Home Blog Page 81

ವಿವಿಧ ಯೋಜನೆಗಳಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ವಿವಿಧ ಯೋಜನೆಗಳಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಬೆಂಗಳೂರು ನಗರ ಜಿಲ್ಲೆಜೂ.13 (ಕರ್ನಾಟಕ ವಾರ್ತೆ): ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿ. ವತಿಯಿಂದ 2025-26 ನೇ ಸಾಲಿನಲ್ಲಿ ಡಿ.ದೇವರಾಜ ಅರಸು ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆ,  ಗಂಗಾ ಕಲ್ಯಾಣ ನೀರಾವರಿ ಯೋಜನೆ, ಅರಿವು-ಶೈಕ್ಷಣಿಕ ಸಾಲ ಯೋಜನೆ, ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಸಾಲ ಯೋಜನೆ, ಸ್ವಾಲಂಬಿ ಸಾರಥಿ ಯೋಜನೆ, ಸ್ವಯಂ ಉದ್ಯೋಗ ಸಾಲ ಯೋಜನೆ ಹಾಗೂ ಸ್ವಾತಂತ್ರ್ಯ ಅಮೃತ ಮಹೋತ್ಸವದ ಮುನ್ನಡೆ ಹಾಗು ಹೊಲಿಗೆ ಯಂತ್ರ ವಿತರಣೆ ಯೋಜನೆಗಳಡಿ ಸಾಲ ಸೌಲಭ್ಯವನ್ನು ಪಡೆಯಲು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಜನಾಂಗಕ್ಕೆ ಸೇರಿದ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸೇವಾಸಿಂಧು ಪೋರ್ಟಲ್ https://www.sevasindu.karnataka.gov.in ಮೂಲಕ ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಆನ್ ಲೈನ್ ಮೂಲಕ ಹಾಗೂ  ಸ್ವಾತಂತ್ರ್ಯ ಅಮೃತ ಮಹೋತ್ಸವದ ಮುನ್ನಡೆ ಯೋಜನೆಗಳಡಿ ಸಾಲ ಸೌಲಭ್ಯವನ್ನು ಪಡೆಯಲು  https://www.kaushalkar.com ಜಾಲತಾಣದಲ್ಲಿ   ಜೂನ್ 30 ರೊಳಗೆ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್ ಸೈಟ್: https://www.dbcdc.karnataka.gov.in  ಅಥವಾ ಸಹಾಯವಾಣಿ: 080-23539601 ಮೂಲಕ ಸಂಪರ್ಕಿಸಬಹುದು ಎಂದು ಬೆಂಗಳೂರು ಉತ್ತರ ಜಿಲ್ಲೆ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಡಿವಾಳ ಮಾಚಿದೇವ ಸಮುದಾಯದವರಿಗೆ ವಿವಿಧ ಯೋಜನೆಯಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಬೆಂಗಳೂರು ನಗರ ಜಿಲ್ಲೆಜೂ.13 (ಕರ್ನಾಟಕ ವಾರ್ತೆ): ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ ನಿ. ವತಿಯಿಂದ 2025-26 ನೇ ಸಾಲಿನಲ್ಲಿ ಸ್ವಯಂ ಉದ್ಯೋಗ ಸಾಲ ಯೋಜನೆ, ಗಂಗಾ ಕಲ್ಯಾಣ ನೀರಾವರಿ ಯೋಜನೆ, ಅರಿವು-ಶೈಕ್ಷಣಿಕ ಸಾಲ ಯೋಜನೆ, ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಸಾಲ ಯೋಜನೆ, ಸ್ವಾಲಂಬಿ ಸಾರಥಿ ಯೋಜನೆ, ಸ್ವಯಂ ಉದ್ಯೋಗ ಸಾಲ ಯೋಜನೆ ಹಾಗೂ ಸ್ವಾತಂತ್ರ್ಯ ಅಮೃತ ಮಹೋತ್ಸವದ ಮುನ್ನಡೆ ಯೋಜನೆಗಳಡಿ ಸಾಲ ಸೌಲಭ್ಯವನ್ನು ಪಡೆಯಲು  ಕರ್ನಾಟಕ ಮಡಿವಾಳ ಮಾಚಿದೇವ ಜನಾಂಗಕ್ಕೆ ಸೇರಿದ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

   ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸೇವಾಸಿಂಧು ಪೋರ್ಟಲ್ https://www.sevasindu.karnataka.gov.in ಮೂಲಕ ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಆನ್ ಲೈನ್ ಮೂಲಕ ಹಾಗೂ  ಸ್ವಾತಂತ್ರ್ಯ ಅಮೃತ ಮಹೋತ್ಸವದ ಮುನ್ನಡೆ ಯೋಜನೆಗಳಡಿ ಸಾಲ ಸೌಲಭ್ಯವನ್ನು ಪಡೆಯಲು  https://www.kaushalkar.com ಜಾಲತಾಣದಲ್ಲಿ   ಜೂನ್ 30 ರೊಳಗೆ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್ ಸೈಟ್: https://www.kmmd.karnataka.gov.in  ಅಥವಾ ನಿಗಮದ ಸಹಾಯವಾಣಿ: 080-23539601 ಮೂಲಕ ಸಂಪರ್ಕಿಸಬಹುದು ಎಂದು ಬೆಂಗಳೂರು ಉತ್ತರ ಜಿಲ್ಲೆಯ ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿವಿಧ ಯೋಜನೆಗಳಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಬೆಂಗಳೂರು ನಗರ ಜಿಲ್ಲೆಜೂ.13 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮ ನಿ. ವತಿಯಿಂದ 2025-26 ನೇ ಸಾಲಿನಲ್ಲಿ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆ(ಹೊಸದು), ಗಂಗಾ ಕಲ್ಯಾಣ ನೀರಾವರಿ ಯೋಜನೆ, ಸ್ವಯಂ ಉದ್ಯೋಗ ನೇರ ಸಾಲ ಯೋಜನೆ (ಬ್ಯಾಂಕ್‍ ಗಳ ಸಹಯೋಗದೊಂದಿಗೆ) ಹಾಗೂ ವಿದೇಶಿ ವ್ಯಾಸಂಗ ಯೋಜನೆಗಳಡಿ ಸಾಲ ಸೌಲಭ್ಯವನ್ನು ಪಡೆಯಲು ಕರ್ನಾಟಕ ರಾಜ್ಯ ಕಾಡುಗೊಲ್ಲ ಸಮುದಾಯಕ್ಕೆ ಸೇರಿದ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸೇವಾಸಿಂಧು ಪೋರ್ಟಲ್ ಮೂಲಕ ಬೆಂಗಳೂರು ಒನ್, ಕರ್ನಾಟಕ ಒನ್, ಅಟಲ್ – ಜಿ ಜನ ಸ್ನೇಹಿ ಕೇಂದ್ರ ಮತ್ತು ನಾಗರೀಕರ ಸೇವಾ ಕೇಂದ್ರಗಳಲ್ಲಿ ಆನ್ ಲೈನ್ ನಲ್ಲಿ ಜುಲೈ 2 ರೊಳಗೆ ಸಲ್ಲಿಸಬಹುದು.

2023-24 ಹಾಗೂ 2024-25ನೇ ಸಾಲಿನಲ್ಲಿ ಯೋಜನೆಗೆ ಅರ್ಜಿಸಲ್ಲಿಸಿರುವ ರ್ಜಿದಾರರು ಮತ್ತೊಮ್ಮೆ ಬೇರೆ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ನಿಗಮದ ಕೇಂದ್ರ ಕಚೇರಿಯ ದೂರವಾಣಿ: 080-223539601 ಮೂಲಕ ಸಂಪರ್ಕಿಸಬಹುದು ಎಂದು ಬೆಂಗಳೂರು ಉತ್ತರ ಜಿಲ್ಲೆಯ ಕರ್ನಾಟಕ ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ್ಯಾಯಾಂಗ ಆಡಳಿತ ಹಾಗೂ ವಕೀಲ ವೃತ್ತಿಯ ತರಬೇತಿ ಭತ್ಯೆಗಾಗಿ ಅರ್ಜಿ ಆಹ್ವಾನ

ಬೆಂಗಳೂರು ನಗರ ಜಿಲ್ಲೆಜೂ.13 (ಕರ್ನಾಟಕ ವಾರ್ತೆ): ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ 2025-26ನೇ ಸಾಲಿನಲ್ಲಿ ಬೆಂಗಳೂರು ನಗರ ಜಿಲ್ಲೆಯ ಹಿಂದುಳಿದ ವರ್ಗಗಳಿಗೆ  ಸೇರಿದ ಪ್ರವರ್ಗ-1, 2ಎ, 3ಎ ಮತ್ತು 3ಬಿ ವರ್ಗಗಳಿಗೆ ಸೇರಿದ ಕಾನೂನು ಪದವೀಧರರಿಂದ ನ್ಯಾಯಾಂಗ ಆಡಳಿತದಲ್ಲಿ ಹಾಗೂ ವಕೀಲ ವೃತ್ತಿಯ ತರಬೇತಿ ಭತ್ಯೆ ಮಂಜೂರಾತಿಗಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅಭ್ಯರ್ಥಿಯು ಅರ್ಜಿ ಸಲ್ಲಿಸಲು ನಿಗಧಿಪಡಿಸಿರುವ ಕೊನೆಯ ದಿನಾಂಕಕ್ಕೆ ಕಾನೂನು ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 2 ವರ್ಷದೊಳಗೆ ಇರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.

ಆಸಕ್ತ ಕಾನೂನು ಪದವೀಧರ ಅಭ್ಯರ್ಥಿಗಳು, ಸದಸ್ಯ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಅಧಿಕಾರಿಗಳ ಕಚೇರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬೆಂಗಳೂರು ನಗರ ಜಿಲ್ಲೆ, 1ನೇ ಮಹಡಿ, ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಗೋಪುರ, ಡಾ.ಅಂಬೇಡ್ಕರ್ ವೀದಿ, ಬೆಂಗಳೂರು ಇಲ್ಲಿ  ನಿಗದಿತ ಅರ್ಜಿ ನಮೂನೆಗಳನ್ನು ಕಚೇರಿ ವೇಳೆಯಲ್ಲಿ ಪಡೆದು ಭರ್ತಿ ಮಾಡಿ  ಜುಲೈ 10 ರ ಸಂಜೆ 4.30ರೊಳಗೆ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 080-22867628 ಮೂಲಕ ಸಂಪರ್ಕಿಸಬಹುದು ಎಂದು ಬೆಂಗಳೂರು ನಗರ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಹುದ್ದೆಗಾಗಿ ಅರ್ಜಿ ಆಹ್ವಾನ

ಬೆಂಗಳೂರು ನಗರ ಜಿಲ್ಲೆಜೂ.13 (ಕರ್ನಾಟಕ ವಾರ್ತೆ): ಶಿಶು ಅಭಿವೃದ್ಧಿ ಯೋಜಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂಗಳೂರು ರಾಜ್ಯ ಯೋಜನೆಯ ಅಂಗವಾಡಿ ಕಾರ್ಯಕರ್ತೆಯರ 18 ಹುದ್ದೆ ಹಾಗೂ ಸಹಾಯಕಿಯರ 92 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮಹಿಳಾ ಮತ್ತು ಮಹಿಳಾ ಲಿಂಗತ್ವ ಅಲ್ಪಸಂಖ್ಯಾತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

 ಆಸಕ್ತ ಅಭ್ಯರ್ಥಿಗಳು ಅರ್ಜಿ ನಮೂನೆಗಳನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ,  ಬೆಂಗಳೂರು ರಾಜ್ಯ ಯೋಜನೆ, 1ನೇ ಮಹಡಿ, ಬಿಬಿಎಂಪಿ ಕಟ್ಟಡ, ಎನ್.ಆರ್.ಕಾಲೋನಿ,  ಬೆಂಗಳೂರು ಇಲ್ಲಿ ಪಡೆದು ಸೂಕ್ತ ದಾಖಲೆಗಳೊಂದಿಗೆ ಜೂನ್ 30 ರ ಸಂಜೆ 5.30 ರೊಳಗೆ ಸಲ್ಲಿಸಬಹುದು.

 ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಅಥವಾ ದೂರವಾಣಿ: 080-26601917 ಮೂಲಕ ಸಂಪರ್ಕಿಸಬಹುದು ಎಂದು ಬೆಂಗಳೂರು ರಾಜ್ಯ ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾಗ್ಯಲಕ್ಷ್ಮೀ  ಯೋಜನೆಯ ಫಲಾನುಭವಿಗಳಿಗೆ ಪರಿಪಕ್ವ ಮೊತ್ತ ಮಂಜೂರು

ಬೆಂಗಳೂರು ನಗರ ಜಿಲ್ಲೆಜೂ.13 (ಕರ್ನಾಟಕ ವಾರ್ತೆ): ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಬೆಂಗಳೂರು ರಾಜ್ಯ ಯೋಜನೆಯ ವ್ಯಾಪ್ತಿಯಲ್ಲಿ ಭಾಗ್ಯಲಕ್ಷ್ಮೀ ಯೋಜನೆಯಡಿ 2006-07ನೇ ಸಾಲಿನಲ್ಲಿ ಒಟ್ಟು  1520 ಫಲಾನುಭವಿಗಳು ನೋಂದಣಿಯಾಗಿದ್ದು, 18 ವರ್ಷ ಪೂರ್ಣಗೊಂಡಿರುವ ಫಲಾನುಭವಿಗಳಿಗೆ ಎಲ್.ಐ.ಸಿ ಯಿಂದ ಪರಿಪಕ್ವ ಮೊತ್ತ ಮಂಜೂರಾಗಿದ್ದು ಎಲ್ಲಾ ಫಲಾನುಭವಿಗಳು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಂಗನವಾಡಿ ಕೇಂದ್ರಗಳು ಹಾಗೂ ಶಿಶು ಅಭಿವೃದ್ಧಿ ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂಗಳೂರು ರಾಜ್ಯ ಯೋಜನೆ ಕಚೇರಿ, 1ನೇ ಮಹಡಿ, ಬಿಬಿಎಂಪಿ ಕಟ್ಟಡ, ಎನ್.ಆರ್.ಕಾಲೋನಿ,  ಬೆಂಗಳೂರು ಇಲ್ಲಿ ಸಂಪರ್ಕಿಸಬಹುದು ಎಂದು ಬೆಂಗಳೂರು ರಾಜ್ಯ ಯೋಜನೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

39 ಲಕ್ಷ  ರೂ. ಮೌಲ್ಯದ ವಿದೇಶಿ ಮದ್ಯ ನಾಶ

 ಬೆಂಗಳೂರು ನಗರ ಜಿಲ್ಲೆ : ಅಬಕಾರಿ ಇಲಾಖೆಯ ಬೆಂಗಳೂರು ಉತ್ತರ ವಿಭಾಗದ ಅಬಕಾರಿ ಜಂಟಿ ಆಯುಕ್ತರಾದ ಫಿರೋಜ್ ಖಾನ್ ಖಿಲ್ಲೇದಾರ್, ಬೆಂಗಳೂರು ನಗರ ಜಿಲ್ಲೆ-3 ಅಬಕಾರಿ ಉಪ ಆಯುಕ್ತರು ಡಾ.ಕೆ.ಎಸ್.ಮುರಳಿ, ಉಪವಿಭಾಗ-05 ಅಬಕಾರಿ ಉಪ ಅಧೀಕ್ಷಕರಾದ ಸಿ.ಲಕ್ಷ್ಮೀಶ, ಕಂದಾಯ, ಕೆ.ಎಸ್.ಬಿ.ಸಿ.ಎಲ್ ಹಾಗೂ ಇಲಾಖಾ ಅಧಿಕಾರಿಗಳ ಮತ್ತು ಸಿಬ್ಬಂದಿ  ವರ್ಗದವರ ಸಮಕ್ಷಮದಲ್ಲಿ ಜಪ್ತು ಪಡಿಸಿದ ಅಕ್ರಮ ವಿದೇಶಿ ಮದ್ಯವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿದ್ದು ಜೂನ್ 12 ರಂದು ಅಲೈಡ್ ಬ್ಲೆಂಡರ್ಸ್ ಮತ್ತು ಡಿಸ್ಟಿಲರೀಸ್ ಪರಾಂಗಣದಲ್ಲಿ ಒಟ್ಟು 516 ಬಾಟಲ್ ಗಳಲ್ಲಿ ಇದ್ದಂತಹ 516 ಲೀಟರ್ ವಿದೇಶಿ ಮದ್ಯವನ್ನು, ಸಿಗರೇಟ್  ಜಪ್ತು ಪಡಿಸಿದ ಖಾಲಿ ಬಾಟಲ್ ಗಳನ್ನು ನಾಶ ಪಡಿಸಲಾಯಿತು.

ನಾಶ ಪಡಿಸಿದ ವಸ್ತುಗಳ ಒಟ್ಟು ಮೌಲ್ಯ 39 ಲಕ್ಷ ರೂಗಳು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಅಂದಾಜು 30 ಲಕ್ಷ ನಷ್ಟ ಉಂಟಾಗುವುದನ್ನು ತಡೆಯಲಾಗಿದೆ.  ಇನ್ನೊಂದು ಪ್ರಕರಣದಲ್ಲಿ ಮಾನವನ ಸೇವನೆಗೆ ಯೋಗ್ಯವಲ್ಲದ 362.14 ಲೀಟರ್ ಮದ್ಯ, ವೈನ್ ಹಾಗೂ ಬಿಯರ್ ನ್ನು ನಾಶಪಡಿಸಲಾಗಯಿತು ಎಂದು ಬೆಂಗಳೂರು ನಗರ ಜಿಲ್ಲೆ-3 ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಧಾನ ಮತ್ತು ಸಹಾಯಕ ಆರ್ಚಕರುಗಳಿಗೆ, ಸಿಖ್ ಗುರುದ್ವಾರ ಮುಖ್ಯ ಮತ್ತು ಸಹಾಯಕ ಗ್ರಂಥಿಗಳಿಗೆ ಮಾಸಿಕ ಗೌರವ ಧನಕ್ಕಾಗಿ  ಅರ್ಜಿ ಆಹ್ವಾನ

ಬೆಂಗಳೂರು ನಗರ ಜಿಲ್ಲೆಜೂ.13 (ಕರ್ನಾಟಕ ವಾರ್ತೆ): ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ  ಜೈನ್ ಸಮುದಾಯದ ಬಸದಿಗಳಲ್ಲಿರುವ ಸೇವೆ ಸಲ್ಲಿಸುತ್ತಿರುವ  ಪ್ರಧಾನ ಮತ್ತು ಸಹಾಯಕ ಆರ್ಚಕರುಗಳಿಗೆ  ಹಾಗೂ ಸಿಖ್ ಗುರುದ್ವಾರಗಳಲ್ಲಿರುವ ಮುಖ್ಯ ಮತ್ತು ಸಹಾಯಕ ಗ್ರಂಥಿಗಳಿಗೆ ಮಾಸಿಕ ಗೌರವ ಧನ ನೀಡಲು ನಿಗಧಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಫಲಾನುಭವಿಗಳು ಬೆಂಗಳೂರು ನಗರ ಜಿಲ್ಲೆಯ ಜೈನ್ ಬಸದಿಗಳು ಕರ್ನಾಟಕ ರಾಜ್ಯದಲ್ಲಿನ ಸಂಘಗಳ ನೋಂದಣಿ ಕಾಯ್ದೆಯಡಿ ನೋಂದಣಿಯಾಗಿರಬೇಕು. ಪ್ರಧಾನ ಗ್ರಂಥಿ/ಅರ್ಚಕರಿಗೆ ರೂ.8000/- ಮತ್ತು ಸಹಾಯಕ ಗ್ರಂಥಿ/  ಅರ್ಚಕರಿಗೆ ರೂ. 5000 ಮಾಸಿಕ ಗೌರವ ಧನ ನೀಡಲಾಗುವುದು.

ಅರ್ಹ ಅರ್ಚಕರುಗಳು ಅರ್ಜಿ ನಮೂನೆಯನ್ನು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಬೆಂಗಳೂರು ನಗರ ಜಿಲ್ಲೆ, ಎರಡನೇ ಮಹಡಿ, ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಗೋಪುರ, ಅಂಬೇಡ್ಕರ್ ವೀಧಿ, ಬೆಂಗಳೂರು ಇಲ್ಲಿ ಪಡೆದು  ಸೂಕ್ತ ದಾಖಲೆಗಳೊಂದಿಗೆ ಜೂನ್ 20 ರೊಳಗೆ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಚೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಬೆಂಗಳೂರು ನಗರ ಜಿಲ್ಲೆ ಅಥವಾ ದೂರವಾಣಿ: 080-22866718 ಮೂಲಕ ಸಂಪರ್ಕಿಸಬಹುದು ಎಂದು ಬೆಂಗಳೂರು ನಗರ ಜಿಲ್ಲೆ,  ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರ

ನವವೃಂದಾವನ ಶ್ರೀರಘುವರ್ಯತೀರ್ಥರ ಆರಾಧನೆಗೆ ಅದ್ದೂರಿ ಚಾಲನೆ

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿ ಗ್ರಾಮದ ತುಂಗಭದ್ರಾ ನದಿಯ ಮಧ್ಯದಲ್ಲಿರುವ ನವವೃಂದಾವನ ಗಡ್ಡೆಯಲ್ಲಿ ಮೂರು ದಿನಗಳ ಶ್ರೀ. ರಘುವರ್ಯತೀರ್ಥರ ಆರಾಧನಾ ಮಹೋತ್ಸವಕ್ಕೆ ಶುಕ್ರವಾರ ಅದ್ದೂರಿ ಚಾಲನೆ ನೀಡಲಾಯಿತು. ಶ್ರೀಮನ್ ಮಧ್ವಾಚಾರ್ಯ ಮೂಲ ಸಂಸ್ಥಾನದ ಶ್ರೀರಘುವರ್ಯತೀರ್ಥರ ಪೂರ್ವಾರಾದನೆ ಆರಂಭಗೊಂಡಿದ್ದು, ಶ್ರೀ ಉತ್ತರಾದಿ ಮಠದ ಪೀಠಾಧಿಪತಿಗಳಾದ ಶ್ರೀಸತ್ಯಾತ್ಮತೀರ್ಥ ಶ್ರೀಪಾದಂಗಳವರು ಹಾಗೂ ಕೂಡ್ಲಿ ಆರ್ಯ ಶ್ರೀಅಕ್ಷೋಭ್ಯತೀರ್ಥ ಮಠದ ಶ್ರೀರಘುವಿಜಯ ತೀರ್ಥ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಮೂರು ದಿನಗಳ ನವೃಂದಾವನದಲ್ಲಿ ಒಂದಾದ ಶ್ರೀರಘುವರ್ಯತೀರ್ಥರ ಆರಾಧನಾ ಮಹೋತ್ಸವ ನಡೆಯಲಿದೆ.
ಪೂರ್ವಾರಾಧನೆ ಅಂಗವಾಗಿ ಶ್ರೀಮದ್ ಉತ್ತರಾದಿ ಮಠದ ಶ್ರೀಪಾದಂಗಳವರಿಂದ ನ್ಯಾಯ ಸುಧಾ ಪಾಠ, ಭಕ್ತರಿಗೆ ಮುದ್ರಾ ಧಾರಣೆ, ಉಭಯ ಶ್ರೀಗಳಿಂದ ಶ್ರೀಪದ್ಮನಾಭ ತೀರ್ಥರ ಮೂಲ ವೃಂದಾವನ ಮುಂಭಾಗದಲ್ಲಿ ನೆಲೆಸಿರುವ ಶ್ರೀರಘುವರ್ಯತೀರ್ಥರ ಮೂಲ ಬೃಂದಾವನಕ್ಕೆ ಮಹಾಪಂಚಾಮೃತ ಅಭಿಷೇಕ ನಂತರ ಸಂಸ್ಥಾನ ಪೂಜೆ, ಯತಿಗಳಿಗೆ ಹಸ್ತೋದಕ, ಭಕ್ತರಿಗೆ ತೀರ್ಥ- ಪ್ರಸಾದ ವಿನಿಯೋಗ, ಸಾಯಂಕಾಲ ಸಭಾ ಕಾರ್ಯಕ್ರಮಗಳು ಜರುಗಿದವು.
ಮೂರು ದಿನಗಳ ಕಾಲ ವಿದ್ವಾಂಸರ ಪ್ರವಚನ ಸೇರಿದಂತೆ ಅನೇಕ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಉಭಯ ಶ್ರೀಗಳ ಅನುಗ್ರಹ ಸಂದೇಶ, ಅಷ್ಟಾವಧಾನ ಕಾರ್ಯಕ್ರಮ, ಮಹಾಮಂಗಳಾರತಿ ಸೇರಿದಂತೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಮೂರು ದಿನಗಳ ಕಾಲ ನಡೆಯಲಿವೆ. ಅಲ್ಲದೆ, ಶ್ರೀರಘೂತ್ತಮತೀರ್ಥರ ಕೋಟಿ ಪಾರಾಯಣ ಜಪಯಜ್ಞದ ಅಂಗವಾಗಿ
ಪಂಡಿತ. ರಾಮಾಚಾರ್ಯ ಉಮರ್ಜಿ ಅವರಿಂದ ವಿಷ್ಣು ತತ್ವ ನಿರ್ಣಯ ಭಾವ ಬೋಧ ಗ್ರಂಥದ ಅನುವಾದ, ಪಂಡಿತ ಕೆರೂರು ಕೇಶವ ಆಚಾರ್ಯ ಅವರಿಂದ ತತ್ವ ಪ್ರಕಾಶಿಕ ಭಾವ ಬೋಧ ಅನುವಾದ ಕುರಿತ ಕಾರ್ಯಕ್ರಮಗಳು ಆಯೋಜನೆಗೊಂಡಿವೆ.
ಮಠದ ದಿವಾನರಾದ ಪಂಡಿತ ಶಶಿಧರಚಾರ್ಯರು, ಉಮರ್ಜಿ ಶ್ರೀಕರಾಚಾರ್ಯಾ, ಮಹಿಷಿ ಆನಂದ ಆಚಾರ್ಯರು,ನರಸಿಂಹ ಆಚಾರ್ಯ ಯಲಬುರ್ಗಾ, ಉಮರ್ಜಿ ರಾಮಾಚಾರ್ಯರು, ಬಳ್ಳಾರಿ ರಾಘವೇಂದ್ರ ಆಚಾರ್ಯರು, ವ್ಯವಸ್ಥಾಪಕರಾದ ಅಕ್ಕಲಕೋಟ ಆನಂದಆಚಾರ್ಯರು , ಮುರಗೋಡು ವಿಜಯ ವಿಠಲ ಆಚಾರ್ಯರು, ಮಠದ ಸಾರ್ವಜನಿಕ ಸಂಪರ್ಕ ಅಧಿಕಾರಿ ಶ್ರೀಪ್ರಸನ್ನಾಚಾರ್ಯ ಕಟ್ಟಿ ,ವಿಷ್ಣು ತೀರ್ಥ ಆಚಾರ್ಯ ಜೋಶಿ, ಅಖಿಲ ಆಚಾರ್ಯ ಅತ್ರೆ, ವೆಂಕಟಗಿರಿ ಆಚಾರ್ಯ ಅನ್ವೇರಿ ಅವರನ್ನು ಒಳಗೊಂಡಂತೆ ಅನೇಕ ಮಠದ ಪಂಡಿತ ಗಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವರದಿ: ಹನುಮೇಶ್ ಕೆ ಯಾವಗಲ್

“ ಅಂತಾರಾಷ್ಟಿಯ ಮಾದಕ ವ್ಯಸನ ಮತ್ತು ಅಕ್ರಮ ಕಳ್ಳಸಾಗಣಿಕೆ ವಿರೋಧಿ ದಿನಾಚರಣೆ ”

ಮುಂಬರುವ “ಅಂತಾರಾಷ್ಟಿಯ ಮಾದಕ ವ್ಯಸನ ಮತ್ತು ಅಕ್ರಮ ಕಳ್ಳಸಾಗಣಿಕೆ ವಿರೋಧಿ ದಿನಾಚರಣೆ” ಯನ್ನು ದಿನಾಂಕ:26/06/2025 ರಂದು ಬೆಂಗಳೂರು ನಗರ ಪೊಲೀಸ್ ಇಲಾಖೆಯವರಿಂದ ಆಯೋಜಿಸಲಾಗಿದ್ದು, ಇದು ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಮಾದಕ ವಸ್ತು ವ್ಯಾಪಾರದ ವಿರುದ್ಧದ ಹೋರಾಟವನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಜಾಗತಿಕ ಉಪಕ್ರಮವಾಗಿದೆ. ಈ ವರ್ಷದ ಘೋಷವಾಕ್ಯವು “ಸರಪಳಿಗಳನ್ನು ಮುರಿಯುವುದು: ತಡೆಗಟ್ಟುವಿಕೆ, ಚಿಕಿತ್ಸೆ ಮತ್ತು ಎಲ್ಲರಿಗೂ ಪುನಶ್ಚೇತನಗೊಳಿಸುವಿಕೆ” ಮಾದಕ ವಸ್ತು ತಡೆಗಟ್ಟುವಿಕೆಯು, ಸುಲಭವಾಗಿ ಲಭ್ಯವಿರುವ ಚಿಕಿತ್ಸೆ ಮತ್ತು ಸುಸ್ಥಿರ ಚೇತರಿಕೆಯ ಮೂಲಕ ಮಾದಕ ವಸ್ತು ಅವಲಂಬನೆಯನ್ನು ನಿರ್ಮೂಲನೆ ಮಾಡಲು ಸಮಗ್ರ ಪ್ರಯತ್ನಗಳ ಮಹತ್ವವನ್ನು ಒತ್ತಿಹೇಳುತ್ತದೆ.

ಈ ಮಹತ್ವದ ದಿನವು ಯುವ ಜನತೆ, ಸರ್ಕಾರೇತರ ಸಂಸ್ಥೆಗಳು (ಎನ್.ಜಿ.ಓ), ಕಾರ್ಮಿಕ ವರ್ಗ, ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಎಲ್ಲಾ ಹಂತದ ನಾಗರಿಕರು ಒಟ್ಟಾಗಿ ಸೇರಿ, ಜಾಗೃತಿ ಮೂಡಿಸುವಲ್ಲಿ, ಜ್ಞಾನವನ್ನು ಹಂಚಿಕೊಳ್ಳುವಲ್ಲಿ ಮತ್ತು ಮಾದಕ ವಸ್ತು ಮುಕ್ತ ಸಮಾಜವನ್ನು ಉತ್ತೇಜಿಸುವ ಉಪಕ್ರಮಗಳನ್ನು ಬೆಂಬಲಿಸುವಲ್ಲಿ, ಸಕ್ರಿಯವಾಗಿ ಭಾಗವಹಿಸಲು ಕರೆ ನೀಡುತ್ತದೆ.

ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳು:
ಜಾಗೃತಿ ಮೆರವಣಿಗೆಗಳು ಮತ್ತು ರಸ್ತೆ ನಡಿಗೆ.
ತಜ್ಞರು ಮತ್ತು ಮಾದಕ ವಸ್ತು ವಿಮುಕ್ತ ವ್ಯಕ್ತಿಗಳೊಂದಿಗೆ ಚರ್ಚೆಗಳು.
ತಡೆಗಟ್ಟುವಿಕೆ ಮತ್ತು ಆರಂಭಿಕ ಹಸ್ತಕ್ಷೇಪದ ಕುರಿತು ಕಾರ್ಯಾಗಾರಗಳು.
ಸಮುದಾಯ ಸಂಪರ್ಕ ಕಾರ್ಯಕ್ರಮಗಳು ಮತ್ತು ಸಮಾಲೋಚನೆ.
ಮಾದಕ ವಸ್ತುಮುಕ್ತ ಜೀವನದ ಮಹತ್ವವನ್ನು ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳು.

ವ್ಯಸನದ ಸರಪಳಿಗಳನ್ನು ಮುರಿದು ಆರೋಗ್ಯಕರ, ಸುರಕ್ಷಿತ ಸಮಾಜವನ್ನು ಬೆಳೆಸುವ ಈ ಸಾಮೂಹಿಕ ಪ್ರಯತ್ನದಲ್ಲಿ, ಎಲ್ಲರೂ ಕೈಜೋಡಿಸಬೇಕೆಂದು ಬೆಂಗಳೂರು ನಗರ ಪೊಲೀಸರು ಕೋರುತ್ತಾರೆ. ನಿಮ್ಮ ಭಾಗವಹಿಸುವಿಕೆಯು ಬದುಕನ್ನು ಪರಿವರ್ತಿಸುವಲ್ಲಿ ಮತ್ತು ಮಾದಕ ವ್ಯಸನದ ಪಿಡುಗಿನಿಂದ ಮುಕ್ತ ಸಮಾಜವನ್ನು ನಿರ್ಮಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ನಾವೆಲ್ಲರು, ತಡೆಗಟ್ಟುವಿಕೆ, ಚಿಕಿತ್ಸೆ ಮತ್ತು ಪುನಶ್ಚೇತನ, ಈ ಮೂರು ಅಂಶಗಳತ್ತ ಒಟ್ಟಾಗಿ ಕೈಜೋಡಿಸಿದರೆ ಮಾತ್ರ ಮಾದಕವಸ್ತು ಮುಕ್ತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ, ಎಂದು ಪ್ರತಿಜ್ಞೆ ಮಾಡೋಣ.

ನಾವೆಲ್ಲರೂ ಒಟ್ಟಾಗಿ ಮುಂಬರುವ ಜೂನ್-26 ರಂದು ಭರವಸೆ, ಅರಿವು ಮತ್ತು ಕ್ರಿಯಾಶೀಲ ದಿನವನ್ನಾಗಿ ರೂಪಿಸೋಣ.

ಸಿಸಿಬಿ ಯ ಮಾದಕ ದ್ರವ್ಯ ನಿಗ್ರಹ ದಳದ ಕಾರ್ಯಾಚರಣೆ; ಡ್ರಗ್‌ಪೆಡ್ಲಿಂಗ್‌ನಲ್ಲಿ ತೊಡಗಿದ್ದ ವಿದೇಶಿ ಮಹಿಳೆ ಬಂಧನ

5 ಕೆ.ಜಿ 325 ಗ್ರಾಂ ನಿಷೇಧಿತ ಮಾದಕ ವಸ್ತುವಾದ ಎಂ.ಡಿ.ಎA.ಎ ಕ್ರಿಸ್ಟೆಲ್ ವಶ. ಮೌಲ್ಯ ₹ 10 ಕೋಟಿ.
ದಿನಾಂಕ:10/06/2025 ರಂದು ಬೆಂಗಳೂರು ನಗರದ ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಖಚಿತ ಮಾಹಿತಿಯೊಂದು ಬಾತ್ಮೀದಾರರಿಂದ ದೊರೆತಿರುತ್ತದೆ. ಮಾಹಿತಿಯಲ್ಲಿ ಚಿಕ್ಕಜಾಲ ಪೊಲೀಸ್ ಠಾಣಾ ಸರಹದ್ದಿನ ರಾಜಾನುಕುಂಟೆ ಮುಖ್ಯರಸ್ತೆಯ ಬಳಿ, ಓರ್ವ ವಿದೇಶಿ ಮಹಿಳೆಯು ನಿಷೇದಿತ ಮಾದಕ ವಸ್ತುವನ್ನು ಮಾರಾಟ ಮಾಡುತ್ತಾ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದಾರೆಂದು ತಿಳಿಸಿರುತ್ತಾರೆ.
ಈ ಮಾಹಿತಿಯ ಆಧಾರದ ಮೇರೆಗೆ, ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಯವರು ಬಾತ್ಮೀದಾರರು ತಿಳಿಸಿದ ಸ್ಥಳಕ್ಕೆ ದಾವಿಸಿ, ಓರ್ವ ವಿದೇಶಿ ಮಹಿಳೆಯನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ಮಹಿಳೆಯ ವಶದಿಂದ 5 ಕೆ.ಜಿ 325 ಗ್ರಾಂ ನಿಷೇದಿತ ಮಾದಕ ವಸ್ತುವಾದ ಎಂ.ಡಿ.ಎA.ಎ ಕ್ರಿಸ್ಟಲ್, ಒಂದು ಆಪಲ್ ಮೊಬೈಲ್ ಫೋನ್ ಹಾಗೂ 11 ಜೊತೆ ಹೊಸ ಚೂಡಿದಾರ್ ಡ್ರೆಸ್ ಪೀಸ್‌ಗಳು ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಯಿತು. ಇವುಗಳ ಒಟ್ಟು ಮೌಲ್ಯ ₹ 10,00,00,000/-(ಹತ್ತು ಕೋಟಿ ರೂಪಾಯಿ).
ವಶಕ್ಕೆ ಪಡೆದ ವಿದೇಶಿ ಮಹಿಳೆಯನ್ನು ಪ್ರಶ್ನಿಸಲಾಗಿ, ಆಕೆಯು 2021ನೇ ಸಾಲಿನ ಅಕ್ಟೋಬರ್ 04 ರಂದು ಬ್ಯುಸಿನೆಸ್ ವೀಸಾದಡಿ, ನವದೆಹಲಿಗೆ ಬಂದು ವಾಸವಾಗಿದ್ದುಕೊಂಡು, ನಂತರ ತೆಲಂಗಾಣ ರಾಜ್ಯದ ಡೀಮ್ಡ್ ಯುನಿವರ್ಸಿಟಿಯೊಂದರಲ್ಲಿ ವ್ಯಾಸಂಗ ಮಾಡುವುದಾಗಿ ವಿದ್ಯಾರ್ಥಿ ವೀಸಾ ಪಡೆದುಕೊಂಡು ಕಾಲೇಜಿಗೂ ಸಹ ದಾಖಲಾಗದೆ, ಹೆಚ್ಚು ಹಣ ಸಂಪಾದನೆ ಮಾಡುವ ಉದ್ದೇಶದಿಂದ ಹಾಗೂ ಮೋಜಿನ ಜೀವನ ನಡೆಸಲು, ತನ್ನ ಸ್ನೇಹಿತೆಯೊಂದಿಗೆ ಸೇರಿಕೊಂಡು ಡ್ರಗ್ ಪೆಡ್ಲಿಂಗ್‌ನಲ್ಲಿ ತೊಡಗಿರುವುದಾಗಿ ತಿಳಿಸಿರುತ್ತಾಳೆ. ಈಕೆಯೂ ಹೊಸ ಡ್ರೆಸ್‌ಪೀಸ್ ಮೆಟಿರಿಯಲ್‌ಗಳ ಮಧ್ಯದಲ್ಲಿ ಎಂಡಿಎAಎ ಕ್ರಿಸ್ಟೆಲ್‌ನ್ನು ಅಡಗಿಸಿಕೊಟ್ಟುಕೊಂಡು, ದೆಹಲಿಯಿಂದ ಬೆಂಗಳೂರಿಗೆ ಬಸ್ ಮಾರ್ಗವಾಗಿ ಸಾಗಾಟ ಮಾಡಿಕೊಂಡು, ಬೆಂಗಳೂರಿನಲ್ಲಿರುವ ಸ್ಥಳೀಯ ಡ್ರಗ್‌ಪೆಡ್ಲರ್‌ಗಳಿಗೆ ಸರಬರಾಜು ಮಾಡುತ್ತಾ ಅಕ್ರಮ ಹಣದ ಸಂಪಾದನೆಯಲ್ಲಿ ತೊಡಗಿಸಿಕೊಂಡಿರುವುದು ತಿಳಿದುಬಂದಿರುತ್ತದೆ.
ಈ ಕುರಿತು ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿತೆಯ ಸ್ನೇಹಿತೆಯ ಪತ್ತೆಕಾರ್ಯ ಮುಂದುವರೆದಿದೆ. ತನಿಖೆ ಪ್ರಗತಿಯಲ್ಲಿದೆ.
ಈ ಕಾರ್ಯಾಚರಣೆಯನ್ನು ಸಿಸಿಬಿ ಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಯ ನ್ನೊಳಗೊಂಡ ತಂಡದವರು ಯಶಸ್ವಿಯಾಗಿ ಕೈಗೊಂಡಿರುತ್ತಾರೆ.

ರಾಜ್ಯದಲ್ಲಿ ಬಾಲಕಾರ್ಮಿಕ ಪದ್ಧತಿ ಸಂಪೂರ್ಣ ನಿರ್ಮೂಲನೆಗೆ ಪಣ : ಸಚಿವ ಸಂತೋಷ್ ಲಾಡ್

ರಾಜ್ಯದಲ್ಲಿ ಬಾಲಕಾರ್ಮಿಕ ಪದ್ಧತಿ ಸಂಪೂರ್ಣ ನಿರ್ಮೂಲನೆಗೆ ಪಣ
ಆಟವಾಡುವ, ಓದುವಂತಹ ಮಕ್ಕಳಿಂದ ದುಡಿಮೆ ಅಪೇಕ್ಷೆ ಸಲ್ಲದು – ಸಚಿವ ಸಂತೋಷ್ ಲಾಡ್

ರಾಜ್ಯದಲ್ಲಿ ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಎಲ್ಲಾ ಅಧಿಕಾರಿಗಳು ಪಣತೊಡಬೇಕು. ಆಟವಾಡುವ, ಓದುವಂತಹ ಮಕ್ಕಳಿಂದ ದುಡಿಸಿಕೊಳ್ಳುವ ಅಪೇಕ್ಷೆಯನ್ನು ನಾವು ಮಾಡಬಾರದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.

ಇಂದು ಎಂ.ಜಿ.ರಸ್ತೆಯ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಬಾಲಕಾರ್ಮಿಕ ನಿರ್ಮೂಲನಾ ಯೋಜನಾ ಸೊಸೈಟಿ (ರಿ), ಬೆಂಗಳೂರು ಹಾಗೂ ಬೆಂಗಳೂರು ನಗರ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ವತಿಯಿಂದ ಆಯೋಜಿಸಿದ್ದ “ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ”ದ ಅಂಗವಾಗಿ ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ  ಮಾತನಾಡಿದ ಅವರು, ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಆಚರಣೆಯು ವರ್ಷಕ್ಕೆ ಒಂದು ಬಾರಿ ಆಚರಿಸುವ ಕಾರ್ಯಕ್ರಮವಾಗಬಾರದು, ಪ್ರತಿ ಎರಡು ತಿಂಗಳಿಗೊಮ್ಮೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಬಾಲಕಾರ್ಮಿಕರ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಡಾಬಾ, ಹೋಟೆಲ್, ಕಾರ್ಖಾನೆಗಳು, ಅಂಗಡಿಗಳು ಮತ್ತು ಮಾಲ್‍ಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಬಾಲಕಾರ್ಮಿಕರನ್ನು ಗುರುತಿಸಿ ಅವರನ್ನು ಅಲ್ಲಿಂದ ಹೊರತಂದು ಅವರಿಗೆ ಶಿಕ್ಷಣದ ಅರಿವು ಮೂಡಿಸಿ ಶಾಲೆಗಳಿಗೆ ಕಳುಹಿಸುವಂತಾಗಬೇಕು. ಯಾರೂ ಸಹ ಶಿಕ್ಷಣದಿಂದ ವಂಚಿತರಾಗಬಾರದು. ಇದು ಸರ್ಕಾರದ ಪ್ರಮುಖ ಉದ್ದೇಶವು ಸಹ ಆಗಿದೆ ಎಂದು ತಿಳಿಸಿದರು.

ಬಾಲ ಹಾಗೂ ಕಿಶೋರ ಕಾರ್ಮಿಕರು ಅತಿಯಾಗಿ ಸಂಘ ಸಂಸ್ಥೆ ಮತ್ತು ಮಾಲೀಕರ ಸಂಘಗಳು ಬಲಿಷ್ಠವಿರದ ಪ್ರದೇಶದಲ್ಲಿ ಹಾಗೂ ಕಾರ್ಮಿಕ ನಿರೀಕ್ಷಕರು ತಲುಪಲು ಸಾಧ್ಯವಿಲ್ಲದ ಪ್ರದೇಶದಲ್ಲಿ ಹೆಚ್ಚಿಗೆ ಕಂಡುಬರುತ್ತಾರೆ. ಈ ರೀತಿಯ ಸನ್ನಿವೇಶಗಳು ಹೆಚ್ಚಾಗಿ ಸಣ್ಣ ಪ್ರಮಾಣದ ವರ್ಕ್ ಶಾಪ್ ಗಳಲ್ಲಿ ಅಥವಾ ಮನೆ ಆಧಾರಿತ ಉದ್ದಿಮೆಗಳಲ್ಲಿ ಹೆಚ್ಚಾಗುತ್ತಿದ್ದು, ಈ ರೀತಿಯ ಉದ್ದಿಮೆಗಳಲ್ಲಿ ದುಡಿಮೆ ಮಾಡುತ್ತಿರುವ ಬಾಲಕಾರ್ಮಿಕರನ್ನು ಪತ್ತೆಹಚ್ಚಿ ಅಂತಹವರನ್ನು ಗುರುತಿಸಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಅಸಮರ್ಪಕ ಶಿಕ್ಷಣ ಪದ್ಧತಿಯಿಂದ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ಧತಿಯ ಅಪಾಯ ಹೆಚ್ಚಾಗಿದೆ. ಸರ್ಕಾರವು ಈ ಸಮಸ್ಯೆಯನ್ನು ನಿವಾರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಾಗಿರುತ್ತದೆ. ಯಾವುದೇ ದೇಶದ ಪ್ರತಿಯೊಬ್ಬ ಪ್ರಜೆಯು ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ಪಿಡುಗನ್ನು ನಾಶಪಡಿಸಲು ಕ್ರಿಯಾಶೀಲವಾಗಿ ಭಾಗವಹಿಸದ ಹೊರತು ಸರ್ಕಾರದಿಂದ ಮಾತ್ರವೇ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ಧತಿಯನ್ನು ಯಶಸ್ವಿಯಾಗಿ ನಿರ್ಮೂಲನೆ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಸಹ ಈ ಬಗ್ಗೆ ಗಮನಹರಿಸಿ ಸಹಕರಿಸಬೇಕು ಎಂದು ತಿಳಿಸಿದರು.

ಬಾಲ ಕಾರ್ಮಿಕ ಕ್ರಿಯಾ ಯೋಜನೆ ಕರ್ನಾಟಕ ಪ್ರಥಮ:

ಜಟಿಲವಾದ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗಾಗಿ ಕರ್ನಾಟಕ ರಾಜ್ಯವು, ಹಲವು ವರ್ಷಗಳಿಂದ ತನ್ನ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಾ ಬಂದಿದ್ದು, ಬಹುಮಟ್ಟಿಗೆ ಯಶಸ್ವಿಯಾಗಿದೆ. 2001ರಲ್ಲಿ ರಾಜ್ಯ ಸರ್ಕಾರವು ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ದತಿ ನಿರ್ಮೂಲನೆಗಾಗಿ, “ಬಾಲ ಕಾರ್ಮಿಕ ಕ್ರಿಯಾ ಯೋಜನೆ” ಯನ್ನು ಜಾರಿಗೆ ತಂದಿದ್ದು, ದೇಶದಲ್ಲಿಯೇ ಪ್ರಥಮ ರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ತಿಳಿಸಿದರು.

ಬಾಲಕಾರ್ಮಿಕರಿಗೆ ಪುನರ್ವಸತಿ ವ್ಯವಸ್ಥೆಗೆ ಟಾಸ್ಕ್ ಪೋರ್ಸ್:

ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರನ್ನು ಪತ್ತೆ ಹಚ್ಚಿ ಪುನರ್ವಸತಿಗೊಳಿಸಲು ಕಾರ್ಮಿಕ ಇಲಾಖೆಯು ಸೇರಿದಂತೆ 11 ಇಲಾಖೆಗಳಾದ ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಕಾರ್ಖಾನೆಗಳ ಮತ್ತು ಬಾಯ್ಲರುಗಳ ಇಲಾಖೆ, ನಗರಾಭಿವೃದ್ಧಿ ಇಲಾಖೆ, ರೇμÉ್ಮ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕೃಷಿ ಇಲಾಖೆ ಹಾಗೂ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ  ಅಧಿಕಾರಿಗಳನ್ನು ಪರಿವೀಕ್ಷಕರೊಂದಿಗೆ ರಾಜ್ಯದ 22 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಬಾಲಕಾರ್ಮಿಕರನ್ನು ಗುರುತಿಸಿ ಅರಿವು ಮೂಡಿಸುವುದರೊಂದಿಗೆ ಅವರಿಗೆ ಶೈಕ್ಷಣಿಕ ಸೌಲಭ್ಯ ಕಲ್ಪಿಸುವ ವ್ಯವಸ್ಥೆ ಮಾಡಲಾಗಿದೆ. ಟಾಸ್ಕ್ ಪೋರ್ಸ್ ಸಮಿತಿ ಮತ್ತಷ್ಟು ಎಚ್ಚೆತ್ತುಕೊಂಡು ಬಾಲಕಾರ್ಮಿಕ ಪದ್ದತಿ ನಿರ್ಮೂಲನೆಗೆ ಮುತುವರ್ಜಿ ವಹಿಸಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಬಾಲಕಾರ್ಮಿಕರಿಂದ ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ:
ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ (ನಿμÉೀಧ ಮತ್ತು ನಿಯಂತ್ರಣ) ಕಾಯ್ದೆ, 1986ರ ತಿದ್ದುಪಡಿ ಕಾಯ್ದೆ, 2016 ರನ್ವಯ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸಿಕೊಂಡಲ್ಲಿ ಅಂತಹ ಮೊದಲ ಅಪರಾಧಕ್ಕೆ ತಪ್ಪಿತಸ್ಥ ಮಾಲೀಕರಿಗೆ 6 ತಿಂಗಳಿನಿಂದ 2 ವರ್ಷಗಳವರೆಗೆ ಜೈಲು ಶಿಕ್ಷೆ, ರೂ. 20,000/- ರಿಂದ ರೂ. 50,000/-ರವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ. ಬಾಲಕಾರ್ಮಿಕರು ಮತ್ತು ನಿμÉೀಧಿಸಲ್ಪಟ್ಟ ಕ್ಷೇತ್ರಗಳಲ್ಲಿ ಕಿಶೋರ ಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳಲು ಅನುಮತಿಸಿದ್ದಲ್ಲಿ, ಅಂತಹ ತಂದೆ ತಾಯಿ ಹಾಗೂ ಪೆÇೀಷಕರಿಗೂ ದಂಡ ವಿಧಿಸಲಾಗುವುದು. ಪುನರಾವರ್ತಿತ ಅಪರಾಧಕ್ಕೆ 1 ವರ್ಷದಿಂದ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿರುತ್ತದೆ. ಪೆÇೀಷಕರಾಗಿದ್ದಲ್ಲಿ ಲಘು ಶಿಕ್ಷೆ ಪ್ರಾವಧಾನವಿದ್ದು, ಪುನರಾವರ್ತಿತ ಅಪರಾಧಕ್ಕೆ             ರೂ. 10,000/- ಗಳ ದಂಡವನ್ನು ಸಕ್ಷಮ ನ್ಯಾಯಾಲಯವು ವಿಧಿಸಲಾಗುವುದು. ಇದು ಭಯದ ವಾತಾವರಣ ಮೂಡಿಸುವ ಉದ್ದೇಶವಲ್ಲ, ಸಮಾಜದಲ್ಲಿ ಬಾಲಕಾರ್ಮಿಕರಿಂದ ದುಡಿಸಿಕೊಳ್ಳದೇ, ಅವರಿಗೂ ಸಹ ಸೂಕ್ತ ಅವಕಾಶಗಳನ್ನು ಕಲ್ಪಿಸಿ ಮುಂದವರೆಯಲು ಜಾಗೃತಿ ಮೂಡಿಸುವ ಕ್ರಮವಾಗಿರುತ್ತದೆ ಎಂದು ತಿಳಿಸಿದರು.

ಬಾಲಕಾರ್ಮಿಕರನ್ನು ಹಾಗೂ ಕಿಶೋರ ಕಾರ್ಮಿಕರಿಂದ ದುಡಿಸಿಕೊಳ್ಳುವುದು ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ (ನಿμÉೀಧ ಮತ್ತು ನಿಯಂತ್ರಣ) ಪರಿಷ್ಕøತ ಕಾಯ್ದೆಯ ಕಲಂ 14ಎ ರನ್ವಯ ಸಂಜ್ಞೆಯ ಅಪರಾಧವಾಗಿದ್ದು, ಈ ನಿಟ್ಟಿನಲ್ಲಿ ಮೊಕದ್ದಮೆಗಳನ್ನು ಹೂಡಲು ರಾಜ್ಯದ ಪೆÇಲೀಸ್ ಮಹಾ ನಿರ್ದೇಶಕರು, ಪೆÇಲೀಸ್ ಆಯುಕ್ತರು, ಎಲ್ಲಾ ಜಿಲ್ಲೆಗಳ ಪೆÇಲೀಸ್ ವರಿμÁ್ಠಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.

ಕಳೆದ ಮೂರು ವರ್ಷಗಳಲ್ಲಿ 1,02,213 ತಪಾಸಣೆ:

ಬಾಲ ಹಾಗೂ ಕಿಶೋರ ಕಾರ್ಮಿಕ ಕಾಯ್ದೆಯಡಿ ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ 1,02,213 ತಪಾಸಣೆಗಳನ್ನು ನಡೆಸಲಾಗಿರುತ್ತದೆ. ಸುಮಾರು 2084 ಬಾಲಕಾರ್ಮಿಕರನ್ನು ಪತ್ತೆಹಚ್ಚಿ ಪುನರ್ವಸತಿ ಕಲ್ಪಿಸಲಾಗಿದೆ. 705 ಪ್ರಕರಣಗಳಿಗೆ ಸಂಬಂಧಿಸಿದಂತೆ ವಿವಿಧ ನ್ಯಾಯಾಲಯಗಳಲ್ಲಿ ಮೊಕದ್ದಮೆಗಳನ್ನು ದಾಖಲಿಸಲಾಗಿದೆ ಎಂದರು.

ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ವರದಿಯ ಪ್ರಕಾರ ಇಡೀ ವಿಶ್ವದಲ್ಲಿ 13 ಕೋಟಿ 80 ಲಕ್ಷ ಮಕ್ಕಳು ಬಾಲ ಕಾರ್ಮಿಕರಿದ್ದಾರೆ. ಭಾರತದಲ್ಲಿ 3 ಕೋಟಿ 30 ಲಕ್ಷ ಮಕ್ಕಳು ಬಾಲಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಈ ಎಲ್ಲಾ ಅಂಕಿ-ಅಂಶಗಳನ್ನು ಗಮನಿಸಿದಾಗ ಮಾನವೀಯತೆ ಇಲ್ಲದ ಸಮಾಜದಲ್ಲಿ ಬದುಕುತ್ತಿದ್ದೇವೆ ಎಂದು ಸಚಿವರು ಕಳವಳ ವ್ಯಕ್ತಪಡಿಸಿದರು.

ಸಹಾಯವಾಣಿ ಸ್ಥಾಪನೆ:

ಬಾಲಕಾರ್ಮಿಕರಿಂದ ದುಡಿಸಿಕೊಳ್ಳುವುದು ಕಂಡುಬಂದಲ್ಲಿ 24/7 ಸಹಾಯವಾಣಿ ಸಂಖ್ಯೆ 1098 ಕ್ಕೆ ಕರೆ ಮಾಡಿ ದೂರುಗಳನ್ನು ದಾಖಲಿಸಬಹುದು. ಈ ಸಂಬಂಧ ಎಲ್ಲಾ ಸಾರ್ವಜನಿಕರು ಸಹಕರಿಸಬೇಕು. ಈಗಾಗಲೇ ಸಹಾಯವಾಣಿಯಿಂದ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ದೂರುಗಳನ್ನು ದಾಖಲಿಸಿಕೊಂಡಿದ್ದು, ಈ ಬಗ್ಗೆ ಕಾರ್ಮಿಕ ಇಲಾಖೆಯಿಂದ ಅಗತ್ಯ ಕ್ರಮಗಳನ್ನು ಸಹ ಜರುಗಿಸಲಾಗುತ್ತಿದೆ ಎಂದು ತಿಳಿಸಿದರು.

ಖ್ಯಾತ ಚಲನಚಿತ್ರ ನಟಿ ಶ್ರೀಮತಿ ಅದಿತಿ ಪ್ರಭುದೇವ ಅವರು ಮಾತನಾಡಿ, ಪ್ರತಿಯೊಬ್ಬ ಪ್ರಜೆಯೂ ತಮ್ಮ ಕರ್ತವ್ಯಗಳನ್ನು ಮರೆತು ಸರ್ಕಾರವನ್ನು ದೂಷಿಸಬಾರದು. ಸಮಾಜದಲ್ಲಿ ತುಂಬಾ ಸಣ್ಣ ಸಣ್ಣ ಬದಲಾವಣೆಗಳು, ಹೆಜ್ಜೆಗಳು ದೊಡ್ಡ ಮಟ್ಟದ ಬದಲಾವಣೆಗಳು ತರಲು ಸಾಧ್ಯವಾಗುತ್ತದೆ ಎಂದರು.

ಸಮಾಜದಲ್ಲಿ ಸುಮಾರು ಜನ ಮಕ್ಕಳನ್ನು ಓದಿಸುವುದಕ್ಕೆ ಕಷ್ಟವಾಗುತ್ತದೆ. ಶುಲ್ಕ ಭರಿಸಲು ಸಾಧ್ಯವಾಗುತ್ತಿಲ್ಲ  ಅಂತಹ ಮಕ್ಕಳಿಗೆ ಶುಲ್ಕ ಭರಿಸುವ ಮೂಲಕ ಮಾದರಿಯಾಗಬೇಕು. ಇಂತಹ ಚಿಕ್ಕ ಚಿಕ್ಕ ಬದಲಾವಣೆಗಳನ್ನು ತರುವ ಮೂಲಕ ಬಾಲ ಕಾರ್ಮಿಕ ಪದ್ದತಿಯನ್ನು ನಿರ್ಮೂಲನೆ ಮಾಡಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬ ಮಗು ಸಹ ಈ ದೇಶದ ಪ್ರಜೆಯಾಗುತ್ತಾರೆ. ಅಂತಹ ಪ್ರಜೆಗಳನ್ನು ರೂಪಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.

ಕಾರ್ಮಿಕ ಇಲಾಖೆಯ ಜಂಟಿ ಆಯುಕ್ತರಾದ ಡಾ.ಎನ್.ವಿ.ರವಿಕುಮಾರ್ ಅವರು ಮಾತನಾಡಿ, ಕಾರ್ಮಿಕ ಇಲಾಖೆಯ ಸಚಿವರು ಹಲವು ಪ್ರಥಮಗಳಿಗೆ ನಾಂದಿ ಹಾಕಿದ್ದಾರೆ. ಅಸಂಘಟಿತ ಕಾರ್ಮಿಕರಿಗೆ ‘ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ’ ಯೋಜನೆ, ಗಿಗ್ ಕಾರ್ಮಿಕರಿಗೆ ಯೋಜನೆ ರೂಪಿಸಿ ಪ್ರತ್ಯೇಕವಾದ ಕಾಯ್ದೆಯನ್ನು ತಂದಿದ್ದಾರೆ. 30 ಲಕ್ಷ ಟ್ರಾನ್ಸ್‍ಪರ್ಡ್ ಅಲೈಡ್ ಕಾರ್ಮಿಕರಿಗೆ ಕಾಯ್ದೆ ಜಾರಿಗೆ, ಪತ್ರಿಕಾ ವಿತರಕರು, ಸಿನಿಮಾ, ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಯೋಜನೆ ರೂಪಿಸುವ ಮೂಲಕ ಕಾರ್ಮಿಕ ಸಮುದಾಯಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕಾರ್ಮಿಕ ಆಯುಕ್ತರಾದ ಡಾ.ಹೆಚ್.ಎನ್.ಗೋಪಾಲಕೃಷ್ಣ ಅವರು “ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ”ದ ಪ್ರಮಾಣ ವಚನ ಬೋಧಿಸಿದರು.

“ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ”ದ ಅಂಗವಾಗಿ ಜಾಗೃತಿ ಜಾಥಾಗೆ ಸಚಿವ ಸಂತೋಷ್ ಲಾಡ್ ಮತ್ತು ನಟಿ ಅದಿತಿ ಪ್ರಭುದೇವ ಅವರು ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಕಾರ್ಯದರ್ಶಿಗಳಾದ ಶ್ರೀಮತಿ ಭಾರತಿ. ಡಿ, ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಜಿ.ಜಗದೀಶ್, ಕಾರ್ಖಾನೆಗಳ ಮತ್ತು ಬಾಯ್ಲರುಗಳ ಇಲಾಖೆಯ ನಿರ್ದೇಶಕರಾದ ಶ್ರೀನಿವಾಸ್,  ಕಾರ್ಮಿಕ ಅಧಿಕಾರಿಗಳಾದ ಶೇಖರ್ ಗಡದ್, ಮಂಜುಳ ಸೇರಿದಂತೆ ಮತ್ತಿತರ ಅಧಿಕಾರಿಗಳು, ಎನ್‍ಎಸ್.ಎಸ್., ಎನ್‍ಸಿಸಿ ವಿದ್ಯಾರ್ಥಿಗಳು, ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

`ಅತಿಥಿ ಉಪನ್ಯಾಸಕರು – ಸಂಪನ್ಮೂಲ ವ್ಯಕ್ತಿ’ ಕಾರ್ಯ ನಿರ್ವಹಿಸಲು ಅರ್ಜಿ ಆಹ್ವಾನ

ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನಲ್ಲಿ (ಕಾವಾ) ಅತಿಥಿ ಉಪನ್ಯಾಸಕರು – ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯ ನಿರ್ವಹಿಸಲು ಅರ್ಜಿ ಆಹ್ವಾನ

ಮೈಸೂರಿನ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು(ಕಾವ) ಸಂಸ್ಥೆಯಲ್ಲಿ 2025-26ನೇ ಸಾಲಿಗೆ ಮಾತ್ರ ಅತಿಥಿ ಉಪನ್ಯಾಸಕ / ಸಂಪನ್ಮೂಲ ವ್ಯಕ್ತಿಗಳಾಗಿ ಬೋಧನೆ ಮಾಡಲು ಇಚ್ಚಿಸುವ ಅಭ್ಯರ್ಥಿಗಳಿಂದ ಗೌರವ ಸಂಭಾವನೆ ಆಧಾರದ ಮೇಲೆ ಷರತ್ತು ಹಾಗೂ ನಿಬಂಧನೆಗಳನ್ವಯ ಕಾರ್ಯ ನಿರ್ವಹಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಬಿವಿಎ ಮತ್ತು ಎಂಬಿಎ ವಿದ್ಯಾರ್ಥಿಗಳು ಸೇರಿದಂತೆ, ಅನ್ವಯ ಕಲೆ, ಚಿತ್ರಕಲೆ, ಶಿಲ್ಪಕಲೆ, ಅಚ್ಚುಕಲೆ (ಗ್ರಾಫಿಕ್ಸ್) ಛಾಯಾಚಿತ್ರ ಮತ್ತು ಛಾಯಾಚಿತ್ರ ಪತ್ರಿಕೋದ್ಯಮ ಪ್ರಾಯೋಗಿಕ ಮತ್ತು ಥಿಯರಿ ಬೋಧನಾ ವಿಷಯಗಳಿಗೆ ಹಾಗೂ ಕಲಾ ಇತಿಹಾಸ ಥಿಯರಿ ಬೋಧನಾ ವಿಷಯಗಳಿಗೆ ಅರ್ಜಿಸಲ್ಲಿಸಲು ಅಂಗೀಕೃತ ವಿಶ್ವವಿದ್ಯಾಲಯದಿಂದ ಸಂಬಂಧಪಟ್ಟ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಥವಾ ಪೋಸ್ಟ್ ಡಿಪ್ಲೊಮದಲ್ಲಿ (ಪಿ.ಜಿ.ಡಿಪ್ಲೋಮಾ) ಕನಿಷ್ಠ ಶೇಕಡ 55% ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು.

ಬಿವಿಎ ಮತ್ತು ಎಂಬಿಎ ವಿದ್ಯಾರ್ಥಿಗಳು ಸೇರಿದಂತೆ, ಕನ್ನಡ, ಇಂಗ್ಲೀಷ್ ಹಾಗೂ ಹಿಂದಿ ಭಾಷಾ ವಿಷಯಗಳ ಬೋಧನ ವಿಷಯಗಳಿಗೆ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಕನ್ನಡ ಭಾಷಾ (ಎಂ.ಎ. ಇನ್ ಕನ್ನಡ) ಇಂಗ್ಲೀಷ್ ಭಾಷಾ (ಎಂ.ಎ. ಇನ್ ಇಂಗ್ಲೀಷ್) ಹಾಗೂ ಹಿಂದಿ ಭಾಷಾ (ಎಂ.ಎ. ಇನ್ ಹಿಂದಿ) ವಿಷಯಗಳಲ್ಲಿ ಸ್ನಾತಕೋತ್ತರ ಪದವಿಗಳಲ್ಲಿ ಕನಿಷ್ಠ ಶೇಕಡ 55% ರಷ್ಟು ಅಂಕ ಪಡೆದು ಉತ್ತೀರ್ಣರಾಗಿರಬೇಕು.

ಭಾರತ ಮತ್ತು ಭಾರತೀಯ ಸಂವಿಧಾನ ಹಾಗೂ ಸಂವಿಧಾನದ ಮೌಲ್ಯಗಳು ಎಸ್.ಇ.ಸಿ ಪೇಪರ್ ಬೋಧನಾ ವಿಷಯಕ್ಕೆ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಕಾನೂನು ವಿಷಯದಲ್ಲಿ (ಎಲ್.ಎಲ್.ಎಂ) ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇಕಡ 55% ರಷ್ಟು ಅಂಕ ಪಡೆದು ಉತ್ತೀರ್ಣರಾಗಿರಬೇಕು.

ಸೈಬರ್ ಸೆಕ್ಯೂರಿಟಿ / ಆರ್ಟಿಪಿಷಿಯಲ್ ಇಂಟಲಿಜೆನ್ಸ್ ಎಸ್.ಇ.ಸಿ ಪೇಪರ್ ಬೋಧನಾ ವಿಷಯಕ್ಕೆ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಎಂಎಸ್.ಸ್ಸಿ (ಐ.ಟಿ) ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇಕಡ 55% ರಷ್ಟು ಅಂಕ ಪಡೆದು ಉತ್ತೀರ್ಣರಾಗಿರಬೇಕು.

ಆಯ್ಕೆ ಪ್ರಕ್ರಿಯೆ :
ಅಭ್ಯರ್ಥಿಯು ಎರಡು ವರ್ಷ ಸ್ನಾತಕೋತ್ತರ ಪದವಿಯಲ್ಲಿ ಗಳಿಸಿರುವ ಒಟ್ಟು ಶೇಕಡವಾರು ಅಂಕಗಳ 25%ನ್ನು ಗಣನೆಗೆ ತೆಗೆದುಕೊಳ್ಳಲಾಗುವುದು (ಉದಾ. ಸ್ನಾತಕೋತ್ತರ ಪದವಿಯಲ್ಲಿ ಶೇಕಡ 60 ಅಂಕ ಪಡೆದಿದ್ದಲ್ಲಿ ಅದರ ಶೇಕಡ 25ರಷ್ಟು ಅಂದರೆ 15 ಅಂಕಗಳು ಎಂಬುದಾಗಿ ಗಣನೆಗೆ ತೆಗೆದುಕೊಂಡು ಒಟ್ಟಾರೆ ಗರಿಷ್ಠ 25 ಅಂಕಗಳಿಗೆ ಸೀಮಿತಗೊಳಿಸಲಾಗುವುದು. ಹೆಚ್ಚುವರಿ ವಿದ್ಯಾರ್ಹತೆ ಅಂದರೆ ಪಿಹೆಚ್.ಡಿ ವಿದ್ಯಾರ್ಹತೆ ಪಡೆದಿದ್ದಲ್ಲಿ ಗರಿಷ್ಠ 12, ಎನ್.ಇ.ಟಿ. / ಕೆ.ಸೆಟ್ / ಎಸ್.ಎಲ್.ಇ.ಟಿ ವಿದ್ಯಾರ್ಹತೆ ಪಡೆದಿದ್ದಲ್ಲಿ ಗರಿಷ್ಠ 09 ಹಾಗೂ ಎಂ.ಫಿಲ್ ವಿದ್ಯಾರ್ಹತೆ ಪಡೆದಿದ್ದಲ್ಲಿ ಗರಿಷ್ಠ 06 ಅಂಕಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದು.

ಹಿಂದಿನ ವರ್ಷಗಳಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಅವಧಿಗೆ ಪ್ರತಿ ಶೈಕ್ಷಣಿಕ ವರ್ಷಕ್ಕೆ 3 ಅಂಕಗಳಂತೆ ಗರಿಷ್ಠ 16 ವರ್ಷಗಳಿಗೆ 48 ಅಂಕಗಳನ್ನು ಅನುಭವದ ಆಧಾರದ ಮೇಲೆ ತೆಗೆದುಕೊಳ್ಳಲಾಗುವುದು. (ಪ್ರತಿ ಶೈಕ್ಷಣಿಕ ವರ್ಷದ ಪೂರ್ಣ ಅವಧಿ ಸೇವೆಗೆ 3 ಅಂಕಗಳು, ಶೈಕ್ಷಣಿಕ ವರ್ಷದಲ್ಲಿ 1 ಸೆಮಿಸ್ಟರ್‍ನಲ್ಲಿ ಮಾತ್ರ ಸೇವೆ ಸಲ್ಲಿಸಿದ್ದರೆ 1.5 ಅಂಕಗಳು, ಸೆಮಿಸ್ಟರ್‍ನ 1 ತಿಂಗಳ ಅವಧಿಗೆ 0.5 ಅಂಕ, 1 ತಿಂಗಳು ಮೇಲ್ಪಟ್ಟು 2 ತಿಂಗಳ ವರೆಗಿನ ಸೇವಾ ಅವಧಿಗೆ 1 ಅಂಕ ಹಾಗೂ 2 ತಿಂಗಳು ಮೇಲ್ಪಟ್ಟ ಸೇವಾ ಅವಧಿಗೆ 1.5 ಅಂಕಗಳು) ಅಲ್ಲದೆ ವೈಯಕ್ತಿಕ ಸಂದರ್ಶನಕ್ಕೆ ಗರಿಷ್ಠ 10 ಅಂಕಗಳಂತೆ ಒಟ್ಟಾರೆ 110 ಅಂಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದು.

ಗೌರವ ಸಂಭಾವನೆ:
ಪ್ರಾಯೋಗಿಕ ಹಾಗೂ ಥಿಯರಿ ತರಗತಿಗಳನ್ನು ತೆಗೆದುಕೊಳ್ಳುವ ಹಾಗೂ ವಾರದ 06 ದಿನಗಳ ಪೂರ್ಣಾವಧಿ ಕರ್ತವ್ಯ ನಿರ್ವಹಿಸುತ್ತಿರುವ ಎನ್.ಇ.ಟಿ, ಎಸ್.ಎಲ್.ಇ.ಟಿ, ಪಿ.ಹೆಚ್.ಡಿ ಪದವಿ ಹೊಂದಿದವರಿಗೆ ರೂ 27,000/- ಪ್ರಾಯೋಗಿಕ ಹಾಗೂ ಥಿಯರಿ ತರಗತಿಗಳನ್ನು ತೆಗೆದುಕೊಳ್ಳುವ ಹಾಗೂ ವಾರದ 06 ದಿನಗಳು ಪೂರ್ಣವಧಿ ಕರ್ತವ್ಯ ನಿರ್ವಹಿಸುತ್ತಿರುವ ಎನ್.ಇ.ಟಿ, ಎಸ್.ಎಲ್.ಇ.ಟಿ, ಪಿ.ಹೆಚ್.ಡಿ ಪದವಿ ಹೊಂದದೇ ಇರುವವರಿಗೆ ರೂ. 22500/- ಥಿಯರಿ ತರಗತಿಗಳನ್ನು ಮಾತ್ರ ತೆಗೆದುಕೊಳ್ಳುವವರಿಗೆ ಹಾಗೂ ವಾರದ 06 ದಿನಗಳು ಕರ್ತವ್ಯ ನಿರ್ವಹಿಸುತ್ತಿರುವ ಎನ್.ಇ.ಟಿ, ಎಸ್.ಎಲ್.ಇ.ಟಿ, ಪಿ.ಹೆಚ್.ಡಿ ಪದವಿ ಹೊಂದಿದವರಿಗೆ 19,500/- ಹಾಗೂ ಥಿಯರಿ ತರಗತಿಗಳನ್ನು ಮಾತ್ರ ತೆಗೆದುಕೊಳ್ಳುವವರಿಗೆ ಹಾಗೂ ವಾರದ 06 ದಿನಗಳು ಕರ್ತವ್ಯ ನಿರ್ವಹಿಸುತ್ತಿರುವ ಎನ್.ಇ.ಟಿ, ಎಸ್.ಎಲ್.ಇ.ಟಿ, ಪಿ.ಹೆಚ್.ಡಿ ಪದವಿ ಹೊಂದದೇ ಇರುವವರಿಗೆ 16,500/- ರೂ.ಗಳ ಗೌರವ ಸಂಭಾವನೆ ನೀಡಲಾಗುವುದು.

ಕನ್ನಡ ಮತ್ತು ಸಂಸ್ಕøತಿ ಇಲಾಖೆಯನ್ವಯ ಪ್ರತಿ ಗಂಟೆಗೆ ರೂ 500/- ರಂತೆ ಪ್ರತಿ ಮಾಹೆಗೆ ಗರಿಷ್ಠ ರೂ. 10,500/- ರೂ.ಗಳ ಗೌರವ ಸಂಭಾವನೆಯನ್ನು ಸಂಪನ್ಮೂಲ ವ್ಯಕ್ತಿಗಳಿಗೆ ನೀಡಲು ನಿಯಮಾನುಸಾರ ಕ್ರಮ ವಹಿಸಲಾಗುವುದು.

ಅಸಕ್ತ ಅಭ್ಯಥಿಗಳು 2025ನೇ ಜೂನ್ 16ರ ಸಂಜೆ 5.30 ಗಂಟೆ ಒಳಗಾಗಿ ಅರ್ಜಿಗಳನ್ನು ಸಲ್ಲಿಸತಕ್ಕದ್ದು. 2025ನೇ ಜೂನ್ 26ರಂದು ಮೈಸೂರಿನ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು(ಕಾವ) ಸಂಸ್ಥೆಯಲ್ಲಿ ಸಂದರ್ಶನವನ್ನು ನಡೆಸಲಾಗುವುದು ಅಲ್ಲದೆ ತರಗತಿಗಳು ಅನ್ವಯವಾಗುವಂತೆ ಕಾರ್ಯನಿರ್ವಹಿಸಲು ತಿಳಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಅಂತರ್ಜಾಲ www.mysore.nic.in ಮತ್ತು www.cavamysore.karnataka.gov.in ನ್ನು ವೀಕ್ಷಿಸಬಹುದು ಅಥವಾ ಮೈಸೂರಿನ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು(ಕಾವ) ಸಂಸ್ಥೆಯ ದೂರವಾಣಿ ಸಂಸ್ಥೆ 0821-2438931ನ್ನು ಸಂಪರ್ಕಿಸಬಹುದು ಎಂದು ಮೈಸೂರಿನ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು(ಕಾವ) ಸಂಸ್ಥೆಯ ಡೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2024ನೇ ಸಾಲಿನ ಪುಸ್ತಕ ಬಹುಮಾನಕ್ಕೆ ಅರ್ಜಿ ಆಹ್ವಾನ

ಕರ್ನಾಟಕ ಯಕ್ಷಗಾನ ಅಕಾಡೆಮಿಯು ಯಕ್ಷಗಾನ (ತೆಂಕು, ಬಡಗು ಬಡಾಬಡಗು, ಯಕ್ಷಗಾನ ಗೊಂಬೆಯಾಟ), ಮೂಡಲಪಾಯ ಯಕ್ಷಗಾನ, ಕೇಳಿಕೆ, ಘಟ್ಟದಕೋರೆ ಮತ್ತು ತಾಳಮದ್ದಲೆ, ಇತ್ಯಾದಿ ಕಲಾಪ್ರಕಾರಗಳಲ್ಲಿ 2024ನೇ ಸಾಲಿನ ಕ್ಯಾಲೆಂಡರ್ ವರ್ಷದಲ್ಲಿ (ದಿನಾಂಕ:01.01.2024 ರಿಂದ 31.12.2024ರ ಒಳಗೆ) ಪ್ರಕಟಿಸಿರುವ ಪುಸ್ತಕಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಲು ಲೇಖಕರಿಂದ / ಪ್ರಕಾಶಕರಿಂದ ಅರ್ಜಿ ಆಹ್ವಾನಿಸಿದೆ.

ಆಯ್ಕೆಯಾದ ಪುಸ್ತಕಕ್ಕೆ ರೂ.25,000/- ಬಹುಮಾನವನ್ನು ನೀಡಲಾಗುವುದು. ಯಕ್ಷಗಾನದ ಕ್ಷೇತ್ರದ ವಿವಿಧ ಆಯಾಮಗಳ ಬಗ್ಗೆ ಸಂಗೀತ, ಆಹಾರ, ಅಭಿನಯ, ಸಂಶೋಧನೆ, ವಿಮರ್ಶೆ, ಜೀವನಚರಿತ್ರೆ, ಪ್ರಸಂಗ ಪುಸ್ತಕ ಇತ್ಯಾದಿ ಪ್ರಕಾರಗಳನ್ನು ಒಳಗೊಂಡ ಪುಸ್ತಕಗಳನ್ನು ಬಹುಮಾನಕ್ಕಾಗಿ ಆಹ್ವಾನಿಸಿದೆ. ಪುಸ್ತಕ ಬಹುಮಾನಕ್ಕೆ ಸಲ್ಲಿಸುವ ಪುಸ್ತಕವನ್ನು ಪಠ್ಯಕ್ಕಾಗಿ ಸಿದ್ಧಪಡಿಸಿರಬಾರದು ಹಾಗೂ ಸಂಪಾದಿತ ಕೃತಿ ಅಥವಾ ಅಭಿನಂದನ ಕೃತಿಯಾಗಿರಬಾರದು, ಸ್ವರಚಿತವಾಗಿರಬೇಕು. ಪ್ರಥಮ ಮುದ್ರಣ ಆವೃತ್ತಿಯಾಗಿರಬೇಕು.

ಬಹುಮಾನಕ್ಕೆ ಪುಸ್ತಕಗಳನ್ನು ಕಳುಹಿಸುವವರು ರಿಜಿಸ್ಟ್ರಾರ್, ಕರ್ನಾಟಕ ಯಕ್ಷಗಾನ ಅಕಾಡೆಮಿ, ಕನ್ನಡ ಭವನ, ಎರಡನೇ ಮಹಡಿ, ಚಾಲುಕ್ಯ ವಿಭಾಗ, ಜೆ.ಸಿ.ರಸ್ತೆ, ಬೆಂಗಳೂರು 560 002, ಇವರಿಗೆ 2025ರ ಜುಲೈ 10ರ ಒಳಗಾಗಿ ಪುಸ್ತಕದ ನಾಲ್ಕು ಪ್ರತಿಗಳನ್ನು ಕಡ್ಡಾಯವಾಗಿ ಕಳುಹಿಸುವುದು. ಯಾವುದೇ ಕಾರಣಕ್ಕೂ ಪುಸ್ತಕಗಳನ್ನು ಹಿಂದಿರುಗಿಸಲಾಗುವುದಿಲ್ಲ. ಹೆಚ್ಚಿನ ವಿವರಗಳನ್ನು ಹಾಗೂ ಅರ್ಜಿಯನ್ನು ಕಚೇರಿಯ ವೇಳೆಯಲ್ಲಿ ಅಕಾಡೆಮಿಯಿಂದ ದೂರವಾಣಿ ಸಂಖ್ಯೆ-080-22113146 ಮೂಲಕ ಪಡೆಯಬಹುದು ಹಾಗೂ ಅರ್ಜಿಗಳನ್ನು ಆಯಾ ಜಿಲ್ಲೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಪಡೆಯಬಹುದಾಗಿದೆ.

ವಾರ್ತಾ ಮತ್ತು ಪ್ರಸಾರ ಸಚಿವಾಲಯದಲ್ಲಿ 11 ವರ್ಷಗಳ ಸಾಧನೆಗಳ ಕುರಿತ ಸಂಕ್ಷಿಪ್ತ ಸಂಗ್ರಹ ಬಿಡುಗಡೆ

ಕೇಂದ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 11 ವರ್ಷಗಳ ಸುದೀರ್ಘ ಆಟಳಿತ ನಡೆಇ ಮುನ್ನಡೆದಿದ್ದಾರೆ. ಕೇಂದ್ರ ಸರ್ಕಾರವು ನಾಗರಿಕರಿಗೆ ಸಮಾನ ಅವಕಾಶ ಹಾಗೂ ನ್ಯಾಯ ನೀಡುವಲ್ಲಿ ಬದ್ಧತೆಯನ್ನು ತೋರಿದೆ.

ಈ ಅವಧಿಯಲ್ಲಿ ಕೇಂದ್ರ ಸರ್ಕಾರ ಮಾಡಿದ ಸಾಧನೆಗಳನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು “ವಿಕಸಿತ ಭಾರತ್ ಕಾ ಅಮೃತ ಕಾಲ, ಸೇವಾ ಸುಹಾಸನ್ ಗರೀಬ್ ಕಲ್ಯಾಣ್ ಕಾ 11 ಸಾಲ್” ಎಂಬ ಹೆಸರಿನ ಸಂಕ್ಷಿಪ್ತ ಸಂಗ್ರಹವನ್ನು ಹೊರತಂದಿದೆ. ಈ ಸಂಗ್ರಹವು ಕೇಂದ್ರ ಸರ್ಕಾರದ ಆರ್ಥಿಕ ನೀತಿ ಹಾಗೂ ವಿವಿಧ ಕ್ಷೇತ್ರಗಳ ಆಡಳಿತದಲ್ಲಾದ ಸುಧಾರಣೆಗಳನ್ನು ಒಳಗೊಂಡಿದೆ. ಮೂಲಸೌಕರ್ಯ, ಸಾಮಾಜಿಕ ನ್ಯಾಯ, ಯುವಸಬಲೀಕರಣ, ವಿದೇಶಿ ಕಾಯ್ದೆ, ಸಾಂಸ್ಕøತಿಕ ಪರಂಪರೆ, ಪರಿಸರ ನಾಯಕತ್ವ ಮುಂತಾದ ಕ್ಷೇತ್ರಗಳಲ್ಲಾದ ಸಾಧನೆಗಳನ್ನು ಸಂಕ್ಷಿಪ್ತ ಸಂಗ್ರಹದಲ್ಲಿ ತಿಳಿಸಿಕೊಡಲಾಗಿದೆ. ಈ ಸಂಗ್ರಹಗಳನ್ನು ಆಂಗ್ಲ ಮತ್ತು ಹಿಂದಿ ಭಾಷೆಗಳಲ್ಲಿ ವೀಕ್ಷಿಸಬಹುದಾಗಿದ್ದು, ಆಂಗ್ಲಭಾಷೆಯ ಬುಕ್‍ಲೆಟ್ ಗಳನ್ನು https://drive.google.com/drive/folders/1k3uOSSW4TmfEHeh84ZwkD8DqFEdvpoX,
ಹಿಂದಿ ಭಾಷೆಯ ಬುಕ್‍ಲೆಟ್ ಗಳನ್ನು https://drive.google.com/drive/folders/1DIBQKJHjUQbQzax8lmQyCP-GfMckUYBV, ಹಿಂದಿ, ಆಂಗ್ಲ ಹಾಗೂ ಇತರ ಪ್ರಾದೇಶಿಕ ಭಾಷೆಯ ಬುಕ್‍ಲೆಟ್ ಗಳನ್ನು https://drive.google.com/drive/folders/1iPhYjQ6Q3Y5Fa9LEWKk-ol2LKNGrKce, ಆಂಗ್ಲಭಾಷೆಯ ಪ್ರಕಟಣೆಗಳನ್ನು https://drive.google.com/drive/folders/1t9XEwqRSfH1GDtwlcgcMHnzQbmvYeayC  ಹಾಗೂ ಹಿಂದಿ ಭಾಷೆಯ ಪ್ರಕಟಣೆ ಗಳನ್ನು https://drive.google.com/drive/folders/1LvaYEhPYA1xsJEUePY7GcLabtgtbo9CQ  ನಲ್ಲಿ ವೀಕ್ಷಿಸಬಹುದಾಗಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿಗಳಾದ ಸಂಜಯ್ ಜಜು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.