ಶ್ರೀರಾಮ ಮಂದಿರದ ಹುಂಡಿ ಹಣ ದುರುಪಯೋಗ; ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಿ !

ಅಯೋಧ್ಯೆಯ ಶ್ರೀರಾಮ ಮಂದಿರವು ಕೇವಲ ಒಂದು ಧಾರ್ಮಿಕ ಸ್ಥಳವಲ್ಲ, ಅದು ಜಗತ್ತಿನಾದ್ಯಂತ ಇರುವ ಕೋಟ್ಯಂತರ ಹಿಂದೂಗಳ ಶತಮಾನಗಳ ಬಲಿದಾನ, ದೀರ್ಘಕಾಲದ ಹೋರಾಟ ಮತ್ತು ಶ್ರದ್ಧೆಯ ಪ್ರತೀಕವಾಗಿದೆ. ಮಂದಿರದ ಹುಂಡಿಯಲ್ಲಿನ ಕಾಣಿಕೆಯನ್ನು ದುರುಪಯೋಗಪಡಿಸಿಕೊಳ್ಳುವುದು ಮಹಾಪಾಪವಾಗಿದೆ. ಪ್ರಭು ಶ್ರೀರಾಮನು ಅವರ ಕರ್ಮಕ್ಕೆ ತಕ್ಕ ಶಿಕ್ಷೆಯನ್ನು ನೀಡಿಯೇ ನೀಡುತ್ತಾನೆ. ಆದರೆ, ಸರಕಾರವು ಈ ಪ್ರಕರಣದಲ್ಲಿ ಯಾರು ತಪ್ಪಿತಸ್ಥರೆಂದು ಶೀಘ್ರವಾಗಿ ತನಿಖೆ ನಡೆಸಿ ಸತ್ಯವನ್ನು ಜನತೆಯ ಮುಂದೆ ತರಬೇಕು ಮತ್ತು ತಪ್ಪಿತಸ್ಥರ ಮೇಲೆ ಅತ್ಯಂತ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಿಂದೂ ಜನಜಾಗೃತಿ ಸಮಿತಿಯು ಆಗ್ರಹಿಸಿದೆ.

ಯಾವುದೇ ಮಂದಿರದ ಸಮಿತಿಯಲ್ಲಿ ಕೇವಲ ದೇವರ ಭಕ್ತರು ಮಾತ್ರ ಇರಬೇಕು ಎಂದು ನಾವು ಈ ಹಿಂದೆಯೂ ಹಲವು ಬಾರಿ ಒತ್ತಾಯಿಸಿದ್ದೇವೆ. ಭಕ್ತನು ಈಶ್ವರನ ಉಪಾಸಕನಾಗಿರುವುದರಿಂದ, ದೇವನಿಧಿಯನ್ನು ಕದಿಯುವ ವಿಚಾರವನ್ನು ಕನಸಿನಲ್ಲೂ ಮಾಡಲು ಸಾಧ್ಯವಿಲ್ಲ. ನಿಜವಾದ ಅರ್ಥದಲ್ಲಿ ಮಂದಿರಗಳ ಉದ್ಧಾರವಾಗಬೇಕೆಂದರೆ, ಭಗವಂತನ ಅಂತಹ ಭಕ್ತರೇ ಮಂದಿರ ವ್ಯವಸ್ಥೆಯಲ್ಲಿ ಇರಬೇಕು. ಇಂತಹ ಪ್ರಕರಣಗಳಿಂದ ಸರಕಾರವು ‘ಮಂದಿರಗಳ ಸರಕಾರೀಕರಣ’ ಮಾಡಲು ಪ್ರಯತ್ನಿಸುತ್ತದೆ, ಇದನ್ನು ನಾವು ಸದಾ ವಿರೋಧಿಸುತ್ತೇವೆ ಎಂಬ ನಿಲುವನ್ನು ಸಮಿತಿಯು ವ್ಯಕ್ತಪಡಿಸಿದೆ.

ಯಾವ ಸರಕಾರಿ ಅಧಿಕಾರಿಗಳು ಸ್ವತಃ ಭ್ರಷ್ಟರಾಗಿರುತ್ತಾರೋ, ಆಡಳಿತ ಯಂತ್ರದಲ್ಲಿ ಬೇರೂರಿರುವ ಭ್ರಷ್ಟ ವ್ಯವಸ್ಥೆಯ ಭಾಗವಾಗಿರುತ್ತಾರೋ, ಅಂತಹ ಅಧಿಕಾರಿಗಳು ಮಂದಿರ ಸಮಿತಿಯ ಭ್ರಷ್ಟಾಚಾರವನ್ನು ಹೇಗೆ ತಡೆಗಟ್ಟಬಲ್ಲರು? ಆದ್ದರಿಂದ ಧಾರ್ಮಿಕ ಸ್ಥಳಗಳಲ್ಲಿ ಜಾತ್ಯತೀತ ಸರಕಾರದ ಹಸ್ತಕ್ಷೇಪ ಬೇಡವೇ ಬೇಡ. ಮಂದಿರಗಳ ಸರಕಾರೀಕರಣದ ನಂತರ ಮಂದಿರದ ನಿಧಿಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿರುವ ಅನೇಕ ಉದಾಹರಣೆಗಳು ದೇಶದಲ್ಲಿವೆ. ಈ ದೃಷ್ಟಿಯಿಂದ, ಮಂದಿರದ ಜವಾಬ್ದಾರಿಯನ್ನು ಭಗವಂತನ ಸೇವೆಯೆಂದು ಸ್ವೀಕರಿಸಿ ಕಾರ್ಯನಿರ್ವಹಿಸುವ ಭಗವಂತನ ನಿಜವಾದ ಭಕ್ತರಿಗೆ ಮಂದಿರಗಳ ಆಡಳಿತವನ್ನು ಹಸ್ತಾಂತರಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಅವರು ಅಭಿಪ್ರಾಯಪಟ್ಟಿದ್ದಾರೆ.

Hot this week

ವಿಧಾನಪರಿಷತ್ ಸಭಾಪತಿಗಳಾಗಿ ಸಲೀಂ ಅಹ್ಮದ್ ಆಯ್ಕೆ

ಬೆಂಗಳೂರು: ವಿಧಾನ ಪರಿಷತ್‍ನ(Legislative Council) ನೂತನ ಸಭಾಪತಿಗಳಾಗಿ ಸಲೀಂ ಅಹ್ಮದ್(Saleem Ahamed)...

ಮುಂದಿನ ದಿನಗಳಲ್ಲಿ ವಿಧಾನಸಭೆ ಕಾರ್ಯಕಲಾಪವನ್ನು ಕಾಗದ ರಹಿತ ಮಾಡಲಾಗುವುದು: ಜಿ.ಎಸ್.ಪಾಟೀಲ

ಬೆಂಗಳೂರು: ಆದಷ್ಟು ಬೇಗ ವಿಧಾನಸಭೆಯ ಕಾರ್ಯಕಲಾಪವನ್ನು(Proceeding/Activites) ಕಾಗದ ರಹಿತವನ್ನಾಗಿ ಮಾಡಲು ಇ-ಸಂವಿಧಾನ...

ವಿಧಾನಸಭೆ ಸಭಾಧ್ಯಕ್ಷರಾಗಿ ಅವಿರೋಧವಾಗಿ ಗುರುಪಾದಗೌಡ ಸಂಗನಗೌಡ ಪಾಟೀಲ ಆಯ್ಕೆ

ಬೆಂಗಳೂರು: ಇಂದು ಬೆಳಿಗ್ಗೆ ವಿಧಾನಸಭೆಯಲ್ಲಿ ಜರುಗಿನ ಸಭಾಧ್ಯಕ್ಷರ ಚುನಾವಣೆಯಲ್ಲಿ ರೋಣ ವಿಧಾನಸಭಾ...

ಭಾರತ್ ಜೋಡೋ ಯುವ ಸಂಘ’ಕ್ಕೆ ಆಕರ್ಷಕ ಲೋಗೋ ವಿನ್ಯಾಸ ಸ್ಪರ್ಧೆ: ಸಾರ್ವಜನಿಕರು, ಕಲಾವಿದರಿಂದ ಅರ್ಜಿ ಆಹ್ವಾನ

ಬೆಂಗಳೂರು : ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು...

Topics

ವಿಧಾನಪರಿಷತ್ ಸಭಾಪತಿಗಳಾಗಿ ಸಲೀಂ ಅಹ್ಮದ್ ಆಯ್ಕೆ

ಬೆಂಗಳೂರು: ವಿಧಾನ ಪರಿಷತ್‍ನ(Legislative Council) ನೂತನ ಸಭಾಪತಿಗಳಾಗಿ ಸಲೀಂ ಅಹ್ಮದ್(Saleem Ahamed)...

ಮುಂದಿನ ದಿನಗಳಲ್ಲಿ ವಿಧಾನಸಭೆ ಕಾರ್ಯಕಲಾಪವನ್ನು ಕಾಗದ ರಹಿತ ಮಾಡಲಾಗುವುದು: ಜಿ.ಎಸ್.ಪಾಟೀಲ

ಬೆಂಗಳೂರು: ಆದಷ್ಟು ಬೇಗ ವಿಧಾನಸಭೆಯ ಕಾರ್ಯಕಲಾಪವನ್ನು(Proceeding/Activites) ಕಾಗದ ರಹಿತವನ್ನಾಗಿ ಮಾಡಲು ಇ-ಸಂವಿಧಾನ...

ವಿಧಾನಸಭೆ ಸಭಾಧ್ಯಕ್ಷರಾಗಿ ಅವಿರೋಧವಾಗಿ ಗುರುಪಾದಗೌಡ ಸಂಗನಗೌಡ ಪಾಟೀಲ ಆಯ್ಕೆ

ಬೆಂಗಳೂರು: ಇಂದು ಬೆಳಿಗ್ಗೆ ವಿಧಾನಸಭೆಯಲ್ಲಿ ಜರುಗಿನ ಸಭಾಧ್ಯಕ್ಷರ ಚುನಾವಣೆಯಲ್ಲಿ ರೋಣ ವಿಧಾನಸಭಾ...

ಕರ್ನಾಟಕದ ಇಬ್ಬರು ಅಧಿಕಾರಿಗಳಿಗೆ ‘ರಾಷ್ಟ್ರಪತಿಗಳ ಅಗ್ನಿಶಾಮಕ ಶ್ಲಾಘನೀಯ ಸೇವಾ ಪದಕ’ ಗೌರವ

ಬೆಂಗಳೂರು: 2026ನೇ ಸಾಲಿನ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಪ್ರತಿಷ್ಠಿತ “ರಾಷ್ಟ್ರಪತಿಗಳ ಅಗ್ನಿಶಾಮಕ ಸೇವಾ...

ರಾಜ್ಯದ ಜನರ ಅಭಿವೃದ್ಧಿಗೆ ಟೀಮ್ ಕರ್ನಾಟಕವಾಗಿ ಕೆಲಸ ಮಾಡೋಣ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕರೆ

224 ಶಾಸಕರೂ ನನಗೆ ಒಂದೇ, ವಿರೋಧ ಪಕ್ಷದವರನ್ನು ವಿಶ್ವಾಸಕ್ಕೆ ಪಡೆದು ಕೆಲಸ...

ತಂತ್ರಜ್ಞಾನ ಎಷ್ಟೇ ಬೆಳೆದರು ರಕ್ತ ತಯಾರಿಸಲು ಸಾಧ್ಯವಿಲ್ಲ – ನ್ಯಾಯಮೂರ್ತಿ ಎಸ್.ಜಿ. ಪಂಡಿತ್

ದಿವಂಗತ ನಿರ್ಮಲಾ ಬಾಳಿಗಾ ನೆನಪಿನಲ್ಲಿ ರಕ್ತದಾನ ಶಿಬಿರ ಸಂಪನ್ನಬೆಂಗಳೂರು: ರಕ್ತದಾನವನ್ನು(Blood Donation) "ಮಹಾದಾನ"...

Related Articles