ವಿದ್ಯಾರ್ಥಿಗಳು ಪೋಷಕರ ಕನಸು ನನಸು ಮಾಡಲು ಸಜ್ಜಾಗಬೇಕು: ಶಿಕ್ಷಣ ತಜ್ಞ ಡಾ. ಡಿ.ಆರ್. ವಿಜಯಸಾರಥಿ

BENGALURU : VIJAYANAGARA : ವಿಜಯನಗರದ ಶ್ರೀ ವಾಸವಿ ಇಂಟರ್‌ನ್ಯಾಷನಲ್ (Sree Vasavi International College) ಪಿಯು ಕಾಲೇಜಿನಲ್ಲಿ 2026-27ನೇ ಶೈಕ್ಷಣಿಕ ವರ್ಷದ ಉದ್ಘಾಟನಾ ಸಮಾರಂಭ ಅತ್ಯಂತ ಸಂಭ್ರಮ, ಸಡಗರ ಹಾಗೂ ಉತ್ಸಾಹಭರಿತ ವಾತಾವರಣದಲ್ಲಿ ನೆರವೇರಿತು. 300ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ, ಆತ್ಮೀಯವಾಗಿ ಬರಮಾಡಿಕೊಂಡಿತು.  ವಾಸವಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹಾಗೂ ಶಿಕ್ಷಣ ತಜ್ಞರಾದ ಡಾ. ಡಿ.ಆರ್. ವಿಜಯಸಾರಥಿ, “ಫಸ್ಟ್ ಲವ್” ಚಿತ್ರದ ನಿರ್ದೇಶಕ ಗುರುಪ್ರಸಾದ್, (First Love) ಚಿತ್ರದ ನಾಯಕಿ ರದ್ಯಾ ರಾಜ್, (Radya Raj) ಕಲಾವಿದರಾದ ಯುವ ಶೆಟ್ಟಿ, ಗಜೇಂದ್ರ, ನಿಕಿತಾ, ಮಧು, ಪ್ರದೀಪ್ ಪ್ರಸಾದ್ ಹಾಗೂ ವಿಜಯಕುಮಾರ್ ಭಾಗವಹಿಸಿ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು. ಚಿತ್ರ ತಂಡ ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದ ನಡೆಸಿ, ಕಾಲೇಜು ಜೀವನದ ಮಹತ್ವ, ಸ್ನೇಹ, ಜವಾಬ್ದಾರಿ, ಕನಸುಗಳು ಹಾಗೂ ಯಶಸ್ಸಿನ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಡಾ. ಡಿ.ಆರ್. ವಿಜಯಸಾರಥಿ ಮಾತನಾಡಿ, ವಿದ್ಯಾರ್ಥಿ ಜೀವನ ಪ್ರತಿಯೊಬ್ಬರ ಭವಿಷ್ಯ ನಿರ್ಮಾಣದ ಅತ್ಯಂತ ಮಹತ್ವದ ಹಂತವಾಗಿದ್ದು, ಈ ಅವಧಿಯಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಜೀವನದ ದಿಕ್ಕನ್ನು ನಿರ್ಧರಿಸುತ್ತವೆ. ಹದಿಹರೆಯದ ವಯಸ್ಸಿನಲ್ಲಿ ಅನೇಕ ಆಕರ್ಷಣೆಗಳು ಮತ್ತು ಸವಾಲುಗಳು ಎದುರಾಗುವುದು ಸಹಜ.
ಆದರೆ ವಿದ್ಯಾರ್ಥಿಗಳು ತಮ್ಮ ಪೋಷಕರ ಕನಸು, ಕುಟುಂಬದ ನಿರೀಕ್ಷೆಗಳು ಹಾಗೂ ತಮ್ಮ ಭವಿಷ್ಯದ ಗುರಿಗಳನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣದ ಕಡೆ ಹೆಚ್ಚಿನ ಗಮನ ಹರಿಸಬೇಕು. ಶಿಸ್ತು, ಪರಿಶ್ರಮ ಮತ್ತು ದೃಢಸಂಕಲ್ಪವೇ ಯಶಸ್ಸಿನ ಗುಟ್ಟು ಪ್ರತಿಯೊಬ್ಬ ವಿದ್ಯಾರ್ಥಿಯ ಯಶಸ್ಸಿನ ಹಿಂದೆ ತಂದೆ-ತಾಯಿ ಮತ್ತು ಶಿಕ್ಷಕರ ತ್ಯಾಗ, ಮಾರ್ಗದರ್ಶನ ಹಾಗೂ ಆಶೀರ್ವಾದ ಅಡಗಿದೆ. ಸಮಯ ಸದುಪಯೋಗಪಡಿಸಿಕೊಂಡು ಗುರಿ ಸಾಧನೆಯತ್ತ ಮುನ್ನಡೆಯಬೇಕಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಿರ್ದೇಶಕ ಗುರುಪ್ರಸಾದ್ ಮಾತನಾಡಿ, “ಕಾಲೇಜು ಜೀವನ ಕೇವಲ ಪಠ್ಯಪುಸ್ತಕಗಳಿಗೆ ಮಾತ್ರ ಸೀಮಿತವಾಗಿಲ್ಲ. ಅದು ವ್ಯಕ್ತಿತ್ವ ರೂಪಿಸುವ ಹಂತವಾಗಿದ್ದು, ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಗುರುತಿಸಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ನಾಗರಿಕರಾಗಿ ಬೆಳೆಯಬೇಕು” ಎಂದು ಹೇಳಿದರು.

ನಟಿ ರದ್ಯಾ ರಾಜ್ ಮಾತನಾಡಿ, “ನಿಮ್ಮ ಜೀವನದ ಕಥೆಯ ನಿಜವಾದ ನಾಯಕ-ನಾಯಕಿಯರು ನೀವೇ. ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ಆತ್ಮವಿಶ್ವಾಸದಿಂದ ಮುನ್ನಡೆಯಿರಿ. ಕನಸುಗಳನ್ನು ಗುರಿಯಾಗಿಸಿಕೊಂಡು ಶ್ರಮಿಸಿದರೆ ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ” ಎಂದು ಪ್ರೇರಣಾದಾಯಕ ಸಂದೇಶ ನೀಡಿದರು.

ಕಾರ್ಯಕ್ರಮದಲ್ಲಿ ಶ್ರೀ ವಾಸವಿ ಇಂಟರ್‌ನ್ಯಾಷನಲ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಅಶ್ವಿನಿ ಹೆಚ್.ಸಿ., ಪ್ರಾಂಶುಪಾಲರಾದ ಡಾ. ರಂಗಸ್ವಾಮಿ, ಪದ್ಮ, ಸೌಭಾಗ್ಯ, ಕಾಲೇಜಿನ ಆಡಳಿತ ಮಂಡಳಿ ಸದಸ್ಯರು, ಉಪನ್ಯಾಸಕರು, ಸಿಬ್ಬಂದಿ ಭಾಗವಹಿಸಿದ್ದರು.

Hot this week

ಗೋಸೇವೆಗಾಗಿ ಮಹೇಂದ್ರ ಮುಣೋತ್‌ ಕುಟುಂಬ 56 ಲಕ್ಷ ರೂ. ದೇಣಿಗೆ

ತಮ್ಮ ತಂದೆ ಮೋತಿಲಾಲ್ ಮುಣೋತ್ (Motilal Munnoth) ಅವರ ಸ್ಮರಣಾರ್ಥ ಅವರ...

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಗೌಶುಭಮ್ ಸಹಯೋಗ

ಬೆಂಗಳೂರು: ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು...

ಕರ್ನಾಟಕ ರಾಜ್ಯ ಬರಹಗಾರರ ಸಂಘದ ಕಲಾವಿದರಿಗೆ ಕರ್ನಾಟಕ ಕಲಾ ರತ್ನ ಪ್ರಶಸ್ತಿ

ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ(Hoovina Hadagali) ರಾಜ್ಯಮಟ್ಟದ ಸಾಹಿತ್ಯ ಮತ್ತು ಸಾಂಸ್ಕೃತಿಕ...

ದೆಹಲಿಯ ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಕಚೇರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ದೆಹಲಿಯಲ್ಲಿನ ರಾಷ್ಟ್ರೀಯ ಮಹಿಳಾ...

ತಂತ್ರಜ್ಞಾನ ಚಾಲಿತ ಮತದಾರರ ನೋಂದಣಿ ಕುರಿತು ಒಂದು ದಿನದ ಅಂತಾರಾಷ್ಟ್ರೀಯ ಕಾರ್ಯಗಾರ

ಭಾರತದ ಚುನಾವಣಾ ಆಯೋಗವು, ಭಾರತೀಯ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ಮತ್ತು ಚುನಾವಣಾ ನಿರ್ವಹಣಾ...

Topics

ನಿತ್ಯ ಪಂಚಾಂಗ 13.06.2026 ಶನಿವಾರ SATURDAY

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 13.06.2026 ಶನಿವಾರ SATURDAY. ಸಂವತ್ಸರ: ಪರಾಭವ. SAMVATSARA : PARABHAVA. ಆಯಣ:...

ಪವಮಾನಪುರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಸಂಗೀತ ಸೇವೆ

ಬೆಂಗಳೂರು ; ಶ್ರೀ ರಾಘವೇಂದ್ರ ಸ್ವಾಮಿಗಳ( Sri Raghavendra Swamy Mutt)...

ಜೂನ್ 14ರಂದು 7ನೇ ಸ್ವಯಂಪ್ರೇರಿತ ರಕ್ತದಾನ ಶಿಬಿರ

ಬೆಂಗಳೂರು: ವಿಶ್ವ ಹಿಂದೂ ಪರಿಷದ್ (ಯಲಹಂಕ ಜಿಲ್ಲೆ), (Vishwa Hindu Parishat)...

Related Articles