ಮನೆಗೊಂದು ಗ್ರಂಥಾಲಯ ಕನ್ನಡಿಗರಿಗೆ ಹೆಮ್ಮೆ
*ಹಾಸನ: ನಗರದ ಶಾಂತಿನಗರದ ಹಲ್ಮಿಡಿ ಶಾಸನ ವೃತ್ತ, ಕವಿರಾಜಮಾರ್ಗ ರಸ್ತೆ, ಚಾಣಕ್ಯ ಸಭಾಂಗಣದಲ್ಲಿ ಕರ್ನಾಟಕ
ಸರ್ಕಾರ ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಂದ ಮನೆಗೊಂದು ಗ್ರಂಥಾಲಯ
ಅನುಷ್ಠಾನ ಸಮಾರಂಭವು ಶಿಕ್ಷಕರಾದ ನಾಯಕರಹಳ್ಳಿ ಮಂಜೇಗೌಡ ಅವರ ನಿವಾಸದಲ್ಲಿ ನಡೆಯಿತು. ಗ್ರಂಥಾಲಯ ಭಂಡಾರ
ಉದ್ಘಾಟಿಸಿದ ಕನ್ನಡ ಪುಸ್ತಕ ಪ್ರಾಧಿಕಾರ ಸದಸ್ಯರು ಡಾ.ಕುಶಾಲ್ ಬರಗೂರು ಕನ್ನಡ ಪುಸ್ತಕ ಪ್ರಾಧಿಕಾರ ಕನ್ನಡಿಗರ ಮನೆ
ಮನೆಗಳಲ್ಲಿ ಪುಸ್ತಕದ ಬಗ್ಗೆ ಸದಭಿರುಚಿ ಬೆಳಸಿ ಪ್ರೋತ್ಸಾಹಿಸುವ ಕೆಲಸ ಆರಂಭಿಸಿದೆ. ಮನೆಗಳಲ್ಲಿ ಗ್ರಂಥಾಲಯ
ಸ್ಥಾಪಿಸಿರುವ ಕನ್ನಡದ ಮನಸ್ಸುಗಳನ್ನು ಗುರುತಿಸಿ ಅವರನ್ನು ಗೌರವಿಸಿ, ಪ್ರಶಂಸೆ ಪತ್ರ ನೀಡಿ ಗೌರವಿಸುವ ಕೆಲಸ
ಮಾಡುತ್ತಿದ್ದಾರೆ . ಈ ನಿಟ್ಟಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಡಾ.ನಾಯಕರಹಳ್ಳಿ
ಮಂಜೇಗೌಡ ಮತ್ತು ಚೈತ್ರ ನಾಯಕರಹಳ್ಳಿ ದಂಪತಿಗಳು ಮನೆಯಲ್ಲಿ ಉತ್ತಮ ಗ್ರಂಥಾಲಯ ನಿರ್ಮಾಣ ಮಾಡಿದ್ದಾರೆ.
ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು 8 ಕೃತಿಗಳನ್ನು ರಚಿಸಿದ್ದಾರೆ. ಇಂದಿನ ಯುವ ಜನಾಂಗದಲ್ಲಿ ಪುಸ್ತಕ
ಓದುವ ಅಭಿರುಚಿ ಕಡಿಮೆಯಾಗುತ್ತಿದೆ. ಅವರಲ್ಲಿ ಮತ್ತೆ ಪುಸ್ತಕಗಳನ್ನು ಓದುವ ಅಭಿರುಚಿ ಹೆಚ್ಚಿಸುವ ಅವಶ್ಯಕತೆ ಇದೆ
ಎಂದರು. ಹಿರಿಯ ಸಾಹಿತಿ ಚಂದಕಾಂತ ಪಡೆಸೂರ ನಾಯಕರಹಳ್ಳಿ ಮಂಜೇಗೌಡರ ಚಿಗುರಿದೆ ಮನಸ್ಸು ಕಾದಂಬರಿ ವಿಮರ್ಶೆ
ಮಾಡಿದರು.
ಸಾಹಿತಿ ಗೊರೂರು ಅನಂತರಾಜು ಮಾತನಾಡಿ ಅಂಗ್ಲಭಾಷೆ ವ್ಯಾಮೋಹ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಕನ್ನಡ
ಭಾಷೆಯ ಪ್ರೇಮವನ್ನು ಎಲ್ಲರಲ್ಲೂ ಬೆಳಸುನ ಪುಸ್ತಕ ಓದಲು ಉತ್ತೇಜನ ಮಾಡುವ ಕೆಲಸದ ಅವಶ್ಯಕತೆ ಇದೆ ಎಂದರು.
ನಾಯಕರಹಳ್ಳಿ ಮಂಜೇಗೌಡ ದಂಪತಿಗಳಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಮಾನಸರವರು ನೀಡಿದ್ದ
ಪ್ರಶಂಸೆ ಪತ್ರ ನೀಡಿ ಸನ್ಮಾನಿಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಕಲ್ಲಹಳ್ಳಿ
ಹರೀಶ್, ಕತ್ತಿಮಲ್ಲೇನಹಳ್ಳಿ ಪರಮೇಶ್, ಚೈತ್ರ ನಾಯಕರಹಳ್ಳಿ, ವೀರಶೈವ ಸಮಾಜದ ಮುಖಂಡ ಕಟ್ಟಾಯ
ಶಿವಕುಮಾರ, ಭಾರತ ಸ್ಕೌಟ್ಸ್ ಅಂಡ್ ಗೈಡ್ ಕಾರ್ಯದರ್ಶಿ ಸುರೇಶ್ ಗುರೂಜಿ, ಕಾಂಚನಮಾಲ,ಗಮಕಿ
ಪ್ರೊ..ಅನಸೂಯ, ಹಿರಿಯ ಪತ್ರಕರ್ತರಾದ ಚನ್ನರಾಯಪಟ್ಟಣ ಪುಟ್ಟಣ್ಣ ಉಪಸ್ಥಿತರಿದ್ದರು

