ಎನ್ಯುಮರೇಶನ್ ಫಾರಂ (ಗಣತಿ ನಮೂನೆ) ಭರ್ತಿ ಮೂಲಕ ಎಸ್‍ಐಆರ್ ಪ್ರಕ್ರಿಯೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ದೂರವಾಣಿ ಸಂಖ್ಯೆ, ಹೆಸರು ತಿದ್ದುಪಡಿಗೆ ಅವಕಾಶವಿದೆ ಕುಟುಂಬದವರ ಪರವಾಗಿ ಒಬ್ಬರು ಸಹಿ ಮಾಡಿದರೂ ಅರ್ಜಿ ಸ್ವೀಕಾರ

 ಬೆಂಗಳೂರು, ಜೂನ್ 30 (ಕರ್ನಾಟಕ ವಾರ್ತೆ) : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಗಣತಿ ನಮೂನೆ(Enumaration Form) ಭರ್ತಿ ಮಾಡುವ ಮೂಲಕ ರಾಜ್ಯದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಗೆ ಚಾಲನೆ ನೀಡಿದರು.

ಇಂದು ಸದಾಶಿವನಗರದ ತಮ್ಮ ನಿವಾಸದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಶಿವಕುಮಾರ್ ಹಾಗೂ ಅವರ ಪತ್ನಿ ಉಷಾ ಶಿವಕುಮಾರ್ ಅವರು ಗಣತಿ ನಮೂನೆ ತುಂಬಿದ ನಂತರ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ರಾಜ್ಯದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಆರಂಭವಾಗಿದ್ದು, ನಮ್ಮ ಮನೆಯಿಂದಲೇ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ನನ್ನ ಎನ್ಯುಮರೇಷನ್ ಅರ್ಜಿಯನ್ನು ಭರ್ತಿ ಮಾಡಿ ಸಹಿ ಮಾಡಿ ಸಲ್ಲಿಕೆ ಮಾಡಿರುವೆ. ನೀವು ನಿಮ್ಮ ಹೆಸರಿನ ಜೊತೆಗೆ ಈ ಹಿಂದೆ ಮತದಾರ ಪಟ್ಟಿ ಸಮಯದಲ್ಲಿ ನೀಡಲಾಗಿದ್ದ ದೂರವಾಣಿ ಸಂಖ್ಯೆಯನ್ನು(Mobile No.) ನಮೂದಿಸಬೇಕಾಗುತ್ತದೆ. ಇಲ್ಲವಾದರೆ ಹೊಸ ಮೊಬೈಲ್ ಸಂಖ್ಯೆಯನ್ನು ಅಧಿಕಾರಿಗಳ ಮೂಲಕ ಸೇರ್ಪಡೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ಯಾವ ಸಂಖ್ಯೆ ನೀಡಿರುತ್ತಿರೋ ಅದೇ ಸಂಖ್ಯೆಗೆ ಒಟಿಪಿ ಬರಲಿದೆ ಎಂದು ಮಾಹಿತಿ ನೀಡಿದರು.ಕುಟುಂಬದವರ ಪರವಾಗಿ ಒಬ್ಬರು ಸಹಿ ಮಾಡಿದರೂ ಅರ್ಜಿ ಸ್ವೀಕಾರ:

ನೀವು ನಿಮ್ಮ ಹೆಸರಿನಲ್ಲಿ ತಿದ್ದುಪಡಿ(Modification) ಮಾಡಿಕೊಳ್ಳಲು ಅವಕಾಶವಿದೆ. ಬಿಎಲ್‍ಎ(BLE), ಬಿಎಲ್‍ಒ(BLO) ಹಾಗೂ ಮೇಲ್ವಿಚಾರಕರು ಈಗಾಗಲೇ ವಾಟ್ಸಪ್ ಗ್ರೂಪ್ (Whats up group) ಮಾಡಿಕೊಂಡಿದ್ದಾರೆ. ಕುಟುಂಬದ ಸದಸ್ಯರ ಪೈಕಿ ಒಬ್ಬರು ಸಹಿ ಮಾಡಿದರೂ ಸಾಕು. ಕುಟುಂಬದವರ ಪರವಾಗಿ(Permission) ಒಬ್ಬರೇ ಎಲ್ಲರ ಅರ್ಜಿ ತುಂಬಬಹುದು. ಅದನ್ನು ಸ್ವೀಕಾರ ಮಾಡಿಕೊಳ್ಳಲಾಗುವುದು. ನಿಮ್ಮ ಪೋಟೋ ಬದಲಾಯಿಸಿಕೊಳ್ಳಬೇಕಾದರೆ ಅರ್ಜಿಯಲ್ಲಿ ಹೊಸ ಪೋಟೋ ನೀಡಬಹುದು. ಹೊಸ ಮತದಾರರು ನಿವಾಸ ದೃಢೀಕರಣ ಪತ್ರ ನೀಡಬೇಕು. ಕರ್ನಾಟಕ ಸರ್ಕಾರ ರಾಜ್ಯದ ಜನರಿಗೆ ಅಗತ್ಯ ಪ್ರಮಾಣಪತ್ರ ನೀಡಲು ಮುಂದಾಗಿದೆ. ಎಲ್ಲರೂ ತಮ್ಮ ಮತದಾನದ ಹಕ್ಕು ಉಳಿಸಿಕೊಳ್ಳಬೇಕು. ಉಳಿಸಿಕೊಳ್ಳದಿದ್ದರೆ ಸರ್ಕಾರದ ಸೌಲಭ್ಯ, ಕಾರ್ಯಕ್ರಮಗಳನ್ನು ಪಡೆಯುವುದು ಕಷ್ಟವಾಗಲಿದೆ ಎಂದು ಮಾಹಿತಿ ನೀಡಿದರು.

ಕೆಲವು ಅನಕ್ಷರಸ್ಥರಿಗೆ(Illigterateಆಪ್ ಬಳಸುವುದರ ಬಗ್ಗೆ ಮಾಹಿತಿ ಇರುವುದಿಲ್ಲ ಎಂದು ಕೇಳಿದಾಗ, ಆಪ್ ಬಳಸುವ ವಿಚಾರದಲ್ಲಿ ನನಗೂ ಮಾಹಿತಿ ಇಲ್ಲ. ನಾನು ಬೇರೆಯವರ ಸಹಾಯ ಪಡೆದೆ. ಈ ಕಾರಣಕ್ಕೆ ಬಿಎಲ್‍ಒಗಳ ಮೂಲಕ ಅರ್ಜಿ ಪಡೆದು ಆಪ್ ನಲ್ಲಿ ಲೈನ್ ಮೂಲಕವೇ ಅರ್ಜಿ ತುಂಬಬಹುದು ಎಂದು ತಿಳಿಸಿದರು.

ಕರ್ನಾಟಕದ ವಿಚಾರದಲ್ಲಿ ಈ ಪ್ರಕ್ರಿಯೆ ಬಹಳ ಪ್ರಮುಖವಾಗಿದೆಯೇ ಎಂದು ಕೇಳಿದಾಗ, ಬೇರೆ ರಾಜ್ಯಗಳಲ್ಲಿ ಸರ್ಕಾರದ ಸೌಲಭ್ಯಗಳನ್ನು ಕೇವಲ ಮತದಾರರಿಗೆ ಮಾತ್ರ ನೀಡುತ್ತಿದ್ದು, ಮತದಾನ ಹಕ್ಕು ಇಲ್ಲದವರಿಗೆ ಸೌಲಭ್ಯ ಹಿಂಪಡೆಯಲಾಗುತ್ತಿದೆ. ಅದೇ ವ್ಯವಸ್ಥೆ ರಾಜ್ಯದಲ್ಲೂ ಬರಬಹುದು ಎಂದು ತಿಳಿಸಿದರು.

ನಮ್ಮ ರಾಜ್ಯದ ಮತದಾರರಿಗೆ ಮಾತ್ರ ನಾವು ಗ್ಯಾರಂಟಿ ನೀಡಬಹುದು. ಬೇರೆ ರಾಜ್ಯದ ಮತದಾರರಿಗೆ ನಾವು ಯಾಕೆ ಗ್ಯಾರಂಟಿ ನೀಡಬೇಕು? ನಮ್ಮ ರಾಜ್ಯದವರಿಗೆ ಮಾತ್ರ ಗ್ಯಾರಂಟಿ ನೀಡಬೇಕು ಎಂಬುದು ನಮ್ಮ ಆಲೋಚನೆ ಎಂದು ತಿಳಿಸಿದರು.

ರಾಜ್ಯದಲ್ಲಿ  ಎಸ್.ಐ.ಆರ್. ಪ್ರಕ್ರಿಯೆ ಆರಂಭ; ಅಗತ್ಯ ಮಾಹಿತಿ ಒದಗಿಸಲು ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಮನವಿ

ರಾಜ್ಯದಲ್ಲಿ ಎಸ್.ಐ.ಆರ್. ಪ್ರಕ್ರಿಯೆ ಪ್ರಾರಂಭವಾಗಿರುವುದರಿಂದ ಕಡ್ಡಾಯವಾಗಿ ರಾಜ್ಯದ ನಾಗರೀಕರೆಲ್ಲರೂ ಅಗತ್ಯ ಮಾಹಿತಿ ಒದಗಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ.ಶಾಲಿನಿ ರಜನೀಶ್ ಅವರು ಮನವಿ ಮಾಡಿದ್ದಾರೆ.

ನಾಗರಿಕರು ಈ ಅರ್ಜಿಯನ್ನು ತುಂಬುವಾಗ ಯಾವುದೇ ವಿಷಯವಾಗಿ ಗೊಂದಲಗಳಿದ್ದರೆ, ಪ್ರತಿಯೊಂದು ವಾರ್ಡ್‍ನಲ್ಲೂ ಸ್ಥಾಪಿಸಲಾಗಿರುವ ಸಿಟಿಜನ್ ಸರ್ವೀಸ್ ಸೆಂಟರ್ ಹಾಗೂ ವೋಟರ್ ಫೆಸಿಲಿಟೇಷನ್ ಸೆಂಟರ್ ನಲ್ಲಿ ಮಾಹಿತಿಯನ್ನು ಪಡೆದು ನಿಖರವಾಗಿ ಅರ್ಜಿಯನ್ನು ತುಂಬಬಹುದು.

ಎಸ್.ಐ.ಆರ್. ಅರ್ಜಿಯನ್ನು ತುಂಬಿದರೆ ನಾವು ದೇಶದ ನಾಗರೀಕರಾಗಿದ್ದೇವೆ ಹಾಗೂ ದೇಶದ ಮತದಾರರಾದಂತೆ. ಹಾಗಾಗಿ ರಾಜ್ಯದ ಪ್ರತಿಯೊಬ್ಬ ನಾಗರೀಕರು ಎಸ್.ಐ.ಆರ್. ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಅರ್ಜಿಯನ್ನು ಸಲ್ಲಿಸುವಂತೆ ಅವರು ಕೋರಿದ್ದಾರೆ.

ನನಗೂ ಕೂಡು ಬಿ.ಎಲ್.ಒ ಅಧಿಕಾರಿಗಳು ಮೂರು ಅರ್ಜಿಗಳನ್ನು ನೀಡಿದ್ದು, ನಾನೂ ಕೂಡು ಅರ್ಜಿಯನ್ನು ತುಂಬಿ ಸಲ್ಲಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ  ಆರ್ಥಿಕ ನೆರವು – ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದ ವತಿಯಿಂದ 2026-27ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ವರ್ಗದ (ST)  ಅಭ್ಯರ್ಥಿಗಳಿಗಾಗಿ ಮಹತ್ವದ ಯೋಜನೆಯೊಂದನ್ನು ಹಮ್ಮಿಕೊಳ್ಳಲಾಗಿದ್ದು, ಈ ಯೋಜನೆಯಡಿ ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ವ್ಯಾಸಂಗ (Higher Education) ಮಾಡಲು ಬಯಸುವ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ವರ್ಗದ (ST) ಅರ್ಹ ಅಭ್ಯರ್ಥಿಗಳಿಗೆ “ಡಾ. ಬಿ.ಆರ್. ಅಂಬೇಡ್ಕರ್ ಅಂತರಾಷ್ಟ್ರೀಯ ಶಿಷ್ಯ ವೇತನ”  ನೀಡಲಾಗುತ್ತದೆ. ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಇಲಾಖೆಯ ಅಧಿಕೃತ ವೆಬ್‍ಸೈಟ್ ವಿಳಾಸ igccd.karnataka.gov.in ಗೆ ಭೇಟಿ ನೀಡಬಹುದು ಎಂದು ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ವಿವಿಧ ಕೋರ್ಸುಗಳ ಪ್ರವೇಶಾತಿ ಆರಂಭ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಪ್ರಸಕ್ತ 2026-27ನೇ  ಶೈಕ್ಷಣಿಕ ಸಾಲಿಗೆ ಜುಲೈ ಆವೃತ್ತಿ ಪ್ರವೇಶಾತಿಗೆ ಯುಜಿಸಿ ಅನುಮೋದಿತ ಶಿಕ್ಷಣಕ್ರಮಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಸ್ನಾತಕ ಕೋರ್ಸ್‍ಗಳಾದ ಬಿ.ಎ, ಬಿ.ಕಾಂ, ಬಿ.ಎಸ್.ಸಿ, ಬಿ.ಬಿ.ಎ, ಬಿ.ಸಿ.ಎ, ಬಿ.ಎಸ್.ಡಬ್ಲ್ಯೂ, ಬಿ.ಲಿಬ್.ಐ.ಎಸ್.ಸಿ, ಸ್ನಾತಕೋತ್ತರ ಕೋರ್ಸ್‍ಗಳಾದ ಎಂ.ಎ, ಎಂ.ಕಾಂ., ಎಂ.ಎಸ್.ಸಿ., ಎಂ.ಬಿ.ಎ., ಎಂ.ಲಿಬ್.ಐ.ಎಸ್.ಸಿ, ಎಂ.ಸಿ.ಎ., ಎಂ.ಎಸ್.ಡಬ್ಲ್ಯೂ,  ಸರ್ಟಿಫಿಕೇಟ್,  ಡಿಪ್ಲೋಮಾ,  ಮತ್ತು ಸ್ನಾತಕ ಪೂರ್ವ ಸರ್ಟಿಫಿಕೇಟ್ ಶಿಕ್ಷಣಗಳಿಗೆ ಜೂನ್ 30 ರಿಂದ ಪ್ರವೇಶಾತಿ ಪ್ರಾರಂಭಿಸಲಾಗಿದೆ.

ಬಿ.ಪಿ.ಎಲ್. ಕಾರ್ಡ್ ಹೊಂದಿರುವ ಮಹಿಳಾ ವಿದ್ಯಾರ್ಥಿಗಳಿಗೆÉ, ಡಿಫೆನ್ಸ್ ಅಥವಾ ಮಾಜಿ ಸೈನಿಕ ವಿದ್ಯಾರ್ಥಿಗಳು, ಆಟೋ/ಕ್ಯಾಬ್ ಚಾಲಕರು ಮತ್ತು ಅವರ ಮಕ್ಕಳಿಗೆ ಹಾಗೂ ಕೆಎಸ್‍ಆರ್‍ಟಿಸಿ, ಬಿಎಂಟಿಸಿ, ಎನ್‍ಡಬ್ಲ್ಯೂಕೆಆರ್‍ಟಿಸಿ, ಕೆಕೆಆರ್‍ಟಿಸಿ  ನೌಕರರುಗಳಿಗೆ ಬೋಧನಾ ಶುಲ್ಕದಲ್ಲಿ ವಿಶೇಷ ರಿಯಾಯಿತಿ ಸೌಲಭ್ಯವಿರುತ್ತದೆ. ಕೋವಿಡ್‍ನಿಂದ ಮೃತರಾದ ಪೋಷಕರ ಮಕ್ಕಳಿಗೆ, ದೃಷ್ಟಿ ದೋಷವುಳ್ಳ ವಿದ್ಯಾರ್ಥಿಗಳಿಗೆ (ಜಿ.ಎಡ್ ಮತ್ತು ಎಂ.ಬಿ.ಎ. ಕೋರ್ಸ್‍ಗಳನ್ನು ಹೊರತುಪಡಿಸಿ) ಹಾಗೂ ತೃತೀಯ ಲಿಂಗಿಗಳಿಗೆ ಪೂರ್ಣ ಶುಲ್ಕ ವಿನಾಯಿತಿ ಇರುತ್ತದೆ. ಅರ್ಹ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

ಅರ್ಜಿಗಳನ್ನು ವಿಶ್ವವಿದ್ಯಾನಿಲಯದ ವೆಬ್‍ಸೈಟ್ www.ksoumysuru.ac.in ನಲ್ಲಿ  KSOU Admission Portal ಮೂಲಕ ಈ ಪದವಿಗಳಿಗೆ ಆನ್‍ಲೈನ್‍ನಲ್ಲಿ ಅರ್ಜಿ ಭರ್ತಿ ಮಾಡಿ ನಂತರ ಪ್ರಾದೇಶಿಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿಯನ್ನು ಪರಿಶೀಲಿಸಿದ ನಂತರ ಆನ್‍ಲೈನ್ ಮುಖಾಂತರ ಪ್ರವೇಶಾತಿ ಶುಲ್ಕ ಪಾವತಿಸಿ ಪ್ರವೇಶಾತಿ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ, ಪ್ರಾದೇಶಿಕ ನಿರ್ದೇಶಕರು, ಕರಾಮುವಿ ಪ್ರಾದೇಶಿಕ ಕೇಂದ್ರ-04, ನಂ.121, 2ನೇ ಮಹಡಿ, ಹೊಸೂರು ಮುಖ್ಯ ರಸ್ತೆ, ಮಡಿವಾಳ, ಬೆಂಗಳೂರು – 560068 ಅಥವಾ  ದೂರವಾಣಿ ಸಂಖ್ಯೆಗಳಾದ 080-23158888, 8904036090, 6363390600  ಅನ್ನು ಸಂಪರ್ಕಿಸಬಹುದು ಎಂದು ಪ್ರಾದೇಶಿಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಡಿವಾಳ ಕರಾಮುವಿ ಪ್ರಾದೇಶಿಕ ಕೇಂದ್ರ ನಿರ್ದೇಶಕ ಹುದ್ದೆಗೆ ಡಾ. ಪಿ. ಹರೀಶ್ ನೇಮಕ

ಡಾ. ಪಿ. ಹರೀಶ್ ಪ್ರಾದೇಶಿಕ ನಿರ್ದೇಶಕರು, ಗ್ರೇಡೆಡ್ ಪೇ (ಕಾಲಿಕ ವೇತನ ಶ್ರೇಣಿ) ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಚಿಕ್ಕಮಗಳೂರು ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮಡಿವಾಳದ ಕರಾಮುವಿ ಪ್ರಾದೇಶಿಕ ಕೇಂದ್ರದ ನಿರ್ದೇಶಕರ ಹುದ್ದೆಗೆ ನಿಯುಕ್ತಿಗೊಳಿಸಿ ಕುಲಸಚಿವರು ಆದೇಶ ಹೊರಡಿಸಿದ್ದಾರೆ.

2028 ರೊಳಗೆ ಮಾದಕ ವ್ಯಸನ ಮುಕ್ತ ಕರ್ನಾಟಕ – ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಕರ್ನಾಟಕ ರಾಜ್ಯವನ್ನು 2028 ರೊಳಗೆ ಮಾದಕ ವ್ಯಸನ ಮುಕ್ತ ಕರ್ನಾಟಕವಾಗಿಸಲು ಇಂದು ನಾವು ಪ್ರತಿಜ್ಞೆ ಮಾಡಿದ್ದೇವೆ. ಮಾದಕ ವ್ಯಸನವನ್ನು ಸಮಾಜದಿಂದ ಮುಕ್ತ ಮಾಡಲು ಎಲ್ಲಾ ನಾಗರೀಕರು ಕೈಜೋಡಿಸಬೇಕು  ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಇಂದು ಕಂಠೀರವ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಾದಕ ವ್ಯಸನ ಮತ್ತು ಕಳ್ಳಸಾಗಾಣಿಕೆ ವಿರೋಧಿ ದಿನ – 2026 ರ ಕಾರ್ಯಕ್ರಮವನ್ನು ಮಕ್ಕಳೊಂದಿಗೆ ಉದ್ಘಾಟಿಸಿ, ಮಾತನಾಡಿದ ಮುಖ್ಯಮಂತ್ರಿಗಳು ಮಾದಕ ವಸ್ತುಗಳಿಂದ ಹೆಚ್ಚುತ್ತಿರುವ ಅಪಾಯವನ್ನು ತಡೆಗಟ್ಟಲು ಸರ್ಕಾರವು ಮಾದಕ ವಸ್ತು ವಿರೋಧಿ ಕಾರ್ಯಪಡೆಯನ್ನು ಸ್ಥಾಪಿಸಿದೆ ಎಂದರು. ಕಳೆದ ಮೂರು ವರ್ಷಗಳಲ್ಲಿ ಪೊಲೀಸ್ ಇಲಾಖೆ ದೊಡ್ಡ ಪ್ರಯತ್ನ ಮಾಡಿ, 80 ಕೋಟಿ ವೆಚ್ಚದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡು ನಾಶ ಪಡಿಸಲಾಗಿದೆ. ಈ ಕಾರ್ಯಕ್ಕೆ ಕೈಜೋಡಿಸಿದ ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳಿಗೆ ಹಾಗೂ ಸಹಾಯ ಮಾಡಿದ ಎಲ್ಲರಿಗೂ ಸರ್ಕಾರ ಅಭಿನಂದನೆ ಸಲ್ಲಿಸುತ್ತದೆ ಎಂದು ಹೇಳಿದರು.

ಯುವಕರು ಮಾದಕ ವಸ್ತುಗಳ ಬಳಕೆಯಿಂದ ದೂರವಿರಬೇಕು, ಮದ್ಯ ವ್ಯಸನಕ್ಕೆ ಯಾರಾದರೂ ಒತ್ತಾಯ ಮಾಡಿದರೆ ಇಂದಿನ ಯುವಕರು ಯಾವುದೇ ಕಾರಣಕ್ಕೂ ಒತ್ತಡಕ್ಕೆ ಮಣಿಯದೇ ಪೋಷಕರಿಗೆ ಅಥವಾ ಪೊಲೀಸ್ ಇಲಾಖೆಗೆ ತಿಳಿಸಬೇಕು. ಶಾಲಾ-ಕಾಲೇಜುಗಳ ಸುತ್ತಮುತ್ತ ಇಂತಹವರ ಬಗ್ಗೆ ಮಾಹಿತಿ ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರೆ ಮಾಹಿತಿ ನೀಡಿದರವರ ಹೆಸರನ್ನು ಬಹಿರಂಗಪಡಿಸುವುದಿಲ್ಲ. ಮಕ್ಕಳೇನಾದರೂ ಈ ಚಟಕ್ಕೆ ಒಳಗಾಗಿದ್ದರೆ ಪೋಷಕರು ಗೌರವ ಹೋಗುತ್ತದೆ ಎಂದು ಮುಚ್ಚಿಡಬಾರದು. ಈ ಹವ್ಯಾಸ ಮುಚ್ಚಿಟ್ಟರೆ ಮಕ್ಕಳ ಭವಿಷ್ಯ ಹಾಳಾಗುತ್ತದೆ. ಈ ನಿಟ್ಟಿನಲ್ಲಿ ಪೊಲೀಸರ ಸಹಾಯ ಪಡೆದು ಮದ್ಯವ್ಯಸನಿಗಳಾಗದಂತೆ ತಡೆಯಬೇಕೆಂದರು.

ವ್ಯಸನಮುಕ್ತ ಕರ್ನಾಟಕ ಕೇವಲ ಸರ್ಕಾರದ ಘೋಷಣೆಯಲ್ಲ, ಇದು ಪ್ರತಿಯೊಬ್ಬ ಕನ್ನಡಿಗರ ಸಂಕಲ್ಪ. ಯುವಕರು ಆದರ್ಶ ಬದುಕಿನ ಜೀವನ ಸಾಗಿಸಬೇಕು. ಕುಟುಂಬದ ಭವಿಷ್ಯ ರೂಪಿಸಲು ಪ್ರಗತಿಯತ್ತ ನಡೆಯಬೇಕು. ಅಮಲು ಪದಾರ್ಥಗಳನ್ನು ಬೆರೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಜ್ಯದಲ್ಲಿ ಮಾದಕ ವಸ್ತುಗಳ ಅಕ್ರಮ ಜಾಲಗಳ ವಿರುದ್ಧ ಈಗಾಗಲೇ ತೀವ್ರ ಮತ್ತು ನಿರಂತರ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಮಾದಕ ವಸ್ತುಗಳ ಅಕ್ರಮ ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವ ಜಾಲಗಳನ್ನು ಪತ್ತೆಹಚ್ಚಿ ನಿರ್ಮೂಲನಾ ಗೊಳಿಸಲು ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಂಡಿದೆ. ಮಾದಕ ವಸ್ತುಗಳ ಅಕ್ರಮ ವ್ಯಾಪಾರದಲ್ಲಿ ಭಾಗಿಯಾಗಿರುವ ಹಾಗೂ ವೀಸಾ ಅವಧಿ ಮುಕ್ತಾಯಗೊಂಡಿದ್ದರೂ ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ಮೇಲೆ ನಿಗಾವಹಿಸುವ ಉದ್ದೇಶದಿಂದ ವಿಶೇಷ ಶೋಧ ಪತ್ತೆ ಕಾರ್ಯಾಚರಣೆ ನಡೆಸಲಾಗಿದ್ದು, ಇದರ ಪರಿಣಾಮವಾಗಿ 20 ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ ಎಂದರು.

2025 ರಲ್ಲಿ ಒಟ್ಟು 216.93 ಕೋಟಿ ರೂಗಳನ್ನು ವಶಪಡಿಸಿಕೊಳ್ಳಲಾಗಿದೆ. 9064 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 2611 ಮಾರಾಟಗಾರರ ವಿರುದ್ಧ, 6455 ಗ್ರಾಹಕರ ವಿರುದ್ಧ ಹಾಗೂ 41 ತಯಾರಕರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. 2026 ಜನವರಿಯಿಂದ ಮೇ ಅಂತ್ಯದವರೆಗೆ  ಒಟ್ಟು 184.72 ಕೋಟಿ ರೂಗಳನ್ನು ವಶಪಡಿಸಿಕೊಳ್ಳಲಾಗಿದೆ. 6651 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 1406 ಮಾರಾಟಗಾರರ ವಿರುದ್ಧ, 5090 ಗ್ರಾಹಕರ ವಿರುದ್ಧ ಹಾಗೂ 17 ತಯಾರಕರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ.

ಗೃಹ, ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿ, ಮಾದಕ ವ್ಯಸನವು ಯುವಕರ ಸಾಮಥ್ರ್ಯ, ಆರ್ಥಿಕತೆ ಮತ್ತು ಸಮಾಜವನ್ನು ನಾಶ ಮಾಡುತ್ತದೆ, ಈ ಬಗ್ಗೆ ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ. ಇಂದು ಆಚರಿಸಲಾಗುತ್ತಿರುವ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ದಿನಾಚರಣೆ ಅಂಗವಾಗಿ ಸರ್ಕಾರವು “ಆಪರೇಷÀನ್ ರೈಸ್ (Operation RISE)”  ಹಾಗೂ “ಬೇಡ ಬ್ರೋ” ಎಂಬ ಎರಡು ಮಹತ್ವದ ಕಾರ್ಯಕ್ರಮಗಳಿಗೆ ಇಂದು ಮುಖ್ಯಮಂತ್ರಿಗಳು ಚಾಲನೆ ನೀಡಿದ್ದಾರೆ. ಈ ಕಾರ್ಯಕ್ರಮಗಳ ಮೂಲಕ ಮಾದಕ ವಸ್ತುಗಳ ಸಮಸ್ಯೆಯನ್ನು ಸರ್ಕಾರದ ಎಲ್ಲಾ ಇಲಾಖೆಗಳ  ಸಹಭಾಗಿತ್ವದೊಂದಿಗೆ ಎದರಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎಂದು ಹೇಳಿದರು.

ರೈಸ್ ಎಂಬ ಉಪಕ್ರಮವು ನಿರಾಕರಣೆ, ಮಾಹಿತಿ ನೀಡುವಿಕೆ, ಬೆಂಬಲ ನೀಡುವಿಕೆ, ಸಬಲೀಕರಣ ಎಂಬ ತತ್ವಗಳ ಆಧಾರದ ಮೇಲೆ ರೂಪಿಸಲಾಗಿದೆ. “ಬೇಡ ಬ್ರೊ” ಅಭಿಯಾನವು ಯುವಜನರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಶಿಕ್ಷಣ ಮತ್ತು ಸಮುದಾಯದ ಸಹಭಾಗಿತ್ವದ ಮೂಲಕ ಮಾದಕ ವ್ಯಸನವನ್ನು ತಡೆಗಟ್ಟಲು ರೂಪಿಸಲಾದ ಜಾಗೃತಿ ಕಾರ್ಯಕ್ರಮವಾಗಿದೆ ಎಂದರು.

ಶಿವಾಜಿನಗರ ಕ್ಷೇತ್ರದ ಶಾಸಕರಾದ ರಿಜ್ವಾನ್ ಅರ್ಷದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಸದಸ್ಯರಾದ  ಗೋವಿಂದರಾಜು, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾದ ಎಂ.ಎ.ಸಲೀಂ, ಅಪರ ಮುಖ್ಯ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯ, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಾಂತ್ ಕುಮಾರ್ ಸಿಂಗ್, ಎಡಿಜಿಪಿ ಆರ್. ಹಿತೇಂದ್ರ, ಆದರ್ಶ್ ಗ್ರೂಪ್‍ನ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಎಂ.ಜಯಶಂಕರ್ ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.

ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಬಂಡಿಪುರ–ನಾಗರಹೊಳೆ ಸಫಾರಿ ಆರಂಭಿಸಲು ಸೂಚನೆ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಮೇಕೆದಾಟು ಯೋಜನೆಗೆ ಇರುವ ಸಣ್ಣ ಪುಟ್ಟ ತಾಂತ್ರಿಕ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಬಗೆಹರಿಸಲು ಸೂಚನೆ ನೀಡಿದ ಮುಖ್ಯಮಂತ್ರಿಗಳು

    ಅಗತ್ಯ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಬಂಡಿಪುರ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನಗಳಲ್ಲಿನ ಸಫಾರಿ ಮತ್ತು ಪರಿಸರ ಪ್ರವಾಸೋದ್ಯಮ ಚಟುವಟಿಕೆಗಳನ್ನು ಪುನರಾರಂಭಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹಾಗೆಯೇ ಮೇಕೆದಾಟು ಯೋಜನೆಗೆ ಸಣ್ಣ ಪುಟ್ಟ ನೆಪಗಳನ್ನು ಮುಂದಿಟ್ಟು ಸುಪ್ರೀಂಕೋರ್ಟ್‍ನಲ್ಲಿ ತಕರಾರು ಮಾಡಲು ತಮಿಳುನಾಡು ಪ್ರಯತ್ನಿಸುತ್ತಿದೆ. ಈ ಸಣ್ಣ ಪುಟ್ಟ ತಾಂತ್ರಿಕ ಸಮಸ್ಯೆಗಳು ಇದೆಯಾ ಎಂದು ಪರಿಶೀಲಿಸಿ ಪರಿಣಾಮಕಾರಿಯಾಗಿ ಬಗೆಹರಿಸಲು ಮುಖ್ಯಮಂತ್ರಿಗಳು ಸೂಚನೆ ನೀಡಿದರು.

ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ಸಭೆಯಲ್ಲಿ ಅವರು ಈ ನಿರ್ದೇಶನ ನೀಡಿದರು.

ಸಭೆಯಲ್ಲಿ ಅಧಿಕಾರಿಗಳು ನೀಡಿದ ಮಾಹಿತಿಯಂತೆ, ಬಂಡಿಪುರ ಮತ್ತು ನಾಗರಹೊಳೆ ಪರಿಸರ ಪ್ರವಾಸೋದ್ಯಮ ಹಾಗೂ ಸಫಾರಿ ಪ್ರದೇಶಗಳಲ್ಲಿ ಹುಲಿಗಳು ಮತ್ತು ಚಿರತೆಗಳ ಸಾಂದ್ರತೆ, ಮಾನವ–ವನ್ಯಜೀವಿ ಸಂಘರ್ಷ ಹೆಚ್ಚಿರುವ ಪ್ರದೇಶಗಳಿಗಿಂತ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರ ಸುರಕ್ಷತೆಗೆ ಯಾವುದೇ ಧಕ್ಕೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಹಾಗೂ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸಫಾರಿ ಚಟುವಟಿಕೆಗಳನ್ನು ಆರಂಭಿಸುವಂತೆ ಮುಖ್ಯಮಂತ್ರಿ ಸೂಚಿಸಿದರು.

ಸಭೆಯಲ್ಲಿ ಬಿಎಂಐಸಿ ಕಾರಿಡಾರ್ ನಿರ್ಮಾಣದಿಂದ ಆನೆ, ಹುಲಿ ಹಾಗೂ ಚಿರತೆಗಳ ಸಾಂಪ್ರದಾಯಿಕ ಸಂಚಾರ ಮಾರ್ಗಗಳಿಗೆ ಅಡ್ಡಿಯಾಗಿದೆ ಎಂದು ಅಧಿಕಾರಿಗಳು ವಿವರಿಸಿದರು. ಇದರ ಪರಿಣಾಮವಾಗಿ ವನ್ಯಜೀವಿಗಳು ಅರಣ್ಯ ಪ್ರದೇಶಗಳಿಂದ ಹೊರಬಂದು ಚನ್ನಪಟ್ಟಣ ಹಾಗೂ ರಾಮನಗರ ಭಾಗಗಳತ್ತ ಚಲಿಸುತ್ತಿದ್ದು, ಮಾನವ–ವನ್ಯಜೀವಿ ಸಂಘರ್ಷ ಹೆಚ್ಚಾಗಲು ಇದೂ ಪ್ರಮುಖ ಕಾರಣವಾಗಿದೆ ಎಂದು ಸಭೆಗೆ ತಿಳಿಸಲಾಯಿತು.

ಅಧಿಕಾರಿಗಳ ಪ್ರಕಾರ, ಬೆಂಗಳೂರು–ಮೈಸೂರು ಎಕ್ಸ್‍ಪ್ರೆಸ್ ವೇ ನಿರ್ಮಾಣಕ್ಕೆ ಅನುಮತಿ ನೀಡುವ ಸಂದರ್ಭದಲ್ಲಿ ವನ್ಯಜೀವಿಗಳ ಸುರಕ್ಷಿತ ಸಂಚಾರಕ್ಕಾಗಿ ಅಗತ್ಯ ಅಂಡರ್‍ಪಾಸ್, ಓವರ್‍ಪಾಸ್ ಹಾಗೂ ವನ್ಯಜೀವಿ ಕಾರಿಡಾರ್‍ಗಳನ್ನು ನಿರ್ಮಿಸುವ ಷರತ್ತು ವಿಧಿಸಲಾಗಿತ್ತು. ಆದರೆ ರಸ್ತೆ ನಿರ್ಮಾಣದ ವೇಳೆ ಈ ಷರತ್ತುಗಳನ್ನು ಸಮರ್ಪಕವಾಗಿ ಪಾಲಿಸಲಾಗಿಲ್ಲ ಎಂಬ ವಿಚಾರವನ್ನು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.

ಸಭೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಒಣಗಿರುವ ಹಾಗೂ ಅಪಾಯದ ಸ್ಥಿತಿಯಲ್ಲಿರುವ ಮರಗಳು ಮತ್ತು ಕೊಂಬೆಗಳನ್ನು ತೆರವುಗೊಳಿಸುವ ಕುರಿತು ಈಗಾಗಲೇ ಸ್ಪಷ್ಟ ಸೂಚನೆ ನೀಡಲಾಗಿದ್ದರೂ, ಅದರ ಪರಿಣಾಮಕಾರಿ ಅನುμÁ್ಠನವಾಗದ ಹಿನ್ನೆಲೆಯಲ್ಲಿ ಮಳೆ ಮತ್ತು ಗಾಳಿಯಿಂದ ಮರಗಳು ಹಾಗೂ ಕೊಂಬೆಗಳು ಬಿದ್ದು ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಾಯಿ ಸಮಿತಿ ಸದಸ್ಯರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಿ ಅಪಾಯಕಾರಿಯಾಗಿರುವ ಮರಗಳು ಮತ್ತು ಕೊಂಬೆಗಳ ಗುರುತು ಪತ್ತೆ, ತೆರವು ಹಾಗೂ ತಡೆಗಟ್ಟುವ ಕ್ರಮಗಳನ್ನು ತುರ್ತಾಗಿ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜುಲೈ 1 ರಂದು ಜಿಕೆವಿಕೆಯಲ್ಲಿ ಮುಂಗಾರು ಹಂಗಾಮಿನ ಸುಧಾರಿತ ಬೇಸಾಯ ಕ್ರಮಗಳ ತರಬೇತಿ ಕಾರ್ಯಕ್ರಮ:

ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು, ಸಮೇತಿ (ದಕ್ಷಿಣ) ಹಾಗೂ ಕೋರಮಂಡಲ್ ಇಂಟರ್‍ನ್ಯಾಷನಲ್ ಲಿಮಿಟೆಡ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಕ್ಷೇತ್ರ ಸಿಬ್ಬಂದಿಗಳಿಗೆ ಹಮ್ಮಿಕೊಳ್ಳಲಾಗಿರುವ “ಮುಂಗಾರು ಹಂಗಾಮಿನಲ್ಲಿ ಪ್ರಮುಖ ಬೆಳೆಗಳ ಸುಧಾರಿತ ಬೇಸಾಯ ಕ್ರಮಗಳ ತರಬೇತಿ ಕಾರ್ಯಕ್ರಮ”ದ ಉದ್ಘಾಟನಾ ಸಮಾರಂಭವು ಜುಲೈ 1 ರಂದು ಬೆಳಗ್ಗೆ 10.00 ಗಂಟೆಗೆ ಕೃಷಿ ವಿಶ್ವವಿದ್ಯಾನಿಲಯ ಜಿಕೆವಿಕೆ ನಾರ್ತ್ ಬ್ಲಾಕ್ ಸಭಾಂಗಣದಲ್ಲಿ ಜರುಗಲಿದೆ.

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಎಸ್.ವಿ. ಸುರೇಶ ಅವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಕೋರಮಂಡಲ್ ಇಂಟರ್‍ನ್ಯಾಷನಲ್ ಲಿಮಿಟೆಡ್‍ನ ಮಾರಾಟ ಮತ್ತು ಮಾರುಕಟ್ಟೆ (ದಕ್ಷಿಣ-2 ವಿಭಾಗ) ವಿಭಾಗೀಯ ಮುಖ್ಯಸ್ಥರುಗಳಾದ ಮುರಳಿ ಕೃಷ್ಣ, ರಮೇಶ್ ಕುಮಾರ್ ಹೆಚ್.ವಿ. ಮತ್ತು ಎಸ್.ಬಿ. ಪಾಟೇಲ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.  ಕೃಷಿ ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶಕರಾದ ಡಾ. ವೈ.ಎನ್. ಶಿವಲಿಂಗಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಬೆಂಗಳೂರು ಕೃಷಿಮೇಳ 2026: ಪ್ರದರ್ಶನ ಮಳಿಗೆಗಳ ಕಾಯ್ದಿರಿಸುವಿಕೆ ಪ್ರಾರಂಭ :
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಪ್ರತಿಷ್ಠಿತ “ಕೃಷಿಮೇಳ – 2026” ಗಾಂಧಿ ಕೃಷಿ ವಿಜಾÐನ ಕೇಂದ್ರದ ಆವರಣದಲ್ಲಿ  2026ರ ಅಕ್ಟೋಬರ್ 15 ರಿಂದ 18 ರವರೆಗೆ ಒಟ್ಟು ನಾಲ್ಕು ದಿನಗಳ ಕಾಲ “ವೈವಿಧ್ಯಮಯ ಕೃಷಿ: ಮುಂದಿನ ಪೀಳಿಗೆಗೆ” ಎಂಬ ಘೋಷವಾಕ್ಯದೊಂದಿಗೆ ಜರುಗಲಿದೆ.

ಈ ಬಾರಿಯ ಕೃಷಿಮೇಳದಲ್ಲಿ ವಸ್ತು ಪ್ರದರ್ಶನ ಮಳಿಗೆಗಳನ್ನು ಹಾಕಲು ಇಚ್ಛಿಸುವವರಿಗಾಗಿ ಕಾಯ್ದಿರಿಸುವಿಕೆ ಪ್ರಕ್ರಿಯೆಯು ಪ್ರಾರಂಭವಾಗಿದ್ದು, ಮಳಿಗೆ ಕಾಯ್ದಿರಿಸಲು 2026 ರ ಸೆಪ್ಟೆಂಬರ್ 19 ಕೊನೆಯ ದಿನಾಂಕವಾಗಿರುತ್ತದೆ. ಮಳಿಗೆಗಗಳನ್ನು ಕಾಯ್ದಿರಿಸಲು ಆಸಕ್ತಿ ಹೊಂದಿರವವರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-23638883 / 23330153 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Hot this week

ಗಾಂಧಿ ಭವನದಲ್ಲಿ ಜು.1ಕ್ಕೆ ಪತ್ರಿಕಾ ದಿನಾಚರಣೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟನೆ

ಗಾಂಧಿ ಭವನದಲ್ಲಿ ಜು.1ಕ್ಕೆ ಪತ್ರಿಕಾ ದಿನಾಚರಣೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟನೆಬೆಂಗಳೂರು: ಮಾಧ್ಯಮ...

ಗ್ಲೋಬಲ್ ಸಿಟಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಆಡಳಿತ ಕಚೇರಿ ಉದ್ಘಾಟನೆ-ಶ್ರೀನಿವಾಸನಗರದಲ್ಲಿ

ಬೆಂಗಳೂರು, ಜೂ.30: ಶ್ರೀನಿವಾಸನಗರದಲ್ಲಿ ನೂತನವಾಗಿ ನಿರ್ಮಿಸಲಾದ ಗ್ಲೋಬಲ್ ಸಿಟಿ ಕ್ರೆಡಿಟ್ ಕೋ-ಆಪರೇಟಿವ್...

‘ಲವ್ ಜಿಹಾದ್’ ಕುರಿತು ಉಪನ್ಯಾಸ: 1600 ಕ್ಕೂ ಹೆಚ್ಚು ಹಿಂದೂಗಳ ಉಪಸ್ಥಿತಿ !

‘ಲವ್ ಜಿಹಾದ್’(Love Jihad) ತಡೆಯಲು ಹಿಂದೂ ಧರ್ಮ ಮತ್ತು ಸಂಸ್ಕೃತಿಯನ್ನು ನಿಷ್ಠೆಯಿಂದ...

ನಿತ್ಯ ಪಂಚಾಂಗ 30.06.2026 ಮಂಗಳವಾರ TUESDAY.

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 30.06.2026 ಮಂಗಳವಾರ TUESDAY. ಸಂವತ್ಸರ: ಪರಾಭವ. SAMVATSARA : PARABHAVA. ಆಯಣ:...

Topics

ಗಾಂಧಿ ಭವನದಲ್ಲಿ ಜು.1ಕ್ಕೆ ಪತ್ರಿಕಾ ದಿನಾಚರಣೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟನೆ

ಗಾಂಧಿ ಭವನದಲ್ಲಿ ಜು.1ಕ್ಕೆ ಪತ್ರಿಕಾ ದಿನಾಚರಣೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟನೆಬೆಂಗಳೂರು: ಮಾಧ್ಯಮ...

ಗ್ಲೋಬಲ್ ಸಿಟಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಆಡಳಿತ ಕಚೇರಿ ಉದ್ಘಾಟನೆ-ಶ್ರೀನಿವಾಸನಗರದಲ್ಲಿ

ಬೆಂಗಳೂರು, ಜೂ.30: ಶ್ರೀನಿವಾಸನಗರದಲ್ಲಿ ನೂತನವಾಗಿ ನಿರ್ಮಿಸಲಾದ ಗ್ಲೋಬಲ್ ಸಿಟಿ ಕ್ರೆಡಿಟ್ ಕೋ-ಆಪರೇಟಿವ್...

‘ಲವ್ ಜಿಹಾದ್’ ಕುರಿತು ಉಪನ್ಯಾಸ: 1600 ಕ್ಕೂ ಹೆಚ್ಚು ಹಿಂದೂಗಳ ಉಪಸ್ಥಿತಿ !

‘ಲವ್ ಜಿಹಾದ್’(Love Jihad) ತಡೆಯಲು ಹಿಂದೂ ಧರ್ಮ ಮತ್ತು ಸಂಸ್ಕೃತಿಯನ್ನು ನಿಷ್ಠೆಯಿಂದ...

ನಿತ್ಯ ಪಂಚಾಂಗ 30.06.2026 ಮಂಗಳವಾರ TUESDAY.

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 30.06.2026 ಮಂಗಳವಾರ TUESDAY. ಸಂವತ್ಸರ: ಪರಾಭವ. SAMVATSARA : PARABHAVA. ಆಯಣ:...

ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ಜುಲೈ 1 ರಂದು ಪತ್ರಿಕಾ ದಿನಾಚರಣೆ ಹಾಗೂ ವಿಚಾರ ಸಂಕಿರಣ

ಬೆಂಗಳೂರು, ಜೂನ್ 29 (ಕರ್ನಾಟಕ ವಾರ್ತೆ) :ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ...

ಶ್ರೀ ಕೃಷ್ಣ ರುಕ್ಷ್ಮಿಣಿ ಕಾನೂನು ಮಹಾವಿದ್ಯಾಲಯದಲ್ಲಿ ಮೌಲ್ಯೋತ್ಸವ

ಬೆಂಗಳೂರು: ಚಿಕ್ಕಜಾಲದ ಚೊಕ್ಕನಹಳ್ಳಿಯಲ್ಲಿರುವ ಶ್ರೀ ರೇವಣ ಸಿದ್ದೇಶ್ವರ ಎಜುಕೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ...

Related Articles