Home Blog Page 37

” ವಿಶ್ವ ಹುಲಿ ದಿನಾಚರಣೆ “

” ವಿಶ್ವ ಹುಲಿ ದಿನಾಚರಣೆ “

ಬೆಂಗಳೂರಿನ ನಯನ ಕನ್ನಡ ಭವನದಲ್ಲಿ ದಿನಾಂಕ 29 ಜುಲೈ 2025 ರಂದು ಚರಗಿತು. ಆರ್ಟ್ ಕಲ್ಚರಲ್ ಎಜುಕೇಶನಲ್ ಎನ್ಲೈಟ್ ಫೌಂಡೇಶನ್(ರೀ) ಸಂಸ್ಥಾಪಕಿ ಅಂಬಿಕಾ ಸಿ ರವರು “ವಿಶ್ವ ಹುಲಿ ದಿನಾಚರಣೆ” ಅಂಗವಾಗಿ ” ನಶಿಸಿ ಹೋಗುತ್ತಿರುವ ಹುಲಿ ಸಂತತಿ – ಸಂರಕ್ಷಣೆ ” ಕುರಿತಾದಂತಹ ಜನಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು, ಈ ಸಂದರ್ಭದಲ್ಲಿ ಸುಮಾರು 150ಕ್ಕೂ ಹೆಚ್ಚು ಮಕ್ಕಳು ಹುಲಿ ವೇಷ ದಾರಿಗಳಾಗಿ, ನೃತ್ಯ ಪ್ರದರ್ಶನ, ನಾಟಕ, ಚಿತ್ರಕಲೆ ಮತ್ತು ಛಾಯ ಚಿತ್ರ ಪ್ರದರ್ಶನ ಇತ್ಯಾದಿ ಕಾರ್ಯಕ್ರಮಗಳನ್ನು ನೀಡಿದರು, ಈ ಸಂದರ್ಭದಲ್ಲಿ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಅರಣ್ಯ ಅಧಿಕಾರಿ ನಾಗಭೂಷಣ್, ಇಂದು ಸಂಜೆ ಪತ್ರಿಕೆ ಸಂಪಾದಕಿ ಪದ್ಮ ನಾಗರಾಜ್, ನಟನಿರ್ಮಾಪಕ ಗಂಡಸಿ ಸದಾ ನಂದ ಸ್ವಾಮಿ, ಹಿರಿಯ ಪತ್ರಕರ್ತರುಗಳಾದ ಶ್ರೀಮತಿ ಶಾಂತಕುಮಾರಿ ಹಾಗೂ ಆಕಾಶವಾಣಿಯಲ್ಲಿ ಕಾರ್ಯನಿರ್ವಹಿಸಿದ ನಟರಾಜ್ ಮತ್ತು ವನ್ಯ ಜೀವಿ ಛಾಯಾಗ್ರಹಕ ಶಿವಕುಮಾರ್ ಹಾಗೂ ಹಲವಾರು ಪರಿಸರ ಪ್ರೇಮಿಗಳು, ಸಮಾಜ ಸೇವಕರು, ಶಾಲಾ ಕಾಲೇಜು ವಿದ್ಯಾರ್ಥಿಗಳೊಂದಿಗೆ ಉಪಸ್ಥಿತರಿದ್ದು “ವಿಶ್ವ ಹುಲಿ ದಿನಾಚರಣೆ ” ಯಶಸ್ವಿಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ನಟಿ ರಮ್ಯಾ ವಿರುದ್ಧದ ಟ್ರೋಲ್‌ಗೆ ಶಕ್ತಿಯಾದ ಪ್ರತಿಕ್ರಿಯೆ – ಶಿವರಾಜ್ ಕುಮಾರ್ ಕುಟುಂಬದಿಂದ ಬೃಹತ್ ಬೆಂಬಲ!

ಬೆಂಗಳೂರು, ಜುಲೈ 29: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಟಿ ರಮ್ಯಾ ನೀಡಿದ್ದ ಪ್ರತಿಕ್ರಿಯೆಗೆ ಬೆಚ್ಚಿ ಹೋಗಿರುವ ಕೆಲ ದರ್ಶನ್ ಅಭಿಮಾನಿಗಳು, ಸಾಮಾಜಿಕ ಜಾಲತಾಣಗಳಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ ನಡೆಸಿದ್ದಾರೆ. ಈ ಬಗ್ಗೆ ಕಠಿಣವಾಗಿ ಪ್ರತಿಕ್ರಿಯಿಸಿರುವ ನಟಿ ರಮ್ಯಾ, ಪೋಲೀಸ್‌ಗಳಲ್ಲಿ ಅಧಿಕೃತ ದೂರು ದಾಖಲಿಸಿದ್ದಾರೆ.

ಈ ಹಿನ್ನಲೆಯಲ್ಲಿ, ದೊಡ್ಮನೆ ಕುಟುಂಬದವರು, ವಿಶೇಷವಾಗಿ ನಟ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್, ನಟಿ ರಮ್ಯಾರ ಬೆಂಬಲಕ್ಕೆ ನಿಂತಿದ್ದು, ಇದೀಗ ಈ ವಿಷಯ ಕನ್ನಡ ಚಿತ್ರರಂಗದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ನಿಮ್ಮ ನಿಲವು ಸರಿಯಿದೆ” – ಶಿವಣ್ಣನ ಬಲವಾದ ಸಂದೇಶ

ನಟ ಶಿವರಾಜ್ ಕುಮಾರ್ ತಮ್ಮ ಎಕ್ಸ್ (ಹಳೆಯ ಟ್ವಿಟರ್) ಖಾತೆಯಲ್ಲಿ,

ರಮ್ಯಾ, ನಿಮ್ಮ ನಿಲವು ಸರಿಯಿದೆ. ನೀವು ತೋರಿದ ಧೈರ್ಯ ಶ್ಲಾಘನೀಯ. ನಿಮ್ಮೊಂದಿಗೆ ನಾವು ಸದಾ ಇದ್ದೇವೆ” ಎಂದು ಬರೆದಿದ್ದಾರೆ.

ಅವರು ಮುಂದುವರೆದು,

ಯಾವ ಮಹಿಳೆಯನ್ನಾದರೂ ಅವಾಚ್ಯ ಶಬ್ದಗಳಿಂದ ನಿಂದಿಸುವುದು ಸಂಪೂರ್ಣ ಖಂಡನೀಯ. ಸಮಾಜದಲ್ಲಿಯ ನೈತಿಕ ಮೌಲ್ಯಗಳನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ” ಎಂದು ಸ್ಪಷ್ಟಪಡಿಸಿದ್ದಾರೆ.

ಗೀತಾ ಶಿವರಾಜ್ ಕುಮಾರ್ ಕೂಡ ಬೆಂಬಲದಲ್ಲಿ

ನಟ ಶಿವಣ್ಣ ಪತ್ನಿ ಗೀತಾ ಶಿವರಾಜ್ ಕುಮಾರ್ ಕೂಡ ಇದೇ ಸಂದೇಶವನ್ನು ತಮ್ಮ ಖಾತೆ ಮೂಲಕ ಹಂಚಿಕೊಂಡಿದ್ದು, ಅವರು ಕೂಡ ನಟಿ ರಮ್ಯಾರ ಪಕ್ಕದಲ್ಲಿ ನಿಂತಿದ್ದಾರೆ. ಇದರಿಂದ, ದೊಡ್ಮನೆ ಕುಟುಂಬವೇ ಸಮಗ್ರವಾಗಿ ನಟಿ ರಮ್ಯಾರ ಪರವಾಗಿ ಬೆಂಬಲ ವ್ಯಕ್ತಪಡಿಸಿದೆ.


👮 ರಮ್ಯಾ ನೀಡಿದ ಕಾನೂನು ಹೋರಾಟ

ನಟ ದರ್ಶನ್ ಅವರ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಬಂದಿದ್ದ ಅವಾಚ್ಯ ಕಾಮೆಂಟ್‌ಗಳು, ತೀವ್ರ ಬೇಸರ ತಂದ ಹಿನ್ನೆಲೆಯಲ್ಲಿ, ನಟಿ ರಮ್ಯಾ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಅವರು ನೀಡಿದ ದೂರಿನಲ್ಲಿ ಎಲ್ಲ ಸಾಬೀತುಗಳನ್ನೂ ಸೇರಿಸಿರುವುದು ಮಾಹಿತಿ.

ಪಹಲ್ಗಾಮ್ ಸಂತ್ರಸ್ತರ ಹೆಸರುಗಳನ್ನು ಸಂಸತ್ತಿನಲ್ಲಿ ಓದಿದ ಪ್ರಿಯಾಂಕಾ ಗಾಂಧಿ

ಪಹಲ್ಗಾಮ್‌ನಲ್ಲಿ ಭಯೋತ್ಪಾದಕರಿಂದ ಹತ್ಯೆಗೀಡಾದ 25 ಭಾರತೀಯರ ಹೆಸರುಗಳನ್ನು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ಸಂಸತ್ತಿನಲ್ಲಿ ಓದಿದಾಗ ಖಜಾನೆ ಮತ್ತು ವಿರೋಧ ಪಕ್ಷದ ಪೀಠಗಳು ಮುಖಾಮುಖಿಯಾದವು. ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ಹತ್ಯಾಕಾಂಡದಲ್ಲಿ 25 ಭಾರತೀಯರು ಮತ್ತು ಒಬ್ಬ ನೇಪಾಳಿ ಪ್ರವಾಸಿ ಸೇರಿದಂತೆ 26 ನಾಗರಿಕರು ಪ್ರಕೃತಿ ಸೌಂದರ್ಯದ ಬೈಸರನ್ ಕಣಿವೆಯಲ್ಲಿ ಸಾವನ್ನಪ್ಪಿದ್ದರು.

“ಇಲ್ಲಿ ಕುಳಿತಿರುವ ಪ್ರತಿಯೊಬ್ಬ ಸಂಸದರು ಸಹ ನಮ್ಮಂತೆಯೇ ಮನುಷ್ಯರು. ನಾನು 25 ಭಾರತೀಯರ ಹೆಸರುಗಳನ್ನು ಓದಲು ಬಯಸುತ್ತೇನೆ. ಅವರು ಈ ದೇಶದ ಪುತ್ರರು. ನಾವೆಲ್ಲರೂ ಅವರ ಕುಟುಂಬಗಳಿಗೆ ಜವಾಬ್ದಾರರು. ಅವರು ಸತ್ಯವನ್ನು ತಿಳಿದುಕೊಳ್ಳಲು ಅರ್ಹರು” ಎಂದು ಶ್ರೀಮತಿ ವಾದ್ರಾ ಆಪರೇಷನ್ ಸಿಂಧೂರ್ ಕುರಿತ ವಿಶೇಷ ಚರ್ಚೆಯ ಸಮಯದಲ್ಲಿ ಸರ್ಕಾರವನ್ನು ಮೂಲೆಗುಂಪು ಮಾಡಲು ಪ್ರಯತ್ನಿಸುತ್ತಾ ಹೇಳಿದರು.
ಅವರು ಮೊದಲ ಹೆಸರನ್ನು ಓದುತ್ತಿದ್ದಂತೆ, ಖಜಾನೆ ಪೀಠಗಳು “ಹಿಂದೂ” ಎಂದು ಕೂಗಿದರು, ಅವರ ಧರ್ಮದ ಆಧಾರದ ಮೇಲೆ ಹತ್ಯೆಗಳನ್ನು ನಡೆಸಲಾಗಿದೆ ಎಂದು ಹೈಲೈಟ್ ಮಾಡಲು ಪ್ರಯತ್ನಿಸಿದರು.
ಇದು ಶೀಘ್ರದಲ್ಲೇ ಖಜಾನೆ ಮತ್ತು ವಿರೋಧ ಪಕ್ಷದ ಪೀಠಗಳ ನಡುವೆ ಮುಖಾಮುಖಿಯಾಗಲು ಕಾರಣವಾಯಿತು, ಏಕೆಂದರೆ ಶ್ರೀಮತಿ ಗಾಂಧಿ ಓದಿದ ಪ್ರತಿಯೊಂದು ಹೆಸರಿನ ನಂತರ ಲೋಕಸಭೆಯಲ್ಲಿ “ಹಿಂದೂ” ಮತ್ತು “ಭಾರತೀಯ” ಎಂಬ ಜೋರು ಘೋಷಣೆಗಳು ತುಂಬಿದ್ದವು.
ಕೇಂದ್ರದ ಮೇಲೆ ತೀವ್ರ ದಾಳಿ ನಡೆಸಿದ ಶ್ರೀಮತಿ ವಾದ್ರಾ, ಬೈಸರನ್ ಕಣಿವೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಸರ್ಕಾರ ಸರಿಯಾದ ಭದ್ರತೆಯನ್ನು ಒದಗಿಸಿಲ್ಲ ಎಂದು ಆರೋಪಿಸಿದರು. “ಆಡಳಿತ ಪಕ್ಷವು ವಿವಿಧ ಅಂಶಗಳ ಬಗ್ಗೆ ಮಾತನಾಡಿದೆ ಆದರೆ ಪಹಲ್ಗಾಮ್ ಭಯೋತ್ಪಾದಕ ದಾಳಿ ಏಕೆ ಮತ್ತು ಹೇಗೆ ನಡೆಯಿತು ಎಂಬುದಕ್ಕೆ ಉತ್ತರಿಸಲಿಲ್ಲ” ಎಂದು ಅವರು ಹೇಳಿದರು.
ಲೋಕಸಭೆಯಲ್ಲಿ ಆಪರೇಷನ್ ಸಿಂಧೂರ್ ಕುರಿತು ನಡೆಯುತ್ತಿರುವ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕಿ, ಪಹಲಗಾಂನಲ್ಲಿ ಭಯೋತ್ಪಾದಕರು ತಮ್ಮ ಪತಿಯನ್ನು ಗುಂಡಿಕ್ಕಿ ಕೊಲ್ಲುವುದನ್ನು ಕಂಡ ಶುಭಂ ದ್ವಿವೇದಿ ಅವರ ವಿಧವೆಯ ಮಾತುಗಳನ್ನು ಉಲ್ಲೇಖಿಸಿದರು.
“ಜನರನ್ನು ನಿರ್ದಯವಾಗಿ ಕೊಲ್ಲುತ್ತಿದ್ದಾಗ, ಅವರು ಒಬ್ಬ ಭದ್ರತಾ ಸಿಬ್ಬಂದಿಯನ್ನು ನೋಡಲಿಲ್ಲ” ಎಂದು ಶ್ರೀಮತಿ ವಾದ್ರಾ ಹೇಳಿದರು.
“ಒಂದು ಗಂಟೆಯ ಕಾಲ ನಾಗರಿಕರು ಒಬ್ಬೊಬ್ಬರಾಗಿ ಕೊಲ್ಲಲ್ಪಟ್ಟಾಗ, ಒಬ್ಬ ಭದ್ರತಾ ಸಿಬ್ಬಂದಿಯೂ ಇರಲಿಲ್ಲ. ನನ್ನ ಕಣ್ಣುಗಳ ಮುಂದೆ ಒಬ್ಬೊಬ್ಬರ ಪ್ರಪಂಚವು ಕೊನೆಗೊಳ್ಳುವುದನ್ನು ನಾನು ನೋಡಿದೆ; ಅಲ್ಲಿ ಭದ್ರತೆ ಏಕೆ ಇರಲಿಲ್ಲ?” ಪ್ರಿಯಾಂಕಾ ಗಾಂಧಿ ವಾದ್ರಾ ಉಲ್ಲೇಖಿಸಿ ಅವರು ಹೇಳಿದರು.
ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ದಾಳಿಯ ಜವಾಬ್ದಾರಿಯನ್ನು ಹೇಗೆ ಒಪ್ಪಿಕೊಂಡರು ಎಂಬುದನ್ನು ಅವರು ಎತ್ತಿ ತೋರಿಸಿದರು, ಆದರೆ ಯಾರೂ ಅವರನ್ನು ಮತ್ತಷ್ಟು ಪ್ರಶ್ನಿಸಲಿಲ್ಲ.

ಅಮಿತ್ ಶಾ ಲೋಕಸಭೆಯಲ್ಲಿ ಘೋಷಣೆ: ಪಹಲ್ಗಾಮ್ ದಾಳಿಗೆ ಸಂಬಂಧಿಸಿದ ಉಗ್ರರು ಹತ್ಯೆ

ದೆಹಲಿ, ಜುಲೈ 29 – ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಲೋಕಸಭೆಯಲ್ಲಿ ಮಾತನಾಡಿ, ಪಹಲ್ಗಾಮ್ ಭಯೋತ್ಪಾದಕ ದಾಳಿಗೆ (Pahalgam Terror Attack) ಸಂಬಂಧಿಸಿದ ಆಪರೇಷನ್ ಮಹಾದೇವ್ (Operation Mahadev) ಕುರಿತು ಮಹತ್ವದ ಮಾಹಿತಿ ನೀಡಿದರು. ಈ ಕಾರ್ಯಾಚರಣೆಯಲ್ಲಿ ಉಗ್ರ ಹಾಶಿಮ್ ಮೂಸಾ (Hashim Musa) ಸೇರಿ ಮೂವರು ʻAʼ ಗ್ರೇಡ್ ಉಗ್ರರನ್ನು ಹತ್ಯೆಗೈಯಲಾಗಿದೆ ಎಂದು ತಿಳಿಸಿದರು.

ಎನ್‌ಕೌಂಟರ್‌ನಲ್ಲಿ ಕೊಲೆಯಾದ ಉಗ್ರರು ಯಾರು?

  • ಹಾಶಿಮ್ ಮೂಸಾ – ಪಹಲ್ಗಾಮ್ ದಾಳಿಯ ಪ್ರಮುಖ ಶಂಕಿತ

  • ಜಿಬ್ರಾನ್ – ಸೋನಾಮಾರ್ಗ್ ಸುರಂಗ ದಾಳಿಯಲ್ಲಿ ಭಾಗಿಯಾಗಿದ್ದ ಉಗ್ರ

  • ಹಮ್ಜಾ ಅಫ್ಘಾನಿ – ಪಾಕಿಸ್ತಾನ ಮೂಲದ ಉಗ್ರ

ಅಮಿತ್ ಶಾ ಅವರು ವಿವರಿಸಿದಂತೆ, ಈ ಉಗ್ರರು ಪಾಕಿಸ್ತಾನಕ್ಕೆ ವಾಪಸ್ ಆಗುವ ಯತ್ನದಲ್ಲಿ ಇರುವಾಗ ಶ್ರೀನಗರದ ಡಚಿಗಮ್ ಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ ಮೂಲಕ ಹತ್ಯೆಗೈಯಲಾಯಿತು. ಭಾರತೀಯ ಸೇನೆ, CRPF, ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ರೈಫಲ್‌ಗಳು ಮತ್ತು ಪಾಕಿಸ್ತಾನ ಸಂಬಂಧ:

  • ಸ್ಥಳದಲ್ಲಿ ಪತ್ತೆಯಾದ ರೈಫಲ್ ಪಾಕಿಸ್ತಾನದದ್ದೇ ಎಂದು ಚಂಡೀಗಢ ಎಫ್‌ಎಸ್‌ಎಲ್ ದೃಢಪಡಿಸಿದೆ.

  • ಸತ್ತ ಉಗ್ರರ ಬಳಿ ಪಾಕಿಸ್ತಾನದ ವೋಟರ್ ಐಡಿ ಕಾರ್ಡ್, ಚಾಕ್ಲೆಟ್ ಕೂಡ ಪತ್ತೆಯಾಗಿದೆ.

  • ಪಹಲ್ಗಾಮ್ ದಾಳಿಗೆ ಬಳಸಿದ್ದ ಅದೇ ರೈಫಲ್ ಅನ್ನು ಎಫ್‌ಎಸ್‌ಎಲ್ ದೃಢಪಡಿಸಿದೆ.

ಅಮಿತ್ ಶಾ ಕಠಿಣ ಸ್ಫೋಟ:
“ಪಾಕಿಸ್ತಾನದ ಪಾತಕಿಗಳಿಗೆ ಮರುಳಿನ ತಾಕತ್ತು ಕೊಡಲಿಲ್ಲ. ದೇಶದ ಶತ್ರುಗಳನ್ನು ಗಡಿಯಲ್ಲಿಯೇ ಹೊಡೆದುರುಳಿಸಲಾಗಿದೆ. ಇವರಂತಹ ಉಗ್ರರ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರಲಿದೆ” ಎಂದು ಶಾ ಹೇಳಿದ್ದಾರೆ.

ಬಿಬಿಎಂಪಿ ವಿಭಜನೆಗೆ ಮೂಲಸೌಕರ್ಯ ಹಾಗೂ ಸಿಬ್ಬಂದಿ ಸವಾಲು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಯೋಜನೆಗೆ ತಡೆ

ಬೆಂಗಳೂರು, ಜುಲೈ 29 – ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅನ್ನು ಐದು ನಿಗಮಗಳಾಗಿ ವಿಭಜಿಸುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಯೋಜನೆಗೆ ಸರ್ಕಾರ ಸಾಕಷ್ಟು ತಾಂತ್ರಿಕ ಮತ್ತು ಆಡಳಿತಾತ್ಮಕ ಸವಾಲುಗಳನ್ನು ಎದುರಿಸಬೇಕಾಗಿದೆ.


ಮುಖ್ಯ ಸವಾಲುಗಳು:

  • ಪ್ರತಿ ನಿಗಮದಲ್ಲಿ 150 ವಾರ್ಡ್‌ಗಳು ಮತ್ತು 150 ಕೌನ್ಸಿಲರ್‌ಗಳು ಇರಲಿದ್ದಾರೆ.

  • ಕೌನ್ಸಿಲ್ ಸಭೆಗಳಿಗೆ ಅಗತ್ಯವಿರುವ ಹೆಚ್ಚುವರಿ ಸಭಾಂಗಣಗಳು ಮತ್ತು ಕಚೇರಿ ಕೋಣೆಗಳು ಕೊರತೆಯಾಗಲಿದೆ.

  • ಪ್ರತಿ ನಿಗಮಕ್ಕೆ ಕನಿಷ್ಠ 50 ಕಚೇರಿ ಕೊಠಡಿಗಳು, ಅಗತ್ಯವಿರುವ ಭೂಮಿಯು ಸುಮಾರು 2 ಎಕರೆ.

  • ಬಿಬಿಎಂಪಿ ಈಗಾಗಲೇ ಸಿಬ್ಬಂದಿ ಕೊರತೆಯಿಂದ ತೊಂದರೆ ಅನುಭವಿಸುತ್ತಿದೆ, ವಿಭಜನೆಯ ನಂತರ ಇದು ಇನ್ನಷ್ಟು ಹೆಚ್ಚಾಗಲಿದೆ.

  • ನಾಯಕರು ಏನು ಹೇಳುತ್ತಿದ್ದಾರೆ?

    ಬಿಜೆಪಿ ನಾಯಕ ಎನ್.ಆರ್. ರಮೇಶ್ ಅವರ ಪ್ರಕಾರ, “ಐದು ನಿಗಮಗಳನ್ನಾಗಿ ವಿಭಜಿಸಲು ಸರ್ಕಾರಕ್ಕೆ ಭಾರಿ ಮೂಲಸೌಕರ್ಯ ಚುಕ್ಕಾಣಿ ಅಗತ್ಯವಿದೆ. ಇದು ಬಿಬಿಎಂಪಿ ಚುನಾವಣೆಗಳನ್ನು ಮುಂದೂಡಲು ಕೈಗೊಂಡಿರುವ ತಂತ್ರವಾಗಿದೆ.”

    ಕಾಂಗ್ರೆಸ್ ನಾಯಕ ಎಂ. ಶಿವರಾಜ್ ತಮ್ಮ ಅಭಿಪ್ರಾಯ ಹಂಚಿಕೊಂಡು, “ಈಗಿರುವ ಬಿಬಿಎಂಪಿ ಕಚೇರಿಗಳನ್ನು ನಿಗಮದ ಪ್ರಧಾನ ಕಚೇರಿಗಳಾಗಿಸಬಹುದು. ಆದರೆ ಐದು ನಿಗಮಗಳಿಗಾಗಿ ಜಾಗ ಗುರುತಿಸುವುದು ದೊಡ್ಡ ಸವಾಲು” ಎಂದಿದ್ದಾರೆ.

    ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ ರಾವ್ ಸ್ಪಷ್ಟಪಡಿಸಿದ್ದು, “ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು ಸ್ಥಾಪಿಸಲು ಅಗತ್ಯವಿರುವ ಸಿಬ್ಬಂದಿ, ಸ್ಥಳ ಹಾಗೂ ಮೂಲಸೌಕರ್ಯಗಳ ಮಾಹಿತಿ ಹೊಂದಿದ ವರದಿಯನ್ನು ಸರ್ಕಾರದೊಂದಿಗೆ ಹಂಚಿಕೊಳ್ಳಲಾಗುತ್ತದೆ. ಅದರಿಂದ ಸುಗಮ ಪರಿವರ್ತನೆ ಸಾಧ್ಯವಾಗಲಿದೆ.”

ನವದೆಹಲಿ: ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಮತ್ತೊಮ್ಮೆ ತಮ್ಮ ಮಾನವೀಯ ದಟ್ಟಣೆಯಿಂದ ಗಮನ ಸೆಳೆದಿದ್ದಾರೆ. ಭಾರತ-ಪಾಕಿಸ್ತಾನ ಗಡಿಯಾಚೆ ನಡೆದ ಆಪರೇಷನ್ ಸಿಂಧೂರ್ (Operation Sindoor) ಸಂದರ್ಭದಲ್ಲಿ ಕುಟುಂಬದ ಪೋಷಕರನ್ನು ಕಳೆದುಕೊಂಡ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ 22 ಮಕ್ಕಳನ್ನು ದತ್ತು ಪಡೆಯಲು ಅವರು ಮುಂದಾಗಿದ್ದಾರೆ.

ಪಾಕಿಸ್ತಾನದ ಶೆಲ್ ದಾಳಿಯ ವೇಳೆ ಅನೇಕರು ತಮ್ಮ ಕುಟುಂಬದವರನ್ನು ಕಳೆದುಕೊಂಡಿದ್ದು, ಆ ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ಹೊಣೆಗಾರಿಕೆಯನ್ನು ರಾಹುಲ್ ಗಾಂಧಿ ಭರಿಸುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ಮುಖ್ಯಸ್ಥ ತಾರಿಕ್ ಹಮೀದ್ ಕರ್ರಾ ಮಾಧ್ಯಮಕ್ಕೆ ತಿಳಿಸಿದ್ದಾರೆ.

🎓 ಮಕ್ಕಳ ಶಿಕ್ಷಣದ ಭರವಸೆ

ಈ ಮಕ್ಕಳು ತಮ್ಮ ಪದವಿ ಶಿಕ್ಷಣವನ್ನು ಪೂರ್ಣಗೊಳಿಸುವವರೆಗೆ ಸಂಪೂರ್ಣ ಆರ್ಥಿಕ ಬೆಂಬಲ ಲಭಿಸಲಿದೆ. ಮೊದಲ ಕಂತಿನ ಹಣವನ್ನು ಈ ವಾರ ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಲಾಗಿದೆ. ಮೇ ತಿಂಗಳಲ್ಲಿ ಪೂಂಚ್‌ಗೆ ಭೇಟಿ ನೀಡಿದ್ದ ಗಾಂಧಿ, ಸ್ಥಳೀಯ ನಾಯಕರನ್ನು ಮಕ್ಕಳ ಪಟ್ಟಿಯನ್ನು ಸಂಗ್ರಹಿಸಲು ಸೂಚಿಸಿದ್ದರು. ಸರ್ಕಾರಿ ದಾಖಲೆ ಪರಿಶೀಲನೆಯ ನಂತರ ಅಂತಿಮ ಪಟ್ಟಿ ಸಿದ್ಧವಾಯಿತು

ಕ್ರೈಸ್ಟ್ ಪಬ್ಲಿಕ್ ಶಾಲೆಗೆ ಭೇಟಿ ನೀಡಿದಾಗ, ಶೆಲ್ ದಾಳಿಯಲ್ಲಿ ಮೃತಪಟ್ಟ 12 ವರ್ಷದ ಅವಳಿ ಮಕ್ಕಳು ಉರ್ಬಾ ಫಾತಿಮಾ ಮತ್ತು ಜೈನ್ ಅಲಿ ಅವರ ಸಹಪಾಠಿಗಳೊಂದಿಗೆ ರಾಹುಲ್ ಗಾಂಧಿ ಮಾತನಾಡಿದರು. ಮಕ್ಕಳ ಮನಸ್ಸಿಗೆ ಧೈರ್ಯ ತುಂಬಿದ ಅವರು,
“ನಿಮ್ಮ ಸ್ನೇಹಿತರನ್ನು ನೀವು ಮಿಸ್ ಮಾಡುತ್ತೀರಾ, ಅದಕ್ಕಾಗಿ ನನಗೆ ವಿಷಾದ. ಆದರೆ ನಿಮ್ಮ ಭವಿಷ್ಯ ಪ್ರಬಲವಾಗಿರಲಿ ಎಂಬುದು ನನ್ನ ಆಶಯ,” ಎಂದು ಹೇಳಿದರು.

🔥 ಆಪರೇಷನ್ ಸಿಂಧೂರ್ ಹಿನ್ನೆಲೆ

2024ರ ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ 26 ಜನರ ಪ್ರಾಣವನ್ನೇ ಕಿತ್ತುಕೊಂಡಿತ್ತು. ಇದರ ಪ್ರತೀಕಾರವಾಗಿ ಭಾರತವು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಒಂಬತ್ತು ಭಯೋತ್ಪಾದಕ ಕೇಂದ್ರಗಳನ್ನು ಗುರಿ ಮಾಡಿ 100 ಕ್ಕೂ ಹೆಚ್ಚು ಉಗ್ರರನ್ನು ಹತರ ಮಾಡಿತ್ತು. ಈ ಕ್ರಮದ ನಂತರ ಮೇ 7ರಂದು ಭಾರತ-ಪಾಕಿಸ್ತಾನ ಕದನ ವಿರಾಮಕ್ಕೆ ಸಹಿ ಹಾಕಿದವು.

ನಗರ ಪೊಲೀಸ್ ಇಲಾಖೆಯಲ್ಲಿ ಯೋಗಕ್ಷೇಮ ಅಧಿಕಾರಿಗಳು/ಸಮಾಲೋಚಕರ ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮ

ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ.ಸೀಮಾಂತ್‍ಕುಮಾರ್ ಸಿಂಗ್, ಐಪಿಎಸ್ ರವರ ನಿರ್ದೇಶನದಂತೆ ಹಾಗೂ ಬೆಂಗಳೂರು ನಗರದ ಎಲ್ಲಾ ಘಟಕಗಳ ಉಪ ಪೊಲೀಸ್ ಆಯುಕ್ತರ ಸಹಕಾರ ಹಾಗೂ ಮಾರ್ಗದರ್ಶನದಲ್ಲಿ ಬೆಂಗಳೂರು ನಗರ ಪೊಲೀಸ್ ವ್ಯಾಪ್ತಿಯ ಕಾನೂನು ಸುವ್ಯವಸ್ಥೆ, ಸಂಚಾರ, ಶಸಸ್ತ್ರ ಮೀಸಲು ಪಡೆ ಮತ್ತು ಸಿ.ಇ.ಎನ್ ಕ್ರೈಂ ಘಟಕಗಳು/ಉಪ ಘಟಕಗಳು/ಠಾಣೆಗಳಲ್ಲಿ ಸಮಾಲೋಚಕರು/ಯೋಗಕ್ಷೇಮ ಅಧಿಕಾರಿಗಳು ಕಳೆದ ಒಂದು ವಾರದಲ್ಲಿ ಹಮ್ಮಿಕೊಂಡ ವಿವಿಧ ವಿಷಯಗಳ ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮಗಳಾದ ಜೀವನ ಶೈಲಿ ನಿರ್ವಹಣೆ, ಒತ್ತಡ ನಿರ್ವಹಣೆ, ಮೊಬೈಲ್ ವ್ಯಸನ ತಡೆಗಟ್ಟುವಿಕೆ, ಆತ್ಮಹತ್ಯೆ ತಡೆಗಟ್ಟುವಿಕೆ, ಸಾಮಾನ್ಯ ಮಾನಸಿಕ ಆರೋಗ್ಯ ಸಮಸ್ಯೆಗಳು ಮತ್ತು ಪೊಲೀಸ್ ಹಾಗೂ ಕುಟುಂಬಸ್ಥರಿಗೆ ವೈಯಕ್ತಿಕ ಮತ್ತು ಕೌಟುಂಬಿಕ ಆಪ್ತ ಸಮಾಲೋಚನೆ ನಡೆಸಿದ ವಿವರಗಳು ಕೋಷ್ಠಕದಲ್ಲಿ ನಮೂದಿಸಲಾಗಿದೆ.

VK DIGITAL NEWS:

ಧರ್ಮಸ್ಥಳ ಪ್ರಕರಣ: ಮೃತದೇಹಗಳನ್ನು ಹೂತಿಟ್ಟ ಜಾಗ ತೋರಿಸಿದ ಸಾಕ್ಷಿ ದೂರುದಾರ

 

 

 

 

 

 

 

ಯೂರಿಯಾ ಕೊರತೆ: ಡಿಸಿಎಂ ಡಿಕೆ ಶಿವಕುಮಾರ್ ಕೇಂದ್ರ ಸರ್ಕಾರದ ವಿರುದ್ಧ ಗರಂ – ‘‘ಬಿಜೆಪಿ ನಮ್ಮ ವಿರುದ್ಧವಲ್ಲ, ಅವರ ವಿರುದ್ಧವೇ ಪ್ರತಿಭಟನೆ ಮಾಡಬೇಕು’’

ಬೆಂಗಳೂರು – ರಾಜ್ಯದಲ್ಲಿ ಯೂರಿಯಾ ಗೊಬ್ಬರ ಕೊರತೆಯಿಂದಾಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ಬಿಜೆಪಿಯು ಸರ್ಕಾರದ ನಿರ್ಲಕ್ಷ್ಯ ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿರುವ ನಡುವೆ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕೇಂದ್ರ ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ.

ಮಂಗಳವಾರ ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಡಿಕೆಶಿ, “ಗೊಬ್ಬರದ ಇಲಾಖೆ ನಮ್ಮ ಕೈಯಲ್ಲೇನಿಲ್ಲ. ಇದು ಸಂಪೂರ್ಣವಾಗಿ ಕೇಂದ್ರ ಕೃಷಿ ಇಲಾಖೆಯ ಅಧೀನದಲ್ಲಿದೆ. ನಾವು ಫ್ಯಾಕ್ಟರಿ ಹೊಂದಿಲ್ಲ, ಕೇವಲ ಹಂಚಿಕೆ ಮಾತ್ರ ಮಾಡುತ್ತೇವೆ” ಎಂದು ಸ್ಪಷ್ಟಪಡಿಸಿದರು.

“ಬಿಜೆಪಿ ನಮ್ಮ ವಿರುದ್ಧವಲ್ಲ, ತಮ್ಮ ಪಕ್ಷದ ವಿರುದ್ಧವೇ ಪ್ರತಿಭಟನೆ ಮಾಡಬೇಕು. ಅವರೇನು ಮಾಡಿದ್ರು? ತಮ್ಮ ಆಡಳಿತದ ಕಾಲದಲ್ಲೇ ರೈತರಿಗೆ ಗೊಬ್ಬರ ಸಿಗದೇ ಗುಂಡು ಹಾರಿಸಿದ ಘಟನೆ ಉಂಟು” ಎಂದು ಡಿಕೆಶಿ ಹಿಂದಿನ ಸರ್ಕಾರವನ್ನು ಹೊಡೆದಿದ್ದಾರೆ.

ಅದೇ ಸಮಯದಲ್ಲಿ, ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಎಷ್ಟು ಗೊಬ್ಬರ ಪೂರೈಕೆ ಮಾಡಲಾಗಿದೆ ಎಂಬ ವಿವರಗಳು ದಾಖಲೆಗಳೊಂದಿಗೆ ಲಭ್ಯವಿದ್ದು, ಯಾವುದೇ ತಾರತಮ್ಯ ಇಲ್ಲ ಎಂದು ಹೇಳಿದರು.

ಸಿಎಂ ಸಭೆಗೆ ಆಹ್ವಾನ ಇಳಿವಿಲ್ಲದ ಬಗ್ಗೆ ಪ್ರತಿಕ್ರಿಯೆ

“ಸಿಎಂ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರ ಬಳಸಿ ಶಾಸಕರ ಸಭೆ ನಡೆಸುತ್ತಿದ್ದಾರೆ. ಇದರಲ್ಲಿ ತಪ್ಪೇನಿದೆ?” ಎಂದು ಪ್ರತಿಕ್ರಿಯಿಸಿದ ಡಿಕೆಶಿ, “ನನ್ನ ಸಮಸ್ಯೆ ನನಗೆ ಇಲ್ಲದಿದ್ದರೆ ನಿಮಗೇಕೆ? ಈ ವಿಷಯವನ್ನು ನೀವು ಕಥೆಯಾಗಿ ಮಾಡಬೇಡಿ” ಎಂದು ಪತ್ರಕರ್ತರ ಪ್ರಶ್ನೆಗೆ ತೀವ್ರವಾಗಿ ಪ್ರತಿಕ್ರಿಯಿಸಿದರು.

ಗೌಡಗೆರೆಯ ಶ್ರೀ ಚಾಮುಂಡೇಶ್ವರಿ ಬಸವಪ್ಪನವರ ಕ್ಷೇತ್ರಕ್ಕೆ ಭೇಟಿ

ರಾಮನಗರ ಜಿಲ್ಲೆ ಗೊಂಬೆನಾಡು ಚನ್ನಪಟ್ಟಣ ತಾಲ್ಲೂಕಿನ ಗೌಡಗೆರೆಯಲ್ಲಿ ಪಂಚಲೋಹದ 60 ಅಡಿ ಎತ್ತರದ ಶ್ರೀ ಚಾಮುಂಡೇಶ್ವರಿ ವಿಗ್ರಹ ರಾಜ್ಯದ ಗಮನ ಸೆಳೆದ ಕ್ಷೇತ್ರವಾಗಿ ನನ್ನ ಮಡದಿಯು ಶ್ರೀಕ್ಷೇತ್ರಕ್ಕೆ ಹೋಗಿಬರುವ ಬಯಕೆ ವ್ಯಕ್ತಪಡಿಸಿದಳು. ನಾವು ಭಾನುವಾರ ಬೆಳಿಗ್ಗೆ ಮೈಸೂರಿಗೆ ಹೋಗಿ ರಾತ್ರಿ ಅಲ್ಲಿಯ ಬೆಳವಾಡಿಯಲ್ಲಿ ತಂಗಿದ್ದು ಸೋಮುವಾರ ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಮಡಿಯಾಗಿ ಗೌಡಗೆರೆಗೆ ಹೊರಟೆವು. ಈಗಾಗಲೇ ಒಮ್ಮೆ ಗೌಡಗೆರೆಗೆ ಹೋಗಿಬಂದಿದ್ದ ಅವರಕ್ಕನವರು ಅಲ್ಲಿ ನಮಗೆ ಜೊತೆಯಾದರು.

 ನಾವು ಮೈಸೂರು ಕೇಂದ್ರ ಬಸ್ ನಿಲ್ದಾಣಕ್ಕೆ ಬಂದರೆ ಅದೇನು ಜನಜಂಗುಳಿ! ಹಿಂದೊಮ್ಮೆ ನಾವು ದಂಪತಿಗಳು ಮೈಸೂರಿನಲ್ಲಿ ಮದುವೆ ಮುಗಿಸಿ ವಾಪಸ್ಸು ಹಾಸನಕ್ಕೆ ಬರುವಾಗ ಮಡದಿಯ ಮಿನಿ ಪರ್ಸ್ ಪಿಕ್ ಪ್ಯಾಕೆಟ್ ಆಗಿತ್ತು. ಸಧ್ಯ ನನ್ನ ಬಳಿ ಸ್ವಲ್ಪ ಮನಿ ಇದ್ದು ಪರದಾಟ ತಪ್ಪಿತ್ತು. ಇದೇ ನೆನಪಿನಲ್ಲಿ ನಾವು ಜನಜಂಗುಳಿ ನಡುವೆ ಗೌಡಗೆರೆ ಬಸ್ ಹುಡುಕಿದೆವು. ನಮ್ಮಂತೆಯೇ ಕೆಲವರು ನೇರ ಬಸ್ಸಿಗೆ ಪರದಾಡುತ್ತಿದ್ದರು. ಬಸ್ ಕಂಡಕ್ಟರ್ ಗೌಡಗೆರೆ ಗೇಟ್‍ಗೆ ಹೋಗುತ್ತೆ ಹತ್ತಿ ಎಂದರು ಹತ್ತಿದೆವು. ಅದ್ಯಾವ ಊರೆಂದು ನೆನಪಿಲ್ಲ. ಅಲ್ಲಿ ನಮ್ಮನ್ನು ಇಳಿಸಿ ಬಸ್ ಮುಂದೆ ಹೋಯಿತು.

ಅಲ್ಲಿಂದ ಮತ್ತೆ ಒಳದಾರಿಯಲ್ಲಿ 3 ಕಿ.ಮೀ. ಹೋಗಬೇಕು ಗೌಡಗೆರೆಗೆ ಹೋಗುವ ಬಸ್ಸು ಮದ್ದೂರಿನಿಂದ ಬಂದರು ರಷಾಗಿತ್ತಾಗಿ ನಿಲ್ಲಿಸಲಿಲ್ಲ. ಅಲ್ಲಿಯ ಒಂದು ಆಟೋ ಹತ್ತಕ್ಕೂ ಹೆಚ್ಚು ಮಂದಿಯನ್ನು ತುಂಬಿಕೊಂಡು ಒಬ್ಬರಿಗೆ ಇಪ್ಪತ್ತು ರೂ.ನಂತೆ ಪಡೆದು ಗೌಡಗೆರೆಯಲ್ಲಿ ನಮ್ಮನ್ನು ಇಳಿಸಿತು. ಈ ಕ್ಷೇತ್ರದಲ್ಲಿ ನಡೆಯುವ ಭೀಮನ ಅಮಾವಾಸ್ಯೆ ರಥೋತ್ಸವದಲ್ಲಿ ನವಜೋಡಿಗಳು ಹಣ್ಣು ಜವನ ಎಸೆದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. 2021ರಲ್ಲಿ ಚಾಮುಂಡೇಶ್ವರಿ ಮೂರ್ತಿ, 2022ರಲ್ಲಿ ಮಹಾ ಮಸ್ತಕಾಭಿಷೇಕ 2023ರಲ್ಲಿ ಚಂಡಿಕಾ ಮಹಾಯಾಗ 2024ರಲ್ಲಿ ತೇರು ಲೋಕಾರ್ಪಣೆ ಆಗಿ ಚಾಮುಂಡಿ ದೇವಿಗೆ ಹಿಂಭಾಗ ಕೃತಕ ಬೆಟ್ಟ ನಿರ್ಮಾಣ ಮಾಡಿ ಈ ವರ್ಷ ನೀರಿನ ಝರಿ ಅನಾವರಣಗೊಂಡ ವರದಿ ಓದಿದೆ. ನೈಸರ್ಗಿಕ ರೀತಿಯಲ್ಲಿ ಬೀಳುವ ನೀರಿನ ಸಮೇತ ದೇವಿಯ ದರ್ಶನ ಕಣ್ತುಂಬಿಕೊಳ್ಳಬಹುದಾಗಿದೆ.

ಪಂಚಲೋಹದ ಸಿಂಹದ ವಿಗ್ರಹ ಕೆಲಸ ನಡೆದಿದ್ದು ವಿಶ್ವದಲ್ಲೇ ಅತಿ ಎತ್ತರದ (18ಅಡಿ) 23 ಅಡಿ ಉದ್ದದ ಸಿಂಹದ ವಿಗ್ರಹ ಪ್ರತಿಷ್ಠಾಪನೆ ಮಾಡಿ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಳ್ಳಲಾಗುವುದು ಎಂದು ಧರ್ಮದರ್ಶಿ ಶ್ರೀ ಮಲ್ಲೇಶ್ ಗುರೂಜಿ ಹೇಳಿದ್ದಾರೆ. ವಿಶ್ವದಲ್ಲೇ ಅತಿ ಎತ್ತರವಾದ ಪಂಚಲೋಹದ ಶ್ರೀ ಚಾಮುಂಡೇಶ್ವರಿ ವಿಗ್ರಹ ಏಷ್ಯ ಮತ್ತು ಇಂಡಿಯಾ ಬುಕ್ ಆಪ್ ರೆಕಾರ್ಡ್‍ನಲ್ಲಿ ಸೇರಿದೆ. 18 ಕೈಗಳಿರುವ ನಿಂತ ಭಂಗಿಯ ವಿಗ್ರಹ ವಿಶಿಷ್ಟವಾಗಿದೆ. ಚಾಮುಂಡೇಶ್ವರಿ ಮೂರ್ತಿಯ ಸನಿಹಕ್ಕೆ ಹೋಗಲು ಮೆಟ್ಟಿಲುಗಳಿವೆ. ಮೂರ್ತಿಯ ಕೆಳಭಾಗದಲ್ಲಿ ಮ್ಯೂಸಿಯಂ ಮಾಡಿ ನಿರ್ಮಿತ ಕಲಾಕೃತಿಗಳ ಪುತ್ಥಳಿಗಳು ಮನ ಸೆಳೆಯುತ್ತವೆ.

ಶಾಲಾ ಮಕ್ಕಳಿಗೆ ಇದು ಶೈಕ್ಷಣಿಕ ಸ್ಥಳವಾಗುವ ಆಶಯದಲ್ಲಿ ವೈಜ್ಞಾನಿಕ ರೀತಿ ನೀತಿಗಳ ಮಾದರಿ ಸೃಷ್ಟಿ ಮಾಡಲಾಗಿದೆ. ಮಂಗಳ ಗ್ರಹ, ಚಂದ್ರಲೋಕ, ರಾಕೇಟ್ ಉಡಾವಣೆ, ಬೌಗೋಳಿಕವಾಗಿ ಮಕ್ಕಳು ಕಲಿಯಬಹುದಾದ ಹಲವು ಆಚಾರ ವಿಚಾರಗಳನ್ನು ಅಳವಡಿಸಲಾಗಿದೆ. ತಾಯಿ ಪ್ರತಿಮೆ, ರೈತರ ಪುತ್ಥಳಿಗಳು ಸೇರಿದಂತೆ ನಮ್ಮ ಸಂಪ್ರದಾಯ ಬಿಂಬಿಸುವ ಪುತ್ಥಳಿಗಳು ಕಲಾವಿದರ ಕೌಶಲ್ಯದಲ್ಲಿ ರೂಪು ತೆಳೆದಿವೆ. ಶ್ರೀಕ್ಷೇತ್ರ 2010ರಿಂದ ಪ್ರಚಲಿತವಾಗಿ ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಹೊಂದಿ ಪ್ರವಾಸಿಗರನ್ನು ಸೆಳೆಯುತ್ತಿದೆ. ಇಲ್ಲಿಗೆ ಬಂದು ಒಳ್ಳೆಯ ಮನಸ್ಸಿನಿಂದ ತೆಂಗಿನಕಾಯಿ ಹರಕೆ ಕಟ್ಟಿದರೆ, ಉಪ್ಪಿನ ಸೇವೆ ಮಾಡಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ. ಕಾಯಿಗಳ ಬ್ಯಾಗಿನಿಂದ ತುಂಬಿಹೋಗಿದೆ.

ನನ್ನ ಮಡದಿ ಮತ್ತು ಆಕೆಯ ಅಕ್ಕನವರು ತೆಂಗಿನಕಟ್ಟಿ ಕೈಮುಗಿದು ಹರಕೆ ಕಟ್ಟಿಕೊಂಡರು. ಭಕ್ತರು ಇಲ್ಲಿಯೇ ಇರುವ ಪವಾಡ ಬಸವಪ್ಪನ ಆರ್ಶೀವಾದ ಪಡೆದು ತೀರ್ಥಸ್ನಾನ ಮಾಡುತ್ತಾರೆ. ನಿಜ ಬಸವನು ಇಲ್ಲಿದ್ದು ಬಲಗಾಲಿನಿಂದ ಆರ್ಶಿವಾದ ಕೊಡುತ್ತೆ. ಇಲ್ಲಿಗೆ ಬಂದವರಿಗೆಲ್ಲಾ ಅನ್ನಪ್ರಸಾದ ಇದ್ದು ಸೌದೆ ಒಲೆ ಅಡಿಗೆ ಬಡಿಸುವರು. ನಾವು ದೇವಿ ದರ್ಶನ ಮಾಡಿ ಅನ್ನಪ್ರಸಾದ ಸೇವಿಸಿ ಮೈಸೂರು ಬಸ್ ಹತ್ತಿ ಬೆಳವಾಡಿಗೆ ತಲುಪವಷ್ಟರಲ್ಲಿ ಸಂಜೆಯಾಗಿತ್ತು.

VK DIGITAL NEWS:

 

 

 

 

 

ಬಫರ್ ದಾಸ್ತಾನು ಮೊತ್ತ ಕಡಿಮೆ ಮಾಡಿದ್ದೇಕೆ?: ಎನ್.ರವಿಕುಮಾರ್

ಬೆಂಗಳೂರು: ಈ ಹಿಂದೆ ರಾಜ್ಯದಲ್ಲಿ ರೈತರಿಗೆ ಗೊಬ್ಬರದ ಕೊರತೆ ಮತ್ತು ರಾಜ್ಯ ಸರ್ಕಾರಕ್ಕೆ ಗೊಬ್ಬರ ಖರೀದಿ ಮಾಡಲು ಹಣಕಾಸಿನ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಕಾಪು ದಾಸ್ತಾನು ಅಂದರೆ ಬಫರ್ ದಾಸ್ತಾನನ್ನು ಇಡಲು 1000 ಕೋಟಿ ರೂ. ಮೀಸಲಿಡುತ್ತಿದ್ದರು. ಸಿದ್ದರಾಮಯ್ಯ ಅವರು ರೈತರ ಗೊಬ್ಬರ ಬಫರ್ ದಾಸ್ತಾನನ್ನು ಇಡಲು ತೆಗೆದಿಟ್ಟಿರುವ ಹಣ ಕೇವಲ 400 ಕೋಟಿ ರೂ ಮಾತ್ರ. 1000 ಕೋಟಿ ಜಾಗದಲ್ಲಿ 400 ಕೋಟಿ ತೆಗೆದಿಟ್ಟರೆ ರೈತರಿಗೆ ಹೇಗೆ ಗೊಬ್ಬರ ಸಿಗುತ್ತದೆ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರು ಪ್ರಶ್ನಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರವು ರಾಜ್ಯದ ರೈತರಿಗೆ ಯುರಿಯಾ ಗೊಬ್ಬರವನ್ನು ಸರಿಯಾದ ಸಮಯಕ್ಕೆ ಕೊಡುತ್ತಿಲ್ಲ. ಅದರ ವಿರುದ್ಧ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆಗೆ ಕರೆಕೊಟ್ಟಿದೆ ಎಂದರು.
ಉತ್ತರ -ದಕ್ಷಿಣ ಕರ್ನಾಟಕಗಳಲ್ಲಿ ರಾಗಿ, ಜೋಳ, ಮೆಕ್ಕೆಜೋಳ, ಹೆಸರು ಮುಂತಾದ ಬೆಳೆಗೆ ಗೊಬ್ಬರದ ಅವಶ್ಯಕತೆ ಇದೆ. ಆದರೆ ಯುರಿಯಾ ಗೊಬ್ಬರವನ್ನು ಸರಬರಾಜು ಮಾಡಲು ರಾಜ್ಯ ಸರ್ಕಾರದಿಂದ ಆಗುತ್ತಿಲ್ಲ ಎಂದು ಆಕ್ಷೇಪಿಸಿದರು. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಹಸಿರು ಗೊಬ್ಬರ ಬಹಳ ಕಡಿಮೆ. ಆ ಭಾಗದಲ್ಲಿ ಯುರಿಯಾ ಗೊಬ್ಬರವನ್ನೇ ಹೆಚ್ಚು ಉಪಯೋಗಿಸುತ್ತಾರೆ. ಅಲ್ಲಿನ ರೈತರಿಗೆ ಯುರಿಯಾ ಗೊಬ್ಬರ ಸಿಗದೆ ಬಹಳ ತೊಂದರೆಯಾಗಿದೆ ಎಂದು ತಿಳಿಸಿದರು.
ರಾಜ್ಯ ಎಲ್ಲ ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗಿರುವ ಕಾರಣ ರೈತರ ಬೆಳೆಗೆ ಶೀತವಾಗಿದೆ. ಬೆಳೆಗೆ ಗೊಬ್ಬರ ನೀಡಿದರೆ ಬೆಳೆ ಚೆನ್ನಾಗಿ ಬರುತ್ತದೆ ಇಲ್ಲವೆಂದರೆ ಬೆಳೆ ಬರುವುದಿಲ್ಲ ಎಂದು ರೈತರು ಮಾತನಾಡುತ್ತಿದ್ದಾರೆ. ರೈತರ ಗೋಳನ್ನು ಕೇಳುವವರು ಯಾರು ಇಲ್ಲ ಎಂದು ಆರೋಪಿಸಿದರು. ಪ್ರತಿ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರದ ಗೊಬ್ಬರದ ಕೇಂದ್ರಗಳಲ್ಲಿ ಸಾವಿರಾರು ಸಂಖ್ಯೆಯ ರೈತರು ಕ್ಯೂ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ಕೂಡಲೇ ಯುರಿಯಾ ಗೊಬ್ಬರ ಒದಗಿಸುವಂತೆ ಮನವಿ ಮಾಡಿದರು.
ಕಾಂಗ್ರೆಸ್ ಸರ್ಕಾರ ಯುರಿಯಾ ಗೊಬ್ಬರದ ಪರ್ಯಾಯವಾಗಿ ನ್ಯಾನೋ ಯುರಿಯಾ ಬಳಕೆಗೆ ಹೆಚ್ಚಿನ ಪ್ರೋತ್ಸಾಹ ಮತ್ತು ಪ್ರಚಾರ ಮಾಡಿಲ್ಲ. ಯುರಿಯಾ ಗೊಬ್ಬರ ಸಿಗದಿದ್ದಾಗ ನ್ಯಾನೋ ಯುರಿಯಾ ಬಳಕೆ ಮಾಡುವಂತೆ ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸ ರಾಜ್ಯ ಸರ್ಕಾರ ಮಾಡಬೇಕಿತ್ತು; ಆದರೆ ಮಾಡಿಲ್ಲ್ಲ ಎಂದು ರವಿಕುಮಾರ್ ಅವರು ದೂರಿದರು.
ಕಾಂಗ್ರೆಸ್ ಸರ್ಕಾರ ನ್ಯಾನೋ ಯುರಿಯಾ ಸಿಂಪಡಣೆಗೆ ಬೇಕಾದ ಯಂತ್ರಗಳಿಗೆ ಸಹಾಯಧನಕ್ಕೆ ಅನುದಾನ ಕೊಡುತ್ತಿಲ್ಲ. ಗಾಳಿಯಲ್ಲಿರುವ ಸಾರಜನಕವನ್ನು ಹೀರಿಕೊಂಡು ಮಣ್ಣಿನಲ್ಲಿ ಸೇರಿಸುವ ಜೈವಿಕ ಗೊಬ್ಬರಗಳ ವಿತರಣೆಯನ್ನು ಕಡಿತಗೊಳಿಸಿದ್ದಾರೆ. ಹಸಿರೆಲೆ ಗೊಬ್ಬರ ಮಾಡಲು ರೈತರಿಗೆ ಸಹಾಯಧನ ನೀಡಿರುವುದಿಲ್ಲ. ಇದ್ಯಾವುದೇ ಕಾರ್ಯವನ್ನು ಮಾಡದೆ ರೈತರನ್ನು ಸಂಪೂರ್ಣವಾಗಿ ಸಿದ್ದರಾಮಯ್ಯ ನವರ ಸರ್ಕಾರ ಕಡೆಗಣಿಸಿದೆ ಎಂದು ಆಕ್ಷೇಪಿಸಿದರು.
ಒಂದೆಡೆ ಜಾನುವಾರುಗಳು ಕಡಿಮೆಯಾಗುತ್ತಿವೆ. ಜಾನುವಾರು ಕಳವು ಮಾಡುವವರಿಗೆ ಈ ಸರ್ಕಾರ ಸಹಾಯ ಮಾಡುತ್ತದೆಯೇ ವಿನಾ ಅವನ್ನು ಸಾಕುವುದಕ್ಕೆ ಯಾವ ನೆರವನ್ನೂ ನೀಡುತ್ತಿಲ್ಲ. ಹಾಲಿನ ಪ್ರೋತ್ಸಾಹಧನವನ್ನೂ ನೀಡುತ್ತಿಲ್ಲ. ಇದರಿಂದ ರೈತರಿಗೆ ಏಟಿನಮೇಲೆ ಏಟು ಬೀಳುತ್ತಿದೆ ಎಂದು ತಿಳಿಸಿದರು.
ರೈತರಿಗೆ ಗುಣಮಟ್ಟದ ರಸಗೊಬ್ಬರ ನೀಡುತ್ತಿಲ್ಲ. ಖಾಸಗಿ ಕಂಪನಿಗಳು ಕಳಪೆ ಬಿತ್ತನೆ ಬೀಜಗಳನ್ನು ನೀಡುತ್ತಿದ್ದು, ರೈತರಿಗೆ ಉತ್ತಮ ಬೆಳೆ ಬರುತಿಲ್ಲ. ಪ್ರಸ್ತುತ ಮಳೆ ಚೆನ್ನಾಗಿ ಇರುವುದರಿಂದ ರೈತರಿಗೆ ಉತ್ತಮ ಬಿತ್ತನೆ ಬೀಜ ಮತ್ತು ರಸಗೊಬ್ಬರ ಸಿಗದೇ ಇದ್ದಲ್ಲಿ ರೈತರಿಗೆ ಬಿತ್ತನೆ ಮಾಡುವ ಸಮಯ ಕಳೆದು ಹೋದರೆ ಬೆಳೆ ಬರುವುದಿಲ್ಲ. ಹಾಗಾಗಿ ರೈತರನ್ನು ಸಂಪೂರ್ಣವಾಗಿ ಈ ಸರ್ಕಾರ ಕಡೆಗಣಿಸಿದೆ ಎಂದು ಆರೋಪಿಸಿದರು.
ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಮತ್ತು ಬೊಮ್ಮಾಯಿ ಅವರ ಬಿಜೆಪಿ ಸರ್ಕಾರ ಇದ್ದ ಸಂದರ್ಭದಲ್ಲಿ ಕೇಂದ್ರ ಸರ್ಕಾರದಿಂದ 6,000 ರೂ ಮತ್ತು ರಾಜ್ಯ ಸರ್ಕಾರದಿಂದ 4000 ರೂ ಎರಡು ಸೇರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಒಟ್ಟು 10 ಸಾವಿರ ರೂಗಳನ್ನು ನೀಡುತ್ತಿದ್ದರು. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ 4000 ರೂ ಸಹಾಯಧನ ನೀಡುವುದನ್ನು ನಿಲ್ಲಿಸಿ ರೈತರಿಗೆ ಅನ್ಯಾಯ ಮಾಡಿದೆ ಎಂದು ದೂರಿದರು.
ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಬಿತ್ತನೆ ಬೀಜದ ಬೆಲೆಯನ್ನು ಪ್ರತಿ ಕ್ವಿಂಟಲಿಗೆ ಶೇ 20 ರಷ್ಟು ಹೆಚ್ಚಿಸಿದೆ. ಸರ್ಕಾರ ತನ್ನ ದಾರಿದ್ರ್ಯ ಮತ್ತು ಬೇಜವಾಬ್ದಾರಿಯಿಂದ ರಾಜ್ಯದಲ್ಲಿ ಎಲ್ಲ ಬೆಲೆ ಏರಿಕೆಯನ್ನು ಮಾಡಿದೆ ಎಂದು ಟೀಕಿಸಿದರು.
ಬರ ಪರಿಹಾರವಾಗಿ ಕೇಂದ್ರ ಸರ್ಕಾರ ನೀಡಿದ 3,454 ಕೋಟಿ ಅನುದಾನದಲ್ಲಿ ನಯಾಪೈಸೆಯನ್ನು ರಾಜ್ಯದ ರೈತರಿಗೆ ಖರ್ಚು ಮಾಡಿಲ್ಲ. ರೈತರಿಗೆ ನೆರವಾಗಬೇಕು ಎಂದು ಹೇಳಿ ಬರ ಪರಿಹಾರವಾಗಿ ಕೇಂದ್ರ ಸರ್ಕಾರ ನೀಡಿದ ಅನುದಾನವನ್ನು ರೈತರಿಗೆ ಖರ್ಚು ಮಾಡದೆ ಬೇರೆ ಉದ್ದೇಶಕ್ಕೆ ಖರ್ಚು ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ, ರೈತರ ಬೆನ್ನಿನ ಮೇಲೆ ಬರೆ ಎಳೆದಿದೆ ಎಂದು ಆರೋಪಿಸಿದರು.
ರೈತರಿಗಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಧರ್ಮಪತ್ನಿ ಅವರು ತಮ್ಮ ಒಡವೆಗಳನ್ನು ಮುಂಬೈನ ಬ್ಯಾಂಕಿನಲ್ಲಿ ಅಡಮಾನವಿಟ್ಟು ಕೃಷ್ಣರಾಜ ಸಾಗರ ಅಣೆಕಟ್ಟನ್ನು ನಿರ್ಮಾಣ ಮಾಡಿದ್ದಾರೆ. ಇದರಿಂದ ಮಂಡ್ಯ ರೈತರಿಗೆ, ಹಾಸನ ರೈತರಿಗೆ ಮತ್ತು ಬೆಂಗಳೂರು ನಗರದ ಜನರಿಗೆ ನೀರನ್ನು ಕೊಟ್ಟಿದ್ದಾರೆ. ಆದರೆ ಸಿದ್ದರಾಮಯ್ಯನವರು ರೈತರಿಗಾಗಿ ಯಾವ ಅಣೆಕಟ್ಟನ್ನು ಕಟ್ಟಿದ್ದಾರೆ? ಯಾರಿಗೆ ನೀರನ್ನು ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.

ಸರ್ಕಾರದ ಬೇಜವಾಬ್ದಾರಿ ಹೇಳಿಕೆ- ಸತೀಶ್ ಕಡತನಮಲೆ
ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಹಾಗೂ ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಸತೀಶ್ ಕಡತನಮಲೆ ಅವರು ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಂದಾಗ ಕರ್ನಾಟಕದ ರೈತರಿಗೆ ಯುರಿಯಾ ಕೊರತೆ ಬರುತ್ತದೆ. ಹಿಂದೆ ಸಿದ್ದರಾಮಯ್ಯ ನವರ ಸರ್ಕಾರವಿದ್ದಾಗ ವಿಠ್ಠಲ್ ಅರಬಾವಿ ಎಂಬ ರೈತ ಯುರಿಯಾ ಸಿಗುತ್ತಿಲ್ಲವೆಂದು ಬೆಳಗಾವಿ ಜಿಲ್ಲೆಯಲ್ಲಿ ಹೋರಾಟ ಮಾಡಿದ ಸಂದರ್ಭದಲ್ಲಿ ರೈತನ ಎದೆಗೆ ಗುಂಡನ್ನು ಹಾರಿಸಿದ್ದನ್ನು ನಾವು ಮರೆಯುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿದರು.
ಸಿದ್ದರಾಮಯ್ಯ ನವರಿಗೆ ಮತ್ತು ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇದ್ದರೆ ಈ ವರ್ಷದ ಮುಂಗಾರಿನಲ್ಲಿ ಎಷ್ಟು ಹೆಕ್ಟೇರ್ ಪ್ರದೇಶಕ್ಕೆ ಬಿತ್ತನೆ ಬೀಜ, ಗೊಬ್ಬರ ಬೇಕಾಗುತ್ತದೆ ಎನ್ನುವುದು ಕೃಷಿ ಅಧಿಕಾರಿಗಳ ಜೊತೆ ಜಿಲ್ಲ್ಲಾವಾರು ಸಭೆ ನಡೆಸಿ ಅವಶ್ಯಕತೆ ತಿಳಿದುಕೊಳ್ಳಬೇಕಿತ್ತು. ಬಳಿಕ ಕೇಂದ್ರ ಸರ್ಕಾರಕ್ಕೆ ಮನವಿಯನ್ನು ನೀಡುವ ದಾರಿ ರಾಜ್ಯಸರ್ಕಾರಕ್ಕೆ ಇರುತ್ತದೆ ಎಂದು ತಿಳಿಸಿದರು.
ಅವಶ್ಯಕ ರಸಗೊಬ್ಬರವನ್ನು ಕೇಂದ್ರ ಸರ್ಕಾರ ಈಗಾಗಲೇ ಸರಬರಾಜು ಮಾಡಿದೆ. ಕೇಂದ್ರ ರಸಗೊಬ್ಬರ ನೀಡಿದ್ದರೂ ಜನರನ್ನು ದಿಕ್ಕುತಪ್ಪಿಸಲು ಮತ್ತು ರೈತರ ಗಮನ ಬೇರೆಡೆ ಸೆಳೆಯಲು ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಬರೆದು ಕೇಂದ್ರ ಅವಶ್ಯವಿರುವ ರಸಗೊಬ್ಬರ ನೀಡಿರುವುದಿಲ್ಲ ಎಂದು ಬೇಜವಾಬ್ದಾರಿ ಹೇಳಿಕೆಯನ್ನು ನೀಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಈ ಸರ್ಕಾರ, ಮನೆಗೆ ಬೆಂಕಿ ಬಿದ್ದ ಮೇಲೆ ನೀರು ಹುಡುಕಿದ ಹಾಗೆ ರೈತರು ರಸಗೊಬ್ಬರಕ್ಕೆ ಹೊಡೆದಾಟ ಮಾಡಿಕೊಂಡಾಗ ರಸಗೊಬ್ಬರವನ್ನು ಹುಡುಕುವ ಕೆಲಸ ಮಾಡುತ್ತಿದೆ. ಇದರಿಂದ ಸಿದ್ದರಾಮಯ್ಯನವರಿಗೆ ರೈತರ ಬಗ್ಗೆ ಎಷ್ಟು ಕಾಳಜಿ ಇದೆ ಎಂದು ಗೊತ್ತಾಗುತ್ತದೆ ಎಂದು ಆರೋಪಿಸಿದರು.
ಮುಂದಿನ ಚುನಾವಣೆಗಳಲ್ಲಿ ರೈತರ ಬಳಿ ಮತ್ತು ಜನರ ಬಳಿ ಮತ ಕೇಳಲು ಹೋದಾಗ ತಕ್ಕ ಉತ್ತರ ನೀಡಲು ರಾಜ್ಯದ ರೈತರು ಮತ್ತು ಜನರು ಕಾಯುತ್ತಿದ್ದಾರೆ. ಸ್ಥಳೀಯ ಚುನಾವಣೆ ಬಂದಾಗ ಯಾರನ್ನು ಎಲ್ಲಿಗೆ ಕಳುಹಿಸಬೇಕು ಎಂದು ರೈತರು ಮತ್ತು ಜನ ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು. ರೈತರು ಎದೆಗುಂದುವ ಅಗತ್ಯವಿಲ್ಲ ನಿಮ್ಮ ಜೊತೆ ಬಿಜೆಪಿ ಇದೆ. ನಿಮ್ಮ ಮನೆಬಾಗಿಲಿಗೆ ಬಂದು ಸಹಾಯಹಸ್ತವನ್ನು ಚಾಚುತ್ತೇವೆ ಎಂದು ತಿಳಿಸಿದರು.
ಕಳಪೆ ಬಿತ್ತನೆ ಬೀಜದ ವಿತರಣೆ ವಿರುದ್ಧ ಕಳೆದ 3 ತಿಂಗಳಿಂದ ರಾಜ್ಯದ ಉದ್ದಗಲಕ್ಕೂ ಹೋರಾಟ ಮಾಡಿದ್ದೇವೆ. ಕಳಪೆ ಬಿತ್ತನೆ ಬೀಜ ನೀಡಿದ ಎಷ್ಟು ಕಂಪನಿಗಳ ಮೇಲೆ ಕ್ರಮಕೈಗೊಂಡಿದ್ದೀರಿ? ಎಷ್ಟು ಕಂಪನಿಗಳಿಗೆ ಕೃಷಿ ಅಧಿಕಾರಿಗಳು ನೋಟೀಸ್ ನೀಡಿದ್ದಾರೆ ಎಂಬ ಕುರಿತು ಮತ್ತು ಎಷ್ಟು ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ ಎಂಬ ವಿಷಯದಲ್ಲಿ ಸಿದ್ದರಾಮಯ್ಯನವರು ಕೂಡಲೇ ಮಾಹಿತಿ ನೀಡÀಬೇಕು ಎಂದು ಒತ್ತಾಯಿಸಿದರು.
ಮಾಜಿ ಮುಖ್ಯಮಂತ್ರಿಗಳು ಮುಂದಿನ 2028 ರ ಚುನಾವಣೆಗೆ ಯಶವಂತಪುರ ವಿಧಾನ ಸಭೆ ಬಿಜೆಪಿ ಅಭ್ಯರ್ಥಿಯಾಗಿ ಎಂ. ರುದ್ರೇಶ್ ಅವರ ಸ್ಪರ್ಧಿಸಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎಂ. ರುದ್ರೇಶ್ ಅವರು ನನ್ನ ಮೇಲಿನ ಪ್ರೀತಿಯಿಂದ ಅವರು ಆ ರೀತಿ ಹೇಳಿಕೆ ನೀಡಿದ್ದಾರೆ. ಎನ್‍ಡಿಎ ಜೊತೆಯಲ್ಲಿ ಇದ್ದೇವೆ ಹೈಕಮಾಂಡ್ ಮತ್ತು ರಾಜ್ಯದ ನಾಯಕರು ತೀರ್ಮಾನಿಸುತ್ತಾರೆ. ನಾನು ಎಲ್ಲದಕ್ಕೂ ಬದ್ಧನಾಗಿದ್ದೇನೆ ಎಂದು ಉತ್ತರಿಸಿದರು.
ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ರುದ್ರೇಶ್, ಬೆಂಗಳೂರು ಉತ್ತರ ಜಿಲ್ಲೆ ರೈತ ಮೋರ್ಚಾ ಅಧ್ಯಕ್ಷ ಜಿ.ಜೆ ಮೂರ್ತಿ ಮತ್ತು ಬೆಂಗಳೂರು ಕೇಂದ್ರ ಜಿಲ್ಲೆ ರೈತ ಮೋರ್ಚಾ ಅಧ್ಯಕ್ಷ ರುದ್ರಪ್ಪ ಉಪಸ್ಥಿತರಿದ್ದರು.

VK NEWS DIGITAL