ಬೆಂಗಳೂರು: ರಾಜಾಜಿನಗರದಲ್ಲಿರುವ ಬೆಂಗಳೂರು ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ (GTTC) 2026-27ನೇ ಶೈಕ್ಷಣಿಕ ಸಾಲಿನ ವಿವಿಧ ತಾಂತ್ರಿಕ ಕೋರ್ಸ್‌ಗಳ ಪ್ರವೇಶಾತಿಗಾಗಿ ಅರ್ಹ ಮತ್ತು ಆಸಕ್ತ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಪೋಸ್ಟ್ ಡಿಪ್ಲೊಮಾ ಇನ್ ಟೂಲ್ ಡಿಸೈನ್ (Post Diploma in Tool Design)
ಕೋರ್ಸ್ ಕರ್ನಾಟಕ ರಾಜ್ಯ ಸರ್ಕಾರದಿಂದ ಅನುಮೋದನೆಗೊಂಡಿದ್ದು  ಡಿಎಂಇ (DME), ಡಿಟಿಡಿಎಂ (DTDM) ಅಥವಾ ಬಿ.ಇ, ಮೆಕ್ಯಾನಿಕಲ್, ಇಂಡಸ್ಟ್ರಿಯಲ್ ಎಂಜಿನಿಯರಿಂಗ್ & ಮ್ಯಾನುಫ್ಯಾಕ್ಚರಿಂಗ್, ಇಂಡಸ್ಟ್ರಿಯಲ್ & ಪ್ರೊಡಕ್ಷನ್, ಆಟೋಮೊಬೈಲ್ ಎಂಜಿನಿಯರಿಂಗ್ ಪದವಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಎಂ.ಟೆಕ್ ಇನ್ ಟೂಲ್ ಎಂಜಿನಿಯರಿಂಗ್ (M.Tech in Tool Engineering) ಕೋರ್ಸ್ ಎಐಸಿಟಿಇ (AICTE) ಯಿಂದ ಅನುಮೋದನೆಗೊಂಡಿದ್ದು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (VTU) ಸಂಯೋಜನೆಗೆ ಒಳಪಟ್ಟಿದೆ. ಬಿ.ಇ, ಮೆಕ್ಯಾನಿಕಲ್, ಆಟೋಮೊಬೈಲ್, ಆಟೋಮೇಷನ್ & ರೊಬೊಟಿಕ್ಸ್, ಇಂಡಸ್ಟ್ರಿಯಲ್ & ಪ್ರೊಡಕ್ಷನ್, ಟೂಲ್ ಎಂಜಿನಿಯರಿಂಗ್ ಅಥವಾ ಮೆಕಾಟ್ರಾನಿಕ್ಸ್ ಎಂಜಿನಿಯರಿಂಗ್ ಪದವಿ ಪಡೆದಿರುವ ವಿದ್ಯಾರ್ಥಿಗಳು ಈ ಕೋರ್ಸ್‌ಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಅರ್ಜಿ ಸಲ್ಲಿಸಲು ಇಚ್ಛಿಸುವವರು ಹಾಗೂ ಕೋರ್ಸ್‌ಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಬಯಸುವವರು ಪ್ರಾಂಶುಪಾಲರು (ಪಿಜಿ/ಪಿಡಿ ಸ್ಟಡೀಸ್), ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ, ರಾಜಾಜಿನಗರ, ಬೆಂಗಳೂರು ಅಥವಾ ದೂರವಾಣಿ ಸಂಖ್ಯೆ 9141629584, 9880217473, 9972046589 ಅಥವಾ
ವೆಬ್‌ಸೈಟ್: https://gttc.karnataka.gov.in  ನ್ನು  ಸಂಪರ್ಕಿಸಬಹುದು ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

Hot this week

ಬೆಂಗಳೂರು: ದಿನಾಂಕ 18-11-2026 ರಂದು ರಾತ್ರಿ 9.00 ಗಂಟೆಗೆ ಪಬ್ಲಿಕ್ ಟಿವಿ...

ಕುಮಾರಿ ಅಂಜಲಿ ಅಂಬಿಗೇರ ಕೊಲೆ ಆರೋಪಿ ಗಿರೀಶ್‌ ಸಾವಂತ್‌ನಿಗೆ ಘನ ನ್ಯಾಯಾಲಯವು...

ಬೆಂಗಳೂರು: ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ 'ಅಟಲ್ ವಯೋ...

ಮುಂಬೈ ಪೊಲೀಸರ ಕಾರ್ಯಾಚರಣೆ: ಕುರ್ಳಾ ದಾಳಿ ಪ್ರಕರಣ: 7 ಬಾಂಗ್ಲಾದೇಶಿ ಪ್ರಜೆಗಳ ಬಂಧನ

ಮುಂಬೈ: ಮಹಾರಾಷ್ಟ್ರದ ಮುಂಬೈ (Mumbai) ನಗರದಲ್ಲಿ ಇತ್ತೀಚೆಗೆ ನಡೆದ ಹಲವು ಅಪರಾಧ...

Topics

BIG NEWS : ಅಪ್ರಾಪ್ತರನ್ನು ವಶಕ್ಕೆ ಪಡೆದ ಮುಂಬೈ ಪೊಲೀಸರು!

ಮುಂಬೈನಲ್ಲಿ (Mumbai) ಸಾರ್ವಜನಿಕ ಉದ್ಯಾನವನದಲ್ಲಿ ಯುವ ಜೋಡಿಗೆ ಕಿರುಕುಳ, ಹಲ್ಲೆ ಆರೋಪ;...

ರಾಯಚೂರಿನಲ್ಲಿ ಪತ್ರಕರ್ತರ 41ನೇ ರಾಜ್ಯಮಟ್ಟದ ಸಮ್ಮೇಳನ ಯಶಸ್ವಿಯಾಗಿ ನಡೆಸೋಣ: ಸಚಿವ ಡಾ. ಅಜಯ್ ಸಿಂಗ್

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) ವತಿಯಿಂದ ರಾಯಚೂರಿನಲ್ಲಿ ನಡೆಯಲಿರುವ...

Related Articles