Home Blog Page 11

ದಾನದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ: ಕೃಷ್ಣ ಎಸ್. ದೀಕ್ಷಿತ್

ಆರ್ಟ್‌ ಆಫ್‌ ಗಿವಿಂಗ್‌ (Art of Giving) 13 ನೇ ವಾರ್ಷಿಕೋತ್ಸವ:  ಶೇರ್‌ ಟು ಶೈನ್‌ (Share to Shine) ಘೋಷವಾಕ್ಯದಡಿ ಕಾರ್ಯಕ್ರಮ

Bengaluru : ದಾನದಿಂದ ಮಾತ್ರವೇ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಎಲ್ಲವೂ ನನಗೇ ಬೇಕು ಎಂಬ ಭಾವನೆಯಿಂದ ಉತ್ತಮ ಸಮಾಜ ಕಟ್ಟಲು ಸಾಧ್ಯವಿಲ್ಲ. ವಿದ್ಯೆ, ಅನ್ನ, ವಸ್ತ್ರ ದಾನದಿಂದ ಸಮಾಜವನ್ನು ಸದೃಢವಾಗಿ ಮಾಡಬಹುದು ಎಂದು ಒಡಿಶಾ (Odisha Highcourt) ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ (Krishna S Dixith) ಅವರು ಹೇಳಿದರು.

ನಗರದ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಆರ್ಟ್‌ ಆಫ್‌ ಗಿವಿಂಗ್‌ನ 13 ನೇ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಯಾವ ಜೀವಿಗಳು ಕೊಡುಗೈ ಆಗಿ, ಇನ್ನೊಬ್ಬರ ಜೊತೆ ಹಂಚಿಕೊಂಡು ಹೋಗುತ್ತಾರೋ ಅವು ಹೆಚ್ಚು ಕಾಲ ಬದುಕುತ್ತವೇ. ನಾನು ಕೊಟ್ಟೇ ಎಂಬ ಭಾವವೂ ನಮ್ಮಲ್ಲಿ ಉಳಿಯಬಾರದು. ಅದು ಗಿವಿಂಗ್‌. ಆರ್ಟ್‌ ಆಫ್‌ ಗಿವಿಂಗ್‌ ಆರ್ಟ್‌ ಆಫ್‌ ಲವಿಂಗ್‌ಗಿಂತ ಭಿನ್ನವಾಗಿದೆ ಎಂದರು.

ವಿಶ್ವದ ನಾಗರಿಕತೆಗಳು ನಶಿಸಿ ಹೋಗಿದ್ದೇ ಆಂತರಿಕ ಶಕ್ತಿಯನ್ನೇ ಕಳೆದುಕೊಂಡಿದ್ದರಿಂದ. ಯುದ್ಧದಿಂದ, ಪ್ರಾಕೃತಿಕ ವಿಕೋಪಗಳಿಂದ, ಸಾಂಕ್ರಾಮಿಕ ಕಾಯಿಲೆಗಳಿಂದ ಅಲ್ಲ. ಜೀವನವನ್ನು ಭೋಗ ಮಾಡಿಕೊಳ್ಳಬೇಕು ಎಂದು ಬಯಸಿದ್ದರಿಂದ ನಾಗರಿಕತೆಗಳು ಅಳಿದು ಹೋದವು. ಮನುಷ್ಯ ಮನುಷ್ಯನಾಗಿ ಬದುಕಬೇಕು. ಇಂದು ನಾವು ಶಿಕ್ಷಣ ಪಡೆದಿದ್ದೇವೆ. ಎಲ್ಲವನ್ನೂ ತಿಳಿದುಕೊಂಡಿದ್ದೇವೆ. ಆದರೆ ಪ್ರೀತಿಯ ಬಗ್ಗೆ ತಿಳಿದಿಲ್ಲ. ಇನ್ನೊಬ್ಬರನ್ನು ನನ್ನ ಭಾಗ ಎಂದು ತಿಳಿದುಕೊಂಡಾಗ ಪ್ರೀತಿ ಹುಟ್ಟುತ್ತದೆ ಎಂದು ಹೇಳಿದರು.

ಭಾರತೀಯ ಸಂಸ್ಕೃತಿ ಪಾಶ್ಚಿಮಾತ್ಯ ಸಂಸ್ಕೃತಿಗಿಂತ ಭಿನ್ನವಾಗಿದೆ. ನಮ್ಮದು ಭಾಗ ಭಾಗ ಮಾಡಿ ನೋಡುವ ಸಂಸ್ಕೃತಿ ಅಲ್ಲ. ದಾನದ ಸಂಸ್ಕೃತಿ ನಮ್ಮದು. ಯಾವ ಸಮಾಜ ಕೊಡು ಕೊಳ್ಳುವಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವುದೋ ಅದು ಅವಸಾನ ಆಗುವುದಿಲ್ಲ ಎಂದರು.

ತ್ರಿವಿಧ ದಾಸೋಹಿಗಳಾಗಿದ್ದ ಸಿದ್ಧಗಂಗಾ ಮಠದ ಡಾ.ಶಿವಕುಮಾರ್‌ ಸ್ವಾಮೀಜಿ ಅವರು ಕಾಳುಕಡ್ಡಿಗಳನ್ನು ಸಂಗ್ರಹಿಸಿ ಬೇಡಿ ತಂದು ಮಕ್ಕಳಿಗೆ ನೀಡಿದರು. ಅವರಿಗೆ ಜ್ಞಾನ, ಆಶ್ರಯ ನೀಡಿದರು. ಅದೇ ರೀತಿ ಅಚ್ಯುತ ಸಮಂತ ಅವರು ಸಾವಿರಾರು ಮಕ್ಕಳಿಗೆ ಶಿಕ್ಷಣ ನೀಡಿದರು. ತಮ್ಮಲ್ಲಿದ್ದುದನ್ನು ಬೇರೆಯವರಿಗೆ ನೀಡಿ ಖುಷಿಪಟ್ಟರು. ನಮ್ಮಲ್ಲಿನ ವಿದ್ಯೆಯನ್ನು ಇನ್ನೊಬ್ಬರ ಜೊತೆ ಹಂಚಿಕೊಂಡರೆ ಅದು ಕಡಿಮೆ ಆಗುವುದಿಲ್ಲ, ಬದಲಿಗೆ ಹೆಚ್ಚುತ್ತದೆ ಎಂದು ವಿವರಿಸಿದರು.

ಅನುಭವ ಮಂಟಪಗಳು ಅನುಭಾವ ಮಂಟಪಗಳಾಗಿ ಹೊರಹೊಮ್ಮಿದ್ದವು. ಅಲ್ಲಿ ಯಾವ್ಯವುದೋ ಜಾತಿಯವರು ಯಾವುದೋ ಪದಾರ್ಥ ತಂದು ಅಡುಗೆ ಮಾಡಿ ಹಂಚಿ ತಿಂದು ಪ್ರೀತಿಯಿಂದ ಇರುತ್ತಿದ್ದರು.  ಸಂಘ ಜೀವನದಿಂದ ಇಂದು ಒಂಟಿ ಜೀವನದತ್ತ ನಾವು ಸಾಗುತ್ತಿದ್ದೇವೆ. ಎಲ್ಲವೂ ನನಗೆ ಬೇಕು ಎಂಬು ದುರಾಸೆ ನಮ್ಮದು. ನಾವು ಹಂಚಿಕೊಂಡು ಜೀವನ ಸಾಗಿಸಬೇಕು. ತ್ಯಾಗದಿಂದ ಪ್ರೀತಿ ಹುಟ್ಟುತ್ತದೆ. ಇಡೀ ನಮ್ಮ ನಾಗರಿಕತೆಯ ಗುಣಲಕ್ಷಣವೇ ಎಲ್ಲರ ಜೊತೆಗೆ ಬದುಕೋಣ ಎಂಬುದು. ಜೊತೆಗೆ ಹೆಜ್ಜೆ ಹಾಕೋಣ, ಜೊತೆಗೆ ನಡೆಯೋಣ ಎಂಬುದು. ನಮ್ಮಲ್ಲಿರುವುದನ್ನು ಬೇರೆಯವರಿಗೆ ಕೊಟ್ಟಾಗ, ಹಂಚಿಕೊಂಡಾಗ ನಮ್ಮ ಖುಷಿಯೂ ಜಾಸ್ತಿಯಾಗುತ್ತದೆ. ಇದನ್ನು ವಿಜ್ಞಾನವೇ ಸಾಬೀತು ಮಾಡಿದೆ ಎಂದು ಹೇಳಿದರು.

ಸಭೆ ಮತ್ತು ಸಮಾರಂಭಗಳಲ್ಲಿ ನಾವು ಸಾಕಷ್ಟು ಆಹಾರ ವ್ಯರ್ಥ ಮಾಡುತ್ತೇವೆ. ಇದರಿಂದ ಬೇರೆಯವರಿಗೆ ಸಿಗಬೇಕಾದ ಸಿಗುವುದಿಲ್ಲ. ಆದ್ದರಿಂದ ಎಷ್ಟು ಬೇಕೋ ಅಷ್ಟು ಬಡಿಸಿಕೊಂಡು ಉಳಿದದ್ದನ್ನು ಬೇರೆಯವರಿಗೆ ನೀಡಿದರೆ ಅವರ ಖುಷಿ ಹೆಚ್ಚುತ್ತದೆ ಎಂದು ಕಿವಿಮಾತು ಹೇಳಿದರು

ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ಡಾ. ವೆಂಕಟೇಶ್ ಅವರು ಮಾತನಾಡಿ, ಸಮಾಜದಲ್ಲಿ ಪರೋಪಕಾರ, ಪ್ರೀತಿ, ಕರುಣೆ, ದಯೆ ಎನ್ನುವುದು ಈಗೀಗ ಕಡಿಮೆಯಾಗಿದೆ. ಯಾರು ಜಾಸ್ತಿ ಆಸ್ತಿ ಮಾಡಿರುತ್ತಾರೆ, ಅಧಿಕಾರ ಹೊಂದಿರುತ್ತಾರೆ ಅಂತಹವರಿಗೆ ಮನ್ನಣೆ ಸಿಗುವ ಸ್ಥಿತಿ ಇದೆ. ಸಮಾಜಕ್ಕೆ ಒಳ್ಳೆಯದು ಮಾಡಬೇಕೆಂಬ ಆಲೋಚನೆಯಿಂದ ಅಚ್ಯುತ ಸಮಂತ ಅವರು ಈ ಆರ್ಟ್‌ ಆಫ್‌ ಗಿವಿಂಗ್‌ ಅನ್ನು ಆರಂಭ ಮಾಡಿದರು. ಪ್ರತಿಯೊಬ್ಬ ವ್ಯಕ್ತಿಯೂ ಸಮಾಜಕ್ಕೆ ತನ್ನದಾದ ಸಣ್ಣ ಕೊಡುಗೆ ನೀಡಿದರೆ ಸಮಾಜದಲ್ಲಿ ಅರ್ಥಪೂರ್ಣವಾದ ಬದಲಾವಣೆ ಸಾಧ್ಯವಿದೆ ಎಂದರು.

ಗುಹೆಯಲ್ಲಿ ವಾಸ ಮಾಡುತ್ತಿದ್ದ ಮಾನವ ಇಂದು ಚಂದ್ರನ ಮೇಲೆ ಪ್ರಯಾಣ ಮಾಡಿದ್ದಾನೆ. ಆದರೆ ಮೂಲಭೂತವಾಗಿ ಬೇಕಾದ ವಿಷಯಗಳನ್ನು ಮರೆಯುತ್ತಿದ್ದಾನೆ. ಮನುಷ್ಯ ಮನುಷ್ಯರ ನಡುವೆ ಕಂದಕ ನಿರ್ಮಾಣವಾಗಿದೆ. ಎಲ್ಲರೂ ಚೌಕಟ್ಟಿನಲ್ಲಿ ವಾಸಿಸುತ್ತಿದ್ದಾರೆ. ನಾವು ಏನನ್ನೂ ನೀಡಿದರೂ ಮತ್ತೆ ನಮಗೆ ಸಿಗುತ್ತದೆ. ಆದಷ್ಟು ಒಳ್ಳೆಯದನ್ನೇ ಮಾಡಲು ಪ್ರಯತ್ನ ಮಾಡಬೇಕು ಎಂದರು.

ಚಿತ್ರ ನಿರ್ಮಾಪಕರು ಹಾಗೂ ನಿರ್ದೇಶಕರಾದ ಪಿ ಶೇಷಾದ್ರಿ  ಅವರು ಮಾತನಾಡಿ, ಮನುಷ್ಯರು ಸಾಮಾನ್ಯವಾಗಿ ಸಾರ್ಥಿಗಳು. ಸ್ವಾರ್ಥ ಇಲ್ಲದೇ ಇದ್ದರೆ ಬದುಕಲು ಸಾಧ್ಯವಿಲ್ಲ. ಆದರೆ ಅಚ್ಯುತ ಸಮಂತ ಅವರು ನಿಸ್ವಾರ್ಥಿಗಳು. ಮಾನವೀಯತೆ ವ್ಯಕ್ತಿಯನ್ನು ರೂಪಿಸುತ್ತದೆ. ತಮ್ಮಲ್ಲಿರುವುದನ್ನು ಇತರರಿಗೆ ಕೊಟ್ಟು ಅವರ ಏಳ್ಗೆಯಲ್ಲೇ ಖುಷಿ ಕಂಡವರು ಸಮಂತ ಅವರು. ನಮ್ಮ ಸಮಾಜಕ್ಕೆ ಸಮಂತ ಅವರಂತಹ ವ್ಯಕ್ತಿಗಳ ಅಗತ್ಯವಿದೆ ಎಂದು ಹೇಳಿದರು.

ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷರಾದ ಡಾ. ವೋಡೇ ಪಿ. ಕೃಷ್ಣ ಅವರು ಮಾತನಾಡಿ, ಯಾರಿಂದಲೂ ಏನನ್ನೂ ಬಯಸದೇ ಮಹಾತ್ಮ ಗಾಂಧಿ ಅವರು ಬದುಕಿದ್ದರು. ಒಂದಲ್ಲ ಒಂದು ರೀತಿ ದೇಶಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರು. ಆರ್ಟ್‌ ಆಫ್‌ ಗಿವಿಂಗ್‌ ದೀಪ ಬೆಳಗುವ ಕಾರ್ಯ. ಎಲ್ಲರ ಮನಸ್ಸಲ್ಲಿ ಕೊಡುವ ಭಾವವನ್ನು ಜಾಗೃತಗೊಳಿಸೋಣ ಎಂದರು.

ಜ್ಞಾನಕ್ಕಾಗಿ ಭಾರತ ಹೆಸರು ಮಾಡಿದೆ. ನಾವು ಜ್ಞಾನವನ್ನು ಸಂಪಾದಿಸಬೇಕು. ಜೊತೆಗೆ ಪ್ರೀತಿ ಹಂಚಬೇಕು. ಜ್ಞಾನ ಪಡೆದಾಗ ಮನುಷ್ಯ ವಿಕಸಿತನಾಗುತ್ತಾನೆ. ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಾನೆ. ಕೊಡುವ ಮನಸ್ಸು ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದರು.

ಕರ್ನಾಟಕ ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷರಾದ ರಾಕೇಶ್ ಸಿಂಗ್‌ ಹಾಗೂ  ಗಾಯಕಿ ಸವಿತಕ್ಕ ಅವರು ಮಾತನಾಡಿದರು. ಆರ್ಟ್ ಆಫ್ ಗಿವಿಂಗ್ ನ ಕರ್ನಾಟಕದ ಮುಖ್ಯಸ್ಥರಾದ ಗುರುಪ್ರಸಾದ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಸಮಾರಂಭದ ಅತಿಥಿಯಾಗಿದ್ದ ನಿವೃತ್ತ ಲೋಕಾಯುಕ್ತ ಎನ್ ಸಂತೋಷ್ ಹೆಗ್ಡೆ ಅವರು ಗೈರು ಹಾಜರಾಗಿದ್ದರಿಂದ ಅವರ ಸಂದೇಶ ಪ್ರಸಾರ ಮಾಡಲಾಯಿತು.

ಉದ್ಘಾಟನಾ ಸಮಾರಂಭಕ್ಕೂ ಮೊದಲು ಎಒಜಿ ಸಂಸ್ಥಾಪಕರಾದ ಅಚ್ಯುತ ಸಮಂತ ಅವರ ವಿಶೇಷ ವೀಡಿಯೊ ಸಂದೇಶ ಪ್ರಸಾರ ಮಾಡಲಾಯಿತು. ಅಂತರರಾಷ್ಟ್ರೀಯ ಖ್ಯಾತಿಯ ಜಾನಪದ ಗಾಯಕಿ ಸವಿತಕ್ಕ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ

ಈ ಸಮಾರಂಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಜಂಟಿ ಕಾರ್ಯದರ್ಶಿಗಳಾದ  ಜಯಲಕ್ಷ್ಮಿ,  ಶಿಕ್ಷಣ, ವೃತ್ತಿ ಕೌಶಲ್ಯ ತರಬೇತಿ, ಉದ್ಯಮಶೀಲತೆಯ ಪರಿಣತರಾದ ಡಾ. ಎ. ಎಂ. ಸುರೇಶ್, ಕಾರ್ಪೊರೇಟ್ ವ್ಯವಹಾರ ಮತ್ತು ಬ್ರ್ಯಾಂಡಿಂಗ್ ತಂತ್ರಜ್ಞರು, ಸ್ಟಾರ್ಟ್ ಅಪ್ ಸಲಹೆಗಾರರಾದ ಪ್ರಣಬ್ ಕೆ ಪಣಿ, ಭರತನಾಟ್ಯ ಮತ್ತು ಶಿಕ್ಷಣದ ಮೂಲಕ ಯುವ ಪ್ರತಿಭೆಗಳ ಪ್ರೋತ್ಸಾಹಕಿ ಹೆಚ್. ವಿ. ಹೇಮಲತಾ, ಕಂಠದಾನ ಕಲಾವಿದ ಮಾರುತೇಶ್, ಗ್ರಾಮೀಣ ಪ್ರದೇಶದಲ್ಲಿ ದೇವಸ್ಥಾನ ಸಂಸ್ಕೃತಿಯ ಪೋಷಕ ರಾಘವೇಂದ್ರ ಟಿ ವಿ, ಸಿಂಗಿಂಗ್‌ ಬೌಲ್‌ ಥೆರಪಿ ಪರಿಣತರು ಮತ್ತು ಸೌಂಡ್‌ ಹೀಲಿಂಗ್‌ ಸಂಶೋಧಕ ಕೆ. ರಾಕೇಶ್, ಸೃಜನಶೀಲ ಮತ್ತು ವೃತ್ತಿಪರ ಕ್ಷೇತ್ರಗಳಲ್ಲಿ ಪರಿಣತೆ ಸೀಮಾ ಮುರಳೀಧರ್ ಹಾಗೂ ನಿವೃತ್ತ ಸರ್ವೆ ಸೂಪರ್‌ ವೈಜರ್‌ ಶಶಿಧರ್ ವೈ ಬಿ , PHD-13579 ಆಧ್ಯಾತ್ಮಿಕ ಸತ್ಸಂಗ ಕ್ರಿಯಾಯೋಗ ಕಾರ್ಯಕ್ರಮದ ರೂವಾರಿ ಎಚ್‌ ಸಿ ದೊಡ್ಡೇಗೌಡ,  ಕರಕುಶಲ ಕಲೆಯಲ್ಲಿ ಪರಿಣತರಾದ ಮಮತಾ ಎನ್‌ ಸ್ವಾಮಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಲೆ, ತಂತ್ರಜ್ಞಾನದ ಸಂಗಮ “ಕಲೋತ್ಸವ” ಯಶಸ್ವಿ: ವಿವಿಧ ಕಾಲೇಜು ವಿದ್ಯಾರ್ಥಿಗಳ ಪ್ರತಿಭೆ ಅನಾವರಣ


ಬೆಂಗಳೂರು : ವಿಜಯನಗರದ ವಾಸವಿ ಜ್ಞಾನಪೀಠ ಪ್ರಥಮ ದರ್ಜೆ (Vasavi Jnanpith First Grade College) ಕಾಲೇಜಿನಲ್ಲಿಂದು ವಿವಿಧ ಕಾಲೇಜುಗಳ ವಿದ್ಯಾರ್ಥಿಗಳ ಸಹಯೋಗದೊಂದಿಗೆ ಕಲೆ, ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮಹಾಭಾರತದ ಪ್ರಸಂಗವನ್ನು ಮನಮೋಹಕ (Charming) ವಾಗಿ ಮರುಸೃಷ್ಟಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ವಿದ್ಯಾರ್ಥಿಗಳ ಅದ್ಭುತ ಅಭಿನಯ, (Amazing performance by students)
ಸಂಭಾಷಣೆ ಹಾಗೂ ವೈಭವಯುತ ವೇದಿಕೆ ನಿರ್ವಹಣೆ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದಿತು. ಸಂಸ್ಕೃತಿ, ಸಂಗೀತ, ತಂತ್ರಜ್ಞಾನದ ಸಂಗಮ “ಕಲೋತ್ಸವ”ವನ್ನು (Kalothsava) ಅತ್ಯಂತ ಅದ್ದೂರಿಯಾಗಿ ಆಚರಿಸಲಾಯಿತು.
ವಿವಿಧ 10 ಕಾಲೇಜುಗಳ ವಿದ್ಯಾರ್ಥಿಗಳು ಈ ಉತ್ಸವದಲ್ಲಿ ಭಾಗವಹಿಸಿದ್ದರು. ಪ್ರತಿಭೆಗಳನ್ನು ಗುರುತಿಸುವ ಮಹತ್ವದ ವೇದಿಕೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ವೈವಿಧ್ಯಮ ಸಂಗೀತ, ನೃತ್ಯ, ನಾಟಕ ಪ್ರದರ್ಶಿಸಿ ಸಂಭ್ರಮಿಸಿದರು. ಜೊತೆಗೆ ವಿದ್ಯಾರ್ಥಿಗಳಿಗೆ ಆಧುನಿಕ ಕೌಶಲ್ಯವಾದ ವೆಟ್ ಡಿಸೈನಿಂಗ್, ಬ್ಯಾನರ್, ಪೋಸ್ಟರ್ ವಿನ್ಯಾಸ, ವ್ಯಾಪಾರ ವಲಯ ಕುರಿತ ರಸ ಪ್ರಶ್ನೆ, ಮಾರುಕಟ್ಟೆ ಸವಾಲುಗಳು, ವ್ಯಾಪಾರ ಕ್ಷೇತ್ರದ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಿ ತಮ್ಮೊಳಗೆ ಅಡಗಿರುವ ಪ್ರತಿಭೆಯನ್ನು ವಿದ್ಯಾರ್ಥಿಗಳು ಅನಾವರಣಗೊಳಿಸಿದರು.
ವಾಸವಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಆರ್. ವಿಜಯ ಸಾರಥಿ ಮಾತನಾಡಿ, ಕಲೋತ್ಸವ ಅತ್ಯಂತ ವಿನೂತನವಾಗಿ ಮೂಡಿ ಬಂತು. ಮಹಾಭಾರತದ ನಾಟಕ ಪ್ರದರ್ಶಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಈ ವರ್ಷ ವಾಸವಿ ಕಾಲೇಜಿನ 616 ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಮೂಲಕ ಉದ್ಯೋಗ ದೊರಕಿಸಿಕೊಡಲಾಗಿದೆ. ಜೊತೆಗೆ ಕ್ರೀಡೆಗೆ ಆದ್ಯತೆ ನೀಡುವ ದೃಷ್ಟಿಯಿಂದ ಜೂನ್ ಇಲ್ಲವೆ ಜುಲೈನಲ್ಲಿ ಅಂತರ್ ಕಾಲೇಜು ವಾಸವಿ ಕಪ್ ಕ್ರಿಕೆಟ್ ಟೂರ್ನಿ ಆಯೋಜಿಸಲಾಗುವುದು. ಗೆದ್ದ ತಂಡಕ್ಕೆ 1 ಲಕ್ಷ ರೂ, ರನ್ನರ್ ಅಪ್ ತಂಡಕ್ಕೆ 50 ಸಾವಿರ ರೂ ನಗದ ಬಹುಮಾನ ನೀಡಲಾಗುವುದು. ಕೆಜಿಯಿಂದ ಪಿಜಿವರೆಗೆ ಉತ್ತಮ ಶಿಕ್ಷಣದ ಜೊತೆಗೆ ಸ್ವಾಲಂಬಿ ಬದುಕು ರೂಪಿಸಲು ಒತ್ತು ನೀಡಲಾಗಿದೆ ಎಂದರು.
ಪದವಿ ಕಾಲೇಜು ಪ್ರಾಂಶುಪಾಲರಾದ ಪದ್ಮ, ಡಾ. ರಂಗ ಸ್ವಾಮಿ, ಪಿಯು ಕಾಲೇಜು ಪ್ರಾಂಶುಪಾಲರು, ಶಿಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು.

ಬಂಜಾರ ಸಂಸ್ಕೃತಿ, ಭಾಷೆ, ಕಲೆ, ಸಾಹಿತ್ಯ ಕುರಿತ ಪುಸ್ತಕ ಪ್ರಕಟಣೆಗಾಗಿ ಫೆಲೋಶಿಪ್ ನೀಡುವ ಯೋಜನೆಗಾಗಿ ಅರ್ಜಿ ಸಲ್ಲಿಸುವ ಬಗ್ಗೆ.

ಬಂಜಾರ (Banjara) ಸಂಸ್ಕೃತಿ, ಭಾಷೆ, ಕಲೆ, ಸಾಹಿತ್ಯ ಕುರಿತ ಪಿ.ಹೆಚ್.ಡಿ ಪದವಿ ಪಡೆದ ಬಂಜಾರ ಜನಾಂಗದ ಅಭ್ಯರ್ಥಿಗಳಿಗೆ ಪುಸ್ತಕ ಪ್ರಕಟಣೆಗಾಗಿ  ರೂ. 40,000/- ಗಳ ಫೆಲೋಶಿಪ್/ ಸಹಾಯಧನ (Fellowhip) ನೀಡುವ ಯೋಜನೆಗಾಗಿ ಅರ್ಜಿಯನ್ನು ದಿನಾಂಕ:10.06.2026 ಸಂಜೆ 5.00 ಗಂಟೆಯೊಳಗಾಗಿ ರಿಜಿಸ್ಟ್ರಾರ್‌, ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ, (Banjara cultural & Bhasha Academy) ಚಾಲುಕ್ಯ ವಿಭಾಗ, 1ನೇ ಮಹಡಿ, ಕನ್ನಡ ಭವನ, ಜೆ.ಸಿ ರಸ್ತೆ, ಬೆಂಗಳೂರು-560002 ಇಲ್ಲಿಗೆ ಪೂರ್ಣ ವಿವರಗಳೊಂದಿಗೆ  ಈ ಪತ್ರದೊಂದಿಗೆ ಲಗತ್ತಿಸಿರುವ ಅರ್ಜಿ ನಮೂನೆ ಮತ್ತು ನಿಯಮಗಳಂತೆ ಆರ್ಜಿಯನ್ನು ಸಲ್ಲಿಸುವಂತೆ ಕೋರಲಾಗಿದೆ. ಈ ವಿಷಯವನ್ನು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ದೈನಂದಿನ ಪತ್ರಿಕೆಗಳಲ್ಲಿ ಪ್ರಕಟಿಸಲು ಕೋರಿದೆ. ಅರ್ಜಿ ನಮೂನೆ ಹಾಗೂ ವಿವರಗಳಿಗಾಗಿ ಕಚೇರಿ ವೇಳೆಯಲ್ಲಿ ದೂರವಾಣಿ ಸಂಖ್ಯೆ : 080-29917745 ಅಥವಾ ಇ-ಮೇಲ್‌ : lambanibhashaacademy@gmail.com ಮೂಲಕ ಮಾಹಿತಿಯನ್ನು ಪಡೆದುಕೊಳ್ಳಲು ಕೋರಿದೆ

ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಆಮೆಗತಿಯ ಮಾಹಿತಿ ಹಕ್ಕು ಪ್ರಕ್ರಿಯೆ:

ದೇವನಹಳ್ಳಿ: ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆ ತರಲು ಜಾರಿಗೆ ಬಂದ ಮಾಹಿತಿ ಕ್ಕು ಕಾಯ್ದೆಗೆ (RTI) ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಬೆಲೆಯೇ ಇಲ್ಲದಂತಾಗಿದೆ. ಇಲ್ಲಿ ಅರ್ಜಿ ಸಲ್ಲಿಸಿದ ಸಾರ್ವಜನಿಕರು ಮಾಹಿತಿ ಪಡೆಯಲು ತಿಂಗಳುಗಟ್ಟಲೆ ಕಾಯುವಂತಾಗಿದ್ದು, ಅಧಿಕಾರಿಗಳ ಹಾರಿಕೆ ಉತ್ತರಕ್ಕೆ ಜನರು ಬೆಸತ್ತು ಹೋಗಿದ್ದಾರೆ.ವಜಾ ಮಾಡಲು ಆಗ್ರಹ:ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅಖಿಲ ಭಾರತ ಅರ್ಚಕರ ಮತ್ತು ಪರೋಹಿತರ ಫೆಡ್ರೇಶನ್‌ನ ರಾಷ್ಟ್ರೀಯ ನಿರ್ದೇಶಕರಾದ ಬಿ. ಆರ್. ಗೋವರ್ಧನ್ ಪಾಣಿ ಅವರು, ಕರ್ತವ್ಯ ಲೋಪ ಎಸಗುತ್ತಿರುವ ಅಧಿಕಾರಿಗಳನ್ನು ಕೂಡಲೇ ಕೆಲಸದಿಂದ ವಜಾಗೊಳಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.ವರದಿಯ ಮುಖ್ಯಾಂಶಗಳು:ತಿಂಗಳು ಕಳೆದರೂ ಸಿಗದ ಮಾಹಿತಿ: ಅರ್ಜಿ ಸಲ್ಲಿಸಿ 3-4 ತಿಂಗಳಾದರೂ ಯಾವುದೇ ಮಾಹಿತಿ ನೀಡದೆ ವಿಳಂಬ ಮಾಡಲಾಗುತ್ತಿದೆ.ಹಾರಿಕೆ ಉತ್ತರ: ಫೋನ್ ಮೂಲಕ ವಿಚಾರಿಸಿದರೆ “ಕಳಿಸುತ್ತೇವೆ” ಎಂಬ ಹಾರಿಕೆ ಉತ್ತರ ನೀಡಿ ಜಾರಿಕೊಳ್ಳುತ್ತಿದ್ದಾರೆ.ಹಳ್ಳಿಗಾಡಿನ ಜನರಿಗೆ ಸಂಕಷ್ಟ: ಪ್ರತಿಯೊಂದು ಸಣ್ಣ ವಿಚಾರಕ್ಕೂ ಮೇಲ್ಮನವಿ ಸಲ್ಲಿಸಲು ಸಾಧ್ಯವಾಗದೆ ಗ್ರಾಮೀಣ ಭಾಗದ ಜನರು ಕಚೇರಿಗೆ ಅಲೆಯುವಂತಾಗಿದೆ.ನಿರ್ಲಕ್ಷ್ಯ: ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಸಾರ್ವಜನಿಕರ ದೂರು.ಮಾಹಿತಿ ಹಕ್ಕು ಆಯೋಗ ಮತ್ತು ಸಂಬಂಧಪಟ್ಟ ಸಚಿವರು ಈ ಕೂಡಲೇ ಮಧ್ಯಪ್ರವೇಶಿಸಿ, ಕಾನೂನು ಉಲ್ಲಂಘಿಸುತ್ತಿರುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಈ ಮೂಲಕ ಒತ್ತಾಯಿಸಲಾಗಿದೆ.ದೇವನಹಳ್ಳಿ: ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆ ತರಲು ಜಾರಿಗೆ ಬಂದ ಮಾಹಿತಿ ಹಕ್ಕು ಕಾಯ್ದೆಗೆ (RTI) ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಬೆಲೆಯೇ ಇಲ್ಲದಂತಾಗಿದೆ. ಇಲ್ಲಿ ಅರ್ಜಿ ಸಲ್ಲಿಸಿದ ಸಾರ್ವಜನಿಕರು ಮಾಹಿತಿ ಪಡೆಯಲು ತಿಂಗಳುಗಟ್ಟಲೆ ಕಾಯುವಂತಾಗಿದ್ದು, ಅಧಿಕಾರಿಗಳ ಹಾರಿಕೆ ಉತ್ತರಕ್ಕೆ ಜನರು ಬೆಸತ್ತು ಹೋಗಿದ್ದಾರೆ.ವಜಾ ಮಾಡಲು ಆಗ್ರಹ:ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅಖಿಲ ಭಾರತ ಅರ್ಚಕರ ಮತ್ತು ಪರೋಹಿತರ ಫೆಡ್ರೇಶನ್‌ನ ರಾಷ್ಟ್ರೀಯ ನಿರ್ದೇಶಕರಾದ ಬಿ. ಆರ್. ಗೋವರ್ಧನ್ ಪಾಣಿ ಅವರು, ಕರ್ತವ್ಯ ಲೋಪ ಎಸಗುತ್ತಿರುವ ಅಧಿಕಾರಿಗಳನ್ನು ಕೂಡಲೇ ಕೆಲಸದಿಂದ ವಜಾಗೊಳಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.ವರದಿಯ ಮುಖ್ಯಾಂಶಗಳು:ತಿಂಗಳು ಕಳೆದರೂ ಸಿಗದ ಮಾಹಿತಿ: ಅರ್ಜಿ ಸಲ್ಲಿಸಿ 3-4 ತಿಂಗಳಾದರೂ ಯಾವುದೇ ಮಾಹಿತಿ ನೀಡದೆ ವಿಳಂಬ ಮಾಡಲಾಗುತ್ತಿದೆ.ಹಾರಿಕೆ ಉತ್ತರ: ಫೋನ್ ಮೂಲಕ ವಿಚಾರಿಸಿದರೆ “ಕಳಿಸುತ್ತೇವೆ” ಎಂಬ ಹಾರಿಕೆ ಉತ್ತರ ನೀಡಿ ಜಾರಿಕೊಳ್ಳುತ್ತಿದ್ದಾರೆ.ಹಳ್ಳಿಗಾಡಿನ ಜನರಿಗೆ ಸಂಕಷ್ಟ: ಪ್ರತಿಯೊಂದು ಸಣ್ಣ ವಿಚಾರಕ್ಕೂ ಮೇಲ್ಮನವಿ ಸಲ್ಲಿಸಲು ಸಾಧ್ಯವಾಗದೆ ಗ್ರಾಮೀಣ ಭಾಗದ ಜನರು ಕಚೇರಿಗೆ ಅಲೆಯುವಂತಾಗಿದೆ.ನಿರ್ಲಕ್ಷ್ಯ: ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಸಾರ್ವಜನಿಕರ ದೂರು.ಮಾಹಿತಿ ಹಕ್ಕು ಆಯೋಗ ಮತ್ತು ಸಂಬಂಧಪಟ್ಟ ಸಚಿವರು ಈ ಕೂಡಲೇ ಮಧ್ಯಪ್ರವೇಶಿಸಿ, ಕಾನೂನು ಉಲ್ಲಂಘಿಸುತ್ತಿರುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಈ ಮೂಲಕ ಒತ್ತಾಯಿಸಲಾಗಿದೆ.

ಜನಿವಾರ ತೆಗೆಸಿದ ಕೃತ್ಯ ‘ಪೆಹಲ್ಗಾಂ’ ಮಾದರಿಯ ದಬ್ಬಾಳಿಕೆ:

ಬ್ರಾಹ್ಮಣ ಮಹಾಸಭಾ ತೀವ್ರ ಖಂಡನೆ
​ಇತ್ತೀಚೆಗೆ ನಡೆದ ಸಿಇಟಿ (CET) ಪರೀಕ್ಷಾ ಸಮಯದಲ್ಲಿ ಬೆಂಗಳೂರಿನ ಕೃಪಾನಿಧಿ ವಿದ್ಯಾಸಂಸ್ಥೆ ಹಾಗೂ ಚಿಕ್ಕಬಳ್ಳಾಪುರದ ನಾಗಾರ್ಜುನ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಜನಿವಾರ ಹಾಗೂ ಧಾರ್ಮಿಕ ಆಚರಣೆಯ ಕುರುಹುಗಳನ್ನು ಬಲವಂತವಾಗಿ ತೆಗೆಸಿರುವುದು ಸಮಾಜಕ್ಕೆ ಮಾರಕವಾದ ಕೃತ್ಯ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ರಾಘವೇಂದ್ರ ಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
​ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಘಟನೆಯನ್ನು ಕಾಶ್ಮೀರದ ಪೆಹಲ್ಗಾಂನಲ್ಲಿ ಜಾತಿ ಕೇಳಿ ಗುಂಡಿಕ್ಕಿದ ಘಟನೆಗೆ ಹೋಲಿಸಿದರು. “ವಿದ್ಯಾಸಂಸ್ಥೆಗಳಲ್ಲಿ ಜನಿವಾರ, ಶಿವದಾರ, ಕಾಶಿದಾರ, ಮಾಂಗಲ್ಯ, ಕಿವಿ ಓಲೆ, ಕಾಲುಂಗರದಂತಹ ಹಿಂದೂ ಧರ್ಮದ ಅವಿಭಾಜ್ಯ ಅಂಗಗಳ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ. ಇದು ಲವ್ ಜಿಹಾದ್( Love Jihad  and Coroporate Jihad ) ಹಾಗೂ ಕಾರ್ಪೊರೇಟ್ ಜಿಹಾದ್ ಮಾದರಿಯಲ್ಲೇ ನಡೆಯುತ್ತಿರುವ ‘ವಿದ್ಯಾ ಜಿಹಾದ್’ ಎಂಬ ಶಂಕೆ ಮೂಡುತ್ತಿದೆ,” ಎಂದು ಆತಂಕ ವ್ಯಕ್ತಪಡಿಸಿದರು.
​ನ್ಯಾಯಾಲಯದ ಆದೇಶದ ಉಲ್ಲಂಘನೆ
​ಕಳೆದ ವರ್ಷವೂ ಇಂತಹದ್ದೇ ಘಟನೆಗಳು ನಡೆದಿದ್ದವು. ಈ ಬಗ್ಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ನ್ಯಾಯಾಲಯದ ಮೆಟ್ಟಿಲೇರಿತ್ತು. ಆಗ ಸಿಇಟಿ ಕೌನ್ಸಿಲ್ ಇನ್ಮುಂದೆ ಇಂತಹ ಕೃತ್ಯಗಳಿಗೆ ಆಸ್ಪದ ನೀಡುವುದಿಲ್ಲ ಎಂದು ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿತ್ತು. ಹೀಗಿದ್ದರೂ ಈ ವರ್ಷವೂ ಅದೇ ಕೃತ್ಯ ಪುನರಾವರ್ತನೆಯಾಗಿರುವುದು ಸಂವಿಧಾನ ವಿರೋಧಿ ಮತ್ತು ನ್ಯಾಯಾಂಗ ನಿಂದನೆಯಾಗಿದೆ ಎಂದು ಅವರು ದೂರಿದರು.
​ಮಹಾಸಭಾದ ಪ್ರಮುಖ ಬೇಡಿಕೆಗಳು:
​ಪಾರದರ್ಶಕ ತನಿಖೆ: ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಈ ಘಟನೆಯ ಹಿಂದೆ ಇರುವ ಶಕ್ತಿಗಳ ಬಗ್ಗೆ ತನಿಖೆ ನಡೆಸಬೇಕು.
​ವಿದ್ಯಾಸಂಸ್ಥೆಗಳ ಮಾನ್ಯತೆ ರದ್ದು: ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಕೃಪಾನಿಧಿ ಮತ್ತು ನಾಗಾರ್ಜುನ ವಿದ್ಯಾಸಂಸ್ಥೆಗಳ ಮಾನ್ಯತೆಯನ್ನು ತಕ್ಷಣವೇ ರದ್ದುಗೊಳಿಸಬೇಕು.
​ವ್ಯಕ್ತಿಗಳ ಬಂಧನ: ಜನಿವಾರ ತೆಗೆಸಿದ ಕೃತ್ಯದ ಹಿಂದಿರುವ ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು.
​”ಇಂತಹ ಕೃತ್ಯಗಳು ವಿದ್ಯಾರ್ಥಿಗಳ ಆತ್ಮಸ್ಥೈರ್ಯವನ್ನು ಕುಗ್ಗಿಸುತ್ತವೆ. ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಹಿಂದೇಟು ಹಾಕುವ ಪರಿಸ್ಥಿತಿಯನ್ನು ಸರ್ಕಾರವೇ ನಿರ್ಮಾಣ ಮಾಡುತ್ತಿದೆ. ಸರ್ಕಾರ ಕಠಿಣ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಇರುವ ಬ್ರಾಹ್ಮಣ ಸಂಘಟನೆಗಳು ಹಾಗೂ ಹಿಂದೂ ಬಾಂಧವರು ಸೇರಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು,” ಎಂದು ರಾಘವೇಂದ್ರ ಮಯ್ಯ ಎಚ್ಚರಿಸಿದರು.

ಆಲ್ ಇಂಡಿಯಾ ಬೃಹತ್ ಬೈಕ್ ಮೆಕ್ಯಾನಿಕ್ ಗಳ ಸಮಾವೇಶ: ಅನಾವರಣಗೊಂಡ ಅತ್ಯಾಧುನಿಕ ತಂತ್ರಜ್ಞಾನ ಬೈಕ್ ಉದ್ಯಮದ ಅಭಿವೃದ್ಧಿ, ತಾಂತ್ರಿಕ ಪ್ರಗತಿ ಹಾಗೂ ಕಾರ್ಮಿಕ ಕಲ್ಯಾಣ ಕುರಿತು ಚರ್ಚೆ*

 ಬೆಂಗಳೂರು, ಮೇ.1: ಕಾರ್ಮಿಕ ದಿನಾಚರಣೆಯ ಅಂಗವಾಗಿ ಕರ್ನಾಟಕ ದ್ವಿಚಕ್ರ ವಾಹನ ಕಾರ್ಯಗಾರ ಮಾಲೀಕರು ಮತ್ತು ತಂತ್ರಜ್ಞರ ಸಂಘದಿಂದ ನಗರದ ಅರಮನೆ ಮೈದಾನದಲ್ಲಿ ಬೃಹತ್ ಆಲ್ ಇಂಡಿಯಾ ಬೈಕ್ ಮೆಕ್ಯಾನಿಕಲ್ ಸಮಾವೇಶ ಯಶಸ್ವಿಯಾಗಿ ನೆರವೇರಿತು. ಈ ಐತಿಹಾಸಿಕ ಸಮಾವೇಶದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಸುಮಾರು 12,500ಕ್ಕೂ ಹೆಚ್ಚು ಬೈಕ್ ಮೆಕ್ಯಾನಿಕ್ಸ್ ಮತ್ತು ಕಾರ್ಯಗಾರ ಮಾಲೀಕರು ಭಾಗವಹಿಸಿ, ಉದ್ಯಮದ ಅಭಿವೃದ್ಧಿ, ತಾಂತ್ರಿಕ ಪ್ರಗತಿ ಹಾಗೂ ಕಾರ್ಮಿಕರ ಕಲ್ಯಾಣ ಕುರಿತು ಚರ್ಚಿಸಿದರು. ನಂಜಾವಧೂತ ಮಹಾಸ್ವಾಮೀಜಿ, ಜಾಮಿಯಾ ಮಸ್ಜಿದ್ ನ ಮಹಮದ್ ಮಕ್ ಸೂದ್ ಇಮ್ರಾನ್ ರಶೀದ್, ವಿಧಾನಪರಿಷತ್ ಮುಖ್ಯ ಸಚೇತಕರಾದ ಸಲೀಮ್ ಅಹಮದ್( Salim Ahmed ) ಹಾಗೂ ಸಂಘದ ಕಾರ್ಯದರ್ಶಿ ಭಾಸ್ಕರ್ ಜಿ ನಾಯ್ಡು  (Bhaskar G. Naidu) ಸಮಾವೇಶಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ನಂಜಾವಧೂತ ಮಹಾಸ್ವಾಮೀಜಿ, ಸಹಸ್ರಾರು ಬೈಕ್ ಮೆಕ್ಯಾನಿಕ್ ಗಳು ಒಂದೇ ವೇದಿಕೆಯಲ್ಲಿ ಸೇರುವುದು ಮಹತ್ವದ ಸಾಧನೆ. ನಿಮ್ಮ ಕೈಯಲ್ಲಿ ದೇಶದ ಚಾಲನಾ ಶಕ್ತಿ ಇದೆ. ಪ್ರತಿಯೊಂದು ಬೈಕ್ ಓಡಲು ನಿಮ್ಮ ಪರಿಶ್ರಮವೇ ಕಾರಣ. ನೀವು ಕೇವಲ ಮೆಕ್ಯಾನಿಕ್ ಗಳಳಲ್ಲ. ಸಮಾಜದ ನಿರ್ಮಾತೃಗಳು. ತಂತ್ರಜ್ಞಾನವನ್ನು ಅಳವಡಿಸಿಕೊಂಡು, ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ನಿಮ್ಮ ಭವಿಷ್ಯ ಇನ್ನಷ್ಟು ಪ್ರಕಾಶಮಾನವಾಗುತ್ತದೆ. ಸಂಘಟಿತ ಶಕ್ತಿಯ ಮೂಲಕ ನೀವು ನಿಮ್ಮ ಹಕ್ಕುಗಳನ್ನು ಸಾಧಿಸಿ, ಮುಂದಿನ ಪೀಳಿಗೆಗೆ ಉತ್ತಮ ದಾರಿ ತೋರಿಸಬೇಕು ಎಂದು ಕರೆ ನೀಡಿದರು. ಬೈಕ್ ಮೆಕ್ಯಾನಿಕ್ ಸಮುದಾಯಕ್ಕೆ ಹೊಸ ದಿಕ್ಕು ನೀಡುವಲ್ಲಿ ಈ ಸಮಾವೇಶ ಮಹತ್ವದ ಹೆಜ್ಜೆಯಾಗಿದೆ ಮತ್ತು ಸಂಘಟಿತ ಅಭಿವೃದ್ಧಿಯ ಅಗತ್ಯತೆಯನ್ನು ಸಮಾವೇಶ ಸಾದರಪಡಿಸಿತು. ಈ ಸಂದರ್ಭದಲ್ಲಿ ಹೊಸ ತಂತ್ರಜ್ಞಾನ,. ಆಧುನಿಕ ಸಾಧನಗಳು ಹಾಗೂ ಬೈಕ್ ಸರ್ವಿಸ್ ಕ್ಷೇತ್ರದ ನಾವೀನತೆ ಅನಾವರಣಗೊಂಡಿತು. ಸಂಘದ ರಾಜ್ಯಾಧ್ಯಕ್ಷರು ಕೆ. ಎಸ್. ಪ್ರಸನ್ನ ಕುಮಾರ್ ಗೌಡ, ಕಾರ್ಯದರ್ಶಿ ಭಾಸ್ಕರ್ ಜಿ ನಾಯ್ಡು, ರಾಜ್ಯ ಕಾರ್ಯದರ್ಶಿ ವೆಂಕಟ್ ಶ್ಯಾಮ್, ಹಾಗೂ ರಾಜ್ಯ ಸಲಹೆಗಾರ ನಾರಾಯಣ್ ಅವರು ಕಾರ್ಯಕ್ರಮದ ಯಶಸ್ಸಿಗೆ ಸಂತೋಷ ವ್ಯಕ್ತಪಡಿಸಿ, ಭವಿಷ್ಯದಲ್ಲಿ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಇಂತಹ ಸಮಾವೇಶಗಳನ್ನು ಆಯೋಜಿಸುವುದಾಗಿ ತಿಳಿಸಿದರು.

ಕಾರ್ಮಿಕ ದಿನಾಚರಣೆ: ವಾಯ್ಸ್ ಆಫ್ ಸದಾಶಿವನಗರದಿಂದ 170ಪೌರ ಕಾರ್ಮಿಕರಿಗೆ ಸನ್ಮಾನ*

ಬೆಂಗಳೂರು,ಮೇ.1: ವಿಶ್ವ ಕಾರ್ಮಿಕರ ದಿನಾಚರಣೆ (Vishva Karmikara dinacharane)  ಪ್ರಯುಕ್ತ ಸದಾಶಿವನಗರ ಸ್ಯಾಂಕಿ ಕೆರೆ ಬಳಿ ವಾಯ್ಸ್ ಆಫ್ ಸದಾಶಿವನಗರ ಸಾಮಾಜಿಕ ಸೇವಾ ಸಂಘಟನೆಯಿಂದ 170 ಪೌರ ಕಾರ್ಮಿಕರನ್ನು ಗೌರವಿಸಲಾಯಿತು. ಪ್ರಯುಕ್ತ ವಾಯ್ಸ್ ಆಫ್ ಸದಾಶಿವನಗರ ಸಾಮಾಜಿಕ ಸೇವಾ ಸಂಘಟನೆಯ ಅಧ್ಯಕ್ಷರಾದ ಶಿಲ್ಪಿ ಜತ್ತಿ ಹಾಗೂ ಮಲ್ಲೇಶ್ವರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅನೂಪ್ ಅಯ್ಯಂಗಾರ್ ನೇತೃತ್ವದಲ್ಲಿ ಸ್ವಚ್ಚತಾ ಅಭಿಯಾನ ನಡೆಯಿತು. ಇದೇ ಸಂದರ್ಭದಲ್ಲಿ ಪೌರ ಕಾರ್ಮಿಕರಿಗೆ ಉಡುಗೂರೆ ನೀಡಿ ಸನ್ಮಾನಿಸಲಾಯಿತು. ಶಿಲ್ಪ ಜತ್ತಿ ಮಾತನಾಡಿ, ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆಯುವುದು ಸರಿಯಲ್ಲ. ಏಕಬಳಕೆ ಪ್ಲಾಸ್ಟಿಕ್ ಅಪಾಯಕಾರಿಯಾಗಿದ್ದು, ಇಂತಹ ಪ್ಲಾಸ್ಟಿಕ್ ನಿಂದ ದೂರ ಇರುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಪರಿಸರ ಉಳಿಯಬೇಕು, ಜೀವಜಲದ ಮಟ್ಟದ ಹೆಚ್ಚಾಗಬೇಕು. ನಗರದಲ್ಲಿ ಮರಗಳು ಮಳೆಯಿಂದ ಧರೆಗೆ ಉರುಳುತ್ತಿದ್ದು, ಇನ್ನು ಮುಂದೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಹುಣಿಸೆ, ಹೊಂಗೆ ಸಸಿಗಳನ್ನು ಬೆಳಸಿದರೆ ಮರಗಳು ಹೆಚ್ಚು ಬಾಳಿಕೆ ಬರುತ್ತವೆ ಎಂದರು. ಅನೂಪ್ ಅಯ್ಯಂಗಾರ್ ( Anup Iyengar )ಮಾತನಾಡಿ, ವೈದ್ಯ ಎಷ್ಟು ಮುಖ್ಯವೊ ಪೌರ ಕಾರ್ಮಿಕರು ಅಷ್ಟೆ ಮುಖ್ಯ. ಪೌರ ಕಾರ್ಮಿಕರು ನಮ್ಮ ಸ್ವಚ್ಚತಾ ರಾಯಭಾರಿಗಳು. ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸುತ್ತಾರೆ. ನಗರದ ನಾಗರಿಕರು ಕಸ ವಿಂಗಡಣೆಗೆ ಆದ್ಯತೆ ನೀಡಬೇಕು. ಸ್ವಚ್ಚತೆ ಇದ್ದರೆ ಆರೋಗ್ಯ ಎಂಬುದನ್ನು ಪ್ರತಿಯೊಬ್ಬರು ಅರ್ಥಮಾಡಿಕೊಳ್ಳಬೇಕು ಎಂದರು.

ರಂಗಪ್ರವೇಶ — ಕುಮಾರಿ ಲಕ್ಷ್ಮಿ ಅನನ್ಯ ತಾಟವರ್ತಿ

ಭಾರತೀಯ ಶಾಸ್ತ್ರೀಯ ನೃತ್ಯದ ಲೋಕದಲ್ಲಿ ರಂಗಪ್ರವೇಶ ಎಂದರೆ ಕೇವಲ ಒಂದು ಪ್ರದರ್ಶನವಲ್ಲ—ಅದು ಒಂದು ಘೋಷಣೆ. ಅನೇಕ ವರ್ಷಗಳ ಕಠಿಣ ಸಾಧನೆಯ ನಂತರ, ಶಿಷ್ಯೆ ತನ್ನನ್ನು ವಿದ್ಯಾರ್ಥಿನಿಯಾಗಿ ಅಲ್ಲ, ಸಂಪೂರ್ಣ ಕಲಾವಿದೆಯಾಗಿ ವೇದಿಕೆಯಲ್ಲಿ ಪರಿಚಯಿಸಿಕೊಳ್ಳುವ ಮಹತ್ವದ ಕ್ಷಣವೇ ರಂಗಪ್ರವೇಶ.

ಕುಮಾರಿ ಲಕ್ಷ್ಮಿ ಅನನ್ಯ ತಾಟವರ್ತಿಗೆ ಆ ಮಹತ್ತರ ಕ್ಷಣ ಇದೀಗ ಬಂದಿದೆ.

2010ರಲ್ಲಿ ಜನಿಸಿದ ಅನನ್ಯ, ಪ್ರಸ್ತುತ ಹನ್ನೊಂದನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದು, ಏಳನೇ ವಯಸ್ಸಿನಲ್ಲಿ ಪುಣೆಯಲ್ಲಿ ಪ್ರಸಿದ್ಧ ಗುರು ಡಾ. ಲಕ್ಷ್ಮಿ ಪಂಡಿತಾರ್  (Dr. Lakshmi Pandi Rao) ಅವರ ಮಾರ್ಗದರ್ಶನದಲ್ಲಿ ಭರತನಾಟ್ಯ ಅಭ್ಯಾಸವನ್ನು ಪ್ರಾರಂಭಿಸಿದರು. ಬಾಲ್ಯದಲ್ಲಿ ಆರಂಭವಾದ ಈ ಪರಿಚಯವು ಕ್ರಮೇಣ ಶಿಸ್ತಿನ ಸಾಧನೆ, ಅಚಲ ಸಮರ್ಪಣೆ ಮತ್ತು ಕಲೆಯ ಆಧ್ಯಾತ್ಮಿಕ ಅರ್ಥದ ಅರಿವಿನಿಂದ ಗಾಢ ಆಸಕ್ತಿಯಾಗಿ ಬೆಳೆದಿತು.

“ಅವಳು ಕೇವಲ ಹೆಜ್ಜೆಗಳನ್ನು ಕಲಿತಿಲ್ಲ; ಅವುಗಳ ಅರ್ಥವನ್ನು ಅರಿತುಕೊಂಡಿದ್ದಾಳೆ,” ಎಂದು ಅವರ ಮೊದಲ ಗುರು ಅಭಿಪ್ರಾಯಪಟ್ಟಿದ್ದಾರೆ.

ಡಾ. ಪಂಡಿತಾರ್ ಅವರ ಮಾರ್ಗದರ್ಶನದಲ್ಲಿ ಅನನ್ಯ ಕೇವಲ ತಾಂತ್ರಿಕ ಕೌಶಲ್ಯವನ್ನಷ್ಟೇ ಅಲ್ಲ, ಭರತನಾಟ್ಯದ ಆತ್ಮವನ್ನು—ಮುದ್ರೆಗಳುಅಭಿನಯ, ಹಾಗೂ ಪ್ರತಿಯೊಂದು ಚಲನವಲನದಲ್ಲಿರುವ ಭಕ್ತಿ ಭಾವವನ್ನು—ಆಳವಾಗಿ ಅಳವಡಿಸಿಕೊಂಡಳು.

2023ರಲ್ಲಿ ಕುಟುಂಬದೊಂದಿಗೆ ಬೆಂಗಳೂರಿಗೆ ಸ್ಥಳಾಂತರವಾದಾಗ, ಅನನ್ಯ ತನ್ನ ನೃತ್ಯಯಾತ್ರೆಯಲ್ಲಿ ಮಹತ್ವದ ತಿರುವನ್ನು ಎದುರಿಸಿತು. ತನ್ನ ಮೊದಲ ಗುರುಗಳ ಆಶೀರ್ವಾದ ಮತ್ತು ಶಿಫಾರಸ್ಸಿನೊಂದಿಗೆ, ಅವಳು ಪ್ರಸಿದ್ಧ ವಿದುಷಿ ಡಾ. ಪ್ರಿಯಾ ಗಣೇಶ್ ಅವರ ಶಿಷ್ಯೆಯಾಗಿ ತನ್ನ ಸಾಧನೆಯನ್ನು ಮುಂದುವರಿಸಿದರು. ಈ ಪರಿವರ್ತನೆ ಅವಳ ಕಲಾತ್ಮಕ ಬೆಳವಣಿಗೆಯಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿತು.

ಒಂಬತ್ತು ವರ್ಷಗಳ ನಿರಂತರ ಅಭ್ಯಾಸದಲ್ಲಿ ಅನನ್ಯ ದೇಶೀಯ ಹಾಗೂ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ತನ್ನ ಕಲೆ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ್ದಾಳೆ. ಆದರೆ ಪ್ರಶಂಸೆಗಳಿಗಿಂತಲೂ ಹೆಚ್ಚಾಗಿ, ಒಂದು ಮುಜುಗರದ ಬಾಲೆಯಿಂದ ಆತ್ಮವಿಶ್ವಾಸಿ ಕಲಾವಿದೆಯಾಗುವ ಅವಳ ಆಂತರಿಕ ಪರಿವರ್ತನೆವೇ ಅವಳ ಸಾಧನೆಯ ನಿಜವಾದ ಗುರುತು.

ಭವಿಷ್ಯದಲ್ಲಿ ಅನನ್ಯ ಭರತನಾಟ್ಯದಲ್ಲಿ ಉನ್ನತ ಅಧ್ಯಯನ ಮತ್ತು ಸಂಶೋಧನೆ ನಡೆಸುವ ಆಶಯ ಹೊಂದಿದ್ದು, ತನ್ನ ಗುರುಗಳ ಬೌದ್ಧಿಕ ಹಾಗೂ ಕಲಾತ್ಮಕ ಪರಂಪರೆಯನ್ನು ಮುಂದುವರಿಸಲು ಬಯಸುತ್ತಾಳೆ.

ಕಾರ್ಯಕ್ರಮದ ಪರಿಕಲ್ಪನೆ:  “ರಾಮಭಕ್ತಿ — ಅನನ್ಯ ಶಕ್ತಿ”  (Ram Bhakthi- Anany Shakti) (ನವವಿಧ ಭಕ್ತಿ) 

ಇಂದಿನ ರಂಗಪ್ರವೇಶ ಕಾರ್ಯಕ್ರಮದ ಮುಖ್ಯ ವಿಷಯ “ರಾಮಭಕ್ತಿ — ಅನನ್ಯ ಶಕ್ತಿ”—ಇದು ಶ್ರೀ ಹನುಮಂತನ ರಾಮನ ಮೇಲಿನ ಅಚಲ ಭಕ್ತಿಯ ಅಪಾರ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ.

ಶ್ರೀ ಲಿಕಿತ್ ಮತ್ತು ವಿದುಷಿ ಡಾ. ಪ್ರಿಯಾ ಗಣೇಶ್ ಅವರ ಸಂಯುಕ್ತ ಪರಿಕಲ್ಪನೆಯಾಗಿ ರೂಪುಗೊಂಡ ಈ ಕಾರ್ಯಕ್ರಮವು ನವವಿಧ ಭಕ್ತಿ—ಭಕ್ತಿಯ ಒಂಬತ್ತು ರೂಪಗಳ ಆಧಾರದ ಮೇಲೆ ನಿರ್ಮಿತವಾಗಿದೆ.

ಈ ನಿರೂಪಣೆಯಲ್ಲಿ ಭಕ್ತಿಶ್ರೇಷ್ಠನಾದ ಹನುಮಂತನು ಶ್ರೀರಾಮಚಂದ್ರನ ಮೇಲಿನ ತನ್ನ ಪ್ರೀತಿಯನ್ನು ನವವಿಧ ಭಕ್ತಿಯ ಪ್ರತಿಯೊಂದು ರೂಪದಲ್ಲಿಯೂ ಹೇಗೆ ವ್ಯಕ್ತಪಡಿಸುತ್ತಾನೆ ಎಂಬುದನ್ನು ಮನೋಹರವಾಗಿ ಅನಾವರಣಗೊಳಿಸಲಾಗಿದೆ.

ಈ ಕಥನವು ಕೇವಲ ತಾತ್ವಿಕ ವಿವರಣೆಯಷ್ಟೇ ಅಲ್ಲ, ಭಾವಪೂರ್ಣ ಅನುಭವವೂ ಆಗಿದ್ದು, ಭರತನಾಟ್ಯದ ಅಭಿವ್ಯಕ್ತಿಶಕ್ತಿಗೆ ಅತ್ಯಂತ ಸೂಕ್ತವಾದ ಆಧ್ಯಾತ್ಮಿಕ ಹಾಗೂ ಕಲಾತ್ಮಕ ಸಂಯೋಜನೆಯಾಗಿದೆ.

ಪ್ರತಿ ಭಾಗವೂ ಒಂದು ಭಕ್ತಿಯ ರೂಪವನ್ನು ಪ್ರತಿನಿಧಿಸಿ, ವೇದಿಕೆಯನ್ನು ಒಂದು ಪವಿತ್ರ ಕ್ಷೇತ್ರವನ್ನಾಗಿ ರೂಪಿಸುತ್ತದೆ—ಅಲ್ಲಿ ನೃತ್ಯವೇ ಪ್ರಾರ್ಥನೆ, ಅಭಿನಯವೇ ಅರ್ಪಣೆ, ಮತ್ತು ಕಲೆ ದೇವರತ್ತ ಸಾಗುವ ಸೇತುವೆಯಾಗಿ ಪರಿಣಮಿಸುತ್ತದೆ.

“ವಿಶ್ವ ನೃತ್ಯ ದಿನಾಚರಣೆ”

ಆರ್ಟ್ ಕಲ್ಚರಲ್ ಎಜುಕೇಶನಲ್ ಎನ್ಲೈಟ್ ಫೌಂಡೇಶನ್ ಸಂಸ್ಥಾಪಕಿ ಅಂಬಿಕಾ ಸಿ(Ambika .c) ಮತ್ತು ಸಂಸ್ಥೆಯವರು ವಿಶ್ವ ನೃತ್ಯ ದಿನಾಚರಣೆ ಅಂಗವಾಗಿ ದಿನಾಂಕ 29 ಏಪ್ರಿಲ್ 20 26ರಂದು ನಯನ ಸಭಾಂಗಣದಲ್ಲಿ ವಿಶ್ವ ನೃತ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ
ಚೇತನ ನಾಟ್ಯ ನಿಕೇತನ ಕಲಾ ಕುಟೀರ(Chetana Natya Niketan kutira) ನೃತ್ಯ ಶಾಲೆಯ ಸಂಸ್ಥಾಪಕಿ ಗುರು ವಿದುಷಿ ಚೇತನ ಸುಂದರೇಶ್ ಉಪಸ್ಥಿತರಿದ್ದು ಕಲಾವಿದರು ಹಾಗೂ ಪೋಷಕರನ್ನು ಕುರಿತು ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮ ಜವಾಬ್ದಾರಿ ಎಂದು ಯುವ ಪೀಳಿಗೆಗೆ ತಿಳಿಯಪಡಿಸಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಆಯೋಜಕರಾದ ಅಂಬಿಕಾ ಸಿ ಅವರು ಮಾತನಾಡಿ ಯುವ ಪೀಳಿಗೆಯ ಪ್ರತಿಭೆಗಳಿಗೆ ಪ್ರೋತ್ಸಾಹ ಮತ್ತು ಅವಕಾಶ ಕಲ್ಪಿಸುವುದು ಹಿರಿಯರ ಕರ್ತವ್ಯವೆಂದರು.
ವಿಶ್ವ ನೃತ್ಯ ದಿನಾಚರಣೆಯಲ್ಲಿ ವಿದ್ಯಾರ್ಥಿಗಳ ನೃತ್ಯ ವೈಭವವು ನೋಡುಗರ ಕಣ್ಮನ ಸೆಳೆಯಿತು.
ಮಕ್ಕಳು, ಪೋಷಕರು ಮತ್ತು ಹಿರಿಯರ ಉಪಸ್ಥಿತಿಯಲ್ಲಿ ಬಹಳ ಯಶಸ್ವಿಯಾಗಿ ಜರುಗಿತು.

ಶ್ರೀ ಶ್ರೀನಿವಾಸ ದೇವರಿಗೆ ಮಹಾಭಿಷೇಕ ಪವಮಾನಪುರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ

ಬೆಂಗಳೂರು : ಪವಮಾನಪುರ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀಮಠದ ವಿಚಾರಣಾಕರ್ತರಾದ ಶ್ರೀ ಗಿರಿರಾಜಾಚಾರ್(Sri Girijaa char) ಮತ್ತು ನೂತನ ವ್ಯವಸ್ಥಾಪಕರಾದ ಶ್ರೀ ನಂದಕಿಶೋರಾಚಾರ್ಯರ(Sri Nandakishora charya) ನೇತೃತ್ವದಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣ ಮಹೋತ್ಸವದ ಅಂಗವಾಗಿ ಶ್ರೀ ಶ್ರೀನಿವಾಸ ದೇವರಿಗೆ ಮಹಾಭಿಷೇಕ ಮತ್ತು ಉತ್ಸವ ಮೂರ್ತಿಗಳಿಗೆ ಮಹಾಮಂಗಳಾರತಿಯು ನೆರವೇರಿಸಲಾಯಿತು. ಬೆಳಗ್ಗೆ 7:30ಕ್ಕೆ ಶ್ರೀನಿವಾಸ ದೇವರಿಗೆ ಮಹಾ ಅಭಿಷೇಕ ಪಂಚಾಮೃತದೊಂದಿಗೆ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಅಷ್ಟೋತ್ತರ ಸಹಿತ ಫಲ ಪಂಚಾಮೃತ ಅಭಿಷೇಕವು ಅರ್ಚಕರಾದ ಇಂದಿರೇಶ ಆಚಾರ್ ಮತ್ತು ಶ್ರೀಪಾದ ಆಚಾರ್ಯರಿಂದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ನೆರವೇರಿಸಿ ವಿಶೇಷ ಅಲಂಕಾರದೊಂದಿಗೆ ಮಹಾಮಂಗಳಾರತಿಯು ನೆರವೇರಿತು. ಈ ಸಂದರ್ಭದಲ್ಲಿ ಸೇವಾಕರ್ತೃಗಳು, ಶ್ರೀಮಠದ ಶಿಷ್ಯರು, ಭಕ್ತರು, ಶ್ರೀಮಠದ ಸಿಬ್ಬಂದಿಗಳು ಸ್ವಯಂ ಸೇವಕರು ಭಾಗವಹಿಸಿ ತೀರ್ಥ ಫಲಮಂತ್ರಾಕ್ಷತೆ ಪ್ರಸಾದವನ್ನು ಸ್ವೀಕರಿಸಿ ಶ್ರೀ ಶ್ರೀನಿವಾಸ ದೇವರ ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು.