ಬಿಜೆಪಿ ಕಾರ್ಯಕರ್ತರು ಎಚ್ಚರಿಕೆಯಿಂದ ಕೆಲಸ ಮಾಡಿ: ಶಾಸಕ ಎಸ್.ಸುರೇಶ್ ಕುಮಾರ್

ಬಿಜೆಪಿ ಕಾರ್ಯಕರ್ತರು ಎಚ್ಚರಿಕೆಯಿಂದ ಕೆಲಸ ಮಾಡಿ, ತಪ್ಪು ಮಾಡಿದರೆ ಪಕ್ಷಕ್ಕೆ ಕೆಟ್ಟು ಹೆಸರು, ದೇಶ ಕಾಯುವ ಸೈನಿಕರಂತೆ ಪಕ್ಷ ಕಟ್ಟುವ ಕೆಲಸ ಮಾಡಿ-ಶಾಸಕ ಎಸ್.ಸುರೇಶ್ ಕುಮಾರ್

ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರ: ದಯಾನಂದನಗರ ವಾರ್ಡ್-58 ಮತ್ತು ಬಂಡಿರೆಡ್ಡಿ ವೃತ್ತ ವಾರ್ಡ್-59.ರ ಬಂಡಿರೆಡ್ಡಿ ಸರ್ಕಲ್ ನಲ್ಲಿ ಬೆಂಗಳೂರುನಗರ ನಿರ್ಮಾತೃ ನಾಡಪ್ರಭು ಕೇಂಪೇಗೌಡರ 517ನೇ ದಿನಾಚರಣೆ, ದಯಾನಂದನಗರ ವಾರ್ಡ್ ಮತ್ತು ಬಂಡಿರೆಡ್ಡಿ ವೃತ್ತ ವಾರ್ಡ್ ಸಾರ್ವಜನಿಕರ ಕುಂದುಕೊರತೆ ನಿವಾರಣೆಗಾಗಿ ಜನಸ್ನೇಹಿ ವೆಬ್ ಸೈಟ್ ಲೋಕರ್ಪಣೆ ಸಮಾರಂಭ.
ಪ್ರಧಾನಿ ಶ್ರೀ ನರೇಂದ್ರಮೋದಿರವರ 12ವರ್ಷ ಸಾಧನೆಗಳ ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮ.
ದಯಾನಂದನಗರ ವಾರ್ಡ್ ಮತ್ತು ಬಂಡಿರೆಡ್ಡಿ ವೃತ್ತ ವಾರ್ಡ್ ಗಳ ಅಧ್ಯಕ್ಷರು, ಪದಾಧಿಕಾರಿಗಳ ಘೋಷಣೆ ಕಾರ್ಯಕ್ರಮ.

ಶಾಸಕರಾದ ಎಸ್.ಸುರೇಶ್ ಕುಮಾರ್ ರವರು, ಲೋಕಸಭಾ ಸದಸ್ಯ ಪಿ.ಸಿ.ಮೋಹನ್ ರವರು, ಕೇಂದ್ರ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷರಾದ ಸಪ್ತಗಿರಿಗೌಡರು, ಬಿಬಿಎಂಪಿ ಮಾಜಿ ಸದಸ್ಯರುಗಳಾದ ಎಂ.ಮುನಿರಾಜು ಶ್ರೀಮತಿ ಶಕೀಲ ಮುನಿರಾಜು, ರಾಜಾಜಿನಗರ ಮಂಡಲ ಕಾರ್ಯದರ್ಶಿ ಎಂ.ಎಸ್.ಸಂಜಯ್ ಕುಮಾರ್ ರವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಚಾಲನೆ ನೀಡಿದರು.
ಬಿಜೆಪಿ ಮುಖಂಡರುಗಳಾದ ರಾಘವೇಂದ್ರರಾವ್, ಗಿರೀಶ್ ಗೌಡ, ಪ್ರವೀಣ್ ರವರು ಉಪಸ್ಥಿತರಿದ್ದರು.

BJP MLA suresh kumar - Rajajinagar

ಎಸ್.ಸುರೇಶ್ ಕುಮಾರ್ ರವರು ಮಾತನಾಡಿ ದೇಶದ ಜನರೊಂದಿಗೆ ಪ್ರಧಾನಿ ನರೇಂದ್ರಮೋದಿರವರು ಪ್ರತಿ ತಿಂಗಳು ಮಾತನಾಡುತ್ತಾರೆ ಎಂದರೆ ವಿಶ್ವದಲ್ಲಿ ಯಾವ ಪ್ರಧಾನಿ ಈ ರೀತಿಯಲ್ಲಿ ಮಾಡುವುದಿಲ್ಲ. ಸಾರ್ವಜನಿಕರ ಸಮಸ್ಯೆಗಳಿಗೆ ವೆಬ್ ಸೈಟ್ ಪ್ರಾರಂಭಿಸಲಾಗಿದೆ. ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ದಯಾನಂದನಗರ, ಬಂಡಿರೆಡ್ಡಿ ವೃತ್ತ ವಾರ್ಡ್ ನಲ್ಲಿ ಜನ ಸಾಮಾನ್ಯರು ಮೊಬೈಲ್ ಮೂಲಕ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು.

ಪ್ರಧಾನಿಯಾವರು ಹೇಳುತ್ತಾರೆ ನಾನು ಒಬ್ಬ ಜನ ಸೇವಕ ಎಂದು ಅದರಂತೆ ಬಿಜೆಪಿ ಕಾರ್ಯಕರ್ತರು ಸೇವಕರಂತೆ ಜನರ ಕೆಲಸ ಮಾಡಬೇಕು ಎಂದು ಹೇಳಿದರು. ಬಿಜೆಪಿ ಕಾರ್ಯಕರ್ತರು ಎಚ್ಚರಿಕೆಯಿಂದ ಕೆಲಸ ಮಾಡಬೇಕು ಕಾರ್ಯಕರ್ತರು ತಪ್ಪು ಮಾಡಿದರೆ ಪಕ್ಷಕ್ಕೆ ಕೆಟ್ಟು ಹೆಸರು ಬರುತ್ತದೆ. ಕಾರ್ಯಕರ್ತರು ಒಳ್ಳೆಯ ಮಾತು, ಒಳ್ಳೆಯ ಕೆಲಸ ಮಾಡಬೇಕು.

ಇಡಿ ದೇಶದ ಓಟರ್ ಲಿಸ್ಟ್ ರೀವಿಜನ್ ಆಗುತ್ತಿದೆ ವಿರೋಧ ಪಕ್ಷಗಳು ಅಪಪ್ರಚಾರ ಮಾಡುತ್ತಿದೆ. ಒಬ್ಬರಿಗೆ ಒಂದು ಮತ ಇರಬೇಕು, ಹಲವಾರು ಕಡೆಗಳಲ್ಲಿ ಮತಪಟ್ಟಿಯಲ್ಲಿ ಹೆಸರು ಇರಬಾರದು. ದೇಶ ಕಾಯುವ ಸೈನಿಕರಂತೆ ಬಿಜೆಪಿ ಕಾರ್ಯಕರ್ತರು ಕಾರ್ಯ ನಿರ್ವಹಣೆ ಮಾಡಬೇಕು ಎಂದು ಹೇಳಿದರು.

ಸಪ್ತಗಿರಿಗೌಡರು ಮಾತನಾಡಿ ಪ್ರಧಾನಿ ನರೇಂದ್ರಮೋದಿರವರು ವಿಶ್ವನಾಯಕ ಅವರು ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಬಿಜೆಪಿ ಕಾರ್ಯಕರ್ತರು ಜವಾಬ್ದಾರಿ ತೆಗೆದುಕೊಂಡವರು ನಿಮ್ಮ ಹೆಗಲಿಗೆ ಜವಾಬ್ದಾರಿ ಹೆಚ್ಚಿದೆ. ಮನೆ, ಮನೆಗಳಿಗೆ ಭೇಟಿ ನೀಡಿ ಪ್ರಧಾನಿ ರವರು ಮಾಡಿರುವ ಕೆಲಸ, ಯೋಜನೆಗಳನ್ನು ತಲುಪಿಸುಬೇಕು. ಕಾರ್ಯಕರ್ತರಿಂದ ಪಕ್ಷ ಅಧಿಕಾರ ಬರಲು ಸಾಧ್ಯ ಎಂದು ಹೇಳಿದರು.

ಪ್ರಧಾನಿರವರ ಮನ್ ಕಿ ಬಾತ್ ಸಾವಿರಾರು ಜನ ವೀಕ್ಷಣೆ ಮಾಡಿದರು.

Hot this week

ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ಜುಲೈ 1 ರಂದು ಪತ್ರಿಕಾ ದಿನಾಚರಣೆ ಹಾಗೂ ವಿಚಾರ ಸಂಕಿರಣ

ಬೆಂಗಳೂರು, ಜೂನ್ 29 (ಕರ್ನಾಟಕ ವಾರ್ತೆ) :ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ...

ಶ್ರೀ ಕೃಷ್ಣ ರುಕ್ಷ್ಮಿಣಿ ಕಾನೂನು ಮಹಾವಿದ್ಯಾಲಯದಲ್ಲಿ ಮೌಲ್ಯೋತ್ಸವ

ಬೆಂಗಳೂರು: ಚಿಕ್ಕಜಾಲದ ಚೊಕ್ಕನಹಳ್ಳಿಯಲ್ಲಿರುವ ಶ್ರೀ ರೇವಣ ಸಿದ್ದೇಶ್ವರ ಎಜುಕೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ...

ಸಂಗೀತಾಸಕ್ತರನ್ನು ರಂಜಿಸಿದ “ನಾದ ನಮನ” ಸಂಗೀತ ಸಂಜೆ

ಬೆಂಗಳೂರು, ಜೂ.27: ಸಾಕಿ ಚಾರಿಟೇಬಲ್ ಟ್ರಸ್ಟ್(Saki Charitable Trust) ನಿಂದ ನಗರದ...

ಎಪಿಎಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾಗಿ ಸಿ.ಎ ಡಾ. ವಿಷ್ಣು ಭರತ್ ಆಲಂಪಳ್ಳಿ ಪುನರಾಯ್ಕೆ

ಬೆಂಗಳೂರು,ಜೂ.29: ನಗರದ 91 ವರ್ಷಗಳ ಹಳೆಯ ಎಪಿಎಸ್ ಶಿಕ್ಷಣ ಸಂಸ್ಥೆಗಳಿಗೆ ನೂತನ...

Topics

ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ಜುಲೈ 1 ರಂದು ಪತ್ರಿಕಾ ದಿನಾಚರಣೆ ಹಾಗೂ ವಿಚಾರ ಸಂಕಿರಣ

ಬೆಂಗಳೂರು, ಜೂನ್ 29 (ಕರ್ನಾಟಕ ವಾರ್ತೆ) :ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ...

ಶ್ರೀ ಕೃಷ್ಣ ರುಕ್ಷ್ಮಿಣಿ ಕಾನೂನು ಮಹಾವಿದ್ಯಾಲಯದಲ್ಲಿ ಮೌಲ್ಯೋತ್ಸವ

ಬೆಂಗಳೂರು: ಚಿಕ್ಕಜಾಲದ ಚೊಕ್ಕನಹಳ್ಳಿಯಲ್ಲಿರುವ ಶ್ರೀ ರೇವಣ ಸಿದ್ದೇಶ್ವರ ಎಜುಕೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ...

ಸಂಗೀತಾಸಕ್ತರನ್ನು ರಂಜಿಸಿದ “ನಾದ ನಮನ” ಸಂಗೀತ ಸಂಜೆ

ಬೆಂಗಳೂರು, ಜೂ.27: ಸಾಕಿ ಚಾರಿಟೇಬಲ್ ಟ್ರಸ್ಟ್(Saki Charitable Trust) ನಿಂದ ನಗರದ...

ಎಪಿಎಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾಗಿ ಸಿ.ಎ ಡಾ. ವಿಷ್ಣು ಭರತ್ ಆಲಂಪಳ್ಳಿ ಪುನರಾಯ್ಕೆ

ಬೆಂಗಳೂರು,ಜೂ.29: ನಗರದ 91 ವರ್ಷಗಳ ಹಳೆಯ ಎಪಿಎಸ್ ಶಿಕ್ಷಣ ಸಂಸ್ಥೆಗಳಿಗೆ ನೂತನ...

ಶ್ರೀರಾಮ ಮಂದಿರದ ಹುಂಡಿ ಹಣ ದುರುಪಯೋಗ; ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಿ !

ಅಯೋಧ್ಯೆಯ ಶ್ರೀರಾಮ ಮಂದಿರವು ಕೇವಲ ಒಂದು ಧಾರ್ಮಿಕ ಸ್ಥಳವಲ್ಲ, ಅದು ಜಗತ್ತಿನಾದ್ಯಂತ...

ರೋಟರಿ ಜಿಲ್ಲೆ 3191ರ ಜಿಲ್ಲಾ ಗವರ್ನರ್ ಆಗಿ ಡಾ. ಅನಿಲ್ ಗುಪ್ತ ಪದಗ್ರಹಣ (Dr. Anil Gupta sworn in as District Governor of Rotary District 3191)

ಬೆಂಗಳೂರು, ಜೂ29: ಉದ್ಯಮಿ ಹಾಗೂ ದೀರ್ಘಕಾಲದ ರೋಟೇರಿಯನ್ ಡಾ. ಅನಿಲ್ ಗುಪ್ತ...

ಶ್ರೀರಾಮಮಂದಿರದ ಹುಂಡಿ ಹಣ ದುರುಪಯೋಗ; ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಿ !

ಅಯೋಧ್ಯೆಯ ಶ್ರೀರಾಮ ಮಂದಿರವು(Ayodhya Sree Ram Temple) ಕೇವಲ ಒಂದು ಧಾರ್ಮಿಕ...

Related Articles