Home Blog Page 6

ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಕೆ, ಲೋಕಭವನ ಕಾರ್ಯದರ್ಶಿ ಪ್ರಭು ಶಂಕರ್‌ಗೆ ಹಸ್ತಾಂತರ

ಸಿದ್ದರಾಮಯ್ಯ ರಾಜೀನಾಮೆ ಪತ್ರ ಹಸ್ತಾಂತರ
ಲೋಕಭವನ ಕಾರ್ಯದರ್ಶಿ ಪ್ರಭು ಶಂಕರ್‌ಗೆ ರಾಜೀನಾಮೆ ಸಲ್ಲಿಕೆ

Bengaluru : ಸಿಎಂ ಸಿದ್ದರಾಮಯ್ಯ (CM Siddaramaiah) ರಾಜೀನಾಮೆ ಕೊಡ್ತೀನಿ ಅಂತ ಸ್ವತಃ ಹೇಳಿದ್ದ0ಟು. ಅದರಂತೆ ಮಧ್ಯಾಹ್ನ 3-00 ಗಂಟೆಗೆ ಆಗಮಿಸಿ ರಾಜೀನಾಮೆ ನೀಡಿದ್ದಾರೆ. ರಾಜ್ಯಪಾಲರು (Governor) ಇಲ್ಲದ ಕಾರಣ ಲೋಕಭವನಕ್ಕೆ ತೆರಳಿ ಕಾರ್ಯದರ್ಶಿ ಪ್ರಭು ಶಂಕರ್‌ಗೆ ರಾಜೀನಾಮೆ ಸಲ್ಲಿಸಿದ್ದಾರೆ. ಬಳಿಕ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ್ರು. ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜ್ಯಪಾಲರ ಭವನದಲ್ಲಿ (Lokabhavan) ರಾಜೀನಾಮೆಯನ್ನು ಸಲ್ಲಿಸಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸುವ ಮೂಲಕ ಅಧಿಕಾರದಿಂದ ಕೆಳಗೆ ಇಳಿದಿದ್ದಾರೆ.
ಆದ್ದರಿಂದ ರಾಜೀನಾಮೆ ಪತ್ರವನ್ನ ಅವರ ಕಚೇರಿ, ಅವರ ಕಾರ್ಯದರ್ಶಿಗೆ ಕೊಟ್ಟು ಬಂದಿದ್ದೇನೆ. ಹೈಕಮಾಂಡ್ ಯಾವಾಗ ಹೇಳುತ್ತೆ ಅವಾಗ ರಾಜೀನಾಮೆಯನ್ನು ಕೊಡ್ತೇನೆ ಅಂತ ಹೇಳಿದ್ದೆ. ಅದರ ಪ್ರಕಾರ ಮೊನ್ನೆ ಹೈಕಮಾಂಡ್ ಸೂಚನೆ ನೀಡಿತು ಎಂದಿದ್ದಾರೆ.
ಇದಕ್ಕೂ ಮುನ್ನ ಸಹೋದ್ಯೋಗಿ ಮಂತ್ರಿಗಳಿಗೆ ಧೈರ್ಯ ತುಂಬಿದ ಸಿದ್ದರಾಮಯ್ಯ ಮಧ್ಯಾಹ್ನ ಭೋಜನ ಬಳಿಕ ರಾಜೀನಾಮೆ ಪತ್ರ ಹಿಡಿದು ಕಾರಿನಲ್ಲಿ ಲೋಕಭವನದತ್ತ(ರಾಜಭವನ) ತೆರಳಿ, ರಾಜ್ಯಪಾಲರು ಪ್ರಸ್ತುತ ರಾಜಧಾನಿಯಲ್ಲಿ ಇಲ್ಲದ ಕಾರಣ, ಅವರ ಅನುಪಸ್ಥಿತಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗೆ ಹಸ್ತಾಂತರಿಸಿದ್ದಾರೆ.
ಸದ್ಯಕ್ಕೆ ರಾಜೀನಾಮೆ ಪತ್ರವನ್ನು ಕಾರ್ಯದರ್ಶಿಗಳು ಸ್ವೀಕರಿಸಿದ್ದರೂ, ರಾಜ್ಯಪಾಲರು ಖುದ್ದಾಗಿ ಸಹಿ ಮಾಡಿದ ಬಳಿಕವೇ ರಾಜೀನಾಮೆ ಅಧಿಕೃತವಾಗಿ ಸಂವಿಧಾನದ ನಿಯಮಾವಳಿಗಳ ಪ್ರಕಾರ ಅಂಗೀಕಾರವಾಗಲಿದೆ. ಮೂಲಗಳ ಪ್ರಕಾರ ರಾಜ್ಯಪಾಲರು ಇಂದು ರಾತ್ರಿ ಬೆಂಗಳೂರಿಗೆ ಮರಳುವ ಸಾಧ್ಯತೆಯಿದೆ ಎನ್ನಲಾಗಿದ್ದು. ಹೀಗಾಗಿ ರಾಜ್ಯಪಾಲರು ಮರಳಿದ ಬಳಿಕವಷ್ಟೇ ರಾಜೀನಾಮೆ ಅಂಗೀಕಾರದ ಔಪಚಾರಿಕ ಪ್ರಕ್ರಿಯೆಗಳು ಪೂರ್ಣಗೊಳ್ಳಲಿವೆ.
ಹೈಕಮಾಂಡ್ ಸೂಚನೆ ಮತ್ತು ರಾಹುಲ್ ಗಾಂಧಿ ಅವರ ಸಂದೇಶಕ್ಕೆ ಗೌರವ ನೀಡಿ, ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸುವ ಮೂಲಕ ರಾಜ್ಯ ರಾಜಕಾರಣದ ಮಹತ್ವದ ತೆರೆ ಎಳೆದಿದ್ದಾರೆ.

ಮೇಕೆದಾಟು ಯೋಜನೆಗೆ ತ.ನಾಡಿನ ಮುಖ್ಯಮಂತ್ರಿ ಅಡ್ಡಗಾಲು

 ಕಾವೇರಿ ನದಿಯ (Cauvery River) ಮೇಲಿನ ಮೇಕೆದಾಟು ಯೋಜನೆಗೆ (Mekedatu Project) ಸಂಬಂಧಿಸಿದಂತೆ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ತಿರಸ್ಕರಿಸಿದೆ. ನ್ಯಾಯಾಲಯದ (HighCourt) ತೀರ್ಪನ್ನು ಗೌರವಿಸದೆ, ಕರ್ನಾಟಕದ ಪ್ರಸ್ತಾವಿತ ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರದ ಅನುಮತಿ ನೀಡದಂತೆ ಜಲಶಕ್ತಿ ಸಚಿವಾಲಯಕ್ಕೆ ಸೂಚಿಸುವಂತೆ ತಮಿಳುನಾಡಿನ ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಅವರು ಪ್ರಧಾನಿ ಮೋದಿ (PM MOdi) ಯವರನ್ನು ಭೇಟಿಮಾಡಿ ಮನವಿ ಮಾಡಿರುವುದನ್ನು ಹಾಗೂ ಮೇಕೆದಾಟು ಯೋಜನೆಯ ವಿಚಾರದಲ್ಲಿ ಕಾನೂನು ಕ್ರಮ ತ್ವರಿತಗೊಳಿಸುವಂತೆ ರಾಜ್ಯದ ಅಧಿಕಾರಿಗಳಿಗೆ ಸೂಚನೆ ನೀಡಿರುವುದನ್ನು ಕನ್ನಡ ಗೆಳೆಯರ ಬಳಗವು ತೀವ್ರವಾಗಿ ಖಂಡಿಸುತ್ತದೆ.

 ಕಾವೇರಿ ನದಿಯ ನೀರನ ವಿಚಾರದಲ್ಲಿ ತಮಿಳರ ದಬ್ಬಾಳಿಕೆ ಇಂದು ನಿನ್ನೆಯದಲ್ಲಿ. ೧೩ನೇ ಶತಮಾನದ ಕೇಶಿರಾಜನ `ಶಬ್ದಮಣಿ ದರ್ಪಣ’ದಲ್ಲಿ`ಕಾವೇರಿಯ ಕಾಲನ್  ತಿಗುಳನೇಂ ಕಡಂಗೊಂಡನೋಬಡ್ಡಿಗೊಂಡನೋ ಎಂಬ ಮಾತು ಬರುತ್ತದೆ.  ಅಂದಿನಿಂದ  ಇಂದಿನವರೆಗೂ ತಮಿಳುನಾಡು ಕರ್ನಾಟಕದ ಹಿತಕ್ಕೆ ಅಡ್ಡಿ ಪಡಿಸುತ್ತಲೇ ಬಂದಿದೆ.  ನ್ಯಾಯಾಧಿಕರಣದ ತಮಿಳುನಾಡು ಪರಿ ತೀರ್ಪಿನ ವಿರುದ್ಧ ನಡೆದ ಹೋರಾಟದಿಂದ ಸ್ವಲ್ಪ ನ್ಯಾಯ ದೊರೆತಿದೆ. ಆದರೆ, ಆಳುವವರು ಕರ್ನಾಟಕದ ಹಿತಕ್ಕಿಂತ ರಾಜಕೀಯ ಲಾಭಕ್ಕೆ ಆಧ್ಯಯತೆ ಕೊಡುತ್ತಿರುವುದು ದುರಂತ.

ಮೇಕೆದಾಟು ಕುಡಿಯುವ ನೀರಿನ ಯೋಜನೆಯನ್ನು ವಿರೋಧಿಸುತ್ತಿರುವ ತಮಿಳುನಾಡು 17 ವರ್ಷಗಳ ನಂತರ 2024ರಲ್ಲಿ ವಿವಾದಿತ ಹೋಗೆನಕಲ್ ಕುಡಿಯುವ ನೀರಿನ 2ನೆಯ ಹಂತದ ಯೋಜನೆ ಬಜೆಟ್‌ನಲ್ಲಿ ಹಣ ಮೀಸಲಿಟ್ಟಾಗ ಅದನ್ನು ಕರ್ನಾಟಕ ಸರ್ಕಾರ ವಿರೋಧಿಸಲಿಲ್ಲ. ಈಗ ವಿಜಯ್ ಅವರ ಈ ನಿಲುವನ್ನು ವಿರೋಧಿಸಿಲ್ಲ. ತಮಿಳುನಾಡಿನಲ್ಲಿ ಕಾಂಗ್ರೆಸ್ ಬೆಂಬಲಿತ ಸರ್ಕಾರವೇ ಇರುವುದು ಕಾರಣವಿರಬಹುದೇ ಎಂಬ ಅನುಮಾನ ಬರುತ್ತದೆ. (‘ಕರ್ನಾಟಕಕ್ಕೆ ಮಹಾದಾಯಿಯ ಒಂದು ಹನಿ ನೀರನ್ನು ಕೊಡುವುದಿಲ್ಲ’ ಎಂದು 2009ರಲ್ಲಿ ಅಂದಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದನ್ನು ಗಮನಿಸಬೇಕು). ಪ್ರಜಾಪ್ರಭುತ್ತವದಲ್ಲಿ ಜನರ  ಹಿತ ಮುಖ್ಯವಾಗಬೇಕೆ ವಿನಃ ಆಳುವ ಪಕ್ಷದ್ದಲ್ಲ.  ಮುಖ್ಯಮಂತ್ರಿ ಸಿದ್ಧರಾಮಯ್ಯ ಕೇಂದ್ರದ ವಿರುದ್ಧ ಮಾತನಾಡುವುದರಲ್ಲಿ ತೋರುವ ಉತ್ಸಾಹವನ್ನು ತಮಿಳುನಾಡಿನ ಕರ್ನಾಟಕ ವಿರೋಧಿ ದೋರಣೆಯನ್ನು ಖಂಡಿಸಲು ಏಕೆ ತೋರುವುದಿಲ್ಲ?. ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಪಾದಯಾತ್ರೆ ಮಾಡಿದ್ದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೂ ಮೌನ ವಹಿಸಿದ್ದಾರೆ. ಈ ವರ್ಷ ಮಳೆಯ ಅಭಾವ ಆಗುವ ಸಾಧ್ಯತೆಯಿದ್ದು ಕರ್ನಾಟಕದ ಹಿತ ಕಾಯಲು ಕನ್ನಡ ಸಂಘಟನೆಗಳೇ ಮುಂದಾಗಬೇಕೆಂದು ಕನ್ನಡ ಗೆಳೆಯರ ಬಳಗ ಭಾವಿಸುತ್ತದೆ. ಬಿಜೆಪಿಯವರೂ ಕನ್ನಡದ ಹಿತಕ್ಕಿಂತ ಪಕ್ಷದ ಲಾಭಕ್ಕೆ ಒತ್ತುಕಟ್ಟ ನಿದರ್ಶನಗಳಿವೆ ಎಂದು ಕನ್ನಡ ಗೆಳೆಯರ ಬಳಗದ ಸಂಚಾಲಕರಾದ ರಾ.ನಂ. ಚಂದ್ರಶೇಖರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ನಾಪತ್ತೆಯಾಗಿದ್ದ ಬಾಲಕನ ರಕ್ಷಿಸಿದ ಸದಾಶಿವನಗರ ಪೊಲೀಸರು

Bengaluru : ದಿನಾಂಕ:26ರ ಬೆಳಿಗ್ಗೆ 09:52 ಗಂಟೆಯ ಸಮಯದಲ್ಲಿ ಸಾರ್ವಜನಿಕರೊಬ್ಬರು ಯಶವಂತಪುರ ಪೊಲೀಸ್ ಠಾಣೆ (Yeshwanthpur Police Station) ವ್ಯಾಪ್ತಿಯ ಎಂ.ಎಸ್ ರಾಮಯ್ಯ ಕಾಲೇಜಿನ ಗೇಟ್ (MS Ramaiah Gatge) ನಂಬರ್-2ರ ಸಮೀಪ ಕಾಣೆಯಾಗಿದ್ದ ಬಾಲಕನೊಬ್ಬ ಪತ್ತೆಯಾಗಿರುವುದಾಗಿ ‘ನಮ್ಮ 112’ ತುರ್ತು ಸಹಾಯವಾಣಿಗೆ ಕರೆ ಮಾಡಿ ಮಾಹಿತಿಯನ್ನು ನೀಡಿರುತ್ತಾರೆ.
ಕೂಡಲೇ ಕಾರ್ಯಪ್ರವೃತ್ತರಾದ ‘ನಮ್ಮ-112’ ಸಿಬ್ಬಂದಿ ಸದಾಶಿವನಗರ ಪೊಲೀಸ್ ಠಾಣೆಯ ಹೊಯ್ಸಳ-13 ರಲ್ಲಿ ಕರ್ತವ್ಯದಲ್ಲಿದ್ದ ಂSI ನರಸಿಂಹಮೂರ್ತಿ ಮತ್ತು ಂಊಅ ನವೀನ್ ಕುಮಾರ್ ರವರಿಗೆ ಮಾಹಿತಿಯನ್ನು ರವಾನಿಸಲಾಗಿದ್ದು, ಪೊಲೀಸ್ ಅಧಿಕಾರಿ/ಸಿಬ್ಬಂದಿಯವರು ಕೇವಲ 14 ನಿಮಿಷದಲ್ಲಿ ಸ್ಥಳಕ್ಕೆ ಬಂದು, ಬಾಲಕನ ಕುರಿತು ಅಗತ್ಯ ಮಾಹಿತಿಯನ್ನು ಸಂಗ್ರಹಿಸಲಾಗಿ, ಬಾಲಕನ ಹೆಸರು ತೇಜಸ್ 8ವರ್ಷ ಎಂದು ತಿಳಿದುಬಂದಿದ್ದು, ಈತ ತಪ್ಪಿಸಿಕೊಂಡು ಬಂದಿರುವುದಾಗಿ ತಿಳಿದು ಬಂದಿರುತ್ತದೆ. ಬಾಲಕನ ತಾಯಿ ಬಾಲಕನನ್ನು ಹುಡುಕಿಕೊಂಡು ಮತ್ತಿಕೆರೆಯ ಕಡೆಗೆ ಹೋಗಿರುವುದಾಗಿ ಸಾರ್ವಜನಿಕರಿಂದ ತಿಳಿದು ಬಂದಿದ್ದು, ಪೊಲೀಸರು ಬಾಲಕನ ತಾಯಿಯನ್ನು ಪತ್ತೆಮಾಡಿ, ಬಾಲಕನನ್ನು ಸುರಕ್ಷಿತವಾಗಿ ತಾಯಿಗೆೆ ಒಪ್ಪಿಸಲಾಯಿತು.
ಈ ಘಟನೆ ಮಕ್ಕಳ ಸುರಕ್ಷತೆಯಲ್ಲಿ ತ್ವರಿತ ಪ್ರತಿಕ್ರಿಯೆ, ಎಚ್ಚರಿಕೆ ಮತ್ತು ಸಮನ್ವಯದ ಮಹತ್ವವನ್ನು ಸ್ಪಷ್ಟಪಡಿಸುತ್ತದೆ. ಬೆಂಗಳೂರು ನಗರ ಪೊಲೀಸ್ ಇಲಾಖೆಯ ತಕ್ಷಣದ ಮಧ್ಯಪ್ರವೇಶವು ಆತಂಕಕಾರಿ ಪರಿಸ್ಥಿತಿಯನನು ತಪ್ಪಿಸಿ, ಮಗುವಿನ ಸುರಕ್ಷಿತ ಮರಳುವಿಕೆಯನ್ನು ಖಚಿತಪಡಿಸಿತು. ಇದರಿಂದ ತುರ್ತು ಪ್ರತಿಕ್ರಿಯೆ ಸೇವೆಗಳ ಮೇಲಿನ ಸಾರ್ವಜನಿಕ ವಿಶ್ವಾಸ ಮತ್ತುಷ್ಟು ಬಲಗೊಂಡಿದೆ.

 

ಶಿಕ್ಷಕರಿಗೆ ಲಗಾಮು! ಸರ್ಕಾರಿ ಶಾಲೆಗಳಲ್ಲಿ GPS ಡಿಜಿಟಲ್ ಹಾಜರಾತಿ ಕಡ್ಡಾಯ, ಜಾರಿಗೆ ಸಿದ್ಧತೆಗಳು ಹೇಗಿವೆ?

ಕಾರವಾರ, ಮೇ 27: ಕರ್ನಾಟಕ ಶಿಕ್ಷಣ ಇಲಾಖೆ ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಎರಡು ಮಹತ್ವದ ಸುಧಾರಣೆಗಳನ್ನು ಜಾರಿಗೆ ತರುತ್ತಿದೆ. ಮೊದಲನೆಯದು, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಮಯಪಾಲನೆಯನ್ನು ಖಚಿತಪಡಿಸಲು *GPS ಆಧಾರಿತ ಡಿಜಿಟಲ್ ಹಾಜರಾತಿ ವ್ಯವಸ್ಥೆ*. ಎರಡನೆಯದು, *2026-27ನೇ ಶೈಕ್ಷಣಿಕ ವರ್ಷದಿಂದ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಕನ್ನಡ-ಇಂಗ್ಲಿಷ್ ದ್ವಿಭಾಷಾ ಬೋಧನಾ ಪದ್ಧತಿಯ ಪೂರ್ಣ ವಿಸ್ತರಣೆ*. ಈ ಕ್ರಮಗಳು ಗ್ರಾಮೀಣ ಮತ್ತು ನಗರ ವಿದ್ಯಾರ್ಥಿಗಳ ನಡುವಿನ ಶೈಕ್ಷಣಿಕ ಅಂತರವನ್ನು ಕಡಿಮೆ ಮಾಡಿ, ಮಕ್ಕಳನ್ನು ಜಾಗತಿಕ ಸ್ಪರ್ಧೆಗೆ ಸಜ್ಜುಗೊಳಿಸುವ ಗುರಿ ಹೊಂದಿವೆ. ಕರ್ನಾಟಕ ಶಿಕ್ಷಣ ಕ್ಷೇತ್ರದಲ್ಲಿ ಇದೊಂದು ಕ್ರಾಂತಿಕಾರಿ ಬದಲಾವಣೆ. ಕರ್ನಾಟಕ ಸರ್ಕಾರದ ಈ ದಿಟ್ಟ ಹೆಜ್ಜೆಗಳು ಸರ್ಕಾರಿ ಶಾಲೆಗಳ ಚಿತ್ರಣವನ್ನೇ ಬದಲಾಯಿಸಲಿವೆ. ತಂತ್ರಜ್ಞಾನ ಮತ್ತು ದ್ವಿಭಾಷಾ ನೀತಿಯ ಸಮ್ಮಿಲನದಿಂದ ಮುಂದಿನ ಪೀಳಿಗೆ ಸರ್ವಾಂಗೀಣವಾಗಿ ಸಬಲವಾಗಲಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕಮೆಂಟ್ ಮಾಡಿ ತಿಳಿಸಿ.

ಡಿಜಿಟಲ್ ಹಾಜರಾತಿ ವ್ಯವಸ್ಥೆ: ಸಮಯಪಾಲನೆಗೆ ತಾಂತ್ರಿಕ ಪರಿಹಾರ

ಶಿಕ್ಷಕರು ಸಮಯಕ್ಕೆ ಸರಿಯಾಗಿ ಶಾಲೆಗೆ ಬರುವುದನ್ನು ಖಚಿತಪಡಿಸಿಕೊಳ್ಳಲು ಇಲಾಖೆಯು GPS ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ಕೆಲವು ಕಡೆ ಜಾರಿಗೊಳಿಸಿದೆ. ಇದರ ಮುಖ್ಯ ನಿಯಮಗಳು ಹೀಗಿವೆ:
ನೈಜ ಸಮಯದ ಟ್ರ್ಯಾಕಿಂಗ್: ಶಿಕ್ಷಕರು ಶಾಲಾ ಆವರಣದಲ್ಲಿದ್ದಾಗ ಮಾತ್ರ ಮೊಬೈಲ್ ಆ್ಯಪ್ ಮೂಲಕ ಹಾಜರಾತಿ ದಾಖಲಿಸಲು ಸಾಧ್ಯ.
ತಡವಾಗಿ ಬಂದರೆ ಕ್ರಮ: ನಿಗದಿತ ಸಮಯದ ನಂತರ ಬರುವ ಶಿಕ್ಷಕರನ್ನು “ತಡವಾಗಿ ಬಂದವರು” ಅಥವಾ “ಗೈರು” ಎಂದು ಪರಿಗಣಿಸಲಾಗುತ್ತದೆ.
ಆಫ್‌ಲೈನ್‌ಗೆ ವಿನಾಯಿತಿ: ತಾಂತ್ರಿಕ ದೋಷಗಳು ಅಥವಾ ನೆಟ್‌ವರ್ಕ್ ಸಮಸ್ಯೆಗಳಿದ್ದಾಗ ಮಾತ್ರ ಆಫ್‌ಲೈನ್ ದಾಖಲೆಗೆ ಅವಕಾಶ ನೀಡಲಾಗುತ್ತದೆ.
ನಿರಂತರ ಮೇಲ್ವಿಚಾರಣೆ: ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಇತರೆ ಮೇಲ್ವಿಚಾರಕರು ತಮ್ಮ ವ್ಯಾಪ್ತಿಯ ಶಾಲೆಗಳ ಡಿಜಿಟಲ್ ಹಾಜರಾತಿಯನ್ನು ನಿರಂತರವಾಗಿ ಪರಿಶೀಲಿಸಬೇಕೆಂದು ಸೂಚಿಸಲಾಗಿದೆ.
ಈ ವ್ಯವಸ್ಥೆಯಿಂದ ಹಾಜರಾತಿಯಲ್ಲಿ ಪಾರದರ್ಶಕತೆ ಬರಲಿದ್ದು, ಅನಧಿಕೃತ ಗೈರುಹಾಜರಿಗೆ ಕಡಿವಾಣ ಬೀಳಲಿದೆ.

ದ್ವಿಭಾಷಾ ಬೋಧನಾ ಪದ್ಧತಿ: ಕನ್ನಡಕ್ಕೆ ಧಕ್ಕೆ ಇಲ್ಲ, ಜಾಗತಿಕ ಅವಕಾಶಗಳು

2026-27ನೇ ಸಾಲಿನಿಂದ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ *ದ್ವಿಭಾಷಾ ಬೋಧನಾ ಪದ್ಧತಿಯನ್ನು* ಪೂರ್ಣ ಪ್ರಮಾಣದಲ್ಲಿ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ.

ಏಕೆ ಈ ಬದಲಾವಣೆ?

ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಮಾತೃಭಾಷೆ ಕನ್ನಡದ ಜೊತೆಗೆ ಇಂಗ್ಲಿಷ್ ಭಾಷಾ ಕೌಶಲ್ಯವನ್ನು ಕಲಿಸಿ, ಅವರನ್ನು *ಜಾಗತಿಕ ಸ್ಪರ್ಧೆಗೆ ಸಿದ್ಧಗೊಳಿಸುವುದು* ಇದರ ಮುಖ್ಯ ಉದ್ದೇಶ. ಇಂಗ್ಲಿಷ್‌ನಿಂದ ಕನ್ನಡ ಕಲಿಕೆಗೆ ಯಾವುದೇ ಧಕ್ಕೆ ಆಗುವುದಿಲ್ಲ. ಬದಲಾಗಿ, ಎರಡು ಭಾಷೆಗಳನ್ನು ಒಂದೇ ಸಮಯದಲ್ಲಿ ಅರ್ಥೈಸಿಕೊಳ್ಳುವ ಸಾಮರ್ಥ್ಯ ಮಕ್ಕಳಲ್ಲಿ ಹೆಚ್ಚುತ್ತದೆ. ಇದು ಗ್ರಾಮೀಣ ವಿದ್ಯಾರ್ಥಿಗಳ *ಭಾಷಾ ಸಂಕೋಲೆಯನ್ನು ದೂರ ಮಾಡಿ*, ಅವರಲ್ಲಿ ಬೌದ್ಧಿಕ ಮತ್ತು ತಾರ್ಕಿಕ ಸಾಮರ್ಥ್ಯವನ್ನು ವೃದ್ಧಿಸುತ್ತದೆ.

ಜಾರಿಗೆ ಸಿದ್ಧತೆಗಳು ಹೇಗಿವೆ?

1. ಶಿಕ್ಷಕರಿಗೆ ತರಬೇತಿ: DSERT ವತಿಯಿಂದ ರಾಜ್ಯದ ಸುಮಾರು 1.55 ಲಕ್ಷಕ್ಕೂ ಹೆಚ್ಚು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಇಂಗ್ಲಿಷ್ ಮೀಡಿಯಂ ಬೋಧನೆಗೆ ತರಬೇತಿ ನೀಡಲಾಗಿದೆ.
2.  ದ್ವಿಭಾಷಾ ಪಠ್ಯಪುಸ್ತಕಗಳು: ಗಣಿತ ಮತ್ತು ಪರಿಸರ ವಿಜ್ಞಾನ ವಿಷಯಗಳಿಗೆ ಕನ್ನಡ-ಇಂಗ್ಲಿಷ್ ದ್ವಿಭಾಷಾ ಪಠ್ಯಪುಸ್ತಕಗಳನ್ನು ಈಗಾಗಲೇ ಶಾಲೆಗಳಿಗೆ ವಿತರಿಸುವ ಪ್ರಕ್ರಿಯೆ ಆರಂಭವಾಗಿದೆ.
3. ಹಂತ-ಹಂತದ ವಿಸ್ತರಣೆ: ಈಗಾಗಲೇ ಕೆಲ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ನಡೆಯುತ್ತಿರುವ ಈ ಯೋಜನೆಯನ್ನು ಹೊಸ ಶೈಕ್ಷಣಿಕ ವರ್ಷದಿಂದ ರಾಜ್ಯದಾದ್ಯಂತ ಎಲ್ಲಾ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ವಿಸ್ತರಿಸಲಾಗುತ್ತದೆ.
ಸಮಾನ ಶಿಕ್ಷಣ ಮತ್ತು ಶಾಲಾ ಸುರಕ್ಷತೆಗೆ ಆದ್ಯತೆ 
ಈ ಸುಧಾರಣೆಗಳ ಹಿಂದಿನ ಪ್ರಮುಖ ಗುರಿ *ಗ್ರಾಮೀಣ ಮತ್ತು ನಗರ ಪ್ರದೇಶದ ವಿದ್ಯಾರ್ಥಿಗಳ ನಡುವಿನ ಶೈಕ್ಷಣಿಕ ಅಂತರವನ್ನು ಕಡಿಮೆ ಮಾಡಿ*, ಗುಣಮಟ್ಟದ ಶಿಕ್ಷಣವನ್ನು ಖಾಸಗಿ ಶಾಲೆಗಳಿಗೆ ಸರಿಸಮಾನಾಗಿ ಒದಗಿಸುವುದು.
ಜೊತೆಗೆ, ಇಲಾಖೆ ಶಾಲಾ ಕಟ್ಟಡಗಳ ಸುರಕ್ಷತೆಗೂ ಆದ್ಯತೆ ನೀಡಿದೆ. ಶಾಲಾ ಕಟ್ಟಡಗಳು, ಶೌಚಾಲಯಗಳು ಅಥವಾ ಅಡುಗೆ ಕೋಣೆಗಳು ಶಿಥಿಲಗೊಂಡಿದ್ದರೆ, ತಕ್ಷಣವೇ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ *ದುರಸ್ತಿ ಅಥವಾ ತೆರವುಗೊಳಿಸಬೇಕು* ಎಂದು ಸೂಚನೆ ನೀಡಲಾಗಿದೆ. *ಮಳೆಗಾಲ ಆರಂಭಕ್ಕೂ ಮುನ್ನ* ಶಾಲೆ ಕಟ್ಟಡದ ಸುರಕ್ಷತೆಗೆ ಕ್ರಮ ವಹಿಸಲು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.

ಈ ಬದಲಾವಣೆಗಳಿಂದ ಆಗುವ ಪ್ರಯೋಜನಗಳೇನು?

ಯಾರಿಗೆ| ಪ್ರಯೋಜನ:
ಶಿಕ್ಷಕರಿಗೆ | ಸಮಯಪಾಲನೆ ಹೆಚ್ಚಳ, ವೃತ್ತಿಪರ ಜವಾಬ್ದಾರಿ ವೃದ್ಧಿ, ತರಬೇತಿ ಮೂಲಕ ಕೌಶಲ್ಯಾಭಿವೃದ್ಧಿ
ವಿದ್ಯಾರ್ಥಿಗಳಿಗೆ | ಎರಡು ಭಾಷೆಗಳ ಮೇಲೆ ಹಿಡಿತ, ಜಾಗತಿಕ ಅವಕಾಶಗಳಿಗೆ ತೆರೆದುಕೊಳ್ಳುವಿಕೆ, ಗ್ರಾಮೀಣ ಮಕ್ಕಳಿಗೆ ಆತ್ಮವಿಶ್ವಾಸ
ಪೋಷಕರಿಗೆ | ಮಕ್ಕಳ ಶಿಕ್ಷಣದ ಗುಣಮಟ್ಟದ ಬಗ್ಗೆ ಭರವಸೆ, ಖಾಸಗಿ ಶಾಲೆಗಳ ಮೇಲಿನ ಅವಲಂಬನೆ ಕಡಿಮೆ
ಆಡಳಿತಕ್ಕೆ | ನೈಜ ಸಮಯದ ಡೇಟಾ, ಸಂಪನ್ಮೂಲಗಳ ಸರಿಯಾದ ಬಳಕೆ, ಶೈಕ್ಷಣಿಕ ಯೋಜನೆಗೆ ಪಾರದರ್ಶಕತೆ
ಪದೇ ಪದೇ ಕೇಳುವ ಪ್ರಶ್ನೆಗಳಿಗೆ ಉತ್ತರ: 
ಪ್ರಶ್ನೆ 1: ಡಿಜಿಟಲ್ ಹಾಜರಾತಿಯಲ್ಲಿ ನೆಟ್‌ವರ್ಕ್ ಇಲ್ಲದಿದ್ದರೆ ಏನು ಮಾಡಬೇಕು? 
ಉತ್ತರ: ತಾಂತ್ರಿಕ ದೋಷ ಅಥವಾ ನೆಟ್‌ವರ್ಕ್ ಸಮಸ್ಯೆ ಇದ್ದಾಗ ಮಾತ್ರ ಆಫ್‌ಲೈನ್ ದಾಖಲೆಗೆ ಅವಕಾಶ ಇದೆ. ಸಮಸ್ಯೆ ಬಗೆಹರಿದ ನಂತರ ಅದನ್ನು ಅಪ್‌ಲೋಡ್ ಮಾಡಬೇಕು.
ಪ್ರಶ್ನೆ 2: ದ್ವಿಭಾಷಾ ನೀತಿಯಿಂದ ಕನ್ನಡ ಮಾಧ್ಯಮಕ್ಕೆ ತೊಂದರೆ ಆಗುತ್ತದೆಯೇ?
ಉತ್ತರ: ಇಲ್ಲ. ಇದು ಕನ್ನಡದ ಜೊತೆಗೆ ಇಂಗ್ಲಿಷ್ ಕಲಿಸುವ ಪದ್ಧತಿ. ಮಕ್ಕಳು ಎರಡೂ ಭಾಷೆಗಳಲ್ಲಿ ಏಕಕಾಲಕ್ಕೆ ಸಾಮರ್ಥ್ಯ ಗಳಿಸುತ್ತಾರೆ, ಇದರಿಂದ ಕನ್ನಡಕ್ಕೆ ಧಕ್ಕೆ ಆಗುವುದಿಲ್ಲ.
ಪ್ರಶ್ನೆ 3: ಯಾವ ತರಗತಿಗಳಿಗೆ ದ್ವಿಭಾಷಾ ಪುಸ್ತಕ ಸಿಗುತ್ತದೆ?
ಉತ್ತರ: ಸದ್ಯಕ್ಕೆ ಪ್ರಾಥಮಿಕ ಹಂತದಲ್ಲಿ ಗಣಿತ ಮತ್ತು ಪರಿಸರ ವಿಜ್ಞಾನ ವಿಷಯಗಳಿಗೆ ದ್ವಿಭಾಷಾ ಪಠ್ಯಪುಸ್ತಕ ವಿತರಣೆ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಇತರೆ ವಿಷಯಗಳಿಗೂ ವಿಸ್ತರಿಸಲಾಗುತ್ತದೆ.
ಪ್ರಶ್ನೆ 4: ಈ ನಿಯಮಗಳು ಯಾವಾಗಿನಿಂದ ಜಾರಿ?
ಉತ್ತರ: ಡಿಜಿಟಲ್ ಹಾಜರಾತಿ ಈಗಾಗಲೇ ಕೆಲವು ಕಡೆ ಜಾರಿಯಲ್ಲಿದೆ. ದ್ವಿಭಾಷಾ ಬೋಧನೆ 2026-27ನೇ ಶೈಕ್ಷಣಿಕ ವರ್ಷದಿಂದ ರಾಜ್ಯದಾದ್ಯಂತ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಲಿದೆ.

ಸುವರ್ಣಾವಕಾಶ: ಚಿಕ್ಕಬಳ್ಳಾಪುರ ಡಿಸಿ ಕಚೇರಿಯಲ್ಲಿ 169 ಹುದ್ದೆಗಳಿಗೆ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿ

ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ಪುರಸಭಾ ಕಚೇರಿಗಳಲ್ಲಿ ಖಾಲಿ ಇರುವ ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ಉಪ ಆಯುಕ್ತರ ಕಚೇರಿ ಚಿಕ್ಕಬಳ್ಳಾಪುರ ಅಧಿಕೃತವಾಗಿ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ.
ಹೆಚ್ಚಿನ ಸಂಖ್ಯೆಯ ಹುದ್ದೆಗಳು, ಯಾವುದೇ ಅರ್ಜಿ ಶುಲ್ಕ ಇಲ್ಲದಿರುವುದು ಮತ್ತು ಸರಳ ಆಯ್ಕೆ ಪ್ರಕ್ರಿಯೆಯಿಂದಾಗಿ ಈ ನೇಮಕಾತಿ ಉದ್ಯೋಗಾಕಾಂಕ್ಷಿಗಳ ಗಮನ ಸೆಳೆಯುತ್ತಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಮೊದಲು ಅರ್ಜಿ ಸಲ್ಲಿಸಬಹುದು.
ಚಿಕ್ಕಬಳ್ಳಾಪುರ ಜಿಲ್ಲೆ ಪುರಸಭಾ ಕಚೇರಿಗಳಲ್ಲಿ ನೇಮಕಾತಿ ವಿವರ:
 

ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಸುವರ್ಣಾವಕಾಶ

ಚಿಕ್ಕಬಳ್ಳಾಪುರ ಉಪ ಆಯುಕ್ತರ ಕಚೇರಿ ಹೊರಡಿಸಿರುವ ನೇಮಕಾತಿ ಅಧಿಸೂಚನೆಯು ಕಾಯಂ ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವವರಿಗೆ ದೊಡ್ಡ ಅವಕಾಶವೆಂದು ಪರಿಗಣಿಸಲಾಗಿದೆ. ಈ ಹುದ್ದೆಗಳನ್ನು ಪುರಸಭೆ ಆಡಳಿತದ ಅಡಿಯಲ್ಲಿ ಭರ್ತಿ ಮಾಡುತ್ತಿರುವುದರಿಂದ, ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಥಳೀಯ ನಾಗರಿಕ ಸಂಸ್ಥೆಗಳಲ್ಲಿ ಕೆಲಸ ಮಾಡಲು ಮತ್ತು ಸಾರ್ವಜನಿಕ ನೈರ್ಮಲ್ಯ ಹಾಗೂ ನಗರ ನಿರ್ವಹಣಾ ಸೇವೆಗಳಿಗೆ ಕೊಡುಗೆ ನೀಡಲು ಅವಕಾಶ ಸಿಗುತ್ತದೆ.
ಈ ನೇಮಕಾತಿಯ ಮತ್ತೊಂದು ಪ್ರಮುಖ ಪ್ರಯೋಜನವೆಂದರೆ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಇದರಿಂದ ಎಲ್ಲಾ ಅರ್ಹ ಅರ್ಜಿದಾರರಿಗೆ ಪ್ರಕ್ರಿಯೆ ಸುಲಭ ಮತ್ತು ಕೈಗೆಟಕುವಂತಾಗಿದೆ.

ಶೈಕ್ಷಣಿಕ ಅರ್ಹತೆ

ಉಪ ಆಯುಕ್ತರ ಕಚೇರಿ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆಯ ಪ್ರಕಾರ, ಶೈಕ್ಷಣಿಕ ಅರ್ಹತೆಯ ಅವಶ್ಯಕತೆಗಳನ್ನು ಸರ್ಕಾರದ ನಿಯಮಗಳ ಪ್ರಕಾರ ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ಅರ್ಹತಾ ಮಾನದಂಡಗಳನ್ನು ವಿವರವಾಗಿ ಅರ್ಥಮಾಡಿಕೊಳ್ಳಲು ಸೂಚಿಸಲಾಗಿದೆ.

ವೇತನ ವಿವರ

ಆಯ್ಕೆಯಾದ ಅಭ್ಯರ್ಥಿಗಳು ಸರ್ಕಾರಿ ನಿಯಮಗಳು ಮತ್ತು ಮಾನದಂಡಗಳ ಪ್ರಕಾರ ವೇತನ ಮತ್ತು ಸೌಲಭ್ಯಗಳನ್ನು ಪಡೆಯುತ್ತಾರೆ. ನೇಮಕಾತಿ ನಂತರ ಇಲಾಖಾ ನಿಯಮಗಳ ಪ್ರಕಾರ ನಿಖರವಾದ ವೇತನ ಶ್ರೇಣಿ ಮತ್ತು ಭತ್ಯೆಗಳನ್ನು ನೀಡಲಾಗುತ್ತದೆ.

ವಯೋಮಿತಿ ಮಾನದಂಡ

ಅರ್ಜಿದಾರರು ಈ ಕೆಳಗಿನ ವಯಸ್ಸಿನ ಅವಶ್ಯಕತೆಗಳನ್ನು ಪೂರೈಸಬೇಕು:
ಕನಿಷ್ಠ ವಯಸ್ಸು: 18 ವರ್ಷಗಳು
ಗರಿಷ್ಠ ವಯಸ್ಸು: 50 ವರ್ಷಗಳು
ಮೀಸಲಾತಿ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳು ಕರ್ನಾಟಕ ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ಪಡೆಯಬಹುದು.

ಆಯ್ಕೆ ಪ್ರಕ್ರಿಯೆ

ನೇಮಕಾತಿ ಪ್ರಕ್ರಿಯೆಯನ್ನು ಸಂದರ್ಶನದ ಮೂಲಕ ನಡೆಸಲಾಗುತ್ತದೆ. ಮಾನ್ಯ ಅರ್ಜಿಗಳು ಮತ್ತು ಅಗತ್ಯ ದಾಖಲೆಗಳನ್ನು ಸಲ್ಲಿಸಿದ ಅಭ್ಯರ್ಥಿಗಳನ್ನು ಆಯ್ಕೆ ಪ್ರಕ್ರಿಯೆಗೆ ಕರೆಯಲಾಗುತ್ತದೆ.
ಅಧಿಸೂಚನೆಯಲ್ಲಿ ಲಿಖಿತ ಪರೀಕ್ಷೆಯನ್ನು ಉಲ್ಲೇಖಿಸಲಾಗಿಲ್ಲ, ಇದರಿಂದಾಗಿ ಈ ನೇಮಕಾತಿ ಪ್ರಕ್ರಿಯೆ ಅರ್ಜಿದಾರರಿಗೆ ತುಲನಾತ್ಮಕವಾಗಿ ಸರಳವಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ?

ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಸಲ್ಲಿಸುವಾಗ ಕೆಳಗಿನ ಹಂತಗಳನ್ನು ಎಚ್ಚರಿಕೆಯಿಂದ ಅನುಸರಿಸಬೇಕು:
ಹಂತ 1: ಅರ್ಜಿ ನಮೂನೆ ಡೌನ್‌ಲೋಡ್ ಮಾಡಿ
ಅರ್ಜಿದಾರರು ಮೊದಲು ಅಧಿಕೃತ ಅಧಿಸೂಚನೆ ಅಥವಾ ವೆಬ್‌ಸೈಟ್‌ನಿಂದ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.
ಹಂತ 2: ಅಗತ್ಯ ಮಾಹಿತಿ ಭರ್ತಿ ಮಾಡಿ
ಕೆಳಗಿನ ಎಲ್ಲಾ ಅಗತ್ಯ ವಿವರಗಳನ್ನು ನಮೂದಿಸಿ:
– ಹೆಸರು
– ವಯಸ್ಸು
– ವಿಳಾಸ
– ಶೈಕ್ಷಣಿಕ ವಿವರಗಳು
– ಸಂಪರ್ಕ ಮಾಹಿತಿ
ನಮೂನೆ ಭರ್ತಿ ಮಾಡುವಾಗ ತಪ್ಪುಗಳನ್ನು ಮಾಡದಂತೆ ಅರ್ಜಿದಾರರಿಗೆ ಸೂಚಿಸಲಾಗಿದೆ.
ಹಂತ 3: ಅಗತ್ಯ ದಾಖಲೆಗಳನ್ನು ಲಗತ್ತಿಸಿ
ಅಭ್ಯರ್ಥಿಗಳು ಈ ಕೆಳಗಿನ ದಾಖಲೆಗಳ ಸ್ವಯಂ-ದೃಢೀಕೃತ ಪ್ರತಿಗಳನ್ನು ಲಗತ್ತಿಸಬೇಕು:
– ಗುರುತಿನ ಚೀಟಿ
– ವಯಸ್ಸಿನ ಪ್ರಮಾಣಪತ್ರ
– ಶೈಕ್ಷಣಿಕ ಪ್ರಮಾಣಪತ್ರಗಳು
– ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
– ರೆಸ್ಯೂಮ್/ಬಯೋಡೇಟಾ
ಹಂತ 4: ಅರ್ಜಿ ಸಲ್ಲಿಸಿ
ಪೂರ್ಣಗೊಂಡ ಅರ್ಜಿ ನಮೂನೆಯನ್ನು ನೇರವಾಗಿ ಅಥವಾ ನೋಂದಾಯಿತ ಅಂಚೆ/ಸ್ಪೀಡ್ ಪೋಸ್ಟ್ ಮೂಲಕ ಈ ಕೆಳಗಿನ ನಗರಸಭಾ ಕಚೇರಿಗಳಿಗೆ ಸಲ್ಲಿಸಬೇಕು:
– ಚಿಕ್ಕಬಳ್ಳಾಪುರ
– ಚಿಂತಾಮಣಿ
– ಶಿಡ್ಲಘಟ್ಟ
– ಗೌರಿಬಿದನೂರು

ಪ್ರಮುಖ ದಿನಾಂಕಗಳು

ಅರ್ಜಿ ಪ್ರಾರಂಭ ದಿನಾಂಕ | 01 ಮೇ 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 30 ಮೇ 2026
ಅಭ್ಯರ್ಥಿಗಳು ಕೊನೆಯ ಕ್ಷಣದ ಸಮಸ್ಯೆಗಳನ್ನು ತಪ್ಪಿಸಲು ಗಡುವಿನ ಮೊದಲು ತಮ್ಮ ಅರ್ಜಿಗಳನ್ನು ಸಲ್ಲಿಸಲು ಸೂಚಿಸಲಾಗಿದೆ.

ಪ್ರಮುಖ ಲಿಂಕ್‌: Chikkaballapur DC Office Pourakarmika Posts

ದೇಶದ ಪ್ರಮುಖ ಸ್ಟಾರ್ಟಪ್ ಕೇಂದ್ರವಾಗಿ ಹೊರಹೊಮ್ಮಿದ ಕರ್ನಾಟಕ – ಸಚಿವ  ಎನ್.ಚಲುವರಾಯಸ್ವಾಮಿ

BENGALURU : ಕರ್ನಾಟಕ (Karnataka) ರಾಜ್ಯವು ಇಂದು ದೇಶದ ಪ್ರಮುಖ ಸ್ಟಾರ್ಟಪ್ (Indias Main Startup Centre) ಕೇಂದ್ರವಾಗಿ ಹೊರಹೊಮ್ಮಿದ್ದು, ರಾಜ್ಯದಲ್ಲಿ ಈಗಾಗಲೇ 7ರಿಂದ 8 ಸಾವಿರಕ್ಕೂ ಅಧಿಕ ಸ್ಟಾರ್ಟಪ್‍ಗಳು ಸ್ಥಾಪನೆಯಾಗಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ (N.Cheluvarayaswamy) ಅವರು ತಿಳಿಸಿದ್ದಾರೆ. ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆಯಲ್ಲಿ ಆಯೋಜಿಸಿದ್ದ  “ಅಗ್ರಿ ಸ್ವಾರ್ಟ್‍ಅಪ್ ಕಾನ್ಕ್ಲೇವ್ 2.0 ನಾವೀನ್ಯತೆ, ಸುಸ್ಥಿರತೆ ಮತ್ತು ವಿಸ್ತರಣೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
Karnataka as a leading startup hub in the country
ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ, ಸಂಶೋಧನೆ ಹಾಗೂ ನವೀನ ಆವಿμÁ್ಕರಗಳ ಸಂಯೋಜನೆಯಿಂದ ರೈತರ ಜೀವನಮಟ್ಟವನ್ನು ಸುಧಾರಿಸಲು ಅಪಾರ ಅವಕಾಶಗಳಿವೆ. ಕೃಷಿ ವಿಶ್ವವಿದ್ಯಾನಿಲಯಗಳ ಸಂಶೋಧನೆಗಳು ಕೇವಲ ಪ್ರಯೋಗಾಲಯಗಳಲ್ಲೇ ಸೀಮಿತವಾಗದೆ, ಅವು ಸ್ಟಾರ್ಟಪ್‍ಗಳ ಮೂಲಕ ರೈತರ ಹೊಲಗಳಿಗೆ ತಲುಪಬೇಕು ಎಂದರು.

ವಿಶ್ವವಿದ್ಯಾನಿಲಯಗಳ ಸಂಶೋಧನಾ ಫಲಿತಾಂಶಗಳನ್ನು ಆಧರಿಸಿ ಯುವಕರು ಅಗ್ರಿ ಸ್ಟಾರ್ಟಪ್‍ಗಳನ್ನು ಆರಂಭಿಸಿದರೆ, ಕೃಷಿಯಲ್ಲಿ ಮೌಲ್ಯವರ್ಧನೆ, ಸಂಸ್ಕರಣೆ, ಪ್ಯಾಕೇಜಿಂಗ್, ಬ್ರ್ಯಾಂಡಿಂಗ್ ಹಾಗೂ ಮಾರುಕಟ್ಟೆ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿ ಸಾಧ್ಯವಾಗುತ್ತದೆ. ಇದರ ಮೂಲಕ ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಮೌಲ್ಯ ದೊರೆಯುವುದರ ಜೊತೆಗೆ ರೈತರ ಆದಾಯವೂ ಹೆಚ್ಚಾಗಲಿದೆ ಎಂದು ತಿಳಿಸಿದರು.

ಇಂದಿನ ಯುವಕರು ಉದ್ಯೋಗ ಅರಸುವವರಾಗಿರದೆ, ಉದ್ಯೋಗ ನೀಡುವವರಾಗಬೇಕು. ಕೃಷಿ ಮತ್ತು ಕೃಷಿ ಆಧಾರಿತ ಕೈಗಾರಿಕೆಗಳಲ್ಲಿ ಸ್ಟಾರ್ಟಪ್‍ಗಳನ್ನು ಸ್ಥಾಪಿಸುವ ಮೂಲಕ ಸಾವಿರಾರು ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಬಹುದು ಎಂದು ಹೇಳಿದರು.
ಗ್ರಾಮೀಣ ಪ್ರದೇಶಗಳ ಯುವಕರು ತಂತ್ರಜ್ಞಾನ ಆಧಾರಿತ ಕೃಷಿ ಉದ್ಯಮಗಳಲ್ಲಿ ತೊಡಗಿಸಿಕೊಂಡರೆ ಗ್ರಾಮೀಣ ಆರ್ಥಿಕತೆ ಮತ್ತಷ್ಟು ಬಲವಾಗಲಿದೆ. ರಾಜ್ಯ ಸರ್ಕಾರವು ಕೃಷಿ ಕ್ಷೇತ್ರದಲ್ಲಿ ಉತ್ತೇಜನ ನೀಡಲು ವಿಶೇಷ ಯೋಜನೆಗಳು, ಇಂಕ್ಯೂಬೇಷನ್ ಕೇಂದ್ರಗಳು, ಆರ್ಥಿಕ ನೆರವು ಹಾಗೂ ತಾಂತ್ರಿಕ ಮಾರ್ಗದರ್ಶನವನ್ನು ಒದಗಿಸುತ್ತಿದೆ. ಕೃಷಿ ವಿಶ್ವವಿದ್ಯಾನಿಲಯಗಳು, ಸಂಶೋಧನಾ ಸಂಸ್ಥೆಗಳು ಮತ್ತು ಖಾಸಗಿ ವಲಯಗಳು ಒಟ್ಟಾಗಿ ಕಾರ್ಯನಿರ್ವಹಿಸಿದರೆ ಕರ್ನಾಟಕವನ್ನು ದೇಶದ ಅಗ್ರ ಅಗ್ರಿ-ಇನ್ನೋವೇಷನ್ ರಾಜ್ಯವನ್ನಾಗಿ ರೂಪಿಸಬಹುದು ಎಂದು ತಿಳಿಸಿದರು.

ಕೇಂದ್ರ ಸರ್ಕಾರದ  ಡಿಬಿಟಿ, ಬೈರಾಕ್ ವ್ಯವಸ್ಥಾಪಕ ನಿರ್ದೇಶಕರಾದ ಡಾ: ಜಿತೇಂದ್ರಕುಮಾರ್ ಮಾತನಾಡಿ, ಆನ್‍ಲೈನ್ ಮೂಲಕ ಭಾಗವಹಿಸಿ ಕೃಷಿಕ್ಷೇತ್ರದಲ್ಲಿ ನವೀನ ತಂತ್ರಜ್ಞಾನಗಳ ಬಳಕೆ ಭವಿಷ್ಯದ ಕೃಷಿಯನ್ನು ರೂಪಿಸಲಿದೆ ಎಂದು ತಿಳಿಸಿದರು. ಹವಾಮಾನ ಬದಲಾವಣೆ, ನೀರಿನ ಕೊರತೆ ಹಾಗೂ ಉತ್ಪಾದನಾ ವೆಚ್ಚ ಹೆಚ್ಚುತ್ತಿರುವ ಸಂದರ್ಭದಲ್ಲಿ ಅಗ್ರಿ ಸ್ಟಾರ್ಟಪ್‍ಗಳು ರೈತರಿಗೆ ಹೊಸ ಪರಿಹಾರಗಳನ್ನು ನೀಡುತ್ತಿವೆ ಎಂದು ಅಭಿಪ್ರಾಯಪಟ್ಟರು.

ಕೃಷಿ ಪದವೀಧರರು ಮತ್ತು ಯುವ ಸಂಶೋಧಕರು ಕೃಷಿಯನ್ನು ಕೈಗಾರಿಕಾ ದೃಷ್ಟಿಕೋನದಿಂದ ನೋಡಬೇಕು. ಕೃಷಿ ಉತ್ಪನ್ನಗಳ ನೇರ ಮಾರುಕಟ್ಟೆ, ಕೃಷಿ ಪ್ರವಾಸೋದ್ಯಮ, ಸಾವಯವ ಉತ್ಪನ್ನಗಳ ಬ್ರ್ಯಾಂಡಿಂಗ್ ಹಾಗೂ ರಫ್ತು ಅವಕಾಶಗಳನ್ನು ಬಳಸಿಕೊಂಡು ಗ್ರಾಮೀಣ ಭಾಗದಲ್ಲಿ ಹೊಸ ಉದ್ಯಮಗಳನ್ನು ಆರಂಭಿಸಬಹುದುಎಂದರು ತಿಳಿಸಿದರು.

ಕೃಷಿ ಇಲಾಖೆಯ ಕಾರ್ಯದರ್ಶಿಗಳಾದ ಕ್ಯಾಪ್ಟನ್ ಡಾ: ಕೆ.ರಾಜೇಂದ್ರ ಮಾತನಾಡಿ, ಅಗ್ರಿ ಸ್ಟಾರ್ಟಪ್‍ಗಳು ಕೇವಲ ಉದ್ಯಮವಲ್ಲ, ರೈತರ ಬದುಕಿನಲ್ಲಿ ಬದಲಾವಣೆ ತರಬಲ್ಲ ಶಕ್ತಿಯಾಗಿದೆ. ತಂತ್ರಜ್ಞಾನ ಮತ್ತು ಕೃಷಿಯ ಸಂಯೋಜನೆಯಿಂದ ರೈತರ ಆದಾಯ ಹೆಚ್ಚುವುದರ ಜೊತೆಗೆ ಗ್ರಾಮೀಣ ಯುವಕರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿಗಳಾದ ಡಾ.ಎಸ್.ವಿ. ಸುರೇಶ,  ಅಗ್ರಿ ಸ್ಟಾರ್ಟಪ್‍ಗಳು ರೈತರಿಗೆ ಹೊಸ ತಂತ್ರಜ್ಞಾನ, ಹವಾಮಾನ ಆಧಾರಿತ ಕೃಷಿ ಸಲಹೆ, ಡಿಜಿಟಲ್ ಮಾರುಕಟ್ಟೆ, ನಿಖರ ಕೃಷಿ, ಡ್ರೋನ್ ತಂತ್ರಜ್ಞಾನ, ಸಾವಯವ ಕೃಷಿ ಹಾಗೂ ಕೃಷಿ ಯಂತ್ರೋಪಕರಣಗಳ ಬಳಕೆಯನ್ನು ಸುಲಭಗೊಳಿಸುತ್ತಿವೆ. ಇದರಿಂದ ಕೃಷಿ ವೆಚ್ಚ ಕಡಿಮೆಯಾಗುವುದರ ಜೊತೆಗೆ ಉತ್ಪಾದಕತೆ ಮತ್ತು ಲಾಭದಾಯಕತೆ ಹೆಚ್ಚಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

“ನವೀನತೆ, ಸುಸ್ಥಿರತೆ ಮತ್ತು ವಿಸ್ತರಣೆ” ಎಂಬ ಧ್ಯೇಯದೊಂದಿಗೆ ಆಯೋಜಿಸಲಾದ ಈ ಅಗ್ರಿ ಸ್ಟಾರ್ಟಪ್ ಕಾನ್‍ಕ್ಲೇವ್ 2.0 ಕಾರ್ಯಕ್ರಮವು ಯುವಕರು, ರೈತರು, ಸಂಶೋಧಕರು ಹಾಗೂ ಉದ್ಯಮಿಗಳ ನಡುವೆ ಹೊಸ ಚಿಂತನೆ ಮತ್ತು ಸಹಕಾರಕ್ಕೆ ವೇದಿಕೆಯಾಗಿದ್ದು, ಕೃಷಿ ಕ್ಷೇತ್ರದ ಭವಿಷ್ಯರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸುಮಾರು 50ಕ್ಕೂ ಹೆಚ್ಚು ಮಳಿಗೆಗಳನ್ನು ಪ್ರದರ್ಶಿಸಲಾಯಿತು. ಅಗ್ರಿ ಸ್ಟಾರ್ಟ್‍ಅಪ್‍ಗಳು, ಉದ್ಯಮಿಗಳು, ಸಂಶೋಧಕರು, ಹೂಡಿಕೆದಾರರು, ವಿದ್ಯಾರ್ಥಿಗಳು, ಕೈಗಾರಿಕೆಗಳು ಹಾಗೂ ರೈತ ಉತ್ಪಾದಕರ ಸಂಘಟನೆಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಲಾಯಿತು.

ಭಾರತೀಯ ಕೃಷಿಯ ಭವಿಷ್ಯವನ್ನು ರೂಪಿಸುತ್ತಿರುವ ಹೊಸ ನವೋದ್ಯಮಗಳು, ವ್ಯವಹಾರ ಅವಕಾಶಗಳು ಹಾಗೂ ನವೀನ ತಂತ್ರಜ್ಞಾನಗಳನ್ನು ಈ ಕಾನ್‍ಕ್ಲೇವ್‍ನಲ್ಲಿ ಪ್ರದರ್ಶಿಸಲಾಯಿತು. ಜೊತೆಗೆ ಭವಿಷ್ಯದಲ್ಲಿ ವಿಸ್ತರಿಸಬಹುದಾದ ಸುಸ್ಥಿರ ಅಗ್ರಿ ಉದ್ಯಮ, ಕಾರ್ಬನ್ ಮಾರುಕಟ್ಟೆ ಅವಕಾಶಗಳು ಮತ್ತು ಜೈವಿಕ ಪರಿಕರಗಳು ನವೀನತೆಗಳ ಕುರಿತು ತಾಂತ್ರಿಕ ಅಧಿವೇಶನಗಳನ್ನು ಆಯೋಜಿಸಲಾಗಿತ್ತು. ನೆಟ್‍ವಕಿರ್ಂಗ್, ಸಹಭಾಗಿತ್ವ, ತಂತ್ರಜ್ಞಾನ ಪ್ರದರ್ಶನ ಹಾಗೂ ಪ್ರಮುಖ ಸ್ಟಾರ್ಟ್‍ಅಪ್‍ಗಳು, ಹೂಡಿಕೆದಾರರು, ಕೈಗಾರಿಕೆಗಳು ಮತ್ತು ಇಕೋಸಿಸ್ಟಮ್ ಭಾಗೀದಾರರೊಂದಿಗೆ ಸಂವಾದ ನಡೆಸಲು ಉತ್ತಮ ಅವಕಾಶವನ್ನು ಒದಗಿಸಲಾಯಿತು.

ವಿಧಾನ ಪರಿಷತ್ ಚುನಾವಣೆ : ಜೂ. 18 ಮತದಾನ; ಚುನಾವಣಾ ಆಯೋಗದಿಂದ ವೇಳಾಪಟ್ಟಿ ಪ್ರಕಟ

ಕರ್ನಾಟಕ (karnataka) ಮತ್ತು ಬಿಹಾರ (Bihar) ರಾಜ್ಯಗಳ ವಿಧಾನ ಸಭೆ ಸದಸ್ಯರಿಂದ ವಿಧಾನ ಪರಿಷತ್‍ಗೆ (Vidhana Parishat) ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಲು ಭಾರತ ಚುನಾವಣಾ ಆಯೋಗವು (Election Commission) ದ್ವೈವಾರ್ಷಿಕ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಕರ್ನಾಟಕ ವಿಧಾನ ಪರಿಷತ್ತಿನ 7 ಸದಸ್ಯರ ಅಧಿಕಾರ ಅವಧಿಯು 2026ರ ಜೂನ್ 30 ರಂದು ಮುಕ್ತಾಯಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಚುನಾವಣೆ ನಿಗದಿಪಡಿಸಿದೆ. ನಿವೃತ್ತಿ ಹೊಂದಲಿರುವ ಕರ್ನಾಟಕದ ಪ್ರಮುಖ ಸದಸ್ಯರಲ್ಲಿ ಗೋವಿಂದ ರಾಜು, ನಸೀರ್ ಅಹಮದ್, ಎನ್. ನಾಗರಾಜು (ಎಂಟಿಬಿ), ಪ್ರತಾಪ್ ಸಿಂಹ ನಾಯಕ್ ಕೆ., ತಿಪ್ಪಣ್ಣಪ್ಪ, ಸುನಿಲ್ ವಲ್ಯಾಪುರ ಮತ್ತು ಬಿ.ಕೆ. ಹರಿಪ್ರಸಾದ್ ಸೇರಿದ್ದಾರೆ.

ಇದೇ ವೇಳೆ ಬಿಹಾರದ 9 ವಿಧಾನ ಪರಿಷತ್ ಸದಸ್ಯರ ಅವಧಿಯು ಜೂನ್ 28 ಕ್ಕೆ ಮುಕ್ತಾಯಗೊಳ್ಳುತ್ತಿರುವುದರಿಂದ ಅಲ್ಲಿಯೂ ಚುನಾವಣೆ ನಡೆಯಲಿದೆ.

ಚುನಾವಣಾ ವೇಳಾಪಟ್ಟಿಯಂತೆ ಅಧಿಸೂಚನೆ ಹೊರಡಿಸುವ ದಿನಾಂಕ: ಜೂನ್ 1, 2026 (ಸೋಮವಾರ) ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಜೂನ್ 8 (ಸೋಮವಾರ), ನಾಮಪತ್ರಗಳ ಪರಿಶೀಲನೆ ಜೂನ್ 9 (ಮಂಗಳವಾರ) ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಜೂನ್ 11 (ಗುರುವಾರ), ಮತದಾನ ನಡೆಯುವ ದಿನಾಂಕ ಜೂನ್ 18, (ಗುರುವಾರ – ಬೆಳಗ್ಗೆ 9:00 ರಿಂದ ಸಂಜೆ 4:00 ರವರೆಗೆ), ಮತ ಎಣಿಕೆ ಕಾರ್ಯ ಜೂನ್ 18 (ಗುರುವಾರ ಸಂಜೆ 5:00 ಗಂಟೆಗೆ) ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವ ದಿನಾಂಕ ಜೂನ್ 20 (ಶನಿವಾರ), ವಿಧಾನಸಭಾ ಸದಸ್ಯರ ಮತಗಳ ಆಧಾರದ ಮೇಲೆ ಈ ಚುನಾವಣೆ ನಡೆಯಲಿದ್ದು, ಜೂನ್ 18 ರಂದೇ ಮತದಾನ ಹಾಗೂ ಮತ ಎಣಿಕೆ ಪ್ರಕ್ರಿಯೆಗಳು ಮುಕ್ತಾಯಗೊಳ್ಳಲಿವೆ ಎಂದು ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಹಾಗೂ ರಾಜ್ಯದ ಸಹಾಯಕ ಮುಖ್ಯ ಚುನಾವಣಾಧಿಕಾರಿ ರಾಘವನ್ ಆರ್.ವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಳಗಾವಿ : ಚಿಕ್ಕೋಡಿಯಲ್ಲಿ ಎಜಿಎಂ ಇಂಜಿನಿಯರಿಂಗ್ ಕಾಲೇಜ್ ಉದ್ಘಾಟಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

BELAGAVI / Chikkodi: ಶ್ರೀ 108ನೇ ಗುಣಧರನಂದಿ ಮುನಿಮಹಾರಾಜರ ಸಾನಿಧ್ಯದಲ್ಲಿ ಕರ್ನಾಟಕದ ಗೌರವಾನ್ವಿತ (Governor) ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರು ಬೆಳಗಾವಿಯ ಚಿಕ್ಕೋಡಿಯಲ್ಲಿ ಎಜಿಎಂ ಇಂಜಿನಿಯರಿಂಗ್ ಕಾಲೇಜ್ (AGM Engineering College) ಅನ್ನು ಉದ್ಘಾಟಸಿ, ಬೆಳಗಾವಿಯಲ್ಲಿ ವಿಶ್ವದಲ್ಲಿ ಅತಿ ಎತ್ತರದ ಪಾರ್ಶ್ವನಾಥ ಪ್ರತಿಮೆಯ ಪ್ರತಿಷ್ಠಾಪನೆಯ ಭೂಮಿ ಶುದ್ಧೀಕರಣ ಮತ್ತು ಶ್ರೀ ಸರಸ್ವತಿ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

“ಈ ಕಾರ್ಯಕ್ರಮವು ಶಿಕ್ಷಣ, ಸಂಸ್ಕೃತಿ, ಸೇವೆ, ತಾಂತ್ರಿಕ ಅಭಿವೃದ್ಧಿ ಮತ್ತು ರಾಷ್ಟ್ರ ನಿರ್ಮಾಣದ ಹೊಸ ಪ್ರಜ್ಞೆಯ ಆರಂಭವನ್ನು ಸೂಚಿಸುತ್ತದೆ.  ಅತ್ಯಂತ ಗೌರವಾನ್ವಿತ ರಾಷ್ಟ್ರೀಯ ಸಂತ ಆಚಾರ್ಯ ಶ್ರೀ ಗುಂಧಾರನಂದಿ ಜಿ ಅವರು ಮಾನವೀಯತೆ, ಶಾಂತಿ, ಕರುಣೆ ಮತ್ತು ಸಾಮಾಜಿಕ ಜಾಗೃತಿಗೆ ದೈವಿಕ ಸ್ಫೂರ್ತಿ. ಅವರ ಇಡೀ ಜೀವನವು ತ್ಯಾಗ, ತಪಸ್ಸು, ಧ್ಯಾನ ಮತ್ತು ಸಾರ್ವಜನಿಕ ಕಲ್ಯಾಣಕ್ಕೆ ಮೀಸಲಾಗಿದೆ. ಸಮಾಜಕ್ಕೆ ಆಧ್ಯಾತ್ಮಿಕ ನಿರ್ದೇಶನವನ್ನು ನೀಡುವುದರ ಜೊತೆಗೆ, ಅವರು ಶಿಕ್ಷಣ, ಸೇವೆ ಮತ್ತು ಸಂಸ್ಕೃತಿಯ ಮೂಲಕ ಬಲವಾದ ಮತ್ತು ಜಾಗೃತ ಭಾರತವನ್ನು ನಿರ್ಮಿಸುವ ಸಂದೇಶವನ್ನು ನೀಡಿದ್ದಾರೆ” ಎಂದರು.

“ಈ ಪವಿತ್ರ ಭೂಮಿಯಲ್ಲಿ ಜನಿಸಿದ ಮತ್ತು ಪ್ರಪಂಚದಾದ್ಯಂತ ಶಾಂತಿ ಮತ್ತು ಮಾನವ ಕಲ್ಯಾಣದ ಸಂದೇಶವನ್ನು ಹರಡಿದ ಆಚಾರ್ಯ ಶ್ರೀಗಳಿಂದ ಪ್ರೇರಿತರಾಗಿ, ಎಜಿಎಂ ಎಂಜಿನಿಯರಿಂಗ್ ಕಾಲೇಜನ್ನು ಈ ನೆಲದಲ್ಲಿಯೇ ಸ್ಥಾಪಿಸಲಾಗಿದೆ. ಈ ಸಂಸ್ಥೆಯ ಮೂಲಕ, ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಮೌಲ್ಯಗಳು, ತಂತ್ರಜ್ಞಾನದ ಜೊತೆಗೆ ನೀತಿಶಾಸ್ತ್ರ ಮತ್ತು ವೃತ್ತಿ ಅಭಿವೃದ್ಧಿಯ ಜೊತೆಗೆ ವ್ಯಕ್ತಿತ್ವ ನಿರ್ಮಾಣವನ್ನು ಒದಗಿಸಲಾಗುತ್ತದೆ. ಈ ಸಂಸ್ಥೆಯು ಭವಿಷ್ಯದ ಪೀಳಿಗೆಯ ಕನಸುಗಳನ್ನು ನಿರ್ಮಿಸುವ ಕೇಂದ್ರವಾಗಿ ಪರಿಣಮಿಸುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.

“ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕನಿಷ್ಠ ಶುಲ್ಕದಲ್ಲಿ ಉನ್ನತ ತಾಂತ್ರಿಕ ಶಿಕ್ಷಣವನ್ನು ನೀಡುವ ಬದ್ಧತೆಯೊಂದಿಗೆ ಈ ಸಂಸ್ಥೆ ಮುಂದುವರಿಯುತ್ತದೆ ಮತ್ತು ಅನಾಥರು ಮತ್ತು ನಿರ್ಗತಿಕ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡುವ ಮೂಲಕ ಸ್ವಾವಲಂಬಿಗಳನ್ನಾಗಿ ಮಾಡಲು ಶ್ರಮಿಸುತ್ತದೆ. ಭಾರತೀಯ ಸಂಸ್ಕೃತಿ ಯಾವಾಗಲೂ “ವಸುಧೈವ ಕುಟುಂಬಕಂ” ಬಗ್ಗೆ. ಇಲ್ಲಿ ಶಿಕ್ಷಣದ ಉದ್ದೇಶವು ಉದ್ಯೋಗ ಆಧಾರಿತವಾಗಿದೆ ಮತ್ತು ಸಮಾಜ ಮತ್ತು ರಾಷ್ಟ್ರದ ಕಡೆಗೆ ನಮ್ಮ ಕರ್ತವ್ಯಗಳನ್ನು ಅರ್ಥಮಾಡಿಕೊಳ್ಳುವುದು. ಇಡೀ ಸಮಾಜ ಮತ್ತು ದೇಶದಲ್ಲಿ ನೈತಿಕತೆಯನ್ನು ಬೆಳೆಸುವಂತಹ ಶಿಕ್ಷಣದ ಅವಶ್ಯಕತೆಯಿದೆ ಮತ್ತು ಆಧುನಿಕ ಜ್ಞಾನವನ್ನು ಮೌಲ್ಯಗಳೊಂದಿಗೆ ಸಂಯೋಜಿಸುವ ಮೂಲಕ, ಅದು ಧರ್ಮ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸಬಹುದು, ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳಬಹುದು ಮತ್ತು ಸಮಾಜದಲ್ಲಿ ಸಮಾನತೆ ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳಬಹುದು ಮತ್ತು ಎಲ್ಲಾ ಮಾನವೀಯತೆಗೆ ಪ್ರಯೋಜನವನ್ನು ನೀಡುತ್ತದೆ. ಹೊಸ ಶಿಕ್ಷಣ ನೀತಿಯು ಈ ದಿಕ್ಕಿನಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದು, ಭಾರತದ ಯುವಕರು ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ತೊಡಗಿಸಿಕೊಂಡು ತಮ್ಮ ಸಂಸ್ಕೃತಿ ಮತ್ತು ಮೌಲ್ಯಗಳೊಂದಿಗೆ ಸಂಪರ್ಕದಲ್ಲಿರುವುದನ್ನು ಖಚಿತಪಡಿಸುತ್ತದೆ” ಎಂದು ಹೇಳಿದರು.

“ಜೈನ ಸಮುದಾಯವು ದೇಶದ ಪ್ರಗತಿಗೆ ಗಮನಾರ್ಹ ಕೊಡುಗೆಗಳನ್ನು ನೀಡಿದೆ. ಅಹಿಂಸೆ, ನೈತಿಕತೆ, ಶಿಸ್ತು ಮತ್ತು ರಾಷ್ಟ್ರಕ್ಕೆ ಸಮರ್ಪಣೆ ಜೈನ ಸಮುದಾಯದ ವಿಶೇಷ ಗುಣಗಳಾಗಿವೆ. ಜೈನ ಸಮುದಾಯವು ಯಾವಾಗಲೂ ರಾಷ್ಟ್ರದ ಕಡೆಗೆ ತನ್ನ ಜವಾಬ್ದಾರಿಗಳನ್ನು ಅರ್ಥಮಾಡಿಕೊಳ್ಳುವ ಸಮುದಾಯವಾಗಿದೆ. ಅದು ತೆರಿಗೆ ಆಡಳಿತ, ಸಾಮಾಜಿಕ ಸಹಕಾರ, ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಅಥವಾ ಮಾನವೀಯ ಕೆಲಸವಾಗಿರಲಿ, ಜೈನ ಸಮುದಾಯವು ಪ್ರತಿಯೊಂದು ಕ್ಷೇತ್ರದಲ್ಲೂ ಮಾದರಿಗಳನ್ನು ಸ್ಥಾಪಿಸಿದೆ. ಮತ್ತು ಇಂದು, ಎಜಿಎಂ ಎಂಜಿನಿಯರಿಂಗ್ ಕಾಲೇಜು ಈ ಅದ್ಭುತ ಸಂಪ್ರದಾಯದ ಸ್ಪೂರ್ತಿದಾಯಕ ಉದಾಹರಣೆಯಾಗಿ ಹೊರಹೊಮ್ಮಿದೆ” ಎಂದು ಪ್ರಶಂಸೆ ವ್ಯಕ್ತಪಡಿಸಿದರು.

“ನೆಜ್ ಕ್ರಾಸ್‌ನ ಶ್ರೀ ಗುಂಧರ್ ತೀರ್ಥ ಶಮ್ನೆವಾಡಿಯಲ್ಲಿ ಭಗವಾನ್ ಪಾರ್ಶ್ವನಾಥರ 151 ಅಡಿ ಎತ್ತರದ ಏಕಶಿಲೆಯ ಕಲ್ಲಿನ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಎಂದು ತಿಳಿದು ಹರ್ಷದಾಯಕವಾಗಿದೆ. ಇದಕ್ಕಾಗಿ, ಭೂ ಶುದ್ಧೀಕರಣ ಮತ್ತು ವಿವಿಧ ಆಚರಣೆಗಳನ್ನು ನಡೆಸಲಾಗುತ್ತಿದೆ. ಇದರೊಂದಿಗೆ, ಸರಸ್ವತಿ ದೇವಿಯ ವಿಗ್ರಹದ ಪ್ರತಿಷ್ಠಾಪನೆ ನಡೆಯುತ್ತಿದೆ. ಈ ಕೃತಿಯು ಭಾರತೀಯ ಸಂಸ್ಕೃತಿ, ಆಧ್ಯಾತ್ಮಿಕತೆ, ಅಹಿಂಸೆ, ಶಾಂತಿ ಮತ್ತು ಮಾನವ ಕಲ್ಯಾಣದ ಜಾಗತಿಕ ಸಂದೇಶವನ್ನು ರವಾನಿಸುತ್ತದೆ ಮತ್ತು ಭವಿಷ್ಯದ ಪೀಳಿಗೆಗೆ ಭಾರತವು ತಾಂತ್ರಿಕ ಶಕ್ತಿ ಮತ್ತು ಆಧ್ಯಾತ್ಮಿಕ ಪ್ರಜ್ಞೆ ಎರಡರಲ್ಲೂ ವಿಶ್ವ ನಾಯಕನಾಗಿದೆ ಎಂಬುದನ್ನು ನೆನಪಿಸುತ್ತದೆ. ಭಗವಾನ್ ಪಾರ್ಶ್ವನಾಥರ ಸಂದೇಶವು ಜೈನ ಸಮುದಾಯಕ್ಕೆ ಮತ್ತು ಎಲ್ಲಾ ಮಾನವೀಯತೆಗೆ. ಅಹಿಂಸೆ, ಕರುಣೆ, ಸಂಯಮ ಮತ್ತು ಸಹಬಾಳ್ವೆ ಇಂದು ಇಡೀ ಜಗತ್ತಿಗೆ ಅಗತ್ಯವಿರುವ ಮೌಲ್ಯಗಳಾಗಿವೆ. ಈ ಸ್ಥಳವು ನಿಸ್ಸಂದೇಹವಾಗಿ ಭವಿಷ್ಯದಲ್ಲಿ ಶಿಕ್ಷಣ, ಆಧ್ಯಾತ್ಮಿಕತೆ ಮತ್ತು ಸಾಮಾಜಿಕ ಪ್ರಜ್ಞೆಗೆ ಪ್ರಮುಖ ಕೇಂದ್ರವಾಗಲಿದೆ” ಎಂದು ತಿಳಿಸಿದರು.

ಸ್ಯಾಂಕಿ ಕೆರೆ ಉಳಿಸಿ: ವಾಯ್ಸ್ ಆಫ್ ಸದಾಶಿವನಗರ ಸಂಘಟನೆಯಿಂದ ಪ್ರತಿಭಟನೆ

MALLESWARAM / BENGALURU :  ಬೆಂಗಳೂರು ನಗರದ ಹೆಮ್ಮೆಯ ಸ್ಯಾಂಕಿ ಕೆರೆ (Sankey Lake) ಇಂದು ಗಂಭೀರ ಪರಿಸರ ಸಂಕಷ್ಟ ಎದುರಿಸುತ್ತಿದ್ದು, ಕೆರೆಯ ಅಸ್ತಿತ್ವವೇ ಅಪಾಯದಲ್ಲಿದೆ ಎಂದು ಸದಾಶಿವನಗರದ (Voice of Sadashivanagar) ನಾಗರಿಕರು, ಪರಿಸರ ಹೋರಾಟಗಾರರು ಹಾಗೂ ವಿವಿಧ ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ. ಈ ಹಿನ್ನೆಲೆಯಲ್ಲಿ “ಸೇವ್ ಸ್ಯಾಂಕಿ ಟ್ಯಾಂಕ್” (Save Sankey Tank) ಅಭಿಯಾನದಡಿ ಕೆರೆ ಸಂರಕ್ಷಣೆ (Lake conservation) ಕುರಿತು ಜಾಗೃತಿ ಕಾರ್ಯಕ್ರಮದ ಜೊತೆಗೆ ಕೆರೆ ಉಳಿಸಿ (Save the Lake) ಎಂದು ಕೆರೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಸ್ಯಾಂಕಿ ಕೆರೆ ನೀರಿನ ಮಟ್ಟ ನಿರಂತರವಾಗಿ ಕುಸಿಯುತ್ತಿದೆ. ಒಳಚರಂಡಿ ನೀರು ಹರಿಯುತ್ತಿದ್ದು, ಹಸಿರು ವಲಯದ ನಾಶ, ಕೆರೆಯ ವಿಸ್ತೀರ್ಣ ಕುಗ್ಗುತ್ತಿದೆ. ಕೆರೆಯ ಪರಿಸರ ಸಮತೋಲನ ಹದಗೆಡುತ್ತಿದೆ. ಕೆರೆಯ ಸುತ್ತಮುತ್ತ ದಶಕಗಳಷ್ಟು ಹಳೆಯ ಮರಗಳನ್ನು ಕಡಿದಿರುವುದರಿಂದ ಯಾವುದೇ ಸಮರ್ಪಕ ಅಧ್ಯಯನವಿಲ್ಲದೆ ನಡೆಯುತ್ತಿರುವ ಕಾಮಗಾರಿಯಿಂದ ಕೆರೆಯ ಮೂಲ ಸ್ವರೂಪವನ್ನೇ ಹಾಳು ಮಾಡುತ್ತಿವೆ ಎಂದು ಪರಿಸರ ಹೋರಾಟಗಾರರು ಕಳವಳ ವ್ಯಕ್ತಪಡಿಸಿದ್ದಾರೆ.
 ವಾಯ್ಸ್ ಆಫ್ ಸದಾಶಿವನಗರದ ಸಂಚಾಲಕರಾದ ಶಿಲ್ಪ ಜತ್ತಿ ಮಾತನಾಡಿ, ಸ್ಯಾಂಕಿ ಕೆರೆಯೊಳಗೆ ಹಾಗೂ ಸುತ್ತಮುತ್ತ ನಿರ್ಮಾಣ ತ್ಯಾಜ್ಯ ಸುರಿಯುತ್ತಿದ್ದು, ಪರಿಸರಕ್ಕೆ ಹಾನಿಕಾರಕವಾದ ಹೂಳು ಹೆಚ್ಚಾಗುತ್ತಿದೆ. ಬೆಂಗಳೂರು ನಗರದ ಭೂಗರ್ಭ ಜಲಮಟ್ಟ, ಪರಿಸರ ಸಮತೋಲನ ಹಾಗೂ ಸಾರ್ವಜನಿಕ ಆಸ್ತಿಯ ಭವಿಷ್ಯಕ್ಕೆ ದೊಡ್ಡ ಅಪಾಯವನ್ನುಂಟುಮಾಡುತ್ತಿವೆ. ಕೆರೆ ಸಣ್ಣದಾಗುತ್ತಿದ್ದು, ಒತ್ತುವರಿ ಜೊತೆಗೆ ಪರಿಸರ ಹಾಳಾಗುತ್ತಿದೆ.
ಕೆರೆ ಸಂಪೂರ್ಣ ಕಾಂಕ್ರೀಟ್ ಕೆರೆಯಾಗಿದೆ. ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಬೇಕು. ಎಲ್ಲಿಂದ ಚರಂಡಿ ನೀರು ಹರಿಯುತ್ತಿದೆ ಎಂಬುದನ್ನು ಪತ್ತೆ ಮಾಡಿ ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು. ಈ ಉದ್ದೇಶದಿಂದ “ಸೇವ್ ಸ್ಯಾಂಕಿ ಟ್ಯಾಂಕ್” ಅಭಿಯಾನ ಆಯೋಜಿಲಾಗಿದೆ ಎಂದರು. ರಾಷ್ಟ್ರೀಯ ಮಾನವ ಹಕ್ಕುಗಳು ಹಾಗೂ ಸಾಮಾಜಿಕ ನ್ಯಾಯ ಸಂಸ್ಥೆಯ ಪ್ರತಿನಿಧಿಗಳು ಮಾತನಾಡಿ, ಪರಿಸರ ಮತ್ತು ನೀರಿನ ಗುಣಮಟ್ಟ ಪರಿಶೀಲನೆ ನಡೆಸಬೇಕು. ಪರಿಸರ ಸ್ನೇಹಿ ಪುನರುಜ್ಜೀವನ ಯೋಜನೆ ರೂಪಿಸಬೇಕು. ನಗರದ ನಾಗರಿಕರು, ಯುವ ಜನಾಂಗ, ಪರಿಸರ ಪ್ರೇಮಿಗಳು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಈ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿ ಕೆರೆ ಉಳಿಸಲು ಮುಂದಾಗಬೇಕು ಎಂದರು. ವಾಯ್ಸ್ ಆಫ್ ಸದಾಶಿವನಗರ ಸಂಸ್ಥೆಯ ಶಿಲ್ಪ ಜತ್ತಿ, ಕಾಡು ಮಲ್ಲೇಶ್ವರ ಗೆಳಯರ ಬಳಗದ ಅಧ್ಯಕ್ಷರಾದ ಬಿ.ಕೆ.ಶಿವರಾಂ, ಡಾ.ಮನುರವರು ಮತ್ತು ಸದಾಶಿವನಗರದ ಸ್ಥಳೀಯ ನಾಗರಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.