Home Blog Page 36

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಪೇದೆ ಹುದ್ದೆಗೆ ನೇಮಕಗೊಂಡ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ

• ಅನುಕಂಪದ ಆಧಾರದ ಮೇಲೆ ಕರಾಸಾ ಪೇದೆ ಹುದ್ದೆಗೆ ನೇಮಕಗೊಂಡ 45 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ವಿತರಣೆ
• ಅಪಘಾತದಲ್ಲಿ ಮೃತಪಟ್ಟ ಸಿಬ್ಬಂದಿಯ ಕುಟುಂಬಕ್ಕೆ ರೂ.1 ಕೋಟಿ ಪರಿಹಾರ ವಿತರಣೆ.
• ಅಪಘಾತ ಹೊರತುಪಡಿಸಿ ಇತರೆ ಕಾರಣಗಳಿಂದ ಮೃತಪಟ್ಟ 26 ಸಿಬ್ಬಂದಿಗಳ ಅವಲಂಬಿತರಿಗೆ ತಲಾ ರೂ.10 ಲಕ್ಷದಂತೆ, ರೂ. 2.60 ಕೋಟಿ ಪರಿಹಾರ ವಿತರಣೆ.
• ಐದು ಐರಾವತ ಕ್ಲಬ್ ಕ್ಲಾಸ್ 2.0 ಹೊಸ ಬಸ್ಸುಗಳ ಉದ್ಘಾಟನಾ.
*
ಇಂದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಛೇರಿಯಲ್ಲಿ, ಶ್ರೀ ರಾಮಲಿಂಗಾರೆಡ್ಡಿ, ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರು, ಶ್ರೀ ಮೊಹಮ್ಮದ್ ರಿಜ್ವಾನ್ ನವಾಬ್, ಮಾನ್ಯ ಉಪಾಧ್ಯಕ್ಷರು, ಕರಾರಸಾ ನಿಗಮ ರವರು 05 ಐರಾವತ ಕ್ಲಬ್ ಕ್ಲಾಸ್ 2.0 ವೋಲ್ವೋ ವಾಹನಗಳನ್ನು ಉದ್ಘಾಟನೆ ಮಾಡಿದರು.
1) ಅನುಕಂಪದ ಆಧಾರದ ಮೇಲೆ ನೇಮಕಾತಿ ಆದೇಶ ವಿತರಣೆ
 ನಿಗಮದಲ್ಲಿ ಕಳೆದ 10 ವರ್ಷಗಳಿಂದ ಅನುಕಂಪದ ಆಧಾರದ ಮೇಲೆ ನೇಮಕಾತಿ ಪ್ರಕ್ರಿಯೆಯು ಸ್ಥಗಿತಗೊಂಡಿದ್ದು, ಮಾನ್ಯ ಸಚಿವರ ಸೂಚನೆ ಮೇರೆಗೆ ಅನುಕಂಪದ ಆಧಾರದ ಮೇಲೆ ನೌಕರಿಗೆ ಪ್ರಕ್ರಿಯೆಯು ಪ್ರಾರಂಭಗೊಂಡ ಕಳದೆ 01 ವರ್ಷದ ಅವಧಿಯಲ್ಲಿ 271 ವಿವಿಧ ಹುದ್ದೆಗಳನ್ನು (ಕರಾಸಾ ಪೇದೆ-152, ಕಛೇರಿ ಸಹಾಯಕ (ಸ್ವಚ್ಛತೆ)-60, ತಾಂತ್ರಿಕ ಸಹಾಯಕ-37, ಚಾಲಕ ಕಂ ನಿರ್ವಾಹಕ-22) ಭರ್ತಿ ಮಾಡಲಾಗಿದೆ.
 ಇಂದು 45 ಅಭ್ಯರ್ಥಿಗಳಿಗೆ ಕರಾಸಾ ಪೇದೆ ಹುದ್ದೆಯ ನೇಮಕಾತಿ ಆದೇಶವನ್ನು ವಿತರಣೆ ಮಾಡಿದರು.
ಸಾರಿಗೆ ಸಿಬ್ಬಂದಿಗಳು ಹಗಲು – ಇರಳು ಸಂಸ್ಥೆಗಾಗಿ ಶ್ರಮಿಸಿರುವುದರಿಂದ ಸಾರಿಗೆ ಸಂಸ್ಥೆಯು ಇಂದು ಉನ್ನತ ಸ್ಥಾನದಲ್ಲಿರುತ್ತದೆ. ಮೃತ ಸಿಬ್ಬಂದಿಗಳ ಕುಟುಂಬವನ್ನು ನೋಡಿಕೊಳ್ಳುವುದು ಸಂಸ್ಥೆಯ ಜವಾಬ್ದಾರಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಮೃತರ ಅವಲಂಬಿತರಿಗೆ ನಾಲ್ಕು ನಿಗಮಗಳಲ್ಲಿ ಅನುಕಂಪದ ಆಧಾರದ ಮೇಲೆ 1000 ನೌಕರಿ ನೀಡಿರುವುದಾಗಿ ಮಾನ್ಯ ಸಚಿವರು ತಿಳಿಸಿದರು.

2) ಸಾರಿಗೆ ಸುರಕ್ಷಾ ವಿಮಾ ಯೋಜನೆ:
• ಸಂಸ್ಥೆಯು ತನ್ನ ಸಿಬ್ಬಂದಿಗಳ ಅವಲಂಬಿತರ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಕರ್ತವ್ಯದಲ್ಲಿರುವಾಗ ಅಥವಾ ಕರ್ತವ್ಯದಲ್ಲಿಲ್ಲದ ಸಂದರ್ಭದಲ್ಲಿ ಅಪಘಾತದಿಂದ ಮೃತಪಟ್ಟಲ್ಲಿ ರೂ.1 ಕೋಟಿ ಅಪಘಾತ ವಿಮಾ ಪರಿಹಾರ ಒದಗಿಸುವ ಸಾರಿಗೆ ಸುರಕ್ಷಾ ಅಪಘಾತ ವಿಮಾ ಯೋಜನೆಯನ್ನು ಜಾರಿಗೆ ತರಲಾಗಿರುತ್ತದೆ.
• ಇದುವರೆವಿಗೂ 26 ಜನ ನೌಕರರ ಕುಟುಂಬದವರಿಗೆ ತಲಾ ರೂ. 1 ಕೋಟಿಗಳ ಅಪಘಾತ ವಿಮಾ ಮೊತ್ತವನ್ನು ಈಗಾಗಲೇ ವಿತರಿಸಲಾಗಿದೆ. ಇಂದು, ಕರ್ತವ್ಯದಲ್ಲಿರುವಾಗ ಅಪಘಾತಕ್ಕೆ ಒಳಪಟ್ಟು ಮೃತಪಟ್ಟ ಓರ್ವ ಸಿಬ್ಬಂದಿಯ ಅವಲಂಬಿತರಿಗೆ ರೂ. 1 ಕೋಟಿ ಚೆಕ್ ನೀಡಲಾಗಿದೆ.
• ಒಟ್ಟಾರೆ 27 ಸಿಬ್ಬಂದಿಗಳ ಅವಲಂಭಿತರಿಗೆ ಒಟ್ಟಾರೆ ರೂ.27 ಕೋಟಿ ಪರಿಹಾರ ನೀಡಿದಂತಾಗುತ್ತದೆ.

3) ನೌಕರರ ಕುಟುಂಬ ಕಲ್ಯಾಣ ಪರಿಹಾರ ಯೋಜನೆ:
 ಹೃದಯಾಘಾತ, ಕ್ಯಾನ್ಸರ್, ಸ್ಟ್ರೋಕ್ ಮತ್ತಿತರ ಕಾರಣಗಳಿಂದ ಮರಣವನ್ನಪ್ಪುವ ನೌಕರರ ಸಂಖ್ಯೆಯು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿರುವ ವಿಷಯವನ್ನು ಮನಗಂಡು, ಈ ಕಾರಣದಿಂದ ಮೃತರಾಗುವ ಕುಟುಂಬದ ಅವಲಂಬಿತರು ಅನುಭವಿಸುವ ಕಷ್ಟಗಳನ್ನು ಗಮನಿಸಿ, ಪರಿಹಾರ ಮೊತ್ತವಾದ ರೂ. 3 ಲಕ್ಷಗಳನ್ನು ದಿನಾಂಕ: 01.11.2023 ರಿಂದ ರೂ.10 ಲಕ್ಷಗಳಿಗೆ ಹೆಚ್ಚಿಸಲಾಗಿದೆ. ಇದುವರೆವಿಗೂ 125 ಪ್ರಕರಣಗಳಲ್ಲಿ ತಲಾ ರೂ.10 ಲಕ್ಷಗಳ ಪರಿಹಾರ ಧನವನ್ನು ನೀಡಲಾಗಿರುತ್ತದೆ.
 ಇಂದು 26 ಸಿಬ್ಬಂದಿಗಳ ಅರ್ಹ ಪ್ರಕರಣಗಳಲ್ಲಿ ಕುಟುಂಬದ ಸದಸ್ಯರಿಗೆ ತಲಾ ರೂ.10.00 ಲಕ್ಷಗಳಂತೆ ಒಟ್ಟು ರೂ.2.60 ಕೋಟಿ ಪರಿಹಾರದ ಚೆಕ್ ಅನ್ನು ವಿತರಿಸಲಾಯಿತು.
 ಈವರೆಗೂ 151 ಸಿಬ್ಬಂದಿಗಳ ಅವಲಂಭಿತರಿಗೆ ಒಟ್ಟು ರೂ. 15.10 ಕೋಟಿಗಳ ಪರಿಹಾರ ನೀಡಿರುವುದಾಗಿ ತಿಳಿಸಿದರು.
ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರು, ಅಪಘಾತದಿಂದ ಮೃತಪಟ್ಟ ಸಿಬ್ಬಂದಿಗಳ ಅವಲಂಬಿತರಿಗೆ ಸಾಂತ್ವಾನ ಹೇಳಿ, ಸಿಬ್ಬಂದಿಗಳ ಜೀವ ಅಮೂಲ್ಯವಾದದ್ದು, ಅವರನ್ನು ಮರಳಿ ಕರೆತರಲು ಸಾಧ್ಯವಾಗುವುದಿಲ್ಲ, ಆದರೆ ಅವರ ಅವಲಂಬಿತರ ಮುಂದಿನ ಜೀವನವು ಆರ್ಥಿಕವಾಗಿ ಭದ್ರತೆಯಿಂದ ಕೂಡಿರಲಿ ಎಂಬ ಸದ್ದುದೇಶದಿಂದ ಸಾರಿಗೆ ಸುರಕ್ಷಾ ಯೋಜನೆಯನ್ನು ಜಾರಿಗೊಳಿಸಿರುವುದಾಗಿ ತಿಳಿಸಿದರು.

ಇಂದು ವಿತರಿಸಲಾಗಿರುವ ಪರಿಹಾರದ ಮೊತ್ತವನ್ನು ಸೂಕ್ತ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು ಮಕ್ಕಳ ವಿದ್ಯಾಬ್ಯಾಸ, ಮನೆ ನಿರ್ಮಾಣ ಮತ್ತು ಇತರೆ ಶುಭ ಕಾರ್ಯಗಳಿಗೆ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು. ಬಡ್ಡಿ ವ್ಯಾಮೋಹಕ್ಕೆ ಒಳಗಾಗಿ ಪರಿಹಾರ ಧನವನ್ನು ಯಾರಿಗೂ ನೀಡದಂತೆ ಕಿವಿ ಮಾತು ಹೇಳಿದರು. ಹಣವಿದ್ದರೆ ಎಲ್ಲರು ನೆಂಟರೆ ಆದರೆ ಸೂಕ್ತವಾದ ರೀತಿಯಲ್ಲಿ ಹಣ ಬಳಕೆ ಮಾಡಿಕೊಳ್ಳಲು ತಿಳಿಸಿದರು.

4) ಕೆಎಸ್ಆರ್ಟಿಸಿ ಗೆ 05 ನೂತನ ವೋಲ್ವೋ ಐರಾವತ ಕ್ಲಬ್ ಕ್ಲಾಸ್ 2.0 ವಾಹನಗಳಿಗೆ ಚಾಲನೆ.
ಡಿಸೆಂಬರ್-2024ರ ಮಾಹೆಯಲ್ಲಿ ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಮುಂಭಾಗದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು 20 ಐರಾವತ ಕ್ಲಬ್ ಕ್ಲಸ್ 2.0 ವಾಹನಗಳಿಗೆ ಚಾಲನೆ ನೀಡಿದ್ದು, ಅದರ ಮುಂದುವರೆದ ಭಾಗವಾಗಿ ಇಂದು 05 ಐರಾವತ ಕ್ಲಬ್ ಕ್ಲಾಸ್ 2.0 ವಾಹನಗಳನ್ನು ಕೆಳಕಂಡ ಮಾರ್ಗಗಳಲ್ಲಿ ಕಾರ್ಯಾಚರಣೆಗೊಳಿಸಲು ಯೋಜಿಸಲಾಗಿದೆ.

ಬೆಂಗಳೂರು -ತಿರುಪತಿ – 01
ಮಂಗಳೂರು -ಬೆಂಗಳೂರು-02
ಮೈಸೂರು -ಮಂತ್ರಾಲಯ-02

ಈ ವಾಹನವು 15 ಮೀಟರ್ ಉದ್ದವಿದ್ದು ಕೆಳಕಂಡ ಪ್ರಮುಖ ವಿಶಿಷ್ಟತೆಗಳನ್ನು ಹೊಂದಿರುತ್ತದೆ.
 51 ಆಸನಗಳು 2×2 ಸಂರಚನೆಯೊಂದಿಗೆ ಪ್ರಯಾಣಿಕರಿಗೆ ಕುಳಿತುಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ.
 ಇದು ಶಕ್ತಿಯುತ ಹಾಲೋಜನ್ ಹೆಡ್ಲೈಟ್ಗಳು ಮತ್ತು ಡೇಟೈಮ್ ರನ್ನಿಂಗ್ ಲೈಟ್ಗಳನ್ನು (DRL) ಹೊಂದಿರುತ್ತದೆ.
 ಹೊಸ ಪ್ಲಶ್ ಇಂಟೀರಿಯರ್ಸ್ ಮತ್ತು ಸ್ಕ್ಯಾಂಡಿನೇವಿಯನ್ ಶೈಲಿಯ ಎಕ್ಸ್ಟೀರಿಯರ್ಸ್ನ್ನು ಹೊಂದಿದೆ, ಇದು ದೃಶ್ಯಾವಳಿಯಲ್ಲಿ ಆಕರ್ಷಕ ಎಸ್ಥೆಟಿಕ್ಸ್ ಅನ್ನು ನೀಡುತ್ತದೆ.
 ವಾಯುಗತಿ ಶಾಸ್ತ್ರದ ವಿನ್ಯಾಸವು ಉತ್ತಮ ಇಂಧನ ದಕ್ಷತೆಯನ್ನು ಒದಗಿಸುತ್ತದೆ. ನೂತನ ಆವಿಷ್ಕಾರದ ಎಂಜಿನ್ ತಂತ್ರಜ್ಞಾನವು ಶ್ರೇಷ್ಠ ಕಾರ್ಯಕ್ಷಮತೆಯನ್ನು ಮತ್ತು ಸುಧಾರಿತ ಇಂಧನ ದಕ್ಷತೆಯನ್ನು (KMPL) ಒದಗಿಸುತ್ತದೆ.
 ಒಟ್ಟು ಬಸ್ ಉದ್ದದಲ್ಲಿ 3.5% ಏರಿಕೆಯಿಂದ ಪ್ರಯಾಣಿಕರ ಆಸನಗಳ ನಡುವೆ ಹೆಚ್ಚು ಸ್ಥಳವನ್ನು ಒದಗಿಸುತ್ತದೆ. ಒಟ್ಟು ಬಸ್ ಎತ್ತರದಲ್ಲಿ 5.6% ಏರಿಕೆಯಿಂದ ಹೆಚ್ಚಿನ ಆರಾಮದಾಯಕ ಪ್ರಯಾಣವನ್ನು ನೀಡುತ್ತದೆ.
 ಚಾಲಕರ ದೃಶ್ಯಾವಧಿಯನ್ನು ಸುಧಾರಿಸಲು ಮತ್ತು ಬ್ಲೈಂಡ್ ಸ್ಪಾಟ್ ಕಡಿಮೆ ಮಾಡಲು ಮುಂಭಾಗದ ಗಾಜು 9.5% ಅಗಲವಾಗಿದೆ.
 ಹಳೆಯ ಬಸ್ಗಳಿಗಿಂತ 20% ಹೊಂದಿರುವುದರಿಂದ ಹೆಚ್ಚು ಸಾಮರ್ಥ್ಯವನ್ನು ಹೊಂದಿರುವ ದೊಡ್ಡ ಲಗೇಜ್ ಸ್ಥಳ, ಇದರಿಂದಾಗಿ ಇಷ್ಟು ದೊಡ್ಡ ಲಗೇಜ್ ಸ್ಥಳವನ್ನು ಹೊಂದಿರುವ ಮೊದಲ ಬಸ್ ಆಗಿದೆ.
 ಮೊಬೈಲ್ ಚಾರ್ಜಿಂಗ್ ಪಾಯಿಂಟ್ಗಳನ್ನು, ಯುಎಸ್ಬಿ ಮತ್ತು C-ಟೈಪ್, ಹೊಂದಿಸಲಾಗಿದೆ.
 ದೊಡ್ಡ ಏರ್ ಡಕ್ಟ್ ಹೊಂದಿರುವುದರಿಂದ ಹೆಚ್ಚಿನ ಏರ್ ಕಂಡೀಷನಿಂಗ್ ವ್ಯವಸ್ಥೆ, ಇದರಿಂದಾಗಿ ಪ್ರಯಾಣಿಕರಿಗೆ ಪ್ರೀಮಿಯಂ ಅನುಭವ ಮತ್ತು ಉತ್ತಮ ಆಸನಗಳು ಮತ್ತು ಉತ್ತಮ ಗುಣಮಟ್ಟದ ವಸ್ತುಗಳಿಂದ ಆದ ಅನುಕೂಲವನ್ನು ಒದಗಿಸುತ್ತದೆ.
 ಪ್ಯಾಂಟೊಗ್ರಾಫಿಕ್ ವಿನ್ಯಾಸವು ವಾಹನ ನಿರ್ವಹಣೆಯನ್ನು ಸುಲಭಗೊಳಿಸುತ್ತದೆ.
 ರಾತ್ರಿ ಸಮಯದಲ್ಲಿ ಚಾಲನೆ ಮಾಡುವಾಗ ಹೆಚ್ಚಿನ ಸುರಕ್ಷತೆಗಾಗಿ ಹಿಂಬದಿ ಫಾಗ್ ಲೈಟ್ಗಳು. ಚಾಲಕರ ಅನುಕೂಲತೆಗಾಗಿ ಸುಲಭವಾಗಿ ಕೈಗೆಟುಕುವ ನಿಯಂತ್ರಕಗಳು ಮತ್ತು ಸ್ವಿಚ್ಗಳನ್ನು ಹೊಂದಿವೆ.

 ತುರ್ತು ಪರಿಸ್ಥಿತಿಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಫೈರ್ ಅಲಾರ್ಮ್ ಮತ್ತು ಪ್ರೊಟೆಕ್ಷನ್ ಸಿಸ್ಟಮ್ (FAPS) ಸ್ಥಾಪಿಸಲಾಗಿದೆ. ಬೆಂಕಿ ಅಪಘಾತಗಳ ಸಂದರ್ಭದಲ್ಲಿ ನೀರನ್ನು ಸಿಂಪಡಿಸಲು ಪ್ರಯಾಣಿಕರ ಆಸನಗಳ ಎರಡೂ ಬದಿಗಳಲ್ಲಿರುವ 30 ನೊಝಲ್ಗಳ ನೀರು ಪೈಪುಗಳನ್ನು ಅಳವಡಿಸಲಾಗಿದೆ.
 ಚಾಲಕರು ಪ್ರಯಾಣಿಕರ ಬಾಗಿಲಿನಿಂದ ಪಾದಚಾರಿಗಳನ್ನು ಸುಲಭವಾಗಿ ನೋಡಬಹುದಾದ ಕಾರಣ, ಪಾದಚಾರಿ ಸುರಕ್ಷತೆಯನ್ನು ಸುಧಾರಿಸಿದೆ.

ಶ್ರೀ ಅಕ್ರಂ ಪಾಷ, ವ್ಯವಸ್ಥಾಪಕ ನಿರ್ದೇಶಕರು ಕರಾರಸಾ ನಿಗಮ ರವರು ಮಾತನಾಡಿ, ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರು ಹೇಳಿರುವ ಕಿವಿ ಮಾತನ್ನು ಚಾಚೂ ತಪ್ಪದೆ ಪಾಲಿಸುವಂತೆ ತಿಳಿಸಿದರು. ಹಣವನ್ನು ಸದುಪಯೋಗಪಡಿಸ ಕೊಳ್ಳಿ ಯಾರನ್ನು ನಂಬಿ ದುಡ್ಡನ್ನು ಕಳೆದುಕೊಳ್ಳಬೇಡಿ, ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ರಾಮಚಂದ್ರನ್, ಭಾ.ಆ.ಸೇ., ವ್ಯವಸ್ಥಾಪಕ ನಿರ್ದೇಶಕರು, ಬಿಎಂಟಿಸಿ, ಶ್ರೀಮತಿ ಪ್ರಿಯಾಂಗಾ ಭಾಆಸೇ., ವ್ಯವಸ್ಥಾಪಕ ನಿರ್ದೇಶಕರು, ವಾಕರಸಾ ಸಂಸ್ಥೆ, ಡಾ. ಸುಶೀಲಾ ಬಿ. ಭಾಆಸೇ., ವ್ಯವಸ್ಥಾಪಕ ನಿರ್ದೇಶಕರು, ಕಕರಸಾ ಸಂಸ್ಥೆ, ಡಾ. ನಂದಿನಿದೇವಿ ಕೆ. ಭಾಆಸೇ., ನಿರ್ದೇಶಕರು (ಸಿಬ್ಬಂದಿ ಮತ್ತು ಜಾಗೃತ) ಮತ್ತು ಶ್ರೀ ಇಬ್ರಾಹಿಂ ಮೈಗೂರ, ಭಾಆಸೇ., ನಿರ್ದೇಶಕರು (ಮಾಹಿತಿ ತಂತ್ರಜ್ಞಾನ), ಕರಾಸಾ ನಿಗಮದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತಿರಿದ್ದರು.

VK DIGITAL NEWS:

ಯೋಗಾಸನ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಎಪಿಎಸ್ ಸಂಸ್ಥೆಯ ಮಕ್ಕಳಿಗೆ ಪ್ರಶಸ್ತಿ ಗರಿ

ಬೆಂಗಳೂರು: ಮನುಷ್ಯನ ಆರೋಗ್ಯ ಸುಧಾರಿಸಬೇಕಾದರೆ ಜೀವನದಲ್ಲಿ ಯೋಗ ಬಹಳ ಮುಖ್ಯ, ಅದರಲ್ಲಿಯೂ ಮಕ್ಕಳು ಯೋಗ ಕಲಿತರೆ ಅವರ ಜೀವನ ಕೊನೆತನಕ ಸುಖಮಯವಾಗಿರುತ್ತದೆ ಎಂದು ಆಚಾರ್ಯ ಪಾಠ ಶಾಲೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಸಿಎ ವಿಷ್ಣು ಭರತ್ ಆಲಂಪಲ್ಲಿ ಅವರು ಅಭಿಪ್ರಾಯಪಟ್ಟರು.ಶಿವ ಜ್ಯೋತಿ ಯೋಗ ಕೇಂದ್ರ, ಆದಿತ್ಯ ಸಾಯಿ ಯೋಗ ಕೇಂದ್ರ ಸಹಯೋಗದಲ್ಲಿ ಬಿಕೆಎಸ್ ಅಯ್ಯಂಗಾರ್ ಅವರ ಸ್ಮರಣಾರ್ಥ ಬೆಂಗಳೂರಿನಲ್ಲಿ 9ನೇ ರಾಷ್ಟ್ರಮಟ್ಟದ ಮುಕ್ತ ಯೋಗಾಸನ ಚಾಂಪಿಯನ್ಶಿಪ್ 2025ರ ಆನ್ಲೈನ್ ಸ್ಪರ್ಧೆಯಲ್ಲಿ ಎಪಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಪಿಯುಸಿಯಲ್ಲಿ ಓದುತ್ತಿರುವ ಒಟ್ಟು 10 ವಿದ್ಯಾರ್ಥಿಗಳು ಯೋಗ ಚಾಂಪಿಯನ್ಶಿಪ್ ನಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ನಾಲ್ಕನೇ ಬಹುಮಾನವನ್ನು ಪಡೆಯುವ ಮೂಲಕ ನಮ್ಮ ಶಾಲೆಗೆ ಹೆಸರನ್ನು ತರುವ ಮೂಲಕ ಚಾಂಪಿಯನ್ಶಿಪ್ ಆಗಿ ಹೊರಹೊಮ್ಮಿರುವ ಮಕ್ಕಳನ್ನು ನಮ್ಮ ಸಂಸ್ಥೆವತಿಯಿಂದ ಅಭಿನಂದಿಸಲಾಯಿತು ಎಂದರು.

ಮನುಷ್ಯನಿಗೆ ಆರೋಗ್ಯ ಹೊಂದಿದ್ದರೆ ಏನು ಬೇಕಾದರೂ ಸಾಧನೆ ಮಾಡುತ್ತಾನೆ ಎಂಬುದಕ್ಕೆ ಯೋಗ ಒಂದು ಉದಾಹರಣೆ, ಯೋಗದಿಂದ ಸರ್ವರೋಗವನ್ನು ನಿವಾರಣೆ ಮಾಡಿಕೊಳ್ಳಬಹುದು, ಹೀಗಾಗಿ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳಿಗೆ ಪ್ರತ್ಯೇಕವಾಗಿ ಯೋಗಾ ಶಿಕ್ಷಕಿಯನ್ನು ನೇಮಿಸುವ ಮೂಲಕ ಮಕ್ಕಳಿಗೆ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆ ಹೆಚ್ಚು ಹೊತ್ತನ್ನು ನೀಡಲಾಗುತ್ತದೆ, ಯೋಗ ಕಲಿಸಿಕೊಡುವ ಕೆಲಸವನ್ನು ಹಲವು ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದೇವೆ.

ಮಕ್ಕಳು ಈಗಾಗಲೇ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ, ಅವರಿಗೆ ಅಂತರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ಅವಕಾಶಗಳು ಇದ್ದು, ಅವರಿಗೆ ಸಾಕಷ್ಟು ತರಬೇತಿಯನ್ನು ಸಹ ಸಂಸ್ಥೆಯಲ್ಲಿ ನೀಡಲಾಗುತ್ತದೆ ಎಂದರು. ಯೋಗದಿಂದ ಕೇವಲ ಆರೋಗ್ಯ ಸುಧಾರಿಸಿಕೊಳ್ಳುವುದಲ್ಲದೆ ಮನುಷ್ಯನ ಮಾನಸಿಕ ನೆಮ್ಮದಿಗೆ ಯೋಗ ಮದ್ದಾಗಿರುತ್ತದೆ ಎಂದರು. ಇನ್ನೂ ಇದೇ ವೇಳೆ ಎಪಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಸ್ಥೆಯಿಂದ ಶಾಲಾ ಬ್ಯಾಗ್ ಅನ್ನು ವಿತರಣೆ ಮಾಡಲಾಯಿತು.

ಈ ವೇಳೆ ಎಪಿಎಸ್ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರೊ.ಎ ಪ್ರಕಾಶ್, ಟ್ರಸ್ಟೀ ಡಾ. ಟಿವಿ ಗುರುದೇವಯ್ಯ, ಸಂಸ್ಥೆಯ ಪ್ರಾಂಶುಪಾಲರಾದ ಎಸ್ ನಾಗರಾಜ್ ,ಉಪ ಪ್ರಾಂಶುಪಾಲರಾದ ಎಚ್ ಎಸ್ ರಜನಿ, ಯೋಗಾ ಶಿಕ್ಷಕಿ ಧನಲಕ್ಷ್ಮಿ ಸಿಪಿ ಯೋಗಚಾರ್ಯ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

VK DIGITAL NEWS:

ಚಿನ್ನ-ಬೆಳ್ಳಿ ಮುಡಿಗೇರಿಸಿದ ಎಂ.ಎಸ್.ಪುಣ್ಯ-ವರ್ಷಿಣಿ-ಪವನಿ ಕಾಮತ್-ಚೇತನ್ ಓಬು ಲಕ್ಷ್ಮಿ

ಬೆಂಗಳೂರು : ಕರ್ನಾಟಕ ರಾಜ್ಯ ರೈಫಲ್ ಅಸೋಸಿಯೇಷನ್ ಬೆಂಗಳೂರಿನ ಸಾಯಿ ಶೂಟಿಂಗ್ ರೇಂಜನಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ 13ನೇ ಕರ್ನಾಟಕ ರಾಜ್ಯ ಶೂಟಿಂಗ್ ಸ್ಪರ್ಧೆಯಲ್ಲಿ ಮೈಸೂರು ಶೂಟಿಂಗ್ ಕ್ಲಬ್‌ನಲ್ಲಿ ತರಬೇತು ಪಡೆದ ಸ್ಪರ್ಧಿಗಳು ಚಿನ್ನ-ಬೆಳ್ಳಿ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಜೆಎಸ್‌ಎಸ್ ಮಹಿಳಾ ಕಾಲೇಜಿನ ಪದವಿ ವಿದ್ಯಾರ್ಥಿನಿ ಎಂ.ಎಸ್.ಪುಣ್ಯ 2 ಚಿನ್ನ ಮತ್ತು 2 ಬೆಳ್ಳಿ ಪದಕಗಳನ್ನು ಗೆದ್ದರೆ, ಸೇಫಿಯಂಟ್ ಕಾಲೇಜಿ9ನ ಪಿ. ವರ್ಷಿಣಿ 1 ಚಿನ್ನ, 1 ಬೆಳ್ಳಿ ಮತ್ತು 2 ಕಂಚಿನ ಪದಕಗಳನ್ನು ಗೆದ್ದು ವಿಜೇತರಾಗಿದ್ದಾರೆ. ಸೇಂಟ್ ಜೋಸೆಫ್ ಶಾಲೆಯ ವಿದ್ಯಾರ್ಥಿನಿ ಪವನಿ ಕಾಮತ್ 1 ಬೆಳ್ಳಿ ಹಾಗೂ ಚೇತನ ಓಬು ಲಕ್ಷ್ಮಿ ಹಾಗೂ ಎಸ್.ತರುಣ್ ಆಯಾ ವೈಯಕ್ತಿಕ ಈವೆಂಟ್‌ಗಳಲ್ಲಿ 1 ಬೆಳ್ಳಿ ಪದಕವನ್ನು ಗೆದ್ದು ಗೆಲುವಿನ ನಗೆ ಬೀರಿದ್ದಾರೆ.
ಈ ಸ್ಪರ್ಧೆಯಲ್ಲಿ 10 ಮೀ ರೈಫಲ್, 50 ಮೀ ರೈಫಲ್, ಪಿಸ್ತೂಲ್ ಈವೆಂಟ್‌ಗಳು, ಟ್ರ‍್ಯಾಪ್ ಮತ್ತು ಸ್ಕೀಟ್ ಸೇರಿದಂತೆ ಎಲ್ಲಾ ರೀತಿಯ ಶೂಟಿಂಗ್ ಕ್ರೀಡೆಗಳು ನಡೆದಿದ್ದು “ಮೈಸೂರು ಶೂಟಿಂಗ್ ಕ್ಲಬ್” ನಿಂದ ಪಾಲ್ಗೊಂಡಿದ್ದ ಶೂಟರ್‌ಗಳು ಉತ್ತಮ ಅಂಕಗಳನ್ನು ಗಳಿಸುವ ಮೂಲಕ ಮುಂದಿನ ಹಂತಕ್ಕೆ (ದಕ್ಷಿಣ ವಲಯಗಳು) ಅರ್ಹತೆ ಪಡೆದಿದ್ದಾರೆ. 50 ಮೀ ರೈಫಲ್ ಎನ್‌ಆರ್‌ನಲ್ಲಿ 5 ವೈಯಕ್ತಿಕ ಪದಕಗಳನ್ನು ಮತ್ತು ಐಎಸ್‌ಎಸ್‌ಎಫ್ ಈವೆಂಟ್‌ಗಳಲ್ಲಿ 4 ಪದಕಗಳನ್ನು ಗೆದ್ದಿರುವ ಮೈಸೂರು ಶೂಟಿಂಗ್ ಕ್ಲಬ್ ತಂಡಕ್ಕೆ ರಾಷ್ಟಿಯ ಪ್ಯಾರಾ ಶೂಟರ್ ಬಿ.ಆರ್.ದರ್ಶನ್ ಕುಮಾರ್ (ಮೈಸೂರು) ಉತ್ತಮ ತರಬೇತಿ ನೀಡಿದ್ದರು.
ಸಾಹಸ ಕ್ರೀಡೆಯಾದ ಶೂಟಿಂಗ್ ಯುವಕರಲ್ಲಿ ಹೊಸ ಚೈತನ್ಯ ಮೂಡಿಸಬೇಕೆಂಬ ಮಹಾತ್ವಾಕಾಂಕ್ಷೆಯೊAದಿಗೆ ಮೈಸೂರಿನಲ್ಲಿ ಶೂಟಿಂಗ್ ತರಬೇತಿ ನೀಡಲಾಗುತ್ತಿದ್ದು ಆಸಕ್ತರು ಮೈಸೂರು ಶೂಟಿಂಗ್ ಕ್ಲಬ್‌ನಲ್ಲಿ ತರಬೇತಿ ಪಡೆಯಬಹುದೆಂದು ರಾಷ್ಟಿಯ ಪ್ಯಾರ ಶೂಟರ್ ಬಿ.ಆರ್.ದರ್ಶನ್ ಕುಮಾರ್ ತಿಳಿಸಿದ್ದಾರೆ. ಶೂಟಿಂಗ್ ತರಬೇತಿಗೆ ಮೊ.9986950999 ಸಂಪರ್ಕಿಸಬಹುದು.

VK DIGITAL NEWS:

ಸಿರಿಯಾಳ ಷಷ್ಠಿ ಆಚರಣೆ ಮತ್ತು ಮಹತ್ವ

“ಬುಡಕಟ್ಟು ಸಂಸ್ಕೃತಿ, ಪರಂಪರೆ ಮತ್ತು ಸ್ಥಳೀಯ ಆಚರಣೆಗಳು” ಕುರಿತ ಅಂತರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ

ಬೆಂಗಳೂರು 30.07.2025: “ಬುಡಕಟ್ಟು ಸಾಂಸ್ಕೃತಿಕ ಪರಂಪರೆಯನ್ನು ಕೇವಲ ವಸ್ತುಸಂಗ್ರಹಾಲಯಗಳಿಗೆ ಸೀಮಿತಗೊಳಿಸುವ ಬದಲು ಶಿಕ್ಷಣ, ನೀತಿ ನಿರೂಪಣೆ ಮತ್ತು ಸಾಮಾಜಿಕ ಅಭಿವೃದ್ಧಿಯ ಕೇಂದ್ರಕ್ಕೆ ತರುವುದು ಅವಶ್ಯಕ. ಬುಡಕಟ್ಟು ಜ್ಞಾನ ವ್ಯವಸ್ಥೆಯು ನಮಗೆ ಕೇವಲ ಭೂತಕಾಲದ ನೆನಪಲ್ಲ, ಬದಲಾಗಿ ಭವಿಷ್ಯದ ದಿಕ್ಕಾಗಿದೆ” ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.

ಮೌಂಟ್ ಕಾರ್ಮೆಲ್ ಕಾಲೇಜು (ಸ್ವಾಯತ್ತ)ನಲ್ಲಿ ಬಿರ್ಸಾ ಮುಂಡಾ ಅವರ 150 ನೇ ಜನ್ಮ ದಿನಾಚರಣೆಯ ಅಂಗವಾಗಿ ಐಸಿಎಸ್‌ಎಸ್‌ಆರ್ ಸಹಯೋಗದೊಂದಿಗೆ “ಬುಡಕಟ್ಟು ಸಂಸ್ಕೃತಿ, ಪರಂಪರೆ ಮತ್ತು ಸ್ಥಳೀಯ ಆಚರಣೆಗಳು” ಕುರಿತು ಆಯೋಜಿಸಿದ್ದ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ” ಭಾರತದಲ್ಲಿ 700 ಕ್ಕೂ ಹೆಚ್ಚು ಗುರುತಿಸಲ್ಪಟ್ಟ ಬುಡಕಟ್ಟು ಜನಾಂಗಗಳಿವೆ. ಈ ಸಮುದಾಯಗಳ ಸಂಸ್ಕೃತಿ, ಭಾಷೆಗಳು, ಹಾಡುಗಳು, ನೃತ್ಯಗಳು, ಜಾನಪದ ಕಥೆಗಳು, ಸಾಮಾಜಿಕ ವ್ಯವಸ್ಥೆಗಳು ಮತ್ತು ಜೀವನಶೈಲಿಗಳು ವೈವಿಧ್ಯಮಯ ಭಾರತದ ಸೌಂದರ್ಯವನ್ನು ಪ್ರತಿಬಿಂಬಿಸುತ್ತವೆ ಮತ್ತು ಮಾನವ ನಾಗರಿಕತೆಯ ಅತ್ಯಂತ ಪ್ರಾಚೀನ ಜ್ಞಾನದ ವಾಹಕಗಳಾಗಿವೆ” ಎಂದರು.

” ಬಿರ್ಸಾ ಮುಂಡಾ ಅವರ 150 ನೇ ಜನ್ಮ ದಿನಾಚರಣೆಯ ಅಂಗವಾಗಿ ಐಸಿಎಸ್‌ಎಸ್‌ಆರ್ ಸಹಯೋಗದೊಂದಿಗೆ “ಬುಡಕಟ್ಟು ಗೌರವ ಸರಣಿ”ಯ ಅಡಿಯಲ್ಲಿ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಆಯೋಜಿಸಲಾಗಿರುವ “ಬುಡಕಟ್ಟು ಸಂಸ್ಕೃತಿ, ಪರಂಪರೆ ಮತ್ತು ಸ್ಥಳೀಯ ಪದ್ಧತಿಗಳು” ಕುರಿತ ಸಮ್ಮೇಳನವು ಬಹಳ ಸಮಯೋಚಿತ ಮತ್ತು ಪ್ರಸ್ತುತವಾಗಿದೆ.. ನೀರು, ಅರಣ್ಯ ಮತ್ತು ಭೂಮಿಯ ರಕ್ಷಕ ಬಿರ್ಸಾ ಮುಂಡಾ, ಭಾರತೀಯ ಬುಡಕಟ್ಟು ಸಮಾಜಕ್ಕೆ ಸ್ವಾಭಿಮಾನ, ಸಂಘಟಿತ ಪ್ರತಿರೋಧ ಮತ್ತು ಸಾಂಸ್ಕೃತಿಕ ಪುನರುಜ್ಜೀವನದ ಮಾರ್ಗವನ್ನು ತೋರಿಸಿದವರು. ಸ್ವಾತಂತ್ರ್ಯ ಹೋರಾಟಕ್ಕಾಗಿ ಹೊರಾಡಿ,  ಬುಡಕಟ್ಟು ಸಮಾಜದ ಸ್ವಾಭಿಮಾನವನ್ನು ಪುನಃಸ್ಥಾಪಿಸಿದರು. ಅವರ ನೇತೃತ್ವದ “ಉಲ್ಗುಲಾನ್” ಕ್ರಾಂತಿಯು ಸಾಂಸ್ಕೃತಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಚಳುವಳಿಯೂ ಆಗಿತ್ತು. ಅವರು ಸಾಂಸ್ಕೃತಿಕ ಸ್ವರಾಜ್ಯದ ಪ್ರವರ್ತಕರಾಗಿದ್ದರು. ಅವರು ಭಾರತದ ಬುಡಕಟ್ಟು ಸಂಪ್ರದಾಯಗಳು, ಭಾಷೆ, ನಂಬಿಕೆ ಮತ್ತು ಜೀವನಶೈಲಿಯನ್ನು ಉಳಿಸಲು ಹೋರಾಡಿದರು” ಎಂದು ಹೇಳಿದರು.

“ನಮ್ಮ ಬುಡಕಟ್ಟು ಜನಾಂಗಗಳು ಸಾವಿರಾರು ವರ್ಷಗಳಿಂದ ಈ ಭೂಮಿಯ ಮೇಲೆ ಸಮತೋಲಿತ ಸಹಬಾಳ್ವೆಗೆ ಅದ್ಭುತ ಉದಾಹರಣೆಯಾಗಿವೆ. ಜಾನಪದ ಹಾಡುಗಳು ಮತ್ತು ಕಥೆಗಳಲ್ಲಿ ಹುದುಗಿರುವ ಪರಿಸರ, ಇತಿಹಾಸ, ಹಬ್ಬಗಳು, ನಂಬಿಕೆಗಳು ಮತ್ತು ಜ್ಞಾನ ವ್ಯವಸ್ಥೆಗಳೊಂದಿಗಿನ ಅವರ ಸಂಬಂಧವು ಇಂದಿನ ವೇಗವಾಗಿ ಬದಲಾಗುತ್ತಿರುವ ಜಗತ್ತಿಗೂ ಸಹ ಆಳವಾದ ಅರ್ಥವನ್ನು ಹೊಂದಿದೆ. ಬಿದಿರು, ಮರ, ಹುಲ್ಲು, ಜೇಡಿಮಣ್ಣು ಇತ್ಯಾದಿಗಳಿಂದ ತಯಾರಿಸಿದ ದಿನನಿತ್ಯದ ಬಳಕೆಯ ವಸ್ತುಗಳು, ಆವರ್ತನ ಕೃಷಿ, ಅರಣ್ಯ ಆಧಾರಿತ ಕೃಷಿ, ಸಾವಯವ ಗೊಬ್ಬರದ ಬಳಕೆ ಮತ್ತು ಮರದ ತುದಿ, ತುಳಸಿ, ಗಿಲೋಯ್, ಸಲೈ, ಮಹುವಾ ಮುಂತಾದ ಔಷಧಿಗಳ ಜ್ಞಾನ, ಬುಡಕಟ್ಟು ಸಮಾಜದ ಸ್ಥಳೀಯ ಪದ್ಧತಿಗಳು ಕೇವಲ ಸಂಪ್ರದಾಯಗಳಲ್ಲ, ಜೀವನ ವಿಧಾನಗಳಾಗಿವೆ. ‘ಸ್ವದೇಶಿ’ ಎಂದರೆ ‘ಸ್ಥಳೀಯ ಉತ್ಪಾದನೆ’ ಮಾತ್ರವಲ್ಲ, ಸ್ವಾವಲಂಬನೆ, ಸ್ವಾಭಿಮಾನ ಮತ್ತು ಪ್ರಕೃತಿಯೊಂದಿಗೆ ಸಮತೋಲನ ಕೂಡ” ಎಂದು ತಿಳಿಸಿದರು.

ಸಮಾರಂಭದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಪ್ರೊಫೆಸರ್ ಜಯಕರ ಶೆಟ್ಟಿ, ಬೆಂಗಳೂರು ನಗರ ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ, ಪ್ರೊಫೆಸರ್ ಕೆ ಆರ್ ಜಲಜ, ಮೌಂಟ್ ಕಾರ್ಮೆಲ್ ಶಿಕ್ಷಣ ಸಂಸ್ಥೆಯ ಸುಪೀರಿಯರ್ ಸಿಸ್ಟರ್ ಫ್ರಿಡೋಲಿನ್ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

VK DIGITAL NEWS:

ಕರ್ನಾಟಕದಲ್ಲಿ ರಸಗೊಬ್ಬರ ಪೂರೈಕೆಯಲ್ಲಿ ದೋಷ: ಕೇಂದ್ರಕ್ಕೆ ಡಾ. ಸುಧಾಕರ್ ಆಗ್ರಹ

ನವದೆಹಲಿ:

ಕೃಷಿ ಋತುವಿನಲ್ಲಿ ರೈತರಿಗೆ ರಸಗೊಬ್ಬರ ತಲುಪುತ್ತಿಲ್ಲ ಎಂಬ ಆಕ್ರೋಶ

ಕನ್ನಡದಲ್ಲಿ ಲೋಕಸಭೆಯಲ್ಲಿ ಮಾತನಾಡಿದ ಸಂಸದ ಡಾ.ಕೆ.ಸುಧಾಕರ್, ಕರ್ನಾಟಕ ಸರ್ಕಾರ ರೈತರಿಗೆ ರಸಗೊಬ್ಬರ ಸರಿಯಾಗಿ ಪೂರೈಸುತ್ತಿಲ್ಲ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರ ತ್ವರಿತವಾಗಿ ಕರ್ನಾಟಕದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಬೇಕು ಎಂದು ಅವರು ಆಗ್ರಹಿಸಿದರು.


ಪ್ರಧಾನಿ ಮೋದಿ ಸರ್ಕಾರದಿಂದ ಸಾಕಷ್ಟು ಯೂರಿಯಾ – ರಾಜ್ಯ ಸರ್ಕಾರದಿಂದ ಅಸಮರ್ಪಕ ಹಂಚಿಕೆ

“ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ 8.13 ಲಕ್ಷ ಟನ್ ಯೂರಿಯಾವನ್ನು ಕರ್ನಾಟಕಕ್ಕೆ ಕಳುಹಿಸಿದೆ, ಆದರೆ ರಾಜ್ಯ ಸರ್ಕಾರದ ದುರಾಡಳಿತದಿಂದಾಗಿ ರೈತರಿಗೆ ಅದು ತಲುಪುತ್ತಿಲ್ಲ,” ಎಂದು ಅವರು ತಿಳಿಸಿದರು.

ಕಾಳಸಂತೆಯಲ್ಲಿ ಗೊಬ್ಬರ ಬೆಲೆ ದುಬಾರಿ – ರೈತರಿಗೆ ಹೊರೆ

  • 258 ರೂ. ಬೆಲೆಯ ಯೂರಿಯಾ ₹500ಗೆ ಮಾರಾಟವಾಗುತ್ತಿದೆ

  • ₹1,200 ಬೆಲೆಯ ಡಿಎಪಿ ₹2,000ಗೆ ದೊರೆಯುತ್ತಿದೆ

“ಈ ರೀತಿ ಕಾಳಸಂತೆಯಲ್ಲಿ ಹೆಚ್ಚಿದ ಬೆಲೆ ರೈತರಿಗೆ ಅನ್ಯಾಯವಾಗಿದೆ” ಎಂದು ಅವರು ಆರೋಪಿಸಿದರು.

ಸಾರ್ವಜನಿಕ ಹಿತಕ್ಕಾಗಿ ಕೇಂದ್ರದಿಂದ ನೇರ ಸೂಚನೆ ಅಗತ್ಯ – ಸುಧಾಕರ್ ಒತ್ತಾಯ

“ಇದನ್ನು ಸರಿಪಡಿಸಲು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ಸಂಸದರು ರಸಗೊಬ್ಬರ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಈಗಾಗಲೇ ಇರುವ ಗೊಬ್ಬರವನ್ನು ರೈತರಿಗೆ ಸರಿಯಾದ ದರದಲ್ಲಿ ತಲುಪುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು” ಎಂದು ಡಾ.ಸುಧಾಕರ್ ಹೇಳಿದರು.

ಕಾಂಗ್ರೆಸ್ ಕಾರ್ಯಕರ್ತನ ಆಟೋಗೆ ಆಸಿಡ್ ದಾಳಿ – ಸ್ಥಳೀಯ ರಾಜಕೀಯ ವೈಷಮ್ಯ ಶಂಕೆ

ಬೆಂಗಳೂರು ನಗರದಲ್ಲಿ ರಾಜಕೀಯ ದ್ವೇಷದ ಭಾಗವಾಗಿ ಆಸಿಡ್ ದಾಳಿಯ ಮತ್ತೊಂದು ಘಟನೆ ನಡೆದಿದೆ. ನಂದಿನಿಲೇಔಟ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತ ಧನಂಜಯ್ ಅವರ ಆಟೋ ಮೇಲೆ ಆಸಿಡ್ ಎರಚಲಾಗಿದೆ. ದುಷ್ಕರ್ಮಿಗಳು ರಾತ್ರೋ ರಾತ್ರಿ ಬಂದು ಆಟೋ ಹಾನಿಗೊಳಿಸುವ ಮೂಲಕ ತಮ್ಮ ದುಷ್ಕೃತ್ಯ ಮೆರೆದಿದ್ದಾರೆ.

CTV ದೃಶ್ಯದಲ್ಲಿ ಆಸಿಡ್ ಎರೆಚಿದ ನಕಲಿ ರಾಜಕೀಯ ಕೃತ್ಯ ದಾಖಲೆ

ದಾಳಿಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸುಮಾರು ಮೂರು ದಿನಗಳ ಹಿಂದೆ ಈ ಘಟನೆ ನಡೆದಿದೆ. ಧನಂಜಯ್ ಈ ದೃಶ್ಯಗಳ ಆಧಾರದ ಮೇಲೆ ದೂರು ದಾಖಲಿಸಿದ್ದು, ಫಾರೆನ್ಸಿಕ್ ವರದಿಯ ಪ್ರಕಾರ ಆಟೋ ಮೇಲೆ ಎರಚಿದ ದ್ರವವಸ್ತು ಆಸಿಡ್ ಎಂಬುದು ದೃಢವಾಗಿದೆ.

ಸ್ಥಳೀಯ ರಾಜಕೀಯ ನಾಯಕನ ತಲೆಮೇಲೆ ಶಂಕೆ – ಎಫ್‌ಐಆರ್ ದಾಖಲು

ಸ್ಥಳೀಯ ಮಟ್ಟದ ರಾಜಕೀಯ ನಾಯಕನ ಪ್ರಭಾವ ಇದಕ್ಕೊಂದು ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಪೊಲೀಸರು ಈ ಬಗ್ಗೆ ಆಳವಾದ ತನಿಖೆ ನಡೆಸುತ್ತಿದ್ದು, ನಂದಿನಿಲೇಔಟ್ ಠಾಣೆಯಲ್ಲಿ ಎಫ್‌ಐಆರ್ ಕೂಡ ದಾಖಲಾಗಿದೆ.

ಭಾರತ vs ಪಾಕಿಸ್ತಾನ ಸೆಮಿಫೈನಲ್ WCL ಪಂದ್ಯದಿಂದ EaseMyTrip ಹಿಂದೆಹಂತ: ‘ಭಯೋತ್ಪಾದನೆ ಮತ್ತು ಕ್ರಿಕೆಟ್ ಒಟ್ಟಿಗೆ ಹೋಗದು’

ನವದೆಹಲಿ:  ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (WCL) ನಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಸೆಮಿಫೈನಲ್ ಪಂದ್ಯದಲ್ಲಿ EaseMyTrip ತನ್ನ ಸಹಭಾಗಿತ್ವವನ್ನು ಹಿಂತೆಗೆದುಕೊಂಡಿದೆ. ಇದರ ಹಿಂದೆ ‘ಭಯೋತ್ಪಾದನೆ ಮತ್ತು ಕ್ರಿಕೆಟ್ ಒಟ್ಟಿಗೆ ಹೋಗಲಾರವು’ ಎಂಬ ತೀರ್ಮಾನದ ನಿಲುವಿದೆ ಎಂದು ಕಂಪನಿಯ ಸಹ-ಸಂಸ್ಥಾಪಕ ನಿಶಾಂತ್ ಪಿಟ್ಟಿ ಹೇಳಿದ್ದಾರೆ.


ಭಾರತೀಯ ಆಟಗಾರರಿಂದ ಪಾಕ್ ವಿರುದ್ಧದ ಪಂದ್ಯಕ್ಕೆ ಬಹಿಷ್ಕಾರ – ಗ್ರೂಪ್ ಹಂತದ ಪಂದ್ಯವೂ ರದ್ದು

ಈ ಹಿಂದೆ ಹಲವು ಭಾರತೀಯ ಕ್ರಿಕೆಟಿಗರು ಪಾಕಿಸ್ತಾನ ವಿರುದ್ಧ ಆಟವಾಡುವುದನ್ನು ನಿರಾಕರಿಸಿದ ಹಿನ್ನೆಲೆ, WCL-ನಲ್ಲಿ ಉಭಯ ತಂಡಗಳ ಗ್ರೂಪ್ ಹಂತದ ಪಂದ್ಯವನ್ನು ರದ್ದುಗೊಳಿಸಲೇಬೇಕಾಯಿತು. ಇದರಿಂದಾಗಿ ಸೆಮಿಫೈನಲ್ ಪಂದ್ಯ ನಡೆಯುತ್ತದೆಯೇ ಎಂಬ ಅನುಮಾನಗಳು ಮುತ್ತಳಿವೆ.

EaseMyTrip: ‘ಭಾರತದೊಂದಿಗೆ ನಿಲ್ಲುತ್ತೇವೆ’ – ಪಿಟ್ಟಿಯ ಸ್ಪಷ್ಟ ನಿಲುವು

EaseMyTrip ತನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ,

ಭಯೋತ್ಪಾದನೆಯನ್ನು ಉತ್ತೇಜಿಸುವ ದೇಶದೊಂದಿಗೆ ಸಂಬಂಧ ಸಾಮಾನ್ಯಗೊಳಿಸಲು ನಾವು ವಿರೋಧಿಸುತ್ತೇವೆ. ಕ್ರೀಡೆಗೂ ಒಂದು ಮಿತಿಯಿದೆ. ರಾಷ್ಟ್ರವೇ ಮೊದಲ ಆದ್ಯತೆ.” ಎಂದು ಉಲ್ಲೇಖಿಸಿದೆ.

ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ: ಏಷ್ಯಾಕಪ್ 2025 ಭಾರತ-ಪಾಕ್ ಪಂದ್ಯ ವಿರೋಧ

ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಅವರು ಸೆಪ್ಟೆಂಬರ್‌ನಲ್ಲಿ ನಡೆಯಲಿರುವ 2025ರ ಏಷ್ಯಾಕಪ್‌ನಲ್ಲಿ ಭಾರತ-ಪಾಕಿಸ್ತಾನ ಪಂದ್ಯದ ವಿರುದ್ಧ ತೀವ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


2025 ಏಷ್ಯಾ ಕಪ್: ಭಾರತ – ಪಾಕಿಸ್ತಾನ ಸೆಪ್ಟೆಂಬರ್ 14ಕ್ಕೆ ನಿಗದಿ

ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಘೋಷಣೆಯ ಪ್ರಕಾರ, 2025ರ ಏಷ್ಯಾಕಪ್ ಸೆಪ್ಟೆಂಬರ್ 9 ರಿಂದ 28ರವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿದೆ. ಭಾರತ vs ಪಾಕಿಸ್ತಾನ ಪಂದ್ಯ ಸೆಪ್ಟೆಂಬರ್ 14 ರಂದು ನಡೆಯಲಿದೆ.

  • A ಗ್ರೂಪ್: ಭಾರತ, ಪಾಕಿಸ್ತಾನ, ಯುಎಇ, ಒಮನ್

  • B ಗ್ರೂಪ್: ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಹಾಂಗ್ ಕಾಂಗ್

ಬೆಂಗಳೂರು: BDA ವ್ಯಾಪ್ತಿಯಲ್ಲಿ ಐದು ಹೊಸ ನಗರ ಪಾಲಿಕೆಗಳ ವಾರ್ಡ್‌ಗಳ ಅಂತಿಮ ಅಧಿಸೂಚನೆ ನ.1ರಂದು ಪ್ರಕಟ

ಬೆಂಗಳೂರು:

ಜಿಬಿಎ ಅಡಿಯಲ್ಲಿ ಐದು ಹೊಸ ನಿಗಮಗಳಿಗೆ ಡಿಲಿಮಿಟೇಶನ್ ಪ್ರಕ್ರಿಯೆ ಆರಂಭ

ಬೆಂಗಳೂರಿನ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಡಿಯಲ್ಲಿ ರಚಿಸಲಾಗುತ್ತಿರುವ ಐದು ಹೊಸ ಮಹಾನಗರ ಪಾಲಿಕೆಗಳ ವಾರ್ಡ್‌ಗಳನ್ನು ಅಂತಿಮಗೊಳಿಸಲಾಗಿದ್ದು, ನವೆಂಬರ್ 1ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ.

ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳೊಂದಿಗೆ ಮಂಗಳವಾರ ನಡೆದ ಸಭೆಯ ಬಳಿಕ ಅವರು ಈ ಮಾಹಿತಿಯನ್ನು ನೀಡಿದರು.

ಸಾರ್ವಜನಿಕ ಆಕ್ಷೇಪಣೆಗಳಿಗೆ ಆಗಸ್ಟ್ 18 ಕೊನೆಯ ದಿನ

ಆಗಸ್ಟ್ 18 ರವರೆಗೆ ಸಾರ್ವಜನಿಕರು ತಮ್ಮ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸಲ್ಲಿಸಬಹುದು. ಸೆಪ್ಟೆಂಬರ್ 3ರಿಂದ ಡಿಲಿಮಿಟೇಶನ್ ಪ್ರಕ್ರಿಯೆ ಆರಂಭವಾಗಲಿದ್ದು, ಆಯೋಗವು ಕರಡು ಪತ್ರದಿಂದ ಆರಂಭಿಸಿ ಅಂತಿಮ ಅಧಿಸೂಚನೆ, ಮೀಸಲಾತಿ ನಿಯಮಾವಳಿ ಸೇರಿದಂತೆ ಎಲ್ಲಾ ವಿಧಾನಗಳನ್ನು ರೂಪಿಸುತ್ತದೆ. ನಂತರ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಲಾಗುತ್ತದೆ.


ಇ-ಖಾತಾ ಅಭಿಯಾನ: 24 ಲಕ್ಷ ಆಸ್ತಿಗಳಿಗೆ ಡಿಜಿಟಲ್ ದಾಖಲೆ ಗ್ಯಾರಂಟಿ

ಇ-ಖಾತಾ ಸೇವೆ ಸುಧಾರಣೆಗೆ ಒತ್ತು ನೀಡಲಾಗಿದ್ದು, ಈಗಾಗಲೇ 6.5 ಲಕ್ಷ ಮಾಲೀಕರು ಇ-ಖಾತಾ ಪಡೆದಿದ್ದಾರೆ. ಬೆಂಗಳೂರಿನಲ್ಲಿ 24 ಲಕ್ಷ ಆಸ್ತಿಗಳಿದ್ದು, ಎಲ್ಲ ಬಿ-ಖಾತಾ ಆಸ್ತಿಗಳನ್ನು ಕೂಡ ಇ-ಖಾತಾ ವ್ಯಾಪ್ತಿಗೆ ತರಲು ನಿರ್ಧಾರ ತೆಗೆದುಕೊಳ್ಳಲಾಗಿದೆ.

ಅಭಿಯಾನ ದಿನಾಂಕಗಳು: ಅಕ್ಟೋಬರ್ 22 ರಿಂದ ನವೆಂಬರ್ 1ರವರೆಗೆ
👨‍💼 ಇತರ ಇಲಾಖೆಗಳ ಅಧಿಕಾರಿಗಳನ್ನೂ ನಿಯೋಜನೆ ಮಾಡಲಾಗುತ್ತದೆ.


ಸ್ವಚ್ಛ ಬೆಂಗಳೂರು: 10,000ಕ್ಕೂ ಹೆಚ್ಚು ದೂರುಗಳಿಗೆ ಪರಿಹಾರ

ನಗರದಲ್ಲಿ ಕಸ ಸುರಿದಿರುವುದು, ಖಾಲಿ ಜಾಗಗಳ ದುರ್ಬಳಕೆ ಕುರಿತಂತೆ ಈಗಾಗಲೇ 10,394 ಸಾರ್ವಜನಿಕ ದೂರುಗಳು ದಾಖಲಾಗಿವೆ. ಇವತ್ತಿವರೆಗೆ 9,000+ ದೂರುಗಳಿಗೆ ಪರಿಹಾರ ನೀಡಲಾಗಿದೆ ಎಂದು ಡಿಕೆಶಿ ತಿಳಿಸಿದ್ದಾರೆ.

ಹೊಸ ಬಿಎಂಟಿಸಿ ಸೌಲಭ್ಯ, ಫ್ಲೈಓವರ್ ಉದ್ಘಾಟನೆಗಳು ಎದುರುಗೊಳ್ಳುತ್ತಿವೆ

  • ಹೆಬ್ಬಾಳ ಜಂಕ್ಷನ್ ಪಥ: ಆಗಸ್ಟ್ 15ರೊಳಗೆ ಉದ್ಘಾಟನೆ

  • ಶಿವಾನಂದ ಸರ್ಕಲ್ ಮತ್ತು ಗಾಂಧಿ ಬಜಾರ್ ಪಾರ್ಕಿಂಗ್: ಶೀಘ್ರ ಬಳಸಲು ಅನುವು

  • ಕೆ.ಆರ್. ಪುರಂ – ಹೆಬ್ಬಾಳ ಫ್ಲೈಓವರ್: ಆಗಸ್ಟ್ 6ರಂದು ಉದ್ಘಾಟನೆ ನಿರೀಕ್ಷೆ

ರಂಗಪ್ರವೇಶಕ್ಕೆ ಅಣಿಯಾಗಿರುವ ಹಂಪಾಪುರದ ಬದರಿನಾಥ್ ಮತ್ತು ಮೈಸೂರು ಸ್ಮಿತಾ ಪುತ್ರಿ ಅಲ್ಪನಾ.

ಅಲ್ಪನಾ ಭರತನಾಟ್ಯ ರಂಗ ಪ್ರವೇಶ 31ರಂದು

* ಹಿರಿಯ ವಿದುಷಿ ರಾಧಾ ಶ್ರೀಧರ್ ಶಿಷ್ಯೆ
*
* ಬದರಿನಾಥ್ ಮತ್ತು ಮೈಸೂರು ಸ್ಮಿತಾ ಅವರ ಪುತ್ರಿ

ಬೆಂಗಳೂರು: ಹಣಕಾಸು ತಜ್ಞ ಎಚ್. ಬದರಿನಾಥ್ ಮತ್ತುಸ್ಮಿತಾ ಅವರ ಪುತ್ರಿ ಅಲ್ಪನಾ ಬದರಿನಾಥ್ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಜು. 31 ರ ಸಂಜೆ 6ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜನೆಗೊಂಡಿದೆ.

ರಾಜಧಾನಿಯ ವೆಂಕಟೇಶ ನೃತ್ಯ ಮಂದಿರದ ಹಿರಿಯ ನೃತ್ಯವಿದುಷಿ ರಾಧಾ ಶ್ರೀಧರ್ ಮತ್ತು ಕುಸುಮಾ ರಾವ್ ಅವರ ಹೆಮ್ಮೆಯ ಶಿಷ್ಯೆ ಅಲ್ಪನಾ ಬದರಿನಾಥ್, ರಂಗಾರೋಹಣಕ್ಕೆ ಮುಖ್ಯ ಅತಿಥಿಗಳಾಗಿ ಪ್ರಖ್ಯಾತ ಕೂಚಿಪುಡಿ ವಿದುಷಿ ವೈಜಯಂತಿ ಕಾಶಿ, ಐಸಿಸಿಆರ್ ಪ್ರಾದೇಶಿಕ ನಿರ್ದೇಶಕ ಪ್ರದೀಪ್ ಕುಮಾರ್ ಮತ್ತು ವಿಮರ್ಷಕ ಸೂರ್ಯ ಪ್ರಸಾದ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಗಾಯನದಲ್ಲಿ ವಿದುಷಿ ಐಶ್ವರ್ಯಾ ನಿತ್ಯಾನಂದ, ನಟವಾಂಗದಲ್ಲಿ ವಿದ್ವಾ ಪ್ರಸನ್ನ ಕುಮಾರ, ಮೃದಂಗದಲ್ಲಿ ವಿದ್ವಾನ್
ಸಾಯಿ ವಂಶಿ, ಕೊಳಲಿನಲ್ಲಿ ವಿದ್ವಾನ್ ಮಹೇಶ್ ಸ್ವಾಮಿ, ಪಿಟೀಲಿನಲ್ಲಿ ವಿದ್ವಾನ್ ಮೈಸೂರು ದಯಾಕರ್ ಸಹಕಾರ ನೀಡಲಿದ್ದಾರೆ.
ಕ್ರಿಯಾಶೀಲ ಪ್ರತಿಭೆ :
ಅಲ್ಪನಾ, ಈಗಾಗಲೇ ಸೀನಿಯರ್ ಹಂತದ ನೃತ್ಯ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿದ್ದಾರೆ. ಮಗಳಿಗೆ ಬಾಲ್ಯದಿಂದಲೇ ಈಜುವ ಹವ್ಯಾಸವನ್ನು ರೂಢಿಸಿದ ಬದರಿ- ಸ್ಮಿತಾ ದಂಪತಿಗಳು, ಶಾಲೆಯ ಪಠ್ಯ ಓದಿ ಕೇವಲ ಅಂಕ ಗಳನ್ನು ಗಳಿಸುವುದೇ ಸಾಧನೆ ಅಲ್ಲ. ಮೂಲ ವಿಷಯವನ್ನು ಸಮಗ್ರವಾಗಿ, ತಲಸ್ಪರ್ಶಯಾಗಿ ಅಧ್ಯಯನ ಮಾಡಿ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಪ್ರೋತ್ಸಾಹ ನೀಡಿದರು. ಇದರ ಫಲವಾಗಿಯೇ ಕಲ್ಪನಾ ಪಠ್ಯ ಮತ್ತು ಪಠ್ಯೇತರ ಚಟುವಟಿಕೆ ಎರಡರಲ್ಲಿಯೂ ಸದಾ ನಂಬರ್ 1 ಸ್ಥಾನವನ್ನೇ ಕಾಪಾಡಿಕೊಂಡು ಬಂದಿರುವುದು ಗಮನೀಯವಾಗಿದೆ. ಪಿಯುಸಿ ನಂತರ ಆಲ್ ಇಂಡಿಯಾ ಜೆಇಇ ಪರೀಕ್ಷೆ ಮೂಲಕ ರ‌್ಯಾಂಕಿಂಗ್ ಪಡೆದು ಮದ್ರಾಸ್ ಐಐಟಿಯಲ್ಲಿ ಸದ್ಯ ಅಧ್ಯಯನಕ್ಕೆ ಅಲ್ಪನಾ ಪ್ರವೇಶ ಪಡೆದಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತ, ಈಜು, ಬ್ಯಾಡಿಂಟನ್, ಚಿತ್ರಕಲೆ ಮತ್ತು ಜ್ಯುವೆಲರಿ ಮೇಕಿಂಗ್ ಕಲೆಗಳಲ್ಲೂ ಈಕೆ ವಿಶೇಷ ಆಸಕ್ತಿ ಹೊಂದಿದ್ದಾರೆ. ನೃತ್ಯ ಕಲಿಕೆಗೆ ಕೇಂದ್ರ ಸರ್ಕಾರದ ಸಿಸಿಆರ್‌ಟಿ ವಿದ್ಯಾರ್ಥಿ ವೇತನವನ್ನೂ ಇವರು ಪಡೆಯುತ್ತಿರುವುದು ಸಾಧನೆಗೆ ಪ್ರೇರಕವಾಗಿದೆ.
ಗುರು ರಾಧಾ ಶ್ರೀಧರ್ ಅವರೂ ಈಕೆಗೆ ಕ್ರಿಯಾಶೀಲ ನರ್ತಕಿ ಎಂದು ಪ್ರಶಂಸೆ ಮಾಡಿದ್ದು, ಕಲಾ ಜೀವನ ಯಶವಾಗಲಿ ಎಂದು ಹಾರೈಕೆ ಮಾಡಿದ್ದಾರೆ.

 

ಭಕ್ತಿಯ ಹೊಳೆ ಹರಿಸಿದ ಕೃಷ್ಣ- ಮ್ಯೂಸಿಕ್, ಬ್ಲಿಸ್ ಮತ್ತು ಬಿಯಾಂಡ್‌ ಕಾರ್ಯಕ್ರಮ

*ಬೆಂಗಳೂರಿನಲ್ಲಿ ಭಕ್ತಿಯ ಹೊಳೆ ಹರಿಸಿದ ಕೃಷ್ಣ- ಮ್ಯೂಸಿಕ್, ಬ್ಲಿಸ್ ಮತ್ತು ಬಿಯಾಂಡ್‌ ಕಾರ್ಯಕ್ರಮ*

*ಬೆಂಗಳೂರು:* ಪ್ರಸಿದ್ಧ ಗಾಯಕ ಅಮೆಯಾ ಡಬ್ಲಿ ಭಕ್ತಿ ಸಂಗೀತದ ಮೂಲಕ ನಗರದಲ್ಲಿ ಶ್ರೀ ಕೃಷ್ಣ ಭಕ್ತರ ಮನತಣಿಸಿದರು. ವೈಟ್‌ಫೀಲ್ಡ್‌ನ ಎಮ್‌ಎಲ್‌ಆರ್‍‌ ಕನ್ವೆನ್‌ಶನ್‌ ಸೆಂಟರ್‍‌ನಲ್ಲಿ “ ಕೃಷ್ಣ- ಮ್ಯೂಸಿಕ್, ಬ್ಲಿಸ್ ಮತ್ತು ಬಿಯಾಂಡ್’ ಎಂಬ ಭಕ್ತಿ ಸಂಗೀತ ಕಾರ್ಯಕ್ರಮ ಜರುಗಿತು.

ಅಮೇಯಾ ಡಬ್ಲಿ ಅವರ 25 ಅದ್ಭುತ ಕಲಾವಿದರ ತಂಡ ಮೊದಲ ಬಾರಿಗೆ ಬೆಂಗಳೂರಿನಲ್ಲಿ ತಮ್ಮ ಅಭೂತಪೂರ್ವ ಸಂಗೀತ ಕಾರ್ಯಕ್ರಮದ ಮೂಲಕ ಶ್ರೀ ಕೃಷ್ಣ ಭಕ್ತರನ್ನು ಭಕ್ತಿಯ ಅಲೆಯಲ್ಲಿ ಮುಳುಗಿಸಿದರು. ಸಂಗೀತ, ಭಕ್ತಿ ಮತ್ತು ಭಾವನೆಗಳನ್ನು ಸರಾಗವಾಗಿ ಬೆರೆಸುವುದಕ್ಕೆ ಹೆಸರುವಾಸಿಯಾಗಿದ್ದ ಅವರು ಕೇವಲ ಸಂಗೀತ ಕಚೇರಿಯನ್ನು ನೀಡಲಿಲ್ಲ, ಬದಲಾಗಿ ಪ್ರತಿಯೊಬ್ಬ ಕೇಳುಗರಿಗೂ ಅಂತರಾತ್ಮ ಸ್ಪರ್ಶಿಸುವ ಭಕ್ತಿಯ ಅನುಭವವನ್ನು ನೀಡಿದ್ದಾರೆ.

ಕಾರ್ಯಕ್ರಮದ ಬಗ್ಗೆ ಮಾತನಾಡಿದ ಗಾಯಕ *ಅಮೇಯಾ ಡಬ್ಲಿ* “ ನಾನು ವೇದಿಕೆಯ ಮೇಲೆ ನಡೆಯುವಾಗ, ಆ ಕ್ಷಣಕ್ಕೆ ಶರಣಾಗುತ್ತೇನೆ. ಪ್ರೇಕ್ಷಕರು ನನ್ನ ಮಾರ್ಗದರ್ಶಕರಾಗುತ್ತಾರೆ, ನಾವು ಒಟ್ಟಾಗಿ ಭಕ್ತಿಯ ಕ್ಷಣವನ್ನು ಸೃಷ್ಟಿಸುತ್ತೇವೆ. ಅದು ಕೃಷ್ಣನ ಮ್ಯಾಜಿಕ್. ಇದು ಕೇವಲ ಸಂಗೀತವಲ್ಲ, ಇದು ಹಂಚಿಕೊಂಡ ಆಧ್ಯಾತ್ಮಿಕ ಅನುಭವ. ” ಎಂದು ಹೇಳಿದರು.

ಭಾರತದ ಸಶಸ್ತ್ರ ಪಡೆಗೆ ಹಾಡುವುದರಿಂದ ಇಡೀ ಜಗತ್ತಿನ ಕೇಳುಗರ ಮೆಚ್ಚುಗೆ ಪಡೆದಿರುವ ಅಮೆಯಾ ಡಬ್ಲಿ ತಮ್ಮ ಅದ್ಭುತವಾದ ದನಿ ಮತ್ತು ಕಲೆಯ ಮೂಲಕ ಪ್ರತಿಯೊಬ್ಬ ಕೇಳುಗನ ಮನದಲ್ಲಿ ಅಚ್ಚಾಗಿ ಉಳಿಯುವ ಸಂಗೀತವನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ.