ ಆರಂಭಿಸಬೇಕು. ಕರ್ತವ್ಯ
ಉಲ್ಲಂಘನೆ ಮತ್ತು ನಂಬಿಕೆ ದ್ರೋಹ ಎಸಗಿರುವ ಸಂಬಂಧಿತ ಅಧಿಕಾರಿಗಳ ವಿರುದ್ಧ ವೈಯಕ್ತಿಕವಾಗಿ ಕ್ರಿಮಿನಲ್ ಪ್ರಕರಣ ದಾಖಲಿಸಲು ಅಸೋಸಿಯೇಷನ್ ಸಿದ್ಧತೆ ನಡೆಸುತ್ತಿದೆ. ಕಬ್ಬನ್ ಪಾರ್ಕ್ ಅನ್ನು ಭವಿಷ್ಯದ ಪೀಳಿಗೆಗಳಿಗಾಗಿ ಉಳಿಸಲು ಈ ವಾಣಿಜ್ಯ ದಾಳಿಯ ವಿರುದ್ಧ ಹೋರಾಟದಲ್ಲಿ ಬೆಂಗಳೂರು ನಾಗರಿಕರು ಮತ್ತು ಪರಿಸರ ಹೋರಾಟಗಾರರು ಕೈಜೋಡಿಸಬೇಕು ಎಂದು ಎಸ್. ಉಮೇಶ್ ಮನವಿ ಮಾಡಿದ್ದಾರೆ.
ಪ್ರೀತಿ, ಶಾಂತಿ ಮತ್ತು ಸೇವೆಯ ಮೌಲ್ಯಗಳನ್ನು ಅಳವಡಿಸಿಕೊಳ್ಳೋಣ: ರಾಜ್ಯಪಾಲರ ಕರೆ
“ಪ್ರೀತಿ, ಶಾಂತಿ, ಸೇವೆ ಮತ್ತು ಸಾಮರಸ್ಯದ (love, peace and service) ಮೌಲ್ಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಿಂಸಾಚಾರ-ಮುಕ್ತ ಮತ್ತು ಒತ್ತಡ-ಮುಕ್ತ ಸಮಾಜ ನಿರ್ಮಾಣಕ್ಕೆ ಆಧ್ಯಾತ್ಮಿಕತೆ ಮತ್ತು ಮಾನವೀಯ ಸೇವೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ” ಎಂದು ಕರ್ನಾಟಕದ ಗೌರವಾನ್ವಿತ (Governor) ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ (Thawarchand Gehlot) ಹೇಳಿದರು.
ಬೆಂಗಳೂರಿನಲ್ಲಿ ನಡೆದ ಆರ್ಟ್ ಆಫ್ ಲಿವಿಂಗ್ (Art of Living) ಸಂಸ್ಥೆಯ 45ನೇ ವಾರ್ಷಿಕೋತ್ಸವ (45th Anniversary) ಹಾಗೂ ಪೂಜ್ಯ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರ 70ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾರತದ ಗೌರವಾನ್ವಿತ ಉಪರಾಷ್ಟ್ರಪತಿಗಳಾದ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರೊಂದಿಗೆ ಭಾಗವಹಿಸಿ ಅವರು ಮಾತನಾಡಿದರು.
“ಪೂಜ್ಯ ಗುರುದೇವ್ ಶ್ರೀ ಶ್ರೀ ರವಿಶಂಕರ್ ಜಾಗತಿಕ ಮಾನವೀಯ, ಆಧ್ಯಾತ್ಮಿಕ ಗುರು ಹಾಗೂ ಶಾಂತಿ ರಾಯಭಾರಿಯಾಗಿದ್ದು, ಆರ್ಟ್ ಆಫ್ ಲಿವಿಂಗ್ ಮತ್ತು ಅಂತರರಾಷ್ಟ್ರೀಯ ಮಾನವ ಮೌಲ್ಯಗಳ ಸಂಘದ ಸ್ಥಾಪಕರಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಈ ಸಂಸ್ಥೆಗಳು 182 ದೇಶಗಳಲ್ಲಿ ಲಕ್ಷಾಂತರ ಜನರಿಗೆ ಬದುಕಿನ ಕಲೆ ಮತ್ತು ಆಂತರಿಕ ಶಾಂತಿಯ ಸಂದೇಶವನ್ನು ಸಾರುತ್ತಿವೆ” ಎಂದು ತಿಳಿಸಿದರು.

“ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಜಾಗತಿಕ ಚಳುವಳಿ ಕರ್ನಾಟಕದ ಪವಿತ್ರ ನೆಲದಲ್ಲಿ ಬೇರುಬಿಟ್ಟಿರುವುದು ರಾಜ್ಯಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಬೆಂಗಳೂರಿನಲ್ಲಿರುವ ಸಂಸ್ಥೆಯ ಅಂತರರಾಷ್ಟ್ರೀಯ ಕೇಂದ್ರವು ವಿಶ್ವದಾದ್ಯಂತ ಜನರಿಗೆ ಶಾಂತಿ, ಧ್ಯಾನ ಮತ್ತು ಸಕಾರಾತ್ಮಕ ಶಕ್ತಿಯ ಪ್ರೇರಣಾ ಕೇಂದ್ರವಾಗಿದೆ ಕಳೆದ ನಾಲ್ಕು ದಶಕಗಳಿಂದ ಸಂಸ್ಥೆಯು ವಿವಿಧ ಕಾರ್ಯಕ್ರಮಗಳ ಮೂಲಕ ವ್ಯಕ್ತಿ, ಸಮುದಾಯ ಹಾಗೂ ಜಾಗತಿಕ ಮಟ್ಟದಲ್ಲಿ ಶಾಂತಿ ಮತ್ತು ಯೋಗಕ್ಷೇಮವನ್ನು ಉತ್ತೇಜಿಸುತ್ತಿದೆ. ಶ್ರೀ ರವಿಶಂಕರ್ ಗುರುದೇವರ ಬೋಧನೆಗಳು ಪ್ರಾಚೀನ ಜ್ಞಾನವನ್ನು ಸರಳ ಮತ್ತು ಪ್ರಾಯೋಗಿಕ ರೀತಿಯಲ್ಲಿ ಜನರಿಗೆ ತಲುಪಿಸುತ್ತಿದ್ದು, ದೈನಂದಿನ ಜೀವನದಲ್ಲಿ ಆಂತರಿಕ ಶಾಂತಿಯನ್ನು ಅನುಭವಿಸಲು ಪ್ರೇರೇಪಿಸುತ್ತಿವೆ” ಎಂದು ಹೇಳಿದರು.
“ಮಾನವೀಯ ಸೇವೆಯೊಂದಿಗೆ ಪರಿಸರ ಸಂರಕ್ಷಣೆಯಲ್ಲಿಯೂ ಸಂಸ್ಥೆಯು ಮಹತ್ವದ ಕೊಡುಗೆ ನೀಡುತ್ತಿದೆ. ನವೀಕರಿಸಬಹುದಾದ ಇಂಧನ ಯೋಜನೆಗಳು, ತ್ಯಾಜ್ಯ ಮರುಬಳಕೆ ನವೀನತೆಗಳು ಹಾಗೂ ಗ್ರಾಮೀಣ ವಿದ್ಯುದ್ದೀಕರಣ ಉಪಕ್ರಮಗಳ ಮೂಲಕ ಸುಸ್ಥಿರ ಅಭಿವೃದ್ಧಿಗೆ ಉತ್ತೇಜನ ನೀಡುತ್ತಿದೆ. ಇಂದಿನ ಜಗತ್ತು ಉದ್ವಿಗ್ನತೆ, ಹಿಂಸೆ, ಅಸಹಿಷ್ಣುತೆ ಮತ್ತು ಮಾನಸಿಕ ಅಶಾಂತಿಯಂತಹ ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಗುರುದೇವರ ಸಂದೇಶ ಇನ್ನಷ್ಟು ಪ್ರಸ್ತುತವಾಗಿದೆ. ಧರ್ಮದ ನಿಜವಾದ ಸ್ವರೂಪವು ವಿಭಜನೆಯಲ್ಲ, ಮಾನವೀಯ ಒಗ್ಗಟ್ಟನ್ನು ಬೆಳೆಸುವುದಾಗಿದೆ ಎಂದು ಅವರು ತಿಳಿಸಿದರು.
“ಅಭಿವೃದ್ಧಿ ಹೊಂದಿದ ಭಾರತ” ನಿರ್ಮಾಣದ ಗುರಿ ಸಾಧಿಸಲು ನೈತಿಕತೆ, ಸೂಕ್ಷ್ಮತೆ ಹಾಗೂ ಆಧ್ಯಾತ್ಮಿಕ ಪ್ರಜ್ಞೆ ಅಗತ್ಯವಾಗಿದೆ. ಈ ದಿಕ್ಕಿನಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಸಮಾಜದಲ್ಲಿ ಸಕಾರಾತ್ಮಕ ಶಕ್ತಿ ಮತ್ತು ನೈತಿಕ ಮೌಲ್ಯಗಳನ್ನು ಹರಡುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ ಎಂದು ರಾಜ್ಯಪಾಲರು ಹೇಳಿದರು.
ಪೂಜ್ಯ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರ 70ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಅವರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸಿದ ರಾಜ್ಯಪಾಲರು, ಅವರ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ಮಾನವೀಯ ಸೇವೆಯು ನಿರಂತರವಾಗಿ ಮುಂದುವರಿಯಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರು ಉಪಸ್ಥಿತರಿದ್ದರು.
ನಿತ್ಯ ಪಂಚಾಂಗ 29-05-2026 ಶುಕ್ರವಾರ – FRIDAY
ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 29.05.2026 FRIDAY.ಶುಕ್ರವಾರ
ಸಂವತ್ಸರ: ಪರಾಭವ
SAMVATSARA : PARABHAVA.
ಆಯಣ: ಉತ್ತರಾಯಣ
AYANA: UTTARAYANA.
ಋತು: ಗ್ರೀಷ್ಮ
RUTHU: GREESHMA.
ಮಾಸ: ಅಧಿಕಜೇಷ್ಠ
MAASA: ADHIKA JYESHTHA.
ಪಕ್ಷ: ಶುಕ್ಲ
PAKSHA: SHUKLA.
ತಿಥಿ: ತ್ರಯೋದಶಿ
TITHI: TRAYODASHI.
ಶ್ರದ್ದಾತಿಥಿ: ಚತುರ್ದಶಿ
SHRADDHA TITHI: CHATURDASHI
ವಾಸರ: ಭಾರ್ಗವವಾಸರ
VAASARA: BHARGAVAVASARA.
ನಕ್ಷತ್ರ: ಸ್ವಾತಿ
NAKSHATRA: SWATI.
ಯೋಗ: ಪರಿಘ
YOGA: PARIGHA.
ಕರಣ: ತೈತಿಲ
KARANA: TAITILA.
ಸೂರ್ಯೋದಯ (Sunrise): 05:53
ಸೂರ್ಯಸ್ತ (Sunset): 06:56
ರಾಹುಕಾಲ (RAHU KAALA) : 10:30AM To 12:00PM.
ದಿನವಿಶೇಷ SPECIAL EVENT

