Home Blog Page 47

ನಿಮ್ಮ ಪಕ್ಷಕ್ಕೆ ದಮ್ಮು ತಾಕತ್ ಇದ್ದರೆ ದಲಿತ ನಾಯಕರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿ: ಸಿಎಂ

ಬೆಂಗಳೂರು: ಕಾಂಗ್ರೆಸ್ ಪ್ರಧಾನಮಂತ್ರಿ ಅಭ್ಯರ್ಥಿ ಯಾರಾಗಬೇಕು ಎಂಬ ವಿಚಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೀಡಿರೋ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲರಾಗಿದ್ದಾರೆ,
ಮಾಧ್ಯಮ ಪ್ರಕಟನೆ ಹೊರಡಿಸಿರುವ ಸಿಎಂ ಸಿದ್ದರಾಮಯ್ಯ ಸಕತ್ತಾಗಿಯೇ ಕೌಂಟರ್ ಕೊಟ್ಟಿದ್ದಾರೆ, ತಾನು ಕೂತಿರುವ ಕುರ್ಚಿಯ ನಾಲ್ಕು ಕಾಲುಗಳನ್ನು ಭದ್ರವಾಗಿ ಇಟ್ಟುಕೊಳ್ಳಲಾಗದ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿ ಯಾರಾಗಬೇಂದು ಸಲಹೆ ನೀಡುತ್ತಿರುವುದ ಅವರು ಅಜ್ಞಾನ ಮತ್ತು ಅತ್ಮವಂಚನೆಯನ್ನು ಮಾತ್ರವಲ್ಲ, ದುರಹಂಕಾರವನ್ನೂ ಸೂಚಿಸುತ್ತದೆ ಎಂದು ಸಿಎಂ ಕಿಡಿಕಾರಿದ್ದಾರೆ,
ಹಿಂದುಳಿದ ನಾಯಕರನ್ನು ಬಿಜೆಪಿ ಹೇಗೆ ನಡೆಸಿಕೊಳ್ಳುತ್ತಾ ಬಂದಿದೆ ಎನ್ನುವುದಕ್ಕೆ ರಾಜ್ಯದ ಹಿಂದುಳಿದ ಜಾತಿಗಳ ನಾಯಕ ಎಸ್ ಬಂಗಾರಪ್ಪನವರೇ ಸಾಕ್ಷಿ, ಬಂಗಾರಪ್ಪನವರನ್ನು ನಿಮ್ಮ ತಂದೆ ಬಿ ಎಸ್ ಯಡಿಯೂರಪ್ಪನವರು ಮುಗಿಸಿದರೆ, ಅವರ ಮಗ ಕುಮಾರ್ ಬಂಗಾರಪ್ಪನವರ ರಾಜಕೀಯವನ್ನು ನೀವು ಮುಗಿಸಲು ಹೊರಟಿದ್ದೀರಿ, ಇದರ ವಿವರವನ್ನು ಅವರು ನೀಡುತ್ತಲೇ ಇದ್ದಾರೆ, ಬಂಗಾರಪ್ಪನವರಿರಲಿ, ನರೇಂದ್ರ ಮೋದಿ ಅವರೇ ಇರಲಿ, ಎಲ್ಲಿಯ ವರೆಗೆ ಇವರು ವರ್ಣವ್ಯವಸ್ಧೆ ಆಧಾರಿತ ಹಿಂದುತ್ವದ ಅಜೆಂಡಾಕ್ಕೆ ತಲೆ ಬಗ್ಗಿಸುತ್ತಾ ಇರುತ್ತಾರೋ ಅಲ್ಲಿಯ ವರೆಗೆ ಮಾತ್ರ ಅವರ ತಲೆಗಳು ಸುರಕ್ಷಿತ, ಇದು ಮೋದಿಯವರಿಗೂ ತಿಳಿದಿರಲಿ ಎಂದು ಟಾಂಗ್ ನೀಡಿದ್ದಾರೆ,
ವಿಜಯೇಂದ್ರ ಅವರೇ ದಲಿತ ಮತ್ತು ಹಿಂದುಳಿದ ಜಾತಿಗಳ ಬಗ್ಗೆ ನಿಮಗೆ ಅಷ್ಟೊಂದು ಅಕ್ಕರೆ, ಕಾಳಜಿಗಳಿದ್ದರೆ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಧಾನವನ್ನು ಒಬ್ಬ ದಲಿತ ನಾಯಕನಿಗೆ ಬಿಟ್ಟುಬಿಡಿ, ನಿಮಗೆ ಆ ಹೆಸರನ್ನು ನಾನೇ ಸೂಚಿಸುತ್ತೇನೆ, ದಲಿತ ನಾಯಕ ಗೋವಿಂದಪ್ಪ ಕಾರಜೋಳ ಅವರು ಇತ್ತೀಚೆಗೆ ನಿಮ್ಮ ಸಂಗಕ್ಕೆ ಬಿದ್ದು ಏನೇನೋ ಮಾತನಾಡುತ್ತಿದ್ದಾರೆ, ಅದರೆ ನನ್ನ ಸಹದ್ಯೋಗಿಯಾಗಿದ್ದ ಅವರು ಮೂಲತಃ ಸಜ್ಜನ ವ್ಯಕ್ತಿ, ನಿಮಗೆ ನಿಮ್ಮ ಪಕ್ಷಕ್ಕೆ ದಮ್ಮು ತಾಕತ್ ಇದ್ದಾರೆ ಕಾರಜೋಳ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿ ಅವರನ್ನೇ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿಬಿಡಿ ಎಂದು ಸಿದ್ದರಾಮಯ್ಯ ಸವಾಲ್ ಹಾಕಿದ್ದಾರೆ,

ಬಹಿರಂಗ ಚರ್ಚೆಗೆ ಬನ್ನಿ: ತೇಜಸ್ವಿ ಸೂರ್ಯ ಸವಾಲು

ಬೆಂಗಳೂರು: ಬೆಂಗಳೂರು ಸುರಂಗ ರಸ್ತೆ ಯೋಜನೆ ಸಂಬಂಧ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹಾಗೂ ಆಡಳಿತಾರೂಢ ಕಾಂಗ್ರೆಸ್ ನಡುವಿನ ವಾಕ್ಸಮರ ತೀವ್ರಗೊಂಡಿದೆ.  ಬೆಂಗಳೂರು ಸುರಂಗ ರಸ್ತೆ ಯೋಜನೆ ವಿಚಾರವಾಗಿ ಈ ಹಿಂದೆ ಮಾತನಾಡಿದ್ದ ತೇಜಸ್ವಿ ಸೂರ್ಯ ಅವರು, ಯೋಜನೆಯಿಂದ ಬೆಂಗಳೂರಿಗೆ ಏನೂ ಉಪಯೋಗವಿಲ್ಲ, ಬ್ರಹ್ಮಾಂಡ ಭ್ರಷ್ಟಾಚಾರದಿಂದ ಕೂಡಿದೆ ಎಂದು ಆರೋಪಿಸಿದ್ದರು.

ಇದಕ್ಕೆ ತಿರುಗೇಟು ನೀಡಿದ್ದ ಕಾಂಗ್ರೆಸ್, ಯೋಜನೆ ಸಂಬಂಧಿತ ಪ್ರಮುಖ ಸಲಹೆ ಸೂಚನೆಗಳಿಗೆ ಸದಾ ಸ್ವಾಗತವಿದೆ. ಆದರೆ, ಬ್ರಾಂಡ್ ಬೆಂಗಳೂರಿನ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಕೇವಲ ರಾಜಕೀಯ ದೃಷ್ಟಿಯಿಂದ ನೋಡಬಾರದು ಎಂದು ಹೇಳಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ತೇಜಸ್ವಿ ಸೂರ್ಯ ಅವರು, ಯೋಜನೆ ಸಂಬಂಧ ಬಹಿರಂಗ ಚರ್ಚೆಗೆ ಬರುವಂತೆ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ.ಶಿವಕುಮಾರ್ ಅವರಿಗೆ ಸವಾಲು ಹಾಕಿದ್ದಾರೆ.

125 ಯೂನಿಟ್ ಫ್ರೀ ವಿದ್ಯುತ್ : ನಿತೀಶ್ ಕುಮಾರ್ ಘೋಷಣೆ

ಪಾಟ್ನಾ: ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಿಎಂ ನಿತೀಶ್ ಕುಮಾರ್   ರಾಜ್ಯದ ಜನರಿಗೆ ಉಚಿತ ವಿದ್ಯುತ್ ಯೋಜನೆಯನ್ನು ಘೋಷಣೆ ಮಾಡಿದ್ದಾರೆ.

ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ನಮ್ಮ ರಾಜ್ಯದಲ್ಲಿ ನಾವು ಆರಂಭದಿಂದಲೂ ಕಡಿಮೆ ದರದಲ್ಲಿ ವಿದ್ಯುತ್ ಒದಗಿಸುತ್ತಿದ್ದೇವೆ. ಆದರೆ ಇದೀಗ ಆಗಸ್ಟ್ 1 ರಿಂದ ಜಾರಿಗೆ ಬರುವಂತೆ ರಾಜ್ಯದ ಜನರಿಗೆ 125 ಯೂನಿಟ್‌ವರೆಗೂ ಗೃಹಬಳಕೆ ಉಚಿತ ವಿದ್ಯುತ್ ನೀಡಲಾಗುವುದು. ಗ್ರಾಹಕರು 125 ಯೂನಿಟ್‌ವರೆಗೂ ಯಾವುದೇ ಹಣ ಪಾವತಿಸಬೇಕಿಲ್ಲ ಎಂದು ತಿಳಿಸಿದ್ದಾರೆ

ಉಚಿತ ವಿದ್ಯುತ್ ಯೋಜನೆಯ ಮೂಲಕ ರಾಜ್ಯದ 1.67 ಕೋಟಿ ಕುಟುಂಬಗಳು ಪ್ರಯೋಜನ ಪಡೆಯಲಿದ್ದು, ಮುಂದಿನ ಮೂರು ವರ್ಷಗಳವರೆಗೆ ಈ ಯೋಜನೆ ಜಾರಿಯಲ್ಲಿರುತ್ತದೆ ಎಂದಿದ್ದಾರೆ.

ಈ ಮೂರು ದಿನ ಬೇಕರಿ, ಕಾಂಡಿಮೆಂಟ್ಸ್, ಹಾಲು ಮಾರಾಟ ಬಂದ್

ಬೆಂಗಳೂರು: ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆಯಿಂದ ಬೇಕರಿ, ಚಹಾ ಅಂಗಡಿಗಳು, ಮತ್ತು ಕಾಂಡಿಮೆಂಟ್ಸ್‌ಗೆ 30 ಲಕ್ಷದಿಂದ 1 ಕೋಟಿ ರೂಪಾಯಿಗಳವರೆಗಿನ ಭಾರೀ ತೆರಿಗೆ ಪಾವತಿಯ ನೋಟಿಸ್‌ಗಳು ಜಾರಿಯಾಗಿವೆ. ಈ ನೋಟಿಸ್‌ಗಳಿಂದ ಕಂಗಾಲಾದ ವ್ಯಾಪಾರಿಗಳು ಜುಲೈ 21ರೊಳಗೆ ತೆರಿಗೆ ಪಾವತಿಸದಿದ್ದರೆ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕುವ ಎಚ್ಚರಿಕೆಯನ್ನು ಎದುರಿಸುತ್ತಿದ್ದಾರೆ. ತೆರಿಗೆಯನ್ನು ಮನ್ನಾ ಮಾಡುವಂತೆ ಸರ್ಕಾರ ಮತ್ತು ತೆರಿಗೆ ಇಲಾಖೆಗೆ ಮನವಿ ಸಲ್ಲಿಸಲಾಗಿದ್ದು, 10 ದಿನಗಳ ಗಡುವು ನೀಡಲಾಗಿದೆ. ಒಡ್ಡದಿದ್ದರೆ, ಜುಲೈ 23, 24, ಮತ್ತು 25ರಂದು ಬೇಕರಿ, ಕಾಂಡಿಮೆಂಟ್ಸ್, ಹಾಲು, ಹಾಲಿನ ಉತ್ಪನ್ನಗಳ ಮಾರಾಟ, ಸಿಗರೇಟ್, ಮತ್ತು ಕೆಲವು ತರಕಾರಿ ಅಂಗಡಿಗಳು ಬಂದ್ ಆಗಲಿವೆ.

ಕಾಂಡಿಮೆಂಟ್ಸ್ ಮಾಲೀಕ ಚಿಕ್ಕಯ್ಯ ಈ ಬಗ್ಗೆ ಪ್ರತಿಕ್ರಿಯಿಸಿ, “ನಮ್ಮ ಸಣ್ಣ ಅಂಗಡಿಯಲ್ಲಿ ಟೀ, ಕಾಫಿ, ಬ್ರೆಡ್, ಮತ್ತು ಪೇಪರ್ ಮಾರಾಟ ಮಾಡುತ್ತೇವೆ. ಜಿಎಸ್‌ಟಿಯ ಬಗ್ಗೆ ನಮಗೆ ತಿಳಿದಿಲ್ಲ. ಏಕಾಏಕಿ 23 ಲಕ್ಷ ರೂ. ತೆರಿಗೆ ಕಟ್ಟಲು ಹೇಗೆ ಸಾಧ್ಯ? ಸಾಲವನ್ನೂ ತೀರಿಸಲಾಗದ ಸ್ಥಿತಿಯಲ್ಲಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತೆರಿಗೆ ಇಲಾಖೆಯ ಅಧಿಕಾರಿಗಳು, ಫೋನ್‌ಪೇ ಮತ್ತು ಗೂಗಲ್‌ಪೇನಂತಹ ಡಿಜಿಟಲ್ ಪಾವತಿ ಸಂಸ್ಥೆಗಳಿಂದ ವ್ಯಾಪಾರಿಗಳ ಹಣಕಾಸು ವಿವರಗಳನ್ನು ಪಡೆದಿರುವುದಾಗಿ ತಿಳಿಸಿದ್ದಾರೆ. ಈ ತೆರಿಗೆ ವಿವಾದವು ಯಾವ ರೀತಿಯಲ್ಲಿ ಬಗೆಹರಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಸಚಿವ ಕೆ.ಜೆ. ಜಾರ್ಜ್ ಗೆ ದೊಡ್ಡ ಸಂಕಷ್ಟ

ಬೆಂಗಳೂರು: ಇಂಧನ ಇಲಾಖೆಯಿಂದ ಸ್ವಾರ್ಟ್ ವಿದ್ಯುತ್ ಮೀಟರ್ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ಸಚಿವ ಕೆ.ಜೆ.ಚಾರ್ಜ್ ಗೆ ದೊಡ್ಡ ಆಘಾತ ಎದುರಾಗಿದ್ದು, ಬಿಜೆಪಿ ಶಾಸಕರು ಜಾರ್ಚ್ ವಿರುದ್ಧ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದಾರೆ,
ಸ್ವಾರ್ಟ್ ವಿದ್ಯುತ್ ಮೀಟರ್ ನಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಬಿಜೆಪಿ ಶಾಸಕರು ಈ ಹಿಂದೆ ಡಿವೈಎಸ್‍ಪಿಗೆ ಹಾಗೂ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು, ಆದರೆ ಯಾವುದೇ ಕ್ರಮ ಕೈಗೊಳ್ಳಲಾದ ಹಿನ್ನಲೆ ಇದೀಗ ಕೋರ್ಟ್ ಮೆಟ್ಟಿಲೇರಿದ್ದಾರೆ,
ಬಿಜೆಪಿಯ ಶಾಸಕರಾದ ಸಿ.ಎನ್. ಅಶ್ವತ್ಧನಾರಾಯಣ್, ಎಸ್ ಆರ್ ವಿಶ್ವನಾಥ್ ಹಾಗೂ ಧೀರಜ್ ಮುನಿರಾಜು ಸೇರಿದಂತೆ ಇನ್ನಿತರರು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದು, ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ,
ರಾಜ್ಯದಲ್ಲಿ ಸ್ಮಾಟ್ ಮೀಟರ್ ಅಳವಡಿಕೆಗೆ ಸಂಬಂಧಿಸಿದ ಟೆಂಡರ್ ಕಾನೂನು ಬಾಹಿರವಾಗಿದೆ ಮತ್ತು ಈ ಟೆಂಡರ್ ನೀಡಿಕೆಯಿಂದ ಅಂದಾಜು 16 ಸಾವಿರ ಕೋಟಿ ಮೊತ್ತದ ದುರ್ಲಾಭ ಪಡೆಯಲಾಗುತ್ತಿದೆ ಎಂದು ಆರೋಪಿಸಿ, ಬೆಸ್ಕಾಂ ಅಧ್ಯಕ್ಷ ಹಾಗೂ ಸಚಿವ ಕೆ.ಜಿ.ಜಾರ್ಜ್ ಮತ್ತಿರರ ವಿರುದ್ಧ ಖಾಸಗಿ ದೂರು ದಾಖಲಿಸಲಾಗಿದೆ,

ಇಂದು ಹೈ ವೋಲ್ಟೇಜ್ ಕ್ಯಾಬಿನೆಟ್ ಮೀಟಿಂಗ್..! ಎನ್‍ಟಿಪಿಸಿ ಗೆ ಅನುಮತಿ..?

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವದ ಸಚಿವ ಸಂಪುಟ ಸಭೆ ಇವತ್ತು ನಡೆಯಲಿದ್ದು, ಕೊಪ್ಪಳ, ವಿಜಯಪುರ, ರಾಯಚೂರು ಮತ್ತು ಇತರ ಸ್ಧಳಗಳ ಪ್ರಾಥಮಿಕ ಅಧ್ಯಯನವನ್ನು ಕೈಗೊಳ್ಳಲು ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮಕ್ಕೆ ಸಂಪುಟವು ಅನುಮತಿ ನೀಡುವ ಸಾಧ್ಯತೆಗಳಿವೆ.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಲಿದ್ದು ಸುತ್ತಮುತ್ತಲಿನ ಗ್ರಾಮಸ್ಧರು ವಿರೋಧದ ನಡುವೆಯೂ ಪರಮಾಣು ವಿದ್ಯುತ್ ಸ್ಧಾವರಕ್ಕೆ ಅನುಮೋದನೆ ನೀಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ,
ದೇಶದ ದೀರ್ಘಕಾಲೀನ ಇಂಧನ ಪರಿವರ್ತನಾ ಕಾರ್ಯತಂತ್ರದ ಭಾಗವಾಗಿ ಪರಮಾಣು ಶಕ್ತಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು ಕೇಂದ್ರ ಸರ್ಕಾರವು 2047 ರ ವೇಳೆಗೆ 100 ಗಿಗಾವ್ಯಾಟ್ ಪರಮಾಣು ವಿದ್ಯುತ್ ಸಾಮಥ್ರ್ಯದ ಗುರಿಯನ್ನು ಹೊಂದಿದೆ, ಈ ಹಿನ್ನೆಲೆ ರಾಜ್ಯ ಸರ್ಕಾರ ಅನುಮತಿ ನೀಡೋಕೆ ಸರ್ಕಾರ ಮುಂದಾಗಿದೆ,
ಮತ್ತೊಂದೆಡೆ ಸುರ್ಜೆವಾಲಾ ಈಗಾಗಲೆ ಸಚಿವರ ಜತೆ ಒನ್ ಟು ಒನ್ ಚರ್ಚೆ ನಡೆಸಿದ್ದು, ಭಿನ್ನಮತ ಶಮನಕ್ಕೆ ಸಕಲ ಸರ್ಕಸ್ ನಡೆಸಲಾಗಿದೆ, ಆಂತರಿಕ ಕಚ್ಚಾಟವನ್ನು ಕಡಿಮೆ ಮಾಡಿ ಸುಭದ್ರ ಆಡಳಿತ ನೀಡುವ ಸಂಬಂದವೂ ಚರ್ಚೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ,

VK NEWS DIGITAL

ವೀರಭದ್ರೇಶ್ವರ ಜಯಂತಿ ವೀರಭದ್ರೇಶ್ವರ ರಾಷ್ಟ್ರೀಯ ಪ್ರಶಸ್ತಿ ಪೂರ್ವಭಾವಿ ಸಭೆ

ಬೆಂಗಳೂರು 16-7-2025 -ಇಂದು ಬೆಂಗಳೂರಿನ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಕೇಂದ್ರ ಕಛೇರಿಯಲ್ಲಿ ನಾಡಿನ ಹರ-ಗುರು ಚರಮೂರ್ತಿಗಳ ದಿವ್ಯ ಸಾನಿಧ್ಯದಲ್ಲಿ  2025 ನೇ ಸಾಲಿನ ಶ್ರೀ ವೀರಭದ್ರೇಶ್ವರ ಜಯಂತ್ಯೋತ್ಸವ ಹಾಗೂ ಶ್ರೀ ವೀರಭದ್ರೇಶ್ವರ ರಾಷ್ಟ್ರೀಯ ಪ್ರಶಸ್ತಿ ನೀಡುವ ಕುರಿತು ನವದೆಹಲಿ   ಸೆಪ್ಟೆಂಬರ್ ತಿಂಗಳಿನಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದ ಪೂರ್ವಭಾವಿ ಸಭೆ ಮಾಡಲಾಯಿತು.
VK NEWS DIGITAL :

ಜಿಎಸ್‌ಟಿ ಬರೆ; ಚಿಲ್ಲರೆ ವ್ಯಾಪಾರಿಗಳು ಬೀದಿಗೆ-ಹೋರಾಟಕ್ಕೆ ಸಜ್ಜಾದ ಸಂತ್ರಸ್ತರು

ತಂಬೂರಿ ಬೀಸು ಕಂಸಾಳೆ ಕಲಾವಿದ ಜನಪದ ಗಾಯಕ ಎಂ.ಕೈಲಾಸಮೂರ್ತಿ

ಕನ್ನಡ ಜಾನಪದ ಸಾಹಿತ್ಯ ಕಲೆ ಸಂಸ್ಕøತಿ ಪರಂಪರೆಗೆ ಚಾಮರಾಜನಗರ ಜಿಲ್ಲೆಯ ಕೊಡುಗೆ ಸಾಕಷ್ಟಿದೆ. ಪರಂಪರಾಗತವಾಗಿ ಬಂದ ವೈವಿಧ್ಯ ಜನಪದ ಕಲೆಗಳಲ್ಲಿ ತಂಬೂರಿ ಪದವನ್ನು ಕಿರಿಯ ವಯಸ್ಸಿಗೆ ಮೈಗೂಡಿಸಿಕೊಂಡ ಕಲಾವಿದ ಕೊಳ್ಳೆಗಾಲ ತಾ. ಸಿದ್ದಯ್ಯನಪುರದ ಎಂ ಕೈಲಾಸಮೂರ್ತಿ. ಮಂಟೇಸ್ವಾಮಿ ಜನಪದ ಕಾವ್ಯ ಕೃತಿಯ ಸಂಪಾದಕಿ ಮಳವಳ್ಳಿ ಪಿ.ನಾಗರತ್ನಮ್ಮ ಅವರು ಇವರನ್ನು ನನಗೆ ಪರಿಚಯಿಸಿದರು. ತಮ್ಮೂರಿನ ಮನೆಯಲ್ಲೇ ಜನಪದ ಕಥೆ ಕಾವ್ಯ ಬೀಸು ಕಂಸಾಳೆ ಕೇಂದ್ರ ಪ್ರಾರಂಭಿಸಿ ಕಲಿಯುವ ಕಿರಿಯರಿಗೂ ಕಲಿಸಿಕೊಡುವ ಮೂಲಕ ಕಲೆ ಪ್ರಸರಣದ ರಾಯಭಾರಿಯಾಗಿಯೂ ಕರ್ತವ್ಯ ನಿರತರು. ಇವರ 30 ಶಿಷ್ಯರು ಸ್ವಂತ ಹಾಡುಗಾರಿಕೆ ರೂಢಿಸಿಕೊಂಡಿದ್ದಾರೆ. ಇವರ ತಂಡ ರಾಜ್ಯದ ವಿವಿಧೆಡೆ ತೆರಳಿ ಕಲಾ ಪ್ರದರ್ಶನ ನೀಡುತ್ತಿವೆ. ಮಲ್ಲಿಕಾರ್ಜುನ ಲಕ್ಷ್ಮಿ ದಂಪತಿಗಳ ಪುತ್ರರಾದ ಇವರು ದಿ.1-6-1988ರಂದು ಜನಿಸಿದರು.

7ನೇ ತರಗತಿಗೆ ಶಿಕ್ಷಣಕ್ಕೆ ಶರಣು ಹೇಳಿದರು. ಇವರ ಕುಟುಂಬ ಗುರು ಮಕ್ಕಳ ಪರಂಪರೆ ತತ್ವಪದ ಹಾಡುಗಾರಿಕೆಗೆ ಸೇರಿದವರಾಗಿ ದೊಡ್ಡಪ್ಪ ಮಹದೇವಯ್ಯ ದಮ್ಮಡಿ ಬಾರಿಸುತ್ತಿದ್ದರು. ತಂದೆ ಮಲ್ಲಿಕಾರ್ಜುನ ಅವರ ಜೊತೆ ಸೊಲ್ಲಿಕ್ಕುತ್ತಿದ್ದರು. ತಂದೆ ಸತ್ತವರ ಮನೆಗಳಿಗೆ ಹೋಗಿ ಭಜನೆ ಮಾಡುತ್ತಿದ್ದರು. ನಾನು ಅವರ ಜತೆಗೆ ಸೊಲ್ಲಿಕುತ್ತಿದ್ದೆ. ನಂತರ ನಾನೇ ಪರಿಕರ ಬಳಸಿ ಹಾಡುವುದನ್ನು ಕಲಿತೆ ಎನ್ನುತ್ತಾರೆ. ಕುರಿ ಮೇಯಿಸಲು ಹೊಲಕ್ಕೆ ಹೋದಾಗ ತಮ್ಮೂರಿನ ಬಸಮ್ಮ ಇವರು ಮಂಟೇಸ್ವಾಮಿ, ಮಹದೇಶ್ವರ, ಬಿಳಿಗಿರಿ ರಂಗನಾಥ, ನಂಜುಂಡೇಶ್ವರ, ಚಾಮುಂಡೇಶ್ವರಿ ಕಥೆ ಹಾಡುತ್ತಿದ್ದರು. ಇದನ್ನು ಕೇಳಿ ಕೈಲಾಸಮೂರ್ತಿ ಪ್ರಭಾವಿತರಾದರು. ಈಗ ಇವರೇ ಮಂಟೇಸ್ವಾಮಿ ಕಾವ್ಯ, ಸಿದ್ಧಪ್ಪಾಜಿ ಕಥೆ, ಮೈಲಾಳ ರಾಮನ ಕಥೆ, ನಂಜುಂಡೇಶ್ವರ ಮಲೆ ಮಹದೇಶ್ವರರ ಕಾವ್ಯಗಳನ್ನು ಹಾಡುವಲ್ಲಿ ಹೆಸರುವಾಸಿ. ಮಂಟೇಸ್ವಾಮಿ ಕಾವ್ಯದ ಮೂಲ ಗಾಯನ ಶೈಲಿಯನ್ನೇ ಅನುಸರಿಸುತ್ತಾರೆ.

ಮಳವಳ್ಳಿ ರಾಜೇಬೊಪ್ಪೇಗೌಡನ ಮಠದಲ್ಲಿ ಹಂಪಿ ವಿಶ್ವವಿದ್ಯಾಲಯ ನಡೆಸಿದ ಶ್ರೀ ಮಂಟೇಸ್ವಾಮಿ ಕಥೆ ಕಾವ್ಯ ದಮ್ಮಡಿ ತಾಳ ಕಲಿಕಾ ತರಬೇತಿಯಲ್ಲಿ ಭಾಗವಹಿಸಿ ಪೂರಿಗಾಲಿ ಮಹದೇವಣ್ಣರಿಂದ ಇನ್ನು ಹೆಚ್ಚಿನದಾಗಿ ಕಲಿತ್ತಿದ್ದಾರೆ. ಮಲೆ ಮಹದೇಶ್ವರ ಬೆಟ್ಟದಲ್ಲಿ 15 ವರ್ಷ ದೊಡ್ಡಭೂವಳ್ಳಿ ಮಹೇಶ್ ಹಾಗೂ ಇತರರೊಂದಿಗೆ ವೇದಿಕೆಗಳಲ್ಲಿ ಹಾಡಿದ್ದಾರೆ. 2003ರಿಂದ ತಮ್ಮದೇ ತಂಡ ಕಟ್ಟಿಕೊಂಡು ನಾಡಿನಾದ್ಯಂತ ತಿರುಗಿದ್ದಾರೆ.

ರಾಜ್ಯ ಮಟ್ಟದ ಯುವ ಜನ ಮೇಳ ಪುತ್ತೂರು, 2013ರಲ್ಲಿ ಅಳ್ವಾಸ್ ವಿಶ್ವ ನುಡಿಸಿರಿ ವಿರಾಸಾತ್ ಮೂಡುಬಿದರೆ ಉತ್ಸವದಲ್ಲಿ ಭಾಗವಹಿಸಿದ್ದಾರೆ. ಮುಂಬೈ, ಚೆನ್ನೈ, ಪುದುಚೇರಿ, ಕೇರಳ, ಆಂದ್ರಪ್ರದೇಶ, ತೆಲಂಗಾಣ, ದೆಹಲಿ ಇಲ್ಲಿನ ಸ್ಫರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಕರ್ನಾಟಕ ಅನೇಕ ಕಡೆಗಳಲ್ಲಿ ಇವರ ಕಂಚಿನ ಕಂಠ, ತನ್ಮಯತೆಯಿಂದ ನುಡಿಸುವ ತಂಬೂರಿಯ ನಿನಾದ ಅನುರಣಿಸಿವೆ.

ಚಿಕ್ಕಲ್ಲೂರು ಜಾತ್ರೆ, ಕಪ್ಪಡಿ, ಮಲೆ ಮಹದೇಶ್ವರ ಬೆಟ್ಟದ ಜಾತ್ರೆ, ಸುತ್ತೂರು ಜಾತ್ರೆಗಳಲ್ಲಿ ಸಿದ್ಧಪ್ಪಾಜಿ, ಮಂಟೇಸ್ವಾಮಿ, ಮಲೆಮಹದೇಶ್ವರ ಗೀತೆಗಳನ್ನು ಹಾಡಿದ್ದಾರೆ. ತಂಬೂರಿ ಮತ್ತು ಕಂಸಾಳೆ ನೃತ್ಯ ಪ್ರದರ್ಶಿಸಿದ್ದಾರೆ. ಮದುವೆ ಶುಭ ಸಮಾರಂಭಗಳು, ಗಣೇಶ ಉತ್ಸವ,

ಮೃತರ 11ನೇ ದಿನದ ಕಾರ್ಯಕ್ರಮದಲ್ಲಿ ಹಾಡುತ್ತಾರೆ. ಇವರಿಗೆ 2016-17ನೇ ಸಾಲಿನಲ್ಲಿ ಜಿಲ್ಲಾ ಯುವ ಪ್ರಶಸ್ತಿ ಬಂದಿದೆ. ಕನ್ನಡ ಜಾನಪದ ಪರಿಷತ್ ಗೋವಿಂದರಾಜನಗರ ರಾಜ್ಯ ಪ್ರಥಮ ಕನ್ನಡ ಜಾನಪದ ಸಮ್ಮೇಳನ ದಶಮಾನೋತ್ಸವ ಜಾನಪದ ಗೌರವ ಪ್ರಶಸ್ತಿ 2025 ದೊರಕಿದೆ.
ಗೊರೂರು ಅನಂತರಾಜು, ಹಾಸನ.
ಮೊ:9449462879

VK NEWS DIGITAL :

ರೌಡಿಶೀಟರ್​ ಬಿಕ್ಲು ಶಿವ ಹತ್ಯೆ ಪ್ರಕರಣ: ಶಾಸಕ ಬೈರತಿ ಬಸವರಾಜ್ ವಿರುದ್ಧ ಎಫ್ಐಆರ್

ಮಾಜಿ ಸಚಿವ ಬಿಜೆಪಿ ಶಾಸಕ ಭೈರತಿ ಬಸವರಾಜ್ ವಿರುದ್ಧ ಎಫ್ಐಆರ್ ದಾಖಲು

ಬೆಂಗಳೂರು: ಬೆಂಗಳೂರಿನ ರೌಡಿಶೀಟರ್ ಶಿವಕುಮಾರ್ ಅಲಿಯಾಸ್ ಬಿಕ್ಲು ಶಿವ ಬರ್ಬರ ಹತ್ಯೆ ಹಿಂದೆ ಮಾಜಿ ಸಚಿವ ಬಿಜೆಪಿ ಶಾಸಕ ಭೈರತಿ ಬಸವರಾಜ್ ಪಾತ್ರದ ಆರೋಪದ ಮೇಲೆ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಜಮೀನಿನ ವಿಚಾರವಾಗಿ ರೌಡಿಶೀಟರ್ ಶಿವಪ್ರಕಾಶ್ ಹಾಗೂ ಭೈರತಿ ಬಸವರಾಜ್​ ಬೆಂಬಲಿಗರ ನಡುವೆ ಗಲಾಟೆ ನಡೆದಿದೆ ಎಂಬ ಆರೋಪವಿದೆ.

ಬೆಂಗಳೂರಿನ ಭಾರತೀ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದ್ದು, ಮಾಜಿ ಸಚಿವ ಭೈರತಿ ಬಸವರಾಜ್ ಎ5 ಆರೋಪಿ ಎಂದು ಉಲ್ಲೇಖಿಸಿಲಾಗಿದೆ. ಕಳೆದ ರಾತ್ರಿ ರೌಡಿಶೀಟರ್ ಶಿವಕುಮಾರ್ ಅಲಿಯಾಸ್ ಬಿಕ್ಲು ಶಿವು ಕೊಲೆ ನಡೆದಿದೆ. ಕೊಲೆಗೆ ಭೈರತಿ ಬಸವರಾಜ್ ಕುಮ್ಮಕ್ಕು ನೀಡಿದ್ದಾರೆ ಎಂದು ರೌಡಿಶೀಟರ್ ಶಿವಕುಮಾರ್ ತಾಯಿ ವಿಜಯಲಕ್ಷ್ಮಿ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿದೆ.

5 ಲಕ್ಷ ರೂ. ಉಚಿತ ಆರೋಗ್ಯ ವಿಮೆ: ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

ಕೇಂದ್ರ ಸರ್ಕಾರವು ದೇಶದ ಹಿರಿಯ ನಾಗರಿಕರಿಗೆ ಆಯುಷ್ಮಾನ್ ಭಾರತ್ ಯೋಜನೆಯಡಿ ಒಂದು ದೊಡ್ಡ ಉಡುಗೊರೆಯನ್ನು ಘೋಷಿಸಿದೆ. 70 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಇನ್ಮುಂದೆ 5 ಲಕ್ಷ ರೂಪಾಯಿಗಳವರೆಗೆ ಉಚಿತ ಆರೋಗ್ಯ ವಿಮೆ ಲಭ್ಯವಾಗಲಿದೆ. ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಶೀಘ್ರದಲ್ಲೇ ಈ ಯೋಜನೆ ಜಾರಿಗೆ ಬರಲಿದೆ.

ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಹೊಸ ಬದಲಾವಣೆಯನ್ನು ತರಲಾಗಿದೆ. ಈ ಯೋಜನೆಯಡಿ 70 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಹಿರಿಯ ನಾಗರಿಕರಿಗೆ 5 ಲಕ್ಷ ರೂಪಾಯಿಗಳವರೆಗೆ ಉಚಿತ ಆರೋಗ್ಯ ಸೇವೆ ಒದಗಿಸಲಾಗುವುದು.

ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಈ ಕುರಿತು ಮಾತನಾಡಿ, “ಆಯುಷ್ಮಾನ್ ಭಾರತ್ ಯೋಜನೆಯಿಂದ ಈಗಾಗಲೇ ದೇಶಾದ್ಯಂತ 4.5 ಕೋಟಿ ಕುಟುಂಬಗಳು ಪ್ರಯೋಜನ ಪಡೆದುಕೊಳ್ಳುತ್ತಿವೆ. ಇನ್ಮುಂದೆ, ಆದಾಯ ಅಥವಾ ಸಾಮಾಜಿಕ ಸ್ಥಾನಮಾನವನ್ನು ಲೆಕ್ಕಿಸದೆ, 70 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಹಿರಿಯ ನಾಗರಿಕರು ಈ ಆರೋಗ್ಯ ವಿಮೆಯ ಲಾಭವನ್ನು ಪಡೆಯಬಹುದು” ಎಂದು ತಿಳಿಸಿದ್ದಾರೆ,

ಈ ಯೋಜನೆಯಡಿ ಹಿರಿಯ ನಾಗರಿಕರಿಗೆ ವಿಶಿಷ್ಟ ಗುರುತಿನ ಕಾರ್ಡ್‌ ನೀಡಲಾಗುವುದು. ಈ ಕಾರ್ಡ್‌ನೊಂದಿಗೆ ವರ್ಷಕ್ಕೆ 5 ಲಕ್ಷ ರೂಪಾಯಿಗಳವರೆಗೆ ಆರೋಗ್ಯ ವಿಮೆಯ ಪ್ರಯೋಜನವನ್ನು ಪಡೆಯಬಹುದು.