ಬಂಜಾರ (Banjara) ಸಂಸ್ಕೃತಿ, ಭಾಷೆ, ಕಲೆ, ಸಾಹಿತ್ಯ ಕುರಿತ ಪಿ.ಹೆಚ್.ಡಿ ಪದವಿ ಪಡೆದ ಬಂಜಾರ ಜನಾಂಗದ ಅಭ್ಯರ್ಥಿಗಳಿಗೆ ಪುಸ್ತಕ ಪ್ರಕಟಣೆಗಾಗಿ ರೂ. 40,000/- ಗಳ ಫೆಲೋಶಿಪ್/ ಸಹಾಯಧನ (Fellowhip) ನೀಡುವ ಯೋಜನೆಗಾಗಿ ಅರ್ಜಿಯನ್ನು ದಿನಾಂಕ:10.06.2026 ಸಂಜೆ 5.00 ಗಂಟೆಯೊಳಗಾಗಿ ರಿಜಿಸ್ಟ್ರಾರ್, ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ, (Banjara cultural & Bhasha Academy) ಚಾಲುಕ್ಯ ವಿಭಾಗ, 1ನೇ ಮಹಡಿ, ಕನ್ನಡ ಭವನ, ಜೆ.ಸಿ ರಸ್ತೆ, ಬೆಂಗಳೂರು-560002 ಇಲ್ಲಿಗೆ ಪೂರ್ಣ ವಿವರಗಳೊಂದಿಗೆ ಈ ಪತ್ರದೊಂದಿಗೆ ಲಗತ್ತಿಸಿರುವ ಅರ್ಜಿ ನಮೂನೆ ಮತ್ತು ನಿಯಮಗಳಂತೆ ಆರ್ಜಿಯನ್ನು ಸಲ್ಲಿಸುವಂತೆ ಕೋರಲಾಗಿದೆ. ಈ ವಿಷಯವನ್ನು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ದೈನಂದಿನ ಪತ್ರಿಕೆಗಳಲ್ಲಿ ಪ್ರಕಟಿಸಲು ಕೋರಿದೆ. ಅರ್ಜಿ ನಮೂನೆ ಹಾಗೂ ವಿವರಗಳಿಗಾಗಿ ಕಚೇರಿ ವೇಳೆಯಲ್ಲಿ ದೂರವಾಣಿ ಸಂಖ್ಯೆ : 080-29917745 ಅಥವಾ ಇ-ಮೇಲ್ : lambanibhashaacademy@gmail. com ಮೂಲಕ ಮಾಹಿತಿಯನ್ನು ಪಡೆದುಕೊಳ್ಳಲು ಕೋರಿದೆ

