ಬೆಂಗಳೂರು ; ಶ್ರೀ ರಾಘವೇಂದ್ರ ಸ್ವಾಮಿಗಳ( Sri Raghavendra Swamy Mutt) ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ 1008ಶ್ರೀ ಸುಬುಧೇಂದ್ರತೀರ್ಥ (Sri Sri Sri 1008 Subudhendra Thirtharu) ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಹೊಸ ಪ್ರತಿಭೆಗಳಿಗೆ ಗುರುರಾಯರ ಸನ್ನಿಧಿಯಲ್ಲಿ “ದಾಸವಾಣಿ” (Dasavani) ಸೇವೆ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ.
ಹಾಗೂ ಭಜನಾ ಮಂಡಳಿಗಳೂ ಕೂಡಾ ಶ್ರೀಹರಿ ಭಜನೆ ಸೇವೆಯಲ್ಲಿ ಭಾಗವಹಿಸಬಹುದು, ಪವಮಾನಪುರದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪ್ರತಿ ಗುರುವಾರ ನಡೆಯುವ ಶ್ರೀ ಹರಿ ಭಜನೆ ಮತ್ತು “ದಾಸವಾಣಿ” ಸಂಗೀತ ಸೇವೆ ಕಾರ್ಯಕ್ರಮದಲ್ಲಿ ಸೇವೆ ಸಲ್ಲಿಸಲು ಆಸಕ್ತಿ ಉಳ್ಳವರು ತಮ್ಮ ಅರ್ಜಿಯನ್ನು (ಬಯೋ ಡಾಟ)ವನ್ನು ಸಲ್ಲಿಸಿ ಈ ನಂಬರ್ ಮುಖಾಂತರ ಸಂಪರ್ಕಿಸಬಹುದು ಎಂದು ಶ್ರೀಮಠದ ವ್ಯವಸ್ಥಾಪಕರಾದ ಶ್ರೀ ನಂದಕಿಶೋರಾಚಾರ್ ತಿಳಿಸಿದ್ದಾರೆ. ಮೊಬೈಲ್ ಸಂಖ್ಯೆ : 8660349906- 9880416091, 9980400535,

