ಸಂಗೀತ ಶಿಕ್ಷಕಿ ಸೌಮ್ಯಾ ನಂದನ್ ರವರಿಗೆ ಗೌರವ ಡಾಕ್ಟರೇಟ್ ಪ್ರದಾನ

ಏಷಿಯನ್ ಇಂಟರ್‌ನ್ಯಾಷನಲ್ ಕಲ್ಚರ್ ಯೂನಿವರ್ಸಿಟಿ (Asian International Culture University) ಹಾಗೂ ಅಮೆರಿಕನ್ ವಿಜ್ಡಮ್ ಪೀಸ್ ಯೂನಿವರ್ಸಿಟಿ (American Wisdom Peace University) ಸಹಯೋಗದಲ್ಲಿ ಕಾರ್ಯಕ್ರಮ
ಬೆಂಗಳೂರಿನ ಗಾಯಕಿ ಸೌಮ್ಯಾ ನಂದನ್ ರವರಿಗೆ ಸಂಗೀತ (Music) ಕ್ಷೇತ್ರದ ಅನನ್ಯ ಸೇವೆಯನ್ನು ಗುರುತಿಸಿ ತಮಿಳುನಾಡು ಹೊಸೂರ್ ನಲ್ಲಿ ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ವಿಶ್ವವಿದ್ಯಾಲಯ ವತಿಯಿಂದಗೌರವ ಡಾಕ್ಟರೇಟ್ (Doctorate) ಪದವಿ ನೀಡಿ ಪುರಸ್ಕರಿಸಲಾಯಿತು.

ಸಂಸ್ಕೃತಿ ಸಂವರ್ಧಕಿ ಸೌಮ್ಯ ನಂದನ್ (Sowmya Nandan) ರವರು  ಕಳೆದ 2 ದಶಕದಿಂದ ವಾಗ್ದೇವಿ ಗಾನ ಕಲಾಶಾಲೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ವಿದ್ಯಾರ್ಥಿಗಳಿಗೆ ಉತ್ತಮ ಸಂಗೀತಾಭ್ಯಾಸ ನೀಡುತ್ತ  ಸಮಾಜಮುಖಿ ಸೇವಾ ತತ್ಪರಾಗಿದ್ದಾರೆ.ವಿಶ್ವಕರ್ಮ ಗ್ಲೋಬಲ್ ಟ್ರಸ್ಟ್ (ರಿ.) ಸಹಯೋಗದಲ್ಲಿ ಸಂಗೀತ ಪರಂಪರೆ ಪಾರಂಪರ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು .

ಭವಿಷ್ಯದಲ್ಲಿಯೂ ಸಂಗೀತದ ಮೂಲಕ ಸಮಾಜಸೇವೆ ಮುಂದುವರಿಸಿ, ಭಾರತೀಯ ಶಾಸ್ತ್ರೀಯ ಸಂಗೀತವನ್ನು ಹೆಚ್ಚು ಹೆಚ್ಚು ಮನೆಗಳಿಗೆ ತಲುಪಿಸುವುದು, ಹೊಸ ಪೀಳಿಗೆಯಲ್ಲಿ ಭಕ್ತಿ, ಸಂಸ್ಕೃತಿ ಮತ್ತು ಸಂಗೀತದ ಬಗ್ಗೆ ಆಸಕ್ತಿ ಬೆಳೆಸುವುದು ತಮ್ಮ ಧ್ಯೇಯವೆಂದು ಗೌರವ ಡಾಕ್ಟರೇಟ್ ಸ್ವೀಕರಿಸಿ ಸೌಮ್ಯಾ ನಂದನ್ ತಿಳಿಸಿದರು . ಇವರ ಜೀವನಗಾಥೆ ಸಂಗೀತವನ್ನು ವೃತ್ತಿಯಷ್ಟೇ ಅಲ್ಲ, ಸೇವೆ ಮತ್ತು ಸಾಧನೆಯ ಮಾರ್ಗವನ್ನಾಗಿ ರೂಪಿಸಬಹುದೆಂಬುದಕ್ಕೆ ಪ್ರೇರಣಾದಾಯಕ ಉದಾಹರಣೆಯಾಗಿದೆ ಎಂದು  ಡಾ. ಕೃಷ್ಣಮೂರ್ತಿ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು .ಸಮಾರಂಭದ ಮುಖ್ಯ ಅತಿಥಿಗಳಾಗಿ ಭೂಕೈಲಾಸ ಪುಣ್ಯಸ್ಥಳ, ಶ್ರೀ ಕ್ಷೇತ್ರ ಮುಕ್ತಿ ಮಠದ ಶ್ರೀ  ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ , ಮಾಜಿ ಶಾಸಕ ಡಾ. ಕೆ.ಎ. ಮನೋಕರನ್, ಡಾ. ಕರಾಟೆ ಎ.ಪಿ. ಶ್ರೀನಾಥ್ ಮೊದಲಾದವರು ಉಪಸ್ಥಿತರಿದ್ದರು.

Hot this week

ನಿತ್ಯ ಪಂಚಾಂಗ 14.08.2026ಶುಕ್ರವಾರ FRIDAY.

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 14.08.2026ಶುಕ್ರವಾರ FRIDAY. ಸಂವತ್ಸರ: ಪರಾಭವ. SAMVATSARA : PARABHAVA. ಆಯಣ: ದಕ್ಷಿಣಾಯಣ. AYANA:...

ಸ್ವಾನಂದಾಶ್ರಮ: ಭಕ್ತಿ, ಸಂಸ್ಕೃತಿ, ಸೇವೆ ಮತ್ತು ಹೊಯ್ಸಳ ವೈಭವದ ಸಂಗಮ

ಆಗಸ್ಟ್ 16ರಿಂದ ವರದ ಗಣಪತಿ ವ್ರತಾಚರಣೆ ಬೆಂಗಳೂರು: ಕನಕಪುರ ರಸ್ತೆಯ ಅಗರ–ತಾತಗುಣಿಯಲ್ಲಿ(Thathaguni) ನೆಲೆಗೊಂಡಿರುವ...

ಮೇಕೆದಾಟು ಯೋಜನೆಗೆ ವೇಗ ನೀಡಲು ಅಧಿಕಾರಿಗಳಿಗೆ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ

ಬೆಂಗಳೂರು: ನೂತನವಾಗಿ ಜಲಸಂಪನ್ಮೂಲ ಸಚಿವರಾಗಿ(New Minister of Water Resources) ಅಧಿಕಾರ...

ತೇಜಸ್ವಿ ಜನ್ಮದಿನೋತ್ಸವ ಅಂಗವಾಗಿ ‘ಕರ್ವಾಲೊ’ ಕೃತಿ ಆಧಾರಿತ ಡಿಜಿಟಲ್ ಚಿತ್ರಕಲಾ ಸ್ಪರ್ಧೆಗೆ ಅರ್ಜಿ ಆಹ್ವಾನ

ಬೆಂಗಳೂರು : ಕನ್ನಡದ ಖ್ಯಾತ ಸಾಹಿತಿ ಹಾಗೂ ಚಿಂತಕ ಕೆ.ಪಿ. ಪೂರ್ಣಚಂದ್ರ ತೇಜಸ್ವಿ(K.P.Purnachandra...

ಗಣ್ಯರ ನಿಧನಕ್ಕೆ ವಿಧಾನಸಭೆಯಲ್ಲಿ ಸಂತಾಪ

ಬೆಂಗಳೂರು : ಇಂದು ವಿಧಾನಸಭೆಯ ಅಧಿವೇಶನದಲ್ಲಿ(Legislative Assembly Session) ಇತ್ತೀಚೆಗೆ ನಿಧನರಾದ...

Topics

ಸಚಿವಾಲಯ ಗ್ರಂಥಾಲಯದಲ್ಲಿ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ: ಮಾಸಿಕ ರೂ. 10,900 ಸ್ಟೈಫಂಡ್

ಬೆಂಗಳೂರು: ಕರ್ನಾಟಕ ಸರ್ಕಾರದ ಸಚಿವಾಲಯ ಗ್ರಂಥಾಲಯದಲ್ಲಿ(Karnataka Government Secretariat Library) 'ಅಪ್ರೆಂಟಿಸ್...

Related Articles