ತಮ್ಮ ತಂದೆ ಮೋತಿಲಾಲ್ ಮುಣೋತ್ (Motilal Munnoth) ಅವರ ಸ್ಮರಣಾರ್ಥ ಅವರ ಪುತ್ರರಾದ ಮಹೇಂದ್ರ ಸುರಕ್ಷಾ ಮುಣೋತ್ (Mahendra Munnoth) ಮತ್ತು ಹಂಸರಾಜ್ ಭಾಗ್ಯವಂತಿ ಮುಣೋತ್ ಕನಕಪುರ ರಸ್ತೆಯಲ್ಲಿರುವ ಅಮೃತಧಾರ ಗೋಶಾಲೆಯಲ್ಲಿ ಗೋ ಸೇವಾ ಸಾಂಸ್ಕೃತಿಕ (Go Seva Cultural Utsava Samithi) ಉತ್ಸವವನ್ನು ಆಯೋಜಿಸಿದ್ದರು. ಮುಣೋತ್ ಕುಟುಂಬದೊಂದಿಗೆ ಸಂತ ಪುಖರಾಜ್ ಮತ್ತು ಸಂತ ಆನಂದ್ ಕೃಷ್ಣ ದಾಸ್ ಮತ್ತು ಗೋ ಭಕ್ತರು ಸೇರಿ ಹಸುಗಳನ್ನು ಪೂಜಿಸುವ ಮತ್ತು ಮರಗಳನ್ನು ನೆಡುವ ಮೂಲಕ ತಮ್ಮ ತಂದೆಗೆ ಗೌರವ ಸಲ್ಲಿಸಿದರು.

ಗೋಪ್ರೇಮಿ ಮಹೇಂದ್ರ ಮುಣೋತ್ ತಮ್ಮ ಭಾಷಣದಲ್ಲಿ “ಸಸ್ಯಗಳಿಗೂ ಜೀವವಿದೆ, ಅದರಿಂದ ಅವು ನಮಗಾಗಿ ಜೀವಂತವಾಗಿವೆ. ನಾವು ಮರಗಳನ್ನು ನೆಟ್ಟು ಒಂದು ವರ್ಷ ಅವುಗಳನ್ನು ನೋಡಿಕೊಂಡರೆ, ಮರಗಳು ಜೀವಿತಾವಧಿಯವರೆಗೆ ನಮ್ಮನ್ನು ನೋಡಿಕೊಳ್ಳುತ್ತವೆ. ಪ್ರಕೃತಿಯೇ ಜೀವನ. ಜೀವನವೇ ಪ್ರಕೃತಿ. ನನ್ನ ಹೆತ್ತವರು ರೈತರು, ಕೃಷಿ ಮತ್ತು ಪಶುಸಂಗೋಪನೆ ಅವರ ವೃತ್ತಿಗಳಾಗಿದ್ದವು. ನನ್ನ ಬಾಲ್ಯದಲ್ಲಿ ಗೋವುಗಳಿಗೆ ಅವರ ಸೇವೆಯನ್ನು ಕಂಡು ನಾನೂ ಅನುಭವಿಸಿದ್ದೇನೆ ಮತ್ತು ನಾವು ಅವರ ಸೇವಾ ಕಾರ್ಯವನ್ನು ಮುಂದುವರಿಸುತ್ತಿದ್ದೇವೆ” ಎಂದು ಹೇಳಿದರು. ಹಸು ಅಮೃತದಂತೆ ನಮಗೆ ಹಾಲನ್ನು ನೀಡುತ್ತದೆ, ಹಸುವಿನ ಮೂತ್ರವು ಜೀವ ನೀಡುವ ಔಷಧವಾಗಿದೆ, ಹಸುವಿನ ಸಗಣಿ ಭೂಮಿಯನ್ನು ಫಲವತ್ತಾಗಿಸುತ್ತದೆ, ಮನೆಗೆ ಪ್ಲಾಸ್ಟರ್ ಮಾಡಲು ಬಳಸಲಾಗುತ್ತದೆ, ಇಂಧನವಾಗಿ ಬಳಸಲಾಗುತ್ತದೆ, ಹಸುವಿನ ಕರುಗಳು ಬೆಳೆದು ರೈತರ ಹೊಲಗಳನ್ನು ಉಳುಮೆ ಮಾಡುತ್ತವೆ, ಹಸುವಿನಿಂದ ಪಡೆದ ಪಂಚಗವ್ಯವು ದೇಹ ಮತ್ತು ಮನಸ್ಸನ್ನು ಶುದ್ಧಗೊಳಿಸುತ್ತದೆ, ಹಸುವಿನಿಂದ ಪಡೆದ ಶುದ್ಧ ದೇಸಿ ತುಪ್ಪದಿಂದ ಹವನ ಮಾಡುವ ಮೂಲಕ ವಾತಾವರಣವನ್ನು ಶುದ್ಧೀಕರಿಸಲಾಗುತ್ತದೆ, ಗೋಲೋಕದಲ್ಲಿಯೇ ಇರುವ ಹಸುವಿನ ಪ್ರತಿಯೊಂದು ರೋಮರೋಮದಲ್ಲೂ ಶುದ್ಧತೆ ಮತ್ತು ದೈವತ್ವವಿದೆ, ಹಸು ಭಾರತದ ಆಧ್ಯಾತ್ಮಿಕ ಸಂಸ್ಕೃತಿಯ ಆಧಾರವಾಗಿದೆ ಮತ್ತು ಹಸುವಿನ ಸೇವೆ ನಮ್ಮೆಲ್ಲರ ಕರ್ತವ್ಯವಾಗಿದೆ. ಎಂದು ತಮ್ಮ ಮನದಾಳದ ಮಾತುಗಳನ್ನು ಹೇಳಿದರು.ಕಾರ್ಯಕ್ರಮದಲ್ಲಿ ವಿವಿಧ ಗೋ ಆಶ್ರಯಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಮಾರುತಿ ಮೆಡಿಕಲ್ಸ್ ನ ನಿರ್ದೇಶಕ ಆನಂದ ಮುನೋತ್ ಜೈನ್ ಅವರು ಉಪಸ್ಥಿತರಿದ್ದು, ಕೃಪಾ ಲವಿಂಗ್ ಅನಿಮಲ್ಸ್, ಕ್ಯೂಪ, ಸರ್ವ, ಭಾರತೀಯ ಗೋಪರಿವಾರ ಅರಸೀಕೆರೆ, ಆದರ್ಶ ಗೋಶಾಲ ರಾಜನಕುಂಟೆ, ಕೃಷ್ಣಗೋ ಸೇವಾಶ್ರಮ ಕೊಟ್ನೂರು, ಕೇಸರಿಯಾನಾಥ ಗೋಶಾಲ, ಪಿಂಜ್ರಪೌಲ್ ಗೋಶಾಲ, ಟಿ.ನರಸಿಂಹಪುರ, ಧ್ಯಾನ್ ಫೌಂಡೇಶನ್, ಓಂಕಾರ ಗೋಶಾಲ ಶಿವಗಂಗೆ, ಕಾಮಧೇನು ಗೋಶಾಲ ಚಿಕ್ಕಮಗಳೂರು ಮತ್ತು ವಿವಿಧ ಗೋಸೇವಕ ದಳಗಳು ಭಾಗವಹಿಸಿದ್ದು .ಕಾರ್ಯಕ್ರಮದಲ್ಲಿ ಪಶು ಹಸುಗಳು ಮತ್ತು ಇತರ ಪ್ರಾಣಿಗಳ ಸೇವೆಗಾಗಿ ಒಟ್ಟು 56 ಲಕ್ಷ ರೂಪಾಯಿಗಳನ್ನು ಚೆಕ್ ಮೂಲಕ ಇತರಿಸಲಾಯಿತು.
ಶಿವ ಗೋಸೇವಾ ಭಕ್ತ ಮಂಡಲ ಚಾರಿಟೇಬಲ್ ಟ್ರಸ್ಟ್ನ ಸದಸ್ಯರೊಂದಿಗೆ, ವಿವಿಧ ಗೋಶಾಲೆಗಳ ಪ್ರತಿನಿಧಿಗಳಾಗಿ ನಿತಿನ್ ಭಾಯಿ, ಮಹೇಂದ್ರ ಜೈನ್, ಡಾ. ಜಯಶ್ರೀ, ಡಾ.ಉದಯ್, ಆದಿತ್ಯ, ಉಪೇಂದ್ರ ಕುಮಾರ್, ಗೌತಮ್ ಶರ್ಮಾ, ಸಂತೋಷ್ ತಿವಾರಿ, ಅಮಿತ್, ರಾಜಣ್ಣ ಹಾಗೂ ಅಪಾರ ಸಂಖ್ಯೆಯ ಗೋಭಕ್ತರು ಉಪಸ್ಥಿತರಿದ್ದರು. ಜೈ ಗೌ ಮಾತಾ ಕಿ, ಭಾರತ್ ಮಾತಾ ಕೀ ಜೈ, ವಂದೇ ಮಾತರಂ, ಜೈ ಮಹಾವೀರ, ಜೈ ಶ್ರೀರಾಮ್ ಎಂಬ ಗೋಭಕ್ತರ ಘೋಷಣೆಗಳಿಂದ ವಾತಾವರಣ ಭಕ್ತಿಯಿಂದ ತುಂಬಿತ್ತು. ಧನ್ಯವಾದಗಳು.