GKVK ವೈವಿಧ್ಯಮಯ ‘ರೈತ ಸಂತೆ’: ಬಟರ್ ಫ್ರ್ರೂಟ್ – ಅವರೆಕಾಳು ಸಿಪ್ಪೆ ತೆಗೆವ ಯಂತ್ರಕ್ಕೆ ಬೇಡಿಕೆ

ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಜಿ.ಕೆ.ವಿ.ಕೆ (GKVK) ಆವರಣದ ಗಣಪತಿ ದೇವಸ್ಥಾನದ ಹತ್ತಿರ ಈ ಬಾರಿ ವಿಭಿನ್ನ ಹಾಗೂ ವಿಶೇಷವಾದ ‘ರೈತ ಸಂತೆ’ಯನ್ನು (Raitha Santhe) ಹಮ್ಮಿಕೊಳ್ಳಲಾಗಿತ್ತು. ಆರೋಗ್ಯ, ಪೌಷ್ಟಿಕತೆ, ಮೌಲ್ಯವರ್ಧನೆ ಹಾಗೂ ಕೃಷಿ ಯಾಂತ್ರೀಕರಣಕ್ಕೆ ಹೆಚ್ಚಿನ ಒತ್ತು ನೀಡಿದ್ದ ಈ ಸಂತೆಯು ಗ್ರಾಹಕರನ್ನು ದೊಡ್ಡ ಮಟ್ಟದಲ್ಲಿ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ರೈತ ಸಂತೆಯಲ್ಲಿ ನೈಸರ್ಗಿಕ ಬೆಲ್ಲದಿಂದ ತಯಾರಿಸಲಾಗಿದ್ದ ತಾಜಾ ಗೋಧಿ ಪಾಯಸಕ್ಕೆ ಗ್ರಾಹಕರಿಂದ ಅಭೂತಪೂರ್ವ ಬೇಡಿಕೆ ವ್ಯಕ್ತವಾಯಿತು. ನಗರ ವಾಸಿಗಳು ಮತ್ತು ಮಕ್ಕಳು ಇದರ ರುಚಿಯನ್ನು ಸವಿದು ಆನಂದಿಸಿದರು. ಪೌಷ್ಟಿಕಾಂಶಗಳ ರಾಜ ‘ಬಟರ್ ಫ್ರೂಟ್’ (ಅವಕಾಡೊ), ಆರೋಗ್ಯಕರ ಕೊಬ್ಬಿನಾಂಶ, ನಾರಿನಾಂಶ, ಪೆÇಟ್ಯಾಷಿಯಂ ಹಾಗೂ ವಿಟಮಿನ್-ಇ ಹೊಂದಿರುವ ಈ ಹಣ್ಣು ಪ್ರಮುಖ ಆಕರ್ಷಣೆಯಾಗಿತ್ತು.
ಹೃದಯದ ಆರೋಗ್ಯ ಹಾಗೂ ರಕ್ತದೊತ್ತಡ ನಿಯಂತ್ರಣಕ್ಕೆ ಸಹಕಾರಿಯಾದ ಈ ಹಣ್ಣನ್ನು ಆರೋಗ್ಯ ಪ್ರಜ್ಞೆಯ ಗ್ರಾಹಕರು ಮುಗಿಬಿದ್ದು ಖರೀದಿಸಿದರು.

ಹಸಿ ಅವರೆಕಾಳು ಸಿಪ್ಪೆತೆಗೆಯುವ ಯಂತ್ರ, ಮನೆಮಟ್ಟದ ಬಳಕೆದಾರರು, ಮಹಿಳಾ ಸ್ವಸಹಾಯ ಸಂಘಗಳು ಹಾಗೂ ಸಣ್ಣ ಉದ್ಯಮಿಗಳಿಗೆ ಅನುಕೂಲವಾಗುವ ಈ ಯಂತ್ರವು ರೈತರು ಮತ್ತು ಸಂದರ್ಶಕರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿತು.

ಪಶ್ಚಿಮ ಘಟ್ಟದ ಮಲೆನಾಡು ಪ್ರದೇಶಗಳಲ್ಲಿ ನೈಸರ್ಗಿಕವಾಗಿ ಬೆಳೆಯಲಾದ, ಹೆಚ್ಚಿನ ಕಕ್ರ್ಯೂಮಿನ್ ಅಂಶ ಹಾಗೂ ವಿಶಿಷ್ಟ ಸುವಾಸನೆ ಹೊಂದಿರುವ ಈ ಅರಿಶಿನಕ್ಕೆ ಉತ್ತಮ ಸ್ಪಂದನೆ ಸಿಕ್ಕಿತು. ‘ಕೃಷಿಕಾ ನ್ಯಾಚುರಲ್’ ಹೆಲ್ತ್ ಡ್ರಿಂಕ್: ಸೇಬು, ಬೀಟ್‍ರೂಟ್ ಮತ್ತು ಕ್ಯಾರೆಟ್‍ಗಳ ಪೌಷ್ಟಿಕಾಂಶಗಳನ್ನು ಒಳಗೊಂಡ, ಯಾವುದೇ ಕೃತಕ ಬಣ್ಣ ಅಥವಾ ಸಂರಕ್ಷಕಗಳಿಲ್ಲದ ಈ ಪ್ರೀಮಿಯಂ ಆರೋಗ್ಯ ಪಾನೀಯವು ರೋಗನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ರಕ್ತಹೀನತೆ ನಿವಾರಣೆಗೆ ಉಪಯುಕ್ತವಾಗಿದ್ದು, ಗ್ರಾಹಕರ ಗಮನ ಸೆಳೆಯಿತು.

ತಾಜಾ ತರಕಾರಿಗಳು ಮತ್ತು ಇತರ ಉತ್ಪನ್ನಗಳು:ರೈತರಿಂದ ನೇರವಾಗಿ ತರಲಾಗಿದ್ದ ಬದನೆಕಾಯಿ, ಬೆಂಡೆಕಾಯಿ, ಸೌತೆಕಾಯಿ, ಹೀರೇಕಾಯಿ, ಸೊರೆಕಾಯಿ, ಹಗಲಕಾಯಿ, ವಿವಿಧ ಸೊಪ್ಪುಗಳು ಸೇರಿದಂತೆ ಹಲವು ಬಗೆಯ ತರಕಾರಿಗಳು ಕೊಯ್ಲಾದ ಅತ್ಯಲ್ಪ ಅವಧಿಯಲ್ಲೇ ಸಂತೆಯನ್ನು ತಲುಪಿದ್ದರಿಂದ ದಿನವಿಡೀ ಗ್ರಾಹಕರ ಸಂಚಾರ ದಟ್ಟವಾಗಿತ್ತು.
ಇವುಗಳೊಂದಿಗೆ ಗಿರ್ ತಳಿಯ ಗಿಣ್ಣು, ಸ್ವರ್ಣದಾರ ಕೋಳಿ ಉತ್ಪನ್ನಗಳೂ ಮಾರಾಟವಾದವು. ಇದರೊಂದಿಗೆ ಸಿರಿಧಾನ್ಯ ಉತ್ಪನ್ನಗಳು, ಜೈವಿಕ ಗೊಬ್ಬರಗಳು, ಅಲಂಕಾರಿಕ ಗಿಡ ಹಾಗೂ ಮೀನುಗಳು, ಜೇನು ಕೃಷಿ, ಎರೆಹುಳು ಗೊಬ್ಬರ, ಕರಕುಶಲ ವಸ್ತುಗಳು ಹಾಗೂ ಕೃಷಿ ಪ್ರಕಟಣೆಗಳ ಪ್ರದರ್ಶನ ಮತ್ತು ಮಾರಾಟ ಇತ್ತು.ಗ್ರಾಮೀಣ ಸೊಗಡಿನ ಎತ್ತಿನ ಬಂಡಿ ಸವಾರಿ ನಗರದ ಮಕ್ಕಳನ್ನು ವಿಶೇಷವಾಗಿ ಆಕರ್ಷಿಸಿತು.

ಕೃಷಿ ವಿಶ್ವವಿದ್ಯಾನಿಲಯದ ವಿವಿಧ ಸಂಶೋಧನಾ ಕೇಂದ್ರಗಳು, ಕೃಷಿ ವಿಜ್ಞಾನ ಕೇಂದ್ರಗಳು ಹಾಗೂ ವಿಶ್ವವಿದ್ಯಾನಿಲಯದ ವೈಜ್ಞಾನಿಕ ಸಲಹೆಗಳ ಮೂಲಕ ರೈತ ಉತ್ಪಾದಕ ಸಂಸ್ಥೆಗಳು ಅಭಿವೃದ್ಧಿಪಡಿಸಿದ ಗುಣಮಟ್ಟದ ಕೃಷಿ ಉತ್ಪನ್ನಗಳು ಒಂದೇ ಸೂರಿನಡಿ ಲಭ್ಯವಿದ್ದದ್ದು ಈ ಸಂತೆಯ ವೈಶಿಷ್ಟ್ಯವಾಗಿತ್ತು.

ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಎಸ್.ವಿ. ಸುರೇಶ, ವಿಸ್ತರಣಾ ನಿರ್ದೆಶಕರಾದ ಡಾ. ವೈ.ಎನ್. ಶಿವಲಿಂಗಯ್ಯ, ಸಹ ವಿಸ್ತರಣಾ ನಿರ್ದೇಶಕರಾದ ಡಾ. ಕೆ.ಪಿ. ರಘುಪ್ರಸಾದ್ ಸೇರಿದಂತೆ ಹಲವು ಮುಖ್ಯ ಅಧಿಕಾರಿಗಳು ಈ ರೈತ ಸಂತೆಯಲ್ಲಿ ಭಾಗವಹಿಸಿದ್ದರು.

Hot this week

ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ಜುಲೈ 1 ರಂದು ಪತ್ರಿಕಾ ದಿನಾಚರಣೆ ಹಾಗೂ ವಿಚಾರ ಸಂಕಿರಣ

ಬೆಂಗಳೂರು, ಜೂನ್ 29 (ಕರ್ನಾಟಕ ವಾರ್ತೆ) :ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ...

ಶ್ರೀ ಕೃಷ್ಣ ರುಕ್ಷ್ಮಿಣಿ ಕಾನೂನು ಮಹಾವಿದ್ಯಾಲಯದಲ್ಲಿ ಮೌಲ್ಯೋತ್ಸವ

ಬೆಂಗಳೂರು: ಚಿಕ್ಕಜಾಲದ ಚೊಕ್ಕನಹಳ್ಳಿಯಲ್ಲಿರುವ ಶ್ರೀ ರೇವಣ ಸಿದ್ದೇಶ್ವರ ಎಜುಕೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ...

ಸಂಗೀತಾಸಕ್ತರನ್ನು ರಂಜಿಸಿದ “ನಾದ ನಮನ” ಸಂಗೀತ ಸಂಜೆ

ಬೆಂಗಳೂರು, ಜೂ.27: ಸಾಕಿ ಚಾರಿಟೇಬಲ್ ಟ್ರಸ್ಟ್(Saki Charitable Trust) ನಿಂದ ನಗರದ...

ಎಪಿಎಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾಗಿ ಸಿ.ಎ ಡಾ. ವಿಷ್ಣು ಭರತ್ ಆಲಂಪಳ್ಳಿ ಪುನರಾಯ್ಕೆ

ಬೆಂಗಳೂರು,ಜೂ.29: ನಗರದ 91 ವರ್ಷಗಳ ಹಳೆಯ ಎಪಿಎಸ್ ಶಿಕ್ಷಣ ಸಂಸ್ಥೆಗಳಿಗೆ ನೂತನ...

Topics

ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ಜುಲೈ 1 ರಂದು ಪತ್ರಿಕಾ ದಿನಾಚರಣೆ ಹಾಗೂ ವಿಚಾರ ಸಂಕಿರಣ

ಬೆಂಗಳೂರು, ಜೂನ್ 29 (ಕರ್ನಾಟಕ ವಾರ್ತೆ) :ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ...

ಶ್ರೀ ಕೃಷ್ಣ ರುಕ್ಷ್ಮಿಣಿ ಕಾನೂನು ಮಹಾವಿದ್ಯಾಲಯದಲ್ಲಿ ಮೌಲ್ಯೋತ್ಸವ

ಬೆಂಗಳೂರು: ಚಿಕ್ಕಜಾಲದ ಚೊಕ್ಕನಹಳ್ಳಿಯಲ್ಲಿರುವ ಶ್ರೀ ರೇವಣ ಸಿದ್ದೇಶ್ವರ ಎಜುಕೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ...

ಸಂಗೀತಾಸಕ್ತರನ್ನು ರಂಜಿಸಿದ “ನಾದ ನಮನ” ಸಂಗೀತ ಸಂಜೆ

ಬೆಂಗಳೂರು, ಜೂ.27: ಸಾಕಿ ಚಾರಿಟೇಬಲ್ ಟ್ರಸ್ಟ್(Saki Charitable Trust) ನಿಂದ ನಗರದ...

ಎಪಿಎಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾಗಿ ಸಿ.ಎ ಡಾ. ವಿಷ್ಣು ಭರತ್ ಆಲಂಪಳ್ಳಿ ಪುನರಾಯ್ಕೆ

ಬೆಂಗಳೂರು,ಜೂ.29: ನಗರದ 91 ವರ್ಷಗಳ ಹಳೆಯ ಎಪಿಎಸ್ ಶಿಕ್ಷಣ ಸಂಸ್ಥೆಗಳಿಗೆ ನೂತನ...

ಶ್ರೀರಾಮ ಮಂದಿರದ ಹುಂಡಿ ಹಣ ದುರುಪಯೋಗ; ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಿ !

ಅಯೋಧ್ಯೆಯ ಶ್ರೀರಾಮ ಮಂದಿರವು ಕೇವಲ ಒಂದು ಧಾರ್ಮಿಕ ಸ್ಥಳವಲ್ಲ, ಅದು ಜಗತ್ತಿನಾದ್ಯಂತ...

ರೋಟರಿ ಜಿಲ್ಲೆ 3191ರ ಜಿಲ್ಲಾ ಗವರ್ನರ್ ಆಗಿ ಡಾ. ಅನಿಲ್ ಗುಪ್ತ ಪದಗ್ರಹಣ (Dr. Anil Gupta sworn in as District Governor of Rotary District 3191)

ಬೆಂಗಳೂರು, ಜೂ29: ಉದ್ಯಮಿ ಹಾಗೂ ದೀರ್ಘಕಾಲದ ರೋಟೇರಿಯನ್ ಡಾ. ಅನಿಲ್ ಗುಪ್ತ...

ಶ್ರೀರಾಮಮಂದಿರದ ಹುಂಡಿ ಹಣ ದುರುಪಯೋಗ; ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಿ !

ಅಯೋಧ್ಯೆಯ ಶ್ರೀರಾಮ ಮಂದಿರವು(Ayodhya Sree Ram Temple) ಕೇವಲ ಒಂದು ಧಾರ್ಮಿಕ...

Related Articles