BENGALURU : ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ (Thawarchand Gehlot) ಅವರು ಲೋಕಭವನದಲ್ಲಿ ಭಾರತದ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ (APJ Abdul Kalam) ಅವರ ಆತ್ಮಚರಿತ್ರೆ ‘Wings of Fire’ ಕೃತಿಯ ಕನ್ನಡ ಅನುವಾದ ‘ಅಗ್ನಿಯ ರೆಕ್ಕೆಗಳು’ ಪುಸ್ತಕವನ್ನು ಬಿಡುಗಡೆ ಮಾಡಿದರು.
ಶ್ರೀ ಕೆ. ಜಯಪ್ರಕಾಶ್ ರಾವ್ (K.Jayaprakash) ಅವರು ಕನ್ನಡಕ್ಕೆ ಅನುವಾದಿಸಿರುವ ಈ ಕೃತಿ, ಡಾ. ಕಲಾಂ ಅವರ ಜೀವನ ಸಾಧನೆಗಳು, (AJP Abdul Kalam Life History) ಚಿಂತನೆಗಳು ಮತ್ತು ರಾಷ್ಟ್ರ ನಿರ್ಮಾಣದ ಕುರಿತಾದ ಅವರ ದೃಷ್ಟಿಕೋನವನ್ನು ಕನ್ನಡ ಓದುಗರಿಗೆ ತಲುಪಿಸುವ ಮಹತ್ವದ ಪ್ರಯತ್ನವಾಗಿದೆ.
ಈ ಸಂದರ್ಭದಲ್ಲಿ ರಾಜ್ಯಪಾಲರು, “ಜನರ ರಾಷ್ಟ್ರಪತಿ” ಎಂದು ಖ್ಯಾತರಾಗಿದ್ದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ತಮ್ಮ ಸರಳತೆ, ವೈಜ್ಞಾನಿಕ ಸಾಧನೆಗಳು ಹಾಗೂ ರಾಷ್ಟ್ರಸೇವೆಯ ಮೂಲಕ ಇಂದಿಗೂ ಯುವಜನತೆಗೆ ಸ್ಫೂರ್ತಿಯಾಗಿದ್ದಾರೆ. ಅವರಂತಹ ಮಹಾನ್ ವ್ಯಕ್ತಿಯ ಜೀವನಾಧಾರಿತ ಕೃತಿಯನ್ನು ಕನ್ನಡದಲ್ಲಿ ಪ್ರಕಟಿಸುವುದು ರಾಜ್ಯದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ನೀಡಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಾಸನ್ ಪಬ್ಲಿಕೇಷನ್ಸ್‌ನ ರಘುನಾಥ್ ಹಾಗೂ ಶ್ರೀನಿವಾಸ್, ಎಚ್ಎಎಲ್ನ ಮಾಜಿ ಮುಖ್ಯ ವ್ಯವಸ್ಥಾಪಕರಾದ ಕೃಷ್ಣರಾವ್, ಕೃತಿಯ ಅನುವಾದಕರಾದ ಹಾಗೂ ಎಡಿಎ ಮತ್ತು ಡಿಆರ್‌ಡಿಒ ಸಂಸ್ಥೆಗಳ ಮಾಜಿ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿದ್ದ ಕೆ. ಜಯಪ್ರಕಾಶ್ ರಾವ್ ಸೇರಿದಂತೆ ಅನುವಾದಕರು, ಸಾಹಿತ್ಯಾಸಕ್ತರು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

