ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಅಗ್ರಿ ಇನೋವೇಶನ್ ಸೆಂಟರ್ ವತಿಯಿಂದ “Agri Startup Conclave 2.0 – Innovate, Sustain & Scale-2026” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮೇ 26ರಂದು ಬೆಳಿಗ್ಗೆ 9:00 ಗಂಟೆಯಿಂದ ಸಂಜೆ 4:00 ಗಂಟೆಯವರೆಗೆ (GKVK) ಕೃಷಿ ವಿಶ್ವವಿದ್ಯಾಲಯದ ಉತ್ತರ ಬ್ಲಾಕ್ ಸಭಾಂಗಣದಲ್ಲಿ ಈ ಕಾನ್‍ಕ್ಲೇವ್ (Conclave) ನಡೆಯಲಿದೆ.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ಅವರು ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಸ್.ವಿ. ಸುರೇಶ ಅವರು ವಹಿಸಲಿದ್ದಾರೆ. ಈ ಕಾನ್‍ಕ್ಲೇವ್ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಪ್ರಮುಖರಾದ ಅಗ್ರಿ ಸ್ಟಾರ್ಟ್ ಅಪ್‍ಗಳು, ಉದ್ಯಮಿಗಳು, ಸಂಶೋಧಕರು, ಹೂಡಿಕೆದಾರರು, ವಿದ್ಯಾರ್ಥಿಗಳು, ಕೈಗಾರಿಕೆಗಳು ಹಾಗೂ ರೈತ ಉತ್ಪಾದಕರ ಸಂಘಟನೆಗಳು ಈ ವೇದಿಕೆಯಲ್ಲಿ ಒಗ್ಗೂಡಲಿವೆ.
ಭಾರತೀಯ ಕೃಷಿಯ ಭವಿಷ್ಯವನ್ನು ರೂಪಿಸುತ್ತಿರುವ ಹೊಸ ವ್ಯವಹಾರದ ಅವಕಾಶಗಳು ಹಾಗೂ ನವೀನ ತಂತ್ರಜ್ಞಾನಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ.
ಸುಸ್ಥಿರ ಅಗ್ರಿ ಉದ್ಯಮ ನಿರ್ಮಾಣ, ಕಾರ್ಬನ್ ಮಾರುಕಟ್ಟೆ ಅವಕಾಶಗಳು ಮತ್ತು ಜೈವಿಕ ಇನ್‍ಪುಟ್‍ಗಳ ನವೀನತೆಗಳ ಕುರಿತು ತಜ್ಞರಿಂದ ತಾಂತ್ರಿಕ ಅಧಿವೇಶನಗಳು ನಡೆಯಲಿವೆ.
ಪ್ರಮುಖ ಸ್ಟಾರ್ಟ್ ಅಪ್‍ಗಳು, ಹೂಡಿಕೆದಾರರು, ಕೈಗಾರಿಕೆಗಳು ಮತ್ತು ಇಕೋಸಿಸ್ಟಮ್ ಭಾಗೀದಾರರೊಂದಿಗೆ ನೆಟ್‍ವಕಿರ್ಂಗ್, ಸಹಭಾಗಿತ್ವ ಹಾಗೂ ನೇರ ಸಂವಾದ ನಡೆಸಲು ಈ ಕಾರ್ಯಕ್ರಮವು ಉತ್ತಮ ಅವಕಾಶವನ್ನು ಒದಗಿಸುತ್ತದೆ.
ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಮತ್ತು ಆಸಕ್ತರಿಗೆ ಪ್ರವೇಶ ಉಚಿತವಾಗಿದ್ದು, ಆದರೆ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.
ಹೆಚ್ಚಿನ ಮಾಹಿತಿ ಮತ್ತು ನೋಂದಣಿಗಾಗಿ ಮೊಬೈಲ್ ಸಂಖ್ಯೆ: 9739055445 / 9538164928 / 8431332653 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಮೇ 23 ರಂದು ವಿನೂತನ ‘ರೈತ ಸಂತೆ’
ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ವಿಶೇಷ ಹಾಗೂ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾದ “ರೈತ ಸಂತೆ” ಈ ಬಾರಿ ಮತ್ತಷ್ಟು ವಿನೂತನ ವಿಷಯಗಳೊಂದಿಗೆ ಸಾರ್ವಜನಿಕರ ಆಕರ್ಷಣೆಗೆ ಸಜ್ಜಾಗಿದೆ. ಮೇ 23 ರಂದು ಬೆಳಿಗ್ಗೆ 7.00 ಗಂಟೆಯಿಂದ ಸಂಜೆ 4.00 ಗಂಟೆಯವರೆಗೆ ಜಿ.ಕೆ.ವಿಕೆ ಆವರಣದ ಗಣಪತಿ ದೇವಸ್ಥಾನದ ಹತ್ತಿರ ವಿಶ್ವವಿದ್ಯಾನಿಲಯದ ಉತ್ಪನ್ನಗಳ ಈ “ರೈತ ಸಂತೆ”ಯನ್ನು ಆಯೋಜಿಸಲಾಗಿದೆ.
ಈ ಬಾರಿಯ ರೈತ ಸಂತೆಯ ಪ್ರಮುಖ ಆಕರ್ಷಣೆಯಾಗಿ ರೈತರೇ ನೇರವಾಗಿ ಬೆಳೆದ ತಾಜಾ ಹಲಸು, ದ್ರಾಕ್ಷಿ, ಕಲ್ಲಂಗಡಿ, ಕರಬೂಜ ಹಣ್ಣುಗಳು ಹಾಗೂ ವಿವಿಧ ತರಕಾರಿಗಳು ಲಭ್ಯವಿರಲಿವೆ. ಗುಣಮಟ್ಟದ ರಾಜಮುಡಿ ಅಕ್ಕಿ, ಮೌಲ್ಯವರ್ಧಿತ ಸಿರಿಧಾನ್ಯ ಪದಾರ್ಥಗಳು ಹಾಗೂ ವಿವಿಧ ಸಾವಯವ ಉತ್ಪನ್ನಗಳು. ತಾಜಾ ಅಣಬೆ ಹಾಗೂ ಅಲಂಕಾರಿಕ ಮೀನು ಮರಿಗಳು. ಸುಗಂಧ ಮತ್ತು ಔಷಧೀಯ ಸಸ್ಯಗಳು, ಅಲಂಕಾರಿಕ ಗಿಡಗಳು, ಜೈವಿಕ ಗೊಬ್ಬರಗಳು ಹಾಗೂ ಎರೆಹುಳು ಗೊಬ್ಬರ ಲಭ್ಯವಿರಲಿದೆ.
ಕೃಷಿ ಯಂತ್ರೋಪಕರಣಗಳು, ಜೈವಿಕ ಕೀಟನಾಶಕಗಳು, ವಿಶ್ವವಿದ್ಯಾನಿಲಯದ ಕೃಷಿ ಪ್ರಕಟಣೆಗಳು ಹಾಗೂ ಸಮಗ್ರ ಕೃಷಿ ಮಾಹಿತಿ. ಅಡಿಕೆ ಉತ್ಪನ್ನಗಳ ಕರಕುಶಲ ವಸ್ತುಗಳು, ರೇμÉ್ಮ ಕೃಷಿಯ ಉಪ ಉತ್ಪನ್ನಗಳು, ಜೇನು ಕೃಷಿ ಮತ್ತು ಪಶು ಸಂಗೋಪನೆಗೆ ಸಂಬಂಧಿಸಿದ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಇರಲಿದೆ.
ಸಾರ್ವಜನಿಕರು ಹಾಗೂ ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ವಿನೂತನ ಸಂತೆಯ ಸದುಪಯೋಗ ಪಡೆದುಕೊಳ್ಳಬೇಕಾಗಿ ಕೃಷಿ ವಿಶ್ವವಿದ್ಯಾನಿಲಯದ ಹಿರಿಯ ವಾರ್ತಾತಜ್ಞರು ಮತ್ತು ಮುಖ್ಯಸ್ಥರಾದ ಡಾ. ಕೆ.ಪಿ. ರಘುಪ್ರಸಾದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
