Home Blog Page 9

ನಿತ್ಯ ಪಂಚಾಂಗ 23.05.2026

*ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 23.05.2026 SATURDAY.ಶನಿವಾರ*
*ಸಂವತ್ಸರ*: ಪರಾಭವ
*SAMVATSARA :* PARABHAVA.
*ಆಯಣ*: ಉತ್ತರಾಯಣ
*AYANA:* UTTARAYANA.
*ಋತು*: ಗ್ರೀಷ್ಮ
*RUTHU:* GREESHMA.
*ಮಾಸ*: ಅಧಿಕ ಜೇಷ್ಠ
*MAASA:* ADHIKA JYESHTHA.
*ಪಕ್ಷ*: ಶುಕ್ಲ
*PAKSHA:* SHUKLA.
*ತಿಥಿ*: ಸಪ್ತಮಿ
*TITHI:* SAPTAMI.
*ಶ್ರದ್ದಾತಿಥಿ*: ಅಷ್ಟಮಿ
*SHRADDHA TITHI:* .ASTAMI
*ವಾಸರ*: ಸ್ಥಿರವಾಸರ
*VAASARA:* STHIRAVASARA.
*ನಕ್ಷತ್ರ*: ಆಶ್ಲೇಷ
*NAKSHATRA:* ASHLESHA.
*ಯೋಗ*: ಧ್ರುವ
*YOGA:* DHRUVA.
*ಕರಣ*: ವಣಿಜ
*KARANA:* VANIJA.
*ಸೂರ್ಯೋದಯ (Sunrise):* 05:54
*ಸೂರ್ಯಸ್ತ (Sunset):* 06:53 *ರಾಹುಕಾಲ (RAHU KAALA) :*09:00AM To 10:30AM *ದಿನವಿಶೇಷ SPECIAL EVENT*

Umesh Banakar: ಸ್ಯಾಂಡಲ್‌ವುಡ್‌ ನಿರ್ಮಾಪಕ ಉಮೇಶ್ ಬಣಕಾರ್‌ಗೆ ಫಾಸ್ಟ್ ಟ್ಯಾಗ್ ರಗಳೆ! ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ

ಬೆಂಗಳೂರು, ಮೇ 22: ಹೆದ್ದಾರಿಗಳಲ್ಲಿ ಸರಾಗ ಸಂಚಾರಕ್ಕೆ ಅತ್ಯುತ್ತಮ ವ್ಯವಸ್ಥೆ ಎಂಬಂತೆ ಬಿಂಬಿತವಾಗಿರುವ ಫಾಸ್ಟ್ ಟ್ಯಾಗ್ ಬಗ್ಗೆ ದಿನಾಲೂ ಒಂದಲ್ಲ ಒಂದು ರಗಳೆ ಕೇಳಿಬರುತ್ತಿರುತ್ತದೆ. ಈ ಬಾರಿ ಸ್ಯಾಂಡಲ್‌ವುಡ್‌ ಲೋಕದಿಂದ ಅಪಸ್ವರ  ಎದ್ದಿದೆ. ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ (KFPA) ಹಿಂದಿನ ಅಧ್ಯಕ್ಷ, ಸ್ಯಾಂಡಲ್‌ವುಡ್‌ ಪ್ರಮುಖ ನಿರ್ಮಾಪಕ (Sandalwood Producer Umesh Banakar) ಹಾಗೂ ಹಿರಿಯ ನಟ ಉಮೇಶ್ ಬಣಕಾರ್‌ ಅವರಿಗೂ ಫಾಸ್ಟ್ ಟ್ಯಾಗ್ ರಗಳೆ ಕಾಡತೊಡಗಿದೆ. (Fastag Complaint)
ಹಿರಿಯ ನಟ ಉಮೇಶ್ ಬಣಕಾರ್‌ ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಫಾಸ್ಟ್ ಟ್ಯಾಗ್ ರಗಳೆ ಬಗ್ಗೆ ಹೀಗೆ ಬರೆದುಕೊಂಡಿದ್ದಾರೆ: ಜೊತೆಗೆ, ನಿಮಗೂ ಇಂತಹ ಅನುಭವಗಳಾಗಿದ್ದರೆ ಮುಕ್ತವಾಗಿ ಹಂಚಿಕೊಂಡು, ಇದೇ ವೇದಿಕೆಯಲ್ಲಿ ಚರ್ಚೆ ಮಾಡೋಣ ಎಂದು ಕರೆ ನೀಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುವ ವಾಹನಗಳ ಮಾಲೀಕರ ಗಮನಕ್ಕೆ:

ಫಾಸ್ಟ್ ಟ್ಯಾಗ್ ಹಗಲು ದರೋಡೆಕೋರರು 3,000 ರೂಪಾಯಿ ಹಣವನ್ನು ಕಟ್ಟಿಸಿಕೊಂಡು ವಾರ್ಷಿಕ ಚಂದಾದಾರರು ಎಂದು ಫಾಸ್ಟ್ ಟ್ಯಾಗ್ ನೀಡಿರುತ್ತಾರೆ. ನಾನು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ವಾಸವಾಗಿದ್ದು ನನ್ನ ವಾಹನವು ನನ್ನ ಬಳಿಯೇ ಇದೆ.

ಆದರೆ, ನೆಲಮಂಗಲದ ಟೋಲ್ ನಲ್ಲಿ ಇಂದು (ಮೇ 21) ಮುಂಜಾನೆ  8 ಗಂಟೆ 37 ನಿಮಿಷಕ್ಕೆ ಪ್ರವೇಶಿಸಿದೆ ಎಂದು ಮೆಸೇಜ್ ಬಂದಿರುತ್ತದೆ. ಹಾಗೆಯೇ ಅದೇ ದಿನ ಅಂದರೆ ನಿನ್ನೆ ಗುರುವಾರ ನೆಲಮಂಗಲದಿಂದ ಬೆಂಗಳೂರಿಗೆ ಬಂದ ಸಂದರ್ಭದಲ್ಲಿ 165 ಟ್ರಿಪ್ ಗಳು ಬಾಕಿ ಎಂದೂ ಮೆಸೇಜ್ ಬಂದಿದೆ.
ಫಾಸ್ಟ್ ಟ್ಯಾಗ್ ಎಂಬ ಹಗಲು ದರೋಡೆ ಬಗ್ಗೆ ಅಭಿಪ್ರಾಯ ಹಂಚ್ಕೊಳಿ:

ನನ್ನ ಸದರಿ ವಾಹನವು ಸಂಚರಿಸದೇ ಇರುವ ದಾರಿಯಲ್ಲಿ ಇಂದು 160 ಟ್ರಿಪ್ ಗಳು ಬಾಕಿ ಉಳಿದಿದೆ ಎಂಬ ಮೆಸೇಜ್ ಬಂದಿದೆ. ಇಂತಹ ಹಗಲುದರೋಡೆಗಳನ್ನು ತಡೆಗಟ್ಟಲು ಎಲ್ಲರೂ ಒಂದಾಗಬೇಕಾಗಿದೆ. ಇನ್ನಾರಿಗಾದರೂ ಇಂತಹ ಅನುಭವಗಳು ಆಗಿದ್ದಲ್ಲಿ ಸಂಬಂಧಪಟ್ಟ ಇಲಾಖೆ ಅಥವಾ ಪೊಲೀಸ್ ಕಂಪ್ಲೇಂಟ್ ನೀಡುವ ಮೂಲಕ ಅಕ್ರಮಗಳನ್ನು ತಡೆಗಟ್ಟಬೇಕಾಗಿದೆ. ಸಂಬಂಧಪಟ್ಟ ಮೆಸೇಜ್ ಸ್ಕ್ರೀನ್ ಶಾಟ್‌  ಅನ್ನು ಇದರೊಂದಿಗೆ ಲಗತ್ತಿಸಿದ್ದೇನೆ. ದಯಮಾಡಿ ಜನರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.

ತಕ್ಷಣ ಜನ ಇದಕ್ಕೆ ಪ್ರತಿಕ್ರಿಯಿಸುತ್ತಿದ್ದು, ತಮಗೂ ಕರಾಳ ಅನುಭವ ಆಗಿದೆ. ಇದನ್ನು ಮಟ್ಟಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ: 

Rudresh Nagasandra: ಈ ರೀತಿ ನನಗೂ ಆಗಿದೆ ಸರ್, ಕೇಳಿದರೆ ಕಂಪ್ಲೇಂಟ್ ಮಾಡಿ ನಿಮ್ಮ ಹಣ ವಾಪಸ್ ಕೊಡುತ್ತಾರೆ ಎಂದು ಹೇಳುತ್ತಾರೆ, ಟೋಲ್ನವರು ಕಟ್ ಮಾಡಿರುವ ನೂರು ರೂಪಾಯಿ ವಸೂಲು ಮಾಡಲು ಒಂದು ದಿವಸ ಟೈಮ್ ವೇಸ್ಟ್ ಮಾಡಿಕೊಂಡು ಖರ್ಚು ಮಾಡಿಕೊಂಡು ಓಡಾಡಬೇಕು.

Oscar Krishna: ನಮಗೂ ಈ ಅನುಭವ ಆಗಿದೆ. ಇವರನ್ನ ಮಟ್ಟ ಹಾಕಲೇಬೇಕು.

ಟಿಕೆಟ್ ರಹಿತ ಪ್ರಯಾಣಿಕರಿಂದ -8.67 ಲಕ್ಷ ದಂಡ ವಸೂಲಿ

BENGALURU : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಬಸ್‍ಗಳಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುವವರ ವಿರುದ್ಧ ತಪಾಸಣೆಯನ್ನು ತೀವ್ರಗೊಳಿಸಿದ್ದು, ಕೇವಲ ಒಂದೇ ತಿಂಗಳಲ್ಲಿ ಸಾವಿರಾರು ಪ್ರಯಾಣಿಕರಿಗೆ ದಂಡ ವಿಧಿಸಿ ಒಟ್ಟು Rs. 8,67,590/- ಗಳ ಭಾರೀ ಮೊತ್ತವನ್ನು ದಂಡ ರೂಪದಲ್ಲಿ (FINE) ವಸೂಲಿ ಮಾಡಲಾಗಿದೆ.

ಏಪ್ರಿಲ್-2026ರ ಮಾಹೆಯಲ್ಲಿ ಕೆಎಸ್‍ಆರ್‍ಟಿಸಿಯ ವಿಶೇಷ ತನಿಖಾ ತಂಡಗಳು ಸಂಸ್ಥೆಯ ಆದಾಯ ಸೋರಿಕೆಯನ್ನು ತಡೆಯಲು ರಾಜ್ಯ ಹಾಗೂ ನೆರೆರಾಜ್ಯಗಳಲ್ಲಿ ಸಂಚರಿಸುವ ಒಟ್ಟು 41,308 ವಾಹನಗಳನ್ನು ತೀವ್ರ ತಪಾಸಣೆಗೊಳಪಡಿಸಿವೆ. ಈ ಕಾರ್ಯಾಚರಣೆಯ ವೇಳೆ ಒಟ್ಟು 4,337 ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ.

ಬಸ್‍ಗಳಲ್ಲಿ ಟಿಕೆಟ್ ಪಡೆಯದೇ ನಿಯಮ ಉಲ್ಲಂಘಿಸಿ ಪ್ರಯಾಣಿಸುತ್ತಿದ್ದ 4,462 ಪ್ರಯಾಣಿಕರನ್ನು ತನಿಖಾ ತಂಡಗಳು ಪತ್ತೆಹಚ್ಚಿ ದಂಡ ವಿಧಿಸಿವೆ. ಟಿಕೆಟ್ ರಹಿತ ಪ್ರಯಾಣಿಕರಿಂದ ಒಟ್ಟು ₹8,67,590/- ಗಳ ಭಾರೀ ಮೊತ್ತವನ್ನು ದಂಡದ ರೂಪದಲ್ಲಿ ವಸೂಲಿ ಮಾಡಲಾಗಿದೆ.

ನಿಗಮದ ಆದಾಯಕ್ಕೆ ನಷ್ಟ ಉಂಟುಮಾಡುತ್ತಿದ್ದ ₹1,32,973/- ಗಳ ಸೋರಿಕೆ ಮೊತ್ತವನ್ನು ತನಿಖಾಧಿಕಾರಿಗಳು ಯಶಸ್ವಿಯಾಗಿ ಪತ್ತೆಹಚ್ಚಿದ್ದಾರೆ. ಆದಾಯ ಸೋರಿಕೆಗೆ ಕಾರಣರಾದ ಹಾಗೂ ಕರ್ತವ್ಯ ಲೋಪ ಎಸಗಿರುವ ತಪ್ಪಿತಸ್ಥ ಸಿಬ್ಬಂದಿಗಳ ವಿರುದ್ಧವೂ ನಿಗಮವು ಇಲಾಖಾ ರೀತ್ಯಾ ಸೂಕ್ತ ಶಿಸ್ತಿನ ಕ್ರಮವನ್ನು ಜರುಗಿಸಿದೆ ಎಂದು ಮುಖ್ಯ ಸಂಚಾರ ವ್ಯವಸ್ಥಾಪಕರು ತಿಳಿಸಿದ್ದಾರೆ.

ನಿಗಮದ ಬಸ್‍ಗಳಲ್ಲಿ ಪ್ರಯಾಣಿಸುವಾಗ ಸಾರ್ವಜನಿಕ ಪ್ರಯಾಣಿಕರು ಕಡ್ಡಾಯವಾಗಿ ಸೂಕ್ತ ಟಿಕೆಟ್ ಅಥವಾ ಪಾಸುಗಳನ್ನು ಪಡೆದೇ ಪ್ರಯಾಣಿಸಬೇಕು ಮತ್ತು ಸಂಸ್ಥೆಯ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಕೆಎಸ್‍ಆರ್‍ಟಿಸಿ ಪ್ರಕಟಣೆಯಲ್ಲಿ ವಿನಂತಿಸಿದೆ.

ಜಿಕೆವಿಕೆಯಲ್ಲಿ ಮೇ 26 ರಂದು ‘ಅಗ್ರಿ ಸ್ಟಾರ್ಟ್ ಅಪ್ ಕಾನ್‍ಕ್ಲೇವ್ 2.0’

ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಅಗ್ರಿ ಇನೋವೇಶನ್ ಸೆಂಟರ್ ವತಿಯಿಂದ “Agri Startup Conclave 2.0 – Innovate, Sustain & Scale-2026”  ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮೇ 26ರಂದು ಬೆಳಿಗ್ಗೆ 9:00 ಗಂಟೆಯಿಂದ ಸಂಜೆ 4:00 ಗಂಟೆಯವರೆಗೆ (GKVK) ಕೃಷಿ ವಿಶ್ವವಿದ್ಯಾಲಯದ ಉತ್ತರ ಬ್ಲಾಕ್ ಸಭಾಂಗಣದಲ್ಲಿ ಈ ಕಾನ್‍ಕ್ಲೇವ್  (Conclave) ನಡೆಯಲಿದೆ.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ಅವರು ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಸ್.ವಿ. ಸುರೇಶ ಅವರು ವಹಿಸಲಿದ್ದಾರೆ. ಈ ಕಾನ್‍ಕ್ಲೇವ್ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಪ್ರಮುಖರಾದ ಅಗ್ರಿ ಸ್ಟಾರ್ಟ್ ಅಪ್‍ಗಳು, ಉದ್ಯಮಿಗಳು, ಸಂಶೋಧಕರು, ಹೂಡಿಕೆದಾರರು, ವಿದ್ಯಾರ್ಥಿಗಳು, ಕೈಗಾರಿಕೆಗಳು ಹಾಗೂ ರೈತ ಉತ್ಪಾದಕರ ಸಂಘಟನೆಗಳು ಈ ವೇದಿಕೆಯಲ್ಲಿ ಒಗ್ಗೂಡಲಿವೆ.

ಭಾರತೀಯ ಕೃಷಿಯ ಭವಿಷ್ಯವನ್ನು ರೂಪಿಸುತ್ತಿರುವ ಹೊಸ ವ್ಯವಹಾರದ ಅವಕಾಶಗಳು ಹಾಗೂ ನವೀನ ತಂತ್ರಜ್ಞಾನಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ.
ಸುಸ್ಥಿರ ಅಗ್ರಿ ಉದ್ಯಮ ನಿರ್ಮಾಣ, ಕಾರ್ಬನ್ ಮಾರುಕಟ್ಟೆ ಅವಕಾಶಗಳು ಮತ್ತು ಜೈವಿಕ ಇನ್‍ಪುಟ್‍ಗಳ ನವೀನತೆಗಳ ಕುರಿತು ತಜ್ಞರಿಂದ ತಾಂತ್ರಿಕ ಅಧಿವೇಶನಗಳು ನಡೆಯಲಿವೆ.

ಪ್ರಮುಖ ಸ್ಟಾರ್ಟ್ ಅಪ್‍ಗಳು, ಹೂಡಿಕೆದಾರರು, ಕೈಗಾರಿಕೆಗಳು ಮತ್ತು ಇಕೋಸಿಸ್ಟಮ್ ಭಾಗೀದಾರರೊಂದಿಗೆ ನೆಟ್‍ವಕಿರ್ಂಗ್, ಸಹಭಾಗಿತ್ವ ಹಾಗೂ ನೇರ ಸಂವಾದ ನಡೆಸಲು ಈ ಕಾರ್ಯಕ್ರಮವು ಉತ್ತಮ ಅವಕಾಶವನ್ನು ಒದಗಿಸುತ್ತದೆ.

ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಮತ್ತು ಆಸಕ್ತರಿಗೆ ಪ್ರವೇಶ ಉಚಿತವಾಗಿದ್ದು, ಆದರೆ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.

ಹೆಚ್ಚಿನ ಮಾಹಿತಿ ಮತ್ತು ನೋಂದಣಿಗಾಗಿ ಮೊಬೈಲ್ ಸಂಖ್ಯೆ: 9739055445 / 9538164928 / 8431332653 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಮೇ 23 ರಂದು ವಿನೂತನ ‘ರೈತ ಸಂತೆ’
ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ವಿಶೇಷ ಹಾಗೂ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾದ “ರೈತ ಸಂತೆ” ಈ ಬಾರಿ ಮತ್ತಷ್ಟು ವಿನೂತನ ವಿಷಯಗಳೊಂದಿಗೆ ಸಾರ್ವಜನಿಕರ ಆಕರ್ಷಣೆಗೆ ಸಜ್ಜಾಗಿದೆ.  ಮೇ 23 ರಂದು ಬೆಳಿಗ್ಗೆ 7.00 ಗಂಟೆಯಿಂದ ಸಂಜೆ 4.00 ಗಂಟೆಯವರೆಗೆ ಜಿ.ಕೆ.ವಿಕೆ ಆವರಣದ ಗಣಪತಿ ದೇವಸ್ಥಾನದ ಹತ್ತಿರ ವಿಶ್ವವಿದ್ಯಾನಿಲಯದ ಉತ್ಪನ್ನಗಳ ಈ “ರೈತ ಸಂತೆ”ಯನ್ನು ಆಯೋಜಿಸಲಾಗಿದೆ.

ಈ ಬಾರಿಯ ರೈತ ಸಂತೆಯ ಪ್ರಮುಖ ಆಕರ್ಷಣೆಯಾಗಿ ರೈತರೇ ನೇರವಾಗಿ ಬೆಳೆದ ತಾಜಾ ಹಲಸು, ದ್ರಾಕ್ಷಿ, ಕಲ್ಲಂಗಡಿ, ಕರಬೂಜ ಹಣ್ಣುಗಳು ಹಾಗೂ ವಿವಿಧ ತರಕಾರಿಗಳು ಲಭ್ಯವಿರಲಿವೆ. ಗುಣಮಟ್ಟದ ರಾಜಮುಡಿ ಅಕ್ಕಿ, ಮೌಲ್ಯವರ್ಧಿತ ಸಿರಿಧಾನ್ಯ ಪದಾರ್ಥಗಳು ಹಾಗೂ ವಿವಿಧ ಸಾವಯವ ಉತ್ಪನ್ನಗಳು.  ತಾಜಾ ಅಣಬೆ ಹಾಗೂ ಅಲಂಕಾರಿಕ ಮೀನು ಮರಿಗಳು. ಸುಗಂಧ ಮತ್ತು ಔಷಧೀಯ ಸಸ್ಯಗಳು, ಅಲಂಕಾರಿಕ ಗಿಡಗಳು, ಜೈವಿಕ ಗೊಬ್ಬರಗಳು ಹಾಗೂ ಎರೆಹುಳು ಗೊಬ್ಬರ ಲಭ್ಯವಿರಲಿದೆ.

ಕೃಷಿ ಯಂತ್ರೋಪಕರಣಗಳು, ಜೈವಿಕ ಕೀಟನಾಶಕಗಳು, ವಿಶ್ವವಿದ್ಯಾನಿಲಯದ ಕೃಷಿ ಪ್ರಕಟಣೆಗಳು ಹಾಗೂ ಸಮಗ್ರ ಕೃಷಿ ಮಾಹಿತಿ. ಅಡಿಕೆ ಉತ್ಪನ್ನಗಳ ಕರಕುಶಲ ವಸ್ತುಗಳು, ರೇμÉ್ಮ ಕೃಷಿಯ ಉಪ ಉತ್ಪನ್ನಗಳು, ಜೇನು ಕೃಷಿ ಮತ್ತು ಪಶು ಸಂಗೋಪನೆಗೆ ಸಂಬಂಧಿಸಿದ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಇರಲಿದೆ.

ಸಾರ್ವಜನಿಕರು ಹಾಗೂ ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ವಿನೂತನ ಸಂತೆಯ ಸದುಪಯೋಗ ಪಡೆದುಕೊಳ್ಳಬೇಕಾಗಿ ಕೃಷಿ ವಿಶ್ವವಿದ್ಯಾನಿಲಯದ ಹಿರಿಯ ವಾರ್ತಾತಜ್ಞರು ಮತ್ತು ಮುಖ್ಯಸ್ಥರಾದ ಡಾ. ಕೆ.ಪಿ. ರಘುಪ್ರಸಾದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Cyber Crime: ಬೆಂಗಳೂರು ಪೊಲೀಸ್ ಇಲಾಖೆಯಲ್ಲಿ ಟೆಕ್ಕಿ ಹುದ್ದೆಗಳಿಗೆ ನೇಮಕ, ಇಂದೇ ಅರ್ಜಿ ಸಲ್ಲಿಸಿ!

ಕೆಎಸ್‌ಪಿ ಸೈಬರ್ ಸೆಕ್ಯುರಿಟಿ ಮತ್ತು ಫಾರೆನ್ಸಿಕ್ ಅನಾಲಿಸ್ಟ್ ನೇಮಕಾತಿ 2026: ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕರ್ನಾಟಕ ರಾಜ್ಯ ಪೊಲೀಸ್ (Karnataka State Police ಕೆಎಸ್‌ಪಿ) ಇಲಾಖೆಯಲ್ಲಿ ಕೆಲಸ ಮಾಡೋ ದೊಡ್ಡ ಅವಕಾಶ ನಿಮಗಾಗಿ ಇಲ್ಲಿದೆ. ಇದು ಕಾಂಟ್ರಾಕ್ಟ್ ಜಾಬ್ ಆದರೂ ಗುತ್ತಿಗೆಯನ್ನು ನವೀಕರಿಸಲು ಅವಕಾಶವಿರುತ್ತದೆ. ಜೊತೆಗೆ, ಸರ್ಕಾರಿ ಇಲಾಖೆಯಲ್ಲಿ ಸೈಬರ್ ಕ್ರೈಂ ತನಿಖೆಯಲ್ಲಿ (Cyber Crime Investigation) ನೇರ ಅನುಭವ ಸಿಗುತ್ತೆ. ಜಾಹೀರಾತು ಸಂಖ್ಯೆ: COPBCP/EST/EST3(MISC)/70/2023,

ಬೆಂಗಳೂರಿನಲ್ಲಿರುವ ಎಂಟು ಸೈಬರ್ ಅಪರಾಧ ಪೊಲೀಸ್ ಠಾಣೆಗಳನ್ನು (KSP CEN) ಬಲಪಡಿಸಲು ಬೆಂಗಳೂರು ನಗರದ ಪೊಲೀಸ್ ಆಯುಕ್ತರ ಕಚೇರಿ (ಕರ್ನಾಟಕ ಸರ್ಕಾರದ ಪೊಲೀಸ್ ಇಲಾಖೆಯಡಿ) 11 ತಾಂತ್ರಿಕ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಬೆಂಗಳೂರು ನಗರದ ಜಂಟಿ ಪೊಲೀಸ್ ಆಯುಕ್ತರು (ಅಪರಾಧ) ಅಧ್ಯಕ್ಷತೆಯ ನೇಮಕಾತಿ ಸಮಿತಿಯು ಗುತ್ತಿಗೆ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ (Recruitment 2026) ಮಾಡುತ್ತದೆ,

ಇದು 11 ತಿಂಗಳ ಗುತ್ತಿಗೆ ಕೆಲಸವಾಗಿದ್ದು, ಗುತ್ತಿಗೆಯನ್ನು ನವೀಕರಿಸಲು ಅವಕಾಶವಿರುತ್ತದೆ. ಮಾಸಿಕ ಸಂಚಿತ ವೇತನವನ್ನು ಮಾತ್ರ ನೀಡಲಾಗುತ್ತದೆ. ಬೇರೆ ಯಾವುದೇ ಭತ್ಯೆಗಳು, ವೇತನ ಬಡ್ತಿ, ಬಡ್ತಿ ಅಥವಾ ಪಿಂಚಣಿ ಸೌಲಭ್ಯಗಳನ್ನು ಪಾವತಿಸಲಾಗುವುದಿಲ್ಲ. ತಿಂಗಳಿಗೆ ಕೇವಲ 1 ದಿನ ಸಾಂದರ್ಭಿಕ ರಜೆಗೆ ಅವಕಾಶವಿದೆ.

1. ಹುದ್ದೆಗಳ ವಿವರ

ಹುದ್ದೆಯ ಹೆಸರು: Cyber Security Analyst
ಸಂಬಳ ₹ 75,000 ತಿಂಗಳಿಗೆ
ಖಾಲಿ ಹುದ್ದೆಗಳು – 8
ಅಪೇಕ್ಷಿತ ಪ್ರಮಾಣಪತ್ರಗಳು: ISO 27001 ಲೀಡ್ ಆಡಿಟರ್, ಪಿಜಿ ಡಿಪ್ಲೊಮಾ / ಡಿಪ್ಲೊಮಾ / ಮಾಹಿತಿ ಭದ್ರತೆ ಅಥವಾ ಸೈಬರ್ ಭದ್ರತೆಯಲ್ಲಿ ಪ್ರಮಾಣಪತ್ರ ಕೋರ್ಸ್, EC-ಕೌನ್ಸಿಲ್ ಪ್ರಮಾಣೀಕೃತ ನೈತಿಕ ಹ್ಯಾಕರ್ (CEH), (ISC)² CISSP, ಸೈಬರ್ ಭದ್ರತೆ ಮತ್ತು ಕ್ಲೌಡ್ ಕಂಪ್ಯೂಟಿಂಗ್ ಕುರಿತು ಪ್ರಮಾಣಪತ್ರ ಕೋರ್ಸ್, GIAC (GCIH, GCFE, GASF, GCFA).
ಹುದ್ದೆಯ ಹೆಸರು: Digital Forensic Analyst 
ಸಂಬಳ ₹ 50,000 ತಿಂಗಳಿಗೆ
ಖಾಲಿ ಹುದ್ದೆಗಳು – 3

2. ಮೇಲಿನ ಎರಡೂ ಹುದ್ದೆಗಳಿಗೆ ವಿದ್ಯಾರ್ಹತೆ:

B.E/B.Tech/B.C.A/M.Sc/M.C.A
ವಿಷಯ: Information Technology, Computer Science, Electronics & Communication, Telecommunications ಅಥವಾ ಸಮಾನ/ಸಂಬಂಧಿತ ಪದವಿ
ಕನಿಷ್ಠ 60% ಅಂಕಗಳು ಕಡ್ಡಾಯ
ಅಪೇಕ್ಷಿತ ಪ್ರಮಾಣಪತ್ರಗಳು: ಸೈಬರ್ ಕಾನೂನು / ಸೈಬರ್ ಫೋರೆನ್ಸಿಕ್‌ನಲ್ಲಿ ಪ್ರಮಾಣಪತ್ರ ಕೋರ್ಸ್, EC-ಕೌನ್ಸಿಲ್ CHFI, ಪ್ರಮಾಣೀಕೃತ ಫೋರೆನ್ಸಿಕ್ ಕಂಪ್ಯೂಟರ್ ಎಕ್ಸಾಮಿನರ್ (CFCE), ಪ್ರಮಾಣೀಕೃತ ಕಂಪ್ಯೂಟರ್ ಎಕ್ಸಾಮಿನರ್ (CCE), ಪ್ರವೇಶ ಡೇಟಾ ಪ್ರಮಾಣೀಕೃತ ಪರೀಕ್ಷಕ (ACE), ಎನ್‌ಕೇಸ್ ಪ್ರಮಾಣೀಕೃತ ಪರೀಕ್ಷಕ (EnCE).
ವಯೋಮಿತಿ: 25 ರಿಂದ 35 ವರ್ಷ 
ಅನುಭವ: ಫ್ರೆಶರ್ಸ್ ಕೂಡ ಅರ್ಜಿ ಹಾಕಬಹುದು, ಆದ್ರೆ ಸೈಬರ್ ಸೆಕ್ಯುರಿಟಿ/ಫಾರೆನ್ಸಿಕ್ಸ್‌ನಲ್ಲಿ ಅನುಭವ ಇದ್ರೆ ಆದ್ಯತೆ.
ಸಂವಹನ: ಇಂಗ್ಲಿಷ್ ಮತ್ತು ಕನ್ನಡದಲ್ಲಿ ಬಲವಾದ ಮೌಖಿಕ ಮತ್ತು ಲಿಖಿತ ಸಂವಹನ ಕೌಶಲ್ಯ.

3. ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆ ಆರಂಭ: 18 ಮೇ 2026
ಕೊನೆಯ ದಿನಾಂಕ: 24 ಮೇ 2026 (ಭಾನುವಾರ ಸಂಜೆ 6 ಗಂಟೆಯ ವರೆಗೆ)
ಅರ್ಜಿ ಸಲ್ಲಿಕೆ: Email/Offline ಮೂಲಕ

4. ಕೆಲಸ ಏನು ಮಾಡಬೇಕು?

Cyber Security Analyst: ಸೈಬರ್ ದಾಳಿಗಳನ್ನು ತಡೆಗಟ್ಟುವುದು, ನೆಟ್‌ವರ್ಕ್ ಸೆಕ್ಯುರಿಟಿ ಮೇಲ್ವಿಚಾರಣೆ ಮಾಲ್‌ವೇರ್ ಅನಾಲಿಸಿಸ್, ಫಿಶಿಂಗ್ ಕೇಸ್ ತನಿಖೆಗೆ ಟೆಕ್ನಿಕಲ್ ಸಪೋರ್ಟ್‌ ಪೊಲೀಸ್ ಸಿಸ್ಟಮ್‌ಗಳ ಸೈಬರ್ ಸುರಕ್ಷತೆ.
Digital Forensic Analyst: ಮೊಬೈಲ್, ಲ್ಯಾಪ್‌ಟಾಪ್, ಹಾರ್ಡ್ ಡಿಸ್ಕ್‌ನಿಂದ ಡಿಜಿಟಲ್ ಸಾಕ್ಷ್ಯ ಸಂಗ್ರಹ, ಡಿಲೀಟ್ ಆದ ಡೇಟಾ ರಿಕವರಿ, ಕಾಲ್ ರೆಕಾರ್ಡ್ ಅನಾಲಿಸಿಸ್‌ ಕೋರ್ಟ್‌ಗೆ ಸಾಕ್ಷ್ಯ ವರದಿ ತಯಾರಿಸುವುದು.

5. ಅರ್ಜಿ ಸಲ್ಲಿಸುವುದು ಹೇಗೆ?

ಅಧಿಕೃತ ವೆಬ್‌ಸೈಟ್  ksp.karnataka.gov.in ಅಥವಾ bcp.gov.in ನಲ್ಲಿ KSP ವೆಬ್‌ಸೈಟ್‌ಗೆ ಹೋಗಿ ಅರ್ಜಿ ನಮೂನೆ ಮತ್ತು ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ.
ನಿರ್ದಿಷ್ಟ ನಮೂನೆಯಲ್ಲಿ ಸ್ವಯಂ ಘೋಷಣೆ ಮತ್ತು ಸಹಿಯೊಂದಿಗೆ ಬಯೋಡೇಟಾ / ರೆಸ್ಯೂಮ್ ಅನ್ನು ಭರ್ತಿ ಮಾಡಿ.
ಬಿಳಿ ಹಾಳೆಯ ಮೇಲೆ ಪಾಸ್‌ಪೋರ್ಟ್ ಗಾತ್ರದ ಬಣ್ಣದ ಫೋಟೋ ಅಂಟಿಸಿ ಮತ್ತು ಅದರ ಮೇಲೆ ಸಹಿ ಮಾಡಿ.
ಆಧಾರ್ / ಪ್ಯಾನ್ / ಚಾಲನಾ ಪರವಾನಗಿ, SSLC ಅಂಕಪಟ್ಟಿ, ಅರ್ಹತಾ ಪ್ರಮಾಣಪತ್ರ ಮತ್ತು ಕೆಲಸದ ಅನುಭವ ಪ್ರಮಾಣಪತ್ರದ ಸ್ವಯಂ ಪ್ರಮಾಣೀಕೃತ ಪ್ರತಿಗಳನ್ನು ಲಗತ್ತಿಸಿ.
ಎಲ್ಲಾ ಕಾಲಮ್‌ಗಳನ್ನು ಪೂರ್ಣಗೊಳಿಸಿದ ಎಕ್ಸೆಲ್ ಸ್ವರೂಪದಲ್ಲಿ ಮೌಲ್ಯಮಾಪನ ಹಾಳೆಯನ್ನು ಭರ್ತಿ ಮಾಡಿ.
ಪೂರ್ಣಗೊಂಡ ಅರ್ಜಿಯನ್ನು ಎಕ್ಸೆಲ್ ಮೌಲ್ಯಮಾಪನ ಹಾಳೆಯೊಂದಿಗೆ dcpadminbcp@ksp.gov.in ಗೆ ಇಮೇಲ್ ಮೂಲಕ ಕಳುಹಿಸಿ.
ಅಥವಾ ಹಾರ್ಡ್ ಪ್ರತಿಯನ್ನು ಅಂಚೆ ಮೂಲಕ ನಂ. 01 ಇನ್‌ಫೆಂಟ್ರಿ ರಸ್ತೆ, ಪೊಲೀಸ್ ಆಯುಕ್ತರ ಕಚೇರಿ, ಬೆಂಗಳೂರು ನಗರ – 560001 ಗೆ ಕಳುಹಿಸಿ.

ಆಯ್ಕೆಯು ಈ ಕೆಳಗಿನವುಗಳನ್ನು ಆಧರಿಸಿದೆ:

ದಾಖಲೆಗಳು ಮತ್ತು ರೆಸ್ಯೂಮ್‌ ಪರಿಶೀಲನೆ: ಹೆಚ್ಚುವರಿ ಪೊಲೀಸ್ ಆಯುಕ್ತರು (ಅಪರಾಧ) ಅಧ್ಯಕ್ಷತೆಯ ಆಯ್ಕೆ ಸಮಿತಿಯು ಅರ್ಹತೆ, ಅನುಭವ ಮತ್ತು ಪ್ರಮಾಣೀಕರಣಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡುತ್ತದೆ.
ಅಂತಿಮ ಆಯ್ಕೆ: ನೇಮಕಾತಿಯನ್ನು 11 ತಿಂಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಮಾಡಲಾಗುತ್ತದೆ. ಪ್ರಾಧಿಕಾರದ ವಿವೇಚನೆಯಿಂದ ಉದ್ಯೋಗದ ಅವಧಿಯನ್ನು ವಿಸ್ತರಿಸಬಹುದು.
ಆಯ್ಕೆಯಾದ ಅಭ್ಯರ್ಥಿಯು ನೇಮಕಾತಿ ಆದೇಶವನ್ನು ಸ್ವೀಕರಿಸಿದ 7 ದಿನಗಳ ಒಳಗೆ ರೂ. 100 ಸ್ಟಾಂಪ್ ಪೇಪರ್‌ನಲ್ಲಿ ಒಪ್ಪಂದವನ್ನು ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಒತ್ತಿ:

ಕಾಂಗ್ರೆಸ್ ಗೆಲುವಿನ ನಾಗಾಲೋಟ ಬಹಳ ದಿನ ನಡೆಯದು: ಬಿ.ವೈ.ವಿ. ವಿಶ್ವಾಸ

ಗ್ಯಾರಂಟಿಗಳನ್ನು (Guarantee) ಕೇವಲ ಚುನಾವಣಾ ತಂತ್ರಗಾರಿಕೆಗೆ ಬಳಸುವ ಕೆಲಸ

ಬೆಂಗಳೂರು: ಮುಖ್ಯಮಂತ್ರಿಗಳೇ, ಯಾವ ಪುರುಷಾರ್ಥಕ್ಕೆ ನೀವು ತುಮಕೂರಿನಲ್ಲಿ (Tumakuru) ಸಾಧನಾ ಸಮಾವೇಶ (Sadhana Samavesha) ಹಮ್ಮಿಕೊಂಡಿದ್ದೀರಿ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ಅವರು ಕೇಳಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 3 ವರ್ಷಗಳಲ್ಲಿ ತಾವು ಮಾಡಿದ ಸಾಧನೆಯಾದರೂ ಏನು? ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಆಗಿವೆಯೇ? ಹೊಸ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದೀರಾ ಎಂದು ಪ್ರಶ್ನಿಸಿದರು.
ನಾಡಿಗೆರಡು ತುತ್ತು ಅನ್ನ ಕೊಡುವ ರೈತರ ಬದುಕನ್ನು ಕಟ್ಟಿಕೊಡುವ ಸಲುವಾಗಿ ನೆರೆ ಮತ್ತು ಬರದ ಸಂದರ್ಭದಲ್ಲಿ ನೆರವಿಗೆ ನಿಮ್ಮ ಸರಕಾರ ಬಂದಿದೆಯೇ ಎಂದು ಕೇಳಿದರು. ಇದ್ಯಾವುದನ್ನೂ ಮಾಡದೇ, ಗ್ಯಾರಂಟಿಗಳ ನೆಪ ಒಡ್ಡಿಕೊಂಡು ರಾಜ್ಯ ಸರಕಾರವು ಜನರ ಪಾಲಿಗೆ ಬದುಕಿದೆ ಎಂಬುದನ್ನು ನೆನಪಿಸುವ ಕಾರ್ಯವನ್ನು ಈ ಸಾಧನಾ ಸಮಾವೇಶದ ಮೂಲಕ ತಾವು ಮಾಡುತ್ತ ಇದ್ದೀರಿ ಎಂದು ಆಕ್ಷೇಪಿಸಿದರು. ಕಾಂಗ್ರೆಸ್ ಸರಕಾರವು ಕೇವಲ ಜಾಹೀರಾತಿನ ಮೂಲಕ ತಮ್ಮ ಯಶಸ್ಸನ್ನು ಬಿಚ್ಚಿಡುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.
ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ನಿಮ್ಮ ಗೆಲುವಿಗೆ ಗ್ಯಾರಂಟಿಗಳು ಸಹಕರಿಸಿವೆ. ಗ್ಯಾರಂಟಿ ಹಣ ಬಿಡುಗಡೆ ಮಾಡಿ ಚುನಾವಣೆ ಗೆಲ್ಲಲು ಪ್ರಯತ್ನ ಮಾಡುತ್ತ ಇದ್ದೀರಿ ಎಂದು ದೂರಿದರು. ಈ ಗೆಲುವಿನ ನಾಗಾಲೋಟ ಬಹಳ ದಿನ ನಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು. ಹಿಂದೆಯೂ ಕಾಂಗ್ರೆಸ್ ಸರಕಾರವು ಅಸ್ತಿತ್ವದಲ್ಲಿ ಇದ್ದಾಗ ಇದೇ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾಗ ನಂಜನಗೂಡು, ಬೇರೆ ಉಪ ಚುನಾವಣಾ ಫಲಿತಾಂಶ ಏನಾಗಿತ್ತು ಎಂದು ಕೇಳಿದರು. ನಂತರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಜನರು ನಿಮ್ಮನ್ನು ಮನೆಗೆ ಕಳಿಸಿದ್ದನ್ನು ತಾವು ಮರೆತಿಲ್ಲ ಎಂದು ಭಾವಿಸುವುದಾಗಿ ಹೇಳಿದರು.
ಗ್ಯಾರಂಟಿಗಳನ್ನು ಕೇವಲ ಚುನಾವಣಾ ತಂತ್ರಗಾರಿಕೆಗೆ ಬಳಸುವ ಕೆಲಸ ಈ ಸರಕಾರದಿಂದ ಬಳಸುವ ಆಗುತ್ತಿದೆ. ಗ್ಯಾರಂಟಿಗಳೇ ಅಭಿವೃದ್ಧಿ ಎಂದು ಬಿಂಬಿಸುವ ಕೆಲಸವನ್ನು ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಸರಕಾರ ಮಾಡುತ್ತಿದೆ. ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ ರಸ್ತೆಗೆ ಆದ್ಯತೆ ನೀಡಿದ್ದೀರಾ? ನೀರಾವರಿ ಯೋಜನೆಗಳಿಗೆ ಹಣ ಒದಗಿಸಿದ್ದೀರಾ? ಆಸ್ಪತ್ರೆಗಳು, ಶಾಲೆಗಳಿಗೆ ಕಾಂಗ್ರೆಸ್ ಸರಕಾರ ನೀಡಿದೆಯೇ? ಅಭಿವೃದ್ಧಿಯನ್ನು ಕಣ್ಮುಂದೆ ಇಟ್ಟುಕೊಂಡು ಶಾಸಕರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡಲು ನಿಮಗೆ ಸಾಧ್ಯ ಆಗಿದೆಯೇ ಎಂದು ಕೇಳಿದರು.

ರಸ್ತೆ ಗುಂಡಿ ಮುಚ್ಚಿಲ್ಲ; ರೈತರ ಕಷ್ಟಕ್ಕೆ ಸ್ಪಂದಿಸಿಲ್ಲ..
ಇವರ ಯೋಗ್ಯತೆಗೆ ಬೆಂಗಳೂರು ಮಹಾನಗರದ ರಸ್ತೆ ಗುಂಡಿಗಳನ್ನು ಮುಚ್ಚಲು ಸಾಧ್ಯ ಆಗುತ್ತಿಲ್ಲ. ಕೃಷಿ ಕ್ಷೇತ್ರದ ಬಗ್ಗೆ ಈ ಸರಕಾರ ಕಿಂಚಿತ್ತೂ ತಲೆ ಕೆಡಿಸಿಕೊಂಡಿಲ್ಲ. ಸಂಕಷ್ಟದಲ್ಲಿ ಇರುವ ರೈತರಿಗೆ ಸಾಂತ್ವನ ಹೇಳುವ ಸಂವೇದನೆ ಕೂಡ ಈ ಕಾಂಗ್ರೆಸ್ ಸರಕಾರಕ್ಕೆ ಇಲ್ಲ ಎಂಬುದು ದುರ್ದೈವ ಎಂದು ಟೀಕಿಸಿದರು. ನೆರೆ ಮತ್ತು ಬರದ ಸಂದರ್ಭದಲ್ಲಿ ನೆರವಿಗೆ ಇವರು ಧಾವಿಸಿಲ್ಲ ಎಂದು ಆಕ್ಷೇಪಿಸಿದರು.

ಸಿಎಂ ರಾಜೀನಾಮೆ ಕೊಡಬೇಕಿತ್ತು..
ಉದ್ಯೋಗ ಸೃಷ್ಟಿ ಕುರಿತು ಸಾಕಷ್ಟು ಮಾತನಾಡುತ್ತಾರೆ. ಯುವಜನತೆ ಜೀವನದ ಜೊತೆ ಚೆಲ್ಲಾಟ ಆಡುವ ಕಾಂಗ್ರೆಸ್ ಸರಕಾರದ ಅಹಿಂದ ಮುಖವಾಡವೂ ಕಳಚಿಬಿದ್ದಿದೆ ಎಂದು ನುಡಿದರು. ಭ್ರಷ್ಟಾಚಾರರಹಿತ ಆಡಳಿತ ನೀಡುವುದಾಗಿ ಹಲವಾರು ಬಾರಿ ಹೇಳಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಆದಾಗಲೇ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕಾಗಿತ್ತು ಎಂದು ತಿಳಿಸಿದರು. ಈ ಹಗರಣದ ಕುರಿತು ಸದನದಲ್ಲೇ ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದು, ಸಚಿವರು ರಾಜೀನಾಮೆ ಕೊಟ್ಟಿದ್ದನ್ನು ನೆನಪಿಸಿದರು. ಮತ್ತೊಂದು ಕಡೆ ‘ಮುಡಾ’ ಹಗರಣ ನಡೆದಿದೆ. 14 ನಿವೇಶನ ವಾಪಸ್ ಮಾಡಿದ್ದು ರಾಜ್ಯದ ಜನರಿಗೆ ಗೊತ್ತಿದೆ ಎಂದರು.
ಶಿಕ್ಷಣ ಕ್ಷೇತ್ರದಲ್ಲಿ ಈ ಥರದ ಶಿಕ್ಷಣ ಸಚಿವರು ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಬಂದಿದ್ದಾರೆ ಎಂದು ಟೀಕಿಸಿದರು. ರಾಜ್ಯ ಶಿಕ್ಷಣ ನೀತಿಯನ್ನು ತರಲು ಇವರಿಗೆ ಸಾಧ್ಯವಾಗಿಲ್ಲ; ರಾಷ್ಟ್ರೀಯ ಶಿಕ್ಷಣ ನೀತಿಯನ್ನೂ (ಎನ್‍ಇಪಿ) ಅನುಷ್ಠಾನ ಮಾಡುತ್ತಿಲ್ಲ. ಶಿಕ್ಷಣ ಕ್ಷೇತ್ರದಲ್ಲೂ ಗೊಂದಲ ಸೃಷ್ಟಿಸಿ ರಾಜ್ಯದ ಮಕ್ಕಳ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ದೂರಿದರು. ರಾಜ್ಯದಲ್ಲಿ 40 ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಗಮನ ಸೆಳೆದರು.
ರಾಜ್ಯ ಸರಕಾರದ ಎಡವಟ್ಟಿನಿಂದಾಗಿ 6500 ಗ್ರಾಮೀಣ ಗ್ರಂಥಾಲಯಗಳು ಬಾಗಿಲು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಖ್ಯಮಂತ್ರಿಗಳ ಜಿಲ್ಲೆಯಲ್ಲೇ ಮೂಲಭೂತ ಸೌಕರ್ಯ ಕೊರತೆಯಿಂದ 15 ತಿಂಗಳಿನಿಂದ 550ಕ್ಕೂ ಹೆಚ್ಚು ನವಜಾತ ಶಿಶುಗಳು ಮರಣ ಹೊಂದಿವೆ. ಗರ್ಭಿಣಿಯರು, ಬಾಣಂತಿಯರ ಸರಣಿ ಸಾವುಗಳು ಸಂಭವಿಸುತ್ತಿವೆ. ಕಾನೂನು- ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ದಿನ ಬೆಳಗಾದರೆ ಕೊಲೆಗಳು ನಡೆಯುತ್ತಿವೆ. ಮುಖ್ಯಮಂತ್ರಿಗಳ ಜಿಲ್ಲೆಯು ಡ್ರಗ್ ಮಾಫಿಯಕ್ಕೆ ಇವತ್ತು ಕೇಂದ್ರವಾಗಿದೆ. ಮಾದಕವಸ್ತು ಉತ್ಪಾದನಾ ಫ್ಯಾಕ್ಟರಿಗಳು ಇರುವುದು ಪತ್ತೆಯಾಗಿದೆ ಎಂದು ವಿವರಿಸಿದರು. ಪೊಲೀಸ್ ಇಲಾಖೆ, ಮುಖ್ಯಮಂತ್ರಿಗಳಿಗೆ ಅವರ ಜಿಲ್ಲೆಯಲ್ಲಿ ಏನು ನಡೆಯುತ್ತಿದೆ ಎಂಬುದರ ಅಂದಾಜಿಲ್ಲ ಎಂದು ಟೀಕಿಸಿದರು.

ಅಹಿಂದ ಹೆಸರು ದುರ್ಬಳಕೆಯ ಅಪಕೀರ್ತಿ..
ಕ್ರಿಮಿನಲ್ ಚಟುವಟಿಕೆಯ ವ್ಯಕ್ತಿಗಳಿಗೆ ಭಯ ಹುಟ್ಟಿಸಬೇಕಾದ ಜೈಲುಗಳಲ್ಲಿ ಕೈದಿಗಳಿಗೆ ಕುಡಿಯುವ ವ್ಯವಸ್ಥೆ ಮಾಡಲಾಗುತ್ತಿದೆ. ರಾಜಾರೋಷವಾಗಿ ಕೈದಿಗಳು ಆರಾಮವಾಗಿ ಇದ್ದಾರೆ. ಅತಿ ಹೆಚ್ಚು ಬಜೆಟ್ ಮಂಡಿಸಿದ ಮುಖ್ಯಮಂತ್ರಿಗಳು, ದೀರ್ಘಕಾಲ ಸಿಎಂ ಎಂಬ ವೈಯಕ್ತಿಕ ಕಾರಣ ಬಿಟ್ಟರೆ, ಅಹಿಂದ ಹೆಸರು ಹೇಳಿಕೊಂಡು ಆ ಸಮುದಾಯಗಳನ್ನು ತನ್ನ ರಾಜಕೀಯ ಸ್ವಾರ್ಥಕ್ಕಾಗಿ, ಅಹಿಂದ ಸಮುದಾಯಗಳನ್ನು ತನ್ನ ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ದುರ್ಬಳಕೆ ಮಾಡಿಕೊಂಡ ಅಪಕೀರ್ತಿ ಇವರಿಗೆ ಸಲ್ಲುತ್ತದೆ ಎಂದು ನುಡಿದರು.
ಪಶ್ಚಿಮ ಬಂಗಾಲ, ಅಸ್ಸಾಂನಲ್ಲಿನ ಸೋಲಿನಿಂದ ಹತಾಶವಾದ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಲು ಹೊರಟಿದೆ ಎಂದು ಆರೋಪಿಸಿದರು. ಈ ಸರಕಾರದ ಆಡಳಿತ ವೈಖರಿಯಿಂದ ಜನರು ಬೇಸತ್ತಿದ್ದಾರೆ. ರಾಜ್ಯದಲ್ಲಿ ಯಾವತ್ತೇ ಚುನಾವಣೆ ನಡೆದರೂ ಈ ಸರಕಾರಕ್ಕೆ ಜನರು ಪಾಠ ಕಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯಸಭಾ ಸದಸ್ಯ ಲೇಹರ್ ಸಿಂಗ್ ಸಿರೋಯಾ, ಮಾಜಿ ಸಚಿವರು ಮತ್ತು ಶಾಸಕರಾದ ಬಿ.ಎ ಬಸವರಾಜ್, ಶ್ರೀಮತಿ ಶಶಿಕಲಾ ಜೊಲ್ಲೆ, ರಾಜ್ಯ ವಕ್ತಾರ ಹೆಚ್. ವೆಂಕಟೇಶ್ ದೊಡ್ಡೇರಿ, ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷ ರಘು ಕೌಟಿಲ್ಯ, ಎಸ್‍ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹೂಡಿ ಮಂಜುನಾಥ್ ಉಪಸ್ಥಿತರಿದ್ದರು.

ನಿವೃತ್ತ ಐಎಎಸ್ ಅಧಿಕಾರಿ ಎಸ್.ಎನ್. ಜಯರಾಮ್ ಅವರಿಗೆ ಗೌರವ ಡಾಕ್ಟರೇಟ್

ಕೋಲಾರದ (Kolara) ಶ್ರೀ ದೇವರಾಜ್ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಪರಿಗಣಿತ ವಿಶ್ವವಿದ್ಯಾಲಯ) ವತಿಯಿಂದ ನಿವೃತ್ತ ಐಎಎಸ್ ಅಧಿಕಾರಿ ಎಸ್.ಎನ್. ಜಯರಾಮ್ (N.S.Jayaram) ಅವರಿಗೆ ಗೌರವ ಡಾಕ್ಟರೇಟ್ (ಪಿಎಚ್.ಡಿ ಹಾನರಿಸ್ ಕಾಸಾ) (PHd Honouris KASA) ಪದವಿಯನ್ನು ನೀಡಿ ಗೌರವಿಸಿದೆ.  ಮೇ 18 ರಂದು ನಡೆದ ವಿಶ್ವವಿದ್ಯಾಲಯದ 16ನೇ ವಾರ್ಷಿಕ ಘಟಿಕೋತ್ಸವದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಎಸ್.ಎನ್. ಜಯರಾಮ್ ಅವರ ನಿಷ್ಕಳಂಕ ಆಡಳಿತ ಸೇವೆ ಹಾಗೂ ಅವರು 2016 ರಲ್ಲಿ ಪ್ರಾರಂಭಿಸಿದ ಜಾಗತಿಕ ಮಟ್ಟದ ವಿಶಿಷ್ಟ ಸಂಸ್ಥೆಯನ್ನು ಗುರುತಿಸಿ ಈ ಉನ್ನತ ಗೌರವವನ್ನು ನೀಡಲಾಗಿದೆ.

ಜಾಗತಿಕ ಮಟ್ಟದಲ್ಲಿ ಗಮನ ಸೆಳೆದ ‘ಜಿಐ ಟ್ಯಾಗ್ಡ್’ ಸಂಸ್ಥೆ:
ಎಸ್.ಎನ್. ಜಯರಾಮ್ ಅವರು ‘ಭೌಗೋಳಿಕ ಸೂಚಕಗಳ ಟ್ಯಾಗ್ ಹೊಂದಿದ ವಿಶ್ವ ಪ್ರೀಮಿಯಂ ಉತ್ಪನ್ನಗಳ’ (Geographical Indications Tagged World Premium Products) ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಭಾರತ ಸರ್ಕಾರದ ‘ಭೌಗೋಳಿಕ ಸೂಚಕಗಳ (ನೋಂದಣಿ ಮತ್ತು ರಕ್ಷಣೆ) ಕಾಯ್ದೆ 1999’ ರ ಅಡಿಯಲ್ಲಿ ಈ ಕಂಪನಿಯು ಕಾರ್ಯನಿರ್ವಹಿಸುತ್ತಿದೆ.

ಕೇವಲ ಜಿಐ ಟ್ಯಾಗ್ ಹೊಂದಿರುವ ಉತ್ಪನ್ನಗಳಿಗಾಗಿಯೇ ಮೀಸಲಾದ ಇಂತಹ ಕಂಪನಿಯು ಭಾರತ ದೇಶದಲ್ಲೇ ಮಾತ್ರವಲ್ಲದೆ ಇಡೀ ವಿಶ್ವದಲ್ಲೇ ಮೊದಲನೆಯದಾಗಿದೆ. ದೇಶದ ಸಾಂಪ್ರದಾಯಿಕ ಮತ್ತು ಭೌಗೋಳಿಕ ಗುರುತು ಹೊಂದಿರುವ ಜಿಐ ಉತ್ಪನ್ನಗಳನ್ನು ಸಂರಕ್ಷಿಸುವುದು, ರಕ್ಷಿಸುವುದು ಮತ್ತು ಉತ್ತೇಜಿಸುವುದು ಈ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ.

ದೇಶದ ಎಲ್ಲಾ ಜಿಐ ಉತ್ಪನ್ನಗಳನ್ನು ‘ಜಿಐ ಟ್ಯಾಗ್ಡ್’ ಎಂಬ ಒಂದೇ ಸೂರಿನಡಿ ತರುವುದು ಕಂಪನಿಯ ಪ್ರಮುಖ ಗುರಿಯಾಗಿದೆ. “ಪ್ರಪಂಚವನ್ನು ಅದರ ಬೇರುಗಳೊಂದಿಗೆ ಜೋಡಿಸುವುದು” ಎಂಬುದು ಈ ವಿಶಿಷ್ಟ ಸಂಸ್ಥೆಯ ದೂರದೃಷ್ಟಿಯಾಗಿದೆ.
ಆಡಳಿತ ರಂಗದಲ್ಲಿ ಹಾಗೂ ದೇಶದ ಸಾಂಪ್ರದಾಯಿಕ ಉತ್ಪನ್ನಗಳಿಗೆ ಜಾಗತಿಕ ಮನ್ನಣೆ ದೊರಕಿಸಿಕೊಡುವಲ್ಲಿ ಎಸ್.ಎನ್. ಜಯರಾಮ್ ಅವರು ಮಾಡಿರುವ ಸಾಧನೆಗೆ ಸಂದ ಈ ಗೌರವವು ಅತ್ಯಂತ ಶ್ಲಾಘನೀಯವಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ರಾಜ್ಯಪಾಲರ ಭೇಟಿ ಮಾಡಿದ ಕಾರ್ಮಿಕ ಸಚಿವ ಸಂತೋಷ್ ಲಾಡ್

ಕಾರ್ಮಿಕ ಸಚಿವರಾದ ಸಂತೋಷ್  ಲಾಡ್  ನೇತೃತ್ವದ ನಿಯೋಗ ಲೋಕಭವನದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ, ಮನವಿ ಪತ್ರ ಸಲ್ಲಿಸಿದರು.

 

ಕರ್ನಾಟಕ ರಾಜ್ಯ ಪೊಲೀಸ್ ಡೇಟಾ ಸೆಂಟರ್‍ಗೆ ಅಂತರರಾಷ್ಟ್ರೀಯ ISO/IEC 27001 ಪ್ರಮಾಣಪತ್ರದ ಗರಿ

ಕರ್ನಾಟಕ ರಾಜ್ಯ ಪೊಲೀಸ್ (Karnataka State Police) ಇಲಾಖೆಯ ತಾಂತ್ರಿಕ ಸಾಮಥ್ರ್ಯಕ್ಕೆ ಅಂತರರಾಷ್ಟ್ರೀಯ (International) ಮಟ್ಟದ ದೊಡ್ಡ ಮನ್ನಣೆ ಸಿಕ್ಕಿದೆ. ರಾಜ್ಯ ಪೊಲೀಸ್ ಡೇಟಾ ಸೆಂಟರ್ (ದತ್ತಾಂಶ ಕೇಂದ್ರ) ತನ್ನ ಅತ್ಯುತ್ತಮ ಮಾಹಿತಿ ಭದ್ರತಾ ನಿರ್ವಹಣಾ ವ್ಯವಸ್ಥೆಗಾಗಿ ಪ್ರತಿಷ್ಠಿತ ISO/IEC 27001 ಪ್ರಮಾಣಪತ್ರ (Certificate) ಲಭಿಸಿದೆ.
ವಿವಿಧ ಇಲಾಖಾ ತಂತ್ರಾಂಶಗಳ ಅನುμÁ್ಠನ ಹಾಗೂ ದತ್ತಾಂಶವನ್ನು ಅತ್ಯಂತ ಸುರಕ್ಷಿತವಾಗಿ ಸಂಗ್ರಹಿಸಿ, ಸಂಸ್ಕರಿಸಿ, ನಿರ್ವಹಿಸುವ ಉದ್ದೇಶದಿಂದ ಇಂತಹ ವಿಶೇಷ ದತ್ತಾಂಶ ಕೇಂದ್ರವನ್ನು ಸ್ಥಾಪಿಸಿ ಯಶಸ್ವಿಯಾಗಿ ಮುನ್ನಡೆಸುತ್ತಿರುವ ದೇಶದ ಮೊದಲ ರಾಜ್ಯ ಪೊಲೀಸ್ ಪಡೆಗಳಲ್ಲಿ ಕರ್ನಾಟಕ ಪೆÇಲೀಸ್ ಕೂಡ ಒಂದಾಗಿದೆ.
ಜಾಗತಿಕ ಮಟ್ಟದ ಭದ್ರತೆ ಮತ್ತು ತಾಂತ್ರಿಕ ನೈಪುಣ್ಯ ಇಲಾಖೆಯ ಅತ್ಯುನ್ನತ ತಾಂತ್ರಿಕ ನೈಪುಣ್ಯ ಹೊಂದಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡವು ಈ ದತ್ತಾಂಶ ಕೇಂದ್ರವನ್ನು ವೃತ್ತಿಪರ ರೀತಿಯಲ್ಲಿ ನಿರ್ವಹಿಸುತ್ತಿದೆ.
ಈ ಕೇಂದ್ರದ ನಿರಂತರ ಮತ್ತು ನಿರ್ವಿಘ್ನ ಕಾರ್ಯಾಚರಣೆಯು ಇಲಾಖೆಯ ಬಲಿಷ್ಠ ಆಂತರಿಕ ತಾಂತ್ರಿಕ ಸಾಮಥ್ರ್ಯವನ್ನು ಪ್ರತಿಬಿಂಬಿಸುತ್ತದೆ. ಈ ಸಾಧನೆಯು ಇಲಾಖೆಯ ಮಾಹಿತಿ ತಂತ್ರಜ್ಞಾನ ಮೂಲಸೌಕರ್ಯ, ಸೈಬರ್ ಭದ್ರತಾ ಕ್ರಮಗಳು ಹಾಗೂ ದತ್ತಾಂಶ ಸಂರಕ್ಷಣೆ ವ್ಯವಸ್ಥೆಗಳು ಜಾಗತಿಕ ಮಟ್ಟದ ಮಾನದಂಡಗಳಿಗೆ ಅನುಗುಣವಾಗಿರುವುದನ್ನು ದೃಢೀಕರಿಸುತ್ತದೆ.
ನಾಗರಿಕ ಕೇಂದ್ರಿತ ಡಿಜಿಟಲ್ ಸೇವೆಗಳು ಕರ್ನಾಟಕ ರಾಜ್ಯ ಪೆÇಲೀಸ್ ಡೇಟಾ ಸೆಂಟರ್‍ನಲ್ಲಿ ಸಾರ್ವಜನಿಕರಿಗೆ ಹಾಗೂ ಇಲಾಖೆಗೆ ಸಂಬಂಧಿಸಿದ ಪ್ರಮುಖ ದತ್ತಾಂಶಗಳನ್ನು ಸುರಕ್ಷಿತವಾಗಿ ಹೋಸ್ಟ್ ಹಾಗೂ ನಿರ್ವಹಣೆ ಮಾಡಲಾಗುತ್ತಿದೆ. ಅವುಗಳಲ್ಲಿ ಪ್ರಮುಖವಾದವುಗಳು.
ಅಪರಾಧ ದಾಖಲೆಗಳು ಮತ್ತು ಪೊಲೀಸ್ ಐಟಿ ವ್ಯವಸ್ಥೆಗಳು ಸಿಸಿಟಿಎನ್‍ಎಸ್ ಮತ್ತು ಐಸಿಜೆಎಸ್ ಎಎಫ್‍ಐಎಸ್ ಸೈಬರ್ ಅಪರಾಧ ಮಾಹಿತಿ ವ್ಯವಸ್ಥೆಗಳು ಕೆಎಸ್‍ಪಿ ಮೊಬೈಲ್ ಆಪ್ ಮತ್ತು ಎಂ-ಸಿಸಿಟಿಎನ್‍ಎಸ್ ಮೊಬೈಲ್ ಆಪ್ ಸ್ಮಾರ್ಟ್ ಇ-ಬೀಟ್ ವ್ಯವಸ್ಥೆ ಈ ಪ್ರಮಾಣೀಕರಣದಿಂದ ಆಗುವ ಪ್ರಮುಖ ಅನುಕೂಲಗಳು.
ISO/IEC 27001 ಪ್ರಮಾಣಪತ್ರವನ್ನು ಪಡೆಯುವುದರಿಂದ ಸೂಕ್ಷ್ಮ ಮಾಹಿತಿಗಳು ಹಾಗೂ ಮಹತ್ವದ ಡಿಜಿಟಲ್ ಮೂಲಸೌಕರ್ಯಗಳ ಗೌಪ್ಯತೆ, ಸಮಗ್ರತೆ ಮತ್ತು ನಿರಂತರ ಲಭ್ಯತೆ ಮತ್ತಷ್ಟು ಬಲಗೊಳ್ಳಲಿದ್ದು, ಸೈಬರ್ ದಾಳಿಗಳು ಹಾಗೂ ಅನಧಿಕೃತ ಪ್ರವೇಶದ ವಿರುದ್ಧ ಬಲವಾದ ರಕ್ಷಣೆ ಸಿಗಲಿದೆ. ಮಾಹಿತಿ ಭದ್ರತೆ, ಸೈಬರ್ ಪ್ರತಿರೋಧ ಸಾಮಥ್ರ್ಯ ಹಾಗೂ ನಾಗರಿಕರ ಮಾಹಿತಿಯ ಸುರಕ್ಷತೆ ಮತ್ತು ಗೌಪ್ಯತೆ ಹೆಚ್ಚಾಗಲಿದೆ.
ದತ್ತಾಂಶ ನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿತನ ಮೂಡಲಿದೆ. ಅಂತರರಾಷ್ಟ್ರೀಯ ಮಟ್ಟದ ಭದ್ರತಾ ಕ್ರಮಗಳು ಮತ್ತು ಉತ್ತಮ ಕಾರ್ಯಪದ್ಧತಿಗಳ ಅನುಸರಣೆ ಸಾಧ್ಯವಾಗುತ್ತದೆ. ವಿಪತ್ತು ಮರುಸ್ಥಾಪನೆ ಮತ್ತು ವ್ಯವಹಾರ ನಿರಂತರತೆ ಸಿದ್ಧತೆ ಬಲಗೊಳ್ಳಲಿದೆ. ಡಿಜಿಟಲ್ ಪೊಲೀಸ್ ಸೇವೆಗಳಲ್ಲಿ ಸಾರ್ವಜನಿಕರ ವಿಶ್ವಾಸ ಮತ್ತು ನಂಬಿಕೆ ವೃದ್ಧಿಯಾಗಲಿದೆ.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರಾದ ಡಾ. ಎಂ.ಎ. ಸಲೀಂ, ಅವರ ಸಮರ್ಥ ಮಾರ್ಗದರ್ಶನದಲ್ಲಿ, ಪೊಲೀಸ್ ಗಣಕ ವಿಭಾಗದ ತಾಂತ್ರಿಕ ತಂಡ, ಡೇಟಾ ಸೆಂಟರ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಮನ್ವಯಿತ ಪರಿಶ್ರಮದಿಂದಾಗಿ ಈ ಐತಿಹಾಸಿಕ ಸಾಧನೆ ಸಾಧ್ಯವಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಶೇ 60 ಕಮಿಷನ್, ಸರಕಾರಿ ನೌಕರರ ಆತ್ಮಹತ್ಯೆ- ಇವು ಸಾಧನೆಯೇ?

ಬೆಂಗಳೂರು: ಮೂರು ವರ್ಷಗಳಲ್ಲಿ ನಮ್ಮ ಸಾಧನೆ ಇಂಥದ್ದೆಂದು ಕಾಂಗ್ರೆಸ್(Congress) ಮುಖಂಡರು ಹೇಳಲಿ ಎಂದು ಬಿಜೆಪಿ (BJP National General Secretary) ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ MLC ಸಿ.ಟಿ. ರವಿ (CT Ravi) ಅವರು ಸವಾಲು ಹಾಕಿದ್ದಾರೆ.
ಅವರು ಇಂದು ಮಾಧ್ಯಮಗಳ ಜೊತೆ ಮಾತನಾಡಿದರು. ಹಗರಣಗಳೇ ನಿಮ್ಮ ಸಾಧನೆಯೇ? ವಾಲ್ಮೀಕಿ ನಿಗಮದ ಹಗರಣದಲ್ಲಿ 187 ಕೋಟಿ ರೂ. ಲೂಟಿ ಹೊಡೆದು ನಮ್ಮ ಒಬ್ಬ ಸಚಿವ ಜೈಲಿಗೆ ಹೋದ ಎಂಬುದು ಸಾಧನೆಯೇ ಎಂದು ಪ್ರಶ್ನಿಸಿದರು. ಎಸ್.ಇ.ಪಿ., ಟಿಎಸ್‍ಪಿ ಹಣ ದುರುಪಯೋಗ ಸಾಧನೆಯೇ ಎಂದು ಕೇಳಿದರು.
ಸಾಧನೆಯ ಕಾರಣಕ್ಕಾಗಿ ಕೆಎಸ್‍ಆರ್‍ಟಿಸಿ ನೌಕರರು ಚಳವಳಿಗೆ ಕರೆ ಕೊಟ್ಟಿದ್ದಾರಾ ಎಂದು ಪ್ರಶ್ನೆಯನ್ನು ಮುಂದಿಟ್ಟರು. 3 ಗಂಟೆಯೂ ರೈತರ ಪಂಪ್‍ಸೆಟ್‍ಗಳಿಗೆ 3 ಫೇಸ್ ಕರೆಂಟ್ ಕೊಡುತ್ತಿಲ್ಲ. ಇದು ಸಾಧನೆಯೇ? 3 ವರ್ಷದಲ್ಲಿ ಕರ್ನಾಟಕದ ಜನರು ಹೆಮ್ಮೆ ಪಡುವಂತೆ, ತಲೆಯೆತ್ತಿ ನಿಲ್ಲುವಂತೆ, ಇಡೀ ದೇಶದಲ್ಲಿ ಹೇಳಿಕೊಂಡು ಓಡಾಡುವಂತೆ ಯಾವ ಕೆಲಸ ಮಾಡಿದ್ದೀರಿ ಎಂದು ಪ್ರಶ್ನಿಸಿದರು.
ಶೇ 60 ಕಮಿಷನ್- ಅದು ಸಾಧನೆಯೇ? ಸರಕಾರಿ ನೌಕರರ ಆತ್ಮಹತ್ಯೆ- ಅದು ಸಾಧನೆಯೇ? ಎಂದ ಅವರು, ಗ್ಯಾರಂಟಿ ಬಗ್ಗೆ ಮಾತನಾಡುತ್ತಾರೆ. ಮುಖ್ಯಮಂತ್ರಿ ಕುರ್ಚಿಯಲ್ಲಿ ಎಷ್ಟು ದಿನ ಕುಳಿತಿರುತ್ತಾರೋ ಎಂಬ ಗ್ಯಾರಂಟಿ ಸಿದ್ದರಾಮಯ್ಯನವರಿಗೇ ಇಲ್ಲ ಎಂದು ವ್ಯಂಗ್ಯವಾಗಿ ತಿಳಿಸಿದರು. ಅವರ ಕುರ್ಚಿ ಬಗ್ಗೆ ಗ್ಯಾರಂಟಿ ಇಲ್ಲದ ಅವರು, ಇನ್ಯಾವ ಗ್ಯಾರಂಟಿ ಬಗ್ಗೆ ಮಾತನಾಡುತ್ತಾರೆ ಎಂದು ಕೇಳಿದರು.

ಹೆಮ್ಮೆ ಪಟ್ಟುಕೊಳ್ಳುವ ಸಾಧನೆ ಏನಿದೆ?
ಕರ್ನಾಟಕ ರಾಜ್ಯದ ಸಮಗ್ರ ಸಾಲ 10 ಲಕ್ಷ ಕೋಟಿ ರೂಪಾಯಿ. ಸಾಲ ಮಾಡದೇ ಗ್ಯಾರಂಟಿ ಯೋಜನೆ ಕೊಡುವ ಸ್ಥಿತಿಯಲ್ಲಿ ಇಲ್ಲ. ಸಾಧನೆ ಯಾವುದು ಎಂದು ಪ್ರಶ್ನೆ ಮಾಡಿದರು. ಹೆಮ್ಮೆ ಪಟ್ಟುಕೊಳ್ಳುವ ಸಾಧನೆ ಏನಿದೆ ಎಂದು ಕೇಳಿದರು.
ಪೆಟ್ರೋಲ್- ಡೀಸೆಲ್ ಮೇಲೆ ಕರ್ನಾಟಕ ಸರಕಾರ ಹಾಕಿದ ಸೆಸ್ ಜಾಸ್ತಿಯೇ ಅಥವಾ ಕೇಂದ್ರ ಸರಕಾರ ಹಾಕಿದ ಸೆಸ್ ಹೆಚ್ಚೇ ಎಂದು ಪ್ರಶ್ನಿಸಿದರು. ಕರ್ನಾಟಕ ಸರಕಾರ ಪೆಟ್ರೋಲ್- ಡೀಸೆಲ್ ಮೇಲೆ ಮೂರು ಬಾರಿ ಸೆಸ್ ಹಾಕಿದೆ ಎಂದು ಟೀಕಿಸಿದರು. ಕೇಂದ್ರ ಸರಕಾರ ಬೆಲೆ ಇಳಿಸಿದ ಮೇಲೂ ಸೆಸ್ ಹಾಕಿದ್ದು ಯಾಕೆ ಎಂದು ಕೇಳಿದರು. ಸೆಸ್ ಇಳಿಸಿ; ನಿಮ್ಮ ತೆರಿಗೆ ಹೆಚ್ಚೇ ಕೇಂದ್ರ ಸರಕಾರದ್ದು ಹೆಚ್ಚು ತೆರಿಗೆಯೇ ಎಂಬ ಚರ್ಚೆ ಆಗಲಿ ಎಂದು ಒತ್ತಾಯಿಸಿದರು.

ಉಪ ಚುನಾವಣೆಯಲ್ಲಿ ಜನಾದೇಶ ಖರೀದಿ
ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಉಪ ಚುನಾವಣೆಯ ಗೆಲುವಿನ ಮರ್ಮ ಏನೆಂದು ಖಾಸಗಿಯಾಗಿ ಕೇಳಿದರೆ ಕಾಂಗ್ರೆಸ್ಸಿನವರೇ ಹೇಳುತ್ತಾರೆ. ಉಪ ಚುನಾವಣೆಯಲ್ಲಿ ಆಡಳಿತ ಪಕ್ಷವು ತನ್ನೆಲ್ಲ ಸಂಪತ್ತು, ಸಂಪನ್ಮೂಲ ಬಳಸಿ ಜನಾದೇಶವನ್ನು ಖರೀದಿ ಮಾಡುತ್ತದೆ. ಗುಂಡ್ಲುಪೇಟೆ, ನಂಜನಗೂಡು ಉಪ ಚುನಾವಣೆಯಲ್ಲಿ ಗೆದ್ದಿದ್ದರು. 5ನೇ ತಿಂಗಳಿಗೆ ಸಾರ್ವತ್ರಿಕ ಚುನಾವಣೆ ಆಗಿ ಸೋತರು. ಇದಕ್ಕೇನು ಹೇಳುತ್ತೀರಿ? ಗುಂಡ್ಲುಪೇಟೆ, ನಂಜನಗೂಡು ಮಾತ್ರವಲ್ಲ; ಪಕ್ಕದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಖ್ಯಮಂತ್ರಿಗಳೂ ಸೋತರು. ಇದಕ್ಕೆ ಏನು ಹೇಳುವಿರಿ ಎಂದು ಕೇಳಿದರು.