Home Blog Page 83

ಬೆಂಗಳೂರು ನಗರ ವಿಶ್ವವಿದ್ಯಾಲಯದ 4ನೇ ಘಟಿಕೋತ್ಸವ: ರಾಜ್ಯಪಾಲರಿಂದ ಕಿವಿಮಾತು

“ವೈಯಕ್ತಿಕ ಜೀವನದ ಜೊತೆಗೆ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಮುಂದಾಗಿ”
ಬೆಂಗಳೂರು 11.06.2025: “ವಿದ್ಯಾವಂತ ಯುವಕರು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಬಹುದು. ನೀವು ಯಾವುದೇ ಕ್ಷೇತ್ರಕ್ಕೆ ಹೋದರೂ – ಅದು ವಿಜ್ಞಾನ ಕ್ಷೇತ್ರವಾಗಿರಲಿ, ತಂತ್ರಜ್ಞಾನ ಕ್ಷೇತ್ರವಾಗಿರಲಿ, ವ್ಯವಹಾರ, ಕಲೆ ಅಥವಾ ಸಮಾಜ ಸೇವೆಯ ಕ್ಷೇತ್ರವಾಗಿರಲಿ, ನಿಮ್ಮ ಪ್ರಯತ್ನಗಳಿಂದ ದೇಶವು ಪ್ರಗತಿ ಸಾಧಿಸುತ್ತದೆ” ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟತ್ ಅವರು ಹೇಳಿದರು.

ಬೆಂಗಳೂರಿನಲ್ಲಿ ನಡೆದ ಬೆಂಗಳೂರು ನಗರ ವಿಶ್ವವಿದ್ಯಾಲಯದ 4 ನೇ ಘಟಿಕೋತ್ಸವದ ಅಧ್ಯಕ್ಷತೆವಹಿಸಿ ಅವರು ಮತಾನಾಡಿದರು. ” ಮಹಾನ್ ವಿಜ್ಞಾನಿ ಮತ್ತು ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಹೇಳಿದ್ದರು “ಕನಸು ಎಂದರೆ ನೀವು ಮಲಗಿರುವಾಗ ನೋಡುವುದಲ್ಲ, ಅದು ನಿಮ್ಮನ್ನು ನಿದ್ದೆ ಮಾಡಲು ಬಿಡುವುದಿಲ್ಲ.” ಎಂದು. ಕನಸುಗಳನ್ನು ನನಸಾಗಿಸಲು “ಶಿಕ್ಷಣವು ಅತ್ಯಂತ ದೊಡ್ಡ ಕೊಡುಗೆಯಾಗಿದೆ. ಶಿಕ್ಷಣವು ವ್ಯಕ್ತಿಯ ಜೀವನವನ್ನು ಹೊಸ ಆಲೋಚನೆಗಳು, ಜ್ಞಾನ ಮತ್ತು ಸಾಧ್ಯತೆಗಳಿಂದ ತುಂಬುವ ನಿರಂತರ ಪ್ರಯಾಣವಾಗಿದೆ. ಶಿಕ್ಷಣವು ನಮಗೆ ಉದ್ಯೋಗದ ಜೊತೆಗೆ ನೈತಿಕತೆ, ಸಹಾನುಭೂತಿ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ನೀಡುತ್ತದೆ” ಎಂದು ತಿಳಿಸಿದರು.

“ಯಾವುದೇ ರಾಷ್ಟ್ರದ ಅಭಿವೃದ್ಧಿಗೆ ಯುವ ಶಕ್ತಿಯೇ ಆಧಾರ ಎಂದು ಸ್ವಾಮಿ ವಿವೇಕಾನಂದರು ನಂಬಿದ್ದರು. ಅವರು ಯುವಕರನ್ನು ಸ್ವಾವಲಂಬಿ, ಧೈರ್ಯಶಾಲಿ ಮತ್ತು ಆತ್ಮವಿಶ್ವಾಸದಿಂದ ಕೂಡಿರಲು ಪ್ರೇರೇಪಿಸಿದರು. ವಿದ್ಯಾವಂತ ಯುವಕರು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಬಹುದು. ನೀವು ಯಾವುದೇ ಕ್ಷೇತ್ರಕ್ಕೆ ಹೋದರೂ – ಅದು ವಿಜ್ಞಾನ ಕ್ಷೇತ್ರವಾಗಿರಲಿ, ತಂತ್ರಜ್ಞಾನ ಕ್ಷೇತ್ರವಾಗಿರಲಿ, ವ್ಯವಹಾರ, ಕಲೆ ಅಥವಾ ಸಮಾಜ ಸೇವೆಯ ಕ್ಷೇತ್ರವಾಗಿರಲಿ, ನಿಮ್ಮ ಪ್ರಯತ್ನಗಳಿಂದ ದೇಶವು ಪ್ರಗತಿ ಸಾಧಿಸುತ್ತದೆ” ಎಂದು ಹೇಳಿದರು.

ಪ್ರಾಚೀನ ಕಾಲದಿಂದಲೂ ಭಾರತವು ಬೌದ್ಧಿಕ ಸಂಪತ್ತಿನಲ್ಲಿ ಶ್ರೀಮಂತವಾಗಿದೆ. ವೇದಕಾಲದಿಂದ ಇಂದಿನವರೆಗೆ, ಭಾರತೀಯರು ಎಲ್ಲಾ ಕ್ಷೇತ್ರಗಳಲ್ಲಿ ಅನುಪಮ ಜ್ಞಾನವನ್ನು ಗಳಿಸಿದ್ದಾರೆ. ಖಗೋಳಶಾಸ್ತ್ರದಿಂದ ಭೂವಿಜ್ಞಾನ, ಗಣಿತ, ವೈದ್ಯಕೀಯ ಮತ್ತು ಇತರ ಹಲವು ಕ್ಷೇತ್ರಗಳವರೆಗೆ, ಭಾರತೀಯರ ಕೊಡುಗೆ ಇಡೀ ಜಗತ್ತಿಗೆ ಮುಖ್ಯವಾಗಿದೆ. ಗಣಿತದಲ್ಲಿ ಶೂನ್ಯ ಮತ್ತು ದಶಮಾಂಶವನ್ನು ಭಾರತೀಯ ಗಣಿತಜ್ಞರು ಮತ್ತು ಖಗೋಳಶಾಸ್ತ್ರಜ್ಞರು ಕಂಡುಹಿಡಿದರು. ನಮ್ಮ ಪ್ರಾದೇಶಿಕ ಭಾಷೆಗಳಿಗೆ ಪ್ರಾಮುಖ್ಯತೆ ನೀಡುವ ಮೂಲಕ ನಾವು ಮತ್ತೆ “ವಿಶ್ವ ಗುರು” ಆಗಬಹುದು. ಈ ದಿಕ್ಕಿನಲ್ಲಿ ಕೆಲಸ ಮಾಡುತ್ತಾ, ಭಾರತ ಸರ್ಕಾರವು ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ, ಇದರಲ್ಲಿ ಸ್ಥಳೀಯ ಭಾಷೆ ಮತ್ತು ಮಾತೃಭಾಷೆಯನ್ನು ಪ್ರಮುಖ ಶಿಕ್ಷಣ ಮಾಧ್ಯಮವನ್ನಾಗಿ ಮಾಡುವತ್ತ ವಿಶೇಷ ಒತ್ತು ನೀಡಲಾಗಿದೆ. ಶಿಕ್ಷಣವನ್ನು ಹೆಚ್ಚು ಸಮಗ್ರ, ಪರಿಣಾಮಕಾರಿ ಮತ್ತು ಪ್ರಾಯೋಗಿಕವಾಗಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವುದು ಗುರಿಯಾಗಿದೆ. ರಾಷ್ಟ್ರೀಯ ಅಭಿವೃದ್ಧಿಗೆ ನಾಯಕತ್ವ ನೀಡುವುದು ನಿಮ್ಮ ಕರ್ತವ್ಯ. ನಿಮ್ಮ ಜ್ಞಾನ ಮತ್ತು ದೃಢಸಂಕಲ್ಪದ ಬಲದಿಂದ, ನಿಮ್ಮ ವೈಯಕ್ತಿಕ ಜೀವನದ ಜೊತೆಗೆ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ನೀವು ಕೊಡುಗೆ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಸಮಾರಂಭದಲ್ಲಿ ಪಾಟ್ನಾ ಹೈಕೋರ್ಟ್‌ನ ಗೌರವಾನ್ವಿತ ನ್ಯಾಯಾಧೀಶರಾದ ನ್ಯಾಯಮೂರ್ತಿ ಪಿ.ಬಿ. ಬಜಂತ್ರಿ, ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಕೆ.ಆರ್. ಜಲಜಾ ಭಾಗವಹಿಸಿದ್ದರು.

WORLD OF HOSPITALITY & INCREDIBLE CHEF CHALLENGE

WORLD OF HOSPITALITY & INCREDIBLE CHEF CHALLENGE –

YOU ARE CORDIALLY INVITED

Inauguration By – SRI K.H. MUNIYAPPA

HON’BLE MINISTER FOR FOOD & CIVIL SUPPLIES,

GOVERNMENT OF KARNATAKA

– KARNATAKA’S CHAMPAIGN AGAINST FOOD WASTE

ಸನಾತನ ರಾಷ್ಟ್ರ ಸ್ಥಾಪನೆಗಾಗಿ ನೂತನ ದಿಶೆ ಮತ್ತು ಜಾಗೃತಿ ಮೂಡಿಸುವ ಶಂಖನಾದ

ಪ್ರಸ್ತಾವನೆ : ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ದೇಶಾದ್ಯಂತದಿಂದ ಬಂದಿರುವ ಸಾಧಕರು, ವಿಚಾರವಂತರು, ಸಂತರು ಮತ್ತು ರಾಷ್ಟ್ರ ನಿಷ್ಠ ನಾಗರಿಕರು ಒಟ್ಟಾಗಿ ಸೇರಿ ‘ ಸನಾತನ ರಾಷ್ಟ್ರ ‘ ಸ್ಥಾಪನೆಯ ಸಂಕಲ್ಪ ಮತ್ತೊಮ್ಮೆ ದೃಢಪಡಿಸಿದರು. ಶತಚಂಡಿ ಯಜ್ಞ, ಧರ್ಮಧ್ವಜಾರೋಹಣ, ಯುದ್ಧ ಕಲೆಯ ಪ್ರಾತ್ಯಕ್ಷಿಕೆಗಳು, ಸಂತರ ಮಾರ್ಗದರ್ಶನ, ಮತ್ತು ರಾಷ್ಟ್ರ ರಕ್ಷಣೆಯ ಬಗ್ಗೆ ವಿಚಾರವಂತರ ವಿಚಾರಗಳು ಮುಂತಾದವು ಈ ಮಹೋತ್ಸವಕ್ಕೆ ಕೇವಲ ಆಧ್ಯಾತ್ಮಿಕ ಅಷ್ಟೇ ಅಲ್ಲ, ವೈಚಾರಿಕ ಮತ್ತು ಕೃತಿ ಶೀಲ ಅಧಿಷ್ಠಾನ ನೀಡಿತು. ಈ ಶಂಖನಾದದಿಂದ ಸಾಧಕರ ಮನಸ್ಸಿನಲ್ಲಿ ‘ ವೈಯಕ್ತಿಕ ಸಾಧನೆಯ ಜೊತೆಗೆ ಸಮಾಜ ರಕ್ಷಣೆಗಾಗಿ ಅವಶ್ಯವಾದ ಸಮಷ್ಟಿ ಸಾಧನೆಯೂ ಮಹತ್ವದ್ದಾಗಿದೆ, ಎಂಬ ಅರಿವನ್ನು ಮೂಡಿಸಿತು. ವಿಶೇಷವಾಗಿ ಯುವಶಕ್ತಿಗೆ ಶೌರ್ಯ, ಸ್ವಸಂಕ್ಷಣೆ ಮತ್ತು ದೇಶಭಕ್ತಿಯ ನೂತನ ಮಂತ್ರ ದೊರೆಯಿತು. ಇಂದು ದೇಶವು ಸಾಂಸ್ಕೃತಿಕ ಸಂಘರ್ಷದ ಹೊಸ್ತಿಲಲ್ಲಿ ನಿಂತಿದೆ. ಇಂತಹ ಸಮಯದಲ್ಲಿ ಈ ಮಹೋತ್ಸವ ಎಂದರೆ ಒಂದು ಚೈತನ್ಯದಾಯಕ ಜ್ಯೋತಿ ಆಗಿದೆ. ಅದು ಪ್ರತಿಯೊಬ್ಬ ಹಿಂದೂವಿನ ಮನಸ್ಸಿನಲ್ಲಿ ಧರ್ಮ, ಸಂಸ್ಕೃತಿ ಮತ್ತು ರಾಷ್ಟ್ರಕ್ಕಾಗಿ ಸಿದ್ದವಾಗಿರಗಲು ತೇಜ  ಜಾಗೃತ ಮಾಡುತ್ತಿದೆ. ಈ ಮಹೋತ್ಸವದ ಮಾಧ್ಯಮದಿಂದ ನಡೆಯುತ್ತಿರುವ ವಿಚಾರ ಮಂಥನವೇ ಇದರ ನಿಜವಾದ ಫಲನಿಷ್ಪತ್ತಿ ಮತ್ತು ರಾಮರಾಜ್ಯದೆಡೆಗೆ ಹಾಕಿರುವ ದೃಢವಾದ ಹೆಜ್ಜೆ ಆಗುವುದು.

ಸಮಾಜದ ವ್ಯಾಪಕ ಪ್ರಭಾವದ ಪ್ರತೀಕ ! : ಈ ಮಹೋತ್ಸವಕ್ಕೆ 23 ದೇಶದಿಂದ 30 ಸಾವಿರಕ್ಕಿಂತಲೂ ಹೆಚ್ಚಿನ ಸಾಧಕರು ಮತ್ತು ಹಿಂದೂ ಧರ್ಮಪ್ರೇಮಿಗಳು ಉಪಸ್ಥಿತರಿದ್ದರು. ಗೋವಾ ರಾಜ್ಯದ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ, ಭಾಗ್ಯನಗರದ ಹಿಂದುತ್ವನಿಷ್ಟ ಶಾಸಕ ಟಿ. ರಾಜಸಿಂಹ , ಗೋವಾದ ಆರೋಗ್ಯ ಸಚಿವ ಶ್ರೀ. ವಿಶ್ವಜೀತ  ರಾಣೆ , ಕೇಂದ್ರ ವಿದ್ಯುತ್ ರಾಜ್ಯ ಸಚಿವ ಶ್ರೀ. ಶ್ರೀಪಾದ ನಾಯಿಕ, ಗೋವಾದ ವಿದ್ಯುತ್ ಸಚಿವ ಶ್ರೀ. ಸುದಿನ  ಢವಳಿಕರ, ಭಾಜಪದ ಗೋವಾ ರಾಜ್ಯದ ಪ್ರದೇಶಾಧ್ಯಕ್ಷ ಶ್ರೀ. ದಾಮೋದರ ನಾಯಿಕ , ಇವರಂತಹ ರಾಜಕೀಯ ಕ್ಷೇತ್ರದ ಗಣ್ಯರ ಸಹಿತ ಗೋವಾದ ಕುಂಡಯಿ ಇಲ್ಲಿಯ ದತ್ತ  ಪದ್ಮನಾಭ ಪೀಠದ ಪದ್ಮಶ್ರೀ ಸದ್ಗುರು ಬ್ರಹ್ಮೇಶಾನಂದ ಸ್ವಾಮೀಜಿ, ಸನಾತನ ಬೋರ್ಡ್ ಪ್ರತಿಪಾದಕರು ಪೂ. ದೇವಕಿ ನಂದನ ಠಾಕೂರ, ಕರ್ನಾಟಕದ ಮೈಸೂರು ರಾಜಮನೆತನದ ಯುವರಾಜ, ಹಾಗೂ ಮೈಸೂರಿನ ಸಂಸದ ಶ್ರೀ. ಯದುವೀರ ಕೃಷ್ಣ ದತ್ತ ಒಡೆಯರ  ‘ಸುದರ್ಶನ ನ್ಯೂಸ್ ‘ ನ ಮುಖ್ಯ ಸಂಪಾದಕರು ಶ್ರೀ. ಸುರೇಶ್ ಚೌಹಾಣಕೆ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಸನಾತನ ಧರ್ಮದ ಕಾರ್ಯಕ್ರಮಕ್ಕೆ ರಾಜಕೀಯ ಬೆಂಬಲ ದೊರೆಯುವುದು, ಇದು  ಸಮಾಜದಲ್ಲಿನ ಅದರ ವ್ಯಾಪಕ ಪ್ರಭಾವದ ಪ್ರತೀಕವಾಗಿದೆ.

ಸನಾತನ ರಾಷ್ಟ್ರಸ್ತಾಪನೆಗಾಗಿ ವೈಚಾರಿಕ ಸಭೆ ! :
ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ವಿಚಾರವಂತರು, ಸಂತರು, ಧರ್ಮ ಗುರುಗಳು ಇವರ ಭಾಷಣದಿಂದ ಸನಾತನ ವಿಚಾರಗಳ ರಾಷ್ಟ್ರಸ್ತಾಪನೆಗಾಗಿ ವೈಚಾರಿಕ ಸಭೆ ಗಟ್ಟಿ ಆಯಿತು. ಉಪಸ್ಥಿತರು ಕೃತಿಶೀಲ ರಾಷ್ಟ್ರನಿಷ್ಠ ಸಾಧನೆಗಾಗಿ ಕಟ್ಟಿಬದ್ಧರಾಗಲು ಸಂಕಲ್ಪ ಮಾಡಿದರು. ಯುದ್ಧ ಕಲೆಯ ಪ್ರದರ್ಶನದಿಂದ ಯುವಕ ಯುವತಿಯರಲ್ಲಿ  ಸ್ವಸಂರಕ್ಷಣೆ , ಶೌರ್ಯ ಮತ್ತು ಸಿದ್ದತೆಯ ಕುರಿತು ಅರಿವು ಮೂಡಿತು. ಶಾಸ್ತ್ರದ ಜೊತೆಗೆ ಶಸ್ತ್ರಗಳ ಸಿದ್ಧತೆ ಇದು ಕೂಡ ಧರ್ಮ ರಕ್ಷಣೆಯ ಮಹತ್ವದ ಅಂಶವಾಗಿದೆ. ಗೋರಕ್ಷಣೆ, ಗುರುಕುಲ ವ್ಯವಸ್ಥೆ, ಸಾಂಪ್ರದಾಯಿಕ ವಿಧಿ, ಸನಾತನ ಆಚಾರ ಧರ್ಮ ಇವುಗಳ ಅವಶ್ಯಕತೆ ಮತ್ತೊಮ್ಮೆ ಸಾಬೀತಾಯಿತು. ಅನೇಕ ಸಹಭಾಗಿ ಆಗಿರುವ ಸಂಸ್ಥೆಗಳಿಂದ ಮುಂದಿನ ಕೃತಿಗಳಿಗಾಗಿ ಸಹಯೋಗ ಮತ್ತು ಸಮನ್ವಯದ ಅಡಿಪಾಯ ಹಾಕಲು ನಿರ್ಧರಿಸಲಾಯಿತು. ಸುದರ್ಶನ ನ್ಯೂಸ್ ಅಂತಹ ಮಾಧ್ಯಮದಿಂದ ಈ ಚಳುವಳಿಯನ್ನು ವ್ಯಾಪಕ ಮಟ್ಟದಲ್ಲಿ ತಲುಪಿಸುವ ಸಂಕಲ್ಪ ಮಾಡಲಾಯಿತು. ಸೋಶಿಯಲ್ ಮೀಡಿಯಾ ಮತ್ತು ಸಮಾಚಾರ ಮಾಧ್ಯಮಗಳಿಂದ ಮಹೋತ್ಸವದ ಕುರಿತು ಚರ್ಚೆ ಆರಂಭವಾಯಿತು. ಅದರಿಂದ ಹಿಂದೂ ರಾಷ್ಟ್ರ ಈ ಪರಿಕಲ್ಪನೆಯನ್ನು ಮುಖ್ಯ ವಾಹಿನಿಯಲ್ಲಿ ತರುವ ಪ್ರಯತ್ನ ಎದ್ದು ಕಾಣುತ್ತಿದೆ .

ಜನರ ಮನಸ್ಸಿನಲ್ಲಿನ ಧ್ಯೇಯ !: ಈ ಮಹೋತ್ಸವದಿಂದ ಒಂದು ವಿಷಯ ಸಿದ್ಧವಾಯಿತು ಏನೆಂದರೆ, ‘ ಸನಾತನ ರಾಷ್ಟ್ರ ‘ ಈ ಪರಿಕಲ್ಪನೆ ಈಗ ಕೇವಲ ವಿಚಾರಧಾರೆ ಮಾತ್ರವಲ್ಲ, ಜನರ ಮನಸ್ಸಿನಲ್ಲಿನ. ಧ್ಯೇಯವಾಗುತ್ತಿದೆ . ‌ಏಕೆಂದರೆ ಎಲ್ಲಿ ನ್ಯಾಯಾಲಯದಲ್ಲಿ ಜ್ಞಾನವಾಪಿ, ಶ್ರೀ ಕೃಷ್ಣ ಜನ್ಮ ಭೂಮಿಯ ಮೊಕದ್ದಮೆಗಳು ನಡೆಯುತ್ತಿವೆ, ವಕ್ಫ್ ಬೋರ್ಡ್ ನ ಮಿತಿರಹಿತ ಶಕ್ತಿಗಳ ಮೇಲೆ ಅಂಕುಶ ತರುವ ಸುಧಾರಿತ ವಿಧೇಯಕ ಸಂಸತ್ತಿನಲ್ಲಿ ಅಂಗೀಕಾರವಾಯಿತು, ಕೆಲವು ರಾಜ್ಯಗಳಲ್ಲಿ ಸಮಾನ ನಾಗರಿಕಾನೂನು ಜಾರಿಗೊಳಿಸಲು ಆರಂಭವಾಯಿತು, ಇದೆಲ್ಲವೂ ಸನಾತನ ರಾಷ್ಟ್ರದ ದಿಶೆಯತ್ತ ಧಾಪುಗಾಲು ಹಾಕುತ್ತಿರುವುದರ ದ್ಯೋತಕವಾಗಿದೆ

ಛತ್ರಪತಿಯವರ ಶೌರ್ಯದ ಮತ್ತು ರಣನೀತಿಯ ನೆನಪು ! :
ಗೋವಾದಲ್ಲಿ ನಡೆದಿರುವ ‘ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ ‘ ದ ಒಂದು ಮುಖ್ಯ ಭಾಗ ಛತ್ರಪತಿ ಶಿವಾಜಿ ಮಹಾರಾಜರ ಕಾಲದಲ್ಲಿನ ದುರ್ಲಭ ಮತ್ತು ಪ್ರಾಚೀನ ಶಸ್ತ್ರಾಸ್ತ್ರಗಳ ಪ್ರದರ್ಶನ. ಈ ಶಸ್ತ್ರಾಸ್ತ್ರ ಪ್ರದರ್ಶನ ನೋಡುವಾಗ ಉಪಸ್ಥಿತ ಪ್ರತಿಯೊಬ್ಬರ ಮನಸ್ಸಿನಲ್ಲಿ ಛತ್ರಪತಿಯ ಶೌರ್ಯ ಮತ್ತು ರಣ ನೀತಿಯ ನೆನಪು ಜಾಗೃತವಾಯಿತು. ಇಂದು ಅಂತರಾಷ್ಟ್ರೀಯ ಮತ್ತು ಧಾರ್ಮಿಕ ಮೂಲಭೂತವಾದಿಗಳಿಂದ ಭಾರತದ ಮೇಲೆ ದಾಳಿ ನಡೆಯುತ್ತಿರುವಂತಹ ಸಮಯದಲ್ಲಿ ಛತ್ರಪತಿಯವರ ರಣಕೌಶಲ್ಯದ ಮತ್ತು ಶೌರ್ಯದ ಆದರ್ಶ ‘ ಸನಾತನ ರಾಷ್ಟ್ರ ‘ ಸ್ಥಾಪನೆ ಮಾಡುವುದಕ್ಕಾಗಿ ಶಕ್ತಿ ನೀಡುವಂತಹದ್ದಾಗಿತ್ತು .

ಹಿಂದವಿ ಸ್ವರಾಜ್ಯದ ನವಯುಗದ ಆರಂಭ : ಸನಾತನ ಸಂಸ್ಥೆಯು ಸನಾತನ ಹಿಂದೂ ಸಂಸ್ಕೃತಿಯ ಸಂವರ್ಧನೆ ಮತ್ತು ರಾಷ್ಟ್ರ ರಕ್ಷಣೆಗಾಗಿ ನಿರಂತರವಾಗಿ ಪ್ರಯತ್ನಿಸುತ್ತದೆ. ಭಾರತಕ್ಕೆ ವಿಜಯ ದೊರೆಯಬೇಕು ಮತ್ತು ಪೃಥ್ವಿಯಲ್ಲಿ ಏಕೈಕ ಸನಾತನ ರಾಷ್ಟ್ರವಾಗಿರುವ ಭಾರತದ ರಕ್ಷಣೆಯಾಗಬೇಕು, ಅದಕ್ಕಾಗಿ ಸನಾತನ ಸಂಸ್ಥೆಯ ವತಿಯಿಂದ ಫಾರ್ಮಾಗುಡಿ, ಪೊಂಡಾ, ಗೋವಾದ ಪಾವನ ಭೂಮಿಯಲ್ಲಿ ‘ ಸನಾತನ ರಾಷ್ಟ್ರಶಂಖನಾದ ಮಹೋತ್ಸವ ‘ ದ ‘ಶತಚಂಡಿ  ಯಜ್ಞದ ಆಯೋಜಿಸಲಾಗಿತ್ತು. ಅಲ್ಲಿ ನಡೆದಿರುವ ವೈಚಾರಿಕ ಶಂಖನಾದ ಎಂದರೆ ಹಿಂದುಗಳ ಆತ್ಮವಿಶ್ವಾಸ, ದಿಶೆ ಮತ್ತು ಉದ್ದೇಶ ನೀಡುವ ರಣಕಹಳೆಯಾಗಿತ್ತು . ಇದು ಕೇವಲ ಮಹೋತ್ಸವ ಮಾತ್ರವಲ್ಲ, ಹಿಂದವಿ ಸ್ವರಾಜ್ಯದ ನವಯುಗದ ಆರಂಭವಾಗಿತ್ತು.

ಪ್ರಭು ಶ್ರೀರಾಮನ ಧರ್ಮಯುದ್ಧದ ಸಂದೇಶ ! : ಬಾಂಗ್ಲಾದೇಶದಲ್ಲಿ ಸರಕಾರ ವಿರೋಧಿ ಪ್ರತಿಭಟನೆಯಲ್ಲಿ ಹಿಂದೂಗಳನ್ನು ಕೊಲ್ಲಲಾಯಿತು. ಕಾಶ್ಮೀರ, ಕೇರಳ ಮತ್ತು ಬಂಗಾಳದಿಂದ ಹಿಂದೂಗಳನ್ನೇ ಮುಗಿಸುತ್ತಿದ್ದಾರೆ. ಫಹಲ್ಗಾಮ್ ಇಲ್ಲಿ ಕೂಡ ಧರ್ಮ ಕೇಳಿ ಹಿಂದೂಗಳನ್ನು ಹತ್ಯೆ ಮಾಡಲಾಯಿತು. ಪ್ರತಿಯೊಂದು ಸ್ಥಳದಲ್ಲಿ ಹಿಂದುಗಳನ್ನೇ ಗುರಿ ಮಾಡಲಾಗುತ್ತಿದೆ. ಇಂತಹ ಸಮಯದಲ್ಲಿ ‘ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ ‘ವು  ನಮಗೆ ಪ್ರಭು ಶ್ರೀರಾಮನ ಧರ್ಮಯುದ್ಧದ ಸಂದೇಶ ನೀಡುತ್ತಿದೆ. ಧರ್ಮ ಧೈರ್ಯ ಮತ್ತು ಐಕ್ಯತೆಯಿಂದ ರಾಷ್ಟ್ರ ಮತ್ತು ಸಂಸ್ಕೃತಿ ಉಳಿಯಬಹುದು. ಪ್ರಸ್ತುತ ಸಮಯದಲ್ಲಿ ಭಯೋತ್ಪಾದಕರು ಮತ್ತು ಮೂಲಭೂತವಾದಿಗಳಿಂದ ಉದ್ಭವಿಸಿರುವ ಅಪಾಯವನ್ನು ಎದುರಿಸಲು ಅವಶ್ಯಕವಾದ ದಿವ್ಯ ಶಕ್ತಿಯು ಈ ಮಹೋತ್ಸವದಿಂದ ದೊರೆಯಿತು.

ಹಾಲಾಂಡ್ ನಲ್ಲಿನ ವಿದ್ವಾನ್ ಪೀಟರ್ ಹರ್ಕೋಸ್ ಇವರು ‘ ಭಾರತದಲ್ಲಿ ಸನಾತನ ಧರ್ಮದ ಶಂಖನಾದವಾಗುವುದು ಮತ್ತು ಆಧ್ಯಾತ್ಮದಿಂದ ಅದು ವಿಶ್ವಗುರು ಆಗುವುದು ,’ಎಂದು ಭವಿಷ್ಯ ನುಡಿದಿದ್ದರು. ಈ ಮಹೋತ್ಸವದಿಂದ ಗುರುದೇವರ ಸಂಕಲ್ಪದಿಂದ ಕಾರ್ಯ ಸಿದ್ಧವಾಗುವುದು ಮತ್ತು’ಭಾರತ ಆದಷ್ಟು ಬೇಗನೇ ವಿಶ್ವಗುರು ಆಗುವ ಕಡೆಗೆ ಮುನ್ನಡೆಯುವುದು, ಇದರ ಬಗ್ಗೆ ಈಗ ಎಲ್ಲರಿಗೂ ಖಾತ್ರಿಯಾಗಿದೆ.. ಸನಾತನ ರಾಷ್ಟ್ರದ ಈ ದಿವ್ಯಮಾರ್ಗ ಪ್ರಕಾಶಮಾನವಾಗಬೇಕು ಮತ್ತು ಭಾರತದ ಈ ಧರ್ಮಧ್ವಜ ಎತ್ತರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ರಾರಾಜಿಸುತ್ತಾ ಪರಾಕ್ರಮಶಾಲಿ ರಾಷ್ಟ್ರ ಎಂದು ಎದ್ದು ನಿಲ್ಲಬೇಕು, ಇದಕ್ಕಾಗಿ ಪ್ರತಿಯೊಬ್ಬ ಹಿಂದೂ ಸಿದ್ದರಿರಬೇಕು, ಇದೇ ಶ್ರೀ ಗುರುಗಳ ಚರಣದಲ್ಲಿ ಪ್ರಾರ್ಥನೆ !

ಶ್ರೀ. ಚೇತನ್ ರಾಜಹಂಸ,
ಸಂಪರ್ಕ : 7775858387

ಆಸ್ಟ್ರೇಲಿಯಾದ ಚಾರ್ಲ್ಸ್ ಡಾರ್ವಿನ್ ವಿಶ್ವವಿದ್ಯಾಲಯ ಸಮ್ಮೇಳನ: ಸಂಯೋಜಕರಾಗಿ ಡಾ. ಮೀರಾಮಣಿ

ಬೆಂಗಳೂರು: ಆಸ್ಟ್ರೇಲಿಯಾದ ಚಾರ್ಲ್ಸ್ ಡಾರ್ವಿನ್   ವಿಶ್ವವಿದ್ಯಾಲಯದಲ್ಲಿ ವರ್ಲ್ಡ್ ಆರ್ಕಿಯಾಲಜಿಕಲ್ ಕಾಂಗ್ರೆಸ್ ಜೂನ್ 22ರಿಂದ 28ರವರೆಗೆ ಆಯೋಜಿಸುತ್ತಿರುವ ಸಮ್ಮೇಳನದಲ್ಲಿ ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದ ಗ್ರಂಥಪಾಲಕಿ  ಡಾ.ಮೀರಾಮಣಿಯವರು ಸಂಯೋಜಕರಾಗಿ “ಸೆಕ್ರೆಡ್ ನರೇಟಿವ್ಸ್ ಆಂಡ್ ರಿಚುವಲ್ ಎಕ್ಸ್ ಪ್ರೆಷನ್ಸ್: ಎಕ್ಸ್ ಪ್ಲೋರಿಂಗ್ ಸೌತ್ ಏಷಿಯಾಸ್ ಫೋಕ್ ಟ್ರೆಡಿಷನ್ಸ್ ಆಂಡ್ ಕಲ್ಚರಲ್ ಕಂಟಿನ್ಯೂಟಿ” ಗೆ ಆಯ್ಕೆಯಾಗಿದ್ದಾರೆ.
ಅವರು ಸಮ್ಮೇಳನದಲ್ಲಿ “ಡಿಜಿಟಲ್ ಪ್ರಿಸರ್ವೇಶನ್ ಆಂಡ್ ಕಲ್ಚರಲ್ ಹೆರಿಟೇಜ್ ಇನ್ ಇಂಡಿಯಾ : ವಿತ್ ಸ್ಪೆಷಲ್ ರೆಫರೆನ್ಸ್ ಟು ಇನ್ಸ್ಟಿಟ್ಯೂಷನಲ್ ರೆಪೊಸಿಟರೀಸ್ ಇನ್ ಕರ್ನಾಟಕ ಸ್ಟೇಟ್” ಕುರಿತು ಸಂಶೋಧನಾ ಪ್ರಬಂಧವನ್ನು ಮಂಡಿಸಲಿದ್ದಾರೆ ಇದರ ಜೊತೆಗೆ “ಫೋಕ್ ಕಲ್ಚರ್ ಇನ್ ಇಂಡಿಯಾ : ರಿಚುವಲ್ ಆಂಡ್ ಸ್ಪಿರಿಚುಯಲ್ ಪ್ರಾಕ್ಟೀಸಸ್” ಪ್ರಬಂಧವನ್ನೂ ಸಹ ಮಂಡಿಸಲಿದ್ದಾರೆ. ಇಲ್ಲಿ ಸುಮಾರು 70 ದೇಶಗಳ ಸಂಶೋಧಕರು ಭಾಗವಹಿಸಲಿದ್ದಾರೆ.

ಸುಬ್ರಹ್ಮಣ್ಯನಗರ ವ್ಯಾಸರಾಜ ಮಠದಲ್ಲಿ ಶ್ರೀ ಶ್ರೀಪಾದರಾಜರ ಆರಾಧನೆ

ಬೆಂಗಳೂರು : ಸೋಸಲೆ ಶ್ರೀ ವ್ಯಾಸರಾಜ ಮಠಾಧೀಶರಾದ ಶ್ರೀ ಶ್ರೀ 1008 ಶ್ರೀ ವಿದ್ಯಾಶ್ರೀಶತೀರ್ಥ ಶ್ರೀಪಾದಂಗಳವರ ಆದೇಶದಂತೆ ಸುಬ್ರಹ್ಮಣ್ಯನಗರದ ಸೋಸಲೆ ಶ್ರೀ ವ್ಯಾಸರಾಜ ಮಠದದಲ್ಲಿ ಜೂನ್ 10 ರಂದು ‘ಹರಿದಾಸ ಸಾಹಿತ್ಯ ಪ್ರವರ್ತಕ’ರಾದ ಶ್ರೀ ಶ್ರೀಪಾದರಾಜರ ಆರಾಧನೆಯ ಪ್ರಯುಕ್ತ ಅಂದು ಬೆಳಿಗ್ಗೆ ಫಲ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ,

ಜಕ್ಕೂರಿನ ಶ್ರೀ ವಿಜಯ ವಿಠಲ ಭಜನಾ ಮಂಡಳಿ ಹಾಗೂ ಇನ್ನಿತರ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ರಥೋತ್ಸವ, ಶ್ರೀ ರಾಘವೇಂದ್ರ ಆಚಾರ್ಯರಿಂದ ಶ್ರೀ “ಶ್ರೀಪಾದರಾಜರ ಮಹಿಮೆ” ವಿಷಯವಾಗಿ ಪ್ರವಚನ, ಮಹಾಮಂಗಳಾರತಿ, ಅಲಂಕಾರ ಪಂಕ್ತಿ ಸೇವಾ ಕಾರ್ಯಗಳು ಜರುಗಿದವು ಎಂದು ಶ್ರೀ ಸೋಸಲೆ ಪ್ರಕಾಶ್ ತಿಳಿಸಿದರು.

ತೋಟಗಾರಿಕೆ ವಿವಿಯ 14ನೇ ಘಟಿಕೋತ್ಸವ, ಹೂ & ಔಷಧಿ ಸಸ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿ : ರಾಜ್ಯಪಾಲ  ಗೆಹ್ಲೋಟ್

ದೇಶದ ಆರ್ಥಿಕ ಅಭಿವೃದ್ಧಿ ಮತ್ತು ಕೃಷಿ ಜಿಡಿಪಿಯಲ್ಲಿ ತೋಟಗಾರಿಕೆ ಪ್ರಮುಖ ಪಾತ್ರ ವಹಿಸುತ್ತದೆ. ಕರ್ನಾಟಕವು ತೋಟಗಾರಿಕೆ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ರಾಜ್ಯಗಳಲ್ಲಿ ಒಂದಾಗಿದೆ ಎಂದು ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಹೇಳಿದರು.

ತೋಟಗಾರಿಕೆ ವಿಶ್ವವಿದ್ಯಾಲಯದ ಉದ್ಯಾನಗಿರಿಯ ಮುಖ್ಯ ಪ್ರೇಕ್ಷಾಗೃಹದಲ್ಲಿ ಮಂಗಳವಾರ ಜರುಗಿದ 14ನೇ ಘಟಿಕೋತ್ಸವದಲ್ಲಿ ಪದವಿ ವಿದ್ಯಾರ್ಥಿಗಳಿಗೆ ಬಂಗಾರದ ಪದಕ ಪ್ರಧಾನ ಮಾಡಿ ಮಾತನಾಡಿದ ಅವರು ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ಮಹಿಳೆಯರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿರುವುದು ಅತ್ಯಂತ ಸಂತೋಷದ ವಿಷಯ. ಇದು ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಮಾಡಿದ ಕೆಲಸದ ಫಲಿತಾಂಶವಾಗಿದೆ ಎಂದರು.


ಭಾರತ ಇಂದು ಸೂಕ್ಷ್ಮ ಹಾಗೂ ಸುಂದರವಾದ ಹೂಗಳ ಉತ್ಪಾದನೆಗೆ ಜಾಗತಿಕ ಮನ್ನಣೆ ಪಡೆಯುತ್ತಿದೆ. ಕಾರಣ ರೈತರು ಇಂತಹ ಹೂಗಳ ಉತ್ಪಾದನೆ ಮಾಡಿ ಆರ್ಥಿಕವಾಗಿ ಪ್ರಗತಿಹೊಂದಬೇಕು. ಇಂದು ಸೌಂದರ್ಯವರ್ಧಕ ಹಾಗೂ ಸುಹಾಸಿತ ಉತ್ಪನ್ನಗಳಿಗೆ ಹೆಚ್ಚಿಗೆ ಬೇಡಿಕೆ ಇದ್ದು, ರೈತರು ಕೃಷಿ ಜೊತೆಗೆ ತೋಟಗಾರಿಕಾ ಬೆಳೆಗಳಲ್ಲಿ ಇವುಗಳಿಗೂ ಆದ್ಯತೆ ನೀಡಬೇಕು ಎಂದರು.

ಗ್ರಾಮೀಣ ಭಾಗದ ರೈತರಿಗೆ ತಂತ್ರಜ್ಞಾನ ಮಾಹಿತಿ ಇರುವದಿಲ್ಲ. ಕಾರಣ ವಿಜ್ಞಾನಿಗಳು ರೈತರಿಗೆ ಅಂತಹ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಿ ಅವರ ಉತ್ಪಾದನೆ ಹೆಚ್ಚಿಸುವ ಕಾರ್ಯವಾಗಬೇಕು. ಭಾರತದಂತಹ ಕೃಷಿ ದೇಶದಲ್ಲಿ, ತೋಟಗಾರಿಕೆಯ ಪಾತ್ರವು ಹಣ್ಣುಗಳು, ಹೂವುಗಳು, ತರಕಾರಿಗಳು ಮತ್ತು ಔಷಧೀಯ ಸಸ್ಯಗಳ ಉತ್ಪಾದನೆಗೆ ಮಾತ್ರವಲ್ಲದೆ, ಉದ್ಯೋಗ ಸೃಷ್ಟಿ, ಪರಿಸರ ಸಮತೋಲನ ಮತ್ತು ಪೌಷ್ಟಿಕಾಂಶ ಸುರಕ್ಷತೆಗೂ ಸಂಬಂಧಿಸಿದೆ. ತೋಟಗಾರಿಕೆ ವಲಯವು ಕೃಷಿ ಉತ್ಪಾದನೆಯ ಅವಿಭಾಜ್ಯ ಅಂಗವಾಗಿರುವುದರ ಜೊತೆಗೆ, ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವಲ್ಲಿ, ಪೌಷ್ಠಿಕಾಂಶ ಭದ್ರತೆಯನ್ನು ಒದಗಿಸುವಲ್ಲಿ ಮತ್ತು ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.

ಕೃಷಿ ಅಭಿವೃದ್ಧಿಯಲ್ಲಿ ತೋಟಗಾರಿಕೆ ಕ್ಷೇತ್ರಕ್ಕೆ ವಿಶೇಷ ಸ್ಥಾನವಿದೆ. ತೋಟಗಾರಿಕೆ ಬೆಳೆಗಳು ಪ್ರತಿ ಯೂನಿಟ್ ಪ್ರದೇಶಕ್ಕೆ ಹೆಚ್ಚಿನ ಆದಾಯ, ಉದ್ಯೋಗ ಮತ್ತು ಪೆÇೀಷಣೆಯನ್ನು ಒದಗಿಸುವುದರಿಂದ ವಾಣಿಜ್ಯ ರೂಪವನ್ನು ಪಡೆಯುತ್ತಿವೆ, ಇದರಿಂದಾಗಿ ಈ ಬೆಳೆಗಳ ಉತ್ಪಾದನೆಯತ್ತ ರೈತರ ಒಲವು ಹೆಚ್ಚುತ್ತಿದೆ. ಇಂದು, ಔಷಧೀಯ ಮತ್ತು ಸುಗಂಧ ದ್ರವ್ಯಗಳ ಆಧಾರದ ಮೇಲೆ ವ್ಯಾಪಾರವು ಪ್ರಪಂಚದಾದ್ಯಂತ ಬೆಳೆಯುತ್ತಿದೆ. ನಮ್ಮ ರೈತರು ಸಾಂಪ್ರದಾಯಿಕ ಬೆಳೆಗಳ ಜೊತೆಗೆ ಔಷಧೀಯ ಮತ್ತು ಸುಗಂಧ ದ್ರವ್ಯಗಳ ಮುಂದುವರಿದ ಕೃಷಿಯತ್ತ ಗಮನಹರಿಸಬೇಕು ಎಂದು ತಿಳಿಸಿದರು.

ಭಾರತವು ಸೂಕ್ಷ್ಮ ಮತ್ತು ಕೋಮಲ ಹೂವುಗಳ ಕೃಷಿಗೆ ಸೂಕ್ತವಾದ ಅನೇಕ ಕೃಷಿ-ಹವಾಮಾನ ವಲಯಗಳನ್ನು ಹೊಂದಿದೆ. ಇಂದು, ಅನೇಕ ರಾಜ್ಯಗಳಲ್ಲಿ ಹೂವಿನ ಕೃಷಿಯನ್ನು ವಾಣಿಜ್ಯಕವಾಗಿ ಮಾಡಲಾಗುತ್ತಿದೆ. ನಮ್ಮ ದೇಶವು ಹೂವುಗಳ ದೊಡ್ಡ ರಫ್ತುದಾರ. ಪುಷ್ಪ ಕೃಷಿಯು ತೋಟಗಾರಿಕೆಯ ಒಂದು ಶಾಖೆ ಎಂದು ಎಲ್ಲರಿಗೂ ತಿಳಿದಿದೆ, ಇದರಲ್ಲಿ ಹೂವಿನ ಉತ್ಪಾದನೆ, ಮಾರುಕಟ್ಟೆ, ಸೌಂದರ್ಯವರ್ಧಕ ಮತ್ತು ಸುಗಂಧ ದ್ರವ್ಯ ಉದ್ಯಮ ಹಾಗೂ ಔಷಧೀಯ ವಸ್ತುಗಳು ಇತ್ಯಾದಿ ಸೇರಿವೆ. ಈ ವ್ಯವಹಾರವನ್ನು ಪ್ರಾರಂಭಿಸುವ ಮೂಲಕ ಯುವಕರು ಉತ್ತಮ ಮೊತ್ತವನ್ನು ಗಳಿಸಬಹುದು ಎಂದು ಹೇಳಿದರು.

ಜಗತ್ತು ಸುಸ್ಥಿರ ಕೃಷಿ, ಹವಾಮಾನ-ಸ್ಮಾರ್ಟ್ ತೋಟಗಾರಿಕೆ ಮತ್ತು ಡಿಜಿಟಲ್ ಕೃಷಿಯಂತಹ ವಿಷಯಗಳ ಮೇಲೆ ಗಂಭೀರವಾಗಿ ಕೆಲಸ ಮಾಡುತ್ತಿದೆ. ಇಂದು ನಮ್ಮ ದೇಶವು ಕೃಷಿ ವಲಯವನ್ನು ತಂತ್ರಜ್ಞಾನ, ನಾವೀನ್ಯತೆ ಮತ್ತು ಸುಸ್ಥಿರತೆಯೊಂದಿಗೆ ಜೋಡಿಸುವ ಮೂಲಕ ಸ್ವಾವಲಂಬಿ ಭಾರತದತ್ತ ಸಾಗುತ್ತಿದೆ. ಇಂತಹ ಸಮಯದಲ್ಲಿ, ತೋಟಗಾರಿಕಾ ವಿಜ್ಞಾನ ಕ್ಷೇತ್ರದಲ್ಲಿ ತರಬೇತಿ ಪಡೆದ ಯುವ ವಿಜ್ಞಾನಿಗಳು, ಸಂಶೋಧಕರು ಮತ್ತು ಉದ್ಯಮಿಗಳ ಅವಶ್ಯಕತೆ ಬಹಳಷ್ಟಿದೆ. ನಿಮ್ಮ ಜ್ಞಾನ ಮತ್ತು ಕೌಶಲ್ಯಗಳು ದೇಶದ ಬೆಳೆ ವೈವಿಧ್ಯತೆ, ಆಹಾರ ಸಂಸ್ಕರಣೆ, ರಫ್ತು ಸಾಮಥ್ರ್ಯ ಮತ್ತು ಗ್ರಾಮೀಣ ಉದ್ಯೋಗದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರಬಹುದು ಎಂದು ತಿಳಿಸಿದರು.

ಕೃಷಿ ಆಧಾರಿತ ನವೋದ್ಯಮಗಳು ಭಾರತೀಯ ಆರ್ಥಿಕತೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುತ್ತಿವೆ. ಇಂದು ಭಾರತದ ಆರ್ಥಿಕತೆಯು ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದ್ದು, ಕೃಷಿ ಮತ್ತು ತೋಟಗಾರಿಕೆ ವಲಯವು ಅದರಲ್ಲಿ ಗಮನಾರ್ಹ ಕೊಡುಗೆಯನ್ನು ಹೊಂದಿದೆ. “ಸ್ಟಾರ್ಟ್‍ಅಪ್ ಇಂಡಿಯಾ”, “ಡಿಜಿಟಲ್ ಇಂಡಿಯಾ”, “ಆತ್ಮನಿರ್ಭರ ಭಾರತ” ದಂತಹ ಯೋಜನೆಗಳಿಗೆ ಸೇರಿ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಪ್ರತಿಯೊಬ್ಬರು ಮುಂದಾಗಬೇಕು ಎಂದು ಕರೆ ನೀಡಿದರು.

ಘಟಿಕೋತ್ಸವದ ಹೈದರಾಬಾದನ ಅರೆ-ಶುಷ್ಕ ಉಷ್ಣವಲಯದ ಅಂತರರಾಷ್ಟ್ರೀಯ ಬೆಳೆಗಳ ಸಂಶೋಧನ ಸಂಸ್ಥೆಯ ಮಹಾ ನಿರ್ದೇಶಕ ಡಾ.ಹಿಮಾಂಶು ಪಾಠಕ್, ತೋಟಗಾರಿಕೆ ವಿವಿಯ ಕುಲಪತಿ ಡಾ.ವಿಷ್ಣುವರ್ಧನ, ತೋವಿವಿಯ ಕುಲಸಚಿವ ಮಹಾದೇವ ಮುರಗಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಕರ್ನಾಟಕ ನಾಟಕ ಅಕಾಡೆಮಿಯಿಂದ ಪುಸ್ತಕ ಬಹುಮಾನಕ್ಕೆ ಅರ್ಜಿ ಆಹ್ವಾನ

ಬೆಂಗಳೂರು, ಜೂನ್ 10, (ಕರ್ನಾಟಕ ವಾರ್ತೆ):

ಕರ್ನಾಟಕ ನಾಟಕ ಅಕಾಡೆಮಿಯು ರಂಗಭೂಮಿಗೆ ಸಂಬಂಧಿಸಿದಂತೆ ಪ್ರಕಟವಾಗಿರುವ ರಂಗಭೂಮಿಯ ಆಕರ ಗ್ರಂಥಗಳಿಗೆ ಬಹುಮಾನ ನೀಡಲು ತೀರ್ಮಾನಿಸಿದೆ. ಕನ್ನಡ ರಂಗಭೂಮಿಯ ಬೆಳವಣಿಗೆ, ವೈವಿದ್ಯತೆ ಹಾಗೂ ರಂಗಭೂಮಿಯ ಇತಿಹಾಸವನ್ನು ತಿಳಿಸುವಂತಹ ವಿಮರ್ಶಾತ್ಮಕ ಕೃತಿಗಳಿಗೆ 2024-25ನೇ ಸಾಲಿನಲ್ಲಿ ಪ್ರಕಟವಾದ ಕೃತಿಗಳನ್ನು ಬಹುಮಾನಕ್ಕಾಗಿ ಆಹ್ವಾನಿಸಲಾಗಿದೆ.

ಪ್ರತಿ ಸಾಲಿಗೆ ತಲಾ ಒಂದು ಪುಸ್ತಕ ಬಹುಮಾನವನ್ನು ನೀಡಲಾಗುವುದು. ಬಹುಮಾನದ ಮೊತ್ತ ರೂ. 25,000/-ಗಳಾಗಿರುತ್ತದೆ. ಕೃತಿಗಳನ್ನು ಲೇಖಕರೇ ನೇರವಾಗಿ ಅಕಾಡೆಮಿಗೆ ಕಳುಹಿಸಿಕೊಡುವುದು.

ಕೃತಿಗಳು ಜನವರಿ 2024ರಿಂದ ಡಿಸೆಂಬರ್ 2024ರೊಳಗೆ ಮುದ್ರಣವಾಗಿ ಪ್ರಕಟಣೆಯಾಗಿರಬೇಕು. ಅನುವಾದಿತ ಕೃತಿಗಳಿಗೆ ಅವಕಾಶವಿರುವುದಿಲ್ಲ. ಪುಸ್ತಕಗಳು ಯಾವುದೇ ಪದವಿಗಾಗಿ, ಪಿಹೆಚ್.ಡಿ. ಮತ್ತು ಪಠ್ಯ ಪುಸ್ತಕಕ್ಕೆ ಸಿದ್ದಪಡಿಸಲಾದ ವಿಷಯವಾಗಿರಬಾರದು. ಬಹುಮಾನಕ್ಕಾಗಿ ಕಳುಹಿಸಲ್ಪಡುವ ಕೃತಿಗಳು ನಾಟಕವಾಗಿರಬಾರದು, ರಂಗಸಂಬಂಧಿ ವಸ್ತುವುಳ್ಳದ್ದಾಗಿರಬೇಕು.
ಕೃತಿಯ ತಾಂತ್ರಿಕ ಪುಟದಲ್ಲಿ ಮುದ್ರಣ ವರ್ಷವನ್ನು ನಮೂದಿಸಿರಬೇಕು. ಮರು ಮುದ್ರಣ ಪುಸ್ತಕವಾಗಿರಬಾರದು. ಅಕಾಡೆಮಿಯ ಸದಸ್ಯರು ರಚಿಸಿರುವ ಕೃತಿಗಳಾಗಿರಬಾರದು ಹಾಗೂ ಸಂಪಾದಿತ ಕೃತಿಗಳು ಸಹ ಆಗಿರಬಾರದು.

ಕೃತಿಯು ಕನಿಷ್ಠ 60 ಪುಟಗಳನ್ನು ಹೊಂದಿರಬೇಕು. ಪುಸ್ತಕ ಬಹುಮಾನಕ್ಕೆ ಲೇಖಕರು ಮಾತ್ರ ಅರ್ಹರಾಗಿರುತ್ತಾರೆ. ಯಾವುದೇ ಕಾರಣಕ್ಕೂ ಬಹುಮಾನಕ್ಕಾಗಿ ಸಲ್ಲಿಸಲಾಗುವ ಕೃತಿಗಳನ್ನು ಹಿಂತಿರುಗಿಸಲಾಗುವುದಿಲ್ಲ. ಅಕಾಡೆಮಿಯ ತೀರ್ಮಾನವೇ ಅಂತಿಮವಾಗಿರುತ್ತದೆ.

ಆಸಕ್ತ ಲೇಖಕರು, ಹೆಸರು, ವಿಳಾಸ, ಪ್ರಕಟಣೆ ವರ್ಷದೊಂದಿಗೆ ನಾಲ್ಕು ಪ್ರತಿಗಳನ್ನು ರಿಜಿಸ್ಟ್ರಾರ್, ಕರ್ನಾಟಕ ನಾಟಕ ಅಕಾಡೆಮಿ, ನೆಲಮಹಡಿ, ಚಾಲುಕ್ಯ ವಿಭಾಗ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು – 560 002, ದೂರವಾಣಿ ಸಂ. 080-22244176 ಇಲ್ಲಿಗೆ 2025ನೇ ಜೂನ್ 25 ರೊಳಗಾಗಿ ಸಲ್ಲಿಸುವಂತೆ ಕರ್ನಾಟಕ ನಾಟಕ ಅಕಾಡೆಮಿಯ ರಿಜಿಸ್ಟ್ರಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಂಗಳೂರು-ಚೆನ್ನೆಎಕ್ಸ್ಪ್ರೆಸ್ ಹೈವೇ ಅಪಘಾತವಲ್ಲ, ಬೆಮೆಲ್ ಸಮೀಪದ್ದು : ಎಸ್‌ಪಿ ಸ್ಪಷ್ಟನೆ

ಕೆಜಿಎಫ್., ಜೂ. 10 : ಸೋಮವಾರ (9-6-2025) ದಂದು ಬೆಮೆಲ್‌ನಗರ ಸಮೀಪದ ಹ್ಯಾಪಿಹೋಂ ಬಳಿ ಸಂಭವಿಸಿದ ರಸ್ತೆ ಅಪಘಾತವನ್ನು ಬೆಂಗಳೂರು-ಚೆನ್ನೆ ಎಕ್ಸ್ಪ್ರೆಸ್ ಹೈವೇ ನಲ್ಲಿ ಸಂಭವಿಸಿರುವುದೆ0ದು ಕೆಲವೊಂದು ಮಾಧ್ಯಮಗಳಲ್ಲಿ ವರದಿಯಾಗಿರುವ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾ0ತರಾಜು ಅವರು ಸ್ಪಷ್ಟನೆ ನೀಡಿದ್ದಾರೆ.

ಬೆಮೆಲ್‌ನಗರ ಪೊಲೀಸ್ ಠಾಣೆ ಸರಹದ್ದು, ಆಲದಮರ ದಿಂದ ಕೃಷ್ಣಾವರಂ ಕಡೆಗೆ ಹೋಗುವ ರಾಜ್ಯ ಹೆದ್ದಾರಿ 95 ರಸ್ತೆಯಲ್ಲಿ ಹ್ಯಾಪಿಹೋಂ ಸಮೀಪ ಕಾರೊಂದು ಸ್ವತಃ ರಸ್ತೆ ಅಪಘಾತಕ್ಕಿಡಾಗಿ ಮೂವರು ಮರಣ ಹೊಂದಿರುವ ವಿಷಯಕ್ಕೆ ಸಂಬ0ಧಿಸಿದ0ತೆ ಮಾದ್ಯಮಗಳಲ್ಲಿ ಬೆಂಗಳೂರು-ಚೆನ್ನೆ ಎಕ್ಸ್ಪ್ರೆಸ್ ಹೈವೇ ನಲ್ಲಿ ನಡೆದ ಅಪಘಾತ ಎಂದು ಪ್ರಸಾರವಾಗಿರುತ್ತದೆ.
ಆಲದಮರದ ಕಡೆಯಿಂದ ಕೃಷ್ಣಾವರಂ ಕಡೆಗೆ ಹೋಗುತ್ತಿದ್ದ ಏಂ-51-ಒಖಿ-5312 ಕಾರು ಹ್ಯಾಪಿಹೋಂ ಸಮೀಪ ಡಿವೈಡರ್‌ಗೆ ಡಿಕ್ಕಿ ಪಡಿಸಿ ನಂತರ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಪಡಿಸಿದಾಗ ಕಾರಿನಲ್ಲಿದ್ದ ಜಾನ್‌ಬೇಕನ್, ನಾಗರಾಜ್ ಮತ್ತು ಆಕಾಶ್ ಮೃತಪಟ್ಟಿದ್ದು, ಉಳಿದ ತಮಿಳರಸನ್, ರಾಜ್‌ಕುಮಾರ್ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುತ್ತಾರೆ.
ಈ ಅಪಘಾತವು ಆಲದಮರದಿಂದ ಕೃಷ್ಣಾವರಂಗೆ ಹೋಗುವ ಮಾರ್ಗಮಧ್ಯೆ ಸಂಭವಿಸಿರುತ್ತದೆ. ಇದು ಬೆಂಗಳೂರು-ಚೆನ್ನೆ ಎಕ್ಸ್ಪ್ರೆಸ್ ಹೈವೇ ನಲ್ಲಿ ಸಂಭವಿಸಿರುವುದಿಲ್ಲವೆ0ದು ಎಸ್‌ಪಿ ಶಾಂತರಾಜು ಅವರು ವಿವರಿಸಿದ್ದಾರೆ.
ಎಕ್ಸ್ಪ್ರೆಸ್ ರಹದಾರಿಯಲ್ಲಿ ವೇಗ ನಿಯಂತ್ರಣಕ್ಕೆ ಕ್ರಮ :

ಬೆಂಗಳೂರು-ಚೆನ್ನೆ ಎಕ್ಸ್ಪ್ರೆಸ್ ಹೈವೇ ನಲ್ಲಿ ಓಡಾಡುವ ವಾಹನಗಳ ವೇಗವನ್ನು ನಿಯಂತ್ರಿಸಲು, ಮೋಟಾರು ವಾಹನ ಕಾಯ್ದೆಯಡಿ ಅತಿವೇಗ ಚಾಲನೆ ವಿರುದ್ದ ಪ್ರಕರಣವನ್ನು ದಾಖಲಿಸಲು ಸ್ಪೀಡ್ ರಾಡಾರ್ ಗನ್ ಮೂಲಕ ಕ್ರಮ ಕೈಗೊಳ್ಳಲಾಗಿದೆ. ಜೂ. 09 ರಂದು 11 ಅತಿವೇಗ ಚಾಲನೆ ಪ್ರಕರಣಗಳನ್ನು ದಾಖಲಿಸಿ, ರೂ. 11,000/- ದಂಡ ವಿಧಿಸಲಾಗಿದೆ ಮತ್ತು ಜೂ. 10 ರಂದು 05 ಅತಿವೇಗ ಚಾಲನೆ ಪ್ರಕರಣಗಳನ್ನು ದಾಖಲಿಸಿ, ರೂ. 5,000/- ದಂಡ ವಿಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾ0ತರಾಜು ಅವರು ತಿಳಿಸಿದ್ದಾರೆ. ಇದೇ ರೀತಿ ಅತಿವೇಗ ಚಾಲನೆ ಮಾಡುವವರ ವಿರುದ್ದ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಮಾಹಿತಿ ನೀಡಬಯಸುತ್ತೇನೆ.
ಎಕ್ಸ್ಪ್ರೆಸ್ ಹೈವೇ ವ್ಯಾಪ್ತಿಯ ಬೇತಮಂಗಲ, ಬಂಗಾರಪೇಟೆ ಮತ್ತು ಬೆಮೆಲ್‌ನಗರ ಪೊಲೀಸ್ ಠಾಣೆಗಳಿಗೆ ವಾಹನಗಳ ವೇಗವನ್ನು ಪರಿಶೀಲಿಸುವ ಸ್ಪೀಡ್ ರಾಡಾರ್ ಗನ್ ಗಳನ್ನು ಒದಗಿಸಲಾಗಿದ್ದು, ಆಯಾ ಪೊಲೀಸ್ ಠಾಣಾಧಿಕಾರಿಗಳಿಗೆ ವೇಗದ ಪರಿಶೀಲನೆ ಮಾಡುವ ತರಬೇತಿಯನ್ನು ಈ ಹಿಂದೆಯೇ ನೀಡಲಾಗಿದ್ದು, ಜೂ. 09 ರಂದು ಪೂನರ್ಮನನ ತರಬೇತಿ ಸಹ ಮತ್ತೊಮ್ಮೆ ನೀಡಲಾಗಿರುತ್ತದೆ. ಎಕ್ಸ್ಪ್ರೆಸ್ ಹೈವೇ ಮೂಲಕ ಸಂಚಾರ ಮಾಡುವಂತಹ ಎಲ್ಲಾ ವಾಹನಗಳ ವೇಗದ ಪರಿಶೀಲನೆ ನಡೆಸಿ, ಅತಿವೇಗದಿಂದ ಚಾಲನೆ ಮಾಡುವ ವಾಹನ ಚಾಲಕರ ವಿರುದ್ದ ಮೋಟಾರು ವಾಹನ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಲಾಗುವುದೆಂದು ಎಸ್‌ಪಿ ಶಾಂತರಾಜು ಅವರು ತಿಳಿಸಿದರು.

ಕಾಮಸಮುದ್ರಂ : ಮನೆ ಕಳವು ಪ್ರಕರಣದ ಆರೋಪಿ ಬಂಧನ, ಮಾಲು ವಶ

ಕೆಜಿಎಫ್.: ಕಾಮಸಮುದ್ರಂ ಪೊಲೀಸರು ಕಾಮಸಮುದ್ರಂ ಮತ್ತು ಬಂಗಾರಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸಂಭವಿಸಿದ್ದ ಕಳವು ಪ್ರಕರಣಗಳಲ್ಲಿ ಆರೋಪಿಯನ್ನು ಬಂಧಿಸಿ, ಆತನಿಂದ ಸುಮಾರು ರೂ.6,70,000/-(ರೂಪಾಯಿ ಆರು ಲಕ್ಷದ ಎಪ್ಪತ್ತು ಸಾವಿರ ಮಾತ್ರ) ಮೌಲ್ಯದ ಕಳವು ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಏ. 04 ರಂದು ದೂರುದಾರರಾದ ಪೊಲೇನಹಳ್ಳಿ ಗ್ರಾಮದ ಮುನಿವೆಂಕಟಪ್ಪ ಎಂಬುವರು ತನ್ನ ಮನೆಯಲ್ಲಿ ಕಳ್ಳತನವಾಗಿರುವ ಬಗ್ಗೆ ಕಾಮಮುದ್ರಂ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿ, ತನಿಖೆ ನಡೆಸಲಾಗುತ್ತಿತ್ತು. ಪ್ರಕರಣದಲ್ಲಿ ಆರೋಪಿ ಮತ್ತು ಮಾಲನ್ನು ಪತ್ತೆ ಮಾಡಲು ಡಿವೈಎಸ್‌ಪಿ ಎಸ್.ಪಾಂಡುರAಗ ಅವರ ಮಾರ್ಗದರ್ಶನದಲ್ಲಿ ಕಾಮಸಮುದ್ರಂ ಸಿಪಿಐ ಜಿ.ಸಿ.ನಾರಾಯಣಸ್ವಾಮಿ ಮತ್ತು ಪಿಎಸ್‌ಐ ಕಿರಣ್‌ಕುಮಾರ್ ನೇತೃತ್ವದಲ್ಲಿ ವಿಶೇಷ ಅಪರಾಧ ಪತ್ತೆ ದಳವನ್ನು ರಚಿಸಲಾಗಿತ್ತು.

ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು ಬಂಗಾರಪೇಟೆ ತಾಲ್ಲೂಕು ಶಿವಲಿಂಗ ಗ್ರಾಮದ ವಾಸಿ ಚಂದ್ರಪ್ಪ (48 ವರ್ಷ) ಎಂಬುವರನ್ನು ಬಂಧಿಸಿ, ಆತನಿಂದ ಕಾಮಸಮುದ್ರಂ ಮತ್ತು ಬಂಗಾರಪೇಟೆ ಪೊಲೀಸ್ ಠಾಣೆಯ ಒಟ್ಟು ಎರಡು ಪ್ರಕರಣಗಳಲ್ಲಿ ಕಳ್ಳತನ ಮಾಡಲಾಗಿದ್ದ ರೂ.6,70,000/- ಮೌಲ್ಯದ 69 ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.

ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಕಾಮಸಮುದ್ರಂ ಪಿ.ಎಸ್.ಐ ಬಿ.ವಿ.ಕಿರಣ್‌ಕುಮಾರ್, ವಿಶೇಷ ಅಪರಾಧ ಪತ್ತೆ ತಂಡದ ಸಿಬ್ಬಂದಿಗಳಾದ ಮಂಜುನಾಥರೆಡ್ಡಿ, ಮುನಾವರ್‌ಪಾಷ, ರಾಮರಾವ್, ರಾಮಕೃಷ್ಣಾರೆಡ್ಡಿ, ಮಂಜುನಾಥ, ಮಾರ್ಕೊಂಡ, ಲಕ್ಷö್ಮಣತೇಲಿ ಹಾಗೂ ಜೀಪ್ ಚಾಲಕ ಗುರುಮೂರ್ತಿ ರವರ ಉತ್ತಮ ಕೆಲಸವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾAತರಾಜು ಅವರು ಪ್ರಶಂಶಿಸಿದ್ದಾರೆ.