ಬಿಜೆಪಿ ಕಾರ್ಯಕರ್ತರು ಎಚ್ಚರಿಕೆಯಿಂದ ಕೆಲಸ ಮಾಡಿ, ತಪ್ಪು ಮಾಡಿದರೆ ಪಕ್ಷಕ್ಕೆ ಕೆಟ್ಟು ಹೆಸರು, ದೇಶ ಕಾಯುವ ಸೈನಿಕರಂತೆ ಪಕ್ಷ ಕಟ್ಟುವ ಕೆಲಸ ಮಾಡಿ-ಶಾಸಕ ಎಸ್.ಸುರೇಶ್ ಕುಮಾರ್
ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರ: ದಯಾನಂದನಗರ ವಾರ್ಡ್-58 ಮತ್ತು ಬಂಡಿರೆಡ್ಡಿ ವೃತ್ತ ವಾರ್ಡ್-59.ರ ಬಂಡಿರೆಡ್ಡಿ ಸರ್ಕಲ್ ನಲ್ಲಿ ಬೆಂಗಳೂರುನಗರ ನಿರ್ಮಾತೃ ನಾಡಪ್ರಭು ಕೇಂಪೇಗೌಡರ 517ನೇ ದಿನಾಚರಣೆ, ದಯಾನಂದನಗರ ವಾರ್ಡ್ ಮತ್ತು ಬಂಡಿರೆಡ್ಡಿ ವೃತ್ತ ವಾರ್ಡ್ ಸಾರ್ವಜನಿಕರ ಕುಂದುಕೊರತೆ ನಿವಾರಣೆಗಾಗಿ ಜನಸ್ನೇಹಿ ವೆಬ್ ಸೈಟ್ ಲೋಕರ್ಪಣೆ ಸಮಾರಂಭ.
ಪ್ರಧಾನಿ ಶ್ರೀ ನರೇಂದ್ರಮೋದಿರವರ 12ವರ್ಷ ಸಾಧನೆಗಳ ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮ.
ದಯಾನಂದನಗರ ವಾರ್ಡ್ ಮತ್ತು ಬಂಡಿರೆಡ್ಡಿ ವೃತ್ತ ವಾರ್ಡ್ ಗಳ ಅಧ್ಯಕ್ಷರು, ಪದಾಧಿಕಾರಿಗಳ ಘೋಷಣೆ ಕಾರ್ಯಕ್ರಮ.
ಶಾಸಕರಾದ ಎಸ್.ಸುರೇಶ್ ಕುಮಾರ್ ರವರು, ಲೋಕಸಭಾ ಸದಸ್ಯ ಪಿ.ಸಿ.ಮೋಹನ್ ರವರು, ಕೇಂದ್ರ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷರಾದ ಸಪ್ತಗಿರಿಗೌಡರು, ಬಿಬಿಎಂಪಿ ಮಾಜಿ ಸದಸ್ಯರುಗಳಾದ ಎಂ.ಮುನಿರಾಜು ಶ್ರೀಮತಿ ಶಕೀಲ ಮುನಿರಾಜು, ರಾಜಾಜಿನಗರ ಮಂಡಲ ಕಾರ್ಯದರ್ಶಿ ಎಂ.ಎಸ್.ಸಂಜಯ್ ಕುಮಾರ್ ರವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಚಾಲನೆ ನೀಡಿದರು.
ಬಿಜೆಪಿ ಮುಖಂಡರುಗಳಾದ ರಾಘವೇಂದ್ರರಾವ್, ಗಿರೀಶ್ ಗೌಡ, ಪ್ರವೀಣ್ ರವರು ಉಪಸ್ಥಿತರಿದ್ದರು.

ಎಸ್.ಸುರೇಶ್ ಕುಮಾರ್ ರವರು ಮಾತನಾಡಿ ದೇಶದ ಜನರೊಂದಿಗೆ ಪ್ರಧಾನಿ ನರೇಂದ್ರಮೋದಿರವರು ಪ್ರತಿ ತಿಂಗಳು ಮಾತನಾಡುತ್ತಾರೆ ಎಂದರೆ ವಿಶ್ವದಲ್ಲಿ ಯಾವ ಪ್ರಧಾನಿ ಈ ರೀತಿಯಲ್ಲಿ ಮಾಡುವುದಿಲ್ಲ. ಸಾರ್ವಜನಿಕರ ಸಮಸ್ಯೆಗಳಿಗೆ ವೆಬ್ ಸೈಟ್ ಪ್ರಾರಂಭಿಸಲಾಗಿದೆ. ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ದಯಾನಂದನಗರ, ಬಂಡಿರೆಡ್ಡಿ ವೃತ್ತ ವಾರ್ಡ್ ನಲ್ಲಿ ಜನ ಸಾಮಾನ್ಯರು ಮೊಬೈಲ್ ಮೂಲಕ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು.
ಪ್ರಧಾನಿಯಾವರು ಹೇಳುತ್ತಾರೆ ನಾನು ಒಬ್ಬ ಜನ ಸೇವಕ ಎಂದು ಅದರಂತೆ ಬಿಜೆಪಿ ಕಾರ್ಯಕರ್ತರು ಸೇವಕರಂತೆ ಜನರ ಕೆಲಸ ಮಾಡಬೇಕು ಎಂದು ಹೇಳಿದರು. ಬಿಜೆಪಿ ಕಾರ್ಯಕರ್ತರು ಎಚ್ಚರಿಕೆಯಿಂದ ಕೆಲಸ ಮಾಡಬೇಕು ಕಾರ್ಯಕರ್ತರು ತಪ್ಪು ಮಾಡಿದರೆ ಪಕ್ಷಕ್ಕೆ ಕೆಟ್ಟು ಹೆಸರು ಬರುತ್ತದೆ. ಕಾರ್ಯಕರ್ತರು ಒಳ್ಳೆಯ ಮಾತು, ಒಳ್ಳೆಯ ಕೆಲಸ ಮಾಡಬೇಕು.
ಇಡಿ ದೇಶದ ಓಟರ್ ಲಿಸ್ಟ್ ರೀವಿಜನ್ ಆಗುತ್ತಿದೆ ವಿರೋಧ ಪಕ್ಷಗಳು ಅಪಪ್ರಚಾರ ಮಾಡುತ್ತಿದೆ. ಒಬ್ಬರಿಗೆ ಒಂದು ಮತ ಇರಬೇಕು, ಹಲವಾರು ಕಡೆಗಳಲ್ಲಿ ಮತಪಟ್ಟಿಯಲ್ಲಿ ಹೆಸರು ಇರಬಾರದು. ದೇಶ ಕಾಯುವ ಸೈನಿಕರಂತೆ ಬಿಜೆಪಿ ಕಾರ್ಯಕರ್ತರು ಕಾರ್ಯ ನಿರ್ವಹಣೆ ಮಾಡಬೇಕು ಎಂದು ಹೇಳಿದರು.
ಸಪ್ತಗಿರಿಗೌಡರು ಮಾತನಾಡಿ ಪ್ರಧಾನಿ ನರೇಂದ್ರಮೋದಿರವರು ವಿಶ್ವನಾಯಕ ಅವರು ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಬಿಜೆಪಿ ಕಾರ್ಯಕರ್ತರು ಜವಾಬ್ದಾರಿ ತೆಗೆದುಕೊಂಡವರು ನಿಮ್ಮ ಹೆಗಲಿಗೆ ಜವಾಬ್ದಾರಿ ಹೆಚ್ಚಿದೆ. ಮನೆ, ಮನೆಗಳಿಗೆ ಭೇಟಿ ನೀಡಿ ಪ್ರಧಾನಿ ರವರು ಮಾಡಿರುವ ಕೆಲಸ, ಯೋಜನೆಗಳನ್ನು ತಲುಪಿಸುಬೇಕು. ಕಾರ್ಯಕರ್ತರಿಂದ ಪಕ್ಷ ಅಧಿಕಾರ ಬರಲು ಸಾಧ್ಯ ಎಂದು ಹೇಳಿದರು.
ಪ್ರಧಾನಿರವರ ಮನ್ ಕಿ ಬಾತ್ ಸಾವಿರಾರು ಜನ ವೀಕ್ಷಣೆ ಮಾಡಿದರು.

