Home Blog Page 82

ಕಿರು ಆಹಾರ ಸಂಸ್ಕರಣಾ ಘಟಕಗಳಿಗೆ 15 ಲಕ್ಷ ಸಹಾಯಧನ : ಸಚಿವ ಎನ್.ಚಲುವರಾಯಸ್ವಾಮಿ

ಕಿರು ಆಹಾರ ಸಂಸ್ಕರಣಾ ಘಟಕಗಳಿಗೆ ರೂ. 15 ಲಕ್ಷ ಸಹಾಯಧನ ನೀಡಲಾಗುತ್ತಿದೆ. ಇದರಲ್ಲಿ ಕೇಂದ್ರ ಸರ್ಕಾರ 6 ಲಕ್ಷ ರೂ.ಗಳನ್ನು ಹಾಗೂ ರಾಜ್ಯ ಸರ್ಕಾರ 9 ಲಕ್ಷ ರೂ.ಗಳ ಸಹಾಯ ಧನ ನೀಡುತ್ತಿದ್ದು, ಈ ರೀತಿಯ ಯೋಜನೆ ನಮ್ಮ ರಾಜ್ಯದಲ್ಲಿ ಬಿಟ್ಟರೆ ಬೇರೆ ಯಾವುದೇ ರಾಜ್ಯದಲ್ಲಿ ಇಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯ ಸ್ವಾಮಿ ತಿಳಿಸಿದರು. ಭಾತರ ಸರ್ಕಾರದ ಆಹಾರ ಸಂಸ್ಕರಣಾ ಉದ್ಯಮ ಮಂತ್ರಾಲಯ, ಖೇತಿವಾಲಾಸ್ ಹಾಗೂ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ನಿಗಮದ ವತಿಯಿಂದ ಹಮ್ಮಿಕೊಂಡಿದ್ದ “ಕೃಷಿ ಜಾಗೃತಿ” ಕಾರ್ಯಗಾರದ ಉದ್ಘಾಟನೆ  ಹಾಗೂ  ಖೇತಿ ಪ್ರಶಸ್ತಿ ಪುರಸ್ಕøತರಾದ ಅಧಿಕಾರಿಗಳು ಹಾಗೂ ಸಂಸ್ಥೆಯ ಪ್ರತಿನಿಧಿಗಳನ್ನು ಸನ್ಮಾನ ಮಾಡಿ ಮಾತನಾಡಿದರು.

ರಾಜ್ಯದಲ್ಲಿ 1400 ಆಹಾರ ಸಂಸ್ಕರಣಾ ಘಟಕಗಳಿದ್ದು, ಇದಕ್ಕೋಸ್ಕರ 206 ಕೋಟಿ ರೂ.ಗಳ ವಿಶೇಷ ಅನುದಾನ ಮೀಸಲಿರಿಸಿದೆ ಎಂದರು. ಕಳೆದ ಐದು ವರ್ಷಗಳಲ್ಲಿ ಈ ಯೋಜನೆಯಡಿ 20,051 ಅರ್ಜಿಗಳು ಸಲ್ಲಿಕೆಯಾಗಿದ್ದು, 6,585 ಅರ್ಜಿಗಳಿಗೆ ಸಾಲ ಮಂಜೂರಾಗಿದ್ದು, ಒಟ್ಟು 758.48 ಕೋಟಿ ಬಂಡವಾಳ ಹೂಡಿಕೆಯಾಗಿದೆ.  ಆಹಾರ ಸಂಸ್ಕರಣೆಯಲ್ಲಿ ತೊಡಗಿರುವ ಸ್ವಸಹಾಯ ಸಂಘದ 11,825 ಸದಸ್ಯರಿಗೆ 46.58 ಕೋಟಿಯಷ್ಟು ಬೀಜ ಬಂಡವಾಳದ ಬೆಂಬಲವನ್ನು, ಸಣ್ಣ ಉಪಕರಣಗಳನ್ನು ಖರೀದಿಸಲು ಮತ್ತು ಕಾರ್ಯನಿರತ ಬಂಡವಾಳಕ್ಕಾಗಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ವಿವಿಧ ಕೃಷಿ, ತೋಟಗಾರಿಕೆ ವಿಶ್ವವಿದ್ಯಾಲಯಗಳು, ಸರ್ಕಾರಿ ಸಂಸ್ಥೆಗಳಗೆ 14 ಸಾಮಾನ್ಯ ಇನ್ಕ್ಯುಬೇಶನ್ ಕೇಂದ್ರಗಳನ್ನು ಮಂಜೂರು ಮಾಡಲಾಗಿದೆ. ದೇಶದಲ್ಲೇ ಅತಿ ಹೆಚ್ಚು ಇನ್ಕ್ಯುಬೇಶನ್ ಕೇಂದ್ರಗಳನ್ನು ರಾಜ್ಯಕ್ಕೆ ಮಂಜೂರು ಮಾಡಲಾಗಿದೆ. ಕೃಷಿ ವಲಯದಲ್ಲಿ  ತಾಂತ್ರಿಕ ಸಮಗ್ರ ಕೃಷಿಗೆ ಮೌಲ್ಯವರ್ಧನೆ ಅಳವಡಿಸಿಕೊಂಡರೆ ಇಡೀ ದೇಶವೇ ಆರ್ಥಿಕವಾಗಿ ಸದೃಢವಾಗುತ್ತದೆ. ರೈತರಿಗೆ ಹಾಗೂ ನವೋದ್ಯಮಿಗಳಿಗೆ ಉತ್ತೇಜನ ನೀಡಲು ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.  ತಾಂತ್ರಿಕತೆಯನ್ನು ಪರಿಚಯ ಮಾಡಿಕೊಡುವ ಹಾಗೂ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವಂತಹ ಇಂತಹ ಕಾರ್ಯಕ್ರಮಗಳನ್ನು ಹೆಚ್ಚು ಆಯೋಜಿಸಿದಷ್ಟು ರೈತ ಸಮುದಾಯಕ್ಕೆ, ಯುವ ಸಮುದಾಯಕ್ಕೆ ಬಹಳಷ್ಟು ಅನುಕೂಲವಾಗುತ್ತದೆ ಎಂದರು.
ಇಂದು ಇಡೀ ರಾಷ್ಟ್ರ ಮತ್ತು ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದೇವೆ ಅದೆಲ್ಲಕ್ಕೂ ಪರಿಹಾರ ಕೃಷಿ ಮತ್ತು ಕೃಷಿ ಉತ್ಪನನಗಳ ಮೌಲ್ಯವರ್ಧನೆ ಹಾಗೂ ಉದ್ದಿಮೆ ಕ್ಷೇತ್ರಗಳನ್ನು ಅಳವಡಿಸಿಕೊಂಡಾಗ ಮಾತ್ರ ಸಾಧ್ಯ ಎಂದು ನಾವು ಅರ್ಥ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ಇಂದು ಅನೇಕ ಯುವಕರು ಕೃಷಿ ಕಡೆ ಆಲೋಚನೆ ಮಾಡುತ್ತಿರುವುದರಿಂದ ಕೃಷಿಗೆ  ಹೆಚ್ಚಿನ ಒತ್ತು ನೀಡುವುದು  ಸರ್ಕಾರ ಹಾಗೂ ಇಂತಹ ಸಂಸ್ಥೆಗಳ ಕರ್ತವ್ಯ. ನಮ್ಮೆಲ್ಲರ  ಮುಂದಿನ ಭವಿಷ್ಯದ ಚಿಂತನೆಗೆ  ಕೃಷಿಯಲ್ಲಿ ಮೌಲ್ಯವರ್ಧನೆ ಮಾಡಿದರೆ ಒಂದಕ್ಕಿಂತ ಹೆಚ್ಚು ಪಟ್ಟು ಹಣ ಸಿಗುತ್ತದೆ.
ಕೃಷಿ ಚಟವಟಿಕೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಬಹಳ ವರ್ಷಗಳಿಂದ ಪ್ರೋತ್ಸಾಹ ನೀಡುತ್ತಿದ್ದು ಇತ್ತೀಚಿನ ದಿನಗಳಲ್ಲಿ ಪ್ರಕೃತಿಯಲ್ಲಿ ಮೊದಲಿಗಿಂತ ಹೆಚ್ಚಿನ ಬದಲಾವಣೆ ಕಾಣುತ್ತಿದ್ದೇವೆ ಇದರ ಜೊತೆಗೆ ತಾಂತ್ರೀಕರಣ ವ್ಯವಸಾಯ ಮಾಡಬೇಕು ಮತ್ತು ಅದಕ್ಕಿಂತ ಹೆಚ್ಚಾಗಿ ಕೃಷಿಯಲ್ಲಿ ಸಂಸ್ಕರಣೆ ಮಾಡಿ,  ಮೌಲ್ಯವರ್ಧನೆ ಮಾಡಿದರೆ ಮಾತ್ರ  ಒಂದಕ್ಕಿಂತ ಹೆಚ್ಚು ಲಾಭ ಪಡೆಯಲು ಸಾಧ್ಯವಾಗುತ್ತದೆ. ರೈತರು ತಮ್ಮ ಉತ್ಪನ್ನಗಳ ಮೌಲ್ಯವರ್ಧನೆಗೆ ಹೆಚ್ಚು ಆದ್ಯತೆ ನೀಡಬೇಕು ಹಾಗೂ ಮಾರುಕಟ್ಟೆಯ ಬಗ್ಗೆ ಜ್ಞಾನ ವಿಸ್ತಾರವಾಗಬೇಕು ಎಂಬ ಉದ್ದೇಶದಿಂದ  ಮಾಹಿತಿ ನೀಡಲು ಇಂದು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.  ಬಹತೇಕ ಯುವಕರು ಭಾಗವಹಿಸಿದ್ದು,  ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಕೆಫೆಕ್ ವ್ಯವಸ್ಥಾಪಕ ನಿರ್ದೇಶಕರಾದ ಸಿ.ಎನ್. ಶಿವಪ್ರಕಾಶ್ ಅವರು ಪ್ರಾಸ್ತಾವಿಕ ಮಾತನಾಡಿ, ಆಹಾರ ಸಂಸ್ಕರಣೆ ಮಾಡಿದರೆ ರೈತನಿಗೆ ಉತ್ತಮ ಬೆಲೆ ಸಿಗುತ್ತದೆ.  ಇದರ ಜೊತೆಗೆ ಕೆಲವರಿಗೆ ಉದ್ಯೋಗ ದೊರೆಯುವುದರ ಜೊತೆಗೆ ಗ್ರಾಹಕರಿಗೆ ಉತ್ತಮ ಉತ್ಪನ್ನಗಳು ದೊರೆಯುತ್ತದೆ.  ಸಂಸ್ಕರಣೆ ಆಗದಿದ್ದರೆ ಆಹಾರ ಕೊಳೆತು ಹೋಗುತ್ತದೆ.  ಸರ್ಕಾರ ಜಾರಿಗೆ ತಂದಿರುವ ಕಿರು ಆಹಾರ ಸಂಸ್ಕರಣಾ ಉದ್ದಿಮೆಯು ಉತ್ತಮ ಯೋಜನೆಯಾಗಿದೆ.  ಬ್ಯಾಂಕ್ ಅಧಿಕಾರಿಗಳು ಅರ್ಜಿಗಳು ಬಂದ 15 ದಿನಗಳಲ್ಲಿ ವಿಲೇವಾರಿ ಮಾಡಿದರೆ ಅರ್ಜಿದಾರರಿಗೆ ಅನುಕೂಲ ಕಲ್ಪಿಸಿದಂತಾಗುತ್ತದೆ ಎಂದರು.
ಕಾರ್ಯಾಗಾರದಲ್ಲಿ ಜಲಸಂಧಾನ ಅಭಿವೃದ್ಧಿ ಆಯುಕ್ತರಾದ ಮಹೇಶ್ ಬಿ.ಶಿರೂರ್, ನಿರ್ದೇಶಕ ಮೊಹಮ್ಮದ್ ಪರವೇಜ್ ಬಂಥ್‍ನಾಳ್, ನಬಾರ್ಡ್ ವ್ಯವಸ್ಥಾಪಕ ನಿರ್ದೇಶಕರಾದ ಪ್ರಕಾಶ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ವಿ.ಎನ್.ಶರ್ಮಾ,  ಕೃಷಿ ಇಲಾಖೆಯ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳು ಹಾಗ ಮತ್ತಿತರರು ಉಪಸ್ಥಿತರಿದ್ದರು.

 

ಶಾಸಕ ವಿನಯ್ ಕುಲಕರ್ಣಿ ಸಿಬಿಐ ವಶಕ್ಕೆ

ಧಾರವಾಡ: ಜಿಲ್ಲಾ ಪಂ. ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದ ಆರೋಪಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಯವರನ್ನು ಸಿಬಿಐ ವಶಕ್ಕೆ ಪಡೆದಿದೆ. ಸುಪ್ರೀಂ ಕೋರ್ಟ್ನ ಆದೇಶದಂತೆ ಜಾಮೀನು ರದ್ದಾದ ಬಳಿಕ, ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರಾದ ಕುಲಕರ್ಣಿಯನ್ನು ಸಿಬಿಐ ಅಧಿಕಾರಿಗಳು ವಿಚಾರಣೆಗಾಗಿ ಕಸ್ಟಡಿಗೆ ತೆಗೆದುಕೊಂಡಿರುವರು, ವಿಚಾರಣೆ ಬಳಿಕ ಅವರನ್ನು ರಾಜಧಾನಿ ಬೆಂಗಳೂರು ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

2016ರ ಜೂನ್ 15ರಂದು ಯೋಗೇಶ್ ಗೌಡ ಅವರು ಧಾರವಾಡದಲ್ಲಿ ಕೊಲೆಯಾಗಿದ್ದರು. ವಿನಯ್ ಕುಲಕರ್ಣಿ ಅವರನ್ನು ಈ ಪ್ರಕರಣದ ಮುಖ್ಯ ಆರೋಪಿ ಎಂದೇ ಗುರುತಿಸಲಾಗಿದೆ. 2020ರ ನವೆಂಬರ್‌ನಲ್ಲಿ ಕುಲಕರ್ಣಿಯನ್ನು ಸಿಬಿಐ ಬಂಧನಕ್ಕೊಳಗಾಗಿದ್ದರು. 2021ರಲ್ಲಿ ಸುಪ್ರೀಂ ಕೋರ್ಟ್ನಿಂದ ಜಾಮೀನು ಪಡೆದಿದ್ದರು. ಸಾಕ್ಷಿಗಳಿಗೆ ಬೆದರಿಕೆ ಮತ್ತು ಪ್ರಭಾವ ಬೀರಿದ ಆರೋಪದ ಮೇಲೆ ಸಿಬಿಐ ಜಾಮೀನು ರದ್ದತಿಗೆ ಅರ್ಜಿ ಸಲ್ಲಿಸಿತು. ಜೂನ್ 6, 2025ರಂದು ಸುಪ್ರೀಂ ಕೋರ್ಟ್ನ ಜಸ್ಟೀಸ್ ಸಂಜಯ್ ಕರೋಲ್ ಮತ್ತು ಸತೀಶ್ ಚಂದ್ರ ಶರ್ಮಾರ ದ್ವಿಸದಸ್ಯ ಪೀಠ ಈ ಅರ್ಜಿಯನ್ನು ಪುರಸ್ಕರಿಸಿ, ಕುಲಕರ್ಣಿಯ ಜಾಮೀನನ್ನು ರದ್ದುಗೊಳಿಸಿತು. ಒಂದು ವಾರದೊಳಗೆ ಶರಣಾಗುವಂತೆ ನಿರ್ದೇಶನವೂ ನೀಡಿತ್ತು.

ಬಿಜೆಪಿಯು ವಿನಯ ಕುಲಕರ್ಣಿ ವಿರುದ್ಧ ತೀವ್ರ ಟೀಕೆಯನ್ನು ವ್ಯಕ್ತಪಡಿಸಿದ್ದು, ಕಾಂಗ್ರೆಸ್‌ನ ನಾಯಕತ್ವವನ್ನು ಟೀಕಿಸಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಚುನಾವಣಾ ಪ್ರಚಾರದ ವೇಳೆ ಕುಲಕರ್ಣಿಯನ್ನು ಜೈಲಿಗೆ ಕಳುಹಿಸುವುದಾಗಿ ತಿಳಿಸಿದ್ದರು. ಅಧಿಕಾರಕ್ಕೆ ಬಂದ ಬಳಿಕ ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲ್ಪಟ್ಟಿತು. ಸಿಬಿಐ ತನಿಖೆಯಲ್ಲಿ ವಿನಯ ಕುಲಕರ್ಣಿ ಆಪ್ತ ಬಸವರಾಜ ಮುತ್ತಗಿ ಅವರು ನಾವೂ ಕೊಲೆಯಲ್ಲಿ ಭಾಗಿಯಾಗಿದ್ದೇವೆ ಎಂದು ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದರು. ವಿಚಾರಣೆಯನ್ನು ಶೀಘ್ರವಾಗಿ ಮುಗಿಸಲು ಸುಪ್ರೀಂ ಕೋರ್ಟ್ ಮತ್ತು ಕರ್ನಾಟಕ ಹೈಕೋರ್ಟ್ ಒತ್ತಾಯಿಸಿವೆ. ಸಾಕ್ಷಿಗಳ ರಕ್ಷಣೆ ಮತ್ತು ನ್ಯಾಯದಾನಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ.

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಪೌರಕಾರ್ಮಿಕರು ಸದಾ ಶ್ರಮವಹಿಸಿತ್ತಾರೆ. ಆದರೂ, ನಗರದಲ್ಲಿನ ಕಸದ ಸಮಸ್ಯೆ ಮಾತ್ರ ದೂರಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈ ಹಿನ್ನೆಲೆಯಲ್ಲಿ ಎಲ್ಲೆಂದರಲ್ಲಿ ಕಸ ಎಸೆದು ಹೋಗುವವರನ್ನು ಹಿಡಿದುಕೊಡಲು ಬಿಬಿಎಂಪಿ ಕ್ರಮ ಕೈಗೊಂಡಿದ್ದು, ವಾಟ್ಸಪ್ ಸಂಖ್ಯೆಯೊಂದನ್ನು ಜನತೆಗೆ ನೀಡಿದೆ. ಕಸ ಎಸೆಯುವವರ ಫೋಟೋ ತೆಗೆದು 9448197197 ಈ ನಂಬರ್‌ಗೆ ಕಳಿಸಿದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಪಾಲಿಕೆ ಹೇಳಿದೆ,

ಬಿಬಿಎಂಪಿ ವ್ಯಾಪ್ತಿಯಲ್ಲಿ ಆಟೋ ಟಿಪ್ಪರ್ ಗಳ ಮೂಲಕ ಪ್ರತಿನಿತ್ಯ ಮನೆ-ಮನೆ ಭೇಟಿ ನೀಡಿ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ಆದರೂ ಕೂಡಾ ನಾಗರಿಕರು ಆಟೋ ಟಿಪ್ಪರ್ ಗಳಿಗೆ ತ್ಯಾಜ್ಯವನ್ನು ನೀಡದೇ ರಾತ್ರಿ ವೇಳೆ ಅಥವಾ ಕೆಲಸಕ್ಕೆ ಹೋಗುವ ಸಮಯದಲ್ಲಿ ರಸ್ತೆ ಬದಿ, ಪಾದಚಾರಿ ಮಾರ್ಗ, ಖಾಲಿ ಸ್ಥಳ ಹಾಗೂ ರಾಜಕಾಲುವೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಡಿ ಹೋಗುತ್ತಾರೆ. ಇದರಿಂದ ನಗರದ ಸೌಂದರ್ಯಕ್ಕೆ ಧಕ್ಕೆಯುಂಟಾಗುತ್ತದೆ.

ತ್ಯಾಜ್ಯ ಬಿಸಾಡುವುದರ ಜೊತೆಗೆ ಕಟ್ಟಡಗಳ ಭಗ್ನಾವಶೇಷಗಳನ್ನು ಕೂಡಾ ರಸ್ತೆ ಬದಿ, ಖಾಲಿ ಜಾಗದಲ್ಲಿ ಸುರಿದು ಹೋಗುತ್ತಾರೆ. ಅದಲ್ಲದೆ ಅನುಪಯುಕ್ತ ವಸ್ತುಗಳನ್ನು ಕೂಡ ಎಲ್ಲೆಂದರಲ್ಲಿ ಬಿಸಾಡಿ ಹೋಗುತ್ತಾರೆ. ಆದ್ದರಿಂದ ಪಾಲಿಕೆಯ 8 ವಲಯಗಳಲ್ಲಿ ಬರುವ ಎಲ್ಲಾ ವಾರ್ಡ್‌ಗಳಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡುವುದನ್ನು ಶಾಶ್ವತವಾಗಿ ತಪ್ಪಿಸಲು ಕ್ರಮ ಕೈಗೊಂಡಿದೆ.

ನಗರದಲ್ಲಿ ಕಸ ಸುರಿಯುವ ಸ್ಥಳ (ಬ್ಲಾಕ್ ಸ್ಪಾಟ್) ಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡುವ ಗುರಿ ಹೊಂದಿರುವ ಬಿಬಿಎಂಪಿ, ಇದಕ್ಕಾಗಿ ದೂರು ಕೇಂದ್ರ ಸ್ಥಾಪಿಸಿ ಪ್ರತ್ಯೇಕವಾಗಿ ವಾಟ್ಸಪ್ ಸಂಖ್ಯೆಯನ್ನು ನೀಡಿದೆ. ಜನರು ಸದರಿ ವಾಟ್ಸಪ್ ಸಂಖ್ಯೆಗೆ ಸಂದೇಶದ ಮೂಲಕ ದೂರು ದಾಖಲಿಸಬಹುದಾಗಿದೆ.

ಜನರಪು 9448197197 ಈ ಸಂಖ್ಯೆಗೆ ಛಾಯಾಚಿತ್ರದೊಂದಿಗೆ ಸಂದೇಶ ಕಳುಹಿಸುವ ಮೂಲಕ ದೂರು ದಾಖಲಿಸಬಹುದು. ಆ ಬಳಿಕ ಸಂಬಂಧಪಟ್ಟ ಅಧಿಕಾರಿಗಳು ನಿಗದಿತ ಅವಧಿಯಲ್ಲಿ ತ್ಯಾಜ್ಯ/ಕಸ ವಿಲೇವಾರಿ ಮಾಡಿ ಸಮಸ್ಯೆ ಬಗೆಹರಿಸಲಿದ್ದಾರೆ.

ವಿಮಾನ ದುರಂತಗಳಲ್ಲಿ ಬ್ಲ್ಯಾಕ್​ ಬಾಕ್ಸ್​ ಹುಡುಕುವುದೇಕೆ? ಇದರ ಉಪಯೋಗವೇನು?

Black Box: ನಿನ್ನೆ ಮಧ್ಯಾಹ್ನ ಗುಜರಾತ್​ನ ಅಹಮದಾಬಾದ್‌ನಲ್ಲಿ ಭೀಕರ ವಿಮಾನ ಅಪಘಾತ ಸಂಭವಿಸಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಏರ್ ಇಂಡಿಯಾ ವಿಮಾನ AI171 (ಬೋಯಿಂಗ್ 787 ಡ್ರೀಮ್‌ಲೈನರ್) ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 1:30 ಕ್ಕೆ ಟೇಕಾಫ್​ ಆಗಿ ಕೆಲವೇ ನಿಮಿಷಗಳು ಅಂದ್ರೆ..1:38 ಕ್ಕೆ ವಿಮಾನವು ವಿಮಾನ ನಿಲ್ದಾಣದ ಪಕ್ಕದಲ್ಲಿರುವ ಮೇಘನಾನಿಗರ್‌ನ ವಸತಿ ಪ್ರದೇಶದಲ್ಲಿ ಅಪಘಾತಕ್ಕೀಡಾಯಿತು.

ಈ ವಿಮಾನದಲ್ಲಿ ಒಟ್ಟು 242 ಜನರಿದ್ದರು. ಈ ವಿಮಾನವು ಮೇಘನಾನಿಗರ್‌ನಲ್ಲಿರುವ ವೈದ್ಯಕೀಯ ಹಾಸ್ಟೆಲ್ ಮೇಲೆ ಬಿದ್ದಿದ್ದು, ಇದರಿಂದಾಗಿ ಅನೇಕ ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಈ ವಿಮಾನ ಅಪಘಾತವನ್ನು ಭಾರತ ಮತ್ತು ವಿಶ್ವದ ಅತ್ಯಂತ ಮಾರಕ ವಿಮಾನ ಅಪಘಾತಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ವಿಮಾನ ಅಪಘಾತಕ್ಕೆ ಸಂಬಂಧಿಸಿದ ತಾಂತ್ರಿಕ ಪದಗಳ ಬಗ್ಗೆ ನಾವು ಮಾತನಾಡುತ್ತಿದ್ದೇವೆ. ಅಂದ್ರೆ.. ಇದರಲ್ಲಿ ಬ್ಲ್ಯಾಕ್​ ಬಾಕ್ಸ್​ (ಕಪ್ಪು ಪೆಟ್ಟಿಗೆ) ಸೇರಿದಂತೆ ಅನೇಕ ತಾಂತ್ರಿಕ ವಿಷಯಗಳನ್ನು ಚರ್ಚಿಸಲಾಗುವುದು.

ಬ್ಲ್ಯಾಕ್​ ಬಾಕ್ಸ್​ ಎಂದರೇನು?: ಬ್ಲ್ಯಾಕ್​ ಬಾಕ್ಸ್​ ಅನ್ನು ಔಪಚಾರಿಕವಾಗಿ ಫ್ಲೈಟ್ ರೆಕಾರ್ಡರ್ ಎಂದು ಕರೆಯಲಾಗುತ್ತದೆ. ಇದು ವಿಮಾನವು ಹಾರಾಟದ ಸಮಯದಲ್ಲಿ ಸಂಭವಿಸುವ ಅನೇಕ ಪ್ರಮುಖ ಮಾಹಿತಿಯನ್ನು ದಾಖಲಿಸುವ ಅತ್ಯಂತ ಬಲವಾದ ಸಾಧನವಾಗಿದೆ. ಇದನ್ನು ಬ್ಲ್ಯಾಕ್​ ಬಾಕ್ಸ್ ಎಂದು ಕರೆದರೂ ಸಹ ಇದರ ಕಲರ್​ ಬ್ಲ್ಯಾಕ್​ ಆಗಿರುವುದಿಲ್ಲ. ಆದರೆ ಪ್ರಕಾಶಮಾನವಾದ ಕಿತ್ತಳೆ ಬಣ್ಣದ್ದಾಗಿದೆ.

ಬ್ಲ್ಯಾಕ್​ ಬಾಕ್ಸ್​ ಎರಡು ಭಾಗಗಳನ್ನು ಹೊಂದಿದೆ. ಇದರ ಮೊದಲ ಭಾಗವನ್ನು ಫ್ಲೈಟ್ ಡೇಟಾ ರೆಕಾರ್ಡರ್ (FDR) ಎಂದು ಹೆಸರಿಸಲಾಗಿದೆ ಮತ್ತು ಎರಡನೇ ಭಾಗವನ್ನು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (CVR) ಎಂದು ಹೆಸರಿಸಲಾಗಿದೆ. ಹಾರಾಟದಲ್ಲಿ ಅಪಘಾತವನ್ನು ತನಿಖೆ ಮಾಡುವ ತಜ್ಞರು ಬ್ಲ್ಯಾಕ್​ ಬಾಕ್ಸ್​ನಲ್ಲಿರುವ ಈ ಎರಡು ಭಾಗಗಳ ಮೂಲಕ ವಿಮಾನ ಅಪಘಾತದ ಕಾರಣಗಳನ್ನು ಕಂಡುಹಿಡಿಯುವಲ್ಲಿ ಸಹಾಯ ಪಡೆಯುತ್ತಾರೆ.

ಬ್ಲ್ಯಾಕ್​ ಬಾಕ್ಸ್​ ಯುಗಾರಂಭ: 1930 ರ ದಶಕದಲ್ಲಿ ಫ್ರೆಂಚ್ ಎಂಜಿನಿಯರ್ ಫ್ರಾಂಕೋಯಿಸ್ ಹುಸ್ಸೆನೋಟ್ ಫೋಟೋಗ್ರಾಫಿ ಫಿಲಂ ಹಾರಾಟದ ಮಾಹಿತಿಯನ್ನು ದಾಖಲಿಸುವ ಡೇಟಾ ರೆಕಾರ್ಡರ್ ಅನ್ನು ರಚಿಸಿದರು. 1950 ರ ದಶಕದಲ್ಲಿ ಆಸ್ಟ್ರೇಲಿಯಾದ ಡಾ. ಡೇವಿಡ್ ವಾರೆನ್ ವಿಮಾನದ ಡಾಟಾವನ್ನು ಹಾಗೂ ಕಾಕ್‌ಪಿಟ್‌ನ ಶಬ್ದಗಳನ್ನು (ಪೈಲಟ್‌ಗಳು ಕುಳಿತು ವಿಮಾನವನ್ನು ಹಾರಿಸುವ ಭಾಗ) ದಾಖಲಿಸಬಹುದಾದ ಸಾಧನವನ್ನು ರಚಿಸಲು ಸಲಹೆ ನೀಡಿದರು. ಡಾ. ಡೇವಿಡ್ ವಾರೆನ್ ಅವರ ಈ ಮೂಲಮಾದರಿಗೆ ಅವರ ಸ್ವಂತ ದೇಶವಾದ ಆಸ್ಟ್ರೇಲಿಯಾದಿಂದ ಹೆಚ್ಚಿನ ಬೆಂಬಲ ಸಿಗಲಿಲ್ಲ, ಆದರೆ ಪ್ರಪಂಚದ ಇತರ ದೇಶಗಳು ಅವರ ಸಲಹೆಯನ್ನು ಮೆಚ್ಚಿದವು.

ಅದರ ನಂತರ ಅವರ ಸಲಹೆಯನ್ನು ಸಹ ಕಾರ್ಯಗತಗೊಳಿಸಲಾಯಿತು ಮತ್ತು ಇಂದು ಎಲ್ಲಾ ದೊಡ್ಡ ವಿಮಾನಗಳಲ್ಲಿ ಬ್ಲ್ಯಾಕ್ಸ್​ ಬಾಕ್ಸ್​ ಹೊಂದಿರುವುದು ಕಡ್ಡಾಯವಾಗಿದೆ. ವಿಮಾನ ಸುರಕ್ಷತೆಗಾಗಿ ಮತ್ತು ಯಾವುದೇ ವಿಮಾನ ಅಪಘಾತದ ನಂತರ ಕಾರಣಗಳನ್ನು ಕಂಡುಹಿಡಿಯಲು ಬ್ಲ್ಯಾಕ್​ ಬಾಕ್ಸ್​ ಬಹಳ ಮುಖ್ಯವಾಗಿದೆ. ಈ ಬ್ಲ್ಯಾಕ್​ ಬಾಕ್ಸ್​ನಿಂದಾಗಿ ಭವಿಷ್ಯದ ವಿಮಾನಗಳನ್ನು ಸುರಕ್ಷಿತಗೊಳಿಸಲಾಗುತ್ತದೆ.

  • FDR ಹಾರಾಟದ ಸಮಯದಲ್ಲಿ ವಿಮಾನದ ಕಾರ್ಯಗಳು ಮತ್ತು ಸ್ಥಾನವನ್ನು ದಾಖಲಿಸುತ್ತದೆ.
  • ಇದು ಗಾಳಿಯ ವೇಗ, ಎತ್ತರ, ದಿಕ್ಕು, ಲಂಬ ವೇಗವರ್ಧನೆ ಮತ್ತು ವಿಮಾನದ ಸ್ಥಾನದಂತಹ ಅನೇಕ ಪ್ರಮುಖ ಮಾಹಿತಿಗಳನ್ನು ಕಲೆಹಾಕುತ್ತದೆ. , ಇದು ಯಾವುದೇ ಅಪಘಾತದ ನಂತರ ತನಿಖೆಗೆ ಬಹಳ ಮುಖ್ಯವಾಗಿದೆ.
  • ಹೊಸ ವಿಮಾನಗಳಲ್ಲಿ, ಕನಿಷ್ಠ 88 ನಿಯತಾಂಕಗಳನ್ನು ದಾಖಲಿಸುವುದು ಅವಶ್ಯಕ ಮತ್ತು ಫ್ಲಾಪ್ ಪೊಸಿಷನ್, ಆಟೋಪೈಲಟ್ ಸೆಟ್ಟಿಂಗ್ ಅಥವಾ ಹೊಗೆ ಪತ್ತೆಕಾರಕದಂತಹ ವಿಷಯಗಳನ್ನು ಒಳಗೊಂಡಂತೆ 1000 ಕ್ಕೂ ಹೆಚ್ಚು ವಿಷಯಗಳನ್ನು ಟ್ರ್ಯಾಕ್ ಮಾಡುವ ಕೆಲವು ಫ್ಲೈಟ್ ಡೇಟಾ ರೆಕಾರ್ಡರ್‌ಗಳು (FDR) ಇವೆ.
  • FDR ನ ವಿಶೇಷವೆಂದರೆ ಅದು 6,000 ಮೀಟರ್‌ಗಳಿಗಿಂತ ಹೆಚ್ಚು ಆಳದ ನೀರಿನ ಅಡಿಯಲ್ಲಿಯೂ ಸಹ ಸಂಕೇತಗಳನ್ನು ಕಳುಹಿಸಬಹುದು.
  • FDR ನಿಂದ ಪಡೆದ ಡೇಟಾದೊಂದಿಗೆ, ತನಿಖಾ ಸಂಸ್ಥೆಗಳು ಮತ್ತು ಜನರು ಕಂಪ್ಯೂಟರ್-ರಚಿತ ವಿಡಿಯೋಗಳನ್ನು ಮಾಡುವ ಮೂಲಕ ವಿಮಾನ ಅಪಘಾತದ ಸಮಯದಲ್ಲಿ ಅಂದರೆ ಕೊನೆಯ ಕ್ಷಣಗಳಲ್ಲಿ ಏನಾಗಿರಬಹುದು ಎಂದು ತಿಳಿಯಲು ಪ್ರಯತ್ನಿಸುತ್ತಾರೆ. ಈ ಡೇಟಾದ ಸಹಾಯದಿಂದ ಮಾಡಿದ ವಿಡಿಯೋವನ್ನು ಹಾರಾಟದ ಕೊನೆಯ ಕ್ಷಣಗಳನ್ನು ನೋಡಲು ಬಳಸಬಹುದು. ಇದು ವಿಮಾನದ ಸ್ಥಿತಿ, ಉಪಕರಣದ ವಾಚನಗೋಷ್ಠಿಗಳು ಮತ್ತು ಇತರ ವಿವರಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ.
  • ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (CVR) ವಿವಶೇಷತೆಗಳು!:

    • ಬ್ಲ್ಯಾಕ್​ ಬಾಕ್ಸ್​ನ ಎರಡನೇ ಭಾಗವನ್ನು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಅಂದರೆ CVR ಎಂದು ಕರೆಯಲಾಗುತ್ತದೆ. ಕಾಕ್‌ಪಿಟ್‌ನಲ್ಲಿ ಕುಳಿತಿರುವ ಪೈಲಟ್‌ಗಳ ಸಂಭಾಷಣೆ ಮತ್ತು ಎಂಜಿನ್‌ನ ಶಬ್ದ​, ಸ್ಟಾಲ್ ಅಲರ್ಟ್, ಲ್ಯಾಂಡಿಂಗ್ ಗೇರ್ ಚಟುವಟಿಕೆಗಳು ಮತ್ತು ಇತರ ಹಲವು ಶಬ್ದಗಳನ್ನು ರೆಕಾರ್ಡ್ ಮಾಡುವುದು ಇದರ ಕೆಲಸವಾಗಿದೆ.
    • ಈ ಶಬ್ದಗಳಿಂದ ಎಂಜಿನ್‌ನ ವೇಗ, ವಿಮಾನದ ವ್ಯವಸ್ಥೆಗಳಲ್ಲಿನ ಅಸಮರ್ಪಕ ಕಾರ್ಯ ಸೇರಿದಂತೆ ಘಟನೆಯ ಸಮಯದಲ್ಲಿ ನಡೆದ ಅನೇಕ ವಿಷಯಗಳನ್ನು ಪತ್ತೆಹಚ್ಚಬಹುದು.
    • ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಅನ್ನು ಸಾಮಾನ್ಯವಾಗಿ ವಿಮಾನದ ಬಲ ವಿಭಾಗದಲ್ಲಿ ಇರಿಸಲಾಗುತ್ತದೆ. ಈ ಕಾರಣದಿಂದಾಗಿ ಅಪಘಾತದಲ್ಲಿ ಇದು ಕನಿಷ್ಠ ಪರಿಣಾಮ ಬೀರುತ್ತದೆ.
    • ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಅನ್ನು ಬಹಳ ರಹಸ್ಯವಾಗಿಡಲಾಗುತ್ತದೆ. ಅಮೆರಿಕ ಕಾನೂನಿನ ಪ್ರಕಾರ, ಸಿವಿಆರ್‌ನ ಆಡಿಯೊ ರೆಕಾರ್ಡಿಂಗ್ ಅನ್ನು ಸಾರ್ವಜನಿಕಗೊಳಿಸಲಾಗುವುದಿಲ್ಲ ಮತ್ತು ಅದರ ಲಿಖಿತ ಪ್ರತಿಲಿಪಿಯನ್ನು ತನಿಖೆ ಅಥವಾ ಸಾರ್ವಜನಿಕ ವಿಚಾರಣೆಯ ಸಮಯದಲ್ಲಿ ಮಾತ್ರ ಬಿಡುಗಡೆ ಮಾಡಲಾಗುತ್ತದೆ.
    • ಬ್ಲ್ಯಾಕ್​ ಬಾಕ್ಸ್​ ಏಕೆ ಅಗತ್ಯ?: ಯಾವುದೇ ವಿಮಾನ ಅಪಘಾತದ ನಂತರ ಆ ಅಪಘಾತವನ್ನು ತನಿಖೆ ಮಾಡಲು ಬ್ಲ್ಯಾಕ್​ ಬಾಕ್ಸ್​ ಬಹಳ ಮುಖ್ಯ. ಅಪಘಾತದ ಕಾರಣವನ್ನು ಕಂಡುಹಿಡಿಯಲು ಇದು ಸಹಾಯ ಮಾಡುತ್ತದೆ. ಏಕೆಂದರೆ ಇದು ಹಾರಾಟದ ಪ್ರತಿ ಕ್ಷಣದ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಅಪಘಾತದ ಮೊದಲು ನಡೆದ ಘಟನೆಗಳನ್ನು ಅರ್ಥಮಾಡಿಕೊಳ್ಳಲು ತನಿಖಾ ಅಧಿಕಾರಿಗಳಿಗೆ ಬ್ಲ್ಯಾಕ್​ ಬಾಕ್ಸ್​ ಸಹಾಯ ಮಾಡುತ್ತದೆ.

      ಉದಾಹರಣೆಗೆ.. ಅಪಘಾತದ ಸಮಯದಲ್ಲಿ ಯಾವುದೇ ತಾಂತ್ರಿಕ ಸಮಸ್ಯೆ ಇದೆಯೋ ಇಲ್ಲವೋ, ಎಂಜಿನ್‌ನಲ್ಲಿ ಯಾವುದೇ ಸಮಸ್ಯೆ ಇದೆಯೋ ಇಲ್ಲವೋ, ಹಕ್ಕಿ ಡಿಕ್ಕಿ ಹೊಡೆದಿದೆಯೋ ಇಲ್ಲವೋ, ಗಾಳಿಯಲ್ಲಿ ಸ್ಫೋಟವಾಗಿದೆಯೋ ಇಲ್ಲವೋ, ಯಾವುದೇ ಮಾನವ ತಪ್ಪಿನಿಂದ ಅಪಘಾತ ಸಂಭವಿಸಿದೆಯೋ ಇಲ್ಲವೋ ಸೇರಿದಂತೆ ಇತರೆ ಎಲ್ಲಾ ಅಂಶಗಳನ್ನು ಕಂಡುಹಿಡಿಯುವಲ್ಲಿ ಬ್ಲ್ಯಾಕ್​ ಬಾಕ್ಸ್​ ದೊಡ್ಡ ಪಾತ್ರವನ್ನು ವಹಿಸುತ್ತದೆ.

      ಅಪಘಾತದ ನಂತರ ಏನಾಗುತ್ತದೆ?: ವಿಮಾನ ಅಪಘಾತದ ನಂತರ ಮೊದಲು ಹುಡುಕುವುದೇ ಬ್ಲ್ಯಾಕ್​ ಬಾಕ್ಸ್​. ಈ ಬ್ಲ್ಯಾಕ್​ ಬಾಕ್ಸ್​ ಅನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಅಥವಾ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ದ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. ಅಲ್ಲಿ ಅದರ ಆಳವಾದ ತನಿಖೆ ಪ್ರಾರಂಭವಾಗುತ್ತದೆ.

    • ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಬ್ಲ್ಯಾಕ್​ ಬಾಕ್ಸ್​ ಮೆಮೊರಿ ಮಾಡ್ಯೂಲ್‌ನಿಂದ ಡೇಟಾವನ್ನು ಹೊರತೆಗೆಯುತ್ತಾರೆ. ಅದರ ನಂತರ ಅವರು ಅದರಲ್ಲಿ ರೆಕಾರ್ಡ್ ಮಾಡಿದ ಧ್ವನಿಗಳು ಮತ್ತು ಹಾರಾಟದ ಡೇಟಾವನ್ನು ಸೇರಿಸುತ್ತಾರೆ. ಈ ಡೇಟಾವನ್ನು ಸಿಂಕ್ ಮಾಡಲಾಗುತ್ತದೆ. ಬಳಿಕ ರಾಡಾರ್ ಮತ್ತು ATC ಡೇಟಾದಲ್ಲಿ ದಾಖಲಾದ ಡೇಟಾದೊಂದಿಗೆ ಹೊಂದಿಸಲಾಗುತ್ತದೆ.

      ಈ ಸಂಪೂರ್ಣ ಪ್ರಕ್ರಿಯೆಯು ಕೆಲವು ದಿನಗಳಿಂದ ಹಲವಾರು ವಾರಗಳವರೆಗೆ ತೆಗೆದುಕೊಳ್ಳಬಹುದು. ಅಪಘಾತದ ಸಮಯದಲ್ಲಿ ಬ್ಲ್ಯಾಕ್​ ಬಾಕ್ಸ್​ ಹೆಚ್ಚಿನ ಹಾನಿಯಾಗಿಲ್ಲದಿದ್ದರೆ ತನಿಖೆಯನ್ನು ತ್ವರಿತವಾಗಿ ಮಾಡಲಾಗುತ್ತದೆ. ಒಂದು ವೇಳೆ ಬ್ಲ್ಯಾಕ್​ ಬಾಕ್ಸ್​ ಹೆಚ್ಚು ಹಾನಿಗೊಳಗಾಗಿದ್ದರೆ ತನಿಖೆ ಮಾಡಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ.

ನಾಯಕತ್ವದಿಂದ ಸಿದ್ದರಾಮಯ್ಯ ಕಲಿಯಬೇಕು: ಕೇಂದ್ರ ಸಚಿವ ವಿ.ಸೋಮಣ್ಣ

ಹುಬ್ಬಳ್ಳಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಬದಲು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 8 ದಿನಗಳ ಕಾಲ ನವದೆಹಲಿಗೆ ಭೇಟಿ ನೀಡಿ ಪ್ರಧಾನಿಮಂತ್ರಿಗಳ ಆಡಳಿತ ಶೈಲಿಯನ್ನು ವೀಕ್ಷಿಸಿ, ಕರ್ನಾಟಕದಲ್ಲಿ “ಜನಪರ ವಿಧಾನ” ಅಳವಡಿಸಿಕೊಳ್ಳಬೇಕು ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಅವರು ಸೋಮವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ 11 ವರ್ಷಗಳ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತಕ್ಕೆ ಸಿದ್ದರಾಮಯ್ಯ ಶೂನ್ಯ ಅಂಕ ನೀಡಿದ್ದರ ಕುರಿತು ತಿರುಗೇಟು ನೀಡಿದರು.

ನಾನು ಕೂಡ ಮೊದಲು ಕಾಂಗ್ರೆಸ್ ಜೊತೆಗಿದ್ದೆ. ಅಂದಿನ ಸಿದ್ದರಾಮಯ್ಯ ಮತ್ತು ಇಂದಿನ ಸಿದ್ದರಾಮಯ್ಯ ನಡುವೆ ಅಗಾಧ ವ್ಯತ್ಯಾಸವಿದೆ. ಕಾಂಗ್ರೆಸ್ ನಾಯಕರಿಗೆ ನೈತಿಕ ಸಮಗ್ರತೆಯ ಕೊರತೆಯಿದೆ. ಮೋದಿಯವರ ಜನಪರ ಆಡಳಿತವನ್ನು ನೋಡಿ, ಅವರು ತಮ್ಮದೇ ಆದ ನ್ಯೂನತೆಗಳ ಬಗ್ಗೆ ಅರಿತುಕೊಳ್ಳುತ್ತಿದ್ದಾರೆ.

ತುಮಕೂರನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಮರುನಾಮಕರಣ ಮಾಡುವ ಬಗ್ಗೆ ನಡೆಯುತ್ತಿರುವ ಚರ್ಚೆ ಕುರಿತು ಮಾತನಾಡಿ, ಇದು ನರಿ ಮತ್ತು ಕುರಿಮರಿಯ ಕಥೆಯಂತೆ ಎಂದು ವ್ಯಂಗ್ಯವಾಡಿದರು.

ಗೃಹ ಸಚಿವ ಡಾ. ಜಿ. ಪರಮೇಶ್ವರ ಈ ವಿಷಯದಲ್ಲಿ ಆತುರದಿಂದ ವರ್ತಿಸುವುದಿಲ್ಲ ಎಂದು ನಾನು ನಂಬುತ್ತೇನೆ. ನಾನು ಇನ್ನೂ ಯಾವುದೇ ನಿಲುವನ್ನು ತೆಗೆದುಕೊಂಡಿಲ್ಲ. ಅದು ಪ್ರಯೋಜನಕಾರಿ ಎಂದು ತೋರಿದರೆ, ನಾನು ಅದನ್ನು ಬೆಂಬಲಿಸುತ್ತೇನೆ

ಎಸ್ಪಿಗೆ ರಿಲೀವ್, ನಿಂಗಪ್ಪನ ಮೊಬೈಲ್‌ನಲ್ಲಿ ರಹಸ್ಯ?

 

ಬೆಂಗಳೂರು: ಲೋಕಾಯುಕ್ತ ಸಂಸ್ಥೆಯ ಮೇಲೆ ಭ್ರಷ್ಟಾಚಾರದ ಆರೋಪದ ಕಳಂಕವೊಡ್ಡಿದೆ. ಸರಕಾರಿ ಅಧಿಕಾರಿಗಳಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ ಆರೋಪದಡಿ ಮಾಜಿ ಹೆಡ್ ಕಾನ್ಸ್ಟೆಬಲ್ ನಿಂಗಪ್ಪನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಆದರೆ, ಈ ಪ್ರಕರಣದಲ್ಲಿ ಲೋಕಾಯುಕ್ತದ ಕೆಲ ಪೊಲೀಸರೂ ಭಾಗಿಯಾಗಿರುವ ಆರೋಪ ಗಂಭೀರ ಆತಂಕವನ್ನುಂಟುಮಾಡಿದೆ. ಈ ಬೆಳವಣಿಗೆಯ ನಡುವೆ ಲೋಕಾಯುಕ್ತ ಬೆಂಗಳೂರು ಘಟಕದ ಎಸ್ಪಿ ಮಹದೇವ ಶ್ರೀನಾಥ ಜೋಶಿ ಅವರನ್ನು ಮಂಗಳವಾರ ಸೇವೆಯಿಂದ ರಿಲೀವ್ ಮಾಡಲಾಗಿದೆ. ಈ ಘಟನೆಯಿಂದ ಲೋಕಾಯುಕ್ತ ಸಂಸ್ಥೆಯ ವಿಶ್ವಾಸಾರ್ಹತೆಯೇ ಪ್ರಶ್ನಾರ್ಹವಾಗಿದೆ.

ಹೈಕೋರ್ಟ್ ಆದೇಶದಂತೆ ಮೂರು ವರ್ಷಗಳ ಹಿಂದೆ ಎಫ್‌ಐಆರ್ ದಾಖಲಿಸುವ ಅಧಿಕಾರ ಪಡೆದ ಲೋಕಾಯುಕ್ತ ಪೊಲೀಸ್ ವಿಭಾಗವು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಗುರಿಯನ್ನು ಹೊಂದಿತ್ತು. ಆದರೆ, ಈಗ ಆ ಸಂಸ್ಥೆಯೊಳಗಿನ ಕೆಲವರು ಭ್ರಷ್ಟಾಚಾರದಲ್ಲಿ ತೊಡಗಿರುವ ಆರೋಪ ಕೇಳಿಬಂದಿದೆ. ಬಿಡಿಎ, ಅಬಕಾರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಲೋಕಾಯುಕ್ತ ದಾಳಿಯ ಬೆದರಿಕೆ ಹಾಕಿ ಹಣ ಸುಲಿಗೆ ಮಾಡುತ್ತಿದ್ದ ಆರೋಪದಡಿ ನಿಂಗಪ್ಪನನ್ನು ಎಸ್ಪಿ ಕೋನ ವಂಶಿಕೃಷ್ಣ ನೇತೃತ್ವದ ತಂಡ ಕೆಲ ದಿನಗಳ ಹಿಂದೆ ಬಂಧಿಸಿತ್ತು.

ಪೊಲೀಸ್ ಇಲಾಖೆಯಲ್ಲಿ ಹೆಡ್ ಕಾನ್ಸ್ಟೆಬಲ್ ಆಗಿದ್ದ ನಿಂಗಪ್ಪ ಕೆಲ ವರ್ಷಗಳ ಹಿಂದೆ ಸೇವೆಯಿಂದ ವಜಾಗೊಂಡಿದ್ದ. ಬಳಿಕ ಲೋಕಾಯುಕ್ತದ ಹೆಸರಿನಲ್ಲಿ ಸರಕಾರಿ ಅಧಿಕಾರಿಗಳಿಗೆ ಬೆದರಿಕೆ ಹಾಕಿ ಹಣ ಸುಲಿಗೆಯನ್ನೇ ವೃತ್ತಿಯಾಗಿ ಮಾಡಿಕೊಂಡಿದ್ದ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಠಾಣೆಗಳಲ್ಲಿ ಆತನ ವಿರುದ್ಧ ಪ್ರಕರಣಗಳು ದಾಖಲಾಗಿದ್ದು, ಹಲವು ಬಾರಿ ಜೈಲು ಸೇರಿದ್ದ,

ನಿಂಗಪ್ಪನ ಕೃತ್ಯದಲ್ಲಿ ಲೋಕಾಯುಕ್ತದ ಕೆಲವು ಪೊಲೀಸರು ಭಾಗಿಯಾಗಿದ್ದರೆ, ಸುಲಿಗೆಯ ಹಣದಲ್ಲಿ ಪಾಲು ಪಡೆಯುತ್ತಿದ್ದರೆಂಬ ಶಂಕೆಯಿದೆ. ನಿಂಗಪ್ಪನ ಮೊಬೈಲ್‌ನಿಂದ ದೊರೆತ ಸಾಕ್ಷ್ಯಗಳನ್ನು ಆಧರಿಸಿ, ಆತ ಯಾರಿಗೆ ಹಣ ತಲುಪಿಸಿದ್ದ, ಯಾರ ಜೊತೆ ಸಂಪರ್ಕದಲ್ಲಿದ್ದ ಎಂಬುದನ್ನು ತನಿಖೆಯ ಮೂಲಕ ಕಂಡುಹಿಡಿಯಲಾಗುತ್ತಿದೆ. ಈ ಪ್ರಕರಣದಲ್ಲಿ ಎಸ್ಪಿ ಮಹದೇವ ಶ್ರೀನಾಥ ಜೋಶಿಯವರ ರಿಲೀವ್‌ಗೆ ನಿಖರ ಕಾರಣ ತಿಳಿದಿಲ್ಲವಾದರೂ, ಈ ಬೆಳವಣಿಗೆ ಲೋಕಾಯುಕ್ತದೊಳಗಿನ ಆಂತರಿಕ ಸಮಸ್ಯೆಗಳನ್ನು ಎತ್ತಿ ತೋರಿಸಿದೆ.

ಈ ಘಟನೆಯಿಂದ ಲೋಕಾಯುಕ್ತ ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ ಜನರಲ್ಲಿ ಅನುಮಾನ ಮೂಡಿದೆ. ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕಾದ ಸಂಸ್ಥೆಯೇ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವುದು ಆಘಾತಕಾರಿಯಾಗಿದೆ. ಈ ಪ್ರಕರಣದ ತನಿಖೆಯಿಂದ ಸತ್ಯ ಹೊರಬಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂಬುದು ಜನರ ಆಗ್ರಹವಾಗಿದೆ.

ಬೆಳಗಾವಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಮೇಲೆ ದೂರು ದಾಖಲು!

 

ಬೆಳಗಾವಿ: ಕಳೆದ ಏಪ್ರಿಲ್ 28 ರಂದು ಕಾಂಗ್ರೆಸ್ ಸಮಾವೇಶದ ವೇಳೆ ಕರ್ತವ್ಯ ನಿರತ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಅಧಿಕಾರದ ದರ್ಪ ಹಾಗೂ ವೇದಿಕೆಯಲ್ಲೇ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ದಾಖಲಾಗಿದೆ,
ಬೆಳಗಾವಿಯಲ್ಲಿ ನಡೆದಿದ್ದ ಕಾಂಗ್ರೆಸ್ ಸಮಾವೇಶದ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಭರಮನಿ ಅವರನ್ನು ಹೊಡೆಯಲೆಂದು ಕೈ ಎತ್ತಿದ್ದರು, ಈ ಘಟನೆ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು ಇದೀಗ ಈ ಘಟನೆಗೆ ಸಂಬಂಧಪಟ್ಟಂತೆ ಆರ್ ಟಿ ಐ ಕಾರ್ಯಕರ್ತ ಭೀಮಪ್ಪ ಗಡಾ ಅವರು ದೂರ ದಾಖಲಿಸಿದ್ದಾರೆ,
ಸಿಎಂ ಸಿದ್ದರಾಮಯ್ಯ ಅವರು ನಾರಾಯಣ ಭರಮನಿ ಅವರ ಮೇಲೆ ದರ್ಪ ತೋರುವ ಮೂಲಕ ಕರ್ತವ್ಯನಿರತ ಅಧಿಕಾರಿಗೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿ ಭೀಮಪ್ಪ ಗಡಾ ಅವರು ಬೆಳಗಾವಿ ನಗರದ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ,
ಕಾನೂನು ಸಚಿವೆ ಹಾಗೂ ಇನ್ನಿತರ ಸಚಿವರ ಎದುರೇ ಸಿಎಂ ಸಿದ್ದರಾಮಯ್ಯ ಪೊಲೀಸ್ ಅಧಿಕಾರಿಗೆ ಕೀಳು ಪದ ಬಳಸಿ ಹೊಡೆಯಲೆಂದು ಕೈ ಎತ್ತಿದ್ದು ಸದ್ಯ ಸಿಎಂ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 2023-132 ರ ಅಡಿಯಲ್ಲಿ ದೂರು ದಾಖಲಿಸಲಾಗಿದೆ,
ಭಾರತೀಯ ನ್ಯಾಯ ಸಂಹಿತೆ 2023-132 ರ ಕರ್ತವ್ಯದಲ್ಲಿ ನಿರತರಾಗಿದ್ದ ಯಾವುದೇ ಅಧಿಕಾರಿಯ ಮೇಲೆ ಹಲ್ಲೆ ಅಥವಾ ಬಲ ಪ್ರಯೋಗ ಮಾಡುವ ಯಾವುದೇ ವ್ಯಕ್ತಿಗೆ ಎರಡು ವರ್ಷದ ವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನು ವಿಧಿಸಬಹುದಾಗಿದೆ,

ವಿಮಾನ ದುರಂತ: ಅಹಮದಾಬಾದ್‌ಗೆ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ

ನವದೆಹಲಿ: ಏರ್​ ಇಂಡಿಯಾ ವಿಮಾನ ಅಪಘಾತ ದುರಂತ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ಅಹಮದಾಬಾದ್‌ಗೆ ಭೇಟಿ ನೀಡುವ ನಿರೀಕ್ಷೆಯಿದೆ. ಅಪಘಾತ ಸ್ಥಳ ಹಾಗೂ ಸಿವಿಲ್ ಆಸ್ಪತ್ರೆಗೆ ತೆರಳಿ ಅವರು ಪರಿಶೀಲನೆ ನಡೆಸುವ ಸಾಧ್ಯತೆಯಿದೆ.

ಈ ಬಗ್ಗೆ ಎನ್​ಎನ್​ಐ ವರದಿ ಮಾಡಿದ್ದು, ಪ್ರಧಾನಿ ಅವರು ಅಪಘಾತದಲ್ಲಿ ಮೃತಪಟ್ಟ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿಗೆ ಅಂತಿಮ ನಮನ ಸಲ್ಲಿಸುವ ನಿರೀಕ್ಷೆಯಿದೆ. ಬಳಿಕ ಅವರು ಕೇಂದ್ರ ಮತ್ತು ರಾಜ್ಯ ನಾಯಕರು ಹಾಗೂ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸುವ ನಿರೀಕ್ಷೆಯಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಕೇಂದ್ರ ಸಚಿವರಾದ ಮಿನ್ ರಾಮ್ ನಾಯಕ್, ಸಿ ಆರ್ ಪಾಟೀಲ್ ಅವರು ಪ್ರಧಾನಿ ಅವರೊಂದಿಗೆ ಆಗಮಿಸುವ ನಿರೀಕ್ಷೆಯಿದೆ.

ಗುರುವಾರ ಸಂಜೆ ವಿಮಾನ ಪತನಗೊಂಡ ಸ್ಥಳಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಳಿಕ ನೇರವಾಗಿ ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು. ಅಲ್ಲದೆ, ಗುಜರಾತ್​ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರೊಂದಿಗೆ ಸಭೆ ನಡೆಸಿ ಇಡೀ ಘಟನೆಯ ಬಗ್ಗೆ ವಿವರವಾದ ಮಾಹಿತಿ ಪಡೆದಿದ್ದಾರೆ. ದುರಂತದಲ್ಲಿ ಎಷ್ಟು ಮಂದಿ ಮೃತಪಟ್ಟರು ಎಂಬುದನ್ನು ಡಿಎನ್ಎ ಪರೀಕ್ಷೆ ನಡೆಸಿದ ನಂತರ ಘೋಷಿಸಲಾಗುವುದು. ವಿಮಾನದಲ್ಲಿ ಸುಮಾರು 1,25,000 ಲೀಟರ್ ಇಂಧನ ಇತ್ತು. ಪತನದ ಸಂದರ್ಭದಲ್ಲಿ ಇಂಧನ ಹೊತ್ತಿ ಉರಿಯುತ್ತಿದ್ದುದರಿಂದ ಸ್ಥಳದಲ್ಲಿ ಭಾರೀ ಪ್ರಮಾಣದ ತಾಪಮಾನವಿತ್ತು. ಹಾಗಾಗಿ, ಅಲ್ಲಿ ಯಾರನ್ನೂ ಉಳಿಸಲು ಅವಕಾಶವಿರಲಿಲ್ಲ ಎಂದು ಅವರು ತಿಳಿಸಿದ್ದರು.

ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಔಪಚಾರಿಕ ತನಿಖೆಯನ್ನು ಪ್ರಾರಂಭಿಸಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಗುರುವಾರ ದೃಢಪಡಿಸಿದ್ದಾರೆ.

ಗುರುವಾರ 242 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತು ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಇಲ್ಲಿನ ವೈದ್ಯಕೀಯ ಕಾಲೇಜು ಸಂಕೀರ್ಣಕ್ಕೆ ಅಪ್ಪಳಿಸಿತ್ತು. ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಅವಘಡ ಸಂಭವಿಸಿದ್ದು, ಒಟ್ಟಾರೆ 265 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ದೇಶ ಕಂಡ ಅತ್ಯಂತ ಭೀಕರ ವಾಯು ದುರಂತ ಇದಾಗಿದೆ.

“ಹರಿದಾಸ ಮಂಜರಿ”

ಬೆಂಗಳೂರು : ತ್ಯಾಗರಾಜನಗರದ ಶ್ರೀ ಕಂಭದ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಜೂನ್ 13, ಶುಕ್ರವಾರ ಸಂಜೆ 6-30ಕ್ಕೆ ಡಾ|| ಶ್ರೀಮತಿ ಲಾವಣ್ಯ ವೆಂಕಟೇಶ್ ಮತ್ತು ಶ್ರೀ ಕಿರಣ್ ರವರಿಂದ “ಹರಿದಾಸ ಮಂಜರಿ” ಗಾಯನ ಕಾರ್ಯಕ್ರಮ.

ವಾದ್ಯ ಸಹಕಾರ : ಶ್ರೀ ಅಮಿತ್ ಶರ್ಮಾ (ಕೀ-ಬೋರ್ಡ್), ಶ್ರೀ ಸರ್ವೋತ್ತಮ (ತಬಲಾ).

ಸ್ಥಳ : ಶ್ರೀ ಕಂಭದ ನರಸಿಂಹಸ್ವಾಮಿ ದೇವಸ್ಥಾನ, ‘ವಜ್ರಕ್ಷೇತ್ರ’, #152/1, 7ನೇ ಮುಖ್ಯರಸ್ತೆ, 7ನೇ ಅಡ್ಡರಸ್ತೆ, ತ್ಯಾಗರಾಜನಗರ 3ನೇ ಬ್ಲಾಕ್, ಬೆಂಗಳೂರು-28

ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯಾಧೀಶೆಯಾಗಿ ಶ್ರೀಮತಿ ಪೆರುಗು ಶ್ರೀ ಸುಧಾ

ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯಾಧೀಶೆಯಾಗಿ ಶ್ರೀಮತಿ ಪೆರುಗು ಶ್ರೀ ಸುಧಾ ಅಧಿಕಾರ ಸ್ವೀಕಸಿದರು. 
ತೆಲಂಗಾಣ ಉಚ್ಚನ್ಯಾಯಾಲಯದಲ್ಲಿ 2021ರಿಂದ ಖಾಯಂ ನ್ಯಾಯಾಧೀಶರಾಗಿ ನೇಮಕಗೊಂಡು ಇದೀಗ ಕರ್ನಾಟಕದಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುವ ಸದಾವಕಾಶ ದೊರೆತಿದೆ. ನ್ಯಾಯಾಲಯದ ಅಪೇಕ್ಷೆಗೆ ತಕ್ಕಂತೆ ಕೆಲಸ ನಿರ್ವಹಿಸುವುದಾಗಿ ಅವರು ತಿಳಿಸಿದರು. ನ್ಯಾಯಾಲಯದ ನಿರೀಕ್ಷೆ ಹಾಗೂ ಆತ್ಮಸಾಕ್ಷಿಗೆ ಅನುಗುಣವಾಗಿ ಕರ್ತವ್ಯ ಪಾಲನೆ ಮಾಡುತ್ತೇನೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಶ್ರೀಮತಿ ಪೆರುಗು ಶ್ರೀ ಸುಧಾ ತಿಳಿಸಿದರು.


ಅವರು ತೆಲಂಗಾಣದಿಂದ ಕರ್ನಾಟಕ ಉಚ್ಚನ್ಯಾಯಾಲಯಕ್ಕೆ ನ್ಯಾಯಾಧೀಶರಾಗಿ ವರ್ಗಾವಣೆಗೊಂಡು ನೇಮಕವಾದ ನಂತರ ಇಂದು ತಮ್ಮ ಕಚೇರಿಯ ಅಧಿಕಾರ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ನೂತನ ನ್ಯಾಯಾಧೀಶರಿಗೆ ಸ್ವಾಗತ ಕೋರಿ ಮಾತನಾಡಿದ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷರಾದ ಮಿಟ್ಟಲ ಕೋಡ್ ಎಸ್.ಎಸ್,  ನ್ಯಾಯಾಧೀಶರಾದ ಶ್ರೀಮತಿ ಪೆರಗು ಶ್ರೀ ಸುಧಾ ಅವರು ಕರ್ನೂಲ್ ಹಾಗೂ ಅದೋನಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಗುಂಟೂರಿನ ಎ.ಸಿ. ಕಾನೂನು ಕಾಲೇಜಿನಲ್ಲಿ ಪದವಿ ಪಡೆದರು. ನಂತರ ಆಂಧ್ರಪ್ರದೇಶದಲ್ಲಿ ವಕೀಲರಾಗಿ ನೋಂದಾಯಿಸಿ, ತೆನಾಲಿ, ಶ್ರೀಕಾಳಹಸ್ತಿ ಹಾಗೂ ಕವಾಲಿಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ನಂತರ 2002ರಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ನಿಜಾಮಾಬಾದಿನಲ್ಲಿ ಸೇವೆ ಪ್ರಾರಂಭಿಸಿದ್ದಾರೆ. ಬಾಂಬ್ ದಾಳಿ ಪ್ರಕರಣದಲ್ಲಿ ವಿಶೇಷ ನ್ಯಾಯಾಧೀಶರಾಗಿ, ಹೈದರಾಬಾದ್ ಕೌಟುಂಬಿಕ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶರಾಗಿ ಸಹ ಸೇವೆ ಸಲ್ಲಿಸಿದ್ದಾರೆ.

ವಿಜಯವಾಡದಲ್ಲಿ ಸೆಷನ್ಸ್ ನ್ಯಾಯಾಧೀಶರಾಗಿ, ಕದೀಂನಗರ, ವಿಶಾಖಪಟ್ಟಣ ಹಾಗೂ ನಿಜಾಮಾಬಾದ್‍ನಲ್ಲಿ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ನಂತರ ಹೈದರಾಬಾದ್‍ನ ಸಿಟಿ ಸಿವಿಲ್ ಕೋರ್ಟ್‍ನಲ್ಲಿ ಪ್ರಧಾನ ನ್ಯಾಯಾಧೀಶರಾಗಿ ಹಲವು ಪ್ರಕರಣಗಳನ್ನು ಇತ್ಯರ್ಥ ಪಡಿಸಿದ್ದಾರೆ. ತೆಲಂಗಾಣ ಹೈಕೋರ್ಟ್‍ನ ನ್ಯಾಯಾಧೀಶರಾಗಿ 2021ರಿಂದ ನೇಮಕಗೊಂಡು ಇದೀನ ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯಾಧೀಶರಾಗಿ ವರ್ಗಾವಣೆಗೊಂಡು ನೆಮಕಗೊಂಡಿದ್ದಾರೆ. ಇವರು ಇತರ ನ್ಯಾಯಾಧೀಶರು, ವಕೀಲರು, ನ್ಯಾಯಾಂಗ ಅಧಿಕಾರಿಗಳ ಜೊತೆಗೂಡಿ ಸಮರ್ಥವಾಗಿ ಕೆಲಸ ನಿರ್ವಹಿಸಲಿ ಎಂದು ಶುಭ ಕೋರಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಉಚ್ಚನ್ಯಾಯಾಲಯದ ಹಂಗಾಮಿ ಮುಖ್ಯ ನ್ಯಾಯಾಧೀಶರಾದ ವಿ. ಕಾಮೇಶ್ವರ್ ರಾವ್, ಕರ್ನಾಟಕ ಉಚ್ಚನ್ಯಾಯಾಲಯ ನ್ಯಾಯಾಧೀಶರು, ವಕೀಲರು, ಕರ್ನಾಟಕ ವಕೀಲರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ನ್ಯಾಯಾಂಗ ಅಧಿಕಾರಿಗಳು ಹಾಗೂ ಇನ್ನಿತರು ಉಪಸ್ಥಿತರಿದ್ದರು.