Home Blog Page 48

ಶೇಷಾದ್ರಿಪುರ ರಾಯರ ಮಠದ ವಾರ್ಷಿಕೋತ್ಸವ ಹಾಗೂ ಶ್ರೀ ಜಯತೀರ್ಥರ ಆರಾಧನೆ

ಶೇಷಾದ್ರಿಪುರ ರಾಯರ ಮಠದ ವಾರ್ಷಿಕೋತ್ಸವ ಹಾಗೂ ಶ್ರೀ ಜಯತೀರ್ಥರ ಆರಾಧನೆ

ಬೆಂಗಳೂರು : ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶೇಷಾದ್ರಿಪುರದ ಫ್ಲಾಟ್ ಫಾರ್ಮ್ ರಸ್ತೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ವಾರ್ಷಿಕೋತ್ಸವ ಹಾಗೂ ಶ್ರೀ ಜಯತೀರ್ಥರ ಆರಾಧನೆಯ ನಿಮಿತ್ತ (ಜುಲೈ 15 ರಂದು) ಬೆಳಗ್ಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಕನಕಾಭಿಷೇಕ, ಗಿರಿನಗರದ ಶೃತಿ ಸಂಗೀತ ಶಾಲೆಯ ಸದಸ್ಯರುಗಳಿಂದ ದಾಸರ ಪದಗಳ ಗಾಯನ, ರಥೋತ್ಸವ, ಮಹಾಮಂಗಳಾರತಿ ಹಾಗೂ ಅಲಂಕಾರ ಪಂಕ್ತಿ ಸೇವಾ ಕಾರ್ಯಕ್ರಮಗಳು ಜರುಗಿದವು. ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕುಮಾರಿ ದಿವ್ಯಶ್ರೀ ರಂಗನಾಥನ್ ಮತ್ತು ಸಂಗಡಿಗರಿಂದ ಸ್ಯಾಕ್ಸೋಫೋನ್ ವಾದನ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ಶ್ರೀಮಠದ ವಿಚಾರಣಾಕರ್ತರಾದ ಶ್ರೀ ಸುಬ್ಬುನರಸಿಂಹ ಅವರು ತಿಳಿಸಿದರು.

ಮುಷ್ಕರ ವಾಪಸ್:ಸಚಿವ ಭೈರತಿ ಸುರೇಶ್ ರವರಿಗೆ ಪಾಲಿಕೆ ನೌಕರರ ಪರಿಷತ್ತು ವತಿಯಿಂದ ಅಭಿನಂದನೆ

ವಿಕಾಸಸೌಧ: ಸಭೆ ನಡೆಸಿದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ ಸರ್ಕಾರಿ ನೌಕರರ ಸಂಘ, ಮಹಾನಗರ ಪಾಲಿಕೆ ನೌಕರರ ಸಂಘದ ಪದಾಧಿಕಾರಿಗಳು ಭಾಗಿ
ಹಲವು ಬೇಡಿಕೆಗಳ ಈಡೇರಿಕೆಗೆ ಸಚಿವರ ಸ್ಪಂದನೆ. ಪಾಲಿಕೆ ನೌಕರರನ್ನು ಗುಂಪು ವಿಮೆ ವ್ಯಾಪ್ತಿಗೆ ತರುವ ಬಗ್ಗೆ ಪರಿಶೀಲನೆ
ಸಿ & ಆರ್ ನಿಯಮಗಳಿಗೆ ತಿದ್ದುಪಡಿ ತರುವ ಭರವಸೆ
ನೌಕರರ ಸಂಘಗಳಿಂದ ಸ್ವಾಗತ, ಸಚಿವರಿಗೆ ಅಭಿನಂದನೆ*

ಬೆಂಗಳೂರು, 15 ಜುಲೈ 2025: ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ ಅವರು ಮಹಾನಗರಪಾಲಿಕೆಗಳ ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ನಡೆಸಿದ ಸಂಧಾನ ಸಭೆ ಫಲಪ್ರದವಾಗಿದ್ದು, ಮುಷ್ಕರ ಕೈಬಿಡುವುದಾಗಿ ನೌಕರರು ಪ್ರಕಟಿಸಿದ್ದಾರೆ.
ವಿಕಾಸಸೌಧದಲ್ಲಿ ಮಂಗಳವಾರ ರಾಜ್ಯದ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಅಮೃತರಾಜ್ ಮತ್ತು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ನೇತೃತ್ವದ ಪದಾಧಿಕಾರಿಗಳೊಂದಿಗೆ ಸಚಿವರು ಸಭೆ ನಡೆಸಿದರು.
ಮಹಾನಗರ ಪಾಲಿಕೆಗಳ ಸಾಮಾನ್ಯ ನೇಮಕಾತಿ ನಿಯಮಗಳು 2011 ಕ್ಕೆ ಸಮಗ್ರ ತಿದ್ದುಪಡಿ ಮಾಡುವುದು, ಮಹಾನಗರ ಪಾಲಿಕೆ ನೌಕರರನ್ನು ಪೂರ್ಣ ಪ್ರಮಾಣದಲ್ಲಿ ಸರ್ಕಾರಿ ನೌಕರರೆಂದು ಪರಿಗಣಿಸುವುದು, ಸರ್ಕಾರಿ ನೌಕರರ ರೀತಿಯಲ್ಲಿ ಮಹಾನಗರ ಪಾಲಿಕೆಗಳ ಅಧಿಕಾರಿಗಳು/ನೌಕರರಿಗೂ ಕೆಜಿಐಡಿ, ಜಿಐಎಸ್ ಮತ್ತು ಜಿಪಿಎಫ್ ಸೌಲಭ್ಯಗಳನ್ನು ನೀಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ನೌಕರರ ಸಂಘಗಳು ಸರ್ಕಾರ ಮುಂದಿಟ್ಟಿದ್ದವು.
ಈ ಬಗ್ಗೆ ಸಭೆ ನಡೆಸಿದ ಬಳಿಕ ಸಭೆಯ ಬಗ್ಗೆ ಮಾಹಿತಿ ನೀಡಿದ ಸಚಿವ ಬೈರತಿ ಸುರೇಶ ಅವರು, ಪಾಲಿಕೆ ನೌಕರರಿಗೆ ಸಕಾಲಕ್ಕೆ ವೇತನ ನೀಡುವುದು, ಸಿ & ಆರ್ ನಿಯಮಗಳಿಗೆ ತಿದ್ದುಪಡಿ ತರುವ ಕುರಿತು ಆರ್ಥಿಕ ಇಲಾಖೆ ಅನುಮೋದನೆ ಪಡೆಯುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.
ಪೌರಾಡಳಿತ ಆಯುಕ್ತರ ಹುದ್ದೆಗಳನ್ನು ಸೃಜಿಸುವಂತೆ ನೌಕರರು ಬೇಡಿಕೆ ಇಟ್ಟಿದ್ದರು. ಆದರೆ, ಕಾನೂನು ಪರಿಮಿತಿಯೊಳಗೆ ವಲಯ ಆಯುಕ್ತರ ಹುದ್ದೆ ಸೃಜಿಸುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ಆರ್ಥಿಕ ಇಲಾಖೆ ಅಭಿಪ್ರಾಯ ಬಂದ ತಕ್ಷಣ ಕ್ರಮ ವಹಿಸುವುದಾಗಿ ಭರವಸೆ ನೀಡಿರುವುದಾಗಿ ಹೇಳಿದರು.
ಪರಿಸರ ಇಂಜಿನಿಯರ್ ನೇಮಕಕ್ಕೆ ಸೂಚನೆ
ಮಹಾನಗರ ಪಾಲಿಕೆಗಳಲ್ಲಿ ಸಾಕಷ್ಟು ಪರಿಸರ ಇಂಜಿನಿಯರ್ ಗಳ ಹುದ್ದೆಗಳು ಸಾಕಷ್ಟು ಖಾಲಿ ಇವೆ. ಇದರಿಂದ ದೈನಂದಿನ ಕರ್ತವ್ಯಕ್ಕೆ ಅಡ್ಡಿಯಾಗುತ್ತಿದೆ ಎಂಬ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು, ಮಂಜೂರಾಗಿರುವ ಪರಿಸರ ಇಂಜಿನಿಯರ್ ಗಳ ಹುದ್ದೆಗಳ ಭರ್ತಿಗೆ ಅನುಮೋದನೆ ನೀಡುವಂತೆ ಆರ್ಥಿಕ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಾಲಿಕೆ ನೌಕರರಿಗೆ ಗುಂಪು ವಿಮೆ
ಸರ್ಕಾರಿ ನೌಕರರ ಮಾದರಿಯಲ್ಲಿ ಪಾಲಿಕೆ ನೌಕರರಿಗೂ ಗುಂಪು ವಿಮೆ ಯೋಜನೆ (ಜಿಐಎಸ್) ಜಾರಿಗೆ ತರುವ ಬಗ್ಗೆ ಸರ್ಕಾರ ಮುಕ್ತ ಮನಸು ಹೊಂದಿದೆ. ವಿಮಾ ಕಂತಿನ ಮೊತ್ತದಲ್ಲಿ ನೌಕರರು ತಮ್ಮ ಪಾಲಿನ ಮೊತ್ತವನ್ನು ಪಾವತಿಸಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ ಎಂದು ಹೇಳಿದ ಸಚಿವರು, ಈ ಹಿನ್ನೆಲೆಯಲ್ಲಿ ಪಾಲಿಕೆಗಳು ನೌಕರರ ಗುಂಪು ವಿಮೆ ಯೋಜನೆಗೆ ಉಳಿದ ಮೊತ್ತವನ್ನು ಭರಿಸುವುದಾದರೆ ಆಗಬಹುದಾದ ಆರ್ಥಿಕ ಹೊರೆಯನ್ನು ಗಮನಿಸಿ ಅಂತಿಮ ನಿರ್ಧಾರ ಕೈಗೊಳ್ಳುವಂತೆ ಉನ್ನತಾಧಿಕಾರಿಗಳಿಗೆ ಆದೇಶ ನೀಡಿದರು.
ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗೆ ಪ್ರೋತ್ಸಾಹ
ಪ್ರತಿ ವರ್ಷ ಪಾಲಿಕೆಗಳ ನೌಕರರಿಗೆ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಆರ್ಥಿಕ ಹೊರೆಯಾಗದ ರೀತಿಯಲ್ಲಿ ಪಾಲಿಕೆಗಳಿಂದಲೇ ವೆಚ್ಚ ಭರಿಸಲು ಸೂಚನೆ ನೀಡಲಾಗಿದ್ದು, ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿ ನೌಕರರ ಇನ್ನಿತರ ಬೇಡಿಕೆಗಳನ್ನು ಹಂತ-ಹಂತವಾಗಿ ಈಡೇರಿಸುವ ಭರವಸೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ಪಾಲಿಕೆಗಳಿಗೂ ಜ್ಯೋತಿ ಸಂಜೀವಿನಿ
ಸರ್ಕಾರಿ ನೌಕರರಿಗೆ ಜಾರಿಗೆ ತಂದಿರುವ ಜ್ಯೋತಿ ಸಂಜೀವಿನಿ ಆರೋಗ್ಯ ವಿಮೆಯನ್ನು ಪಾಲಿಕೆ ನೌಕರರಿಗೂ ವಿಸ್ತರಣೆ ಮಾಡುವ ಬಗ್ಗೆ ಸಹಮತ ವ್ಯಕ್ತಪಡಿಸಲಾಗಿದೆ. ಈ ಯೋಜನೆಯಡಿ ನೌಕರರು ತಮ್ಮ ಪಾಲಿನ ವಿಮಾ ಮೊತ್ತ ಮತ್ತು ಅದಕ್ಕೆ ಸಮಾನವಾದ ಮೊತ್ತವನ್ನು ಪಾಲಿಕೆಗಳು ಭರಿಸುವ ಸಾಧಕ-ಭಾದಕಗಳ ಬಗ್ಗೆ ಪರಿಶೀಲಿಸಲಾಗುತ್ತದೆ. ಇದಲ್ಲದೇ, ನೌಕರರ ಚಿಕಿತ್ಸಾ ವೆಚ್ಚವನ್ನು ಮಂಜೂರು ಮಾಡುವ ಅಧಿಕಾರವನ್ನು ಆಯಾ ಪಾಲಿಕೆಗಳ ಆಯುಕ್ತರಿಗೆ ನೀಡುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಪ್ರಕಟಿಸಿದರು.
ಮುಷ್ಕರ ವಾಪಸ್ 
ಬಹುತೇಕ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಸಚಿವರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಷಡಾಕ್ಷರಿ ಮತ್ತು ಅಮೃತರಾಜ್ ಅವರು ಮುಷ್ಕರವನ್ನು ವಾಪಸ್ ಪಡೆದಿರುವುದಾಗಿ ಘೋಷಿಸಿದರಲ್ಲದೇ, ಸಚಿವರನ್ನು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.
ಈ ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್ ಮತ್ತು ಪೌರಾಡಳಿತ ನಿರ್ದೇಶಕರಾದ ಪ್ರಭುಲಿಂಗ ಕವಳಿಕಟ್ಟಿ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಇದ್ದರು.

VKNEWS DIGITAL : TODAY’S HEADLINES

ಮಾಧ್ಯಮ ಸಂಜೀವಿನಿ ಯೋಜನೆ ಎಲ್ಲಾ ಪತ್ರಕರ್ತರಿಗೂ ವಿಸ್ತರಿಸಲು KUWJ ಆಗ್ರಹ

ಬೆಂಗಳೂರು: ಮುಖ್ಯಮಂತ್ರಿಗಳ ಮಾಧ್ಯಮ ಸಂಜೀವಿನಿ ಯೋಜನೆಯಲ್ಲಿನ ಕಠಿಣ ಷರತ್ತಗಳನ್ನು ಸರಳೀಕರಣ ಮಾಡಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ) ಮುಖ್ಯಮಂತ್ರಿಗಳನ್ನು ಒತ್ತಾಯಿಸಿದೆ.
ಮಾಧ್ಯಮ ಮಾನ್ಯತೆ ಪಡೆದ ಪತ್ರಕರ್ತರು ಮತ್ತು ಅವರ ಕುಟುಂಬಕ್ಕೆ ಈ ಯೋಜನೆಯನ್ನು ಸೀಮಿತ ಮಾಡಿರುವುದರಿಂದ ಬಹಳ ಜನ ಪತ್ರಕರ್ತರು ಯೋಜನೆಯಿಂದ ವಂಚಿತರಾಗುತ್ತಾರೆ. ಆದುದರಿಂದ ವಾರ್ತಾ ಇಲಾಖೆಯಲ್ಲಿ ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳು ಮತ್ತು ಸುದ್ದಿಮಾಧ್ಯಮಗಳಲ್ಲಿ ಕೆಲಸ ಮಾಡುವ ಎಲ್ಲಾ ಪತ್ರಕರ್ತರಿಗೂ ಯೋಜನೆಯನ್ನು ವಿಸ್ತಾರ ಮಾಡಬೇಕು ಎಂದು ಕೆಯುಡಬ್ಲೂೃಜೆ ಆಗ್ರಹಿಸಿದೆ.
ಮುಖ್ಯಮಂತ್ರಿಗಳ ಮಾಧ್ಯಮ ಸಂಜೀವಿನಿ ಯೋಜನೆಯನ್ನು ಪತ್ರಿಕಾ ದಿನಾಚರಣೆ ಸಂದರ್ಭದಲ್ಲಿಯೇ ಜಾರಿಗೆ ನೀಡಿರುವುದು ಸ್ವಾಗತಾರ್ಹವಾಗಿದ್ದು, ಅದಕ್ಕಾಗಿ ಅಭಿನಂದಿಸುವುದಾಗಿ ತಿಳಿಸಿರುವ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಯೋಜನೆ ಎಲ್ಲಾ ಪತ್ರಕರ್ತರಿಗೂ ಸಿಗುವಂತೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ ವಿನಂತಿಸಿದ್ದಾರೆ.
ತುಮಕೂರಿನಲ್ಲಿ ನಡೆದ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪತ್ರಕರ್ತರಿಗೆ ಉಚಿತ ಆರೋಗ್ಯ ಯೋಜನೆಯನ್ನು ಜಾರಿಗೆ ತರಬೇಕು ಎನ್ನುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲೂಜೆ) ಹಕ್ಕೊತ್ತಾಯಕ್ಕೆ ಸ್ಪಂಧಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅದೇ ವೇದಿಕೆಯಲ್ಲಿ ಯೋಜನೆ ಜಾರಿಗೆ ತರುವುದಾಗಿ ೋಷಿಸಿದ್ದು ಅಷ್ಟೇ ಅಲ್ಲ, ಬಜೆಟ್‌ನಲ್ಲಿಯೂ ಪ್ರಕಟಿಸಿ ನುಡಿದಂತೆ ನಡೆದಿದ್ದರು. ಈ ನಿಟ್ಟಿನಲ್ಲಿ ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರ ಪಾತ್ರವೂ ಪ್ರಾಮುಖ್ಯವಾಗಿತ್ತು ಎನ್ನುವುದನ್ನು ಕೆಯುಡಬ್ಲೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಸ್ಮರಿಸಿದ್ದಾರೆ.
VKNEWS DIGITAL : HEADLINES

ಜು. 23 ರಿಂದ ರಾಜ್ಯ ವ್ಯಾಪಿ ಹಾಲು, ಬೇಕರಿ ಉತ್ಪನ್ನಗಳ ಮಾರಾಟ ಬಂದ್ : ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಎಚ್ಚರಿಕೆ

ಕೋಟ್ಯಾಂತರ ರೂ ತೆರಿಗೆ ಪಾವತಿಸುವಂತೆ ನೋಟೀಸ್‌ ನೀಡುತ್ತಿರುವ ಕೇಂದ್ರದ ವಿರುದ್ಧ ಜು. 23 ರಿಂದ ಎರಡು ದಿನ ರಾಜ್ಯ ವ್ಯಾಪಿ ಹಾಲು, ಬೇಕರಿ ಉತ್ಪನ್ನಗಳ ಮಾರಾಟ ಬಂದ್ : ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಎಚ್ಚರಿಕೆ
ಬೆಂಗಳೂರು,ಜು.15: ವಾರ್ಷಿಕ 40 ಲಕ್ಷ ವಹಿವಾಟು ನಡೆಸಿರುವ ಸಣ್ಣ ಉದ್ದಿಮೆದಾರರಿಗೆ ಏಕಾಏಕಿ ನೋಟೀಸ್‌ ಜಾರಿಗೊಳಿಸಿರುವ ವಾಣಿಜ್ಯ ತೆರಿಗೆ ಇಲಾಖೆ ಕ್ರಮವನ್ನು ವಿರೋಧಿಸಿ ಇದೇ 23 ರಿಂದ ಎರಡು ದಿನಗಳ ಕಾಲ ಬಂದ್‌ ಆಚರಿಸಲು ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತು ನಿರ್ಧರಿಸಿದೆ. ಹಾಲು, ಬೇಕರಿ ಉತ್ಪನ್ನಗಳು, ಬೀಡಿ, ಸಿಗರೇಟು ಮಾರಾಟವನ್ನು ಬಂದ್‌ ಮಾಡುವುದಾಗಿ ಎಚ್ಚರಿಕೆ ನೀಡಿದೆ.

ಸಭೆಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್‌ ಅಧ್ಯಕ್ಷ ರವಿ ಶೆಟ್ಟಿ ಬೈಂದೂರು ಮಾತನಾಡಿ, ಜು. 23 ಮತ್ತು 24 ರಂದು ಬೇಕರಿ, ಬೀಡ ಅಂಗಡಿಗಳು, ಕೇಂದ್ರದ ವಿರುದ್ಧ ಇಡೀ ರಾಜ್ಯದಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸುತ್ತೇವೆ. ನಂತರ 25 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಸುತ್ತೇವೆ. ನಮ್ಮ ತಾತ, ಮುತ್ತಾತನ ಕಾಲದಿಂದ ಅಂಗಡಿ, ಮುಂಗಟ್ಟುಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ಆದರೆ ಯಾವುದೇ ಮುನ್ಸೂಚನೆ ನೀಡದೇ ನೋಟೀಸ್‌ ನೀಡಿರುವುದು ಸರಿಯಲ್ಲ. ನಮ್ಮ ಅಂಗಡಿ ಎರಡರಿಂದ ಹತ್ತು ಲಕ್ಷ ರೂಪಾಯಿ ಬೆಲೆ ಬಾಳುತ್ತದೆ. ಆದರೆ ಕೋಟ್ಯಂತರ ತೆರಿಗೆ ಪಾವತಿಸುವಂತೆ ಸೂಚಿಸಿರುವುದು ಸರಿಯಲ್ಲ ಎಂದರು.
ವಾಣಿಜ್ಯ ತೆರಿಗೆ ಇಲಾಖೆಯಿಂದ ಸಣ್ಣ ಉದ್ಯಮಿದಾರರಿಗೆ ಕೋಟ್ಯಾಂತರ ರೂಪಾಯಿ ತೆರಿಗೆ ಪಾವತಿಸುವಂತೆ ಶೋಕಾಸ್ ನೋಟಿಸ್ ಕೊಟ್ಟಿರುವುದು ಕಾನೂನು ಬಾಹಿರ. ಕೇಂದ್ರ ಸರ್ಕಾರ ಸಣ್ಣ ಉದ್ದಿಮೆದಾರರ ವಿರೋಧಿ ನೀತಿ ಅನುಸರಿಸುತ್ತಿದ್ದು, ನಮಗೆ ನ್ಯಾಯ ಸಿಗುವ ತನಕ ಹೋರಾಟ ನಡೆಸುತ್ತೇವೆ ಎಂದು ರವಿ ಶೆಟ್ಟಿ ಬೈಂದೂರು ಹೇಳಿದರು.
ಚಾಲಕರ ಸಂಘದ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ಮಾತನಾಡಿ, ಜಿ.ಎಸ್.ಟಿ ಮಂಡಳಿ ಅಧ್ಯಕ್ಷರೂ ಆಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡಲೇ ಮಧ್ಯಪ್ರವೇಶಿಸಿ ನೋಟಿಸ್‌ ಹಿಂಪಡೆಯಬೇಕು. ಜಿ.ಎಸ್.ಟಿ ಮಂಡಳಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿ ತಕ್ಷಣವೇ ಸಣ್ಣ ಉದ್ದಿಮದಾರರ ಪರವಾದ ತೀರ್ಮಾನ ತೆಗೆದುಕೊಳ್ಳಬೇಕು. ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ನಿರ್ಮಲಾ ಸೀತಾರಾಮನ್‌ ಉದ್ದಿಮೆದಾರರ ಪರವಾಗಿರಬೇಕು. ಇದು ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ, ಇಡೀ ದೇಶಕ್ಕೆ ಅನ್ವಯಿಸುತ್ತದೆ. ನಮ್ಮ ಹಿತಾಸಕ್ತಿಗೆ ವಿರುದ್ಧವಾಗಿ ಕ್ರಮ ಕೈಗೊಂಡರೆ ಹೋರಾಟವನ್ನು ತೀವ್ರಗೊಳಿಸುತ್ತೇವೆ ಎಂದರು.
ಸಭೆಯಲ್ಲಿ ಕನ್ನಡ ಒಕ್ಕೂಟದ ಅಧ್ಯಕ್ಷ ನಟರಾಜ್ ಬೊಮ್ಮಸಂದ್ರ,, ಕನ್ನಡ ಭೂಷಣ, ತೆರಿಗೆ ಮಾಹಿತಿದಾರ ಸುಬ್ರಮಣ್ಯ, ಗೋವಿಂದ ಬಾಬು ಪೂಜಾರಿ, ಪೂಜಾಶೆಟ್ಟಿ, ಮುರುಳಿ, ಕೃಷ್ಣ, ಪ್ರಕಾಶ್ ಶೆಟ್ಟಿ, ಶಶಿಧರ್ ಗೌಡ, ನವೀನ್ ಕುಮಾರ್ ಹೆಗಡೆ, ರಾಜ್ಯ ಹೋಟೆಲ್ ಸಂಘದ ಅಧ್ಯಕ್ಷ ಜಿ ಕೆ ಶೆಟ್ಟಿ, ಶೋಭಾ ಗೌಡ, ನಾಗರಾಜ್, ಅನೂಪ್, ಪ್ರದೀಪ್, ಸುರೇಂದ್ರ ಶೆಟ್ಟಿ, ಶೈಲೇಶ್ ಪೂಜಾರಿ, ಮಣಿಕಂಠ ಮತ್ತಿತರರು ಉಪಸ್ಥಿತರಿದ್ದರು.

VK NEWS DIGITAL : HEADLINES TODAY

ಪಕ್ಷ ಸಂಘಟಿಸುವ ಪಣ : ಸೀಕಲ್ ರಾಮಚಂದ್ರಗೌಡ

ಶಿಡ್ಲಘಟ್ಟ : ರಾಜಕೀದ ಎಲ್ಲ ಪಕ್ಷಗಳಲ್ಲಿ ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ. ಆದರೆ ಅವುಗಳನ್ನ ಮೀರಿ, ಪಕ್ಷ ಬಲವರ್ಧನೆಗೆ ಸಂಘಟಣೆ ಮಾಡುವುದು ನಮ್ಮ ಕರ್ತವ್ಯ ಎಂದು ಬಿಜೆಪಿ ಘಟಕದ ನೂತನ ಜಿಲ್ಲಾಧ್ಯಕ್ಷರಾಗಿರುವ ಸೀಕಲ್ ರಾಮಚಂದ್ರಗೌಡ ತಿಳಿಸಿದರು.
ನಗರದ ಬಿಜೆಪಿ ಸೇವಾ ಸೌಧ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ, ಈ ಜಿಲ್ಲೆಯಲ್ಲಿ 30-40 ವರ್ಷಗಳ ಹಿಂದೆ ಪಕ್ಷ ಇಲ್ಲದ ಸಂದರ್ಭದಲ್ಲಿಯೇ ತನು-ಮನ-ಧನ ಅರ್ಪಿಸಿ ಕೆಲಸ ಮಾಡಿದ ಹಲವು ಹಿರಿಯರಿದ್ದಾರೆ, ಅವರನ್ನೆಲ್ಲಾ ಮತ್ತೆ ಸಂಪರ್ಕಿಸಿ, ಮಾತುಕತೆ ನಡೆಸಿ, ಸಂಘಟನೆಯನ್ನು ಬಲಗೊಳಿಸುವ ಕೆಲಸವನ್ನು ನಾವು ಆರಂಭಿಸಿದ್ದೇವೆ. ಹಲವರು ಯಾವುದೇ ಕಾರಣಗಳಿಂದಾಗಿ ದೂರ ಇದ್ದರೂ, ಈಗ ಮತ್ತೆ ಒಗ್ಗೂಡಿಸುವ ಸಂದರ್ಭ ಬಂದಿದೆ. ಅವರಲ್ಲಿ ಆಸಕ್ತಿ ಇರುವ ಎಲ್ಲರನ್ನೂ ಒಗ್ಗೂಡಿಸುತ್ತಿದ್ದೇವೆ. ಹಿಂದಿನ ದಿನಗಳಲ್ಲಿ ಸಂಘಟನೆಯಲ್ಲಿ ಸಕ್ರಿಯವಾಗಿದ್ದವರು ಇತ್ತೀಚೆಗೆ ಮೌನವಾಗಿದ್ದರೆ, ಅವರನ್ನು ಸಂಪರ್ಕಿಸಿ ಅವರ ನಂಬಿಕೆ ಮರಳಿ ಪಡೆಯುವ ಯತ್ನ ನಡೆಯುತ್ತಿದೆ. ಮುಖಂಡರು ತಮ್ಮ ಹೋಬಳಿಗಳಲ್ಲಿ ಸಕ್ರಿಯರಾಗಿ ಕಾರ್ಯ ಆರಂಭಿಸಬೇಕೆಂದು ಸೂಚನೆ ನೀಡಿದ್ದೇವೆ. ಜಿಲ್ಲೆಯಲ್ಲಿ ಸಡಿಲವಾಗಿರುವ ಘಟಕಗಳನ್ನು ಬಲಪಡಿಸಬೇಕು ಎಂಬದೇ ಮೊದಲ ಗುರಿ ಎಂದರು.
ಮಾಜಿ ಶಾಸಕ ಎಂ ರಾಜಣ್ಣ ಪಕ್ಷದ ವಿರುದ್ಧ ಮಾತಾಡಿಲ್ಲ
ಇನ್ನು ಮಾಜಿ ಶಾಸಕ ಎಂ ರಾಜಣ್ಣ ಅವರು ಎಂದಿಗೂ ಬಿಜೆಪಿ ಪಕ್ಷಕ್ಕೆ ವಿರುದ್ಧವಾಗಿ ಮಾತನಾಡಿಲ್ಲ. ಅವರ ಬೆಂಬಲಿಗರಲ್ಲಿ ಕೆಲವರಿಗೆ ಅವಕಾಶ ಸಿಗದ ಕಾರಣ ಬೇಸರವಿರಬಹುದು. ಆದರೆ ಇದು ರಾಜಕೀಯದಲ್ಲಿ ಸಹಜ. ಕೆಲವು ನಾಯಕರ ಅಭಿಪ್ರಾಯ ವ್ಯತ್ಯಾಸಗಳು ಇದ್ದರೂ, ಪಕ್ಷ ಕಟ್ಟುವ ಕಾರ್ಯದಲ್ಲಿ ನಾವು ಒಂದಾಗಿ ನಡೆಯುತ್ತಿದ್ದೇವೆ. ನಾನು ಹಾಗೂ ಅವರು ಒಟ್ಟಾಗಿ ಸಂಘಟನೆಯಲ್ಲಿ ಭಾಗಿಯಾಗಿದ್ದೇವೆ. ನಾನು ಯಾರಿಗೂ ವಿರುದ್ಧವಾಗಿ ನಡೆದುಕೊಂಡಿಲ್ಲ. ನನ್ನ ಅಧ್ಯಕ್ಷತೆಯ ಕೆಲಸ ಆರಂಭವಾಗಿದೆಯೆ ಹೊರತು, ನಿರ್ಧಾರಗಳ ಬಗ್ಗೆ ಯಾರನ್ನೂ ಬೇಸರ ಪಡಿಸುವ ಉದ್ದೇಶವಿಲ್ಲ. ಆಸಕ್ತಿ ಇರುವವರಿಗೆ ಅವಕಾಶ ನೀಡಲಾಗುತ್ತದೆ. ಇದು ಸಂಘಟನಾ ಪರ್ವ, ವ್ಯಕ್ತಿಗತ ನಾಯಕರ ಆಧಾರದ ಮೇಲೆ ಪಕ್ಷ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಯಾರಿಗೆ ಶಕ್ತಿ ಇದೆ, ಆಸಕ್ತಿ ಇದೆ, ಜವಾಬ್ದಾರಿ ತೆಗೆದುಕೊಳ್ಳಲು ಸಿದ್ಧರಿದ್ದಾರೆ ಅವರಿಗೆ ಅವಕಾಶ ನೀಡಲಾಗುತ್ತದೆ.

ಶಿಡ್ಲಘಟ್ಟ ಕ್ಷೇತ್ರದಲ್ಲಿ ನಾವು ಬಲಿಷ್ಠ ಘಟಕ ನಿರ್ಮಿಸುವ ಗುರಿ ಇಟ್ಟುಕೊಂಡಿದ್ದೇವೆ. ಜೊತೆಗೆ ಜಿಲ್ಲೆಯ ಇತರ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಲು ಕಾರ್ಯಚರಣೆ ನಡೆಯಲಿದೆ. ಈ ಭಾಗದಲ್ಲಿ ನನ್ನ ಸಹೋದರ ಕಾರ್ಯಕರ್ತರಾಗಿದ್ದರೆ, ಅವರಿಗೆ ಅವಕಾಶ ದೊರೆತಿದ್ದರೆ ಅದು ಪಕ್ಷದ ಒಳಾಂಗಣ ನಿರ್ಧಾರ. ಯಾರನ್ನಾದರೂ ಬದಲಾಯಿಸಬೇಕೆಂಬುದು ನನ್ನ ಉದ್ದೇಶವಲ್ಲ. ನಾನು ಜಿಲ್ಲಾಧ್ಯಕ್ಷನಾಗಿ ಆಯ್ಕೆಯಾದ ಮೇಲೆ ಜಿಲ್ಲೆಯಾದ್ಯಂತ ಏಕತಾ, ಸಂಘಟನೆ, ಶಕ್ತಿ ಪ್ರದರ್ಶನ ಎಂಬ ತತ್ವದೊಂದಿಗೆ ಮುಂದುವರೆಯುತ್ತಿದ್ದೇನೆ. ನಾವು ಎನ್‌ಡಿಎ ಭಾಗವಾಗಿದ್ದೇವೆ. ಬಿಜೆಪಿ, ಜೆಡಿಎಸ್ ನಡುವಿನ ಟಿಕೆಟ್ ಹಂಚಿಕೆ ಬಗ್ಗೆ ತೀರ್ಮಾನ ಹೈಕಮಾಂಡ್ ನಿರ್ದರಿಸುತ್ತದೆ. ನಾವು ಹೈಕಮಾಂಡ್ ನಿಲುವಿಗೆ ಭದ್ರವಾಗಿ ಇರುತ್ತೇವೆ. ಬಿಜೆಪಿ ಪಕ್ಷದ ಶಿಸ್ತಿನಲ್ಲಿ ಸಾಗುತ್ತಿದ್ದೇವೆ. ಎಲ್ಲಾ ಹಿರಿಯರಿಗೂ, ಹಳೆಯ-ಹೊಸ ಕಾರ್ಯಕರ್ತರಿಗೂ ಎಲ್ಲರೂ ಬನ್ನಿ, ಕೈಜೋಡಿಸಿ. ಇದು ನಮ್ಮ ಪಕ್ಷದ ಪುನರ್ ನಿರ್ಮಾಣದ ಘಟ್ಟ. ಎಲ್ಲರ ಸಹಕಾರದಿಂದ ಶಿಡ್ಲಘಟ್ಟ ಕ್ಷೇತ್ರ ಬಿಜೆಪಿಗೆ ಬಲವಾಗುವುದು ಖಚಿತ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ. ರಾಜಣ್ಣ, ಮಾಜಿ ಮಂಡಲ ಅಧ್ಯಕ್ಷ ಸುರೇಂದ್ರಗೌಡ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸೀಕಲ್ ಆನಂದ್ ಗೌಡ, ಕನಕ ಪ್ರಸಾದ್, ನಗರಸಭೆ ಸದಸ್ಯ ನಾರಾಯಣಸ್ವಾಮಿ, ಕೊತ್ತನೂರು ಜಗದೀಶ್,ಬಾಲಕೃಷ್ಣ, ರಾಮಕೃಷ್ಣ, ತಲದುಮ್ಮನಹಳ್ಳಿ ಮಧು ನಗರಾಧ್ಯಕ್ಷ, ಮುಖಂಡರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವರದಿ : ಚಿಕ್ಕತೇಕಹಳ್ಳಿ ಡಿ ಶಿವಕುಮಾರ್ ಶಿಡ್ಲಘಟ್ಟ

ಅಭಾಸಾಪದಿಂದ “ಅಷ್ಟಾವಧಾನವೆಂಬ ವಿಶಿಷ್ಟ ಕಾವ್ಯಾರಾಧನೆ”.

ಭಾರತವು ಪುರಾತನ ಹಾಗು ಪ್ರಾಚೀನ ಕಲೆಗಳ ನೆಲೆಬೀಡು. ಕಲೆ, ಸಾಹಿತ್ಯ, ಸಂಗೀತ ಎಲ್ಲದರಲ್ಲು ವಿಶ್ವಕ್ಕೆ ಗುರುವಿನ ಸ್ಥಾನದಲ್ಲಿದ್ದು , ಇಂದಿಗೂ ಕೂಡ ಶ್ರೀಮಂತ ಕಲೆಗಳ ನೆಲೆಯಾಗಿದೆ. ಈ ಕಲೆಗಳಲ್ಲಿ, ಅಷ್ಟಾವಧಾನ ಕಲೆಯು ಅತ್ಯಂತ ಚಮತ್ಕಾರ ಸೃಷ್ಟಿ ಮಾಡುವ ಕಲೆ.
ಅಷ್ಟಾವಧಾನವೆಂದರೆ ಎಂಟು ಬಗೆಯ ಕಲ್ಪಿತ ಪ್ರಶ್ನೆಗಳಿಗೆ ಏಕಕಾಲದಲ್ಲಿ ಮನಸ್ಸು ಹರಿಸಿ ಉತ್ತರಿಸುವ ಕಾವ್ಯಮಯ ಪ್ರತಿಭೆಯ ಪ್ರದರ್ಶನ. ಇದು ಪ್ರತಿಭೆಯ ಪರಾಕಾಷ್ಠೆಯಲ್ಲದೆ ಕವಿತ್ವ, ಸ್ಮರಣೆ, ಚಾತುರ್ಯ ಮತ್ತು ಶ್ರದ್ಧೆಯ ಸಮನ್ವಯದ ಪ್ರದರ್ಶನವಾಗಿದೆ. ಪ್ರಾಚೀನ ಕಾಲದಿಂದಲು ನಮ್ಮ ಪೂರ್ವಜರು ನಡೆಸಿಕೊಂಡು ಬಂದಂತಹ ವೈಶಿಷ್ಟ್ಯಮಯವಾದ ಕಲೆಯಾಗಿರುವ ಇದು, ಹೆಚ್ಚು ಬೆಳಕಿಗೆ ಬಾರದೆ ಕ್ಷೀಣಿಸುತ್ತಿತ್ತು. ಆದರೆ , ಶತಾವಧಾನಿ ಡಾ|| ರಾ. ಗಣೇಶ್ ಅವರ ಮುಖಾಂತರ ವಿಶ್ವದೆಲ್ಲೆಡೆ ಪ್ರಚಾರಕ್ಕೆ ಅತ್ಯಂತ ದೊಡ್ಡ ಮಟ್ಟದಲ್ಲಿ ಬಂದು ಇಂದಿಗೆ ಜೀವಂತ ಕಲೆಯಾಗಿ ಪಸರಿಸುತ್ತಿದೆ. ಈ ಕಲೆಯ ಪೋಷಣೆ ಮತ್ತು ಬೆಳವಣಿಗೆಯನ್ನು ಮೂಲ ಉದ್ದೇಶವಾಗಿಟ್ಟುಕೊಂಡು , ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಬೆಂಗಳೂರು ಉತ್ತರ ಜಿಲ್ಲಾ ಮತ್ತು ಗ್ರಾಮಾಂತರ ಜಿಲ್ಲಾ ವತಿಯಿಂದ ದಿನಾಂಕ ಇತ್ತೀಚಿಗೆ ಅಷ್ಟಾವಧಾನ ಕಾರ್ಯಕ್ರಮವನ್ನು ರಾಜಾಜಿನಗರದ ಶ್ರೀ ಆರೊಬಿಂದೋ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.
ಅಷ್ಟಾವಧಾನಿಯಾಗಿ ಡಾ || ರಾಮಕೃಷ್ಣ ಪೆಜತ್ತಾಯರು ; ಪ್ರಚ್ಛಕರಾಗಿ ನಿಷೇಧಾಕ್ಷರಿಯಲ್ಲಿ ಭ.ರಾ. ವಿಜಯಕುಮಾರ್, ಸಮಸ್ಯಾ ಪೂರ್ಣದಲ್ಲಿ ಸಚಿನ್ ಮುಂಗಿಲ, ದತ್ತಪದಿಯಲ್ಲಿ ಜ್ಯೋತಿ ಪ್ರಸಾದ್, ಗುಣಿತಾಕ್ಷರಿಯಲ್ಲಿ ಮೃತ್ಯುಂಜಯ ತೇಜಸ್ವಿ, ಸಂಖ್ಯಾ ಬಂಧದಲ್ಲಿ ಮಹೇಶ್ ರಾವ್, ಅಪ್ರಸ್ತುತ ಪ್ರಸಂಗದಲ್ಲಿ ತಿಮ್ಮಣ್ಣ ಭಟ್, ಆಶುಕವಿತ್ವದಲ್ಲಿ ಅವಿನಾಶ್ ಪೆರ್ಮುಖ ಮತ್ತು ಕಾವ್ಯವಾಚನದಲ್ಲಿ ಸುಮಾ ಟಿ ಜೆ ಇದ್ದರು . ಈ ಬಾರಿ ಇನ್ನೊಬ್ಬರುಅವಧಾನಿಗಳು ಶ್ರೀ ಸೂರ್ಯ ಹೆಬ್ಬಾರರೂ ಒಂಭತ್ತನೆಯ ಪೃಚ್ಛಕರಾಗಿ ಅವಧಾನಿಗಳನ್ನು ಸೇರಿ ಅತ್ಯಂತ ಸುಂದರವಾಗಿ ಅಂತ್ಯಾಕ್ಷರಿ ಯನ್ನು ನಡೆಸಿಕೊಟ್ಟಿದ್ದು ಕಾರ್ಯಕ್ರಮದ ಹಿರಿಮೆ ಹೆಚ್ಚಿ ಅಂದು ನವಾವಧಾನವಾದಂತಾಯ್ತು .
ಕಗ್ಗದ ಭಟ್ಟರೆಂದೇ ಖ್ಯಾತಿಪಡೆದಿರುವ ಶ್ರೀ ಲಕ್ಷ್ಮೀನಾರಾಯಣಭಟ್ಟರು,ಅಂತರಾಷ್ಟ್ರೀಯ ಪ್ರಶಸ್ಯಿ ವಿಜೇತ ಕೂರ್ಮಾವತಾರ ಚಿತ್ರದಲ್ಲಿ ಅಭಿನಯಕ್ಕಾಗಿ ರಾಷ್ಟ್ರೀಯ ಪ್ರಶಸ್ತಿವಿಜೇತರೂ,ಹೆಸರಾಂತ ಸಂಸ್ಕೃತ ವಿದ್ವಾಂಸರಾದ ಡಾ. ಶಿಕಾರಿಪುರ ಕೃಷ್ಣಮೂರ್ತಿಗಳು ಮುಂತಾದ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು . ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಬೆಂಗಳೂರು ಮಹಾನಗರದ ಅಧ್ಯಕ್ಷರಾಗಿರುವ ಎಂ. ಎಸ್. ನರಸಿಂಹಮೂರ್ತಿಯವರ ಉಪಸ್ಥಿತಿಯಲ್ಲಿ , ಮೊದಲಿಗೆ ಶ್ರೀಮತಿ ಇಂದಿರಾ ಅವರಿಂದ ಸ್ವಾಗತ ಗೀತೆಯ ಮುಖಾಂತರ ಶುರುವಾದ ಕಾರ್ಯಕ್ರಮ, ಶ್ರೀ ಸಂಜೀವ ನಿರೂಪಣೆಯಲ್ಲಿ ಹಾಗೂ ಶ್ರೀಮತಿ ಪ್ರೀತಿ ನವೀನ್ ಸ್ವಾಗತ ಪರಿಚಯ ಭಾಷಣದಿಂದ ಮುಂದುವರೆದು ಅವಧಾನ ಪ್ರಾರಂಭವಾಯಿತು.
ಪ್ರಚ್ಛಕರು ಕೇಳಿದ ಪ್ರಶ್ನೆಗಳಿಗೆ ತಮ್ಮದೇ ಶೈಲಿಯಲ್ಲಿ ಛಂದೋಬದ್ಧವಾಗಿ ಉತ್ತರಿಸುತ್ತ, ಮಹಾನ್ ಕವಿಗಳ ಕಾವ್ಯದಲ್ಲಿ ಅಂತ್ಯಾಕ್ಷರಿಯಾಡುತ , ಸಂಖ್ಯಾ ಬಂಧವನ್ನು ಛೇದಿಸುತ್ತ , ನಿಷೇಧಾಕ್ಷರಿಯ ನಿಷೇಧಕ್ಕೆ ಅನುಗುಣವಾಗಿ ಪದಪ್ರಯೋಗ ಮಾಡುತ್ತ ಪೆಜತ್ತಾಯರು ಉತ್ತರಿಸುತ್ತಿದ್ದರೆ, ಇದು ಬಹಳ ವಿಶೇಷವಾಗಿದ್ದು ಜನರಂತೂ ಅಂದಿನ ಅವಧಾನ ರಸಾಸ್ವಾದದಿಂದ ಮಂತ್ರಮುಗ್ಧರಾಗಿದ್ದು, ಆಶ್ಚರ್ಯಚಕಿತರಾದಂತೆ ಆಲಿಸುತ ಕುಳಿತ ಸಾಹಿತ್ಯಾಸಕ್ತ ಪ್ರೇಕ್ಷಕರಿಗೆ ನಾಲ್ಕು ಗಂಟೆಗಳು ಹೇಗೆ ಕಳೆದವೆಂದು ತಿಳಿಯಲೇ ಇಲ್ಲ. ಅವಧಾನಿಗಳಾದ ಪೆಜತ್ತಾಯರು ಅವಧಾನ ಮಾಡುತ್ತಲೇ ಜೊತೆ ಜೊತೆಗೆ ನಮ್ಮ ಭಾರತೀಯ ಸಂಸ್ಕೃತಿಯ ಮಹತ್ವ,ಭಾಷಾಶಾಸ್ತ್ರದ ವಿಶೇಷತೆಗಳನ್ನೂ ತಿಳಿಸಿದರಲ್ಲದೇ ದತ್ತಪದದಲ್ಲಿ ಪೃಚ್ಛಕರು ಮಾತೃವಾತ್ಸಲ್ಯ ಎಂಬ ವಿಷಯ ಕೊಟ್ಟಿರಲು, ನಮ್ಮ ಕೌಟುಂಬಿಕ ವ್ಯವಸ್ಥೆಯಲ್ಲಿ ತಾಯಿಯ ಮಹತ್ವ,ಮಾತೃವಾತ್ಸಲ್ಯದ ವಿಶೇಷತೆ ಇವುಗಳ ಬಗ್ಗೆಯೂ ತಿಳಿಸಿಕೊಟ್ಟರು.
ಕೊನೆಯಲ್ಲಿ ಮಾತನಾಡಿದ ಎಂ.ಸ್. ನರಸಿಂಹಮೂರ್ತಿಗಳು, ಈ ತರಹದ ವಾಸ್ತವಿಕ ವಿಷಯಾಧಾರಿತ ಅಷ್ಟಾವಧಾನ ಎಂದು ನಡೆದಿಲ್ಲ ಹೆಚ್ಚಾಗಿ, ಇದನ್ನು ವೀಕ್ಷಿಸಿ ಆಲಿಸಿದ್ದು ನಮ್ಮೆಲ್ಲರ ಭಾಗ್ಯ ಎಂದು ಹೇಳಿದರು. ವಂದನಾರ್ಪಣೆಯನ್ನು ಮಹೇಶ್ ರಾವ್ ಸಲ್ಲಿಸಿದ ನಂತರ ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಆಂಧ್ರ: ಭಾರೀ ಇಳಿಕೆ ಕಂಡ ಮದ್ಯ ದರ

ಅಮರಾವತಿ: ಚಂದ್ರಬಾಬು ನಾಯ್ಡು ನೇತೃತ್ವದ ಆಂಧ್ರಪ್ರದೇಶ ಸರ್ಕಾರವು ಇದೇ ಮೊದಲ ಬಾರಿ ಮದ್ಯದ ದರ ಇಳಿಸಿದ್ದು, ಪ್ರತಿ ಬಾಟಲ್‌ಗೆ 10 ರೂ.ಯಿಂದ 100 ರೂ.ವರೆಗೆ ಕಡಿತಗೊಳಿಸಿದೆ. ಈ ಮೂಲಕ ಆಂಧ್ರದಲ್ಲಿ ಮದ್ಯ ಗ್ರಾಹಕರಿಗೆ ಪ್ರತಿ ತಿಂಗಳು 116 ಕೋಟಿ ರೂ. ಉಳಿತಾಯ ಆಗಲಿದೆ.
ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಿಎಂ ಚಂದ್ರಬಾಬು ನಾಯ್ಡು, ಮದ್ಯ ನೀತಿಯಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಿಕೊಂಡು, ಕೈಗೆಟುಕುವ ದರದಲ್ಲಿ ಅದನ್ನು ಪೂರೈಕೆ ಮಾಡಿ. ಜೊತೆಗೆ ನಕಲಿ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಸೂಚಿಸಿದ್ದಾರೆ. ಈ ಹೊಸ ನೀತಿಯಿಂದ ರಾಜ್ಯದ ಆದಾಯ ಹೆಚ್ಚುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.
ಅAತೆAiೆÃ, ರಾಷ್ಟಿçÃಯ ಮತ್ತು ಅಂತಾರಾಷ್ಟಿçÃಯ ಗುಣಮಟ್ಟದ ಬ್ರಾ÷್ಯಂಡ್‌ಗಳನ್ನು ಮಾತ್ರ ರಾಜ್ಯಕ್ಕೆ ಅನುಮತಿಸುವಂತೆ ಮತ್ತು ಸುಂಕ ಪಾವತಿಸದ, ಅಕ್ರಮ ಅಥವಾ ನಕಲಿ ಮದ್ಯದ ಮಾರಾಟವನ್ನು ನಿಷೇಧಿಸುವಂತೆ ಹಾಗೂ ಸಾರ್ವಜನಿಕ ಆರೋಗ್ಯವನ್ನು ಕಾಪಾಡುವಂತೆ ತಿಳಿಸಿದ್ದಾರೆ.
ಇತ್ತ, ಕರ್ನಾಟಕ ರಾಜ್ಯದಲ್ಲಿ ಅಬಕಾರಿ ತೆರಿಗೆ ಸಂಗ್ರಹಕ್ಕೆ ಮದ್ಯದ ದರ ಏರಿಕೆ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಎಂದು ಮದ್ಯಪ್ರಿಯರ ಅನಿಸಿಕೆ.
ಆಂಧ್ರಪ್ರದೇಶದಲ್ಲಿ 30 ಬ್ರಾಂಡ್‌ಗಳ ಬೆಲೆಯು ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡಿನ ಬೆಲೆಗಿಂತ ಕಡಿಮೆಯೇ ಆಗಿದೆ.. ಪ್ರವಾಸಿ ತಾಣಗಳಲ್ಲಿ ದುರುಪಯೋಗವನ್ನು ತಡೆಗಟ್ಟಲು ಪರವಾನಗಿ ಇಲ್ಲದ ಕೂಡಲೇ ಅಂಗಡಿಗಳನ್ನು ನಿಷೇಧಿಸುವಂತೆ, ಡಿಜಿಟಲ್ ಪಾವತಿ, ಎಐ ಆಧಾರಿತ ಟ್ರಾ÷್ಯಕಿಂಗ್ ಜಾರಿಗೊಳಿಸಲು ನಿರ್ದೇಶನ ನೀಡಿದ್ದಾರೆ.

 

VK NEWS DIGITAL :

ರೇಷ್ಮೆ : ಹೆಚ್ಚು ಲಾಭದಾಯಕ ಕೃಷಿ- ಸಚಿವ ಡಾ: ಜಿ. ಪರಮೇಶ್ವರ ಅಭಿಮತ

ತುಮಕೂರು: ರೇಷ್ಮೆ ಕೃಷಿಯು ಹೆಚ್ಚು ಲಾಭ ತರುವ ಕೃಷಿಯಾಗಿದ್ದು, ಇತ್ತೀಚಿನ ದಿನಗಳಲ್ಲಿ ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ರೇಷ್ಮೆ ಇಲಾಖೆ ಸಹಯೋಗದಲ್ಲಿ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ರೇಷ್ಮೆ ಬೆಳೆಗಾರರ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ ರೇಷ್ಮೆ ಉದ್ಯಮ 200 ವರ್ಷಗಳಿಗೂ ಹೆಚ್ಚು ಇತಿಹಾಸವನ್ನು ಹೊಂದಿದೆ. ಹಿಪ್ಪುನೇರಳೆಯನ್ನು ಅವಲಂಬಿಸಿ ರೇಷ್ಮೆ ಕೃಷಿ ಮಾಡುವ ಪದ್ಧತಿ ದೇಶದ ಯಾವುದೇ ಭಾಗದಲ್ಲಿ ಕಾಣ ಸಿಗುವುದಿಲ್ಲ. ಕರ್ನಾಟಕದಲ್ಲಿ ಉತ್ಪಾದಿಸುವ ಮೈಸೂರು ರೇಷ್ಮೆ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ. ಹೆಣ್ಣಿನ ಅಂದ ಹೆಚ್ಚಿಸುವ ಮೈಸೂರು ರೇಷ್ಮೆಯಂತಹ ಗುಣಮಟ್ಟಕ್ಕೆ ಯಾವುದೇ ರೇಷ್ಮೆ ಸರಿಸಾಟಿಯಿಲ್ಲ ಎಂದು ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ 35 ಲಕ್ಷಕ್ಕೂ ಹೆಚ್ಚಿನ ಕೃಷಿಕರು ರೇಷ್ಮೆ ಉದ್ಯಮವನ್ನು ಅವಲಂಬಿಸಿದ್ದಾರೆ. ಪ್ರಾರಂಭದಲ್ಲಿ ರಾಜ್ಯದ ಏಳೆಂಟು ಜಿಲ್ಲೆಗಳಲ್ಲಿದ್ದ ರೇಷ್ಮೆ ಉದ್ಯಮ ಪ್ರಸ್ತುತ ರಾಜ್ಯದಾದ್ಯಂತ ಹಬ್ಬುತ್ತಿದೆ. ರಾಮನಗರ ಜಿಲ್ಲೆಯು ಏಷ್ಯಾದಲ್ಲಿಯೇ ಬೃಹತ್ ರೇಷ್ಮೆ ಮಾರುಕಟ್ಟೆಯಾಗಿ ಗುರುತಿಸಿಕೊಂಡಿದ್ದು, ಪ್ರತೀ ದಿನ 2ಕೋಟಿ ರೂ.ಗಳ ವಹಿವಾಟು ನಡೆಯುತ್ತದೆ ಎಂದು ತಿಳಿಸಿದರಲ್ಲದೆ, ವರ್ಷಕ್ಕೆ 6 ಬೆಳೆ ಬೆಳೆಯಬಹುದಾದ ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಂಡರೆ ರೈತರು ಸಂಕಷ್ಟದಿಂದ ಹೊರಬರಬಹುದು ಎಂದು ತಿಳಿಸಿದರು.

ರಾಜ್ಯ ಸರ್ಕಾರದಲ್ಲಿ ತಾವು ನಿರ್ವಹಿಸಿದ ರೇಷ್ಮೆ ಖಾತೆಗೆ ಮೊದಲ ಖಾತೆ ಎಂದು ಸ್ಮರಿಸಿದ ಸಚಿವರು, ತಾವು ರೇಷ್ಮೆ ಖಾತೆ ಸಚಿವನಾಗಿದ್ದಾಗ ರೇಷ್ಮೆ ಉದ್ಯಮವನ್ನು ವಿಸ್ತರಿಸಲು ವಿಶ್ವ ಬ್ಯಾಂಕಿನಿಂದ ಆರ್ಥಿಕ ನೆರವು ನೀಡಲಾಗುತ್ತಿತ್ತು. ಇದರಿಂದ ಜಿಲ್ಲೆಯ ಕುಣಿಗಲ್ ತಾಲ್ಲೂಕಿನಲ್ಲಿ ರೇಷ್ಮೆ ಕೃಷಿಯನ್ನು ಅಳವಡಿಸಿಕೊಂಡವರ ಸಂಖ್ಯೆ ಹೆಚ್ಚಾಯಿತು ಎಂದು ತಿಳಿಸಿದರು.

ರಾಗಿ, ಜೋಳ ಮತ್ತಿತರ ಆಹಾರ ಧಾನ್ಯ ಬೆಳೆಯುವ ರೈತರು ಮಾರಾಟ ಮಾಡಲು 6 ತಿಂಗಳುಗಳ ಕಾಲ ಕಾಯಬೇಕು. ಆದರೆ ರೇಷ್ಮೆ ಗೂಡನ್ನು ಉತ್ಪಾದಿಸುವ ರೈತರು ಮಾರಾಟ ಮಾಡಿದ ಕೂಡಲೇ ಆನ್‍ಲೈನ್ ಮೂಲಕ ಅವರ ಖಾತೆಗೆ ಹಣ ಜಮೆಯಾಗಲಿದೆ. ರೇಷ್ಮೆ ಕೃಷಿಗೆ ಉತ್ತೇಜನ ನೀಡಲು ಸರ್ಕಾರ ವಿನೂತನ ಕಾರ್ಯಕ್ರಮಗಳನ್ನು ರೂಪಿಸಲು ಉದ್ದೇಶಿಸಿದೆ. ಜಿಲ್ಲೆಯಲ್ಲಿ ಈಗಾಗಲೇ ಸುಮಾರು 2000 ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಬೆಳೆಯಲಾಗುತ್ತಿದ್ದು, ಭವಿಷ್ಯದಲ್ಲಿ ಈ ಪ್ರದೇಶವನ್ನು 10,000 ಹೆಕ್ಟೇರಿಗೆ ವಿಸ್ತರಿಸುವತ್ತ ರೈತರು ಗಮನಹರಿಸಬೇಕು ಎಂದರು.
ನವದೆಹಲಿಯ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಹಾಗೂ ಶಿರಾ ಶಾಸಕ ಟಿ.ಬಿ. ಜಯಚಂದ್ರ ಮಾತನಾಡುತ್ತಾ, ಜಿಲ್ಲೆಯಲ್ಲಿ ರೇಷ್ಮೆ ಬೆಳೆಯನ್ನು ಉನ್ನತ ಮಟ್ಟಕೇರಿಸಲು ಶ್ರಮಿಸಬೇಕು. ರೇಷ್ಮೆ ಉದ್ಯಮವು ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಪಾರ ಬೇಡಿಕೆ ಹೊಂದಿರುವ ಉದ್ಯಮವಾಗಿದೆ. ರೇಷ್ಮೆ ಕೃಷಿಯು ಭವಿಷ್ಯದ ಪ್ರಮುಖ ಬೆಳೆಯಾಗಿದ್ದು, ರೈತರು ಇದನ್ನು ವೈಜ್ಞಾನಿಕವಾಗಿ ಬೆಳೆಸಲು ಮುಂದಾಗಬೇಕು. ಹೆಚ್ಚಿನ ರೈತರು ಈ ಕ್ಷೇತ್ರವನ್ನು ಆಶ್ರಯಿಸುವ ಮೂಲಕ ಭವಿಷ್ಯದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಪಡೆಯಬಹುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ತುಮಕೂರು ತಾಲ್ಲೂಕು ವೀರನಾಯಕನಹಳ್ಳಿಯ ಸೋಮಶೇಖರ್, ಶಿರಾ ತಾಲ್ಲೂಕು ಹೊನ್ನಗೊಂಡನಹಳ್ಳಿಯ ನರಸಿಂಹಯ್ಯ, ಕೊರಟಗೆರೆ ತಾಲ್ಲೂಕು ತಿಮ್ಮನಹಳ್ಳಿಯ ಪಾರ್ವತಮ್ಮ ಅವರಿಗೆ ರೇಷ್ಮೆ ಕೃಷಿ ಸವಲತ್ತುಗಳನ್ನು ವಿತರಿಸಲಾಯಿತು.
ತಿಪಟೂರು ಶಾಸಕ ಷಡಾಕ್ಷರಿ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ Police ವರಿಷ್ಟ ಧಿಕಾರಿ ಕೆ.ವಿ. ಅಶೋಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ರೇಷ್ಮೆ ಅಪರ ನಿರ್ದೇಶಕ ವೈ.ಟಿ. ತಿಮ್ಮಯ್ಯ, ರೇಷ್ಮೆ ಜಂಟಿ ನಿರ್ದೇಶಕರಾದ ಕೆ.ಎನ್. ರವಿ ಹಾಗೂ ರಾಚಪ್ಪ, ರೇಷ್ಮೆ ಉಪನಿರ್ದೇಶಕ ಟಿ. ಲಕ್ಷ್ಮಿನರಸಯ್ಯ ಸೇರಿದಂತೆ ರೇಷ್ಮೆ ಬೆಳೆಗಾರರು ಉಪಸ್ಥಿತರಿದ್ದರು.

ನಾಟ್ಯ ವೇದ ನೃತ್ಯ ಶಾಲೆಯ ವಿದ್ಯಾರ್ಥಿಗಳಿಂದ “ಭರತನಾಟ್ಯ ಪ್ರದರ್ಶನ” ಕಾರ್ಯಕ್ರಮ

ಜಯನಗರದ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥರ ಆದೇಶದಂತೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್ ಕೆ ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಜುಲೈ 17, ಗುರುವಾರ ಸಂಜೆ 5-15ಕ್ಕೆ ವಿದುಷಿ ಶ್ರೀಮತಿ ಸಮನಾ ಆಚಾರ್ ಅವರ ನಿರ್ದೇಶನದಲ್ಲಿ ನಾಟ್ಯ ವೇದ ನೃತ್ಯ ಶಾಲೆಯ ವಿದ್ಯಾರ್ಥಿಗಳಿಂದ “ಭರತನಾಟ್ಯ ಪ್ರದರ್ಶನ” ಕಾರ್ಯಕ್ರಮ ಏರ್ಪಡಿಸಿದೆ ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದ್ದಾರೆ.
ಸ್ಥಳ : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 11ನೇ ಮುಖ್ಯರಸ್ತೆ, 45ನೇ ಅಡ್ಡರಸ್ತೆ, ಜಯನಗರ 5ನೇ ಬಡಾವಣೆ, ಬೆಂಗಳೂರು41
VK NEWS DIGITAL :

ಮೃಚ್ಛಕಟಿಕ ನಾಟಕ ಬನ್ನಂಜೆ ಗೋವಿಂದಾಚಾರ್ಯರ ಅನುವಾದದಲ್ಲಿ ಪ್ರಯೋಗಿಸುತ್ತಿರುವುದು ಸಂತಸ ತಂದಿದೆ

ಕರ್ನಾಟಕ ರಾಜ್ಯದಲ್ಲಿ ತುಮಕೂರು ಕಲೆಯ ತವರೂರಿನಂತಿದೆ. ಹಾಗೆಯೇ ತುಮಕೂರು ಜಿಲ್ಲೆಯಲ್ಲಿ ಮೆಳೇಹಳ್ಳಿ ಕಲೆಯ ತವರೂರಾಗಿದೆ. ಇಲ್ಲಿ ನಿರಂತರವಾಗಿ ನಾಡಿನ ಎಲ್ಲ ಮೂಲೆಗಳಿಂದ ಕಲಾತಂಡಗಳು ಬಂದು ಪ್ರಯೋಗ ನೀಡಿ ಹೋಗುತ್ತಿರುವುದು ಬಹಳ ವಿಶೇಷ. ಇಂದು ದೃಶ್ಯರಂಗ ತಂಡ, ಬೆಂಗಳೂರು ಇವರು ಸಂಸ್ಕøತ ಮೂಲದ ಶೂದ್ರಕ ಕವಿಯ ಮೃಚ್ಛಕಟಿಕ ನಾಟಕವನ್ನು ಬನ್ನಂಜೆ ಗೋವಿಂದಾಚಾರ್ಯರ ಅನುವಾದದಲ್ಲಿ ಪ್ರಯೋಗಿಸುತ್ತಿರುವುದು ಸಂತಸದ ವಿಷಯ ಎಂದು ನಿವೃತ್ತ ಶಿಕ್ಷಕ ಪ್ರಸಾದ್ ಅಭಿಪ್ರಾಯಪಟ್ಟರು.

ದಿನಾಂಕ 11-07-2025ನೇ ಶುಕ್ರವಾರ ಸಂಜೆ 6.30ಕ್ಕೆ ಮೆಳೇಹಳ್ಳಿಯ ವಿ.ರಾಮಮೂರ್ತಿ ರಂಗಸ್ಥಲದಲ್ಲಿ ಕೇಂದ್ರ ಸಂಸ್ಕøತಿ ಸಚಿವಾಲಯದ ನೆರವಿನೊಂದಿಗೆ ಪ್ರಯೋಗ ಆಯೋಜಿಸಲಾಗಿತ್ತು. ಪ್ರೇಕ್ಷಕ ಗಣ್ಯರಾಗಿ, ನಿರ್ದೇಶಕರಾಗಿ ದಾಕ್ಷಾಯಿಣಿ ಭಟ್, ನಿವೃತ್ತ ಶಿಕ್ಷಕ ನಟರಾಜು, ದೇಸಿ ರಂಗನಿರ್ದೇಶಕ ಮೆಳೇಹಳ್ಳಿ ದೇವರಾಜ್ ಹಾಗೂ ಮುದ್ದುರಂಗಪ್ಪ ಉಪಸ್ಥಿತರಿದ್ದರು.

ಬೌದ್ಧ ಧರ್ಮದ ಪ್ರಭಾವವಿರುವ ಕವಿ, ಹೆಣ್ಣು, ಹೊನ್ನು, ಅಧಿಕಾರಕ್ಕಿಂತ ಪ್ರೀತಿ, ವಿಶ್ವಾಸ, ನಂಬಿಕೆಗಳು ಧೀರ್ಘವಾಗಿ ಉಳಿಸುತ್ತಿವೆ ಮತ್ತು ಮನುಷ್ಯನನ್ನು ಉಳಿಸುತ್ತವೆ. ಆಸೆ ಒಂದು ಆಟದ ಬಂಡಿಯಂತೆ. ಅದನ್ನು ನಿಯಂತ್ರಿಸುವ ಹೊಣೆ ಚಾಲಕನದೇ. ಧರ್ಮದ ಪರವಾದವನಿಗೆ ಜಯ ದೊರಕೇ ದೊರಕುತ್ತದೆ ಎಂಬುದನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ನಿರ್ದೇಶಕರು ಹೆಚ್ಚು ರಂಗಸಜ್ಜಿಕೆ, ಪರಿಕರಗಳನ್ನು ಬಳಸದೇ ನಟರನ್ನೇ ದುಡಿಸಿಕೊಂಡು ಕಟ್ಟಿಕೊಟ್ಟಿದ್ದಾರೆ. ಪ್ರಯೋಗ ಮರುಪ್ರಯೋಗಗೊಳ್ಳಲೆಂದು ಆಶಿಸೋಣ.

ಡಮರುಗ ಉಮೇಶ್