ಬೆಂಗಳೂರು: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) (TOYOTA KIRLOSKAR MOTOR) ಇಂದು ಬೆಂಗಳೂರಿನ ಕೆವಿಐಎನ್ ಸಿಟಿಯಲ್ಲಿ (KVIN CITY) “ಟಿಕೆಎಂ ಬಿಜಿಂಟೆಲ್ ಹಬ್” (TKM DIGITAL HUB) ಅನ್ನು ಸ್ಥಾಪಿಸುವ ಮೂಲಕ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಲು ಕರ್ನಾಟಕ ಸರ್ಕಾರದೊಂದಿಗೆ ತಿಳಿವಳಿಕೆಯ ಒಪ್ಪಂದಕ್ಕೆ ಸಹಿ ಹಾಕುವುದಾಗಿ ಘೋಷಿಸಿದೆ. ಈ ಉಪಕ್ರಮವು ಎಂಜಿನಿಯರಿಂಗ್ ಸಾಮರ್ಥ್ಯಗಳು ಮತ್ತು ಡಿಜಿಟಲ್ ನಾವೀನ್ಯತೆಯನ್ನು ಬಲಪಡಿಸಲು ಬಲವಾದ ಸಹಯೋಗ ಮತ್ತು ಸಮಾನ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು, ಕರ್ನಾಟಕ ಸರ್ಕಾರದ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಡಾ. ಎಂ.ಬಿ. ಪಾಟೀಲರು ಹಾಗೂ ಇತರ ಹಿರಿಯ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ, ಜೊತೆಗೆ ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ನ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ, ಒಪ್ಪಂದ ಪತ್ರಕ್ಕೆ (MoU) ಸಹಿ ಮಾಡಲಾಯಿತು.
300 ಎಕರೆಗಳಲ್ಲಿ ವ್ಯಾಪಿಸಿರುವ ಪ್ರಸ್ತಾವಿತ ಟಿಕೆಎಂ ಬಿಜಿಂಟೆಲ್ ಹಬ್ ಚಲನಶೀಲತೆ ಪರಿಹಾರಗಳ ಪರೀಕ್ಷೆ ಮತ್ತು ಮೌಲ್ಯಮಾಪನ, ಎಲ್ಲಾ ವ್ಯವಹಾರ ಕಾರ್ಯಾಚರಣೆಗಳಲ್ಲಿ ಡಿಜಿಟಲ್ ರೂಪಾಂತರ ಮತ್ತು ಜಾಣ ಉತ್ಪಾದನಾ ಉಪಕ್ರಮಗಳ ಅನುಷ್ಠಾನವೂ ಸೇರಿದಂತೆ ಇಡೀ ಮೌಲ್ಯ ಸರಪಳಿಯ ಒಟ್ಟಾರೆ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಅನೇಕ ಕಾರ್ಯತಂತ್ರದ ಉದ್ದೇಶಗಳನ್ನು ಅನುಸರಿಸುತ್ತದೆ. ದೇಶದ ದೃಢವಾದ ನುರಿತ ಎಂಜಿನಿಯರಿಂಗ್ ಮಾನವಶಕ್ತಿ ಮತ್ತು ಮಾಹಿತಿ ತಂತ್ರಜ್ಞಾನ ಪರಿಸರ ವ್ಯವಸ್ಥೆಯನ್ನು ಬಳಸಿಕೊಳ್ಳುವ ಮೂಲಕ ಮುಂದಿನ ದಿನಗಳಲ್ಲಿ ಟೊಯೊಟಾದ ಜಾಗತಿಕ ದೃಷ್ಟಿಕೋನದಲ್ಲಿ ಭಾರತವನ್ನು ಪ್ರಮುಖ ಸ್ಥಾನಕ್ಕೆ ತರುವ ನಿರೀಕ್ಷೆಯಿದೆ.
ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ. ಸಿದ್ದರಾಮಯ್ಯನವರು ಮಾತನಾಡಿ ಹೇಳಿದರು, ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕರ್ನಾಟಕದ ಬೆಳವಣಿಗೆಯ ಪಯಣದಲ್ಲಿ ವಿಶ್ವಾಸಾರ್ಹ ದೀರ್ಘಕಾಲೀನ ಪಾಲುದಾರನಾಗಿದೆ. ತಂತ್ರಜ್ಞಾನ ಆಧಾರಿತ ಹೂಡಿಕೆಯನ್ನು ಹೆಚ್ಚಿಸಲು, ಗುಣಮಟ್ಟದ ಉದ್ಯೋಗ ಸೃಷ್ಟಿಸಲು ಮತ್ತು ಸುಸ್ಥಿರ ಕೈಗಾರಿಕಾ ಅಭಿವೃದ್ಧಿಯನ್ನು ಉತ್ತೇಜಿಸಲು ನಾವು ಒಗ್ಗೂಡಿ ಶ್ರಮಿಸುತ್ತಿರುವುದರಿಂದ ಈ ತಿಳಿವಳಿಕೆಯ ಒಪ್ಪಂದವು ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ. ಈ ಪಾಲುದಾರಿಕೆಯು ಜಾಗತಿಕ ಹೂಡಿಕೆ ತಾಣವಾಗಿ ಕರ್ನಾಟಕದ ನಾಯಕತ್ವವನ್ನು ಮತ್ತಷ್ಟು ಬಲಪಡಿಸುತ್ತದೆ ಮತ್ತು ನಾವೀನ್ಯತೆ-ಚಾಲಿತ ಬೆಳವಣಿಗೆಗೆ ನಮ್ಮ ಬದ್ಧತೆಯನ್ನು ಬಲಪಡಿಸುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್‌ನ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಇಒ ಶ್ರೀ ಮಸಕಾಜು ಯೊಶಿಮುರಾ, ಹೇಳಿದರು“ನಮ್ಮ ಪ್ರಯಾಣದಲ್ಲಿ ಪ್ರಮುಖ ಪಾತ್ರ ವಹಿಸಿದ ಕರ್ನಾಟಕ ಸರ್ಕಾರದ ನಿರಂತರ ಬೆಂಬಲ ಮತ್ತು ಸಹಯೋಗಕ್ಕಾಗಿ ನಾವು ಕೃತಜ್ಞರಾಗಿರುತ್ತೇವೆ. ನಾವೀನ್ಯತೆ ಮತ್ತು ಸುಸ್ಥಿರ ಚಲನಶೀಲತೆಯ ಉಪಕ್ರಮಗಳಿಗೆ ಚಾಲನೆ ನೀಡಲು ಟೊಯೊಟಾಗೆ ಭಾರತವು ಯಾವಾಗಲೂ ವ್ಯೂಹಾತ್ಮಕವಾಗಿ ಪ್ರಮುಖ ಮಾರುಕಟ್ಟೆಯಾಗಿದೆ. ಟಿಕೆಎಂ ಬಿಜಿಂಟೆಲ್ ಹಬ್ ಪರೀಕ್ಷೆ ಮತ್ತು ಮೌಲ್ಯಮಾಪನ ಚಟುವಟಿಕೆಗಳು, ಡಿಜಿಟಲ್ ರೂಪಾಂತರದಲ್ಲಿನ ಪ್ರಗತಿ ಮತ್ತು ಇಡೀ ಪೂರೈಕೆ ಸರಪಳಿ ವ್ಯವಹಾರದಾದ್ಯಂತ ಬುದ್ಧಿವಂತ ಉತ್ಪಾದನೆಯನ್ನು ಬೆಂಬಲಿಸುತ್ತ, ನುರಿತ ಪ್ರತಿಭೆಗಳೊಂದಿಗೆ ಭಾರತದ ದೃಢವಾದ ಮಾಹಿತಿ ತಂತ್ರಜ್ಞಾನ ಪರಿಸರ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತದೆ. ಸ್ಥಳೀಕರಣ ಮತ್ತು ಜವಾಬ್ದಾರಿಯುತ ಬೆಳವಣಿಗೆಯ ಮೇಲೆ ಟಿಕೆಎಂನ ಗಮನವನ್ನು ಕೇಂದ್ರೀಕರಿಸಿದ ಈ ಉಪಕ್ರಮವು ಇಂಗಾಲದ ತಟಸ್ಥತೆಯ ಗುರಿಗಳನ್ನು ಸಾಧಿಸುವ ಮತ್ತು ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತದಂತಹ ರಾಷ್ಟ್ರೀಯ ಆದ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಕಂಪನಿಯ ಬಹುಮಾರ್ಗದ ವಿಧಾನದೊಂದಿಗೆ ಹೊಂದಿಕೆಯಾಗುತ್ತದೆ.
ಈ ಪಾಲುದಾರಿಕೆಯ ಮೂಲಕ, ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಮತ್ತು ಕರ್ನಾಟಕ ಸರ್ಕಾರವು ಸುಸ್ಥಿರ ಆರ್ಥಿಕ ಬೆಳವಣಿಗೆ ಮತ್ತು ನಾವೀನ್ಯತೆ-ನೇತೃತ್ವದ ಉದ್ಯೋಗ ಸೃಷ್ಟಿಯನ್ನು ಬೆಂಬಲಿಸುತ್ತ ಕಾರ್ಯತಂತ್ರದ ತಂತ್ರಜ್ಞಾನ ಹೂಡಿಕೆ ಮತ್ತು ಭವಿಷ್ಯಕ್ಕೆ ಸಿದ್ಧವಾದ ಪ್ರತಿಭೆಗಳಿಗೆ ಪ್ರಮುಖ ತಾಣವಾಗಿ ರಾಜ್ಯದ ಸ್ಥಾನವನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು ಹೊಂದಿದೆ.
ದೊಡ್ಡಬಳ್ಳಾಪುರ-ದಾಬಸ್ಪೇಟೆ ಹೆದ್ದಾರಿಯ ಉದ್ದಕ್ಕೂ ಕೆವಿಐಎನ್ (ಜ್ಞಾನ, ಯೋಗಕ್ಷೇಮ ಮತ್ತು ನಾವೀನ್ಯತೆ) ನಗರವು ಟಿಕೆಎಂ ಬಿಜಿಂಟೆಲ್ ಹಬ್ ನ ಉದ್ದೇಶಿತ ಸ್ಥಳವಾಗಿದೆ, ಇದು ನಾವೀನ್ಯತೆ, ಆರೋಗ್ಯ ರಕ್ಷಣೆ ಮತ್ತು ಮಾಹಿತಿ ತಂತ್ರಜ್ಞಾನದ ಮೇಲೆ ಬಲವಾದ ಗಮನವನ್ನು ಕೇಂದ್ರೀಕರಿಸಿ ಕರ್ನಾಟಕ ಸರ್ಕಾರವು ಅಭಿವೃದ್ಧಿಪಡಿಸುತ್ತಿರುವ ಸಮಗ್ರ ಸ್ಮಾರ್ಟ್ ಸಿಟಿ ಉಪಕ್ರಮವಾಗಿದೆ.
ಟಿಕೆಎಂ ನ ಅವಲೋಕನ
| ಈಕ್ವಿಟಿ ಭಾಗವಹಿಸುವಿಕೆ | ಟೊಯೊಟಾ ಮೋಟಾರ್ ಕಾರ್ಪೊರೇಷನ್ (ಜಪಾನ್): ಶೇ.89, ಕಿರ್ಲೋಸ್ಕರ್ ಸಿಸ್ಟಮ್ಸ್ ಲಿಮಿಟೆಡ್ (ಭಾರತ): ಶೇ.11 |
| ನೌಕರರ ಸಂಖ್ಯೆ | 6,665 |
| ಭೂ ಪ್ರದೇಶ | ಅಂದಾಜು 432 ಎಕರೆ (ಅಂದಾಜು 1,700,000 ಚದರ ಮೀ 2) |
| ಕಟ್ಟಡ ಪ್ರದೇಶ | 74,000 m2 |
| ಒಟ್ಟು ಸ್ಥಾಪಿತ ಉತ್ಪಾದನಾ ಸಾಮರ್ಥ್ಯ | 3,42,000 ಯುನಿಟ್ ಗಳವರೆಗೆ |
ಟಿಕೆಎಂ 1 ನೇ ಸ್ಥಾವರದ ಅವಲೋಕನ:
| ಸ್ಥಾಪಿಸಲಾಗಿದೆ | ಅಕ್ಟೋಬರ್ ೧೯೯೭ (ಉತ್ಪಾದನೆಯ ಪ್ರಾರಂಭ: ಡಿಸೆಂಬರ್ ೧೯) |
| ಸ್ಥಾನ | ಬಿಡದಿ |
| ಉತ್ಪನ್ನಗಳು | ಇನ್ನೋವಾ ಹೈಕ್ರಾಸ್, ಇನೋವಾ ಕ್ರಿಸ್ಟಾ, ಫಾರ್ಚೂನರ್, ಲೆಜೆಂಡರ್, ಭಾರತದಲ್ಲಿ ತಯಾರಿಸಲಾಗುತ್ತದೆ |
| ಸ್ಥಾಪಿತ ಉತ್ಪಾದನಾ ಸಾಮರ್ಥ್ಯ | 1,32,000 ಯುನಿಟ್ ಗಳವರೆಗೆ |
ಟಿಕೆಎಂ 2 ನೇ ಸ್ಥಾವರದ ಅವಲೋಕನ:
| ಉತ್ಪಾದನೆಯ ಪ್ರಾರಂಭ | ಡಿಸೆಂಬರ್ 2010 |
| ಸ್ಥಾನ | ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಪ್ರೈವೇಟ್ ಲಿಮಿಟೆಡ್, ಬಿಡದಿಯ ತಾಣದಲ್ಲಿ |
| ಉತ್ಪನ್ನಗಳು | ಕ್ಯಾಮ್ರಿ ಹೈಬ್ರಿಡ್, ಅರ್ಬನ್ ಕ್ರೂಸರ್ ಹೈರೈಡರ್, ಹಿಲಕ್ಸ್ |
| ಸ್ಥಾಪಿತ ಉತ್ಪಾದನಾ ಸಾಮರ್ಥ್ಯ | 2,10,000 ಯುನಿಟ್ ಗಳವರೆಗೆ |
*ಇತರೆ ಟೊಯೋಟಾ ಮಾದರಿಗಳು: ಗ್ಲಾಂಝಾ, ರೂಮಿಯನ್, ಅರ್ಬನ್ ಕ್ರೂಸರ್ ಟೈಸರ್
**CBU ರೂಪದಲ್ಲಿ ಆಮದು ಮಾಡಿರುವ ಮಾದರಿಗಳು: ವೆಲ್‌ಫೈರ್, LC 300

