Home Blog Page 49

ಆಟೋ ದರ ಕನಿಷ್ಠ ದರ 36 ರೂ.ಗೆ ಏರಿಕೆ

ಬೆಂಗಳೂರು: ಬೃಹತ್ ಬೆಂಗಳೂರಿಗರಿಗೆ ಸಧ್ಯ ಆಟೋ ದರ ಏರಿಸಿರುವ ಶಾಕ್ ನೀಡಿದಂತಾಗಿದೆ. ಆಗಸ್ಟ್ 1 ರಿಂದಲೇ ಹೊಸ ದರ ಅನ್ವಯವಾಗಲಿದೆ ಎನ್ನಲಾಗಿದ್ದು, ಸದ್ಯ ಕನಿಷ್ಠ ದರ ಈಗ 30 ರೂಪಾಯಿ ಇದೆ. ಪ್ರತಿ ಕಿಲೋಮೀಟರ್‍ಗೆ 15 ರೂಪಾಯಿ ದರ ಇರುವುದು. ಮಾರ್ಚ್ ತಿಂಗಳಿನಲ್ಲಿ ಹಲವು ಆಟೋ ಸಂಘಟನೆಗಳವರು ವರದಿ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ವರದಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು ದರ ಏರಿಕೆಗೆ ಹಸಿರು ನಿಶಾನೆ ನೀಡಿದ್ದಾರೆ.
ಹೊಸ ದರ ಈಗ 36 ರೂಪಾಯಿಗೆ ಏರಿಕೆಮಾಡಲು ನಿರ್ಧರಿಸಿದೆ. ಮೊದಲ 2 ಕಿಮೀಗೆ 36 ರೂಪಾಯಿ ಇರಲಿದ್ದು, ನಂತರದ ಪ್ರತಿ ಕಿ.ಮೀಟರ್‍ಗೆ 18 ರೂಪಾಯಿ ಎಂದು ನಿಗದಿ ಮಾಡಲಾಗಿದೆ.
ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆಯವರೆಗೆ ಅರ್ಧ ಪಟ್ಟು ಹೆಚ್ಚು ತೆಗೆದುಕೊಳ್ಳಬಹುದಾಗಿದೆ. (ಸಾಮಾನ್ಯ ದರಕ್ಕಿಂತ ಅರ್ಧ ಪಟ್ಟು ಹೆಚ್ಚು) ಮಾಡಬಹುದಾಗಿದೆ. ಕಾಯುವಿಕೆ ದರ ಹೆಸರಿನಲ್ಲಿ ಐದು ನಿಮಿಷ ಉಚಿತ ಇರಲಿದೆ. ನಂತರದ 5 ನಿಮಿಷಗಳ ನಂತರ ಅಂದರೆ, ಪ್ರತಿ 15 ನಿಮಿಷ ಅಥವಾ ಅರ್ಧ ಭಾಗಕ್ಕೆ 10 ರೂ., ಲಗೇಜ್ ದರ ಮೊದಲ 20 ಕೆಜಿ ಯವರೆಗೂ ಉಚಿತ ಎಂದು ನಿರ್ಧರಿಸಿಲಿದೆ.
20 ಕೆಜಿ ಮೇಲ್ಪಟ್ಟ ತೂಕದ ಲಗೇಜ್‍ಗೆ 10 ರೂ. ಹೆಚ್ಚುವರಿ ದರ ನಿಗದಿ ಮಾಡಲಾಗಿದೆ. ಗರಿಷ್ಠ ಪ್ರಯಾಣಿಕರ ಲಗೇಜುಗಳು 50 ಕೆಜಿಗೆ 10 ರೂಪಾಯಿ ನಿಗದಿಪಡಿಸಲಾಗಿದೆ.
ಆಟೋ ದರ ಏರಿಕೆ ಸಂಬಂಧ ಮೊದಲು ಮಾರ್ಚ್ ತಿಂಗಳಲ್ಲಿ ಸಭೆ ನಡೆದಿತ್ತು. ಸಭೆಯಲ್ಲಿ ಹಲವು ಆಟೋ ಸಂಘಟನೆಗಳು ಭಾಗಿಯಾಗಿದ್ದವು. ಆಟೋ ದರ ಪರಿಷ್ಕರಣೆ ಸಮಿತಿಯು ಆಟೋ ಚಾಲಕರ ಅಹವಾಲು ಕೇಳಿತ್ತು. ಅಲ್ಲದೆ ಸಭೆಯ ನಿರ್ಣಯವನ್ನು ಜಿಲ್ಲಾಧಿಕಾರಿಗಳಿಗೆ ಒಪ್ಪಿಸಿತ್ತು.

 

ಇಂಟರ್ನ್ಯಾಷನಲ್ ವೈಶ್ ಫೆಡರೇಷನ್ ವತಿಯಿಂದ ರಕ್ತದಾನ ಶಿಬಿರ

ಇಂಟರ್ನ್ಯಾಷನಲ್ ವೈಶ್ ಫೆಡರೇಷನ್ ತನ್ನ ವಾರ್ಷಿಕೋತ್ಸವದ ನಿಮಿತ್ತ ಇಂದು ಪದ್ಮನಾಭನಗರದ ಮಹಾರಾಜಾ ಅಗ್ರಸೇನಾ ಆಸ್ಪತ್ರೆಯಲ್ಲಿ ಟೂರ್ ಇಂಫೀನಿಟಿ ಪ್ರವಾಸ ಸಂಸ್ಥ ಮತ್ತು ಬಿ ಎಸ್ ಕೆ ಜೀವಾಶ್ರಯ ರಕ್ತ ಕೇಂದ್ರದ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನ ಶನಿವಾರ ಆಯೋಜಿಸಿತ್ತು, , ಒಟ್ಟು ನೂರು ಯೂನಿಟ್ ರಕ್ತವನ್ನು ದಾನಿಗಳಿಂದ ಪಡೆಯಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಟೂರ್ ಇಂಫೀನಿಟಿ ಪ್ರವಾಸ ಸಂಸ್ಥಯ ಮುಖ್ಯಸ್ತ ಸಾಯಿರಾಜ್ ” ಪ್ರವಾಸಿ ಸಂಸ್ಥೆಯ ಮುಖ್ಯಸ್ಥ ಸಾಯಿ ಪ್ರಕಾಶ್ ಇವರು ರಕ್ತದಾನ ಶ್ರೇಷ್ಠ ದಾನ ರಕ್ತ ದಾನ ಮಾಡುವ ಮುಖಾಂತರ ರೋಗಿಗಳ ಜೇವ ಉಳಿಸಲು ಕಾರಣರಾಗಿ ತಮ್ಮ ಆರೋಗ್ಯ ವನ್ನು ಜಾಸ್ಪಡಿಕೊಳ್ಳಿ” ಎಂದು ಹೇಳಿದರು,
ಇಂಟರ್ನ್ಯಾಷನಲ್ ವೈಶ್ ಫೆಡರೇಷನ್ ರಾಜ್ಯ ಅಧ್ಯಕ್ಷ ಆರ್ ಪಿ ರವಿಶಂಕರ್ ಇವರು ಉಪಸ್ಥಿತರಿದ್ದು ದಾನಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. ಪ್ರವಾಸಿ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳು ಹಾಜರಿದ್ದು ರಕ್ತ ದಾನ ಮಾಡಿದರು. ಇಂಟರ್ನ್ಯಾಷನಲ್ ವೈಶ್ ಫೆಡರೇಷನ್ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
.
VK NEWS DIGITAL :

ಚಾತುರ್ಮಾಸ್ಯ ವ್ರತ: ಪೇಜಾವರ ಮಠ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಶ್ರೀ ಶ್ರೀ ಶ್ರೀ ದೇವವರ್ಧನ ತೀರ್ಥ ಶ್ರೀಪಾದರು ಭವ್ಯ ಶೋಭಾಯಾತ್ರೆಯಲ್ಲಿ ಭಾಗಿ

ಬೆಂಗಳೂರು: ಬಸವನಗುಡಿ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಚಾತುರ್ಮಾಸ್ಯ ವ್ರತವನ್ನು ಕೈಗೊಳ್ಳಲಿರುವ ಪರಮಪೂಜ್ಯ ಪೇಜಾವರ ಅಧೋಕ್ಷಜ ಮಠಾಧೀಶರಾದ ಶ್ರೀಶ್ರೀಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮತ್ತು ಶ್ರೀ ಶಿರೂರು ಮಠಾಧೀಶರಾದ ಶ್ರೀಶ್ರೀಶ್ರೀ ವೇದವರ್ಧನತೀರ್ಥ ಶ್ರೀಪಾದರ ಸ್ವಾಗತ ಸಮಾರಂಭ. ಭವ್ಯ ಶೋಭಾಯಾತ್ರೆ ಮತ್ತು ಸಭಾ ಕಾರ್ಯಕ್ರಮ.

ಶಾಸಕರಾದ ರವಿಸುಬ್ರಮಣ್ಯ, ವಿಧಾನಪರಿಷತ್ ಸದಸ್ಯರಾದ ಟಿ.ಎ.ಶರವಣ, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷರಾದ ರಾಮಚಂದ್ರ ಉಪಾಧ್ಯ, ಉತ್ತರಾಧಿ ಮಠದ ನಿರ್ದೇಶಕ ಸತ್ಯಧ್ಯಾನಚಾರ್ಯ ಕಟ್ಟಿ, ಕೇಶವ ಬಾಯರಿ, ಡಾ||ಉದಯಕುಮಾರ್ ಸರಳ್ತಾಯ, ಅಖಿಲ ಭಾರತ ಮಾಧ್ವ ಮಂಡಲ ಅಧ್ಯಕ್ಷರಾದ ಗೌತಮ್ ಹೆಚ್.ವಿ. ಮತ್ತು ಹರಿದಾಸ ಭಟ್ ರವರು, ವೀರನಾರಾಯಣ ಪಾಂಡುರಂಗಿ, ಪಾರಪತ್ಯಗಾರರಾದ ಶ್ರೀಶಾಭಟ್ ಕಡೆಕಾರ್ ರವರು, ವಿದ್ಯಾಪೀಠ ವ್ಯವಸ್ಥಾಪಕರು ಶಶಾಂಕ್ ಅಚಾರ್ಯ,ಕಾಂಗ್ರೆಸ್ ಪಕ್ಷದ ಮುಖಂಡರಾದ ಬಾಲಾಜಿರವರು ಉಪಸ್ಥಿತರಿದ್ದರು.

ಭವ್ಯ ಶೋಭಯಾತ್ರೆಯು ನವ ಮಂತ್ರಾಲಯ ರಾಯರ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿ ಭವ್ಯ ಮೆರವಣಿಗೆಯಲ್ಲಿ ವಿದ್ಯಾಪೀಠ ರಸ್ತೆಯ ಮೂಲಕ ಪೂರ್ಣಪ್ರಜ್ಞಾ ವಿದ್ಯಾಪೀಠದವರಗೆ ಸಾಗಿತು.

ನೂರಾರು ಅಗಮ ಪಂಡಿತರು, ಮಹಿಳಾ ಮಂಡಳಿಯವರಾದ ತ್ರಿಪುರ ಸುಂದರಿ, ಗಿರಿವಾಸವಿ ತಂಡದವರಿಂದ ಭಕ್ತಿಗೀತೆ ಹಾಡಿದರು , ಯಕ್ಷಗಾನ ವೇಷಧಾರಿಗಳು, ಪೂಜಾಕುಣಿತ, ಡೊಳ್ಳು, ವೀರಗಾಸೆ,ತಮಟೆವಾದ್ಯ ವಿವಿಧ ಕಲಾತಂಡಗಳು ಭಾಗವಹಿಸಿದ್ದರು.

ಇ-ಸಾರಿಗೆ ವ್ಯವಸ್ಥೆ ಉತ್ತಮಗೊಳಿಸಲು ಬಿಎಂಟಿಸಿಗೆ ಅತ್ಯಾಧುನಿಕ ಸ್ಟಾರ್‌ ಬಸ್ ಇವಿಗಳ ವಿತರಣೆ

ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್ (TATA MOTORS) ಕಂಪನಿಯು ಇಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ -bmtc)ಗೆ ಹೆಚ್ಚುವರಿಯಾಗಿ 148 ಅತ್ಯಾಧುನಿಕ ಟಾಟಾ ಸ್ಟಾರ್‌ ಬಸ್ (TATA ELECTRIC STAR BUS) ಎಲೆಕ್ಟ್ರಿಕ್ ಬಸ್‌ ಗಳ ವಿತರಣೆಯನ್ನು ಆರಂಭಿಸಿರುವುದಾಗಿ ಘೋಷಿಸಿದೆ.

ಈಗಾಗಲೇ ನಗರದಲ್ಲಿ 921 ಎಲೆಕ್ಟ್ರಿಕ್ ಬಸ್‌ ಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಬೆಂಗಳೂರಿನ ಸುಸ್ಥಿರ ನಗರ ಸಂಚಾರ ವ್ಯವಸ್ಥೆಯನ್ನು ಬಲ ಪಡಿಸುವ ಉದ್ದೇಶದಿಂದ ಮತ್ತಷ್ಟು ಎಲೆಕ್ಟ್ರಿಕ್ ಬಸ್ ಗಳು ಕಾರ್ಯಾರಂಭ ಮಾಡಲಿವೆ. ಈ ಎಲೆಕ್ಟ್ರಿಕ್ ಬಸ್‌ ಗಳ ಸಮೂಹವನ್ನು ಟಾಟಾ ಮೋಟಾರ್ಸ್‌ ನ ಸಂಪೂರ್ಣ ಮಾಲೀಕತ್ವದ ಅಂಗಸಂಸ್ಥೆಯಾದ ಟಿಎಂಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸೊಲ್ಯೂಷನ್ಸ್ ಲಿಮಿಟೆಡ್ ಸಂಸ್ಥೆಯು 12 ವರ್ಷಗಳ ಒಪ್ಪಂದದಡಿಯಲ್ಲಿ ನಿರ್ವಹಣೆ ಮಾಡಲಿದೆ.

ಹೊಸ ಎಲೆಕ್ಟ್ರಿಕ್ ಬಸ್‌ ಗಳನ್ನು ಕರ್ನಾಟಕ ಸರ್ಕಾರದ ಗೌರವಾನ್ವಿತ ಸಾರಿಗೆ ಸಚಿವರಾದ ಶ್ರೀ ರಾಮಲಿಂಗಾ ರೆಡ್ಡಿ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಬಿಎಂಟಿಸಿಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಮಚಂದ್ರನ್ ಆರ್. ಐಎಎಸ್ ಮತ್ತು ಬಿಎಂಟಿಸಿಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

 ಕುರಿತು ಮಾತನಾಡಿದ ಬಿಎಂಟಿಸಿಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಮಚಂದ್ರನ್ ಆರ್ಐಎಎಸ್ ಅವರು, “ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಟಾಟಾ ಮೋಟಾರ್ಸ್‌ ನ ಎಲೆಕ್ಟ್ರಿಕ್ ಬಸ್‌ಗಳು ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತಿವೆ. ಸಾರ್ವಜನಿಕರಿಗೆ ಅನುಕೂಲಕರ ಮತ್ತು ಆರಾಮದಾಯಕ ಪ್ರಯಾಣ ಸೌಲಭ್ಯ ಒದಗಿಸಿವೆ. ಈ ಯಶಸ್ಸಿನ ಕಾರಣದಿಂದ ಟಾಟಾ ಮೋಟಾರ್ಸ್‌ ನಿಂದ ಹೆಚ್ಚುವರಿ 148 ಎಲೆಕ್ಟ್ರಿಕ್ ಬಸ್‌ ಗಳನ್ನು ಪಡೆಯಲು ನಾವು ಉತ್ಸುಕರಾಗಿದ್ದೇವೆ. ಬೆಂಗಳೂರಿನಾದ್ಯಂತ ಇರುವ ನಮ್ಮ ನಾಗರಿಕರಿಗೆ ಸುರಕ್ಷಿತ, ಸುಸ್ಥಿರ ಮತ್ತು ಸಮರ್ಥ ಪ್ರಯಾಣ ಸೌಲಭ್ಯವನ್ನು ಒದಗಿಸುವ ನಮ್ಮ ಸಾಮರ್ಥ್ಯವನ್ನು ಈ ಬಸ್‌ಗಳು ಮತ್ತಷ್ಟು ಹೆಚ್ಚಿಸಲಿವೆ” ಎಂದು ಹೇಳಿದರು.

ಟಾಟಾ ಮೋಟಾರ್ಸ್‌  ಟಿಎಂಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಲಿಮಿಟೆಡ್ ಮತ್ತು ವಾಣಿಜ್ಯ ಪ್ರಯಾಣಿಕ ವಾಹನ ವ್ಯವಹಾರದ ಉಪಾಧ್ಯಕ್ಷ ಮತ್ತು ಮುಖ್ಯಸ್ಥರಾದ ಶ್ರೀ ಆನಂದ್ ಎಸ್ಅವರು, “ನಾವು ಬಿಎಂಟಿಸಿಗೆ ನಮ್ಮ ಪರಿಸರ ಸ್ನೇಹಿ ಮತ್ತು ಸಮರ್ಥ ಸ್ಟಾರ್‌ ಬಸ್ ಎಲೆಕ್ಟ್ರಿಕ್ ಬಸ್‌ ಗಳ ಮತ್ತೊಂದು ಗುಂಪಿನ ವಿತರಣೆಯನ್ನು ಆರಂಭಿರುವುದು ಒಂದು ಮಹತ್ವದ ಕ್ಷಣವಾಗಿದೆ. ನಮ್ಮ ಎಲೆಕ್ಟ್ರಿಕ್ ಬಸ್ ಗಳು ಎರಡು ವರ್ಷಗಳಿಂದ ಒಟ್ಟು ಆರು ಕೋಟಿ ಕಿಲೋಮೀಟರ್‌ಗಳಿಗಿಂತಲೂ ಹೆಚ್ಚಿನ ದೂರವನ್ನು ಕ್ರಮಿಸಿವೆ. ನಮ್ಮ ಉತ್ಪನ್ನಗಳು ಮತ್ತು ಸಾಮರ್ಥ್ಯದ ಮೇಲೆ ಬಿಎಂಟಿಸಿ ತೋರಿಸಿರುವ ವಿಶ್ವಾಸಕ್ಕೆ ನಾವು ಕೃತಜ್ಞರಾಗಿದ್ದೇವೆ. ಸುಸ್ಥಿರ ಸಾರ್ವಜನಿಕ ಸಾರಿಗೆ ಕಡೆಗೆ ಅವರು ಹೊಂದಿರುವ ಬದ್ಧತೆಗೆ ನೆರಲಾಗಲು ಅತ್ಯುತ್ತಮ ತಂತ್ರಜ್ಞಾನ, ಸೇವೆ ಮತ್ತು ಕಾರ್ಯನಿರ್ವಹಣೆಯಿಂದ ಕೂಡಿದ ವಿನೂತನ ಇ- ಸಾರಿಗೆ ಉತ್ಪನ್ನಗಳನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ” ಎಂದು ಹೇಳಿದರು.

ಟಾಟಾ ಎಲೆಕೆಟ್ರಿಕ್ ಸ್ಟಾರ್‌ ಬಸ್ ಗಳನ್ನು ನಗರದೊಳಗಿನ ಸಾರಿಗೆ ವ್ಯವಸ್ಥೆಗಾಗಿ ವಿನ್ಯಾಸಗೊಳಿಸಲಾಗಿದ್ದು, ಇವುಗಳು ಉತ್ತಮ ದರ್ಜೆಯ ಕಾರ್ಯಕ್ಷಮತೆ, ಸುರಕ್ಷತೆ ಮತ್ತು ಅನುಕೂಲತೆಯನ್ನು ಒದಗಿಸುತ್ತದೆ. ಈ ಅತ್ಯಾಧುನಿಕ ಎಲೆಕ್ಟ್ರಿಕ್ ಬಸ್‌ ಗಳು ಹೊಸ-ಪೀಳಿಗೆಯ ಎಲೆಕ್ಟ್ರಿಕ್ ಪವರ್‌ಟ್ರೇನ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಎಲೆಕ್ಟ್ರಾನಿಕ್ ಬ್ರೇಕ್ ಡಿಸ್ಟ್ರಿಬ್ಯೂಷನ್ ವ್ಯವಸ್ಥೆಯನ್ನು ಹೊಂದಿವೆ. ಕಡಿಮೆ ಎತ್ತರದ ಮೆಟ್ಟಿಲು ಹೊಂದಿರುವ ಲೋ ಫ್ಲೋರ್ ವಿನ್ಯಾಸವನ್ನು ಹೊಂದಿರುವ ಈ ಬಸ್ ಗಳಲ್ಲಿ 35 ಪ್ರಯಾಣಿಕರು ಕೂರುವಷ್ಟು ಸೀಟ್ ಗಳನ್ನು ಹೊಂದಿದೆ. ಪ್ರಯಾಣಿಕರಿಗೆ ಸುಗಮ ಮತ್ತು ಆರಾಮದಾಯಕ ಪ್ರಯಾಣವನ್ನು ಒದಗಿಸುತ್ತದೆ. ಶೂನ್ಯ ಟೈಲ್‌ಪೈಪ್ ಎಮಿಷನ್‌ ಹೊಂದಿರುವ ಈ ಸ್ಟಾರ್‌ ಬಸ್ ಇವಿಗಳು ಬೆಂಗಳೂರಿನಲ್ಲಿ ಶುದ್ಧವಾದ ಗಾಳಿ ದೊರಕಿಸುವ ವಿಚಾರದಲ್ಲಿ ಗಮನಾರ್ಹ ಕೊಡುಗೆ ನೀಡಿವೆ. ಟಾಟಾ ಮೋಟಾರ್ಸ್ ಮತ್ತು ಬಿಎಂಟಿಸಿ ಸಾರ್ವಜನಿಕ ಸಾರಿಗೆಯು ಭವಿಷ್ಯಕ್ಕೆ ಸಿದ್ಧವಾಗಿರುವುದರ ಜೊತೆಗೆ ನಾಗರಿಕರಿಗೆ ಹೆಚ್ಚು ಅನುಕೂರವಾಗಿರುವಂತೆ ನೋಡಿಕೊಳ್ಳುತ್ತಿರುವುದು ವಿಶೇಷವಾಗಿದೆ.

78 ನೇ ಸ್ವಾತಂತ್ರ್ಯ ದಿನಾಚರಣೆಯ ಪೂರ್ವಭಾವಿ ಸಭೆ

ಬೆಂಗಳೂರು ನಗರ ಜಿಲ್ಲೆ, ಜುಲೈ 14, (ಕರ್ನಾಟಕ ವಾರ್ತೆ): ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಆಗಸ್ಟ್ 15 ರಂದು ನಡೆಯುವ 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆದ್ದೂರಿಯಾಗಿ ಆಚರಿಸಲು ಎಲ್ಲರೂ  ತಮಗೆ  ವಹಿಸಿದ  ಕೆಲಸವನ್ನು ಅತ್ಯಂತ ಜವಾಬ್ದಾರಿಯಿಂದ  ಮಾಡಲು ಪ್ರಾರಂಭಿಸುವಂತೆ  ಬೆಂಗಳೂರು ನಗರ  ಜಿಲ್ಲಾಧಿಕಾರಿಗಳಾದ ಜಿ.ಜಗದೀಶ ಅವರು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ  ಸೂಚಿಸಿದರು.

ಇಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಸ್ವಾತಂತ್ರ್ಯ ದಿನಾಚರಣೆ  2025ರ ಸಮಾರಂಭದ ಪೂರ್ವಭಾವಿ ಸಿದ್ಧತೆಗಳ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಅವರು‌ ಮಾತನಾಡಿದರು.

ಮೈದಾನದ ಸ್ವಚ್ಛತೆ, ಆಸನಗಳು, ಶೌಚಾಲಯ, ವೇದಿಕೆ ಅಲಂಕಾರ, ಧ್ವನಿ ವರ್ಧಕಗಳು ಮತ್ತು ಶಾಮಿಯಾನಗಳ ಸಮರ್ಪಕ ವ್ಯವಸ್ಥೆಯನ್ನು ಮಾಡಬೇಕೆಂದು  ವಿವಿಧ  ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ ಅವರು ಕಾರ್ಯಕ್ರಮದಲ್ಲಿ ಮೈದಾನದ ಸುತ್ತ ವಿದ್ಯುತ್ ಸರಬರಾಜು,  ಪ್ರಥಮ ಚಿಕಿತ್ಸೆಗೆ ಆಂಬ್ಯುಲೆನ್ಸ್ ವ್ಯವಸ್ಥೆ ಜತೆಗೆ ಅಗತ್ಯ ಔಷಧಿ ಹಾಗೂ ಸ್ಟಾಫ್‍ ನರ್ಸ್‍ ಸಿಬ್ಬಂದಿಯನ್ನು ನಿಯೋಜಿಸಿ, ಕುಡಿಯುವ ನೀರಿನ ವ್ಯವಸ್ಥೆಯನ್ನು  ಸಮಪರ್ಕವಾಗಿ ಒದಗಿಸಬೇಕೆಂದರು.  ಸಂಬಂಧಿಸಿದ ಇಲಾಖೆಗಳು ಯಾವುದೇ ಲೋಪ ಬಾರದಂತೆ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು.

ಕಟ್ಟುನಿಟ್ಟಿನ ಬಿಗಿ ಭದ್ರತೆಗೆ ಸೂಚನೆ: ಕಾರ್ಯಕ್ರಮಕ್ಕೆ ಪ್ರವೇಶ, ವಾಹನ ನಿಲುಗಡೆ, ಅಗ್ನಿ ಶಾಮಕ ವ್ಯವಸ್ಥೆ ಹಾಗೂ ಮೈದಾನದ ಸುತ್ತ ಸಿಸಿ ಕ್ಯಾಮರಾಗಳ ಅಳವಡಿಕೆಗೆ ಪ್ರಥಮಾದ್ಯತೆ ನೀಡುವದರ ಜೊತೆಗೆ ಮಾಧ್ಯಮ ಪ್ರತಿನಿಧಿಗಳಿಗೆ ಕೇವಲ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಪ್ರವೇಶ ಪತ್ರವನ್ನು ವಿತರಿಸಬೇಕು ಮತ್ತು ಮಾಧ್ಯಮ ಗ್ಯಾಲರಿಯಲ್ಲಿ ಮಾಧ್ಯಮ ಪ್ರವೇಶ ಪತ್ರ ಪಡೆದ ಮಾಧ್ಯಮ ಪ್ರತಿನಿಧಿಗಳು ಮಾತ್ರ ಆಸೀನರಾಗುವಂತೆ ನೋಡಿಕೊಳ್ಳಲು ಪೊಲೀಸ್ ಸಿಬ್ಬಂದಿ ಸಹಕರಿಸಬೇಕು ಎಂದು ಸೂಚಿಸಿದರು.

ನಾಡಗೀತೆ, ರೈತ ಗೀತೆ ಹಾಡುವ  ಕಲಾವಿದರ ತಂಡಗಳನ್ನು ಆಯ್ಕೆ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳಿಗೆ  ಸೂಚಿಸಿದ ಅವರು ಉತ್ತಮ ಗುಣಮಟ್ಟದ ವಿಕ್ಷಕ ವಿವರಣೆಗೆ  ಸೂಕ್ತ  ನಿರೂಪಕರನ್ನು ಆಯ್ಕೆ ಮಾಡುವಂತೆ  ತಿಳಿಸಿದರು. ಶಾಲಾ ಮಕ್ಕಳಿಂದ  10 ನಿಮಿಷಗಳ ಕುರಿತು ಎರಡು  ಸಾಂಸ್ಕೃತಿಕ ಕಾರ್ಯಕ್ರಮಗಳನ್ನು  ಪ್ರದರ್ಶಿಸಲು ಬಿಬಿಎಂಪಿ  ಅಧಿಕಾರಿಗಳಿಗೆ ಮತ್ತು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ  ತಿಳಿಸಿದರು.

ಜಿಲ್ಲೆಯಲ್ಲಿ ಯಾವುದೇ ಇಲಾಖೆಯ ಕಾರ್ಯಕ್ರಮ ಆಯೋಜಿಸುವಾಗ  ಕಟ್ಟುನಿಟ್ಟಾಗಿ  ಶಿಷ್ಟಾಚಾರ ಪಾಲಿಸಬೇಕು. ಯಾವುದೇ ಕಾರಣಕ್ಕೂ ಶಿಷ್ಟಾಚಾರದಲ್ಲಿ  ಆಭಾಸ ಉಂಟಾಗುಬಾರದು  ಎಂದು ಅವರು ಆಹ್ವಾನ ಪತ್ರಿಕೆಗಳಿಗೆ   ಜಿಲ್ಲಾಧಿಕಾರಿಗಳ ಕಚೇರಿಯ ಶಿಷ್ಟಾಷಾರ ವಿಭಾಗದಿಂದ ಅನುಮೋದನೆ  ಕಡ್ಡಾಯವಾಗಿ  ಪಡೆಯಬೇಕು ಎಂದು ಸೂಚಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಸೇವೆಗಳನ್ನು ‘ಸಕಾಲ’ಅಡಿಯಲ್ಲಿ  ವಿಳಂಬ ಮಾಡದೇ ವಿಲೆ ಮಾಡುವಂತೆ ಎಲ್ಲ ಇಲಾಖಾ ಅಧಿಕಾರಿಗಳಿಗೆ  ಅವರು ಸೂಚಿಸಿದರು.

ಸಭೆಯಲ್ಲಿ ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಯತೀಶ್ ಆರ್. ಬೆಂಗಳೂರು ಕೇಂದ್ರ ವಿಭಾಗದ ಪೊಲೀಸ್‍ ಉಪ ಆಯುಕ್ತರಾದ ಕ್ಷಾಮ ಮಿಶ್ರಾ, ಬೆಂಗಳೂರು ನಗರ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾದ ಜಗದೀಶ ಕೆ. ನಾಯಕ್‍, ಬೆಂಗಳೂರು ಜಲಮಂಡಳಿಯ ಅಪರ ಮುಖ್ಯ ಅಭಿಯಂತರರು ವಾಗೀಶ್ ಎಂ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕರಾದ ಪಲ್ಲವಿ ಹೊನ್ನಾಪುರ, ಕನ್ನಡ ಮತ್ತು ಸಾಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಆರ್. ಚಂದ್ರಶೇಖರ್‍, ಅಗ್ನಿಶಾಮಕದ ಜಿಲ್ಲಾ ಅಧಿಕಾರಿಗಳಾದ  ಸಂತೋಷ್‍ .ಹೆಚ್. ಎಸ್‍ ಸೇರಿದಂತೆ  ಇತರೆ ಜಿಲ್ಲಾ ಮಟ್ಟದ  ಅಧಿಕಾರಿಗಳು ಉಪಸ್ಥಿತರಿದ್ದರು.

VK NEWS DIGITAL :

ಅಭಿನಯ ಸರಸ್ವತಿ ಬಿ ಸರೋಜಾದೇವಿ ಇನ್ನಿಲ್ಲ

ಬಿ.ಸರೋಜಾದೇವಿ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ

ಕನ್ನಡದ ಹಿರಿಯ ನಟಿ ಬಿ.ಸರೋಜಾದೇವಿ ಅವರ ನಿಧನವಾರ್ತೆ ನೋವುಂಟು ಮಾಡಿದೆ. ಕನ್ನಡ ಚಿತ್ರರಂಗವು ಸೇರಿದಂತೆ ತಮಿಳು, ತೆಲುಗು ಮತ್ತು ಹಿಂದಿಯ ಸುಮಾರು 200 ಚಿತ್ರಗಳಲ್ಲಿ ನಟಿಸಿ, ಅಭಿನಯ ಸರಸ್ವತಿ ಎಂದೇ ಖ್ಯಾತರಾಗಿದ್ದರು.

ಸರೋಜಾದೇವಿ ಎಂದಾಕ್ಷಣ ಕಿತ್ತೂರು ಚೆನ್ನಮ್ಮ, ಬಬ್ರುವಾಹನ, ಅಣ್ಣತಂಗಿ ಮುಂತಾದ ಚಿತ್ರಗಳಲ್ಲಿನ ಅವರ ಮನೋಜ್ಞ ಅಭಿನಯ ಕಣ್ಣಮುಂದೆ ಬರುತ್ತದೆ. ಸದಭಿರುಚಿಯ ಚಿತ್ರಗಳ ಮೂಲಕ ಹಲವು ದಶಕಗಳ ಕಾಲ ಸಿನಿಪ್ರಿಯರನ್ನು ರಂಜಿಸಿದ್ದ ಅವರ ಅಗಲಿಕೆ ಭಾರತೀಯ ಚಿತ್ರರಂಗಕ್ಕಾದ ಬಹುದೊಡ್ಡ ನಷ್ಟ.

ಸರೋಜಾದೇವಿಯವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸುವೆ. ಅವರ ದುಃಖತಪ್ತ ಕುಟುಂಬವರ್ಗ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ಸಿಡಾಕ್ ವತಿಯಿಂದ ಒಂದು ದಿನದ ಉದ್ಯಮಶೀಲತಾ ತಿಳುವಳಿಕೆ ಶಿಬಿರ

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಬೆಂಗಳೂರು ಹಾಗೂ ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್), ಜಿಲ್ಲಾ ಕೈಗಾರಿಕಾ ಕೇಂದ್ರ. ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ, ಬೆಂಗಳೂರು ಜಿಲ್ಲೆಯಲ್ಲಿ ಸ್ವಂತ ಉದ್ಯಮವನ್ನು ಸ್ಥಾಪಿಸಲು ಬಯಸುವವರಿಗೆ ಒಂದು ದಿನದ ಉದ್ಯಮಶೀಲತಾ ತಿಳುವಳಿಕ ಶಿಬಿರವನ್ನು ಜುಲೈ 16 ರಂದು ರಾಜಾಜಿನಗರ ಕೈಗಾರಿಕಾ ಪ್ರದೇಶದಲ್ಲಿರುವ   ಜಿಟಿಟಿಸಿ ಕಟ್ಟಡದ ಡಾ ಅಂಬೇಡ್ಕರ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದಲ್ಲಿ ಸ್ವಂತ ಉದ್ಯಮವನ್ನು ಸ್ಥಾಪಿಸ ಬಯಸುವ ಆಸಕ್ತರಿಗೆ ಉದ್ಯಮಶೀಲತೆ ಪ್ರೇರಣೆ, ಸ್ವಂತ ಉದ್ಯಮ ಸ್ಥಾಪನೆಗಾಗಿ ಸರ್ಕಾರ ಹಾಗೂ ಹಣಕಾಸು ಸಂಸ್ಥೆಗಳಿಂದ ದೊರೆಯುವ ನೆರವು / ಪೆÇ್ರೀತ್ಸಾಹ, ಯೋಜನೆಗಳ ಆಯ್ಕೆ, ಮುಂದೆ ಕೈಗೊಳ್ಳಲಾಗುವ ಉದ್ಯಮಶೀಲತಾಭಿವೃದ್ಧಿ ತರಬೇತಿ ಬಗ್ಗೆ ಮಾಹಿತಿ ಹಾಗೂ ಇತರೆ ಕೈಗಾರಿಕಾ ವಿಷಯಗಳ ಕುರಿತು ಮಾಹಿತಿಯನ್ನು ನೀಡಲಾಗುವುದು.
ಆಸಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಯೋಜನ ಪಡೆಯಬಹುದು. ಭಾಗವಹಿಸುವವರು ಕನಿಷ್ಠ 18 ವರ್ಷ ಮೇಲ್ಪಟ್ಟ ವಯಸ್ಸಿನವರಾಗಿರಬೇಕು ಹಾಗೂ ಕನಿಷ್ಠ ಹತ್ತನೇ ತರಗತಿ ವ್ಯಾಸಂಗ ಮಾಡಿರಬೇಕು.

ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರ ಕಛೇರಿ, ಸಿಡಾಕ್, ಜಿಲ್ಲಾ ಕೈಗಾರಿಕಾ ಕೇಂದ್ರ ಹತ್ತಿರ, ರಾಜಾಜಿನಗರ ಕೈಗಾರಿಕ ಪ್ರದೇಶ, ರಾಜಾಜಿನಗರ ಇವರನ್ನು ಮೊಬೈಲ್ ಸಂಖ್ಯೆ: 9008175702/ 9448413948 / 7760145784 ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಬೆಂಗಳೂರಿನ ಸಿಡಾಕ್ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಕ್ತಿ ಯೋಜನೆಯ 500 ಕೋಟಿ ಉಚಿತ ಟಿಕೆಟ್ ವಿತರಣೆ; ಸಿಹಿ ಹಂಚಿ ಸಂಭ್ರಮ

ದೇವನಹಳ್ಳಿ ಟೌನ್‍ನ ಬಸ್ ನಿಲ್ದಾಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಜು.13 ರಿಂದ 16 ರವರೆಗೆ ಹಮ್ಮಿಕೊಂಡಿರುವ ಸರ್ಕಾರದ ಎರಡು ವರ್ಷದ ಸಾಧನೆ ಹಾಗೂ ಸರ್ಕಾರದ ಯೋಜನೆಗಳನ್ನು ಬಿಂಬಿಸುವ ವಸ್ತು ಪ್ರದರ್ಶನಕ್ಕೆ ಗ್ಯಾರಂಟಿ ಯೋಜನೆ ಅನುμÁ್ಠನ ಸಮಿತಿಯ ತಾಲ್ಲೂಕು ಅಧ್ಯಕ್ಷ ಜಗನ್ನಾಥ ಅವರು ಚಾಲನೆ ನೀಡಿದರು.

ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳ ಲಾಭ ಪ್ರತಿಯೊಬ್ಬ ಅರ್ಹ ಫಲಾನುವಿಗೆ ದೊರಕಿಸುವ ನಿಟ್ಟಿನಲ್ಲಿ, ಗ್ಯಾರಂಟಿ ಯೋಜನೆಗಳು ಒಳಗೊಂಡಂತೆ ಸರ್ಕಾರದ ಜನಪರ ಯೋಜನೆಗಳ, ಅಭಿವೃದ್ಧಿ-ಸಾಧನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ.

ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಯೋಜನೆ, ಯುವನಿಧಿ ಯೋಜನೆಗಳ ಸಮಗ್ರ ಮಾಹಿತಿ, ಫಲಾನುಭವಿಗಳ ಅನಿಸಿಕೆ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳನ್ನೊಳಗೊಂಡ ಸಮಗ್ರ ಮಾಹಿತಿಯುಳ್ಳ ಫಲಕಗಳನ್ನು ಅಳವಡಿಸಲಾಗಿದ್ದು, ವಸ್ತು ಪ್ರದರ್ಶನವು ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿದೆ ಎಂದರು.

ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯು ಹೊಸ ಮೈಲಿಗಲ್ಲು ಸ್ಥಾಪಿಸಿದ್ದು ಮಹಿಳಾ ಪ್ರಯಾಣಿಕರ ಸಂಖ್ಯೆ ಇಂದು 500 ಕೋಟಿ ಉಚಿತ ಟಿಕೆಟ್ ವಿತರಣೆ ತಲುಪಿದೆ.

ಹಾಗಾಗಿ ದೇವನಹಳ್ಳಿ ಟೌನ್ ಬಸ್ ನಿಲ್ದಾಣದಲ್ಲಿ ಬಸ್ ಗಳಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿರುವ ಮಹಿಳೆಯರಿಗೆ ಸಿಹಿ ಹಂಚಿ ಸಂಭ್ರಮಿಸಲಾಯಿತು. ಇವತ್ತು ನಾವೆಲ್ಲ ಒಳ್ಳೆಯ ದಿನಗಳನ್ನು ಕಾಣುತ್ತಿದ್ದೇವೆ, ಶಕ್ತಿ ಯೋಜನೆ, ಗೃಹಲಕ್ಷ್ಮಿ, ಅನ್ನ ಭಾಗ್ಯ, ಗೃಹಜ್ಯೋತಿ, ಯುವನಿಧಿ ಈ ರೀತಿಯ ಯೋಜನೆಗಳನ್ನು ಹಿಂದಿನ ಯಾವ ಸರ್ಕಾರವು ಮಾಡಿರಲಿಲ್ಲ ನಮ್ಮ ಸರ್ಕಾರ ನುಡಿದಂತೆ ನಡೆದಿದೆ ಎಂದರು.

2023 ರ ಜೂನ್ 11 ರಂದು ಶಕ್ತಿ ಯೋಜನೆ ಜಾರಿಗೆ ಬಂತು ಕಳೆದ 2 ವರ್ಷ ಒಂದು ತಿಂಗಳ ಅವಧಿಯಲ್ಲಿ ಕೆ.ಎಸ್.ಆರ್.ಟಿ.ಸಿ ಮತ್ತು ಬಿಎಂಟಿಸಿ ಸೇರಿದಂತೆ ಸರಕಾರಿ ಸಾರಿಗೆ ಸಂಸ್ಥೆಯ 4 ನಿಗಮಗಳ ಸಾಮಾನ್ಯ ಸಾರಿಗೆ ಬಸ್‍ಗಳಲ್ಲಿ ಇದುವರೆಗೆ ಮಹಿಳಾ ಪ್ರಯಾಣಿಕರಿಗೆ ವಿತರಣೆ ಮಾಡಿದ ಉಚಿತ ಟಿಕೆಟ್‍ಗಳ ಸಂಖ್ಯೆ ಇಂದು 500 ಕೋಟಿ ತಲುಪಲಿದೆ.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಮುನಿಕೃಷ್ಣ, ಬಮುಲ್ ನಿರ್ದೇಶಕ ಎಸ್.ಪಿ ಮುನಿರಾಜು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಕೆ.ಸಿ ಮಂಜುನಾಥ, ಲಕ್ಷ್ಮೀನಾರಾಯಣಪ್ಪ, ಅನಂತಕುಮಾರಿ, ಮುಖಂಡರಾದ ಚಿನ್ನಪ್ಪ, ರವಿಕುಮಾರ್, ಪುರಸಭೆ ಮುಖ್ಯಾಧಿಕಾರಿ ದೊಡ್ಡಮಲ್ಲಯ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕರಾದ ಅಶೋಕ್ ಕುಮಾರ್ ಡಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶ್ರೀನಾಥ್ ಗೌಡ, ಹಿರಿಯ ಆರೋಗ್ಯ ನಿರೀಕ್ಷಕಿ ಶ್ರೀದೇವಿ, ನಗರ ಸಾರಿಗೆ ಅಧಿಕಾರಿಗಳು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಇತರರು ಉಪಸ್ಥಿತರಿದ್ದರು.

 

ಅಭಿನಯ ಸರಸ್ವತಿ ಬಿ ಸರೋಜಾದೇವಿ ಇನ್ನಿಲ್ಲ

ಮುಖ್ಯಮಂತ್ರಿ ಅವರಿಂದ ವಿಜಯಪುರ ಇಂಡಿಯಲ್ಲಿ 4559 ಕೋಟಿ ರೂ.ಗಳ ಶಂಕುಸ್ಥಾಪನೆ, ಉದ್ಘಾಟನೆ

ನಮ್ಮದು ಅಭಿವೃದ್ಧಿ ಪರವಾದ ಸರ್ಕಾರ ಎನ್ನುವುದಕ್ಕೆ, ಇಂದು ಒಂದೇ ದಿನ ವಿಜಯಪುರ ಜಿಲ್ಲೆಯ ಇಂಡಿಯಲ್ಲಿ 4,559 ಕೋಟಿ ರೂಪಾಯಿಗಳ ಕಾಮಗಾರಿಗಳಿಗೆ ಉದ್ಘಾಟನೆ ಹಾಗೂ ಶಂಕುಸ್ಥಾಪನೆ, ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಇಂದು ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಶಕ್ತಿ ಯೋಜನೆಯಡಿ 500 ಕೋಟಿ ಬಾರಿ ಮಹಿಳೆಯರು ಉಚಿತ ಪ್ರಯಾಣ ನಡೆಸಿದ ಹಿನ್ನೆಲೆಯಲ್ಲಿ ಕೆ.ಕೆ.ಆರ್.ಟಿ.ಸಿ ಬಸ್‍ಗೆ ಪೂಜೆ ನೆರವೇರಿಸಿ, ಮಹಿಳಾ ಪ್ರಯಾಣಿಕರಿಗೆ ಉಚಿತ ಟಿಕೆಟ್ ವಿತರಿಸಿ, ನಂತರ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ನೆರವೇರಿಸಿ, ನಿಂಬೆ ಅಭಿವೃದ್ಧಿ ಮಂಡಳಿಯ ಲಾಂಛನವನ್ನು ಬಿಡುಗಡೆಗೊಳಿಸಿ ಮಾತನಾಡಿದg ಮುಖ್ಯಮಂತ್ರಿಗಳು, 4,157 ಕೋಟಿ ರೂಪಾಯಿ ಮೊತ್ತದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ, 401 ಕೋಟಿ ಮೊತ್ತದ ಕಾಮಗಾರಿ ಉದ್ಘಾಟನೆ ಮಾಡಿದ್ದೇನೆ. ಅಭಿವೃದ್ಧಿಯಲ್ಲಿ ನಮ್ಮ ಸರ್ಕಾರದ ಸಾಧನೆಯ ಬಗ್ಗೆ ಜನರೇ ತೀರ್ಮಾನಿಸಲಿ ಎಂದು ನುಡಿದರು.

ಬಿಜಾಪುರ ಜಿಲ್ಲೆ ಮೊದಲು ಹೇಗಿತ್ತು? ನಮ್ಮ ಸರ್ಕಾರದಲ್ಲಿ ಮತ್ತು ಹಿಂದಿನ ಕಾಂಗ್ರೆಸ್ ಸರ್ಕಾರಗಳ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಕ್ರಮಗಳ ಪಟ್ಟಿಯನ್ನು ಕೈಯಲ್ಲಿ ಹಿಡಿದು ನೋಡಿ. ಬಿಜಾಪುರ ಜಿಲ್ಲೆಯಲ್ಲಿ ನೀರಾವರಿ ಈ ಮಟ್ಟಕ್ಕೆ ಅಭಿವೃದ್ಧಿಗೊಳಿಸಿ, ಬರದ ನಾಡಾಗಿದ್ದ ಬಿಜಾಪುರವನ್ನು ಹಸಿರು ನಾಡು ಮಾಡಿದ್ದು ನಮ್ಮ ಕಾಂಗ್ರೆಸ್ ಸರ್ಕಾರ ಎಂದು ತಿಳಿಸಿದರು.

ಹಿಂದೆ ಬರಗಾಲ ಬಂದಾಗ ಜನ ನಿಂಬೆ ಗಿಡ ಕಿತ್ತು ಹಾಕುತ್ತಿದ್ದರು. ಅದೇ ದಿನ ನಾನು ಇಂಡಿಗೆ ಬಂದಿದ್ದೆ. ನಿಂಬೆ ಬೆಳೆಗಾರರಿಗೆ ಭರವಸೆ ನೀಡಿದ್ದೆ. ಇಂದು ನಿಂಬೆ ಅಭಿವೃದ್ಧಿ ಮಂಡಳಿಯ ಲಾಂಛನ ಬಿಡುಗಡೆ ಮಾಡಿ ನುಡಿದಂತೆ ನಡೆಯುವ ಕಾಂಗ್ರೆಸ್ಸಿನ ಪರಂಪರೆಯನ್ನು ಮುಂದುವರೆಸಿದ್ದೇವೆ ಎಂದರು.

500 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿರುವುದು, 1.23 ಕೋಟಿ ಕುಟುಂಬಗಳು ಗೃಹಲಕ್ಷ್ಮಿ ಹಣ ಪಡೆದಿರುವುದು, 1.64 ಕೋಟಿ ಮನೆಗಳಿಗೆ ಉಚಿತವಾಗಿ 200 ಯೂನಿಟ್ ಹಣ ಪಡೆಯುತ್ತಿರುವುದು, ಅನ್ನಭಾಗ್ಯ ಮತ್ತು ಯುವನಿಧಿ ಯೋಜನೆಗಳ ಮೂಲಕ ಕೋಟಿ ಕೋಟಿ ಕನ್ನಡಿಗರ ಬದುಕಿಗೆ ನೆರವಾಗಿರುವುದು ಅಭಿವೃದ್ಧಿ ಅಲ್ಲವೇ? ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು ಗ್ಯಾರಂಟಿಗಳಲ್ಲದೆ 83 ಸಾವಿರ ಕೋಟಿ ರೂಪಾಯಿ ಹಣ ಅಭಿವೃದ್ಧಿಗೆ ತೆಗೆದಿಟ್ಟುರುವುದು ನಮ್ಮ ಅಭಿವೃದ್ಧಿ ಪರವಾದ ಆಡಳಿತಕ್ಕೆ ಸ್ಪಷ್ಟ ನಿದರ್ಶನ. ಅಭಿವೃದ್ಧಿ ಯೋಜನೆಗಳು ನಿಮ್ಮ ಕಣ್ಣೆದುರೇ ಕಾಣುತ್ತಿವೆ ಎಂದು ಹೇಳಿದರು.

ಸ್ಥಳೀಯ ಶಾಸಕರಾದ ಯಶವಂತರಾಯಗೌಡ ಪಾಟೀಲ್ ಅವರಿಗೆ ಸರ್ಕಾರದಿಂದ ಹಣ ತಂದು ಕ್ಷೇತ್ರದ ಅಭಿವೃದ್ಧಿ ಮಾಡುವುದು ಹೇಗೆ ಎನ್ನುವುದರಲ್ಲಿ ಬಹಳ ಪ್ರಾಮಾಣಿಕರು ಮತ್ತು ಚಾಣಾಕ್ಷರು. ನಮ್ಮದು ಸರ್ವರ ಅಭಿವೃದ್ಧಿಗೆ ಬದ್ದವಾಗಿರುವ ಸರ್ಕಾರ ಎಂದರು.

ಸ್ಥಳೀಯ ಶಾಸಕರಾದ ಯಶವಂತರಾಯಗೌಡ ಪಾಟೀಲ್ ಅವರ ಅಧ್ಯಕ್ಷತೆಯ ಸಮಾರಂಭದಲ್ಲಿ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್, ಸಚಿವರಾದ ಹೆಚ್.ಸಿ.ಮಹದೇವಪ್ಪ, ದಿನೇಶ್ ಗುಂಡೂರಾವ್, ಎಂ.ಬಿ.ಪಾಟೀಲ್, ಹೆಚ್.ಕೆ.ಪಾಟೀಲ್, ಶಿವಾನಂದ ಎಸ್.ಪಾಟೀಲ್, ಶರಣಪ್ರಕಾಶ ಪಾಟೀಲ್ ಸೇರಿದಂತೆ ಹಲವು ಮಂದಿ ಶಾಸಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

 

ಬಿ.ಸರೋಜಾದೇವಿ ಕಿತ್ತೂರು ರಾಣಿ ಚೆನ್ನಮ್ಮನ ಪಾತ್ರಕ್ಕೆ ನೈಜತೆ ತಂದಿದ್ದರು: ಬಸವರಾಜ ಬೊಮ್ಮಾಯಿ

ಬೆಂಗಳೂರು: ಕನ್ಮಡ ಚಿತ್ರರಂಗದ ಹಿರಿಯ ನಟಿ ಬಿ.‌ಸರೋಜಾದೇವಿ ಕಿತ್ತೂರು ರಾಣಿ ಚೆನ್ನಮ್ಮನ ಪಾತ್ರಕ್ಕೆ ನೈಜತೆ ತಂದಿದ್ದರು. ಅವರ ನಿಧನ ಕರ್ನಾಟಕದ ಕಲಾ‌ಕ್ಷೇತ್ರಕ್ಕೆ ಅತ್ಯಂತ ದುಃಖದ ದಿನ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.
ಬಿ. ಸರೋಜಾದೇವಿಯವರ ನಿಧನದ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಅಭಿನಯ ಸರಸ್ವತಿ, ಚತುರ್ಭಾಷಾ ತಾರೆ ಪೌರಾಣಿಕ ಹಾಗೂ ಸಾಮಾಜಿಕ ಚಲನಚಿತ್ರಗಳಲ್ಲಿ ವಿಭಿನ್ನ ಪಾತ್ರವನ್ನು ಲೀಲಾಜಾಲವಾಗಿ ನಟಿಸುತ್ತಿದ್ದ ಸರೋಜಾದೇವಿ ಇನ್ನಿಲ್ಲ. ಒಂದು ಕಾಲದಲ್ಲಿ ಕನ್ನಡದ ಸೂಪರ್ ಸ್ಟಾರ್ ಆಗಿದ್ದ ಅವರು, ರಾಜಕುಮಾರ್ ಜೊತೆ, ತೆಲುಗಿನಲ್ಲಿ ಎನ್ ಟಿ ಆರ್ ಜೊತೆ, ಹಿಂದಿಯಲ್ಲಿ ದಿಲೀಪ್ ಕುಮಾರ್ ಜೊತೆ ನಟಿಸಿ ಇಡೀ ದೇಶದಲ್ಲಿ ಪ್ರಖ್ಯಾತ ನಟಿ ಆಗಿದ್ದರು.
ಕನ್ನಡದಲ್ಲಿ ಹೇಳಬೇಕಾದರೆ ಕಿತ್ತೂರು ರಾಣಿ ಚೆನ್ನಮ್ಮ ಪಾತ್ರಕ್ಕೆ ನೈಜತೆ ತಂದಿದ್ದರು. ಚೆನ್ನಮ್ಮ ಅಂದರೆ ಹೀಗಿದ್ದರು ಅಂತ ಕಲ್ಪನೆ ಮೂಡಿಸಿದ್ದರು. ಅವರ ಅಭಿನಯ, ಕಲ್ಪನೆ ಇಂದಿಗೂ ಮನಸ್ಸಿನಲ್ಲಿ ಇದೆ. ಚೆನ್ನಮ್ಮ ಬ್ರಿಟೀಷರ ವಿರುದ್ಧ ಹೇಗೆ ಹೋರಾಟ ಮಾಡಿದ್ದರು ಅಂತ ಅವರ ನಟನೆ ಮೂಲಕ ತೋರಿಸಿದ್ದರು ಎಂದರು.
ಮಲ್ಲಮ್ಮನ ಪವಾಡ ಇದೊಂದು ಮನೆಮನೆಯಲ್ಲಿ ಮನಮುಟ್ಟುವ ಚಿತ್ರವಾಗಿತ್ತು. ಲಕ್ಷ್ಮಿ ಸರಸ್ವತಿ, ಬಬ್ರುವಾಹನ, ಶ್ರೀನಿವಾಸ ಕಲ್ಯಾಣ ಸೇರಿದಂತೆ ನೂರಾರು ಚಿತ್ರಗಳಲ್ಲಿ ನಟನೆ ಮಾಡಿದ್ದರು‌. ಅಭಿನಯದ ಜೊತೆ ಗಾಂಭೀರತೆಯಲ್ಲಿ ಅಗ್ರಮಾನ್ಯರಾಗಿದ್ದರು. ಐದು ದಶಕದಿಂದ ಚಿತ್ರರಂಗದಲ್ಲಿ ನಟಿಸಿದ್ದು, ನಮ್ಮನ್ನೆಲ್ಲಾ ಅಗಲಿದ್ದಾರೆ. ಆದರೂ ಅವರ ಅಭಿನಯದ ಮೂಲಕ ನಮ್ಮ ಮನದಲ್ಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.