ಕರ್ನಾಟಕ ರಾಜ್ಯ ಮಡಿವಾಳ ಸಂಘದ ಅಧ್ಯಕ್ಷ ಸಿ. ನಂಜಪ್ಪ, ಉಪಾಧ್ಯಕ್ಷ ರಾಜಣ್ಣ ವಿರುದ್ಧ ಅವಿಶ್ವಾಸ ನಿರ್ಣಯ

 ಬೆಂಗಳೂರು : ಮಡಿವಾಳ(Madiwala) ಸಮುದಾಯದ ಹಿತರಕ್ಷಣೆಗೆ ವಿರುದ್ಧವಾಗಿರುವ, ಜನಾಂಗವನ್ನು ಪರಿಶಿಷ್ಟರ ಪಟ್ಟಿಗೆ(List of Appendices) ಸೇರಿಸಲು ನಿರಾಸಕ್ತಿ ತೋರಿರುವ ಕರ್ನಾಟಕ ರಾಜ್ಯ ಮಡಿವಾಳರ ಸಂಘದ ಅಧ್ಯಕ್ಷ ಸಿ.ನಂಜಪ್ಪ, ಉಪಾಧ್ಯಕ್ಷ ರಾಜಣ್ಣ ವಿರುದ್ದ 55 ಮಂದಿ ನಿರ್ದೇಶಕರು ಸಹಿ ಮಾಡಿರುವ ಅವಿಶ್ವಾಸ ಗೊತ್ತುಗಳಿ ನೋಟಿಸ್(Notice) ಜಾರಿ ಮಾಡಿದ್ದು, ಅಧಿಕಾರದಿಂದ ಕೆಳಗಿಳಿಯುವವರೆಗೆ ಹೋರಾಟ ಮುಂದುವರೆಸುವುದಾಗಿ ಕರ್ನಾಟಕ ರಾಜ್ಯ ಮಡಿವಾಳ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಆರ್.ಪ್ರಕಾಶ್ ತಿಳಿಸಿದ್ದಾರೆ. ಶೇಷಾದ್ರಿಪುರಂನ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಸ್ವಾರ್ಥ ಹಿತಾಸಕ್ತಿಯಿಂದ ವರ್ತಿಸುತ್ತಿದ್ದಾರೆ. ಇದನ್ನು ಖಂಡಿಸಿ 55 ನಿರ್ದೇಶಕರ ಸಹಿಯುಳ್ಳ ಅವಿಶ್ವಾಸ ನೋಟಿಸ್ ನೀಡಲಾಗಿದ್ದು, ಸಹಕಾರ ಸಂಘಗಳ ಜಿಲ್ಲಾ ನಿಬಂಧಕರಿಗೆ ಸೂಕ್ತ ಕ್ರಮಕ್ಕಾಗಿ ದೂರು ಸಲ್ಲಿಸಲಾಗಿದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಮಡಿವಾಳ ಸಮಾಜದ ಸ್ಥಿತಿಗತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಬದ್ಧತೆ ಮತ್ತು ಸಂಘಟನೆಯ ಕೊರತೆಯಿಂದ ಜ್ವಲಂತ ಸಮಸ್ಯೆಗಳು ಬಗೆಹರಿಯುತ್ತಿಲ್ಲ.
 ರಾಜ್ಯದಲ್ಲಿ 30ಲಕ್ಕಕೂ ಹೆಚ್ಚು ಜನಸಂಖ್ಯೆ ಇರುವ ಸಮಾಜದ ಬೆಳವಣಿಗೆಗೆ ಸಂಘದ ಅಧ್ಯಕ್ಷರಾದ ಸಿ.ನಂಜಪ್ಪ ರಚನಾತ್ಮಕ ಕ್ರಮಗಳನ್ನು ಕೈಗೊಂಡಿಲ್ಲ. ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕವಾಗಿ ಮಡಿವಾಳರ ಅಭಿವೃದ್ಧಿಗೆ ಶ್ರಮಿಸದ ಕಾರಣ ಸಮುದಾಯ ತೀವ್ರ ಅಸಮಾಧಾನಗೊಂಡಿದೆ ಎಂದರು. ಸಿ. ನಂಜಪ್ಪ ಅವರು ಮಡಿವಾಳ ಸಂಘವನ್ನು ಏಣಿಯಾಗಿ ಮಾಡಿಕೊಂಡು ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಆಯ್ಕೆಯಾದರು. ನಂತರ ಸಂಘದ ಚಟುವಟಿಕೆಗಳತ್ತ ಗಮನರಿಸಲಿಲ್ಲ. ರಾಜ್ಯದಲ್ಲಿ ಮಡಿವಾಳ ಸಮಾಜ 21 ಎಸ್.ಸಿ.ಮೀಸಲು ಪಟ್ಟಿ ಅಡಿ ಬರಲಿದ್ದು, ಮಡಿವಾಳ ಸಮಾಜವನ್ನು ಎಸ್.ಸಿ.ಪಂಗಡಕ್ಕೆ ಸೇರಿಸಲು ಅಧ್ಯಕ್ಷರು ನಿರಾಸಕ್ತಿ ಹೊಂದಿದ್ದಾರೆ. ಸಂಘದ ನಡವಳಿ ಪುಸ್ತಕವನ್ನು ಆಡಳಿತ ಮಂಡಳಿ ಸಭೆ ಕರೆಯದೇ ತಮಗೆ ಇಷ್ಟಬಂದಂತೆ ತಿದ್ದುಪಡಿ ಮಾಡಿ ಅಧಿಕಾರ ದುರುಪಯೋಗ ಪಡೆಸಿಕೊಂಡಿದ್ದಾರೆ. ಸಂಘದ ಕಛೇರಿಯನ್ನು ಆರು ದಿನಗಳ ಕಾಲ ಬಾಗಿಲು ಹಾಕಿಸಿ ತಮ್ಮ ದರ್ಪ ಮೆರೆದಿದ್ದಾರೆ. ತಮ್ಮ ಮೇಲೆ ಸುಳ್ಳು ಅರೋಪ ಹೊರಿಸಿ, ನಡವಳಿ ಪುಸ್ತಕ ಕದ್ದುಕೊಂಡು ಹೋಗಿರುವುದಾಗಿ ಆರೋಪಿಸಿದ್ದಾರೆ.
 ಸಂಘದ ಹಿತಾಸಕ್ತಿಗೆ ವಿರುದ್ಧವಾಗಿರುವ ಅವರ ವಿರುದ್ಧ ಅವಿಶ್ವಾಸ ನೋಟಿಸ್ ಆನ್ನು ನೇರವಾಗಿ ಮತ್ತು ಅಂಚೆ ಮೂಲಕ ತಲುಪಿಸಲಾಗಿದೆ. ಅವಿಶ್ವಾಸ ನಿರ್ಣಯ ಮಂಡಿಸಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆಸುತ್ತಿದ್ದು, ತಮಗೆ ಬಹುಮತವಿದ್ದರೆ ಅವರೇ ಮತ್ತೊಮ್ಮೆ ಚುನಾಯಿತರಾಗಲಿ ಎಂದು ಬಿ.ಆರ್.ಪ್ರಕಾಶ್ ಹೇಳಿದರು. ಕರ್ನಾಟಕ ರಾಜ್ಯ ಮಡವಾಳ ಸಂಘದ ಮೂಲಕ ಮಡಿವಾಳ ಸಮಾಜದ ರಕ್ಷಣೆಗಾಗಿ ಈ ದಿಟ್ಟ ಕ್ರಮ ಕೈಗೊಳ್ಳಲಾಗಿದೆ. 93 ವರ್ಷಗಳ ಇತಿಹಾಸವಿರುವ ಕರ್ನಾಟಕ ರಾಜ್ಯ ಮಡಿವಾಳ ಸಂಘಕ್ಕೆ 22 ಜಿಲ್ಲೆಗಳಿಗೆ ಮಾತ್ರ ಮಾನ್ಯತೆ ಕೊಟ್ಟಿದ್ದು, ಉಳಿದ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಚಾಮರಾಜನಗರ, ಉಡುಪಿ, ದಕ್ಷಿಣ ಕನ್ನಡ, ಕೊಪ್ಪಳ ಜಿಲ್ಲೆಗಳಲ್ಲಿ ಮಡಿವಾಳ ಜನಾಂಗ ಇಲ್ಲ ಎನ್ನುವ ಕಾರಣಕ್ಕೆ ಮಾನ್ಯತೆ ನೀಡಿಲ್ಲ. ಆದರೆ ಸಂಘ ಎಲ್ಲಾ ಜಿಲ್ಲೆಗಳನ್ನು ಒಳಗೊಂಡಿರಬೇಕು. ಸಂಘದ ಅಧ್ಯಕ್ಷರಾದವರು ಒಂದು ಪಕ್ಷದ ಸಿದ್ಧಾಂತಕ್ಕೆ ಸೀಮಿತವಾಗಬಾರದು. ಆದರೆ ಹಾಲಿ ಅಧ್ಯಕ್ಷರಾದ ಸಿ. ನಂಜಪ್ಪ ಅವರು ತುಮಕೂರಿನಲ್ಲಿ ಕಾಂಗ್ರೆಸ್ ಸಮಾವೇಶ ಮಾಡಿಸಿ ದುಂಧು ವೆಚ್ಚ ಮಾಡಿಸಿದ್ದಾರೆ. ಅಮರನಾಥ್‌, ತರಿಕೇರಿ ಗೋಪಿಕೃಷ್ಣ ಅವರ ರಾಜಕೀಯ ಬೆಳವಣಿಗೆಗೆ ಅಡ್ಡಿಯಾಗಿರುವ ಜೊತೆಗೆ ಸೊರಬದಲ್ಲಿ ರಾಜು ತಾಲ್ಲೂರು ಚುನಾವಣೆಗೆ ಸ್ಪರ್ಧಿಸಿದಾಗ ಕನಿಷ್ಟ ಚುನಾವಣಾ ಪ್ರಚಾರದಲ್ಲೂ ಸಹ ಭಾಗಿಯಾಗಲಿಲ್ಲ ಎಂದು ದೂರಿದರು. ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಆರ್.ಮೂರ್ತಿ, ದೇವೇಂದ್ರ, ವಿ.ಸೋಮಶೇಖರ್, ಧ್ರುವಕುಮಾರ್, ವಿ.ಎಮ್.ಪದ್ಮಾವತಿ, ಮಧು ಕಾನೂನು ಸಲಹೆಗಾರರಾದ ಸುಬ್ರಮಣಿ ಗಿರಿಧರ್ ಉಪಸ್ಥಿತರಿದ್ದರು.

Hot this week

Big NEWS : LONDON : ಹಲಾಲ್ ಮಾಂಸ ನೀಡಲು ನಿರಾಕರಿಸಿದ್ದಕ್ಕೆ ರೆಸ್ಟೋರೆಂಟ್ ಮಾಲೀಕನಿಗೆ ಬೆದರಿಕೆ

ಹಲಾಲ್ ಮಾಂಸ ನೀಡಲು ನಿರಾಕರಿಸಿದ್ದಕ್ಕೆ ಸಿಖ್ ರೆಸ್ಟೋರೆಂಟ್ ಮಾಲೀಕನಿಗೆ ಬೆದರಿಕೆ! ಕುಟುಂಬಕ್ಕೆ...

ಬೆಂಗಳೂರು: ರಾಜಾಜಿನಗರದಲ್ಲಿರುವ ಬೆಂಗಳೂರು ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ (GTTC)...

ಬೆಂಗಳೂರು: ದಿನಾಂಕ 18-11-2026 ರಂದು ರಾತ್ರಿ 9.00 ಗಂಟೆಗೆ ಪಬ್ಲಿಕ್ ಟಿವಿ...

ಕುಮಾರಿ ಅಂಜಲಿ ಅಂಬಿಗೇರ ಕೊಲೆ ಆರೋಪಿ ಗಿರೀಶ್‌ ಸಾವಂತ್‌ನಿಗೆ ಘನ ನ್ಯಾಯಾಲಯವು...

Topics

Big NEWS : LONDON : ಹಲಾಲ್ ಮಾಂಸ ನೀಡಲು ನಿರಾಕರಿಸಿದ್ದಕ್ಕೆ ರೆಸ್ಟೋರೆಂಟ್ ಮಾಲೀಕನಿಗೆ ಬೆದರಿಕೆ

ಹಲಾಲ್ ಮಾಂಸ ನೀಡಲು ನಿರಾಕರಿಸಿದ್ದಕ್ಕೆ ಸಿಖ್ ರೆಸ್ಟೋರೆಂಟ್ ಮಾಲೀಕನಿಗೆ ಬೆದರಿಕೆ! ಕುಟುಂಬಕ್ಕೆ...

ಬೆಂಗಳೂರು: ರಾಜಾಜಿನಗರದಲ್ಲಿರುವ ಬೆಂಗಳೂರು ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ (GTTC)...

ಬೆಂಗಳೂರು: ದಿನಾಂಕ 18-11-2026 ರಂದು ರಾತ್ರಿ 9.00 ಗಂಟೆಗೆ ಪಬ್ಲಿಕ್ ಟಿವಿ...

ಕುಮಾರಿ ಅಂಜಲಿ ಅಂಬಿಗೇರ ಕೊಲೆ ಆರೋಪಿ ಗಿರೀಶ್‌ ಸಾವಂತ್‌ನಿಗೆ ಘನ ನ್ಯಾಯಾಲಯವು...

ಬೆಂಗಳೂರು: ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ 'ಅಟಲ್ ವಯೋ...

ಮುಂಬೈ ಪೊಲೀಸರ ಕಾರ್ಯಾಚರಣೆ: ಕುರ್ಳಾ ದಾಳಿ ಪ್ರಕರಣ: 7 ಬಾಂಗ್ಲಾದೇಶಿ ಪ್ರಜೆಗಳ ಬಂಧನ

ಮುಂಬೈ: ಮಹಾರಾಷ್ಟ್ರದ ಮುಂಬೈ (Mumbai) ನಗರದಲ್ಲಿ ಇತ್ತೀಚೆಗೆ ನಡೆದ ಹಲವು ಅಪರಾಧ...

Related Articles