ಗಣ್ಯರ ನಿಧನಕ್ಕೆ ವಿಧಾನಸಭೆಯಲ್ಲಿ ಸಂತಾಪ

ಬೆಂಗಳೂರು : ಇಂದು ವಿಧಾನಸಭೆಯ ಅಧಿವೇಶನದಲ್ಲಿ(Legislative Assembly Session) ಇತ್ತೀಚೆಗೆ ನಿಧನರಾದ ಗಣ್ಯರಿಗೆ ಹಂಗಾಮಿ ಸಭಾಧ್ಯಕ್ಷರಾದ ಟಿ.ಬಿ.ಜಯಚಂದ್ರ(Pro-Team Speaker T.B.Jayachandra) ಅವರು ಸಂತಾಪ ಸೂಚನಾ ನಿರ್ಣಯವನ್ನು ಮಂಡಿಸಿ ಸಂತಾಪ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್(CM.D.K.Shiva Kumar) ಅವರು ವಿಧಾನಸಭೆಯಲ್ಲಿ ಸಂತಾಪ ಸೂಚನೆಗೆ ಬೆಂಬಲವನ್ನು ಸೂಚಿಸಿ ಮಾತನಾಡಿ, ಹುಟ್ಟುವಾಗ ಮಗು ಅಳುತ್ತಿರುತ್ತದೆ. ಆಗ ಸಮಾಜ ಬಹಳ ಸಂತೋಷ ಪಡುತ್ತದೆ. ಅದೇ ಮಗು ಬೆಳೆದು ದೊಡ್ಡವನಾಗಿ ಸಾಧನೆ ಮಾಡಿ ಸತ್ತಾಗ ಇದೇ ಸಮಾಜ ಅಳುತ್ತದೆ. ಗೆಳೆಯ ಸುಧಾಕರ್(Sudhakar) ಅವರ ಸಾವು ಇನ್ನೂ ಕಣ್ಣ ಮುಂದಿದೆ. ಆ ಒಂದು ತಿಂಗಳು ಆತ ಬದುಕಿನಲ್ಲಿ ಮಾಡಿದ ಹೋರಾಟ ನೆನಸಿಕೊಂಡರೆ ದುಃಖವಾಗುತ್ತದೆ ಎಂದು ಹೇಳಿದರು.

ಸುಧಾಕರ್ ಅಗಲಿಕೆಯನ್ನು ಕಷ್ಟದಿಂದಲೇ ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ಈಗ ಬಂದಿದೆ ಡಿ.ಸುಧಾಕರ್ ನನ್ನ ಆತ್ಮೀಯ ಗೆಳೆಯ. ಇಬ್ಬರದೂ ಒಂದೇ ವಯಸ್ಸು. ಆತನ ಉಸಿರು ಇಷ್ಟು ಬೇಗ ಹೋಗುತ್ತದೆ ಎಂದು ನಾವು, ನೀವು ಯಾರೂ ನಿರೀಕ್ಷಿಸಿರಲಿಲ್ಲ ಎಂದು ತಿಳಿಸಿ ಸುಧಾಕರ್ ನನ್ನನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನೋಡಬೇಕು ಅಂತ ಬಹಳ ಆಸೆ ಪಟ್ಟಿದ್ದರು. ನಿನ್ನ ಸಂಪುಟದಲ್ಲಿ ಮಂತ್ರಿಯಾಗದೇ ಇದ್ದರೂ ಚಿಂತೆ ಇಲ್ಲ ಎಂದಿದ್ದರು. ಪ್ರೀತಿ, ಗೆಳೆತನವನ್ನು ಒಪ್ಪಿಕೊಳ್ಳಬೇಕು ಎಂದರು.

ಕಾಲಿನ ಶಸ್ತ್ರಚಿಕಿತ್ಸೆಗೆ ತೆರಳಿದಾಗ ಹೆಚ್ಚು ಕಡಿಮೆಯಾಗಿ ಸಾವಾಯಿತು. ನಾವೆಲ್ಲ ಅವರನ್ನು ಉಳಿಸಿಕೊಳ್ಳಲು ಬಹಳ ಪ್ರಯತ್ನ ಮಾಡಿದೆವು. ಆದರೆ ಸಾಧ್ಯವಾಗಲಿಲ್ಲ. ಆತನ ಸಾವನ್ನು ಬಹಳ ಕಷ್ಟದಿಂದಲೇ ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ಈಗ ಬಂದಿದೆ ಎಂದರು.

ಸುಧಾಕರ್ ಅವರ ಮರಣದಲ್ಲಿ ನಾನು ಸಾರ್ಥಕತೆ ಕಂಡಿದ್ದೇನೆ. ಅವರು ಸೌಮ್ಯ, ಸ್ವಾಭಾವದ ಹಸನ್ಮುಖಿ ರಾಜಕಾರಣಿ. ಭಾರತ್ ಜೋಡೋ ಯಾತ್ರೆ ವೇಳೆ ಮಳೆ ಬಂದು ತೊಂದರೆಯಾದಾಗ ಕಾರ್ಯಕರ್ತರ ಸೈನ್ಯ ಕಟ್ಟಿಕೊಂಡು ಯಾತ್ರೆ ಯಶಸ್ವಿ ಗೊಳಿಸಿದರು. ಇವರ ಅಂದಿನ ಶ್ರಮ ನೆನಪಿಸಿಕೊಂಡು ರಾಹುಲ್ ಗಾಂಧಿ ಅವರು ಸುಧಾಕರ್ ಅವರ ಕುಟುಂಬದ ಜೊತೆ ಮಾತನಾಡಿ ಸಾಂತ್ವಾನ ಹೇಳಿದರು. ಸುಧಾಕರ್ ಅವರು ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು. ಅವರಿಗೆ ಯೋಜನೆ ಮತ್ತು ಸಾಂಖಿಕ್ಯ ಇಲಾಖೆ ಹಾಗೂ ಮುಜರಾಯಿ ಖಾತೆ ನೀಡಿದ್ದೆವು. ನಂತರ ಮುಜರಾಯಿ ಖಾತೆಯನ್ನು ರಾಮಲಿಂಗ ರೆಡ್ಡಿ ಅವರಿಗೆ ನೀಡಲಾಯಿತು. ಆಗ ಅವರು ನಿಮಗಾಗಿ ನಾನು ಸಚಿವ ಸ್ಥಾನ ಇಲ್ಲದೆಯೂ ಕೆಲಸ ಮಾಡಬಲ್ಲೇ ಎಂದಿದ್ದರು ಎಂದು ಒಡನಾಟ ಸ್ಮರಿಸಿದರು.

ಸುಧಾಕರ್ ಹೆಸರಲ್ಲಿ ಸಣ್ಣ ನೀರಾವರಿ ಯೋಜನೆ:

ಮನುಷ್ಯನ ಹುಟ್ಟು ಆಕಸ್ಮಿಕ. ಸಾವು ಖಚಿತ. ಶೋಕಿಸುವುದು ಸಹಜ ಕರ್ತವ್ಯ. ಆದರೆ ಪ್ರಯೋಜನ ಇಲ್ಲ. ಇದರ ಬದಲಾಗಿ ಅವರ ಪ್ರಮುಖ ಕನಸುಗಳು, ಯೋಜನೆಗಳನ್ನು ಸಾಕಾರ ಗೊಳಿಸಬೇಕು. ಆತ್ಮೀಯ ಮಿತ್ರ ಸುಧಾಕರ್ ನೀರಾವರಿ ಅಭಿವೃದ್ಧಿ ಬಗ್ಗೆ ಸಾಕಷ್ಟು ಕನಸು ಕಂಡಿದ್ದರು. ಅವರ ಜಿಲ್ಲೆಯ ಪ್ರಮುಖ ನೀರಾವರಿ ಯೋಜನೆಗೆ ಚಾಲನೆ ನೀಡಬೇಕು ಎಂದು ಚಿತ್ರದುರ್ಗ ಜಿಲ್ಲೆಯ ಎಲ್ಲಾ ಶಾಸಕರು ಪ್ರಯತ್ನ ಮಾಡಿದರು. ಸುಧಾಕರ್ ಅವರ ಹೆಸರನ್ನು ಚಿಸ್ಥಾಯಿ ಗೊಳಿಸುವ ನಿಟ್ಟಿನಲ್ಲಿ ಅವರ ನೆನಪಿನಲ್ಲಿ ಸಣ್ಣ ನೀರಾವರಿ ಯೋಜನೆಗೆ ಅವರ ಹೆಸರನ್ನು ನಾಮಕಾರಣ ಮಾಡಬೇಕು ಅಂತ ನಿರ್ಧಾರ ಮಾಡಿದ್ದೇನೆ ಎಂದರು.

ಪಾವಗಡದ ವೆಂಕಟರಮಣಪ್ಪನವರ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿ ವೆಂಕಟರಮಣಪ್ಪ ಅವರನ್ನು ನಾವು ತೋಳ, ತೋಳ ಎಂದು ಕರೆಯುತ್ತಿದ್ದೆವು. ಸಣ್ಣ ಕೈಗಾರಿಕೆ, ರೇμÉ್ಮ ಜವಳಿ ಸಚಿವರಾಗಿದ್ದರು. ಕುಡಿಯುವ ನೀರಿಗೆ ಬಹುದೊಡ್ಡ ಹೋರಾಟ ಮಾಡಿದವರು. ತುಮಕೂರು-ರಾಯದುರ್ಗ ರೈಲ್ವೇ ಯೋಜನೆಗೆ ಶ್ರಮಿಸಿದ್ದರು. ಕೃಷಿ ವೃತ್ತಿ, ರಾಜಕೀಯ ಪ್ರವೃತ್ತಿ ಎಂದು ಹೇಳುತ್ತಿದ್ದರು ಎಂದರು.

ಅದೇ ರೀತಿ ರಾಮಚಂದ್ರೇಗೌಡರು ಸಜ್ಜನ ರಾಜಕಾರಣಿ. ರಾಮಚಂದ್ರೇಗೌಡರು ನನ್ನ ಸಂಬಂಧಿಕರು. ಅವರು ಕಾರ್ಪೊರೇಟರ್ ಆಗಿದ್ದಾಗ ನಾನು ವಿದ್ಯಾರ್ಥಿ ನಾಯಕನಾಗಿದ್ದೆ. ಸಜ್ಜನ ರಾಜಕಾರಣಿ. ಯಡಿಯೂರಪ್ಪ ಅವರಿಗೆ ಬಲಗೈ ಬಂಟರಾಗಿದ್ದರು. 50 ವರ್ಷಗಳ ರಾಜಕೀಯ ಜೀವನದಲ್ಲಿ ಸರಳತೆಯಿಂದ ಇದ್ದವರು. ಬದುಕಿನಲ್ಲಿ ನ್ಯಾಯ, ನೀತಿ, ಸೇವೆಯನ್ನು ಗಮನದಲ್ಲಿಟ್ಟುಕೊಂಡು, ಶಿಸ್ತಿಗೆ ಪ್ರಾಮಾಣಿಕತೆಗೆ ಹೆಸರಾಗಿದ್ದರು ಎಂದರು.

ಬಿಜೆಪಿ ಕಟ್ಟಲು ಇಡೀ ರಾಜ್ಯ ಸುತ್ತಾಡಿದವರು. 5 ಬಾರಿ ಎಂಎಲ್ ಸಿಯಾಗಿದ್ದರು. ವೈದ್ಯಕೀಯ ಸಚಿವರಾಗಿದ್ದಾಗ ಆರೋಪ ಎದುರಾಗಿ, ತಕ್ಷಣ ರಾಜೀನಾಮೆ ನೀಡುವ ಪರಿಸ್ಥಿತಿ ಬಂತು. ಅವರು ಅಧಿಕಾರಕ್ಕೆ ಅಂಟಿಕೊಳ್ಳದೇ, ಒಂದು ದಿನವೂ ಕಾಯದೇ ರಾಜಿನಾಮೆ ನೀಡಿದ್ದರು. ನಾನು ಕರೆ ಮಾಡಿ ಆತುರದ ನಿರ್ಧಾರ ಕೈಗೊಳ್ಳಬೇಡಿ ಎಂದು ಹೇಳಿದ್ದೆ. ಆದರೂ ಅವರು ದೃಢ ನಿರ್ಧಾರ ಮಾಡಿದ್ದರು. ನನಗೆ ನೈತಿಕತೆ ಇದೆ. ಅದಕ್ಕಾಗಿ ತನಿಖೆ ಎದುರಿಸುತ್ತೇನೆ ಎಂದು ಆರೋಪ ಮುಕ್ತರಾದರು ಎಂದು ಒಡನಾಟ ಸ್ಮರಿಸಿದರು.

ಚನ್ನಮ್ಮ ಸರಳವಾಗಿ ಬದುಕಿದ ಹಿರಿಜೀವ:
ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚನ್ನಮ್ಮನವರ ಅಂತ್ಯಕ್ರಿಯೆಯ ವಿಚಾರವಾಗಿ ಅನೇಕ ಚರ್ಚೆಗಳು ನಡೆದವು. ಆದರೆ, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲು ನಾನು ಗಟ್ಟಿ ನಿರ್ಧಾರ ತೆಗೆದುಕೊಂಡೆ. ದೇವೇಗೌಡರ ಧರ್ಮಪತ್ನಿ ಚನ್ನಮ್ಮ ಅವರು ಸರಳವಾಗಿ ಬದುಕಿದ ಜೀವ. ರಾಜಕಾರಣಿಗಳ ಮನೆಯಲ್ಲಿ ಹೆಣ್ಣು ಮಕ್ಕಳು ಹೇಗಿರಬೇಕು ಎಂಬುದಕ್ಕೆ ಇವರ ಬದುಕೇ ಸಾಕ್ಷಿ. ಪ್ರತಿ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ ಎನ್ನುವುದಕ್ಕೆ ಅನ್ವರ್ಥದಂತೆ ಬದುಕಿದವರು. ತಾಯಿಯ ಮಾರ್ಗದರ್ಶನ ಸದಾ ಇತ್ತು ಎಂಬುದು ನನ್ನ ಭಾವನೆ ಎಂದರು.

ದೇವೇಗೌಡರು ಪ್ರಧಾನಿಗಳಾಗಲು, ಅವರ ಮಕ್ಕಳು ಈ ರಾಜ್ಯದ ಜನರ ಸೇವೆ ಮಾಡಲು ಚೆನ್ನಮ್ಮನವರ ಮಾರ್ಗದರ್ಶನವಿದೆ. ಅಧಿಕಾರ ಇರಲಿ ಇಲ್ಲದೇ ಇರಲಿ ನಾಡಿನ ಜನಸೇವೆಯಲ್ಲಿ ಅವರ ಕುಟಂಬ ತೊಡಗಿಕೊಂಡಿದೆ. ಅದಕ್ಕೆ ನಾವು ಆ ಕುಟುಂಬಕ್ಕೆ ಗೌರವ ಕೊಡಬೇಕು ಎಂದು ಮುಖ್ಯಮಂತ್ರಿಗಳು ಚೆನ್ನಮ್ಮನವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದರು.

ಹನುಮಂತಪ್ಪನವರು ನನಗೆ ಬಹಳ ಆತ್ಮೀಯರು. ರೈಲ್ವೇ ಆಯೋಗದ ಅಧ್ಯಕ್ಷರಾಗಿದ್ದರು. ನಾನು ಜನರಲ್ ಹಾಸ್ಟೆಲ್ ನಲ್ಲಿ ರೂಮ್ ನಂಬರ್ 108 ರಲ್ಲಿ ಇದ್ದೆ. ಅವರು 110 ರಲ್ಲಿ ಇದ್ದರು. ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಅವರಿಗೆ ಮಾರ್ಗದರ್ಶನ ನೀಡಿದ್ದರು. ಚಿತ್ರದುರ್ಗದಲ್ಲಿ ಪಕ್ಷದ ಕಚೇರಿಗೆ ಬುನಾದಿ ಹಾಕಿದವರು. ನಿಜಲಿಂಗಪ್ಪನವ ಆಸ್ತಿ ಖರೀದಿಗೆ ಒತ್ತಾಯ ಮಾಡಿದ್ದರು ಎಂದರು.

ಜಾಫರ್ ಷರೀಫ್ ಅವರ ಅಳಿಯರಾದ ಸಯ್ಯದ್ ಯಾಸೀನ್ ಅವರು ಮೂರು ಬಾರಿ ನನ್ನ ಜೊತೆ ಶಾಸಕರಾಗಿದ್ದರು. ಮಾಜಿ ಸಚಿವರಾದ ವೆಂಕಟಾಚಲಯ್ಯ ಅವರು ನಾವು ಒಟ್ಟಿಗೆ ಜಿಲ್ಲಾ ಪಂಚಾಯತಿ ಸದಸ್ಯರಾಗಿದ್ದೆವು. ಅವರು ನಂತರ ಶಾಸಕರಾದರು. ನಾನು ಅಂದು ಉಪಚುನಾವಣೆಯಲ್ಲಿ ದೊಡ್ಡ ಹೋರಾಟ ಮಾಡಿದೆ ಹಳೆಯ ನೆನಪನ್ನು ಹಂಚಿಕೊಂಡರು.

ಮಾಜಿ ಸಚಿವರಾದ ವೀರಣ್ಣನವರು ಉಗ್ರಪ್ಪ ಅವರ ಮಾವ. 1972ರಲ್ಲಿ ರಾಜಕೀಯ ಪ್ರವೇಶ ಮಾಡಿ, 83ರಲ್ಲಿ ಮಂತ್ರಿಯಾಗಿದ್ದರು. ಬಂಧಿಖಾನೆ ಮಂತ್ರಿಯಾಗಿ ಸೇವೆ ಮಾಡಿದ್ದರು. ದಕ್ಷತೆ ಪ್ರಾಮಾಣಿಕತೆಗೆ ಹೆಸರಾಗಿದ್ದರು” ಎಂದರು.

ಸಾವು ಯಾರನ್ನು ಕೇಳಿ ಬರಲ್ಲ. ಸಾವಿಗೆ ನಾಳೆ ಎನ್ನಲು ಸಾಧ್ಯವಿಲ್ಲ:
ನಮ್ಮೆಲ್ಲರ ಬದುಕಿನ ಪ್ರತಿಯೊಂದು ಭಾವನೆಗೂ ದನಿ ನೀಡಿದ ಗಾನ ಕೋಗಿಲೆ ಜಾನಕಿ ಅವರನ್ನು ಸದಾ ಸ್ಮರಿಸಿಕೊಳ್ಳಬೇಕು. ಪ್ರೀತಿಗೆ, ನೋವಿಗೆ, ಭಕ್ತಿಗೆ, ತಾಯ್ತನಕ್ಕೆ, ಗೆಳೆತನಕ್ಕೆ ಧ್ವನಿ ನೀಡಿದ ದೊಡ್ಡ ಗಾಯಕಿ. ಅಮ್ಮ ನಮ್ಮ ಜೊತೆ ದೈಹಿಕವಾಗಿ ಇಲ್ಲ. ಆದರೆ ಕಲಾವಿದರಿಗೆ ಸಾವಿಲ್ಲ. ಅವರ ದನಿಯ ಮೂಲಕ ಜೀವಂತವಾಗಿದ್ದಾರೆ.

ಅವರು ಪಕ್ಕದ ರಾಜ್ಯದವರು ಆದರೆ ತಮ್ಮ ಅಂತಿಮ ಸಂಸ್ಕಾರ ಮೈಸೂರಿನಲ್ಲೇ ಆಗಬೇಕು ಎಂದು ತೀರ್ಮಾನ ಮಾಡಿದ್ದರು. ಅವರ ಕುಟುಂಬದವರು ಈ ಮಾತನ್ನು ಹೇಳಿದಾಗ ಆಶ್ಚರ್ಯವಾಯಿತು ಎಂದು ಎಸ್ ಜಾನಕಿ ಅವರ ಸೇವೆಯನ್ನು ಕೊಂಡಾಡಿದರು.

ಅವರ ಹಾಡುಗಳು, ನೆನಪುಗಳು ಎಲ್ಲರ ಜೊತೆಯಲ್ಲಿವೆ. ಜಾನಕಿಯವರು ಎಂದಿಗೂ ನಮ್ಮ ಜೊತೆ ಇರಲಿದ್ದಾರೆ. ಕಳೆದುಕೊಂಡ ಮೇಲೆ ಕೊರಗೋ ಬದಲು ಜೊತೆಗೆ ಇದ್ದಾಗ ಅವರನ್ನು ಮಹತ್ವ ಅರಿತುಕೊಳ್ಳಬೇಕು. ಇದರ ಜೊತೆಗೆ ಹಿಂದಿ ಚಿತ್ರರಂಗದ ಆಶಾ ಬೋಸ್ಲೆ ಅವರೂ ಅವರ ದನಿಯ ಮೂಲಕ ಅಜರಾಮರ ಎಂದರು. ಮಾಜಿ ಸಚಿವರು, ಶಾಸಕರಾದ ವಿ. ಶ್ರೀನಿವಾಸನ್, ಕೆ.ಆರ್.ಶ್ರೀನಿವಾಸಯ್ಯ, ಎಚ್.ಎಸ್. ಪುಟ್ಟರಂಗನಾಥ್ ಅವರನ್ನು ಮುಖ್ಯಮಂತ್ರಿಗಳು ಸ್ಮರಿಸಿ ತಮ್ಮ ಸಂತಾಪ ವ್ಯಕ್ತಪಡಿಸಿದರು.

ಉಪಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವರ್ ಅವರು ಅಗಲಿದ ಗಣ್ಯರ ಸಂತಾಪ ಸೂಚನೆಗೆ ಬೆಂಬಲವನ್ನು ಸೂಚಿಸಿ ಮಾತನಾಡಿ ಸುಧಾಕರ್ ಅವರು ಕಳೆದ ವಿಧಾನಸಭೆಯ ಅಧಿವೇಶನದಲ್ಲಿ ಅನೇಕ ವಿಷಯಗಳನ್ನು ಚರ್ಚಿಸಿದ್ದರು. ಸುಧಾಕರ್ ಅವರು ನನಗೆ ಆತ್ಮೀಯ ಸ್ನೇಹಿತ. ಮುಖ್ಯಮಂತ್ರಿಗಳು ಈಗಾಗಲೇ ಸುಧಾಕರ್ ಅವರ ಕುರಿತು ಮಾತನಾಡಿದ್ದಾರೆ. ಅಗಲಿದ ಇತರೆ ಗಣ್ಯರಿಗೂ ಸಂತಾಪ ವ್ಯಕ್ತಪಡಿಸಿದರು.

ವಿರೋಧ ಪಕ್ಷದ ನಾಯಕರಾದ ಅಶೋಕ್ ರವರು ಅಗಲಿದ ಗಣ್ಯರ ಸಂತಾಪ ಸೂಚನೆಗೆ ಬೆಂಬಲವನ್ನು ಸೂಚಿಸಿ ಮಾತನಾಡಿ ಕಳೆದ ಅಧಿವೇಶನದಲ್ಲಿ ನಮ್ಮ ಜೊತೆ ಇದ್ದ ಸುಧಾಕರ್ ಇಂದು ನಮ್ಮ ಜೊತೆಯಲ್ಲಿ ಇಲ್ಲ. ಅಹಂಕಾರ ಇದ್ದಾಗ ಸ್ಮಶಾನವನ್ನು ಒಂದು ಸುತ್ತು ಓಡಾಡಿಕೊಂಡು ಬಂದರೆ ಯಾವುದೂ ಶಾಶ್ವತವಲ್ಲ, ನಾವು ಮಾಡಿದ ಕೆಲಸಗಳು ಮಾತ್ರ ಶಾಶ್ವತ. ಮುಖ್ಯಮಂತ್ರಿಗಳು ಸುಧಾಕರ್ ಹೆಸರಲ್ಲಿ ನೀರಾವರಿ ಯೋಜನೆ ತರುತ್ತೇವೆ ಎಂದು ತಿಳಿಸಿದ್ದಾರೆ. ಅದಕ್ಕೆ ನಮ್ಮ ಬೆಂಬಲವಿರುತ್ತದೆ ಎಂದರು.

ರಾಮಚಂದ್ರಗೌಡರು ನಮಗೆಲ್ಲ ಮಾರ್ಗದರ್ಶಕರಾಗಿದ್ದರು. ಪ್ರತಿಯೊಂದು ಕಾರ್ಯಕ್ರಮಕ್ಕೆ ಅವರನ್ನು ಕರೆದು ಕಾರ್ಯಕ್ರಮ ಮಾಡುತ್ತಿದ್ದೆವು. ಹಿರಿಯ ರಾಜಕಾರಣಿಗಳಾಗಿ ಬಿ.ಜೆ.ಪಿ ಬೆಳವಣಿಗೆಗೆ ಕಾರಣಿಭೂತರಾಗಿದ್ದರು.

ಮಾಜಿ ಪ್ರಧಾನಿಯವರ ಪತ್ನಿ ಚೆನ್ನಮ್ಮ ಅವರು ಅನ್ನಪೂರ್ಣೆಯಾಗಿದ್ದರು. ಸರ್ಕಾರ ಸಕಲ ಗೌರವದಿಂದ ಅವರ ಅಂತ್ಯ ಸಂಸ್ಕಾರ ಕಾರ್ಯ ನೆರವೇರಿಸಿತು. ನಾನು ಸಹ ಅವರ ಅಂತ್ಯ ಸಂಸ್ಕಾರ ಕಾರ್ಯದಲ್ಲಿ ಭಾಗವಹಿಸಿ ಬಂದೆ ಎಂದು ತಿಳಿಸಿದರು.

ಖ್ಯಾತ ಗಾಯಕಿ ಎಸ್.ಜಾನಕಿ, ಆಶಾಬೋಸ್ಲೆ, ಶ್ರೀನಿವಾಸಯ್ಯ, ಪುಟ್ಟರಂಗನಾಥ, ಹಿರಿಯ ರಾಜಕಾರಣಿ ಎಸ್. ಕೃಷ್ಣಪ್ಪ ಇವರುಗಳ ಅಗಲಿಕೆಯಿಂದ ನಷ್ಟ ಉಂಟಾಗಿದ್ದು ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಅವರ ಕುಟುಂಬದವರಿಗೆ ದು:ಖ ಭರಿಸುವ ಶಕ್ತಿ ನೀಡಲಿ ಎಂದು ತಿಳಿಸಿದರು.

ವಿಧಾನಸಭೆಯ ಇತರೆ ಸದಸ್ಯರಾದ ಸುರೇಶ್ ಬಾಬು, ವಿಜಯೇಂದ್ರ, ಅರಗ ಜ್ಞಾನೇಂದ್ರ, ಜಿ.ಟಿ ದೇವೇಗೌಡ, ಕೆ.ಹೆಚ್ ಮುನಿಯಪ್ಪ, ರಾಜಣ್ಣ, ಚನ್ನಬಸಪ್ಪ, ನರೇಂದ್ರಸ್ವಾಮಿ, ಶಿವರಾಜ್ ತಂಗಡಗಿ, ಶಿವಲಿಂಗೇಗೌಡ, ರಘುಮೂರ್ತಿ, ನಾಗೇಂದ್ರ ಹಾಗೂ ಇನ್ನಿತರ ಸದಸ್ಯರು ವಿಧಾನಸಭೆಯಲ್ಲಿ ಸಂತಾಪ ವ್ಯಕ್ತಪಡಿಸಿ ಮಾತನಾಡಿದರು. ನಂತರ ಎರಡು ನಿಮಿಷಗಳ ಮೌನವನ್ನು ಸಲ್ಲಿಸುವ ಮೂಲಕ ಮೃತ ಗಣ್ಯರಿಗೆ ನಮನ ಸಲ್ಲಿಸಲಾಯಿತು.

Hot this week

ನಿತ್ಯ ಪಂಚಾಂಗ 14.08.2026ಶುಕ್ರವಾರ FRIDAY.

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 14.08.2026ಶುಕ್ರವಾರ FRIDAY. ಸಂವತ್ಸರ: ಪರಾಭವ. SAMVATSARA : PARABHAVA. ಆಯಣ: ದಕ್ಷಿಣಾಯಣ. AYANA:...

ಸ್ವಾನಂದಾಶ್ರಮ: ಭಕ್ತಿ, ಸಂಸ್ಕೃತಿ, ಸೇವೆ ಮತ್ತು ಹೊಯ್ಸಳ ವೈಭವದ ಸಂಗಮ

ಆಗಸ್ಟ್ 16ರಿಂದ ವರದ ಗಣಪತಿ ವ್ರತಾಚರಣೆ ಬೆಂಗಳೂರು: ಕನಕಪುರ ರಸ್ತೆಯ ಅಗರ–ತಾತಗುಣಿಯಲ್ಲಿ(Thathaguni) ನೆಲೆಗೊಂಡಿರುವ...

ಮೇಕೆದಾಟು ಯೋಜನೆಗೆ ವೇಗ ನೀಡಲು ಅಧಿಕಾರಿಗಳಿಗೆ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ

ಬೆಂಗಳೂರು: ನೂತನವಾಗಿ ಜಲಸಂಪನ್ಮೂಲ ಸಚಿವರಾಗಿ(New Minister of Water Resources) ಅಧಿಕಾರ...

ತೇಜಸ್ವಿ ಜನ್ಮದಿನೋತ್ಸವ ಅಂಗವಾಗಿ ‘ಕರ್ವಾಲೊ’ ಕೃತಿ ಆಧಾರಿತ ಡಿಜಿಟಲ್ ಚಿತ್ರಕಲಾ ಸ್ಪರ್ಧೆಗೆ ಅರ್ಜಿ ಆಹ್ವಾನ

ಬೆಂಗಳೂರು : ಕನ್ನಡದ ಖ್ಯಾತ ಸಾಹಿತಿ ಹಾಗೂ ಚಿಂತಕ ಕೆ.ಪಿ. ಪೂರ್ಣಚಂದ್ರ ತೇಜಸ್ವಿ(K.P.Purnachandra...

ಸಚಿವಾಲಯ ಗ್ರಂಥಾಲಯದಲ್ಲಿ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ: ಮಾಸಿಕ ರೂ. 10,900 ಸ್ಟೈಫಂಡ್

ಬೆಂಗಳೂರು: ಕರ್ನಾಟಕ ಸರ್ಕಾರದ ಸಚಿವಾಲಯ ಗ್ರಂಥಾಲಯದಲ್ಲಿ(Karnataka Government Secretariat Library) 'ಅಪ್ರೆಂಟಿಸ್...

Topics

ನಿತ್ಯ ಪಂಚಾಂಗ 14.08.2026ಶುಕ್ರವಾರ FRIDAY.

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 14.08.2026ಶುಕ್ರವಾರ FRIDAY. ಸಂವತ್ಸರ: ಪರಾಭವ. SAMVATSARA : PARABHAVA. ಆಯಣ: ದಕ್ಷಿಣಾಯಣ. AYANA:...

ಸ್ವಾನಂದಾಶ್ರಮ: ಭಕ್ತಿ, ಸಂಸ್ಕೃತಿ, ಸೇವೆ ಮತ್ತು ಹೊಯ್ಸಳ ವೈಭವದ ಸಂಗಮ

ಆಗಸ್ಟ್ 16ರಿಂದ ವರದ ಗಣಪತಿ ವ್ರತಾಚರಣೆ ಬೆಂಗಳೂರು: ಕನಕಪುರ ರಸ್ತೆಯ ಅಗರ–ತಾತಗುಣಿಯಲ್ಲಿ(Thathaguni) ನೆಲೆಗೊಂಡಿರುವ...

ಮೇಕೆದಾಟು ಯೋಜನೆಗೆ ವೇಗ ನೀಡಲು ಅಧಿಕಾರಿಗಳಿಗೆ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ

ಬೆಂಗಳೂರು: ನೂತನವಾಗಿ ಜಲಸಂಪನ್ಮೂಲ ಸಚಿವರಾಗಿ(New Minister of Water Resources) ಅಧಿಕಾರ...

ತೇಜಸ್ವಿ ಜನ್ಮದಿನೋತ್ಸವ ಅಂಗವಾಗಿ ‘ಕರ್ವಾಲೊ’ ಕೃತಿ ಆಧಾರಿತ ಡಿಜಿಟಲ್ ಚಿತ್ರಕಲಾ ಸ್ಪರ್ಧೆಗೆ ಅರ್ಜಿ ಆಹ್ವಾನ

ಬೆಂಗಳೂರು : ಕನ್ನಡದ ಖ್ಯಾತ ಸಾಹಿತಿ ಹಾಗೂ ಚಿಂತಕ ಕೆ.ಪಿ. ಪೂರ್ಣಚಂದ್ರ ತೇಜಸ್ವಿ(K.P.Purnachandra...

ಸಚಿವಾಲಯ ಗ್ರಂಥಾಲಯದಲ್ಲಿ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ: ಮಾಸಿಕ ರೂ. 10,900 ಸ್ಟೈಫಂಡ್

ಬೆಂಗಳೂರು: ಕರ್ನಾಟಕ ಸರ್ಕಾರದ ಸಚಿವಾಲಯ ಗ್ರಂಥಾಲಯದಲ್ಲಿ(Karnataka Government Secretariat Library) 'ಅಪ್ರೆಂಟಿಸ್...

ಕಾಕೋಳಿನಲ್ಲಿ ಆ. 16ರಂದು ತಂಬಿಹಳ್ಳಿ ಮಾಧವತೀರ್ಥ ಮಠದ ಶ್ರೀ ವಿದ್ಯಾವಲ್ಲಭ ಮಾಧವತೀರ್ಥರ 85ನೇ ವರ್ಧಂತಿ ಮಹೋತ್ಸವ

ಶ್ರೀಮನ್ಮಧ್ವಾಚಾರ್ಯರ ಸಾಕ್ಷಾತ್ ಶಿಷ್ಯರಾದ ಚತುರ್ವೇದಭಾಷ್ಯಾಚಾರ್ಯ ಕೋಲಾರ ಜಿಲ್ಲೆಯ ತಂಬಿಹಳ್ಳಿಯ ಶ್ರೀಮನ್ಮಾಧವತೀರ್ಥ ಮಠದ...

Related Articles