ಕರ್ನಾಟಕ ರಾಜ್ಯ ಪೊಲೀಸ್ (Karnataka State Police) ಇಲಾಖೆಯ ತಾಂತ್ರಿಕ ಸಾಮಥ್ರ್ಯಕ್ಕೆ ಅಂತರರಾಷ್ಟ್ರೀಯ (International) ಮಟ್ಟದ ದೊಡ್ಡ ಮನ್ನಣೆ ಸಿಕ್ಕಿದೆ. ರಾಜ್ಯ ಪೊಲೀಸ್ ಡೇಟಾ ಸೆಂಟರ್ (ದತ್ತಾಂಶ ಕೇಂದ್ರ) ತನ್ನ ಅತ್ಯುತ್ತಮ ಮಾಹಿತಿ ಭದ್ರತಾ ನಿರ್ವಹಣಾ ವ್ಯವಸ್ಥೆಗಾಗಿ ಪ್ರತಿಷ್ಠಿತ ISO/IEC 27001 ಪ್ರಮಾಣಪತ್ರ (Certificate) ಲಭಿಸಿದೆ.
ವಿವಿಧ ಇಲಾಖಾ ತಂತ್ರಾಂಶಗಳ ಅನುμÁ್ಠನ ಹಾಗೂ ದತ್ತಾಂಶವನ್ನು ಅತ್ಯಂತ ಸುರಕ್ಷಿತವಾಗಿ ಸಂಗ್ರಹಿಸಿ, ಸಂಸ್ಕರಿಸಿ, ನಿರ್ವಹಿಸುವ ಉದ್ದೇಶದಿಂದ ಇಂತಹ ವಿಶೇಷ ದತ್ತಾಂಶ ಕೇಂದ್ರವನ್ನು ಸ್ಥಾಪಿಸಿ ಯಶಸ್ವಿಯಾಗಿ ಮುನ್ನಡೆಸುತ್ತಿರುವ ದೇಶದ ಮೊದಲ ರಾಜ್ಯ ಪೊಲೀಸ್ ಪಡೆಗಳಲ್ಲಿ ಕರ್ನಾಟಕ ಪೆÇಲೀಸ್ ಕೂಡ ಒಂದಾಗಿದೆ.
ಜಾಗತಿಕ ಮಟ್ಟದ ಭದ್ರತೆ ಮತ್ತು ತಾಂತ್ರಿಕ ನೈಪುಣ್ಯ ಇಲಾಖೆಯ ಅತ್ಯುನ್ನತ ತಾಂತ್ರಿಕ ನೈಪುಣ್ಯ ಹೊಂದಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡವು ಈ ದತ್ತಾಂಶ ಕೇಂದ್ರವನ್ನು ವೃತ್ತಿಪರ ರೀತಿಯಲ್ಲಿ ನಿರ್ವಹಿಸುತ್ತಿದೆ.
ಈ ಕೇಂದ್ರದ ನಿರಂತರ ಮತ್ತು ನಿರ್ವಿಘ್ನ ಕಾರ್ಯಾಚರಣೆಯು ಇಲಾಖೆಯ ಬಲಿಷ್ಠ ಆಂತರಿಕ ತಾಂತ್ರಿಕ ಸಾಮಥ್ರ್ಯವನ್ನು ಪ್ರತಿಬಿಂಬಿಸುತ್ತದೆ. ಈ ಸಾಧನೆಯು ಇಲಾಖೆಯ ಮಾಹಿತಿ ತಂತ್ರಜ್ಞಾನ ಮೂಲಸೌಕರ್ಯ, ಸೈಬರ್ ಭದ್ರತಾ ಕ್ರಮಗಳು ಹಾಗೂ ದತ್ತಾಂಶ ಸಂರಕ್ಷಣೆ ವ್ಯವಸ್ಥೆಗಳು ಜಾಗತಿಕ ಮಟ್ಟದ ಮಾನದಂಡಗಳಿಗೆ ಅನುಗುಣವಾಗಿರುವುದನ್ನು ದೃಢೀಕರಿಸುತ್ತದೆ.
ನಾಗರಿಕ ಕೇಂದ್ರಿತ ಡಿಜಿಟಲ್ ಸೇವೆಗಳು ಕರ್ನಾಟಕ ರಾಜ್ಯ ಪೆÇಲೀಸ್ ಡೇಟಾ ಸೆಂಟರ್ನಲ್ಲಿ ಸಾರ್ವಜನಿಕರಿಗೆ ಹಾಗೂ ಇಲಾಖೆಗೆ ಸಂಬಂಧಿಸಿದ ಪ್ರಮುಖ ದತ್ತಾಂಶಗಳನ್ನು ಸುರಕ್ಷಿತವಾಗಿ ಹೋಸ್ಟ್ ಹಾಗೂ ನಿರ್ವಹಣೆ ಮಾಡಲಾಗುತ್ತಿದೆ. ಅವುಗಳಲ್ಲಿ ಪ್ರಮುಖವಾದವುಗಳು.
ಅಪರಾಧ ದಾಖಲೆಗಳು ಮತ್ತು ಪೊಲೀಸ್ ಐಟಿ ವ್ಯವಸ್ಥೆಗಳು ಸಿಸಿಟಿಎನ್ಎಸ್ ಮತ್ತು ಐಸಿಜೆಎಸ್ ಎಎಫ್ಐಎಸ್ ಸೈಬರ್ ಅಪರಾಧ ಮಾಹಿತಿ ವ್ಯವಸ್ಥೆಗಳು ಕೆಎಸ್ಪಿ ಮೊಬೈಲ್ ಆಪ್ ಮತ್ತು ಎಂ-ಸಿಸಿಟಿಎನ್ಎಸ್ ಮೊಬೈಲ್ ಆಪ್ ಸ್ಮಾರ್ಟ್ ಇ-ಬೀಟ್ ವ್ಯವಸ್ಥೆ ಈ ಪ್ರಮಾಣೀಕರಣದಿಂದ ಆಗುವ ಪ್ರಮುಖ ಅನುಕೂಲಗಳು.
ISO/IEC 27001 ಪ್ರಮಾಣಪತ್ರವನ್ನು ಪಡೆಯುವುದರಿಂದ ಸೂಕ್ಷ್ಮ ಮಾಹಿತಿಗಳು ಹಾಗೂ ಮಹತ್ವದ ಡಿಜಿಟಲ್ ಮೂಲಸೌಕರ್ಯಗಳ ಗೌಪ್ಯತೆ, ಸಮಗ್ರತೆ ಮತ್ತು ನಿರಂತರ ಲಭ್ಯತೆ ಮತ್ತಷ್ಟು ಬಲಗೊಳ್ಳಲಿದ್ದು, ಸೈಬರ್ ದಾಳಿಗಳು ಹಾಗೂ ಅನಧಿಕೃತ ಪ್ರವೇಶದ ವಿರುದ್ಧ ಬಲವಾದ ರಕ್ಷಣೆ ಸಿಗಲಿದೆ. ಮಾಹಿತಿ ಭದ್ರತೆ, ಸೈಬರ್ ಪ್ರತಿರೋಧ ಸಾಮಥ್ರ್ಯ ಹಾಗೂ ನಾಗರಿಕರ ಮಾಹಿತಿಯ ಸುರಕ್ಷತೆ ಮತ್ತು ಗೌಪ್ಯತೆ ಹೆಚ್ಚಾಗಲಿದೆ.
ದತ್ತಾಂಶ ನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿತನ ಮೂಡಲಿದೆ. ಅಂತರರಾಷ್ಟ್ರೀಯ ಮಟ್ಟದ ಭದ್ರತಾ ಕ್ರಮಗಳು ಮತ್ತು ಉತ್ತಮ ಕಾರ್ಯಪದ್ಧತಿಗಳ ಅನುಸರಣೆ ಸಾಧ್ಯವಾಗುತ್ತದೆ. ವಿಪತ್ತು ಮರುಸ್ಥಾಪನೆ ಮತ್ತು ವ್ಯವಹಾರ ನಿರಂತರತೆ ಸಿದ್ಧತೆ ಬಲಗೊಳ್ಳಲಿದೆ. ಡಿಜಿಟಲ್ ಪೊಲೀಸ್ ಸೇವೆಗಳಲ್ಲಿ ಸಾರ್ವಜನಿಕರ ವಿಶ್ವಾಸ ಮತ್ತು ನಂಬಿಕೆ ವೃದ್ಧಿಯಾಗಲಿದೆ.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರಾದ ಡಾ. ಎಂ.ಎ. ಸಲೀಂ, ಅವರ ಸಮರ್ಥ ಮಾರ್ಗದರ್ಶನದಲ್ಲಿ, ಪೊಲೀಸ್ ಗಣಕ ವಿಭಾಗದ ತಾಂತ್ರಿಕ ತಂಡ, ಡೇಟಾ ಸೆಂಟರ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಮನ್ವಯಿತ ಪರಿಶ್ರಮದಿಂದಾಗಿ ಈ ಐತಿಹಾಸಿಕ ಸಾಧನೆ ಸಾಧ್ಯವಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

