ಕೃಷಿ ವಿ ವಿ ಡೀನ್ ಡಾ. ಎನ್.ಬಿ. ಪ್ರಕಾಶ್‍ಗೆ ರಾಷ್ಟ್ರೀಯ ಕೃಷಿ ವಿಜ್ಞಾನ ಅಕಾಡೆಮಿ ಪ್ರತಿಷ್ಠಿತ ಫೆಲೋ ಪ್ರಶಸ್ತಿ 

Bengaluru : ಕೃಷಿ ವಿಶ್ವವಿದ್ಯಾಲಯ, (GKVK) ಬೆಂಗಳೂರಿನ ಕೃಷಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಹಾಗೂ ಡೀನ್ (ಕೃಷಿ) (Deen) ಆಗಿರುವ ಡಾ. ಎನ್.ಬಿ. ಪ್ರಕಾಶ್ (Dr.N.B.Prakash) ಅವರಿಗೆ ನವದೆಹಲಿಯ ರಾಷ್ಟ್ರೀಯ ಕೃಷಿ ವಿಜ್ಞಾನ ಅಕಾಡೆಮಿಯ (NAAS) ಪ್ರತಿಷ್ಠಿತ ‘ಫೆಲೋ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ.

ಜೂನ್ 05 ರಂದು ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಭವ್ಯ ಸಮಾರಂಭದಲ್ಲಿ, ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ (ಐಸಿಎಆರ್) ಮಹಾ ನಿರ್ದೇಶಕರಾದ ಡಾ. ಮಂಗಿಲಾಲ್ ಜಾಟ್ ಅವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಈ ಅತ್ಯುನ್ನತ ಫೆಲೋ ಪ್ರಶಸ್ತಿಯು ಜನವರಿ 01, 2026 ರಿಂದ ಜಾರಿಗೆ ಬರಲಿದೆ. 21 ವರ್ಷಗಳ ನಂತರ ಒಲಿದ ಐತಿಹಾಸಿಕ ಗೌರವವಾಗಿದೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಇತಿಹಾಸದಲ್ಲಿ ಇದೊಂದು ಅತ್ಯಂತ ಅಪರೂಪದ ಸಾಧನೆಯಾಗಿದೆ. ಈ ಹಿಂದೆ 2004 ರಲ್ಲಿ ವಿಶ್ವವಿದ್ಯಾಲಯದ ವಿಜ್ಞಾನಿಯೊಬ್ಬರು ಈ ಪ್ರತಿಷ್ಠಿತ ಗೌರವಕ್ಕೆ ಪಾತ್ರರಾಗಿದ್ದರು. ಇದೀಗ ಬರೋಬ್ಬರಿ 21 ವರ್ಷಗಳ ಸುದೀರ್ಘ ಅವಧಿಯ ನಂತರ ಡಾ. ಎನ್.ಬಿ.  ಪ್ರಕಾಶ್ ಅವರು ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದು, ವಿಶ್ವವಿದ್ಯಾಲಯಕ್ಕೆ ಹಾಗೂ ಇಡೀ ಕರ್ನಾಟಕದ ಕೃಷಿ ಸಂಶೋಧನಾ ವಲಯಕ್ಕೆ ಹೆಮ್ಮೆಯ ವಿಷಯವಾಗಿದೆ.

ಡಾ. ಎನ್.ಬಿ. ಪ್ರಕಾಶ್ ಅವರು ಕೃಷಿ ಸಂಶೋಧನಾ ಕ್ಷೇತ್ರದಲ್ಲಿ 31 ವರ್ಷಗಳಿಗೂ ಹೆಚ್ಚು ಕಾಲ ಸುದೀರ್ಘ ಹಾಗೂ ಉತ್ಕøಷ್ಟ ಸೇವೆ ಸಲ್ಲಿಸಿದ್ದಾರೆ. ಅವರ ಈ ಮಹತ್ವದ ಕೊಡುಗೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ.

ಡಾ. ಎನ್.ಬಿ. ಪ್ರಕಾಶ್ ಅವರ ಪ್ರಮುಖ ಸಾಧನೆಗಳು:
ಮಣ್ಣಿನ ಫಲವತ್ತತೆಯ ನಿರ್ವಹಣೆ ಮತ್ತು ಸುಸ್ಥಿರ ಕೃಷಿ ಕ್ಷೇತ್ರಗಳಲ್ಲಿ ಅವರು ಮಹತ್ವದ ಸಂಶೋಧನೆ ನಡೆಸಿದ್ದಾರೆ. ಬೆಳೆಗಳಲ್ಲಿ ಸಿಲಿಕಾನಿನ ಪೋಷಣೆ ಹಾಗೂ ಪೋಷಕಾಂಶಗಳ ಮರುಬಳಕೆಯ ಕುರಿತು ಗಣನೀಯ ಕಾರ್ಯ ಚಟುವಟಿಕೆಗಳನ್ನು ಕೈಗೊಂಡಿದ್ದಾರೆ. ಕೈಗಾರಿಕಾ ಮತ್ತು ಕೃಷಿ ತ್ಯಾಜ್ಯಗಳ ಮರುಬಳಕೆ ಹಾಗೂ ಜಲಾನಯನ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಈ ಎಲ್ಲಾ ಸಂಶೋಧನಾ ಕಾರ್ಯಗಳು ದೇಶದಲ್ಲಿ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ಹವಾಮಾನ ವೈಪರೀತ್ಯಗಳನ್ನು ತಡೆದುಕೊಳ್ಳಬಲ್ಲ ಸ್ಥಿತಿಸ್ಥಾಪಕ ಕೃಷಿ ಪದ್ಧತಿಗಳನ್ನು ಉತ್ತೇಜಿಸಲು ಗಣನೀಯವಾಗಿ ಕೊಡುಗೆ ನೀಡಿವೆ ಎಂದು ಪ್ರಕಟಣೆ ತಿಳಿಸಿದೆ.

Hot this week

ಬಾಲಕನ ಶ್ವಾಸಕೋಶದಿಂದ ಪಿನ್ ಹೊರ ತೆಗೆದು ಜೀವ ಉಳಿಸಿದ ವೈದ್ಯರು

ಬೆಂಗಳೂರು: ಭಾರತದಲ್ಲಿ ಅತಿಹೆಚ್ಚು ಆಸ್ತಮಾ ರೋಗಿಗಳು ಇರುವ ನಗರಗಳಲ್ಲಿ ಬೆಂಗಳೂರು ಕೂಡಾ...

ಅರ್ಥರ್ ಓಸ್ ಬರ್ನ್ ಅವರ ನಂಬಲಸಾಧ್ಯವಾದ ಸಾಯಿಬಾಬಾ

ಹಾಸನ:ಗೊರೂರು ಅನಂತ ರಾಜು(Gorur AnanthaRaju) ಯಾರೊಡನೆಯೂ ಮಾತನಾಡದೆ, ದಾಪುಗಾಲು ಹಾಕುತ್ತಾ ರಸ್ತೆಯಲ್ಲಿ...

ಶ್ರೀಲಂಕಾದ ಉಪ ಹೈಕಮಿಷನರ್-ರಾಜ್ಯಪಾಲರ ಸೌಹಾರ್ದಯುತ ಭೇಟಿ

ಶ್ರೀ ಡಾ. ಗಣೇಶನಾಥನ್ ಗೀತೀಶ್ವರನ್,(Shri Dr. Ganesanathan Geathiswaran) ಶ್ರೀಲಂಕಾದ ಉಪ...

ನಿಯೋ ಫ್ರೆಶ್ ಸೂಪರ್ ಮಾರ್ಕೆಟ್‌ಗೆ ನಂಜಾವಧೂತ ಮಹಾಸ್ವಾಮೀಜಿ ಚಾಲನೆ

ಬೆಂಗಳೂರು: ಗ್ರಾಹಕರಿಗೆ ಗುಣಮಟ್ಟದ ದಿನಸಿ ವಸ್ತುಗಳು, ತಾಜಾ ಹಣ್ಣು–ತರಕಾರಿಗಳು ಹಾಗೂ ದಿನಬಳಕೆ...

ನಿತ್ಯ ಪಂಚಾಂಗ 09.06.2026 TUESDAY.ಮಂಗಳವಾರ

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 09.06.2026 TUESDAY.ಮಂಗಳವಾರ*ಸಂವತ್ಸರ:ಪರಾಭವ SAMVATSARA : PARABHAVA. ಆಯಣ: ಉತ್ತರಾಯಣ AYANA: UTTARAYANA. ಋತು:...

Topics

ಲಲಿತಕಲಾ ಅಕಾಡೆಮಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಚಿತ್ರಕಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯು...

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್: ಅರ್ಜಿ ಆಹ್ವಾನ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ (Information Dept.) ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ...

ನಿತ್ಯ ಪಂಚಾಂಗ 07.06.2026 SUNDAY.ಭಾನುವಾರ

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 07.06.2026 SUNDAY.ಭಾನುವಾರ*ಸಂವತ್ಸರ: ಪರಾಭವ SAMVATSARA : PARABHAVA. ಆಯಣ: ಉತ್ತರಾಯಣ AYANA:...

Related Articles