ತೇಜಸ್ವಿ ಜನ್ಮದಿನೋತ್ಸವ ಅಂಗವಾಗಿ ‘ಕರ್ವಾಲೊ’ ಕೃತಿ ಆಧಾರಿತ ಡಿಜಿಟಲ್ ಚಿತ್ರಕಲಾ ಸ್ಪರ್ಧೆಗೆ ಅರ್ಜಿ ಆಹ್ವಾನ

ಬೆಂಗಳೂರು : ಕನ್ನಡದ ಖ್ಯಾತ ಸಾಹಿತಿ ಹಾಗೂ ಚಿಂತಕ ಕೆ.ಪಿ. ಪೂರ್ಣಚಂದ್ರ ತೇಜಸ್ವಿ(K.P.Purnachandra Tejaswi) ಅವರ 88ನೇ ಜನ್ಮದಿನೋತ್ಸವದ ಅಂಗವಾಗಿ, ಕೊಟ್ಟಿಗೆಹಾರದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ವತಿಯಿಂದ ತೇಜಸ್ವಿ ಅವರ ಪ್ರಸಿದ್ಧ ಕಾದಂಬರಿ “ಕರ್ವಾಲೊ”(Karvalo) ಆಧಾರಿತ ರಾಜ್ಯಮಟ್ಟದ ಡಿಜಿಟಲ್ ಚಿತ್ರಕಲಾ ಸ್ಪರ್ಧೆಯನ್ನು(Digital Art Competition) ಆಯೋಜಿಸಲಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ನಡೆಯುತ್ತಿರುವ ಈ ವಿನೂತನ ಸ್ಪರ್ಧೆಯಲ್ಲಿ, ತೇಜಸ್ವಿ ಅವರ ‘ಕರ್ವಾಲೊ’ ಕಾದಂಬರಿಯ ಯಾವುದೇ ಒಂದು ಸನ್ನಿವೇಶ, ಪ್ರಮುಖ ಪಾತ್ರ, ಸಂಭಾಷಣೆ, ಭಾವನೆ ಅಥವಾ ದೃಶ್ಯವನ್ನು ಆಧರಿಸಿ ಸ್ಪರ್ಧಿಗಳು ಡಿಜಿಟಲ್ ಚಿತ್ರಗಳನ್ನು ರಚಿಸಿ ಕಳುಹಿಸಬೇಕಾಗಿದೆ.
ಎರಡು ವಿಭಾಗಗಳಲ್ಲಿ ಸ್ಪರ್ಧೆ : 
ಸ್ಪರ್ಧೆಯನ್ನು 18 ವರ್ಷದೊಳಗಿನವರು ಹಾಗೂ 18 ವರ್ಷ ಮೇಲ್ಪಟ್ಟವರು ಎಂದು ಎರಡು ಪ್ರತ್ಯೇಕ ವಯೋಮಾನದ ವಿಭಾಗಗಳಲ್ಲಿ ಆಯೋಜಿಸಲಾಗಿದೆ. ಎರಡೂ ವಿಭಾಗಗಳಲ್ಲಿ ಅತ್ಯುತ್ತಮವಾಗಿ ಮೂಡಿಬರುವ ಚಿತ್ರಗಳಿಗೆ, ಪ್ರಥಮ ಬಹುಮಾನ: ರೂ. 20,000/-  ದ್ವಿತೀಯ ಬಹುಮಾನ: ರೂ.10,000/-  ಮತ್ತು ತೃತೀಯ ಬಹುಮಾನ: ರೂ. 5,000/-  ಗಳ ನಗದು ಬಹುಮಾನ ನೀಡಲಾಗುವುದು. ಅಲ್ಲದೇ ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಭಾಗವಹಿಸುವಿಕೆಯ ಪ್ರಮಾಣಪತ್ರ ನೀಡಲಾಗುವುದು.
ಚಿತ್ರ ಸಲ್ಲಿಸಲು 2026 ನೇ ಆಗಸ್ಟ್ 29 ಕೊನೆಯ ದಿನಾಂಕವಾಗಿದ್ದ, ಸೆಪ್ಟೆಂಬರ್ 5 ರಂದು ಪ್ರತಿಷ್ಠಾನದ ಅಧಿಕೃತ ಜಾಲತಾಣದಲ್ಲಿ ವಿಜೇತರ ಹೆಸರು ಪ್ರಕಟಣೆ ಮಾಡಲಾಗುವುದು ಸೆಪ್ಟೆಂಬರ್ 8 ರಂದು ಬಹುಮಾನ ವಿತರಣೆಯನ್ನು  ಕೊಟ್ಟಿಗೆಹಾರದಲ್ಲಿ ನಡೆಯುವ ತೇಜಸ್ವಿ ಅವರ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಗುವುದು.
ಸ್ಪರ್ಧೆಗೆ ಸಂಬಂಧಿಸಿದ ಹೆಚ್ಚಿನ ವಿವರಗಳಿಗಾಗಿ ಹಾಗೂ ಚಿತ್ರಗಳನ್ನು ಸಲ್ಲಿಸಲು  ಇಮೇಲ್: kpptrust.r@gmail.com  ಅಥವಾ
ದೂರವಾಣಿ ಸಂಖ್ಯೆ. 9663098873 / 9449309067  ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Hot this week

ನಿತ್ಯ ಪಂಚಾಂಗ 14.08.2026ಶುಕ್ರವಾರ FRIDAY.

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 14.08.2026ಶುಕ್ರವಾರ FRIDAY. ಸಂವತ್ಸರ: ಪರಾಭವ. SAMVATSARA : PARABHAVA. ಆಯಣ: ದಕ್ಷಿಣಾಯಣ. AYANA:...

ಸ್ವಾನಂದಾಶ್ರಮ: ಭಕ್ತಿ, ಸಂಸ್ಕೃತಿ, ಸೇವೆ ಮತ್ತು ಹೊಯ್ಸಳ ವೈಭವದ ಸಂಗಮ

ಆಗಸ್ಟ್ 16ರಿಂದ ವರದ ಗಣಪತಿ ವ್ರತಾಚರಣೆ ಬೆಂಗಳೂರು: ಕನಕಪುರ ರಸ್ತೆಯ ಅಗರ–ತಾತಗುಣಿಯಲ್ಲಿ(Thathaguni) ನೆಲೆಗೊಂಡಿರುವ...

ಮೇಕೆದಾಟು ಯೋಜನೆಗೆ ವೇಗ ನೀಡಲು ಅಧಿಕಾರಿಗಳಿಗೆ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ

ಬೆಂಗಳೂರು: ನೂತನವಾಗಿ ಜಲಸಂಪನ್ಮೂಲ ಸಚಿವರಾಗಿ(New Minister of Water Resources) ಅಧಿಕಾರ...

ಗಣ್ಯರ ನಿಧನಕ್ಕೆ ವಿಧಾನಸಭೆಯಲ್ಲಿ ಸಂತಾಪ

ಬೆಂಗಳೂರು : ಇಂದು ವಿಧಾನಸಭೆಯ ಅಧಿವೇಶನದಲ್ಲಿ(Legislative Assembly Session) ಇತ್ತೀಚೆಗೆ ನಿಧನರಾದ...

ಸಚಿವಾಲಯ ಗ್ರಂಥಾಲಯದಲ್ಲಿ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ: ಮಾಸಿಕ ರೂ. 10,900 ಸ್ಟೈಫಂಡ್

ಬೆಂಗಳೂರು: ಕರ್ನಾಟಕ ಸರ್ಕಾರದ ಸಚಿವಾಲಯ ಗ್ರಂಥಾಲಯದಲ್ಲಿ(Karnataka Government Secretariat Library) 'ಅಪ್ರೆಂಟಿಸ್...

Topics

ಕಾಕೋಳಿನಲ್ಲಿ ಆ. 16ರಂದು ತಂಬಿಹಳ್ಳಿ ಮಾಧವತೀರ್ಥ ಮಠದ ಶ್ರೀ ವಿದ್ಯಾವಲ್ಲಭ ಮಾಧವತೀರ್ಥರ 85ನೇ ವರ್ಧಂತಿ ಮಹೋತ್ಸವ

ಶ್ರೀಮನ್ಮಧ್ವಾಚಾರ್ಯರ ಸಾಕ್ಷಾತ್ ಶಿಷ್ಯರಾದ ಚತುರ್ವೇದಭಾಷ್ಯಾಚಾರ್ಯ ಕೋಲಾರ ಜಿಲ್ಲೆಯ ತಂಬಿಹಳ್ಳಿಯ ಶ್ರೀಮನ್ಮಾಧವತೀರ್ಥ ಮಠದ...

Related Articles