Home Blog Page 42

ಇನ್ನೋನೆಕ್ಸ್ಟ್ ಏರಿಯನ್ ಭಾರತ್ ಅಸ್ಟ್ರಾನೋಮಿ ಎಕ್ಸ್‌ಪೋ 1.0 ಬಾಹ್ಯಾಕಾಶದ ಕೌತುಕ

ಬೆಂಗಳೂರು, ಜುಲೈ 24: ಇನ್ನೋನೆಕ್ಸ್ಟ್ ಮೈಂಡ್ ಪ್ರೈವೇಟ್ ಲಿಮಿಟೆಡ್ (ಏರಿಯನ್ ಭಾರತ್) ಆಶ್ರಯದಲ್ಲಿ ಗುರುವಾರ ನಡೆದ ಆಸ್ಟ್ರಾನೊಮಿ ಎಕ್ಸ್‌ಪೋ 1.0ರ ಆವೃತ್ತಿ ನಗರದ ಮಂತ್ರಿ ಮಾಲ್‌ನ ಐನಾಕ್ಸ್‌ ಚಿತ್ರಮಂದಿರಲ್ಲಿ ಗುರುವಾರ ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮವು ವಿಜ್ಞಾನಿಗಳು, ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ವಿಜ್ಞಾನ ಮತ್ತು ಖಗೋಳಶಾಸ್ತ್ರದಲ್ಲಿನ ಬೆಳವಣಿಗೆಗಳನ್ನು ಅನ್ವೇಷಿಸಲು ಹೊಸ ಸಾಧ್ಯತೆಯನ್ನು ಪರಿಚಯಿಸಿತು.
ಇನ್ನೋನೆಕ್ಸ್ಟ್ ಮೈಂಡ್ ಪ್ರೈವೇಟ್ ಲಿಮಿಟೆಡ್ (ಏರಿಯನ್ ಭಾರತ್) ಅಸ್ಟ್ರಾನೋಮಿ ಎಕ್ಸ್‌ಪೋ 1.0 ಪ್ರದರ್ಶನದಲ್ಲಿ ಐಎನ್‌-ಸ್ಪೇಸ್‌ನ ಪ್ರಚಾರ ನಿರ್ದೇಶನಾಲಯದ ನಿರ್ದೇಶಕ ಡಾ. ವಿನೋದ್ ಕುಮಾರ್,  ಇಸ್ರೋದ ಮಾಜಿ ಮಿಷನ್ ನಿರ್ದೇಶಕ ಟಿ.ಕೆ. ಸುಂದರಮೂರ್ತಿ, ಯುಆರ್‌ಎಸ್‌ಸಿಯ ಮಾಜಿ ನಿರ್ದೇಶಕ ಎಂ.ಎಸ್. ಶ್ರೀನಿವಾಸನ್, ಮತ್ತು ಅಂತರರಾಷ್ಟ್ರೀಯ ಖಗೋಳ ಒಕ್ಕೂಟದ ಸದಸ್ಯೆ ಮತ್ತು ಖಗೋಳ ಭೌತಶಾಸ್ತ್ರಜ್ಞೆ ಡಾ. ಮಾರ್ಗರಿಟಾ ಸಫೊನೊವಾ ಸೇರಿದಂತೆ ಪ್ರಮುಖ ಬಾಹ್ಯಾಕಾಶ ತಜ್ಞರು ಭಾಗವಹಿಸಿದ್ದರು. ಮಕ್ಕಳ ಹಕ್ಕುಗಳ ಕಾರ್ಯಕರ್ತ ಮತ್ತು ಡಿಒಪಿಟಿ ಸಚಿವಾಲಯದ ಹಿಂದಿ ಸಲಹಾ ಸಮಿತಿಯ ಸದಸ್ಯ ರಾಘವೇಂಧೀರಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕೈಬರಹ ತಜ್ಞ ಪ್ರೊ. ಕೆ.ಸಿ. ಜನಾರ್ದನ್ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಅಸ್ಟ್ರಾನೋಮಿ ಎಕ್ಸ್‌ಪೋ ಲಾಂಛನ ಮತ್ತು ಅಧಿಕೃತ ಕರಪತ್ರವನ್ನು ಬಿಡುಗಡೆ ಮಾಡಲಾಯಿತು. ಬಾಹ್ಯಾಕಾಶ ಪರಿಶೋಧನೆ ಮತ್ತು ರಾಕೆಟ್ ತಂತ್ರಜ್ಞಾನದ ಪ್ರಮುಖ ಅಂಶಗಳ ವಿಶೇಷ ಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ರಾಘವೇಂಧೀರಾ, ತಂತ್ರಜ್ಞಾನ ಮತ್ತು ಹೊಸ ಅವಿಷ್ಕಾರಗಳ ಪರಿಣಾಮ ಇಂದು ಬಾಹ್ಯಾಕಾಶ ವಿಜ್ಞಾನವನ್ನು ಹೆಚ್ಚು ಪರಿಣಾಮಕಾರಿಯಾಗಿ ಅಭ್ಯಾಸ ಮಾಡಲು ಸಾಧ್ಯವಾಗಿದೆ. ಪ್ರತಿಯೊಂದು ಗ್ರಹಗಳು ಮತ್ತು ಸೌರಮಂಡಲದ ಅಧ್ಯಯನಕ್ಕೆ ಇದು ನೆರವಾಗಿದೆ. ಅಸ್ಟ್ರಾನೋಮಿ ಎಕ್ಸ್‌ಪೋ ಮೂಲಕ ಮಕ್ಕಳಿಗೆ ಬಾಹ್ಯಾಕಾಶದ ಕುರಿತು ಹೆಚ್ಚಿನ ಅರಿವು ಮೂಡಿಸಲು ಸಾಧ್ಯವಾಗುತ್ತಿದೆ. ಜತೆಗೆ, ಭಾರತ ಪ್ರಸ್ತುತ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಜಗತ್ತಿನಲ್ಲಿಯೇ ನಾಲ್ಕನೇ ಸ್ಥಾನದಲ್ಲಿದ್ದು, ಮುಂದಿನ ದಿನಗಳಲ್ಲಿ ಮೊದಲ ಸ್ಥಾನಕ್ಕೆ ಏರುವಂತಾಗಲಿ ಎಂದು ಹಾರೈಸಿದರು.
ಇಸ್ರೋ ವಿಜ್ಞಾನಿ ಇಳಂಗೋವನ್ ಅವರೊಂದಿಗಿನ ನೇರ ವರ್ಚುವಲ್ ಸಂವಾದವು ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ತಜ್ಞರೊಂದಿಗೆ ನೇರವಾಗಿ ತೊಡಗಿಸಿಕೊಳ್ಳಲು ಅವಕಾಶವನ್ನು ಒದಗಿಸಿತು. ಇದೇ ಸಂದರ್ಭದಲ್ಲಿ ಖಗೋಳ ಭೌತಶಾಸ್ತ್ರ, ಇಸ್ರೋ ಇತಿಹಾಸ ಮತ್ತು ಡಾಲ್ಬಿ ಅಟ್ಮಾಸ್ ಸ್ವರೂಪದಲ್ಲಿ ಪ್ರಸ್ತುತಪಡಿಸಲಾದ 3D ವಿಶೇಷ ಚಿತ್ರ ಪ್ರದರ್ಶಿಸಲಾಯಿತು. ಇದು ಕಾಸ್ಮಿಕ್ ವಿದ್ಯಮಾನಗಳು ಮತ್ತು ಬಾಹ್ಯಾಕಾಶ ವಾಸಸ್ಥಳದ ಭವಿಷ್ಯದ ಸಾಧ್ಯತೆಗಳನ್ನು ಪರಿಚಯಿಸುವ ಪ್ರಯತ್ನವನ್ನು ಮಾಡಿತು. ಜತೆಗೆ, ಭೂಮಿಯ ರಚನೆ ಹೇಗಾಯಿತು ಮತ್ತು ಮಾನವಿನ ವಿಕಾಸದ ಪರಿಕಲ್ಪನೆಯನನ್ನು 3Dಯಲ್ಲಿ ಪ್ರದರ್ಶಿಸಿದ್ದು, ಮಕ್ಕಳಿಗೆ ಹೊಸ ಲೋಕವೊಂದನ್ನು ಪರಿಚಯಿಸಿತು. ಜತೆಗೆ ಬಾಹ್ಯಾಕಾಶ ಮತ್ತು ವಿಜ್ಞಾನದ ಬಗೆಗಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿತು.
ಈ ಕಾರ್ಯಕ್ರಮವು ಇಸ್ರೋ ಮಾರ್ಗದರ್ಶಕರಿಂದ ಮಾರ್ಗದರ್ಶನ ಪಡೆದ ಭಾರತದ ಮೊದಲ ಶೈಕ್ಷಣಿಕ ರಾಕೆಟ್ ತಂತ್ರಜ್ಞಾನ ಪ್ರಯೋಗಾಲಯ ಎಂದು ವಿವರಿಸಲಾದ ಆರ್ಯಭಟ ಶೈಕ್ಷಣಿಕ ರಾಕೆಟ್ ಪ್ರಯೋಗಾಲಯದ ಉದ್ಘಾಟನೆ ನಡೆಯಿತು. ವಿವಿಧ ಹಂತಗಳಲ್ಲಿರುವ ವಿದ್ಯಾರ್ಥಿಗಳಿಗೆ ಸ್ಮಾರ್ಟ್, ಅನುಭವಿ STEM ಕಲಿಕೆಯನ್ನು ಒದಗಿಸುವ ಗುರಿಯನ್ನು ಹೊಂದಿರುವ ವಿದ್ಯಾರ್ಥಿ ಬಾಹ್ಯಾಕಾಶ ಕಲಿಕಾ ಅಪ್ಲಿಕೇಶನ್ ಅನ್ನು ಅನಾವರಣಗೊಳಿಸಲಾಯಿತು.
ಇನ್ನೋನೆಕ್ಸ್ಟ್- ಏರಿಯನ್ ಭಾರತ್ ಸಿಇಒ ರಶ್ಮಿ ಸುಮಂತ್ ಮತ್ತು ಪ್ರಾದೇಶಿಕ ಸಂಯೋಜಕ ಸಂದೀಪ್ ಸೇರಿದಂತೆ ಏರಿಯೋನ್ ಭಾರತ್‌ನ ಪ್ರತಿನಿಧಿಗಳು, ತಳಮಟ್ಟದಲ್ಲಿ ಬಾಹ್ಯಾಕಾಶ ಶಿಕ್ಷಣವನ್ನು ಉತ್ತೇಜಿಸುವಲ್ಲಿ ನಡೆಯುತ್ತಿರುವ ವಿವಿಧ ಪ್ರಯತ್ನಗಳನ್ನು ಉದ್ದೇಶಿಸಿ ಮಾತನಾಡಿದರು. ಜತೆಗೆ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಖಗೋಳಶಾಸ್ತ್ರದ ಪ್ರಸ್ತುತತೆಯ ಕುರಿತು ಗಣ್ಯರು ತಮ್ಮ ದೃಷ್ಟಿಕೋನಗಳನ್ನು ಹಂಚಿಕೊಂಡರು.
150 ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು, ಪ್ರಾಂಶುಪಾಲರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕರ್ನಾಟಕ ಧ್ವನಿ ಗಾಯನ ಕಾರ್ಯಕ್ರಮಕ್ಕೆ ಗಾಯಕ ಗಾಯಕಿಯರು ಆಯ್ಕೆ

ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನ ಹಡಗಲಿ ಮತ್ತು ಜಿಲ್ಲಾ ಘಟಕ ಚಿಕ್ಕಮಗಳೂರು ಇವರ ಸಂಯುಕ್ತಾಶ್ರಯದಲ್ಲಿ ಚಿಕ್ಕಮಗಳೂರಿನ ಕನ್ನಡ ಭವನದಲ್ಲಿ ದಿನಾಂಕ 27-7-2025 ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ನಡೆಯುವ ಕರ್ನಾಟಕ ಧ್ವನಿ ಗಾಯನ ಕಾರ್ಯಕ್ರಮಕ್ಕೆ 34 ಮಂದಿ ಗಾಯಕ ಗಾಯಕಿಯರು ಆಯ್ಕೆ ಆಗಿದ್ದಾರೆಂದು ರಾಜ್ಯಾಧ್ಯಕ್ಷರು ಮಧು ನಾಯ್ಕ್ ಲಂಬಾಣಿ ತಿಳಿಸಿದ್ದಾರೆ.

1.ಶ್ರೀಮತಿ ಸುಮಂಗಲಾ ದೇಸಾಯಿ, ಜೋಯಿಡಾ.
2.ವಿಜಯಕುಮಾರ್, ಹೊಸಪೇಟೆ.
3.ಶ್ರೀಮತಿ ಜಿ.ನೀಲಗಂಗಮ್ಮ,ಹೊಸಪೇಟೆ.
4.ಶ್ರೀಮತಿ ವಾಸವಿ ಸತೀಶ್, ತುರುವೇಕೆರೆ.
5. ವಾಲ್ಯಾನಾಯ್ಕ್ ಎಲ್, ವಿಜಯನಗರ.
6. ರಾಕೇಶ್ ಸಿಂಗ್, ಚಿಕ್ಕಮಗಳೂರು.
7.ಪಿ.ಮಲ್ಲಿಕಾರ್ಜುನ, ದಾವಣಗೆರೆ.
8.ರಾಮನಾಥ ಜೆ ನಾಯ್ಕ,ಅಂಕೋಲಾ.
9.ಶ್ರೀಮತಿ ರೀನಾ ನಂದನ್, ಹೊಸಪೇಟೆ.
10.ಹನುಮಂತ ನಾಯ್ಕ್ ಸಿ, ನಾಗರಕಟ್ಟೆ ತಾಂಡ.
11.ಬಿ. ಏನ್. ನಾಗೇಶ್, ದಾವಣಗೆರೆ.
12.ಗೌರಿ ಅರಸು, ಮಂಡ್ಯ. 13.ವೀಣಾ ನಟರಾಜ್, ಅಜ್ಜಂಪುರ.
14.ಸ್ನೇಹ, ತೀರ್ಥಹಳ್ಳಿ.
15.ಎಲ್. ಗಣೇಶ್, ತುಂಬಿನಕೇರಿ ದೊಡ್ಡತಾಂಡ. 16.ಆರ್. ಪ್ರಿಯಾಂಕ, ಹೊಸಪೇಟೆ.
17.ಟಿ. ದೀಪಾ, ವಿಜಯನಗರ.
18.ವಿದ್ಯಾ ಕೆ, ಚಿಕ್ಕಮಗಳೂರು.
19.ಪ್ರಶಾಂತ್ ಕುಲಕರ್ಣಿ, ದಾಂಡೇಲಿ
20.ಶಶಿಧರ್ ಹಿರೇಮಠ, ಸೊಂಡೂರು.
21.ಲಕ್ಷ್ಮಿ ಎಚ್, ಹೊಸಪೇಟೆ.
22.ಜೂಟೂರು ರಾಘವೇಂದ್ರ, ಹೊಸಪೇಟೆ.
23.ಶ್ರೀದೇವಿ ತೇರದಾಳ, ಮಹಾಲಿಂಗಪುರ.
24.ಉಮೇಶ್ ಕುಮಾರ್ ಎಚ್.ಎನ್. ದಾವಣಗೆರೆ
25.ವಿಜಯಶಾಂತಿ ಕೆ,ಕಮಲಾಪುರ.
26.ಡಾ. ಅಶೋಕ್ ಬಾಬು ಎ.ಆರ್, ಚಿಕ್ಕಬಳ್ಳಾಪುರ.
27.ಎಚ್. ಶ್ರೀನಿವಾಸ್
28.ತಿಮ್ಮನಾಯ್ಕ ಸಿ ಮುದ್ಲಾಪುರ,
29.ರಮೇಶ್ ಎಸ್ ಲಮಾಣಿ, ಚಿತ್ರದುರ್ಗ.
30.ಭಾಗ್ಯ ಎಸ್, ಶಿವಮೊಗ್ಗ.
31.ಕವಿತಾಬಾಯಿ ವೈ, ಭದ್ರಾವತಿ.
32.ವಿಜಯ್ ಕುಮಾರ್ ಸಿ. ಆರ್, ಚಿಕ್ಕಮಗಳೂರು
33.ಸುರೇಶ್ ರಾವ್, ತುಮಕೂರು.
34.ಮಹಾನಂದ ಮಠಪತಿ, ಕಲ್ಲೂರ್ ರೋಡ್.

ಆಯ್ಕೆಯಾದ ಗಾಯಕ ಗಾಯಕಿಯರಿಂದ ಗಾಯನ ಕಾರ್ಯಕ್ರಮ ಮತ್ತು ರಾಜ್ಯ ಮಟ್ಟದ ಕನ್ನಡ ಕೋಗಿಲೆ ಪ್ರಶಸ್ತಿ ಪ್ರಧಾನ ಸಮಾರಂಭ ಏರ್ಪಡಿಸಲಾಗಿದ್ದು ಆಯ್ಕೆಯಾದ ಎಲ್ಲಾ ಗಾಯಕ ಗಾಯಕಿಯರಿಗೆ ಕರ್ನಾಟಕ ರಾಜ್ಯ ಬರಹಗಾರರ ಸಂಘದ ರಾಜ್ಯಾಧ್ಯಕ್ಷರು ಮಧುನಾಯ್ಕ್ ಲಂಬಾಣಿ, ಗೌರವಾಧ್ಯಕ್ಷರು ಗೊರೂರು ಅನಂತರಾಜು, ಚಿಕ್ಕಮಗಳೂರು ಜಿಲ್ಲಾಧ್ಯಕ್ಷರು ಡಾ. ವಿದ್ಯಾ ಕೆ. ರವರು ಅಭಿನಂದಿಸಿದ್ದಾರೆ ಹಾಗೂ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ಕೋರಿದ್ದಾರೆ.

VK NEWS DIGITAL :

ಮೈಸೂರಿಗೆ ನೂತನ ಬಸ್ ನಿಲ್ದಾಣ

*ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣ ಅಂತರಾಷ್ಟ್ರೀಯ ಕ್ರೀಡಾಂಗಣವಾಗಿ ರೂಪಿಸಲು ಹೆಚ್ಚಿನ ಅನುದಾನ ನೀಡಿಕೆ*

*28ನೇ ರಾಜ್ಯಮಟ್ಟದ ಅಂತರ ಶಾಲಾ ಬಾಲಕ, ಬಾಲಕಿಯರ ವಾಲಿಬಾಲ್ ಚಾಂಪಿಯನ್ ಶಿಪ್ ಬಾಂಧವ ಕೌನ್ಸಿಲರ್ ಕಪ್-2025*

*ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣ ಅಂತರಾಷ್ಟ್ರೀಯ ಕ್ರೀಡಾಂಗಣವಾಗಿ ರೂಪಿಸಲು ಹೆಚ್ಚಿನ ಅನುದಾನ ನೀಡಿಕೆ*

*ಸರ್ಕಾರಿ ಶಾಲೆಯ ಮಕ್ಕಳಿಗೆ ಹೈಟೆಕ್ ಶಿಕ್ಷಣ, ಕ್ರೀಡೆಯಲ್ಲಿ ಪ್ರೋತ್ಸಹ, ನಮ್ಮ ಶಾಲೆಯ ಮಕ್ಕಳು ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪದಕ ಗೆಲ್ಲಬೇಕು-ಸಚಿವ ರಾಮಲಿಂಗಾರೆಡ್ಡಿ*

ಜಯನಗರ: ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ 28ನೇ ರಾಜ್ಯಮಟ್ಟದ ಅಂತರಶಾಲಾ ವಾಲಿಬಾಲ್ ಚಾಂಪಿಯನ್ ಶಿಪ್ ಬಾಲಕ, ಬಾಲಕಿಯರ ಬಾಂದವ ಕೌನ್ಸಲಿರ್ ಕಪ್-2025ಮೂರು ದಿನಗಳ ಕಾಲ ಜರುಗಲಿದೆ.

ಉದ್ಘಾಟನೆಯನ್ನು ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿರವರು, ಅವಧೂತ ವಿನಯ್ ಗುರೂಜಿರವರು, ಶಾಸಕಿ,ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಸೌಮ್ಯರೆಡ್ಡಿ, ಆಡಳಿತ ಪಕ್ಷದ ಮಾಜಿ ನಾಯಕ, ಬಾಂಧವ ಸಂಸ್ಥೆ ಸಂಸ್ಥಾಪಕ ಎನ್.ನಾಗರಾಜುರವರು, ಪದ್ಮನಾಭನಗರ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಪ್ರಮೋದ್ ಶ್ರೀನಿವಾಸ್ ರವರು ವಾಲಿಬಾಲ್ ಚೆಂಡು ಹೊಡೆಯವ ಮೂಲಕ ನಂತರ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.

*ಸಚಿವ ರಾಮಲಿಂಗಾರೆಡ್ಡಿ* ರವರು ಮಾತನಾಡಿ ನಾವು ಸಸಿ ನೆಟ್ಟ ಮೇಲೆ ಗಿಡವಾಗಬೇಕಾದರೆ ನೀರು, ಬಿಸಿಲು, ನೆರಳು ಎಲ್ಲವು ಸರಿಯಾಗಿ ಇದ್ದಾಗ ಡೊಡ್ಡ ಮರವಾಗಿ ಬೆಳಯುತ್ತದೆ ಅದೇ ರೀತಿ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಉತ್ತಮ ಶಾಲೆ, ಗುರುಗಳ ಮಾರ್ಗದರ್ಶನದಿಂದ ಒಳ್ಳೆಯ ವಿದ್ಯಾರ್ಥಿಯಾಗಿ ರೂಪಗೊಳ್ಳಬಹುದು, ಮಾನಸಿಕ, ದೃಹಿಕವಾಗಿ ಆರೋಗ್ಯವಂತರಾಗಿ ಇರಬೇಕು ಎಂದರೆ ಕ್ರೀಡಾ ಚಟುವಟೆಕೆ ಮುಖ್ಯ.

ನಮ್ಮ ಬಿಟಿಎಂ ಮತ್ತು ಜಯನಗರ ಸರ್ಕಾರಿ ಶಾಲೆಯ ಮಕ್ಕಳಿಗೆ ಹೈಟೆಕ್ ಶಾಲೆ ನಿರ್ಮಿಸಿ, ಶ್ರೀಮಂತರ ಮಕ್ಕಳಿಗೆ ಸಿಗುವ ಶಿಕ್ಷಣದಲ್ಲಿನ ಸೌವಲತ್ತು, ಸೌಲಭ್ಯಗಳು ಸರ್ಕಾರಿ ಶಾಲೆಯ ಮಕ್ಕಳಿಗೆ ಸಿಗುವಂತೆ ಮಾಡಲಾಗಿದೆ.

ಮಕ್ಕಳಿಗೆ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಂಗಣದಲ್ಲಿ ತರಭೇತಿ ಪಡೆಯಲು ಅನುಕೂಲವಾಗಲಿ ಎಂದು ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಂಗಣವಾಗಿ ರೂಪಿಸಲು ಹೆಚ್ಚಿನ ಅನುದಾನ ನೀಡಲಾಗುವುದು.

ನಲಿ-ಕಲಿ ಮಕ್ಕಳು ನಲಿಯುತ್ತ ಕಲಿಯಬೇಕು, ಎಲ್ಲ ಮಕ್ಕಳು ಕ್ರೀಡೆಯಲ್ಲಿ ಭಾಗವಹಿಸಿಬೇಕು, ರಾಷ್ಟ್ರ, ಅಂತರರಾಷ್ಟ್ರ ಮಟ್ಟದ ಕ್ರೀಡೆಯಲ್ಲಿ ಮಕ್ಕಳು ಪದಕ ಗೆಲ್ಲಬೇಕು ಎಂಬ ನಿಟ್ಟಿನಲ್ಲಿ ಎನ್.ನಾಗರಾಜುರವರ ಬಾಂಧವ ಸಂಸ್ಥೆ ಶ್ರಮಿಸುತ್ತಿದೆ ಎಂದು ಹೇಳಿದರು.

*ಅವಧೂತ ವಿನಯಗುರೂಜಿ* ರವರು ಮಾತನಾಡಿ ಮಕ್ಕಳು ದೇವರ ಸಮಾನ ಅವರನ್ನ ಪ್ರೀತಿ, ವಿಶ್ವಾಸದಿಂದ ಬೆಳಸಬೇಕು, ತಂದೆ, ತಾಯಿ ಮತ್ತು ಸಮಾಜದಿಂದ ಮಕ್ಕಳಿಗೆ ಪ್ರೀತಿ, ವಿಶ್ವಾಸ ಸಿಕ್ಕಾಗ ಮಕ್ಕಳು ಕೆಟ್ಟದಾರಿಗೆ ಹೋಗುವುದಿಲ್ಲ.

ಮಕ್ಕಳಿಗೆ ಕ್ರೀಡಾಸಕ್ತಿ ಬೆಳಸಬೇಕು, ತಂದೆ, ತಾಯಿ ಮತ್ತು ಶಿಕ್ಷಕರು ಮಕ್ಕಳಿಗೆ ಯಾರ ಕ್ರೀಡೆಯಲ್ಲಿ ಆಸಕ್ತಿ ಇದೆ ಎಂಬುದು ತಿಳಿದುಕೊಂಡು ಅದರಲ್ಲಿ ಅವರಿಗೆ ತೊಡಗಿಸಿಕೊಳ್ಳಲು ಪೇರಣೆ ನೀಡಬೇಕು.

ಕ್ರೀಡೆಗೆ ಪ್ರೋತ್ಸಹ, ಸಹಕಾರ ಸಿಕ್ಕಾಗ ನಮ್ಮ ಮಕ್ಕಳು ಸಹ ಓಲಿಂಪಿಕ್ , ಏಷಿಯಡ್ ಗೇಮ್ಸ್ ನಲ್ಲಿ ಪದಕಗಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

*ಬಾಂಧವ ಅಧ್ಯಕ್ಷರಾದ ಎನ್.ನಾಗರಾಜುರವರು* ಮಾತನಾಡಿ ಬಾಂಧವ ಸಾಮಾಜಿಕ ಸೇವಾ ಸಂಘಟನೆಯು ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಪರಿಸರ ಜಾಗೃತಿ ಕುರಿತು ನಿರಂತರ ಕಾಳಜಿವಹಿಸಿ ಶ್ರಮಿಸುತ್ತಿದೆ.

ನಮ್ಮ ಸಂಸ್ಥೆಯ ವತಿಯಿಂದ ಮಕ್ಕಳಿಗೆ ಉತ್ತಮ ಶಿಕ್ಷಣಕ್ಕೆ ಪ್ರೋತ್ಸಹ ಜೊತೆಯಲ್ಲಿ ಕ್ರೀಡಾಸಕ್ತಿ ಬೆಳಸುತ್ತಿದೆ. ಚಿಕ್ಕ ಮಕ್ಕಳು ದೃಹಿಕವಾಗಿ ಶಕ್ತಿವಂತರಾಗಬೇಕು, ಸಶಕ್ತ, ಸದೃಢ ಮಕ್ಕಳು ಇದ್ದಾಗ ದೇಶ ಕಟ್ಟುವಲ್ಲಿ ಸಹಕಾರಿಯಾಗುತ್ತದೆ.

ರಾಜ್ಯಾದ್ಯಂತ 200ಕ್ಕೂ ಹೆಚ್ಚು ಶಾಲೆಯ ತಂಡಗಳು 3500ಮಕ್ಕಳು ಮೂರು ದಿನಗಳ ಕಾಲ ಬಾಲಕ-ಬಾಲಕಿಯರು ಈ ವಾಲಿಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.

ಗೆದ್ದ ತಂಡಗಳಿಗೆ ಪಾರಿತೋಷಕ ಮತ್ತು ಪ್ರಮಾಣಪತ್ರ ನೀಡಲಾಗುತ್ತದೆ ಮತ್ತು ಹಿರಿಯ ವಾಲಿಬಾಲ್ ಕ್ರೀಡಾಪಟುಗಳಿಗೆ ಗೌರವಿಸಿ ಸನ್ಮಾನಿಸಲಾಗುತ್ತಿದೆ ಎಂದು

” ಶ್ರೀ ಪ್ರಹ್ಲಾದರಾಜರೇ ಶ್ರೀ ರಾಘವೇಂದ್ರರು – 1 “

” ಶ್ರೀ ಪ್ರಹ್ಲಾದರಾಜರೇ ಶ್ರೀ ರಾಘವೇಂದ್ರರು – 1 ”
” ಶ್ರೀ ವ್ಯಾಸರಾಜ ಸ್ತುತಿ – ಉಗಾಭೋಗ ”
ಶ್ರೀ ವ್ಯಾಸರಾಜರು :
ಕ್ರಿ ಶ 1447 – 1539
ಅಂಶ :
ಶ್ರೀ ಪ್ರಹ್ಲಾದಂಶ
ಆವೇಶ :
ಶ್ರೀ ವಾಯುದೇವರ ನಿತ್ಯಾವೇಶ ಮತ್ತು ಶ್ರೀ ಲಕ್ಷ್ಮೀ ನಾರಾಯಣರ ನಿತ್ಯ ಸನ್ನಿಧಾನಯುಕ್ತರು.
ಶ್ರೀ ಕನಕದಾಸರು :
ಕ್ರಿ ಶ 1508 – 1606
ಅಂಶ :
ಶ್ರೀ ಯಮಧರ್ಮರಾಜರ ಸಾಕ್ಷಾತ್ ಅವತಾರ.

ಶ್ರೀ ಯಮಧರ್ಮರಾಜರು ಶ್ರೀ ಕೃಷ್ಣನ ವಿಭೂತಿ ರೂಪದಿಂದ ಮೆರೆಯುತ್ತಿರುವ 12ನೇ ಕಕ್ಷಾ ಸಂಪನ್ನರಾದ ದೇವತೆಗಳು.

ಶ್ರೀ ವ್ಯಾಸರಾಜರನ್ನು ಕಂಡು ಶ್ರೀ ಕನಕದಾಸರು ಅತ್ಯಂತ ಮನೋಜ್ಞವಾಗಿ ಸ್ತುತಿಸಿದ್ದಾರೆ.

ಆ ಉಗಾಭೋಗದಲ್ಲಿ ತಮ್ಮ ( ಶ್ರೀ ಕನಕದಾಸರ ), ಶ್ರೀ ವ್ಯಾಸರಾಜರ, ಶ್ರೀ ಪುರಂದರದಾಸರು ಮತ್ತು ಶ್ರೀ ಪುರಂದರದಾಸರ ಮಕ್ಕಳ ಅವತಾರ ಕುರಿತು ಖಚಿತ ಪಡಿಸಿದ್ದಾರೆ.

ವ್ಯಾಸರಾಯರಿಗೆ ಮೂರು ಜನ್ಮ ! ದಾಸರಿಗೆ ಎರಡು ಜನ್ಮ ! ಶ್ರೀ ! ವ್ಯಾಸರಾಯರೇ ರಾಘವೇಂದ್ರರಾಯರು ! ರಾಮಚಂದ್ರನ ಆಶ್ರಿತ ಜನ ಕೋಟಿಯೊಳಗೆ ಉತ್ಕೃಷ್ಟರಾದವರು ! ನಾರದರ ಅಂಶವೇ ಪುರಂದರದಾಸರು ! ತಮ್ಮ ಕೂಸಾದ ಭೃಗುಮುನಿಯಲ್ಲಿ ! ತಾವು ಒಂದಂಶದಿ ನಿಂದು ವಿಜಯದಾಸರೆಂದು ಪೆಸರು ಪಡೆವ ! ನಾ ಯಮನು ಮುಂದೆ ಮಾಂಡವ್ಯ ಶಾಪದಿಂದ ! ಎರಡು ಜನ್ಮ ಶೂದ್ರ ಯೋನಿಯಲ್ಲಿ ಪೊಕ್ಕೆನಲು ಒಂದು ಜನುಮ ವಿದುರನಾಗಿ ಕುರುಬರ ಕುಲದಲ್ಲೀಗ ಪುಟ್ಟಿದೆ ! ಎನಗೆ ಈ ಜನ್ಮದಲಿ ಮುಕುತಿ ಎಂತೆಂಬೆ ! ವರದಪ್ಪನೆ ಸೋಮ ಗುರುರಾಯ ದಿನಕರನು ! ಅಭಿನವ ಬೃಹಸ್ಪತಿ ಮಧ್ವಪತಿ ಭೃಗು ಅಂಶದಿ ಮೆರೆವ ! ಮಹಾ ಮಹಿಮೆ ಪೊಗಳುವನು ! ಭಾಗವತರೊಳಗೆ ಯೋಗೇಂದ್ರ ಕೃಷ್ಣನ್ನ ! ಬಾಗಿ ನಮಿಸುವ ದಾಸ ಜನರ ಪೋಷಕ ಕಾಗಿನೆಲೆಯಾದಿ ಕೇಶವರಾಯ ! ದಾಸೋತ್ತಮರ ಗುಣವ ಕನಕದಾಸ ಪೇಳಿದನು !!

” ವಿವರಣೆ ”

” ವ್ಯಾಸರಾಯರಿಗೆ ಮೂರು ಜನ್ಮ ”

ಶ್ರೀ ಪ್ರಹ್ಲಾದ, ಶ್ರೀ ಬಾಹ್ಲೀಕ, ಶ್ರೀ ವ್ಯಾಸರಾಜರು

ಶ್ರೀ ವ್ಯಾಸರಾಜರೇ ಶ್ರೀ ರಾಘವೇಂದ್ರಾರಾಯರು.

ಶ್ರೀ ಮನ್ಮೂಲರಾಮಚಂದ್ರನ ಆಶ್ರಿತ ಜನರೊಳಗೆ ಶ್ರೇಷ್ಠರಾದವರು.

” ದಾಸರಿಗೆ ಎರಡು ಜನ್ಮ ”

ಒಂದು ” ದಾಸೀ ಪುತ್ರ ”

ಎರಡನೆಯದ್ದು ” ಶ್ರೀ ನಾರದರು ”

ಶ್ರೀ ನಾರದ ಮಹರ್ಷಿಗಳ ಅಂಶ ಸಂಭೂತರೇ ಶ್ರೀ ಪುರಂದರ ದಾಸರು.

ತಮ್ಮ ಪುತ್ರ ಶ್ರೀ ಭೃಗು ಮಹರ್ಷಿಯಲ್ಲಿ ಒಂದಂಶದಿ ನಿಂದಿದ್ದರಿಂದ ಮುಂದೆ ಶ್ರೀ ವಿಜಯದಾಸರೆಂದು ಪ್ರಸಿದ್ಧಿ ಪಡೆವರು!

” ನಾ ಯಮನು ಮುಂದೆ ಮಾಂಡವ್ಯ ಶಾಪದಿಂದ ಎರಡು ಜನ್ಮ ಶೂದ್ರ ಯೋನಿಯಲ್ಲಿ ಪುಕ್ಕೆನಲು ಒಂದು ಜನುಮ ವಿದುರನಾಗಿ ಕುರುಬರ ಕುಲದಲ್ಲೀಗ ಪುಟ್ಟಿದೆ ಎನಗೆ ಈ ಜನ್ಮದಲಿ ಮುಕುತಿ ”

ಶ್ರೀ ಮಾಂಡವ್ಯರ ಶಾಪದಿಂದ ಭುವಿಯಲ್ಲಿ ಎರಡು ಶೂದ್ರ ಯೋನಿಯಲ್ಲಿ ಅವತಾರ ಮಾಡಿದ್ದಾರೆ.

ಮೊದಲನೆಯದ್ದು ” ಶ್ರೀ ವಿದುರ ”

ಎರಡನೆಯದ್ದು ” ಶ್ರೀ ಕನಕದಾಸರು ”

ಇನ್ನು ಶ್ರೀ ಪುರಂದರ ದಾಸರ ನಾಲ್ಕು ಪುತ್ರರ ಅವತಾರವನ್ನು ತಿಳಿದಿದ್ದಾರೆ.

ಶ್ರೀ ವರದಪ್ಪ ನಾಯಕರು ( ಶ್ರೀ ವೆಂಕಪ್ಪ – ಶ್ರೀ ವರದ ಪುರಂದರವಿಠ್ಠಲ ) ಶ್ರೀ ಚಂದ್ರಾಂಶರು.

ಶ್ರೀ ಗುರುರಾಯ ನಾಯಕರು ( ಶ್ರೀ ಅಪ್ಪಣ್ಣ ಭಾಗವತರು – ಶ್ರೀ ಗುರು ಪುರಂದರವಿಠ್ಠಲ ) – ಶ್ರೀ ಸೂರ್ಯಾಂಶರು.

ಶ್ರೀ ಅಭಿನವ ನಾಯಕರು ( ಶ್ರೀ ಅಭಿನವ ಪುರಂದರ ವಿಠ್ಠಲ ) – ಶ್ರೀ ಬೃಹಸ್ಪತ್ಯಾಚಾರ್ಯರ ಅಂಶಜರು.

ಶ್ರೀ ಮಧ್ವಪತಿ ವಿಠ್ಠಲ – ಶ್ರೀ ಭೃಗು ಮಹರ್ಷಿಗಳ ಅವತಾರ !

ಎಂದು ಸ್ಪಷ್ಟ ಪಡಿಸಿದ್ದಾರೆ.

ಆದ್ದರಿಂದ ಶ್ರೀ ಪ್ರಹ್ಲಾದರಾಜರೇ ಶ್ರೀ ಬಾಹ್ಲೀಕ ಶ್ರೀ ವ್ಯಾಸರಾಜರ ಶ್ರೀ ರಾಘವೇಂದ್ರ ತೀರ್ಥರೆಂದು ಶ್ರೀ ಕನಕದಾಸರ ಭವಿಷ್ಯ ವಾಣಿಯಂತೆ ” ಶ್ರೀ ವ್ಯಾಸರಾಜರ ಅವರ ಮುಂದಿನ ಅವತಾರ ಶ್ರೀ ರಾಘವೇಂದ್ರ ತೀರ್ಥ ” ರೆಂದು ಸ್ಪಷ್ಟವಾಗಿದೆ.

” ವಿಶೇಷ ವಿಚಾರ ”

1. ಈ ಶ್ರೀ ಕನಕದಾಸರ ಉಗಾಭೋಗವನ್ನು ಪ್ರಪ್ರಥಮವಾಗಿ ಸಂಗ್ರಹಿಸಿ ಶ್ರೀ ವರದೇಂದ್ರ ಹರಿದಾಸ ಸಾಹಿತ್ಯ ಮಂಡಲ ಲಿಂಗಸೂಗೂರುನಿಂದ ಪರಮಪೂಜ್ಯ ಶ್ರೀ ಗೊರೆಬಾಳು ಹನುಮಂತರಾಯರು ಮುದ್ರಿಸಿ ಪ್ರಕಟಿಸಿದ್ದಾರೆ.

2. ಶ್ರೀ ಗುರುಸಾರ್ವಭೌಮ ಸಂಶೋಧನಾ ಕೇಂದ್ರ
ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠ
ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ, ಮಂತ್ರಾಲಯದಿಂದ ಕ್ರಿ ಶ 2019 ರಲ್ಲಿ ಪ್ರಕಟಣೆಗೊಂಡ ” ಹರಿದಾಸರು ಕಂಡ ವಿದ್ಯಾಮಠ ” ಸಂಪುಟ – 2 ” ದಲ್ಲಿ ಮುದ್ರಿತವಾಗಿದೆ.

ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ

ದೆಹಲಿ ರಾಜಕೀಯದಲ್ಲಿ ಚಟುವಟಿಕೆ: ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಇಂದು ದೆಹಲಿಗೆ, ಪವರ್ ಶೇರಿಂಗ್ ಮತ್ತೆ ಸದ್ದು

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮತ್ತೆ ಪವರ್ ಶೇರಿಂಗ್ ವಿಚಾರ ಚರ್ಚೆಗೆ ಕಾರಣವಾಗಿದೆ. ಇಂದು ಗುರುವಾರ (ಜುಲೈ 25), ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತ್ಯೇಕವಾಗಿ ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ಅವರ ಭೇಟಿಗೆ ರಾಜಕೀಯ ಮಹತ್ವ ಹೆಚ್ಚಾಗಿದ್ದು, ಇದನ್ನು ಕೇಂದ್ರ ನಾಯಕತ್ವದೊಂದಿಗೆ ನಿರ್ಣಾಯಕ ಮಾತುಕತೆಗೆ ಆಗಲಿದೆ ಎನ್ನಲಾಗಿದೆ.

ಇತ್ತೀಚೆಗೆ ಇಬ್ಬರೂ ದೆಹಲಿಗೆ ತೆರಳಿ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೆವಾಲಾ ಅವರೊಂದಿಗೆ ನಿಗಮ ಮಂಡಳಿಗಳ ನೇಮಕಾತಿ, ಅಭಿವೃದ್ಧಿ ಯೋಜನೆಗಳು, ರಾಜಕೀಯ ಸಮತೋಲನೆ ಬಗ್ಗೆ ಚರ್ಚೆ ನಡೆಸಿದ್ದರು. ಆದರೆ, ಆ ವೇಳೆ ರಾಹುಲ್ ಗಾಂಧಿ ಭೇಟಿಗೆ ಸಮಯ ಸಿಗಲಿಲ್ಲ. ಈ ಬಾರಿ ಅವರ ಭೇಟಿಗೆ ಅವಕಾಶ ಸಿಗಬಹುದೆಂದು ನಿರೀಕ್ಷೆ ಇದೆ.

ಸಚಿವ ಸಂಪುಟ ಸಭೆ ನಡೆಯಲಿದೆ

ಸಿಎಂ ಮತ್ತು ಡಿಸಿಎಂ ದೆಹಲಿಗೆ ಹೊರಡುವ ಮೊದಲು ಇಂದು ಬೆಳಗ್ಗೆ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ. ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆಯುವ ಈ ಸಭೆಯಲ್ಲಿ ಪ್ರಮುಖ ನಿರ್ಣಯಗಳ ನಿರೀಕ್ಷೆ ಇದೆ.


📍 ದೆಹಲಿಯಲ್ಲಿ OBC ನ್ಯಾಯ ಸಮಾವೇಶ

ನಾಳೆ (ಶುಕ್ರವಾರ) ದೆಹಲಿಯಲ್ಲಿ ನಡೆಯಲಿರುವ OBC ನಾಯಕತ್ವ ನ್ಯಾಯ ಸಮ್ಮೇಳನ ಪ್ರಮುಖವಾಗಿದ್ದು, ಈ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿಗೆ ‘ನ್ಯಾಯ ಯೋಧ’ ಬಿರುದು ನೀಡಲಾಗಲಿದೆ. ಹಾಗೆಯೇ, ಬೆಂಗಳೂರುನಲ್ಲಿ ನಡೆದ AICC ಸಭೆಯಲ್ಲಿ ತೆಗೆದುಕೊಂಡ ಮೂರು ಮಹತ್ವದ ನಿರ್ಣಯಗಳನ್ನು ಇಲ್ಲಿ ಘೋಷಣೆ ಮಾಡಲಾಗುತ್ತದೆ.

ಡಿಕೆ ಶಿವಕುಮಾರ್ ದೇವಾಲಯಕ್ಕೆ ಗುಪ್ತ ಭೇಟಿ

ಸಾಮಾಜಿಕ ಕಾರ್ಯಕ್ರಮಗಳಿಂದ ದೂರವಿದ್ದು, ಎಲ್ಲರೊಂದಿಗೆ ಭೇಟಿಗೆ ನಿಲ್ಲಿಸಿದ ಡಿಕೆ ಶಿವಕುಮಾರ್, ಬುಧವಾರ ರಾತ್ರಿ ಹಾಸನದ ನಾಗರ ನವಿಲೆ ದೇವಾಲಯಕ್ಕೆ ಎಲ್ಲರ ಗಮನವನ್ನು ತಪ್ಪಿಸಿ ಗುಪ್ತವಾಗಿ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಗಿರಿಸಿದ್ದೇಶ್ವರ ದೇವರಿಗೆ ಅಭಿಷೇಕ ನೆರವೇರಿಸಿ, ಲೋಕ ಕಲ್ಯಾಣಕ್ಕಾಗಿ ಸಂಕಲ್ಪ ಮಾಡಿ ಪೂಜೆ ಸಲ್ಲಿಸಿದ್ದಾರೆ.

ಹರಿಹರ ವೀರಮಲ್ಲು ಸಿನಿಮಾ ವಿರುದ್ಧ ಕನ್ನಡಪರ ಸಂಘಟನೆಗಳ ಆಕ್ರೋಶ – ಕೇವಲ ತೆಲುಗು ಪೋಸ್ಟರ್‌ಗಳಿಗೆ ವಿರೋಧ

ಬೆಂಗಳೂರು: ಆಂಧ್ರಪ್ರದೇಶ ಡಿಸಿಎಂ ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಹೊಸ ಸಿನಿಮಾ ಹರಿಹರ ವೀರಮಲ್ಲು ತೆರೆಕಂಡಿದ್ದು, ಆಂಧ್ರ ಮತ್ತು ತೆಲಂಗಾಣದಾದ್ಯಂತ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ, ಪವನ್ ಕಲ್ಯಾಣ್ ರಾಜಕೀಯದಲ್ಲಿ ಸಂಪೂರ್ಣ ಸಕ್ರೀಯರಾದ ನಂತರ ಪವನ್ ಕಲ್ಯಾಣ್ ಅಭಿನಯದ ಯಾವ ಸಿನಿಮಾ ಕೂಡ ತೆರೆ ಕಂಡಿರಲಿಲ್ಲ, ಹೀಗಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಸಿನಿಮಾ ಬಿಡುಗಡೆಗಾಗಿ ಕಾದು ಕುಳಿತಿದ್ದರು,
ಹೀಗಾಗಿ ಸಹಜವಾಗಿಯೇ ಹರಿಹರ ವೀರಮಲ್ಲು ಚಿತ್ರದ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿತ್ತು ಈ ಕಾರಣಕ್ಕೆ ಅಭಿಮಾನಿಗಳು ಸಿನಿಮಾವನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ, ಆದ್ರೆ ಈ ಬೆನ್ನಲ್ಲೇ ಹರಿಹರ ವೀರಮಲ್ಲು ಚಿತ್ರ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದು ಕರ್ನಾಟಕದಲ್ಲಿ ತೀವ್ರ ವಿರೋಧ ಎದುರಿಸಿದೆ,
ಹೌದು… ಪವನ್ ಕಲ್ಯಾಣ್ ಅಭಿನಯದ ಹರಿಹರ ವೀರಮಲ್ಲು ಸಿನಿಮಾ ಕನ್ನಡಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ, ಕನ್ನಡಪರ ಹೋರಾಟಗಾರರು ಪವನ್ ನಟನೆಯ ಸಿನಿಮಾ ಪೋಸ್ಟರ್ ಗಳನ್ನು ಹರಿದು, ಫ್ಲೆಕ್ಸ್ ಗಳನ್ನು ತೆರವು ಮಾಡಿ ಸಿನಿಮಾ ತಂಡದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಇದಕ್ಕೆ ಕಾರಣ ಹರಿಹರ ವೀರಮಲ್ಲು ಸಿನಿಮಾ ತಂಡದ ಕನ್ನಡ ವಿರೋಧಿ ನೀತಿ,
ಯಾವುದೇ ಭಾಷೆಯ ಸಿನಿಮಾ ಕನ್ನಡದಲ್ಲಿ ಕರ್ನಾಟಕದಲ್ಲಿ ತೆರೆ ಕಾಣಬೇಕು ಎಂದಾದರೆ ಆ ಸಿನಿಮಾದ ಪೋಸ್ಟರ್ ಗಳು ಕನ್ನಡದಲ್ಲಿರಬೇಕು, ಈ ನಿಯಮವನ್ನು ಹರಿಹರ ವೀರಮಲ್ಲು ಚಿತ್ರ ತಂಡ ಧಿಕ್ಕರಿಸಿ ಕೇವಲ ತೆಲುಗಿನಲ್ಲಿ ಮಾತ್ರ ಪೋಸ್ಟರ್ ಗಳನ್ನು ಅಂಟಿಸಲಾಗಿದೆ, ಹೀಗಾಗಿ ಈ ದೋರಣೆಯ ವಿರುದ್ಧ ಕನ್ನಡಪರ ಹೋರಾಟಗಾರರು ರೊಚ್ಚಿಗೆದ್ದಿದ್ದಾರೆ,
ಹರಿಹರ ವೀರಮಲ್ಲು ಸಿನಿಮಾ ತೆರೆಕಂಡಿರುವ ಚಿತ್ರಮಂದಿರಗಳಿಗೆ ಲಗ್ಗೆಯಿಟ್ಟ ಕನ್ನಡಪರ ಹೋರಾಟಗಾರು ಪೋಸ್ಟರ್ ಗಳು ಮತ್ತು ಬ್ಯಾನರ್ ಗಳನ್ನು ಹರಿದು, ಕಟೌಟ್ ಗಳನ್ನು ತೆರವುಗೊಳಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಈ ವೇಳೆ ಸ್ಧಳದಲ್ಲಿದ್ದ ಪವನ್ ಕಲ್ಯಾಣ್ ಅಭಿಮಾನಿಗಳು ಇದನ್ನು ವಿರೋಧಿಸುವ ಪ್ರಯತ್ನ ಮಾಡಿದರಾದ್ರೂ, ಕನ್ನಡಿಗರ ಆಕ್ರೋಶ ಕಂಡು ಸುಮ್ಮನಾಗಿದ್ದಾರೆ,

ಚಿಕ್ಕಮಗಳೂರು ಕನ್ನಡ ಭವನದಲ್ಲಿ ರಾಜ್ಯ ಮಟ್ಟದ ಗಾಯನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ

ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನಹಡಗಲಿ ಮತ್ತು ಕರ್ನಾಟಕ ರಾಜ್ಯ ಬರಹಗಾರರ ಸಂಘದ ಚಿಕ್ಕಮಗಳೂರು ಜಿಲ್ಲಾ ಘಟಕದ ಸಹಯೋಗದಲ್ಲಿ ಚಿಕ್ಕಮಗಳೂರಿನ ಕನ್ನಡ ಭವನದಲ್ಲಿ ರಾಜ್ಯಮಟ್ಟದ ಗಾಯನ ಹಾಗೂ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ದಿನಾಂಕ 27.07.2025ರ ಭಾನುವಾರ ಬೆಳಿಗ್ಗೆ 10:00 ಗಂಟೆಗೆ ಏರ್ಪಡಿಸಲಾಗಿದೆ.

ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ ರಾಜ್ಯ ಸಂಘವು ಪ್ರತಿ ಭಾನುವಾರ ಆನ್ಲೈನ್ ನಲ್ಲಿ ಚಿತ್ರಗೀತೆ ಒಳಗೊಂಡು ಜಾನಪದ ಗೀತೆ, ಭಾವಗೀತೆ ಸ್ಪರ್ಧೆಗಳನ್ನು ಏರ್ಪಡಿಸಿಕೊಂಡು ಬಂದು ಭಾಗವಹಿಸಿದ ಎಲ್ಲಾ ಗಾಯಕ ಗಾಯಕಿಯರಿಗೆ ಪ್ರಶಸ್ತಿ ಪತ್ರ ವಿತರಿಸಿ ಪ್ರೋತ್ಸಾಹಿಸಿಕೊಂಡು ಬಂದಿದೆ. ಹೀಗೆ ಭಾಗವಹಿಸಿದ ಗಾಯಕ ಗಾಯಕಿಯರಲ್ಲಿ 34 ಮಂದಿ ಗಾಯಕ ಗಾಯಕಿಯರನ್ನು ಆಯ್ಕೆ ಮಾಡಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಸಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲಾ ಬರಹಗಾರ ಸಂಘದ ಅಧ್ಯಕ್ಷರು ಡಾ. ವಿದ್ಯಾ ಕೆ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಬರಹಗಾರರ ಸಂಘದ ರಾಜ್ಯ ಅಧ್ಯಕ್ಷರು ಮಧುನಾಯಕ್ ಲಂಬಾಣಿ ಉದ್ಘಾಟಿಸುವರು

ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಸೂರಿ ಶ್ರೀನಿವಾಸ್ ಆಶಯ ನುಡಿ ನುಡಿಯುವರು. ಕರ್ನಾಟಕ ರಾಜ್ಯ ಬರಗಾಲ ಸಂಘದ ಗೌರವಾಧ್ಯಕ್ಷರು ಹಾಗೂ ಸಾಹಿತಿಗಳು ಗೊರೂರು ಅನಂತರಾಜು, ಹಾಸನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಹಾಗೂ ಕುರುವಂಜಿ ಕೆ.ಪಿ.ವೆಂಕಟೇಶ್ ಮಾಜಿ ರಾಜ್ಯಾಧ್ಯಕ್ಷರು ಸಫಾಯಿ ಕರ್ಮಚಾರಿ ನಿಗಮ ಮಂಡಳಿ, ಬಿ. ಎಲ್. ಪ್ರವೀಣ್ ಬೆಟ್ಟಗೇರಿ ಗುತ್ತಿಗೆದಾರರು, ಚಿಕ್ಕಮಗಳೂರು, ಜಯಣ್ಣ ಉಗ್ರಾಣ ಪಾಲಕರು, ಮೆಸ್ಕಾಂ, ಎಂ ಎಸ್ ನಾಗರಾಜ್ ಗೌರವಾಧ್ಯಕ್ಷರು, ಎಚ್ ಎಂ ಜಗದೀಶ್, ಉಪಾಧ್ಯಕ್ಷರು, ಹಸೖನಾರ್ ಬಿಳಿಗುಳ, ಜಿಲ್ಲಾ ಕೋಶಾಧ್ಯಕ್ಷರು, ರಾಕೇಶ್ ಸಿಂಗ್ ನಿರ್ದೇಶಕರು, ಡಾ. ಶೈಲಜಾಕುಮಾರ್, ಭರತನಾಟ್ಯ ಶಿಕ್ಷಕರು ಹಾಸನ, ವಿನೋದ್ ಗೌರವ ಸಲಹೆಗಾರರು, ಇಂಪಾ ನಾಗರಾಜ್ ಗೌರವ ಕಾಯ೯ದರ್ಶಿ, ಶ್ರೀ ನವೀನ್ ಬಿ.ಆರ್. ವಿಜಯ್ ಕುಮಾರ್ ಸಿ.ಆರ್. ಗೌ ಕಾರ್ಯದರ್ಶಿ, ರವಿ ಕುನ್ನಳ್ಳಿ ಗೌ ಸಲಹೆಗಾರರು ಭಾಗವಹಿಸುವರು. ಸಾಧಕರಿಗೆ ಸನ್ಮಾನವನ್ನು ಮಹಾಭಾರತ ಕಲಾವಿದರು ಮಧುಚಂದ್ರ, ಮಹಾಭಾರತ ಕಲಾವಿದರು ಹಾಗೂ ರಮೇಶ ಯಾದವ್ ಕಾಮಿಡಿ ಕಿಲಾಡಿಗಳು ಕಲಾವಿದರು ರಾಜ್ಯ ಮಟ್ಟದ ಕನ್ನಡ ಕೋಗಿಲೆ ಪ್ರಶಸ್ತಿ ವಿತರಿಸುವರು.

 2025-26 ನೇ ಸಾಲಿನ ಲಲಿತಕಲಾ ಅಕಾಡೆಮಿಯ ಪುಸ್ತಕ ಬಹುಮಾನಕ್ಕಾಗಿ ಅರ್ಜಿ ಆಹ್ವಾನ

ಕರ್ನಾಟಕ ಲಲಿತಕಲಾ ಅಕಾಡೆಮಿಯು 2025ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗಾಗಿ ಚಿತ್ರಕಲೆಗೆ ಸಂಬಂಧಿಸಿದ ಕನ್ನಡ ಪುಸ್ತಕಗಳ ಬಹುಮಾನಕ್ಕಾಗಿ ಅರ್ಜಿ ಆಹ್ವಾನಿಸಿದೆ.
ಪ್ರತಿ ಪ್ರಕಾರದಲ್ಲಿ ತೀರ್ಪುಗಾರರು ಆಯ್ಕೆ ಮಾಡುವ 01 ಪುಸ್ತಕಕ್ಕೆ ಬಹುಮಾನ ನೀಡಲಾಗುವುದು. ಬಹುಮಾನಕ್ಕೆ ಸಲ್ಲಿಸುವ ಪುಸ್ತಕಗಳು 2024 ಜನವರಿ 01 ರಿಂದ 2024ರ ಡಿಸೆಂಬರ್ 31ರೊಳಗೆ ಪ್ರಥಮ ಆವೃತ್ತಿಯಾಗಿ ಪ್ರಕಟವಾಗಿರುವ ಪುಸ್ತಕಗಳಾಗಿರಬೇಕು. ಪುಸ್ತಕದ ತಾಂತ್ರಿಕ ಪುಟದಲ್ಲಿ ಪ್ರಥಮ ಮುದ್ರಣ 2024 ಎಂದು ಮುದ್ರಿತವಾಗಿರಬೇಕು.
2024ನೇ ಸಾಲಿನ ಚಿತ್ರಕಲೆಗೆ ಸಂಬಂಧಿಸಿದ ಪ್ರಕಟಿತ ಅತ್ಯುತ್ತಮ ಪುಸ್ತಕಕ್ಕೆ ಬಹುಮಾನದ ಮೊತ್ತ ರೂ. 25,000/- ಗಳನ್ನು ನೀಡಲಾಗುವುದು.
ಪುಸ್ತಕ ಬಹುಮಾನಕ್ಕೆ ಕಳುಹಿಸುವ ಪುಸ್ತಕವು ಪುನರ್ ಮುದ್ರಣವಾಗಿರಬಾರದು, ಮೊದಲ ಆವೃತ್ತಿಯಲ್ಲಿ ಪ್ರಕಟಗೊಂಡಿರಬೇಕು. ಪುಸ್ತಕ ಬಹುಮಾನಕ್ಕೆ ಕಳುಹಿಸುವ ಪುಸ್ತಕಗಳು ಯಾವುದೇ ತರಗತಿಗಳಿಗೆ ಹಾಗೂ ವಿಶ್ವವಿದ್ಯಾಲಯದ ಪಠ್ಯಪುಸ್ತಕವಾಗಿರಬಾರದು.
ಪುಸ್ತಕವು ಲೇಖಕರ ಸ್ವಂತ ರಚನೆಯಾಗಿರಬೇಕು. ಸಂಪಾದಿತ ಕೃತಿಯಾಗಿರಬಾರದು. ಹಾಗೂ ಪುಸ್ತಕವನ್ನು 2025ನೇ ಆಗಸ್ಟ್ 30 ರ ಒಳಗಾಗಿ ಅಕಾಡೆಮಿಗೆ ತಲುಪಿಸಬೇಕು.
ಪುಸ್ತಕ ಬಹುಮಾನಕ್ಕೆ ಆಯ್ಕೆಯಾದ ಪುಸ್ತಕದ ಲೇಖಕರಿಗೆ ಈ ಬಹುಮಾನ ನೀಡಲಾಗುವುದು. ಬಹುಮಾನಕ್ಕೆ ಪರಿಗಣಿಸಲು ಕನಿಷ್ಠ 03 ಜನ ಲೇಖಕರು ಸ್ಪರ್ಧೆಯಲ್ಲಿ ಭಾಗವಹಿಸಬೇಕು.
ಒಂದೇ ಪ್ರಕಾರದಲ್ಲಿ ಎರಡು ಬಾರಿ ಪುಸ್ತಕ ಬಹುಮಾನ ಪಡೆದವರ ಪುಸ್ತಕಗಳನ್ನು ಅದೇ ಪ್ರಕಾರದಲ್ಲಿ ಮತ್ತೆ ಬಹುಮಾನಕ್ಕೆ ಪರಿಗಣಿಸಲಾಗುವುದಿಲ್ಲ.
ವಿವಿಧ ಸರ್ಕಾರಿ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಪುಸ್ತಕ ಪ್ರಾಧಿಕಾರ. ಇತರೆ ಎಲ್ಲಾ ಅಕಾಡೆಮಿಗಳು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇನ್ನೂ ಮುಂತಾದ ಅನುದಾನ ಸಂಸ್ಥೆಗಳಿಂದ ಅನುದಾನ ಪಡೆದು ತಾವೇ ಪ್ರಕಟಿಸಿದ ಅಥವಾ ಅಂತಹ ಸಂಸ್ಥೆಗಳಿಂದ ಬರೆಸಿ ಪ್ರಕಟಿಸಿದ ಕೃತಿಗಳನ್ನು ಪ್ರಶಸ್ತಿಗೆ ಪರಿಗಣಿಸುವುದಿಲ್ಲ.
ಲಲಿತಕಲೆಗೆ ಸಂಬಂಧಪಟ್ಟ ಸಾಂಪ್ರದಾಯಿಕ, ಸಮಕಾಲೀನ, ಚಿತ್ರ. ಭಿತ್ತಿ ಚಿತ್ರಕಲೆ, ಗ್ರಾಫಿಕ್ಸ್ ಯಾವುದೇ ಪ್ರಕಾರದ ಲಲಿತಕಲೆಗೆ ಸಂಬಂಧಪಟ್ಟದ್ದಾಗಿರಬೇಕು. ಶೈಕ್ಷಣಿಕ ಅಧ್ಯಯನಕ್ಕಾಗಿ ಪಿ.ಹೆಚ್.ಡಿ. ಡಿ.ಲಿಟ್, ಪ್ರಬಂಧ ಅಥವಾ ಅಧ್ಯಯನಕ್ಕಾಗಿ ಮಾಡಿದಂತಹ ಪುಸ್ತಕಗಳನ್ನು ಪರಿಗಣಿಸಲಾಗುವುದಿಲ್ಲ.
ಕೃತಿ, ಪುಸ್ತಕವು ಕನಿಷ್ಠ 100 ಪುಟಗಳಿಗೂ ಹೆಚ್ಚಿನ ಪುಟಗಳನ್ನು ಹೊಂದಿರತಕ್ಕದ್ದು. ಒಬ್ಬ ಲೇಖಕರು ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿ ಬಹುಮಾನ ಪಡೆದ ನಂತರ ಆ ಲೇಖಕರು ಮತ್ತೆ 2 ವರ್ಷಗಳವರೆಗೆ ಅಕಾಡೆಮಿಯಿಂದ ಬಹುಮಾನ ಪಡೆಯುವಂತಿಲ್ಲ.
ಪುಸ್ತಕ ಬಹುಮಾನಕ್ಕೆ ಅರ್ಜಿ ಸಲ್ಲಿಸುವ ಲೇಖಕರು ತಾವು ಕಳುಹಿಸುವ ಪುಸ್ತಕದ 4 ಪ್ರತಿಗಳನ್ನು ಉಚಿತವಾಗಿ ಕರ್ನಾಟಕ ಲಲಿತಕಲಾ ಅಕಾಡೆಮಿಗೆ ಕಡ್ಡಾಯವಾಗಿ ನೀಡಬೇಕು. ಪುಸ್ತಕಗಳನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸಲಾಗುವುದಿಲ್ಲ. ಕನ್ನಡ ಭಾμÉಯ ಪುಸ್ತಕಗಳನ್ನು ಮಾತ್ರ ಪರಿಗಣಿಸಲಾಗುವುದು. ತೀರ್ಪುಗಾರರು ಆಯ್ಕೆ ಮಾಡಿದ ಒಂದು ಪುಸ್ತಕಕ್ಕೆ ಬಹುಮಾನ ನೀಡಲಾಗುವುದು.
ಅಕಾಡೆಮಿಯಲ್ಲಿ ಪ್ರಸಕ್ತ ಸಾಲಿನಲ್ಲಿ ಸ್ವೀಕೃತವಾದ ಪುಸ್ತಕಗಳನ್ನು 03 ಮಂದಿ ವಿಷಯ ತಜ್ಞರಿಗೆ ಕಳುಹಿಸಿಕೊಟ್ಟು, ಅವರು ಶಿಫಾರಸ್ಸು ಮಾಡಿದ ಪುಸ್ತಕಗಳನ್ನು ಅಕಾಡೆಮಿಯ ಸಭೆಯಲ್ಲಿ ಮಂಡಿಸಿ. ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಅಕಾಡೆಮಿಯ ತೀರ್ಮಾನವೇ ಅಂತಿಮ ತೀರ್ಮಾನವಾಗಿರುತ್ತದೆ.
ಪುಸ್ತಕ ಬಹುಮಾನಕ್ಕೆ ಕಳುಹಿಸುವ ಪುಸ್ತಕಗಳು 2025ನೇ ಆಗಸ್ಟ್ 30 ರ ಒಳಗಾಗಿ (ಸರ್ಕಾರಿ ರಜಾ ದಿನಗಳನ್ನು ಹೊರತು ಪಡಿಸಿ) ಖುದ್ದಾಗಿ ಅಥವಾ ಅಂಚೆ ಮೂಲಕ ಕರ್ನಾಟಕ ಲಲಿತಕಲಾ ಅಕಾಡೆಮಿಗೆ ಸಲ್ಲಿಸಬಹುದಾಗಿದೆ.
ಪುಸ್ತಕಗಳ ತಲಾ 4 ಪ್ರತಿಗಳನ್ನು ರಿಜಿಸ್ಟ್ರಾರ್, ಕರ್ನಾಟಕ ಲಲಿತಕಲಾ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆ.ಸಿ.ರಸ್ತೆ, ಬೆಂಗಳೂರು-580 002 ಇವರಿಗೆ ಕಳುಹಿಸಿ ಕೊಡಬೇಕು. ಹಾಗೂ ಪುಸ್ತಕದ ಮೇಲೆ ಮತ್ತು ಪುಸ್ತಕದ ಶೀರ್ಷಿಕೆ ಪುಟದಲ್ಲಿ ಯಾವ ಚಿತ್ರಕಲಾ ಪ್ರಕಾರಕ್ಕೆ ಸೇರುತ್ತದೆ ಎನ್ನುವುದನ್ನು ಸ್ಪಷ್ಟವಾಗಿ ನಮೂದಿಸಿರಬೇಕು ಎಂದು ಲಲಿತ ಕಲೆ ಅಕಾಡೆಮಿಯ ರಿಜಿಸ್ಟ್ರಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯಪಾಲರನ್ನು ಭೇಟಿ ಮಾಡಿದ ಶ್ರೀಲಂಕಾದ 25 ಸದಸ್ಯರ ಯುವ ರಾಜಕೀಯ ನಾಯಕರ ನಿಯೋಗ

ಶ್ರೀಲಂಕಾದ 25 ಸದಸ್ಯರ ಯುವ ರಾಜಕೀಯ ನಾಯಕರುಗಳ ಪ್ರತಿನಿಧಿ ಮಂಡಳಿಯು ಇಂದು ಕರ್ನಾಟಕದ ಮಾನ್ಯ ರಾಜ್ಯಪಾಲರಾದ ಶ್ರೀ ಥಾವರ್‍ಚಂದ್ ಗೆಹ್ಲೋಟ್ ಅವರನ್ನು ರಾಜಭವನದಲ್ಲಿ ಭೇಟಿ ಮಾಡಿತು.
ಈ ಸಂದರ್ಭದಲ್ಲಿ, ಮಂಡಳಿಯ ಸದಸ್ಯರು ರಾಜ್ಯಪಾಲರೊಂದಿಗೆ ಕರ್ನಾಟಕ ಮತ್ತು ಬೆಂಗಳೂರು ನಗರ ಹಾಗೂ ಇಲ್ಲಿನ ವ್ಯಾಪಾರ, ಸಂಸ್ಕøತಿ ಮತ್ತು ಪರಂಪರೆ ಕುರಿತು ಸಂತೋಷವನ್ನು ವ್ಯಕ್ತಪಡಿಸಿದರು. ಅವರು ಕರ್ನಾಟಕದ ತಾಂತ್ರಿಕ ಅಭಿವೃದ್ಧಿ ಮತ್ತು ಬೆಂಗಳೂರಿನ ಐಟಿ ಹಬ್ ಸ್ಥಾನಮಾನವನ್ನು ಮೆಚ್ಚಿಕೊಂಡರು.
ರಾಜ್ಯಪಾಲರು ಮಂಡಳಿಗೆ ಆತ್ಮೀಯವಾಗಿ ಸ್ವಾಗತಿಸಿ, ನಿಯೋಗವು ಕರ್ನಾಟಕ ಹಾಗೂ ಬೆಂಗಳೂರಿಗೆ ಆಗಮಿಸಿದಕ್ಕಾಗಿ ಅಭಿನಂದಿಸಿ, ಕರ್ನಾಟಕ ಹಾಗೂ ಬೆಂಗಳೂರು ಭಾರತದ ತಾಂತ್ರಿಕ, ಶೈಕ್ಷಣಿಕ ಮತ್ತು ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುತ್ತಿರುವ ಕುರಿತು ತಿಳಿಸಿದರು.
ಈ ಭೇಟಿಯು, ಭಾರತೀಯ ಸಾಂಸ್ಕøತಿಕ ಸಂಬಂಧ ಮಂಡಳಿ ಅವರ ವತಿಯಿಂದ ಆಯೋಜಿಸಲಾದ ಪ್ರವಾಸದ ಭಾಗವಾಗಿದ್ದು, ಶ್ರೀಲಂಕಾದ ಯುವ ರಾಜಕೀಯ ನಾಯಕರಿಗೆ ಭಾರತದ ಸಂಸ್ಕøತಿ, ಪ್ರಜಾಪ್ರಭುತ್ವ ಮತ್ತು ಆರ್ಥಿಕ ವ್ಯವಸ್ಥೆಯ ಬಗ್ಗೆ ಸಮಗ್ರ ಅರಿವು ನೀಡುವ ಉದ್ದೇಶ ಹೊಂದಿದೆ.

ಬೆಂಗಳೂರಿನ ಕೆರೆಗಳ ಕರೆಗೆ ಮಿಡಿದ ಸ್ಥಾಯಿ ಸಮಿತಿ

ಒಂದಾನೊಂದು ಕಾಲದಲ್ಲಿ ಬೆಂಗಳೂರು ಸುತ್ತ-ಮುತ್ತಲಿನ ಗ್ರಾಮಗಳ ಜೀವಜಲವಾಗಿದ್ದ ಕೆರೆಗಳು ಇಂದು ನಗರ ಬೆಳೆದಂತೆಲ್ಲ ಮಾನವನ ಕಾಲ್ತುಳಿತಕ್ಕೆ ಸಿಕ್ಕಿ ನಲುಗಿವೆ. ಒಂದಿಷ್ಟು ಕೆರೆಗಳಂತು ಸತ್ತು ಕೊಳೆತು ನಾರುತ್ತಿರುವ ವಾಸನೆ ಸುತ್ತಲಿನ ಒಂದಿಷ್ಟು ಕಿಮೀ ವರೆಗೆ ವ್ಯಾಪಿಸಿದೆ.

ಮಾನವರ ವಾಸನೆಗೆ ಕೆರೆಗಳು ಸಂಕುಚಿತಗೊಂಡವೊ ಅಥವಾ ಕೆರೆಯ ವಾಸನೆಗೆ ಮಾನವ ಸಂಕುಚಿತಗೊಂಡನೊ ಎಂಬ ಗೊಂದಲದೊಳಗೆ ಕೆರೆಗಳಿದ್ದ ಸುಳಿವುಗಳ ನಾಮಾವಶೇಷ ಮಾಡುವ ಮಾನವನ ದುರಾಸೆಗೆ ಕೆರೆ ಹಾಗೂ ಮಾನವರ ಬದುಕು ಅನಾರೋಗ್ಯಕ್ಕಿಡಾಗಿದೆ.

ಇಂತಹ ಕೆರೆಗಳ ನವ ನಿರ್ಮಾಣಕ್ಕಾಗಿ ಪಣ ತೊಟ್ಟಿರುವ ರಾಜ್ಯ ಸರ್ಕಾರ ರಚಿಸಿರುವ ಸ್ಥಾಯಿ ಸಮಿತಿಯು ಇಂದು ನಗರದ ಹೊರ ವಲಯದ ವಿವಿಧ ಕೆರೆಗಳಿಗೆ ಬೇಟಿ ನೀಡಿ ವೀಕ್ಷಣೆ ನೆಡೆಸಿತು.

ಬೆಂಗಳೂರು ನಗರದ ಸಂರಕ್ಷಿತ ಕೆರೆಗಳು ಹಾಗೂ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಿಗೆ ಕರ್ನಾಟಕ ವಿಧಾನಮಂಡಲದ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿಯ ಪರಿವೀಕ್ಷಣಾ ಭೇಟಿ ತಂಡವು ಇಂದು ವಿಧಾನಸೌಧದ ಕೊಠಡಿ ಸಂಖ್ಯೆ 106 ರಲ್ಲಿ ಸಭೆ ಸೇರಿ ಇಂದು ಭೇಟಿ ನೀಡಬೇಕಾದ ಕೆರೆಗಳ ಸ್ಥಿತಿಗತಿ ಕುರಿತು ಪೂರ್ವಭಾವಿ ಸಭೆ ನೆಡೆಸಿ ನಂತರ ಕೆರೆಗಳ ವೀಕ್ಷಣೆಗೆ ತೆರಳಿತು.

ಶಿವಾಜಿ ನಗರದ ಶಾಸಕರು ಹಾಗೂ ಸ್ಥಾಯಿ ಸಮಿತಿಯ ಅಧ್ಯಕ್ಷರು ಆದ ರಿಜ್ವಾನ್ ಅರ್ಷದ್ ಅವರ ನೇತೃತ್ವದಲ್ಲಿ ಸಮಿತಿಯ ಸದಸ್ಯರಾದ ಹಾಗೂ ಶಾಸಕರುಗಳಾದ ರವಿಸುಬ್ರಹ್ಮಣ್ಯ, ಹರೀಶ್ ಪೂಂಜ, ವೆಂಕಟಶಿವಾ ರೆಡ್ಡಿ, ವಿಧಾನ ಪರಿಷತ್ ಸದಸ್ಯರುಗಳಾದ ಗೋವಿಂದರಾಜು ಮತ್ತು ಶ್ರೀಮತಿ ಶಶಿಕಲಾ ಜೊಲ್ಲೆ ಅವರನ್ನೊಳಗೊಂಡ ತಂಡ ಮೊದಲು ಭೇಟಿ ನೀಡಿದ್ದು ಮೇಡಹಳ್ಳಿಯ ಎಲೆ ಮಲ್ಲಪ್ಪ ಶೆಟ್ಟಿ ಕೆರೆಗೆ, ಅಲ್ಲಿನ ವಾಸ್ತವಾಂಶವನ್ನು ಪರಿಶೀಲಿಸಿ ಈಗಾಗಲೇ 9.5 ಕಿ.ಮೀ. ಫೆನ್ಸಿಂಗ್ ಹಾಕಲಾಗಿದೆ, ಇನ್ನೂ 4.5 ಕಿ.ಮೀ. ಬಾಕಿ ಇರುವ ಕಾರಣಕ್ಕಾಗಿ ಸ್ಥಳದಲ್ಲಿದ್ದ ಸಂಬಂಧಿತ ಅಧಿಕಾರಿಗಳಿಗೆ ಕೆರೆಗೆ 10 ದಿನದ ಒಳಗಾಗಿ ಪೆÇಲೀಸ್ ನೆರವು ಪಡೆದು ಮಾಕಿರ್ಂಗ್ ಮಾಡಿ ಬೇಲಿ ಹಾಕುವ ಕಾರ್ಯವನ್ನು ತ್ವರಿತವಾಗಿ ಮಾಡಬೇಕೆಂದು ಗಡುವು ವಿಧಿಸಿದರು.

ಕೆರೆಗೆ ಹೊಂದಿಕೊಂಡಂತಿರುವ ಖಾಸಗಿ ಲೇಔಟ್ ನವರು ಕೆರೆ ಜಾಗವನ್ನೆ ರಸ್ತೆಯನ್ನಾಗಿ ಮಾಡಿಕೊಂಡಿರುವ ಕುರಿತು ವಿವರ ಕೇಳಿದ ಅಧ್ಯಕ್ಷರು ಶೀಘ್ರದಲ್ಲಿ ಬಿಡಿಎ ನೊಂದಿಗೆ ಚರ್ಚಿಸಲು ಸೂಚಿಸಿದರು. ಇದೇ ಸಂದರ್ಭದಲ್ಲಿ ಕೆರೆಯ ಹತ್ತಿರವಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ಮಿಸಿರುವ ಎಲೆ ಮಲ್ಲಪ್ಪ ಚೆಟ್ಟಿಕೆರೆ ಸಮೀಪದ ತ್ಯಾಜ್ಯ ನೀರು ಸಂಸ್ಕರಣಾ ಘಟಕಕ್ಕೆ ಸಹ ಭೇಟಿ ನೀಡಿ ಪರಿಶೀಲಿಸಿದರು. ಒತ್ತುವರಿ ತೆರವು ಹಾಗೂ ವಾಟರ್ ಟ್ರೀಟ್ ಮೆಂಟ್ ಪ್ಲಾಂಟ್ ಹೆಚ್ಚಿನ ಸಾಮಥ್ರ್ಯದ ನವೀಕರಣ ಕೈಗೊಳ್ಳಲು ಅಗತ್ಯ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ನಂತರ ಎರಡನೆಯದಾಗಿ ವರ್ತೂರು ಕೆರೆಗೆ ಭೇಟಿ ನೀಡಿದ ತಂಡಕ್ಕೆ ಕೆರೆಗೆ ಚರಂಡಿ ನೀರು ಸೇರದಂತೆ ಕ್ರಮ ಕೈಗೊಂಡಿರುವ ಬಗ್ಗೆ ಹಾಗೂ ಕೆರೆ ಸುತ್ತ ಬಂದೋಬಸ್ತ್ ಮಾಡಲಾಗಿದೆ, ಕೇವಲ ಮಳೆ ನೀರು ಕೆರೆಗೆ ಬರುವಂತೆ ಕ್ರಮವಹಿಸಲಾಗಿದೆ, ಯಾವುದೇ ಒತ್ತುವರಿ ಇರುವುದಿಲ್ಲ, ಬಿಬಿಎಂಪಿ ಗೆ ಕೆರೆ ನಿರ್ವಹಣೆಯನ್ನು ವರ್ಗಾಯಿಸುವ ಬಗ್ಗೆ ಮಾತುಕತೆ ನಡೆದಿದ್ದು ಶೀಘ್ರದಲ್ಲಿ ವರ್ಗಾಯಿಸಲಾಗುವುದು ಎಂದು ಬಿಡಿಎ ಅಧಿಕಾರಿಗಳು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಕೆರೆಯ ಸುತ್ತಲಿನ ಸ್ವಚ್ಛತೆ ಕುರಿತಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಅಧ್ಯಕ್ಷರು ಬಿಡಿಎ, ಬಿಬಿಎಂಪಿ, ಕಂದಾಯ ಹಾಗೂ ಕೆರೆಗಳಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳನ್ನು ಒಳಗೊಂಡ ಸಭೆಯನ್ನು ಶೀಘ್ರದಲ್ಲಿ ಹಮ್ಮಿಕೊಳ್ಳಲು ಮತ್ತು ಉತ್ತಮ ಗುಣಮಟ್ಟದಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಮಾಡುವ ಬಗ್ಗೆ ಕ್ರಮವಹಿಸಬೇಕೆಂದು ಬಿಡಿಎ ಮುಖ್ಯ ಇಂಜಿನಿಯರ್ ಡಾ.ಶಾಂತರಾಜಣ್ಣ ಅವರಿಗೆ ಸೂಚಿಸಿದರು.

ಕೆರೆಯ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ತಲೆ ಎತ್ತಿರುವ ಸಾವಿರಾರು ಅಪಾರ್ಟ್ ಮೆಂಟ್ ಗಳು ಬಳಸಿ ಬಿಡುವ ನೀರು ಯಾವ ಪ್ರಮಾಣದಲ್ಲಿ ಶುದ್ದಿಕರಿಸಲಾಗುತ್ತಿದೆ ಹಾಗೂ ಎಲ್ಲಿಗೆ ಬಿಡುತ್ತಿದ್ದಾರೆ ಎನ್ನುವ ಕುರಿತು ಸಂಬಂಧಿಸಿದ ಇಲಾಖೆಗಳು ಕಾಲ-ಕಾಲಕ್ಕೆ ಪರಿಶೀಲಿಸಬೇಕು ಎಂದರು.

ಸ್ಥಳದಲ್ಲಿದ್ದ ಸಾರ್ವಜನಿಕರಿಂದ ಕೆರೆಯ ಪರಿಸ್ಥಿತಿ ಕುರಿತು ಅಭಿಪ್ರಾಯ ಪಡೆದ ಸಮಿತಿಯು ಎಲ್ಲಾ ಸಮಸ್ಯೆಗಳನ್ನು ಆಲಿಸಿ ಸಂಬಂಧಿಸಿದ ಇಲಾಖೆಗಳಿಗೆ ಪರಿಹಾರ ಕಾರ್ಯ ಕೈಗೊಳ್ಳಲು ಸೂಚಿಸಿದರು.

ನೂರಾರು ಕೋಟಿ ಪ್ರತಿ ವರ್ಷ ಸರ್ಕಾರದಿಂದ ಖರ್ಚು ಮಾಡಿದರು ಸಹ ಬೆಂಗಳೂರಿನ ಕೆರೆಗಳ ಸ್ಥಿತಿ ಬದಲಾಗದಿರುವುದು ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ ಎಂದರು.

ಮೂರನೆಯದಾಗಿ ಬೆಳ್ಳಂದೂರು ಕೆರೆಗೆ ಭೇಟಿ ನೀಡಿ ಅದರ ವಿಶಾಲತೆಗೆ ಮಾರು ಹೋದ ಅಧ್ಯಕ್ಷರು ನಗರದ ನಡುವೆ ಇರುವ ವಿಶಾಲವಾದ ಕೆರೆ ಬೆಂಗಳೂರಿನ ಆಸ್ತಿ, ಇದನ್ನು ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿ, ಒಳ ಹರಿವು ಮಾಹಿತಿ ಪಡೆದು ವೈಜ್ಞಾನಿಕವಾಗಿ ನೀರಿನ ಸ್ವಚ್ಛತೆ ಕಾಪಾಡುವ ಹಾಗೂ ಇತರೇ ಸಮಸ್ಯೆಗಳನ್ನು ಗುರುತಿಸಿ ಶೀಘ್ರಿದಲ್ಲಿ ಪರಿಹಾರ ಕಂಡುಕೊಳ್ಳಬೇಕು ಹಾಗೂ ಕೆರೆಯನ್ನು ಅಭಿವೃದ್ಧಿಪಡಿಸಬೇಕು.

ಹೆಚ್ಚಿನ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಸ್ಥಾಪನೆಗೆ ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆಗೆ ಇಲಾಖೆ ವತಿಯಿಂದ ಬೇಡಿಕೆಯ ಕಡತ ಸಲ್ಲಿಸಬೇಕು, ಈಗಾಗಲೇ ಶೇ. 80 ಹೂಳು ಎತ್ತಲಾಗಿದೆ, ಬಿಡಿಎ ನಿಂದ ಕೈಗೊಳ್ಳಲಾಗಿರುವ ಅಭಿವೃದ್ಧಿ ಕಾರ್ಯಗಳು ಮುಂದಿನ ವರ್ಷದೊಳಗೆ ಮುಗಿಸಬೇಕು, ಬಿಬಿಎಂಪಿ ಹಾಗೂ ಬೆಂಗಳೂರು ಜಲ ಮಂಡಳಿಯಿಂದ ಕೆರೆ ಒತ್ತುವರಿಯಾಗದಂತೆ ಹಾಗೂ ತ್ಯಾಜ್ಯ ಸುರಿಯದಂತೆ ನಿಗಾವಹಿಸಬೇಕೆಂದರು.

ನಾಲ್ಕನೆಯದಾಗಿ ಅಗರ ಕೆರೆಗೆ ಭೇಟಿ ನೀಡಿದ ತಂಡ ಕೆರೆಯ ಅಭಿವೃದ್ಧಿ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸಿ ಸ್ಥಳದಲ್ಲಿದ್ದ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿತು. ಈ ಸಂದರ್ಭದಲ್ಲಿ ಸ್ಥಳೀಯ ಶಾಸಕ ಸತೀಶ್ ರೆಡ್ಡಿ ಅವರ ಒತ್ತಾಯದ ಮೇರೆಗೆ ಅಗರ ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು ಸಹ ವೀಕ್ಷೀಸಿದರು. ಎರಡು ವಿಶೇಷ ಬಿ ಎಮ್ ಟಿ ಸಿ ಬಸ್ ಗಳಲ್ಲಿ ತೆರಳಿದ್ದ ಸಮಿತಿ ಸದಸ್ಯರು ಹಾಗೂ ಹಿರಿಯ ಅಧಿಕಾರಿಗಳ ಜೊತೆಯಲ್ಲಿ ಬಿಬಿಎಂ ಪಿ ವಿಶೇಷ ಆಯುಕ್ತರಾದ ಕರಿಗೌಡ, ಸಣ್ಣ ನೀರಾವರಿ ಜಂಟಿ ಕಾರ್ಯದರ್ಶಿ ಪವಿತ್ರ ಅವರು ಉಪಸ್ಥಿತರಿದ್ದರು.