ರಾಹುಲ್ ಗಾಂಧಿಗೆ ಹಿಮಂತ ಶರ್ಮಾ ತಿರುಗೇಟು: “ಸಾಕ್ಷ್ಯ ಸಿಕ್ಕರೆ ಜೈಲಿಗೆ ಗಾಂಧಿಯವರನ್ನೇ ಕಳುಹಿಸುತ್ತೇನೆ”
ತುಮಕೂರು ಮಹಾನಗರ ಪಾಲಿಕೆಯಿಂದ ದೇಶದಲ್ಲೇ ಮೊತ್ತಮೊದಲ ‘ಕಸ ಡೆಲಿವರಿ ಬಾಯ್ಸ್’ ಸೇವೆ
ತುಮಕೂರು, ಕಲ್ಪತರ ನಾಡು, ಇತ್ತೀಚೆಗೆ ಮತ್ತೊಂದು ವಿಶಿಷ್ಟ ಹೆಜ್ಜೆ ಹಾಕಿ ಇಡೀ ದೇಶದ ಗಮನ ಸೆಳೆದಿದೆ. ಈ ಬಾರಿ ತುಮಕೂರು ಮಹಾನಗರ ಪಾಲಿಕೆ ಹೊಸ ಪ್ರಯೋಗಕ್ಕೆ ಮುಂದಾಗಿ ‘ಡೆಲಿವರಿ ಬಾಯ್ಸ್’ ಮಾದರಿಯ ಕಸ ವಿಲೇವಾರಿ ಸೇವೆ ಆರಂಭಿಸಿರುವುದು ವಿಶೇಷ.
ಸ್ವಿಗ್ಗಿ-ಜೋಮ್ಯಾಟೋ ಶೈಲಿಯ ಆನ್‌ಲೈನ್ ಕಸ ಸಂಗ್ರಹಣೆ ಸೇವೆ
ದೇಶದ ಇತಿಹಾಸದಲ್ಲಿ ಇದೇ ಮೊತ್ತಮೊದಲ ಬಾರಿ ಒಂದು ಮಹಾನಗರ ಪಾಲಿಕೆ ಆನ್‌ಲೈನ್ ಕಸ ವಿಲೇವಾರಿ ಸೇವೆ ಆರಂಭಿಸಿದೆ. ಜೋಮ್ಯಾಟೋ, ಸ್ವಿಗ್ಗಿ ಮಾದರಿಯಂತೆ, ಈ ಸೇವೆ ಮೂಲಕ ಸಾರ್ವಜನಿಕರು ಆನ್‌ಲೈನ್‌ನಲ್ಲಿ ಬುಕ್ ಮಾಡಿದರೆ, ಡೆಲಿವರಿ ಬಾಯ್ಸ್ ತಮ್ಮ ಮನೆಗೆ ಬಂದು ಕಸವನ್ನು ವಿಲೇವಾರಿ ಮಾಡುತ್ತಾರೆ.
ಬೈಕ್ ಮೂಲಕ ಸೇವೆ – ತಕ್ಷಣ ಸೇವೆಗೊಳಗಾಗುವ ಸುಲಭ ವಿಧಾನ
ಪ್ರಾಯೋಗಿಕ ಹಂತದಲ್ಲಿ 10 ಜನ ಡೆಲಿವರಿ ಬಾಯ್ಸ್‌ಗಳನ್ನು ತೊಡಗಿಸಿ, ಬೈಕ್ ಮೂಲಕ ಮನೆ ಮನೆಗೆ ತೆರಳಿ ಕಸ ಸಂಗ್ರಹಣೆ ಆರಂಭಿಸಲಾಗಿದೆ. ಈ ಡೆಲಿವರಿ ಬಾಯ್ಸ್ ಕಡಿಮೆ ಅವಧಿಯಲ್ಲಿ ಮನೆಗೆ ಬಂದು, ಕಸವನ್ನು ಬಾಚಿ ಕಸದ ಲಾರಿ ಅಥವಾ ಆಟೋಗೆ ವಿಲೇವಾರಿ ಮಾಡುತ್ತಿದ್ದಾರೆ.
ಆಧುನಿಕ ಆ್ಯಪ್ ಸೇವೆ – ಬುಕ್ಕಿಂಗ್ ಮಾಡಿದರೆ ಮನೆಯಲ್ಲೇ ಸೇವೆ
ಪಾಲಿಕೆ ಇದೀಗ ಆನ್‌ಲೈನ್ ಆ್ಯಪ್ ಮೂಲಕ ಬುಕ್ಕಿಂಗ್ ವ್ಯವಸ್ಥೆ ಆರಂಭಿಸಿದೆ. ಬಾಡಿಗೆ ಮನೆಗಳಲ್ಲಿ ತಂಗಿರುವವರು, ನೌಕರಿಯ ಮಹಿಳೆಯರು ಹಾಗೂ ಬ್ಯಾಚುಲರ್ಸ್‌ಗಾಗಿ ಈ ಸೇವೆ ಬಹುಪಯೋಗಿಯಾಗಿ ಪರಿಣಮಿಸುವ ಸಾಧ್ಯತೆ ಇದೆ.
ಹೆಚ್ಚುತ್ತಿರುವ ಕಸದ ಸಮಸ್ಯೆಗೆ ಹೊಸ ಪರಿಹಾರ
ಈ ಹೊಸ ಪ್ರಯತ್ನದ ಮೂಲಕ ಬೀದಿಗಳಲ್ಲಿ ಕಸ ಎಸೆಯುವ ನಿಟ್ಟನ್ನು ತಡೆಯಲು ಪಾಲಿಕೆ ಸಜ್ಜಾಗಿದೆ. ಸಂಗ್ರಹಿತ ಕಸವನ್ನು ಡಂಪಿಂಗ್ ಯಾರ್ಡ್‌ಗಳಿಗೆ ಅಥವಾ ನಿಯೋಜಿತ ವಾಹನಗಳಿಗೆ ವರ್ಗಾಯಿಸಲಾಗುತ್ತಿದೆ.
ಪೀಣ್ಯದಲ್ಲಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಹೋಟೆಲ್‌ಗೆ ಡಿಕ್ಕಿ – ಐವರು ಗಾಯ, ಮಗು ಗಂಭೀರ
ಸಾರಿಗೆ ನೌಕರರಿಗೆ ಸರ್ಕಾರ ಶಾಕ್
ಬೆಂಗಳೂರು, ಜುಲೈ 18 — ವೇತನ ಹೆಚ್ಚಳ ಮತ್ತು ಬಾಕಿ ಭತ್ಯೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕಾಲಿಟ್ಟಿದ್ದ ಸಾರ್ವಜನಿಕ ಸಾರಿಗೆ ನೌಕರರಿಗೆ, ಕರ್ನಾಟಕ ಸರ್ಕಾರದಿಂದ ಎಸ್ಎಮ್ಮಾ (ESMA) ಜಾರಿಯಿಂದ ಕಠಿಣ ಎಚ್ಚರಿಕೆ ನೀಡಲಾಗಿದೆ.
KSRTC, BMTC, NWKRTC, KKRTC ಸೇರಿ ನಾಲ್ಕು ನಿಗಮಗಳ ನೌಕರರು ಆಗಸ್ಟ್ 5 ರಿಂದ ಮುಷ್ಕರ ನಡೆಸಲು ತೀರ್ಮಾನಿಸಿದ್ದರು. ಆದರೆ Essential Services Maintenance Act (ESMA) ಜಾರಿಗೆ ತಂದ ಸರ್ಕಾರ, ಮುಷ್ಕರದ ಯೋಜನೆಗೆ ಬ್ರೇಕ್ ಹಾಕಿದೆ.
ಮುಖ್ಯ ಬೇಡಿಕೆಗಳು ಯಾವುವು?
-
38 ತಿಂಗಳ ವೇತನ ಹೆಚ್ಚಳ ಬಾಕಿ
-
ಬಾಕಿ ಭತ್ಯೆಗಳ ಬಿಡುಗಡೆ
-
ಸ್ಥಾಯಿ ಕೆಲಸ, ಬಡ್ತಿ, ಪಿಂಚಣಿ ಸೌಲಭ್ಯಗಳ ನಿಷ್ಪತ್ತಿ
ಈ ಬೇಡಿಕೆಗಳನ್ನು ಮುಂದುವರಿಸುತ್ತಿದ್ದ ನೌಕರರ ಸಂಘಟನೆಗಳು ಜಂಟಿ ಕ್ರಿಯಾ ಸಮಿತಿ ರೂಪಿಸಿ, ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದವು.
ಎಸ್ಮಾ ಅಂದರೆ ಏನು?
ಎಸ್ಮಾ (Essential Services Maintenance Act) ಎಂಬುದು ಸಾರ್ವಜನಿಕ ಸೇವೆಗಳಿಗೆ ಅಗತ್ಯವಾದ ಕೆಲಸಗಳು ನಿರ್ಬಂಧಿತರಾಗದಂತೆ ಕಾಯ್ದಿರಿಸುವ ಕಾನೂನು. ಇದು ಜಾರಿಗೆ ಬಂದಾಗ, ಯಾವುದೇ ಮುಷ್ಕರ, ಧರಣಿ, ಅಥವಾ ಹೋರಾಟದ ರೂಪದಲ್ಲಿನ ಸೇವಾ ವ್ಯತ್ಯಯ ಕಾನೂನಾತ್ಮಕವಾಗಿರದು.
ಈ ಕಾಯ್ದೆ ಉಲ್ಲಂಘಿಸಿದರೆ:
-
ವಾರಂಟ್ ಇಲ್ಲದೇ ಬಂಧನ
-
ಗರಿಷ್ಠ 6 ತಿಂಗಳು ಜೈಲು
-
ವೇತನ, ಬಡ್ತಿ, ಸವಲತ್ತುಗಳ ಕಳೆ
-
ರಾಜ್ಯ ಸರ್ಕಾರದ ಸಡಿಲತೆಯಿಲ್ಲದ ನಿಲುವು
ರಾಜ್ಯ ಸರ್ಕಾರದ ಮೂಲಗಳ ಪ್ರಕಾರ, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸ್ಥಗಿತಗೊಳ್ಳದಂತೆ ಎಸ್ಮಾ ಜಾರಿಗೆ ತೀರ್ಮಾನಿಸಲಾಗಿದೆ. ಯಾವುದೇ ಹಠದ ಹೋರಾಟವೂ ಸಾರ್ವಜನಿಕರಿಗೆ ತೊಂದರೆಯಾದರೆ, ಕಾನೂನು ಕ್ರಮ ಅನಿವಾರ್ಯ ಎಂಬ ಸ್ಪಷ್ಟ ಸಂದೇಶವಿದೆ.
ಸಿಎಂ ಬಳಿ ಕ್ಷಮೆ ಕೇಳಿದ ಫೇಸ್ಬುಕ್
ಬೆಂಗಳೂರು: ಮೆಟಾ ವೇದಿಕೆಗಳಲ್ಲಿ ಕನ್ನಡ ಸ್ವಯಂ ಅನುವಾದದಲ್ಲಿ ಗಂಭೀರ ದೋಷಗಳಿಂದಾಗಿ ವಿಷಯದ ನೈಜ ಅರ್ಥವೇ ವಿರೂಪಗೊಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಬೆನ್ನಲ್ಲೇ, ಫೇಸ್‌ಬುಕ್‌ನ ಮಾತೃ ಸಂಸ್ಥೆಯಾದ ಮೆಟಾ ಕ್ಷಮೆಯಾಚಿಸಿದೆ. “ಅನುವಾದದ ದೋಷಕ್ಕೆ ಕಾರಣವಾದ ಅಂಶಗಳನ್ನು ಸರಿಪಡಿಸಿದ್ದೇವೆ ಮತ್ತು ಈ ಘಟನೆಗಾಗಿ ಕ್ಷಮೆಯಾಚಿಸುತ್ತೇವೆ,” ಎಂದು ಮೆಟಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ, ಮೆಟಾದ ಕನ್ನಡ ಸ್ವಯಂ ಅನುವಾದದ ದೋಷಗಳು ಸತ್ಯಾಂಶಗಳನ್ನು ವಿರೂಪಗೊಳಿಸುತ್ತಿವೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. “ಕನ್ನಡ ವಿಷಯಗಳ ತಪ್ಪಾದ ಅನುವಾದವು ಬಳಕೆದಾರರಲ್ಲಿ ತಪ್ಪುಗ್ರಹಿಕೆಗೆ ಕಾರಣವಾಗುತ್ತಿದೆ. ಇದು ಅತ್ಯಂತ ಅಪಾಯಕಾರಿ,” ಎಂದು ಅವರು ಎಚ್ಚರಿಸಿದ್ದರು.
ಮೆಟಾ ತನ್ನ ಅನುವಾದ ವ್ಯವಸ್ಥೆಯಲ್ಲಿನ ದೋಷಗಳನ್ನು ಗುರುತಿಸಿ, ಸರಿಪಡಿಸಿರುವುದಾಗಿ ತಿಳಿಸಿದೆ. ಕನ್ನಡ ಭಾಷೆಯ ಸ್ವಯಂ ಅನುವಾದದಲ್ಲಿ ಗುಣಮಟ್ಟವನ್ನು ಸುಧಾರಿಸಲು ಕಂಪನಿಯು ಕೆಲಸ ಮಾಡುತ್ತಿದೆ ಎಂದು ಭರವಸೆ ನೀಡಿದೆ. ಈ ಘಟನೆಯಿಂದ ಕನ್ನಡಿಗರ ಭಾವನೆಗಳಿಗೆ ಧಕ್ಕೆಯಾಗಿರುವುದಕ್ಕೆ ಕ್ಷಮೆಯಾಚಿಸಿರುವ ಮೆಟಾ, ಭವಿಷ್ಯದಲ್ಲಿ ಇಂತಹ ತಪ್ಪುಗಳು ಪುನರಾವರ್ತನೆಯಾಗದಂತೆ ಎಚ್ಚರಿಕೆ ವಹಿಸುವುದಾಗಿ ತಿಳಿಸಿದೆ
ಅನಿಕಾ ವಿನಯ್ ಕುಲಕರ್ಣಿಯ ಅದ್ಭುತ ರಂಗಪ್ರವೇಶ
VK NEWS DIGITAL
ಪ್ರಾಮಾಣಿಕ ಕರ್ತವ್ಯದಿಂದ ಜನಮನ ಗೆದ್ದ ವಿ.ಪೂರ್ಣಿಮಾ: ತಹಶೀಲ್ದಾರ್ ಆಗಿ ಮಂಚೇನಹಳ್ಳಿ ತಾಲೂಕಿಗೆ ವರ್ಗಾವಣೆ
ಶಿಡ್ಲಘಟ್ಟ : ತಾಲೂಕಿಗೆ ತಹಶೀಲ್ದಾರ್ ಗ್ರೇಡ್ 2 ಆಗಿ ವರ್ಷಗಳಿಂದ ದಕ್ಷತೆಯಿಂದ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ವಿ.ಪೂರ್ಣಿಮಾ ರವರನ್ನು ಗ್ರೇಡ್ 1 ತಹಶೀಲ್ದಾರ್ ಆಗಿ ಮಂಚೇನಹಳ್ಳಿ ತಾಲೂಕಿಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಶಿಡ್ಲಘಟ್ಟ ತಾಲೂಕು ವ್ಯಾಪ್ತಿಯ ನಾಲ್ಕೂ ಹೋಬಳಿಗಳಲ್ಲೂ ಎಲೆ ಮರಿ ಕಾಯಿಯಂತೆ ಖುದ್ದು ತಾವೇ ಪಿಂಚಣಿ ಆದಾಲತ್ ಮೂಲಕ ಹಿರಿಯ ನಾಗರೀಕರಿಗೆ ಪಿಂಚಣಿ ಸೇರಿದಂತೆ, ಸುಮಾರು ವರ್ಷಗಳಿಂದ ಸ್ಥಗಿತಗೊಂಡಿದ್ದ ವೃದ್ಧಾಪ್ಯದ ವೇತನ, ವಿವಿಧ ಮಾಶಾಸನ ಹಾಗೂ ಸರ್ಕಾರದ ಯೋಜನೆಗಳ ಕುರಿತು ಹಳ್ಳಿಗಳಲ್ಲಿ ಅರಿವು ಮೂಡಿಸುವ ಮೂಲಕ ಗ್ರಾಮೀಣ ಭಾಗದ ಹಿರಿಯ ನಾಗರೀಕರ ವಿಶ್ವಾಸವನ್ನು ಗಳಿಸಿದ್ದ ಅಧಿಕಾರಿಯಾಗಿದ್ದರು ಜೊತೆಗೆ ಸರ್ಕಾರಿ ಕೆಲಸ ದೇವರ ಕೆಲಸ ಎಂದೇ ಪ್ರಾಮಾಣಿಕ ತಾಲೂಕು ಅಭಿವೃದ್ಧಿಯಲ್ಲಿ ಮಗ್ನರಾಗಿರುವ ಪೂರ್ಣಿಮಾ ಅವರು ಅದಾಲತ್ ಕಾರ್ಯಕ್ರಮಗಳಲ್ಲಿ ಅನೇಕ ಮಹಿಳೆಯರಿಗೆ ಹಾಗೂ ವೃದ್ಧರಿಗೆ ಪಿಂಚಣಿ ಸೌಲಭ್ಯಗಳನ್ನು ಒದಗಿಸುವುದಲ್ಲದೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಇನ್ನಿತರೆ ಪ್ರಮಾಣ ಪತ್ರಗಳನ್ನು ನೀಡುವಲ್ಲಿ ಪ್ರಾಮಾಣಿಕವಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.
ಸರ್ಕಾರದ ಭೂ ಸುರಕ್ಷಾ ಯೋಜನೆಯಲ್ಲಿ ಎ ಮತ್ತು ಬಿ ವರ್ಗದ ಭೂ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ತಹಶೀಲ್ದಾರ್ ಕಚೇರಿಯಲ್ಲಿ ವಿತರಣೆ ಮಾಡುವಲ್ಲಿ ವಿಶೇಷವಾಗಿ ಗಮನ ಸೆಳೆದರೂ
ಜಾತಿ ಮತ್ತು ಆದಾಯ ಪತ್ರ ಹಾಗೂ ವಿವಿಧ ಕಂದಾಯ ದಾಖಲೆಗಳನ್ನು ಪಡೆಯಲು ಪ್ರತಿ ನಿತ್ಯ ಸಾವಿರಾರು ಜನರು ತಾಲೂಕು ಕಚೇರಿಯತ್ತ ಅಲೆದಾಡಬೇಕಿತ್ತು ಆದರೆ ಇವರು ಸಾರ್ವಜನಿಕರ ಅಲೆದಾಟವನ್ನು ತಪ್ಪಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ವಿಭಿನ್ನವಾಗಿ ತಮ್ಮ ಅವಧಿಯಲ್ಲಿ ಕಡಿಮೆ ಸಮಯದಲ್ಲಿ ತ್ವರಿತ ದಾಖಲೆಗಳನ್ನು ಪಡೆಯಲು ಸಮಯದ ವೇಳಾ ಪಟ್ಟಿಯನ್ನು ನಿಗಧಿ ಮಾಡುವ ಮೂಲಕ ವ್ಯವಸ್ಥಿತವಾಗಿ ಆಡಳಿತ ಸುಧಾರಣೆಯನ್ನು ಮಾಡಿದರು ಒಟ್ಟಾರೆ ತಹಸೀಲ್ದಾರ್ ಗ್ರೇಡ್ 2 ಆಗಿ ತಮ್ಮ ಕರ್ತವ್ಯವನ್ನು ಅತ್ಯಂತ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಣೆ ಮಾಡುವ ಮೂಲಕ ಜನಸ್ನೇಹಿ ವಾತಾವರಣವನ್ನು ಸೃಷ್ಟಿಸಿದ ಇವರ ಕಾರ್ಯವೈಖರಿಗೆ ಮೆಚ್ಚುಗೆಯ ಜೊತೆಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ವರದಿ : ಚಿಕ್ಕತೇಕಹಳ್ಳಿ ಡಿ ಶಿವಕುಮಾರ್ ಶಿಡ್ಲಘಟ್ಟ
VK NEWS DIGITAL :
ಗೂಗಲ್ ಭಾಷಾಂತರ ಎಡವಟ್ಟು-ಮೆಟಾಗೆ ಪತ್ರ ಬರೆದ ಸಿದ್ದರಾಮಯ್ಯ!
ಬೆಂಗಳೂರು: ಆನ್ಲೈನ್ ನಲ್ಲಿ ಟ್ರಾನ್ಸ್ಲೇಷನ್ ಯಡವಟ್ಟು ಇತ್ತೀಚೆಗೆ ಜಾಸ್ತಿಯಾಗಿದೆ, ಇದೀಗ ಸಿಎಂ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ಕ್ಯಾಪ್ಷನ್ ನಲ್ಲೇ ಅವಾಂತರ ಸೃಷ್ಟಿಯಾಗಿದ್ದು, ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲರಾಗಿದ್ದಾರೆ.
ಮೆಟಾ ಸಂಸ್ಧೆಯ ಗೂಗಲ್ ಟ್ರಾನ್ಸ್ಲೇಷನ್ ಎಡವಟ್ಟು ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ,
ದಿವಂಗತ ಸರೋಜಾದೇವಿ ಅಂತಿಮ ದರ್ಶನಕ್ಕೆ ತೆರಳಿದ್ದ ಸಿಎಂ ಸಿದ್ದರಾಮಯ್ಯ ಸುದ್ದಿಯ ಪೋಸ್ಟ್ ಫೇಸ್‍ಬುಕ್ ನಲ್ಲಿ ಪೋಸ್ಟ್ ಹಾಕಿದರು,
ಟ್ರಾನ್ಸ್ಲೇಷನ್ ಆಗುವ ವೇಳೆ Chief Minister siddarmaiah passed away yesterday multlingual star, Senior Actress B Sarojadevi tood darshan of Sarojadevi’s body and paid his last respects ಎಂದು ಪೋಸ್ಟ್ ಆಗಿದೆ,
ಇಡೀ ಕ್ಯಾಪ್ಷನ್ ಪೂರ್ತಿ ತಪ್ಪಾಗಿದ್ದು ಪೋಸ್ಟ್ ಓದಿದಿ ಪ್ರತಿಯೊಬ್ಬರು ಕಕ್ಕಾಬಿಕ್ಕಿ ಆಗಿದ್ದಾರೆ, ಮೆಟಾ ಸಂಸ್ಧೆಯ ತಂತ್ರಜ್ಞಾನ ಯಡವಟ್ಟು ಸಂಬಂಧ ಕಮೆಂಟ್ಸ್ ಮಾಡಿ ನೆಟ್ಟಿಗರು ಕಾಲೆಳೆದಿದ್ದಾರೆ,
ಟ್ರಂಪ್ ಮಾತಿಗೆ ಬಗ್ಗಿದ ಕೋಕಾ-ಕೋಲಾ!
ವಾಷಿಂಗ್ಟನ್: ಜಾಗತಿಕವಾಗಿ ತಂಪು ಪಾನೀಯಕ್ಕೆ ಹೆಸರುವಾಸಿಯಾಗಿರುವ ಕೋಕಾ-ಕೋಲಾ ಈಗ ತನ್ನ ಉತ್ಪನ್ನಗಳಿಗೆ ಕೃತಕ ಸಕ್ಕರೆಯ ಬದಲು ನೈಜ ಕಬ್ಬಿನ ಸಕ್ಕರೆಯನ್ನೇ ಬಳಸಲು ಒಪ್ಪಿಕೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ, ತಮ್ಮ ಸಲಹೆಯ ಮೇರೆಗೆ ಕೋಕಾ-ಕೋಲಾ ಕಬ್ಬಿನ ಸಕ್ಕರೆಯನ್ನೇ ಬಳಸಲು ಒಪ್ಪಿಕೊಂಡಿದ್ದು, ಇದು ಒಳ್ಳೆಯ ನಡೆ ಎಂದು ಟ್ರಂಪ್ ಕಂಪನಿಯನ್ನು ಶ್ಲಾಘಿಸಿದ್ದಾರೆ,
ಟ್ರುತ್ ಸೋಷಿಯಲ್‍ನಲ್ಲಿ ಬರೆದಿರುವ ಟ್ರಂಪ್ ನಾನು ಯುನೈಟೆಡ್ ಸ್ಟೇಟ್ಸ್ ನಲ್ಲಿ ಕೋಕ್ ಪಾನೀಯದಲ್ಲಿ ನಿಜವಾದ ಕಬ್ಬಿನ ಸಕ್ಕರೆಯನ್ನು ಬಳಸುವ ಬಗ್ಗೆ ಕೋಕಾ-ಕೋಲಾ ಕಂಪನಿ ಜೊತೆ ಮಾತನಾಡುತ್ತಿದ್ದೇನೆ, ನನ್ನ ಸಲಹೆಯನ್ನು ಕಂಪನಿ ಕೂಡಾ ಒಪ್ಪಿಕೊಂಡಿದೆ, ಕೋಕಾ-ಕೋಲಾದ ನಿರ್ಧಾರಕ್ಕೆ ನಾನು ಅದರ ಅಧಿಕಾರದಲ್ಲಿರುವ ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ, ಇದು ಕಂಪನಿಯ ಒಂದು ಉತ್ತಮ ಕ್ರಮವಾಗಿದೆ, ಮುಂದೆ ಈ ಪಾನೀಯ ಇನ್ನು ಉತ್ತಮವಾಗಲಿದೆ ಎಂದು ಟ್ರಂಪ್ ಹೇಳಿದ್ದಾರೆ,
ಕತೂಹಲಕಾರಿಯಾಗಿ ಡೊನಾಲ್ಡ್ ಟ್ರಂಪ್ ಅವರಿಗೆ ಕೋಕಾ-ಕೋಲಾ ಮೇಲಿನ ಒಲವು ಬಹಳಷ್ಟು ವರ್ಷಗಳ ಹಿಂದಿನಿಂದಲೂ ಇದೆ, ಈ ವರ್ಷ ಜನವರಿ 15 ರಂದು ಟ್ರಂಪ್ ತಮ್ಮ ಅಧಿಕಾರ ಎರಡನೇ ಅವಧಿಯ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರು ಡಯಟ್ ಕೋಕ್ ನ ಸಂಶೋಧನೆ ಶ್ಲಾಘಿಸಿದ್ದರು, ಇಬ್ಬರು ಕೋಕ್ ಮೇಲಿನ ಒಲವನ್ನು ವ್ಯಕ್ತಪಡಿಸಿದ್ದರು,
ಇಷ್ಟು ಮಾತ್ರವಲ್ಲದೇ ಮಸ್ಕ್ ಕೋಕಾ-ಕೋಲಾ ಸಿಇಒ ಜೇಮ್ಸ್ ಕ್ವಿನ್ಸಿ ಅವರೊಂದಿಗೆ ಟ್ರಂಪ್ ಅವರು ಇರುವ ಫೋಟೋವನ್ನು ಹಂಚಿಕೊಂಡಿದ್ದರು, ಅವರು ಟ್ರಂಪ್ ಅವರಿಗೆ ಸ್ಮರಣಾರ್ಥವಾಗಿ ಡಯಟ್ ಕೋಕ್ ನ ಬಾಟಲಿಯನ್ನು ಉಡುಗೊರೆಯಾಗಿ ನೀಡಿದ್ದರು,
ಕಾಲ್ತುಳಿತಕ್ಕೆ ಆರ್‌ಸಿಬಿಯೇ ಕಾರಣ: ರಾಜ್ಯ ಸರಕಾರದ ವರದಿ, ಕೊಹ್ಲಿ ಹೆಸರೂ ಉಲ್ಲೇಖ
ರಾಜಧಾನಿಯ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದ ವರದಿಯನ್ನು ರಾಜ್ಯ ಸರಕಾರ ಕರ್ನಾಟಕ ಹೈಕೋರ್ಟ್ ನೀಡಿರುವ ನಿರ್ದೇಶನದಂತೆ ಇದೀಗ ಬಹಿರಂಗಪಡಿಸಿದೆ. ಅದರಲ್ಲಿ, ಕಾಲ್ತುಳಿತ ದುರಂತಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ತಂಡದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಕಾರಣ ಎಂದು ಹೇಳಲಾಗಿದೆ.
ಬೆಂಗಳೂರು ಕಾಲ್ತುಳಿತಕ್ಕೆ ಕರ್ನಾಟಕ ಸರ್ಕಾರ ಆರ್‌ಸಿಬಿಯನ್ನು ದೂಷಿಸಿದ್ದು, ಇದೇ ವರದಿಯಲ್ಲಿ ವಿರಾಟ್ ಕೊಹ್ಲಿ ಹೆಸರನ್ನೂ ಉಲ್ಲೇಖಿಸಲಾಗಿದೆ. ಕ್ರೀಡಾಂಗಣದಲ್ಲಿ ವಿಜಯೋತ್ಸವದಲ್ಲಿ ಪಾಲ್ಗೊಳ್ಳುವಂತೆ ಅಭಿಮಾನಿಗಳನ್ವು ಆಹ್ವಾನಿಸಲಾಗಿತ್ತು. ಆದರೆ ಇದಕ್ಕೆ ತಂಡದ ಆಡಳಿತ ಮಂಡಳಿ ರಾಜ್ಯ ಸರ್ಕಾರದ ಅಥವಾ ಪೊಲೀಸ್ ಇಲಾಖೆಯ ಅನುಮತಿ ಪಡೆದಿರಲಿಲ್ಲ. ದಿಢೀರ್ ಕಾರ್ಯಕ್ರಮ ಘೋಷಣೆ ಮಾಡಿದ್ದರಿಂದ ಹಠಾತ್ತನೆ ಜಮಾಯಿಸಿದ ಜನಸಮೂಹದಿಂದ ನೂಕುನುಗ್ಗಲು ಉಂಟಾಯಿತು ಎಂದು ಕರ್ನಾಟಕ ಸರ್ಕಾರದ ವರದಿ ಹೇಳಿದೆ.
ಕರ್ನಾಟಕ ಹೈಕೋರ್ಟ್ ನಿರ್ದೇಶನದ ಮೇರೆಗೆ ವರದಿಯನ್ನು ಬಹಿರಂಗಪಡಿಸಲಾಗಿದೆ. ವರದಿಯನ್ನು ಗೌಪ್ಯವಾಗಿಡಲು ರಾಜ್ಯ ಸರ್ಕಾರ ನ್ಯಾಯಾಲಯವನ್ನು ಒತ್ತಾಯಿಸಿತ್ತು. ಆದರೆ ಅಂತಹ ಗೌಪ್ಯತೆಗೆ ಯಾವುದೇ ಕಾನೂನು ಆಧಾರಗಳಿಲ್ಲ ಎಂದು ನ್ಯಾಯಾಲಯ ಹೇಳಿತ್ತು. ಹೀಗಾಗಿ ಈ ವರದಿ ಇದೀಗ ಬಹಿರಂಗಗೊಂಡಿದೆ. ಈ ಬಗ್ಗೆ ಎನ್ ಡಿಟಿವಿ ವಿವರವಾದ ವರದಿ ಮಾಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಏಕಪಕ್ಷೀಯವಾಗಿ ಮತ್ತು ನಗರ ಪೊಲೀಸರ ಜೊತೆ ಸಮಾಲೋಚಿಸದೆ ಜನರನ್ನು ವಿಜಯೋತ್ಸವ ಮೆರವಣಿಗೆಗೆ ಆಹ್ವಾನಿಸಿದೆ. ಆರ್‌ಸಿಬಿ ಐಪಿಎಲ್ ಟ್ರೋಫಿ ಗೆದ್ದ ದಿನವಾದ ಜೂನ್ 3 ರಂದು ಆರ್‌ಸಿಬಿ ಆಡಳಿತ ಮಂಡಳಿಯು ಪೊಲೀಸರನ್ನು ಸಂಪರ್ಕಿಸಿದೆ ಮತ್ತು ಸಂಭಾವ್ಯ ವಿಜಯೋತ್ಸವ ಮೆರವಣಿಗೆಯ ಬಗ್ಗೆ ಪೊಲೀಸರಿಗೆ ತಿಳಿಸಿದೆ. ಇದು ಕೇವಲ ಸೂಚನೆಯ ಸ್ವರೂಪದ್ದಾಗಿತ್ತು. ಕಾನೂನಿನಡಿಯಲ್ಲಿ ಅಗತ್ಯವಿರುವಂತೆ ಅನುಮತಿಗಾಗಿ ವಿನಂತಿ ಪಡೆದಿರಲಿಲ್ಲ. ಅಂತಹ ಅನುಮತಿಗಳನ್ನು ಕಾರ್ಯಕ್ರಮಕ್ಕೆ ಕನಿಷ್ಠ ಏಳು ದಿನಗಳ ಮೊದಲು ಪಡೆಯಬೇಕು ಎಂದು ವರದಿಯಲ್ಲಿದೆ.
ʼಅರ್ಜಿದಾರರು/ಆಯೋಜಕರು ನಿಗದಿತ ನಮೂನೆಗಳಲ್ಲಿ ಯಾವುದೇ ಅರ್ಜಿಗಳನ್ನು ಪರವಾನಗಿ ಪ್ರಾಧಿಕಾರಕ್ಕೆ ಸಲ್ಲಿಸಿಲ್ಲ. ನಿಗದಿತ ನಮೂನೆಗಳ ಅಡಿಯಲ್ಲಿ ಮಾಹಿತಿ ನೀಡಿಲ್ಲದ ಕಾರಣ ಪರವಾನಗಿ ನೀಡುವ ಪ್ರಾಧಿಕಾರವು ವಿನಂತಿಯನ್ನು ಸಕಾರಾತ್ಮಕವಾಗಿ ಪರಿಗಣಿಸಲು ಸಾಧ್ಯವಾಗಲಿಲ್ಲ. ಅದರಂತೆ, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಪಿಐ 03.06.2025 ರಂದು ಸಂಜೆ 6.30 ರ ಸುಮಾರಿಗೆ ಕೆಎಸ್‌ಸಿಎ ಮಾಡಿದ ವಿನಂತಿಗೆ ಅನುಮತಿ ನೀಡಲಿಲ್ಲ. ಏಕೆಂದರೆ ಅಂತಿಮ ಪಂದ್ಯದ ಎರಡೂ ಸಂಭವನೀಯ ಫಲಿತಾಂಶಗಳಿಗೆ, ಅಂದರೆ ಆರ್‌ಸಿಬಿ ಗೆದ್ದಿದೆಯೇ ಅಥವಾ ಸೋತಿದೆಯೇ ಎಂಬುದರ ಕುರಿತು ನಿರೀಕ್ಷಿತ ಅಂದಾಜು ಸಭೆ, ಮಾಡಲಾದ ವ್ಯವಸ್ಥೆಗಳು, ಸಂಭವನೀಯ ಅಡಚಣೆಗಳು ಮತ್ತು ಮುಂತಾದವುಗಳ ಬಗ್ಗೆ ಮಾಹಿತಿಯ ಕೊರತೆಯಿಂದಾಗಿ ಅನುಮತಿ ನೀಡಲಿಲ್ಲʼ ಎಂದು ವರದಿ ಹೇಳಿದೆ.
‘ಪೊಲೀಸರನ್ನು ಸಂಪರ್ಕಿಸದೆ ಸಾರ್ವಜನಿಕ ಆಹ್ವಾನ’
ಆರ್‌ಸಿಬಿ ಆಡಳಿತ ಮಂಡಳಿ ಪೊಲೀಸರನ್ನು ಸಂಪರ್ಕಿಸದೆ ಮರುದಿನ ಬೆಳಿಗ್ಗೆ 7.01 ಕ್ಕೆ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ʼಜನರಿಗೆ ಉಚಿತ ಪ್ರವೇಶವಿದೆʼ ಎಂದು ತಿಳಿಸುವ ಮತ್ತು ವಿಧಾನಸೌಧದಲ್ಲಿ ಪ್ರಾರಂಭವಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಕ್ತಾಯಗೊಳ್ಳುವ ವಿಜಯೋತ್ಸವ ಮೆರವಣಿಗೆಯಲ್ಲಿ ಭಾಗವಹಿಸಲು ಸಾರ್ವಜನಿಕರನ್ನು ಆಹ್ವಾನಿಸುವ ಫೋಟೋವನ್ನು ಪೋಸ್ಟ್ ಮಾಡಿತ್ತು.
ಈ ಮಾಹಿತಿಯನ್ನು ಪುನರುಚ್ಚರಿಸುತ್ತಾ ಬೆಳಿಗ್ಗೆ 8 ಗಂಟೆಗೆ ಮತ್ತೊಂದು ಪೋಸ್ಟ್ ಮಾಡಲಾಗಿದೆ. 04.06.2025 ರಂದು ಬೆಳಿಗ್ಗೆ 8:55 ಕ್ಕೆ, ಆರ್‌ಸಿಬಿ ತಂಡದ ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ ಅವರ ವೀಡಿಯೊ ಕ್ಲಿಪ್ ಅನ್ನು ಹಂಚಿಕೊಂಡಿದೆ. “RCB ತಂಡದ ಆಟಗಾರ, RCB ಯ ಅಧಿಕೃತ ಹ್ಯಾಂಡಲ್ @Rcbtweets on X ನಲ್ಲಿ, 04.06.2025 ರಂದು ಬೆಂಗಳೂರಿನಲ್ಲಿ ಬೆಂಗಳೂರು ನಗರದ ಜನರು ಮತ್ತು RCB ಅಭಿಮಾನಿಗಳೊಂದಿಗೆ ಈ ವಿಜಯವನ್ನು ಆಚರಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದ್ದಾರೆ” ಎಂದು ವರದಿ ಹೇಳಿದೆ.
