ದಿನಾಂಕ:04/09/2026 ರಂದು ಮಧ್ಯಾಹ್ನ 03:00 ಗಂಟೆಗೆ ಸಿಟಿ ಮಾರ್ಕೆಟ್ ಪೊಲೀಸ್ ಠಾಣಾ ಹೊಯ್ಸಳ-72 ವಾಹನದ ಎಎಸ್‌ಐ, ವೆಂಕಟೇಶ್.ಸಿ ಹಾಗೂ ಎಹೆಚ್‌ಸಿ, ಸುನೀಲ್ ಸಿಬ್ಬಂದಿಯವರು ಕಿಲಾರಿ ರಸ್ತೆಯ ೨೮ನೇ ಕ್ರಾಸ್ ಬಳಿ ಗಸ್ತು ಕರ್ತವ್ಯದಲ್ಲಿದ್ದಾಗ, ದಂಪತಿಗಳಿಬ್ಬರು ಆತಂಕಗೊoಡ ಸ್ಥಿತಿಯಲ್ಲಿ ರಸ್ತೆ ಬದಿಯಲ್ಲಿ ನಿಂತಿರುವುದನ್ನು ಗಮನಿಸಿ, ಅವರ ಬಳಿ ತೆರಳಿದ ಪೊಲೀಸರು, ಅವರನ್ನು ವಿಚಾರಿಸಿ ಪರಿಸ್ಥಿತಿಯ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.
ಈ ವೇಳೆ ದಂಪತಿಯ ಪೈಕಿ ಮಹಿಳೆಯು ಉಸಿರಾಟದ ತೊಂದರೆಯಿoದ ಬಳಲುತ್ತಿದ್ದು, ತುರ್ತು ವೈದ್ಯಕೀಯ ನೆರವಿನ ಅಗತ್ಯವಿರುವುದನ್ನು ಗಮನಿಸಿ ಯಾವುದೇ ವಿಳಂಬ ಮಾಡದೆ ಹೊಯ್ಸಳ ವಾಹನದಲ್ಲಿಯೇ ಪತಿಯೊಂದಿಗೆ ಹತ್ತಿರದ ಆಸ್ಪತ್ರೆಗೆ ಕರೆದೊಯ್ದು ಅಗತ್ಯ ವೈದ್ಯಕೀಯ ಚಿಕಿತ್ಸೆ ಕೊಡಿಸಲಾಗಿರುತ್ತದೆ.
ಪೊಲೀಸರ ಸಕಾಲಿಕ ಸ್ಪಂದನೆ ಹಾಗೂ ವೈದ್ಯಕೀಯ ನೆರವಿನಿಂದ ಅವರಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆತು, ಅವರ ಜೀವವನ್ನು ರಕ್ಷಿಸಲು ಸಹಕಾರಿಯಾಗಿದೆ. ಈ ಘಟನೆಯು ತುರ್ತು ಸಂದರ್ಭಗಳಲ್ಲಿ ನಾಗರಿಕರ ನೆರವಿಗೆ ಧಾವಿಸುವ ಬೆಂಗಳೂರು ನಗರ ಪೊಲೀಸರ ಜಾಗರೂಕತೆ, ಮಾನವೀಯತೆ ಹಾಗೂ ತ್ವರಿತ ಸ್ಪಂದನೆಗೆ ನಿದರ್ಶನವಾಗಿದೆ.
ಕನ್ನಡದ ಹಿರಿಯ ನಟರಾದ ಶ್ರೀ ಅನಂತನಾಗ್ ರವರಿಗೆ – ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

