Home Blog Page 12

ತ್ಯಾಗರಾಜನಗರ ರಾಯರ ಮಠದಲ್ಲಿ ಶ್ರೀ ನರಸಿಂಹ ಜಯಂತಿ

ಬೆಂಗಳೂರು : ತ್ಯಾಗರಾಜನಗರದ 11ನೇ ಅಡ್ಡರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ (Sri Rahghavendra Swamy Mutt) ಶ್ರೀ ನರಸಿಂಹ ಜಯಂತಿ ಪ್ರಯುಕ್ತ ಏಪ್ರಿಲ್ 30, ಗುರುವಾರ ಬೆಳಗ್ಗೆ 9ಕ್ಕೆ ಶ್ರೀಮನ್ಮಾಧವತೀರ್ಥ (ತಂಬಿಹಳ್ಳಿ) ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ 1008 ಶ್ರೀ ವಿದ್ಯಾವಲ್ಲಭಮಾಧವತೀರ್ಥ ಶ್ರೀಪಾದಂಗಳವರಿಂದ (Sree VidyavallabhamadhavaThirtha Sripadam) ಶ್ರೀಮದ್ಭಾಗವತ ಸಪ್ತಮ ಸ್ಕಂದ ಪ್ರವಚನದ ಮಂಗಳ, ಸಂಸ್ಥಾನ ಪೂಜೆ, ಮಹಾಮಂಗಳಾರತಿ, ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಜೆ 6ಕ್ಕೆ ಕು|| ಮೃದುಲಾ ಮತ್ತು ಸಂಗಡಿಗರಿಂದ ದಾಸವಾಣಿ (Dasavani) ಕಾರ್ಯಕ್ರಮ ಏರ್ಪಡಿಸಿದೆ.

ಶ್ರೀ ಗುರುಭ್ಯೋ ನಮ : ಪರಮ ಗುರುಭ್ಯೋನಮಃ ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯ ಗುರುಭ್ಯೋ ನಮಃ
ಇಂದು ಪರಮಾತ್ಮ ತನ್ನ ಭಕ್ತನನ್ನು ಕಾಪಾಡಲು ಒಂದು ಲೋಕ ವಿಲಕ್ಷಣವಾದ ರೂಪವನ್ನು ಪಡೆದು ಅವತರಿಸಿದ ದಿನ. ಅದೇ ನರಸಿಂಹ ದೇವರ ಪ್ರಾದುರ್ಭಾವ.

ನರಸಿಂಹ ರೂಪಿ ಪರಮಾತ್ಮನ ಸ್ಮರಣೆ ಮಾತ್ರದಲಿ ಅನಿಷ್ಟ ನಿವೃತ್ತಿ ಹಾಗೂ ಇಷ್ಟಪ್ರಾಪ್ತಿ. ಅದಕ್ಕೆಂದೇ ಶ್ರೀ ಜಗನ್ನಾಥ ದಾಸರು ತಮ್ಮ ಮಂಗಳಾಚರಣ ಸಂಧಿ ಯಲ್ಲಿ ಅನಿಷ್ಟಗಳು ಹಾಗೂ ವಿಘ್ನಗಳ ಪರಿಹಾರಕ್ಕೆ ತಮ್ಮ ಕುಲದೈವವಾದ ನರಸಿಂಹನನ್ನು ನಾರಸಿಂಹನೆ ನಮಿಪೆ ಕರುಣಿಪುದೆಮಗೆ ಮಂಗಳವಾ ಎಂದು ಸ್ತುತಿಸಿದ್ದಾರೆ. ಶ್ರೀ ವೇದವ್ಯಾಸರು 7ನೇ ಸ್ಕಂದವನ್ನು ಪೂರ್ಣವಾಗಿ ಭಕ್ತವತ್ಸಲನಾದ ನರಸಿಂಹ ಮತ್ತು ಪ್ರಹ್ಲಾದನಿಗೆ ಮೀಸಲಾಗಿರಿಸಿದ್ದಾರೆ.
ಭಾಗವತ ಸಪ್ತಮ ಸ್ಕಂದ ಪರಮಾತ್ಮನ ಪಕ್ಷಪಾತ ರಾಹಿತ್ಯವನ್ನು ನಿರೂಪಿಸಿದ ಸ್ಕಂದ. ಇದು ಬ್ರಹ್ಮಸೂತ್ರಗಳ ವಿವರಣೆ ಎಂದು ಹೇಳಿದ್ದಾರೆ.
ತಂದೆ ಹಿರಣ್ಯಕಶಿಪು ದೈತ್ಯ ಅವರ ಮಗ ಪ್ರಹ್ಲಾದನೂ ದೈತ್ಯನೇ. ಆದರೆ ತಂದೆ ಅಂತರಂಗ ಬಹಿರಂಗಗಳಲ್ಲಿ ದೈತ್ಯನಾದರೆ ಮಗ ಭಾಹ್ಯದಲ್ಲಿ ದೈತ್ಯನಾದರೆ ಅಂತರಂಗದಲ್ಲಿ ಕರ್ಮಜ ದೇವತೆ. ಹಿರಣ್ಯಕಶಿಪುವನ್ನು ಸಂಹರಿಸಿದ ಭಗವಂತ ಪ್ರಹ್ಲಾದನನ್ನು ಸಂರಕ್ಷಿಸಿದ.
ಅವನ ಅಹಂ ಅವನ ವಿನಾಶಕ್ಕೆ ಕಾರಣವಾದರೆ ಪ್ರಹ್ಲಾದನ ಗುಣ ಅವನ ಉದ್ಧಾರಕ್ಕೆ ಕಾರಣವಾಯಿತು ಅದಕ್ಕೆ ಭಗವಂತ ಸಮ ಎನಿಸಿಕೊಂಡಿದ್ದಾನೆ. ಹಿರಣ್ಯಕಶಿಪು ಪ್ರಹ್ಲಾದರು ಸಂಬಂಧದಲ್ಲಿ ತಂದೆ ಮಕ್ಕಳಾದರೂ ಸ್ವಭಾವದಲ್ಲಿ ವ್ಯತಿರಿಕ್ತರು. ಹಿರಣ್ಯ (ಧನಕನಕಾದಿ ಗಳು) ಹಾಗೂ ಕಶಿಪು ಎಂದರೆ ಭೋಗ ವಿಲಾಸಗಳು. ಇವು ಅವನ ಜೀವನದ ಮುಖ್ಯ ಗುರಿ. ನಾವೆಲ್ಲರೂ ಕೂಡ ಒಂದಲ್ಲ ಒಂದು ರೀತಿ ಹಿರಣ್ಯಕಶಿಪು ಗಳೇ. ಧನಕನಕಾದಿ ಗಳು ಭೋಗ ವಿಲಾಸಗಳಲ್ಲಿ ಮುಳುಗಿದವರು. ನರಸಿಂಹ ರೂಪಿ ಪರಮಾತ್ಮ ನಮ್ಮಲ್ಲಿರುವ ಹಿರಣ್ಯಕಶಿಪುವನ್ನು ಸಂಹರಿಸಿದ ಬೇಕು ಎಂದು ಬೇಡಿಕೊಳ್ಳಬೇಕು. ಆದರೆ ಇದಕ್ಕೆ ವಿರುದ್ಧವಾದ ಜೀವನ ಶೈಲಿ ಪ್ರಹ್ಲಾದನದು. ಸದಾ ಭೌತಿಕ ವಸ್ತುಗಳಿಂದ ದೂರವಿದ್ದು ಆಧ್ಯಾತ್ಮವನ್ನು ನಂಬಿದ ವಿರಕ್ತ ಜೀವನ ಅವನದು. ತಂದೆ ಲಕ್ಷ್ಮಿ ದಾಸ. ಮಗ ಲಕ್ಷ್ಮೀಪತಿಯ ದಾಸ. ಅವನಿಗೆ ವಿಷಯದ ನಂಟು ಇವನಿಗೆ ವಿಷ್ಣುವಿನ ನಂಟು. ಅವನಿಗೆ ದುರ್ಗತಿ ಇವನಿಗೆ ಸದ್ಗತಿ.
ಚಂಡ ಮರ್ಕರ ಬಳಿ ಪ್ರಹ್ಲಾದನ ವಿದ್ಯಾಭ್ಯಾಸ. ಅವನ ಪಠ್ಯದಲ್ಲಿ ಭಗವಂತನನ್ನು ಬಿಟ್ಟು ಜಗತ್ತಲ್ಲ ತುಂಬಿತ್ತು ವಿದ್ಯಾಭ್ಯಾಸವು ಇಂತಹುದೇ. ಜಗದ ಎಲ್ಲ ವಿಷಯವೂ ಇರುತ್ತದೆ ಜಗನ್ನಾಥನ ವಿಷಯವು ಮರೆತುಬಿಟ್ಟಿರುತ್ತಾರೆ.
ಒಮ್ಮೆ ಹಿರಣ್ಯಕಶಿಪು ಹೇಳಿದ ಮಗು ಪ್ರಹ್ಲಾದ ಏನೇನು ಕಲಿತಿರುವೆ. ಪ್ರಹ್ಲಾದನ ಉತ್ತರ ಶ್ರವಣಂ ಕೀರ್ತನಂ ವಿಷ್ಣೋ: ಸ್ಮರಣ ಪಾದಸೇವನಂ
ಅರ್ಚನಮ್ ವಂದನಂ ದಾಸ್ಯಂ ಸಖ್ಯಂ ಆತ್ಮನಿವೇದನಂ
ಭಗವಂತನ ಬಗ್ಗೆ ಹೇಳುವುದು ಕೇಳುವುದು ಸ್ಮರಿಸುವುದು ಭಜಿಸುವುದು ಪೂಜಿಸುವುದು ವಂದಿಸುವುದು ದಾಸ್ಯಭಾವ ಹೊಂದುವುದು ಸ್ನೇಹ ತೋರುವುದು ತನ್ನಲ್ಲಿ ಬಿಂಬ ರೂಪಿಯಾದ ಭಗವಂತನ ಸಾಕ್ಷಾತ್ಕರಿಸಿಕೊಳ್ಳುವುದು ಎಂಬ. ನವವಿಧ ಭಕ್ತಿಯನ್ನು ಹೇಳುತ್ತಾನೆ. ಹಿರಣ್ಯಕಶಿಪು ದಿಗ್ಭ್ರಮೆಗೊಂಡು ತನ್ನ ಮಗ ಹರಿಭಕ್ತರು ಹೇಗಾದ ಎಂದು ಯೋಚಿಸಿ ಕೊನೆಗೂ ಇದು ಅವನ ಸಹಜ ಸ್ವಭಾವವೆಂದು ತಿಳಿದು ಅವನನ್ನು ದ್ವೇಷಿಸಿ ಕೊಲ್ಲಲು ನಿರ್ಧರಿಸಿದ. ಅದಕ್ಕಾಗಿ ಸರ್ವಪ್ರಯತ್ನಗಳನ್ನೂ ಮಾಡಿದ ಆದರೆ ಅದರಿಂದ ಪ್ರಹ್ಲಾದನ ಒಂದು ಕೂದಲು ಕೂಡ ಕೊಂಕಲಿಲ್ಲ ಇದೇ ಪರಮಾತ್ಮನ ಭಕ್ತರ ಸಾಧನೆಯ ಗುಟ್ಟು. ಆಗೊಮ್ಮೆ ಹಿರಣ್ಯಕಶಿಪು ಯೋಚಿಸಿದಂತೆ ಯಾವ ರೀತಿಯಲ್ಲೂ ಸಾವು ಬೇಡ ಎಂದು ಹೇಳಿದವನು ನಾನು ಅದನ್ನು ಸಾಧಿಸಿದವನು ಇವನು. ಬ್ರಹ್ಮ ನನಗೆ ವರ ಕೊಡುವ ಬದಲು ನನ್ನ ವಂಶಕ್ಕೆ ಕೊಟ್ಟುಬಿಟ್ಟನೋ ಏನು ಅಂತ ಯೋಚಿಸಿದನು.
ಭಗವಂತನೊಬ್ಬನೇ ಶಾಶ್ವತ ಅವನು ಆನಂದದಿ ಸಕಲ ಸದ್ಗುಣಗಳ ಖಣಿ. ದುಃಖಾದಿ ದೋಷಗಳು ಸ್ವಲ್ಪವೂ ಇಲ್ಲದ ಪೂರ್ಣ ಪುರುಷ. ಈ ರೀತಿ ಉಪಾಸನೆ ಮಾಡಿದ ಪ್ರಹ್ಲಾದನ ಸಂರಕ್ಷಿಸುವುದಕ್ಕೆ ಇದೆ ವೈಶಾಖ ಶುಕ್ಲ ಚತುರ್ದಶಿಯಂದುನರಸಿಂಹನಾಗಿ ಅವತರಿಸಿದ. ಹಿರಣ್ಯಕಶಿಪು ಕೇಳಿದ ವರದಂತೆ ಬ್ರಹ್ಮ ಕೊಟ್ಟ ವರವೂ ಸತ್ಯ ವಾಗುವಂತೆ ಲೋಕ ವಿಲಕ್ಷಣವಾದ ನರ ಮತ್ತು ಮೃಗ ನರಸಿಂಹ ರೂಪವನ್ನು ತಾಳಿ ಹಿರಣ್ಯಕಶಿಪುವನ್ನು ಸಂಹರಿಸಿ ಪ್ರಹ್ಲಾದನನ್ನು ಸಂರಕ್ಷಿಸಿದ ನು. ಸ್ವತಃ ಶ್ರೀ ನರಸಿಂಹ ದೇವರು ಪ್ರತ್ಯಕ್ಷ ದರ್ಶನವಿತ್ತು ವರ ಕೇಳಲು ಹೇಳಿದಗ್ಯೂ ಪ್ರಹ್ಲಾದ ಯಾವ ವರವನ್ನೂ ಬೇಡಲಿಲ್ಲ. ಹಾಗೆ ಬೇಡಿ ತಾನು ಭಕ್ತನಾಗುವ ಬದಲು ವ್ಯಾಪಾರಿ ಯಾಗಲು ಅವನು ಇಚ್ಚಿಸಲಿಲ್ಲ. ಹಿರಣ್ಯಕಶಿಪು ಕೊನೆಗೂ ಸರ್ವನಾಶವನ್ನು ಕಂಡ ನಾವುಗಳು ಕೂಡ ಧನಕನಕಾದಿಗಳು ಮತ್ತು ಭೋಗ ವಿಳಾಸಗಳ ಮಧ್ಯೆ ಇದ್ದು ಅವುಗಳ ಸೆಳೆತಕ್ಕೆ ಒಳಗಾಗದೆ ಅವುಗಳನ್ನು ಭಗವಂತನಿಗೆ ಅರ್ಪಿಸಿ ಕೃತಾರ್ಥರಾಗಬೇಕು. ಹಿರಣ್ಯಕಶಿಪುವಿಗೆ ದುರ್ಗತಿ ಆಯ್ತು ಆದರೆ ಅವನ ಒಳಗಿದ್ದ ಜಯನಿಗೆ ಮಾತ್ರ ಸದ್ಗತಿ ಆಯ್ತು. ದ್ವೇಷಿ ಗೆ ತಮಸ್ಸು ಭಕ್ತನಿಗೆ ಮುಕ್ತಿ ಇದು ಭಗವಂತನ ನಿಯಮ. ಪ್ರಹ್ಲಾದನಿಗೆ ಕೆಲಕಾಲ ನರಸಿಂಹ ದರ್ಶನವಾಗಲು ಅವನ ಒಳಗಿದ್ದ ಶ್ರೀ ವಾಯುದೇವರ ಆವೇಶ ಕಾರಣವಾಯಿತು. ನಾವುಗಳು ಕೂಡ ಆ ನರಸಿಂಹ ದೇವರ ಅನುಗ್ರಹ ವಾಗಬೇಕಾದರೆ ನಮ್ಮ ಜೀವನವನ್ನು ಪರಿಶುದ್ಧವಾಗಿ ಇಟ್ಟುಕೊಂಡು ಸನ್ಮಾರ್ಗದತ್ತ ಸಾಗಿ ಮಾಡುವ ಕರ್ಮಗಳನ್ನು ವಾಯುದೇವರ ಮುಖಾಂತರ ಪರಮಾತ್ಮನಿಗೆ ಅರ್ಪಿಸಬೇಕು. ಇದುವೇ ಜೀವನದ ಸಾರ್ಥಕತೆ.

ಶ್ರೀಕೃಷ್ಣಾರ್ಪಣಮಸ್ತು

 

ನಾಹಂ ಕರ್ತಾ ಹರಿಃ ಕರ್ತಾ
ಹೇಮಮಾಲಿನಿ ಶ್ರೀಧರಾಚಾರ್

ಉಗ್ರರ ಕುರಿತ ಪುಸ್ತಕ ಬಿಡುಗಡೆ ಸರ್ಕಾರ ಅವಕಾಶ ನೀಡಬಾರದು: ಪಿ.ಸಿ. ಮೋಹನ್

ಬೆಂಗಳೂರು: 2020 ರ ದೆಹಲಿ ದಂಗೆ ಪ್ರಕರಣದಲ್ಲಿ ಯುಎಪಿಎ (UAPA) ಕಾಯ್ದೆಯಡಿ ತಿಹಾರ್ ಜೈಲಿನಲ್ಲಿರುವ ಉಗ್ರ ಉಮರ್ ಖಾಲಿದ್ (Umar Khalid) ಕುರಿತ ಪುಸ್ತಕ ಬಿಡುಗಡೆಗೆ ರಾಜ್ಯ ಸರ್ಕಾರ ಅವಕಾಶ ನೀಡಬಾರದು ಎಂದು ಸಂಸದ ಪಿ.ಸಿ ಮೋಹನ್ (P.C. Mohan) ಅವರು ಹೇಳಿದ್ದಾರೆ.
ಕಾರ್ಯಕ್ರಮಕ್ಕೆ ಅನುಮತಿ ನೀಡದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ದೇಶದ್ರೋಹಿ ಉಮರ್ ಖಾಲಿದ್ 2020 ರ ದೆಹಲಿ ದಂಗೆಯ ಪ್ರಮುಖ ಆಪಾದಿತ. ಅಂದು ನಡೆದ ಸ್ಫೋಟದಲ್ಲಿ ಸಾಕಷ್ಟು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆಸ್ತಿ-ಪಾಸ್ತಿಗೆ ಹಾನಿಯಾಗಿದೆ. ಇಂದಿಗೂ ಜೈಲುಶಿಕ್ಷೆ ಅನುಭವಿಸುತ್ತಿರುವ ಆರೋಪಿಯನ್ನು ವೈಭವೀಕರಿಸುವ ಅಗತ್ಯವೇನು? ಎಂದು ಪ್ರಶ್ನಿಸಿದರು.
ದೊಮ್ಮಲೂರಿನ ಬೆಂಗಳೂರು ಇಂಟರ್ ನ್ಯಾಷನಲ್ ಸೆಂಟರ್‍ನಲ್ಲಿ ಹಮ್ಮಿಕೊಂಡಿರುವ ಪುಸ್ತಕ ಬಿಡುಗಡೆಗೆ ಅವಕಾಶ ಸಿಗಬಾರದು. ಕಾರ್ಯಕ್ರಮ ನಡೆಯಬಾರದು.ಈ ಸಂಬಂಧ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದೇವೆ ಎಂದರು.
ಇಂತಹ ಕಾರ್ಯಕ್ರಮ ಆಯೋಜಕರು ದೇಶದ್ರೋಹಿಗಳಾದ ಕಸಾಬ್, ಸಂಸತ್ತಿನ ದಾಳಿಕೋರರನ್ನು ವೈಭವೀಕರಿಸುವ ಕೆಲಸ ಮಾಡುತ್ತಿದ್ದಾರೆ. ಬೇರೆ ರಾಜ್ಯಗಳಲ್ಲಿ ಇಂತಹ ಕಾರ್ಯಕ್ರಮಕ್ಕೆ ಅನುಮತಿ ಸಿಗುವುದಿಲ್ಲ. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಇಂತಹ ಭಯೋತ್ಪಾದಕರ ಬಗ್ಗೆ ಸರ್ಕಾರ ಮೃದುಧೋರಣೆ ಹೊಂದಿದೆ. ಆದ್ದರಿಂದಲೇ ಇಲ್ಲಿ ಕಾರ್ಯಕ್ರಮ ಆಯೋಜನೆಯಾಗಿದೆ ಎಂದರು.
ದೇಶದ್ರೋಹಿಗಳನ್ನು ವೈಭವೀಕರಿಸಲು ಕಾಂಗ್ರೆಸ್ ಸರ್ಕಾರ ಬೆಂಬಲ ನೀಡುತ್ತದೆ. ಗಾಂಧಿನಗರದ ಗೋಡೆಗಳ ಮೇಲೆ ಬರಹಗಳನ್ನು ಬರೆದಿದ್ದಾರೆ. ಈ ಸರ್ಕಾರ ಇಂತಹುದಕ್ಕೆಲ್ಲ ಅವಕಾಶ ನೀಡಬಾರದು. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಡಾ.ರಾಜ್ ಕುಮಾರ್ ಜನ್ಮದಿನಾಚರಣೆ

Bengaluru : ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ನಟಸಾರ್ವಭೌಮ ಡಾ.ರಾಜ್ ಕುಮಾರ್ (Dr. Rajkumar Birthday) ರವರ 97 ನೇ ಜನ್ಮದಿನಾಚರಣೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು ಮಾನ್ಯ ಇಂಧನ ಸಚಿವರಾದ ಶ್ರೀ ಕೆ.ಜೆ.ಜಾರ್ಜ್ (K.J. Geroge) ರವರು ಕಲ್ಯಾಣನಗರದಲ್ಲಿ ಸುಸಜ್ಜಿತವಾಗಿ ಸುಂದರವಾಗಿ, ಬಯಲು ರಂಗಮಂದಿರ ಸಹಿತ ನವೀಕರಣಕೊಂಡಿರುವ ಡಾ.ರಾಜ್ ಕುಮಾರ್ ಉದ್ಯಾನವನವನ್ನು ಸಾರ್ವಜನಿಕರ ಸೇವೆಗಾಗಿ ಜನಾರ್ಪಣೆಗೊಳಿಸಿದರು .ಇದೇ ಸಂಧರ್ಭದಲ್ಲಿ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಜನಪ್ರತಿನಿಧಿಯೊಬ್ಬರು ಡಾ.ರಾಜ್ ಕುಮಾರ್ ರವರ ಜೀವನ ಸಾಧನೆಯನ್ನು ಕುರಿತಾದ ಪುಸ್ತಕಗಳನ್ನು ಖರೀದಿಸಿ ಮನೆ- ಮನೆಗೂ ಡಾ.ರಾಜ್ ಕುಮಾರ್ ಎಂಬ ಶೀರ್ಷಿಕೆಯಡಿಯಲ್ಲಿ ನೂರಾರು ಪುಸ್ತಕಗಳನ್ನು ಜನರಿಗೆ ಉಚಿತವಾಗಿ ವಿತರಿಸುವ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಧರ್ಮದರ್ಶಿ ಶ್ರೀ ಪಿ.ಬಾಬು , ಬಿ.ಡಿ.ಎ ಸದಸ್ಯರಾದ ಬಿ.ಎನ್.ಆರ್.ಅಮರ್ ನಾಥ್, ಸರ್ವಜ್ಞ ನಗರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಪಾ.ಮುರುಳೀಧರ್ ವಾರ್ಡ್ ಅಧ್ಯಕ್ಷರುಗಳಾದ ಪ್ರೇಮಾವತಿ.ಬಿ  ರಾಜಾ, ಕಸಾಪ ಮಹಿಳಾ ಸದಸ್ಯರಾದ ಕವಿತಾ ರವೀಂದ್ರ, ರತ್ನಗೋಪಾಲ್ ಕವಿ ಸರ್ವಜ್ಞ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಕಮಲೇಶ್ ಓಂ ಶಕ್ತಿ ರಾಜು ಪತ್ರಕರ್ತರಾದ ರಮೇಶ್ ಮುಂತಾದ  ಸ್ಥಳೀಯ ಮುಖಂಡರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ವರ್ಧಮಾನ ಕಳಸೂರು ರವರು ಉಪಸ್ಥಿತರಿದ್ದರು.
ಉದ್ಘಾಟನೆ ಮಾಡುತ್ತಾ ಸಚಿವರಾದ ಜಾರ್ಜ್ ರವರು ನಿಮ್ಮದೇ ಉದ್ಯಾನವನ ಇದನ್ನು ನೀವೆಲ್ಲ ಆರೋಗ್ಯಕರವಾಗಿ ಇಟ್ಟುಕೊಳ್ಳಬೇಕು ಎಂದು ತಿಳಿಸಿದರು. ಸಚಿವರು ವಿಶೇಷ ಚೇತನರಿಗೆ ವೀಲ್ ಚೇರ್ ವಿತರಣೆ ಮಾಡಿದರು.
ಧರ್ಮದರ್ಶಿಗಳಾದ ಬಾಬು ಮತ್ತು ಪ್ರೇಮಾವತಿ ರವರು ತಮ್ಮ ಸಂಸ್ಥೆಯ ಪರವಾಗಿ ವಿದ್ಯಾರ್ಥಿಗಳಿಗೆ ಆಟೋಪಕರಣಗಳನ್ನು ವಿತರಿಸಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಪಾ. ಮುರಳಿಧರ್ ಅವರು ಸರ್ವರನ್ನು ಸ್ವಾಗತಿಸಿದರು ಓಂ ಶಕ್ತಿ ರಾಜರವರು ಕೊನೆಯಲ್ಲಿ ವಂದನಾರ್ಪಣೆಗಳನ್ನು ಸಲ್ಲಿಸಿದರು.

ಹಾಸನದಲ್ಲಿ ಬೇಕರಿ ಸಂಘಗಳ ಐತಿಹಾಸಿಕ ಜಂಟಿ ಸಭೆ

ಹಾಸನ, : ಹಾಸನ ಜಿಲ್ಲೆ ಬೇಕರಿ ಮಾಲೀಕರ ಸಂಘದ ಆತಿಥ್ಯದಲ್ಲಿ, ಉಡುಪಿ ಬೇಕರಿ ಮತ್ತು ಖಾದ್ಯ ತಯಾರಿಕ ಸಂಘ ಹಾಗೂ ಕರ್ನಾಟಕ ಬೇಕರಿ ಅಂಡ್ ಸ್ವೀಟ್ಸ್ ಅಸೋಸಿಯೇಷನ್ ಮೊದಲ ಬಾರಿಗೆ ಒಂದಾಗಿ ಜಂಟಿ ಸಭೆಯನ್ನು ನಿನ್ನೆ 26-04-2026 ರಂದು ನಗರದ ತನ್ವಿ ತ್ರಿಷಾ ಪಾರ್ಟಿ ಹಾಲ್‌ನಲ್ಲಿ ನಡೆಸಿದವು.

ಸಭೆಗೆ ದೀಪ ಬೆಳಗುವುದರ ಮೂಲಕ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಬೇಕರಿ ಉದ್ಯಮದ ಏಳಿಗೆ, ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರ, ಕಚ್ಚಾ ವಸ್ತುಗಳ ದರ ಏರಿಕೆ ಮತ್ತು ಸದಸ್ಯರ ನಡುವೆ ಪರಸ್ಪರ ಸಹಕಾರದ ಬಗ್ಗೆ ಫಲಪ್ರದ ಚರ್ಚೆ ನಡೆಯಿತು.

ಮೂರು ಸಂಘಗಳು ಒಂದಾಗಿ ಕೆಲಸ ಮಾಡುವ ನಿರ್ಧಾರ ಕೈಗೊಳ್ಳಲಾಯಿತು. ಈ ಒಗ್ಗಟ್ಟು ಮುಂದಿನ ದಿನಗಳಲ್ಲಿ ಉದ್ಯಮಕ್ಕೆ ಹೊಸ ದಿಕ್ಕು ನೀಡಲಿದೆ ಎಂದು ಸದಸ್ಯರು ಅಭಿಪ್ರಾಯಪಟ್ಟರು.

ಕಾರ್ಯಕ್ರಮವನ್ನು ಹಾಸನ ಜಿಲ್ಲೆ ಬೇಕರಿ ಮಾಲೀಕರ ಸಂಘದ ಪದಾಧಿಕಾರಿಗಳು ಅಚ್ಚುಕಟ್ಟಾಗಿ ಆಯೋಜಿಸಿದ್ದರು. ಮೂರು ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ನೂರಾರು ಸದಸ್ಯರು ಭಾಗವಹಿಸಿದ್ದರು.

ಲೋಕಭವನದಲ್ಲಿ ರಾಜಸ್ಥಾನೋತ್ಸವ: ಜನಪದ ಗೀತೆಗಳ ಮೆಲುಕು

ಬೆಂಗಳೂರು 26.04.2026: ಕರ್ನಾಟಕದ ಲೋಕಭವನದ (Lokabhavan) ಗಾಜಿನಮನೆಯಲ್ಲಿ ರಾಜಸ್ಥಾನದ ಸಂಸ್ಥಾಪನಾ (Rajasthan Samsthapana Diwas) ದಿನಾಚರಣೆಯನ್ನು ಆಚರಿಸಲಾಯಿತು. ಕರ್ನಾಟಕದ ಗೌರವಾನ್ವಿತ ರಾಜ್ಯಪಾಲ  ಥಾವರ್ ಚಂದ್ ಗೆಹ್ಲೋಟ್ (Thawarchand Gehlot) ಅವರು ಅಧ್ಯಕ್ಷತೆ ವಹಿಸಿದರು.  ಮತ್ತು ರಾಜಸ್ಥಾನದ ಮುಖ್ಯಮಂತ್ರಿ ಭಜಂಲಾಲ್ ಶರ್ಮಾ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ಲೋಕಭವನದ ಗಾಜಿನಮನೆಯಲ್ಲಿ ನಡೆದ  ರಾಜಸ್ಥಾನ ರಾಜ್ಯದ ಸಂಸ್ಕೃತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾಗಮ ವೈವಿಧ್ಯತೆಯಲ್ಲಿ ಏಕತೆಯ ಸಂದೇಶ ಸಾರಿತು. ರಾಜಸ್ಥಾನದ ಕಲೆ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಬಿಂಬಿಸುವ ವಿವಿಧ ವರ್ಣರಂಜಿತ ಮತ್ತು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಾಯಿತು. ವೈದ್ಯೆ ಡಾ.ರಾಘಶ್ರೀ ಎಸ್ ಅವರ ಶ್ರೀ ವಿನಾಯಕ ನಮೋ ಭರತನಾಟ್ಯದೊಂದಿಗೆ ಶುಭಾರಂಭಗೊಂಡ ಸಾಂಸ್ಕೃತಿಕ ಕಾರ್ಯಕ್ರಮ, ಅದ್ಭುತವಾದ ಪ್ರಸ್ತುತಿಯನ್ನು ನೀಡಿದ ಭಾರತೀಯ ಜಾನಪದ ಗಾಯಕಿ ಶ್ರೀಮತಿ ಮಾಲಿನಿ ಅವಸ್ಥಿ ಅವರ ಕಜ್ರಿ, ಚೈತಿ ಮತ್ತು ಠುಮ್ರಿಯಂತಹ ಶೈಲಿಗಳ ಗೀತೆಗಳು ರಾಜಸ್ಥಾನದ ಜಾನಪದ ಲೋಕವನ್ನೇ ಸೃಷ್ಟಿಸಿತು. ಭಜನ್ ಸಾಮ್ರಾಟ್ ಶ್ರೀ ಪ್ರಕಾಶ್ ಮಾಲಿ ಅವರ ಭಜನಾ ಗೀತೆಗಳು ಭಕ್ತಿಯಲ್ಲಿ ಮಿಂದೆಳಿಸಿತು.

ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಗೌರವಾನ್ವಿತ ರಾಜ್ಯಪಾಲರು, “ಮಾರ್ಚ್ 30 ರಂದು ರಾಜಸ್ಥಾನ ರಾಜ್ಯದ ಸಂಸ್ಥಾಪನಾ ದಿನವಾಗಿದೆ. ಅದರ ಭಾಗವಾಗಿ ಈ ದಿನ ನಾವು ರಾಜಸ್ಥಾನ ಸಂಸ್ಥಾಪನಾ ದಿನವನ್ನು ಹೆಮ್ಮೆ ಮತ್ತು ಉತ್ಸಾಹದಿಂದ ಆಚರಿಸುತ್ತಿದ್ದೇವೆ. “ಏಕ್ ಭಾರತ್ ಶ್ರೇಷ್ಠ ಭಾರತ್” ಯೋಜನೆ ಅಡಿಯಲ್ಲಿ, ನಾವು ಬೆಂಗಳೂರಿನ ಲೋಕಭವನದಲ್ಲಿ ರಾಜಸ್ಥಾನ ಸಂಸ್ಥಾಪನಾ ದಿನವನ್ನು ಹೆಮ್ಮೆಯಿಂದ ಮತ್ತು ಉತ್ಸಾಹದಿಂದ ಆಚರಿಸುತ್ತಿದ್ದೇವೆ. ಈ ದಿನವು ರಾಜಸ್ಥಾನ ರಾಜ್ಯದ ಅದ್ಭುತ ಇತಿಹಾಸ, ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಅಳಿಸಲಾಗದ ಶೌರ್ಯ ಕಥೆಗಳನ್ನು ನೆನಪಿಸಿಕೊಳ್ಳುವ ದಿನವಾಗಿದೆ” ಎಂದರು.

“ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ ಮತ್ತು ಗೌರವಾನ್ವಿತ ಗೃಹ ಸಚಿವ ಶ್ರೀ ಅಮಿತ್ ಶಾ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅವರಿಂದ ಪ್ರೇರಿತರಾಗಿ, ಪ್ರತಿಯೊಂದು ರಾಜ್ಯದ ಸಂಸ್ಥಾಪನಾ ದಿನವನ್ನು ಇತರ ರಾಜ್ಯಗಳಲ್ಲಿಯೂ ಆಚರಿಸಲಾಗುತ್ತದೆ, ಇದು ಸಾಮಾಜಿಕ ಏಕೀಕರಣ ಮತ್ತು ಸಾಂಸ್ಕೃತಿಕ ವಿನಿಮಯವನ್ನು ಉತ್ತೇಜಿಸುತ್ತದೆ” ಎಂದು ಹೇಳಿದರು.

“ರಾಜಸ್ಥಾನವು ಭಾರತದ ಅತಿದೊಡ್ಡ ರಾಜ್ಯವಾಗಿದ್ದು, ಭೌಗೋಳಿಕ ವೈವಿಧ್ಯತೆಗೆ ಹೆಸರುವಾಸಿಯಾಗಿದೆ. ಒಂದು ಬದಿಯಲ್ಲಿ ವಿಶಾಲವಾದ ಥಾರ್ ಮರುಭೂಮಿ ಇದೆ ಮತ್ತು ಇನ್ನೊಂದು ಬದಿಯಲ್ಲಿ ವಿಶ್ವದ ಅತ್ಯಂತ ಹಳೆಯ ಪರ್ವತ ಶ್ರೇಣಿಗಳಲ್ಲಿ ಒಂದಾದ ಅರಾವಳಿ ಶ್ರೇಣಿ ಇದೆ. ಜೈಸಲ್ಮೇರ್‌ನ ಮರಳು ದಿಬ್ಬಗಳು, ಉದಯಪುರದ ಸರೋವರಗಳು, ಜೈಪುರದ ಭವ್ಯತೆ ಮತ್ತು ಜೋಧ್‌ಪುರದ ನೀಲಿ ನಗರ ಎಲ್ಲವೂ ಸೇರಿ ರಾಜಸ್ಥಾನವನ್ನು ಅನನ್ಯವಾಗಿಸುತ್ತದೆ. ರಾಜಸ್ಥಾನದ ಸಂಸ್ಕೃತಿ ಅತ್ಯಂತ ಶ್ರೀಮಂತ ಮತ್ತು ವೈವಿಧ್ಯಮಯವಾಗಿದೆ. ಘೂಮರ್, ಕಲ್ಬೇಲಿಯಾ ಮತ್ತು ಚಕ್ರಿ ನೃತ್ಯಗಳಂತಹ ಜಾನಪದ ನೃತ್ಯಗಳು ಮತ್ತು ಜಾನಪದ ಸಂಗೀತ, ಸುಮಧುರ ರಾಗಗಳು ರಾಜ್ಯದ ಆತ್ಮವನ್ನು ಬಹಿರಂಗಪಡಿಸುತ್ತವೆ. ಪುಷ್ಕರ್ ಜಾತ್ರೆ, ಮಾರು ಮಹೋತ್ಸವ ಮತ್ತು ತೀಜ್ ಸೇರಿದಂತೆ ಅದರ ಜಾತ್ರೆಗಳು ಮತ್ತು ಉತ್ಸವಗಳು ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುತ್ತವೆ” ಎಂದು ಹೇಳಿದರು.

“ರಾಜಸ್ಥಾನ ರಾಜ್ಯವು ಅಭಿವೃದ್ಧಿ, ಪ್ರವಾಸೋದ್ಯಮ, ಕೈಗಾರಿಕೆ, ಶಿಕ್ಷಣ ಮತ್ತು ನಾವೀನ್ಯತೆ ಕ್ಷೇತ್ರಗಳಲ್ಲಿ ಸ್ಥಿರವಾದ ಪ್ರಗತಿಯನ್ನು ಸಾಧಿಸುತ್ತಿದೆ. ಮರುಭೂಮಿಯ ಕಠಿಣ ಪರಿಸ್ಥಿತಿಗಳಲ್ಲಿಯೂ ಸಹ, ಅದರ ಜನರು ತಮ್ಮ ಕಠಿಣ ಪರಿಶ್ರಮ, ತಾಳ್ಮೆ ಮತ್ತು ದೃಢಸಂಕಲ್ಪದ ಮೂಲಕ ಪ್ರಗತಿಯ ಹೊಸ ಕಥೆಗಳನ್ನು ಬರೆಯುತ್ತಿದ್ದಾರೆ. “ಏಕ್ ಭಾರತ್, ಶ್ರೇಷ್ಠ ಭಾರತ್” ಎಂಬ ಸಿದ್ಧಾಂತದಿಂದ ಪ್ರೇರಿತರಾಗಿ, ಅಂತಹ ಕಾರ್ಯಕ್ರಮಗಳು ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಹಾಗೂ ರಾಷ್ಟ್ರೀಯ ಏಕತೆ ಮತ್ತು ಪರಸ್ಪರ ತಿಳುವಳಿಕೆಯ ಮನೋಭಾವವನ್ನು ಹೆಚ್ಚಿಸುತ್ತಿವೆ” ಎಂದು ತಿಳಿಸಿದರು.

“ಎಲ್ಲಾ ರಾಜ್ಯಗಳು ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆಯನ್ನು ಹೊಂದಿವೆ. ದೇಶದ ಅಭಿವೃದ್ಧಿಗಾಗಿ ಒಟ್ಟಾಗಿ ಕೆಲಸ ಮಾಡಬೇಕಾಗಿದೆ. 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪಕ್ಕೆ ಬದ್ಧರಾಗುವ ಮೂಲಕ ಕೊಡುಗೆ ನೀಡುವುದು ನಮ್ಮ ಜವಾಬ್ದಾರಿಯಾಗಿದೆ” ಎಂದು ಕರೆ ನೀಡಿದರು.

“ಇಂದು ನಮ್ಮ ನಡುವೆ ಇದ್ದಾರೆ, ಅವಧಿ, ಬುಂಡೇಲಿ ಮತ್ತು ಭೋಜ್‌ಪುರಿ ಜಾನಪದ ಸಂಗೀತಕ್ಕೆ ಹೆಸರುವಾಸಿಯಾದ ಪ್ರಸಿದ್ಧ ಭಾರತೀಯ ಜಾನಪದ ಗಾಯಕಿ ಶ್ರೀಮತಿ ಮಾಲಿನಿ ಅವಸ್ಥಿ. ಕಜ್ರಿ, ಚೈತಿ ಮತ್ತು ಠುಮ್ರಿಯಂತಹ ಶೈಲಿಗಳಲ್ಲಿ ಅವರಿಗೆ ವಿಶೇಷ ಪ್ರತಿಭೆ ಇದೆ. ಅವರ ಗಾಯನವು ಭಾರತೀಯ ಸಂಸ್ಕೃತಿ ಮತ್ತು ಜಾನಪದ ಜೀವನವನ್ನು ಪ್ರತಿಬಿಂಬಿಸುತ್ತದೆ. 2016 ರಲ್ಲಿ, ಅವರಿಗೆ ಪದ್ಮಶ್ರೀ ಮತ್ತು ಯಶ್ ಭಾರತಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಅವರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಜಾನಪದ ಸಂಗೀತವನ್ನು ಜನಪ್ರಿಯಗೊಳಿಸುವಲ್ಲಿ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. ಭಜನ್ ಸಾಮ್ರಾಟ್ ಶ್ರೀ ಪ್ರಕಾಶ್ ಮಾಲಿ, ಅವರು ತಮ್ಮ ಭಜನೆಗಳಿಂದ ನಮ್ಮನ್ನು ಮಂತ್ರಮುಗ್ಧಗೊಳಿಸುತ್ತಾರೆ. ಈ ಇಬ್ಬರು ಸಾಧಕರು ಲೋಕಭವನಕ್ಕೆ ಭೇಟಿ ನೀಡಿ, ಆಕರ್ಷಕ ಪ್ರದರ್ಶನಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ” ಎಂದು ಹೇಳಿದರು.

ದೇಶದ ಎಲ್ಲಾ ಲೋಕಭವನಗಳಲ್ಲಿ ಎಲ್ಲಾ ರಾಜ್ಯಗಳ ಸಂಸ್ಥಾಪನಾ ದಿನವನ್ನು ಆಚರಿಸಲು ನಿರ್ಧರಿಸಿದ್ದಕ್ಕಾಗಿ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಗೌರವಾನ್ವಿತ ಗೃಹ ಸಚಿವ ಶ್ರೀ ಅಮಿತ್ ಶಾ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ರಾಜಸ್ಥಾನದ ಮುಖ್ಯಮಂತ್ರಿ ಭಜಂಲಾಲ್ ಶರ್ಮಾ ಅವರು “ ಕರ್ನಾಟಕದ ನೆಲದಲ್ಲಿ ಲೋಕಭವನದಲ್ಲಿ ರಾಜಸ್ಥಾನ ಸಂಸ್ಥಾಪನಾ ದಿನಾಚರಣೆ ಆಚರಿಸುತ್ತಿರುವುದು ಬಹಳ ಸಂತಸ ತಂದಿದೆ. ಈ ಕಾರ್ಯಕ್ಕಾಗಿ ಕರ್ನಾಟಕದ ಜನತೆಗೆ ಹಾಗೂ ಗೌರವಾನ್ವಿತ ರಾಜ್ಯಪಾಲರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಾವೆಲ್ಲರೂ ರಾಷ್ಟ್ರ ಪ್ರೇಮವನ್ನು ಹೊಂದಿದ್ದು, ದೇಶಕ್ಕಾಗಿ ತ್ಯಾಗ ಮತ್ತು ಸಮರ್ಪಣೆ ಭಾವನೆ ಹೊಂದಿದ್ದೇವೆ. ಮಾನ್ಯ ಪ್ರಧಾನ ಮಂತ್ರಿಗಳ ಏಕ ಭಾರತ ಶ್ರೇಷ್ಟ ಭಾರತ ಯೋಜನೆಯಡಿಯಲ್ಲಿ ಈ ದಿನವನ್ನು ಆಚರಿಸುತ್ತಿರುವುದು ನಮ್ಮ ದೇಶದ ಅನನ್ಯ ಅಸ್ಮಿತೆಯನ್ನು, ವಿವಿಧತೆಯಲ್ಲಿ ಏಕತೆಯ ಪರಿಕಲ್ಪನೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಮತ್ತೊಂದು ರಾಜ್ಯದ ಸಂಸ್ಥಾಪನಾ ದಿನವನ್ನು ಆಚರಿಸುವುದು ಸಾಮಾಜಿಕ ಏಕೀಕರಣ ಮತ್ತು ಸಾಂಸ್ಕೃತಿಕ ವಿನಿಮಯವನ್ನು ಉತ್ತೇಜಿಸುತ್ತದೆ. ರಾಜಸ್ಥಾನ ದೇಶಕ್ಕಾಗಿ ತ್ಯಾಗ ಮತ್ತು ಸಮರ್ಪಣೆ ಮಾಡಿದ ವೀರರ ಭೂಮಿ. ಶಕ್ತಿ, ಭಕ್ತಿಯ ಜೊತೆಗೆ ಶೂರ, ವೀರರ ಇರುವ ಭೂಮಿಯಾಗಿದೆ. ಹಾಗಾಗಿ, ನಾವೆಲ್ಲರೂ ಒಗ್ಗಟ್ಟಾಗಿ ದೇಶಕ್ಕಾಗಿ ಶ್ರಮಿಸೋಣ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯರಾದ ಲೆಹರ್ ಸಿಂಗ್ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಶ್ರೀವಿದ್ಯಾ ಚೌಡೇಶ್ವರಿ ದೇವಸ್ಥಾನದ ಬಾಲಮಂಜುನಾಥ ಸ್ವಾಮೀಜಿ ವಿರುದ್ಧದ ಪೋಕ್ಸೊ – ಅತ್ಯಾಚಾರ ಪ್ರಕರಣ ರದ್ದು

ಬೆಂಗಳೂರು :  ತುಮಕೂರಿನ ಕುಣಿಗಲ್ (Kunigal) ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿ ಹಂಗರಹಳ್ಳಿಯ ಶ್ರೀವಿದ್ಯಾ ಚೌಡೇಶ್ವರಿ ದೇವಸ್ಥಾನದ  (Sri Vidya Chowdeshwari Temple) ಎನ್ ಮಂಜುನಾಥ್ ಅಲಿಯಾಸ್ ಬಾಲಮಂಜುನಾಥ ಸ್ವಾಮೀಜಿ ವಿರುದ್ಧದ ಪೋಕ್ಸೊ  (Poxo) ಮತ್ತು ಅತ್ಯಾಚಾರ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ (Karnataka High Court) ಶನಿವಾರ ವಜಾಗೊಳಿಸಿದೆ.
ಪೋಕ್ಸೊ ಪ್ರಕರಣ ವಜಾ ಕೋರಿ ಎನ್ ಮಂಜುನಾಥ್ ಅಲಿಯಾಸ್ ಬಾಲಮಂಜುನಾಥ ಸ್ವಾಮೀಜಿ ಮತ್ತು ಅವರ ಆಪ್ತ ಸಹಾಯಕ ಕೆ ಅಭಿಷೇಕ್ ಸಲ್ಲಿಸಿದ್ದ ಅರ್ಜಿ ಮತ್ತು ಬಾಲಮಂಜುನಾಥ ಸ್ವಾಮೀಜಿಗೆ ಜಾಮೀನು ಮಂಜೂರು ಮಾಡಿದ್ದನ್ನು ಪ್ರಶ್ನಿಸಿ ಸಂತ್ರಸ್ತೆ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ, ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪ್ರಕಟಿಸಿದೆ.
“ಅರ್ಜಿದಾರರಾದ ಎನ್ ಮಂಜುನಾಥ್ ಅಲಿಯಾಸ್ ಬಾಲಮಂಜುನಾಥ ಸ್ವಾಮೀಜಿ ಮತ್ತು ಕೆ ಅಭಿಲಾಷ್ ಸಲ್ಲಿಸಿದ್ದ ಅರ್ಜಿಗಳನ್ನು ಪುರಸ್ಕರಿಸಲಾಗಿದ್ದು, ಅವರ ವಿರುದ್ಧದ ಪ್ರಕರಣ ರದ್ದುಪಡಿಸಲಾಗಿದೆ. ಇದರ ಪರಿಣಾಮವಾಗಿ ಈ ಇಬ್ಬರಿಗೆ ಜಾಮೀನು ಮಂಜೂರು ಮಾಡಿದ್ದನ್ನು ಪ್ರಶ್ನಿಸಿ ಸಂತ್ರಸ್ತೆ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಲಾಗಿದೆ” ಎಂದು ನ್ಯಾಯಾಲಯ ಆದೇಶಿಸಿತು. ವಿಸ್ತೃತ ಆದೇಶ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.
ಪ್ರಕರಣದ ಹಿನ್ನೆಲೆ: ಹುಲಿಯೂರು ದುರ್ಗ–ಮಾಗಡಿ ರಸ್ತೆಯಲ್ಲಿರುವ ಕಾಡು ಶನೇಶ್ವರ ದೇವಸ್ಥಾನದಲ್ಲಿ ಅರ್ಚಕ ವೃತ್ತಿ ಮಾಡಿಕೊಂಡಿದ್ದ ಮಂಜುನಾಥ ಸ್ವಾಮೀಜಿ ಅವರ ಬಳಿಕ ಆರೋಗ್ಯ ಸಮಸ್ಯೆಗೆ ಪರಿಹಾರ ಕೇಳಲು ಸಂತ್ರಸ್ತೆಯು 15 ವರ್ಷದವಳಿದ್ದಾಗ ತಂದೆಯ ಜೊತೆ ಮಠಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಅಷ್ಟಮಂಗಳ ಪ್ರಾಣಾಸನ ಮಾಡಿಸುವ ವೇಳೆ ಪರಿಸ್ಥಿತಿಯ ಲಾಭ ಪಡೆದು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಆನಂತರ ವಿಡಿಯೊ ಕರೆ ಮಾಡಿ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದರು ಎಂದು ಸಂತ್ರಸ್ತೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಹುಲಿಯೂರು ದುರ್ಗ ಪೊಲೀಸರು ಪೋಕ್ಸೊ ಕಾಯಿದೆ ಸೆಕ್ಷನ್ 4 (ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ), ಸೆಕ್ಷನ್ 6 (ಲೈಂಗಿಕ ತೃಷೆ ತೀರಿಸಿಕೊಳ್ಳಲು ಕ್ರೂರ ಪ್ರಯತ್ನ), ಸೆಕ್ಷನ್ 11(iv) (ಲೈಂಗಿಕ ದೌರ್ಜನ್ಯ ಎಸಗಲು ನೀಲಿ ಚಿತ್ರ ತೋರಿಕೆ), ಸೆಕ್ಷನ್ 12 (ಮಗುವಿಗೆ ಲೈಂಗಿಕ ಕಿರುಕುಳ). ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 66(E) (ಖಾಸಗಿತನದ ಉಲ್ಲಂಘನೆ) ಮತ್ತು ಸೆಕ್ಷನ್ 67(A) (ಕೃತ್ಯದ ಚಿತ್ರೀಕರಿಸಿದ ದೃಶ್ಯದ ಹಂಚಿಕೆ); ಐಪಿಸಿ ಸೆಕ್ಷನ್ 376 (ಅತ್ಯಾಚಾರ), 354(A)(1)(i) (ಅಸಹಜ ಲೈಂಗಿಕ ನಡವಳಿಕೆ), 354(A)(1)(ii) (ಲೈಂಗಿಕ ಕೃತ್ಯಕ್ಕೆ ಬೇಡಿಕೆ), ಸೆಕ್ಷನ್ 417ವಂಚನೆ, ಸೆಕ್ಷನ್ 342 (ಅಕ್ರಮ ಬಂಧನ), ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ) ಜೊತೆಗೆ ಸೆಕ್ಷನ್ 34 (ಸಮಾನ ಉದ್ದೇಶ); ಧಾರ್ಮಿಕ ಸಂಸ್ಥೆಗಳ (ದುರ್ಬಳಕೆ ತಡೆ) ಕಾಯಿದೆ ಸೆಕ್ಷನ್ 3 (ಕಾನೂನುಬಾಹಿರ ಚಟುವಟಿಕೆಗಳಿಗೆ ಧಾರ್ಮಿಕ ಸಂಸ್ಥೆಗಳ ದುರ್ಬಳಕೆ), ಶಸ್ತ್ರಾಸ್ತ್ರ ಕಾಯಿದೆ ಸೆಕ್ಷನ್ 30ರ (ಕಾನೂನುಬಾಹಿರವಾಗಿ ಶಸ್ತ್ರಾಸ್ತ್ರ ಬಳಕೆ) ಅಡಿ ಪ್ರಕರಣ ದಾಖಲಿಸಿದ್ದರು.

:: – ಹಾಸ್ಯ :: — :: ಎಲ್ಲಿಗೆ ಹೊರಟ್ಯೋ ವಿಕಟಕವಿ ಬಾ ಟೀ ಕುಡಿಸು..

ಬೆಳಿಗ್ಗೆ ಎಂಟು ಗಂಟೆ. ಸೋಮುವಾರ ವಾರದ ಪೂಜೆಗೆ ಹೂ ಹಣ್ಣು, ತಿಂಡಿಗೆ ತರಕಾರಿ ತರಲು ನಗರದ ಕಟ್ಟಿನಕೆರೆ ಮಾರ್ಕೇಟಿಗೆ ಬಂದಿದ್ದೆ. ಪಿಕ್ಚರ್ ಪ್ಯಾಲೇಸ್ ಥಿಯೇಟರ್‌ನಲ್ಲಿ ಹಳೇ ಚಿತ್ರದ ಪೋಸ್ಟರ್ ಕಣ್ಣಿಗೆ ಬಿತ್ತು. ಅದು ಅಂದಿನ ಕಾಲದ ಬಾಂಡ್ ಸಿನಿಮಾ ಜೇಡರ ಬಲೆ. ವಿದ್ಯಾರ್ಥಿ ದಿನಗಳಲ್ಲಿ ನಮ್ಮೂರ ಶ್ರೀ ಯೋಗನರಸಿಂಹಸ್ವಾಮಿ ಜಾತ್ರೆಗೆ ನೋಡಿದ್ದೆ. ಅದೇನು ಭಯಂಕರ ಹೊಡೆದಾಟ, ನಮ್ಮೂರ ಜಯಣ್ಣ, ಎತ್ತಿನಗಾಡಿಗೆ ಪೋಸ್ಟರ್ ಅಳವಡಿಸಿ ‘ ನೋಡಲು ಮರೆಯದಿರಿ. ಮರೆತು ಮರುಗದಿರಿ. ಭಯಂಕರ ಹೊಡೆದಾಟಗಳಿಂದ ಕೂಡಿದ ಚಿತ್ರ. ಜೇಡರಬಲೆ..ಎಂ.ಪಿ.ಶ0ಕರ್ ಕೊಲೆ.. ಜಯಣ್ಣನ ರೋಚಕ ಪ್ರಚಾರಕ್ಕೆ ಆಕರ್ಷಿತನಾಗಿ ಟೆಂಟ್ ಸಿನಿಮಾದಲ್ಲಿ ಫ್ರಂಟ್ (ನೆಲ) ನಲ್ಲಿ ಕುಳಿತು ಸಿನಿಮಾ ನೋಡಿದ್ದೆ. ದಡ್.! ನನ್ನ ಕುತ್ತಿಗೆ ಮೇಲೆ ಬಲವಾದ ಪೆಟ್ಟು ಬಿದ್ದು ತಿರುಗಿ ನೋಡಿದೆ. ಕಟ್ಟುಮಸ್ತಾದ ಆಳು! ಕನ್ನಡದ ಕಟ್ಟಾಳು! ಮೀಸೆ ಗೋಪಾಲ. ಬಿದ್ದ ಏಟಿನ ನೋವಿಗೆ ದವಡೆಗೆ ಹೊಡೆಯುವ ಸಿಟ್ಟು ಬಂದರೂ ಹೊಡೆಯಲಾದೀತೆ ಈ ಬಡಕಲು ಶರೀರದ ಕವಿಗೆ.! ಶಕುನಿಯ ಮಾಯ ನೋಟದಂತೆ ಪೋಸ್ ಕೊಟ್ಟು ವಕ್ರನೋಟದಿ ನಕ್ಕೆ.
“ಎಲ್ಲಿಗೆ ಹೊರಟ್ಯೋ ವಿಕಟಕವಿ. ಬಾ ಟೀ ಕುಡಿಸು..
” ತರಕಾರಿ ತರಲು ಹೋಗಬೇಕು ಗುರು.. “ ಹೋಗುವೆ ಬಾ. ಅಪರೂಪಕ್ಕೆ ಸಿಕ್ಕಿದ್ದೀಯ. ಗುರು ಭವನದಲ್ಲಿ ಟೀ ಕುಡಿಸು ಬಾ.. ಎಂದು ಹೊರಟ ಕಟ್ಟಾಳುವನ್ನು ಹಿಂಬಾಲಿಸಿದೆ. ಗುರು ಭವನದಲ್ಲಿ ನಮ್ಮ ಗುರುಗೋಪಾಲರು ಒಂದು ಮಸಾಲೆ ದೋಸೆಗೆ ಆರ್ಡರ್ ಮಾಡಿದರು.
“ ನಿನಗೆ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಸಿಕ್ಕಿಲ್ಲವೇನೋ ಕವಿ.. ದೋಸೆಯನ್ನು ಬಾಯಿಗೆ ತುರುಕುತ್ತಾ ಕೇಳಿದರು ಗುರುಗಳು.
“ ಇಲ್ಲಾ ಗುರುವೇ. ಪ್ರಶಸ್ತಿಗೆ ಅರ್ಜಿ ಹಾಕಿ ಪ್ರಶಸ್ತಿ ಪಡೆಯಬೇಕೆ? ಗುರುತಿಸಿಕೊಡುವುದು ಧರ್ಮ ಅಲ್ಲವೇ..?
“ಅಯ್ಯೋ ನಿನ್ನ ಕರ್ಮವೇ.! ಎಷ್ಟು ಪುಸ್ತಕ ಬರೆದಿದ್ದಿಯ..?
“ ಅರವತ್ತು ದಾಟಿದೆ.. ವಯಸ್ಸು ಅರವತ್ನಾಲ್ಕು ದಾಟಿದೆ.
“ ಜಿಲ್ಲೆದು ಆಗಿದೆ ಅಲ್ವೆ.? ಹೌದು ಬಹಳ ಹಿಂದೆಯೇ ಆಗಿದೆ..
ಸರಿ, ಏನಾದ್ರೂ ಮಾಡುವ.. ಈಗ ಒಂದು ಟೀಗೆ ಆರ್ಡರ್ ಮಾಡು..ಬೈಟು ಹೇಳಬೇಡ.
“ಸರಿ ಅಣ್ಣ.. ಎಂದು ಬಾಯಿಬಿಟ್ಟು ಹೇಳಿ ವಯಸ್ಸಿನಲ್ಲಿ ನನಗಿಂತ ಸಣ್ಣ..ಎಂದು ಗೊಣಗಿಕೊಂಡೆ. ‘ಡರ್..! ಎಂದು ತೇಗಿ ‘ಹುಳಿ ತೇಗೆಂದು ಗೊಣಗಿದರು ಗುರು ದ್ರೋಣಚಾರ್ಯರು ಬಿಲ್ಲು ಬಿಡಲಿಲ್ಲ. ನಾನು ಕೊಟ್ಟೆ. ಹೋಟೆಲ್ ನಿಂದ ಹೊರಗೆ ಬಂದೆವು. ಅಣ್ಣ ನೀವೀಗ ಫಿಲಂ ಸೆನ್ಸಾರ್ ಮಂಡಳಿಯ ಸದಸ್ಯರಲ್ಲವೇ..
“ ಕಟ್.! ಹೇ ವಿಕಟಕವಿ ಆ ಸೆನ್ಸಾರ್ ವಿಷಯವೆಲ್ಲಾ ಹಾದಿ ಬೀದಿಯಲ್ಲಿ ಮಾತನಾಡಬಾರದು.. ಎಂದು ನನ್ನ ಮಾತಿಗೆ ಕತ್ತರಿ ಹಾಕಿ “ಈಗ ಹೇಳು ನಿನ್ನ ಬರವಣಿಗೆ ಹೇಗೆ ಸಾಗಿದೆ. ಬರೇ ಚುಟುಕ ಬರೆದುಕೊಂಡು ಸಮಾಜವನ್ನು ಕುಟುಕುತ್ತಿರುವೆಯಾ ಹೇಗೆ ಕಟುಕ..?
“ಅಣ್ಣಾವರ ಮಾತು ಯಾವಾಗಲೂ ಕಟುವೇ.! ಏನೂ ಮಾಡುವುದು ಮಾತು ಎಷ್ಟೇ ಕಹಿಯಾದರೂ ಅರಗಿಸಿಕೊಳ್ಳಲೇಬೇಕು.
‘ಹಾಂ ಗೋಪಾಲ್ ಜೀ.. ದಿನಾ ಬೆಳಿಗ್ಗೆ ನಮ್ಮ ಹಾಸನ್ ಚುಟುಕು ಕವಿ ಕುಮಾರ್ ಅವರು ಹೊಸ ಹೊಸ ಹಸನಾದ ಕವಿತೆ ಹೊಸೆದು ವ್ಯಾಟ್ಸಪ್‌ನಲ್ಲಿ ನಿಮ್ಮ ನಂಬರನ್ನು ನಮ್ಮ ರೈರ‍್ಸ್ ಗ್ರೂ:ಪ್‌ಗೆ ಸೇರಿಸಲೇ..
“ ಯಾವುದೇ ಕಾರಣಕ್ಕೂ ಬೇಡ. ನಾನು ಈಗಾಗಾಲೇ ಸಾಕಷ್ಟು ರೈರ‍್ಸ್ ಗ್ರೂಪ್ ನಿಂದ ಲೆಫ್ಟ್ ಆಗಿದ್ದೇನೆ. ಇರಲಿ, ನೀನು ಆಗೆಲ್ಲಾ ಲೋಕಲ್ ಪೇಪರ್ ನಲ್ಲಿ ಚುಟುಕು ಬರೀತ್ತಿದ್ದೆಯೆಲ್ಲಾ.. ಇನ್ನೂ ಜಿಲ್ಲೆಯಲ್ಲೇ ಉಳಿದಿದ್ದಿಯೋ.. ಸ್ಟೇಟ್‌ಗೆ ಪ್ರಮೋಟ್ ಆಗಿದ್ದೀಯೊ..? ಮೊನ್ನೆ ಯಾವುದೋ ನ್ಯೂಸ್ ಪೇಪರ್‌ನಲ್ಲಿ ನಿನ್ನ ನಾನ್ಸೆನ್ಸ್ ಪೊಯೆಂ ನೋಡಿದೆ. ಸರಿ, ಹೇಗಾದ್ರೂ ರ‍್ಕೊಂಡು ಸಾಯಿ. ಈಗ ನನ್ನ ತಲೆ ಬಿಸಿ ಆಗಿದೆ. ಒಂದು ಬರಕ್ಲೇ ಸಿಗರೇಟು ಕೊಡಿಸು ಬಾ ಎಂದು ಬೀಡಾ ಅಂಗಡಿಗೆ ಕರೆದೊಯ್ದರು. ಅಣ್ಣನನ್ನು ಬೇಗ ಬೀಳ್ಕೊಡಬೇಕು. ಇಲ್ಲವಾದರೇ ಬೀಳುತ್ತೆ ಬರೆ.!
“ಇತ್ತೀಚಿಗೆ ನವ್ಯ ಕವಿಗಳು ಜಡೆ ಕವಿತೆ ಬರೆಯುತ್ತಿದ್ದಾರಲ್ಲಾ. ನೀನ್ಯಾವ ಜಡೆಗೆ ಕೈ ಹಾಕಿಲ್ಲವೇನೋ ವಿಕಟಕವಿ. ಸಿಗರೇಟ್ ಹೊಗೆ ಉಗುಳಿ ಅಣ್ಣ ನಿರಾಳ ಮನಸ್ಥಿತಿಗೆ ಬಂದರು.
‘ಗೋಪಾಲು, ನಾನಿನ್ನು ಜಡೆ ಕವಿತೆ ಬರೆಯಲು ಪ್ರಯತ್ನಿಸಿಲ್ಲ. ಆದರೆ ಹಿಂದೊಮ್ಮೆ ಟೂ ಲೈನ್ ಚುಟುಕ ಬರೆದಿದ್ದೆ. ಅದನ್ನು ಇಲ್ಲೇ ಈಗಲೇ ವಾಚಿಸುವೇ ಕೇಳಿ ಪ್ಲೀಸ್..
ದ್ರೌಪದಿ ತೊಟ್ಟಿದ್ದರೆ ಚೂಡಿದಾರ
ದುಶ್ಯಾಸನ ಎಳೆಯುತ್ತಿದ್ದನೆ ದಾರ..
“ಲೇ ಪ್ರಾಸ ಕವಿ, ನೀನು ಹೀಗೆ ಹಾದಿ ಬೀದಿಯಲ್ಲೆಲ್ಲಾ ಚುಟುಕು ವಾಚಿಸಿದರೆ ಅಟ್ಟಿಬಿಡುವೆ ರುದ್ರಪಟ್ಟಣಕ್ಕೆ.! ಲೇ ಕವಿ, ಯಾಕೋ ಹೊಟ್ಟೆನೋವು ಶುರು ಆಗ್ತಾ ಇದೆ. ಈಗ ಗ್ಯಾಸ್‌ಗೆ ಟ್ರಬಲ್ ಟ್ಯಮ್. ಅವನ್ಯಾರೋ, ಹಳೇ ದೋಸೆ ಮಗಚಿ ಹಾಕಿ ನನ್ನ ಹೊಟ್ಟೆಗೆ ಗ್ಯಾಸ್ ತಂದಿಟ್ಟದ್ದಾನೆ. ಸರಿ ನೀನು ಮನೆಗೆ ಹೊರಡು. ನಾನು ಹೊರಡುತ್ತೇನೆ. ಇದೇ ಇವತ್ತಿನ ಮೊದಲನೇ ಪಾಠ. ಅಂದ್ಹಾಗೆ ನಿನ್ನ ಚುಟುಕು ಕೇಳಿ ನನಗೆ ನೆನಪಾಯಿತು. ಇವತ್ತು ಹಾಸನಾಂಬ ಕಲಾಕ್ಷೇತ್ರದಲ್ಲಿ ಕುರುಕ್ಷೇತ್ರ ನಾಟಕದಲ್ಲಿ ದ್ರೌಪದಿ ವಸ್ತಾçಪಹರಣ ದೃಶ್ಯ ವೀಕ್ಷಿಸಿ ಸೆನ್ಸಾರ್ ಮಂಡಳಿಗೆ ವರದಿ ಕಳಿಸಬೇಕು.. ಎಂದು ಸಿಗರೇಟ್ ತುಂಡನ್ನು ಕಾಲಿನಿಂದ ಹೊಸಕಿ ದುಶ್ಯಾಸನನಂತೆ ನಕ್ಕನು.
ಅಯ್ಯೋ, ಗೋಪಾಲ ಕುರುಕ್ಷೇತ್ರ ನಾಟಕದಲ್ಲಿ ಆ ದೃಶ್ಯ ಇಲ್ಲ..!

ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯.

ಶಿವಾಜಿ ಮಹಾರಾಜರ 399ನೇ ಜಯಂತಿ: ಮಲ್ಲೇಶ್ವರ ಕಾಡುಮಲ್ಲಿಕಾರ್ಜುನ ದೇವಸ್ಥಾನದಿಂದ ಬೃಹತ್ ಮೆರವಣಿಗೆ

BENGALRU : ಛತ್ರಪತಿ ಶಿವಾಜಿ ಮಹಾರಾಜರ 399ನೇ ಜಯಂತಿಯ (Shivaji Jayanthi) ಸಂದರ್ಭದಲ್ಲಿ, ಶಿವ ಗರ್ಜನೆ ಯುವ ಸೇನೆಯು (Shiva Garjane Yuva Sene) ಮಲ್ಲೇಶ್ವರಂನ ಕಾಡು ಮಲ್ಲಿಕಾರ್ಜುನ ದೇವಸ್ಥಾನದಿಂದ ಬೃಹತ್ ಮೆರವಣಿಗೆಯನ್ನು ಪ್ರಾರಂಭಿಸಿತು. ವಿಜಯನಗರ ಮಾರುತಿ ಮೆಡಿಕಲ್ಸ್‌ನ (Maruthi Medicals) ಗೋಸೇವಕ ಮಹೇಂದ್ರ ಮುನೋತ್, ಬಿಜೆಪಿ ನಾಯಕ ಸಪ್ತಗಿರಿ ಗೌಡ, ಗಣೇಶ್ ರಾವ್ ಅವರು ಹಿಂದೂ ಧ್ವಜಾರೋಹಣ ಮಾಡುವ ಮೂಲಕ ಮೆರವಣಿಗೆಯನ್ನು ಉದ್ಘಾಟಿಸಿದರು.

ಮೆರವಣಿಗೆಯಲ್ಲಿ, ಕೇಸರಿ ಪೇಟ ಧರಿಸಿದ ಹೆಚ್ಚಿನ ಸಂಖ್ಯೆಯ ಪುರುಷರು ಮತ್ತು ಮಹಿಳೆಯರು ಜೈ ಭವಾನಿ ಜೈ ಶಿವಾಜಿ ಎಂದು ಜಪಿಸಲು ಪ್ರಾರಂಭಿಸಿದರು, ಮತ್ತು ಅಲ್ಲಿನ ವಾತಾವರಣವು ಹಿಂದೂ ಧರ್ಮಕ್ಕೆ ಪರಿವರ್ತಿತವಾಯಿತು. ಮೆರವಣಿಗೆಯಲ್ಲಿ ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು. ಸೇನಾ ಅಧ್ಯಕ್ಷ ಪ್ರವೀಣ್, ಉಪಾಧ್ಯಕ್ಷ ಶಿವಶಂಕರ್ ಪವಾರ್, ಸಚಿವ ಕೇಶವ್ ರಾವ್ ಚೌಹಾಣ್ ಮತ್ತು ಇತರ ಸದಸ್ಯರು ಅತಿಥಿಗಳನ್ನು ಗೌರವಿಸಿದರು.

 

Divine Wisdom Global Laureate Honour Dr. Ravindra A. Kushtagi Receives International Recognition

Hosur, April 25: Renowned thinker and literary scholar Dr. Ravindra A. Kushtagi has been conferred the prestigious “Divine Wisdom Global Laureate” award by the Asia International Culture Academy.

The award was presented at a समारोह held in Hosur, Tamil Nadu, in the presence of Dr. Krishnamurthy Mahaswamiji, President of Sri Kshetra Dharmadhwaja Pratishtana, and Dr. B. M. Ballari of Swami Vivekananda Educational Institution. The organisers stated that the honour recognises Dr. Kushtagi’s multifaceted achievements, particularly his contributions to Bhagavata-based spiritual literature.


A Life of Balance: Profession, Detachment, and Thought

Dr. Kushtagi’s life is not a conflict between profession and renunciation, but a harmonious blend of both. Having served for decades in the mechanical engineering field, he has seamlessly integrated spirituality and literature into his journey of self-realisation.

Born on November 15, 1957, in Kalaburagi, he was raised under the value-based guidance of his parents, Late Anantacharya Kushtagi and Late Seethabai. Discipline, hard work, and ethical living formed the foundation of his personality from an early age.


Academic Excellence and Professional Career

He completed his primary and secondary education in Raichur and Shahabad, and graduated with distinction in Mechanical Engineering in 1980 from institutions in Kalaburagi.

He served for nearly 35 years in reputed organisations such as Larsen & Toubro and Integrated Electric Company. Retiring in 2016 as Chief Purchase Manager, he earned recognition for his integrity and managerial excellence.


A New Chapter: From Retirement to Literary Pursuit

Post-retirement marked the beginning of a new phase in his life. Inspired by deep contemplation of the Bhagavata, he turned towards literary creation.

Since 2020, his notable works include:

  • Krishna Kathamruta – Based on the Tenth Skandha of Srimad Bhagavata
  • Srimad Bhagavata in Saptaha Tradition
  • Harivamsha – The Khila (appendix) of the Mahabharata (published under TTD, 2024)

Through these works, he has successfully made Bhagavata philosophy accessible to the common reader.


Taking Sanatana Thought to Global Readers

By translating his works into English—BhagavathaSrimad Bhagavata Saptaha, and Samunnatha—Dr. Kushtagi has introduced Indian Sanatana philosophy to a global audience. His writing is marked by clarity and simplicity in presenting profound philosophical concepts.


Awards and Recognitions

  • 2023: Honour by Atmashree Kannada Cultural Foundation
  • 2024: Honorary Doctorate – Yoga University of the Americas, Florida (USA)
  • 2025: Sri Tyagaraja Ratna Award – Mulakanadu Mahasangha
  • 2025: Felicitation by Maitreyi Kannada Mahila Haridasa Trust
  • 2026: Haridasa Anugraha Award – Srinivasa Utsava Balaga
  • 2026: Datti Award – Kannada Sahitya Parishat, Raichur

A Memorable Moment

In 2025, he had the rare opportunity to present his English works to legendary Indian actor Amitabh Bachchan—a moment he cherishes as one of the most memorable milestones in his life.


Core Values and Philosophy

Guided by the motto, “Bhagavata is my breath, Bhagavata is my soul,” Dr. Kushtagi embodies simplicity, depth, and scholarly dedication. His thoughts are deeply rooted in family values, reverence for teachers, and respect for cultural heritage.

“ಮಹಾಭಾರತ ದರ್ಶನ” ಕೃತಿ ಬಿಡುಗಡೆ – ಗಾನ ಕಮಲ–2026 ಗೌರವ ಪ್ರದಾನ

“ನರಸಿಂಹ ಶತನಾದಾರ್ಚನಮ್” ಸಂಗೀತ–ಸಾಹಿತ್ಯ ಸಂಭ್ರಮ ಯಶಸ್ವಿ

ಬೆಂಗಳೂರು, ಏಪ್ರಿಲ್ 25: ಗಾನಕಮಲ  ಅಕಾಡೆಮಿ (ನೊಂ) (Ganakamala Academy) ಹಾಗೂ ಬಿ.ಹೆಚ್.ಎಸ್. (BHS Higher Education) ಉನ್ನತ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾದ “ನರಸಿಂಹ ಶತನಾದಾರ್ಚನಮ್” (Narasimha Shatanadarchanam) ವಿಶೇಷ ಸಂಗೀತ–ಸಾಹಿತ್ಯ ಕಾರ್ಯಕ್ರಮವು ಜಯನಗರದ ವಿಜಯ ಪದವಿ ಪೂರ್ವ ಕಾಲೇಜಿನ ಶ್ರೀ ರಾಮಸ್ವಾಮಿ ಸಭಾಂಗಣದಲ್ಲಿ ವೈಭವದಿಂದ ನೆರವೇರಿತು.

ಗಂಜಿಗುಂಟೆ ಶ್ರೀ ನರಸಿಂಹಮೂರ್ತಿ ಅವರ ಶತಮಾನೋತ್ಸವದ ಅಂಗವಾಗಿ ನಡೆದ ಈ ಕಾರ್ಯಕ್ರಮವನ್ನು ನಾಡೋಜ ಡಾ. ಹಂಪ ನಾಗರಾಜಯ್ಯ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ  ಮೈಸೂರಿನ ಮಹಿಮಾ ಪ್ರಕಾಶನ ಪ್ರಕಟಿಸಿರುವ   ಪುರಾಣ ಭಾಸ್ಕರ ಡಾ. ಕಂಬಾಲೂರು ವೆಂಕಟೇಶ ಆಚಾರ್ಯ (ಪ್ರಸ್ತುತ ಶ್ರೀ ವಿದ್ಯಾಸಾಗರ ಮಾಧವ ತೀರ್ಥರು) ರಚಿಸಿದ “ಮಹಾಭಾರತ ಅಂಡ್ ವೆರಿಯೇಷನ್ಸ್” ಕೃತಿಯ ಕನ್ನಡ ಅನುವಾದವಾದ “ಮಹಾಭಾರತ ದರ್ಶನ” ಗ್ರಂಥವನ್ನು ಬಿಡುಗಡೆಗೊಳಿಸಲಾಯಿತು.

ಕೃತಿಯ ಕುರಿತು ಮಾತನಾಡಿದ ಹಂಪ ನಾಗರಾಜಯ್ಯ ಅವರು, “ಈ ಗ್ರಂಥವು ತೌಲನಿಕ ಸಾಹಿತ್ಯ ಅಧ್ಯಯನದ ಆಳ, ಪುರಾಣಪರಿಜ್ಞಾನ ಮತ್ತು ಭಾಷಾತ್ಮಕ ಸಂವೇದನೆಗಳ ಸಮನ್ವಯವಾಗಿದೆ. ವ್ಯಾಸ, ಪಂಪ ಮತ್ತು ಪೆರುಂದೇವನಾರರ ಕೃತಿಗಳಲ್ಲಿನ ಸಾದೃಶ್ಯ–ವೈಶಿಷ್ಟ್ಯಗಳನ್ನು ಆಳವಾಗಿ ವಿಶ್ಲೇಷಿಸಿರುವ ಈ ಕೃತಿ ದಕ್ಷಿಣ ಭಾರತೀಯ ಸಾಹಿತ್ಯ ಪರಂಪರೆಯ ಅರಿವಿಗೆ ಅನಿವಾರ್ಯವಾದ ಪಠ್ಯ” ಎಂದು ಅಭಿಪ್ರಾಯಪಟ್ಟರು. ಈ ಶ್ರೇಷ್ಠ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿ ಜನತೆಗೆ ತಲುಪಿಸಿದ ಪ್ರೊ. ಎಸ್. ಬಿಳಿಗಿರಿವಾಸನ್ ಅವರ ಸೇವೆಯನ್ನು ಅವರು ಪ್ರಶಂಸಿಸಿದರು.

ಈ ಸಂದರ್ಭದಲ್ಲಿ ಪ್ರೊ. ಎಸ್. ಬಿಳಿಗಿರಿವಾಸನ್ ಅವರಿಗೆ ಅವರ ಸಾಹಿತ್ಯಸೇವೆಯನ್ನು ಗುರುತಿಸಿ “ಗಾನ ಕಮಲ–2026” ಸ್ಮಾರಕ ಪುರಸ್ಕಾರವನ್ನು ಪ್ರದಾನಿಸಲಾಯಿತು. ಪ್ರಶಸ್ತಿ ಸ್ವೀಕರಿಸಿದ ಅವರು, “ಅನುವಾದ ಕಾರ್ಯವು ಭಾಷೆಗಳ ನಡುವೆ ಸೇತುವೆಯಾಗಿದ್ದು, ಜ್ಞಾನ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗಳಿಗೆ ತಲುಪಿಸುವ ಮಹತ್ವದ ಸಾಧನ” ಎಂದು ಹೇಳಿದರು.

ಕಾರ್ಯಕ್ರಮದ ಮತ್ತೊಂದು ಪ್ರಮುಖ ಆಕರ್ಷಣೆಯಾಗಿ ನಡೆದ “ಗಾನ ಸುಧೆ” ಸಂಗೀತ ಕಾರ್ಯಕ್ರಮದಲ್ಲಿ ವಿ. ಗುರುರಾಜ್ ಅವರ ಮನಮೋಹಕ ಗಾಯನ ಶ್ರೋತೃಗಳನ್ನು ರಂಜಿಸಿತು. ವಿ. ವಿಭುದೇಂದ್ರ ಸಿಂಹ (ಪಿಟೀಲು) ಹಾಗೂ ವಿ. ವರದೇಂದ್ರ ಸಿಂಹ (ಮೃದಂಗ) ಅವರ ಸಹವಾದ್ಯಗಳು ಕಾರ್ಯಕ್ರಮಕ್ಕೆ ವಿಶಿಷ್ಟ ಮೆರಗು ನೀಡಿದವು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಟಿ. ಎ. ಬಾಲಕೃಷ್ಣ ಅವರು ಗಾನಕಮಲ ಅಕಾಡೆಮಿಯ ಸಾಂಸ್ಕೃತಿಕ ಸೇವೆಯನ್ನು ಮೆಚ್ಚಿ, ಪರಂಪರೆ ಮತ್ತು ನವೀನತೆಯ ಸಮನ್ವಯದಿಂದಲೇ ಸಂಸ್ಕೃತಿಯ ಉಳಿವು ಸಾಧ್ಯವೆಂದು ಅಭಿಪ್ರಾಯಪಟ್ಟರು.

ವಿಶೇಷ ಆಹ್ವಾನಿತರಾಗಿ ಡಾ. ಅನಂತಪದ್ಮನಾಭ ರಾವ್, ಡಾ. ಬಿ. ಎಸ್. ರಾಘವೇಂದ್ರ, ಡಾ. ಕೆ. ಶೇಷಮೂರ್ತಿ, ಡಾ. ಟಿ. ವಿ. ರಾಜು ಹಾಗೂ ಪ್ರೊ. ಜಿ. ಅಶ್ವತ್ಥನಾರಾಯಣ ಉಪಸ್ಥಿತರಿದ್ದರು.

ಪ್ರೊ. ಕೆ.ವಿ. ರಾಮರಾವ್ ಅಭಿನಂದನಾ ಪತ್ರವನ್ನು ವಾಚಿಸಿದರು. ಕಾರ್ಯಕ್ರಮವನ್ನು ಡಾ. ಎಸ್. ಎಲ್. ಮಂಜುನಾಥ್ ನಿರೂಪಿಸಿದರು. ಆಯೋಜಕರಾದ ನಂದಕುಮಾರ, ಗುರುರಾಜ್ ಹಾಗೂ ಶಾಮಸುಂದರ ವೇದಿಕೆಯಲ್ಲಿ ಉಪಸ್ಥಿತರಿದ್ದರು.