ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ(Hoovina Hadagali) ರಾಜ್ಯಮಟ್ಟದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನೆಯ ರಂಗ ಸಂಗೀತ ವಿಭಾಗದ ಹಾಸನ ಜಿಲ್ಲಾ ಸಂಚಾಲಕರು, ಕಲಾವಿದರು
ನಿವೃತ್ತ ಪ್ರಾಂಶುಪಾಲರು ಪ್ರೊ. ಎ. ಹೆಚ್. ಗಣೇಶ್ ಅಂಕಪುರ ಇವರಿಗೆ ಕರ್ನಾಟಕ ಕಲಾ ರತ್ನ ಪ್ರಶಸ್ತಿಗೆ, (Karnataka Kala Ratna Award) ಮೈಸೂರು ಜಿಲ್ಲಾ ಸಂಚಾಲಕರು, ನಿವೃತ್ತ ಲೆಕ್ಕ ಅಧಿಕ್ಷಕರು,
ನಟರು, ನಾಟಕ ರಚನಕಾರರು ಶ್ರೀ ಎಸ್. ಎಸ್. ಪುಟೇಗೌಡರು ಇವರಿಗೆ ಕರ್ನಾಟಕ ರಂಗಕಲಾ ರತ್ನ ಪ್ರಶಸ್ತಿಗೆ ಮತ್ತು ಹೊಳೆನರಸೀಪುರ ತಾಲ್ಲೂಕು ಸಂಚಾಲಕರು ರಾಮೇನಹಳ್ಳಿ ಪುಟ್ಟಸ್ವಾಮಿಗೌಡರು ಪ್ರಗತಿಪರ ರೈತರು, ಸಮಾಜ ಸೇವಕರು, ಇವರ ರಂಗಭೂಮಿ ಸೇವೆ ಗುರುತಿಸಿ ನಾಡ ಕೀರ್ತಿ ಪ್ರಶಸ್ತಿಗೆ ಬೆಂಗಳೂರಿನ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ಸಂಸ್ಥೆಯು ಆಯ್ಕೆ ಮಾಡಿದೆ. ಇವರಿಂದ ಇನ್ನೂ ಹೆಚ್ಚಿನ ಕಲಾ ಸೇವೆ ಈ ನಾಡಿಗೆ ದೊರೆಯಲಿ ಎಂದು ಕರ್ನಾಟಕ ರಾಜ್ಯ ಬರಹಗಾರರ ಸಂಘ ರಾಜ್ಯಾಧ್ಯಕ್ಷ ಶ್ರೀ ಮಧು ನಾಯ್ಕ್ ಲಂಬಾಣಿ, ಗೌರವಾಧ್ಯಕ್ಷರು ಸಾಹಿತಿ ಗೊರೂರು ಅನಂತರಾಜು, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಸಿ. ಆರ್. ಚಿಕ್ಕಮಗಳೂರು ಅವರು ಶುಭ ಹಾರೈಸಿದ್ದಾರೆ.

