ಬೆಂಗಳೂರು: ದಿನಾಂಕ 18-11-2026 ರಂದು ರಾತ್ರಿ 9.00 ಗಂಟೆಗೆ ಪಬ್ಲಿಕ್ ಟಿವಿ ಕನ್ನಡ ವಾಹಿನಿಯಲ್ಲಿ(Public TV Kannada Vahini) ಪ್ರಸಾರವಾದ ‘ಬಿಗ್ ಬುಲೆಟಿನ್'(Big Bulletin) ಕಾರ್ಯಕ್ರಮದಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಕಾರ್ಯವೈಖರಿ ಹಾಗೂ ದಾಳಿಗಳಿಗೆ ಸಂಬಂಧಿಸಿದಂತೆ ಸಂಸ್ಥೆಯ ಘನತೆಗೆ ಧಕ್ಕೆ ತರುವಂತಹ ಮತ್ತು ಸಾರ್ವಜನಿಕರಲ್ಲಿ ಸಂಸ್ಥೆಯ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸುವ ಸಾಧ್ಯತೆಯಿರುವ ಹೇಳಿಕೆಗಳನ್ನು ಪ್ರಸಾರ ಮಾಡಿರುವುದನ್ನು ಕರ್ನಾಟಕ ಲೋಕಾಯುಕ್ತ ಸಂಸ್ಥೆಯು ಗಂಭೀರವಾಗಿ ಪರಿಗಣಿಸಿದೆ.

ಸದರಿ ಕಾರ್ಯಕ್ರಮದಲ್ಲಿ ಪಬ್ಲಿಕ್ ಟಿವಿಯ ಸಂಸ್ಥಾಪಕ ಹಾಗೂ ಆಡಳಿತ ನಿರ್ದೇಶಕರಾದ ಶ್ರೀ ಹೆಚ್.ಆರ್. ರಂಗನಾಥ್ ಮತ್ತು ಸಹ ವರದಿಗಾರರಾದ ಶ್ರೀ ಅರುಣ್ ಬಡಿಗೇರ್ ಅವರು ಲೋಕಾಯುಕ್ತ ಸಂಸ್ಥೆಯನ್ನು ಟೀಕಿಸುವ ಭರದಲ್ಲಿ, ಸಂಸ್ಥೆಯು ಅನುಪಯುಕ್ತವಾಗಿದೆ. ಅದರ ಕಾರ್ಯಚಟುವಟಿಕೆಗಳಿಂದ ಯಾವುದೇ ಪರಿಣಾಮಕಾರಿ ಫಲಿತಾಂಶಗಳು ದೊರೆಯುತ್ತಿಲ್ಲ ಹಾಗೂ ದಾಳಿಗಳ ಮೂಲಕ ಕೇವಲ ಮಾಧ್ಯಮಗಳಲ್ಲಿ ಪ್ರಚಾರ ಪಡೆಯಲಾಗುತ್ತಿದೆ ಎಂಬರ್ಥ ಬರುವಂತಹ ಹೇಳಿಕೆಗಳನ್ನು ನೀಡಿದ್ದಾರೆ. ಅಲ್ಲದೆ, ಸಂಸ್ಥೆಯ ಕಾರ್ಯಕ್ಷಮತೆ, ಶಿಕ್ಷೆಯ ಪ್ರಮಾಣ ಹಾಗೂ ದಾಳಿಗಳ ನಂತರದ ಕ್ರಮಗಳ ಕುರಿತು ಆಧಾರರಹಿತ ಅಂಕಿ-ಅಂಶಗಳನ್ನು ಉಲ್ಲೇಖಿಸಿ ಅಪಹಾಸ್ಯ ಮಾಡಿರುವುದು ಕಂಡುಬಂದಿದೆ.

ಕರ್ನಾಟಕ ಲೋಕಾಯುಕ್ತ ಸಂಸ್ಥೆಯು ಕರ್ನಾಟಕ ಲೋಕಾಯುಕ್ತ ಕಾಯ್ದೆ, 1984ರ ಅಡಿಯಲ್ಲಿ ಸ್ಥಾಪಿತವಾದ ಶಾಸನಬದ್ಧ ಸ್ವತಂತ್ರ ಸಂಸ್ಥೆಯಾಗಿದ್ದು.

ಭ್ರಷ್ಟಾಚಾರ  ನಿಯಂತ್ರಣ, ಸಾರ್ವಜನಿಕ ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಸಾರ್ವಜನಿಕ ಕುಂದುಕೊರತೆಗಳ ನಿವಾರಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಭ್ರಷ್ಟಾಚಾರ  ಪ್ರಕರಣಗಳಲ್ಲಿ ದಾಳಿ ನಡೆಸಿದ ನಂತರ ಸಂಬಂಧಪಟ್ಟ ಸರ್ಕಾರಿ ನೌಕರರ ಆದಾಯದ ಮೂಲಗಳು, ಆಸ್ತಿಗಳ ವಿವರಗಳು ಹಾಗೂ ಇತರೆ ಸಂಬಂಧಿತ ದಾಖಲೆಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿ, ಸಮಗ್ರ ತನಿಖೆ ನಡೆಸಿ, ಕಾನೂನುಬದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ. ಇಂತಹ ತನಿಖಾ ಪ್ರಕ್ರಿಯೆಗಳಿಗೆ ಅಗತ್ಯ ಸಮಯ ಮತ್ತು ಪರಿಣತಿಯ ಅವಶ್ಯಕತೆಯಿರುತ್ತದೆ. ಈ ಕಾರ್ಯವೈಖರಿಯನ್ನು ವಾಸ್ತವಾಂಶಗಳನ್ನು ಪರಿಗಣಿಸದೆ ಸಂಸ್ಥೆಯ ಏಕಪಕ್ಷೀಯವಾಗಿ ಟೀಕಿಸಿರುವುದು ಆಕ್ಷೇಪಾರ್ಹವಾಗಿದೆ.

ಲೋಕಾಯುಕ್ತ ಸಂಸ್ಥೆಯ ಕಾರ್ಯನಿರ್ವಹಣೆಯ ಅಂಕಿ-ಅಂಶಗಳು:

ದಿನಾಂಕ 10-09-2022ರಿಂದ 15-11-2026ರವರೆಗಿನ ಅವಧಿಯಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ 322 ದಾಳಿ ಪ್ರಕರಣಗಳು, 976 ಟ್ಯಾಪ್ ಪ್ರಕರಣಗಳು ಹಾಗೂ 138 ಇತರೆ ಪ್ರಕರಣಗಳು ದಾಖಲಾಗಿರುತ್ತವೆ. ರದ್ದುಗೊಂಡ ಭ್ರಷ್ಟಾಚಾರ ನಿಗ್ರಹ ದಳದಿಂದ 2,159 ಪ್ರಕರಣಗಳು ಸಂಸ್ಥೆಗೆ ವರ್ಗಾವಣೆಯಾಗಿರುತ್ತವೆ. ಈ ಅವಧಿಯಲ್ಲಿ ಒಟ್ಟು 952 ಪ್ರಕರಣಗಳಲ್ಲಿ ಮಾನ್ಯ ನ್ಯಾಯಾಲಯಕ್ಕೆ ದೋμÁರೋಪಣಾ ಪಟ್ಟಿಗಳನ್ನು ಸಲ್ಲಿಸಲಾಗಿದ್ದು, ಮುಕ್ತಾಯಗೊಂಡ 697 ಪ್ರಕರಣಗಳ ಪೈಕಿ 153 ಪ್ರಕರಣಗಳಲ್ಲಿ ಆರೋಪಿತರಿಗೆ ಶಿಕ್ಷೆಯಾಗಿರುತ್ತದೆ.
ಇದಲ್ಲದೆ, ಗೌರವಾನ್ವಿತ ಲೋಕಾಯುಕ್ತರಾದ ನ್ಯಾಯಮೂರ್ತಿ ಶ್ರೀ ಬಿ.ಎಸ್. ಪಾಟೀಲ್ ಅವರು ದಿನಾಂಕ 15.06.2022ರಂದು ಅಧಿಕಾರ ವಹಿಸಿಕೊಂಡ ನಂತರ ದಿನಾಂಕ 15.11.2026ರವರೆಗೆ ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ಒಟ್ಟು 46.298 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 29.242 ಪ್ರಕರಣಗಳ ತನಿಖೆಯನ್ನು ಕೈಗೊಂಡು ಮುಕ್ತಾಯಗೊಳಿಸಲಾಗಿದೆ.

ಅದೇ ಅವಧಿಯಲ್ಲಿ 1.115 ಇಲಾಖಾ ವಿಚಾರಣಾ ಪ್ರಕರಣಗಳು ದಾಖಲಾಗಿದ್ದು, ಒಟ್ಟು 2,052 ಇಲಾಖಾ ವಿಚಾರಣಾ ಪ್ರಕರಣಗಳಲ್ಲಿ ಅಂತಿಮ ವರದಿಗಳನ್ನು ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ. ಅಲ್ಲದೆ, ಇತರೆ ವಿಭಾಗಗಳಿಗೆ ಸಂಬಂಧಿಸಿದಂತೆ 22,097 ಪ್ರಕರಣಗಳು ದಾಖಲಾಗಿದ್ದು, ಸಂಬಂಧಿತ ಅವಧಿಯಲ್ಲಿ ವಿವಿಧ ವರ್ಗಗಳ ಒಟ್ಟು 14.160 ಪ್ರಕರಣಗಳನ್ನು ಮುಕ್ತಾಯಗೊಳಿಸಲಾಗಿದೆ.

ಸಂಸ್ಥೆಯು ಭ್ರಷ್ಟಾಚಾರ  ನಿಯಂತ್ರಣಕ್ಕೆ ಸೀಮಿತವಾಗದೆ. ಕೆರೆಗಳ ಸಂರಕ್ಷಣೆ ಮತ್ತು ಒತ್ತುವರಿ ತೆರವು, ಕಸ ವಿಲೇವಾರಿ, ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿನ ಅವ್ಯವಹಾರಗಳು, ಕಂದಾಯ ಇಲಾಖೆಯ ಲೋಪಗಳು, ಬೀದಿ ನಾಯಿಗಳ ಸಮಸ್ಯೆ, ಸಾರಿಗೆ ಇಲಾಖೆ. ಉಪನೋಂದಣಾಧಿಕಾರಿ ಕಚೇರಿಗಳು. ತಹಶೀಲ್ದಾರ್ ಕಚೇರಿಗಳು, ವಿದ್ಯಾರ್ಥಿ ನಿಲಯಗಳು, ಸರ್ಕಾರಿ ಶಾಲೆಗಳು ಹಾಗೂ ವಿವಿಧ ಸರ್ಕಾರಿ ಇಲಾಖೆಗಳ ಕಾರ್ಯನಿರ್ವಹಣೆಯ ಮೇಲ್ವಿಚಾರಣೆ ಮತ್ತು ಪರಿಶೀಲನೆಯ ಮೂಲಕ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಹಲವಾರು ವಿಷಯಗಳಲ್ಲಿ ಕ್ರಮ ಕೈಗೊಂಡಿದೆ.

ಸಂಸ್ಥೆಗೆ ಸಾರ್ವಜನಿಕರಿಂದ ನಿರಂತರವಾಗಿ ದೂರುಗಳು ಮತ್ತು ಅರ್ಜಿಗಳು ಸಲ್ಲಿಕೆಯಾಗುತ್ತಿರುವುದು ಹಾಗೂ ದೂರುದಾರರಿಂದ ಮೆಚ್ಚುಗೆ ಮತ್ತು ಅಭಿನಂದನಾ ಪತ್ರಗಳು ಸ್ವೀಕೃತವಾಗುತ್ತಿರುವುದು ಸಂಸ್ಥೆಯ ಮೇಲಿನ ಸಾರ್ವಜನಿಕರ ವಿಶ್ವಾಸಕ್ಕೆ ಸಾಕ್ಷಿಯಾಗಿದೆ.

ಇಂತಹ ಸಂದರ್ಭದಲ್ಲಿ ಸಂಸ್ಥೆಯ ಅಧಿಕೃತ ಅಂಕಿ-ಅಂಶಗಳು ಮತ್ತು ಕಾರ್ಯವಿಧಾನದ ಕುರಿತು ಯಾವುದೇ ಪರಿಶೀಲನೆ ಅಥವಾ ಅಧಿಕೃತ ಮಾಹಿತಿ ಪಡೆಯದೆ, ಸಾರ್ವಜನಿಕ ಪ್ರಸಾರ ಮಾಧ್ಯಮದಲ್ಲಿ ಏಕಪಕ್ಷೀಯವಾಗಿ ಹೇಳಿಕೆಗಳನ್ನು ನೀಡಿರುವುದು ಮತ್ತು ಸಂಸ್ಥೆಯ ಘನತೆಗೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ಕಾರ್ಯಕ್ರಮ ಪ್ರಸಾರ ಮಾಡಿರುವುದು ಗಂಭೀರವಾಗಿ ಪರಿಗಣಿಸಲ್ಪಟ್ಟಿದೆ.

ಈ ಹಿನ್ನೆಲೆಯಲ್ಲಿ, ಕರ್ನಾಟಕ ಲೋಕಾಯುಕ್ತ ಕಾಯ್ದೆ, 1984ರ ಕಲಂ 17 ಹಾಗೂ 17-ಎಗಳಲ್ಲಿನ ಸಂಬಂಧಿತ ಕಾನೂನು ಅಂಶಗಳ ಹಿನ್ನೆಲೆಯಲ್ಲಿ ಮುಂದಿನ ಕ್ರಮ ಕೈಗೊಳ್ಳುವ ಕುರಿತು ಪರಿಶೀಲಿಸಲು. ಪಬ್ಲಿಕ್ ಟಿವಿಯ ಸಂಸ್ಥಾಪಕ ಹಾಗೂ ಆಡಳಿತ ನಿರ್ದೇಶಕರಾದ ಶ್ರೀ ಹೆಚ್.ಆರ್. ರಂಗನಾಥ್ ಮತ್ತು ಸಹ ವರದಿಗಾರರಾದ ಶ್ರೀ ಅರುಣ್ ಬಡಿಗೇರ್ ಅವರಿಂದ ವಿವರಣೆ ಪಡೆಯಲು ಉದ್ದೇಶಿಸಲಾಗಿದೆ.

ಅದರಂತೆ. ಸದರಿ ಇಬ್ಬರಿಗೂ ನೋಟಿಸ್ ಜಾರಿಗೊಳಿಸಿ, ದಿನಾಂಕ 30.11.2026ರಂದು ಮಧ್ಯಾಹ್ನ 3.30 ಗಂಟೆಗೆ ಗೌರವಾನ್ವಿತ ಲೋಕಾಯುಕ್ತರ ಮುಂದೆ ಖುದ್ದಾಗಿ ಹಾಜರಾಗಿ, ಕಾರ್ಯಕ್ರಮದಲ್ಲಿ ಮಾಡಿರುವ ಆಕ್ಷೇಪಾರ್ಹ ಹೇಳಿಕೆಗಳ ಕುರಿತು ತಮ್ಮ ಸ್ಪಷ್ಟನೆ ಮತ್ತು ವಿವರಣೆಯನ್ನು ಸಲ್ಲಿಸುವಂತೆ ಸೂಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಕರ್ನಾಟಕ ಲೋಕಾಯುಕ್ತ ಸಂಸ್ಥೆಯು ಸಾರ್ವಜನಿಕ ಹಿತಾಸಕ್ತಿ, ಭ್ರμÁ್ಟಚಾರ ನಿಯಂತ್ರಣ ಮತ್ತು ಆಡಳಿತದಲ್ಲಿ ಪಾರದರ್ಶಕತೆಯನ್ನು ಕಾಪಾಡುವ ನಿಟ್ಟಿನಲ್ಲಿ ತನ್ನ ಕಾನೂನುಬದ್ಧ ಕರ್ತವ್ಯಗಳನ್ನು ನಿರಂತರವಾಗಿ ನಿರ್ವಹಿಸುತ್ತಿದ್ದು, ಸಂಸ್ಥೆಯ ಕಾರ್ಯವೈಖರಿಯ ಕುರಿತು ಟೀಕೆ ಅಥವಾ ವಿಮರ್ಶೆಗಳನ್ನು ಸ್ವಾಗತಿಸುತ್ತದೆ. ಆದರೆ ಅಂತಹ ವಿಮರ್ಶೆಗಳು ವಾಸ್ತವಾಂಶಗಳು ಮತ್ತು ನಿಖರ ಮಾಹಿತಿಯ ಆಧಾರದ ಮೇಲೆ ಇರಬೇಕೆಂಬುದು ಸಂಸ್ಥೆಯ ಆಶಯವಾಗಿದೆ.

Hot this week

ಬೆಂಗಳೂರು: ರಾಜಾಜಿನಗರದಲ್ಲಿರುವ ಬೆಂಗಳೂರು ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ (GTTC)...

ಕುಮಾರಿ ಅಂಜಲಿ ಅಂಬಿಗೇರ ಕೊಲೆ ಆರೋಪಿ ಗಿರೀಶ್‌ ಸಾವಂತ್‌ನಿಗೆ ಘನ ನ್ಯಾಯಾಲಯವು...

ಬೆಂಗಳೂರು: ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ 'ಅಟಲ್ ವಯೋ...

ಮುಂಬೈ ಪೊಲೀಸರ ಕಾರ್ಯಾಚರಣೆ: ಕುರ್ಳಾ ದಾಳಿ ಪ್ರಕರಣ: 7 ಬಾಂಗ್ಲಾದೇಶಿ ಪ್ರಜೆಗಳ ಬಂಧನ

ಮುಂಬೈ: ಮಹಾರಾಷ್ಟ್ರದ ಮುಂಬೈ (Mumbai) ನಗರದಲ್ಲಿ ಇತ್ತೀಚೆಗೆ ನಡೆದ ಹಲವು ಅಪರಾಧ...

Topics

ಬೆಂಗಳೂರು: ರಾಜಾಜಿನಗರದಲ್ಲಿರುವ ಬೆಂಗಳೂರು ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ (GTTC)...

ಕುಮಾರಿ ಅಂಜಲಿ ಅಂಬಿಗೇರ ಕೊಲೆ ಆರೋಪಿ ಗಿರೀಶ್‌ ಸಾವಂತ್‌ನಿಗೆ ಘನ ನ್ಯಾಯಾಲಯವು...

ಬೆಂಗಳೂರು: ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ 'ಅಟಲ್ ವಯೋ...

ಮುಂಬೈ ಪೊಲೀಸರ ಕಾರ್ಯಾಚರಣೆ: ಕುರ್ಳಾ ದಾಳಿ ಪ್ರಕರಣ: 7 ಬಾಂಗ್ಲಾದೇಶಿ ಪ್ರಜೆಗಳ ಬಂಧನ

ಮುಂಬೈ: ಮಹಾರಾಷ್ಟ್ರದ ಮುಂಬೈ (Mumbai) ನಗರದಲ್ಲಿ ಇತ್ತೀಚೆಗೆ ನಡೆದ ಹಲವು ಅಪರಾಧ...

BIG NEWS : ಅಪ್ರಾಪ್ತರನ್ನು ವಶಕ್ಕೆ ಪಡೆದ ಮುಂಬೈ ಪೊಲೀಸರು!

ಮುಂಬೈನಲ್ಲಿ (Mumbai) ಸಾರ್ವಜನಿಕ ಉದ್ಯಾನವನದಲ್ಲಿ ಯುವ ಜೋಡಿಗೆ ಕಿರುಕುಳ, ಹಲ್ಲೆ ಆರೋಪ;...

ರಾಯಚೂರಿನಲ್ಲಿ ಪತ್ರಕರ್ತರ 41ನೇ ರಾಜ್ಯಮಟ್ಟದ ಸಮ್ಮೇಳನ ಯಶಸ್ವಿಯಾಗಿ ನಡೆಸೋಣ: ಸಚಿವ ಡಾ. ಅಜಯ್ ಸಿಂಗ್

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) ವತಿಯಿಂದ ರಾಯಚೂರಿನಲ್ಲಿ ನಡೆಯಲಿರುವ...

Related Articles