ಚಿತ್ರಕಲೆ, ಶಿಲ್ಪಿಕಲೆ, ರಂಗಭೂಮಿ ವಿವಿಧ ಕಲೆಗಳಲ್ಲಿ ನಿರತರಾಗಿರುವ ಕಲಾವಿದರಿಗೆ ಪ್ರೋತ್ಸಾಹ

BENGALURU : ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ (Karnataka Chitrakala Parishat) ಸಭಾಂಗಣದಲ್ಲಿ ಕರ್ನಾಟಕ ಇಂಟರ್ ನ್ಯಾಷವಲ್ ಆರ್ಟಿಸ್ಟ್ ವಿಲೇಜ್ ಚಾರಿಟೇಬಲ್ ಟ್ರಸ್ಟ್ (Karnataka International Artist Village Charitable Trust) ಉದ್ಘಾಟನೆ ಮತ್ತು ವೆಬ್ ಸೈಟ್ ಬಿಡುಗಡೆ ಹಾಗೂ ಜೀವಮಾನ ಶೇಷ್ಠ ಕಲಾ ಸಾಧಕರ ಪ್ರಶಸ್ತಿ ಹಾಗೂ ಹಿರಿಯ, ಕಿರಿಯ ಕಲಾವಿದರ ಚಿತ್ರ ಪ್ರದರ್ಶನ ಕಾರ್ಯಕ್ರಮ.

ಸಚಿವರಾದ ಹೆಚ್.ಕೆ.ಪಾಟೀಲ್ ರವರು, ವಿಧಾನಪರಿಷತ್ ಸದಸ್ಯರಾದ ಪುಟ್ಟಣ್ಣ, ಕರ್ನಾಟಕ ಲಲಿತಾ ಕಲಾ ಅಕಾಡೆಮಿ ಅಧ್ಯಕ್ಷರಾದ ಪ್ರ.ಸ.ಕುಮಾರ್ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಸಿ.ಸೋಮಶೇಖರ್ ರವರು, ಚಲನಚಿತ್ರ ನಿರ್ದೇಶಕ ರಾಮ್ ನಾರಾಯಣ, ಸಂಗೀತ ನಿರ್ದೇಶಕ ರಮೇಶ್ ಕೃಷ್ಣ, ಖ್ಯಾತ ನಟಿ ಕುಮಾರಿ ಸಂಜನಾ ತ್ರಿವೇದಿ, ಅಧ್ಯಕ್ಷರಾದ ಬಿ.ಜಿ.ಅವಟಿರವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು. ನಂತರ ಟ್ರಸ್ಟ್  ಹಾಗೂ ವೆಬ್ ಸೈಟ್ ಉದ್ಘಾಟನೆ ಮಾಡಿ ಸಾಧಕರಿಗೆ ಸನ್ಮಾನಿಸಿದರು.

ಸಚಿವರಾದ ಹೆಚ್.ಕೆ.ಪಾಟೀಲ್ ರವರು ಮಾತನಾಡಿ. ಕರ್ನಾಟಕ ಇಂಟರ್ ನ್ಯಾಷನಲ್ ಆರ್ಟಿಸ್ಟ್ ವಿಲೇಜ್ ಟ್ರಸ್ಟ್ ರಾಜ್ಯದ ವಿವಿಧ ಕ್ಷೇತ್ರದ ಕಲಾವಿದರಿಗೆ ಪ್ರೋತ್ಸಾಹ, ಸಹಕಾರ ನೀಡುವ ಸಂಸ್ಥೆಯಾಗಿದೆ.
ಟ್ರಸ್ಟ್ ಸಹಕಾರ ನೀಡಲು ಸರ್ಕಾರ ಬದ್ದವಾಗಿದೆ.
ಪ್ರಾಮಾಣಿಕ ಪ್ರಯತ್ನದಿಂದ ಸಾಧನೆ ಮಾಡಲು ಸಾಧ್ಯ.

ಕಲೆ ಮತ್ತು ಕಲಾವಿದರು ಉಳಿದರೆ ನಾಡಿನ ಇತಿಹಾಸ ತಿಳಿಯಬಹುದು, ಕಲಾವಿದ ಇಲ್ಲವೆಂದರೆ ಇತಿಹಾಸ ತಿಳಿಯಲು ಆಸಾಧ್ಯ. ವಿವಿಧ ರಂಗದ ಕಲಾವಿದರಿಗೆ ಸರ್ಕಾರದ ಜೊತೆಯಲ್ಲಿ ಸಂಘ, ಸಂಸ್ಥೆಗಳು ಆಸರೆಯಾದರೆ ಕಲಾವಿದರ ಬದುಕು ಹಸನಾಗುತ್ತದೆ ಎಂದು ಹೇಳಿದರು.

ಡಾ||ಬಿ.ಜಿ.ಅವಟಿರವರು ಮಾತನಾಡಿ ಚಿತ್ರಕಲಾವಿದರು, ಸಂಗೀತ, ನೃತ್ಯ ಶಿಲ್ಪಕಲೆ ನಾಟಕ, ರಂಗಭೂಮಿ ಉಳಿಯಬೇಕು ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡಲು ಟ್ರಸ್ಟ್ ಸ್ಥಾಪಿಸಲಾಗಿದೆ.

ರಾಜ್ಯದ ಎಲ್ಲ ಮೂಲೆಯಲ್ಲಿ ಕಲಾವಿದರಿಗೆ ಅವರಿಗೆ ಬೆಂಗಳೂರಿನ ಸುತ್ತಮುತ್ತಲ ಜಾಗದಲ್ಲಿ ಅವರಿಗೆ ನಿವೇಶನ ನೀಡಿ ಅವರು ಅಲ್ಲಿ ಪ್ರದರ್ಶನ ಮತ್ತು ತಯಾರಿಕೆ ಮತ್ತು ವಾಸ ಮಾಡಲು ಅನುಕೂಲವಾಗಲಿ ಎಂದು ನಮ್ಮ ಟ್ರಸ್ಟ್ ಯೋಜನೆ ರೂಪಿಸಿದೆ.

ಕಲಾವಿದರಿಗೆ ಒಂದು ಗ್ರಾಮ ನಿರ್ಮಾಣ ಮಾಡಿ ಅಲ್ಲಿ ಅವಕಾಶ ನೀಡಿದರೆ ರಾಜ್ಯ, ದೇಶ ವಿದೇಶಗಳಿಂದ ಬರುವ ನಾಗರಿಕರಿಗೆ ಅಲ್ಲಿ ಕಲಾವಿದರು ತಯಾರಿಕೆ ವಸ್ತುಗಳನ್ನು ಖರೀದಿಸಬಹುದು, ಕಲೆಯ ಅರಿಯಬಹುದು ಇದರಿಂದ ಆರ್ಥಿಕವಾಗಿ ಕಲಾವಿದರು ಸಬಲರಾಗುತ್ತಾರೆ ಎಂದು ಹೇಳಿದರು.

Hot this week

ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಆಮೆಗತಿಯ ಮಾಹಿತಿ ಹಕ್ಕು ಪ್ರಕ್ರಿಯೆ:

ದೇವನಹಳ್ಳಿ: ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆ ತರಲು ಜಾರಿಗೆ ಬಂದ ಮಾಹಿತಿ ಕ್ಕು...

ಜನಿವಾರ ತೆಗೆಸಿದ ಕೃತ್ಯ ‘ಪೆಹಲ್ಗಾಂ’ ಮಾದರಿಯ ದಬ್ಬಾಳಿಕೆ:

ಬ್ರಾಹ್ಮಣ ಮಹಾಸಭಾ ತೀವ್ರ ಖಂಡನೆ ​ಇತ್ತೀಚೆಗೆ ನಡೆದ ಸಿಇಟಿ (CET) ಪರೀಕ್ಷಾ ಸಮಯದಲ್ಲಿ...

ಕಾರ್ಮಿಕ ದಿನಾಚರಣೆ: ವಾಯ್ಸ್ ಆಫ್ ಸದಾಶಿವನಗರದಿಂದ 170ಪೌರ ಕಾರ್ಮಿಕರಿಗೆ ಸನ್ಮಾನ*

ಬೆಂಗಳೂರು,ಮೇ.1: ವಿಶ್ವ ಕಾರ್ಮಿಕರ ದಿನಾಚರಣೆ (Vishva Karmikara dinacharane)  ಪ್ರಯುಕ್ತ ಸದಾಶಿವನಗರ...

ರಂಗಪ್ರವೇಶ — ಕುಮಾರಿ ಲಕ್ಷ್ಮಿ ಅನನ್ಯ ತಾಟವರ್ತಿ

ಭಾರತೀಯ ಶಾಸ್ತ್ರೀಯ ನೃತ್ಯದ ಲೋಕದಲ್ಲಿ ರಂಗಪ್ರವೇಶ ಎಂದರೆ ಕೇವಲ ಒಂದು ಪ್ರದರ್ಶನವಲ್ಲ—ಅದು ಒಂದು ಘೋಷಣೆ....

Topics

“ವಿಶ್ವ ನೃತ್ಯ ದಿನಾಚರಣೆ”

ಆರ್ಟ್ ಕಲ್ಚರಲ್ ಎಜುಕೇಶನಲ್ ಎನ್ಲೈಟ್ ಫೌಂಡೇಶನ್ ಸಂಸ್ಥಾಪಕಿ ಅಂಬಿಕಾ ಸಿ(Ambika .c)...

ಶ್ರೀ ಶ್ರೀನಿವಾಸ ದೇವರಿಗೆ ಮಹಾಭಿಷೇಕ ಪವಮಾನಪುರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ

ಬೆಂಗಳೂರು : ಪವಮಾನಪುರ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ...

ತ್ಯಾಗರಾಜನಗರ ರಾಯರ ಮಠದಲ್ಲಿ ಶ್ರೀ ನರಸಿಂಹ ಜಯಂತಿ

ಬೆಂಗಳೂರು : ತ್ಯಾಗರಾಜನಗರದ 11ನೇ ಅಡ್ಡರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ...

Related Articles