ಬೆಂಗಳೂರು, ಜೂ.30: ಶ್ರೀನಿವಾಸನಗರದಲ್ಲಿ ನೂತನವಾಗಿ ನಿರ್ಮಿಸಲಾದ ಗ್ಲೋಬಲ್ ಸಿಟಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ನ(Global City Credit Co-Operative Society) ನೂತನ(New) ಆಡಳಿತ ಕಚೇರಿಯನ್ನು ಹಲವು ಗಣ್ಯರ ಸಮ್ಮುಖದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಶುಭಾರಂಭ ಮಾಡಲಾಯಿತು.
ಬಸವನಗುಡಿ ಕ್ಷೇತ್ರದ ಮಾನ್ಯ ಶಾಸಕ ಎಲ್. ಎ. ರವಿ ಸುಬ್ರಹ್ಮಣ್ಯ, ವಿಧಾನ ಪರಿಷತ್ ಸದಸ್ಯರಾದ ಡಾ. ಟಿ. ಎ. ಶರವಣ, ಸಹಕಾರ ಇಲಾಖೆಯ ನಿ. ಪ್ರಧಾನ ಕಾರ್ಯದರ್ಶಿಗಳಾದ ಡಾ. ಸಿ. ಸೋಮಶೇಖರ್ (ಐ.ಎ.ಎಸ್), ಸಹಕಾರ ಇಲಾಖೆಯ ಸಹಾಯಕ ನಿಬಂಧಕ ಎಚ್. ಬಾಲಶೇಖರ್, ಜೆಡಿಎಸ್ ಹಿರಿಯ ಮುಖಂಡ ಕೆ. ಬಾಗೇಗೌಡ ಹಾಗೂ ಗ್ರೇಟರ್ ಬೆಂಗಳೂರು ಪಶ್ಚಿಮ ವಲಯದ ಅಧ್ಯಕ್ಷರಾದ ತಿಮ್ಮೇಗೌಡ ಅವರು ಜ್ಯೋತಿ ಬೆಳಗಿಸುವ ಮೂಲಕ ನೂತನ ಕಚೇರಿಯನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ‘ಸಹಕಾರ ರತ್ನ’ ಡಾ. ಬಿ. ಎಂ. ಉಮೇಶ್ಕುಮಾರ್ ಅವರು, “ಸಂಘವು ಪಾರದರ್ಶಕ, ವಿಶ್ವಾಸಾರ್ಹ ಹಾಗೂ ಸದಸ್ಯ-ಸ್ನೇಹಿ ಆರ್ಥಿಕ ಸೇವೆಗಳನ್ನು ಒದಗಿಸುವ ಮೂಲಕ ಸಹಕಾರ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವ ದೃಢವಾದ ಗುರಿಯನ್ನು ಹೊಂದಿದೆ,” ಎಂದು ತಮ್ಮ ಆಶಯವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಡಾ. ಎಸ್. ಎನ್. ಇಂದ್ರೇಶ್, ಹಾಗೂ ನಿರ್ದೇಶಕ ಮಂಡಳಿಯ ಸದಸ್ಯರುಗಳಾದ ಪದ್ಮನಾಭ ಎಸ್., ಸಂಜಯ್ ಜಗದೀಶ್, ಡಾ. ರವಿ ಎಸ್., ವೆಂಕಟೇಶಮೂರ್ತಿ, ಡಾ. ಎಂ. ಎ. ಹಿರೇಮಠ್ ಮತ್ತು ಶ್ರೀಮತಿ ವಿಂಧ್ಯಾ ಅನಿಲ್ ಉಪಸ್ಥಿತರಿದ್ದರು.
ಸಂಘದ ಸದಸ್ಯರು, ಗ್ರಾಹಕರು, ಗಣ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಸಂಘವು ಎಲ್ಲಾ ಪ್ರಕಾರದ ಬ್ಯಾಂಕಿಂಗ್ ಸೇವೆ ನೀಡುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

