ಮಲ್ಲೇಶ್ವರ: ಚಿನ್ನದ ಸರಗಳ್ಳತನ ಮಾಡಿದ್ದ ಮೂವರು ವ್ಯಕ್ತಿಗಳ ಬಂಧನ
22 ಗ್ರಾಂನ 01 ಚಿನ್ನದ ಸರ ಹಾಗೂ 02 ದ್ವಿ-ಚಕ್ರ ವಾಹನಗಳ ವಶ, ಮೌಲ್ಯ ₹ 2.50 ಲಕ್ಷ
Bengaluru : ಮಲ್ಲೇಶ್ವರಂ ವ್ಯಾಪ್ತಿಯ 8/06/2026ರ ರಾತ್ರಿ ಸ್ನೇಹಿತರೊಂದಿಗೆ ಮಲ್ಲೇಶ್ವರಂ, 2ನೇ ಕ್ರಾಸ್ನ ನಂದಿನಿ ಬೂತ್ ಹತ್ತಿರದ ಸರ್ಕಲ್ನಲ್ಲಿ ಇಬ್ಬರು ಅಪರಿಚತ ವ್ಯಕ್ತಿಗಳು ದ್ವಿ-ಚಕ್ರ ವಾಹನದಲ್ಲಿ ಬಂದು ಪರ್ಯಾದುದಾರರ ಕೊರಳಿನಲ್ಲಿದ್ದ 22 ಗ್ರಾಂನ 01 ಚಿನ್ನದ ಸರ ಕಿತ್ತುಕೊಂಡು ದ್ವಿ-ಚಕ್ರ ವಾಹನದಲ್ಲಿ ಪರಾರಿಯಾಗಿರುತ್ತಾರೆ. ಈ ಕುರಿತು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ತನಿಖೆಕೈಗೊಂಡು, ಬಾತ್ಮೀದಾರರಿಂದ ಖಚಿತ ಮಾಹಿತಿ ಕಲೆಹಾಕಿ, 12/06/2026 ರಂದು ಓರ್ವ ವ್ಯಕ್ತಿಯನ್ನು ಅಗ್ರಹಾರ ದಾಸರಹಳ್ಳಿಯಲ್ಲಿರುವ ಆತನ ವಾಸದ ಮನೆಯಿಂದ ವಶಕ್ಕೆ ಪಡೆದು, ವಿಚಾರಣೆಗೊಳಪಡಿಸಲಾಗಿ, ಈತನು ಇಬ್ಬರು ಸಹಚರರೊಂದಿಗೆ ಸೇರಿಕೊಂಡು ಚಿನ್ನದ ಸರವನ್ನು ಅಪಹರಣ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿರುತ್ತಾನೆ. ಹಾಗೂ ಅದೇ ದಿನ ಮತ್ತಿಬ್ಬರು ಸಹಚರರನ್ನು ನಂದಿನಿಲೇಔಟ್ ಜೈಮಾರುತಿ ನಗರದ ಆವರ ವಾಸದ ಮನೆಯಿಂದ ವಶಕ್ಕೆ ಪಡೆದುಕೊಂಡು, ವಿಚಾರಣೆಗೊಳಪಡಿಸಲಾಗಿ, ಸರ ಅಪಹರಣ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿರುತ್ತಾರೆ.
13/06/2026 ರಂದು ಮೂವರು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 05 ದಿನಗಳ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.
ಪೊಲೀಸ್ ಅಭಿರಕ್ಷೆಗೆ ಪಡೆದ ಆರೋಪಿಗಳನ್ನು ಸುಧೀರ್ಘವಾಗಿ ವಿಚಾರಣೆಗೊಳಪಡಿಸಲಾಗಿ ಅಪಹರಣ ಮಾಡಿದ್ದ ಚಿನ್ನದ ಸರವನ್ನು ಬಸವೇಶ್ವರ ನಗರದಲ್ಲಿರುವ ಗೋಲ್ಡ್ ಲೋನ್ ಕಂಪನಿಯಲ್ಲಿ ಅಡಮಾನವಿಟ್ಟಿರುವುದಾಗಿ ಹಾಗೂ ಕೃತ್ಯಕ್ಕೆ ಬಳಸಿದ 02 ದ್ವಿ-ಚಕ್ರ ವಾಹನಗಳನ್ನು ನಂದಿನಿ ಲೇಔಟ್ನ ಜೈ ಮಾರುತಿ ನಗರದ ಆರೋಪಿಯ ವಾಸದ ಮನೆಯ ಬಳಿ ನಿಲ್ಲಿಸಿರುವುದಾಗಿ ತಿಳಸಿರುತ್ತಾರೆ.
15/06/2026ರಂದು ಆರೋಪಿಗಳು ನೀಡಿದ ಮಾಹಿತಿಯ ಮೇರೆಗೆ ಬಸವೇಶ್ವರನಗರದ ಗೋಲ್ಡ್ ಲೋನ್ ಕಂಪನಿಯಿAದ 22 ಗ್ರಾಂನ 01 ಚಿನ್ನದ ಸರವನ್ನು ಹಾಗೂ ಕೃತ್ಯಕ್ಕೆ ಬಳಸಿದ 02 ದ್ವಿ-ಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇವುಗಳ ಒಟ್ಟು ಮೌಲ್ಯ ₹ 2,50,000/- (ಎರಡು ಲಕ್ಷದ ಐವತ್ತು ಸಾವಿರ ರೂಪಾಯಿಗಳು).
17/06/2026 ರಂದು ಮೂವರು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ.
ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತ ಬಿ.ಎಸ್.ನೇಮಗೌಡ, ಐಪಿಎಸ್ ರವರ ಮಾರ್ಗದರ್ಶನದಲ್ಲಿ, ಮಲ್ಲೇಶ್ವರಂ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀಮತಿ ಪ್ರಭಾವತಿ ಪಾಂಡುರAಗ ರವರ ನೇತೃತ್ವದಲ್ಲಿ, ಮಲ್ಲೇಶ್ವರಂ ಪೊಲೀಸ್ ಠಾಣಾ ಪೊಲೀಸ್ ಇನ್ಸ್ಪೆಕ್ಟರ್ ಶ್ರೀಮತಿ.ಭಾಗ್ಯವತಿ ಬಂತಿ ಹಾಗೂ ಇತರೆ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

