ಅಡ್ವೈಸರ್ ಸಾಹಿತ್ಯ ಸ್ಪರ್ಧೆ: 10 ಕೃತಿಗಳಿಗೆ ಪ್ರಶಸ್ತಿ

ವಿವಿಧ ಸಾಹಿತ್ಯ ಪ್ರಕಾರಗಳ ಕೃತಿಗಳಿಗೆ ರಾಜ್ಯಮಟ್ಟದ 18ನೇ ಸಾಹಿತ್ಯ ಸ್ಪರ್ಧೆಯಲ್ಲಿ ಮನ್ನಣೆ

ಮಂಡ್ಯ: ಮಂಡ್ಯದಿಂದ ಪ್ರಕಟವಾಗುವ ಅಡ್ವೈಸರ್ ಪತ್ರಿಕೆಯ ವತಿಯಿಂದ ಆಯೋಜಿಸಿದ್ದ 2025ನೇ ಸಾಲಿನ ರಾಜ್ಯಮಟ್ಟದ 18ನೇ ಸಾಹಿತ್ಯ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದ್ದು, ವಿವಿಧ ಸಾಹಿತ್ಯ ಪ್ರಕಾರಗಳ 10 ಕೃತಿಗಳು ಪ್ರಶಸ್ತಿಗೆ ಆಯ್ಕೆಯಾಗಿವೆ.

ಕನ್ನಡ ಸಾಹಿತ್ಯದಲ್ಲಿ ಹೊಸ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಉದ್ದೇಶದಿಂದ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಕವನ, ಕಥೆ, ಚುಟುಕು, ವಚನ ಸಾಹಿತ್ಯ, ಮಹಿಳಾ ಸಾಹಿತ್ಯ, ಮಕ್ಕಳ ಸಾಹಿತ್ಯ, ಆಧ್ಯಾತ್ಮಿಕ ಸಾಹಿತ್ಯ ಹಾಗೂ ಪುಸ್ತಕ ರಚನೆ ಸೇರಿದಂತೆ ವಿವಿಧ ಪ್ರಕಾರಗಳ ಕೃತಿಗಳು ಪ್ರಶಸ್ತಿಗೆ ಪಾತ್ರವಾಗಿವೆ.

ಹಿರಿಯ ಸಾಹಿತಿ ಡಾ. ಪ್ರದೀಪಕುಮಾರ ಹೆಬ್ರಿ ಅವರ ನೇತೃತ್ವದ ತೀರ್ಪುಗಾರರ ಮಂಡಳಿ ಕೃತಿಗಳನ್ನು ಪರಿಶೀಲಿಸಿ ಪ್ರಶಸ್ತಿಗಳಿಗೆ ಆಯ್ಕೆ ಮಾಡಿದೆ. ಪ್ರಶಸ್ತಿಗೆ ಆಯ್ಕೆಯಾದ ಎಲ್ಲ 10 ಕೃತಿಗಳಿಗೂ ತಲಾ ₹3,000 ನಗದು ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು ಎಂದು ಅಡ್ವೈಸರ್ ಪತ್ರಿಕೆಯ ಸಂಪಾದಕ ಸಿ. ಬಸವರಾಜು ತಿಳಿಸಿದ್ದಾರೆ.

ಪ್ರಶಸ್ತಿಗೆ ಆಯ್ಕೆಯಾದ ಕೃತಿಗಳು

  1. ಮಹಾದೇವ ಬಸರ್ಕೋಡ, ಅಮೀನಗಡ – ‘ಬತ್ತುವುದಿಲ್ಲ ಜೀವದೊಳವು’ – ಕವನ ಸಂಕಲನ – ಡಾ. ಎಂ.ಎ. ಪದ್ಮನಾಭ ಹೆಬ್ರಿ ಸ್ಮರಣಾರ್ಥ ಪ್ರಶಸ್ತಿ
  2. ಡಾ. ಶೋಭಾ ನಾಯಕ್, ಬೆಳಗಾವಿ – ‘ಅರ್ಧ ಮುಖಗಳ ಶಹರು’ – ಕವನ ಸಂಕಲನ – ಜಾನಪದ ತಜ್ಞ ದಿ. ಪ್ರೊ. ಡಿ. ಲಿಂಗಯ್ಯ ಸ್ಮರಣಾರ್ಥ ಪ್ರಶಸ್ತಿ
  3. ಮಂಜುನಾಥ್ ಕುಣಿಗಲ್, ಮೈಸೂರು – ‘ದೂರ ದೇಶದ ದೇವರು’ – ಕಥಾ ಸಂಕಲನ – ವಿಜಯೇಂದ್ರ ಬಂಧುಕಾರ ಸ್ಮರಣಾರ್ಥ ಪ್ರಶಸ್ತಿ
  4. ಶುಭಲಕ್ಷ್ಮಿ ನಾಯಕ್, ಮುಲ್ಕಿ – ‘ಅನುಭವದ ದೀಪ್ತಿ’ – ಚುಟುಕು ಸಂಕಲನ (ಗಜಲ್) – ಶ್ರೀಮತಿ ವನಜಾಕ್ಷಮ್ಮ ಅಂಗಡಿಹಟ್ಟಿ ಪುಟ್ಟಸ್ವಾಮಪ್ಪ ಸ್ಮರಣಾರ್ಥ ಪ್ರಶಸ್ತಿ
  5. ಪ್ರಕಾಶ್ ಗಿರಿಮಲ್ಲನವರ, ಬೆಳಗಾವಿ – ‘ಚೆನ್ನಬಸವಣ್ಣನವರ ಚರಿತ್ರೆ ಮತ್ತು ಸಿದ್ಧಾಂತ’ – ವಚನ ಸಾಹಿತ್ಯ – ಗರಕಹಳ್ಳಿ ಚನ್ನಮಲ್ಲಪ್ಪ ಶಿವಬಸಪ್ಪ ಸ್ಮರಣಾರ್ಥ ಪ್ರಶಸ್ತಿ
  6. ಕೆ.ವಿ. ರಾಜಲಕ್ಷ್ಮಿ, ಬೆಂಗಳೂರು – ‘ಕಲ್ಯಾಣಿ ಮಂಟಪದ ಕತೆಗಳು’ – ಮಹಿಳಾ ಸಾಹಿತ್ಯ – ಶ್ರೀಮತಿ ಗಿರಿಜಮ್ಮ ಮತ್ತು ಚಂದ್ರಪ್ಪ ಸ್ಮರಣಾರ್ಥ ಪ್ರಶಸ್ತಿ
  7. ವನರಾಗ ಶರ್ಮ, ಯಲ್ಲಾಪುರ – ‘ಸಂಪೂರ್ಣ ಮಧುರ ರಾಮಾಯಣ (ಮಹಾಕಾವ್ಯ)’ – ಪುಸ್ತಕ ಪ್ರಶಸ್ತಿ – ಡಿ. ಸತ್ಯನಾರಾಯಣ ಸ್ಮರಣಾರ್ಥ ಪ್ರಶಸ್ತಿ
  8. ರಂಜಿತಾ ವಿಕ್ರಮ ಮಹಾಜನ, ಬೆಳಗಾವಿ – ‘ಅವಳೇ ನನ್ನ…’ – ಪುಸ್ತಕ ಪ್ರಶಸ್ತಿ – ಎ.ಎಸ್.ಬಿ. ಮೆಮೋರಿಯಲ್ ಟ್ರಸ್ಟ್ (ರಿ.) ಪುಸ್ತಕ ಪ್ರಶಸ್ತಿ
  9. ಗುಂಡುರಾವ್ ದೇಸಾಯಿ, ರಾಯಚೂರು – ‘ಚಾರ್ಲಿ… ಚಾರ್ಲಿ… ವೇರ್ ಆರ್ ಯೂ?’ – ಮಕ್ಕಳ ಸಾಹಿತ್ಯ – ಶ್ರೀಮತಿ ಚನ್ನಮ್ಮ ಮತ್ತು ಸಿ. ಚಿಕ್ಕಣ್ಣ (ಮೈಸೂರು) ಸ್ಮರಣಾರ್ಥ ಪ್ರಶಸ್ತಿ
  10. ಗಿರೀಶ್ ವಿ.ಎಸ್., ಚಿಕ್ಕಮಗಳೂರು – ‘ಬ್ರಹ್ಮ ಋಷಿ   ಯೋಗಿಯೊಬ್ಬನ ಕಥೆ’ – ಆಧ್ಯಾತ್ಮಿಕ ಸಾಹಿತ್ಯ – ಪಿ.ಆರ್. ಸುಬ್ಬರಾವ್ ಸ್ಮರಣಾರ್ಥ ಪ್ರಶಸ್ತಿ (ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಪ್ರಾಯೋಜಿತ)

ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಸೃಜನಶೀಲವಾಗಿ ಮೂಡಿಬಂದಿರುವ ಕೃತಿಗಳನ್ನು ಗುರುತಿಸಿ ಗೌರವಿಸುತ್ತಿರುವುದು ಅಡ್ವೈಸರ್ ಸಾಹಿತ್ಯ ಸ್ಪರ್ಧೆಯ ವಿಶೇಷತೆಯಾಗಿದೆ. ಈ ಮೂಲಕ ಹೊಸ ಬರಹಗಾರರಿಗೆ ಪ್ರೋತ್ಸಾಹ ದೊರೆಯುವುದರ ಜೊತೆಗೆ ಕನ್ನಡ ಸಾಹಿತ್ಯದ ವಿವಿಧ ಆಯಾಮಗಳಿಗೆ ಉತ್ತೇಜನ ನೀಡಿದಂತಾಗಿದೆ.

ಪ್ರಶಸ್ತಿ ಪಡೆದ ಎಲ್ಲ ಕೃತಿಕಾರರಿಗೆ ಅಡ್ವೈಸರ್ ಪತ್ರಿಕೆಯ ಬಳಗ ಅಭಿನಂದನೆ ಸಲ್ಲಿಸಿದೆ.

ದಯಮಾಡಿ ಈ ಸುದ್ದಿಯನ್ನು ತಮ್ಮ ಪತ್ರಿಕೆಯಲ್ಲಿ ಯಥಾವಕಾಶ ಪ್ರಕಟಿಸಲು ಕೋರಿದೆ.

ವಿವರಗಳಿಗೆ: ೭೮೯೨೬ ೮೮೬೭೦

Hot this week

ನಿತ್ಯ ಪಂಚಾಂಗ 14.08.2026ಶುಕ್ರವಾರ FRIDAY.

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 14.08.2026ಶುಕ್ರವಾರ FRIDAY. ಸಂವತ್ಸರ: ಪರಾಭವ. SAMVATSARA : PARABHAVA. ಆಯಣ: ದಕ್ಷಿಣಾಯಣ. AYANA:...

ಸ್ವಾನಂದಾಶ್ರಮ: ಭಕ್ತಿ, ಸಂಸ್ಕೃತಿ, ಸೇವೆ ಮತ್ತು ಹೊಯ್ಸಳ ವೈಭವದ ಸಂಗಮ

ಆಗಸ್ಟ್ 16ರಿಂದ ವರದ ಗಣಪತಿ ವ್ರತಾಚರಣೆ ಬೆಂಗಳೂರು: ಕನಕಪುರ ರಸ್ತೆಯ ಅಗರ–ತಾತಗುಣಿಯಲ್ಲಿ(Thathaguni) ನೆಲೆಗೊಂಡಿರುವ...

ಮೇಕೆದಾಟು ಯೋಜನೆಗೆ ವೇಗ ನೀಡಲು ಅಧಿಕಾರಿಗಳಿಗೆ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ

ಬೆಂಗಳೂರು: ನೂತನವಾಗಿ ಜಲಸಂಪನ್ಮೂಲ ಸಚಿವರಾಗಿ(New Minister of Water Resources) ಅಧಿಕಾರ...

ತೇಜಸ್ವಿ ಜನ್ಮದಿನೋತ್ಸವ ಅಂಗವಾಗಿ ‘ಕರ್ವಾಲೊ’ ಕೃತಿ ಆಧಾರಿತ ಡಿಜಿಟಲ್ ಚಿತ್ರಕಲಾ ಸ್ಪರ್ಧೆಗೆ ಅರ್ಜಿ ಆಹ್ವಾನ

ಬೆಂಗಳೂರು : ಕನ್ನಡದ ಖ್ಯಾತ ಸಾಹಿತಿ ಹಾಗೂ ಚಿಂತಕ ಕೆ.ಪಿ. ಪೂರ್ಣಚಂದ್ರ ತೇಜಸ್ವಿ(K.P.Purnachandra...

ಗಣ್ಯರ ನಿಧನಕ್ಕೆ ವಿಧಾನಸಭೆಯಲ್ಲಿ ಸಂತಾಪ

ಬೆಂಗಳೂರು : ಇಂದು ವಿಧಾನಸಭೆಯ ಅಧಿವೇಶನದಲ್ಲಿ(Legislative Assembly Session) ಇತ್ತೀಚೆಗೆ ನಿಧನರಾದ...

Topics

ಸಚಿವಾಲಯ ಗ್ರಂಥಾಲಯದಲ್ಲಿ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ: ಮಾಸಿಕ ರೂ. 10,900 ಸ್ಟೈಫಂಡ್

ಬೆಂಗಳೂರು: ಕರ್ನಾಟಕ ಸರ್ಕಾರದ ಸಚಿವಾಲಯ ಗ್ರಂಥಾಲಯದಲ್ಲಿ(Karnataka Government Secretariat Library) 'ಅಪ್ರೆಂಟಿಸ್...

Related Articles