ರಾಜ್ಯದ ಹಿತವೇ ಸರ್ಕಾರದ ಮೊದಲ ಆದ್ಯತೆ: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ

ಬೆಂಗಳೂರು: ರಾಜ್ಯದ ಅಭಿವೃದ್ಧಿ, ಜನರ ಸಮಸ್ಯೆಗಳಿಗೆ(People’s Problems) ಪರಿಹಾರ ಹಾಗೂ ಬರದಿಂದ ಸಂಕಷ್ಟಕ್ಕೊಳಗಾಗಿರುವ ರೈತರ ಹಿತವೇ ಸರ್ಕಾರದ(Government) ಮೊದಲ ಆದ್ಯತೆಯಾಗಿದೆ. ವಿಪಕ್ಷದವರು ಪ್ರತಿಯೊಂದು ವಿಷಯವನ್ನೂ ರಾಜಕೀಯ ದೃಷ್ಟಿಯಿಂದ ನೋಡುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ. ಜಿ. ಪರಮೇಶ್ವರ(Dr.G.Parameshwar) ಹೇಳಿದರು.
 
ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎದುರಾಗಿರುವ ಬರ ಪರಿಸ್ಥಿತಿಯ ಕುರಿತು ಸಮಗ್ರವಾಗಿ ಚರ್ಚಿಸಿ, ವಿರೋಧ ಪಕ್ಷಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ರೈತರನ್ನು ಸಂಕಷ್ಟದಿಂದ ಹೊರತರುವ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದರು.
 
ಬರದ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಿದೆ :
ಇಡೀ ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿದೆ. ಇದರ ಬಗ್ಗೆ ಸದನದಲ್ಲಿ ಸಮಗ್ರ ಚರ್ಚೆಯಾಗಬೇಕು. ಬರ ಪರಿಹಾರಕ್ಕೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು, ಕೇಂದ್ರ ಸರ್ಕಾರದ ಯಾವ ರೀತಿ ನೆರವು ಕೇಳಬೇಕು ಎಂಬುದರ ಕುರಿತು ಒಗ್ಗಟ್ಟಿನಿಂದ ಚರ್ಚಿಸಬೇಕಿದೆ. ಇದೇ ಉದ್ದೇಶದಿಂದ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ. ಬರ ಪರಿಸ್ಥಿತಿಯ ಜೊತೆಗೆ ಕಸ್ತೂರಿರಂಗನ್ ವರದಿಯ ಕುರಿತೂ ಚರ್ಚೆಯಾಗಲಿದೆ ಎಂದು ಹೇಳಿದರು.
 
ವಿರೋಧ ಪಕ್ಷಗಳು ಜನರ ಸಮಸ್ಯೆಗಳಿಗೆ ಸಂಬಂಧಿಸಿದ ವಿಷಯಗಳ ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ನಡೆಸುವ ಹಕ್ಕು ಎಲ್ಲರಿಗೂ ಇದೆ. ಅದನ್ನು ಸರ್ಕಾರ ವಿರೋಧಿಸುವುದಿಲ್ಲ. ಆದರೆ ಪ್ರತಿಯೊಂದಕ್ಕೂ ಸಮಯ ಮತ್ತು ಸಂದರ್ಭವಿದ್ದು, ಎಲ್ಲ ವಿಷಯಗಳನ್ನೂ ರಾಜಕೀಯಕ್ಕೆ ಬಳಸಿಕೊಳ್ಳುವುದು ಸೂಕ್ತವಲ್ಲ. ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದರು.
 
ಕರಾವಳಿ ಅಭಿವೃದ್ಧಿಗೆ ವಿಶೇಷ ಆದ್ಯತೆ :
ಕರಾವಳಿ ಪ್ರದೇಶದ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಪ್ರವಾಸೋದ್ಯಮ, ರಸ್ತೆ, ಸೇತುವೆ ಹಾಗೂ ಇತರೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಿದೆ ಎಂದು ಡಿಸಿಎಂ ತಿಳಿಸಿದರು.
 
ಇತಿಹಾಸದಲ್ಲೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಿ 61 ವಿಷಯಗಳಿಗೆ ಸಂಬಂಧಿಸಿದ ಮಹತ್ವದ ನಿರ್ಣಯಗಳನ್ನು ಕೈಗೊಂಡಿದ್ದೇವೆ. ಕರಾವಳಿ ಭಾಗದ ಜನರಿಗೆ ನೇರವಾಗಿ ಅನುಕೂಲವಾಗುವ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಸರ್ಕಾರದ ಉದ್ದೇಶ. ಜನಸಮುದಾಯಕ್ಕೆ ಅನುಕೂಲ ಕಲ್ಪಿಸುವುದೇ ನಮ್ಮ ಪ್ರಥಮ ಆದ್ಯತೆ ಎಂದರು.
 
ಪ್ರಣಾಳಿಕೆಯ ಭರವಸೆಗಳನ್ನು ಈಡೇರಿಸುವುದು ಸರ್ಕಾರದ ಬದ್ಧತೆ :
ಚುನಾವಣಾ ಪ್ರಣಾಳಿಕೆ ಸರ್ಕಾರಕ್ಕೆ ಮೂಲಗ್ರಂಥವಿದ್ದಂತೆ. ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸುವುದು ನಮ್ಮ ಜವಾಬ್ದಾರಿ. ಕಳೆದ ಮೂರು ವರ್ಷಗಳಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲಾಗಿದೆ. ಅದೇ ಬದ್ಧತೆಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಮುಂದುವರಿಸಲಾಗುತ್ತಿದೆ. ಸಿದ್ದರಾಮಯ್ಯ ಅವರ ಅನುಭವ ಮತ್ತು ಅಭಿಪ್ರಾಯಗಳನ್ನು ಪಡೆದುಕೊಂಡೇ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
 
ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸಲಾಗುವುದು. ನಂತರ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳನ್ನೂ ಹಂತ ಹಂತವಾಗಿ ನಡೆಸಲಾಗುವುದು ಎಂದು ಅವರು ಇದೇ ವೇಳೆ ತಿಳಿಸಿದರು.
 
 
 

Hot this week

BIG NEWS :MUMBAI TOLL : ಮುಂಬೈ ಟೋಲ್ ದರಗಳಲ್ಲಿ ಶೇ.20ರಷ್ಟು ಏರಿಕೆ

ಮುಂಬೈ (Mumbai) ನಗರದ ಐದು ಪ್ರಮುಖ ಪ್ರವೇಶ ದ್ವಾರಗಳಲ್ಲಿ ಅಕ್ಟೋಬರ್ 1,...

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ: ಪರಿಷ್ಕೃತ NCERT...

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ; MCC...

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ: ವಿದೇಶಿ ಹೂಡಿಕೆದಾರರ ಮಾರಾಟದ ಒತ್ತಡ

ಭಾರತೀಯ ಷೇರು ಮಾರುಕಟ್ಟೆಗಳು(Share Market) ಸತತ ಕುಸಿತದ ಒತ್ತಡಕ್ಕೆ ಸಿಲುಕಿದ್ದು, ಕಳೆದ...

ಹೆಜ್ಜೆಯಲ್ಲಿ ಶಾಸ್ತ್ರ, ಭಾವದಲ್ಲಿ ಭಕ್ತಿ: ‘ಸಮರ್ಪಣ್’ನಲ್ಲಿ ಶೀತಲ್ ಹೇಮಂತ್ ನೃತ್ಯ

ಅ. 3ರಂದು ವಿದುಷಿ ಶೀತಲ್ ಹೇಮಂತ್ ಅವರಿಂದ ವಿಶೇಷ ಭರತನಾಟ್ಯ ನೃತ್ಯ...

Topics

BIG NEWS :MUMBAI TOLL : ಮುಂಬೈ ಟೋಲ್ ದರಗಳಲ್ಲಿ ಶೇ.20ರಷ್ಟು ಏರಿಕೆ

ಮುಂಬೈ (Mumbai) ನಗರದ ಐದು ಪ್ರಮುಖ ಪ್ರವೇಶ ದ್ವಾರಗಳಲ್ಲಿ ಅಕ್ಟೋಬರ್ 1,...

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ: ಪರಿಷ್ಕೃತ NCERT...

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ; MCC...

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ: ವಿದೇಶಿ ಹೂಡಿಕೆದಾರರ ಮಾರಾಟದ ಒತ್ತಡ

ಭಾರತೀಯ ಷೇರು ಮಾರುಕಟ್ಟೆಗಳು(Share Market) ಸತತ ಕುಸಿತದ ಒತ್ತಡಕ್ಕೆ ಸಿಲುಕಿದ್ದು, ಕಳೆದ...

“ಚರಕ ಕಾರ್ಯಾಗಾರ”

157ನೇ ಗಾಂಧಿ ಜಯಂತಿ(157th Gandhi Jayanthi) ಅಂಗವಾಗಿ ಆರ್ಟ್ ಕಲ್ಚರಲ್ ಎಜುಕೇಶನಲ್ ...

ರಾಮರಸದಲ್ಲಿ ಆದಾಶರ್ಮಾ ದುರ್ಗಿ ರೋಲ್

ಗುರುದೇಶಪಾಂಡೆ ಒಡೆತನದ ’ಜಿ ಅಕಾಡೆಮಿ’ಯಲ್ಲಿ(Zee Academy) ನಟನೆ ಕಲಿತಿರುವ ಪ್ರತಿಭೆಗಳಿಗೆ ಅವಕಾಶ...

ಅಭಿನಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಸದಾ ಬ್ಯುಸಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Ex.CM.Siddaramayya) ಈಗ ನಟನೆಯಲ್ಲಿ(Acting) ತೊಡಗಿಕೊಂಡಿದ್ದಾರೆ. ಪತ್ರಕರ್ತರಾಗಿ...

Related Articles