ಚಾಮರಾಜನಗರ: ಕನ್ನಡದ ಹಿರಿಯ ನಟರಾದ ಶ್ರೀ ಅನಂತನಾಗ್(Actor Sri Ananthnag) ರವರಿಗೆ ಭಾರತೀಯ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ(Dadasahed Phalke Award) ದೊರೆತಿರುವುದು ಕನ್ನಡಿಗರೆಲ್ಲರಿಗೂ ಅಪಾರ ಸಂತೋಷವನ್ನು ತಂದಿದೆ ಎಂದು ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದ್ದಾರೆ.
ಅನಂತ್ ನಾಗ್ ಅಪ್ಪಟ ಪ್ರತಿಭಾನ್ವಿತ ಕಲಾವಿದರು. ರಂಗಭೂಮಿ, ಚಿತ್ರರಂಗ, ಕಿರುತೆರೆ ಕ್ಷೇತ್ರದ ಅಪರೂಪದ ಶ್ರೇಷ್ಠ ಪ್ರತಿಭಾನ್ವಿತರು. ಅವರ ನಟನೆಯಲ್ಲಿ ವಿಶೇಷವಾದ ಭಾವ, ಪ್ರೀತಿ, ಸಹಜಕ್ರಿಯೆ ಮತ್ತು ನೋಡಿಗರನ್ನು ಭಾವ ಪರವಶರನ್ನಾಗಿ ಮಾಡುವ ಅವರ ದಿವ್ಯ ಪ್ರಭೆಯ ಕಲೆಯ ಮೂಲಕ ಕನ್ನಡಿಗರಿಗೆ ಹೆಮ್ಮೆ ತರುವಂತ ನಟರಾಗಿ 250ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿ ದೇಶವಿದೇಶಗಳಲ್ಲಿ ಪ್ರಸಿದ್ಧರಾಗಿರುವ ಅನಂತನಾಗ್ ರವರ ಗಂಭೀರ ಚಿಂತನೆ, ದೂರ ದೃಷ್ಟಿ, ಜ್ಞಾನ ದೃಷ್ಟಿ, ಸಾಮಾಜಿಕ ಮೌಲ್ಯಗಳು ಮತ್ತು ಮಾರ್ಗದರ್ಶನ ಚಿತ್ರರಂಗಕ್ಕೆ ಅಪಾರವಾಗಿ ಬೇಕಾಗಿದೆ. ಯಾವುದಕ್ಕೂ ಆಸೆ ಪಡದ ಅನಂತನಾಗ್ ರವರಿಗೆ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಿರುವ ಕೇಂದ್ರ ಸರ್ಕಾರಕ್ಕೆ ಹಾಗೂ ಅಭಿನಂದಿತರಾದ ಅನಂತ್ ನಾಗ್ ರವರಿಗೆ ಹೃದಯ ಪೂರ್ವಕ ಅಭಿನಂದನೆಗಳನ್ನು ಋಗ್ವೇದಿಯವರು ಸಲ್ಲಿಸಿದ್ದಾರೆ.
ತಲಘಟ್ಟಪುರ ಪೊಲೀಸರ ತ್ವರಿತ ಕಾರ್ಯಾಚರಣೆ: ಲಿಫ್ಟ್ನಲ್ಲಿ ಸಿಲುಕಿದ್ದ ಡೆಲಿವರಿ ವ್ಯಕ್ತಿಯ ರಕ್ಷಣೆ.

