‘ಲವ್ ಜಿಹಾದ್’(Love Jihad) ತಡೆಯಲು ಹಿಂದೂ ಧರ್ಮ ಮತ್ತು ಸಂಸ್ಕೃತಿಯನ್ನು ನಿಷ್ಠೆಯಿಂದ ಪಾಲಿಸುವುದು ಅತ್ಯಗತ್ಯ! – ಸದ್ಗುರು ಸ್ವಾತಿ ಖಾಡ್ಯೆ, ಧರ್ಮಪ್ರಚಾರಕರು, ಸನಾತನ ಸಂಸ್ಥೆ
ಬೆಳಗಾವಿ ಜೂ.30: ಹಿಂದೂ ಧರ್ಮದ ಬಗ್ಗೆ ಅಭಿಮಾನವಿಲ್ಲದ ಕಾರಣ ಮತ್ತು ನಮ್ಮ ಸಂಸ್ಕೃತಿಯ ಶ್ರೇಷ್ಠತೆ ತಿಳಿಯದ ಕಾರಣ ಹಿಂದೂ ಹುಡುಗಿಯರು ‘ಲವ್ ಜಿಹಾದ್’ಗೆ ಬಲಿಯಾಗುತ್ತಿದ್ದಾರೆ. ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಹಿಂದೂ ಯುವತಿಯರು ರಾಣಿ ಚೆನ್ನಮ್ಮ, ರಾಣಿ ಪದ್ಮಾವತಿ, ರಾಣಿ ಲಕ್ಷ್ಮೀಬಾಯಿ, ಅಹಲ್ಯಾಬಾಯಿ ಹೋಳ್ಕರ್ ಮತ್ತು ರಾಜಮಾತಾ ಜಿಜಾವು ಅವರನ್ನು ಇಂದು ತಮ್ಮ ಆದರ್ಶವಾಗಿಟ್ಟುಕೊಳ್ಳಬೇಕಾದ ಅಗತ್ಯವಿದೆ. ‘ಲವ್ ಜಿಹಾದ್’ ಕೇವಲ ಹಿಂದೂ ಹುಡುಗಿಯರ ಮೇಲಲ್ಲ, ಬದಲಿಗೆ ಧರ್ಮದ ಮೇಲೆ ನಡೆದ ದಾಳಿಯಾಗಿದೆ. ಆದ್ದರಿಂದ, ನಾವೆಲ್ಲರೂ ಧರ್ಮದ ಆಧಾರದ ಮೇಲೆಯೇ ಇದಕ್ಕೆ ಪ್ರತ್ಯುತ್ತರ ನೀಡಬಹುದು. ‘ಲವ್ ಜಿಹಾದ್’ ತಡೆಯಲು ಹಿಂದೂ ಧರ್ಮ-ಸಂಸ್ಕೃತಿಯನ್ನು ನಿಷ್ಠೆಯಿಂದ ಪಾಲಿಸುವುದು(to follow faithfully) ಅತ್ಯಗತ್ಯ ಎಂದು ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಸದ್ಗುರು ಸ್ವಾತಿ ಖಾಡ್ಯೆ ಅವರು ಕರೆ ನೀಡಿದರು. ಅವರು ಬೆಳಗಾವಿಯ ಶಹಾಪುರ, ಮಹಾತ್ಮಾ ಫುಲೆ ರಸ್ತೆಯ ದಾನಮ್ಮ ದೇವಸ್ಥಾನದ ‘ಶ್ರೀ ಜಗಜ್ಯೋತಿ ಬಸವೇಶ್ವರ ಕಲ್ಯಾಣ ಮಂಟಪ’ದಲ್ಲಿ ಆಯೋಜಿಸಲಾಗಿದ್ದ ‘ಲವ್ ಜಿಹಾದ್’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಇಸ್ಕಾನ್ ಸಂಪ್ರದಾಯದ ಮುಖ್ಯಸ್ಥರಾದ ಶ್ರೀಮಾನ್ ಶಂಕರಾರಣ್ಯ ಪ್ರಭೂಜಿ, ಸನಾತನ ಸಂಸ್ಥೆಯ ಸಂತರಾದ ಪೂಜ್ಯ ಶಂಕರ್ ಗುಂಜೆಕರ್ ಅವರೊಂದಿಗೆ 1600 ಕ್ಕೂ ಹೆಚ್ಚು ಹಿಂದೂ ನಾಗರಿಕರು, ಮಹಿಳೆಯರು ಮತ್ತು ಯುವತಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿವಿಧ ಶಾಲೆಗಳಿಂದ ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಉಪನ್ಯಾಸ ಆಲಿಸಲು ಬಂದಿದ್ದರು. ಸದ್ಗುರು ಸ್ವಾತಿ ಖಾಡ್ಯೆ ಅವರನ್ನು ಸೌ. ಸೂರ್ಯ ಪಾಟೀಲ್ ಅವರು ಸನ್ಮಾನಿಸಿದರು.
ಸದ್ಗುರು ಸ್ವಾತಿ ಖಾಡ್ಯೆ ಅವರು ಮುಂದುವರಿದು ಮಾತನಾಡಿ, ‘‘‘ಲವ್ ಜಿಹಾದ್’ ಮಾಡುವವರು ಮತ್ತು ಅದಕ್ಕೆ ಮೂಕ ಬೆಂಬಲ ನೀಡುವವರ ಒಂದು ದೊಡ್ಡ ಜಾಲವೇ(Network) ಇದೆ. ಈ ಜಾಲದಿಂದ ನಾವು ಹಿಂದೂ ಹುಡುಗಿಯರನ್ನು ರಕ್ಷಿಸಬೇಕಾಗಿದೆ. ಇದಕ್ಕಾಗಿ ಪ್ರತಿಯೊಂದು ಹಿಂದೂ ಕುಟುಂಬದಲ್ಲಿ ಧರ್ಮಾಭಿಮಾನವನ್ನು ಬೆಳೆಸಿದರೆ, ದೇಶದ ಯಾವುದೇ ಒಬ್ಬ ಹುಡುಗಿಯೂ ಈ ಜಾಲದಲ್ಲಿ ಸಿಲುಕುವುದಿಲ್ಲ. ಮುಂಬರುವ ರಕ್ಷಾಬಂಧನದ ಸಂದರ್ಭದಲ್ಲಿ ಹಿಂದೂ ಯುವಕರು ತಮ್ಮ ಸಹೋದರಿಯರಿಗೆ ‘ಲವ್ ಜಿಹಾದ್’ ಎಂಬ ಗ್ರಂಥವನ್ನು ಉಡುಗೊರೆಯಾಗಿ ನೀಡಬೇಕು,’’ ಎಂದರು.
‘ಲವ್ ಜಿಹಾದ್’ ಹಿಂದೂ ಸಂಸ್ಕೃತಿ ಮತ್ತು ಹಿಂದೂ ಧರ್ಮವನ್ನು ಮುಗಿಸುವ ದೊಡ್ಡ ಪಿತೂರಿ(Conspiracy) ! – ರಮೇಶ್ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
ಕಾರ್ಯಕ್ರಮದ ಮತ್ತೊಬ್ಬ ಮುಖ್ಯ ವಕ್ತಾರರಾದ ಶ್ರೀ. ರಮೇಶ್ ಶಿಂದೆ ಅವರು ತಮ್ಮ ಭಾಷಣದಲ್ಲಿ ‘ಲವ್ ಜಿಹಾದ್’ನ ಐತಿಹಾಸಿಕ ಸಂದರ್ಭವನ್ನು ಪ್ರಸ್ತಾಪಿಸಿದರು. ವರ್ಷ 711 ರಲ್ಲಿ ಮೊಹಮ್ಮದ್ ಬಿನ್ ಕಾಸಿಮ್ ಆಕ್ರಮಣದಿಂದ ಹಿಡಿದು ಗಜ್ನಿ, ಘೋರಿ, ಬಾಬರ್ ಅವರ ಕಾಲದ ಅತ್ಯಾಚಾರಗಳನ್ನು ಉಲ್ಲೇಖಿಸುತ್ತಾ, ಕೇವಲ ಛತ್ರಪತಿ ಶಿವಾಜಿ ಮಹಾರಾಜರ ಕಾರ್ಯಕಾಲದಲ್ಲಿ ಮಾತ್ರ ಮಹಿಳೆಯರಿಗೆ ನೈಜ ಗೌರವ ಮತ್ತು ರಕ್ಷಣೆ ದೊರೆಯಿತು ಎಂದು ಹೇಳಿದರು. ಅದರ ನಂತರ 1947 ರ ದೇಶದ ವಿಭಜನೆ, 1971 ರಲ್ಲಿ ಬಾಂಗ್ಲಾದೇಶದ ನಿರ್ಮಾಣ, 1990 ರಲ್ಲಿ ಕಾಶ್ಮೀರದಲ್ಲಿ ನಡೆದ ಹಿಂದೂಗಳ ನರಮೇಧ, ಹಾಗೂ 1992 ರಲ್ಲಿ ನಡೆದ ‘ಅಜ್ಮೀರ್ ಸೆಕ್ಸ್ ಸ್ಕ್ಯಾಂಡಲ್’ನಂತಹ ದೊಡ್ಡ ಘಟನೆಗಳಲ್ಲಿ 250 ಕ್ಕೂ ಹೆಚ್ಚು ಹಿಂದೂ ಯುವತಿಯರು ಬಲಿಯಾಗಿದ್ದಾರೆ. ಹಿಂದೂ ಮಹಿಳೆಯರು ಮತ್ತು ಯುವತಿಯರ ಮೇಲಿನ ದೌರ್ಜನ್ಯ ಅಂದಿನಿಂದ ಇಂದಿನವರೆಗೂ ಮುಂದುವರಿಯುತ್ತಲೇ ಇದೆ. ‘ಲವ್ ಜಿಹಾದ್’ ಹಿಂದೂ ಸಂಸ್ಕೃತಿ ಮತ್ತು ಹಿಂದೂ ಧರ್ಮವನ್ನು ನಾಶಮಾಡುವ ಒಂದು ದೊಡ್ಡ ಪಿತೂರಿಯಾಗಿದೆ.
ಶ್ರೀ. ಶಿಂದೆ ಅವರು ಮುಂದುವರಿದು ಎಚ್ಚರಿಕೆ ನೀಡುತ್ತಾ, ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ (PFI) ದಂತಹ ಸಂಘಟನೆಗಳು 2047 ರ ವೇಳೆಗೆ ಭಾರತದಲ್ಲಿ ‘ದಾರ್-ಉಲ್-ಇಸ್ಲಾಂ’ ಅಂದರೆ ತಮ್ಮದೇ ಆಡಳಿತವನ್ನು ತರುವ ಉದ್ದೇಶವನ್ನು ಹೊಂದಿದ್ದು, ಅದಕ್ಕಾಗಿ ‘ಗಜ್ವಾ-ಎ-ಹಿಂದ್’ ಮಾಧ್ಯಮದ ಮೂಲಕ ಜನಸಂಖ್ಯೆ ಹೆಚ್ಚಿಸುವುದು ಮತ್ತು ಹಿಂದೂಗಳ ವಂಶಾವಳಿಯನ್ನು ಮುಗಿಸುವ ವ್ಯವಸ್ಥಿತ ಪ್ರಯತ್ನಗಳು ನಡೆಯುತ್ತಿವೆ. ಚಲನಚಿತ್ರ ರಂಗದ ಉದಾಹರಣೆಗಳಿಂದಲಾದರೂ ಸಮಾಜವು ಈಗಲಾದರೂ ಜಾಗೃತಗೊಳ್ಳುವ ಸಮಯ ಬಂದಿದೆ ಎಂದರು.
‘ಲವ್ ಜಿಹಾದ್’ ವಿರುದ್ಧ ‘ಬೇಟಿ ಸುರಕ್ಷಿತ್, ರಾಷ್ಟ್ರ ಸುರಕ್ಷಿತ್’ ಅಭಿಯಾನ !
ಈ ಗಂಭೀರ ಸಂಕಟದ ಪ್ರತೀಕಾರಕ್ಕಾಗಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ದೇಶಾದ್ಯಂತ ‘ಬೇಟಿ ಸುರಕ್ಷಿತ್, ರಾಷ್ಟ್ರ ಸುರಕ್ಷಿತ್’ (ಮಗಳು ಸುರಕ್ಷಿತ, ರಾಷ್ಟ್ರ ಸುರಕ್ಷಿತ) ಎಂಬ ವಿಶೇಷ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಇದರಲ್ಲಿ ಎಲ್ಲರೂ ಭಾಗವಹಿಸಬೇಕು. ಹಿಂದೂ ಯುವತಿಯರು ಈ ಅಭಿಯಾನದ ಸಕ್ರಿಯ ಸದಸ್ಯರಾಗಿ ತಮ್ಮ ಮತ್ತು ರಾಷ್ಟ್ರದ ರಕ್ಷಣೆ ಮಾಡಬೇಕು ಎಂದು ಶ್ರೀ ರಮೇಶ್ ಶಿಂದೆ ಅವರು ಕರೆ ನೀಡಿದರು.

